Categories
ರಾಜ್ಯ ವೈರಲ್ ವೀಡಿಯೊಗಳು

ಬಸ್ಸಿನ ಮೆಟ್ಟಿಲಿಗೆ ಶಿರವಿಟ್ಟು ನಮಸ್ಕರಿಸಿದ ವೃದ್ದೆ!

– ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದ ಅಜ್ಜಿ
– ಪ್ರತಿ ಮಹಿಳೆಯೂ ಈ ಯೋಜನೆಯ ಹಿಂದಿನ ಪ್ರೇರಕ ಶಕ್ತಿ: ಸಿದ್ದರಾಮಯ್ಯ

NAMMUR EXPRESS NEWS
ಬೆಳಗಾವಿ: ಮಹಿಳೆಯರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಚಾಲನೆ ಸಿಕ್ಕ ಬೆನ್ನಲ್ಲೇ ಧಾರವಾಡದಲ್ಲಿ ವೃದ್ಧೆ ನಿಂಗವ್ವಾಶಿಂಗಾಡಿ ಬಸ್ಸಿನ ಮೆಟ್ಟಿಲಿಗೆ ಶಿರವಿಟ್ಟು ನಮಸ್ಕರಿಸಿ ಬಸ್ಸಿನೊಳಗೆ ಪ್ರವೇಶಿಸಿದ್ದು ಇದೀಗ ಅವರು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಬಸ್ ಹತ್ತುವ ಮುನ್ನ ಅಜ್ಜಿ ಬಸ್ ಮೆಟ್ಟಿಲಿಗೆ ನಮಸ್ಕರಿಸಿದ್ದು ಈ ಕುರಿತು ಫೋಟೋ ವೈರಲ್ ಆಗುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಅಜ್ಜಿಯ ಪೋಟೋ ಹಂಚಿಕೊಂಡು ಯೋಜನೆ ತಂದಿದ್ದಕ್ಕೆ ಸಾರ್ಥಕವಾಯ್ತು ಎಂದು ಹೇಳಿದ್ದಾರೆ.
ಯೋಜನೆ ಬಗ್ಗೆ ಅಜ್ಜಿ ನಿಂಗವ್ವಾ ಶಿಂಗಾಡಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಸಿದ್ದರಾಮಯ್ಯ ಅವರಿಗೆ ಧನ್ಯವಾದ ಹೇಳಿದ್ದಾರೆ.

ಎಲ್ಲ ಹೆಣ್ಣು ಮಕ್ಕಳಿಗೆ ಬಸ್ ಫ್ರೀ ಮಾಡಿದ್ದಕ್ಕೆ ಬಹಳ ಅನುಕೂಲ ಆಗಿದೆ. ಸಿದ್ದರಾಮಯ್ಯನವರಿಗೆ ಒಳ್ಳೆಯದಾಗಲಿ ಎಂದು ಹೇಳಿದ್ದಾರೆ. ಭಾನುವಾರ ಮೊಮ್ಮಗನ ಮನೆ ಗೃಹ ಪ್ರವೇಶ ಇರುವ ಹಿನ್ನೆಲೆ ನಿಂಗವ್ವ ಸಂಗೊಳ್ಳಿಯಿಂದ ಧಾರವಾಡಕ್ಕೆ ಬಂದು ಸವದತ್ತಿ ಕಡೆಗೆ ಪ್ರಯಾಣ ಮಾಡುತ್ತಿದ್ದರು. ಅದೇ ವೇಳೆ ಭಾನುವಾರ ಮಧ್ಯಾಹ್ನದ ಬಳಿಕ ಬಸ್ ಫ್ರೀ ಎಂದು ಗೊತ್ತಾಗಿ ನಿಂಗವ್ವ ಬಸ್ ಮೆಟ್ಟಿಲಿಗೆ ನಮಸ್ಕರಿಸಿದ್ದರು. ಈ ಕುರಿತ ಪೋಟೋ ಭಾರೀ ಸದ್ದು ಮಾಡಿದ್ದು ನೆಟ್ಟಿಗರ ಮೆಚ್ಚುಗೆಗೆ ಕಾರಣವಾಗಿದೆ.

ಶಕ್ತಿ ಯೋಜನೆಯನ್ನು ಹೆಮ್ಮೆಯಿಂದ ಅರ್ಪಿಸಿದ ಸಿಎಂ

ಕುಟುಂಬದ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಹೊತ್ತು ಹಗಲಿರುಳು ಶ್ರಮಿಸುತ್ತಿರುವ ನನ್ನ ಸಹೋದರಿಯರಿಗೆ, ಉಜ್ವಲ ಭವಿಷ್ಯದ ಕನಸು ಕಟ್ಟಿಕೊಂಡು ಶಾಲಾ ಕಾಲೇಜುಗಳಿಗೆ ಪ್ರಯಾಣ ಬೆಳೆಸುವ ವಿದ್ಯಾರ್ಥಿನಿಯರಿಗೆ, ಅನಾರೋಗ್ಯ, ಅಗತ್ಯ ವಸ್ತುಗಳ ಖರೀದಿ ಇನ್ನಿತರ ಕೆಲಸ ಕಾರ್ಯಗಳ ನಿಮಿತ್ತ ಪ್ರಯಾಣ ಮಾಡುವ ನಾಡಿನ ತಾಯಂದಿರಿಗೆ ನಮ್ಮ ಈ ಶಕ್ತಿ ಯೋಜನೆಯನ್ನು ಅತ್ಯಂತ ಹೆಮ್ಮೆಯಿಂದ ಅರ್ಪಿಸುತ್ತಿದ್ದೇನೆ.
ಆರ್ಥಿಕ ಸಂಕಷ್ಟದ ನಡುವೆಯೂ ಬದುಕಿನ ಉತ್ಸಾಹ ಕಳೆದುಕೊಳ್ಳದೆ, ಸವಾಲುಗಳನ್ನು ಮೆಟ್ಟಿನಿಂತು ಹೋರಾಟದ ಮೂಲಕ ಬದುಕು ಕಟ್ಟಿಕೊಂಡಿರುವ ಕನ್ನಡ ನೆಲದ ಪ್ರತಿ ಮಹಿಳೆಯೂ ನಮ್ಮ ಈ ಯೋಜನೆಯ ಹಿಂದಿನ ಪ್ರೇರಕ ಶಕ್ತಿ. ನಾಡಿನ ಎಲ್ಲ ಮಹಿಳೆಯರು ನಮ್ಮ ಈ ಯೋಜನೆಯ ಲಾಭ ಪಡೆದು ಮತ್ತಷ್ಟು ಸಶಕ್ತ ಮತ್ತು ಸ್ವಾವಲಂಬಿಗಳಾಗಲಿ ಎಂದು ಮನಸ್ಪೂರ್ತಿಯಾಗಿ ಹಾರೈಸುತ್ತೇನೆ.

– ಸಿದ್ದರಾಮಯ್ಯ, ಮುಖ್ಯಮಂತ್ರಿ

Categories
ಜಿಲ್ಲಾ ವಾರ್ತೆ ರಾಜಕೀಯ ರಾಜ್ಯ ವೈರಲ್ ವೀಡಿಯೊಗಳು

3 ದೇಶಗಳು ಮುಳುಗುತ್ತೆ, ದೇಶಕ್ಕೆ ಗಂಡಾಂತರ!

  •  ಆಘಾತಕಾರಿ ಭವಿಷ್ಯ ನುಡಿದ ಕೋಡಿಮಠದ ಸ್ವಾಮೀಜಿ
  •  ಗುಡುಗು ಮಿಂಚು ಬಂದು ಅನಾಹುತ: ಸ್ವಾಮೀಜಿ ಹೇಳಿದ್ದೇನು?

ಕೋಲಾರ: ಈ ವರ್ಷದಲ್ಲಿ ದೊಡ್ಡ ಅವಘಡ ನಡೆಯುತ್ತದೆ ಎಂದು ಹೇಳಿದ್ದೆ ಅದರಂತೆ ರೈಲು ದುರಂತ ನಡೆದಿದೆ. ಇನ್ನೂ ಒಂದು ಗಂಡಾಂತರ ದೇಶಕ್ಕೆ ಕಾದಿದೆ. ಈ ವರ್ಷ ಅಚನಕ್ಕಾಗಿ ಗುಡುಗು ಮಿಂಚು, ಬರಲಿದೆ. ಎರಡು ಮೂರು ರಾಷ್ಟ್ರಗಳು ನೀರಲ್ಲಿ ಮುಳುಗಲಿವೆ. ಎಲ್ಲೋ ನಡೆದ ಬಾಂಬ್ ದಾಳಿಯಿಂದ ನಮಗೆ ಸಾಕಷ್ಟು ಅನಾಹುತವಾಗಲಿದೆ ಎಂದು ಕೋಡಿಮಠದ ಸ್ವಾಮೀಜಿ ಹೇಳಿದ್ದಾರೆ.
ಕೋಲಾರ ತಾಲ್ಲೂಕಿನ ಸುಗಟೂರು ಗ್ರಾಮದ ಯೋಗಿ ನಾರಾಯಣ ಮಠಕ್ಕೆ ಭೇಟಿ ನೀಡಿದ ಕೋಡಿಮಠ ಶ್ರೀಗಳು ಭವಿಷ್ಯ ನುಡಿದಿದ್ದಾರೆ.
ಗಿಡ, ಮರ, ದೈವದ, ಆರಾಧ್ಯದ ಸಂಕೇತ. ಮತ್ತೆ ಕೈವಾರ ತಾತಯ್ಯನವರು ಹುಟ್ಟಿ ಬರುವ ಸಂಕೇತ ಇದೆ. ಅಂತಹ ಸೂಚನೆ ಈಗಾಗಲೇ ಸಿಕ್ಕಿದೆ. ಅದರಂತೆ ಬೆಟ್ಟದಲ್ಲಿ ಮೂನ್ಸೂಚನೆ ಸಿಕ್ಕಿದೆ. ರಾಜ್ಯದಲ್ಲಿ ಆಧ್ಯಾತ್ಮಿಕವಾಗಿ ಅವರು ನಡೆಯುತ್ತಿದ್ದಾರೆ. ಹಾಗಾಗಿ ಅವರಿಗೆ ಒಳ್ಳೆಯದಾಗಲಿ‌. ಆಧ್ಯಾತ್ಮ ಬಿಟ್ಟು ಹೋದರೆ ಅವರಿಗೆ ದೈವವೇ ಉತ್ತರ ನೀಡಲಿದೆ ಎಂದು ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಕುರಿತು ಅಭಿಪ್ರಾಯ ತಿಳಿಸಿದರು.

Categories
ವೈರಲ್ ವೀಡಿಯೊಗಳು

ತೃತೀಯ ಲಿಂಗಿಗಳಿಗೂ ಉದ್ಯೋಗ ನೀತಿ!?

ತೃತೀಯ ಲಿಂಗಿಗಳಿಗೂ ಉದ್ಯೋಗ ನೀತಿ!?

  • ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಆದೇಶ
  • ಅಂಗವಿಕಲ ಮಹಿಳೆ ಫುಡ್ ಡೆಲಿವರಿ: ವಿಡಿಯೋ ವೈರಲ್

NAMMUR EXPRESS NEWS
ದೆಹಲಿ: ತೃತೀಯ ಲಿಂಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸೂಕ್ತ ನೀತಿ ರೂಪಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ನಿರ್ದೇಶನ ನೀಡಿದೆ. 2014ರಲ್ಲಿ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾದ ತೃತೀಯಲಿಂಗಿಯೊಬ್ಬರಿಗೆ ಅಂದಿನ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಉದ್ಯೋಗ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಮಧ್ಯಂತರ ಆದೇಶ ಹೊರಡಿಸಿದೆ. ಸೂಕ್ತ ನೀತಿ ರೂಪಿಸುವ ಮೂಲಕ ಕಾಯಿದೆಯ ನಿಬಂಧನೆಗಳನ್ನು ಅಕ್ಷರ ದಲ್ಲಿ ಜಾರಿಗೊಳಿಸಬೇಕು. ಈ ವಿಚಾರವಾಗಿ ಕೇಂದ್ರ ಸರ್ಕಾರ ನೇತೃತ್ವ ವಹಿಸಿ, ರಾಜ್ಯ ಸರ್ಕಾರಗಳು ಮತ್ತು ಕಾಯ್ದೆಯ ವ್ಯಾಪ್ತಿಗೆ ಒಳಪಡುವ ಸಂಸ್ಥೆಗಳು ಸೇರಿದಂತೆ ಇತರೆ ಎಲ್ಲ ಘಟಕಗಳಿಗೆ ಸ್ಪಷ್ಟವಾಗಿ ಮಾರ್ಗದರ್ಶನ ನೀಡಬೇಕು ಎಂದು ಪೀಠ ಹೇಳಿದೆ.

ನೆಟ್ಟಿಗರ ಮನಸ್ಸು ಗೆದ್ದ ಸ್ವಿಗ್ಗಿ ವೀಲ್‌ಚೇ‌ರ್ ಹುಡುಗಿ

ಕೈ-ಕಾಲು ಗಟ್ಟಿಯಿದ್ದರೂ ಭಿಕ್ಷೆ ಬೇಡಿ ತಿನ್ನುವವರು ಅನೇಕರಿದ್ದಾರೆ. ಹಾಗಿರುವಾಗ ಯುವತಿಯೊಬ್ಬರು ನಡೆದಾಡುವ ಕಾಲಿನಲ್ಲಿ ಶಕ್ತಿಯಿಲ್ಲದಿದ್ದರೂ, ಮನೆ ಮನೆಗೆ ತಲುಪಿಸುವ ಕೆಲಸ ಮಾಡುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಆನ್ ಲೈನ್ ಫುಡ್ ಡೆಲಿವರಿ ಆ್ಯಪ್ ಸ್ವಿಗ್ಗಿಯ ಟಿ-ಶರ್ಟ್ ಧರಿಸಿದ ಯುವತಿ ತಮ್ಮ ವೀಲ್‌ ಚೇ‌ರ್ ನಲ್ಲಿಯೇ ಸ್ವಿಗ್ಗಿ ಬ್ಯಾಗ್ ಇಟ್ಟುಕೊಂಡು ಸವಾರಿ ನಡೆಸುತ್ತಿದ್ದಾರೆ. ಅದನ್ನು ಅವರ ಹಿಂದೆ ಸಂಚರಿಸುತ್ತಿದ್ದ ಕಾರಿನಲ್ಲಿದ್ದ ವ್ಯಕ್ತಿ ವಿಡಿಯೋ ಮಾಡಿದ್ದಾರೆ. ವಿಡಿಯೋವನ್ನು ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು ಹಂಚಿಕೊಂಡಿದ್ದು, ‘ಜೀವನ ಕಷ್ಟವೇ. ಆದರೆ ನಾವು ಅದನ್ನು ಒಪ್ಪಿಕೊಂಡು ಎದುರಿಸುವುದನ್ನು ಕಲಿಯಬೇಕು’ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಎಲ್ಲರ ಮನಸ್ಸು ಗೆದ್ದಿದೆ. ಈ ವಿಡಿಯೋ ವೀಕ್ಷಿಸಲು ಹೀಗೆ ಸರ್ಚ್ ಮಾಡಿ: swiggy wheelchair

Categories
ವೈರಲ್ ವೀಡಿಯೊಗಳು

Promo Video

Categories
ವೈರಲ್ ವೀಡಿಯೊಗಳು

ಶ್ರೀ ಮುರಾರಿ ಮಠದ ಕಲ್ಯಾಣಿ ಈಗ ಸ್ವಚ್ಚ ಹಿಂದೂ ಜಾಗೃತಿ ಯುವಸೇನೆ ಹೊಸ ಅಭಿಯಾನ