Categories
ಚಿಕ್ಕಮಗಳೂರು

ಶೃಂಗೇರಿ ಜೆಸಿಐ‌ಗೆ ನೂತನ ಅಧ್ಯಕ್ಷರಾಗಿ ವಿಎಸ್‌ಎ ಅಶೋಕ್ ಆಯ್ಕೆ..!!

ಶೃಂಗೇರಿ ಜೆಸಿಐ‌ಗೆ ನೂತನ ಅಧ್ಯಕ್ಷರಾಗಿ ವಿಎಸ್‌ಎ ಅಶೋಕ್ ಆಯ್ಕೆ..!!
* ಕ್ರಿಯಾಶೀಲ ಜೆಸಿಐ ಸದಸ್ಯನಿಗೆ ಒಲಿದ ಅಧ್ಯಕ್ಷ ಸ್ಥಾನ
* ವಿಎಸ್ಎ ಸೌಂಡ್ಸ್ ಮೂಲಕ ತಾಲೂಕಿನಾದ್ಯಂತ ಚಿರಪರಿಚಿತ

NAMMUR EXPRESS NEWS
ಶೃಂಗೇರಿ: ತಾಲೂಕಿನ ಜೆಸಿಐ‌ ಸಂಸ್ಥೆಗೆ ನೂತನ ಅಧ್ಯಕ್ಷರ ಆಯ್ಕೆಯಾಗಿದ್ದು, ತಾಲೂಕಿನ ವಿದ್ಯಾರಣ್ಯಪುರ ಗ್ರಾಮದ ಅಶೋಕ್‌ರವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಶೋಕ್ ಜೆಸಿಐನ ಸಕ್ರೀಯ ಸದಸ್ಯರಾಗಿ ಹಲವು ವರ್ಷಗಳಿಂದ ಸಂಸ್ಥೆಯಲ್ಲಿದ್ದಾರೆ. ತಾಲೂಕಿನಲ್ಲಿ ವಿಎಸ್ಎ ಸೌಂಡ್ಸ್ ಮೂಲಕ ಚಿರಪರಿಚಿತರಾಗಿದ್ದು ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನೂತನ ಅಧ್ಯಕ್ಷರಿಗೆ ಜೆಸಿಐನ ಪದಾಧಿಕಾರಿಗಳು ಹಾಗೂ ಸ್ನೇಹಿತರು ಶುಭಾಶಯ ಕೋರಿದ್ದಾರೆ.

Categories
ಶಿವಮೊಗ್ಗ

ಆಗುಂಬೆ ಎವಿಎಂ ಶಾಲೆ ಸಮಿತ್ ರಾಜ್ಯ ಮಟ್ಟಕ್ಕೆ ಆಯ್ಕೆ

ಆಗುಂಬೆ ಎವಿಎಂ ಶಾಲೆ ಸಮಿತ್ ರಾಜ್ಯ ಮಟ್ಟಕ್ಕೆ ಆಯ್ಕೆ
* ಪ್ರೌಢ ಶಾಲಾ ಕ್ರೀಡಾಕೂಟದ ಜಾವಲಿನ  ಸ್ಪರ್ಧೆಯಲ್ಲಿ ಗೆಲುವು
* ಸಮಿತ್ ಎಚ್.ಎಂ.ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ

NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ಮತ್ತು ಶಿವಮೊಗ್ಗ ಜಿಲ್ಲಾ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಶಿವಮೊಗ್ಗ  ಇವರ ಆಶ್ರಯದಲ್ಲಿ ಅ.29 ಮತ್ತು 30 2024ರಂದು ಶಿವಮೊಗ್ಗ ಜಿಲ್ಲಾ 17 ವರ್ಷ ವಯೋಮಿತಿಯೊಳಗಿನ ಪ್ರೌಢ ಶಾಲಾ ಬಾಲಕ-ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಸಮಿತ್ ಎಚ್.ಎಂ . ಇವರು ಎ.ವಿ.ಎಂ ಆಗುಂಬೆ ಶಾಲೆಯ ವಿದ್ಯಾರ್ಥಿಯಾಗಿದ್ದು, ತಂದೆ ಮಂಜುನಾಥ್, ತಾಯಿ ಸ್ಮಿತಾ  ಹರಳಿಮಠದವರಾಗಿರುತ್ತಾರೆ.ಇವರು ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ನಡೆದ ಶಿವಮೊಗ್ಗ ಜಿಲ್ಲಾ ಮಟ್ಟದ ಪ್ರೌಢ ಶಾಲಾ ಕ್ರೀಡಾಕೂಟದ ಜಾವಲಿನ  ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರನ್ನು, ಪ್ರಾಂಶುಪಾಲರು, ಸಿಬ್ಬಂದಿ ವರ್ಗದವರು, ಹಿರಿಯರು ಹಾರ್ದಿಕವಾಗಿ ಅಭಿನಂದಿಸಿದ್ದಾರೆ.

Categories
ಜಾತಕ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ದೀಪಾವಳಿ ಹಬ್ಬ, ಈ ರಾಶಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತೆ!
– ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಇಂದು ನಿಮಗೆ ಕುಟುಂಬ ಮತ್ತು ಸ್ನೇಹಿತರ ಬೆಂಬಲ ಸಿಗಲಿದೆ. ವ್ಯಾಪಾರದಲ್ಲಿ ಬೆಳವಣಿಗೆಗೆ ಹೊಸ ಅವಕಾಶಗಳಿವೆ. ನಿಮ್ಮ ಶೈಕ್ಷಣಿಕ ಕೆಲಸದಲ್ಲಿ ಉತ್ತಮ ಲಾಭ ಸಿಗಬಹುದು. ದೀರ್ಘಕಾಲದ ಸಮಸ್ಯೆಗಳು ದೂರವಾಗುತ್ತವೆ. ಆಡಳಿತ ಪಕ್ಷದಿಂದ ನಿಮಗೆ ಬೆಂಬಲ ಸಿಗಲಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ಸಂಪತ್ತು ಮತ್ತು ಸಂತೋಷದಲ್ಲಿ ಹೆಚ್ಚಳವಾಗುತ್ತದೆ. ಕಲೆ ಮತ್ತು ಸಂಗೀತದ ಕಡೆಗೆ ಆಸಕ್ತಿ ಹೆಚ್ಚಾಗುತ್ತದೆ.

** ವೃಷಭ ರಾಶಿ :
ಇಂದು ನಿಮ್ಮ ಮನಸ್ಸು ಗೊಂದಲದಲ್ಲಿ ಉಳಿಯುತ್ತದೆ. ತಾಳ್ಮೆಯನ್ನು ಕಾಪಾಡಿಕೊಳ್ಳಿ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ಕುಟುಂಬದ ಸದಸ್ಯರ ಆರೋಗ್ಯದ ಕಡೆ ಗಮನ ಕೊಡಿ. ನಿಮ್ಮ ಜೀವನ ಅಸ್ತವ್ಯಸ್ತವಾಗಲು ಬಿಡಬೇಡಿ. ಕೆಲಸದ ಸ್ಥಳದಲ್ಲಿ ಆತ್ಮವಿಶ್ವಾಸದಿಂದ ಹೊಸ ಜವಾಬ್ದಾರಿಗಳನ್ನು ತೆಗೆದುಕೊಳ್ಳುತ್ತೀರಿ. ಅಧಿಕ ಖರ್ಚು ಇರುತ್ತದೆ. ಭೂಮಿ ಅಥವಾ ವಾಹನವನ್ನು ಖರೀದಿಸುವ ಅವಕಾಶವಿರುತ್ತದೆ. ಸ್ನೇಹಿತರು ನಿಮಗೆ ಸಹಾಯ ಮಾಡಲಿದ್ದಾರೆ.

** ಮಿಥುನ ರಾಶಿ :
ಇಂದು ನಿಮ್ಮ ಮನಸ್ಸು ಶಾಂತವಾಗಿ ಉಳಿಯುತ್ತದೆ. ವ್ಯವಹಾರದಲ್ಲಿ ಪ್ರಗತಿಗೆ ಅವಕಾಶಗಳಿವೆ, ಆದರೆ ನಿಮ್ಮ ಕೆಲಸದಲ್ಲಿ ಅಡೆತಡೆಗಳನ್ನು ಎದುರಿಸಬೇಕಾಗಬಹುದು. ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳನ್ನು ಆಯೋಜಿಸಬಹುದು. ಹಣದ ಒಳಹರಿವು ಹೆಚ್ಚಾಗುತ್ತದೆ, ಅಷ್ಟೇ ಖರ್ಚುಗಳು ಸಹ ಇರುತ್ತದೆ. ಭರವಸೆ ಮತ್ತು ಹತಾಶೆಯ ಭಾವನೆ ಇರಬಹುದು. ತಾಯಿಯ ಆರೋಗ್ಯದ ಕಡೆ ಗಮನ ಕೊಡಿ. ಕೆಲಸದ ಮೂಲಕ ಆರ್ಥಿಕ ಲಾಭಕ್ಕಾಗಿ ಹೊಸ ಅವಕಾಶಗಳಿವೆ.

** ಕರ್ಕಾಟಕ ರಾಶಿ :
ಇಂದು ನಿಮ್ಮಲ್ಲಿ ಹತಾಶೆಯ ಭಾವನೆ ಹೆಚ್ಚಾಗಬಹುದು. ಆತ್ಮವಿಶ್ವಾಸದ ಕೊರತೆಯನ್ನು ಅನುಭವಿಸುತ್ತೀರಿ. ಶೈಕ್ಷಣಿಕ ಕೆಲಸದಲ್ಲಿ ಅಡೆತಡೆಗಳು ಉಂಟಾಗಬಹುದು. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆಗಳಿವೆ.ನಿಮಗೆ ಇಂದು ಸಹೋದರರಿಂದ ಬೆಂಬಲ ಸಿಗಲಿದೆ.ನಿಮಗೆ ಹೊಸ ಕೆಲಸವನ್ನು ಪ್ರಾರಂಭಿಸಲು ಇಂದು ಅತ್ಯಂತ ಶುಭ ದಿನವಾಗಿದೆ. ಪ್ರಯಾಣವು ಆಹ್ಲಾದಕರ ಫಲಿತಾಂಶಗಳನ್ನು ನೀಡುತ್ತದೆ.

** ಸಿಂಹ ರಾಶಿ :
ಇಂದು ನಿಮಗೆ ವೃತ್ತಿ ಜೀವನದಲ್ಲಿ ಸಣ್ಣಪುಟ್ಟ ಸಮಸ್ಯೆಗಳಿರುತ್ತವೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಸಂಬಂಧಗಳಲ್ಲಿ ಹೊಸ ರೋಚಕ ತಿರುವುಗಳಿರುತ್ತವೆ. ದಾಂಪತ್ಯ ಜೀವನದಲ್ಲಿ ಸಂತಸದ ವಾತಾವರಣ ಇರುತ್ತದೆ. ನೀವು ಕೆಲಸದ ಹೆಚ್ಚುವರಿ ಜವಾಬ್ದಾರಿಗಳನ್ನು ಪಡೆಯುತ್ತೀರಿ. ಎಚ್ಚರಿಕೆಯಿಂದ ವಾಹನ ಚಲಾಯಿಸಿ. ವೃತ್ತಿಪರ ಜೀವನದಲ್ಲಿ, ಹೊಸ ಉದ್ಯೋಗದ ಪ್ರಸ್ತಾಪವನ್ನು ಪಡೆಯುತ್ತೀರಿ.

** ಕನ್ಯಾ ರಾಶಿ :
ಈ ದಿನ ನಿಮ್ಮನ್ನು ಸಂತೋಷ ಹುಡುಕಿ ಬರಲಿದೆ. ಆತ್ಮವಿಶ್ವಾಸ ಹೆಚ್ಚಾಗಲಿದೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಕೆಲಸದ ನಿಮಿತ್ತ ಪ್ರಯಾಣ ಮಾಡುವ ಅವಕಾಶವಿರುತ್ತದೆ. ಸಾಂಸಾರಿಕ ಸೌಕರ್ಯ ಮತ್ತು ಸಂಪತ್ತು ವೃದ್ಧಿಯಾಗಲಿದೆ. ಉದ್ಯೋಗ ಬದಲಾವಣೆಯ ಸೂಚನೆಗಳಿವೆ. ನಿಮ್ಮ ಸಂಗಾತಿಯೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿರಬಹುದು, ಅತಿಯಾದ ಕೋಪವನ್ನು ತಪ್ಪಿಸಿ.

** ತುಲಾ ರಾಶಿ :
ಇಂದು ನಿಮ್ಮ ಜೀವನದಲ್ಲಿ ಏರಿಳಿತಗಳಿರುತ್ತವೆ. ಕುಟುಂಬ ಸದಸ್ಯರಿಂದ ಬೆಂಬಲ ಸಿಗಲಿದೆ. ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಲಾಭವಿದೆ, ಆದರೆ ಕೆಲಸದ ಸವಾಲುಗಳು ಹೆಚ್ಚಾಗುತ್ತವೆ. ತಾಳ್ಮೆಯಿಂದಿರುವುದು ಮುಖ್ಯವಾಗುತ್ತದೆ. ನಿಮ್ಮ ಸ್ನೇಹಿತರ ಸಹಾಯದಿಂದ ಕೆಲಸದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ. ನಿಮ್ಮ ಸಂಗಾತಿಯ ಆರೋಗ್ಯದ ಕಡೆ ಗಮನ ಕೊಡಿ. ನೀವು ಹಣಕಾಸಿನ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

** ವೃಶ್ಚಿಕ ರಾಶಿ :
ಇಂದು ನೀವು ವೈಯಕ್ತಿಕ ಮತ್ತು ವೃತ್ತಿಪರ ಜೀವನದ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳಿ. ಹಣಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಬಹಳ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ. ವೆಚ್ಚಗಳನ್ನು ನಿಯಂತ್ರಿಸಿ. ಪೋಷಕರ ಸಹಕಾರ ಸಿಗಲಿದೆ. ಮನೆಯಲ್ಲಿ ಶುಭ ಕಾರ್ಯಗಳನ್ನು ನಡೆಯಬಹುದು. ವ್ಯಾಪಾರದಲ್ಲಿ ವಿಸ್ತರಣೆಗೆ ಅವಕಾಶವಿರುತ್ತದೆ. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಲಿವೆ. ಮಾತಿನಲ್ಲಿ ಸೌಮ್ಯತೆ ಇರುತ್ತದೆ, ಆದರೆ ಅಜ್ಞಾತ ಭಯದಿಂದ ಮನಸ್ಸು ತೊಂದರೆಗೊಳಗಾಗಬಹುದು.

** ಧನಸ್ಸು ರಾಶಿ :
ಇಂದು ವ್ಯವಹಾರದಲ್ಲಿ ಪ್ರಗತಿಯ ಸಾಧ್ಯತೆಗಳಿವೆ, ಆದರೆ ನೀವು ಕೆಲಸದ ಸ್ಥಳದಲ್ಲಿ ಹೆಚ್ಚು ಶ್ರಮಿಸಬೇಕಾಗುತ್ತದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ಮಾತಿನಲ್ಲಿ ಕಠೋರತೆಯ ಪರಿಣಾಮವಿರುತ್ತದೆ. ನೀವು ಆತ್ಮವಿಶ್ವಾಸದ ಕೊರತೆಯನ್ನು ಅನುಭವಿಸುವಿರಿ. ಸ್ವಭಾವದಲ್ಲಿ ಕಿರಿಕಿರಿ ಇರುತ್ತದೆ. ಸ್ವಯಂ ನಿಯಂತ್ರಣದಲ್ಲಿರಿ ಮತ್ತು ಅತಿಯಾದ ಕೋಪವನ್ನು ತಪ್ಪಿಸಿ. ಕಚೇರಿಯಲ್ಲಿ ಅನಗತ್ಯ ವಾದ ವಿವಾದಗಳಿಂದ ದೂರವಿರಿ.

** ಮಕರ ರಾಶಿ :
ಇಂದು ನಿಮಗೆ ಆತ್ಮವಿಶ್ವಾಸ ಹೆಚ್ಚಾಗಲಿದೆ. ವ್ಯವಹಾರದಲ್ಲಿ ಹೆಚ್ಚು ಕಠಿಣ ಪರಿಶ್ರಮ ಇರುತ್ತದೆ, ಆದರೆ ನೀವು ಖಂಡಿತವಾಗಿಯೂ ವೃತ್ತಿಪರ ಯಶಸ್ಸನ್ನು ಪಡೆಯುತ್ತೀರಿ. ಕೌಟುಂಬಿಕ ಸಮಸ್ಯೆಗಳಿಂದಾಗಿ ಮನಸ್ಸು ಸ್ವಲ್ಪ ಚಿಂತೆಯಲ್ಲಿ ಉಳಿಯಬಹುದು. ಇಂದು ಪಿತ್ರಾರ್ಜಿತ ಆಸ್ತಿಯಿಂದ ಆರ್ಥಿಕ ಲಾಭವಾಗಲಿದೆ. ನೀವು ಪೋಷಕರ ಬೆಂಬಲವನ್ನು ಪಡೆಯುತ್ತೀರಿ. ಭೂಮಿ ಅಥವಾ ವಾಹನವನ್ನು ಖರೀದಿಸುವ ಅವಕಾಶವಿರುತ್ತದೆ. ಸ್ನೇಹಿತರ ಸಹಾಯದಿಂದ, ಆರ್ಥಿಕ ಲಾಭಕ್ಕಾಗಿ ಹೊಸ ಅವಕಾಶಗಳು ಕಂಡುಬರುತ್ತವೆ.

** ಕುಂಭ ರಾಶಿ :
ಇಂದು ಕುಟುಂಬ ಸದಸ್ಯರಿಂದ ಬೆಂಬಲ ಸಿಗಲಿದೆ. ಕೆಲಸದಲ್ಲಿ ನೀವು ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ. ಕೆಲಸದ ಸ್ಥಳದಲ್ಲಿ ನೀವು ಉನ್ನತ ಅಧಿಕಾರಿಗಳಿಂದ ಬೆಂಬಲವನ್ನು ಪಡೆಯಬಹುದು. ಉದ್ಯೋಗದಲ್ಲಿ ಪ್ರಗತಿಗೆ ಸುವರ್ಣಾವಕಾಶಗಳು ದೊರೆಯಲಿವೆ. ಇಂದು ನಿಮ್ಮ ಭಾವನೆಗಳು ಏರುಪೇರಾಗಬಹುದು. ಭಾವನಾತ್ಮಕವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ.

** ಮೀನ ರಾಶಿ :
ಇಂದು ನೀವು ಬುದ್ಧಿವಂತಿಕೆಯಿಂದ ಹಣವನ್ನು ಖರ್ಚು ಮಾಡಿ. ಮಕ್ಕಳ ಆರೋಗ್ಯದ ಕಡೆ ಗಮನ ಕೊಡಿ. ಮಾನಸಿಕ ಅಡಚಣೆ ಉಂಟಾಗಬಹುದು. ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಅತಿಯಾದ ಕೋಪವನ್ನು ತಪ್ಪಿಸಿ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಉದ್ಯೋಗ ಮತ್ತು ವ್ಯಾಪಾರಕ್ಕೆ ವಾತಾವರಣವು ಅನುಕೂಲಕರವಾಗಿರುತ್ತದೆ. ನಿಮ್ಮ ಆರಾಮದಾಯಕ ಜೀವನದಿಂದ ಹೊರಬನ್ನಿ.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಮೂವರು ನಾಮ ನಿರ್ದೇಶನ

ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಮೂವರು ನಾಮ ನಿರ್ದೇಶನ
– ಕಾಂಗ್ರೆಸ್ ನಾಯಕರಾದ ರಾಘವೇಂದ್ರ ಶೆಟ್ಟಿ, ಡಾ.ಅನಿಲ್, ವಿಲಿಯಮ್ ಆಯ್ಕೆ
– ಸರ್ಕಾರದಿಂದ ನಾಮ ನಿರ್ದೇಶನ: ಶುಭಾಶಯಗಳು

~ai-9c023d69-c21b-433d-ac45-34a7876f75db_

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಪಂಚಾಯತಿಗೆ ಸರ್ಕಾರ ಮೂವರನ್ನು ನಾಮ ನಿರ್ದೇಶನ ಮಾಡಿ ಆದೇಶ ಹೊರಡಿಸಿದೆ.
ಯುವ ಪ್ರಮುಖರಾದ ರಾಘವೇಂದ್ರ ಶೆಟ್ಟಿ, ಡಾ.ಅನಿಲ್, ವಿಲಿಯಮ್ ಮಾರ್ಟೀಸ್ ಅವರನ್ನು ಆಯ್ಕೆ ಮಾಡಿದ್ದು ಸರ್ಕಾರದಿಂದ ನಾಮ ನಿರ್ದೇಶನಗೊಂಡ ಮೂವರಿಗೆ ದೀಪಾವಳಿ ಗಿಫ್ಟ್ ಸಿಕ್ಕಿದೆ. ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಈ ಮೂವರಿಗೆ ಮಹತ್ವದ ಹುದ್ದೆ ಸಿಕ್ಕಿದೆ.

2 ವರ್ಷದಿಂದ ನಾಮಕರಣವಾಗಿರಲಿಲ್ಲ

ಸರ್ಕಾರ ರಚನೆಯಾಗಿ ಕಳೆದ 2 ವರ್ಷಗಳಿಂದ ನಾಮನಿರ್ದೇಶನ ಸದಸ್ಯರ ನೇಮಕ ಗೊಂಡಿರಲಿಲ್ಲ. 15 ಸದಸ್ಯ ಬಲದ ಪಟ್ಟಣ ಪಂಚಾಯಿತಿಯಲ್ಲಿ 3 ನಾಮನಿರ್ದೇಶನ ಸದಸ್ಯರ ಆಯ್ಕೆಗೆ ಅವಕಾಶ ಇತ್ತು.
ಬಿ.ಆ‌ರ್. ರಾಘವೇಂದ್ರ ಶೆಟ್ಟಿ ಸಾಕಷ್ಟು ಸಮಯದ ಹಿಂದೆ ಬಾಳೇಬೈಲು ವಾರ್ಡ್‌ನಿಂದ ಸದಸ್ಯರಾಗಿ ಆಯ್ಕೆಯಾಗಿದ್ದರೆ . ಡಾ.ಅನಿಲ್ ಕಾಂಗ್ರೆಸ್ ಕಟ್ಟಾಳುವಾಗಿಯೇ ಗುರುತಿಸಿಕೊಂಡಿದ್ದಾರೆ. ಕಾಂಗ್ರೆಸ್‌ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷರಾಗಿರುವ ವಿಲಿಯಂ ಮಾರ್ಟೀಸ್ ಕೂಡ ಪಕ್ಷ ನಿಷ್ಟೆ ಮತ್ತು ದಕ್ಷ ಕಾರ್ಯನಿರ್ವಹಣೆಗೆ ಹೆಸರಾದವರು. ಈ ಮುಖಂಡರಿಗೂ ಶುಭಾಶಯಗಳು.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ವಕೀಲರ ಸಂಘಕ್ಕೆ ನೂತನ ಸಾರಥಿಗಳು

ತೀರ್ಥಹಳ್ಳಿ ವಕೀಲರ ಸಂಘಕ್ಕೆ ನೂತನ ಸಾರಥಿಗಳು
– ಅಧ್ಯಕ್ಷರಾಗಿ ಹಿರಿಯ ವಕೀಲ ಎಂ. ಎನ್. ರಮೇಶ್ ಆಯ್ಕೆ
– ಕಾರ್ಯದರ್ಶಿಯಾಗಿ ಆದರ್ಶ ಕೆ.ವಿ, ಖಜಾಂಚಿಯಾಗಿ ಯು.ಟಿ.ಹರೀಶ್

~ai-9c023d69-c21b-433d-ac45-34a7876f75db_

ತೀರ್ಥಹಳ್ಳಿ: ತೀರ್ಥಹಳ್ಳಿ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಹಿರಿಯ ವಕೀಲರಾದ ಎಂ. ಎನ್. ರಮೇಶ್, ಕಾರ್ಯದರ್ಶಿಯಾಗಿ ಯುವ ವಕೀಲರಾದ ಆದರ್ಶ ಕೆ.ವಿ, ಖಜಾಂಚಿಯಾಗಿ ಯು.ಟಿ.ಹರೀಶ್ ಆಯ್ಕೆ ಆಗಿದ್ದಾರೆ.
ಅ.30ರಂದು ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿರುವ ಈ ನೂತನ ಪದಾಧಿಕಾರಿಗಳಿಗೆ ಅಭಿನಂದನೆಗಳು.

ಶುಭಾಶಯಗಳು

ನಮ್ಮೂರ್ ಎಕ್ಸ್ ಪ್ರೆಸ್ ಮೀಡಿಯಾ

Categories
ಶಿವಮೊಗ್ಗ

ಐಸಿಎಸ್‌ಇ ಝೋನಲ್ ಮಟ್ಟದ ಕ್ರೀಡಾಕೂಟದಲ್ಲಿ ಸಹ್ಯಾದ್ರಿ ಕೇಂದ್ರೀಯ ಶಾಲಾ ಮಕ್ಕಳ ಮೇಲುಗೈ!

ಐಸಿಎಸ್‌ಇ ಝೋನಲ್ ಮಟ್ಟದ ಕ್ರೀಡಾಕೂಟದಲ್ಲಿ ಸಹ್ಯಾದ್ರಿ ಕೇಂದ್ರೀಯ ಶಾಲಾ ಮಕ್ಕಳ ಮೇಲುಗೈ!
– ಶಿವಮೊಗ್ಗದ ನೆಹರು ಸ್ಟೇಡಿಯಂ ನಲ್ಲಿ ಅಕ್ಟೋಬರ 26 ಮತ್ತು 27 ರಂದು ಈ ಕ್ರೀಡಾಕೂಟ ನೆರವೇರಿತು.
– ಶಾಲೆಯ ಮಕ್ಕಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ಅತ್ಯುತ್ತಮ ಸಾಧನೆಗೈದಿದ್ದಾರೆ

NAMMUR EXPRESS NEWS
ಶಿವಮೊಗ್ಗದ ನೆಹರು ಸ್ಟೇಡಿಯಂ ನಲ್ಲಿ ಅಕ್ಟೋಬರ 26 ಮತ್ತು 27 ರಂದು ನಡೆದ ಐಸಿಎಸ್‌ಇ ಝೋನಲ್ ಮಟ್ಟದ ಕ್ರೀಡಾಕೂಟದಲ್ಲಿ ಬೆಟ್ಟಮಕ್ಕಿಯ ಸಹ್ಯಾದ್ರಿ ಐಸಿಎಸ್‌ಇ ಶಾಲೆಯ ಮಕ್ಕಳು ಭಾಗವಹಿಸಿ ಅತ್ಯುತ್ತಮ ಸಾಧನೆಗೈದಿರುತ್ತಾರೆ.
17 ವರ್ಷ ವಯೋಮಿತಿ ಒಳಗಿನ ಸಮಗ್ರ ಚ್ಯಾಂಪಿಯನ್‌ಶಿಪ್ ನಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನವನ್ನು ಪಡೆದು, 10ನೇ ತರಗತಿಯ ರಿತೇಶ್ ಎಂ. ಅಥ್ಲೆಟಿಕ್ ವಿಭಾಗದಲ್ಲಿ ಜಿಲ್ಲಾ ವೈಯಕ್ತಿಕ ಚ್ಯಾಂಪಿಯನ್ ಹಾಗೂ 8ನೇ ತರಗತಿಯ ಸಮನ್ಯು ಎನ್. 14 ವರ್ಷ ವಯೋಮಿತಿ ಒಳಗಿನ ಜಿಲ್ಲಾ ವೈಯಕ್ತಿಕ ಚ್ಯಾಂಪಿಯನ್ ಆಗಿ ಹೊರಹೊಮ್ಮಿರುತ್ತಾರೆ. ಹಾಗೂ ಇನ್ನಿತರ ಕ್ರೀಡಾ ಸ್ಪರ್ಧೆಗಳಲ್ಲಿ ಈ ಕೆಳಕಂಡಂತೆ ವಿದ್ಯಾರ್ಥಿಗಳು ಸಾಧನೆಗೈದಿರುತ್ತಾರೆ.

1) ರಿತೇಶ್ ಎಂ – 100 ಮೀಟರ್ ಓಟದ ಸ್ಪರ್ಧೆ – ಪ್ರಥಮ
– 200 ಮೀಟರ್ ಓಟದ ಸ್ಪರ್ಧೆ – ಪ್ರಥಮ
– ಲಾಂಗ್ ಜಂಪ್- ದ್ವಿತೀಯ,

2) ಸಮನ್ಯು ಎನ್ *100 ಮೀಟರ್ ಓಟದ ಸ್ಪರ್ಧೆ – ಪ್ರಥಮ.

– ತಟ್ಟೆ ಎಸೆತ – ಪ್ರಥಮ

– ಗುಂಡು ಎಸೆತ- ದ್ವಿತೀಯ.

3) ರಾಧಿಕ ವಿ – ತಟ್ಟೆ ಎಸೆತ – ಪಥಮ

– ಗುಂಡು ಎಸೆತ – ದ್ವಿತೀಯ

4) ವಚನ್ ಜಿ – ತಟ್ಟೆ ಎಸೆತ- ಪ್ರಥಮ.

– ಗುಂಡು ಎಸೆತ -ದ್ವಿತೀಯ.

5) ಸಾನ್ವಿ ಎಲ್ – 100 ಮೀಟರ್ ಓಟದ ಸ್ಪರ್ಧೆ – ದ್ವಿತೀಯ
– 200 ಮೀಟರ್ ಓಟದ ಸ್ಪರ್ಧೆ – ತೃತೀಯ
– ಉದ್ದ ಜಿಗಿತ – ತೃತೀಯ

6) ಗೋವರ್ಧನ್ ಎಂ- 100 ಮೀಟರ್ ಓಟದ ಸ್ಪರ್ಧೆ – ದ್ವಿತೀಯ
– 200 ಮೀಟರ್ ಓಟದ ಸ್ಪರ್ಧೆ -ದ್ವಿತೀಯ.

7) ಶ್ರೀಜನ್ಯ ಎನ್ ಎಸ್ – ಗುಂಡು ಎಸೆತ- ಪ್ರಥಮ.

8) ಧ್ರುವ ಎಂ -400 ಮೀಟರ್ ಓಟದ ಸ್ಪರ್ಧೆ -ದ್ವಿತೀಯ.

9) ಐಶಿಕ ಕೆ ಆರ್ – 600 ಮೀಟರ್ ಓಟದ ಸ್ಪರ್ಧೆ-ದ್ವಿತೀಯ.

10) ಸೃಜನ್ ಹೆಚ್ ನಾಯಕ್ – 400 ಮೀಟರ್ ಓಟದ ಸ್ಪರ್ಧೆ- ತೃತೀಯ.

11) ಧ್ರುವನ್ ಡಿ ಕೆ -600 ಮೀಟರ್ ಓಟದ ಸ್ಪರ್ಧೆ – ತೃತೀಯ.

12) 4 × 100 ಮೀಟರ್ ರಿಲೆ – 14 ವರ್ಷದೊಳಗಿನ ಬಾಲಕರ ವಿಭಾಗ ಪ್ರಥಮ

* ಸಮನ್ಯು ಎನ್ * ಗೋವರ್ಧನ್ ಎಂ * ಮಿಲನ್ ಬಿ ಟಿ * ಭುವನ್ ಸಿ ಬಿ * ಶ್ರವಣ್ ಕೆ ಎಸ್

13) ಥ್ರೋ ಬಾಲ್ 17 ವರ್ಷದೊಳಗಿನ ಬಾಲಕಿಯರ ವಿಭಾಗ – ಪ್ರಥಮ ಸ್ಥಾನ

* ಮೋನಿಶಾ ಎಸ್

* ಯಶಸ್ವಿನಿ ಕೆ

* ಅರ್ಪಿತ

* ಸ್ತುತಿ ಟಿ ಕೆ

* ಶ್ರೀಜನ್ಯ ಎನ್ ಎಸ್

* ರಾಧಿಕಾ ವಿ

*ಸಾನಿಕ ಕೆ ಎಂ.

* ಸಾನ್ವಿ ಎನ್

* ಲಕ್ಷಣ್ಯ ಎಂ.

*ಅಗಮ್ಯ

* ಸುರಕ್ಷ

* ಸಾನ್ವಿ ಎಲ್

ಈ ವಿದ್ಯಾರ್ಥಿಯರನ್ನು ಹಾಗೂ ತರಭೇತಿ ನೀಡಿದ ದೈಹಿಕ ಶಿಕ್ಷಕರಾದ ಸಂತೋಷ್ ಕೆ. ಟಿ. ಹಾಗೂ ಸಂಗೀತ ಇವರುಗಳನ್ನು ಶಾಲಾ ಆಡಳಿತ ವರ್ಗ, ಆಡಳಿತಾಧಿಕಾರಿಗಳು, ಪ್ರಾಂಶುಪಾಲರು ಹಾಗೂ ಶಿಕ್ಷಕರು. ಸಿಬ್ಬಂಧಿ ವರ್ಗ ಹಾಗೂ ಪೋಷಕರು ಅಭಿನಂದಿಸಿರುತ್ತಾರೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಪುನೀತ್ ನೆನಪಿಗೆ ” ಪುನೀತ್ ನಮನ”

ತೀರ್ಥಹಳ್ಳಿಯಲ್ಲಿ ಪುನೀತ್ ನೆನಪಿಗೆ ” ಪುನೀತ್ ನಮನ”
– ಸಾಧಕ ಕಲಾವಿದರು, ಸೇವಕರಿಗೆ ಸನ್ಮಾನ: ಗೀತ- ಗಾಯನ
– ಡಿವೈಎಸ್ಪಿ ಗಜಾನನ ವಾಮನ ಸುತಾರ, ತಹಶೀಲ್ದಾರ್ ರಂಜಿತ್ ಅವರಿಂದ ಪುನೀತ್ ಬಗ್ಗೆ ಮಾತು

ತೀರ್ಥಹಳ್ಳಿ: ಪುನೀತ್ ಬ್ರಿಗೇಡ್, ವಿಶ್ವಮಾನವ ಕನ್ನಡ ವೇದಿಕೆ ಹಾಗೂ ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮದ ಸಹಯೋಗದೊಂದಿಗೆ ತೀರ್ಥಹಳ್ಳಿಯ ನಮ್ಮೂರ್ ಎಕ್ಸ್ ಪ್ರೆಸ್ ಕಚೇರಿಯಲ್ಲಿ ಪುನೀತ್ ನಿಧನ ದಿನವಾದ ಅ.29ರಂದು ಅವರ ಸ್ಮರಣಾರ್ಥ ಪುನೀತ್ ನುಡಿ ನಮನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ತೀರ್ಥಹಳ್ಳಿಯ ಡಿ ವೈ ಎಸ್ ಪಿ ಗಜಾನನ ವಾಮನಸುತಾರ ಹಾಗೂ ನೂತನ ತಹಶೀಲ್ದಾರ್ ರಂಜಿತ್ ಅವರು ಪುನೀತ್ ಅವರ ಭಾವಚಿತ್ರಕ್ಕೆ ಪುಷ್ಪ ನಮನದ ಮೂಲಕ ಕಾರ್ಯಕ್ರಮ ಚಾಲನೆ ನೀಡಿದರು.
ತೀರ್ಥಹಳ್ಳಿಯ ಅನೇಕ ಯುವ ಕಲಾವಿದರು, ಸಮಾಜ ಸೇವಕರಿಗೆ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ನ್ಯಾಯವಾದಿಗಳು ಹಾಗೂ ಪುನೀತ್ ಬ್ರಿಗೇಡ್ ಸಂಸ್ಥೆಯ ಮಾರ್ಗದರ್ಶಕರು ಆದ ಸೂರ್ಯನಾರಾಯಣ ಚಿಡುವ, ವಿಶ್ವ ಮಾನವ ಕನ್ನಡ ವೇದಿಕೆಯ ಸಂಚಾಲಕರು ಹಾಗೂ ಪುನೀತ್ ಬ್ರಿಗೇಡ್ ಸಂಸ್ಥೆಯ ಸಂಚಾಲಕರು ಆದ ಸುಧಾಕರ್ ಕುಪ್ಪಳ್ಳಿ ಹಾಜರಿದ್ದು ಪುನೀತ್ ಅವರಿಗೆ ನುಡಿ ನಮನ ಅರ್ಪಿಸಿದರು.

ಸಾಧಕರು, ಕಲಾವಿದರು, ಸೇವಕರಿಗೆ ಸನ್ಮಾನ

ತೀರ್ಥಹಳ್ಳಿಯಲ್ಲಿ ಸುಮಾರು 65ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡುವ ಮೂಲಕ ಸೇವೆ ಮಾಡುತ್ತಿರುವ ಕೆ.ಪಿ.ಎಸ್.ಸ್ವಾಮಿ, ಗಾಯಕ ಶಶಿಕುಮಾರ್ ಕಾರಂತ್, ಸಮಾಜ ಸೇವಕರು ಹಾಗೂ ನದಿಯಲ್ಲಿ ಬಿದ್ದವರನ್ನು ರಕ್ಷಣೆ ಮಾಡುವ ಮೂಲಕ ಮಾನವೀಯ ಸೇವೆ ಮಾಡುತ್ತಿರುವ ಪ್ರಮೋದ್ ಕುರುವಳ್ಳಿ, ಬದನೆಹಿತ್ಲು, ತುಡ್ಕಿ ಶೌರ್ಯ ತಂಡ, ರಾಮಕೃಷ್ಣಪುರದ ಸಮರ್ಪಣಾ ತಂಡ, ಪುನೀತ್ ಹಾಡು ರಚನೆಕಾರರಾದ ಗಣೇಶ್ ಭಟ್, ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡುವ ದಯಾನಂದ್ ಹಾಗೂ ಯಕ್ಷಗಾನ ಕ್ಷೇತ್ರದಲ್ಲಿ ರಾಜ್ಯದಲ್ಲಿ ಪ್ರಸಿದ್ಧಿಯಾಗಿರುವ ತೀರ್ಥಹಳ್ಳಿಯ ಕಲಾವಿದ ಶೈಲೇಶ್, ರಾಜ್ಯಮಟ್ಟದಲ್ಲಿ ಎನ್ ಜಿ ಓ ಸೇವೆಯಲ್ಲಿ ಮುಂಚೂಣಿಯಲ್ಲಿರುವ ತೀರ್ಥಹಳ್ಳಿಯ ಸ್ಪಂದನ ಸೇವಾ ಸಂಸ್ಥೆಯಾದ ಹಬೀಬ್, ರಂಗಾಯಣ ಕಲಾವಿದ ಗಾಯಕ ಶಿವಕುಮಾರ್, ಗಾಯಕಿ ನಿಧಿ ಸುರೇಶ್ ಹಾಗೂ ಕ್ರೀಡೆಯಲ್ಲಿ ರಾಷ್ಟ್ರಮಟ್ಟವನ್ನ ಪ್ರತಿನಿಧಿಸಿರುವ ತೀರ್ಥಹಳ್ಳಿಯ ಸಹ್ಯಾದ್ರಿ ಶಾಲೆಯ ವಿದ್ಯಾರ್ಥಿನಿ ಪಾವನಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಗಣ್ಯರು ಪುನೀತ್ ಅವರ ಸ್ಮರಣಾರ್ಥ ಇಂತಹ ಮಾದರಿ ಕಾರ್ಯಕ್ರಮಗಳು ನಡೆಯಬೇಕು ಎಂದು ಆಶಿಸಿದರು. ಕಾರ್ಯಕ್ರಮದಲ್ಲಿ ಪುನೀತ್ ಬ್ರಿಗೇಡ್ ಸಂಸ್ಥೆಯ ಪ್ರಮುಖರಾದ ಕೃಷ್ಣಮೂರ್ತಿ ಕೊಪ್ಪ, ನಿವೃತ್ತ ಸೈನಿಕ ಸುರೇಂದ್ರ, ಸತೀಶ್ ಚಿಡುವ, ರಾಘವೇಂದ್ರ ಚಿಡುವ, ಪ್ರವೀಣ್, ಪ್ರತೀಕ್, ನವನೀತ್ ಭಟ್, ನಾಗರಾಜ್, ಮಂಜುನಾಥ್ ಶಿರುಪತಿ, ಅಧಿಕಾರಿಗಳಾದ ಸುಧೀರ್, ಸುಗುಮೇಶ್, ಕಿರಣ್ ಸೇರಿದಂತೆ ಹಲವರು ಇದ್ದರು. ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮ ಸಂಸ್ಥೆಯ ಸಂಪಾದಕರಾದ ರಾಘವೇಂದ್ರ ತೀರ್ಥಹಳ್ಳಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

Categories
Uncategorized

ಬಡ ಕುಟುಂಬಗಳಿಗೆ ಮೋದಿ ಬಂಪರ್ ಉಡುಗೊರೆ!

ಬಡ ಕುಟುಂಬಗಳಿಗೆ ಮೋದಿ ಬಂಪರ್ ಉಡುಗೊರೆ!

– 70 ವರ್ಷ ಮೇಲ್ಪಟ್ಟವರಿಗೂ ಆಯುಷ್ಮಾನ್ ವಿಮೆ ವಿಸ್ತರಣೆ
– ಯೋಜನೆಗೆ ಸೇರ್ಪಡೆಯಾಗಲು ಯಾವುದೇ ಆದಾಯ ಮಿತಿ ಇಲ್ಲ!

NAMMUR EXPRESS NEWS
ದೆಹಲಿ: ದೇಶದ ಬಡ ಕುಟುಂಬಗಳಿಗೆ 5 ಲಕ್ಷ .ವರೆಗೆ ಉಚಿತ ಆರೋಗ್ಯ ವಿಮಾ ಸೌಲಭ್ಯವನ್ನು ಕಲ್ಪಿಸುವ ಆಯುಷ್ಮಾನ್ ಭಾರತ ಯೋಜನೆಯನ್ನು 70 ವರ್ಷ ಮೇಲ್ಪಟ್ಟ ವೃದ್ಧರಿಗೂ ವಿಸ್ತರಿಸುವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಹಿಂದೂಗಳ ಔಷಧ ದೇವರು ಧನ್ವಂತರಿಯ ಜನ್ಮದಿನ ಹಾಗೂ 9ನೇ ಆಯುರ್ವೇದ ದಿನದಂದೇ ದೇಶದ ವೃದ್ಧರಿಗೆ ಮೋದಿ ಅವರು ಆರೋಗ್ಯ ವಿಮೆ ಸೌಲಭ್ಯವನ್ನು ಕಲ್ಪಿಸಿದ್ದಾರೆ. ತನ್ಮೂಲಕ, ವಿಮಾ ಸೌಕರ್ಯದಿಂದ ವಂಚಿತರಾಗಿದ್ದ ಬಹುತೇಕ ಜನರಿಗೆ ರಕ್ಷಣೆ ಒದಗಿಸಿದ್ದಾರೆ.

ಇದೇ ವೇಳೆ, 12850 ಕೋಟಿ ರೂ.ವೆಚ್ಚದ ಆರೋಗ್ಯ ಮೂಲಸೌಕರ್ಯ ಯೋಜನೆಗಳಿಗೂ ಪ್ರಧಾನಿ ಶಂಕುಸ್ಥಾಪನೆ ಅಥವಾ ಉದ್ಘಾಟನೆಯನ್ನು ನೆರವೇರಿಸಿದ್ದಾರೆ. ಹಾಲಿ ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗೆ ಆಯುಷ್ಮಾನ್ ಭಾರತ ಆರೋಗ್ಯ ವಿಮಾ ಯೋಜನೆಯಡಿ 5 ಲಕ್ಷ ರು.ನ ಉಚಿತ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಿದೆ. ಇದನ್ನು ಇದೀಗ 70 ವರ್ಷ  ಮೇಲ್ಪಟ್ಟ ಎಲ್ಲಾ ವಯೋಮಾನದವರಿಗೂ ವಿಸ್ತರಿಸಲಾಗಿದೆ. ಈ ಯೋಜನೆ ವಿಶೇಷವೆಂದರೆ ಈ ಯೋಜನೆಗೆ ಸೇರ್ಪಡೆಯಾಗಲು ಯಾವುದೇ ಆದಾಯ ಮಿತಿ ಇಲ್ಲ. ಕುಟುಂಬದ ಸಮೂಹ ಆರೋಗ್ಯ ವಿಮೆ ಹೊರತಾಗಿ 6 ಕೋಟಿ ಹಿರಿಯ ನಾಗರಿಕರಿಗೆ ಪ್ರತ್ಯೇಕ 5 ಲಕ್ಷ ರೂ.ವಿಮಾ ಸೌಲಭ್ಯ ಇದರಿಂದ ಸಿಗಲಿದೆ.

ಇನ್ನು ಗರ್ಭಿಣಿಯರು ಹಾಗೂ ನವಜಾತ ಶಿಶುಗಳ ಲಸಿಕಾಕರಣ ಪ್ರಕ್ರಿಯೆಯನ್ನು ಡಿಜಿಟಲೀಕಣಗೊಳಿಸುವ ಯು-ವಿನ್ ಪೋರ್ಟಲ್ ಅನ್ನು ಮೋದಿ ಅವರು ಲೋಕಾರ್ಪಣೆ ಮಾಡಿದ್ದಾರೆ. ಈ ಮೂಲಕ ಗರ್ಭಿಣಿಯರು ಹಾಗೂ ಮಕ್ಕಳು (ಜನನದಿಂದ 16 ವರ್ಷದವರೆಗೆ) ಜೀವರಕ್ಷಕ ಲಸಿಕೆಗಳನ್ನು ಸಕಾಲದಲ್ಲಿ ಪಡೆಯಲು ನೆರವಾಗಲಿದೆ. ಮತ್ತೊಂದೆಡೆ, ಆರೋಗ್ಯ ವೃತ್ತಿಪರರು ಹಾಗೂ ಆ ಕ್ಷೇತ್ರಕ್ಕೆ ಸಂಬಂಧಿಸಿದ ಸಂಸ್ಥೆಗಳಿಗಾಗಿ ಪೋರ್ಟಲ್‌ವೊಂದನ್ನು ಉದ್ಘಾಟಿಸಿದ್ದಾರೆ. ದೇಶದಲ್ಲಿರುವ ಆರೋಗ್ಯ ವೃತ್ತಿಪರರು ಹಾಗೂ ಸಂಸ್ಥೆಗಳ ಕೇಂದ್ರೀಯ ದತ್ತಾಂಶ ಕೇಂದ್ರವಾಗಿ ಈ ವೆಬ್‌ಸೈಟ್‌ ಕಾರ್ಯನಿರ್ವಹಿಸಲಿದೆ.

Categories
ರಾಜ್ಯ

ಕನ್ನಡ ರಾಜ್ಯೋತ್ಸವಕ್ಕೆ ಎರಡು ಧ್ವಜ, ಎರಡು ಕಂಬ

ಕನ್ನಡ ರಾಜ್ಯೋತ್ಸವಕ್ಕೆ ಎರಡು ಧ್ವಜ, ಎರಡು ಕಂಬ
– ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷರರಿಗೆ ಸಂಕಷ್ಟ
– ಕರ್ನಾಟಕ ರಾಜ್ಯ ಉದಯವಾಗಿ 50 ವರ್ಷಗಳು ಆಗಿರುವುದರಿಂದ ಕನ್ನಡ ರಾಜ್ಯೋತ್ಸವ ಕಡ್ಡಾಯವಾಗಿ ಆಚರಣೆ

NAMMUR EXPRESS NEWS
ಬೆಂಗಳೂರು: ಕನ್ನಡ ರಾಜ್ಯೋತ್ಸವದ ದಿನ ಶಾಲೆಗಳಲ್ಲಿ ರಾಷ್ಟ್ರಧ್ವಜ ಹಾಗೂ ನಾಡ (ಕನ್ನಡ) ಧ್ವಜಾರೋಹಣವನ್ನು ಪ್ರತ್ಯೇಕ ಕಂಬಗಳಲ್ಲಿ ನೆರವೇರಿಸಬೇಕು ಎನ್ನುವ ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆ ಮುಖ್ಯ ಶಿಕ್ಷಕರು, ಸಹ ಶಿಕ್ಷರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಕರ್ನಾಟಕ ರಾಜ್ಯ ಉದಯವಾಗಿ 50 ವರ್ಷಗಳು ತುಂಬಿರುವ ಕಾರಣ ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವವನ್ನು ಕಡ್ಡಾಯವಾಗಿ ಆಚರಿಸಬೇಕು. ಕನ್ನಡ ನಾಡು, ನುಡಿ, ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಬೇಕು ಎಂದು ಸೂಚಿಸಲಾಗಿದೆ. ಅಂದು ಬೆಳಿಗ್ಗೆ 8.30ರಿಂದ 9 ರ ಒಳಗೆ ಧ್ವಜಾರೋಹಣ ಮಾಡಬೇಕು. ಮೊದಲು ರಾಷ್ಟ್ರಧ್ವಜಾರೋಹಣ, ನಂತರ ಕನ್ನಡ ಧ್ವಜಾರೋಹಣ ಮಾಡಬೇಕು. ರಾಷ್ಟ್ರಧ್ವಜಕ್ಕಿಂತ ಕನ್ನಡ ಧ್ವಜ ಐದು ಅಡಿ ಕೆಳಗಿರಬೇಕು. ಎರಡು ಧ್ವಜಗಳಿಗೆ ಪ್ರತ್ಯೇಕ ಧ್ವಜಸ್ತಂಭ ಬಳಸಬೇಕು. ಕಬ್ಬಿಣದ ಎಂಎಸ್ ಪೈಪುಗಳನ್ನೇ ಬಳಸಬೇಕು. ಮರದ ಕಂಬ ಬಳಸಬಾರದು ಎಂದು ಇಲಾಖೆಯ ಆಯುಕ್ತರು ಹೇಳಿದ್ದಾರೆ.

ರಾಜ್ಯದಲ್ಲಿ 47,276 ಸರ್ಕಾರಿ ಶಾಲೆಗಳು ಸೇರಿದಂತೆ ಒಟ್ಟು 72,412 ಶಾಲೆಗಳಿವೆ. ಶೇ 80ರಷ್ಟು ಶಾಲೆಗಳಲ್ಲಿ ಒಂದೇ ಧ್ವಜಸ್ತಂಭವಿದೆ. ಶೇ 20ರಷ್ಟು ಶಾಲೆಗಳಲ್ಲಿ ಒಂದು ಧ್ವಜಸ್ತಂಭವೂ ಇಲ್ಲ. ಇಂತಹ ಸಮಯದಲ್ಲಿ ಮತ್ತೊಂದು ಧ್ವಜಸ್ತಂಭ ಸಿದ್ದಪಡಿಸುವುದು ಕಷ್ಟದ ಕೆಲಸ ಎನ್ನುತ್ತಾರೆ ಹಲವು ಶಾಲೆಗಳ ಮುಖ್ಯ ಶಿಕ್ಷಕರು. ನಮ್ಮ ಶಾಲೆಯಲ್ಲಿ ಒಂದು ಧ್ವಜಸ್ತಂಭಕ್ಕೇ ಜಾಗವಿಲ್ಲ. ಸ್ವಾತಂತ್ರ್ಯದ ದಿನ ಹಾಗೂ ಗಣ ರಾಜ್ಯೋತ್ಸವದಂದು ಶಾಲೆ ಚಾವಣಿಯ ಹೆಂಚು ತೆಗೆದು ಧ್ವಜಾರೋಹಣ ಮಾಡುತ್ತೇವೆ. ಈಗ ಎರಡು ಧ್ವಜಸ್ತಂಭದ ನಿಯಮ ಪಾಲನೆ ಕಷ್ಟ. ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗೂ ಮನವರಿಕೆ ಮಾಡಿಕೊಟ್ಟಿದ್ದೇವೆ’ ಎನ್ನುತ್ತಾರೆ ಶಿಕ್ಷಕರು.

Categories
ಅಡಿಕೆ-ದರ

ಅಡಿಕೆ ದರ ಎಷ್ಟಿದೆ?

ಅಡಿಕೆ ದರ ಎಷ್ಟಿದೆ?
– ಅಡಿಕೆ ದರ ಏರಿಕೆಯಾಗುತ್ತಾ? ಇಳಿಕೆಯಾಗುತ್ತಾ?

NAMMUR EXPRESS NEWS
ಸರಕು
57269-72000-87500

ಬೆಟ್ಟೆ
46100-54200-56429

ರಾಶಿ
43090-49500-50599

ಗೊರಬಲು
18269-31700-32529