Categories
ತೀರ್ಥಹಳ್ಳಿ

ಮಲೆನಾಡಿನಲ್ಲಿ ಆನೆಗಳ ಅಟ್ಟಹಾಸ

ಮಲೆನಾಡಿನಲ್ಲಿ ಆನೆಗಳ ಅಟ್ಟಹಾಸ

– ತೀರ್ಥಹಳ್ಳಿ: ಕಾಡಾನೆಗಳ ದಾಳಿ: ಬೆಳೆ ಸಂಪೂರ್ಣ ನಾಶ!
– ಇನ್ನೂ ಎಚ್ಛೆತ್ತುಕೊಳ್ಳದ ಅಧಿಕಾರಿಗಳು
– ಅರಣ್ಯ ಇಲಾಖೆಯ ಮುಂದೆ ಪ್ರತಿಭಟನೆಗೆ ಮುಂದಾಗಿರುವ ಜನ!
– ಕುಂಸಿ: ಕಡಿಮೆಯಾಗದ ಕಾಡಾನೆ ಸದ್ದು, ಎಲ್ಲೆಡೆ ಭಯದ ವಾತಾವರಣ

NAMMUR EXPRESS NEWS
ತೀರ್ಥಹಳ್ಳಿ:
ತೀರ್ಥಹಳ್ಳಿ ತಾಲೂಕಿನ ಹುತ್ತಳ್ಳಿ, ಆಲೂರು, ಜೋಗಿಮಠ ಗ್ರಾಮಗಳಲ್ಲಿ 5 ಕಾಡಾನೆ ಗಳ ಹಾವಳಿ ಕಂಡುಬಂದಿದ್ದು, ಗ್ರಾಮದಲ್ಲಿ ಭತ್ತದ ಗದ್ದೆ, ಅಡಕೆ ತೋಟ, ತೆಂಗು, ಬಾಳೆ ಎಂಬ ಹತ್ತಾರು ಎಕರೆಗಳ ಬೆಳೆಗಳನ್ನು ಸಂಪೂರ್ಣ ನಾಶ ಮಾಡಿವೆ.
ಕಾಡಾನೆ ಗಳ ಆರ್ಭಟಕ್ಕೆ ಜನರು ಕಂಗಾಲಾಗಿದ್ದು, ಜನರು ಆನೆಗಳನ್ನ ಓಡಿಸಲು ಸಿಡಿ ಮದ್ದು ಪ್ರದರ್ಶನ ಮಾಡಿ ದಿಕ್ಕು ಬದಲಿಸುವ ಕಾರ್ಯವನ್ನು ಅನುಸರಿಸುತ್ತಿದ್ದಾರೆ. ಜನರಿಗೆ ದಾರಿಯಲ್ಲಿ ಓಡಾಡಲು ಭಯ ಪಡುವ ಸನ್ನಿವೇಶ ಒದಗಿದೆ. ರಾತ್ರಿ ಇಡೀ ಬೊಗಳುವ ಮಲೆನಾಡಿನ ಶ್ವಾನಗಳು, ಆನೆಗಳ ಗಾತ್ರ ಅದರ ಗೀಳಿಡುವ ಶಬ್ದಕ್ಕೆ ಹೆದರಿ ಇಡೀ ಊರೇ ನಿಶಬ್ದವಾಗಿವೆ.ಅರಣ್ಯ ಅಧಿಕಾರಿ ಸಿಬ್ಬಂದಿಗಳೇ ಆನೆಗಳನ್ನು ತಂದು ಬಿಟ್ಟಿದ್ದಾರೆ ಎಂದು ಗ್ರಾಮಸ್ಥರ ಮಧ್ಯೆ ಗೊಂದಲದ ಚರ್ಚೆ ನಡೆಯುತ್ತಿದೆ. ಆನೆಗಳ ಹಾವಳಿ ಕಡಿಮೆ ಆಗದೆ ಇದ್ದಲ್ಲಿ ಅರಣ್ಯ ಇಲಾಖೆಯ ಮುಂದೆ ಜನರು ಪ್ರತಿಭಟನೆಗೂ ಸಿದ್ದ ಎಂದು ತಿಳಿಸುತ್ತಿದ್ದಾರೆ.  ಹತ್ತಾರು ಎಕರೆ ಬೆಳೆ ನಾಶವಾಗಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳದೆ ಅತ್ತ ಕಡೆ ತಿರುಗಿಯೂ ನೋಡಿಲ್ಲವೆಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನಾದರೂ ಈ ಕಾಡಾನೆಯ ದಾಂಧಲೆಗೆ ಅರಣ್ಯ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು.

* ಕುಂಸಿ: ಕಾಡಾನೆಗಳ ದಾಳಿ: ಬೆಳೆ ಸಂಪೂರ್ಣ

ಕುಂಸಿ ಸಮೀಪದ ತುತ್ತೂರಿನಲ್ಲಿ ರೈತರ ಜಮೀನುಗಳಿಗೆ ಡಿ. 25ರಂದು ದಾಳಿ ನಡೆಸಿರುವ ಕಾಡಾನೆಗಳು ಕಬ್ಬು, ಭತ್ತ, ಬಾಳೆ ಹಾಗೂ ಅಡಿಕೆ ಬೆಳೆಗಳನ್ನು ನಾಶಪಡಿಸಿವೆ. ಎರಡು ವ್ಯಾಪ್ತಿಯಿಂದ ಆನೆಗಳು ಅರಸಾಳು ಆನಂದಪುರ ವಲಯದ ಕಾಡಿಗೆ ಬಂದ ಮಾಹಿತಿ ಇದೆ. ತುಪ್ಪೂರು, ಗಡಿಕಲ್ಲು, ಆನೆಸರ, ಪತ್ರೆಹೊಂಡದ ಸುತ್ತ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುತ್ತಿದ್ದರು.  ಆದರೆ ಆನೆಗಳು ಕಂಡಿಲ್ಲ. ತಡರಾತ್ರಿ ತುಪ್ಪೂರು ಭಾಗದ ರೈತರ ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ನಾಶ ಮಾಡಿ ಆನೆಗಳು ಹೊರಬೈಲು ಊರಿನ ಬಳಿ ಇರುವ ಕಾಡಿನಲ್ಲಿ ಇವೆ ಎಂಬ ಮಾಹಿತಿ ಲಭ್ಯವಾಗಿದೆ. ಶೀಘ್ರ ಆನೆಗಳನ್ನು ಓಡಿಸಲು ಕಾರ್ಯಾಚರಣೆ ಕೈಗೊಳ್ಳ-ಲಾಗುವುದು’ ಎಂದು ಆನಂದಪುರ ವಲಯ ಅರಣ್ಯಾಧಿಕಾರಿ ರವಿಕುಮಾರ್ ತಿಳಿಸಿದ್ದಾರೆ.

Categories
ರಾಜ್ಯ

ನಂದಿನಿ ಹಾಲಿನ ಹಾಲಿನ ದರ ಏರಿಕೆ ಸುಳಿವು..!!?

ನಂದಿನಿ ಹಾಲಿನ ಹಾಲಿನ ದರ ಏರಿಕೆ ಸುಳಿವು..!!?
– ಅಧಿಕ 50 ಎಂಎಲ್ ಹಾಲು ಕಟ್, 2 ರೂ. ಕಟ್
– ಸಂಕ್ರಾಂತಿ ನಂತರ ಹಾಲಿನ ದರ 5 ರೂ. ಏರಿಕೆಗೆ ಪ್ರಸ್ತಾವನೆ

NAMMUR EXPRESS NEWS
ಬೆಂಗಳೂರು:
ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ನಂದಿನ ಹಾಲಿನ ದರ ಏರಿಕೆಯ ಸುಳಿವು ನೀಡಿದ್ದಾರೆ. ಈ ಹಿಂದೆ ಹಾಲಿನ ಉತ್ಪಾದನೆ ಹೆಚ್ಚಳ ಎಂದು 50 ಎಂ.ಎಲ್ ಅಧಿಕ ಹಾಲು ನೀಡಿ 2 ರೂ.ಗಳನ್ನು ಹೆಚ್ಚಳ ಮಾಡಿದ್ದ ಸರ್ಕಾರ ಈಗ ಹಾಲಿನ ಉತ್ಪಾದನೆ ಯಾಥಾ ಸ್ಥಿತಿ ಎಂದು 50 ಎಂ.ಎಲ್ ಕಡಿತಗೊಳಿಸಿ ಹೆಚ್ಚಿಸಿದ್ದ 2 ರೂ.ಗಳನ್ನು ಕಡಿತಗೊಳಿಸಲು ನಿರ್ಧರಿಸೋದಾಗಿ ಅಧ್ಯಕ್ಷರು ತಿಳಿಸಿದ್ದಾರೆ.

ಸಂಕ್ರಾಂತಿ ಬಳಿಕ 5 ರೂ.ಏರಿಕೆ ಪ್ರಸ್ತಾವನೆ..!??
ಹಾಲು ಉತ್ಪಾದಕ ರೈತರು 5 ರೂ.ಗಳ ಏರಿಕೆ ಮಾಡಲು ಹಾಲು ಉತ್ಪಾದಕ ರೈತರು ಮನವಿ ಮಾಡಿದ್ದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಂಕ್ರಾಂತಿ ನಂತರ 5 ರೂ.ದರ ಏರಿಕೆಯಾಗಬಹುದು ಎಂಬ ಸುಳಿವನ್ನು ಕೆಎಂಎಫ್ ಅಧ್ಯಕ್ಷರು ನೀಡಿದ್ದಾರೆ.

Categories
ಕರಾವಳಿ

ಮಂಗಳೂರು: 500 ನಕಲಿ ಚಿನ್ನದ ಬಳೆ ಅಡವಿಟ್ಟು 2 ಕೋಟಿ ಸಾಲ

ಮಂಗಳೂರು: 500 ನಕಲಿ ಚಿನ್ನದ ಬಳೆ ಅಡವಿಟ್ಟು 2 ಕೋಟಿ ಸಾಲ
– 2,11,89,800 ರೂ. ಸಾಲ ಪಡೆದು, ಮೋಸ
– ಸಿದ್ದಿಕ್, ಬ್ಯಾಂಕ್ ಆಡಳಿತ ಮಂಡಳಿ, ನೌಕರರ ವಿರುದ್ಧ ಪ್ರಕರಣ

NAMMUR EXPRESS NEWS
ಮಂಗಳೂರು: 500ಕ್ಕೂ ಅಧಿಕ ನಕಲಿ ಚಿನ್ನದ ಬಳೆಗಳನ್ನು ಅಡವಿಟ್ಟು ಒಬ್ಬ ವ್ಯಕ್ತಿ ಮಂಗಳೂರು ಸಮಾಜ ಸೇವಾ ಸಹಕಾರಿ ಸಂಘದಿಂದ 2 ಕೋಟಿ ಅಧಿಕ ಸಾಲ ಪಡೆದ ಘಟನೆ ನಡೆದಿದ್ದು, ಇದೀಗ ವಂಚನೆ ಬೆಳಕಿಗೆ ಬಂದಿರುವ ಆರೋಪಿ ಪರಾರಿಯಾಗಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರ ಮಂಗಲ ಗ್ರಾಮದ ಅಬೂಬಕ್ಕರ್ ಸಿದ್ದಿಕ್ ವಂಚಿಸಿದ ಆರೋಪಿ. 500 ನಕಲಿ ಚಿನ್ನದ ಬಳೆಗಳನ್ನು ಅಡವಿಟ್ಟು ಅಬೂಬಕ್ಕರ್ ಸಿದ್ದಿಕ್ 2,11,89,800 ರೂ. ಸಾಲ ಪಡೆದು, ಮೋಸ ಮಾಡಿದ್ದಾನೆ. ಹೀಗಾಗಿ, ಅಬೂಬಕ್ಕರ್ ಸಿದ್ದಿಕ್, ಬ್ಯಾಂಕ್ ಆಡಳಿತ ಮಂಡಳಿ ಮತ್ತು ನೌಕರರ ವಿರುದ್ಧ ಮಂಗಳೂರು ಸೆನ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಮಾಜ ಸೇವಾ ಸಹಕಾರಿ ಸಂಘ ಜಿಲ್ಲೆಯಲ್ಲಿ ಹಲವು ಶಾಖೆಗಳನ್ನು ಹೊಂದಿದೆ. ಈ ಅವ್ಯವಹಾರದ ಆರೋಪ ಕೇಳಿ ಬಂದಿರುವುದು ಮಂಗಳೂರು ಪಡೀಲ್ನ ಶಾಖೆಯಲ್ಲಿ ಚಿನ್ನ ಪರೀಕ್ಷೆ ನಡೆಸುವ ಸರಪ, ಬ್ಯಾಂಕ್ ಅಧ್ಯಕ್ಷ, ನಿರ್ದೇಶಕರು ಮ್ಯಾನೇಜರ್, ಸಿಬ್ಬಂದಿ ಸಹಕಾರದಿಂದ ಅವ್ಯವಹಾರ ನಡೆದಿದೆ ಎಂಬ ಆರೋಪವಿದೆ. ಈ ಬಗ್ಗೆ ಬ್ಯಾಂಕ್‌ ಸದಸ್ಯರು, ಮಾಜಿ ನಿರ್ದೇಶಕ ಡಿ.ಲೋಕನಾಥ್ ದೂರಿನ 28 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣ ಬ್ಯಾಂಕ್ ಸಂಬಂಧದ ಸರಪ ವಿವೇಕ್ಆ ಚಾರ್ಯನನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿ ಅಬೂಬಕ್ಕರ್ ಸಿದ್ದಿಕ್ಕಾಗಿ ಹುಡುಕಾಟ ಮುಂದುವರೆದಿದೆ. ತನಿಖೆ ನಡೆಯುತ್ತಿದೆ. ಇನ್ನು ಈ ಪ್ರಕರಣಕ್ಕೆ ಬ್ಯಾಂಕ್ ಸ್ಪಷ್ಟನೆ ನೀಡಿದ್ದು, ನಮ್ಮ ಸಂಘದಲ್ಲಿ ಇಂತಹ ಘಟನೆ ಸುಳ್ಳು ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಘಟನೆಯ ಬಗ್ಗೆ ನಾವು ಕಾನೂನು ರೀತಿಯಲ್ಲಿ ಎಲ್ಲಾ ಕ್ರಮಕೈಗೊಂಡಿದ್ದೇವೆ. ಯಾರ ಮೇಲೆ ಶಿಸ್ತು ಕ್ರಮಕೈಗೊಳ್ಳಬೇಕು ಅದನ್ನು ಕೂಡ ನಮ್ಮ ಸಂಘದ ಆಡಳಿತ ಮಂಡಳಿಯ ಸಭೆ ಕರೆದು ತೀರ್ಮಾನಿಸಲಾಗಿದೆ. ಮುಂದೆ ನಡೆಯುವ ಚುನಾವಣೆಯ ದೃಷ್ಟಿಯಿಂದ ಇಂತಹ ಕೃತ್ಯಗಳನ್ನು ಮಾಡಲಾಗುತ್ತಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ಕಾನೂನು ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು.

Categories
ರಾಜ್ಯ

ಪಶ್ಚಿಮ ಘಟ್ಟದ 153.8 ಚದರ ಕಿ.ಮೀ.ಅರಣ್ಯ ನಾಶ

ಪಶ್ಚಿಮ ಘಟ್ಟದ 153.8 ಚದರ ಕಿ.ಮೀ.ಅರಣ್ಯ ನಾಶ
– ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಆರರಲ್ಲಿ ಅರಣ್ಯ ನಾಶ ತೀವ್ರ
– ಅರಣ್ಯ ನಾಶವಾದ ಜಿಲ್ಲೆಗಳಲ್ಲಿ ಶಿವಮೊಗ್ಗ ಜಿಲ್ಲೆ ಮೊದಲ ಸ್ಥಾನ

NAMMUR EXPRESS NEWS
ಬೆಂಗಳೂರು: ಪಶ್ಚಿಮ ಘಟ್ಟದ ಸೆರಗಿನಲ್ಲಿರುವ ರಾಜ್ಯದ ಹತ್ತು ಜಿಲ್ಲೆಗಳ ಪೈಕಿ ಆರರಲ್ಲಿ ಅರಣ್ಯ ನಾಶ ತೀವ್ರವಾಗಿದೆ. 2013ರಿಂದ 2023ರ ನಡುವೆ ಆರು ಜಿಲ್ಲೆಗಳಲ್ಲಿ 153.80 ಚದರ ಕಿ.ಮೀ.ನಷ್ಟು ಅರಣ್ಯ ಪ್ರದೇಶ ಇಲ್ಲವಾಗಿದೆ. ಕೇಂದ್ರ ಸರ್ಕಾರವು ಈಚೆಗೆ ಬಿಡುಗಡೆ ಮಾಡಿದ ‘ಭಾರತೀಯ ಅರಣ್ಯ ಸ್ಥಿತಿಗತಿ ವರದಿ-2023’ರಲ್ಲಿ ಈ ಮಾಹಿತಿ ಇದೆ. ಹೆಚ್ಚು ಅರಣ್ಯ ನಾಶವಾದ ಜಿಲ್ಲೆಗಳಲ್ಲಿ ಶಿವಮೊಗ್ಗ ಜಿಲ್ಲೆ ಮೊದಲ ಸಾಲಿನಲ್ಲಿದೆ. ಜಿಲ್ಲೆಯಲ್ಲಿ ಒಟ್ಟು 74.54 ಚದರ ಕಿ.ಮೀ., ಕೊಡಗಿನಲ್ಲಿ 33.40 ಚದರ ಕಿ.ಮೀ., ಬೆಳಗಾವಿಯಲ್ಲಿ 24.91 ಚದರ ಕಿ.ಮೀ. ಮತ್ತು ಮೈಸೂರಿನಲ್ಲಿ 15.28 ಚದರ ಕಿ.ಮೀ.ನಷ್ಟು ಅರಣ್ಯ ನಾಶವಾಗಿದೆ. ಹಾಸನ ಮತ್ತು ಚಾಮರಾಜನಗರದಲ್ಲಿ ಅರಣ್ಯದ ವಿಸ್ತೀರ್ಣ ಸ್ವಲ್ಪ ಕುಸಿದಿದೆ.

ಇಷ್ಟೂ ಜಿಲ್ಲೆಗಳಲ್ಲಿ ‘ಅತಿದಟ್ಟಾರಣ್ಯ’ದ ವ್ಯಾಪ್ತಿ ಹತ್ತು ವರ್ಷಗಳಲ್ಲಿ ಹೆಚ್ಚಾಗಿದೆ. ಆದರೆ ‘ದಟ್ಟಾರಣ್ಯ’ದ ವ್ಯಾಪ್ತಿ ಸ್ವಲ್ಪ ಕುಸಿದಿದೆ. ಪಶ್ಚಿಮ ಘಟ್ಟದ ಅಂಚಿನಲ್ಲಿರುವ ‘ಸಾಧಾರಣ ಅರಣ್ಯ’ವು ಜನವಸತಿ ಮತ್ತು ವಾಣಿಜ್ಯ ಬೆಳೆ ಚಟುವಟಿಕೆ ಪ್ರದೇಶಗಳಿಗೆ ಹೊಂದಿಕೊಂಡಿದ್ದು, ಇಲ್ಲೇ ಅತಿಹೆಚ್ಚು ಅರಣ್ಯ ನಾಶವಾಗಿದೆ. ಮರಗಳ ಹಸಿರಿನ ಹೊದಿಕೆ ಶೇ 10ರಿಂದ ಶೇ40ರಷ್ಟು ಇರುವ ಕಾಡನ್ನು ‘ಸಾಧಾರಣ ಅರಣ್ಯ’ ಎಂದು ವರ್ಗೀಕರಿಸಲಾಗಿದ್ದು, ಪಶ್ಚಿಮ ಘಟ್ಟದ ಶೋಲಾ ಕಾಡುಗಳೂ ಇದರ ವ್ಯಾಪ್ತಿಗೆ ಬರುತ್ತವೆ. ವಾಣಿಜ್ಯ ಬೆಳೆ ಪ್ರದೇಶಗಳಿಗೆ ಹೊಂದಿಕೊಂಡಿರುವ ಈ ಅರಣ್ಯ ಪ್ರದೇಶಗಳಿಗೆ ಆಕ್ರಮಣಕಾರಿ ಸಸ್ಯಪ್ರಬೇಧಗಳು ದಾಟಿಕೊಂಡಿವೆ. ಇದರಿಂದ ಸ್ಥಳೀಯ ಅರಣ್ಯ ಸಸಿ, ಮರ, ಹುಲ್ಲು ಪ್ರಬೇಧಗಳಿಗೆ ಮತ್ತು ವನ್ಯಜೀವಿಗಳಿಗೆ ಕಂಟಕ ಎದುರಾಗಿದೆ ಎಂಬ ವಿವರ ವರದಿಯಲ್ಲಿದೆ.

Categories
ತೀರ್ಥಹಳ್ಳಿ

ಶ್ರೀ ರಾಮೇಶ್ವರ ಎಳ್ಳಮಾವಾಸ್ಯೆ ಜಾತ್ರೆ: ಏನೇನ್ ಇರುತ್ತೆ?

ಶ್ರೀ ರಾಮೇಶ್ವರ ಎಳ್ಳಮಾವಾಸ್ಯೆ ಜಾತ್ರೆ: ಏನೇನ್ ಇರುತ್ತೆ?
– ಎಳ್ಳಮಾವಾಸ್ಯೆ ಜಾತ್ರೆಯಲ್ಲಿ ವೈಭವದ ಕಾರ್ಯಕ್ರಮದ ವಿವರ
– 17 ಲಕ್ಷ ಬಜೆಟ್ ಅಲ್ಲಿ ನಡೆಯಲಿದೆ ಈ ಸಲದ ಜಾತ್ರೆ!

NAMMUR EXPRESS NEWS
ತೀರ್ಥಹಳ್ಳಿ:
ತೀರ್ಥಹಳ್ಳಿ ಐತಿಹಾಸಿಕ ಜಾತ್ರೆಗೆ ದಿನಗಣನೆ ಆರಂಭವಾಗಿದೆ. ಎಳ್ಳಮಾವಾಸ್ಯೆ ಜಾತ್ರೆ ಹಿನ್ನೆಲೆ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಆಗಮಿಸಲಿದ್ದು, ದೇವಸ್ಥಾನದ ರಥ ಬೀದಿಯಿಂದ ರಥೋತ್ಸವ ನಡೆಯಲಿದೆ. ಸುತ್ತುಮುತ್ತ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರಿಗೆ ಅನ್ನಸಂತರ್ಪಣೆ ಅಯೋಜಿಸಲಾಗಿದೆ. ಹೆಚ್ಚು ಜನ ಸೇರುವ ಹಿನ್ನೆಲೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿದೆ. 17 ಲಕ್ಷ ಬಜೆಟ್ ನಲ್ಲಿ ರಥೋತ್ಸವ ಹಾಗೂ ತೆಪ್ಪೋತ್ಸವ ಕಾರ್ಯಕ್ರಮ ನಡೆಯಲಿದೆ. ಎಳ್ಳಮಾವಾಸ್ಯೆ ಜಾತ್ರೆ ಬಗ್ಗೆ ತೀರ್ಥಹಳ್ಳಿ ಪಟ್ಟಣದ ಅನ್ನಪೂರ್ಣ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಂಚಾಲಕರಾದ ಸೊಪ್ಪುಗುಡ್ಡೆ ರಾಘವೇಂದ್ರ ಅವರು ಸಮಸ್ತ ಭಕ್ತರು ಹಾಗೂ ತೀರ್ಥಹಳ್ಳಿ ಜನತೆಯ ಸಹಕಾರ ಕೋರಿದರು.

ಕಾರ್ಯಕ್ರಮ ಏನೇನು..?
ತೀರ್ಥಸ್ನಾನದ ಸಂಜೆ ಶಮಿತಾ ಮಲ್ನಾಡ್ ಅವರ ಹಾಡು ಹಾಗೂ ನೃತ್ಯ ಕಾರ್ಯಕ್ರಮ ಹಾಗೂ ಉದಯ್ ಶೆಟ್ಟಿ ಅವರ ಕಾರ್ಯಕ್ರಮ ಈ ಬಾರಿ ವಿಶೇಷವಾಗಿ ನಡೆಯಲಿದೆ ಎಂದು ತಿಳಿಸಿದರು.

ಎಲ್ಲಾ ಪಕ್ಷಗಳೂ ಸೇರಿ ಆಚರಣೆ

ಈ ಬಾರಿ ತೆಪ್ಪೋತ್ಸವ ಸಮಿತಿ ಬಿಜೆಪಿ ಮತ್ತು ಕಾಂಗ್ರೇಸ್ ಎರಡು ಪಕ್ಷ ಒಟ್ಟಿಗೆ ಸೇರಿ ಕಳೆದ ಬಾರಿಗಿಂತ ಅದ್ದೂರಿಯಾಗಿ ಆಚರಿಸಲು ತಯಾರಿ ನಡೆಯುತ್ತಿದೆ. ಎರಡು ಪಕ್ಷ ಸೇರಿ ನಡೆಸುವುದರಿಂದ ಈ ಭಾರಿಯ ಜಾತ್ರೆ ಬಿಕಾಂ ಜಾತ್ರೆ ಆಗಿದೆ ಎಂದು ಡಾ. ಸುಂದರೇಶ್‌ ಅವರು ಹೇಳಿದರು.

ಉತ್ಸವಗಳ ವಿವರ ಹೇಗಿದೆ?

ಡಿ. 28 ನೇ ಶನಿವಾರ ಶ್ರೀ ಗಣಪತಿ ಪೂಜಾಪೂರ್ವಕ ಪುಣ್ಯಾಹ, ಶತರುದ್ರಾಭಿಷೇಕ, ದೇವನಾಂದಿ, ಧ್ವಜಾರೋಹಣ, ಸಾಯಂಕಾಲ ರಂಗಪೂಜೆ, ಅಂಕುರಾರೋಪಣ, ಭೇರಿತಾಡನ, ಕೌತುಕ ಬಂಧನ, ಬಲಿ ಉತ್ಸವಗಳು ಹಾಗೂ ರಂಗ ಪೂಜೆ ಸೇವೆ. ಡಿ.29ನೇ ಭಾನುವಾರ ಅಗ್ನಿಜನನ, ಅಧಿವಾಸ ಹೋಮ, ಮಹಾಪೂಜೆ, ಬಲಿ, ಸಂಜೆ ಘಂಟೆ 4-00 ಕ್ಕೆ : ಪುರೋತ್ಸವ, ನಂತರ ರಂಗಪೂಜೆ, ಬಲಿ, ಪೂಜಾದ್ಭುತ್ಸವಗಳು, ರಂಗ ಪೂಜೆ.
ಡಿ. 30ನೇ ಸೋಮವಾರ ಶ್ರೀ ಪರಶುರಾಮ ತೀರ್ಥಪೂಜೆ, ತೀರ್ಥಾಭಿಷೇಕ ಮತ್ತು ತೀರ್ಥಸ್ನಾನ
ಅಧಿವಾಸ ಹೋಮ, ಕಲಶಾಭಿಷೇಕ, ಮಹಾಪೂಜೆ, ಬಲಿ, ಉತ್ಸವ, ಸಂಜೆ :ರಂಗ ಪೂಜೆ ರಾತ್ರಿ : ಬಲಿ, ಉತ್ಸವ, ರಂಗ ಪೂಜೆ ಸೇವೆ.
ಡಿ.31ನೇ ಮಂಗಳವಾರ ಅಧಿವಾಸ ಹೋಮ, ಕಲಶಾಭಿಷೇಕ, ಮಹಾಪ, ಉತ್ತವಬಲಿ.
ಶ್ರೀ ಮನ್ಮಹಾರಥಾರೋಹಣ” ರಾತ್ರಿ : ಭೂತ ಬಲಿ, ಶಯನೋತ್ಸವ.
ಜನವರಿ 01ನೇ ಬುಧವಾರ ಪ್ರಭೋದೋತ್ಸವ, ಚೂರ್ಣೋತ್ಸವ ಅಧಿವಾಸ ಹೋಮ, ಕಲಶಾಭಿಷೇಕ, ಮಹಾಪೂಜೆ ಬಲಿ, ಅವಕೃತಸ್ನಾನ,
ಸಾಯಂಕಾಲ : ಉತ್ಸವ, ರಾತ್ರಿ 7-00 ಕ್ಕೆ ಸಾರ್ವಜನಿಕರಿಂದ”ತೆಪ್ಪೋತ್ಸವ” ಸಂಧಾನ, ಪೂರ್ಣಾಹುತಿ, ಧ್ವಜ ಅವರೋಹಣ, ಪ್ರಸಾದ ವಿತರಣೆ.
ಜನವರಿ 02ನೇ ಗುರುವಾರ ಬೆಳಿಗ್ಗೆ: ಸಂಪ್ರೋಕ್ಷಣೆ, ಪಂಚವಿಂಶತಿ ಕಲಶಾಭಿಷೇಕ, ಮಹಾಪೂಜೆ.
ಸಂಜೆ : ಶಂಗ ಪೂಜೆ, ದೀಪೋತ್ಸವ ಜನವರಿ 14ನೇ ಮಂಗಳವಾರದಂದು ಅಭಿಜಿನ್ಮುಹೂರ್ತದಲ್ಲಿ ಮಕರ ಸಂಕ್ರಾಂತಿ ರಥೋತ್ಸವ ನಡೆಯಲಿದೆ.

Categories
ಜಾತಕ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಗುರು ರಾಯರ ಆಶೀರ್ವಾದಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಇಂದು ಲಾಭ ಹೆಚ್ಚಾಗಲಿದೆ. ನೀವು ಸ್ನೇಹಿತರಿಂದ ಬೆಂಬಲವನ್ನು ಸಹ ಪಡೆಯುತ್ತೀರಿ. ಶೈಕ್ಷಣಿಕ ಕೆಲಸದಲ್ಲಿ ಅಡೆತಡೆಗಳು ಉಂಟಾಗಬಹುದು. ತಾಯಿಯ ಆರೋಗ್ಯ ಸುಧಾರಿಸಲಿದೆ. ಪ್ರಗತಿಯ ಹಾದಿ ಸುಗಮವಾಗಲಿದೆ. ಸಂಬಂಧಗಳಲ್ಲಿ ಪ್ರೀತಿ ಮತ್ತು ಮಾಧುರ್ಯವನ್ನು ಹೆಚ್ಚಿಸಲು ಪ್ರಯತ್ನಗಳನ್ನು ಮಾಡಿ. ನಿಮ್ಮ ಸಂಗಾತಿಯ ಮಾತುಗಳನ್ನು ನಿರ್ಲಕ್ಷಿಸಬೇಡಿ. ನಿಮ್ಮ ಸಂಗಾತಿಯೊಂದಿಗೆ ಪ್ರಾಮಾಣಿಕವಾಗಿ ಮಾತನಾಡಿ.

** ವೃಷಭ ರಾಶಿ :
ಇಂದು ನಿಮಗೆ ಮನಸ್ಸಿಗೆ ತೊಂದರೆಯಾಗಬಹುದು. ಆತ್ಮವಿಶ್ವಾಸ ಕಡಿಮೆಯಾಗಲಿದೆ. ಸ್ವಯಂ ನಿಯಂತ್ರಣದಲ್ಲಿರಿ. ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕೆಲಸದ ವ್ಯಾಪ್ತಿಯಲ್ಲಿ ಬದಲಾವಣೆಯಾಗಬಹುದು. ನೀವು ಸ್ನೇಹಿತರಿಂದ ವಿಶೇಷ ಬೆಂಬಲವನ್ನು ಪಡೆಯುತ್ತೀರಿ, ಸಂಬಂಧದಲ್ಲಿ ಎಲ್ಲವೂ ಉತ್ತಮವಾಗಿರುತ್ತದೆ. ನೀವು ಹೆಚ್ಚು ಚಿಂತಿಸಬೇಕಾಗಿಲ್ಲ. ಬಲವಾದ ಮತ್ತು ಉತ್ತಮ ಸಂಬಂಧಕ್ಕಾಗಿ, ಸಂಬಂಧದಲ್ಲಿ ನಿಮಗೆ ಪ್ರಾಮುಖ್ಯತೆ ನೀಡಿ.

** ಮಿಥುನ ರಾಶಿ :
ಇಂದು ನೀವು ಆತ್ಮವಿಶ್ವಾಸದಿಂದ ತುಂಬಿರುತ್ತೀರಿ, ಆದರೆ ಶಾಂತವಾಗಿರುತ್ತೀರಿ. ಕುಟುಂಬದಿಂದ ಬೆಂಬಲ ಸಿಗಲಿದೆ. ಶೈಕ್ಷಣಿಕ ಕೆಲಸವು ಆಹ್ಲಾದಕರ ಫಲಿತಾಂಶಗಳನ್ನು ನೀಡುತ್ತದೆ. ನಿಮ್ಮ ಮಕ್ಕಳಿಂದ ನೀವು ಒಳ್ಳೆಯ ಸುದ್ದಿ ಪಡೆಯಬಹುದು. ಸಹೋದರರಿಂದ ಬೆಂಬಲ ದೊರೆಯಲಿದೆ. ನೀವು ಮತ್ತು ನಿಮ್ಮ ಸಂಗಾತಿಯು ಅನೇಕ ಸಣ್ಣ ವಿಷಯಗಳನ್ನು ಸಹ ಗಮನಿಸಬಹುದು, ಅದು ಕೆಲವೊಮ್ಮೆ ಹೆಚ್ಚು ವಿಷಯವಲ್ಲ.

** ಕರ್ಕಾಟಕ ರಾಶಿ :
ಇಂದು ಆತ್ಮವಿಶ್ವಾಸದ ಕೊರತೆ ಇರುತ್ತದೆ. ಮನಸ್ಸು ಗೊಂದಲದಲ್ಲಿ ಉಳಿಯುತ್ತದೆ. ಉದ್ಯೋಗ ಸ್ಥಳದಲ್ಲಿ ಬದಲಾವಣೆಯಾಗಬಹುದು. ಓಡಾಟ ಹೆಚ್ಚು ಇರುತ್ತದೆ. ನೀವು ಕುಟುಂಬದಿಂದ ದೂರ ಉಳಿಯಬೇಕಾಗಬಹುದು. ಉತ್ತಮ ಸ್ಥಿತಿಯಲ್ಲಿರಿ. ನೀವು ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ನಿಮ್ಮ ಸಂಬಂಧ ಹದಗೆಡಲು ಬಿಡಬೇಡಿ. ನಿಮ್ಮ ಸಂಗಾತಿಯೊಂದಿಗೆ ಮಾತನಾಡಿ ಮತ್ತು ನಿಮ್ಮ ಪ್ರೀತಿಯ ಜೀವನದಲ್ಲಿ ನಡೆಯುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿಯಲು ಪ್ರಯತ್ನಿಸಿ.

** ಸಿಂಹ ರಾಶಿ :
ಇಂದು ನಿಮ್ಮ ಮನಸ್ಸು ಸಂತೋಷವಾಗಿ ಉಳಿಯುತ್ತದೆ, ಆದರೆ ತಾಳ್ಮೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ಸಂಭಾಷಣೆಯಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಿ. ಯಾವುದೇ ಆಸ್ತಿ ಆದಾಯದ ಮೂಲವಾಗಬಹುದು. ನಿಮ್ಮ ಸಂಗಾತಿಯಿಂದ ನೀವು ಬೆಂಬಲ ಮತ್ತು ಒಡನಾಟವನ್ನು ಪಡೆಯುತ್ತೀರಿ. ಉತ್ತಮ ಸಂಬಂಧವನ್ನು ಪ್ರವೇಶಿಸುವಿರಿ. ಒಟ್ಟಿಗೆ ಹೊಸ ಚಟುವಟಿಕೆಗಳನ್ನು ಅನ್ವೇಷಿಸುವಿರಿ. ನಿಮ್ಮ ಸಂಗಾತಿಯ ಮಾನಸಿಕ ಆರೋಗ್ಯಕ್ಕೆ ಗಮನ ಕೊಡಿ.

** ಕನ್ಯಾ ರಾಶಿ :
ಇಂದು ಮನಸ್ಸು ತೊಂದರೆಗೊಳಗಾಗುತ್ತದೆ. ತಾಳ್ಮೆಯಿಂದಿರಿ. ಅತಿಯಾದ ಕೋಪವನ್ನು ತಪ್ಪಿಸಿ. ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಉದ್ಯೋಗ ಬದಲಾವಣೆ ಸಾಧ್ಯತೆ ಇದೆ. ರುಚಿಕರವಾದ ಆಹಾರದಲ್ಲಿ ಆಸಕ್ತಿ ಇರುತ್ತದೆ. ನಿಮ್ಮ ಸಂಗಾತಿಯೊಂದಿಗೆ ನೀವು ದಿನಾಂಕವನ್ನು ಯೋಜಿಸಬಹುದು. ಸಂಬಂಧಗಳಲ್ಲಿ ಅಹಂಕಾರಗಳನ್ನು ಎಂದಿಗೂ ಘರ್ಷಿಸಲು ಬಿಡಬೇಡಿ. ಹೊಸದಾಗಿ ಮದುವೆಯಾದ ದಂಪತಿಗಳು ಪರಸ್ಪರ ಸ್ಪರ್ಧಿಸುವುದನ್ನು ತಪ್ಪಿಸಬೇಕು.

** ತುಲಾ ರಾಶಿ :
ಇಂದು ಆತ್ಮವಿಶ್ವಾಸ ಹೆಚ್ಚುತ್ತದೆ. ವ್ಯಾಪಾರದಲ್ಲಿ ಹೆಚ್ಚಳ ಕಂಡುಬರಲಿದೆ. ಓಡಾಟ ಹೆಚ್ಚು ಇರುತ್ತದೆ. ನೀವು ಸ್ನೇಹಿತರಿಂದ ಬೆಂಬಲವನ್ನು ಪಡೆಯುತ್ತೀರಿ. ಲಾಭದ ಅವಕಾಶವಿರುತ್ತದೆ. ಶೈಕ್ಷಣಿಕ ಕಾರ್ಯಕ್ಕಾಗಿ ಪ್ರವಾಸ ಹೋಗಬಹುದು. ಪ್ರಗತಿಯ ಹಾದಿ ಸುಗಮವಾಗಲಿದೆ. ಸಂಬಂಧವನ್ನು ಉಳಿಸಲು ಲೆಕ್ಕವಿಲ್ಲದಷ್ಟು ಭರವಸೆಗಳನ್ನು ನೀಡುವಲ್ಲಿ ನೀವು ಆಯಾಸಗೊಂಡಿದ್ದೀರಿ. ಸಂಬಂಧಗಳಲ್ಲಿ ಕಹಿ ಉಳಿಯುತ್ತದೆ. ಆದ್ದರಿಂದ, ಪರಸ್ಪರ ಬೇರ್ಪಡಿಸುವುದು ಉತ್ತಮ.

** ವೃಶ್ಚಿಕ ರಾಶಿ :
ಇಂದು ನಿಮ್ಮ ಮಾತಿನಲ್ಲಿ ಮಾಧುರ್ಯವಿರುತ್ತದೆ, ಆದರೆ ಮನಸ್ಸು ತೊಂದರೆಗೊಳಗಾಗುತ್ತದೆ. ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಓಡಾಟ ಹೆಚ್ಚು ಇರುತ್ತದೆ. ನಿಮ್ಮ ತಾಯಿಯಿಂದ ನೀವು ಬೆಂಬಲವನ್ನು ಪಡೆಯುತ್ತೀರಿ. ಶೈಕ್ಷಣಿಕ ಕೆಲಸದಲ್ಲಿ ಯಶಸ್ವಿಯಾಗುವಿರಿ. ಅನಾವಶ್ಯಕ ಚಿಂತೆಗಳಿಂದ ಮನಸ್ಸು ಚಂಚಲವಾಗಿರುತ್ತದೆ. ಕೆಲವು ಜನರು ವಿಶೇಷ ವ್ಯಕ್ತಿಯ ಬಗ್ಗೆ ಕಲ್ಪನೆಯಿಂದ ಬೇಸತ್ತಿರಬಹುದು, ಆದರೆ ನಿಮ್ಮ ಕಾಯುವಿಕೆ ಶೀಘ್ರದಲ್ಲೇ ಕೊನೆಗೊಳ್ಳಲಿದೆ.

** ಧನಸ್ಸು ರಾಶಿ :
ಇಂದು ಮನಸ್ಸು ಸಂತೋಷವಾಗಿರುವುದು. ಇನ್ನೂ ತಾಳ್ಮೆಯಿಂದಿರಿ. ಅನಗತ್ಯ ಚರ್ಚೆಗಳನ್ನು ತಪ್ಪಿಸಿ. ನಿಮ್ಮ ಕೆಲಸದಲ್ಲಿ ಅಧಿಕಾರಿಗಳೊಂದಿಗೆ ಸೌಹಾರ್ದತೆಯನ್ನು ಕಾಪಾಡಿಕೊಳ್ಳಿ. ಪ್ರಗತಿಗೆ ಅವಕಾಶಗಳು ಇರಬಹುದು. ಆದಾಯ ಹೆಚ್ಚಲಿದೆ. ನೀವು ವಿದೇಶಿ ಪ್ರವಾಸಕ್ಕೆ ಹೋಗಬಹುದು. ಸಂಬಂಧದಲ್ಲಿ ನಿಮ್ಮ ಕಾಳಜಿಗಳ ಮೇಲೆ ಕೇಂದ್ರೀಕರಿಸಿ.

** ಮಕರ ರಾಶಿ :
ಇಂದು ಮನಸ್ಸು ಚಂಚಲವಾಗಿರುತ್ತದೆ. ತಾಳ್ಮೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ಕುಟುಂಬ ಸಮೇತ ಧಾರ್ಮಿಕ ಸ್ಥಳಗಳಿಗೆ ಹೋಗಬಹುದು. ಕುಟುಂಬದ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ತಂದೆಯಿಂದ ಬೆಂಬಲ ಸಿಗಲಿದೆ. ನಿಮ್ಮ ಪಾಲುದಾರರಿಗೆ ಸ್ಥಳಾವಕಾಶವನ್ನು ನೀಡುವ ಅಗತ್ಯವನ್ನು ಅರ್ಥಮಾಡಿಕೊಳ್ಳಿ ಮತ್ತು ಅವರನ್ನು ನಿರ್ಣಯಿಸಬೇಡಿ. ನಿಮ್ಮ ಸಂಗಾತಿಯೊಂದಿಗೆ ಉತ್ತಮ ಕ್ಷಣಗಳನ್ನು ಆನಂದಿಸಿ.

** ಕುಂಭ ರಾಶಿ :
ಇಂದು ಮನಸ್ಸು ಸಂತೋಷದಿಂದ ಕೂಡಿರುತ್ತದೆ. ಇನ್ನೂ ಸ್ವಯಂ ನಿಯಂತ್ರಣದಲ್ಲಿ ಉಳಿಯಿರಿ. ಸಂಭಾಷಣೆಯಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಿ. ವ್ಯವಹಾರದಲ್ಲಿ ಬದಲಾವಣೆಗೆ ಅವಕಾಶಗಳು ಇರಬಹುದು. ಲಾಭದ ಅವಕಾಶವಿರುತ್ತದೆ. ನೀವು ಸ್ನೇಹಿತರಿಂದ ಬೆಂಬಲವನ್ನು ಪಡೆಯುತ್ತೀರಿ. ನೀವು ಶೈಕ್ಷಣಿಕ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ನೀವು ಇಷ್ಟಪಡುವ ವ್ಯಕ್ತಿಯೊಂದಿಗೆ ಸ್ವಲ್ಪ ಸಂಭಾಷಣೆ ನಡೆಸಿ.

** ಮೀನ ರಾಶಿ :
ಇಂದು ಸ್ವಯಂ ನಿಯಂತ್ರಣದಲ್ಲಿರಿ. ಅತಿಯಾದ ಕೋಪವನ್ನು ತಪ್ಪಿಸಿ. ನಿಮ್ಮ ಕೆಲಸದಲ್ಲಿ ನೀವು ಅಧಿಕಾರಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ಪ್ರಗತಿಯ ಹಾದಿಗಳು ಸುಗಮವಾಗುತ್ತವೆ, ಆದರೆ ಬೇರೆ ಸ್ಥಳಕ್ಕೆ ಹೋಗಬಹುದು. ಖರ್ಚು ಹೆಚ್ಚಾಗಲಿದೆ. ನಿಮ್ಮ ಮಗುವಿನ ಆರೋಗ್ಯವನ್ನು ನೋಡಿಕೊಳ್ಳಿ. ಸಂಬಂಧದಲ್ಲಿ ನೀವು ಸ್ವಲ್ಪ ಅಭದ್ರತೆಯನ್ನು ಅನುಭವಿಸುವಿರಿ. ನಿಮ್ಮ ಸಂಗಾತಿಯ ಸ್ವಭಾವದಲ್ಲಿ ಸ್ವಲ್ಪ ಬದಲಾವಣೆಯಾಗಿರುವುದನ್ನು ನೀವು ಗಮನಿಸಬಹುದು.

Categories
ಉದ್ಯೋಗ ಸುದ್ದಿ

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್
– ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ’ಯಲ್ಲಿ 9,871 ಹುದ್ದೆಗಳ ನೇಮಕಾತಿ.!

NAMMUR EXPRESS NEWS
ಬೆಂಗಳೂರು :
ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿಯನ್ನು ಸರ್ಕಾರ ನೀಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವಂತ ಬರೋಬ್ಬರಿ 9,871 ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ರವರ ಪ್ರಸ್ತಾವನೆಯಲ್ಲಿ ಈ ಕೆಳಕಂಡ ವಿವಿಧ ವೃಂದಗಳ ಅರೆ ವೈದ್ಯಕೀಯ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಆಡಳಿತಾತ್ಮಕ ಅನುಮತಿ ನೀಡುವಂತೆ ಹಾಗೂ ನೇರ ನೇಮಕಾತಿ ಮೂಲಕ ಅನುಮತಿ ನೀಡಿ ಭರ್ತಿ ಮಾಡುವವರೆಗೆ ಅಥವಾ ಒಂದು ವರ್ಷದ ಅವಧಿಗೆ ಸದರಿ ಖಾಲಿ ಹುದ್ದೆಗಳನ್ನು ಗುತ್ತಿಗೆ / ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅನುಮತಿ ನೀಡುವಂತೆ ಕೋರಿರುತ್ತಾರೆ ಎಂದಿದ್ದಾರೆ.

ಉಳಿಕೆ ಮೂಲ ವೃಂದದ ಹುದ್ದೆಗಳ ವಿವರ

ಗ್ರೂಪ್-ಬಿ

ಕ್ಲಿನಿಕಲ್ ಇನ್ ಸ್ಟ್ರಕ್ಟರ್ – 01
ಸಹಾಯಕ ಕೀಟಶಾಸ್ತ್ರಜ್ಞರು – 07
ಮೈಕ್ರೋಬಯಾಲಜಿಸ್ಟ್ – 12
ಕ್ಲಿನಿಕಲ್ ಸೈಕಾಲಜಿಸ್ಟ್ – 06
ಮನೋ ಸಾಮಾಜಿಕ ತಜ್ಞರು ( ಸೈಕಿಯಾಟ್ರಿಕ್ ಸೋಷಿಯಲ್ ವರ್ಕರ್ ) – 07
ಕಿರಿಯ ರಾಸಾಯನ ಶಾಸ್ತ್ರಜ್ಞರು – 15

ಗ್ರೂಪ್-ಸಿ

ಫಾರ್ಮಸಿಸ್ಟ್ ಅಧಿಕಾರಿ – 640
ಶುಶ್ರೂಷಾಧಿಕಾರಿ – 1694
ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ( ಕಿ.ಆ.ಸ – ಮಹಿಳಾ) – 3317
ಆರೋಗ್ಯ ನಿರೀಕ್ಷಣಾಧಿಕಾರಿ ( ಕಿ.ಆ.ಸ) – 2628
ಕಿರಿಯ ವೈದ್ಯಕೀಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ – 356
ಹಿರಿಯ ವೈದ್ಯಕೀಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ -34
ಕಿರಿಯ ವೈದ್ಯಕೀಯ ವಿಕಿರಣ ಶಾಸ್ತ್ರ ಚಿತ್ರಣ ಅಧಿಕಾರಿ – 59
ಹಿರಿಯ ವೈದ್ಯಕೀಯ ವಿಕಿರಣ ಶಾಸ್ತ್ರ ಚಿತ್ರಣ ಅಧಿಕಾರಿ -10
ನೇತ್ರಾಧಿಕಾರಿ – 125
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು – 83
ಒಟ್ಟು ಹುದ್ದೆಗಳು 8994.
ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳ ವಿವರ

ಗ್ರೂಪ್-ಬಿ

ಸಹಾಯಕ ಕೀಟಶಾಸ್ತ್ರಜ್ಞರು – 02
ಮೈಕ್ರೋಬಯಾಲಜಿಸ್ಟ್ – 0
ಕ್ಲಿನಿಕಲ್ ಸೈಕಾಲಜಿಸ್ಟ್ – 02
ಮನೋ ಸಾಮಾಜಿಕ ತಜ್ಞರು ( ಸೈಕಿಯಾಟ್ರಿಕ್ ಸೋಷಿಯಲ್ ವರ್ಕರ್ ) – 0
ಕಿರಿಯ ರಾಸಾಯನ ಶಾಸ್ತ್ರಜ್ಞರು – 03

ಗ್ರೂಪ್-ಸಿ

ಫಾರ್ಮಸಿ ಅಧಿಕಾರಿ – 65
ಶುಶ್ರೂಷಾಧಿಕಾರಿ – 351
ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ( ಕಿ.ಆ.ಸ – ಮಹಿಳೆ) – 133
ಆರೋಗ್ಯ ನಿರೀಕ್ಷಣಾಧಿಕಾರಿ (ಕಿ.ಆ.ಸ) – 221
ಕಿರಿಯ ವೈದ್ಯಕೀಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ – 57
ಹಿರಿಯ ವೈದ್ಯಕೀಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ – 02
ಕಿರಿಯ ವೈದ್ಯಕೀಯ ವಿಕಿರಣ ಶಾಸ್ತ್ರ ಚಿತ್ರಣ ಅಧಿಕಾರಿ – 30
ನೇತ್ರಾಧಿಕಾರಿ – 05
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ -06

ಒಟ್ಟು ಹುದ್ದೆ 877.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಮಂಜೂರಾಗಿ ಖಾಲಿಯಿರುವ 1205 ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ (ANMS) ಮತ್ತು 300 ಆರೋಗ್ಯ ನಿರೀಕ್ಷಣಾಧಿಕಾರಿ (HIOS) ಹುದ್ದೆಗಳನ್ನು ಈ ಕೆಳಕಂಡ ಷರತ್ತುಗಳಿಗೊಳಪಟ್ಟು ನೇರ ನೇಮಕಾತಿ ಮುಖಾಂತ ಭರ್ತಿ ಮಾಡಿಕೊಳ್ಳಲು ಸರ್ಕಾರವು ಅನುಮತಿ ನೀಡಿ ಆದೇಶಿಸಿದ್ದಾರೆ.

ಮುಂದುವರೆದು, ಆಯುಕ್ತರು, ಆಕುಕ ಸೇವೆಗಳು ರವರು ನೇಮಕಾತಿ ಪ್ರಕ್ರಿಯೆಯನ್ನು ನಿಗಧಿತ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳತಕ್ಕದ್ದು ಮತ್ತು ಕೆಳಕಂಡಂತ ವಿಧಿಸಿರುವ ಷರತ್ತುಗಳ ಅನುಪಾಲನಾ ವರದಿಯನ್ನು ಸಲ್ಲಿಸತಕ್ಕದ್ದು ಎಂದು ತಿಳಿಸಿದ್ದಾರೆ.

Categories
ರಾಜ್ಯ

ಟಾಪ್ 3 ನ್ಯೂಸ್

ಟಾಪ್ 3 ನ್ಯೂಸ್
– ಹಾವೇರಿ : ರಾಜ್ಯದಲ್ಲಿ ಮತ್ತೊಂದು ಭೀಕರ ಕಾರು ಅಪಘಾತ
– ಒಂದೇ ಕುಟುಂಬದ ನಾಲ್ವರು ದುರ್ಮರಣ.!
– ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ
– ಕಾಶ್ಮೀರದಲ್ಲಿ ಸೇನಾ ಟ್ರಕ್ ಅಪಘಾತ

ಬೀಜಾಡಿಯ ಯೋಧ ಅನುಪ್ ಪೂಜಾರಿ ಹುತಾತ್ಮ

NAMMUR EXPRESS NEWS
ಹಾವೇರಿ : ಹಾವೇರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನಲ್ಲಿ ಈ ಘಟನೆ ನಡೆದಿದೆ. ಎರಡು ಕಾರುಗಳು ಮುಖಾಮುಖಿ ಡಿಕ್ಕಿ ಹೊಡೆದಿವೆ. ಅಪಘಾತದಲ್ಲಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಹುಬ್ಬಳ್ಳಿ ಕಿಮ್ಸ್ ಆಸ್ಪತೆಯಲ್ಲಿ ಮೃತಪಟ್ಟಿದ್ದಾರೆ. ಹಾವೇರಿ ಜಿಲ್ಲೆಯ ತಡಸ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ.
2 ಕಾರುಗಳ ನಡುವೆ ಪರಸ್ಪರ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಮತ್ತಿಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

– ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ

ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆದ ಪ್ರಕರಣ ಬೆಂಗಳೂರು ನಗರದ ಲಕ್ಷ್ಮೀದೇವಿ ನಗರ ವಾರ್ಡ್ ವ್ಯಾಪ್ತಿಯಲ್ಲಿ ನಡೆದಿದೆ. ಲಗ್ಗೆರೆಯಲ್ಲಿ ಮಾಜಿ ಪ್ರಧಾನಿ ವಾಜಪೇಯಿಯವರ ಹುಟ್ಟುಹಬ್ಬದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಲುವಾಗಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಬೇರೆ ಸಂದರ್ಭದಲ್ಲಿ ಕರೆದರೂ ಪೊಲೀಸರು ಬಾರದಿರುವಾಗ ಇಂದು ಇದ್ದಕ್ಕಿದ್ದಂತೆ ಒಂದಿಡೀ ಪೊಲೀಸ್ ತುಕಡಿ ಬಂದು ನಿಂತದ್ದು, ಪೊಲೀಸರಿಗೆ ಮಾಹಿತಿ ಇದ್ದೇ ಈ ಘಟನೆ ನಡೆದಿದೆ ಎಂದು ಮುನಿರತ್ನ ಹೇಳಿದ್ದಾರೆ. ಕುಸುಮಾ ಅವರನ್ನು ಶಾಸಕಿಯನ್ನಾಗಿ ಮಾಡಲು ಡಿಕೆ ಸುರೇಶ್‌, ಡಿಕೆ ಶಿವಕುಮಾರ್‌ ಅವರ ಕಡೆಯವರಿಂದ ನನ್ನ ಮೇಲೆ ಆಸೀಡ್‌ ದಾಳಿ ನಡೆದಿದೆ ಎಂದು ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಗಂಭೀರ ಆರೋಪ ಮಾಡಿದ್ದಾರೆ.

ಕಾಶ್ಮೀರದಲ್ಲಿ ಸೇನಾ ಟ್ರಕ್ ಅಪಘಾತ
– ಬೀಜಾಡಿಯ ಯೋಧ ಅನುಪ್ ಪೂಜಾರಿ ಹುತಾತ್ಮ

ಕುಂದಾಪುರ: ಕಾಶ್ಮೀರದ ಮೆಂಧರ್ ಎಂಬಲ್ಲಿ ನಡೆದ ಸೇನಾ ಟ್ರಕ್ ಅಪಘಾತದಲ್ಲಿ ಐವರು ಯೋಧರು‌ ಮೃತಪಟ್ಟಿದ್ದು, ಈ ಪೈಕಿ ತಾಲೂಕಿನ ಬೀಜಾಡಿಯ ಅನೂಪ್ ಪೂಜಾರಿ (31)‌ ಅವರು ಕೂಡ ಹುತಾತ್ಮರಾಗಿದ್ದಾರೆ. ಮಂಗಳವಾರ ಸಂಜೆ ಕಾಶ್ಮೀರದ ಪೂಂಚ್ ಜಿಲ್ಲೆಯ ಮೆಂಧರ್ ಗ್ರಾಮದ ಗಡಿ ನಿಯಂತ್ರಣ ರೇಖೆಯ ಬಳಿ ಯೋಧರು ಪ್ರಯಾಣಿಸುತ್ತಿದ್ದ ಟ್ರಕ್ ರಸ್ತೆಯಿಂದ 350 ಅಡಿ ಆಳದ ಕಣಿವೆಗೆ ಉರುಳಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಸೇನಾ ವಾಹನಲ್ಲಿ 10 ಯೋಧರು ಪ್ರಯಾಣಿಸುತ್ತಿದ್ದು, ಈ ಪೈಕಿ 5 ಮಂದಿ ಹುತಾತ್ಮರಾಗಿದ್ದಾರೆ. ಉಳಿದವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರಗೆ ದಾಖಲಿಸಲಾಗಿದೆ. ಹುತಾತ್ಮ ಯೋಧ ಅನೂಪ್ ಪೂಜಾರಿ ಅವರು ಮರಾಠ ಲೈಟ್ ಇನ್ಫೆಂಟ್ರಿ ಬಟಾಲಿಯನ್‌ನಲ್ಲಿ ಸೇವೆ ಕಳೆದ 13 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಬೀಜಾಡಿ ನಿವಾಸಿ ಚಂದು ಪೂಜಾರಿ, ನಾರಾಯಣ ಪೂಜಾರಿ ದಂಪತಿಗಳ ಪುತ್ರರಾದ ಅನುಪ್ ಅವರಿಗೆ ವಿವಾಹವಾಗಿದ್ದು 2 ವರ್ಷದ ಹೆಣ್ಣು ಮಗುವಿದೆ. ಕಳೆದ ತಿಂಗಳು ರಜೆಗೆ ಊರಿಗೆ ಬಂದಿದ್ದ ಅವರು ಡಿ.15 ರಂದು ಕೋಟೇಶ್ವರದಲ್ಲಿ ನಡೆದ ಕೊಡಿ ಹಬ್ಬದಲ್ಲಿ ಪಾಲ್ಘೊಂಡಿದ್ದಲ್ಲದೆ ಮಗಳ ಹುಟ್ಟುಹಬ್ಬವನ್ನು ಆಚರಿಸಿದ್ದರು. ಬಳಿಕ ಸೇವೆಗೆ ಹಿಂದಿರುಗಿದ್ದರು. ಗುರುವಾರ ತೆಕ್ಕಟ್ಟೆಯಿಂದ ಪಾರ್ಥೀವ ಶರೀರವನ್ನು ತೆರೆದ ವಾಹನದಲ್ಲಿ ಕೋಟೇಶ್ವರ ಮೂಲಕವಾಗಿ ಮೆರವಣಿಗೆ ನಡೆಸಿ ಹುಟ್ಟೂರಾದ ಬೀಜಾಡಿಗೆ ಕರೆತಂದು ಸಕಲ ವಿಧಿಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲಾಗುತ್ತದೆ. ಬೀಜಾಡಿ ಪಡುಶಾಲೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ತೆ ಕಲ್ಪಿಸಲಾಗುತ್ತದೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಚರ್ಚ್ ಅಲ್ಲಿ ಇಂದು ಕ್ರಿಸ್ಮಸ್ ಸೌಹಾರ್ದ ಸಂಜೆ

ತೀರ್ಥಹಳ್ಳಿ ಚರ್ಚ್ ಅಲ್ಲಿ ಇಂದು ಕ್ರಿಸ್ಮಸ್ ಸೌಹಾರ್ದ ಸಂಜೆ
– ಎಲ್ಲಾ ಧರ್ಮದ ಶ್ರೀಗಳ ಸಮಾಗಮ: ಶಾಂತಿ ಸಂದೇಶ
– ಸೌಹಾರ್ದ ಸಂಜೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ರಂಗು

NAMMUR EXPRESS NEWS
ತೀರ್ಥಹಳ್ಳಿ: ಕ್ರಿಸ್ತ ಜಯಂತಿ 2024ರ ಪ್ರಯುಕ್ತ ಕ್ರಿಸ್ಮಸ್ ಸೌಹಾರ್ದ ಸಂಜೆಯನ್ನು ಡಿ.25 ಬುಧವಾರ ಸಂಜೆ 5.30ಕ್ಕೆ ಚರ್ಚ್ ಅವರಣ ತೀರ್ಥಹಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫಾದರ್ ವೀರೇಶ್ ವಿಕ್ಟರ್ ಮೊರಾಸ್ ಅವರು ವಹಿಸಲಿದ್ದಾರೆ. ಈ ಕಾರ್ಯಕ್ರಮದ ಸೌಹಾರ್ದ ನುಡಿಯನ್ನು ಕೆಳದಿ ರಾಜಗುರು ಕವಲೆದುರ್ಗ ಮಠದ ಶ್ರೀ ಷ ಬ್ರ ಮರುಳಸಿದ್ದ ಶಿವಾಚಾರ್ಯ ಸ್ವಾಮಿಗಳು ನೆರವೇರಿಸಲಿದ್ದಾರೆ. ಮುಸ್ಲಿಮ್ಸ್ ಎಜುಕೇಷನ್ ಸೊಸೈಟಿ ಇಂದಿರಾ ನಗರದ ಧರ್ಮ ಗುರು ನೌಫಾಲ್ ಬಿಎ ಹಿಮಾಮಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನ ಆರಗ ಜ್ಞಾನೇಂದ್ರ ಮಾನ್ಯ ಶಾಸಕರು, ಅತಿಥಿಗಳಾಗಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರಹಮತುಲ್ಲಾ ಅಸಾದಿ, ರೋಟರಿ ಅಧ್ಯಕ್ಷರಾದ ಅನಿಲ್ ಕುಮಾರ್, ವಂ। ಸಿಸ್ಟರ್ ಮೆರಿಲೈಟ್, ಫಾದರ್ ಮಿಲ್ಟನ್ ಸೋಜಾ, ಓವಿನ್ ಡಿ’ಸೋಜಾ ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದಾರೆ.

ಸೌಹಾರ್ದ ಸಂಜೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ರಂಗು

ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ ಕಾರ್ಯಕ್ರಮಗಳನ್ನು ನೆರವೇರಿಸಲಾಗುತ್ತದೆ. ಆ ಕಾರ್ಯಕ್ರಮದಲ್ಲಿ ದೇಶೀ ನೃತ್ಯಗಳು, ಕೋಲಾಟ , ಬಂಜಾರ, ಹುಲಿಕುಣಿತ, ಬುಡಕಟ್ಟು ಕುಣಿತ ಮತ್ತು ರಂಗ ಗೀತೆಯನ್ನು ಶಿವಕುಮಾರ್ ಮತ್ತು ತಂಡ ಕಿರುನಾಟಕವನ್ನ ‘ಕಾಡಿನ ಕೂಗು’ – ರೋಟರಿ ಸಂಸ್ಥೆ, ತೀರ್ಥಹಳ್ಳಿ ‘ಭಾವ ತೆರೆದ ಜೀವ’ – ಚಿಗುರು ಕಲಾವಿದರು, ತೀರ್ಥಹಳ್ಳಿ ಇವರು ಈ ಕಾರ್ಯಕ್ರಮದ ರಂಗನ್ನ ಮತ್ತಷ್ಟು ಹೆಚ್ಚಲಿದ್ದಾರೆ. ಎಲ್ಲರೂ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋರಲಾಗಿದೆ.

Categories
ಸಿನಿಮಾ

ನಟ ಶಿವಣ್ಣಗೆ ಕಿಡ್ನಿ ಶಸ್ತ್ರಚಿಕಿತ್ಸೆ ಯಶಸ್ವಿ..!

ನಟ ಶಿವಣ್ಣಗೆ ಕಿಡ್ನಿ ಶಸ್ತ್ರಚಿಕಿತ್ಸೆ ಯಶಸ್ವಿ..!
– ಡಿ. 24ರಂದು 4 ರಿಂದ 5 ಗಂಟೆಗಳ ಕಾಲ ಆಪರೇಷನ್
– ವಿಶ್ರಾಂತಿ ಬಳಿಕ ಜನವರಿ 25ರಂದು ಭಾರತಕ್ಕೆ ವಾಪಾಸ್

NAMMUR EXPRESS NEWS
ನಟ ಶಿವರಾಜ್​ಕುಮಾರ್ ಅವರ ಅಭಿಮಾನಿಗಳ ಕೋರಿಕೆ ಈಡೇರಿದೆ. ಅವರ ಸರ್ಜರಿ ಯಶಸ್ವಿಯಾಗಿ ಪೂರ್ಣಗೊಂಡಿದೆ. ಭಾರತೀಯ ಕಾಲಮಾನ ಮಂಗಳವಾರ (ಡಿಸೆಂಬರ್ 24) ಸಂಜೆ 6 ಗಂಟೆಗೆ (ಅಮೆರಿಕದ ಕಾಲ ಮಾನ ಬೆಳಿಗ್ಗೆ 8 ಗಂಟೆಗೆ) ಆಪರೇಷನ್ ಆರಂಭ ಆಯಿತು. 4-5 ಗಂಟೆಗಳ ಕಾಲ ಆಪರೇಷನ್ ನಡೆದಿದ್ದು ಅದು ಯಶಸ್ವಿಯಾಗಿದೆ ಎಂಬ ವಿಚಾರ ಗೊತ್ತಾಗಿದೆ. ಈ ಬಗ್ಗೆ ಆಪ್ತ ಮೂಲಗಳು ಮಾಹಿತಿ ರಿವೀಲ್ ಮಾಡಿವೆ. ಶಿವರಾಜ್​ಕುಮಾರ್ ಮೊದಲಿನಿಂದಲೂ ಪಾಸಿಟಿವ್ ಆಗಿ ಯೋಚಿಸುತ್ತಾ ಬಂದವರು. ಅವರು ಎಲ್ಲವನ್ನೂ ಪಾಸಿಟಿವ್ ಆಗಿ ತೆಗೆದುಕೊಳ್ಳುತ್ತಾರೆ. ಅದೇ ರೀತಿ ಸರ್ಜರಿ ನಡೆಯುತ್ತದೆ ಎಂದಾಗ ಅದನ್ನೂ ಪಾಸಿಟಿವ್ ಆಗಿ ತೆಗೆದುಕೊಂಡರಯ. ಜೋಶ್​ನಲ್ಲಿ ಅಮೆರಿಕ ತೆರಳಿದ ಅವರು ಶಸ್ತಚಿಕಿತ್ಸೆ ಪೂರ್ಣಗೊಳಿಸಿಕೊಂಡಿದ್ದಾರೆ. ಈ ವಿಚಾರ ತಿಳಿದು ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ.

ಹೋಮ-ಹವನ
ಶಿವರಾಜ್​ಕುಮಾರ್ ಅವರು ಬೇಗ ಚೇತರಿಕೆ ಕಾಣಲಿ ಎಂದು ಹೋಮ-ಹವನಗಳು ನಡೆದಿದ್ದವು. ಸಾಕಷ್ಟು ಕಡೆಗಳಲ್ಲಿ ಪೂಜೆ ಪುನಸ್ಕಾರ ಮಾಡಲಾಯಿತು. ಶಿವಣ್ಣನ ಅಭಿಮಾನಿಗಳು ದೇವರ ಮೊರೆ ಹೋದರು. ಈ ಎಲ್ಲ ಪೂಜೆ-ಪುನಸ್ಕಾರ, ಹೋಮ-ಹವನ ಹಾಗೂ ಅಭಿಮಾನಿಗಳ ಪ್ರಾರ್ಥನೆ ಫಲ ಕೊಟ್ಟಿದೆ. ಶಿವರಾಜ್​ಕುಮಾರ್ ಅವರಿಗೆ ಕ್ಯಾನ್ಸರ್ ಇತ್ತು. ಇದಕ್ಕಾಗಿ ಅವರು ಅಮೆರಿಕದ ಫ್ಲೋರಿಡಾದ್ಲಿರುವ ಮಿಯಾಮಿ ಕ್ಯಾನ್ಸರ್ ಇನ್​ಸ್ಟಿಟ್ಯೂಟ್​ನಲ್ಲಿ ಸರ್ಜರಿ ಮಾಡಿಸಿಕೊಂಡರು. ಆರು ಗಂಟೆಗಳ ಕಾಲ ಆಪರೇಷನ್ ನಡೆದಿದೆ. ಡಾ. ಮುರುಗೇಶ್ ನೇತೃತ್ವದಲ್ಲಿ ಈ ಆಪರೇಷನ್ ನಡೆದಿದೆ. 4 ಗಂಟೆಗಳ ಕಾಲ ಆಪರೇಷನ್ ನಡೆದಿದೆ.

ಶಿವರಾಜ್​ಕುಮಾರ್ ಅವರು ಈಗ ನಟನೆಯಿಂದ ದೊಡ್ಡ ಬ್ರೇಕ್ ಪಡೆದಿದ್ದಾರೆ. ಅವರು ಸಿನಿಮಾ ಕೆಲಸಗಳಿಗೆ ಅಲ್ಪವಿರಾಮ ಹಾಕಿ ಸಂಪೂರ್ಣ ಗಮನ ಆರೋಗದ್ಯದ ಮೇಲೆ ಹಾಕಿದ್ದಾರೆ. ಹೋಂ ಬ್ಯಾನರ್​ನಲ್ಲಿ ಮೂಡಿ ಬಂದ ‘ಭೈರತಿ ರಣಗಲ್’ ಚಿತ್ರದ ಕೆಲಸಗಳನ್ನು ಪೂರ್ಣಗೊಳಿಸಿದ ಅವರು, ಇದರ ಪ್ರಚಾರದಲ್ಲಿ ಭಾಗಿ ಆದರು. ಅಲ್ಲಿಯವರೆಗೆ ಶಿವಣ್ಣನಿಗೆ ಅನಾರೋಗ್ಯ ಎಂಬುದಷ್ಟೇ ಸುದ್ದಿ ಇತ್ತು. ಪ್ರಚಾರದ ವೇಳೆ ಅವರು ಈ ವಿಚಾರ ಒಪ್ಪಿಕೊಂಡರು. ಸಂದರ್ಶನದ ಸಂದರ್ಭದಲ್ಲಿ ತಮಗೆ ಅನಾರೋಗ್ಯ ಉಂಟಾಗಿರೋದು ಸತ್ಯ ಎಂದರು. ಅಮೆರಿಕಕ್ಕೆ ಹೋಗುವುದಕ್ಕೂ ಮೊದಲು ತಮಗೆ ಕ್ಯಾನ್ಸರ್ ಎಂಬ ವಿಚಾರ ರಿವೀಲ್ ಮಾಡಿದರು. ಈಗ ಅವರ ನಟನೆಯ ‘45’ ಸಿನಿಮಾ ಕೆಲಸಗಳು ಪೂರ್ಣಗೊಂಡಿವೆ. ಈ ಚಿತ್ರ 2025ರಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಇದೆ. ಈಗ ಅವರು ಕೆಲ ತಿಂಗಳು ಬ್ರೇಕ್ ಪಡೆಯಲಿದ್ದು ಆ ಬಳಿಕ ನಟನೆಗೆ ಮರಳಲಿದ್ದಾರೆ.

ಅಮೆರಿಕದ ಫ್ಲೋರಿಡಾದಲ್ಲಿರುವ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ಆಸ್ಪತ್ರೆಗೆ ದಾಖಲಾಗಿರುವ ಅವರು ಶಸ್ತ್ರಚಿಕಿತ್ಸೆಯ ನಂತರ ಅವರು ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ.30 ದಿನ ವಿಶ್ರಾಂತಿ ಪಡೆದು ನಂತರ ಅವರು ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಶಿವಣ್ಣ ಅವರಿಗೆ ಮೂತ್ರ ಪಿಂಡ ಕ್ಯಾನ್ಸರ್ ಇದೆ.