Categories
ಪ್ರಶಸ್ತಿ ರಾಷ್ಟ್ರೀಯ ವಾರ್ತೆ

ಭಾರತಕ್ಕೆ ಚಿನ್ನ ಗೆದ್ದ ಕಾರ್ಕಳದ ಹುಡುಗಿ!

ಭಾರತಕ್ಕೆ ಚಿನ್ನ ಗೆದ್ದ ಕಾರ್ಕಳದ ಹುಡುಗಿ!

– ಕಾರ್ಕಳದ ಅಕ್ಷತಾ ಪೂಜಾರಿ ಬೋಳ ಪವರ್‌ ಲಿಫ್ಟಿಂಗ್‌ನಲ್ಲಿ ಸಾಧನೆ
– 52 ಕೆಜಿ ಪವರ್‌ ಲಿಫ್ಟಿಂಗ್‌ನಲ್ಲಿ ಸ್ಪರ್ಧಿಸಿದ್ದ ಅಕ್ಷತಾ ಪೂಜಾರಿ

NAMMUR EXPRESS NEWS

ಕಾರ್ಕಳ: ಕಾರ್ಕಳದ ಅಕ್ಷತಾ ಪೂಜಾರಿ ಬೋಳ ಪವರ್‌ ಲಿಫ್ಟಿಂಗ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ.

ದಕ್ಷಿಣ ಆಫ್ರಿಕಾದ ಪೊಟೆಶೆಫಮ್‌ನಲ್ಲಿ ನಡೆದ ಏಷ್ಯಾ-ಪೆಸಿಫಿಕ್‌ ಆಫ್ರಿಕನ್‌ ಪವರ್‌ ಲಿಫ್ಟಿಂಗ್‌ ಮತ್ತು ಬೆಂಚ್‌ಪ್ರೆಸ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿರುವ ಕಾರ್ಕಳದ ಅಕ್ಷತಾ ಪೂಜಾರಿ ಬೋಳ ಅವರು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

ಸೀನಿಯಸ್‌ ವಿಭಾಗದಲ್ಲಿ 52 ಕೆಜಿ ಪವರ್‌ ಲಿಫ್ಟಿಂಗ್‌ನಲ್ಲಿ ಸ್ಪರ್ಧಿಸಿದ್ದ ಅಕ್ಷತಾ ಪೂಜಾರಿ ಈ ಸಾಧನೆ ಮಾಡಿದ್ದಾರೆ.ಅಕ್ಷತಾ ಅವರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೋಳ ಗ್ರಾಮದವರು. ಪವರ್‌ ಲಿಫ್ಟಿಂಗ್‌ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಅಕ್ಷತಾ ಪೂಜಾರಿ ಅವರು ಹಲವಾರು ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಅವರ ಈ ಸಾಧನೆಗೆ ಈಗಾಗಲೇ ಏಕಲವ್ಯ ಪ್ರಶಸ್ತಿ ಕೂಡ ಲಭಿಸಿದೆ.

Categories
ಪ್ರಶಸ್ತಿ

ಶಿರಸಿ ಮೂಲದ ಯುವತಿ ಈಗ ವಿಶ್ವ ಸುಂದರಿ!

ಶಿರಸಿ ಮೂಲದ ಯುವತಿ ಈಗ ವಿಶ್ವ ಸುಂದರಿ!

– ಡಾ.ಶೃತಿ ಹೆಗಡೆಗೆ ವಿಶ್ವ ಸುಂದರಿ-2024 ಕಿರೀಟ
– ಹುಬ್ಬಳ್ಳಿಯಲ್ಲೇ ಓದು, ತುಮಕೂರರಲ್ಲಿ ವೈದ್ಯೆ

NAMMUR EXPRESS NEWS
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮುಂಡಿಗೆಸರ ಮೂಲದ ಯುವತಿಯೊಬ್ಬಳು ಇತ್ತೀಚಿಗೆ ಅಮೆರಿಕದಲ್ಲಿ ಜರುಗಿದ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. ಮುಂಡಿಗೆಸರ ಅಜ್ಜೊರಮನೆ ಕುಟುಂಬದವರಾದ ಹುಬ್ಬಳ್ಳಿಯಲ್ಲಿ ನೆಲೆಸಿದ ಕೃಷ್ಣ ಹೆಗಡೆ, ಕಮಲಾ ದಂಪತಿಯ ಪುತ್ರಿ ಶೃತಿ ಹೆಗಡೆ ಅಮೆರಿಕದಲ್ಲಿ ವಿಶ್ವ ಸುಂದರಿಯಾಗಿ ಹೊರಹೊಮ್ಮಿದ್ದಾರೆ. ಈಕೆ ಈ ಮೊದಲು 2018 ರಲ್ಲಿ ಮಿಸ್ ಕರ್ನಾಟಕ ರನ್ನರ್ ಅಪ್, ಮಿಸ್ ಸೌತ್ ಇಂಡಿಯಾ ವಿಜೇತೆಯಾಗಿದ್ದರು. 2023 ರಲ್ಲಿ ಮಿಸ್ ಏಷ್ಯಾ ಇಂಟರ್ ನ್ಯಾಷನಲ್ ಇಂಡಿಯಾ ಪ್ರಶಸ್ತಿ ಗೆದ್ದಿದ್ದ ಈಕೆ, ಈಗ ಅಮೆರಿಕದಲ್ಲಿ ನಡೆದ ಸ್ಪರ್ಧೆಯಲ್ಲಿ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಅಮೆರಿಕದ ಫ್ಲೋರಿಡಾದಲ್ಲಿ ಕಳೆದ ಜೂ.6 ರಿಂದ 10ರ ವರೆಗೆ ಆಯೋಜಿತವಾಗಿದ್ದ ಸ್ಪರ್ಧೆಯಲ್ಲಿ ಭಾರತ ಸೇರಿದಂತೆ ಒಟ್ಟು 40 ದೇಶಗಳ ಸುಂದರಿಯವರು ಪೈಪೋಟಿಯಲ್ಲಿದ್ದರು. ರಾಷ್ಟ್ರೀಯ ಉಡುಗೆ, ಈಜು ಉಡುಗೆ, ಪ್ರಶ್ನೋತ್ತರ, ವಯಕ್ತಿಕ ಸಂದರ್ಶನ ಸೇರಿ ಹಲವು ಸುತ್ತುಗಳಲ್ಲಿ ಸ್ಪರ್ಧೆ ಸಾಗಿತ್ತು. ಎಲ್ಲದರಲ್ಲೂ ಉತ್ತಮ ಪ್ರದರ್ಶನ ನೀಡಿದ ಶೃತಿ ಹೆಗಡೆ ಗೆಲುವು ಸಾಧಿಸಿದ್ದಾರೆ.‌

ಹುಬ್ಬಳ್ಳಿಯಲ್ಲಿಯೇ ಎಂಬಿಬಿಎಸ್ ಪೂರೈಸಿರುವ ಡಾ.ಶೃತಿ ಹೆಗಡೆ, ಚರ್ಮ ರೋಗ ತಜ್ಞೆಯಾಗುವ ಹಂಬಲದಿಂದ‌ ತುಮಕೂರಿನಲ್ಲಿ ಎಮ್.ಡಿ. ಅಧ್ಯಯನ ನಡೆಸುತ್ತಿದ್ದಾರೆ. ಈಕೆ ಭರತನಾಟ್ಯ ಕಲಾವಿದೆಯೂ ಆಗಿದ್ದು, ದುಬೈ, ಮಾಲ್ಡೀವ್ಸ್‌, ಭೂತಾನ್ ಮುಂತಾದ ದೇಶಗಳಲ್ಲಿ ಪ್ರದರ್ಶನ ನೀಡಿದ್ದಾಳೆ. ಕೆಲವು ಧಾರವಾಹಿ, ಕನ್ನಡ ಚಲನಚಿತ್ರ, ವೆಬ್ ಸಿರೀಸ್ ನಲ್ಲಿ ನಟಿಸಿದ್ದಾಳೆ.

Categories
ಪ್ರಶಸ್ತಿ

ವಿಧಿತ ಗೌಡಗೆ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ

ವಿಧಿತ ಗೌಡಗೆ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ

– ಸಹ್ಯಾದ್ರಿ ಶಾಲೆ ವಿದ್ಯಾರ್ಥಿನಿ, ಪತ್ರಕರ್ತ ದಂಪತಿ ಅನಿಲ್, ಭಾಗ್ಯ ಪುತ್ರಿ
– ರಾಜ್ಯದ ಅನೇಕ ಸಚಿವರಿಂದ ಸಾಧಕ ವಿದ್ಯಾರ್ಥಿನಿಗೆ ಸನ್ಮಾನ

NAMMUR EXPRESS NEWS
ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಬೆಂಗಳೂರು ವತಿಯಿಂದ ಹಾವೇರಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಶಿವಮೊಗ್ಗ ಜಿಲ್ಲೆಯ ಬೆಳಗಿನ ವಿಧಾತ ದಿನಪತ್ರಿಕೆಯ ಸಂಪಾದಕರು ಮತ್ತು ಮಾಲೀಕರಾದ ಅನಿಲ್ ಮತ್ತು ಭಾಗ್ಯ ಅನಿಲ್ ಅವರ ಪುತ್ರಿ ತೀರ್ಥಹಳ್ಳಿಯ ಸಹ್ಯಾದ್ರಿ ವಿದ್ಯಾಸಂಸ್ಥೆಯಲ್ಲಿ 2023-24 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.96.83 ಅಂಕ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ಶಾಲೆಗೆ ಮೊದಲಿಗಳಾದ ವಿಧಿತ ಗೌಡಗೆ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ಎಕ್ಸೆಲ್ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿಧಿತ ಗೌಡ.ಟಿ.ಎ. ಇವರನ್ನು ಶ್ಲಾಘಿಸಿ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು. ಮಾಜಿ ಮುಖ್ಯಮಂತ್ರಿಗಳೂ ಹಾಗೂ ಸಂಸದರಾದ ಬಸವರಾಜ್ ಬೊಮ್ಮಾಯಿ,ಜವಳಿ ಮತ್ತು ಕಬ್ಬು ಅಭಿವೃದ್ಧಿ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದಂತಹ ಶಿವಾನಂದ ಪಾಟೀಲ್, ಕಾನೂನು ಮತ್ತು ಸಂಸದೀಯ ಹಾಗೂ ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ.ಪಾಟೀಲ್, ಕರ್ನಾಟಕ ವಿಧಾನ ಸಭೆಯ ಉಪಸಭಾಧ್ಯಕ್ಷರಾದ ರುದ್ರಪ್ಪ ಮಾ.ಲಮಾಣಿ , ವಿಧಾನ ಪರಿಷತ್‌ ಮುಖ್ಯ ಸಚೇತಕರಾದ ಸಲೀಂ ಅಹಮದ್, ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಸೇರಿದಂತೆ ಹಾನಗಲ್ ಶಾಸಕ ಶ್ರೀನಿವಾಸ ಮಾನೆ,ಬ್ಯಾಡಗಿ ಶಾಸಕ ಬಸವರಾಜ.ನೀ.ಶಿವಣ್ಣನವರ,ಹಿರೇಕೇರೂರು ಶಾಸಕ ಯು.ಬಿ.ಬಣಕರ್,ರಾಣೆಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ,ಜಿಲ್ಲಾಧಿಜಾರಿಗಳಾದ ರಘುನಂದನ್ ಮೂರ್ತಿ, ಪೊಲೀಸ್ ವರಿಷ್ಠಾಧಿಕಾರಿಗಳಾದ ಅಂಶುಕುಮಾರ್ ಉಪಸ್ಥಿತರಿದ್ದರು.

Categories
ಪ್ರಶಸ್ತಿ ಬೆಂಗಳೂರು ಮಲ್ನಾಡ್

ಕುಂಟುವಳ್ಳಿ ವಿಶ್ವನಾಥ್, ಬೇಗಾನೆ ವಿಕಾಸ್ ಅವರಿಗೆ ಪ್ರಶಸ್ತಿ ಗೌರವ

ಕುಂಟುವಳ್ಳಿ ವಿಶ್ವನಾಥ್, ಬೇಗಾನೆ ವಿಕಾಸ್ ಅವರಿಗೆ ಪ್ರಶಸ್ತಿ ಗೌರವ

– ವಿಶ್ವನಾಥ್ ಅವರಿಗೆ ಉದ್ಯೋಗ ರತ್ನ ಆವಾರ್ಡ್!
– ವಿಕಾಸ್ ಅವರಿಗೆ ಅಚೀವರ್‌ ಆಫ್‌ ಕರ್ನಾಟಕ ಪ್ರಶಸ್ತಿ
– ಇಬ್ಬರು ಯುವ ಸಾಧಕರರಿಗೆ ಅಭಿನಂದನೆಗಳು

NAMMUR EXPRESS NEWS
ಬೆಂಗಳೂರಿನಲ್ಲಿ ಮೀಡಿಯಾ ಹೌಸ್ ವತಿಯಿಂದ ಮಲೆನಾಡಿನ ಹೆಮ್ಮೆಯ ವಿ.ಟೆಕ್ ಸಂಸ್ಥೆಯ ಮುಖ್ಯಸ್ಥರಾದ ಕುಂಟುವಳ್ಳಿ ವಿಶ್ವನಾಥ್ ಅವರಿಗೆ ಶನಿವಾರ ಉದ್ಯೋಗ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರಿಂದ ಕುಂಟುವಳ್ಳಿ ವಿಶ್ವನಾಥ್ ಅವರು ಪ್ರಶಸ್ತಿ ಸ್ವೀಕರಿಸಿದರು.
ಉದ್ಯೋಗ ರತ್ನ ಪ್ರಶಸ್ತಿ ಪಡೆದ ಕುಂಟುವಳ್ಳಿ ವಿಶ್ವನಾಥ್ ಅವರಿಗೆ ವಿ ಟೆಕ್ ಇಂಜಿನಿಯರ್ಸ್ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ. ಈಗಾಗಲೇ ನೂರಾರು ಪ್ರಶಸ್ತಿಗಳನ್ನು ಪಡೆದ ಮಲೆನಾಡ ಸಾಧಕನಿಗೆ ನಮ್ಮೂರ್ ಎಕ್ಸ್ ಪ್ರೆಸ್ ಕೂಡ ಶುಭಾಶಯ ಸಲ್ಲಿಸಿದೆ.

ಅಚೀವರ್‌ ಆಫ್‌ ಕರ್ನಾಟಕ ಪ್ರಶಸ್ತಿ ಪಡೆದ ವಿಕಾಸ್‌ ಬೇಗಾನೆ..!

ವಿಜಯ ಕರ್ನಾಟಕ ಪತ್ರಿಕೆಯ ಅಚೀವರ್‌ ಆಫ್‌ ಕರ್ನಾಟಕ ಪ್ರಶಸ್ತಿಯನ್ನು ಕೊಪ್ಪದ ಯುವ ಉದ್ಯಮಿ ವಿಕಾಸ್‌ ಬೇಗಾನೆ ಪಡೆದುಕೊಂಡಿದ್ದಾರೆ.
ಮಲೆನಾಡಿನ ಊರುಗಳಲ್ಲಿ ದೈರ್ಯದಿಂದ ಮತ್ತು ಶ್ರಮದಿಂದ ಉದ್ಯಮಶೀಲತೆಯನ್ನು ಬೆಳೆಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಬೆಂಗಳೂರಿನ ತಾಜ್‌ ಹೋಟೇಲಿನಲ್ಲಿ ನಡೆದ ಸುಂದರ ಸಮಾರಂಭದಲ್ಲಿ ಸಚಿವ ಈಶ್ವರ್ ಖಂಡ್ರೆ ಹಾಗು ನಟಿ ತಾರಾ ಅವರು ಪ್ರಶಸ್ತಿ ನೀಡಿ ಅಭಿನಂದಿಸಿದರು. ವಿಜಯ ಕರ್ನಾಟಕ ಹಾಗು ಬೆಂಗಳೂರು ಮಿರರ್ ಸಿಇಓ ದೀಪಕ್ ಸಲುಜಾ ಹಾಗು ವಿಜಯ ಕರ್ನಾಟಕ ಪ್ರಧಾನ ಸಂಪಾದಕ ಸುದರ್ಶನ್ ಚನ್ನಂಗಿಹಳ್ಳಿ ಇದ್ದರು. ಈ ಪ್ರಶಸ್ತಿ ಪಡೆದ ಇನ್ನೋರ್ವ ಸಾಧಕರೂ ಆದ ನಾಪದ ಮುದ್ದಾಪ್ಪ ಇದ್ದರು