Categories
ವ್ಯವಹಾರ

ಈದೀಗ ಮನೆ ಮುಂದೆ ಹಸಿರು ಹಸಿರು ಹಸಿರು ವಾತಾವರಣ ನಿರ್ಮಾಣವೂ ಬಿಸ್‍ನೆಸ್


ಬೆಂಗಳೂರು ಹಾಗೂ ರಾಜ್ಯದ ವಿವಿಧೆಡೆಗಳಲ್ಲಿ ಮನೆ ಮನೆಗಳಲ್ಲೂ ಹಸಿರಿನ ವಾತಾವರಣ ನಿರ್ಮಿಸುವಲ್ಲಿ ಶ್ರಮಿಸುತ್ತಿರುವ ‘ಮೈ ಡ್ರೀಮ್ಗಾರ್ಡನ್’ ಈಗ ದೇಶಾದ್ಯಂತ ವಹಿವಾಟು ವಿಸ್ತರಣೆಗೆ ಮುಂದಾಗಿದೆ.


7 ಮೆಟ್ರೊ ನಗರಗಳು, 90 ಎರಡನೇ ಹಂತದ ನಗರಗಳು ಸೇರಿದಂತೆ ದೇಶಾದ್ಯಂತ 137 ನಗರಗಳಲ್ಲಿ ವಹಿವಾಟು ವಿಸ್ತರಿಸುತ್ತಿದ್ದು, ವಿತರಕರನ್ನು ಆಹ್ವಾನಿಸಿದೆ.
ಆ ಮೂಲಕ ದೇಶಾದ್ಯಂತ ನಿರ್ಮಾಣಕ್ಕೆ ಪಣ ತೊಟ್ಟಿದೆ. ವಿತರಕರ ಮೂಲಕ ಸಸಿ, ಕೃಷಿ ಪರಿಕರಗಳನ್ನು ಒದಗಿಸುವ ಜತೆಗೆ ಮಾರ್ಗದರ್ಶನ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ.
ನಗರಗಳಲ್ಲಿ ಉತ್ತಮ ಗಾಳಿ ಸಿಗುತ್ತಿಲ್ಲ, ಪ್ರಾಣಿ-ಪಕ್ಷಿಗಳು ನೆಲೆ ಕಳೆದುಕೊಳ್ಳುವಂತಾಗಿದೆ. ಜೀವ ವೈವಿಧ್ಯತೆ ಕಾಪಾಡಿಕೊಂಡು, ಉತ್ತಮ ವಾತಾವರಣ ಉಳಿಸಿಕೊಳ್ಳಲು ಹಸಿರು ಹೆಚ್ಚಿಸುವುದೇ ಮಾರ್ಗ ಎಂಬುದು ‘ಮೈ ಡ್ರೀಮ್ಗಾರ್ಡನ್’ ಸಂಸ್ಥಾಪಕ ಅಶೋಕ್ಕುಮಾರ್ಕೆ.ಸಿ. ಅವರ ನಂಬಿಕೆ. ಈ ನಿಟ್ಟಿನಲ್ಲಿ ಹಸಿರು ಪಸರಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

https://www.mydreamgarden.in/

Categories
ವ್ಯವಹಾರ

ತೀರ್ಥಹಳ್ಳಿಗೆ ಮತ್ತೊಂದು ಸುಸಜ್ಜಿತ ಎಸಿ ಲಾಡ್ಜ್!

  • ರಾಕ್ ವ್ಯೂ ಲಾಡ್ಜಿಂಗ್ ಡಿ.7ಕ್ಕೆ ಶುಭಾರಂಭ
  • ಉದ್ಯಮಿ ಕಿಮ್ಮನೆ ಆದಿತ್ಯ ಮಾಲೀಕತ್ವದ ಉದ್ಯಮ

ತೀರ್ಥಹಳ್ಳಿಗೆ ಮತ್ತೊಂದು ಹೈಟೆಕ್ ಲಾಡ್ಜ್ ಶುರುವಾಗಲಿದೆ. ಆಧುನಿಕ ಶೈಲಿ, ಅತ್ಯಾಕರ್ಷಕ ವಿನ್ಯಾಸ, ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ, ಎಸಿ ಸೇವೆಯೊಂದಿಗೆ ಈ ಲಾಡ್ಜ್ ಶುರುವಾಗಿದೆ.
ಮಲೆನಾಡಿನ ಪ್ರಸಿದ್ಧ ಉದ್ಯಮಿ ಕಿಮ್ಮನೆ ಆದಿತ್ಯ ಮಾಲೀಕತ್ವದ ರಾಕ್ ವ್ಯೂ ಲಾಡ್ಜಿಂಗ್ ಡಿ.7ಕ್ಕೆ ಶುಭಾರಂಭಗೊಳ್ಳಲಿದೆ.
ಬಾಳೆಬೈಲಿನ ಮಲ್ನಾಡ್ ಕ್ಲಬ್ ಎದುರಿನಲ್ಲಿ ಎಸಿ ಸೌಲಭ್ಯವುಳ್ಳ ಲಾಡ್ಜ್ ಸೋಮವಾರದಿಂದ ಆರಂಭವಾಗಲಿದೆ.
ಶೀಘ್ರದಲ್ಲಿ ರಾಕ್ ವ್ಯೂ ಬಾರ್ ಅಂಡ್ ರೆಸ್ಟೋರೆಂಟ್ ಪ್ರಾರಂಭಗೊಳ್ಳಲಿದೆ. ಮಾಲೀಕರಾದ ಕಿಮ್ಮನೆ ಆದಿತ್ಯ ಈ ಕಾರ್ಯಕ್ರಮಕ್ಕೆ ಸರ್ವರನ್ನು ಸ್ವಾಗತಿಸಿದ್ದಾರೆ.
ನೂತನ ಉದ್ಯಮಕ್ಕೆ NAMMUR EXPRESS ಶುಭ ಕೋರಿದೆ.

Categories
ವ್ಯವಹಾರ

ತೀರ್ಥಹಳ್ಳಿಯಲ್ಲಿ 30 ಉದ್ಯೋಗ ಅವಕಾಶ!

  • ಟೆಲಿ ಸೇಲ್ಸ್ ಕ್ಷೇತ್ರದಲ್ಲಿ ಉದ್ಯೋಗ
  • 8000-15,000 ರೂ.ಸಂಬಳ
  • ಡಿಗ್ರಿ ಪಾಸ್, ಫೇಲ್ ಆದವರಿಗೂ ಅವಕಾಶ

ತೀರ್ಥಹಳ್ಳಿ: ಮಲೆನಾಡಿನ ಸ್ಥಳೀಯ ಉದ್ಯೋಗಾಕಾಂಕ್ಷಿ ಯುವಕ ಯುವತಿಯರಿಗೆ ಗುಡ್ ನ್ಯೂಸ್!. ತೀರ್ಥಹಳ್ಳಿಯಲ್ಲಿ ಆರಂಭವಾಗಿರುವ ಪ್ರಸಿದ್ಧ ಕಂಪನಿಯೊಂದರಲ್ಲಿ 30ಕ್ಕೂ ಹೆಚ್ಚು ಉದ್ಯೋಗ ಅವಕಾಶ ಇದೆ. ಡಿಗ್ರಿ ಪಾಸ್, ಫೇಲ್ ಆದವರಿಗೂ ಅವಕಾಶ ಇದೆ. ಟೆಲಿ ಸೇಲ್ಸ್ ಕ್ಷೇತ್ರದಲ್ಲಿ ಹೊಸ ಸಾಧನೆ ಮಾಡುತ್ತಿರುವ ಕಂಪನಿಗೆ ತಕ್ಷಣ ನೇಮಕಾತಿ ನಡೆಯುತ್ತಿದೆ.
ಹುದ್ದೆ: ರಿಲೇಷನ್ಶಿಪ್ ಮ್ಯಾನೇಜರ್( ಟೆಲಿ ಸೇಲ್ಸ್)
ಇಂಗ್ಲಿಷ್, ಕನ್ನಡ, ಹಿಂದಿ, ತಮಿಳು, ಮಲಯಾಳಂ, ತೆಲಗು ಭಾಷೆಯಲ್ಲಿ ಯಾವುದಾದರೊಂದು ಭಾಷೆ ಬಲ್ಲವರಾಗಿರಬೇಕು.
ಉದ್ಯೋಗ ಆಕಾಂಕ್ಷಿಗಳು ತಕ್ಷಣ ಸಂಪರ್ಕ ಮಾಡಿ ನೇರ ಸಂದರ್ಶನಕ್ಕೆ ಹಾಜರಾಗಬಹುದು.
ವಿಳಾಸ: ಟೆಕ್ ಏಡ್
ಅನುರಾಧ ನರ್ಸಿಂಗ್ ಹೋಂ ಎದುರು
ಸೊಪ್ಪುಗುಡ್ಡೆ, ತೀರ್ಥಹಳ್ಳಿ.
ಶಿವಮೊಗ್ಗ ಜಿಲ್ಲೆ
ಸಂಪರ್ಕಿಸಿ: ನಿಖಿಲ್ – 9448715178.
ಈ ಸುದ್ದಿಯನ್ನು ಉದ್ಯೋಗ ಬಯಸುವವರಿಗೆ ಶೇರ್ ಮಾಡಿ.

Categories
ವ್ಯವಹಾರ

ಕಾಫಿ ಡೇ ಸಿದ್ಧಾರ್ಥ್ ಪತ್ನಿಗೆ “ಬಂಧನ ಭೀತಿ”!

  • ಕಾಫಿ ಬೆಳೆಗಾರರಿಗೆ ಹಣ ಕೊಡದ ಆರೋಪ
  • ಚಿಕ್ಕಮಗಳೂರು, ಹಾಸನ ರೈತರಿಂದ ದೂರು

ಬೆಂಗಳೂರು: ಕಾಫಿ ಡೇ ಮಾಲಿಕ ಸಿದ್ಧಾರ್ಥ ಸಾವಿನ ಬಳಿಕ ಗೊಂದಲದ ಗೂಡಾಗಿರುವ ಕಾಫಿ ಡೇ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದೆ. ಕಾಫಿ ಡೇ ಕಂಪನಿಗೆ ಕಾಫಿ ಬೀಜಗಳನ್ನು ಮಾರಾಟ ಮಾಡಿದ ಕಾಫಿ ಬೆಳೆಗಾರರಿಗೆ ಕಂಪನಿ ಕೊಟ್ಟ ಚೆಕ್‍ಗಳು ಬೌನ್ಸ್ ಆಗಿದೆ. ಸುಮಾರು 300ಕ್ಕೂ ಅಧಿಕ ಕಾಫಿ ಬೆಳೆಗಾರರಿಗೆ 100 ಕೋಟಿಗೂ ಅಧಿಕ ಹಣ ಬಾಕಿ ಇದೆ. ಹೀಗಾಗಿ ಕಾಫಿ ಬೆಳೆಗಾರರು ಇದೀಗ ಕೋರ್ಟ್ ಕಟಕಟೆ ಏರಿದ್ದಾರೆ. ಸಾವಿರಾರು ಜನತೆಗೆ ಉದ್ಯೋಗ ಬದುಕು ಕೊಟ್ಟು ಕಾಫಿ ಕಿಂಗ್, ಬ್ಯುಸಿನೆಸ್ ಐಕಾನ್ ಆಗಿದ್ದ ಸಿದ್ಧಾರ್ಥ ಕನಸಿನ ಕಂಪನಿ ಇದೀಗ ಮತ್ತಷ್ಟು ಸಮಸ್ಯೆಗೆ ಬಂದು ನಿಂತಿದೆ.
ಕಾಫಿ ಸಾಮ್ರಾಜ್ಯವನ್ನೇ ಕಟ್ಟಿದ ಉದ್ಯಮಿ ಸಿದ್ಧಾರ್ಥ್ ಕುಟುಂಬ ಈಗ ಸಂಕಷ್ಟದಲ್ಲಿ ಸಿಲುಕಿದೆ. ಪತ್ನಿ ಮಾಳವಿಕಾ ಮೇಲೆ ಚೆಕ್ ಬೌನ್ಸ್ ಕೇಸ್ ದಾಖಲಾಗಿದೆ. ಗ್ರಾಮೀಣ ಭಾಗದ ಸಾವಿರಾರು ಯುವಕ, ಯುವತಿಯರಿಗೆ ತರಬೇತಿ ನೀಡಿ ಉದ್ಯೋಗ ಕೊಟ್ಟ ಸಿದ್ಧಾರ್ಥ ಹೆಗ್ಡೆ ಕುಟುಂಬ ಈಗ ತೊಂದರೆಯಲ್ಲಿದೆ. 2019ರ ಜುಲೈ ತಿಂಗಳಲ್ಲಿ ಮಂಗಳೂರು ಬಳಿಯ ನೇತ್ರಾವತಿ ನದಿಗೆ ಹಾರಿ ಸಿದ್ಧಾರ್ಥ ಆತ್ಮಹತ್ಯೆ ಮಾಡಿಕೊಂಡಿದ್ದರು. ಬಳಿಕ ಕಂಪನಿ ನಷ್ಟದತ್ತ ಸಾಗಿತ್ತು.

Categories
ವ್ಯವಹಾರ

ಅಡಿಕೆ ಸುಲಿಯುವ ಮಿಷನ್ ವಿ ಟೆಕ್ ಇಂಜಿನಿಯರ್ಸ್ ನಲ್ಲಿ ಲಭ್ಯ!

  • ವಿಶೇಷ ಆಫರ್: ಅತ್ಯಂತ ಗುಣಮಟ್ಟ
  • ಆಪ್ ಬಿಡುಗಡೆಗೊಳಿಸಿದ ಸಂಸ್ಥೆ

ನಿಮ್ಮ ಅಡಿಕೆ-ನಿಮ್ಮ ಕೊಯ್ಲು ನಮ್ಮ ವಿ ಟೆಕ್ ಇಂಜಿನಿಯರ್ ಸಂಸ್ಥೆಯ ಯಂತ್ರಗಳ ಜೊತೆ
ವಿ ಟೆಕ್ ಇಂಜಿನಿಯರ್ಸ್…! ವಿ ಟೆಕ್ ಸಂಸ್ಥೆಯ ಎಲ್ಲಾ ಸೇವೆಗೆ ನಮ್ಮ ಆಪ್ ಡೌನ್ ಲೋಡ್ ಮಾಡಿಕೊಳ್ಳಿ. ಯಂತ್ರಗಳ ಬುಕಿಂಗ್, ಯಂತ್ರಗಳ ಸರ್ವಿಸ್ ಬುಕಿಂಗ್, ಗ್ರಾಹಕ ಸಹಾಯಾವಾಣಿಗೆ ನೇರ ಕರೆ , ಗ್ರಾಹಕ ಸಹಾಯವಾಣಿಗೆ ನೇರ ವಾಟ್ಸ್ ಆಪ್ ಸಂದೇಶ ಎಲ್ಲಾ ಸೇವೆಗಳು ಬೆರಳ ತುದಿಯಲ್ಲಿ.

https://play.google.com/store/apps/details?id=com.vtechengineer

Categories
ವ್ಯವಹಾರ

ಸಾಲು ಸಾಲು ರಜೆ: ಬ್ಯಾಂಕ್ ಕೆಲಸ ಮುಗಿಸಿ!

  • ತಿಂಗಳಾಂತ್ಯದವರೆಗೆ ಸರಣಿ ರಜೆ

ಬೆಂಗಳೂರು: ನವರಾತ್ರಿ ಈ ಸಲ ಕರೋನಾ ಕಾರಣದಿಂದ ಕಳೆಗುಂದಿದೆ. ಈ ನಡುವೆ ಅಕ್ಟೋಬರ್ 24ರಿಂದ ಸಾಲು ಸಾಲು ಸರ್ಕಾರ ರಜೆ ಇರುವ ಹಿನ್ನಲೆಯಲ್ಲಿ ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಹಬ್ಬದ ಪ್ರಯುಕ್ತ ಬ್ಯಾಂಕ್‍ಗಳಿಗೆ ಸಾಲು ಸಾಲು ರಜೆ ಇದ್ದು ಬ್ಯಾಂಕ್ ವ್ಯವಹಾರಗಳಿದ್ದರೆ ಇನ್ನೆರಡು ದಿನದಲ್ಲಿ ಮುಗಿಸಿಕೊಳ್ಳುವುದು ಉತ್ತಮ.
ಶನಿವಾರದಿಂದ ಬ್ಯಾಂಕ್‍ಗಳಿಗೆ ನಿರಂತರ ರಜೆ ಇರಲಿದ್ದು, ಸಾಲು ಸಾಲು ರಜೆ ಹಿನ್ನೆಲೆ ಬ್ಯಾಂಕ್ ವ್ಯವಹಾರಗಳಿಗೆ ತೊಂದರೆಯಾಗುವ ಸಾಧ್ಯತೆಯಿದೆ. ಹಬ್ಬ ವಾರಾಂತ್ಯ ರಜೆಗಳ ಕಾರಣ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯವಾಗಲಿದ್ದು, ಕ್ಯಾಶ್ ವಿತ್ ಡ್ರಾ, ಠೇವಣಿ, ಚೆಕ್ ಮೊದಲಾದ ವ್ಯವಹಾರಗಳನ್ನು ಇನ್ನೆರಡು ದಿನಗಳಲ್ಲಿ ನಿಮ್ಮ ಬ್ಯಾಂಕಿಂಗ್ ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳಿ.
ರಜೆ ಏನು?: ಅಕ್ಟೋಬರ್ 24ರಂದು 4ನೇ ಶನಿವಾರದ ರಜೆಯಾಗಿದ್ದು, ಅಕ್ಟೋಬರ್ 25 ಭಾನುವಾರ ಮತ್ತು ಆಯುಧ ಪೂಜೆ ರಜೆ ಇರಲಿದೆ. ಅಕ್ಟೋಬರ್ 26 ಸೋಮವಾರ ವಿಜಯದಶಮಿ ಹಬ್ಬದ ನಿಮಿತ್ತ ರಜೆ ಇರಲಿದೆ. ಅಂತೆಯೇ ಅಕ್ಟೋಬರ್ 30 ಶುಕ್ರವಾರದಂದು ಈದ್ ಮಿಲಾದ್ ಇದ್ದು, ಅಕ್ಟೋಬರ್ 31ರಂದು ಮಹರ್ಷಿ ವಾಲ್ಮೀಕಿ ಜಯಂತಿ ಮತ್ತು ನವೆಂಬರ್ 1 ಭಾನುವಾರ ಕನ್ನಡ ರಾಜ್ಯೋತ್ಸವ ಇರಲಿದೆ.

Categories
ವ್ಯವಹಾರ

ಮಂಗಳೂರಿನಿಂದ ಮೈಸೂರಿಗೆ ವಿಮಾನ ಸೇವೆ?

  • ಅಕ್ಟೋಬರ್ 25ರಿಂದ ಸೇವೆ ಪ್ರಾರಂಭಕ್ಕೆ ಸಿದ್ಧತೆ

ಮೈಸೂರು: ಮಂಗಳೂರಿನಿಂದ ಮೈಸೂರಿಗೆ ವಿಮಾನ ಸೇವೆ ಪ್ರಾರಂಭಿಸಲು ಏರ್ ಇಂಡಿಯಾ ನಿರ್ಧರಿಸಿದೆ.
ಟ್ರಯಲ್ ರನ್ ನಂತರ ಕಾರ್ಯಸಾಧ್ಯತಾ ವರದಿಯನ್ನು ಆಧರಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಅಕ್ಟೋಬರ್ 25ರಿಂದ ಸೇವೆ ಪ್ರಾರಂಭವಾಗುವ ಸಾಧ್ಯತೆ ಇದೆ.ಈಗ ರಸ್ತೆ ಮತ್ತು ರೈಲು ಮೂಲಕ ಸಂಪರ್ಕ ಹೊಂದಿರುವ ಈ ಎರಡು ನಗರಗಳ ನಡುವೆ ವಿಮಾನ ಸೇವೆ ಪ್ರಾರಂಭಿಸುವಂತೆ ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಮತ್ತುಕೆಲವು ಕೈಗಾರಿಕೋದ್ಯಮಿಗಳು ವೈಮಾನಿಕ ಸಂಸ್ಥೆಗೆ ಮನವಿ ಮಾಡಿದ್ದರು. ಏರ್ ಇಂಡಿಯಾ ಬೆಂಗಳೂರಿನಿಂದ ಮಂಗಳುರಿಗೆ ಬೆಳಿಗ್ಗೆ 6.50ಕ್ಕೆ ಬರುವ ವಿಮಾನವನ್ನೇ ಮೈಸೂರಿನ ಕಡೆ ತಿರುಗಿಸುವ ಸೂಚನೆ ಇದೆ. ಈ ವಿಮಾನ ಬೆಳಿಗ್ಗೆ 7.55ಕ್ಕೆ ಮೈಸೂರಿನಿಂದ ಹೊರಟು ಬೆಳಿಗ್ಗೆ 8.50ಕ್ಕೆ ಮಂಗಳೂರು ತಲುಪಲಿದೆ ಎಂದು ಹೇಳಲಾಗಿದೆ.

Categories
ವ್ಯವಹಾರ

ಎಟಿಎಂನಲ್ಲಿ ತಿಂಗಳಿಗೆ 5 ಬಾರಿ ಮಾತ್ರ ಉಚಿತ!

  • 5000 ರೂ ಮೇಲಿನ ವಿತ್ ಡ್ರಾಗೆ ಶುಲ್ಕ
  • ಹೆಚ್ಚುವರಿ 24 ರೂಪಾಯಿ ಪಾವತಿಗೆ ಸಿದ್ಧರಾಗಿ…

ನವದೆಹಲಿ: ಎಟಿಎಂನಲ್ಲಿ ತಿಂಗಳಿಗೆ 5 ಬಾರಿ ಮಾತ್ರ ಉಚಿತ!. 5000 ರೂ ಮೇಲಿನ ವಿತ್ ಡ್ರಾಗೆ ಶುಲ್ಕ. ಹೌದು. ಭಾರತೀಯ ರಿಸರ್ವ್ ಬ್ಯಾಂಕ್ ಬಹಳ ವರ್ಷಗಳ ನಂತರ ಎಟಿಎಂ ವಿತ್ ಡ್ರಾ ಮೇಲಿನ ಶುಲ್ಕ ವಿಧಿಸುವ ನಿಯಮದಲ್ಲಿ ಕೆಲ ಮಹತ್ವದ ಬದಲಾವಣೆ ತರಲು ಮುಂದಾಗಿದೆ.
ಬ್ಯಾಂಕ್ ಗ್ರಾಹಕರು 5000 ಸಾವಿರಕ್ಕಿಂತ ಹೆಚ್ಚು ಹಣ ಡ್ರಾ ಮಾಡಿದಾಗ ವಿಧಿಸಲಾಗುತ್ತಿದ್ದಂತ ಶುಲ್ಕದಿಂದ ವಿನಾಯಿತಿ ನೀಡುವ ನಿಯಮದಲ್ಲಿ ಬದಲಾವಣೆಗೆ ಮುಂದಾಗಿದೆ.
ಎಟಿಎಂನಿಂದ 5000 ರೂಪಾಯಿಗಿಂತ ಹೆಚ್ಚು ಹಣ ಡ್ರಾ ಮಾಡಿದರೆ, ಈ ಮೊತ್ತಕ್ಕೆ ನೀವು ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ. ಎಂಟು ವರ್ಷಗಳ ನಂತರ ಎಟಿಎಂ ವಿತ್ ಡ್ರಾ ನಿಯಮಬದಲಿಸಲು ಸಿದ್ಧತೆ ಮಾಡಿದೆ. ಈ ಹೊಸ ನಿಯಮವು ಎಟಿಎಂಗಳಿಂದ ತಿಂಗಳಿಗೆ ಐದು ಬಾರಿ ಉಚಿತ ಹಣ ಪಡೆಯುವುದಕ್ಕೆ ಅನ್ವಯಿಸುವುದಿಲ್ಲ.
ವರದಿಗಳ ಪ್ರಕಾರ, ಎಟಿಎಂನಿಂದ 5000 ರೂಪಾಯಿಗಿಂತ ಹೆಚ್ಚು ಹಣವನ್ನು ಹಿಂತೆಗೆದುಕೊಳ್ಳುವ ಗ್ರಾಹಕರು ಹೆಚ್ಚುವರಿ 24 ರೂಪಾಯಿ ಪಾವತಿಸಬೇಕಾಗಲಿದೆ. ಎಟಿಎಂಗಳಿಂದ ನಗದು ವಿತ್ ಡ್ರಾ ಮಾಡುವ ನಿಯಮಗಳ ಪ್ರಕಾರ, ತಿಂಗಳಿಗೆ ಐದು ಬಾರಿ ಹಣ ಡ್ರಾ ಮಾಡಬಹುದು. ಒಂದು ವೇಳೆ ಒಂದು ತಿಂಗಳಲ್ಲಿ ಐದಕ್ಕಿಂತ ಹೆಚ್ಚು ಬಾರಿ ನಗದು ಹಿಂತೆಗೆತ ಮಾಡಿದರೆ, ಆರನೇ ವಿತ್ ಡ್ರಾಗೆ 20 ರೂಪಾಯಿ ಶುಲ್ಕ ಪಾವತಿಸಬೇಕಾಗಿತ್ತು, ಇಂತಹ ಹೆಚ್ಚವರಿ ವಿತ್ ಡ್ರಾ ಶುಲ್ಕವನ್ನು ರದ್ದು ಪಡಿಸಲು ಇದೀಗ ಆರ್‍ಬಿಐ ಮುಂದಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಸಮಿತಿ ಮಾಡಿರುವ ಶಿಫಾರಸುಗಳ ಆಧಾರದ ಮೇಲೆ ಎಟಿಎಂಗಳಿಂದ ಹಣ ಡ್ರಾ ಮಾಡುವ ನಿಯಮ ಬದಲಿಸಲಾಗಿದೆ. ಆದರೆ, ಸಮಿತಿಯ ವರದಿ ಇನ್ನೂ ಬಹಿರಂಗಗೊಂಡಿಲ್ಲ. ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಕೇಳಲಾದ ಮಾಹಿತಿಯಲ್ಲಿ ಈ ವಿವರ ನೀಡಲಾಗಿದೆ.

Categories
ವ್ಯವಹಾರ

ಮೈಸೂರು ವಿವಿ ಜತೆ ಐಬಿಎಂ, ಗೂಗಲ್!

  • ಮೋದಿ ಮಾತು ಬಳಿಕ ವಿವಿಗೆ ಅವಕಾಶ

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ ಕಂಪ್ಯೂಟರ್ ಸೈನ್ಸ್ ವಿಭಾಗದ ಜೊತೆಗೆ ದೈತ್ಯ ಐಟಿ ಸಂಸ್ಥೆಗಳಾದ ಐಬಿಎಂ ಹಾಗೂ ಗೂಗಲ್ ಒಡಂಬಡಿಕೆಗೆ ಮುಂದಾಗಿದೆ. ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಗೆ ಪೂರಕವಾಗುವ ನಿಟ್ಟಿನಲ್ಲಿ ಈ ಸಂಸ್ಥೆಗಳು ಕಾರ್ಯೋನ್ಮುಖವಾಗಲಿವೆ .ಮೈಸೂರು ವಿವಿ 100ನೇ ಘಟಿಕೋತ್ಸವ ಕಾರ್ಯಕ್ರಮದ ಪ್ರಧಾನ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಯಂತೆ ವಿವಿಯ ಎಲ್ಲಾ ವಿಭಾಗಗಳು ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ವಿಭಾಗಕ್ಕೆ ಸಂಬಂಧಿಸಿದ ಉದ್ಯಮಗಳೊಂದಿಗೆ ಸಂಪರ್ಕ ಸಾಧಿಸುವುದು ಅಗತ್ಯವಾಗಿದೆ ಎಂದು ಮೈಸೂರು ವಿವಿ ಕುಲಪತಿ ಪೆÇ್ರ.ಜಿ.ಹೇಮಂತ್ ಕುಮಾರ್ ತಿಳಿಸಿದರು.
ವಿಭಾಗಕ್ಕೆ ಸಂಬಂಧಿಸಿದ ಉದ್ಯಮಗಳ ಸಂಪರ್ಕದಿಂದ ಉದ್ಯೋಗ ಸೇರಿದಂತೆ ಕೌಶಲ್ಯಾಭಿವೃದ್ಧಿಗೆ ಉಪಯೋಗವಾಗಲಿದೆ. ಈ ನಿಟ್ಟಿನಲ್ಲಿ ಎಲ್ಲಾ ವಿಭಾಗಗಳು ತಮ್ಮ ವಿಭಾಗಕ್ಕೆ ಸಂಬಂಧಿಸಿದ ಉದ್ಯಮಗಳ ಸಂಪರ್ಕ ಸಾಧಿಸಬೇಕು ಎಂದಿದ್ದಾರೆ.

Categories
ವ್ಯವಹಾರ

ವೀಸಾ, ಪ್ರಯಾಣದ ನಿಯಮ ಸಡಿಲ

  • ಭಾರತಕ್ಕೆ ಭೇಟಿ ನೀಡಲು ಅವಕಾಶ
  • ಕರೋನಾ ನಿಯಮ ಪಾಲನೆ ಮಾತ್ರ ಕಡ್ಡಾಯ

ನವದೆಹಲಿ: ವೀಸಾ ಹಾಗೂ ಪ್ರಯಾಣದ ಮೇಲೆ ಹೇರಲಾಗಿದ್ದ ನಿಬರ್ಂಧವನ್ನು ಕೇಂದ್ರ ಸರ್ಕಾರ ಸಡಿಲಗೊಳಿಸಿದೆ. ಕರೋನಾ ಹಿನ್ನೆಲೆ ಕಳೆದ ಮಾರ್ಚ್‍ನಿಂದ ಭಾರತದ ಸಾಗರೋತ್ತರ ನಾಗರಿಕರು, ಭಾರತ ಮೂಲದ ವ್ಯಕ್ತಿಗಳು ಹಾಗೂ ವಿದೇಶಿ ಪ್ರಜೆಗಳು ಪ್ರವಾಸಿ ವೀಸಾ ಹೊರತಾಗಿ ಬೇರೆ ಉದ್ದೇಶಗಳಿಗೆ ಭಾರತಕ್ಕೆ ಭೇಟಿ ನೀಡಲು ಅವಕಾಶ ನೀಡಿದೆ. ಈ ಮೂಲಕ ವಿದೇಶಯಾನ ಇನ್ಮುಂದೆ ಸುಲಭವಾಗಲಿದೆ.
ವಿಮಾನಯಾನವನ್ನ ಯಥಾಸ್ಥಿತಿಗೆ ಮರಳಿಸುವ ಉದ್ದೇಶದಿಂದ ಸರ್ಕಾರ ಈ ಪ್ರಮುಖ ನಿರ್ಣಯವನ್ನ ಕೈಗೊಂಡಿದ್ದು, ಅಸ್ತಿತ್ವದಲ್ಲಿರುವ ಎಲ್ಲಾ ವೀಸಾಗಳ ವ್ಯಾಲಿಡಿಟಿಯನ್ನ ಮರುಸ್ಥಾಪಿಸಿದೆ. ಭಾರತಕ್ಕೆ ಬರಲು ಅಥವಾ ಇಲ್ಲಿಂದ ಹೊರಹೋಗಲು ಬಯಸುವ ವಿದೇಶಿ ಪ್ರಜೆಗಳು ಮತ್ತು ಭಾರತೀಯ ಪ್ರಜೆಗಳಿಗೆ ವೀಸಾ ಮತ್ತು ಪ್ರಯಾಣ ನಿಬರ್ಂಧಗಳಲ್ಲಿ ಹಂತಹಂತವಾಗಿ ವಿನಾಯಿತಿ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಆದೇಶದಲ್ಲಿ ತಿಳಿಸಲಾಗಿದೆ.
ಪ್ರವಾಸಿ ವೀಸಾ ಹೊರತುಪಡಿಸಿ ಯಾವುದೇ ಉದ್ದೇಶಕ್ಕಾಗಿ ಭಾರತಕ್ಕೆ ಭೇಟಿ ನೀಡಲು ಬಯಸುವವರು ಅಧಿಕೃತ ವಿಮಾನ ನಿಲ್ದಾಣಗಳ ಮೂಲಕ ಅಥವಾ ಬಂದರು ಚೆಕ್ ಪೆÇೀಸ್ಟ್‍ಗಳ ಮೂಲಕ ವಾಯುಮಾರ್ಗ ಅಥವಾ ನೀರಿನ ಮಾರ್ಗಗಳ ಮೂಲಕ ಭಾರತಕ್ಕೆ ಪ್ರವೇಶಿಸಲು ಅನುಮತಿ ಇದೆ.
ಎಲ್ಲಾ ಪ್ರಯಾಣಿಕರು ಕ್ವಾರಂಟೀನ್ ಹಾಗೂ ಕೊರೊನಾ ನಿಯಮಗಳ ಸಂಬಂಧ ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ಮಾರ್ಗಸೂಚಿಗಳನ್ನ ಪಾಲಿಸಬೇಕಿದೆ.
ವಿಮಾನ ನಿಲ್ದಾಣಗಳು, ಬಂದರು ಗಳ ವಲಸೆ ಚೆಕ್ ಪೆÇೀಸ್ಟ್ ಗಳ ಮೂಲಕ, ವಿಮಾನ ಅಥವಾ ನೀರಿನ ಮಾರ್ಗಗಳ ಮೂಲಕ ಪ್ರವೇಶಿಸಲು ಅವಕಾಶ ನೀಡಲಾಗುವುದು. ಇದರಲ್ಲಿ ವಂದೇ ಭಾರತ್ ಮಿಷನ್ ಅಡಿಯಲ್ಲಿ ಕಾರ್ಯಾಚರಣೆ ಗೊಂಡ ವಿಮಾನ, ವಿಮಾನ ಸಂಚಾರ ವ್ಯವಸ್ಥೆ ಅಥವಾ ನಾಗರಿಕ ವಿಮಾನಯಾನ ಸಚಿವಾಲಯದ ಅನುಮತಿ ಮೇರೆಗೆ ಯಾವುದೇ ನಿಗದಿತ ವಲ್ಲದ ವಾಣಿಜ್ಯ ವಿಮಾನಗಳನ್ನು ಒಳಗೊಂಡಿದೆ.
ಆದರೆ, ಅಂತಹ ಎಲ್ಲ ಪ್ರಯಾಣಿಕರು ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಕಡ್ಡಾಯ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.