Categories
ಕರಾವಳಿ ಕಲಬುರಗಿ ಕಾರ್ಕಳ ಕೊಪ್ಪ ಚಿಕ್ಕಮಗಳೂರು ಜಿಲ್ಲಾ ವಾರ್ತೆ ತೀರ್ಥಹಳ್ಳಿ ಬೆಂಗಳೂರು ಮಂಗಳೂರು ಮಂಡ್ಯ ಶಿಕ್ಷಣ ಶಿವಮೊಗ್ಗ ಹುಬ್ಬಳ್ಳಿ

ಸಿಇಟಿ ಫಲಿತಾಂಶ: ಕ್ರಿಯೇಟಿವ್‌ ಕಾಲೇಜು ಬೆಸ್ಟ್!

ಕಾರ್ಕಳದ ಕ್ರಿಯೇಟಿವ್ ಕಾಲೇಜು ದ್ವಿತೀಯ ವರ್ಷವೂ ಅತ್ಯುತ್ತಮ ಸಾಧನೆ

  • ಇಂಜಿನಿಯರಿಂಗ್, ಕೃಷಿ ವಿಜ್ಞಾನದಲ್ಲಿ ರಾಜ್ಯಕ್ಕೆ ಹಲವು ರ‍್ಯಾಂಕ್‌
  • ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ ಅಭಿನಂದನೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೇ 2023 ರಲ್ಲಿ ನಡೆಸಿದ ವಿವಿಧ ವೃತ್ತಿಪರ ಕೋರ್ಸ್‌ಗಳ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಗಳಿಸಿ ರಾಜ್ಯದ ವಿವಿಧ ಪ್ರತಿಷ್ಠಿತ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅರ್ಹರಾಗಿದ್ದಾರೆ.

ಜಾಗೃತಿ ಕೆ.ಪಿ ಕೃಷಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 17ನೇ ರ‍್ಯಾಂಕ್‌, ಪಶು ವೈದ್ಯಕೀಯದಲ್ಲಿ 107ನೇ ರ‍್ಯಾಂಕ್‌, ಬಿ. ಎನ್‌ ವೈ ಎಸ್‌ ನಲ್ಲಿ 53 ನೇ ರ‍್ಯಾಂಕ್‌ ಹಾಗೂ ಇಂಜಿನಿಯರಿಂಗ್‌ ವಿಭಾಗದಲ್ಲಿ 112 ನೇ ರ‍್ಯಾಂಕ್‌ ಪಡೆದಿದ್ದಾರೆ. ಇಂಜಿನಿಯರಿಂಗ್‌ ವಿಭಾಗದಲ್ಲಿ ರಾಜ್ಯಕ್ಕೆ ಅಭಯ್‌ ಎಸ್‌ ಎಸ್‌ 99ನೇ ರ‍್ಯಾಂಕ್‌, ಆದಿತ್ಯ ಹೊಳ್ಳ 201 ನೇ ರ‍್ಯಾಂಕ್‌, ಪ್ರಣವ್‌ ಪಿ ಸಂಜಿ 294 ನೇ ರ‍್ಯಾಂಕ್‌, ಕಾರ್ತಿಕ್‌ ಕೃಷ್ಣಮೂರ್ತಿ ಹೆಗಡೆ 492 ನೇ ರ‍್ಯಾಂಕ್‌, ಉದ್ಭವ್‌ ಎಂ ಆರ್‌ 843 ನೇ ರ‍್ಯಾಂಕ್‌, ಸಾತ್ವಿಕ್‌ ಎಸ್‌ ಶೆಟ್ಟಿ 920 ನೇ ರ‍್ಯಾಂಕ್‌ ಗಳಿಸಿದ್ದಾರೆ.

ಬಿ.ಎಸ್ಸಿ ಅಗ್ರಿಕಲ್ಚರ್‌ ವಿಭಾಗದಲ್ಲಿ ಸಾತ್ವಿಕ್‌ ಎಸ್‌ ಶೆಟ್ಟಿ 237, ಉದ್ಭವ್‌ ಎಂ ಆರ್‌ 242, ಶ್ರೇಯಸ್‌ ಎಸ್‌ ಚಿಕಾಲೆ 333, ಸಾಕ್ಷಿತ್‌ ಶೆಟ್ಟಿ, 457 ನೇ ರ‍್ಯಾಂಕ್‌ ಪಡೆದಿದ್ದಾರೆ. ಪಶು ವೈದ್ಯಕೀಯ ವಿಭಾಗದಲ್ಲಿ ಉದ್ಭವ್‌ ಎಂ ಆರ್‌ 298 ನೇ ರ‍್ಯಾಂಕ್‌ ಹಾಗೂ ಬಿ. ಎನ್‌ ವೈ ಎಸ್‌ ನಲ್ಲಿ 243 ನೇ ರ‍್ಯಾಂಕ್‌, ಪಶುವೈದ್ಯಕೀಯ ವಿಭಾಗದಲ್ಲಿ ಸಾತ್ವಿಕ್‌ ಎಸ್‌ ಶೆಟ್ಟಿ 407 ನೇ ರ‍್ಯಾಂಕ್‌ ಮತ್ತು ಬಿ. ಎನ್‌ ವೈ ಎಸ್‌ ನಲ್ಲಿ 531 ನೇ ರ‍್ಯಾಂಕ್‌ ಗಳಿಸಿದ್ದಾರೆ.

ಎಲ್ಲಾ ವಿಭಾಗಗಳನ್ನು ಸೇರಿ 1000 ರ‍್ಯಾಂಕ್‌ ಒಳಗೆ 54 ವಿದ್ಯಾರ್ಥಿಗಳು, 2000 ರ‍್ಯಾಂಕ್‌ ಒಳಗೆ 112 ವಿದ್ಯಾರ್ಥಿಗಳು, 5000 ರ‍್ಯಾಂಕ್‌ ಒಳಗೆ 203 ವಿದ್ಯಾರ್ಥಿಗಳು ರ‍್ಯಾಂಕ್‌ಗಳನ್ನು ಗಳಿಸುವುದರ ಮೂಲಕ ಅದ್ಭುತ ಸಾಧನೆ ಮಾಡಿದ್ದಾರೆ.

ದ್ವಿತೀಯ ಪಿಯುಸಿ, ನೀಟ್ ಅಲ್ಲೂ ಸಾಧನೆ

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 100 ಶೇಕಡಾ ಫಲಿತಾಂಶದೊಂದಿಗೆ ನೀಟ್‌ (NEET) ಪರೀಕ್ಷೆಯಲ್ಲೂ ಉತ್ತಮ ಸಾಧನೆ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ನೀಟ್ ಪರೀಕ್ಷೆಯಲ್ಲೂ ಅನೇಕ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ರ‍್ಯಾಂಕ್‌ ಗಳಿಸಿದ್ದಾರೆ. ವಿದ್ಯಾರ್ಥಿಗಳ ಈ ಅತ್ಯುತ್ತಮ ಸಾಧನೆಯನ್ನು ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಹೆತ್ತವರು, ಉಪನ್ಯಾಸಕ ವರ್ಗದವರು ಹಾಗೂ ಸಿಇಟಿ ಸಂಯೋಜಕರಾದ ಸುಜಯ್‌ ಬಿ.ಟಿ ಸಂತಸ ವ್ಯಕ್ತ ಪಡಿಸಿ ಅಭಿನಂದಿಸಿದ್ದಾರೆ.

Categories
ಕರಾವಳಿ ಕಾರ್ಕಳ ಕೊಪ್ಪ ಚಿಕ್ಕಮಗಳೂರು ತೀರ್ಥಹಳ್ಳಿ ದಾವಣಗೆರೆ ಬೆಂಗಳೂರು ಮಂಗಳೂರು ಮಂಡ್ಯ ಮಲ್ನಾಡ್ ರಾಜ್ಯ ಶಿಕ್ಷಣ ಶಿವಮೊಗ್ಗ ಹುಬ್ಬಳ್ಳಿ

ನೀಟ್‌ ಫಲಿತಾಂಶ ಪ್ರಕಟ, ಕ್ರಿಯೇಟಿವ್‌ನ ಜಾಗೃತಿ ಕೆ ಪಿ ಗೆ ಆಲ್‌ ಇಂಡಿಯಾ 23 ನೇ ರ‍್ಯಾಂಕ್‌

  • ಆರಂಭವಾದ ಮೊದಲ ವರ್ಷದಿಂದಲೂ ಕ್ರಿಯೇಟಿವ್ ನ ಅಮೋಘ ಸಾಧನೆ
  • ಅತೀ ಹೆಚ್ಚು ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣಕ್ಕೆ ಆಯ್ಕೆ

ಕಾರ್ಕಳ :

ರಾಷ್ಟ್ರೀಯ ಪರೀಕ್ಷಾ ಮಂಡಳಿ ನಡೆಸಿದ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಂಸ್ಥೆ ಪ್ರಾರಂಭವಾದ ದ್ವಿತೀಯ ವರ್ಷದಲ್ಲೇ ಅತ್ಯುತ್ತಮ ಫಲಿತಾಂಶ ಗಳಿಸಿದ್ದಾರೆ. ಆಲ್‌ ಇಂಡಿಯಾ ರ‍್ಯಾಂಕಿಂಗ್‌ನಲ್ಲಿ ಕುಮಾರಿ ಜಾಗೃತಿ ಕೆ ಪಿ 661 ಅಂಕಗಳೊಂದಿಗೆ ಕೆಟೆಗರಿಯಲ್ಲಿ 23 ನೇ ರ‍್ಯಾಂಕ್‌, ಉದ್ಭವ್‌ ಎಂ ಆರ್‌ 625 ಅಂಕಗಳೊಂದಿಗೆ ಕೆಟೆಗರಿಯಲ್ಲಿ 72 ನೇ ರ‍್ಯಾಂಕ್‌ ಗಳಿಸಿದ್ದಾರೆ. ಹಾಗೆಯೇ ಸಂಸ್ಥೆಯ ವಿದ್ಯಾರ್ಥಿಗಳಾದ ತನುಶ್ರೀ ಕೆ ಎನ್‌ 625, ಶ್ರೇಯಸ್‌ ಎಸ್‌ ಚಿಕಾಲೇ 612, ಸಾತ್ವಿಕ್‌ ಎಸ್‌ ಶೆಟ್ಟಿ 609, ಚಂದನ ಹೆಚ್‌ ಎಂ 605, ಸಾಕ್ಷಿತ್‌ ಶೆಟ್ಟಿ 604, ಸ್ವೀಕೃತಿ ಶೆಟ್ಟಿ 596, ಗೌರಿ ಸಿ ಸಂಕೊಲ್‌ 595, ಮನೋಜ ಪಾಲನ್ಕರ್‌ 592,ಪ್ರೀತಮ್ ಎಸ್ ಜಿ 584, ಪ್ರಶಿನ್‌ ಶೆಟ್ಟಿ 578,ಚಮನ್ ಜಿ 576, ಜ್ಞಾನದೀಪ್‌ ಕೆ ಆರ್‌ 555, ಸಾನ್ವಿ ಎಂ ಆರ್‌ 548, ಶ್ರೀಗಂಗಾ 547, ಜೀವನ್‌ ಎ 545, ನೇಹಾ ಬಿ ಜಿ 543, ಮಿಂಚು ಪಿ ಆರ್‌ 535, ಅವಿನ್‌ ಫ್ರಾನ್ಸೀಸ್‌ ಡಿಸೋಜಾ 531, ಅಭಯ್‌ ಕೆ ಆರ್‌ 525, ಶ್ರೇಯಸ್‌ ಎಸ್‌ ಶೆಟ್ಟಿ 521,ಸುಹಾಸ್ ಜಿ 520, ಆದಿತ್ಯ ಮಹೇಶ್‌ ಶೇಟ್‌ 517, ಭರತ್‌ ವಿ 516, ಪ್ರವೀಣ್‌ ಆರ್ ಎಮ್ಮಿ 515 ,ಅಭಿನವ್ ಹೆಚ್ ಬಿ 505 ಅಂಕಗಳಿಸಿ ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಮೆಡಿಕಲ್‌ ಸೀಟ್‌ ಪಡೆದುಕೊಳ್ಳಲು ಅರ್ಹರಾಗಿದ್ದಾರೆ.

ಸುಮಾರು 27 ವಿದ್ಯಾರ್ಥಿಗಳು 500 ಕ್ಕಿಂತ ಅಧಿಕ ಅಂಕ, 70 ವಿದ್ಯಾರ್ಥಿಗಳು 400 ಕ್ಕಿಂತ ಅಧಿಕ ಅಂಕ, 110 ವಿದ್ಯಾರ್ಥಿಗಳು 300 ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ. ಪರೀಕ್ಷೆಗೆ ಕುಳಿತ 209 ವಿದ್ಯಾರ್ಥಿಗಳು ನೀಟ್ ಅರ್ಹತೆ ಪಡೆದುಕೊಂಡಿದ್ದು ಮುಂದಿನ ಕೌನ್ಸೆಲಿಂಗ್ ಹಂತದಲ್ಲಿ ಮೆಡಿಕಲ್ ಕಾಲೇಜು ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಕಳೆದ ವರ್ಷವೂ ಕ್ರಿಯೇಟಿವ್ ಸಂಸ್ಥೆ ತನ್ನ ಪ್ರಥಮ ವರ್ಷದ ನೀಟ್ ಫಲಿತಾಂಶದಲ್ಲಿಯೇ ಅಮೋಘ ಸಾಧನೆಗೈದಿದ್ದು ರಾಘವೇಂದ್ರ ತಾಳಿಕೋಟೆ 646, ಸಾತ್ವಿಕ್ ಶ್ರೀಕಾಂತ ಹೆಗಡೆ  641 ಅಂಕಗಳೊಂದಿಗೆ ಹಲವಾರು ವಿದ್ಯಾರ್ಥಿಗಳು ಪ್ರತಿಷ್ಠಿತ ವೈದ್ಯಕೀಯ ಶಿಕ್ಷಣಕ್ಕೆ ಆಯ್ಕೆ ಆಗಿರುವುದನ್ನು ಸ್ಮರಿಸಬಹುದಾಗಿದೆ.

ವಿದ್ಯಾರ್ಥಿಗಳ ಈ ಸಾಧನೆಯನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವರ್ಗದವರು, ನೀಟ್ ಸಂಯೋಜಕರಾದ ಲೋಹಿತ್‌ ಎಸ್‌ ಕೆ ಅಭಿನಂದಿಸಿದ್ದಾರೆ.

Categories
ಕರಾವಳಿ ಕಲಬುರಗಿ ಕಾರ್ಕಳ ಕೊಪ್ಪ ಚಿಕ್ಕಮಗಳೂರು ಜಿಲ್ಲಾ ವಾರ್ತೆ ತೀರ್ಥಹಳ್ಳಿ ದಾವಣಗೆರೆ ಬೆಂಗಳೂರು ಮಂಡ್ಯ ಮಲ್ನಾಡ್ ಮೈಸೂರು ರಾಜಕೀಯ ರಾಜ್ಯ ರಾಷ್ಟ್ರೀಯ ವಾರ್ತೆ ಶಿವಮೊಗ್ಗ ಹುಬ್ಬಳ್ಳಿ

ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ನಿಯಮಗಳೇನು? – ಬೇಕು ಶಕ್ತಿ ಸ್ಮಾರ್ಟ್ ಕಾರ್ಡ್‌: ಅರ್ಜಿ ಸಲ್ಲಿಸುವುದು ಹೇಗೆ?

ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಡುವ ‘ಶಕ್ತಿ’ ಯೋಜನೆಗೆ ಸಂಬಂಧಿಸಿದ ಅಧಿಕೃತ ಅಧಿಸೂಚನೆಯನ್ನು ಸರ್ಕಾರ ಸೋಮವಾರ ಹೊರಡಿಸಿದೆ. ಅದರಂತೆ, ಮಹಿಳೆಯರು ಉಚಿತವಾಗಿ ಪ್ರಯಾಣಿಸಬೇಕಿದ್ದರೆ ‘ಶಕ್ತಿ ಸ್ಮಾರ್ಟ್‌ಕಾರ್ಡ್‌’ ಹೊಂದುವುದು ಕಡ್ಡಾಯವಾಗಿರಲಿದೆ.

ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿಗಳನ್ನು ಪಡೆದು, ಶಕ್ತಿ ಸ್ಮಾರ್ಟ್ ಕಾರ್ಡ್‌ಗಳನ್ನು ಪಡೆಯಬಹುದು. ಕಾರ್ಡ್‌ಗಳನ್ನು ವಿತರಿಸುವ ಪ್ರಕ್ರಿಯೆಯನ್ನು ಮುಂದಿನ ಮೂರು ತಿಂಗಳೊಳಗಾಗಿ ಪೂರ್ಣಗೊಳಿಸತಕ್ಕದ್ದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಸ್ಮಾರ್ಟ್‌ಕಾರ್ಡ್‌ ದೊರೆಯುವವರೆಗೆ ಉಚಿತ ಪ್ರಯಾಣ ಹೇಗೆ?:

ಶಕ್ತಿ ಸ್ಮಾರ್ಟ್‌ಕಾರ್ಡ್‌ ಅನ್ನು ವಿತರಿಸುವವರೆಗೆ ಭಾರತ ಸರ್ಕಾರ/ ಕರ್ನಾಟಕ ಸರ್ಕಾರದ ಇಲಾಖೆ / ಸರ್ಕಾರಿ ಸ್ವಾಮ್ಯದ ಕಛೇರಿಗಳಿಂದ ವಿತರಿಸಿರುವ ಭಾವಚಿತ್ರ ಹಾಗೂ ವಾಸದ ವಿಳಾಸವಿರುವ ಗುರುತಿನ ಚೀಟಿಗಳನ್ನು ಉಚಿತ ಟಿಕೆಟ್ ವಿತರಿಸುವ ಸ೦ದರ್ಭದಲ್ಲಿ ಪರಿಗಣಿಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ರಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಾಲ್ಕು ಸಂಸ್ಥೆಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದ್ದು, ಕೆಲವೊಂದು ಷರತ್ತುಗಳೊಂದಿಗೆ ಸೌಲಭ್ಯ ಒದಗಿಸಲು ಆದೇಶಿಸಲಾಗಿದೆ. ರಾಜ್ಯದ ನಾಲ್ಕು ನಿಗಮಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕ.ರಾ.ರ.ಸಾ.ನಿಗಮ), ಬೆ೦ಗಳೂರು ಮಹಾನಗರ ಸಾರಿಗೆ ಸ೦ಸ್ಥೆ (ಬೆ೦.ಮ.ಸಾ.ಸಂಸ್ಥೆ), ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ವಾ.ಕ.ರ.ಸಾ.ಸಂಸ್ಥೆ) ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ (ಕ.ಕ.ರ.ಸಾ.ನಿಗಮ) ಸಾರಿಗೆಗಳಲ್ಲಿ ಕರ್ನಾಟಕ ರಾಜ್ಯಾದ್ಯಂತ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ. ನಗರ, ಸಾಮಾನ್ಯ ಹಾಗೂ ವೇಗದೂತ (ಐ/65) ಬಸ್ಸುಗಳಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ಮಹಿಳೆಯರು (ವಿದ್ಯಾರ್ಥಿನಿಯರು ಸೇರಿದಂತೆ) ಮತ್ತು ಲಿಂಗತ್ವ ಅಲ್ಪಸಂಖ್ಯಾತರು ಉಚಿತವಾಗಿ ಪ್ರಯಾಣಿಸಬಹುದಾಗಿದೆ ಎಂದು ಅಧಿಸೂಚನೆ ತಿಳಿಸಿದೆ.

Categories
ಕಾರ್ಕಳ ಕೊಪ್ಪ ಚಿಕ್ಕಮಗಳೂರು ಜಿಲ್ಲಾ ವಾರ್ತೆ ತೀರ್ಥಹಳ್ಳಿ ದಾವಣಗೆರೆ ಬೆಂಗಳೂರು ಮಂಗಳೂರು ಮಂಡ್ಯ ಮಲ್ನಾಡ್ ಮೈಸೂರು ರಾಜಕೀಯ ಶಿವಮೊಗ್ಗ ಹುಬ್ಬಳ್ಳಿ

ವಿದ್ಯುತ್ ದರ ಹೆಚ್ಚಳದ ಶಾಕ್!

ಬೆಂಗಳೂರು: ವಿದ್ಯುತ್ ಬಿಲ್ ಇನ್ನು ಭಾರ ಆಗಲಿದೆ. ಪ್ರತಿ ಯೂನಿಟ್ ವಿದ್ಯುತ್ ದರದಲ್ಲಿ 70 ಪೈಸೆಯಷ್ಟು ಹೆಚ್ಚಳ ಮಾಡುವ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (ಕೆಇಆರ್‌ಸಿ) ಆದೇಶ ಈ ತಿಂಗಳಿನಿಂದಲೇ ಜಾರಿಯಾಗಿದೆ. ಏಪ್ರಿಲ್ ತಿಂಗಳ ಹಿಂಬಾಕಿ ಹಾಗೂ ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚ ಹೊಂದಾಣಿಕೆಯ ಹಿಂಬಾಕಿಯೂ ಸೇರಿ ಈ ತಿಂಗಳ ವಿದ್ಯುತ್ ಬಿಲ್‌ನಲ್ಲಿ ಗ್ರಾಹಕರಿಗೆ ಭಾರಿ ಹೊರೆ ಬೀಳಲಿದೆ.

ವಿದ್ಯುತ್ ಸರಬರಾಜು ಕಂಪನಿಗಳ (ಎಸ್ಕಾಂ) ವರಮಾನದ ಕೊರತೆ ಸರಿದೂಗಿಸಲು ಪ್ರತಿ ಯೂನಿಟ್ ವಿದ್ಯುತ್ ದರವನ್ನು 70 ಪೈಸೆಯಷ್ಟು ಹೆಚ್ಚಳ ಮಾಡಲು ಒಪ್ಪಿಗೆ ನೀಡಿ ಕೆಇಆರ್‌ಸಿ ಮೇ 12ರಂದು ಆದೇಶ ಹೊರಡಿಸಿತ್ತು. ಆಯೋಗದ ನಿರ್ದೇಶನದಂತೆ ದರ ಹೆಚ್ಚಳವನ್ನು ಜೂನ್‌ನಿಂದ ಅನುಷ್ಠಾನಕ್ಕೆ ತರಲಾಗಿದೆ. ಬೆಸ್ಕಾಂ ಮಾತ್ರ ಈ ತಿಂಗಳುಭಾಗಶಃ ದರ ಹೆಚ್ಚಳ ಮಾಡಿದ್ದರೆ, ಉಳಿದ ಎಲ್ಲ ಎಸ್ಕಾಂಗಳು ಪ್ರತಿ ಯೂನಿಟ್‌ಗೆ 70 ಪೈಸೆ ಹೆಚ್ಚಳ ಮಾಡಿವೆ.

ವಿದ್ಯುತ್ ದರ ಹೆಚ್ಚಳ ಏಪ್ರಿಲ್ 1ರಿಂದಲೇ ಪೂರ್ವಾನ್ವಯವಾಗಲಿದೆ. ಗ್ರಾಹಕರು ಏಪ್ರಿಲ್ ತಿಂಗಳಿನಲ್ಲಿ ಬಳಸಿರುವ ವಿದ್ಯುತ್‌ಗೆ ಪ್ರತಿ ಯೂನಿಟ್‌ಗೆ 70 ಪೈಸೆಯಂತೆ ಹಿಂಬಾಕಿಯನ್ನು ಈ ತಿಂಗಳ ಬಿಲ್‌ನಲ್ಲಿ ಪಾವತಿಸಬೇಕಿದೆ. ಎಲ್ಲ ಎಸ್ಕಾಂಗಳಲ್ಲಿ ವಿದ್ಯುತ್ ಬಿಲ್ಲಿಂಗ್ ಪ್ರಕ್ರಿಯೆ ಆರಂಭವಾಗಿದ್ದು, ಏಪ್ರಿಲ್ ತಿಂಗಳ ಹಿಂಬಾಕಿ ಸೇರಿಸಿ ಬಿಲ್ ನೀಡಲಾಗುತ್ತಿದೆ.

ವೆಚ್ಚ ಹೊಂದಾಣಿಕೆಯ ಹೊರೆ: 2022ರ ಇಂಧನ ಮತ್ತು ವಿದ್ಯುತ್ ಖರೀದಿಯ ವೆಚ್ಚ ಹೊಂದಾಣಿಕೆಯ ಹಿಂಬಾಕಿಯನ್ನೂ ಈಗಲೇ ಗ್ರಾಹಕರಿಂದ ವಸೂಲಿ ಮಾಡಬೇಕಿದೆ. ಪ್ರತಿ ಎಸ್ಕಾಂನ ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚದ ಆಧಾರದಲ್ಲಿ ಈ ಮೊತ್ತ ನಿರ್ಧಾರವಾಗಿದೆ.

‘ಕೆಇಆರ್‌ಸಿ ಆದೇಶದಂತೆ ದರ ಪರಿಷ್ಕರಣೆ ನಡೆದಿದೆ. ಈ ತಿಂಗಳ ವಿದ್ಯುತ್ ಬಿಲ್‌ನಲ್ಲಿ ಪ್ರತಿ ಯೂನಿಟ್‌ಗೆ ಸರಾಸರಿ 72.50ರಿಂದ 73 ರವರೆಗೆ ಹೆಚ್ಚಳ ಆಗುವ ಸಾಧ್ಯತೆ ಇದೆ’ ಎಂದು ಇಂಧನ ಇಲಾಖೆ ಮೂಲಗಳು ತಿಳಿಸಿವೆ.

Categories
ಮಂಡ್ಯ

ಮಂಡ್ಯದಲ್ಲಿ ಕಪಾಳ ಮೋಕ್ಷ ಮಾಡಿದ ಪೊಲೀಸ್ ಅಮಾನತು

NAMMUR EXPRESS NEWS

ಮಂಡ್ಯ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೇದೆಯೊಬ್ಬರು, ಆಟೋ ಚಾಲಕನಿಗೆ ನಡು ರಸ್ತೆಯಲ್ಲೇ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಪಾಳಮೋಕ್ಷ ಮಾಡಿದ ಹಿನ್ನೆಲೆ ಅವರನ್ನು ಅಮಾನತು ಮಾಡಲಾಗಿದೆ.
ಪೊಲೀಸ್ ಕಾನ್ಸ್ಟೇಬಲ್ ಮಹೇಂದ್ರ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಅವರು ಅಮಾನತು ಮಾಡಿದ್ದಾರೆ.
ಪೊಲೀಸ್‌ ಕಾನ್ಸ್‌ಸ್ಟೇಬಲ್ ಸಾರ್ವಜನಿಕವಾಗಿ ಎಲ್ಲರ ಮುಂದೆ ಹಲ್ಲೆ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಕೆಲವರು ಟ್ವಿಟ್ ಮೂಲಕ ಮಂಡ್ಯ ಎಸ್‌ಪಿ ಹಾಗೂ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳ ಗಮನಕ್ಕೆ ಈ ಕೃತ್ಯವನ್ನು ತಂದು ಕ್ರಮಕ್ಕೆ ಆಗ್ರಹಿಸಿದ್ದರು ಎನ್ನಲಾಗಿದೆ. ಮಂಡ್ಯ ಜಿಲ್ಲಾಸ್ಪತ್ರೆಯ ಎದುರು ಆಟೋ ಚಾಲಕ ಮತ್ತು ಪೊಲೀಸರು ತೆರಳುತ್ತಿದ್ದ ಬೈಕ್ ನಡುವೆ ಅಪಘಾತವಾಗಿದೆ. ಪೊಲೀಸ್‌ ಪೇದೆ ರಸ್ತೆಗೆ ಬಿದ್ದು, ಕಾಲಿಗೆ ಸಣ್ಣ ಪೆಟ್ಟಾಗಿದೆ. ಸ್ಥಳೀಯರು ಪೇದೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಆಟೋ ಚಾಲಕನಿಗೆ ಹೇಳಿದ್ದಾರೆ.
ಅದರಂತೆ ಚಾಲಕ ಪೇದೆಯನ್ನು ಆಸ್ಪತ್ರೆಗೆ ಹೋಗೋಣ ಬನ್ನಿ ಎಂದು ಕರೆದಿದ್ದಾರೆ. ಆತ ಕರೆದಾಗ ಸಿಟ್ಟಿಗೆದ್ದ ಪೇದೆ, ಚಾಲಕನ ಕಪಾಳಕ್ಕೆ ಹೊಡೆದು, ಹೊಟ್ಟೆಗೆ ಗುದ್ದಿದ್ದಾರೆ. ತಪ್ಪಾಯ್ತು ಬಿಡಿ ಸಾರ್ ಎಂದರೂ ಸುಮ್ಮನಾಗದೇ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ.