Categories
ಬೆಂಗಳೂರು

ಮದುವೆ, ಮೆಹಂದಿ, ತಿಥಿ ನಡೆಸಿದ್ರೆ ಪೊಲೀಸ್ ಕೇಸ್!

  • ರಾಜ್ಯಕ್ಕೆ ಮಾದರಿ ನಿಯಮ ತಂದ ಉಡುಪಿ ಡಿಸಿ
  • ಕ್ರಿಕೆಟ್ ಆಡಿದ್ರೂ ಬೀಳುತ್ತೆ ಕೇಸ್: ಬಳಿಕ ಶಿಕ್ಷೆ
  • ಏನಿದು ಆದೇಶ… ಸುದ್ದಿ ನೋಡಿ…!

ಉಡುಪಿ/ಬೆಂಗಳೂರು: ಮದುವೆ, ಮೆಹಂದಿ, ತಿಥಿ ಕಾರ್ಯಕ್ರಮಗಳಿಂದ ಕರೋನಾ ಕೇಸ್ ಹೆಚ್ಚಳವಾಗುತ್ತಿದೆ. ಈಗಲೂ ಕೆಲವೆಡೆ ಮದುವೆಗಳಲ್ಲಿ ನೂರಕ್ಕೂ ಹೆಚ್ಚು ಜನ ಸೇರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೇ 25ರಿಂದ ಜೂನ್ 7ರವರೆಗೆ ಯಾವುದೇ ಮದುವೆ, ಮೆಹಂದಿ ಸಮಾರಂಭಗಳನ್ನು ನಡೆಸುವಂತಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.


ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಹತ್ವದ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಮದುವೆಯಿಂದಲೇ ಅತೀ ಹೆಚ್ಚು ಸಂಖ್ಯೆಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ ಮದುವೆ ಸಮಾರಂಭ ನಡೆಸಿದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಮೇ 24ರ ಸಂಜೆಯವರೆಗೆ ಅನುಮತಿ ನೀಡಿರುವ ಮದುವೆ ನಡೆಸಲು ಮಾತ್ರವೇ ಅವಕಾಶವನ್ನು ನೀಡಲಾಗಿದೆ. ಅಲ್ಲದೇ ನಾಳೆಯಿಂದ ಈಗಾಗಲೇ ಅನುಮತಿ ಪಡೆದಿರುವ ಮದುವೆ ನಡೆಸಲು ಅವಕಾಶವಿಲ್ಲ. ಜೂನ್ 7 ವರೆಗೆ ಉಡುಪಿ ಜಿಲ್ಲೆಯಲ್ಲಿ ಯಾವುದೇ ಮದುವೆ ನಡೆಸಲು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.


ಜೊತೆಗೆ ಲಾಕ್ ಡೌನ್ ಅವಧಿಯಲ್ಲಿ ಎಂಗೇಜ್ಮೆಂಟ್, ಮೆಹಂದಿ ಹಾಗೂ ಬೀಗರೂಟ ಕಾರ್ಯಕ್ರಮವನ್ನು ನಡೆಸಲು ಯಾವುದೇ ಕಾರಣಕ್ಕೂ ಅವಕಾಶವನ್ನು ನೀಡುವುದಿಲ್ಲ. ಒಂದೊಮ್ಮೆ ಅಂತಹ ಕಾರ್ಯಕ್ರಮಗಳನ್ನು ನಡೆಸಿದ್ದು ಕಂಡುಬಂದ್ರೆ ಆಯೋಜಕರ ಜೊತೆಗೆ ಕಾರ್ಯಕ್ರಮದಲ್ಲಿ ಭಾಗಿಯಾದವರ ವಿರುದ್ದವೂ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗುತ್ತದೆ. ಕೊರೊನಾ ಸಂಕಷ್ಟದ ಕಾಲದಲ್ಲಿ ಮದುವೆ ಕಾರ್ಯಕ್ರಮವನ್ನು ಜನರು ಮುಂದೂಡಿಕೆ ಮಾಡುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.


ಅಗತ್ಯ ವಸ್ತುಗಳ ಖರೀದಿಯ ನೆಪದಲ್ಲಿ ಒಂದು ಏರಿಯಾದಿಂದ ಮತ್ತೊಂದು ಏರಿಯಾಕ್ಕೆ ಬರುವುದಕ್ಕೆ ನಿರ್ಬಂಧ ಹೇರಲಾಗಿದೆ. ಬೇರೊಂದು ಏರಿಯಾಕ್ಕೆ ತೆರಳಿ ಅಗತ್ಯ ವಸ್ತು ಖರೀದಿಗೆ ಅವಕಾಶ ನಿರಾಕರಿಸಲಾಗಿದೆ. ಇನ್ನು ಮೈದಾನದಲ್ಲಿ ಯಾವುದೇ ಕಾರಣಕ್ಕೂ ಕ್ರಿಕೆಟ್, ವಾಲಿಬಾಲ್ ಆಡಲು ಅವಕಾಶವಿಲ್ಲ. ಒಂದೊಮ್ಮೆ ಕ್ರಿಕೆಟ್ ಆಟವಾಡಿದ್ರೆ ಅಂತವರ ವಿರುದ್ದ ಕ್ರಿಮಿನಲ್ ಕೇಸ್ ದಾಖಲು ಮಾಡುವುದಾಗಿಯೂ ಎಚ್ಚರಿಸಿದ್ದಾರೆ. ಈ ನಡೆ ರಾಜ್ಯದ ಎಲ್ಲಾ ಕಡೆ ಜಾರಿಗೆ ಬಂದರೆ ಕರೋನಾ ಕೊಂಚ ತಗ್ಗಬಹುದು.

Categories
ಮಲ್ನಾಡ್

ವೈದ್ಯರ ಜತೆ ಕಿಮ್ಮನೆ ಅಂಡ್ ಟೀಂ ಮಾತುಕತೆ!

  • ಕರೋನಾ ನಿಯಂತ್ರಣಕ್ಕೆ ನಾಯಕನ ಪ್ಲಾನ್
  • ಆಡಳಿತದೊಂದಿಗೆ ಕೈಜೋಡಿಸಲು ಯೋಜನೆ
  • ಜನರ ಕಷ್ಟಕ್ಕೆ ಜೊತೆಯಾದ “ಜನ ನಾಯಕ”..!


ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಲ್ಲಿ ಕರೋನಾ ಹೆಚ್ಚುತ್ತಿರುವ ಹಿನ್ನೆಲೆ ತೀರ್ಥಹಳ್ಳಿ ಜೆಸಿ ಆಸ್ಪತ್ರೆಯ ವೈದ್ಯಾಧಿಕಾರಿಗಳ ಜತೆ ಕೆಪಿಸಿಸಿ ಟಾಸ್ಕ್ ಪೋರ್ಸ್ ಅಧ್ಯಕ್ಷ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮತ್ತು ಸದಸ್ಯರ ತಂಡ ಸಮಾಲೋಚನಾ ಸಭೆ ನಡೆಸಿ ಆಡಳಿತಕ್ಕೆ ಸಹಕಾರ ನೀಡುವುದಾಗಿ ತಿಳಿಸಿದರು. ಜೊತೆಗೆ ತೀರ್ಥಹಳ್ಳಿ ತಾಲೂಕನ್ನು ಕರೋನಾ ಮುಕ್ತ ಮಾಡಲು ತಾವೆಲ್ಲರೂ ಸೇರಿ ಕೆಲಸ ಮಾಡೋಣ ಎಂದು ವೈದ್ಯರು ಮತ್ತು ಸಿಬ್ಬಂದಿಗೆ ಧೈರ್ಯ ತುಂಬಿದರು.

ಇದೇ ವೇಳೆ ಸೋಂಕು ನಿಯಂತ್ರಣಕ್ಕೆ ತಾಲ್ಲೂಕು ಆರೋಗ್ಯ ಇಲಾಖೆ ಕೈಗೊಂಡಿರುವ ಕ್ರಮಗಳ ಕುರಿತು, ಮತ್ತು ಜೆಸಿ ಆಸ್ಪತ್ರೆಯಲ್ಲಿನ ಸಮಸ್ಯೆಗಳ ಕುರಿತಾಗಿ ಮಾಹಿತಿ ಪಡೆದರು. ತಾಲ್ಲೂಕು ವೈದ್ಯಾಧಿಕಾರಿಗಳಾದ ಗಣೇಶ್ ಭಟ್, ಡಾ.ನಿಶ್ಚಲ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕುರಿಯೋಸ್, ಕಾಂಗ್ರೆಸ್ ನಾಯಕರಾದ ರಾಘವೇಂದ್ರ ರವೀಂದ್ರ ಶೆಟ್ಟಿ, ಕೆಸ್ತೂರು ಮಂಜುನಾಥ್, ಅಮ್ರಪಾಲಿ ಸುರೇಶ್, ಪಟ್ಟಣ ಪಂಚಾಯತ್ ಸದಸ್ಯರಾದ ಗೀತಾ ರಮೇಶ್, ಸುಶೀಲಾ ಶೆಟ್ಟಿ, ನಮ್ರತ್, ಟಾಸ್ಕ್ ಪೋರ್ಸ್ ಸಮಿತಿ ಸದಸ್ಯ ಹರೀಶ್ ಮಿಲ್ಕೇರಿ ಸೇರಿದಂತೆ ಹಲವರು ಹಾಜರಿದ್ದರು.

ಕಿಮ್ಮನೆ ಸಹಾಯ: ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ವಯುಕ್ತಿಕ ಸಮಸ್ಯೆಯಿಂದ ಎಲ್ಲಿಯೂ ಕಂಡಿರಲಿಲ್ಲ. ಆದರೆ ಕಷ್ಟದಲ್ಲಿರುವ ಜನತೆಗೆ ಸಹಾಯ ಮಾಡುವ ನಾವು ನಮ್ಮವರು ತಂಡದ ಜತೆ ಪ್ರತಿ ದಿನ ಸಂಪರ್ಕದಲ್ಲಿದ್ದು ಅಗತ್ಯ ಹಣಕಾಸು, ಇತರೆ ನೆರವು ನೀಡಿದ್ದಾರೆ. ಆದ್ರೆ ಎಲ್ಲಿಯೂ ಅವರು ಹೇಳಿಕೊಳ್ಳದೆ ಮಾದರಿಯಾಗಿದ್ದಾರೆ. ಕಿಮ್ಮನೆ ನಾಯಕತ್ವದಲ್ಲಿ ಎಲ್ಲಾ ಹಳ್ಳಿಗಳಲ್ಲೂ ಕಾರ್ಯಕರ್ತರು ಸೇವೆ ಮಾಡುತ್ತಿದ್ದಾರೆ.

Categories
ಬೆಂಗಳೂರು

ಕರೋನಾ ಕೇಸ್ ಇಳಿಕೆ..ಸಾವು ಏರಿಕೆ..!

  • ಕರೋನಾ ನಡುವೆ ಬ್ಲಾಕ್ ಫಂಗಸ್ ಅಬ್ಬರ
  • ರಾಜ್ಯದಲ್ಲಿ ವಾಹನ ಸೀಜ್: ಸಮಸ್ಯೆ ಉಲ್ಬಣ
  • ಒಂದು ತಿಂಗಳು ಕಾದಿದೆ ಗಂಡಾಂತರ!
  • ಜುಲೈನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ?

ಬೆಂಗಳೂರು: ಕರ್ನಾಟಕದಲ್ಲಿ ಕರೋನಾ ವೈರಸ್ ಸೋಂಕಿನ ಸಂಖ್ಯೆಯಲ್ಲಿ ಕೊಂಚ ಇಳಿಕೆ ಕಾಣುತ್ತಿದೆ. ಆದರೆ ಸಾವಿನ ಪ್ರಮಾಣ ಮಾತ್ರ ಏರಿಕೆ ಯಾಗುತ್ತಿರೋದು ಆತಂಕವನ್ನು ಮೂಡಿಸಿದೆ. ರಾಜ್ಯದಲ್ಲಿ ಇದುವರೆಗೆ ಬರೋಬ್ಬರಿ 25,282 ಸಾವಿನ ಪ್ರಕರಣ ದಾಖಲಾಗಿದೆ. ಈ ನಡುವೆ ಬ್ಲಾಕ್ ಫಂಗಸ್ ಈಗ ರಾಜ್ಯದ ಜನತೆಯ ನಿದ್ದೆಗೆಡಿಸಿದೆ. ಪ್ರತಿ ನಿತ್ಯ 300ಕ್ಕೂ ಹೆಚ್ಚು ಕೇಸ್ ಪತ್ತೆಯಾಗುತ್ತಿದೆ.


ಇನ್ನು ರಾಜ್ಯದಲ್ಲಿ ಸಾವಿರಾರು ವಾಹನಗಳು ಸೀಜ್ ಆಗಿವೆ. ನೂರಾರು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಎಲ್ಲಾ ಊರಲ್ಲೂ ಪೊಲೀಸರು ಎಲ್ಲಾ ವಾಹನಗಳ ತಪಾಸಣೆ ಮಾಡಲಾಗಿದೆ. ಇನ್ಮೇಲೆ ವಾಹನ ರಸ್ತೆಗಿಳಿದ್ರೆ ಸೀಜ್ ಗ್ಯಾರಂಟಿ.


ದಾಖಲೆಯ ಸಾವು!: ರಾಜ್ಯದಲ್ಲಿ ಭಾನುವಾರ 626 ಮಂದಿ ಕರೋನಾದಿಂದ ಸಾವನ್ನು ಕಂಡಿದ್ದಾರೆ. ಇದು ರಾಜ್ಯದಲ್ಲಿ ದಾಖಲಾದ ಅತ್ಯಧಿಕ ಸಾವಿನ ಸಂಖ್ಯೆಯಾಗಿದೆ. ಕಳೆದೊಂದು ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ಬರೋಬ್ಬರಿ 11 ಸಾವಿರ ಮಂದಿ ಕೊರೊನಾ ವೈರಸ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ.


ರಾಜ್ಯದಲ್ಲಿ ಭಾನುವಾರ 25,979 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಕೊರೊನಾ ಸೋಂಕಿತರ ಸಂಖ್ಯೆ 24,24,904ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು 4,72,986 ಸಕ್ರೀಯ ಪ್ರಕರಣಗಳಿವೆ. ಕಳೆದೊಂದು ವಾರದಲ್ಲಿ ಕೊರೊನಾ ಸೋಂಕಿನ ಪ್ರಮಾಣದಲ್ಲಿ ಕೊಂಚ ಇಳಿಕೆಯಾಗಿದ್ದರೂ ಕೂಡ ಸಾವಿನ ಪ್ರಮಾಣ ಮಾತ್ರ ಏರಿಕೆಯಾಗುತ್ತಿರೋದು ಆತಂಕ ಮೂಡಿಸಿದೆ.


ಬ್ಲಾಕ್ ಫಂಗಸ್ ಅಬ್ಬರ!: ದಿನಕ್ಕೆ 300 ಬ್ಲಾಕ್ ಫಂಗಸ್ ಕೇಸ್ ಹೆಚ್ಚಳವಾಗಿದೆ. ಎಲ್ಲಾ ಜಿಲ್ಲೆಗಳಲ್ಲೂ ಬ್ಲಾಕ್ ಫಂಗಸ್ ಹೆಚ್ಚಾಗಿದ್ದು, ಸಾವುಗಳು ಕೂಡ ಸಂಭವಿಸಿದೆ. ದಿನ ಸಾವಿರ ಕೇಸ್ ಬರುವ ಸಾಧ್ಯತೆ ಇದೆ. ತಾಲೂಕು ಆಸ್ಪತ್ರೆಗಳಲ್ಲಿ ಇದಕ್ಕೆ ಚಿಕಿತ್ಸೆ ಲಭ್ಯ ಇಲ್ಲ. ಲಸಿಕೆ ಇನ್ನು ಸಿಕ್ಕಿಲ್ಲ. ಕೇಂದ್ರ ಸರಕಾರ ಈಗಾಗಲೇ ಒಂದು ಸಾವಿರ ವಯಲ್ಸ್ ಕೊಟ್ಟಿದೆ. ಇನ್ನು ಹೆಚ್ಚಿನ ಲಸಿಕೆ ನೀಡುವ ಭರವಸೆ ನೀಡಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.

Categories
ಮಲ್ನಾಡ್

ಕುಂದಾದ್ರಿ ಬಳಿ ಗೃಹಿಣಿ ನೇಣಿಗೆ: ಕೊಲೆ ಶಂಕೆ!

  • ಆಗುಂಬೆ ಪೊಲೀಸರಿಂದ ಪತಿ ವಶಕ್ಕೆ: ವಿಚಾರಣೆ
  • ಪತಿಯ ಅನುಮಾನ ಪತ್ನಿ ಪ್ರಾಣ ತೆಗೆಯಿತೇ..?
  • ಬೆಜ್ಜವಳ್ಳಿ, ತೀರ್ಥಹಳ್ಳಿಯಲ್ಲಿ ನಡೆದಿತ್ತು ಸಾವು!


ತೀರ್ಥಹಳ್ಳಿ: ತೀರ್ಥಹಳ್ಳಿಯ ಆಗುಂಬೆ ಠಾಣೆ ವ್ಯಾಪ್ತಿಯ ಕುಂದಾದ್ರಿ ಬಳಿ ಗೃಹಿಣಿಯೊಬ್ಬಳು ನೇಣು ಬಿಗಿದ ಸ್ಥಿತಿಯಲ್ಲಿ ಪಟ್ಟೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಸ್ಥಳೀಯರು ಮತ್ತು ಮಹಿಳೆ ಕುಟುಂಬದವರು ಶಂಕೆ ವ್ಯಕ್ತಪಡಿಸಿ ದೂರು ನೀಡಿದ ಹಿನ್ನೆಲೆ ಪತಿಯನ್ನು ಆಗುಂಬೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.


ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯ ಹೊನ್ನೆತಾಳು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿಳಿಗೆರಿಯಲ್ಲಿ ಘಟನೆ ನಡೆದಿದ್ದು,ಜ್ಯೋತಿ(25) ಮೃತಪಟ್ಟ ದುರ್ದೈವಿ. ಆಗುಂಬೆ ಸಬ್ ಇನ್ಸ್ ಪೆಕ್ಟರ್ ಶಿವಕುಮಾರ್, ವೀರೇಂದ್ರ, ಉಮೇಶ್, ಸುದರ್ಶನ್, ನೇತೃತ್ವದ ಪೊಲೀಸ್ ತಂಡ ವಿಚಾರಣೆ ಕೈಗೊಂಡಿದೆ.


ಪತ್ನಿಯ ಬಗ್ಗೆ ಪದೇ ಪದೇ ಪತಿ ದಯಾನಂದ ಅನುಮಾನ ವ್ಯಕ್ತಪಡಿಸುತ್ತಿದ್ದು ಕೊಲೆಗೆ ಪತಿಯ ಅನುಮಾನವೇ ಕಾರಣ ಎಂಬ ಆರೋಪ ಕೇಳಿ ಬಂದಿದೆ.
ಕೊಲೆಯಾದ ಜ್ಯೋತಿ ಮೃತದೇಹ ತಾಲೂಕು ಜೆ.ಸಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಘಟನಾ ಸ್ಥಳದಲ್ಲಿ ಸ್ಥಳೀಯರ ಆಕ್ರೋಶ ವ್ಯಕ್ತವಾಗಿದ್ದು, ಸ್ಥಳಕ್ಕೆ ಶಾಸಕ ಆರಗಜ್ಞಾನೇಂದ್ರ ತಾಲ್ಲೂಕು ದಂಡಾಧಿಕಾರಿ ಡಾ. ಶ್ರೀಪಾದ ಭೇಟಿ ನೀಡಿದ್ದಾರೆ.


ತೀರ್ಥಹಳ್ಳಿ ಸೊಪ್ಪುಗುಡ್ಡೆ ನೀರಿನ ಟ್ಯಾಂಕ್ ಬಳಿ ಮೊನ್ನೆ ತಾನೇ ಒಬ್ಬ ವೃದ್ಧ ಮೃತಪಟ್ಟಿದ್ದರು. ಬೆಜ್ಜವಳ್ಳಿಯ ದಾನಸಾಲೆ ರಸ್ತೆಯಲ್ಲಿ ಯುವಕನೊಬ್ಬ ಮದ್ಯದ ಚಟಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದ.

Categories
ಮಲ್ನಾಡ್

ಕೋಣಂದೂರು ಕರೋನಾ “ಹೈ ಅಲರ್ಟ್”!

  • ಹಳ್ಳಿ ಹಳ್ಳಿಯಲ್ಲೂ ಹೆಚ್ಚಿದ ಕೇಸ್: ಜನರಲ್ಲಿ ಆತಂಕ
  • ಗ್ರಾಮ ಪಂಚಾಯತ್ ಆಡಳಿತದ ನಿರ್ಲಕ್ಷ್ಯ
  • ಕೆಟ್ಟ ಮೇಲೆ ಬುದ್ದಿ ಬಂತು: ಕ್ರಿಮಿನಾಶಕ ಸಿಂಪಡಣೆ

ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಕರೋನಾ ಪ್ರಕರಣ ಹೆಚ್ಚಾಗುತ್ತಿದ್ದಂತೆ ತಾಲೂಕಿನ ಪ್ರಮುಖ ಕೇಂದ್ರ ಕೋಣಂದೂರು ಕೂಡ ಸಂಪೂರ್ಣ ಲಾಕ್ ಡೌನ್ ಆಗಿದೆ. ಕೋಣಂದೂರು ಸುತ್ತಮುತ್ತ ಸುಮಾರು 150ಕ್ಕೂ ಹೆಚ್ಚು ಪ್ರಕರಣಗಳಿವೆ. ಹೀಗಾಗಿ ತಾಲೂಕು ಆಡಳಿತ ಲಾಕ್ ಡೌನ್ ಘೋಷಣೆ ಆಗಿದೆ. ರಸ್ತೆಗೆ ಬೇಲಿ ಹಾಕಿದ್ದು ಪೊಲೀಸ್ ಪಹರೆ ಇದೆ. ಅನಗತ್ಯ ವಾಹನ ಮುಟ್ಟುಗೋಲು ಹಾಕಲಾಗುತ್ತದೆ.

ಕೋಣಂದೂರು ಸುತ್ತಮುತ್ತಲಿನ 10 ಕಿ.ಮೀ ವ್ಯಾಪ್ತಿಯ ಹಳ್ಳಿ ಹಳ್ಳಿಗಳಲ್ಲಿ ಕರೋನಾ ಸಂಖ್ಯೆ ದಿನೇ ದಿನೇ ಹೆಚ್ಚಿದೆ. ಬೆಂಗಳೂರು ಸೇರಿದಂತೆ ಹೊರ ಭಾಗಗಳಿಂದ ಕೋಣಂದೂರು ಸುತ್ತಮುತ್ತ 5 ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸಿದ್ದು, ಅವರನ್ನು ಕ್ವಾರೈನ್ಟೈನ್ ಮಾಡಿರಲಿಲ್ಲ. ಜೊತೆಗೆ ಜಾಗೃತಿ ಮೂಡಿಸುವಲ್ಲಿ ಕೋಣಂದೂರು ಗ್ರಾಮ ಪಂಚಾಯತ್ ವಿಫಲವಾಗಿತ್ತು ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕ್ರಿಮಿನಾಶಕ ಸಿಂಪಡಣೆ!: ಕೋಣಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕರೋನಾ ಸೋಂಕು ತಡೆಯಲು ಕ್ರಿಮಿನಾಶಕ ಔಷಧಿ ಸಿಂಪಡಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತಮ್ಮ ಯೋಜನೆಗೆ ಚಾಲನೆ ನೀಡಿದರು. ಗ್ರಾಮ ಪಂಚಾಯತ್ ಸದಸ್ಯರಾದ ಚೇತನ್, ಮಂಗಳ ಗೋಪಿ,ಎ.ಡಿ.ಸುಧಾಕರ್, ನೋಡೆಲ್ ಅಧಿಕಾರಿಯಾದ ಶಅಜಿತ್ ಕುಮಾರ್ ಭಾಗಿಯಾಗಿದ್ದರು. ಔಷಧಿ ಸಿಂಪಡಣೆ ಕಾರ್ಯವನ್ನು ಜಗದೀಶ್ ಮತ್ತು ತಂಡ ನೇರವೇರಿಸಿತು.

Categories
ಮಲ್ನಾಡ್

ವಿನಯ್ ಗುರೂಜಿ ಸಾರಥ್ಯದಲ್ಲಿ ಬಂತು ಆಂಬುಲೆನ್ಸ್!

  • ಶಿಲ್ಪಾ ಫೌಂಡೇಶನ್ ಮಾನವೀಯ ಸೇವೆಗೆ ಸಲಾಂ
  • ಮತ್ತೆ ಮಲೆನಾಡಿನ ಕಷ್ಟಕ್ಕೆ ಮಿಡಿದ ಅಚ್ಯುತ್ ಗೌಡ
  • ಉಚಿತ ಆಂಬುಲೆನ್ಸ್ ಜನರ ಸೇವೆಗೆ ಸಿದ್ಧ

ತೀರ್ಥಹಳ್ಳಿ: ವಿನಯ್ ಗುರೂಜಿ ಅವರ ಮಾರ್ಗದರ್ಶನದಲ್ಲಿ ಶಿಲ್ಪಾ ಫೌಂಡೇಶನ್ ತೀರ್ಥಹಳ್ಳಿ ತಾಲೂಕಿನ ಕರೋನಾ ಸಂಕಷ್ಟಕ್ಕೆ ಮಿಡಿದಿದೆ.

ಗೌರಿಗದ್ದೆ ಅವಧೂತ ಶ್ರೀ ವಿನಯ್ ಗುರೂಜಿ ಅವರ ಸಾರಥ್ಯದಲ್ಲಿ ಮಲೆನಾಡಿನ ಎಲ್ಲಾ ಕಷ್ಟಗಳಿಗೆ ಮಿಡಿಯುವ ಉದ್ಯಮಿ ಅಚ್ಯುತ್ ಗೌಡ ಅಧ್ಯಕ್ಷತೆಯ ಶಿಲ್ಪಾ ಫೌಂಡೇಶನ್ ಕೋವಿಡ್ ಮುಕ್ತ ಭಾರತ ನಿರ್ಮಾಣದ ಸಲುವಾಗಿ ಜನರಿಗೆ ಉಚಿತ ಆಂಬುಲೆನ್ಸ್ ಸೇವೆ ನೀಡಿದೆ. ಜನ ಹಿತಕ್ಕಾಗಿ ಸೇವೆ ಸಲ್ಲಿಸುವ ಮನೋಭಾವದಿಂದ ಉಚಿತ ಸೇವೆಯನ್ನು ನೀಡಲಾಗುತ್ತಿದೆ. ಈ ಸೇವೆಯೂ ದಿನದ 24 ಗಂಟೆಯೂ ಚಾಲ್ತಿಯಲ್ಲಿರುತ್ತದೆ. ಹಾಗಾಗಿ ಅಗತ್ಯವಿರುವ ಎಲ್ಲಾ ಸಾರ್ವಜನಿಕರು ಇದರ ಸೇವೆಯನ್ನು ಪಡೆಯಬೇಕಾಗಿ ಮನವಿ ಮಾಡಲಾಗಿದೆ. ತೀರ್ಥಹಳ್ಳಿ ತಾಲೂಕಿನ ಸೊಂಕಿತರು ತೀರ್ಥಹಳ್ಳಿ ತಾಲ್ಲೂಕಿನಲ್ಲಿ ತುರ್ತು ಆಂಬ್ಯುಲೆನ್ಸ್ ಸೇವೆ ಬೇಕಿದ್ದವರು ಈ ಕೆಳಗಿನ ಸಂಪರ್ಕವನ್ನು ಪಡೆಯಬಹುದು.


ದೀಪಕ್ ಚಿಕ್ಕಳೂರು – 8197184931
ಕುಕ್ಕೆ ಪ್ರಶಾಂತ್ – 9480066271
ಆದರ್ಶ ಹುಂಚದಕಟ್ಟೆ -9731658179
ತಲಬಿ ರಾಘವೇಂದ್ರ -9901136856


ಇವರನ್ನು ಸಂಪರ್ಕಿಸುವ ಮೂಲಕ ಯಾವ ಧರ್ಮ, ಜಾತಿ, ಮತ, ಪಕ್ಷಗಳಿಗೆ ಸೀಮಿತವಾಗಿಲ್ಲದ ಈ ಆಂಬುಲೆನ್ಸ್ ಸೇವೆಯನ್ನು ತಮ್ಮ ಅಗತ್ಯಕ್ಕೆ ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಇದು ಉಚಿತ ಸೇವೆ ಆಗಿದೆ. ದಿನವೂ 24 ಗಂಟೆ ಸೇವೆ ಸಿಗಲಿದೆ.
ಮಲೆನಾಡಿನ ಜನರಿಗೆ ಸದಾ ಸೇವೆ ನೀಡಿರುವ ಅಚ್ಯುತ್ ಗೌಡ ಅವರು ಈ ಸೇವೆಗೆ ನಮ್ಮೂರ್ ಎಕ್ಸ್ಪ್ರೆಸ್ ನಮನ ಸಲ್ಲಿಸಿದೆ. ವಿನಯ್ ಗುರೂಜಿ ಆಶ್ರಮ ಕೂಡ ರಾಜ್ಯದ ಹಲವೆಡೆ ಸೇವೆ ಸಲ್ಲಿಸುತ್ತಿದ್ದಾರೆ.

Categories
Uncategorized

ಬ್ಯಾಂಕ್, ಖಾಸಗಿ ಫೈನಾನ್ಸ್ ಸಾಲಕ್ಕೆ ಬೇಕು ವಿನಾಯ್ತಿ!

  • ಸ್ತ್ರೀ ಶಕ್ತಿ ಸಂಘಗಳ ಕಂತು ಕೂಡ ಈಗ ಕಷ್ಟ ಕಷ್ಟ
  • ಸರಕಾರ ಗಮನಿಸಲಿ..ಜನರ ನೋವಿಗೆ ದನಿಯಾಗಲಿ!
  • 3 ತಿಂಗಳು ಮುಂದೂಡಿಕೆಗೆ ಜನರ ಪಟ್ಟು..!


ಬೆಂಗಳೂರು: ಕರೋನಾದಿಂದ ಇಡೀ ಕರುನಾಡು ಸಂಕಷ್ಟದಲ್ಲಿದೆ. ಹಳ್ಳಿ ಹಳ್ಳಿ ಜನ ದುಡಿಮೆ ಇಲ್ಲದೆ ಪರದಾಟ ನಡೆಸುತ್ತಿದ್ದಾರೆ. ಉದ್ಯಮ, ಉದ್ಯೋಗ, ಕೆಲಸ ಇಲ್ಲದೆ ಜನ ಹಣದ ಮುಖ ನೋಡಲು ಸಾಧ್ಯವಾಗುತ್ತಿಲ್ಲ.


ತುತ್ತು ಹೊತ್ತಿನ ಊಟಕ್ಕೂ ಕಷ್ಟ ಇದೆ. ಆದರೆ ಈ ಹಿಂದೆ ಮಾಡಿರುವ ಸಾಲ ಕೂಡ ಹಲವರ ಬಲಿ ಪಡೆಯುತ್ತಿದೆ. ಆದರೆ ಕೇಂದ್ರ, ರಾಜ್ಯ ಸರಕಾರ ಇದುವರೆಗೂ ಯಾವುದೇ ನಿರ್ಧಾರ ಪ್ರಕಟ ಮಾಡಿಲ್ಲ. ರಾಜ್ಯ ಸರಕಾರಕ್ಕೆ ಈ ಹಕ್ಕು ಇಲ್ಲ. ಆರ್ಬಿಐ ಮೂಲಕ ಕೇಂದ್ರ ಸರಕಾರ ಈ ಅದೇಶ ಹೊರಡಿಸಬೇಕಿದೆ. ರಾಜ್ಯದ ಸಂಸದರು ಈ ಬಗ್ಗೆ ದನಿ ಎತ್ತಬೇಕಿದೆ.


ಪ್ರತಿ ಕಾರ್ಯಕರ್ತರು, ನಾಯಕರು ಸರಕಾರಗಳ ಗಮನ ಸೆಳೆಯಬೇಕಿದೆ. ಪ್ರತಿ ಮನೆಯಲ್ಲೂ ಸಾಲ ಇದೆ. ಸ್ತ್ರೀ ಶಕ್ತಿ ಸಂಘ, ಖಾಸಗಿ ಫೈನಾನ್ಸ್, ಬ್ಯಾಂಕ್ಗಳಿಂದ ಜನ ಸಾಲ ಪಡೆದು ಉದ್ಯಮ, ಮನೆ, ಉದ್ಯೋಗ ಮಾಡುತ್ತಿದ್ದಾರೆ. ಆದರೆ ಕರೋನಾ ಎಲ್ಲಾ ಯೋಜನೆ, ಯೋಚನೆಗಳನ್ನು ಬುಡಮೇಲು ಮಾಡಿದೆ. ಹೀಗಾಗಿ ತಕ್ಷಣ ಸರಕಾರ 3 ತಿಂಗಳು ಕಂತು ಮುಂದೂಡಿಕೆ ಮಾಡಲು ನಿರ್ಧಾರ ಮಾಡಬೇಕು. ಇಲ್ಲವಾದಲ್ಲಿ ಜನರನ್ನು ಫೈನಾನ್ಸ್ ಸಂಸ್ಥೆ ಹಿಂಡಿ ಹಿಪ್ಪೆ ಮಾಡಿ ಮಾನಸಿಕ ಹಿಂಸೆ ಮಾಡುತ್ತಿದ್ದಾರೆ. ಇದರಿಂದ ಸಾವಿರಾರು ಮಂದಿ ಆತ್ಮಹತ್ಯೆ ಹಾದಿ ಹಿಡಿದರೂ ಅಚ್ಚರಿ ಇಲ್ಲ.


ಕೈಗೆ ಉದ್ಯೋಗ ಕೊಡಿ.. ಇಲ್ಲವೇ ಆರೋಗ್ಯ ವ್ಯವಸ್ಥೆ ಸುಧಾರಿಸಿ.. ಇಲ್ಲವೇ ಸರಕಾರವೆ ಹಣ ನೀಡಲಿ ಎಂಬ ಆಕ್ರೋಶ ಕಂಡು ಬರುತ್ತಿದೆ. ಇಷ್ಟು ವರ್ಷಗಳ ಸುಳ್ಳು, ಹುಸಿ ಭರವಸೆ, ಭವಿಷ್ಯದ ಚಿಂತನೆಇಲ್ಲದ ಸರಕಾರ, ಅಳುವವರ ಕೆಟ್ಟ ಚಿಂತನೆಗೆ ಕರೋನಾ ಬುದ್ದಿ ಕಳಿಸಿದೆ. ಇನ್ನಾದರೂ ಎಚ್ಚರ ವಹಿಸಬೇಕು. ಇಲ್ಲವಾದರೆ ಕಾಲವೇ ಉತ್ತರಿಸಲಿದೆ

Categories
ಮಲ್ನಾಡ್

ದೇಗುಲದ ಅರ್ಚರು, ಆಶ್ರಮದ ಗೋ ಶಾಲೆಗೆ ಜನ ಬೇಕಾಗಿದ್ದಾರೆ!

  • ಅಡಿಕೆ ಸಸಿ, ಶುಂಠಿ, ಇಟ್ಟಿಗೆ ದೊರೆಯುತ್ತದೆ
  • ಮಲೆನಾಡಿನ ಎಲ್ಲಾ ಮಾಹಿತಿ ನಿಮಗೆ ಕೊಡಲು ಸಿದ್ಧ!

ದೇಗುಲ ಪೂಜೆ ಮಾಡಲು ಅರ್ಚಕರು ಬೇಕಾಗಿದ್ದಾರೆ!
ಮೂಡಿಗೆರೆ ತಾಲೂಕಿನ ಪ್ರಸಿದ್ಧ ದೇಗುಲವೊಂದರ ಪೂಜೆ ಮಾಡುವುದರ ಜತೆಗೆ ದೇಗುಲವನ್ನು ನಿರ್ವಹಣೆ ಮಾಡಿಕೊಂಡು ಅಲ್ಲೇ ಇರಲು ಬ್ರಾಹ್ಮಣ ಕುಟುಂಬವೊಂದು ಬೇಕಾಗಿದೆ. 10,000 ರೂ. ಸಂಬಳ, ವಸತಿ ವ್ಯವಸ್ಥೆ, ಇತರೆ ವೆಚ್ಚ ನೀಡಲಾಗುತ್ತದೆ.
ಮಾಹಿತಿಗೆ ಸಂಪರ್ಕಿಸಿ: 7619311318.

ಉತ್ತಮ ಅಡಿಕೆ ಸಸಿಗಳು ದೊರೆಯುತ್ತದೆ
ಮಲೆನಾಡಿನ ಉತ್ತಮ ಗುಣಮಟ್ಟದಿಂದ ಮಾಡಿದ ಅಡಿಕೆ ಸಸಿಗಳು ರಿಯಾಯಿತಿ ದರದಲ್ಲಿ ದೊರೆಯುತ್ತವೆ. ಒಂದು, ಎರಡು, ಮೂರು ವರ್ಷದ ಸಸಿಗಳು ಲಭ್ಯ ಇದೆ.
ಸಂಪರ್ಕಿಸಿ: 7619311318.

ಗೋಶಾಲೆ ನೋಡಿಕೊಳ್ಳಲು ಬೇಕಾಗಿದ್ದಾರೆ
ಕೊಪ್ಪ ತಾಲೂಕಿನ ಗೋ ಶಾಲೆಯೊಂದರಲ್ಲಿ ಗೋವುಗಳ ಆರೈಕೆ, ಗೋ ಶಾಲೆ ನಿರ್ವಹಣೆ ಮಾಡಲು ಬೇಕಾಗಿದ್ದಾರೆ. ಕುಟುಂಬವಿದ್ದರೂ ಓಕೆ. ಅಲ್ಲೇ ವಸತಿ, ಊಟದ ವ್ಯವಸ್ಥೆ ಜತೆಗೆ ಉತ್ತಮ ಸಂಬಳ ನೀಡಲಾಗುತ್ತದೆ.
ಸಂಪರ್ಕಿಸಿ: 7619311318.

ಸುಟ್ಟ ಇಟ್ಟಿಗೆ ದೊರೆಯುತ್ತದೆ
ತೀರ್ಥಹಳ್ಳಿಯಲ್ಲಿ ರಿಯಾಯಿತಿ ದರದಲ್ಲಿ ಸುಟ್ಟ ಇಟ್ಟಿಗೆ, ಸಿಮೆಂಟ್ ಇಟ್ಟಿಗೆ ದೊರೆಯುತ್ತದೆ.
ಸಂಪರ್ಕಿಸಿ: 7619311318.

ಶುಂಠಿ ರಿಯಾಯಿತಿ ದರದಲ್ಲಿ ದೊರೆಯುತ್ತದೆ
ಮಲೆನಾಡನಲ್ಲಿ ಬೆಳೆದ ಉತ್ತಮ ತಳಿ ಹಾಗೂ ಗುಣಮಟ್ಟದ ಶುಂಠಿ ರಿಯಾಯಿತಿ ದರದಲ್ಲಿ ದೊರೆಯುತ್ತದೆ. ಶುಂಠಿ ಮಾರಾಟ ಮಾಡುವವರು ಕೂಡ ಸಂಪರ್ಕಿಸಬಹುದು.
ಸಂಪರ್ಕಿಸಿ: 7619311318.
ಮಲೆನಾಡಿನ ಎಲ್ಲಾ ಮಾಹಿತಿ ಎಲ್ಲಾ ಮಾಹಿತಿ, ಉದ್ಯೋಗ ಅವಕಾಶ, ಸೇವೆ, ಸಹಾಯ, ಸಮಸ್ಯೆ ಬಗ್ಗೆ ನಮ್ಮೂರ್ ಎಕ್ಸ್ಪ್ರೆಸ್ ಕಳೆದ 5 ವರ್ಷದಿಂದ ಸೇವೆ ನೀಡುತ್ತಿದೆ. ಕರೋನಾದ ಈ ಸಂದರ್ಭದಲ್ಲಿ ಜನತೆಗೆ ಸುದ್ದಿ, ಮಾಹಿತಿ, ಅವಕಾಶಗಳ ಸೇವೆ ನೀಡಲು ನಾವು ಸಿದ್ಧರಿದ್ದೇವೆ.

Categories
ಮಲ್ನಾಡ್

ಮಲೆನಾಡಲ್ಲಿ ಫುಲ್ ಖಡಕ್: ಕರೋನಾ ಕೊಂಚ ಇಳಿಕೆ!

  • ಶಿವಮೊಗ್ಗದಲ್ಲಿ ಭಾರಿ ಬಂದೋಬಸ್ತ್: ಹಲವೆಡೆ ಕಿರಿಕ್
  • ಚಿಕ್ಕಮಗಳೂರಲ್ಲಿ ಸಾವು ಕಡಿಮೆ: ಕೇಸ್ ಮಾಮೂಲಿ


ಮಲೆನಾಡು: ಶಿವಮೊಗ್ಗ ಜಿಲ್ಲೆಯಲ್ಲಿ ಶನಿವಾರ 663 ಜನರಲ್ಲಿ ಕರೋನಾ ಬಂದಿದೆ. ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 7121ಕ್ಕೇರಿದೆ. ಶನಿವಾರ 14 ಮಂದಿ ಸಾವನ್ನು ಕಂಡಿದ್ದಾರೆ.


2401 ಜನರಿಗೆ ಸೋಂಕು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದರಲ್ಲಿ 1052 ಜನರಿಗೆ ನೆಗೆಟಿವ್ ಬಂದಿದೆ. ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 686ಕ್ಕೇರಿದೆ‌.
ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು ಇದರಲ್ಲಿ 26 ವಿದ್ಯಾರ್ಥಿಗಳಿಗೆ ಹಾಗೂ 5 ಸಿಬ್ಬಂದಿಗೆ ಸೋಂಕು ಧೃಡಪಟ್ಟಿದೆ.
ಯಾವ ತಾಲೂಕಲ್ಲಿ ಎಷ್ಟು?: ಶಿವಮೊಗ್ಗ 195, ಭದ್ರಾವತಿ 126, ಶಿಕಾರಿಪುರ 68, ತೀರ್ಥಹಳ್ಳಿ 30, ಸೊರಬ 64, ಹೊಸನಗರ 30, ಸಾಗರ 128, ಇತರೆ ಜಿಲ್ಲೆ 22 ಕೇಸ್ ವರದಿಯಾಗಿದೆ.


ಚಿಕ್ಕಮಗಳೂರು ಜಿಲ್ಲೆಯಲ್ಲಿ ಸತತ ಎರಡನೇ ದಿನ 600ಕ್ಕೂ ಹೆಚ್ಚು ಕರೋನಾ ಪ್ರಕರಣಗಳು ಕಂಡು ಬಂದಿದೆ. ಜಿಲ್ಲೆಯ ಬಯಲು ಸೀಮೆ ಭಾಗದಲ್ಲಿ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಮಲೆನಾಡು ಭಾಗದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಇಳಿಮುಖ ಕಂಡು ಬಂದಿದೆ.


ಚಿಕ್ಕಮಗಳೂರು ಜಿಲ್ಲೆಯಲ್ಲಿ ಶನಿವಾರ 652 ಜನರು ಸೋಂಕಿಗೆ ಒಳಗಾಗಿದ್ದಾರೆ. ಚಿಕ್ಕಮಗಳೂರು ತಾಲೂಕಿನಲ್ಲಿ 124, ಕಡೂರು ತಾಲೂಕಿನಲ್ಲಿ 174, ತರೀಕೆರೆ ತಾಲೂಕಿನಲ್ಲಿ 187, ಮೂಡಿಗೆರೆ ತಾಲೂಕಿನಲ್ಲಿ 55, ಎನ್.ಆರ್ ಪುರ ತಾಲೂಕಿನಲ್ಲಿ 69, ಕೊಪ್ಪ ತಾಲೂಕಿನಲ್ಲಿ 51 ಹಾಗೂ ಶೃಂಗೇರಿ ತಾಲೂಕಿನಲ್ಲಿ 01 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.


ಹೊಸನಗರ ತಾಲೂಕು ಬೆಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಿರಣ್‌ಕುಮಾರ್ ಎನ್ನುವವರ ತಮ್ಮ ಮದುವೆಗೆ ಗ್ರಾಮ ಪಂಚಾಯ್ತಿಯಿಂದ ಕೊವೀಡ್ ನಿಬಂಧನೆಗೆ ಒಳಪಟ್ಟು ಮದುವೆ ನಡೆಸಲು ಅನುಮತಿ ಪಡೆದಿದ್ದರು. ಆದರೆ ನಿಬಂಧನೆಯನ್ನು ಉಲ್ಲಂಘಿಸಿ ರಾತ್ರಿ ಸಂಬಂಧಿಕರಿಗೆ ಬಾಡೂಟ ನಡೆಸಿದ್ದಾರೆಂದು ಬೆಳ್ಳೂರು ಗ್ರಾಮ ಪಂಚಾಯ್ತಿ ಪಿಡಿಓರಿಗೆ ಸ್ಥಳೀಯರೊಬ್ಬರು ದೂರವಾಣಿ ಮುಖಾಂತರ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಪಿಡಿಓ ಅವರು ಸ್ಥಳಕ್ಕೆ ಗ್ರಾಮ ಪಂಚಾಯ್ತಿ ಸಿಬ್ಬಂದಿಯನ್ನು ಕಳುಹಿಸಿದ್ದರು. ಈ ಹಿನ್ನೆಲೆ ಕರ್ತವ್ಯ ಲೋಪ ಹಿನ್ನೆಲೆ ಕೆಲಸದಿಂದ ಅಮಾನತುಗೊಂಡಿದ್ದಾರೆ.

Categories
ಮಲ್ನಾಡ್

ಪಡಿತರ ಅಂಗಡಿ ಕರೋನಾ ಹರಡುವ ತಾಣ!?

  • ಬಯೋಮೆಟ್ರಿಕ್ ವ್ಯವಸ್ಥೆಯಿಂದ ಜನರ ಸಾಲು
  • 2 ತಿಂಗಳು ನಂಬರ್ ನಮೂದಿಸಿ ರೇಷನ್ ಕೊಡಿ
  • ಸರಕಾರದ ಎಡವಟ್ಟು: ಜನತೆಗೆ ಇಕ್ಕಟ್ಟು..!

ಶಿವಮೊಗ್ಗ: ಪಡಿತರ ಅಂಗಡಿಯಲ್ಲಿ ರೇಷನ್ ಪಡೆಯಲು ನೂರಾರು ಜನ ಒಟ್ಟಿಗೆ ಸೇರುವುದರಿಂದ ಕರೋನಾ ಹರಡುವ ಸಾಧ್ಯತೆಗಳು ಹೆಚ್ಚಿದ್ದು ಇದಕ್ಕೆ ಸರಕಾರದ ಬಯೋಮೆಟ್ರಿಕ್ ಕಾನೂನು ಕಾರಣವಾಗಿದೆ.


ಬಯೋಮೆಟ್ರಿಕ್ ಬೆರಳಚ್ಚು ಕೊಡಲು ನೂರಾರು ಜನ ನ್ಯಾಯ ಬೆಲೆ ಅಂಗಡಿಗಳ ಮುಂದೆ ಕಾದು ನಿಂತಿರುವ ದೃಶ್ಯ ಎಲ್ಲೆಡೆ ಕಾಣುತ್ತಿದೆ. ಇದರಿಂದ ಹಲವೆಡೆ ಕರೋನಾ ಹೆಚ್ಚಿದೆ. ಮೊದಲೇ ಹಳ್ಳಿಗಳಲ್ಲಿ ಕರೋನಾ ರಾಕ್ಷಸ ಅಟ್ಟಹಾಸ ಮೆರೆಯುತ್ತಿದ್ದು, ಇದು ಮತ್ತಷ್ಟು ಹರಡಲು ಕಾರಣವಾಗಿದೆ.


ಸರಕಾರ ಪ್ರತಿಯೊಬ್ಬ ಬಿಪಿಲ್ ವ್ಯಕ್ತಿಯ ಕುಟುಂಬಕ್ಕೆ ತಲಾ 10 ಕೆಜಿ ಅಕ್ಕಿ ಹೆಚ್ಚುವರಿ ನೀಡಲು ನಿರ್ಧಾರ ಮಾಡಿದೆ. ಈ ನಡುವೆ ಬಯೋ ಮೆಟ್ರಿಕ್ ವ್ಯವಸ್ಥೆಯಿಂದ ಜನ ಕೂಡ ಪರದಾಟ ನಡೆಸುವಂತಾಗಿದೆ.


ಕಾರಣ ಏನು..?: ಹಳ್ಳಿಗಳಲ್ಲಿ ಟವರ್, ನೆಟ್ವರ್ಕ್, ವಿದ್ಯುತ್ ಸಮಸ್ಯೆ ಇದೆ. ಇನ್ನೊಂದೆಡೆ ಸರಕಾರದ ಆಹಾರ ಇಲಾಖೆ ಸರ್ವರ್ ಕೂಡ ಸರಿ ಇಲ್ಲ ಎಂಬ ಆರೋಪ ಕೇಳಿ ಬಂದಿದೆ. ಒಟ್ಟಿನಲ್ಲಿ ಸರಕಾರ ಸರಳವಾಗಿ ಬಗೆಹರಿಸಬೇಕಾದ ಸಮಸ್ಯೆಯನ್ನು ಮತ್ತಷ್ಟು ಕಠಿಣ ಮಾಡಿಕೊಳ್ಳುತ್ತಿದೆ.


ಈ ಬಗ್ಗೆ ಸರ್ಕಾರ, ಅಧಿಕಾರಿಗಳು, ಜನ ನಾಯಕರು ಕ್ರಮ ತೆಗೆದುಕೊಳ್ಳಬೇಕಿದೆ. ಈ ಸುದ್ದಿ ಎಲ್ಲಾ ನಾಯಕರಿಗೂ ಶೇರ್ ಮಾಡಿರಿ.