Categories
ಮಲ್ನಾಡ್

ತೀರ್ಥಹಳ್ಳಿ: ಮತ್ತಷ್ಟು ಕರೋನಾ ಹೆಚ್ಚಳ!

  • ನಿನ್ನೆ 79 ಕೇಸ್:ಪ್ರತಿ ನಿತ್ಯ ಸಾವು: ಹೆಚ್ಚಿದ ಆತಂಕ
  • ಲಸಿಕೆ ಇಲ್ಲ: ಸಿಎಂ ಭೇಟಿ ಮಾಡಿದ ಶಾಸಕ ಜ್ಞಾನೇಂದ್ರ
  • ತೀರ್ಥಹಳ್ಳಿ ಆಟೋ ಚಾಲಕರಿಗೆ ಆಧ್ಯತೆ ಲಸಿಕೆ
  • ಕೋಣಂದೂರು ಬಳಿಕ ಇಂದಿರಾನಗರ ಸೀಲ್ಡೌನ್?!
  • ತೀರ್ಥಹಳ್ಳಿ ಭಜರಂಗ ದಳ, ವಿಎಚ್ಪಿ “ಮಾದರಿ ಸೇವೆ”

ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಲ್ಲಿ ಕರೋನಾ ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ. ಪ್ರತಿ ಹಳ್ಳಿಯಲ್ಲೂ ಸೋಂಕು ಹೆಚ್ಚುತ್ತಿದೆ. ಗುರುವಾರ 79 ಕೇಸ್ ವರದಿಯಾಗಿದೆ. ಸಾವು ಕೂಡ ಸಂಭವಿಸುತ್ತಿವೆ. ತೀರ್ಥಹಳ್ಳಿ ಜೇಸಿ ಆಸ್ಪತ್ರೆಯಲ್ಲಿ 13 ಬೆಡ್ ಲಭ್ಯವಿದೆ.
ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಸಂಪೂರ್ಣ ಲಾಕ್ ಡೌನ್ ಆಗಿದೆ. ಇದೀಗ 1ವಾರ ಕಾಲ ತೀರ್ಥಹಳ್ಳಿ ಪಟ್ಟಣಕ್ಕೆ ಹೊಂದಿಕೊಂಡಿರುವ ಇಂದಿರಾನಗರ ಬಡಾವಣೆ ಸೀಲ್ ಡೌನ್ ಆಗುವ ಸಾಧ್ಯತೆ ಇದೆ.


ಸಿಎಂ ಭೇಟಿ ಮಾಡಿದ ಶಾಸಕ ಆರಗ!: ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಕರೋನಾ ಸೇವೆಯಲ್ಲಿ ರಾಜ್ಯದಲ್ಲೇ ಮುಂಚೂಣಿಯಲ್ಲಿದ್ದಾರೆ. ಆದರೆ ತೀರ್ಥಹಳ್ಳಿ ತಾಲೂಕಿನವರು ಅತೀ ಹೆಚ್ಚು ಮಂದಿ ಬೆಂಗಳೂರಿನಿಂದ ಬಂದ ಕಾರಣ ಕರೋನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಆದರೂ ಆಡಳಿತ, ಶಾಸಕ ಆರಗ ಜ್ಞಾನೇಂದ್ರ, ತಹಶೀಲ್ದಾರ್ ಶ್ರೀಪಾದ್, ಇಒ ಆಶಾಲತಾ, ಎಲ್ಲಾ ಆರೋಗ್ಯಾಧಿಕಾರಿಗಳು, ಎಲ್ಲಾ ಸಿಬ್ಬಂದಿ, ಜನಪ್ರತಿನಿಧಿಗಳು ಶ್ರಮಿಸುತ್ತಿದ್ದಾರೆ. ಈ ನಡುವೆ ಲಸಿಕೆ ಅವ್ಯವಸ್ಥೆ ಜನರಿಗೆ ತೊಂದರೆ ಆಗಿದೆ. ಈ ಹಿನ್ನೆಲೆ ಶಾಸಕ ಆರಗ ಜ್ಞಾನೇಂದ್ರ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ತೀರ್ಥಹಳ್ಳಿ ಕ್ಷೇತ್ರಕ್ಕೆ ಹೆಚ್ಚಿನ ಸೌಲಭ್ಯ ನೀಡುವಂತೆ ಮನವಿ ಮಾಡಿದ್ದಾರೆ.


ಆಟೋ ಚಾಲಕರಿಗೆ ಲಸಿಕೆ!: ತೀರ್ಥಹಳ್ಳಿ ತಾಲೂಕಿನ ಎಲ್ಲಾ ಆಟೋ ಚಾಲಕರು ಲಸಿಕೆ ಪಡೆಯಲು ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷರಾದ ಸೊಪ್ಪುಗುಡ್ಡೆ ರಾಘವೇಂದ್ರ ಅವರನ್ನು ಸಂಪರ್ಕಿಸಬಹುದು. ಸರಕಾರ ಆಟೋ ಚಾಲಕರನ್ನು ಫ್ರಂಟ್ ಲೈನ್ ವಾರಿಯರ್ ಎಂದು ಘೋಷಿಸಿದೆ. ಸೊಪ್ಪುಗುಡ್ಡೆ ರಾಘವೇಂದ್ರ ಅವರ ದೂರವಾಣಿ ಸಂಖ್ಯೆ 9448255953.


ತೀರ್ಥಹಳ್ಳಿ ತಾಲೂಕಿನ ಸುತ್ತ ಮುತ್ತ ಕರೋನಾದಿಂದ ಯಾವುದೇ ಸಮಯದಲ್ಲಿ ತೊಂದರೆ ಆದರೆ ಅಂಬುಲೆನ್ಸ್ ವ್ಯವಸ್ಥೆ, ಮನೆಗೆ ದಿನಸಿ, ಆಸ್ಪತ್ರೆಗೆ ಕರೆದುಕೊಂಡು ಹೋಗುವ ವ್ಯವಸ್ಥೆ, ಕರೋನ ಪೀಡಿತ ವ್ಯಕ್ತಿಯ ಶವ ಸಂಸ್ಕಾರ, ಇನ್ನಿತರ ಸಹಕಾರಕ್ಕೆ ತೀರ್ಥಹಳ್ಳಿ ಭಜರಂಗದಳ ಮತ್ತು ವಿಶ್ವ ಹಿಂದು ಪರಿಷತ್ ಕಾರ್ಯಕರ್ತರು ಸಜ್ಜಾಗಿದ್ದಾರೆ. ತಾಲೂಕಿನ ಯಾವುದೇ ಮೂಲೆಯಲ್ಲಿದ್ದರೂ ಸೇವೆ ನೀಡುತ್ತಿದ್ದಾರೆ. ತುರ್ತು ಸಂಧರ್ಭದಲ್ಲಿ ಸಂಪರ್ಕಿಸಲು ತಂಡ ರಚನೆ ಮಾಡಿ ಸೇವೆ ಮಾಡುತ್ತಿದ್ದಾರೆ.


ಸಂಪರ್ಕಕ್ಕೆ….ಗಣೇಶ್ ಪ್ರಸಾದ್ (ತೀರ್ಥಹಳ್ಳಿ ತಾಲೂಕು ವಿಶ್ವ ಹಿಂದು ಪರಿಷತ್ತು ಮತ್ತು ಭಜರಂಗದಳ ಕಾರ್ಯದರ್ಶಿ). 9611020807
ಮದನ್ ನಾಯ್ಕ್ ಗೊರ್ಕೊಡು (ತೀರ್ಥಹಳ್ಳಿ ತಾಲ್ಲೂಕು ಭಜರಂಗದಳ ಗೋ ರಕ್ಷಕ್ ಪ್ರಮುಖ್)7026337212
ಶಶಿ ಕುಂದರ್ (ತೀರ್ಥಹಳ್ಳಿ ಭಜರಂಗದಳ ನಗರ ಸಂಚಾಲಕರು).9481063825, ಮಹಂತ್ (ತೀರ್ಥಹಳ್ಳಿ ಭಜರಂಗದಳ ಸಂಚಾಲಕರು), 8277173803
ವಿಶ್ವನಾಥ ಗಾಣಿಗ:8546815561.

Categories
ಮಲ್ನಾಡ್

ರಸ್ತೆ ಮಧ್ಯೆ ಹೆಣವಾದ ಡಾಕ್ಟರ್: ಶಾಸಕನ ಹೇಡಿತನ..!?

  • ತರೀಕೆರೆಯ ಅರೋಗ್ಯಧಿಕಾರಿ ಅಪಘಾತಕ್ಕೆ ಬಲಿ
  • ಇನ್ನೋವಾ ಕಾರಲ್ಲಿ ಕುಳಿತು ನೋಡುತ್ತಿದ್ದ ಶಾಸಕ
  • ತರೀಕೆರೆ ಶಾಸಕ ಸುರೇಶ್ ಅಮಾನವೀಯ ಮುಖ
  • ಬಿಜೆಪಿ ಶಾಸಕನ ವಿರುದ್ಧ ಜನಾಕ್ರೋಶದ ಕಿಡಿ..!
  • ಕಾರಿನಿಂದ ಇಳಿಯದ ಶಾಸಕ: ಲಕ್ಕವಳ್ಳಿ ಬಳಿ ಘಟನೆ
  • ನಾನು ಅನಾರೋಗ್ಯದಿಂದ ನಿದ್ದೆ ಮಾಡಿದ್ದೆ: ಶಾಸಕ

ತರೀಕೆರೆ: ಬಿಜೆಪಿ ಶಾಸಕನೊಬ್ಬನ ಅಮಾನವೀಯ ವರ್ತನೆಗೆ ಓರ್ವ ವೈದ್ಯ ಬಲಿಯಾಗಿದ್ದಾನೆ. ಹೌದು. ಇಂತಹ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಬಳಿ ನಡೆದಿದ್ದು, ಇದೀಗ ತರೀಕೆರೆ ಬಿಜೆಪಿ ಶಾಸಕನ ವಿರುದ್ಧ ಎಲ್ಲೆಡೆ ಜನಾಕ್ರೋಶ ವ್ಯಕ್ತವಾಗಿದೆ.

ಕರೊನಾ ಕರ್ತವ್ಯ ಮುಗಿಸಿ‌ ಹಿಂದಿರುಗುವಾಗ ತರೀಕೆರೆ ತಾಲೂಕು ಹಿರಿಯ ಆರೋಗ್ಯಾಧಿಕಾರಿ ಬೈಕ್ ಲಕ್ಕವಳ್ಳಿ ಕ್ರಾಸ್ ಬಳಿ ಅಪಘಾತಕ್ಕೆ ಒಳಗಾಗಿದೆ. ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ರಕ್ತದ ಮಡುವಿನಲ್ಲಿ ಒದ್ದಾಟ ನಡೆಸುತ್ತಿದ್ದರು. ಈ ವೇಳೆ ಅದೇ ಮಾರ್ಗವಾಗಿ ತರೀಕೆರೆ ಶಾಸಕ ಸುರೇಶ್ ತಮ್ಮ ಕಾರಿನಿಂದ‌ ಕೆಳಗಿಳಿಯದೇ ವೈದ್ಯ ರಸ್ತೆಯಲ್ಲಿ ಬಿದ್ದರೂ ನೆರವಿಗೆ ಧಾವಿಸುವ ಪ್ರಯತ್ನ ಮಾಡಿಲ್ಲ. ಪರಿಣಾಮ ವೈದ್ಯರ ಪ್ರಾಣ ಪಕ್ಷಿ ಹಾರಿ ಹೋಗಿದೆ. ಶಾಸಕರು ಅಲ್ಲಿಂದ 5 ಕಿಮೀ ವ್ಯಾಪ್ತಿಯ ತರೀಕೆರೆ ಆಸ್ಪತ್ರೆಗೆ ತಕ್ಷಣಕ್ಕೆ ಕೊಂಡೋಯ್ದಿದ್ದರೆ ಬದುಕುವ ಸಾಧ್ಯತೆ ಇತ್ತು.ಆಂಬುಲೆನ್ಸ್ ಕೂಡ ಘಟನಾ ಸ್ಥಳಕ್ಕೆ ಬರುವುದು ತಡವಾಯಿತು. ಈ ಕಾರಣ ವೈದ್ಯರು ಜೀವ ಕಳೆದುಕೊಂಡಿದ್ದಾರೆ. ಅರ್ಧ ಗಂಟೆ ಸಮಯ ವ್ಯರ್ಥ ಮಾಡುವ ಬದಲು ಅವರ ಕಾರಿನಲ್ಲೇ ಕರೆದೊಯ್ದಿದ್ದರೆ ಪ್ರಾಣ ಉಳಿಯುವ ಸಾಧ್ಯತೆ ಇತ್ತು. ಇದೀಗ ಸುರೇಶ್ ನಡೆ ಇಡೀ ರಾಜಕೀಯ ವ್ಯವಸ್ಥೆಗೆ ಕಪ್ಪುಚುಕ್ಕೆಯಾಗಿದೆ.

ಅರ್ಧ ಗಂಟೆ ಬಳಿಕ ಆಂಬುಲೆನ್ಸ್ ನಲ್ಲಿ ಶಿವಮೊಗ್ಗಕ್ಕೆ ಕರೆದೊಯ್ಯುವಾಗ ಮಾರ್ಗಮಧ್ಯೆ ರಮೇಶ್ ಅವರು ಸಾವನ್ನಪ್ಪಿದ್ದು ಇದೀಗ ಈ ಘಟನೆ ದೇಶದ ಗಮನ ಸೆಳೆದಿದೆ. ಈ ನಡುವೆ ಶಾಸಕರ ಈ ವರ್ತನೆ ವಿಡಿಯೋ ಮಾಡಿದವರ ಬಗ್ಗೆ ಕ್ರಮ ತೆಗೆದುಕೊಳ್ಳಲು ಶಾಸಕರು ಮುಂದಾಗಿದ್ದಾರೆ ಎನ್ನಲಾಗಿದ್ದು, ಇದು ಜನರ ಮತ್ತಷ್ಟು ಕೋಪಕ್ಕೆ ಕಾರಣವಾಗಿದೆ.
ಕರೋನಾ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ವೈದ್ಯರ ಜೀವ ಉಳಿಸುವುದು ದೇವರ ದಯೆ. ಆದರೆ ಕನಿಷ್ಠ ಜನ ನಾಯಕನಾಗಿ ಸಹಾಯ ಮಾಡಿದ್ದರೇ ಸುರೇಶ್ ಕೂಡ ದೇವರಾಗುತ್ತಿದ್ದರು. ತರೀಕೆರೆ ಶಾಸಕ‌ರ ವರ್ತನೆಗೆ ರಾಜ್ಯದ ಎಲ್ಲಾ ಜನತೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಶಾಸಕರು ಹೇಳಿದ್ದೇನು..?: ನನಗೆ ಕಣ್ಣು ನೋವು ಹೆಚ್ಚಾಗಿದ್ದು, ಕಾರಿನಲ್ಲಿ ಮಲಗಿದ್ದೆ. ಆಪ್ತ ಸಹಾಯಕ ಮತ್ತು ಚಾಲಕನನ್ನು ಕಳುಹಿಸಿದ್ದೆ. ವಿಡಿಯೋ ತೆಗೆದವರ ವಿರುದ್ಧ ತನಿಖೆ ಮಾಡಲಾಗುವುದು ಎಂದು ಸುರೇಶ್ ಹೇಳಿದ್ದಾರೆ. ಈ ಹೇಳಿಕೆ ಸುಳ್ಳು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

ಕರೋನಾ ಸಮಯದಲ್ಲಿ ರಾಜಕಾರಣ ಬಿಟ್ಟು ರಾಜಕಾರಣಿಗಳು ಸೇವೆ ಮಾಡಬೇಕು. ಆದರೆ ಕೆಲ ಶಾಸಕರು, ನಾಯಕರು ಇನ್ನು ಅಹಂಕಾರ ಬಿಟ್ಟಿಲ್ಲ. ಬಿಜೆಪಿ ಎಲ್ಲಾ ಶಾಸಕರ ಪೈಕಿ ಹೊನ್ನಾಳಿಯ ರೇಣುಕಾಚಾರ್ಯ, ತೀರ್ಥಹಳ್ಳಿಯ ಆರಗ ಜ್ಞಾನೇಂದ್ರ ಶಿವಮೊಗ್ಗದ ಈಶ್ವರಪ್ಪ, ಸಾಗರದ ಹಾಲಪ್ಪ ಹಗಲು ಇರುಳು ಸೇವೆ ಸಲ್ಲಿಸುತ್ತಿದ್ದಾರೆ. ಹಳ್ಳಿಯಿಂದ ದಿಲ್ಲಿವರೆಗೆ ಯಾರು ಜನ ಸೇವೆ ಮಾಡುತ್ತಾರೆ ಅವರಿಗೆ ಮಾತ್ರ ಬೆಲೆ ಕೊಡಿ. ಇಲ್ಲವೇ ಮನೆಗೆ ಕಳುಹಿಸಿ. ಯಾವ ಪಕ್ಷ, ಯಾವ ಧರ್ಮ, ಯಾವ ಜಾತಿ, ಶ್ರೀಮಂತ ಬಡವ ಬೇಡ. ಸೇವೆಯೇ ಈಗ ಮಾನದಂಡ.

Categories
ಮಲ್ನಾಡ್

ಪದೇ ಪದೇ ಮೀಟಿಂಗ್: ಕರೋನಾ ಹೆಚ್ಚಳ, ಪ್ರಯೋಜನ ಇಲ್ಲ..!

  • ಲಸಿಕೆ ಇಲ್ಲದಿದ್ರೂ ಸಚಿವರ ಬಾಯಿ ಪ್ರಚಾರ!
  • ಆಶಾ ಕಾರ್ಯಕರ್ತೆಯರ ಸೇವೆಗೆ ಬೆಲೆ ಇಲ್ವೇ..?
  • ಯುವ ಚಿಂತಕ ಶಶಾಂಕ್ ಹೆಗ್ಡೆ ಪ್ರಶ್ನೆ


ತೀರ್ಥಹಳ್ಳಿ: ಕರೋನಾದ ತುರ್ತು ನಡುವೆ ಆಡಳಿತದ ಗೊಂದಲ ಮತ್ತು ಸಚಿವರು, ಶಾಸಕರ ಹೇಳಿಕೆ ಗೊಂದಲದಿಂದ ಜನತೆಗೆ ತೊಂದರೆಯಾಗುತ್ತಿದೆ. ಲಸಿಕೆ ಒಂದು ದಿನ ಕೊಟ್ಟು ಮತ್ತೆ ಮಾರನೇ ದಿನ ಇರುವುದಿಲ್ಲ. ಟಿವಿಯಲ್ಲಿ ಸಚಿವರು ಲಸಿಕೆ, ಆಕ್ಸಿಜನ್, ಬೆಡ್ ಕೊರತೆ ಇಲ್ಲ ಎಂದು ಹೇಳಿಕೆ ನೀಡುತ್ತಿರುವುದೇ ಎಲ್ಲಾ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂದು ಮಲೆನಾಡಿನ ಯುವ ಚಿಂತಕ, ರಾಜಕಾರಣಿ ಶಶಾಂಕ್ ಹೆಗ್ಡೆ ಗುಡ್ಡೆಕೇರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ನಮ್ಮೂರ್ ಎಕ್ಸ್ಪ್ರೆಸ್ ಮಧ್ಯಮದ ಜತೆ ಮಾತನಾಡಿದ ಅವರು, ತಾಲೂಕು ಕೇಂದ್ರದಲ್ಲಿ ಲಸಿಕೆ ಇದೆ ಎಂದು ಜನ ಮುಂಜಾನೆ ಮುಗಿ ಬೀಳುತ್ತಾರೆ. ಲಸಿಕೆ ಇದೆ ಎಂದು ಗೊಂದಲ ಮಾಡಬೇಡಿ. ಇಲ್ಲವಾದರೆ ಸತ್ಯ ಒಪ್ಪಿಕೊಳ್ಳಿ. ಜನತೆಗೆ ತೊಂದರೆ ಆಗಬಾರದು. ಜನರಿಗೆ ಲಸಿಕೆ ನೀಡಲು ಸಾಧ್ಯವಾಗದಿದ್ದರೆ, ಅವೈಜ್ಞಾನಿಕ ಮಾಹಿತಿ ನೀಡುವುದನ್ನು ನಿಲ್ಲಿಸಬೇಕು ಎಂದು ಅವರು ಹೇಳಿದ್ದಾರೆ.


ಬಿಜೆಪಿ ನಾಯಕರು ಲಸಿಕೆಯ ಕುರಿತಂತೆ ತಪ್ಪುಸಂದೇಶಗಳನ್ನು ಹರಡುತ್ತಿರುವ ಮಾಹಿತಿಗಳು ಬರುತ್ತಿವೆ.‌ ಲಸಿಕಾ ಕೇಂದ್ರದ ಮುಂದೆ ಜನ ಸೇರುತ್ತಾರೆ. ಕೊನೆಗೆ ಲಸಿಕೆ ಇಲ್ಲದೆ ಮನೆಗೆ ಬರುವ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.


ಆಶಾ ಕಾರ್ಯಕರ್ತರು, ಅಂಗನವಾಡಿ ಶಿಕ್ಷಕಿಯರ ಗೋಳು: ಪದೇ ಪದೇ ಗ್ರಾಮ ಮಟ್ಟದಲ್ಲಿ ಟಾಸ್ಕ್ ಪೋರ್ಸ್ ಸಭೆ ನಡೆಸುವ ಮೂಲಕ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕಿಯರಿಗೆ ತೊಂದರೆ ಆಗುತ್ತಿದೆ. ಮೊದಲೇ ವಾಹನ ವ್ಯವಸ್ಥೆ ಇಲ್ಲ. ಕೆಲವೊಮ್ಮೆ ಸಭೆಯೇ ನಡೆಯಲ್ಲ. 50-100 ಜನ ಸೇರುವುದರಿಂದ ಕರೋನಾ ಹರಡುವ ಸಾಧ್ಯತೆ ಇದೆ. ತೀರ್ಥಹಳ್ಳಿ ಆಡಳಿತ ಈ ಬಗ್ಗೆ ಗಮನ ಹರಿಸಿ ಮೊಬೈಲ್ ಮೂಲಕವೇ ಮಾಹಿತಿ ನೀಡುವುದು ಒಳಿತು ಎಂದು ಶಶಾಂಕ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕಿಯರು, ವೈದ್ಯ ಸಿಬ್ಬಂದಿಗೆ ಅಗತ್ಯ ಸುರಕ್ಷತಾ ವಸ್ತು ಕೊಡಬೇಕು. ಕರೋನಾ ತುರ್ತು ಪರಿಸ್ಥಿತಿಯಲ್ಲಿ ಅವರ ಸೇವೆಗೆ ಸರಕಾರ ಬೆಲೆ ಕೊಡಬೇಕು ಎಂಬುದು ನಮ್ಮೂರ್ ಎಕ್ಸ್ಪ್ರೆಸ್ ಅಗ್ರಹ.

Categories
ಮಲ್ನಾಡ್

ಕರೋನಾ ನಡುವೆ ಅಕ್ರಮ, ಮಾಪಿಯಾ ಸದ್ದು..!

  • ಮರಳು, ಕಲ್ಲು,ಭೂ ಒತ್ತುವರಿ, ಅರಣ್ಯ ಅಕ್ರಮ
  • ಹಳ್ಳಿ ಹಳ್ಳಿಯಲ್ಲೂ ಅಕ್ರಮ ಮದ್ಯದ ಅಮಲು
  • ಬಾಲಕಿ ಮೇಲೆ ರೇಪ್: ಓರ್ವ ಅರೆಸ್ಟ್..!
  • ತಂದೆಯನ್ನು ಕೊಡಲಿಯಿಂದ ಕೊಚ್ಚಿದ ಮಗ!


ಮಲೆನಾಡು: ಮಲೆನಾಡಲ್ಲಿ ಒಂದು ಕಡೆ ಕರೋನಾ ಕೇಕೆ ಹಾಕಿ ನೂರಾರು ಬಲಿ ಪಡೆಯುತ್ತಿದೆ. ಪ್ರತಿ ದಿನ ಜನ ಹಾಸಿಗೆ ಮೇಲೆ ನರಳಾಟ ನಡೆಸುತ್ತಿದ್ದಾರೆ. ಆದರೆ ಅಕ್ರಮಗಳು ಹೆಚ್ಚಿವೆ. ರಾತ್ರಿ ಹಗಲು ಕಲ್ಲು, ಮರಳು, ಮರ, ಭೂ ಒತ್ತುವರಿ, ಅಕ್ರಮ ಮದ್ಯ ಸೇರಿದಂತೆ ಅನೇಕ ಅಕ್ರಮಗಳು ಸದ್ದಿಲ್ಲದೇ ನಡೆಯುತ್ತಿದೆ. ಮಲೆನಾಡಿನ ತೀರ್ಥಹಳ್ಳಿ, ಶೃಂಗೇರಿ, ಹೊಸನಗರ, ಸಾಗರ, ಕೊಪ್ಪ ಸೇರಿ ಇಲ್ಲಾ ತಾಲೂಕಲ್ಲಿ ಅಕ್ರಮ ಒಳಗಿಂದ ನಡೆಯುತ್ತಿದೆ.


ತೀರ್ಥಹಳ್ಳಿಯಲ್ಲಿ ಕರೋನಾ ನಡುವೆಯೂ ಕುರುವಳ್ಳಿ ಸೇರಿ ಹಲವೆಡೆ ಕಲ್ಲು ಅಕ್ರಮ ನಡೆಯುತ್ತಿದೆ. ಮರಳು ಕ್ವಾರಿಗಳಲ್ಲಿ ಡಬಲಿಂಗ್ ನಡೆಯುತ್ತಿದೆ. ಅಕ್ರಮಕ್ಕೆ ಕೆಲವರ ಸಾಥ್ ಕಾಣುತ್ತಿದೆ.


ಪ್ರತಿ ಹಳ್ಳಿಯಲ್ಲಿ ಅರಣ್ಯ ನಾಶ ಆಗುತ್ತಿದೆ. ಭೂ ಒತ್ತುವರಿ ಕಾಣುತ್ತಿದೆ. ಅಕ್ರಮವಾಗಿ ತೋಟ ಮಾಡಲಾಗುತ್ತಿದೆ. ಮಣ್ಣು ಅಗೆಯಲಾಗುತ್ತಿದೆ. ಕರೋನಾ ನಡುವೆಯೂ ಜನರು ಅರಣ್ಯ ಲೂಟಿ ಮಾಡುತ್ತಿದ್ದಾರೆ. ಅರಣ್ಯ ಇಲಾಖೆ ಎಲ್ಲದರಲ್ಲೂ ಹಣ ಮಾಡುವ ಪ್ಲಾನ್ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.


ಅಕ್ರಮ ಮದ್ಯ: ಅಬಕಾರಿ ಇಲಾಖೆ ನಿದ್ದೆ ಮಾಡುತ್ತಿದೆ. ಇಲ್ಲಾ ವೈನ್ಸ್ ಮಾಲೀಕರ ಜತೆ ಶಾಮೀಲಾಗಿದ್ದಾರೆ. ಹಳ್ಳಿ ಹಳ್ಳಿಯಲ್ಲೂ ಅಕ್ರಮ ಮದ್ಯ ಸಿಗುತ್ತಿದೆ. ಕದ್ದು ಮುಚ್ಚಿ ಮಾರಲಾಗುತ್ತಿದೆ. ಅಬಕಾರಿ ಇಲಾಖೆ ಇದ್ದು ಇಲ್ಲದಂತಾಗಿದೆ.


ತೀರ್ಥಹಳ್ಳಿಯ ಬೆಜ್ಜವಳ್ಳಿಯಲ್ಲಿ ಓರ್ವ ಯುವಕ ಮದ್ಯ ಚಟಕ್ಕೆ ಬಲಿಯಾಗಿದ್ದಾನೆ.. ಮೂಡಿಗೆರೆ ಬಾಳೂರು ವ್ಯಾಪ್ತಿಯಲ್ಲಿ ಮದ್ಯ ಕುಡಿಯಲು ಹಣ ಕೊಡದಕ್ಕೆ, ಕುಡಿದ ಮತ್ತಲ್ಲಿ ಯುವಕ ತಂದೆ ತಾಯಿ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ. ಮೂಡಿಗೆರೆ ತಾಲೂಕು ಚನ್ನಹಡ್ಲು ಬಳಿ ಘಟನೆ ನಡೆದಿದೆ. ಹಲ್ಲೆಯಲ್ಲಿ ತಂದೆ ಗಂಭೀರ ಗಾಯಗೊಂಡಿದ್ದಾರೆ. ಬಳಿಕ ಮಗನೆ ಪೊಲೀಸರಿಗೆ ಶರಣಾಗಿದ್ದಾನೆ.
ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಬಳಿ ಸಿಂಗನಬಿದಿರೆಯಲ್ಲಿ ತನ್ನ ಅಕ್ಕನ ಮಗಳ ಮೇಲೆಯೇ ಅತ್ಯಾಚಾರ ಮಾಡಿದ ಮಾವ ಜೈಲು ಪಾಲಾಗಿದ್ದಾನೆ. ಕರೋನಾ ವೇಳೆ ಈ ಘಟನೆ ನಡೆದಿದೆ.

Categories
ಮಲ್ನಾಡ್

ವಿ ಟೆಕ್ ಅಡಿಕೆ ಸುಲಿಯುವ ಯಂತ್ರ ಮತ್ತಷ್ಟು ಸೌಲಭ್ಯ

  • ಮುಂಗಡ ಬುಕಿಂಗ್ ಪ್ರಾರಂಭ: ಬಾರಿ ಡಿಮ್ಯಾಂಡ್
  • ಅಡಿಕೆ ಸುಲಿತದ ವೇಗ, ಕಾರ್ಮಿಕರ ಅವಶ್ಯಕತೆ ಇಲ್ಲ
  • ಹೈಟೆಕ್ ತಂತ್ರಜ್ಞಾನದೊಂದಿಗೆ ಅಡಿಕೆ ಸುಲಿತ

ಮಲೆನಾಡು: ರೈತನ ಮಗನಾಗಿ ವಿಟೆಕ್ ಸಂಸ್ಥೆ ಮೂಲಕ ಕುಂಟವಳ್ಳಿ ವಿಶ್ವನಾಥ್ 1998ರಿಂದ 2005ರವರೆಗಿನ 7 ವರುಷಗಳ ನಿರಂತರ ಶ್ರಮದಿಂದ “ಅಡಿಕೆ ಸುಲಿಯುವ ಯಂತ್ರವನ್ನು” ಸಂಶೋಧಿಸಿ ಅಡಿಕೆ ಬೆಳೆಗಾರರ ಕಾರ್ಮಿಕ ಕೊರತೆಯನ್ನು ನೀಗಿಸಿದ್ದಾರೆ. ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆ ಸೇರಿ ದಾವಣಗೆರೆ, ಚಿತ್ರದುರ್ಗ, ಉತ್ತರ ಕನ್ನಡದಲ್ಲೂ ಈ ಅಡಿಕೆ ಸುಲಿಯುವ ಯಂತ್ರಗಳಿಗೆ ಭಾರೀ ಡಿಮ್ಯಾಂಡ್ ಇದೆ. ಪ್ರತೀವರುಷವೂ ರೈತಸ್ನೇಹಿಯಾಗಿ ಯಂತ್ರವನ್ನು ಅಭಿವೃದ್ಧಿಪಡಿಸುತ್ತಾ,ರೈತರಿಗೆ ಅನುಕೂಲವನ್ನು ಮಾಡಿಕೊಟ್ಟಿದ್ದಾರೆ. ಇದೀಗ ಮತ್ತಷ್ಟು ತಂತ್ರಜ್ಞಾನದೊಂದಿಗೆ ಹೊಸ ಮಾದರಿಯ ಯಂತ್ರಗಳು ಬಂದಿವೆ.


ಅಡಿಕೆ ಬೆಳೆಗಾರರನ್ನು ಉಳಿಸಿದ ಮೂಲ ಸಂಶೋಧಕ ಸಂಸ್ಥೆ “ವಿ-ಟೆಕ್ ಎಂಜಿನೀರ್ಸ್” ನಮ್ಮ ಆಯ್ಕೆಯಾಗಿರಲಿ. ಮುಂಗಡ ಬುಕಿಂಗ್ ಪ್ರಾರಂಭವಾಗಿದೆ.
ಸಂಪರ್ಕಿಸಿ 8971312191

Categories
ಬೆಂಗಳೂರು

ಕೇಂದ್ರದ ಕರೋನಾ ವಿಫಲತೆಗೆ ಸಿಎಂ ಹುದ್ದೆ ಬಲಿ..?!

  • ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಕಸರತ್ತು
  • ಮಾಸ್ ನಾಯಕನ ತೆರೆಮರೆಗೆ ಕಳುಹಿಸುವ ಯತ್ನ
  • ಕರೋನಾ ನಡುವೆ ಬಿಜೆಪಿ ರಾಜಕೀಯ.. ಥು ಹೇಸಿಗೆ..!

ಬೆಂಗಳೂರು: ರಾಜ್ಯದಲ್ಲಿ ಕರೋನಾ ಸರಕಾರದ ಬುಡ ಅಲ್ಲಾಡಿಸಲು ಶುರು ಮಾಡಿದೆ. ಕರೋನಾ ಸಾವು ಮತ್ತು ಪ್ರಕರಣದಲ್ಲಿ ರಾಜ್ಯ ದೇಶಕ್ಕೆ ನಂ.1 ಎಂಬ ಕಳಂಕ ಅಂಟಿಸಿಕೊಂಡಿದೆ. ಈ ನಡುವೆ ಸಿಎಂ ಯಡಿಯೂರಪ್ಪ ಬದಲಾವಣೆ ಮಹಾ ಡ್ರಾಮಾಕ್ಕೆ ಬಿಜೆಪಿ ಹೈಕಮಾಂಡ್ ಚಾಲನೆ ಕೊಟ್ಟಿದೆ. ನಾಯಕತ್ವ ಬದಲಾವಣೆಗೆ ಬಿಜೆಪಿ ಶಾಸಕರೇ ಪಟ್ಟು ಹಿಡಿದಿದ್ದು, 20 ಶಾಸಕರು ದೆಹಲಿಗೆ ಹಾರಿದ್ದಾರೆ ಎನ್ನಲಾಗಿದೆ.


ಕಳೆದ ಕೆಲ ತಿಂಗಳಿನಿಂದಲೂ ಸಿಎಂ ಯಡಿಯೂರಪ್ಪ ಅವರನ್ನು ಸಿಎಂ ಕುರ್ಚಿಯಿಂದ ಕೆಳಗಿಸಲು ಬಿಜೆಪಿಯಲ್ಲೇ ಒಂದು ಟೀಂ ಪ್ರಯತ್ನ ಮಾಡುತ್ತಿದೆ. ಕರೋನಾ ಕಷ್ಟದಲ್ಲಿ ಜನರ ಜತೆ ಇರಬೇಕಾದ ಶಾಸಕರು ದೆಹಲಿಯಲ್ಲಿದ್ದಾರೆ. ಜೂನ್ 7 ಬಿಜೆಪಿ ಶಾಸಕಾಂಗ ಸಭೆ ನಡೆಯಲಿದ್ದು,ಈ ಸಭೆಯಲ್ಲಿ ಅಂತಿಮ ನಿರ್ಧಾರ ಹೊರ ಬರುವ ಸಾಧ್ಯತೆ ಇದೆ.
ಬಿಜೆಪಿ ಪಾಳಯದಲ್ಲಿ ಸಾಲು ಸಾಲು ಸಭೆಗಳು ನಡೆಯುತ್ತಿದ್ದು, ಬೊಮ್ಮಾಯಿ, ವಿಜಯೇಂದ್ರ ಅವರು ಮೇ 7,8,9ರಂದು ಹೈಕಮಾಂಡ್ ಭೇಟಿ ಮಾಡಿದ್ದರು.

ಯಡಿಯೂರಪ್ಪ ಮೇಲೆ ಹೈಕಮಾಂಡ್ ಗರಂ ಆಗಿತ್ತು. ಶಾಸಕರಾದ ಸಿ.ಪಿ. ಯೋಗೇಶ್ವರ್, ಅರವಿಂದ ಬೆಲ್ಲದ ಅವರು ದೆಹಲಿಯಲ್ಲಿದ್ದಾರೆ.
ಸಿಎಂ ಹುದ್ದೆಗೆ ಉಪ ಮುಖ್ಯಮಂತ್ರಿ ಡಾ.ಅಶ್ವತ್ ನಾರಾಯಣ್ ಹಾಗೂ ಸಂಸದ ಪ್ರಹ್ಲಾದ್ ಜೋಷಿ ಅವರ ಹೆಸರುಗಳು ಬಲವಾಗಿಯೇ ಕೇಳಿಬರುತ್ತಿದೆ.
ಕಳೆದೆರಡು ದಿನಗಳಿಂದಲೂ ಬಿಜೆಪಿ ವರಿಷ್ಠರ ಭೇಟಿಗಾಗಿ ಶಾಸಕರು ಕಾದು ಕುಳಿತಿದಿದ್ದಾರೆ. ಬಿಜೆಪಿಯ ರೆಬಲ್ ಶಾಸಕರ ನಾಯಕತ್ವವನ್ನು ಸಿಪಿ ಯೋಗೀಶ್ವರ್ ವಹಿಸಿಕೊಂಡಿದ್ದಾರೆನ್ನುವ ಮಾತುಗಳು ಕೇಳಿಬರುತ್ತಿದೆ. ಬುಧವಾರ ಸಂಜೆಯೇ ಬಿಜೆಪಿ ವರಿಷ್ಠರ ಜೊತೆಗೆ ಬಿಜೆಪಿ ಶಾಸಕರು ಸಭೆ ನಡೆಸೋದು ಬಹುತೇಕ ಖಚಿತ. ಅಲ್ಲದೇ ರಾಜ್ಯದಲ್ಲಿ ಜೂನ್ 10ರ ಒಳಗಾಗಿ ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಬದಲಾವಣೆಗೆ ಬಿಗಿಪಟ್ಟು ಹಿಡಿಯಲಿದ್ದಾರೆ ಎನ್ನಲಾಗುತ್ತಿದೆ.


ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬರುತ್ತಿದ್ದಂತೆಯೇ ಕೇವಲ 6 ತಿಂಗಳ ಅವಧಿಗೆ ಯಡಿಯೂರಪ್ಪ ಅವರನ್ನು ಸಿಎಂ ಕುರ್ಚಿಯಲ್ಲಿ ಕೂರಿಸಲಾಗಿತ್ತು.ಯಡಿಯೂರಪ್ಪ ಅಧಿಕಾರದ ಗದ್ದುಗೆ ಏರುತ್ತಿದ್ದಂತೆಯೇ ಪ್ರವಾಹ, ಕೊರೊನಾ ಅಬ್ಬರದಿಂದಲಾಗಿ ಸಿಎಂ ಕುರ್ಚಿ ಭದ್ರವಾಗಿತ್ತು. ಈಗ ಕೊರೊನಾ ಸಂಕಷ್ಟದ ನಡುವಲ್ಲೇ ಬಿಜೆಪಿ ಶಾಸಕರೇ ನಾಯಕತ್ವ ಬದಲಾವಣೆಗೆ ಕಹಳೆ ಮೊಳಗಿಸಿದ್ದಾರೆ. ಒಂದೊಮ್ಮೆ ಯಡಿಯೂರಪ್ಪ ಅವರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಿದ್ರೆ ಮಹಾರಾಷ್ಟ್ರದ ರಾಜ್ಯಪಾಲರಾಗಿ ನೇಮಕವಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಸಿಎಂ ಪುತ್ರ ವಿಜಯೇಂದ್ರ ಡಿಸಿಎಂ ಆಗುವ ಸಾಧ್ಯತೆ ಇದೆ.


ಕೇಂದ್ರದ ವೈಫಲ್ಯಕ್ಕೆ ಸಿಎಂ ಹುದ್ದೆ ಬಲಿ?: ರಾಜ್ಯದ ಮಟ್ಟಿಗೆ ಕೇಂದ್ರ ಸರಕಾರದ ಸಹಕಾರ ಅತೀ ಕಡಿಮೆ. ಪ್ರವಾಹದ ವೇಳೆಯೂ ಹೇಳುವಂತ ಸಹಕಾರ ಸಿಗಲಿಲ್ಲ. ಎರಡನೇ ಅಲೆಯ ಕರೋನಾದಲ್ಲಿ ಲಸಿಕೆ, ಆಮ್ಲಜನಕ ನೀಡುವಲ್ಲಿ ಕೇಂದ್ರ ವಿಳಂಬ ಮಾಡಿದ್ದರಿಂದ ರಾಜ್ಯದಲ್ಲಿ ಕರೋನಾ ಹೆಚ್ಚಾಗಿದೆ ಎಂಬ ಆರೋಪ ಕೇಳಿ ಬಂದಿದೆ.


ಯಡಿಯೂರಪ್ಪ ಅವರ ಸಂಪುಟದ ಶಾಸಕರು, ಸಚಿವರು ಕರೋನಾ ಕೆಲಸ ಮಾಡುವಲ್ಲಿ ವಿಫಲವಾಗಿದ್ದು ಇಳಿ ವಯಸ್ಸಿನಲ್ಲಿ ಸಂಕಟಕ್ಕೆ ಸಿಲುಕಿದ್ದಾರೆ. ರಾಜ್ಯದ ಮಾಸ್ ನಾಯಕರಲ್ಲಿ ಒಬ್ಬರಾದ ಯಡಿಯೂರಪ್ಪ ಇದೀಗ ಕರೋನಾ ವೇಳೆ ರಾಜಕೀಯಕ್ಕೆ ಕುರ್ಚಿ ಕಳೆದುಕೊಳ್ಳುವ ಸಾಧ್ಯತೆ ಇದೆ. ಒಂದು ಕಡೆ ಪಕ್ಷದ ವರ್ಚಸ್ಸು ಸಂಪೂರ್ಣ ಕುಂಟಿತವಾಗಿದೆ. ಇನ್ನೊಂದೆಡೆ ಕರೋನಾ ವೈಫಲ್ಯತೆ ಪಕ್ಷಕ್ಕೆ ಕೆಟ್ಟ ಹೆಸರು ತರುವ ಹಿನ್ನೆಲೆ ಈ ಬೆಳವಣಿಗೆ ನಡೆಯುತ್ತಿದೆ. ಆದರೆ ರಾಜಕೀಯಕ್ಕೆ ಇದು ಸಮಯವಲ್ಲ. ಮೊದಲು ಕೇಂದ್ರ, ರಾಜ್ಯ ಸೇರಿ ಜನರ ಜೀವ, ಬದುಕು ಉಳಿಸಲಿ ಎಂಬುದು ನಮ್ಮ ಕಳಕಳಿ..!

Categories
ಮಲ್ನಾಡ್

ಕೊಪ್ಪದ ಖ್ಯಾತ ಪತ್ರಕರ್ತ ಸಾಧಿಕ್ ಕರೋನಾಕ್ಕೆ ಬಲಿ!

  • ಚಿಕ್ಕಮಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ
  • ಕುಟುಂಬಕ್ಕೆ ಪರಿಹಾರ ನೀಡಲು ಪತ್ರಕರ್ತರ ಅಗ್ರಹ
  • ಪತ್ರಕರ್ತರಿಗೆ, ಅವರ ಕುಟುಂಬಕ್ಕೆ ಲಸಿಕೆ ಬೇಕು..!

ಚಿಕ್ಕಮಗಳೂರು: ಕರೋನಾಕ್ಕೆ ರಾಜ್ಯದಲ್ಲಿ ಹತ್ತಾರು ಪತ್ರಕರ್ತರು ಬಲಿಯಾಗಿದ್ದು, ಕುಟುಂಬದ ನೂರಾರು ಮಂದಿ ಸಾವನ್ನು ಕಂಡಿದ್ದಾರೆ. ಫ್ರಂಟ್ ಲೈನ್ ಕರೋನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದ ಕೊಪ್ಪದ ಪತ್ರಕರ್ತ ಸಾಧಿಕ್ (47) ಚಿಕ್ಕಮಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದಾರೆ. ಅವರಿಗೆ ಚಿಕ್ಕ ಮಕ್ಕಳಿದ್ದಾರೆ.
ಕಳೆದ ಎರಡು ವಾರದ ಹಿಂದೆ ಉಸಿರಾಟ ಸಮಸ್ಯೆಯಿಂದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕರೋನಾ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದ ನಂತರ ಕೊರೊನಾ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಹೆಚ್ಚಿನ ಚಿಕಿತ್ಸೆಗೆ ಚಿಕ್ಕಮಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತರಾಗಿದ್ದಾರೆ.


ಮೃತರು ಕೊಪ್ಪದಲ್ಲಿ ಹಲವು ವರ್ಷಗಳಿಂದ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದ್ದರು.‌ ಕೊಪ್ಪ ಸೇರಿ ಮಲೆನಾಡಿನ ನೂರಾರು ಸಮಸ್ಯೆಗಳಿಗೆ ದನಿಯಾಗಿದ್ದರು. ಇತ್ತೀಚೆಗೆ ಮೇಲಿನಪೇಟೆಯಲ್ಲಿ ವಾಹನಗಳ ಹೊಗೆ ತಪಾಸಣೆ ಕೇಂದ್ರವನ್ನು ತೆರೆದು ಉದ್ಯಮಕ್ಕೆ ಶುರು ಮಾಡಿದ್ದರು. ಕೊಪ್ಪದ ಕಾರ್ಯನಿರತ ಪತ್ರಕರ್ತ ಸಂಘದ ಕಾರ್ಯದರ್ಶಿ ಸಹ ಆಗಿದ್ದರು. ಸಮಾಜದ ಎಲ್ಲಾ ಜನರ ಜತೆ ಉತ್ತಮ ಒಡನಾಟ ಹೊಂದಿದ್ದರು. ನಮ್ಮೂರ್ ಎಕ್ಸ್ಪ್ರೆಸ್ ಮಾಧ್ಯಮದ ಹಿತೈಷಿಗಳು ಕೂಡ ಆಗಿದ್ದ ಸಾದಿಕ್ ಅವರ ನಿಧನಕ್ಕೆ ಎಲ್ಲಾ ಪತ್ರಕರ್ತರ ಪರವಾಗಿ ಸಂತಾಪ ಸೂಚಿಸುತ್ತೇವೆ. ಶೃಂಗೇರಿ ಶಾಸಕ ರಾಜೇಗೌಡ, ಮಾಜಿ ಸಚಿವ ಜೀವರಾಜ್, ಕಾಂಗ್ರೆಸ್ ನಾಯಕ ಸುಧೀರ್ ಕುಮಾರ್ ಮುರೊಳ್ಳಿ ಸಂತಾಪ ಸೂಚಿಸಿದ್ದಾರೆ.


ಪತ್ರಕರ್ತ ಸಾಧಿಕ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಚಿಕ್ಕಮಗಳೂರು ಜಿಲ್ಲೆಯ ಪತ್ರಕರ್ತರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.
ವ್ಯಾಕ್ಸಿನ್ ಇನ್ನು ಸಿಕ್ಕಿಲ್ಲ: ಸಿಎಂ ಯಡಿಯೂರಪ್ಪ ರಾಜ್ಯದ ಪತ್ರಕರ್ತರನ್ನು ಫ್ರಂಟ್ ಲೈನ್ ವಾರಿಯರ್ಸ್ ಎಂದು ಘೋಷಣೆ ಮಾಡಿ ಪತ್ರಕರ್ತರು ಹಾಗೂ ಕುಟುಂಬದವರಿಗೆ ಆಧ್ಯತೆ ಮೇಲೆ ಲಸಿಕೆ ನೀಡಬೇಕು ಎಂದು ಹೇಳಿದ್ದರು. ಆದರೆ ಮಲೆನಾಡಿನ ಯಾವ ತಾಲೂಕಲ್ಲಿ ಕೂಡ ಪತ್ರಕರ್ತರಿಗೆ ಲಸಿಕೆ ವ್ಯವಸ್ಥೆ ಆಗಿಲ್ಲ.
ತಕ್ಷಣ ಈ ಬಗ್ಗೆ ಸ್ಥಳೀಯ ಆಡಳಿತ, ಶಾಸಕರು ಗಮನ ಹರಿಸಬೇಕು ಎಂಬುದು ನಮ್ಮ ಕಳಕಳಿ.

Categories
ಬೆಂಗಳೂರು

ಮಕ್ಕಳಿಗೆ ಸರಕಾರದ ಮೊಬೈಲ್..ಬದುಕಿಗೆ ಮಾರಕ!

  • ಒಳ್ಳೆ ಉದ್ದೇಶಕ್ಕಿಂತ ಕೆಟ್ಟದಾಗೋದೇ ಹೆಚ್ಚು
  • ಮೊಬೈಲ್ ಗೀಳಿನಿಂದ ಮಕ್ಕಳ ಭವಿಷ್ಯಕ್ಕೆ ಪೆಟ್ಟು

ಬೆಂಗಳೂರು: ಕರೋನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಸರಕಾರಕ್ಕೆ ಸವಾಲಾಗಿದೆ. ವಿದ್ಯಾರ್ಥಿಗಳಿಗೆ ಪಾಠ ಮಾಡಲು ಆಗುತ್ತಿಲ್ಲ. ಪರೀಕ್ಷೆ ನಡೆಸಲು ಕಷ್ಟ. ಈ ನಡುವೆ
ಸರಕಾರ ಶಾಲಾ ಮಕ್ಕಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಲು ಮುಂದಾಗಿದೆ. ಶಾಲಾ ಮಕ್ಕಳಿಗೆ ಉಚಿತ ‘ಸ್ಮಾರ್ಟ್ ಫೋನ್’ ವಿತರಣೆಯ ಕುರಿತು ಚಿಂತನೆ ನಡೆಸಿದೆ. ಆದರೆ ಈ ಯೋಜನೆ ಸರಕಾರದ ಲೆಕ್ಕದಲ್ಲಿ ಒಳ್ಳೆಯದು. ಆದ್ರೆ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕೆಟ್ಟದು ಎಂಬ ಅಭಿಪ್ರಾಯ ಕೇಳಿ ಬಂದಿದೆ.


ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್, ಆನ್ಲೈನ್ ಕ್ಲಾಸ್ನಿಂದ ಯಾವ ಮಕ್ಕಳು ಕೂಡ ವಂಚಿತರಾಗಬಾರದು. ಮಕ್ಕಳಿಗೆ ಸ್ಮಾರ್ಟ್ ಫೋನ್ ನೀಡಲು ಸಂಘ, ಸಂಸ್ಥೆಗಳ ನೆರವು ಪಡೆಯುವ ಚಿಂತನೆ ಇದೆ, ಸರ್ಕಾರ ಈ ಬಗ್ಗೆ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಿದೆ. ಬಡ ಮಕ್ಕಳ ನೆರವಿಗೆ ಸರ್ಕಾರ ಬರಲಿದೆ ಎಂದಿದ್ದಾರೆ. ಆದರೆ ಈ ನಿರ್ಧಾರವನ್ನು ಮತ್ತಷ್ಟು ಪರಿಶೀಲನೆ ಮಾಡುವುದು ಒಳಿತು.


ಏಕೆ ಈ ಯೋಜನೆ?: ಕೊರೊನಾ ವೈರಸ್ ಸೋಂಕಿನ ಹಿನ್ನೆಲೆ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳಿಗಿಂತ ಹೆಚ್ಚಾಗಿ ಆನ್ಲೈನ್ ತರಗತಿಗಳೇ ನಡೆದಿವೆ. ಅದ್ರಲ್ಲೂ ಮುಂದಿನ ಶೈಕ್ಷಣಿಕ ವರ್ಷ ಹೇಗಿರುತ್ತದೆ ಅನ್ನುವುದನ್ನು ಹೇಳಲು ಸಾಧ್ಯವಿಲ್ಲ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲಕ್ಕಾಗಿ ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ಅನುಕೂಲವಾಗುವಂತೆ ಉಚಿತವಾಗಿ ಸ್ಮಾರ್ಟ್ ಫೋನ್ ಒದಗಿಸುವ ಚಿಂತನೆ ನಡೆದಿದೆ. ಆದರೆ ಈ ಮಕ್ಕಳು ಮೊಬೈಲ್ ಅನ್ನು ಶಿಕ್ಷಣಕ್ಕೆ ಮಾತ್ರ ಬಳಸುವುದು ಡೌಟು.


ಆನ್ಲೈನ್ ಶಿಕ್ಷಣದ ಎಫೆಕ್ಟ್!: ಆನ್ಲೈನ್ ಶಿಕ್ಷಣದಿಂದ ಎಲ್ಲಾ ಮಕ್ಕಳ ಕೈಗೆ ಮೊಬೈಲ್ ಬಂದಿದೆ. ಆದರೆ ಅದು ಸಮರ್ಪಕವಾಗಿ ಬಳಕೆ ಆಗುತ್ತಿಲ್ಲ. ಒಂದು ವರ್ಷ ವ್ಯರ್ಥವಾದರೆ ತೊಂದರೆ ಇಲ್ಲ. ಆದರೆ ಮೊಬೈಲ್ ಇಂದ ಶೇ.60ರಷ್ಟು ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಒಂದು ಬಾರಿ ಮೊಬೈಲ್ ಚಟಕ್ಕೆ ಬಿದ್ದರೆ ಗೇಮ್ಸ್, ವೀಡಿಯೋಸ್, ಸಾಮಾಜಿಕ ಜಾಲತಾಣದ ಗೀಳು ಮಕ್ಕಳ ಮಾನಸಿಕ, ದೈಹಿಕ ಬೆಳವಣಿಗೆ ತೊಂದರೆ ಮಾಡಲಿದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ.
ಮೊಬೈಲ್ ಚಟದಿಂದ ಮಕ್ಕಳ ಸ್ವಂತಿಕೆ, ಕ್ರಿಯಾಶೀಲತೆ, ಬುದ್ದಿವಂತಿಕೆ, ಸ್ವ ಚಿಂತನೆ, ಮಾನಸಿಕ ಸ್ಟೈರ್ಯ, ಧೈರ್ಯ, ಸಂಸ್ಕಾರ, ಮಾನವೀಯತೆ ಸಂಪೂರ್ಣ ಮರೆಯಾಗುವ ಸಾಧ್ಯತೆ ಇದೆ. ಈ ಹಿಂದೆ ಡಿಗ್ರಿ ವಿದ್ಯಾರ್ಥಿಗಳಿಗೆ ಸರಕಾರ ನೀಡಿದ್ದ ಲ್ಯಾಪ್ ಟಾಪ್ ಕೂಡ ಬರಿ ಸಿನಿಮಾ ನೋಡಲು ಬಳಕೆಯಾಗುತ್ತಿದೆ.

Categories
ಬೆಂಗಳೂರು

ಅಗಸದಲ್ಲಿ ಸೂರ್ಯ ಚಂದ್ರರ ಚಮತ್ಕಾರ!

  • ಇಂದು ಮಧ್ಯಾಹ್ನ ಸೂಪರ್ ಮೂನ್
  • ನಿನ್ನೆ ಸೂರ್ಯನ ಸುತ್ತ ಮೂಡಿತ್ತು ಚಕ್ರ
  • ಪ್ರಾಕೃತಿಕ ವಿಸ್ಮಯ: ಏನು ಹೇಳುತ್ತೆ ಇತಿಹಾಸ..?

ಬೆಂಗಳೂರು: ಮೇ 26ರ ವೈಶಾಖ ಹುಣ್ಣಿಮೆ ಬಹಳ ವಿಶೇಷವಾದ ಹುಣ್ಣಿಮೆ. ಅಂದು ಸೂಪರ್ ಮೂನ್ ಮತ್ತು ಚಂದ್ರಗ್ರಹಣ ನಡೆಯಲಿದೆ. ಆದರೆ ಈ ಚಂದ್ರ ಭಾರತದಲ್ಲಿ ಕಾಣುವುದಿಲ್ಲ.


2021ರಲ್ಲಿ 3 ಸೂಪರ್ ಮೂನ್‍ಗಳ ಗೋಚರವಾಗುತ್ತದೆ. ಈ ವರ್ಷ ಭೂಮಿಗೆ ಅತಿ ಹತ್ತಿರದಿಂದ ಗೋಚರವಾಗುವ ಗ್ರಹಣ ಮೇ 26ಕ್ಕೆ ಸಂಭವಿಸಲಿದೆ.
ಭೂಮಿಯ ಸುತ್ತ ದೀರ್ಘ ವೃತ್ತಾಕಾರದಲ್ಲಿ ಚಲಿಸುವ ಸಂದರ್ಭ ಭೂಮಿಗೆ ಅತಿ ಸಮೀಪ ಚಂದ್ರ ಬರುತ್ತಾನೆ. ಭೂಮಿ ಮತ್ತು ಚಂದ್ರನ ನಡುವೆ 3,84,000 ಸಾವಿರ ಕಿಲೋ ಮೀಟರ್ ಅಂತರವಿದೆ. ಭೂಮಿಗೆ ಚಂದ್ರ ಬಹಳ ಹತ್ತಿರ ಬರಲಿದ್ದಾನೆ. 3 ಲಕ್ಷ 57 ಸಾವಿರ ಕಿಲೋಮೀಟರ್ ಅಂತರದಲ್ಲಿ ಪರ್ಯಟನೆ ಮಾಡಲಿದ್ದಾನೆ. ಸುಮಾರು ಏಳು ಶೇಕಡದಷ್ಟು ಚಂದ್ರ ದೊಡ್ಡದಾಗಿ ಮೇಲೆ ನಿಂತು ನಮಗೆ ಕಾಣಲಿದ್ದಾನೆ.


ಮಧ್ಯಾಹ್ನ 2 ಗಂಟೆಯಿಂದ ಸಂಜೆ 7 ಗಂಟೆಯ ನಡುವೆ ಈ ಗ್ರಹಣ ನಡೆಯುತ್ತದೆ. ನಾವು ಭಾರತೀಯರು ಗ್ರಹಣವನ್ನು ನೋಡಲು ಸಾಧ್ಯವಿಲ್ಲ. ಭಾರತದ ಯಾವ ಭೂಪ್ರದೇಶದಲ್ಲಿಯೂ ಚಂದ್ರಗ್ರಹಣ ಗೋಚರಿಸುವುದಿಲ್ಲ ಎಂದು ಉಡುಪಿಯ ಪಿಪಿಸಿ ಕಾಲೇಜು ಖಗೋಳಶಾಸ್ತ್ರ ವಿಭಾಗ ಪ್ರಾಧ್ಯಾಪಕ ಅತುಲ್ ಭಟ್ ಮಾಹಿತಿ ನೀಡಿದ್ದಾರೆ.
ಸೂರ್ಯನ ಸುತ್ತ ರಿಂಗ್!: ಬೆಂಗಳೂರು ಸೇರಿದಂತೆ ದೇಶದ ಹಲವೆಡೆ ಸೋಮವಾರ ಸೂರ್ಯನ ಸುತ್ತ ಚಕ್ರ ಮೂಡುವ ಮೂಲಕ ವಿಸ್ಮಯಕ್ಕೆ ಕಾರಣವಾಗಿದೆ. ಸೂರ್ಯನ ಸುತ್ತ ಬಿಳಿ ಬಣ್ಣದ ಚಕ್ರ ಮೂಡಿತ್ತು. ಈ ಫೋಟೋಗಳು ವೈರಲ್ ಆಗಿವೆ.

Categories
ಮಲ್ನಾಡ್

ರೈತರ ನೆರವಿಗೆ ಕೃಷಿ ಉಪಕಾರ್ ಸಂಸ್ಥೆ!

  • ಹೈಟೆಕ್ ಕಾರ್ಬನ್ ಫೈಬರ್ ದೋಟಿ ಬಂದಿದೆ!
  • ಅಡಿಕೆ ಕೊಯ್ಲು, ಬೋರ್ಡು ದ್ರಾವಣ ಸಿಂಪಡಣೆ ಸಹಕಾರಿ

ಮಲೆನಾಡು: ಅಡಿಕೆ ಬೆಳೆಗೆ ಆರ್ಥಿಕವಾದ ಮತ್ತು ಸಾಂಪ್ರದಾಯಕವಾದ ಮಹತ್ವವಿದೆ. ಆದರೆ ಇಂದಿನ ದಿನಗಳಲ್ಲಿ, ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಪ್ರಮುಖ ಸಮಸ್ಯೆ ಎಂದರೆ, ಅದು ಅಡಿಕೆ ಗೊನೆಯನ್ನು ಮರದಿಂದ ಇಳಿಸುವ (ಕೊಯ್ಯವ)ಮತ್ತು ಅಡಿಕೆ ಗೊನೆಗೆ ದ್ರಾವಣ (ಔಷಧಿಯನ್ನು) ಹೊಡೆಯಲು ನುರಿತ ಶ್ರಮಿಕರ ಕೊರತೆ. ಈ ಸಮಸ್ಯೆಗೆ ಪರಿಹಾರವಾಗಿ ನಾವು ಔಷಧಿಯನ್ನು ಹೊಡೆಯಲು ಮತ್ತು ಅಡಿಕೆ ಗೊನೆ ಯನ್ನು ತೆಗೆಯಲು ದೋಟಿಯನ್ನು ಕೃಷಿ ಉಪಕಾರ್ ಸಂಸ್ಥೆ ಆವಿಷ್ಕರಿಸಿ ಮಾರುಕಟ್ಟೆಗೆ ಬಿಟ್ಟಿದೆ. ಇದು ಮಲೆನಾಡಿನ ರೈತರಿಗೆ ಅನುಕೂಲವಾಗಲಿದೆ.
ಹೈಟೆಕ್ ದೋಟಿಯ ಉಪಯೋಗಗಳು.

1.ಅಡಿಕೆಯ ಮರವೇರದೆ ಕೊಯ್ಲು ಮತ್ತು ಔಷಧಿಯನ್ನು ಸಿಂಪಡಣೆ ಮಾಡಬಹುದು.
2.ದೋಟಿಯಲ್ಲಿ ಔಷಧಿಯನ್ನು ಸಿಂಪಡಿಸುವುದರಿಂದ, ಅಡಿಕೆ ಗೊನೆಗೆ ನೇರವಾಗಿ ಔಷಧಿಯು ಹಿಡಿಯುವುದರಿಂದ ಬೇರೆ ಪದ್ಧತಿಗಿಂತ ಔಷಧಿಯು ಸಾಕಷ್ಟು ಉಳಿತಾಯವಾಗುತ್ತದೆ.
3 ಹೈಟೆಕ್ ದೋಟಿಯನ್ನು ಯಾರೂ ಕೂಡ ಸುಲಭವಾಗಿ ಬಳಸಬಹುದಾದ ಉಪಯುಕ್ತವಾದ ಹಾಗು ಅತ್ಯುತ್ತಮವಾದ ಗುಣಮಟ್ಟದ ಸಾಧನವಾಗಿದೆ.
4.ರೈತರೇ ಸಮಯವಾದಾಗ ಔಷಧಿ ಹೊಡೆದುಕೊಳ್ಳಬಹುದಾದ್ದರಿಂದ ಮರಕ್ಕೆ ಕೊಳೆ ರೋಗ ಬರುವ ಸಾಧ್ಯತೆ ಕಡಿಮೆ ಆಗಿದೆ ಮತ್ತು ಗೊನೆ ಯನ್ನು ಸರಿಯಾದ ಸಮಯದಲ್ಲಿ ತೆಗೆಯುವುದರಿಂದ ಹಣ್ಣು ಗೋಟು ಆಗದೆ ಸೂಕ್ತ ಸಮಯಕ್ಕಾಗಿ ಕಾರ್ಮಿಕರಿಗಾಗಿ ಕಾಯುವ ಪ್ರಶ್ನೆ ಇರುವುದಿಲ್ಲ.
5.ಕೃಷಿಗೆ ಸಂಬಂಧಿಸಿದಂತೆ ಸರಳ ಪರಿಹಾರದ ಮೂಲಕ ಕಾರ್ಮಿಕ ಕೊರತೆಯನ್ನು ನೀಗಿಸಿಬಹುದಾಗಿದೆ.
6.ದೋಟಿಯು ಕಡಿಮೆ ತೂಕ ಇರುವುದರಿಂದ ಕೆಲಸಮಾಡಲು ಮತ್ತು ಒಂದುಕಡೆ ಯಿಂದ ಮತ್ತೊಂದು ಕಡೆಗೆ ಸಾಗಿಸಲು ಸುಲಭವಾಗಿದೆ.

  1. ನಿಮ್ಮ ಅವಶ್ಯಕತೆಯ ಎತ್ತರಕ್ಕೆ ಸುಲಭವಾಗಿ ದೋಟಿಯನ್ನು ಲಾಕ್ ಮಾಡಿಕೊಳ್ಳಬಹುದು.
  2. ದೋಟಿಯ ಬಳಕೆಯು ಕನಿಷ್ಠ ನಿರ್ವಹಣಾ ವೆಚ್ಚ ರೈತರಿಗೆ ಲಾಭವನ್ನು ತಂದುಕೊಡುತ್ತದೆ.
  3. 60ಅಡಿ, 70ಅಡಿ ಮತ್ತು 80 ಅಡಿ ಎತ್ತರದ ದೋಟಿಯನ್ನು 360ಡಿಗ್ರಿ ಸುತ್ತಮುತ್ತ ಹತ್ತು ಮರಗಳಿಗೆ ಸಿಂಪಡನೆ ಸಾಧ್ಯ.
  4. 25000ದಿಂದ 84000ವರೆಗೂ ಎಲ್ಲಾ ಗ್ರೇಡ್ ಗಳಲ್ಲೂ ಲಭ್ಯ.
  5. ಯಾವುದೇ ದೋಟಿಯನ್ನು ನಮ್ಮಲ್ಲಿ ಕೊಂಡರೆ ಅದನ್ನು ನಂತರದ ಎತ್ತರಕ್ಕೆ ಏರಿಸಿಕೊಳ್ಳಬಹುದು. (60ಅಡಿಯನ್ನು ಬೇಕಾದಾಗ 70ಅಡಿ ಮಾಡಿಕೊಳ್ಳಬಹುದು, 70ಅಡಿಯನ್ನು ಬೇಕಾದಾಗ 80ಅಡಿ ಮಾಡಿಕೊಳ್ಳಬಹುದು)
  6. ಕೃಷಿ ಉಪಕಾರ್ ನ ದೋಟಿಯು 3ಲೇಯೆರ್ ಎಲೆಕ್ಟ್ರಿಕ್ ಪ್ರೊಟೆಕ್ಷನ್ ಅನ್ನು ಹೊಂದಿದೆ.
    ಅತ್ಯುತ್ತಮವಾದ ಸರ್ವಿಸ್ ಗಾಗಿ ಸಂಪರ್ಕಿಸಿ ಕೃಷಿ ಉಪಕಾರ್. ಇದರ ಉಪಯೋಗಗಳನ್ನು ಪಡೆಯಲು ಅಧಿಕೃತ ಡೀಲರ್ ಅನ್ನು ಸಂಪರ್ಕಿಸಿ ಹಾಗು ತುರ್ತು ಸಮಸ್ಯೆಗಳಿಗೆ ರೈತರ ಮನೆಬಾಗಿಲಿಗೆ ನಿಪುಣ ತಜ್ಞರಿಂದ ಅತ್ಯುತ್ತಮವಾದ ಸೇವೆಗೆ ಈ ಕೂಡಲೇ ಸಂಪರ್ಕಿಸಿ:

    ನಕುಲ್ 9449319719
    ಅನಂತು 9901901758
    ಗುರು ಕೀರ್ತಿ 8197350044


    ನಾವು ನಿಮಗೆ ಅತ್ಯಾಧುನಿಕ ಬಿಡಿಭಾಗಗಳು ಮತ್ತು ಸೇವೆಗಳನ್ನು ನೀಡುತ್ತೇವೆ.
    ಬುಕಿಂಗ್ ಗಾಗಿ ಸಂಪರ್ಕಿಸಿ. 9449319719. ದೋಟಿಯು 25 ಸಾವಿರದಿಂದ ಪ್ರಾರಂಭ.

    ಕೃಷಿಯ ಇಲ್ಲಾ ಸುದ್ದಿ ಹಾಗೂ ವಿಡಿಯೋಗಳನ್ನು nammurexpress.in ಅಲ್ಲಿ ವೀಕ್ಷಿಸಿ. Nammur Express ಯೂಟ್ಯೂಬ್ ಹಾಗೂ ಫೇಸ್ಬುಕ್ ಸಬ್ಸ್ಕ್ರೈಬ್ ಮಾಡಿ, ಲೈಕ್ ಮಾಡಿ. ಎಲ್ಲರಿಗೂ ಶೇರ್ ಮಾಡಿರಿ.