Categories
ರಾಷ್ಟ್ರೀಯ ವಾರ್ತೆ

ಇನ್ಮುಂದೆ ವಿದ್ಯುತ್ ಗೆ ಹಗಲು-ರಾತ್ರಿ ದರ ಬೇರೆ ಬೇರೆ!

ಇನ್ಮುಂದೆ ವಿದ್ಯುತ್ ಗೆ ಹಗಲು-ರಾತ್ರಿ ದರ ಬೇರೆ ಬೇರೆ!

– ಕೇಂದ್ರದಿಂದ ನಿರ್ಧಾರ: ಏನಿದು ಹೊಸ ನಿಯಮ?

– ರಾತ್ರಿ ವಿದ್ಯುತ್ ಉರಿಸಿದ್ರೆ ಬಿಲ್ ಜಾಸ್ತಿ..!

 

NAMMUR EXPRESS NEWS

ನವದೆಹಲಿ: ರಾಜ್ಯದಲ್ಲಿ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ ಯೋಜನೆಗೆ ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಈ ಮಧ್ಯೆ ಕೇಂದ್ರ ಸರ್ಕಾರ ವಿದ್ಯುತ್ ದರ ನಿಗದಿ ವಿಚಾರಕ್ಕೆ ಸಂಬಂಧಿಸಿದಂತೆ ಹೊಸ ನಿಯಮ ಮಾಡಲು ಹೊರಟಿದೆ.

ಕೇಂದ್ರ ಸರ್ಕಾರದಿಂದ ಶೀಘ್ರದಲ್ಲೇ ಹೊಸ ವಿದ್ಯುತ್ ದರ ಜಾರಿಗೆ ಬರಲಿದೆ. ಇದರನ್ವಯ, ವಿದ್ಯುತ್ ಗೆ ಹಗಲು-ರಾತ್ರಿ ದರ ನಿಗದಿಯಾಗಲಿದೆ. ಹಗಲಿನ ವಿದ್ಯುತ್ ಶುಲ್ಕವು 20 ಪ್ರತಿಶತದವರೆಗೆ ಕಡಿಮೆಯಾಗುತ್ತದೆ. ಆದಾಗ್ಯೂ, ರಾತ್ರಿಯ ಪೀಕ್ ಅವರ್ ಗಳಲ್ಲಿ ವಿದ್ಯುತ್ ಶುಲ್ಕವನ್ನ ಶೇಕಡಾ 20ರಷ್ಟು ಹೆಚ್ಚಿಸಲಾಗುವುದು. ಈ ಸಂಬಂಧ ಕೇಂದ್ರ ವಿದ್ಯುತ್ ಸಚಿವಾಲಯ ಶುಕ್ರವಾರ ಹೊಸ ವಿದ್ಯುತ್ ನಿಯಮಗಳನ್ನ ಪ್ರಕಟಿಸಿದೆ.ಕೇಂದ್ರ ಸರ್ಕಾರ ಜಾರಿಗೆ ತರಲಿರುವ ಈ ನೀತಿಯಿಂದ ಸೌರ ವಿದ್ಯುತ್ ವ್ಯವಸ್ಥೆ ಹೊಂದಿರುವ ಗ್ರಾಹಕರಿಗೆ ಅನುಕೂಲವಾಗಲಿದೆ. ಅಲ್ಲದೆ, ಹಗಲಿನಲ್ಲಿ ಬಳಸುವ ವಿದ್ಯುತ್ಗೆ ಕಡಿಮೆ ಶುಲ್ಕವಿದ್ದರೆ, ರಾತ್ರಿ ಬಳಸುವ ಲೈಟ್ಗಳು, ಫ್ಯಾನ್ಗಳು ಮತ್ತು ಎಸಿಗಳಿಗೆ ಹೆಚ್ಚಿನ ವಿದ್ಯುತ್ ಶುಲ್ಕವನ್ನ ಪಾವತಿಸಬೇಕಾಗುತ್ತದೆ.

ನವೀಕರಿಸಬಹುದಾದ ಇಂಧನ ಬಳಕೆಯನ್ನ ಹೆಚ್ಚಿಸುವ ಉದ್ದೇಶದಿಂದ ಈ ನಿರ್ಧಾರವನ್ನ ತೆಗೆದುಕೊಳ್ಳಲಾಗಿದೆ ಎಂದು ಅದು ಹೇಳಿದೆ. ಈ ಹೊಸ ವ್ಯವಸ್ಥೆಯನ್ನ ಅಳವಡಿಸುವುದರಿಂದ ಗ್ರಿಡ್ನಲ್ಲಿನ ಹೊರೆ ಮತ್ತು ಪೀಕ್ ಅವರ್ನಲ್ಲಿ ವಿದ್ಯುತ್ ಬೇಡಿಕೆ ಕಡಿಮೆಯಾಗುತ್ತದೆ ಎಂದು ಅದು ಹೇಳಿದೆ. ಏಪ್ರಿಲ್ 2024 ರಿಂದ ವಾಣಿಜ್ಯ ಮತ್ತು ಕೈಗಾರಿಕಾ ಬಳಕೆದಾರರಿಗೆ ಈ ನೀತಿಯನ್ನ ಜಾರಿಗೊಳಿಸಲಾಗುವುದು ಎಂದು ಹೇಳಲಾಗಿದೆ. ಒಂದು ವರ್ಷದ ನಂತರ ಕೃಷಿ ಕ್ಷೇತ್ರ ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳ ವಿದ್ಯುತ್ ಗ್ರಾಹಕರಿಗೆ ಈ ನಿಯಮ ಅನ್ವಯವಾಗಲಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಗೃಹಜ್ಯೋತಿ ಅರ್ಜಿ ನೋಂದಣಿಗೆ ಹೊಸ ಲಿಂಕ್!

HOW TO APPLY : NEET-UG COUNSELLING 2023

Tunga college thirthahalli

Categories
ಯಶಸ್ಸಿನ ಕಥೆಗಳು ರಾಷ್ಟ್ರೀಯ ವಾರ್ತೆ

ಸುಧಾಮೂರ್ತಿ ಅವರಿಗೆ ದೇಶದ ಸಾಹಿತ್ಯ ಗೌರವ!

ಸುಧಾಮೂರ್ತಿ ಅವರಿಗೆ ದೇಶದ ಸಾಹಿತ್ಯ ಗೌರವ!
– ಇನ್ಫೋಸಿಸ್ ಸುಧಾಮೂರ್ತಿಗೆ ಕೇಂದ್ರ ಸಾಹಿತ್ಯ ಪ್ರಶಸ್ತಿ
– ಇಂಗ್ಲಿಷ್‌ನಲ್ಲಿ ಬರೆದಿರುವ ಗ್ರ್ಯಾಂಡ್‌ ಪೇರೆಂಟ್ಸ್‌ ಬ್ಯಾಗ್‌ ಸ್ಟೋರೀಸ್‌ಗೆ ಪ್ರಶಸ್ತಿ
– ವಿಜಯಶ್ರೀ ಹಾಲಾಡಿ, ಮಂಜು ನಾಯಕ್‌ ಚೆಲ್ಲೂರು ಅವರಿಗೂ ಪ್ರಶಸ್ತಿ

NAMMUR EXPRESS NEWS
ನವ ದೆಹಲಿ: 2023ನೇ ಸಾಲಿನ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟಗೊಂಡಿದ್ದು, ಕನ್ನಡದಲ್ಲಿ ಬಾಲ ಸಾಹಿತ್ಯ ಪುರಸ್ಕಾರಕ್ಕೆ ವಿಜಯಶ್ರೀ ಹಾಲಾಡಿ ಹಾಗೂ ಯುವಸಾಹಿತ್ಯ ಪುರಸ್ಕಾರಕ್ಕೆ ಮಂಜು ನಾಯಕ್‌ ಚೆಲ್ಲೂರು ಅವರು ಭಾಜನರಾಗಿದ್ದಾರೆ.

ಇನ್ಫೋಸಿಸ್‌ ಫೌಂಡೇಶನ್‌ ಸಂಸ್ಥಾಪಕಿ ಸುಧಾ ಮೂರ್ತಿ ಅವರು ಇಂಗ್ಲಿಷ್‌ನಲ್ಲಿ ಬರೆದಿರುವ ಗ್ರ್ಯಾಂಡ್‌ ಪೇರೆಂಟ್ಸ್‌ ಬ್ಯಾಗ್‌ ಸ್ಟೋರೀಸ್‌ಗೆ ಬಾಲ ಸಾಹಿತ್ಯ ಪುರಸ್ಕಾರ ಸಿಕ್ಕಿದೆ. ವಿಜಯಶ್ರೀ ಅವರ “ಸೂರಕ್ಕಿ ಗೇಟ್‌” ಕಾದಂಬರಿಗೆ ಪ್ರಶಸ್ತಿ ದೊರೆತ್ತಿದ್ದರೆ, ಮಂಜು ನಾಯಕ್‌ ಚೆಲ್ಲೂರು ಅವರ “ಪೂ ಮತ್ತು ಇತರೆ ಕಥೆಗಳು’ ಎನ್ನುವ ಸಣ್ಣ ಕಥಾಸಂಗ್ರಹಕ್ಕೆ ಪುರಸ್ಕಾರ ದೊರೆತಿದೆ. ಬಾಲಸಾಹಿತ್ಯ ಪುರಸ್ಕಾರದ ಕನ್ನಡ ವಿಭಾಗದ ತೀರ್ಪುಗಾರರಾಗಿ ಡಾ| ಜಯಶ್ರೀ ಸಿ. ಕಂಬಾರ್‌, ಡಾ| ಆನಂದ್‌ ವಿ.ಪಾಟೀಲ್‌ ಹಾಗೂ ಡಾ| ಮೂಡ್ನಾಕೂಡು ಚಿನ್ನಸ್ವಾಮಿ ಅವರು ಭಾಗವಹಿಸಿದ್ದರು. ಇನ್ನು ಯುವ ಪುರಸ್ಕಾರ ಕನ್ನಡ ವಿಭಾಗದ ತೀರ್ಪುಗಾರರಾಗಿ ಡಾ| ಎಚ್‌.ಎಸ್‌.ರಾಘವೇಂದ್ರ ರಾವ್‌, ಡಾ| ಕೆ.ಮರುಳಸಿದ್ದಪ್ಪ ಹಾಗೂ ಶ್ರೀಮತಿ ಎಂ.ಆರ್‌.ಕಮಲಾ ಅವರು ಭಾಗವಹಿಸಿದ್ದರು.

ಇದನ್ನೂ ಓದಿ : ಗೃಹಜ್ಯೋತಿ ಅರ್ಜಿ ನೋಂದಣಿಗೆ ಹೊಸ ಲಿಂಕ್!

HOW TO APPLY : NEET-UG COUNSELLING 2023

Tunga college thirthahalli

Categories
ರಾಷ್ಟ್ರೀಯ ವಾರ್ತೆ

ಮೋದಿ ಮತ್ತೆ ವಿಶ್ವದ ನಂ.1 ಜನಪ್ರಿಯ ನಾಯಕ! – ಏನಿದು ಸಮೀಕ್ಷೆ… ಇಲ್ಲಿದೆ ಡೀಟೇಲ್ಸ್

ಮೋದಿ ಮತ್ತೆ ವಿಶ್ವದ ನಂ.1 ಜನಪ್ರಿಯ ನಾಯಕ!
– ಅಮೇರಿಕಾ ಪ್ರವಾಸದಲ್ಲಿರುವ ಮೋದಿ ಹೆಸರು ಟಾಪ್
– ಜಾಗತಿಕ ನಾಯಕರಲ್ಲಿ ಭಾರತಕ್ಕೆ ಅಗ್ರ ಸ್ಥಾನ
– ಏನಿದು ಸಮೀಕ್ಷೆ… ಇಲ್ಲಿದೆ ಡೀಟೇಲ್ಸ್

NAMMUR EXPRESS NEWS
ನವದೆಹಲಿ: ಜಾಗತಿಕ ಜನಪ್ರಿಯ ನಾಯಕರಲ್ಲಿ ಪ್ರಧಾನಿ ನರೇಂದ್ರ ಮತ್ತೊಮ್ಮೆ ಮೊದಲ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಈಗಾಗಲೇ ಕಳೆದ 9 ವರ್ಷದಲ್ಲಿ ಹಲವು ಸಮೀಕ್ಷೆಗಳಲ್ಲಿ ಮೋದಿ ಅವರ ವರ್ಚಸ್ಸು ಹೆಸರು ಮಾಡಿತ್ತು. ಇದೀಗ ಮತ್ತೆ ವಿಶ್ವದ ನಂ.1 ಜನಪ್ರಿಯ ನಾಯಕರ ಪಟ್ಟಿಯಲ್ಲೇ ಮುಂದುವರೆದಿದ್ದಾರೆ.

ಈ ಬಗ್ಗೆ ಮಾರ್ನಿಂಗ್ ಕನ್ಸಲ್ಟ್ ಎನ್ನುವಂತ ಸಂಸ್ಥೆಯೊಂದು ಸಮೀಕ್ಷೆ ನಡೆಸಿದೆ. ತನ್ನ ವರದಿಯನ್ನು ಬಿಡುಗಡೆ ಮಾಡಿದ್ದು, ಈ ಬಾರಿ ಶೇ.76ರಷ್ಟು ಅನುಮೋದನೆಯ ರೇಟಿಂಗ್ ಪಡೆದಿರುವಂತ ಪ್ರಧಾನಿ ಮೋದಿಯವರು ನಂ.1 ಜನಪ್ರಿಯ ಜಾಗತಿಕ ನಾಯಕರಾಗಿ ಮತ್ತೊಮ್ಮೆ ಮೊದಲ ಸ್ಥಾನವನ್ನು ಗಳಿಸಿಕೊಂಡಿದ್ದಾರೆ. ಅಮೇರಿಕಾ ಮೂಲಕ ಈ ಸಂಸ್ಥೆ ಪ್ರತಿ ತಿಂಗಳು ಸಮೀಕ್ಷೆ ನಡೆಸುತ್ತದೆ. ಅದೇ ರೀತಿ ಜೂನ್ ತಿಂಗಳಿನಲ್ಲಿ ಸಮೀಕ್ಷೆ ನಡೆಸಿತ್ತು. ಅದರಲ್ಲಿ ಪ್ರಧಾನಿ ಮೋದಿ ಜನಪ್ರಿಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇನ್ನೂ ಶೇ.59ರಷ್ಟು ರೇಟಿಂಗ್ ಪಡೆದುಕೊಂಡಿರುವಂತ ಮೆಕ್ಸಿಕೋ ಅಧ್ಯಕ್ಷ ಆಂಡ್ರೆಸ್ ಮ್ಯೂನುಯೆಲ್ ಲೋಪೆಜ್ ಓಬ್ರಡಾರ್ 2ನೇ ಸ್ಥಾನದಲ್ಲಿದ್ದರೇ, ಶೇ.53ರಷ್ಟು ರೇಟಿಂಗ್ ಪಡೆದುಕೊಂಡಿರುವಂತ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಆಲ್ಬನೀಸ್ ಅವರು 3ನೇ ಸ್ಥಾನದಲ್ಲಿದ್ದಾರೆ.

ಈ ನಂತ್ರದಲ್ಲಿ ಶೇ.40ರಷ್ಟು ರೇಟಿಂಗ್ ಪಡೆದ ಅಮೇರಿಕಾ ಅಧ್ಯಕ್ಷ ಜೋ ಬೈಡನ್ 6ನೇ ಸ್ಥಾನ, ಶೇ.32ರಷ್ಟು ರೇಟಿಂಗ್ ಪಡೆದಿರುವಂತ ಬ್ರಿಟನ್ ಪ್ರಧಾನಿ ರಿಷಿ ಸುನಕ್ 9ನೇ ಸ್ಥಾನದವನ್ನು ಗಳಿಸಿದ್ದಾರೆ.
ಮೋದಿ ಅವರು ಅಮೇರಿಕ ಪ್ರವಾಸದಲ್ಲಿದ್ದು ಭಾರತ ಮತ್ತು ಅಮೇರಿಕ ನಡುವೆ ಹಲವು ಒಪ್ಪಂದಗಳು ನಡೆಯುತ್ತಿವೆ. ಇನ್ನು ಭಾರತದಲ್ಲಿ ಲೋಕ ಸಭೆ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇವೆ.

ಇದನ್ನೂ ಓದಿ : ಗೃಹಜ್ಯೋತಿ ಅರ್ಜಿ ನೋಂದಣಿಗೆ ಹೊಸ ಲಿಂಕ್!

HOW TO APPLY : NEET-UG COUNSELLING 2023

Tunga college thirthahalli

Categories
ರಾಷ್ಟ್ರೀಯ ವಾರ್ತೆ

ಜ.25ಕ್ಕೆ ಅಯೋಧ್ಯೆ ರಾಮ ಮಂದಿರ ಓಪನ್!

ಜ.25ಕ್ಕೆ ಅಯೋಧ್ಯೆ ರಾಮ ಮಂದಿರ ಓಪನ್!
– ಏನೇನಿದೆ… ಯಾವಾಗ ಕಾರ್ಯಕ್ರಮ…?
– ಜ.14ರ ಮಕರ ಸಂಕ್ರಾಂತಿಯಿಂದ 24ರವರೆಗೆ ಪ್ರಾಣ ಪ್ರತಿಷ್ಠೆ

NAMMUR EXPRESS NEWS
ಅಯೋಧ್ಯೆ: ಬಹು ನಿರೀಕ್ಷೆಯ ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಮುಹೂರ್ಥ ಫಿಕ್ಸ್ ಆಗಿದೆ.
ಈಗಾಗಲೇ ನಿರ್ಮಾಣವಾಗುತ್ತಿರುವ ರಾಮ ಮಂದಿರದ ಪ್ರಾಣಪ್ರತಿಷ್ಠೆ 2024ರ ಜ.14ರ ಮಕರ ಸಂಕ್ರಾಂತಿ ಯಿಂದ 24ರವರೆಗೆ ನಡೆಯಲಿದೆ. ಈಗಾಗಲೇ ರಾಮ ಮಂದಿರದ ಕೆಲಸ ಅಂತಿಮ ಹಂತಕ್ಕೆ ಬಂದಿದೆ.

ಕೊನೆಯ ದಿನ ನಡೆಯುವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲು ಉದ್ದೇಶಿಸಲಾಗಿದೆ. ಪ್ರಾಣಪ್ರತಿಷ್ಠೆಯ ಬಳಿಕ ಜ. 25ರಿಂದ ಮಂದಿರ ತೆರೆದುಕೊಳ್ಳಲಿದೆ ಎಂದು ರಾಮ ಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಹೇಳಿದ್ದಾರೆ. ಈ ಮೂಲಕ ದೇಶದ ಕೋಟಿ ಕೋಟಿ ರಾಮ ಭಕ್ತರಿಗೆ ಇದು ಸಂತಸದ ವಿಷಯವಾಗಿದೆ. ದೇಶ-ವಿದೇಶಗಳ ಭಕ್ತರು ಅದನ್ನು ವೀಕ್ಷಿಸಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಸಾರ್ವಜನಿಕರ ಪ್ರವೇಶಕ್ಕೆ ಜ.14ರಿಂದ ಪ್ರಾಣಪ್ರತಿಷ್ಠೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ. ನಾಲ್ಕು ಅಂತಸ್ತುಗಳ ದೇಗುಲ ಸಮುಚ್ಚಯ ಪೂರ್ಣಗೊಂಡ ಬಳಿಕ ಮೊದಲ ಅಂತಸ್ತನ್ನು ‘ರಾಮ ಕಥೆ’ ನಡೆಸಲು ಮೀಸಲಾಗಿ ಇರಿಸಲಾಗುತ್ತದೆ ಎಂದೂ ಮಿಶ್ರಾ ತಿಳಿಸಿದ್ದಾರೆ.

Categories
ರಾಷ್ಟ್ರೀಯ ವಾರ್ತೆ

ಸಖತ್ ಸುದ್ದಿ… ಹೀಗೂ ಉಂಟೆ! – ಮೇಕಪ್ ಮಾಡಿಸಲು ಹೋಗಿ ಮುಖವೇ ಹೋಯ್ತು!

ಸಖತ್ ಸುದ್ದಿ… ಹೀಗೂ ಉಂಟೆ!

ಮೇಕಪ್ ಮಾಡಿಸಲು ಹೋಗಿ ಮುಖವೇ ಹೋಯ್ತು!
– ಮಸಾಜ್‌ನಿಂದ ಮುಖದ ಸೌಂದರ್ಯ ಹಾಳು
– ಸಲೂನ್ ವಿರುದ್ಧ ಎಫ್ ಐಆರ್ ದಾಖಲಿಸಿದ ಮಹಿಳೆ!

NAMMUR EXPRESS NEWS
ಮುಂಬೈ : ಮುಖದ ಮಸಾಜ್ ಚಿಕಿತ್ಸೆಯಿಂದ ಮುಖದ ಚರ್ಮ ಹಾನಿಗೊಳಗಾದ ನಂತರ ಮುಂಬೈನಲ್ಲಿ ಮಹಿಳೆಯೊಬ್ಬರು ಬ್ಯೂಟಿ ಸಲೂನ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಜೂನ್ 17 ರಂದು ಈ ಘಟನೆ ನಡೆದಿದ್ದು ಹೆಸರು ಬಹಿರಂಗಪಡಿಸದ ಮಹಿಳೆ ಅಂಧೇರಿಯ ಕಾಮಧೇನು ಶಾಪಿಂಗ್ ಸೆಂಟರ್‌ನಲ್ಲಿರುವ ಗ್ಲೋ ಲಕ್ಸ್ ಸಲೂನ್‌ನಿಂದ 17,500 ರೂಪಾಯಿ ಮೌಲ್ಯದ ಹೈಡ್ರಾಫೇಶಿಯಲ್ ಚಿಕಿತ್ಸೆಯನ್ನು ಪಡೆದಿದ್ದಾರೆ.

ಹೈಡ್ರಾಫೇಶಿಯಲ್ ಎಂಬುದು ವೈದ್ಯಕೀಯ-ದರ್ಜೆಯ ರಿಸರ್ಫೇಸಿಂಗ್ ಚಿಕಿತ್ಸೆಯಾಗಿದ್ದು ಅದು ರಂಧ್ರಗಳನ್ನು ತೆರವುಗೊಳಿಸುತ್ತದೆ ಮತ್ತು ಚರ್ಮವನ್ನು ಹೈಡ್ರೆಟ್ ಮಾಡುತ್ತದೆ. ಪರವಾನಗಿ ಪಡೆದ ವೈದ್ಯಕೀಯ ವೃತ್ತಿಪರ ಸೌಲಭ್ಯಗಳಲ್ಲಿ ಅಥವಾ ಪ್ರಮಾಣೀಕೃತ ಹೈಡ್ರಾಫೇಶಿಯಲ್ ಸೌಂದರ್ಯಶಾಸ್ತ್ರಜ್ಞರು ಲಭ್ಯವಿರುವಲ್ಲಿ ಇದನ್ನು ನೀಡಲಾಗುತ್ತದೆ.

ಆದಾಗ್ಯೂ, ಚಿಕಿತ್ಸೆಯ ನಂತರ, ಮಹಿಳೆಯು ತನ್ನ ಮುಖದಲ್ಲಿ ಸುಡುವ ಸಂವೇದನೆಯನ್ನು ಅನುಭವಿಸಿದಳು ಮತ್ತು ಚರ್ಮಶಾಸ್ತ್ರಜ್ಞರನ್ನು ಸಂಪರ್ಕಿಸಿದರು. ಆದರೆ ಮಸಾಜಿಂದ ಮಹಿಳೆಯು ಚರ್ಮದ ಸುಟ್ಟಗಾಯಗಳು ಮತ್ತು ಶಾಶ್ವತ ಹಾನಿಯನ್ನು ಅನುಭವಿಸಿದ್ದಾರೆ ಎಂದು ಹೇಳಿದರು. ನಂತರ ಸ್ಥಳೀಯ ಎಂಎನ್ಎಸ್ ಕಾರ್ಪೊರೇಟರ್ ಪ್ರಶಾಂತ್ ರಾಣೆ ಅವರ ಸಹಾಯದಿಂದ ಎಫ್‌ಐಆರ್ ದಾಖಲಿಸಿದರು.

ತಾಳಿ ಕಟ್ಟುವ ಮುನ್ನವೇ ವಧುವನ್ನು ಎಳೆದೊಯ್ದ ಪೊಲೀಸರು!

ದೇವಾಲಯದಲ್ಲಿ ವಿವಾಹವಾಗುತ್ತಿದ್ದ ವಧುವನ್ನು ಸ್ಥಳಕ್ಕೆ ದೌಢಾಯಿಸಿದ ಪೊಲೀಸರು ಎಳೆದೊಯ್ದ ಘಟನೆ ಕೇರಳದ ತಿರುವನಂತಪುರದ ಕೋವಲಂ ದೇವಾಲಯದಲ್ಲಿ ಭಾನುವಾರ ಸಂಜೆ 5 ಗಂಟೆಗೆ ನಡೆದಿದೆ. ಇದೀಗ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಜೂನ್ 18ರಂದು ಕೋವಲಂನ ಮಲವಿಲಾ ಪನಮೂಟ್‌ನಲ್ಲಿರುವ ಶ್ರೀ ಮದನ್ ತಂಪುರಾನ್ ದೇವಾಲಯದಲ್ಲಿ ಪರಸ್ಪರ ಪ್ರೀತಿಸುತ್ತಿದ್ದ ಮುಸ್ಲಿಂ ಸಮಾಜದ ಆಲ್ವಿಯಾ ಹಾಗೂ ಹಿಂದೂ ಧರ್ಮದ ಅಖಿಲ್ ಜೋಡಿ ಮದುವೆಯಾಗಲು ಅಣಿಯಾಗಿದ್ದರು. ವರ ಇನ್ನೇನು ವಧುವಿಗೆ ತಾಳಿ ಕಟ್ಟಬೇಕೆನ್ನುವಷ್ಟರಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆಲ್ವಿಯಾಳನ್ನು ವಶಕ್ಕೆ ಪಡೆದು ಎಳೆದೊಯ್ದಿದ್ದಿದ್ದಾರೆ.

ಘಟನೆಯ ಕುರಿತು ಸ್ಪಷ್ಟನೆ ನೀಡಿರುವ ಪೊಲೀಸ್‌ ಅಧಿಕಾರಿಗಳು ಆಕ್ಸಿಯಾ ನಾಪತ್ತೆಯಾಗಿರುವ ಬಗ್ಗೆ ನಮಗೆ ಆಕೆಯ ಪೋಷಕರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ನಾವು ಆಕೆಯನ್ನು ಕರೆದೊಯ್ದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದೇವೆ ಎಂದು ತಿಳಿಸಿದ್ದಾರೆ.

Categories
ರಾಷ್ಟ್ರೀಯ ವಾರ್ತೆ

ಆಹಾರ ಸೇವಿಸಿ 300 ಮಂದಿ ಅಸ್ವಸ್ಥ!

  •  ರಾಜಸ್ಥಾನದ ದೌಸಾದಲ್ಲಿ ನಡೆದ ಘಟನೆ
  • ನಾಲ್ವರು ಸಾವು ಕಂಡಿರುವ ಶಂಕೆ

ನವದೆಹಲಿ: ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಆಹಾರ ಸೇವನೆ ಮಾಡಿದ ನಂತರದಲ್ಲಿ ಸುಮಾರು 300ಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡಿರುವ ಘಟನೆ ರಾಜಸ್ಥಾನದ ದೌಸಾದಲ್ಲಿ ನಡೆದಿದೆ. ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ ಎಂದು ದೌಸಾದ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾ.ಸುಭಾಷ್ ಬಿಲೋನಿಯಾ ತಿಳಿಸಿದ್ದಾರೆ.
ರಾಜಸ್ಥಾನದ ಪಖರ್ ಗ್ರಾಮದಲ್ಲಿ ರಾತ್ರಿ ಮಂದಾವ‌ ಪ್ರದೇಶದಲ್ಲಿ ಧಾರ್ಮಿಕ ಸಮಾರಂಭವೊಂದು ನಡೆದಿದೆ. ಧಾರ್ಮಿಕ ಕಾರ್ಯದ ನಂತರ ಎಲ್ಲರೂ ಊಟ ಮಾಡಿದ್ದಾರೆ. ಈ ಪೈಕಿ 300 ಜನರಿಗೆ ಹೊಟ್ಟೆ ನೋವು, ವಾಂತಿ ಕಾಣಿಸಿಕೊಂಡಿದೆ. ಅಸ್ವಸ್ಥಗೊಂಡವರನ್ನು ಮಾಂದವಾರ, ಮಹುವಾ, ದೌಸಾ ಮತ್ತು ಹತ್ತಿರದ ಆರೋಗ್ಯ ಕೇಂದ್ರಗಳಿಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಅಲ್ಲದೇ ಹಲವರು ಪ್ರಥಮ ಚಿಕಿತ್ಸೆ ಪಡೆದು ಬಿಡುಗಡೆಗೊಳಿಸಲಾಗಿದೆ.
ಜಿಲ್ಲಾಧಿಕಾರಿ ಹರ್ಷಿತ್ ಗೋಸಾವಿ ಅವರ ಪ್ರಕಾರ ಸಮಾರಂಭದಲ್ಲಿ ಸುಮಾರು 50 ಜನರು ಭಾಗವಹಿಸಿದ್ದರು. ಇದಲ್ಲದೆ, ನಾಲ್ವರು ಅಸ್ವಸ್ಥರು ಸಾವನ್ನಪ್ಪಿದ್ದಾರೆ ಮತ್ತು ಒಂಬತ್ತು ಮಂದಿಯನ್ನು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಅವರು ಹೇಳಿದರು. ಆಸ್ಪತ್ರೆಗೆ ದಾಖಲಾಗಿರುವ ಒಂಬತ್ತು ಜನರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.

Categories
ರಾಜ್ಯ ರಾಷ್ಟ್ರೀಯ ವಾರ್ತೆ ಶಿಕ್ಷಣ

ವಿದ್ಯಾರ್ಥಿನಿಯರಿಗೆ ಸ್ಕರ್ಟ್‌ ಬದಲಿಗೆ

ಬೆಂಗಳೂರು: ಬಾಲಕಿಯರ ಶಾಲಾ ಸಮವಸ್ತ್ರವನ್ನು ಸ್ಕರ್ಟ್‌ನಿಂದ ಚೂಡಿದಾರ್ ಅಥವಾ ಪ್ಯಾಂಟ್‌ಗೆ ಬದಲಾಯಿಸುವಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಕೆಎಸ್‌ಸಿಪಿಸಿಆರ್) ರಾಜ್ಯ ಶಿಕ್ಷಣ ಇಲಾಖೆಗೆ ಶಿಫಾರಸು ಮಾಡಿದೆ.

ಕಲಬುರಗಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಸ್ಕರ್ಟ್ ಧರಿಸುವ ಹುಡುಗಿಯರು ಎದುರಿಸುತ್ತಿರುವ ಅನಾನುಕೂಲತೆಗಳ ಕುರಿತು ಆಯೋಗಕ್ಕೆ ಪತ್ರ ಬರೆದ ನಂತರ ಶಿಫಾರಸು ಮಾಡಲಾಗಿದೆ.

ಮೇ 15ರಂದು ಬರೆದ ಪತ್ರದಲ್ಲಿ ಹುಡುಗಿಯರು ನಾಚಿಕೆ ಸ್ವಭಾವದರಾಗಿದ್ದು ಪ್ರಯಾಣಿಸುವಾಗ, ಜನನಿಬಿಡ ಪ್ರದೇಶಗಳಲ್ಲಿ ತಿರುಗಾಡುವಾಗ, ಸೈಕ್ಲಿಂಗ್ ಅಥವಾ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವಾಗ ಸ್ಕರ್ಟ್ ಧರಿಸುವುದು ಅಡಚಣೆಯಾಗಿದೆ. ಇನ್ನು ಪತ್ರದಲ್ಲಿ ಲೈಂಗಿಕ ಕಿರುಕುಳದ ವರದಿಗಳಿವೆ ಎಂದು ಸೇರಿಸಲಾಗಿದೆ. ಹುಡುಗಿಯರು ಸಾಮಾನ್ಯವಾಗಿ ಸ್ಕರ್ಟ್‌ಗಳನ್ನು ಧರಿಸುವುದರಿಂದ ಮುಜುಗರ ವ್ಯಕ್ತಪಡಿಸುತ್ತಾರೆ ಎಂದು ಉಲ್ಲೇಖಿಸಿ, ಅವರ ಸಮವಸ್ತ್ರವನ್ನು ಚೂಡಿದಾರ್ ಅಥವಾ ಪ್ಯಾಂಟ್‌ಗೆ ಬದಲಾಯಿಸುವಂತೆ ಸೂಚಿಸಿದೆ. ಮೇ 17ರಂದು ಕೆಎಸ್‌ಪಿಸಿಆರ್‌ಸಿ ಅಧ್ಯಕ್ಷರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯುಕ್ತರಿಗೆ ಪತ್ರ ಬರೆದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಯ ಈ ಶಿಫಾರಸನ್ನು ಎತ್ತಿ ತೋರಿಸಿದ್ದಾರೆ. ಈ ಬಗ್ಗೆ ಸಾರ್ವಜನಿಕ ಅಭಿಪ್ರಾಯವೂ ವ್ಯಕ್ತವಾಗಿದ್ದು, ಇಲಾಖೆ ನಿಯಮಾನುಸಾರ ಸಮವಸ್ತ್ರ ವಿನ್ಯಾಸ ಬದಲಾವಣೆಗೆ ಅವಕಾಶವಿದ್ದಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅನುಕೂಲವಾಗುವಂತೆ ಹಾಗೂ ಅವರ ಸುರಕ್ಷತೆಗೆ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಇದು ನಾವು ಮಾಡಿರುವ ಶಿಫಾರಸ್ಸು, ಇದನ್ನು ಶಿಕ್ಷಣ ಇಲಾಖೆಯೇ ನಿರ್ಧರಿಸಬೇಕು. ಅಧಿಕಾರಿಗಳಿಂದ ಶಿಫಾರಸ್ಸುಗಳು ಬಂದಿರುವುದು ಮಾತ್ರವಲ್ಲ, ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳೊಂದಿಗೆ ಸಂವಾದ ನಡೆಸಿದ್ದೇವೆ. ಆಟವಾಡುವಾಗ ಸ್ಕರ್ಟ್ ಧರಿಸಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಶಾಲೆಗೆ ಸೈಕಲ್ ನಲ್ಲಿ ಹೋಗುವಾಗ ಸಮವಸ್ತ್ರ-ಚೂರಿದಾರ್ ಅಥವಾ ಪ್ಯಾಂಟ್-ಬದಲಾವಣೆಯು ಅವರ ಮನಸ್ಸಿನಿಂದ ಈ ಚಿಂತೆಯನ್ನು ದೂರ ಮಾಡುತ್ತದೆ ಎಂದು ಕೆಎಸ್‌ಪಿಸಿಆರ್‌ಸಿ ಅಧ್ಯಕ್ಷ ಕೆ ನಾಗಣ್ಣ ಗೌಡ ಹೇಳಿದ್ದಾರೆ.

Categories
ಕರಾವಳಿ ಕಲಬುರಗಿ ಕಾರ್ಕಳ ಕೊಪ್ಪ ಚಿಕ್ಕಮಗಳೂರು ಜಿಲ್ಲಾ ವಾರ್ತೆ ತೀರ್ಥಹಳ್ಳಿ ದಾವಣಗೆರೆ ಬೆಂಗಳೂರು ಮಂಡ್ಯ ಮಲ್ನಾಡ್ ಮೈಸೂರು ರಾಜಕೀಯ ರಾಜ್ಯ ರಾಷ್ಟ್ರೀಯ ವಾರ್ತೆ ಶಿವಮೊಗ್ಗ ಹುಬ್ಬಳ್ಳಿ

ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ನಿಯಮಗಳೇನು? – ಬೇಕು ಶಕ್ತಿ ಸ್ಮಾರ್ಟ್ ಕಾರ್ಡ್‌: ಅರ್ಜಿ ಸಲ್ಲಿಸುವುದು ಹೇಗೆ?

ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಡುವ ‘ಶಕ್ತಿ’ ಯೋಜನೆಗೆ ಸಂಬಂಧಿಸಿದ ಅಧಿಕೃತ ಅಧಿಸೂಚನೆಯನ್ನು ಸರ್ಕಾರ ಸೋಮವಾರ ಹೊರಡಿಸಿದೆ. ಅದರಂತೆ, ಮಹಿಳೆಯರು ಉಚಿತವಾಗಿ ಪ್ರಯಾಣಿಸಬೇಕಿದ್ದರೆ ‘ಶಕ್ತಿ ಸ್ಮಾರ್ಟ್‌ಕಾರ್ಡ್‌’ ಹೊಂದುವುದು ಕಡ್ಡಾಯವಾಗಿರಲಿದೆ.

ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿಗಳನ್ನು ಪಡೆದು, ಶಕ್ತಿ ಸ್ಮಾರ್ಟ್ ಕಾರ್ಡ್‌ಗಳನ್ನು ಪಡೆಯಬಹುದು. ಕಾರ್ಡ್‌ಗಳನ್ನು ವಿತರಿಸುವ ಪ್ರಕ್ರಿಯೆಯನ್ನು ಮುಂದಿನ ಮೂರು ತಿಂಗಳೊಳಗಾಗಿ ಪೂರ್ಣಗೊಳಿಸತಕ್ಕದ್ದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಸ್ಮಾರ್ಟ್‌ಕಾರ್ಡ್‌ ದೊರೆಯುವವರೆಗೆ ಉಚಿತ ಪ್ರಯಾಣ ಹೇಗೆ?:

ಶಕ್ತಿ ಸ್ಮಾರ್ಟ್‌ಕಾರ್ಡ್‌ ಅನ್ನು ವಿತರಿಸುವವರೆಗೆ ಭಾರತ ಸರ್ಕಾರ/ ಕರ್ನಾಟಕ ಸರ್ಕಾರದ ಇಲಾಖೆ / ಸರ್ಕಾರಿ ಸ್ವಾಮ್ಯದ ಕಛೇರಿಗಳಿಂದ ವಿತರಿಸಿರುವ ಭಾವಚಿತ್ರ ಹಾಗೂ ವಾಸದ ವಿಳಾಸವಿರುವ ಗುರುತಿನ ಚೀಟಿಗಳನ್ನು ಉಚಿತ ಟಿಕೆಟ್ ವಿತರಿಸುವ ಸ೦ದರ್ಭದಲ್ಲಿ ಪರಿಗಣಿಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ರಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಾಲ್ಕು ಸಂಸ್ಥೆಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದ್ದು, ಕೆಲವೊಂದು ಷರತ್ತುಗಳೊಂದಿಗೆ ಸೌಲಭ್ಯ ಒದಗಿಸಲು ಆದೇಶಿಸಲಾಗಿದೆ. ರಾಜ್ಯದ ನಾಲ್ಕು ನಿಗಮಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕ.ರಾ.ರ.ಸಾ.ನಿಗಮ), ಬೆ೦ಗಳೂರು ಮಹಾನಗರ ಸಾರಿಗೆ ಸ೦ಸ್ಥೆ (ಬೆ೦.ಮ.ಸಾ.ಸಂಸ್ಥೆ), ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ವಾ.ಕ.ರ.ಸಾ.ಸಂಸ್ಥೆ) ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ (ಕ.ಕ.ರ.ಸಾ.ನಿಗಮ) ಸಾರಿಗೆಗಳಲ್ಲಿ ಕರ್ನಾಟಕ ರಾಜ್ಯಾದ್ಯಂತ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ. ನಗರ, ಸಾಮಾನ್ಯ ಹಾಗೂ ವೇಗದೂತ (ಐ/65) ಬಸ್ಸುಗಳಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ಮಹಿಳೆಯರು (ವಿದ್ಯಾರ್ಥಿನಿಯರು ಸೇರಿದಂತೆ) ಮತ್ತು ಲಿಂಗತ್ವ ಅಲ್ಪಸಂಖ್ಯಾತರು ಉಚಿತವಾಗಿ ಪ್ರಯಾಣಿಸಬಹುದಾಗಿದೆ ಎಂದು ಅಧಿಸೂಚನೆ ತಿಳಿಸಿದೆ.

Categories
ರಾಷ್ಟ್ರೀಯ ವಾರ್ತೆ

ರೈಲುಗಳ ಡಿಕ್ಕಿಗೆ 300ಕ್ಕೂ ಹೆಚ್ಚು ಮಂದಿ ದುರ್ಮರಣ!

  • ಒಡಿಶಾದಲ್ಲಿ ಘಟನೆ: 900ಕ್ಕೂ ಹೆಚ್ಚು ಮಂದಿಗೆ ಗಾಯ
  •  ಸಾವಿನ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆ
  •  ರೈಲು ಡಿಕ್ಕಿಗೆ ಕಾರಣ ಏನು? ತನಿಖೆಗೆ ಆದೇಶ!

NAMMUR EXPRESS NEWS
ಒಡಿಶಾ: ಒಡಿಶಾದ ಬಾಲಸೋರ್‌ನ ಬಹನಾಗಾ ನಿಲ್ದಾಣದ ಬಳಿ 3 ರೈಲುಗಳ ನಡುವೆ ನಡೆದ ರೈಲು ಡಿಕ್ಕಿ ಸುಮಾರು 300 ಮಂದಿ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಘಟನೆಯಲ್ಲಿ 300 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ರಕ್ಷಣಾ ಕಾರ್ಯಾಚರಣೆ ಬಿರುಸಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ.
ಯಶವಂತಪುರದಿಂದ ಹೌರಾದೆಡೆಗೆ ಸಾಗುತ್ತಿದ್ದ ಮತ್ತೊಂದು ರೈಲು ಅದೇ ಮಾರ್ಗವಾಗಿ ಸಾಗುತ್ತಿದ್ದಾಗ ಹಳಿ ತಪ್ಪಿದ ಬೋಗಿಗಳಿಗೆ ಡಿಕ್ಕಿ ಹೊಡೆದು ಮತ್ತೊಂದು ಹಳಿ ಮೇಲೆ ಬಿದ್ದಿತ್ತು. ಸ್ವಲ್ಪ ಸಮಯದ ನಂತರ ಯಶವಂತಪುರದಿಂದ ಹೌರಾಕ್ಕೆ ತೆರಳುತ್ತಿದ್ದ ಮತ್ತೊಂದು ರೈಲು ಹಳಿತಪ್ಪಿದ ಬೋಗಿಗಳಿಗೆ ಡಿಕ್ಕಿ ಹೊಡೆದು ಅದರ 3-4 ಬೋಗಿಗಳು ಹಳಿತಪ್ಪಿವೆ ಎಂದು ತಿಳಿಸಿದ್ದಾರೆ.
23 ಬೋಗಿಗಳಲ್ಲಿ 3 ಬೋಗಿಗಳು ಸಂಪೂರ್ಣ ನುಜ್ಜು ಗುಜ್ಜಾಗಿವೆ. ದೇಶದ ದೊಡ್ಡ ದುರಂತ ಇದಾಗಿದೆ. ರೈಲ್ವೆ ಸಚಿವ ಅಶ್ವಿನ್ ವೈಷ್ಣವಿ ತನಿಖೆಗೆ ಆದೇಶ ಮಾಡಿದ್ದಾರೆ.
ಹಳಿಗಳ ಮೇಲೆ ದೋಷ ಕಾರಣ?: ‘ಒಡಿಶಾದ ಈ ಮಹಾ ರೈಲು ದುರಂತಕ್ಕೆ ರೈಲು ಹಳಿಗಳಲ್ಲಿನ ದೋಷವೇ ಕಾರಣವಿರಬಹುದು’ ಎಂದು ಪ್ರಾಥಮಿಕವಾಗಿ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಹಳಿಗಳು ದೋಷಯುಕ್ತವಾಗಿದ್ದವೆಂದು ಶಂಕಿಸಲಾಗಿದೆ. ಆದರೆ, ತನಿಖೆಯ ನಂತರ ದುರಂತಕ್ಕೆ ನಿಖರ ಕಾರಣವೇನೆಂದು ತಿಳಿಯಲಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ರೈಲ್ವೆ ಸುರಕ್ಷತಾ ಆಯುಕ್ತರು ತನಿಖೆ ಕೈಗೊಳ್ಳಲಿದ್ದಾರೆ. ತಪ್ಪಿತಸ್ಥರವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು

ಬೈಯಪ್ಪನಹಳ್ಳಿಯಿಂದ ಹೊರಟಿದ್ದ ಹೌರಾ ಎಕ್ಸ್‌ಪ್ರೆಸ್!

ಬೆಂಗಳೂರು: ಒಡಿಶಾದ ಬಹನಾಗಾ ರೈಲು ನಿಲ್ದಾಣ ಬಳಿ ರೈಲುಗಳು ಅಪಘಾತ ಸಂಭವಿಸಿದ್ದು, ಬೆಂಗಳೂರಿನ ಬೈಯಪ್ಪನಹಳ್ಳಿಯ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಹೌರಾಕ್ಕೆ ಹೊರಟಿದ್ದ ರೈಲಿನಲ್ಲಿದ್ದ ಹಲವು ಪ್ರಯಾಣಿಕರು ಮೃತಪಟ್ಟಿದ್ದಾರೆ. ರಾಜ್ಯದವರೂ ಇರುವ ಶಂಕೆಯಿದೆ. ಬೈಯಪ್ಪನಹಳ್ಳಿಯಿಂದ ಹೊರಟಿದ್ದ ರೈಲು, ಕೆ.ಆರ್. ಪುರ ಹಾಗೂಬಂಗಾರಪೇಟೆ ನಿಲ್ದಾಣ ಮಾರ್ಗವಾಗಿ ಆಂಧ್ರಪ್ರದೇಶ ಪ್ರವೇಶಿಸಿಹೌರಾದತ್ತ ಹೊರಟಿತ್ತು. ಇದೇ ಹೌರಾ ಎಕ್ಸ್‌ಪ್ರೆಸ್ ರೈಲಿನಲ್ಲಿ
ಕರ್ನಾಟಕದ ಪ್ರಯಾಣಿಕರಿದ್ದರು. ಜೊತೆಗೆ, ಬೆಂಗಳೂರಿನಲ್ಲಿ ನೆಲೆಸಿದ್ದ ಉತ್ತರ ಪ್ರದೇಶ ಕಾರ್ಮಿಕರೂ ಪ್ರಯಾಣಿಸುತ್ತಿದ್ದರೆಂಬ ಮಾಹಿತಿ ಇದೆ. ಆದರೆ, ಯಾರೊಬ್ಬರ ಹೆಸರು ಹಾಗೂ ವಿಳಾಸ ಸದ್ಯಕ್ಕೆ ಗೊತ್ತಾಗಿಲ್ಲ.
ಪ್ರಯಾಣಿಕರ ಬಗ್ಗೆ ಮಾಹಿತಿ ಇದ್ದವರು ಅಥವಾ ಕುಟುಂಬದ ಸದಸ್ಯರು ಸಹಾಯವಾಣಿಗೆ ಕರೆ ಮಾಡಬಹುದು ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸಹಾಯವಾಣಿ ಸಂಖ್ಯೆ: 080-22942666, 080-22871291 (23 ನಿಯಂತ್ರಣ ಕೊಠಡಿ) ಹಾಗೂ ಒಡಿಶಾದ 08249591559, 67822262286

Categories
ರಾಷ್ಟ್ರೀಯ ವಾರ್ತೆ

3 ರೈಲುಗಳ ಡಿಕ್ಕಿ: ಬೆಂಗಳೂರಿಂದ ಇಬ್ಬರ ಸಾವು!?

  • ರಾಜಧಾನಿಯಿಂದ ತೆರಳಿದ ಇಬ್ಬರ ಸಾವಿನ ಮಾಹಿತಿ
  • ಚಿಕ್ಕಮಗಳೂರಿನ ಕಳಸದ 150 ಮಂದಿ ಸೇಫ್!
  • ಜೂ.1ರಂದು ಜಾರ್ಕಂಡ್ ತೆರಳಿದ್ದ ಜನತೆ

NAMMUR EXPRESS NEWS
ಒಡಿಶಾ: ಕೋಲ್ಕತ್ತಾದಿಂದ ಚೆನ್ನೈಗೆ ಹೋಗುತ್ತಿದ್ದ ಕೋರಮಂಡಲ್ ಎಕ್ಸ್ ಪ್ರೆಸ್ ರೈಲು ಒಡಿಶಾದ ಬಾಲಸೋರ್‌ನ ಬಹನಾಗಾ ನಿಲ್ದಾಣದ ಬಳಿ ಗೂಡ್ಸ್ ರೈಲಿಗೆ ಢಿಕ್ಕಿ ಹೊಡೆದು ಮತ್ತೊಂದು ಡಿಕ್ಕಿಯಾದ ಪರಿಣಾಮ ಸುಮಾರು 50 ಮಂದಿ ಸಾವನ್ನಪ್ಪಿದ್ದಾರೆ. ಈ ದುರಂತದಲ್ಲಿ ಬೆಂಗಳೂರು ಯಶವಂತಪುರದಿಂದ ಪಶ್ಚಿಮ ಬಂಗಾಳದ ಹೌರಾ ಹೊರಟಿದ್ದ ರೈಲು ಡಿಕ್ಕಿಯಾಗಿದೆ. ಘಟನೆಯಲ್ಲಿ ಬೆಂಗಳೂರಿಂದ ತೆರಳಿದ್ದ ಇಬ್ಬರು ಬೆಂಗಳೂರಿಗರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಆದರೆ ವಿಳಾಸ ದೃಢವಾಗಿಲ್ಲ.
ಘಟನೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಘಟನೆಯಲ್ಲಿ 300 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಕಳಸದವರು ಸೇಫ್!:ಚಿಕ್ಕಮಗಳೂರು ಜಿಲ್ಲೆಯ ಕಳಸದಿಂದ ಜಾರ್ಕಂಡ್ ಹೊರಟಿದ್ದ 150 ಮಂದಿ ಪ್ರವಾಸಿಗರು ಜೀವ ಅಪಾಯದಿಂದ ಪಾರಾಗಿದ್ದಾರೆ.
ಕಳಸದಿಂದ ಉತ್ತರದ ಜೈನ ದೇವಾಲಯಗಳಿಗೆ ತೆರಳಿದ್ದ 150 ಮಂದಿ ಕೊನೆ ಬೋಗಿಯಲ್ಲಿದ್ರೂ ಅಪಾಯದಿಂದ ಪಾರಾಗಿದ್ದಾರೆ.