Categories
ತೀರ್ಥಹಳ್ಳಿ

ತೀರ್ಥಹಳ್ಳಿ ಕಾಂಗ್ರೆಸ್ ಅಲ್ಲಿ ಅಸಮಾಧಾನ ಸ್ಫೋಟ!?

ತೀರ್ಥಹಳ್ಳಿ ಕಾಂಗ್ರೆಸ್ ಅಲ್ಲಿ ಅಸಮಾಧಾನ ಸ್ಫೋಟ!?
– ಗಾಜಾನೂರು ಭಾಗದ ಕಾಂಗ್ರೆಸ್ ನಾಯಕರ ಮೌನ ಪ್ರತಿಭಟನೆ
– ಪಕ್ಷದಲ್ಲಿ ಗಾಜನೂರು ಭಾಗ ನಿರ್ಲಕ್ಷ್ಯಕ್ಕೆ ಆಕ್ರೋಶ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ವಿಧಾನ ಸಭಾ ಕಾಂಗ್ರೆಸ್ ಪಕ್ಷದಲ್ಲಿ ಇದೀಗ ಅಸಮಾಧಾನ ಸ್ಫೋಟಗೊಂಡಿದೆ. ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರದ ಗಾಜನೂರಿನಲ್ಲಿ ಕಾಂಗ್ರೆಸ್  ಪಕ್ಷದ ಕೆಲವು ಅಸಮಾಧಾನಿತ ಕಾರ್ಯಕರ್ತರು ತಮ್ಮ ಸಹ ಕಾರ್ಯಕರ್ತರುಗಳೊಂದಿಗೆ ಶಿವಕುಮಾ‌ರ್ ಹಾಗೂ ಗಾಜನೂರು ನಾಗರಾಜ್ ಅವರ ನೇತೃತ್ವದಲ್ಲಿ ಗ್ರಾಮದ ಗ್ರಂಥಾಲಯದ ಆವರಣದಲ್ಲಿ ಪಕ್ಷ ಗಾಜನೂರು ಭಾಗಕ್ಕೆ ಸಂಬಂಧಿಸಿದಂತೆ ಅನುಸರಿಸುತ್ತಿರುವ ತಾರತಮ್ಯ ನಿಲುವುಗಳ ವಿರುದ್ಧ ಮೌನ ಪ್ರತಿಭಟನೆಯ ಮೂಲಕ ಅಸಮಾಧಾನ ವ್ಯಕ್ತಪಡಿಸಿದರು. ಈ ಮೂಲಕ ಪಕ್ಷದ ಕೆಲವು ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Categories
ತೀರ್ಥಹಳ್ಳಿ

ನನ್ನ ಬೂತ್ ನನ್ನ ಜವಾಬ್ದಾರಿ: ಅಸಾದಿ ಮತ ಯಾಚನೆ

ನನ್ನ ಬೂತ್ ನನ್ನ ಜವಾಬ್ದಾರಿ: ಅಸಾದಿ ಮತ ಯಾಚನೆ
– ತೀರ್ಥಹಳ್ಳಿಯಲ್ಲಿ ಗೀತಾ ಶಿವರಾಜ್ ಕುಮಾರ್ ಪರ ಪ್ರಚಾರ
– ಮನೆ ಮನೆಗೆ ಭೇಟಿ ನೀಡಿ ಮತಯಾಚನೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 15ನೇ ವಾರ್ಡಿನ ಪಟ್ಟಣ ಪಂಚಾಯಿತಿ ಸದಸ್ಯರು ಮತ್ತು ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರಾದ ರೆಹಮತ್ತುಲ್ಲಾ ಅಸಾದಿ ಅವರು ಶಿವಮೊಗ್ಗ ಜಿಲ್ಲಾ ಲೋಕಸಭಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಗೀತಾ ಶಿವರಾಜ್ ಕುಮಾರ್ ಅವರ ಪರ ನನ್ನ ಬೂತ್ ನನ್ನ ಜವಾಬ್ದಾರಿ ಕಾರ್ಯಕ್ರಮದ ಅಂಗವಾಗಿ ತೀರ್ಥಹಳ್ಳಿಯಲ್ಲಿ ಮನೆಮನೆಗೆ ಭೇಟಿ ಕೊಟ್ಟು ಗ್ಯಾರೆಂಟಿ ಕಾರ್ಡ್ ನೀಡಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಕಾರ್ಯಕರ್ತರು ಮತ್ತು ಅಭಿಮಾನಿಗಳು ಇದ್ದರು. ತೀರ್ಥಹಳ್ಳಿ ಪಟ್ಟಣ ವ್ಯಾಪ್ತಿಯಲ್ಲಿ ಪಟ್ಟಣ ಪಂಚಾಯತ್ ಸದಸ್ಯರು ಮತ ಪ್ರಚಾರ ಮಾಡುತ್ತಿದ್ದಾರೆ.

Categories
ತೀರ್ಥಹಳ್ಳಿ

ಜೆಡಿಎಸ್ ಪದಾಧಿಕಾರಿಗಳ ನೇಮಕಾತಿ ಆದೇಶ

ಜೆಡಿಎಸ್ ಪದಾಧಿಕಾರಿಗಳ ನೇಮಕಾತಿ ಆದೇಶ
– ತೀರ್ಥಹಳ್ಳಿ ತಾಲೂಕು ಉಪಾಧ್ಯಕ್ಷರಾಗಿ ಪ್ರವೀಣ್ ಕುಂದಾ
– ಆಗುಂಬೆ ಹೋಬಳಿ ಅಧ್ಯಕ್ಷರಾಗಿ ಎಸ್.ಪ್ರಸನ್ನ ಅರೆಹಳ್ಳಿ

NAMMUR EXPRESS NEWS :
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು, ತಾಲೂಕು ಜಾತ್ಯಾತೀತ ಜನತಾ ದಳದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿ ಪ್ರವೀಣ್ ಕೆ.ಎಸ್, ಕುಂದಾ ಕಾಂಪ್ಲೆಕ್ಸ್, ಆಗುಂಬೆ ರಸ್ತೆ, ಕಾಮತ್ ಹೋಟೆಲ್ ಹತ್ತಿರ, ಬಾಳೆಬೈಲು, ತೀರ್ಥಹಳ್ಳಿ ತಾಲೂಕು ಇವರನ್ನು ಆಯ್ಕೆ ಮಾಡಿ ಆದೇಶ ಹೊರಡಿಸಲಾಗಿದೆ. ಹುದ್ದೆಯನ್ನು ಅತ್ಯಂತ ಜವಾಬ್ದಾರಿಯುತವಾಗಿ ಪ್ರಾಮಾಣಿಕ ಹಾಗೂ ಬದ್ಧತೆಯಿಂದ ನಿರ್ವಹಿಸುವುದರ ಮೂಲಕ ತೀರ್ಥಹಳ್ಳಿ ತಾಲೂಕಿನಲ್ಲಿ ಪಕ್ಷದ ಬಲವರ್ಧನೆಗಾಗಿ ಹೆಚ್ಚಿನ ಆಸಕ್ತಿಯಿಂದ ಕೆಲಸ ಮಾಡುವುದಾಗಿ ಪ್ರವೀಣ್ ಕೆ. ಎಸ್ ತಿಳಿಸಿದ್ದಾರೆ.

ಆಗುಂಬೆ ಹೋಬಳಿ ಅಧ್ಯಕ್ಷರಾಗಿ ಎಸ್.ಪ್ರಸನ್ನ ಅರೆಹಳ್ಳಿ

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು, ಆಗುಂಬೆ ಹೋಬಳಿ ಜನತಾದಳ (ಜಾ )ದ ಅಧ್ಯಕ್ಷರನ್ನಾಗಿ ಎಸ್ ಪ್ರಸನ್ನ ಅರೆಹಳ್ಳಿ,
ಕಮ್ಮರಡಿ ಅಂಚೆ ತೀರ್ಥಹಳ್ಳಿ ತಾಲೂಕು ಇವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ತಾನು ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ತಮಗೆ ವಹಿಸಿದ ಪದಾಧಿಕಾರಿ ಹುದ್ದೆಯನ್ನು ಅತ್ಯಂತ ಜವಾಬ್ದಾರಿಯುತವಾಗಿ ಪ್ರಾಮಾಣಿಕ ಹಾಗೂ ಬದ್ಧತೆಯಿಂದ ನಿರ್ವಹಿಸುವುದರ ಮೂಲಕ ಆಗುಂಬೆ ಹೋಬಳಿಯಲ್ಲಿ ಪಕ್ಷದ ಬಲವರ್ಧನೆಗಾಗಿ ಹೆಚ್ಚಿನ ಆಸಕ್ತಿಯಿಂದ ಕೆಲಸ ಮಾಡುತ್ತೇನೆ ಎಂದು ಎಸ್ ಪ್ರಸನ್ನ ಅರೆಹಳ್ಳಿ ತಿಳಿಸಿದ್ದಾರೆ.

Categories
ತೀರ್ಥಹಳ್ಳಿ

ಕುಪ್ಪಳಿ ಸಮೀಪ ಜನರ ಮತ ಬಹಿಷ್ಕಾರ!

ಕುಪ್ಪಳಿ ಸಮೀಪ ಜನರ ಮತ ಬಹಿಷ್ಕಾರ!
– ರಸ್ತೆ ಮಾಡಿ ಕೊಡದ ರಾಜಕಾರಣಿಗಳು ನಮ್ಮೂರಿಗೆ ಬರಬೇಡಿ
– ಲೋಕ ಸಭೆ ಚುನಾವಣೆ ಬಹಿಷ್ಕರಿಸಿದ ಹಡಗಿನ ಮಕ್ಕಿ ಜನ!

NAMMUR EXPRESS NEWS
ತೀರ್ಥಹಳ್ಳಿ: ದೇವಂಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿದ ಹಡಗಿನಮಕ್ಕಿಗೆ ಸಂಪರ್ಕಿಸುವ ದಾರಿಯನ್ನು ಸುಸಜ್ಜಿತವಾಗಿ ನಿರ್ಮಿಸದೇ ಇರುವ ಆಡಳಿತದ ವಿರುದ್ಧ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ ಫಲಕ ಹಾಕಿ ಆಕ್ರೋಶ ವ್ಯಕ್ತಪಡಿಸಲಾಗಿದೆ.
“ನಮ್ಮ ಗೋಳು ಕೇಳದ ಜನಪ್ರತಿನಿಧಿಗಳೇ ಚುನಾವಣಾ ಪ್ರಚಾರಕ್ಕಾಗಿ ನಮ್ಮಲ್ಲಿಗೆ ಬರಬೇಡಿ” ಎಂಬ ಬೋರ್ಡ್ ರಾಷ್ಟ್ರ ಕವಿ ಹುಟ್ಟೂರು ಕುಪ್ಪಳಿ ಸಮೀಪದ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಹಾಕಲಾಗಿದೆ.

ಪ್ರಚಾರಕ್ಕೆ ಬರಬೇಡಿ ಎಂಬ ಸಿಟ್ಟು!

ಚುನಾವಣಾ ಸಮಯದಲ್ಲಿ ಜನಪ್ರತಿನಿಧಿಗಳಿಗೆ ಹಾಗೂ ಯಾವುದೇ ಪಕ್ಷದ ಕಾರ್ಯಕರ್ತರಿಗೆ ನಮ್ಮ ಗ್ರಾಮಕ್ಕೆ ಪ್ರವೇಶವಿರುವುದಿಲ್ಲ ಇದು ಎಲ್ಲಾ ಗ್ರಾಮಸ್ಥರು ತೀರ್ಮಾನ ಮಾಡಲಾಗಿದೆ.

ಮಳೆ ಬಂದ್ರೆ ಇಲ್ಲಿ ಓಡಾಡೋಕೆ ಆಗಲ್ಲ!

ಮಳೆಗಾಲದಲ್ಲಿ ಇಲ್ಲಿ ಓಡಾಡಲು ಆಗಲ್ಲ. ಸುಮಾರು 30ಕ್ಕೂ ಹೆಚ್ಚು ಮನೆಗಳಿವೆ. ಶಾಲೆ ಹೋಗುವ ವಿದ್ಯಾರ್ಥಿಗಳಿದ್ದಾರೆ. ಇನ್ನು ಕುಪ್ಪಳಿ ಪಕ್ಕದ ಕುಪ್ಪಳಿ ಜಡ್ಡು ಎಂಬ ಊರಿಗೂ ಕೂಡ ರಸ್ತೆ ಇಲ್ಲ. ಸೇತುವೆ ಕೂಡ ಇಲ್ಲ.

 

Categories
ಬೆಂಗಳೂರು ಮಂಗಳೂರು

ಬೆಂಗಳೂರು-ಮಂಗಳೂರು ಬಸ್‌ನಲ್ಲಿ ಯುವತಿಗೆ ಕಿರುಕುಳ!

ಬೆಂಗಳೂರು-ಮಂಗಳೂರು ಬಸ್‌ನಲ್ಲಿ ಯುವತಿಗೆ ಕಿರುಕುಳ!
– ಅನ್ಯಕೋಮಿನ ಯುವಕ ಕಿರುಕುಳ; ಉಪ್ಪಿನಂಗಡಿ ಠಾಣೆಗೆ ದೂರು
– ಬಸ್ಸಲ್ಲೇ ಧರ್ಮದೇಟು: ಅರ್ಧ ದಾರಿಯಲ್ಲೇ ಇಳಿದ ಯುವಕ

NAMMUR EXPRESS NEWS
ಗುಂಡ್ಯ: ಬೆಂಗಳೂರಿನಿಂದ ಮತದಾನಕ್ಕಾಗಿ ಖಾಸಗಿ ಬಸ್ಸಿನಲ್ಲಿ ಊರಿಗೆ ಬರುತ್ತಿದ್ದ ಹಿಂದು ಯುವತಿಗೆ ಅನ್ಯಕೋಮಿನ ಯುವಕ ಲೈಂಗಿಕ ಕಿರುಕುಳ ನೀಡಿದ್ದ ಘಟನೆ ಗುಂಡ್ಯ ಬಳಿ ನಡೆದಿದ್ದು, ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.
ಬಸ್‌ನಲ್ಲಿ ಬರಬೇಕಾದರೆ ನಸುಕಿನ ವೇಳೆ ಯುವಕನೊಬ್ಬ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಯುವತಿ ಮೇಲೆ ಕೈ ಮಾಡಿದ್ದಾನೆ. ಆಗ ಯುವತಿ ಸಿಟ್ಟಿಗೆದ್ದಿದ್ದು, ಕೂಡಲೇ ಈ ವಿಚಾರವನ್ನು ಚಾಲಕನ ಗಮನಕ್ಕೆ ತರಲಾಗಿದೆ. ಆದರೆ, ಯುವಕ ಕಿರುಕುಳ ನೀಡುವುದನ್ನು ಮತ್ತೆ ಮುಂದುವರಿಸಿದ್ದು, ಇದರಿಂದ ಸಿಟ್ಟಿಗೆದ್ದ ಯುವತಿ ಆತನ ಮೇಲೆ ಹಲ್ಲೆಗೆ ಮುಂದಾಗಿದ್ದಾಳೆ. ಅಷ್ಟರಲ್ಲಿ ಬೇರೆ ಪ್ರಯಾಣಿಕರೆಲ್ಲ ಎಚ್ಚರಗೊಂಡಿದ್ದು, ಯುವಕನ ವಿರುದ್ದ ಎಲ್ಲರೂ ಸಿಟ್ಟಾಗಿದ್ದಾರೆ. ಇನ್ನು ಬಸ್‌ನಲ್ಲಿ ಇದ್ದರೆ ಗೂಸಾ ಬೀಳಬಹುದೆಂಬ ಭಯದಿಂದ ಅರ್ಧಕ್ಕೆ ಇಳಿದು ಹೋಗಿದ್ದಾನೆ.

ತನಗೆ ಆಗಿರುವ ಅನ್ಯಾಯದ ಬಗ್ಗೆ ಯುವತಿ ಭಜರಂಗದ ದಳದ ಮುಖಂಡರಿಗೆ ತಿಳಿಸಿದ್ದು, ಉಪ್ಪಿನಂಗಡಿ ಠಾಣೆಗೆ ದೂರು ಕೂಡ ನೀಡಿದ್ದಾರೆ. ಯುವಕನ ಕೈಯಲ್ಲಿದ್ದ ಮೊಬೈಲ್‌ ಕಿತ್ತುಕೊಂಡಿದ್ದು, ಅದರಲ್ಲಿ ಆತನ ಆಧಾರ್‌ ಕಾರ್ಡ್‌ ಇತ್ತು. ಆ ವಿಳಾಸದಲ್ಲಿ ಲಾಯಿಲಾ ಗ್ರಾಮದ ಇಬ್ರಾಹಿಂ ಎಂದು ಗುರುತಿಸಲಾಗಿದೆ. ಪೊಲೀಸರು ಆರೋಪಿ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳುವ ಸಾಧ್ಯತೆಯಿದೆ.

Categories
ತೀರ್ಥಹಳ್ಳಿ ಮಲ್ನಾಡ್

ಆಗುಂಬೆ ಬ್ಯಾಂಕಿನಲ್ಲಿ ಗ್ರಾಹಕರ ಸ್ಪಂದನೆ ಇಲ್ಲ.!

ಆಗುಂಬೆ ಬ್ಯಾಂಕಿನಲ್ಲಿ ಗ್ರಾಹಕರ ಸ್ಪಂದನೆ ಇಲ್ಲ.!
– ತೀರ್ಥಹಳ್ಳಿ ತಾಲೂಕಿನ ಅನೇಕ ರಾಷ್ಟ್ರೀಕೃತ ಬ್ಯಾಂಕುಗಳ ನಿರ್ಲಕ್ಷ್ಯ: ಉನ್ನತ ಅಧಿಕಾರಿಗಳು ಏನ್ ಮಾಡ್ತಾರೆ?
– ರೈತರು, ಬಡಜನರು, ಗ್ರಾಹಕರ ಪರದಾಟ

NAMMUR EXPRESS NEWS: ವಿಶೇಷ ವರದಿ
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಬಹುತೇಕ ಖಾಸಗಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಹಾಗೂ ಗ್ರಾಹಕರ ಕಡೆಗಣನೆ ಇದೀಗ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಇತ್ತೀಚೆಗೆ ಪ್ರತಿ ಬ್ಯಾಂಕಿನಲ್ಲೂ ಕೂಡ ಗ್ರಾಹಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಅಥವಾ ಗ್ರಾಹಕರ ಸೇವೆ ನೀಡುವಲ್ಲಿ ಸಿಬ್ಬಂದಿ ನಿರ್ಲಕ್ಷ ತೋರುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಆಗುಂಬೆ ಬ್ಯಾಂಕಲ್ಲಿ ಜನರಿಗೆ ತೊಂದರೆ

ಆಗುಂಬೆಯ ರಾಷ್ಟ್ರೀಕೃತ ಬ್ಯಾಂಕ್ ಒಂದರ ಬಗ್ಗೆ ಈಗ ಭಾರಿ ಜನಾಕ್ರೋಶ ವ್ಯಕ್ತವಾಗಿದೆ. ಇಲ್ಲಿನ ಮ್ಯಾನೇಜರ್ ಕಳೆದ ಎರಡು ತಿಂಗಳಿನಿಂದ ಬ್ಯಾಂಕಿನಲ್ಲಿ ಇರುವುದಿಲ್ಲ. ಇಲ್ಲಿರುವ ಎರಡು ಸಿಬ್ಬಂದಿಗೆ ಕೆಲಸ ಮಾಡಲು ಆಗುತ್ತಿಲ್ಲ. ಇದರಿಂದ ಗ್ರಾಹಕರಿಗೆ ಪಿಂಚಣಿ, ಸಾಲ, ಅಥವಾ ಸರ್ಕಾರಿ ಸೇವೆಯಲ್ಲಿ ಅತ್ಯಂತ ತೊಂದರೆಯಾಗಿದೆ. ಇದರಿಂದಾಗಿ ನೂರಾರು ಮಂದಿ ಗ್ರಾಹಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಉನ್ನತ ಅಧಿಕಾರಿಗಳು ಗಮನ ವಹಿಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.

ಇತ್ತೀಚೆಗೆ ಕೆಲ ಬ್ಯಾಂಕುಗಳಲ್ಲಿ ಸಿಬ್ಬಂದಿ ಹಾಗೂ ಕೆಲವು ಉನ್ನತ ಅಧಿಕಾರಿಗಳು ಗ್ರಾಹಕರಿಗೆ ಸ್ಪಂದನೆಗೆ ಸಿಗುತ್ತಿಲ್ಲ. ಇದರಿಂದಾಗಿ ಎಲ್ಲಾ ಸರ್ಕಾರಿ ಯೋಜನೆಗಳು ಬ್ಯಾಂಕ್ ಮೂಲಕ ವರ್ಗಾವಣೆ ಆಗಬೇಕಿದೆ. ಇನ್ನು ಅನೇಕ ಯೋಜನೆಗಳು ಸಾಲದ ವ್ಯವಸ್ಥೆ ಸೇರಿದಂತೆ ಬಹುತೇಕ ಜನರ ಬದುಕು ಬ್ಯಾಂಕ್ ಗಳ ಮೇಲೆ ಅವಲಂಬಿತವಾಗಿದೆ. ಆದರೆ ಈ ನಿರ್ಲಕ್ಷದಿಂದಾಗಿ ಜನತೆ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಅನೇಕರ ಬದುಕು ಉರ ಬಟ್ಟೆಯಾಗುತ್ತಿದೆ. ಹೀಗಾಗಿ ಉನ್ನತ ಅಧಿಕಾರಿಗಳು ತಕ್ಷಣ ಗಮನಿಸಬೇಕು. ಪ್ರತಿ ಬ್ಯಾಂಕ್ ನಲ್ಲಿ ಸೇವಾ ಕೇಂದ್ರಗಳನ್ನು ತೆರೆಯಬೇಕು. ಜೊತೆಗೆ ಯಾವ ಬ್ಯಾಂಕ್ ನಲ್ಲಿ ಯಾವ ಸಿಬ್ಬಂದಿ ಕೆಲಸ ಮಾಡುತ್ತಿಲ್ಲ ಎಂಬ ಬಗ್ಗೆ ಬ್ಯಾಂಕ್ ನ ಉನ್ನತ ಅಧಿಕಾರಿಗಳು ಗಮನಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ. ಈ ಬಗ್ಗೆ ಸರ್ಕಾರಕ್ಕೂ ಕೂಡ ಸಂಬಂಧಪಟ್ಟ ಇಲಾಖೆ ವರದಿ ನೀಡಬೇಕಿದೆ.

ತೀರ್ಥಹಳ್ಳಿಯಲ್ಲಿ ಬ್ಯಾಂಕ್ ವಂಚನೆ!

ತೀರ್ಥಹಳ್ಳಿ ತಾಲೂಕಿನ ಕೋಣಂದೂರು, ತೀರ್ಥಹಳ್ಳಿ, ಕನ್ನಂಗಿ ಭಾಗದಲ್ಲಿ ಕೆಲವು ಖಾಸಗಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳ ಹಗರಣಗಳು ಇದೀಗ ಗ್ರಾಹಕರ ತಲೆ ನೋವಿಗೆ ಕಾರಣವಾಗಿದೆ. ಇನ್ನು ಬ್ಯಾಂಕ್ ಕೂಡ ಎಷ್ಟು ಸೇಫ್ ಎಂಬ ಅನುಮಾನ ವ್ಯಕ್ತವಾಗಿದೆ. ಇತ್ತೀಚಿಗೆ ಅಷ್ಟೇ ಕೋಣಂದೂರು, ಯಡೂರು ಹಾಗೂ ತೀರ್ಥಹಳ್ಳಿ ಬ್ರಾಂಚ್ ರಾಷ್ಟ್ರೀಕೃತ ಬ್ಯಾಂಕ್ ಒಂದರಲ್ಲಿ ಕೋಟಿಗಟ್ಟಲೆ ಹಣ ವಂಚನೆ ಆಗಿತ್ತು. ಇದರ ಮ್ಯಾನೇಜರ್ ಒಬ್ಬರ ಆನ್ಲೈನ್ ಗೇಮ್ ಚಟದಿಂದಾಗಿ ಹಣ ನಷ್ಟವಾಗಿದ್ದು ಗ್ರಾಹಕರು ತೊಂದರೆ ಅನುಭವಿಸಿದ್ದರು. ಅದಲ್ಲದೆ ಇತ್ತೀಚೆಗೆ ಕನ್ನಂಗಿ ಬ್ಯಾಂಕ್ ಒಂದರಲ್ಲಿ ಕೂಡ ಈ ತರಹದ ಘಟನೆ ವರದಿಯಾಗಿತ್ತು. ಜೊತೆಗೆ ಪ್ರತಿ ಬ್ಯಾಂಕ್ ಗಳಲ್ಲೂ ಕೂಡ ಸೇವಾ ಕೇಂದ್ರಗಳಲ್ಲಿ ಇರುವಂತಹ ಸಿಬ್ಬಂದಿಯ ನಿರ್ಲಕ್ಷ ಹಾಗೂ ಸಿಬ್ಬಂದಿಯ ಬೇಜವಾಬ್ದಾರಿ ಇದೀಗ ಜನರ ಬದುಕಿಗೆ ತೊಂದರೆ ಆಗುತ್ತಿದೆ.

Categories
ಮಂಗಳೂರು

ಮಂಗಳೂರಲ್ಲಿ ಮತ ಹಾಕಲು ಹೊಸ ಪ್ಲಾನ್!

ಮಂಗಳೂರಲ್ಲಿ ಮತ ಹಾಕಲು ಹೊಸ ಪ್ಲಾನ್!
– ದೇಶಕ್ಕೆ ಮೊದಲು ಕರಾವಳಿಯಲ್ಲಿ ಪ್ರಯೋಗ
– ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌..!
– ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ
– ಹೆಚ್ಚುವರಿ ಮಾಹಿತಿ ಒದಗಿಸಬೇಕು!

NAMMUR EXPRESS NEWS
ಮಂಗಳೂರು: ನಗರದಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಚುನಾವಣ ಆಯೋಗ ಕೊನೇ ಹಂತದ ಕಸರತ್ತು ಮುಂದುವರಿಸಿದೆ. ನಗರದ ಜನತೆಗೆ ಮತಗಟ್ಟೆಗಳ ಮಾಹಿತಿ ನೀಡಲು ಚುನಾವಣೆ ಸ್ಲಿಪ್‌ಗ್ಳಲ್ಲಿ ಕ್ಯುಆರ್‌ ಕೋಡ್‌ ನೀಡಲಾಗಿದ್ದು, ಆ ಮೂಲಕ ಮತದಾನ ಕೇಂದ್ರದ ಮಾಹಿತಿ ನೀಡಲು ಮುಂದಾಗಿದೆ. ದೇಶದಲ್ಲೇ ಕರ್ನಾಟಕದಲ್ಲಿ ಇದು ಮೊದಲ ಪ್ರಯೋಗವಾಗಿದ್ದು, ದ.ಕ. ಜಿಲ್ಲೆಯ ನಗರಕ್ಕೆ ಹೊಂದಿಕೊಂಡಿರುವ ಎರಡು ಕ್ಷೇತ್ರಗಳಲ್ಲಿ ಮಾತ್ರ ಜಾರಿಗೊಳಿಸಲಾಗಿದೆ. ಇದರಂತೆ ಮಂಗಳೂರು ದಕ್ಷಿಣ ಹಾಗೂ ಉತ್ತರ ಕ್ಷೇತ್ರದಲ್ಲಿ “ಸ್ಲಿಪ್‌’ ಮೂಲಕ ಮತದಾರರಿಗೆ ಮತಗಟ್ಟೆಯ ವಿವರ ಒದಗಿಸಲಾಗುತ್ತಿದ್ದು, ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾವಣೆಯಾಗುವ ನಿರೀಕ್ಷೆ ಹೊಂದಲಾಗಿದೆ.

ಮತದಾರರ ಸ್ಲಿಪ್‌ನಲ್ಲಿ ಮತಗಟ್ಟೆಯ ವಿವರ ನಗರದಲ್ಲಿರುವ ಅನೇಕರಿಗೆ ಮತಗಟ್ಟೆಯ ಬಗ್ಗೆ ಮಾಹಿತಿ ಇರುವುದಿಲ್ಲ. ಮತದಾನಕ್ಕಾಗಿ ಮತಗಟ್ಟೆಗಳನ್ನು ಅರಸಿಕೊಂಡು ಹೋಗಬೇಕಾಗುತ್ತದೆ. ಇದನ್ನು ನೀಗಿಸಲು ಕ್ಯುಆರ್‌ ಕೋಡ್‌ ನೀಡಲಾಗಿದ್ದು, ಸ್ಕ್ಯಾನ್‌ ಮಾಡಿದ ವೇಳೆ ಮತಗಟ್ಟೆಯ ಲೊಕೇಷನ್‌ ಪಡೆಯಬಹುದು. ಈ ಮೂಲಕ ಮತಗಟ್ಟೆ ಹಡುಕಿ ತೆರಳುವುದನ್ನು ತಪ್ಪಿಸಲು ಸಾಧ್ಯವಾಗಲಿದೆ.

ಹೆಚ್ಚುವರಿ ಮಾಹಿತಿ ಒದಗಿಸಬೇಕು.!

ಮತದಾನ ಸಂದರ್ಭ ಅನೇಕರಿಗೆ ಮತಗಟ್ಟೆ ಬಳಿ ಸರದಿ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ. ಆ ಕಾರಣಕ್ಕೆ ಮತಗಟ್ಟೆಯ ಬಳಿಗೆ ತೆರಳಲು ಕೆಲವರು ಹಿಂದೇಟು ಹಾಕುತ್ತಾರೆ. ಮತಗಟ್ಟೆಯ ಬಳಿ ಇರುವ ಜನ ಸಂಖ್ಯೆಯ ವಿವರ ಹಾಗೂ ಯಾವ ಸಮಯದಲ್ಲಿ ಮತಚಲಾಯಿಸುವುದು ಸೂಕ್ತ ಎಂಬಿತ್ಯಾದಿ ಮಾಹಿತಿ ಒದಗಿಸಿದಲ್ಲಿ ಪ್ರಯೋಜನವಾಗಲಿದೆ ಎಂಬುವುದು ಮತದಾರರ ಅಭಿಪ್ರಾಯ.

ಏನೆಲ್ಲ ಮಾಹಿತಿ: ಕ್ಯುಆರ್‌ಕೋಡ್‌ ಇರುವ ಓಟರ್‌ ಸ್ಲಿಪ್‌ ಮೂಲಕ ಯಾವ ಮತಗಟ್ಟೆಗೆ ತೆರಳಬೇಕು? ಸೇರಿದಂತೆ ಹಲವು ಮಾಹಿತಿ ಪಡೆದುಕೊಳ್ಳಬಹುದು. ಮನೆಯಿಂದ ಮತಗಟ್ಟೆ ಎಷ್ಟು ದೂರವಿದೆ ಎನ್ನುವ ವಿವರ ಸಿಗಲಿದೆ. ತೆರಳಲು ಬೇಕಾದ ಸಮಯ ಹಾಗೂ ದಾರಿಯ ಬಗ್ಗೆಯೂ ಮಾಹಿತಿ ಸಿಗಲಿದೆ. ಮಾರ್ಗ ಮಧ್ಯದಲ್ಲಿರುವ ವಾಹನ ದಟ್ಟಣೆಯ ವಿವರವನ್ನು ಕೂಡ ತಿಳಿದುಕೊಳ್ಳಲು ಸಾಧ್ಯವಾಗಲಿದೆ. ಮತಗಟ್ಟೆಯ ಫೋಟೋ ಕೂಡ ಇಲ್ಲಿ ಕಾಣಬಹುದಾಗಿದ್ದು, ಮತದಾರರು ನಿರಾಯಾಸವಾಗಿ ಮತಗಟ್ಟೆ ತಲುಪಿ ಮತ ಚಲಾಯಿಸಬಹುದಾಗಿದೆ.

ಮಂಗಳೂರು ನಗರ ಪ್ರದೇಶದಲ್ಲಿ ಕಡಿಮೆ ಪ್ರಮಾಣದಲ್ಲಿ ಮತದಾನವಾಗುತ್ತದೆ. ಇದನ್ನು ನೀಗಿಸಲು ಇಲಾಖೆ ಮುಂದಾಗಿದೆ. ಎಲ್ಲರೂ ಮತದಾನದಲ್ಲಿ ಭಾಗವಹಿಸಬೇಕು ಎನ್ನುವುದು ಉದ್ದೇಶವಾಗಿದೆ. ಇದಕ್ಕಾಗಿ ಮತದಾರರಿಗೆ ನೆರವಾಗಲು ಮತ ಕೇಂದ್ರದ ಮಾಹಿತಿಯನ್ನು ಓಟರ್‌ಸ್ಲಿಪ್‌ನಲ್ಲಿ ಒದಗಿಸಲಾಗಿದೆ. ಮುಂದಿನ ಚುನಾವಣೆಗೆ ಮತ್ತಷ್ಟು ಹೆಚ್ಚುವರಿ ಮಾಹಿತಿ ನೀಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು.

Categories
ಮಾಹಿತಿ

ಓಟ್ ಹಾಕಲು 12 ದಾಖಲೆಗಳಲ್ಲಿ ಒಂದಿದ್ದರೆ ಸಾಕು!

ಓಟ್ ಹಾಕಲು 12 ದಾಖಲೆಗಳಲ್ಲಿ ಒಂದಿದ್ದರೆ ಸಾಕು!
– 14 ಲೋಕ ಸಭಾ ಕ್ಷೇತ್ರಗಳಿಗೆ ನಾಳೆಯೇ ಚುನಾವಣೆ
– ಮತ ಹಾಕೋದು ನಿಮ್ಮ ಹಕ್ಕು: ಮತದಾನ ಮರೆಯದಿರಿ!

NAMMUR EXPRESS NEWS
ರಾಜ್ಯದಲ್ಲಿ ಮೊದಲ ಹಂತದ 14 ಕ್ಷೇತ್ರಗಳ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಏ.26ರ ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆವರೆಗೂ ಮತದಾನ ನಡೆಯಲಿದೆ. 6 ಗಂಟೆ ನಂತರ ಮತಗಟ್ಟಿಗೆ ನೋ ಎಂಟ್ರಿ ಬೋರ್ಡ್ ಹಾಕಲಾಗುತ್ತದೆ. 14 ಕ್ಷೇತ್ರಗಳಲ್ಲಿ ಮತದಾನಕ್ಕೆ ಚುನಾವಣಾ ಆಯೋಗ ಸಿದ್ಧತೆ ಮಾಡಿಕೊಂಡಿದೆ. ಮೊದಲ ಹಂತದಲ್ಲಿ ಉಡುಪಿ -ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಚಿಕ್ಕಬಳ್ಳಾಪುರ ಹಾಗೂ ಕೋಲಾರದಲ್ಲಿ ಮತದಾನ ನಡೆಯಲಿದೆ. ಲೋಕಸಭೆ ಚುನಾವಣೆಯಲ್ಲಿ ಯಾವುದೇ ಅರ್ಹ ಮತದಾರರು ಮತದಾನ ಮಾಡಲು ಮತದಾರರ ಗುರುತಿನ ಚೀಟಿ ತೆಗೆದುಕೊಂಡು ಹೋಗಬೇಕಿದೆ. ಮತದಾರರ ಗುರುತಿನ ಚೀಟಿ ಇಲ್ಲದಿದ್ದರೆ ಪರ್ಯಾಯ ದಾಖಲೆಗಳನ್ನು ತೋರಿಸಿ ಮತದಾನ ಮಾಡಬಹುದಾಗಿದೆ.

ಈ ದಾಖಲೆಗಳನ್ನು ತೋರಿಸಿ ಮತದಾನ ಮಾಡಿ:

* ಆಧಾರ್ ಕಾರ್ಡ್
* ಜಾಬ್ ಕಾರ್ಡ್
* ಡ್ರೈವಿಂಗ್ ಲೈಸನ್ಸ್
* ಪಾನ್ ಕಾರ್ಡ್
* ಭಾರತೀಯ ಪಾಸ್‌ ಪೋರ್ಟ್
* ಭಾವಚಿತ್ರದೊಂದಿಗೆ ಪಿಂಚಣಿ ದಾಖಲೆ
* ಎನ್‌ಪಿಆರ್ ಅಡಿಯಲ್ಲಿ ಸ್ಮಾರ್ಟ್ ಕಾರ್ಡ್
* ಅಂಚೆ ಕಚೇರಿ ನೀಡಿದ ಭಾವಚಿತ್ರವಿರುವ ಪಾಸ್‌ ಬುಕ್‌
* ಕಾರ್ಮಿಕ ಸಚಿವಾಲಯದ ಯೋಜನೆಯಡಿ ನೀಡಲಾದ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್
* ರಾಜ್ಯ, ಕೇಂದ್ರ ಸರ್ಕಾರದ ಸಾರ್ವಜನಿಕ ಉದ್ದಿಮೆಗಳು ತಮ್ಮ ನೌಕರರಿಗೆ ನೀಡಿರುವ ಸೇವಾ ಗುರುತಿನ ಚೀಟಿ
* ಸಂಸದರು, ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರುಗಳಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿಗಳು
* ಅಂಗವಿಕಲರ ಗುರುತಿನ ಚೀಟಿ (ಯುಡಿಐಡಿ ಕಾರ್ಡ್) ಪತ್ರದ ಮೂಲ ಪ್ರತಿಗಳನ್ನು ಮತದಾನದ ವೇಳೆ ಪರ್ಯಾಯ ದಾಖಲೆಗಳನ್ನಾಗಿ ಬಳಸಬಹುದು ಎಂದು ಹೇಳಲಾಗಿದೆ.
ಮತದಾನ ನಿಮ್ಮ ಹಕ್ಕು. ಕಡ್ಡಾಯವಾಗಿ ಮತದಾನ ಮಾಡಿರಿ.

Categories
ರಾಜ್ಯ ಹವಾಮಾನ ಸುದ್ದಿ

3 ದಿನ ತೀವ್ರ ಬಿಸಿಗಾಳಿ: ಆಮೇಲೆ ಮಳೆ!

3 ದಿನ ತೀವ್ರ ಬಿಸಿಗಾಳಿ: ಆಮೇಲೆ ಮಳೆ!
– ಹವಾಮಾನ ಇಲಾಖೆ ರೆಡ್ ಅಲರ್ಟ್
– ಕರ್ನಾಟಕದಲ್ಲಿ ಯಾವಾಗ ಹೆಚ್ಚು ಮಳೆ?

NAMMUR EXPRESS NEWS
ನವದೆಹಲಿ: ದೇಶದಲ್ಲಿ ಮುಂದಿನ ಐದು ದಿನಗಳವರೆಗೆ ಪೂರ್ವ ಮತ್ತು ದಕ್ಷಿಣ ಪೆನಿನ್ಸುಲರ್ ಭಾರತದಲ್ಲಿ ದೀರ್ಘಕಾಲದ ಶಾಖದ ಅಲೆಯನ್ನು ನಿರೀಕ್ಷಿಸಲಾಗಿದೆ. ಮುಂದಿನ ಐದು ದಿನಗಳವರೆಗೆ ಒಡಿಶಾದ ಕರಾವಳಿ, ಗಂಗಾ ಪಶ್ಚಿಮ ಬಂಗಾಳ ಮತ್ತು ಉಪ ಹಿಮಾಲಯನ್ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನ ಪ್ರತ್ಯೇಕ ಪ್ರದೇಶಗಳು ಮತ್ತು ಕರ್ನಾಟಕದ ಒಳನಾಡಿನಲ್ಲಿ ತೀವ್ರ ಶಾಖದ ಪರಿಸ್ಥಿತಿಗಳು ಉಂಟಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಿಹಾರ, ಜಾರ್ಖಂಡ್, ಕರಾವಳಿ ಆಂಧ್ರಪ್ರದೇಶ, ತೆಲಂಗಾಣ, ರಾಯಲಸೀಮಾ ಮತ್ತು ಕರ್ನಾಟಕದ ಕರಾವಳಿಯ ಪ್ರತ್ಯೇಕ ಪ್ರದೇಶಗಳು ಈ ಅವಧಿಯಲ್ಲಿ ಬಿಸಿಗಾಳಿ ಪರಿಸ್ಥಿತಿಗಳಿಗೆ ಸಾಕ್ಷಿಯಾಗುವ ನಿರೀಕ್ಷೆಯಿದೆ.

ಮುಂದಿನ 5 ದಿನಗಳಲ್ಲಿ ಬಿಹಾರ, ಜಾರ್ಖಂಡ್, ಕರಾವಳಿ ಆಂಧ್ರಪ್ರದೇಶ ಮತ್ತು ಯಾಣಂ, ತೆಲಂಗಾಣ, ರಾಯಲಸೀಮಾದ ಪ್ರತ್ಯೇಕ ಪ್ರದೇಶಗಳಲ್ಲಿ ಶಾಖ ತರಂಗ ಪರಿಸ್ಥಿತಿಗಳು; 24 ಮತ್ತು 26 ರಂದು ಕರಾವಳಿ ಕರ್ನಾಟಕ, 24 ಮತ್ತು 25 ರಂದು ತಮಿಳುನಾಡು; 25-28 ನೇ ಅವಧಿಯಲ್ಲಿ ಪೂರ್ವ ಉತ್ತರ ಪ್ರದೇಶ ಮತ್ತು 26-28 ನೇ ಅವಧಿಯಲ್ಲಿ ಪಶ್ಚಿಮ ಉತ್ತರ ಪ್ರದೇಶ; ಏಪ್ರಿಲ್ 27 ಮತ್ತು 28 ರಂದು ಕೊಂಕಣವಾಗಲಿದೆ ಎಂದು ಐಎಂಡಿ ಪ್ರಕಟಣೆಯಲ್ಲಿ ತಿಳಿಸಿದೆ. ಐಎಂಡಿ ಗಂಗಾ ಪಶ್ಚಿಮ ಬಂಗಾಳಕ್ಕೆ ರೆಡ್ ಅಲರ್ಟ್ ನೀಡಿದ್ದು, ಎಲ್ಲಾ ವಯಸ್ಸಿನವರಲ್ಲಿ ಶಾಖದ ಕಾಯಿಲೆಗಳು ಮತ್ತು ಶಾಖದ ಆಘಾತದ ಸಾಧ್ಯತೆಯನ್ನು ಸೂಚಿಸುತ್ತದೆ.

ಇದಲ್ಲದೆ, ಒಡಿಶಾ, ಬಿಹಾರ, ಕರಾವಳಿ ಆಂಧ್ರಪ್ರದೇಶ ಮತ್ತು ಯಾಣಂ, ಕರ್ನಾಟಕದ ಒಳನಾಡು ಮತ್ತು ರಾಯಲಸೀಮಾಕ್ಕೆ ಐಎಂಡಿ ಆರೆಂಜ್ ಅಲರ್ಟ್ ನೀಡಿದೆ. ಅಲ್ಲದೆ, ಏಪ್ರಿಲ್ 26 ರಿಂದ ಏಪ್ರಿಲ್ 28 ರವರೆಗೆ ವಾಯುವ್ಯ ಭಾರತದಲ್ಲಿ ಗುಡುಗು ಮತ್ತು ಮಿಂಚು ಸಹಿತ ಹೊಸ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಕೆಲವು ಪ್ರದೇಶಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ. ಈಶಾನ್ಯ ಭಾರತವು ಏಪ್ರಿಲ್ 24, 28 ಮತ್ತು 28 ರಂದು ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು, ಮಿಂಚು ಮತ್ತು ಗಾಳಿಯೊಂದಿಗೆ ಭಾರಿ ಮಳೆಗೆ ಸಾಕ್ಷಿಯಾಗಲಿದೆ ಎಂದು ಐಎಂಡಿ ತಿಳಿಸಿದೆ.

Categories
ಕರಾವಳಿ ಮಂಗಳೂರು

ದಕ್ಷಿಣ ಕನ್ನಡದಲ್ಲಿ ಈಗ ಕೆಟ್ಟ ರಾಜಕೀಯ!

ದಕ್ಷಿಣ ಕನ್ನಡದಲ್ಲಿ ಈಗ ಕೆಟ್ಟ ರಾಜಕೀಯ!
– ಬಂಟರ ಬ್ರಿಗೇಡ್‌ ಹೆಸರಿನಲ್ಲಿ ಬಿಲ್ಲವ ಸಮಾಜವನ್ನು ಅವಹೇಳನ ಮಾಡುವ ಕರಪತ್ರ ವೈರಲ್‌!
– ಕಾಂಗ್ರೆಸ್‌ ಕೃತ್ಯವೆಂದು ಚುನಾವಣಾ ಆಯೋಗಕ್ಕೆ ಬಿಜೆಪಿಯಿಂದ ದೂರು

NAMMUR EXPRESS NEWS
ಮಂಗಳೂರು: ಲೋಕಸಭೆ ಚುನಾವಣೆ ಮತದಾನಕ್ಕೆ ಇನ್ನು ಕೇವಲ ಒಂದು ದಿನವಷ್ಟೇ ಬಾಕಿಯಿರಬೇಕಾದರೆ, ಜಾತಿಗಳ ನಡುವೆ ಒಡಕು ಮೂಡಿಸುವ ಹುನ್ನಾರವೊಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಬಂಟರ ಬ್ರಿಗೇಡ್‌ ಎಂಬ ಹೆಸರಿನಲ್ಲಿ ಬಿಲ್ಲವ ಸಮಾಜದವರನ್ನು ನಿಂದಿಸುವ ಕರಪತ್ರವೊಂದು ಈಗ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಬಂಟ ಬ್ರಿಗೇಡ್‌ ದಕ್ಷಿಣ ಕನ್ನಡ ಎಂಬ ಹೆಸರಿನಲ್ಲಿ ಈ ಕರಪತ್ರವನ್ನು ಮುದ್ರಿಸಲಾಗಿದ್ದು, ಅದರಲ್ಲಿ ಬಿಲ್ಲವ ಸಮಾಜದವರನ್ನು ನಿಂದಿಸುವ ಬಹಳ ಅಪೇಕ್ಷಾರ್ಹವಾದ ಪದಗಳನ್ನು ಬಳಸಲಾಗಿದೆ. ಅಷ್ಟೇಅಲ್ಲ, ಈ ಪತ್ರದಲ್ಲಿ ಬಿಲ್ಲವ ಸಮಾಜದವರ ಬಗ್ಗೆ ಬಹಳ ಕೀಳುಮಟ್ಟದ ಪದಗಳನ್ನು ಬಳಸಲಾಗಿದೆ. ಬಿಜೆಪಿಯಿಂದ ಚುನಾವಣಾ ಆಯೋಗಕ್ಕೆ ದೂರು ಬಂಟರ ಬ್ರಿಗೇಡ್‌ ಹೆಸರಿನಲ್ಲಿ ಹರಿದಾಡುತ್ತಿರುವ ಈ ಪತ್ರವನ್ನು ನಕಲಿ ಎಂದಿರುವ ಬಿಜೆಪಿ ಆ ಬಗ್ಗೆ ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಕೆ ಮಾಡಿದೆ.

ಏನಿದು ಕರ ಪತ್ರ!

ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟರ ಬಗ್ಗೆ ಬಂಟರ ಬ್ರಿಗೇಡ್ ಹೆಸರಲ್ಲಿ ಕರಪತ್ರ ಮುದ್ರಿಸಿ, ಆಕ್ಷೇಪಾರ್ಹ ವಿಚಾರಗಳನ್ನು ಬರೆದು ಜಾತಿ, ಜಾತಿಗಳ ನಡುವೆ ದ್ವೇಷ ಹಬ್ಬಿಸುವ ಯತ್ನ ನಡೆದಿದ್ದು ಬಿಜೆಪಿ ಕಾನೂನು ಪ್ರಕೋಷ್ಠದಿಂದ ಜಿಲ್ಲಾ ಚುನಾವಣಾಧಿಕಾರಿಗೆ ದೂರು ಸಲ್ಲಿಸಲಾಗಿದೆ. ಕರಪತ್ರದಲ್ಲಿ ಬ್ರಿಜೇಶ್ ಚೌಟರ ಭಾವಚಿತ್ರ ಬಳಸಿ ಆಕ್ಷೇಪಾರ್ಹ ವಿಚಾರಗಳನ್ನು ಮುದ್ರಿಸಿ, ದ್ವೇಷ ಹಬ್ಬಿಸುವ ಯತ್ನ ನಡೆದಿದೆ. ಎದುರಾಳಿ ಕಾಂಗ್ರೆಸ್ ಅಭ್ಯರ್ಥಿಯೇ ಈ ಕೃತ್ಯವನ್ನು ಮಾಡಿದ್ದಾರೆ. ಈ ರೀತಿಯ ಕರಪತ್ರವನ್ನು ಮುದ್ರಿಸಿ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ. ಜಾತಿಗಳ ನಡುವೆ ದ್ವೇಷ ಬಿತ್ತಿ ಅದರ ದುರ್ಲಾಭವನ್ನು ಕಾಂಗ್ರೆಸ್ ಅಭ್ಯರ್ಥಿ ಪಡೆಯುತ್ತಿದ್ದಾರೆ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಕಾನೂನು ಪ್ರಕೋಷ್ಠದ ಜಿಲ್ಲಾ ಸಹ ಸಂಚಾಲಕ ದೇವಿಪ್ರಸಾದ್ ಸಾಮಾನಿ ಚುನಾವಣಾ ಆಯೋಗಕ್ಕೆ ಒತ್ತಾಯಿಸಿದ್ದಾರೆ.

ಬಂಟ ಬ್ರಿಗೇಡ್ ಅಸ್ತಿತ್ವದಲ್ಲೇ ಇಲ್ಲ!

ಬಂಟ ಬ್ರಿಗೇಡ್ ಎನ್ನುವ ಯಾವುದೇ ಸಂಸ್ಥೆ ಅಸ್ತಿತ್ವದಲ್ಲಿಲ್ಲ. ಅಂತಹ ಸಂಸ್ಥೆ ಹೆಸರಲ್ಲಿ ಯಾವುದೇ ಕಾರ್ಯ ಚಟುವಟಿಕೆ ನಡೆಸುವುದು ಕಂಡುಬಂದಿಲ್ಲ. ಚುನಾವಣೆಗೆ ಎರಡು ದಿನ ಇರುವಾಗ ಮತದಾರರಿಗೆ ಪ್ರಭಾವ ಬೀರುವ ಉದ್ದೇಶದಿಂದ ಈ ರೀತಿಯ ಕೃತ್ಯ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಇಂತಹ ವಿಚಾರಗಳನ್ನು ಪಸರಿಸಿ ಚುನಾವಣೆಯಲ್ಲಿ ಲಾಭ ಮಾಡಲು ಯತ್ನಿಸುತ್ತಿದ್ದಾರೆ. ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಚುನಾವಣಾ ಅಧಿಕಾರಿಯಲ್ಲಿ ಒತ್ತಾಯಿಸಿದ್ದಾರೆ.