Categories
ರಾಜ್ಯ

ಬೆಳಕಿನ ಹಬ್ಬದ ಜತೆಗೆ ಎಲ್ಲೆಲ್ಲೂ ಕನ್ನಡ ಹಬ್ಬ!

ಬೆಳಕಿನ ಹಬ್ಬದ ಜತೆಗೆ ಎಲ್ಲೆಲ್ಲೂ ಕನ್ನಡ ಹಬ್ಬ!
– ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
– ಕನ್ನಡ ರಾಜ್ಯೋತ್ಸವ ಆಗಲಿ ಪ್ರತಿ ಮನೆಯ ಉತ್ಸವ
– ಕನ್ನಡ ರಾಜ್ಯೋತ್ಸವದ ಆಚರಣೆ ನವೆಂಬರ್ ಸೀಮಿತ ಬೇಡ!

ಮನದೊಳಗೆ ಕನ್ನಡ ಮನಸ್ಸೊಳಗೂ ಕನ್ನಡ
ಕನ್ನಡವೇ ಎಲ್ಲಾ ಕನ್ನಡವಿಲ್ಲದೇ ಬೇರೇನೂ ಇಲ್ಲ
ನಮ್ಮ ತಾಯಿ ಭಾಷೆ ಕನ್ನಡ..!
ಸರ್ವರಿಗೂ 69ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

ಇಂದು ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆಮಾಡಿದೆ. ರಾಜ್ಯ ಸರ್ಕಾರವು ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ಆಚರಣೆಗೆ ಮಾಡುತ್ತಿದೆ. ಈಗಾಗಲೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಇನ್ನು ಎಲ್ಲಾ ಸಂಸ್ಥೆಗಳಲ್ಲೂ ಈ ಭಾರಿ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಲು ಕರೆ ಕೊಡಲಾಗಿದೆ.
ಕನ್ನಡ ನಾಡು ಹಲವು ವೈವಿಧ್ಯಗಳ ಬೀಡು, ಕವಿ ಸಾಹಿತಿಗಳ ಸೂರು. ಕರ್ನಾಟಕ ರಾಜ್ಯ ಉದಯವಾದ ದಿನವಾಗಿದ್ದು, ನಮ್ಮ ಕನ್ನಡ ನಾಡು ಎಂಬುದು ನಮ್ಮಲ್ಲಿ ರಾಷ್ಟ್ರಾಭಿಮಾನ ಉಕ್ಕುವಂತೆ ಮಾಡುತ್ತದೆ. ಇಂತಹ ಅದ್ಭುತ ಕನ್ನಡ ನಾಡು ಉದಯವಾಗಲು ಶ್ರಮಿಸಿದವರು ಅನೇಕರು. ಕನ್ನಡ ನಾಡನ್ನು ಏಕೀಕರಣ ಮಾಡಿದ ಕೀರ್ತಿ ಹಲವು ಹೋರಾಟಗಾರರದ್ದು.
ನವೆಂಬರ್ 1 ರಂದು ಎಲ್ಲೆಡೆ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಅಚರಿಸುವುದು ಮತ್ತು ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಸಂಸ್ಕೃತ, ಕಲೆ, ಭಾಷೆ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈ ಹೊತ್ತಿನಲ್ಲಿ ಕರ್ನಾಟಕ ಏಕೀಕರಣದ ಬಗ್ಗೆ ನೆನಪು ಮಾಡಿಕೊಳ್ಳಲೇಬೇಕು. ಕನ್ನಡ ಭಾಷಿಗರ ನಾಡನ್ನು ಒಗ್ಗೂಡಿಸಬೇಕು ಎಂದು ಕನಸು ಕಂಡವರು ನೂರಾರು ಮಂದಿ. ಭಾರತ ಸ್ವಾತಂತ್ರ್ಯ ಹೋರಾಟಕ್ಕೂ ಮುನ್ನ ಕರ್ನಾಟಕ ಏಕೀಕರಣಕ್ಕಾಗಿ ಹೋರಾಟ ನಡೆಸಲಾಗಿತ್ತು. ಈ ಹೋರಾಟದಲ್ಲಿ ಹಲವು ಚಳವಳಿಗಾರರು ಭಾಗವಹಿಸಿದ್ದರು. ಇವರೆಲ್ಲರೂ ಕನ್ನಡ ನಾಡು ಉದಯವಾಗಬೇಕು ಎಂದು ಒಮ್ಮನಸ್ಸಿನಿಂದ ಹೋರಾಡಿದ್ದರು. ಈ ಎಲ್ಲರ ಹೋರಾಟದ ಶ್ರಮದ ಫಲವಾಗಿ 1956, ನವೆಂಬರ್ 1ರಂದು ಮೈಸೂರು ರಾಜ್ಯ ಉದಯವಾಯಿತು. ಕನ್ನಡ ಭಾಷೆ ಮಾತನಾಡುವ ಜನರ ಪ್ರಾಂತ್ಯಗಳನ್ನು ಒಗ್ಗೂಡಿಸಿ ಒಂದು ರಾಜ್ಯವನ್ನಾಗಿ ಮಾಡಲಾಯಿತು.
ಅಂದಹಾಗೆ ಈಗ ನವೆಂಬರ್ 01 ರಂದು ಮಾತ್ರವಲ್ಲದೇ ಇಡೀ ತಿಂಗಳು ರಾಜ್ಯದ ಎಲ್ಲೆಡೆ ಮಾತ್ರವಲ್ಲದೇ ವಿದೇಶಗಳಲ್ಲು ಸಹ ಕನ್ನಡಿಗರು ಕನ್ನಡ ಭಾಷೆಯ ಹಬ್ಬ ಆಚರಿಸುವುದು, ಕನ್ನಡ ನಾಡಿನ ಇತಿಹಾಸ, ಸಂಸ್ಕೃತ, ಕಲೆ, ಭಾಷೆ ಬಗ್ಗೆ ನೆನೆದು ಮೆಲುಕುಹಾಕುವುದು ಸಾಮಾನ್ಯ. ಇದೊಂದು ಸಡಗರದ ಹಬ್ಬ ಸಹ ಎಲ್ಲಿರಿಗೂ. ಇನ್ನು ಶಾಲಾ, ಕಾಲೇಜುಗಳಲ್ಲಿ ಈ ಹಬ್ಬವನ್ನು ಹಲವು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕವೇ ನಡೆಸಲಾಗುತ್ತದೆ.

ಕನ್ನಡಕ್ಕೆ ಅನೇಕ ಮಹನೀಯರ ಕೊಡುಗೆ

ಆಲೂರು ವೆಂಕಟರಾವ್ ರವರು 1905 ರಲ್ಲಿ ಕರ್ನಾಟಕ ಏಕೀಕರಣ ಚಟುವಳಿಯೊಂದಿಗೆ ರಾಜ್ಯವನ್ನು ಏಕೀಕರಿಸುವ ಕನಸು ಕಂಡ ಮೊದಲ ವ್ಯಕ್ತಿ. ರಾಜ್ಯದ ಏಕೀಕರಣಕ್ಕೆ ಕೀರ್ತಿ ಗಳಿಸಿದ ಇತರ ವ್ಯಕ್ತಿಗಳಲ್ಲಿ ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಕೆ ಶಿವರಾಮ ಕಾರಂತ, ಎ ಎನ್ ಕೃಷ್ಣ ರಾವ್ ಮತ್ತು ಬಿ ಎಂ ಶ್ರೀಕಂಠಯ್ಯ ರವರು ಪ್ರಮುಖರು.
ನಮ್ಮ ಕನ್ನಡ ರಾಜ್ಯೋತ್ಸವದ ಆಚರಣೆ ಕೇವಲ ನವೆಂಬರ್ ಗೆ ಸೀಮಿತವಾಗದೇ ‘ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ಅನು ಕ್ಷಣವು ನಮ್ಮಲ್ಲಿ ಕನ್ನಡದ ಅಭಿಮಾನವಿರಬೇಕು. ಕನ್ನಡದಲ್ಲೇ ಮಾತನಾಡುತ್ತೇನೆ, ಬರೆಯುತ್ತೇನೆ, ನಿತ್ಯ ವ್ಯವಹಾರ ದಲ್ಲಿ ಕನ್ನಡವನ್ನೇ ಬಳಸುತ್ತೇನೆ, ಕನ್ನಡೇತರರಿಗೆ ಕನ್ನಡ ಕಲಿಸುತ್ತೇನೆ, ಕನ್ನಡ ನುಡಿ, ಸಂಸ್ಕೃತಿ, ಪರಂಪರೆ ಉಳಿಸಲು ಸದಾ ಸಿದ್ದರಾಗುತ್ತೇವೆ ಎಂಬುದು ನಮ್ಮ ದೃಢನಿರ್ಧಾರವಾಗಿರಬೇಕು.
ರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕ ಸರ್ಕಾರದ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿಶ್ವದಾದ್ಯಂತ ಹಮ್ಮಿಕೊಳ್ಳಲಾಗುತ್ತದೆ. ರಾಜ್ಯದ ಮುಖ್ಯಮಂತ್ರಿ ಸಾಧಕರಿಗೆ ಈ ಪ್ರಶಸ್ತಿಯನ್ನು ವಿತರಿಸುತ್ತಾರೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಸರ್ಕಾರಿ ನೌಕರರ ಸಂಘಕ್ಕೆ ದೇವರಾಜ್ ಅವಿರೋಧ ಆಯ್ಕೆ

ತೀರ್ಥಹಳ್ಳಿ ಸರ್ಕಾರಿ ನೌಕರರ ಸಂಘಕ್ಕೆ ದೇವರಾಜ್ ಅವಿರೋಧ ಆಯ್ಕೆ

ಪದವಿ ಮತ್ತು ಪದವಿ ಪೂರ್ವ ಕಾಲೇಜು ವಿಭಾಗದಿಂದ ಸರ್ಕಾರಿ ನೌಕರರ ಸಂಘಕ್ಜೆ ಅವಿರೋದ ಆಯ್ಕೆಯಾದ ತೀರ್ಥಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ದೇವರಾಜ್ ಅವರಿಗೆ ಅಭಿನಂದನೆಗಳು.

– ಉಪನ್ಯಾಸಕರು, ಸ್ನೇಹಿತರು,ತೀರ್ಥಹಳ್ಳಿ ತಾಲೂಕು

Categories
ಜಾತಕ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ದೀಪಾವಳಿ ಅಮಾವಾಸ್ಯೆ, ಈ ರಾಶಿಗೆ ಲಕ್ಷ್ಮಿ ಕೃಪಾಕಟಾಕ್ಷ!
– ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ದೂರದ ಬಂಧುಗಳಿಂದ ಶುಭವಾರ್ತೆಯನ್ನು ಕೇಳಲಿದ್ದೀರಿ. ಹಣಕಾಸಿನ ವಿಚಾರದಲ್ಲಿ ಅತ್ಯುತ್ತಮವಾದ ಏಳಿಗೆಯನ್ನು ಕಾಣಲಿದ್ದೀರಿ. ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಉತ್ತಮ ಪ್ರಗತಿಯಾಗಲಿದೆ. ವೃತ್ತಿ ಮತ್ತು ಉದ್ಯೋಗದಲ್ಲಿ ಉತ್ತಮ” ಏಳಿಗೆಯಾಗಲಿದೆ.
ಅದೃಷ್ಟದ ಸಂಖ್ಯೆ : 3
ಅದೃಷ್ಟದ ಬಣ್ಣ: ಮಾಣಿಕ್ಯ ವರ್ಣ
ಪರಿಹಾರ : ಶ್ರೀ ಧನಲಕ್ಷ್ಮಿ ಸ್ತೋತ್ರ ಪಠಣ

** ವೃಷಭ ರಾಶಿ :
ಆಪ್ತ ಮಿತ್ರರೊಂದಿಗೆ ಸೇರಿ ನೂತನ ಕೆಲಸವನ್ನು ಆರಂಭಿಸಲಿದ್ದೀರಿ. ನಿಮ್ಮ ಆಸೆ ಆಕಾಂಕ್ಷಿಗಳು ಈಡೇರುವ ಶುಭದಿನವಾಗಿದೆ. ಅನಾರೋಗ್ಯದ ಸಮಸ್ಯೆಯಿಂದ ತಕ್ಕಮಟ್ಟಿಗೆ ವಿಮುಕ್ತರಾಗಲಿದ್ದೀರಿ. ಉದ್ಯೋಗ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಪ್ರಗತಿಯಾಗಲಿದೆ.
ಅದೃಷ್ಟದ ಸಂಖ್ಯೆ : 7
ಅದೃಷ್ಟದ ಬಣ್ಣ: ನೀಲಿ ಬಣ್ಣ
ಪರಿಹಾರ : ಶ್ರೀ ಅಷ್ಟಲಕ್ಷ್ಮಿ ಸ್ತೋತ್ರ ಪಠಣ

** ಮಿಥುನ ರಾಶಿ :
ಕೈಗಾರಿಕೋದ್ಯಮಿಗಳಿಗೆ ವ್ಯವಹಾರದಲ್ಲಿ ಸ್ವಲ್ಪ ಹಿನ್ನಡೆಯಾಗುವ ಸಂಭವವಿದೆ. ದೈಹಿಕ ಅನಾರೋಗ್ಯ ಉಂಟಾಗುವ ಸಾಧ್ಯತೆ ಇದೆ. ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗಲಿದೆ. ಹಣಕಾಸಿನ ವಿಚಾರದಲ್ಲಿ ಏರುಪೇರು ಉಂಟಾಗುವ ಸಂಭವವಿದೆ, ಅತ್ಯಂತ ಮುನ್ನೆಚ್ಚರಿಕೆಯಿಂದ ಇರತಕ್ಕದ್ದು.
ಅದೃಷ್ಟದ ಸಂಖ್ಯೆ : 8
ಅದೃಷ್ಟದ ಬಣ್ಣ: ನೀಲಿ ಬಣ್ಣ
ಪರಿಹಾರ : ಶ್ರೀ ಕನಕಧಾರ ಸ್ತೋತ್ರ ಪಠಣ

** ಕರ್ಕಾಟಕ ರಾಶಿ :
ದೈಹಿಕ ಶ್ರಮ ಹೆಚ್ಚಾಗುವ ಸಾಧ್ಯತೆ ಇದೆ. ಮಾನಸಿಕ ಹಿಂಸೆ ಮತ್ತು ಯಾತನೆ ಅನುಭವಿಸಲಿದ್ದೀರಿ. ಕಾರ್ಯಕ್ಷೇತ್ರದಲ್ಲಿ ಅನಿರೀಕ್ಷಿತವಾದ ಒತ್ತಡಕ್ಕೆ ಒಳಗಾಗಲಿದ್ದೀರಿ. ಸಿಹಿ ಪದಾರ್ಥಗಳ ಮಾರಾಟಗಾರರಿಗೆ ಮತ್ತು ತಯಾರಿಕರಿಗೆ ರಿಗೆ ಧನ ನಷ್ಟವಾಗುವ ಸೂಚನೆ ಇದೆ, ಹೆಚ್ಚಿನ ಮುಂಜಾಗ್ರತೆ ವಹಿಸತಕ್ಕದ್ದು.
ಅದೃಷ್ಟದ ಸಂಖ್ಯೆ : 4
ಅದೃಷ್ಟದ ಬಣ್ಣ: ಬಿಳಿ ಬಣ್ಣ
ಪರಿಹಾರ : ಶ್ರೀ ಲಕ್ಷ್ಮಿ ಸಹಸ್ರನಾಮ ಸ್ತೋತ್ರ ಪಠಣ

** ಸಿಂಹ ರಾಶಿ :
ಆತ್ಮೀಯರಿಂದ ಅನಿರೀಕ್ಷಿತವಾದ ಸಮಸ್ಯೆಗೆ ಒಳಗಾಗಲಿದ್ದೀರಿ. ಹಣಕಾಸಿನ ಮುಗ್ಗಟ್ಟನ್ನು ಎದುರಿಸಲಿದ್ದೀರಿ. ಕೆಲಸ ಕಾರ್ಯದಲ್ಲಿ ಹಿನ್ನಡೆಯಾಗುವ ಸಂಭವವಿದೆ, ಅಂದುಕೊಂಡ ರೀತಿಯಲ್ಲಿ ಮುಂದೆ ಸಾಗುವುದಿಲ್ಲ. ವ್ಯಾಪಾರ ವ್ಯವಹಾರದಲ್ಲಿ ಧನ ನಷ್ಟವಾಗಬಹುದು, ಅತ್ಯಂತ ಮುಂಜಾಗ್ರತೆಯಿಂದ ಇರತಕ್ಕದ್ದು.
ಅದೃಷ್ಟದ ಸಂಖ್ಯೆ : 9
ಅದೃಷ್ಟದ ಬಣ್ಣ: ಕೇಸರಿ ಬಣ್ಣ
ಪರಿಹಾರ : ಶ್ರೀ ದೇವಿ ಧಾಮಾಷ್ಟಕಂ ಸ್ತೋತ್ರ ಪಠಣ

** ಕನ್ಯಾ ರಾಶಿ :
ಕಾರ್ಯಕ್ಷೇತ್ರದಲ್ಲಿ ಅತ್ಯುತ್ತಮವಾದ ಯಶಸ್ಸನ್ನು ಸಾಧಿಸಲಿದ್ದೀರಿ. ಮಾನಸಿಕವಾಗಿ ಶಾಂತಿ ನೆಮ್ಮದಿಯ ದಿನವನ್ನು ನೋಡಲಿದ್ದೀರಿ. ಪ್ರಮುಖ ಕಾರ್ಯದಲ್ಲಿ ಹಿರಿಯರ ಮಾರ್ಗದರ್ಶನದಿಂದ ಸಾಫಲ್ಯತೆ ಉಂಟಾಗಲಿದೆ. ಕೆಲಸ ಕಾರ್ಯಗಳಲ್ಲಿ ಉತ್ತಮ ಪ್ರಗತಿಯಾಗಲಿದೆ.
ಅದೃಷ್ಟದ ಸಂಖ್ಯೆ : 4
ಅದೃಷ್ಟದ ಬಣ್ಣ: ಕೆಂಪು ಬಣ್ಣ
ಪರಿಹಾರ : ಶ್ರೀ ಮಹಾಲಕ್ಷ್ಮಿಕವಚಂ ಸ್ತೋತ್ರ ಪಠಣ

** ತುಲಾ ರಾಶಿ :
ಅನಗತ್ಯವಾದ ವಿವಾದಗಳಲ್ಲಿ ಸಿಲುಕಲಿದ್ದೀರಿ. ಕಬ್ಬು ಮತ್ತು ದ್ವಿದಳ ಧಾನ್ಯಗಳ ಮಾರಾಟಗಾರರಿಗೆ ಧನ ನಷ್ಟವಾಗುವ ಸೂಚನೆ ಇದೆ. ಕೆಲಸ ಕಾರ್ಯಗಳಲ್ಲಿ ಹಿನ್ನಡೆಯಾಗಬಹುದು. ಮಾನಸಿಕ ಸ್ಥಿತಿಗತಿಯಲ್ಲಿ ಏರಿಳಿತವಾಗುವ ಸಂಭವವಿದೆ, ಅತ್ಯಂತ ಮುಂಜಾಗ್ರತೆಯಿಂದ ಇರತಕ್ಕದ್ದು.
ಅದೃಷ್ಟದ ಸಂಖ್ಯೆ : 9
ಅದೃಷ್ಟದ ಬಣ್ಣ: ಕಂದು ಬಣ್ಣ
ಪರಿಹಾರ : ಶ್ರೀ ಲಕ್ಷ್ಮಿ ಹೃದಯಂ ಸ್ತೋತ್ರ ಪಠಣ

** ವೃಶ್ಚಿಕ ರಾಶಿ :
ಇಂದು ನೀವು ದೈಹಿಕ ಮತ್ತು ಮಾನಸಿಕ ಅನಾರೋಗ್ಯಕ್ಕೆ ಒಳಗಾಗಲಿದ್ದೀರಿ. ವೃತ್ತಿ ಉದ್ಯೋಗ ವ್ಯಾಪಾರ ವ್ಯವಹಾರದಲ್ಲಿ ಯಾವುದೇ ಪ್ರಗತಿ ಕಂಡು ಬರುವುದಿಲ್ಲ. ಸಮಾಜದಲ್ಲಿ ಗೌರವ ಸ್ಥಾನಮಾನಕ್ಕೆ ಧಕ್ಕೆಯಾಗುವ ಸಂಭವವಿದೆ. ಅನಗತ್ಯವಾದ ಮಾತಿನಿಂದ ಸಮಸ್ಯೆಗೆ ಸಿಲುಕಲಿದ್ದೀರಿ, ಅತ್ಯಂತ ಮುನ್ನೆಚ್ಚರಿಕೆ ವಹಿಸತಕ್ಕದ್ದು.
ಅದೃಷ್ಟದ ಸಂಖ್ಯೆ : 3
ಅದೃಷ್ಟದ ಬಣ್ಣ: ಹಳದಿ ಬಣ್ಣ
ಪರಿಹಾರ : ಶ್ರೀ ಕಮಲಾ ಸ್ತೋತ್ರ ಪಠಣ

** ಧನಸ್ಸು ರಾಶಿ :
ಕೃಷಿಕರಿಗೆ, ಎಣ್ಣೆ ಕಾಳುಗಳ ಮಾರಾಟಗಾರರಿಗೆ, ಜವಳಿ ಮತ್ತು ಅರಳೆ ವ್ಯಾಪಾರಸ್ಥರಿಗೆ ಉತ್ತಮ ಧನ ಲಾಭವಾಗಲಿದೆ. ಕೈಗೆತ್ತಿಕೊಂಡ ಕೆಲಸ ಕಾರ್ಯದಲ್ಲಿ ಅಪಾರವಾದ ಯಶಸ್ಸನ್ನು ಕಾಣಲಿದ್ದೀರಿ. ಸ್ನೇಹಿತರೊಂದಿಗೆ ಇದ್ದ ಭಿನ್ನಾಭಿಪ್ರಾಯಗಳು ದೂರವಾಗಲಿದೆ.
ಅದೃಷ್ಟದ ಸಂಖ್ಯೆ : 3
ಅದೃಷ್ಟದ ಬಣ್ಣ: ಗಾಢ ಕೆಂಪು ಬಣ್ಣ
ಪರಿಹಾರ : ಶ್ರೀ ದುರ್ಗಾ ಚಾಲೀಸ ಪಠಣ

** ಮಕರ ರಾಶಿ :
ಕವಿಗಳಿಗೆ ಮತ್ತು ಬರಹಗಾರರಿಗೆ ಪ್ರಶಸ್ತಿ ಪುರಸ್ಕಾರಗಳು ಪ್ರಾಪ್ತಿಯಾಗುವ ಶುಭ ಯೋಗವಿದೆ. ಮನೆಯಲ್ಲಿ ಶಾಂತಿ ನೆಮ್ಮದಿಯ ವಾತಾವರಣವಿರಲಿದೆ. ಹಣಕಾಸಿನ ವಿಚಾರದಲ್ಲಿ ಉತ್ತಮ ಪ್ರಗತಿಯಾಗಲಿದೆ. ವೃತ್ತಿ ಮತ್ತು ಉದ್ಯೋಗದಲ್ಲಿ ಉತ್ತಮ ಪ್ರಗತಿಯಾಗಲಿದೆ.
ಅದೃಷ್ಟದ ಸಂಖ್ಯೆ : 8
ಅದೃಷ್ಟದ ಬಣ್ಣ: ನೀಲಿ ಬಣ್ಣ
ಪರಿಹಾರ : ಶ್ರೀಚಕ್ರ ಸ್ತೋತ್ರ ಪಠಣ

** ಕುಂಭ ರಾಶಿ :
ಬಂಧು ಬಾಂಧವರಿಂದ ಅನಿರೀಕ್ಷಿತವಾದ ಕಿರಿಕಿರಿಗೆ ಒಳಗಾಗಲಿದ್ದೀರಿ. ದೂರ ಪ್ರಯಾಣದಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗಲಿದೆ. ವೃತ್ತಿ ವ್ಯಾಪಾರ ವ್ಯವಹಾರದಲ್ಲಿ ಹಿನ್ನಡೆಯಾಗುವ ಸೂಚನೆ ಇದೆ, ಎಚ್ಚರಿಕೆಯಿಂದ ಇರತಕ್ಕದ್ದು.
ಅದೃಷ್ಟದ ಸಂಖ್ಯೆ : 8
ಅದೃಷ್ಟದ ಬಣ್ಣ: ಹಳದಿ ಬಣ್ಣ
ಪರಿಹಾರ : ಶ್ರೀ ರುಕ್ಕಿಣಿ ಸಹಸ್ರನಾಮ ಸ್ತೋತ್ರ ಪಠಣ

** ಮೀನ ರಾಶಿ :
ದೈಹಿಕ ಅನಾರೋಗ್ಯದಿಂದ ಸಾಕಷ್ಟು ಬಳಲಲಿದ್ದೀರಿ. ಆತ್ಮೀಯರಿಂದ ಮನಸ್ಸಿಗೆ ನೋವಾಗುವ ಘಟನೆ ಸಂಭವಿಸಬಹುದು. ಆದಾಯ ಕಡಿಮೆಯಾಗಲಿದ್ದು, ಆನಗತ್ಯವಾದ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಕೆಲಸ ಕಾರ್ಯಗಳಲ್ಲಿ ಹಿನ್ನಡೆಯಾಗಬಹುದು, ಅತ್ಯಂತ ಮುಂಜಾಗ್ರತೆಯಿಂದ ಇರತಕ್ಕದ್ದು.
ಅದೃಷ್ಟದ ಸಂಖ್ಯೆ : 6
ಅದೃಷ್ಟದ ಬಣ್ಣ: ಕಿತ್ತಳೆ ಬಣ್ಣ
ಪರಿಹಾರ : ಶ್ರೀ ಲಕ್ಷ್ಮಿಸಹಸ್ರನಾಮ ಸ್ತೋತ್ರ ಪಠಣ