Categories
Uncategorized

ರಾಷ್ಟ್ರ ಮಟ್ಟಕ್ಕೆ ವಾಗ್ದೇವಿ ಶಿಕ್ಷಣ ಸಂಸ್ಥೆಯ ಮಿಥಾಲಿ! – ಶಿಕ್ಷಣದ ಜತೆಗೆ ಕ್ರೀಡೆಯಲ್ಲೂ ಮಹಾನ್ ಸಾಧನೆ ಮಾಡುತ್ತಿರುವ ಸಂಸ್ಥೆ – ಸಾಧಕ ವಿದ್ಯಾರ್ಥಿನಿಗೆ ಆಡಳಿತ ಮಂಡಳಿಯ ಅಭಿನಂದನೆ

ತೀರ್ಥಹಳ್ಳಿ: ರಾಷ್ಟ್ರ ಮಟ್ಟಕ್ಕೆ ವಾಗ್ದೇವಿ ಶಿಕ್ಷಣ ಸಂಸ್ಥೆಯ ಮಿಥಾಲಿ ಆಯ್ಕೆ ಆಗಿದ್ದು ವಾಗ್ದೇವಿ ಶಿಕ್ಷಣ ಸಂಸ್ಥೆ ರಾಜ್ಯ ಮಟ್ಟದಲ್ಲಿ ಮತ್ತೆ ಸಾಧನೆ ಮಾಡಿದೆ.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಿಸಲಾದ 17 ವರ್ಷ ವಯೋಮಿತಿಯೊಳಗಿನ ಬಾಲಕ ಮತ್ತು ಬಾಲಕಿಯರ ರಾಜ್ಯಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ತೀರ್ಥಹಳ್ಳಿಯ ವಾಗ್ದೇವಿ ಶಿಕ್ಷಣ ಸಂಸ್ಥೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ಮಿಥಾಲಿ ಟಿ.ಎಸ್ ಅವರು ಭಾಗವಹಿಸಿದ್ದು, ಗುಂಡು ಎಸೆತ ವಿಭಾಗದಲ್ಲಿ 12.05 ಮೀಟರ್ ದೂರ ಗುಂಡು ಎಸೆಯುವ ಮೂಲಕ, ಉತ್ತಮ ಪ್ರದರ್ಶನ ನೀಡಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಮುಂದಿನ ಸ್ಪರ್ಧೆಯು ಮಧ್ಯಪ್ರದೇಶದ ಶಿವಪುರದಲ್ಲಿ ನಡೆಯಲಿದ್ದು, ಮಿಥಾಲಿಟಿ.ಎಸ್. ಅವರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.
ತಗಡವಳ್ಳಿಯ ಶ್ರೀಮತಿ ಗೀತಾ ಮತ್ತು ಶ್ರೀಶಶಿನಾಥ್ ಅವರ ದಂಪತಿಗಳ ಮಗಳಾದ ಮಿಥಾಲಿ ಟಿ.ಎಸ್. ಅವರು ಶೈಕ್ಷಣಿಕವಾಗಿ ಕೂಡ ಮುಂಚೂಣಿಯಲ್ಲಿರುವುದು ಗಮನಾರ್ಹ. ವಿದ್ಯಾರ್ಥಿನಿಯ ಸಾಧನೆಗೆ ವಾಗ್ದೇವಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಸದಸ್ಯರು, ಶಿಕ್ಷಕ ವೃಂದ ಮತ್ತು ಪೋಷಕರು ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದು, ರಾಷ್ಟ್ರಮಟ್ಟದಲ್ಲಿಯೂ ಕೂಡ ಚಿನ್ನದ ಪದಕವನ್ನು ತನ್ನ ಕೊರಳಿಗೇರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.