Categories
ಬೆಂಗಳೂರು

ಕರೋನಾ ಮಹಾಮಾರಿ ಹೆಸರಲ್ಲಿ ದೇಗುಲ!

  • ತಮಿಳುನಾಡಲ್ಲಿ ಕರೋನಾ ದೇವಿ ದೇಗುಲ ನಿರ್ಮಾಣ
  • ಕರೋನಾ ಬಂದು ಹೊರಗೆ ಓಡಾಡಿದ್ರೆ ಪೊಲೀಸ್ ಕೇಸ್
  • ನಾಳೆಯಿಂದ ಇಂಜೆಕ್ಷನ್ ನೀಡಲು ಸರ್ಕಾರ ಸಿದ್ದ!

ಬೆಂಗಳೂರು: ಕರೋನಾ ಇಡೀ ವಿಶ್ವ ಹೆಚ್ಚು ಭಯ ಹುಟ್ಟಿಸಿದ ಪದ. ಕರೋನಾ ಇಡೀ ಭಾರತವನ್ನು ಕಪಿಪುಷ್ಟಿಯಲ್ಲಿಟ್ಟುಕೊಂಡಿದೆ.
ಲಕ್ಷಾಂತರ ಮಂದಿಯನ್ನು ಈಗಾಗಲೇ ಬಲಿ ಪಡೆದಿದೆ. ಕರೋನಾ ಮಹಾಮಾರಿಯನ್ನು ದೇಶದಿಂದ ಹೊರ ಹಾಕಲು ಈಗ ತಮಿಳುನಾಡು ಕರೋನಾ ದೇವಿ ಪ್ರತಿಷ್ಠಾಪನೆ ಮಾಡಿದ್ದಾರೆ.


ತಮಿಳುನಾಡಿನ ಜನರು ಇನ್ನೂ ಒಂದು ಹೆಜ್ಜೆ ಮುಂದೇ ಹೋಗಿದ್ದು, ಕೊರೋನಾಗೆ ದೇವಿಯ ರೂಪಕೊಟ್ಟು ಪೂಜಿಸಲು ದೇವಾಲಯವನ್ನೇ ನಿರ್ಮಿಸಿದ್ದಾರೆ.
ಕುಂದಾಪುರದಲ್ಲಿ ಸೊಂಕಿತನ ಕ್ರಿಮಿನಲ್ ಕೇಸ್!: ಕರೋನಾ ಸೋಂಕು ದೃಢಪಟ್ಟು ಹೋಮ್ ಐಸೋಲೇಷನ್ ನಲ್ಲಿದ್ದ ವ್ಯಕ್ತಿಯೋರ್ವ ಕ್ವಾರಂಟೈನ್ ನಿಯಮ ಪಾಲನೆ ಮಾಡದ ಹಿನ್ನೆಲೆಯಲ್ಲಿ ಕರೋನಾ ಸೋಂಕಿತನ ವಿರುದ್ದ ಕ್ರಿಮಿನಲ್ ಕೇಸ್ ದಾಖಲಾಗಿದೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಾವಡಿ ಗ್ರಾಮದ ವ್ಯಕ್ತಿಯೋರ್ವ ಹೋಮ್ ಐಸೋಲೇಷನ್ ನಲ್ಲಿದ್ದರೂ ಕೂಡ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಹೊರಗಡೆ ತಿರುಗಾಡುತ್ತಿದ್ದ. ಕುಂದಾಪುರ ಸಹಾಯಕ ಆಯುಕ್ತರು ಗ್ರಾಮಕ್ಕೆ ಭೇಟಿ ನೀಡಿದ ವೇಳೆಯಲ್ಲಿ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಹಾಯಕ ಆಯುಕ್ತರು ವ್ಯಕ್ತಿಯ ವಿರುದ್ದ ಪ್ರಕರಣ ದಾಖಲು ಮಾಡುವಂತೆ ಸೂಚನೆಯನ್ನು ನೀಡಿದ್ದರು.
ವೈಟ್ ಫಂಗಸ್ ಹಾವಳಿ ಶುರು!: ರಾಜ್ಯದಲ್ಲಿ ಕರೋನಾ ನಡುವೆ ಬ್ಲಾಕ್ ಫಂಗಸ್ ಹಾಗೂ ವೈಟ್ ಫಂಗಸ್ ಇದೀಗ ಜನರ ಬಲಿ ಪಡೆಯಲು ಶುರು ಮಾಡಿದೆ. ರಾಜ್ಯದಲ್ಲಿ ನೂರಾರು ಮಂದಿ ಬ್ಲಾಕ್ ಫಂಗಸ್ ರೋಗಕ್ಕೆ ಬಲಿಯಾಗಿದ್ದಾರೆ. ಬಿಹಾರದ ಪಾಟ್ನಾದಲ್ಲಿ 4 ಮಂದಿಯಲ್ಲಿ ವೈಟ್ ಫಂಗಸ್ ಪತ್ತೆಯಾಗಿದೆ. ಆರೋಗ್ಯ ತಜ್ಞರ ಪ್ರಕಾರ ಬ್ಲ್ಯಾಕ್ ಫಂಗಸ್‍ಗಿಂತ ವೈಟ್ ಫಂಗಸ್ ಬಹಳ ಅಪಾಯಕಾರಿಯಾಗಿದ್ದು ಇದು ಶ್ವಾಸಕೋಶ ಅಲ್ಲದೇ ದೇಹದ ಉಗುರು, ಚರ್ಮ, ಹೊಟ್ಟೆ, ಕಿಡ್ನಿ, ಬಾಯಿಗೂ ಹಾನಿ ಮಾಡುತ್ತದೆ. ವೈಟ್ ಫಂಗಸ್‍ಗೆ ಆಂಟಿ-ಫಂಗಲ್ ಇಂಟ್ರಾವೆನಸ್ ಇಂಜೆಕ್ಷನ್ ನೀಡಲಾಗುತ್ತದೆ. ಒಂದು ಡೋಸ್ 3,500 ರೂ. ದರವಿದ್ದು ಎಂಟು ವಾರಗಳವರೆಗೆ ನೀಡಬೇಕಾಗುತ್ತದೆ. ಇದು ರೋಗದ ವಿರುದ್ಧ ಪರಿಣಾಮಕಾರಿಯಾದ ಏಕೈಕ ಔಷಧವಾಗಿದೆ. ವೈಟ್ ಫಂಗಸ್ ಶ್ವಾಸಕೋಶಕ್ಕೂ ಸೋಂಕು ತರುತ್ತದೆ ಮತ್ತು ಸೋಂಕಿತ ರೋಗಿಯ ಮೇಲೆ ಎಚ್‍ಆರ್ ಸಿಟಿ ಸ್ಕ್ಯಾನ್ ನಡೆಸಿದಾಗ ಕೋವಿಡ್-19 ಗೆ ಹೋಲುವ ಸೋಂಕು ಪತ್ತೆಯಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.


ನಾಳೆಯಿಂದ ಇಂಜೆಕ್ಷನ್!: ಕರೋನಾ ಲಸಿಕೆ ಶನಿವಾರದಿಂದ ಕರೋನಾ ವಾರಿಯರ್ಸ್ಗಳಿಗೆ ನೀಡಲು ಸರ್ಕಾರಿ ಮುಂದಾಗಿದೆ. ಜೊತೆಗೆ 18 ವರ್ಷದೊಳಗಿನ ಮಕ್ಕಳಿಗೆ ಕೂಡ ಲಸಿಕೆ ಹಾಕಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

Categories
ವ್ಯವಹಾರ

ಆದಾಯ ತೆರಿಗೆ ಕಟ್ಟಲು ದಿನಾಂಕ ವಿಸ್ತರಣೆ..!

  • ಸೆ.30ರವರೆಗೆ ವಯುಕ್ತಿಕ ತೆರಿಗೆ ಕಟ್ಟಲು ಅವಕಾಶ
  • ಕಂಪನಿ, ಸಂಸ್ಥೆಗೆ ನ.30ರವರೆಗೆ ರಿಲ್ಯಾಕ್ಸ್
  • ಜಿಎಸ್ಟಿ, ಟ್ಯಾಕ್ಸ್ ವಿನಾಯ್ತಿ ಕೊಡದಿದ್ರೆ ಸಣ್ಣ ಕಂಪನಿ, ಸಣ್ಣ ಉದ್ಯಮ ವಿನಾಶ

ನವ ದೆಹಲಿ: 2020-21ನೇ ಸಾಲಿನ ಹಣಕಾಸು ವರ್ಷದ ವೈಯಕ್ತಿಕ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ದಿನಾಂಕವನ್ನು ಕೇಂದ್ರ ಸರಕಾರ 2 ತಿಂಗಳ ಕಾಲ ವಿಸ್ತರಿಸಿದೆ. ಸೆಪ್ಟೆಂಬರ್ 30ರವರೆಗೆ ಕಾಲಾವಾಧಿ ವಿಸ್ತರಿಸಿ ಸರಕಾರ ಆದೇಶಿಸಿದೆ. ಜೊತೆಗೆ ಕಂಪನಿ,ಸಂಸ್ಥೆಗಳ ಟ್ಯಾಕ್ಸ್ ಸಲ್ಲಿಕೆಗೆ ನವೆಂಬರ್ ಅಂತ್ಯದ ಗಡುವು ನೀಡಲಾಗಿದೆ.
ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಕಂಪೆನಿಗಳಿಗೆ ಐಟಿಆರ್ ಸಲ್ಲಿಸುವ ಗಡುವನ್ನು ನವೆಂಬರ್ 30ರವರೆಗೆ ವಿಸ್ತರಿಸಿದೆ. ಆದಾಯ ತೆರಿಗೆ ಕಾನೂನಿನ ಪ್ರಕಾರ, ಲೆಕ್ಕಪರಿಶೋಧನೆಯ ಅಗತ್ಯವಿಲ್ಲದ ಮತ್ತು ಸಾಮಾನ್ಯವಾಗಿ ಐಟಿಆರ್ -1 ಅಥವಾ ಐಟಿಆರ್ -4 ಬಳಸಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ವ್ಯಕ್ತಿಗಳಿಗೆ ಐಟಿಆರ್ ಸಲ್ಲಿಸಲು ಅಂತಿಮ ದಿನಾಂಕ ಜುಲೈ 31 ಆಗಿತ್ತು. ಅದನ್ನು ಈಗ ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗಿದೆ.


ಕಂಪನಿಗಳು ಅಥವಾ ಸಂಸ್ಥೆಗಳ ತೆರಿಗೆ ಪಾವತಿದಾರರಿಗೆ ಆಡಿಟ್ ಮಾಡಬೇಕಾದ ಗಡುವು ಅಕ್ಟೋಬರ್ 31 ಆಗಿತ್ತು. ಅದನ್ನು ನವೆಂಬರ್ 30ರವರೆಗೆ ವಿಸ್ತರಿಸಲಾಗಿದೆ. ತೀವ್ರವಾದ ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ತೆರಿಗೆದಾರರಿಗೆ ರಿಲೀಫ್ ನೀಡಲು ಕೆಲವು ತೆರಿಗೆ ಅನುಸರಣೆಗಾಗಿ ಸಮಯ ಮಿತಿಗಳ ವಿಸ್ತರಣೆಯನ್ನು ನೀಡಲಾಗುತ್ತಿದೆ ಎಂದು ಸಿಬಿಡಿಟಿ ಸುತ್ತೋಲೆಯಲ್ಲಿ ತಿಳಿಸಿದೆ.


ಜಿಎಸ್ಟಿ ಸಮಸ್ಯೆ: ದೇಶದ ಲಕ್ಷಾಂತರ ಸಣ್ಣ ಉದ್ಯಮಗಳು, ಸ್ಟಾರ್ಟ್ ಅಪ್ಗಳು, ಬ್ಯುಸಿನೆಸ್ ಸಂಪೂರ್ಣ ನಾಶವಾಗಿದೆ. ಹಿಂದೆಂದೂ ಕಾಣದಷ್ಟು ಪಾತಾಳಕ್ಕೆ ಕುಸಿದಿದೆ. ಪ್ರತಿ ಊರಲ್ಲೂ ಉದ್ಯಮಗಳು ಮುಚ್ಚಿವೆ. ಲಕ್ಷ ಲಕ್ಷ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಈ ನಡುವೆ ಜಿಎಸ್ಟಿ ಕಿರಿಕಿರಿ ಅವರನ್ನು ಉದ್ಯಮ ಮಾಡದಂತೆ ಮಾಡಿದೆ. 2019-20, 20-21 ವರ್ಷವನ್ನು ಜಿಎಸ್ಟಿ, ಇನ್ಕಮ್ ಟ್ಯಾಕ್ಸ್ ದಾಖಲಾತಿ ಸರಳ ಮಾಡಬೇಕು. 2 ಆರ್ಥಿಕ ವರ್ಷ ಫೈಲ್ ಮಾಡದಿದ್ರೆ ದಂಡ, ಕಂಪನಿ, ಸಂಸ್ಥೆ ನಿಷೇದ ಮಾಡಬಾರದು. ಎಲ್ಲಾ ದಾಖಲಾತಿಗೂ 2 ವರ್ಷ ಅವಕಾಶ ನೀಡಬೇಕು ಎಂಬುದು ಉದ್ಯಮ ವಲಯದ ಬೇಡಿಕೆಯಾಗಿದೆ.


ಸಾವಿರಾರು ಕಂಪನಿಗಳು, ಉದ್ಯಮಗಳು 2019-20, 2020-21 ಎರಡು ಆರ್ಥಿಕ ವರ್ಷ ಇನ್ಕಮ್ ಟ್ಯಾಕ್ಸ್, ಜಿಎಸ್ಟಿ, ಕಂಪನಿ ಫೀಸ್ ಕಟ್ಟಲು ಕರೋನಾ ಕಾರಣದಿಂದ ಕಟ್ಟಲು ಆಗಿಲ್ಲ. ಹೀಗಾಗಿ ದಂಡ ಹಾಕಬಾರದು ಜೊತೆಗೆ ಲೈಸನ್ಸ್ ರದ್ದು ಮಾಡಬಾರದು ಎಂಬ ಆಗ್ರಹ ವಲಯದಿಂದ ವ್ಯಕ್ತವಾಗಿದೆ.

Categories
ಬೆಂಗಳೂರು

ಈಗ ನಡೆಯುವ ಕಾಲ.. ಹಳೆ ದಿನಗಳ ನೆನಪು!

  • ವಾಹನಗಳು 15 ದಿನ ರಸ್ತೆಗೆ ಇಳಿಯಂಗಿಲ್ಲ
  • ನಡೆದುಕೊಂಡೆ ಹೋಗ್ಬೇಕು ಅನ್ನೋ ನಿಯಮ
  • ಕಾಲ್ನಡಿಗೆ ಅರೋಗ್ಯಕ್ಕೂ ಒಳ್ಳೆಯದು..!

ಬೆಂಗಳೂರು: ನೋಡಿ ಕಾಲ ಹೇಗೆ ಬದಲಾಗುತ್ತೆ ಅಂತ. ರಾಜ್ಯದಲ್ಲಿ ಕರೋನಾ ಲಾಕ್ ಡೌನ್ ಹಿನ್ನೆಲೆ ಜನ ಯಾವುದೇ ವಾಹನ ಬಳಸುವ ಹಾಗಿಲ್ಲ. ನಡೆದುಕೊಂಡೆ ಹೋಗಿ ತಮ್ಮ ವ್ಯಾಪ್ತಿಯಲ್ಲಿ ಅಗತ್ಯ ವಸ್ತು ಖರೀದಿ ಮಾಡಬಹುದಾಗಿದೆ. ಹೀಗಾಗಿ ಈ ನಿಯಮ ಜನರ ಕಾಲ್ನಡಿಗೆ ಹೆಚ್ಚಿಸಲಿದೆ.


ಜನ ನಡೆಯಲು ಶುರು ಮಾಡಿದ್ದಾರೆ. ಇದು ಅರೋಗ್ಯಕ್ಕೂ ಒಳ್ಳೆಯದು. ಪ್ರತಿ ಮನೆಯಲ್ಲಿ 4 ವಾಹನಗಳು. ಎಲ್ಲರಿಗೂ ವಾಹನ. ಈಗ ವಾಹನ ಓಡಾಟಕ್ಕೆ ಬ್ರೇಕ್ ಬಿದ್ದಿದೆ.
14 ದಿನ ನಡೆದುಕೊಂಡೆ ಹೋಗ್ಬೇಕು: 14 ದಿನ ರಾಜ್ಯದಲ್ಲಿ ಅಗತ್ಯ ವಸ್ತು ಖರೀದಿಗೆ ನಡೆದು ಹೋಗಬೇಕು. ಹೀಗಾಗಿ ಈ ನಡೆ ಹಳೆಯ ಕಾಲದ ನೆನಪುಗಳನ್ನು ಮರುಕಳಿಸುತ್ತಿದೆ.
ಬೈಕ್, ಕಾರು ವಾಹನ ರಸ್ತೆ ಇಳಿಸಿದರೆ ಪೊಲೀಸರು ವಾಹನ ಸೀಜ್ ಮಾಡುತ್ತಿದ್ದಾರೆ. ನಿಮ್ಮ ವಾಹನ ರಸ್ತೆಗೆ ಇಳಿಸುವ ಮುನ್ನ ಹುಷಾರ್.


ಎಲ್ಲಾ ಸುದ್ದಿಗಳಿಗೆ NAMMUR EXPRESS ಫೇಸ್ಬುಕ್ ಹಾಗೂ ಯೂಟ್ಯೂಬ್ ವೀಕ್ಷಿಸಿ…!.. ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು, ಊರು, ತಾಲ್ಲೂಕು ವಾಟ್ಸಾಪ್ ಮಾಡಿ…!. ಎಲ್ಲರಿಗೂ ಶೇರ್ ಮಾಡಿ..!.

Categories
ಬೆಂಗಳೂರು

ತಾಯಂದಿರ ದಿನ.. ನಮ್ಮ ಭಾರತ ತಾಯಿ ಕಾಪಾಡೋಣ!

  • ಪ್ರತಿ ಮನೆಯ ತಾಯಂದಿರ ಬಗ್ಗೆ ಜೋಪಾನ
  • ತಾಯಂದಿರ ಹೆಸ್ರಲ್ಲಿ ಸೇವೆ ಮಾಡೋಣ..!

NAMMUR EXPRESS,ರಿಪೋರ್ಟ್: ರಂಜಿತ್


ಬೆಂಗಳೂರು: ಮೇ 9 ಭಾನುವಾರ ತಾಯಂದಿರ ದಿನ. ಎಲ್ಲೆಡೆ ಶುಭಾಶಯಗಳು, ಪೋಸ್ಟರ್ಗಳ ಸ್ಟೇಟಸ್ ಸಾಮಾಜಿಕ ಜಾಲತಾಣಗಳಲ್ಲಿ ಮಹಾಪೂರ ಕಂಡು ಬಂತು. ಆದರೆ ಪ್ರತಿಯೊಬ್ಬರೂ ಇಂದು ತಮ್ಮ ತಾಯಂದಿರ ಜೋಪಾನ ಮಾಡುವ ಸಮಯ. ತಮ್ಮ ತಾಯಂದಿರಿಗೆ ಲಸಿಕೆ ಹಾಕಿಸಿ, ಮಾಸ್ಕ್, ಸಾಮಾಜಿಕ ಅಂತರ ಕಾಪಾಡಲು ಹಾಗೂ ಕರೋನಾ ಬಗ್ಗೆ ಧೈರ್ಯ ಹೇಳಬೇಕಾದ ಸಂದರ್ಭ ಇದು. ಬರಿ ತೋರುಗಾಣಿಕೆಗೆ ಸ್ಟೇಟಸ್ ಹಾಕುವ ಬದಲು ಅಕ್ಕ ಪಕ್ಕದಲ್ಲಿರುವ ಹತ್ತಾರು ತಾಯಂದಿರಿಗೆ ಸಹಾಯ ಮಾಡಿ..!
ಅನೇಕರು ತಮ್ಮ ತಾಯಿಯ ಕಳೆದುಕೊಂಡು ತಾಯಂದಿರ ದಿನದ ಶುಭಾಶಯ ಹೇಳೋಕೂ ಆಗಿಲ್ಲ. ಅಂತವರು ತಮ್ಮ ತಾಯಿಯ ಹೆಸರಲ್ಲಿ ಕರೋನಾ ಸಂಕಷ್ಟದಲ್ಲಿರುವ ಹತ್ತು ತಾಯಂದಿರು ಮಕ್ಕಳ ಕುಟುಂಬಕ್ಕೆ ಸಹಾಯ ಮಾಡಿ. ಈ ಮೂಲಕ ಅವರಲ್ಲಿ ತಾಯಂದಿರನ್ನು ಕಾಣಿರಿ.. ಇದು ನಮ್ಮೂರ್ ಎಕ್ಸ್ಪ್ರೆಸ್ ಕಾಳಜಿ.
ಪ್ರತಿ ಮಕ್ಕಳಿಗೂ ತಾಯಿ ತಮ್ಮ ಜನ್ಮದಲ್ಲಿ ತೀರಿಸಲಾಗದ ಪ್ರೀತಿ ಕರುಣೆ ನೀಡುತ್ತಾಳೆ. ಅವಳ ಪ್ರೀತಿ, ಕರುಣೆಗೆ ಎಂದು ಮೋಸ ಮಾಡದಿರಿ. ಕರೋನಾದ ತುರ್ತು ಸಂದರ್ಭದಲ್ಲಿ ತಮ್ಮ ತಾಯಿಯರ ಬಗ್ಗೆ ಕಾಳಜಿ ವಹಿಸಿ.


ಬಡ ಮಕ್ಕಳು, ತುತ್ತು ಊಟಕ್ಕಾಗಿ ಪರದಾಡುವ ಎಲ್ಲಾ ಕುಟುಂಬಕ್ಕೆ ನಾವು ಮಕ್ಕಳಾಗಿ ಹೊರಡೋಣ. ಈ ದೇಶ, ಈ ನಾಡು ನಮ್ಮ ತಾಯಿ. ಈ ತಾಯಿ ಸಂಕಷ್ಟದಲ್ಲಿದ್ದಾಳೆ ಅವಳ ಸೇವೆಯೇ ನಾವು ತಾಯಂದಿರ ದಿನಕ್ಕೆ ನಿಜವಾಗಿ ಮಾಡುವ ಸಾರ್ಥಕತೆ.
ನಮ್ಮೆಲ್ಲ ತಾಯಂದಿರಿಗೆ, ಭೂಮಿ ತಾಯಿ ಈ ನಾಡು, ಈ ದೇಶಕ್ಕೆ ಎಲ್ಲರೂ ಸೇರಿ ಸಹಾಯ ಮಾಡೋಣ. ಪ್ರತಿಯೊಬ್ಬರು ಭಾರತಾಂಬೆಯ ಮಕ್ಕಳು. ರಾಜಕೀಯ, ಪಕ್ಷ, ಜಾತಿ, ಧರ್ಮ, ಪ್ರತಿಷ್ಠೆ, ಸ್ವಾರ್ಥ ಬಿಟ್ಟು ಎಲ್ಲರೂ ಮಾನವೀಯತೆ ಮೆರೆಯೋಣ.
ಎಲ್ಲಾ ತಾಯಂದಿರ ತ್ಯಾಗ, ಪ್ರೀತಿ ಅಕ್ಷರದಲ್ಲಿ ಬರೆಯಲಾಗದ್ದು. ನಮ್ಮೂರ್ ಎಕ್ಸ್ಪ್ರೆಸ್ ಮಾಧ್ಯಮ ಜನ ಜಾಗೃತಿ ಸುದ್ದಿಗಳನ್ನು ಬಿತ್ತರ ಮಾಡುವ ಮೂಲಕ ತಾಯ್ನಾಡಿನ ಸೇವೆಗೆ ಮುಂದಾಗಿದೆ. ನಿಮ್ಮೆಲ್ಲರ ಸಹಕಾರ, ಸಲಹೆ, ಮಾರ್ಗದರ್ಶನ ಇರಲಿ.


ಎಲ್ಲಾ ಸುದ್ದಿಗಳಿಗೆ NAMMUR EXPRESS, ಫೇಸ್ಬುಕ್ ಹಾಗೂ ಯೂಟ್ಯೂಬ್ ವೀಕ್ಷಿಸಿ…!.. ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು, ಊರು, ತಾಲ್ಲೂಕು ವಾಟ್ಸಾಪ್ ಮಾಡಿ…!. ಈ ಸುದ್ದಿ ಇಷ್ಟವಾದರೆ ಎಲ್ಲಾ ಸ್ನೇಹಿತರು, ಗ್ರೂಪ್, ಎಲ್ಲರಿಗೂ ಶೇರ್ ಮಾಡಿ..!.

Categories
ಮಲ್ನಾಡ್

ಮಲೆನಾಡಲ್ಲಿ ಸಾವು ದಿನೇ ದಿನೇ ಹೆಚ್ಚಳ!

  • ಶಿವಮೊಗ್ಗ 857 ಕೇಸ್, 17 ಮಂದಿ ಬಲಿ
  • ಚಿಕ್ಕಮಗಳೂರು 582 ಕೇಸ್, 2 ಸಾವು
  • ಉಡುಪಿ ಜಿಲ್ಲೆಯಲ್ಲೂ ಕರೋನಾ ಕಾಟ!


ಮಲೆನಾಡು/ಕರಾವಳಿ: ಶಿವಮೊಗ್ಗ ಜಿಲ್ಲೆಯಲ್ಲಿ ಭಾನುವಾರ 857 ಪ್ರಕರಣ ದಾಖಲಾಗಿದೆ. 17 ಮಂದಿ ಸಾವನ್ನು ಕಂಡಿದ್ದಾರೆ. ಇದರಿಂದಾಗಿ 495 ಸಾವು ಕಂಡಂತಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ 4592 ಸಕ್ರಿಯ ಪ್ರಕರಣ ಇದೆ. ಈ ಪೈಕಿ ಶಿವಮೊಗ್ಗ 256, ಭದ್ರಾವತಿ 34, ಶಿಕಾರಿಪುರ 43, ತೀರ್ಥಹಳ್ಳಿ 129, ಸೊರಬ 62, ಹೊಸನಗರ 111, ಸಾಗರ 192 ಪ್ರಕರಣ ವರದಿಯಾಗಿದೆ.
ಶಿವಮೊಗ್ಗ ಜಿಲ್ಲೆಯ ಪ್ರತಿ ತಾಲೂಕಿನಲ್ಲೂ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
ಕಾಫಿ ನಾಡಲ್ಲಿ ಅಬ್ಬರ!: ಚಿಕ್ಕಮಗಳೂರಲ್ಲಿ 582 ಪ್ರಕರಣ ವರದಿಯಾಗಿದೆ. ಒಟ್ಟು 4629 ಸಕ್ರಿಯ ಪ್ರಕರಣ ಇವೆ.
ಚಿಕ್ಕಮಗಳೂರು 195, ಕಡೂರು 139, ತರೀಕೆರೆ 130, ಮೂಡಿಗೆರೆ 73, ಎನ್. ಆರ್. ಪುರ 9, ಕೊಪ್ಪ 8, ಶೃಂಗೇರಿ 28 ಪ್ರಕರಣ ದಾಖಲಾಗಿದೆ. 2 ಸಾವು ಸಂಭವಿಸಿದೆ.
ಎನ್. ಆರ್. ಪುರದ ತಾಲೂಕಿನ ಸತ್ಯನಾರಾಯಣ ಎಂಬುವರು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೇ ಸಾವನ್ನು ಕಂಡಿದ್ದಾರೆ.
ಕರಾವಳಿಗೂ ಕರೋನಾ ಕಾಟ!: ಉಡುಪಿ ಜಿಲ್ಲೆಯಲ್ಲಿ ಭಾನುವಾರ 962 ಮಂದಿಗೆ ಕೆರೊನಾ ಸೋಂಕು ದೃಢಪಟ್ಟಿದೆ. 5 ಮಂದಿ ಸಾವನ್ನಪ್ಪಿದ್ದಾರೆ. ಉಡುಪಿಯ 58 ವರ್ಷದ ಇಬ್ಬರು ಪುರುಷರು, ಕುಂದಾಪುರದ 66 ವರ್ಷದ ಪುರುಷ, ಉಡುಪಿಯ 63 ವರ್ಷದ ಪುರುಷ, ಕುಂದಾಪುರದ 67 ವರ್ಷದ ಮಹಿಳೆ ಸಾವನ್ನಪ್ಪಿದ್ದಾ
ಸೋಂಕು ತಗಲಿದವರಲ್ಲಿ 19 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 943 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ. ಭಾನುವಾರ ವಾರ 2550 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಯಿತು. 543 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 6,372 ಪ್ರಕರಣಗಳು ಸಕ್ರಿಯವಾಗಿವೆ.
ಎಲ್ಲಾ ಸುದ್ದಿಗಳಿಗೆ NAMMUR EXPRESS ಫೇಸ್ಬುಕ್ ಹಾಗೂ ಯೂಟ್ಯೂಬ್ ವೀಕ್ಷಿಸಿ…!.. ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು, ಊರು, ತಾಲ್ಲೂಕು ವಾಟ್ಸಾಪ್ ಮಾಡಿ…!. ಎಲ್ಲರಿಗೂ ಶೇರ್ ಮಾಡಿ..!.

Categories
ಮಲ್ನಾಡ್

ಕಾಡು ಕೋಣ ನಿಗೂಢ ಸಾವು!

  • ತೀರ್ಥಹಳ್ಳಿ ಪಟ್ಟಣದ ಸಮೀಪವೇ ಘಟನೆ
  • ಮೇಳಿಗೆ ಬಳಿ ದ್ವೇಷಕ್ಕೆ ಅಡಿಕೆ ಮರ ಕಡಿತಲೆ
  • ಸಹಾಯವಾಣಿಗೆ ಕಾಲ್ ಮಾಡಲು ನೆಟ್ವರ್ಕ್ ಇಲ್ಲ!


ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿ ಹತ್ತಿರ ವಾಟಗಾರು ಗ್ರಾಮದಲ್ಲಿ ಕಾಡಿನಲ್ಲಿ ಕಾಡು ಕೋಣದ ಶವವೊಂದು ಪತ್ತೆಯಾಗಿದೆ . ಶಿಕಾರಿಯಿಂದ ಹತ್ಯೆ ಮಾಡಲಾಗಿದೆಯೇ ಎಂಬ ಪ್ರಶ್ನೆ ಎದ್ದಿದೆ. ಸುಮಾರು 8 -10 ದಿನಗಳ ಹಿಂದೆ ಈ ಕೋಣವು ಸತ್ತು ಬಿದ್ದಿರುವಂತೆ ಕಂಡುಬರುತ್ತಿದೆ ಎಂದು ಹೇಳಲಾಗಿದೆ. ಶಿಕಾರಿಯ ಗುಂಡು ತಗಲಿ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಅಡಿಕೆ ಮರ ಕಡಿತ.. ದ್ವೇಷ ಕಾರಣ..!
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಮೇಳಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗರಡಿಗದ್ದೆಯಲ್ಲಿ 25-30 ಅಡಿಕೆ ಸಸಿಗಳನ್ನು ವಯುಕ್ತಿಕ ದ್ವೇಷ ಕಡಿದಿದ್ದಾರೆ ಎಂದು ಹೇಳಲಾಗಿದೆ. ಗರಡಿಗದ್ದೆ ಶ್ರೀನಿವಾಸ್ ಎಂಬುವರ ತೋಟ ಕಡಿಯಲಾಗಿದೆ. ಈ ಬಗ್ಗೆ ತೀರ್ಥಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಹಿಂದೆ ಶ್ರೀನಿವಾಸ್ ಪತ್ನಿ ಮೇಲೂ ಹಲ್ಲೆ ನಡೆದು ದೂರು ದಾಖಲಾಗಿತ್ತು. ಈ ಪ್ರಕರಣ ಕೋರ್ಟ್ ಅಲ್ಲಿ ಇರುವಾಗಲೇ ಈ ಘಟನೆ ನಡೆದಿದೆ.

ಸಹಾಯವಾಣಿಯೂ “ನಾಟ್ ರೀಚಬಲ್”!
ನೆಟ್ವರ್ಕ್ ಸಮಸ್ಯೆಯಿಂದ ಜನ ಕಂಗಾಲು!

ತೀರ್ಥಹಳ್ಳಿ ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಯಾವುದೇ ನೆಟ್ವರ್ಕ್ ಸಿಗುತ್ತಿಲ್ಲ. ಬಿಎಸ್ಎನ್ಎಲ್, ಏರ್ಟೆಲ್, ಜಿಯೋ ಟವರ್ ಕೆಲಸ ಮಾಡುತ್ತಿಲ್ಲ. ಇದರಿಂದ ಸಾವಿರಾರು ಜನ ಸಮಸ್ಯೆಗೆ ಒಳಗಾಗಿದ್ದಾರೆ. ಬೆಂಗಳೂರು ಸೇರಿ ಎಲ್ಲಾ ಕಡೆಯಿಂದ ಬಂದ ವರ್ಕ್ ಫ್ರಮ್ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ. ಪ್ರತಿ ಊರಲ್ಲೂ ಹೋರಾಟ ನಡೆಯಬೇಕಿದೆ.


ಎಲ್ಲಾ ಸುದ್ದಿಗಳಿಗೆ NAMMUR EXPRESS ಫೇಸ್ಬುಕ್ ಹಾಗೂ ಯೂಟ್ಯೂಬ್ ವೀಕ್ಷಿಸಿ…!.. ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು, ಊರು, ತಾಲ್ಲೂಕು ವಾಟ್ಸಾಪ್ ಮಾಡಿ…!. ತಾಲೂಕಿನ ಎಲ್ಲರಿಗೂ ಶೇರ್ ಮಾಡಿ..!.

Categories
ಮಲ್ನಾಡ್

ಮೃತ್ಯು ಕೂಪವಾದ ಶಿವಮೊಗ್ಗ ಮೆಗ್ಗಾನ್!

  • ಒಂದೇ ಕುಟುಂಬದ ಮೂವರ ಕೊರೋನಾ ಸಾವು!
  • ಮೆಗ್ಗಾನ್ ನಲ್ಲಿ ಮುಗಿಲು ಮುಟ್ಟಿದ ನೋವಿನ ದನಿ
  • ದಿನೇ ದಿನೇ ಸಾವಿನ ಸಂಖ್ಯೆ ಹೆಚ್ಚಳ: ಜನತೆಗೆ ಆತಂಕ


ಶಿವಮೊಗ್ಗ: ದಿನೇ ದಿನೇ ಶಿವಮೊಗ್ಗದಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಪ್ರತಿ ದಿನ ಹತ್ತಾರು ಮಂದಿ ಸಾಯುತ್ತಿದ್ದಾರೆ. ಇದೀಗ ಒಂದೇ ಕುಟುಂಬದ ಮೂವರು ಸದಸ್ಯರು ಕೊರೋನಾ ಸೋಂಕಿಗೆ ಬಲಿಯಾದ ಹಿನ್ನಲೆಯಲ್ಲಿ ಈಗಲೇ ಶವಗಳನ್ನ ನೀಡುವಂತೆ ಆಗ್ರಹಿಸಿ ಕುಟುಂಬಸ್ಥರು ಗಲಾಟೆ ಮಾಡಿದ್ದಾರೆ.


ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮಂಗಳವಾರ ಸಂಜೆ ಈ ಘಟನೆ ನಡೆದಿದ್ದು, ಸಾವಿಗೆ ಕುಟಬಸ್ಥರು ಆಕ್ರೋಶ ಹೊರಹಾಕಿದ್ದಾರೆ .
60 ವರ್ಷದ ತಾಯಿ, 40 ವರ್ಷದ ಮಗ ಹಾಗೂ 35 ವರ್ಷದ ಮಗಳು ಸಾವು ಕಂಡಿದ್ದು ತಕ್ಷಣವೇ ಮೃತದೇಹವನ್ನ ಕುಟುಂಬಸ್ಥರಿಗೆ ನೀಡುವಂತೆ ಆಗ್ರಹಿಸಿದ್ದಾರೆ. ಕೊರೋನಾ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ಮೂರು ಮಂದಿ ಚಿಕಿತ್ಸೆ ಫಲಕಾರಿಯಾಗದೇ ಒಂದೇ ದಿನ ಸಾವು ಕಂಡಿದ್ದಾರೆ. ಮೃತರು ಶಿವಮೊಗ್ಗದ ಕುಂಬಾರಬೀದಿ ನಿವಾಸಿಗಳಾಗಿದ್ದು , ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.


ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಸಾವಿನ ಸಂಖ್ಯೆ ಹೆಚ್ಚಿದೆ. ತಾಲೂಕು ಆಸ್ಪತ್ರೆಗಳಲ್ಲಿ ಸೌಲಭ್ಯ ಇಲ್ಲದ ಕಾರಣ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಆದರೆ ಅಲ್ಲಿ ಸಾವಿನ ಸಂಖ್ಯೆ ಹೆಚ್ಚಾಗತೊಡಗಿದೆ.
ಶಾಸಕರು, ಸಂಸದರು ಎಲ್ಲಾ ವ್ಯವಸ್ಥೆ ಇದೆ ಎಂದು ಹೇಳುತ್ತಿರುವುದು ಸುಳ್ಳೋ ನಿಜವೋ ಜನತೆಗೆ ತಿಳಿಯದಾಗಿದೆ.


ಎಲ್ಲಾ ಸುದ್ದಿಗಳಿಗೆ NAMMUR EXPRESS ಫೇಸ್ಬುಕ್ ಹಾಗೂ ಯೂಟ್ಯೂಬ್ ವೀಕ್ಷಿಸಿ…!.. ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು, ಊರು, ತಾಲ್ಲೂಕು ವಾಟ್ಸಾಪ್ ಮಾಡಿ…!. ತಾಲೂಕಿನ ಎಲ್ಲರಿಗೂ ಶೇರ್ ಮಾಡಿ..!.

Categories
ರಾಜಕೀಯ

ದೇಶಕ್ಕೆ ಮಾದರಿಯಾದ ದೆಹಲಿ ಸಿಎಂ!

  • ದೆಹಲಿಯಲ್ಲಿ 2 ತಿಂಗಳು ಉಚಿತ ರೇಷನ್
  • ಟ್ಯಾಕ್ಸಿ-ಆಟೋ ಚಾಲಕರಿಗೆ ಸಹಾಯ ಧನ
  • ಆಂಧ್ರದಲ್ಲೂ ಜಗನ್ ಜನ ಸೇವೆ
  • ಕರ್ನಾಟಕದಲ್ಲಿ ಜನತೆಗೆ ಏನೂ ಇಲ್ಲ!

ನವ ದೆಹಲಿ: ಕರೋನಾ ತುರ್ತು ಸಂದರ್ಭದಲ್ಲಿ ದೆಹಲಿ ಸಿಎಂ ಕೇಜ್ರಿವಾಲ್ ಮಾದರಿಯಾಗಿದ್ದಾರೆ. ಮುಂದಿನ ಎರಡು ತಿಂಗಳು ಉಚಿತ ಪಡಿತರ, ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ಐದು ಸಾವಿರ ರೂ. ಸಹಾಯ ಧನ ನೀಡಲಾಗುವುದು ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಣೆ ಮಾಡಿದ್ದಾರೆ.
ಕೊರೊನಾ ನಿಯಂತ್ರಣಕ್ಕಾಗಿ ದೆಹಲಿಯಲ್ಲಿ ಲಾಕ್‍ಡೌನ್ ಜಾರಿಗೆ ತರಲಾಗಿದ್ದು, ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಈ ಹಿನ್ನೆಲೆ ಸರ್ಕಾರ ಜನರ ನೆರವಿಗೆ ಧಾವಿಸಿದೆ. ಆದರೆ ಕರ್ನಾಟಕದಲ್ಲಿ ಇನ್ನು ಯಾವುದೇ ಯೋಜನೆ ಘೋಷಣೆಯಾಗಿಲ್ಲ.
ದೆಹಲಿಯ 72 ಲಕ್ಷ ಪಡಿತರ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಉಚಿತವಾಗಿ ರೇಷನ್ ಸಿಗಲಿದೆ.


ದೆಹಲಿಯಲ್ಲಿರುವ ಎಲ್ಲ ಆಟೋ, ಟ್ಯಾಕ್ಸಿ ಚಾಲಕರಿಗೆ ಐದು ಸಾವಿರ ರೂಪಾಯಿಯ ಆರ್ಥಿಕ ಸಹಾಯ ದೊರೆಯಲಿದೆ. ಸುಮಾರು ಒಂದೂವರೆ ಲಕ್ಷ ಜನರಿಗೆ ಆರ್ಥಿಕ ಸಹಾಯ ಸಿಗಲಿದೆ. ಕಳೆದ ವಾರವೂ ಕೇಜ್ರಿವಾಲ್ ಸರ್ಕಾರ ಕಾರ್ಮಿಕ ವರ್ಗಕ್ಕೂ ನೆರವು ನೀಡಿದ್ದರು.ದೆಹಲಿ ಕೊರೊನಾ ಸಂಕಷ್ಟದಲ್ಲಿದ್ದು, ಆರ್ಥಿಕವಾಗಿ ಸದೃಢರಾಗಿರುವ ಸಶಕ್ತರು ಸಹಾಯಕ್ಕೆ ಮುಂದಾಗಬೇಕು. ನಿಮ್ಮ ಸಾಮರ್ಥ್ಯಕ್ಕನುಗುಣವಾಗಿ ಅವಶ್ಯಕತೆ ಇರುವವರಿಗೆ ಊಟ ತಲುಪಿಸಿ ಎಂದು ಕೇಜ್ರಿವಾಲ್ ಮನವಿ ಮಾಡಿಕೊಂಡಿದ್ದಾರೆ.
ಅಂದ್ರ ಸಿಎಂ ಹೊಸ ಭರವಸೆ!: ಅಂಧ್ರ ಸಿಎಂ ಜಗನ್ ಕೂಡ ಸೌಲಭ್ಯ ಮನೆ ಬಾಗಿಲಿಗೆ ತಲುಪಿಸುತ್ತಿದ್ದಾರೆ. ಈ ನಡೆ ಎಲ್ಲಾ ಸಿಎಂಗಳಿಗೂ ಮಾದರಿಯಾಗಿದೆ.
ಎಲ್ಲಾ ಸುದ್ದಿಗಳಿಗೆ NAMMUR EXPRESS ಫೇಸ್ಬುಕ್ ಹಾಗೂ ಯೂಟ್ಯೂಬ್ ವೀಕ್ಷಿಸಿ…!.. ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು, ಊರು, ತಾಲ್ಲೂಕು ವಾಟ್ಸಾಪ್ ಮಾಡಿ…!. ತಾಲೂಕಿನ ಎಲ್ಲರಿಗೂ ಶೇರ್ ಮಾಡಿ..!.

Categories
ಬೆಂಗಳೂರು

ದೇವರೇ..ಪ್ರಾಣಿಗಳಿಗೂ ಕೊರೋನಾ!?

  • ಹೈದ್ರಾಬಾದ್ ಮೃಗಾಲಯದ ಸಿಂಹಗಳಿಗೆ ಕೋವಿಡ್ ಸೋಂಕು!
  • ಅಪಾಯ.. ಅಪಾಯ.. ಪ್ಲೀಸ್ ಹುಷಾರ್..!

ಬೆಂಗಳೂರು: ಕರೋನಾ ಮಹಾಮಾರಿ ಇದೀಗ ದೇಶದಲ್ಲಿ ಜನರನ್ನು ಬೀದಿ ಹೆಣ ಮಾಡುತ್ತಿದೆ. ಈ ನಡುವೆ ಆತಂಕಕಾರಿ ವಿಷಯವೊಂದು ಹೊರ ಬಿದ್ದಿದೆ. ಪ್ರಾಣಿಗಳಿಗೂ ಕರೋನಾ ರೀತಿಯ ಸೋಂಕು ಹರಡುತ್ತಿರುವುದು ಬೆಳಕಿಗೆ ಬಂದಿದೆ. ಕರೋನಾ ಸೋಂಕಿತರು ಪ್ರಾಣಿಗಳೊಂದಿಗೆ ಸಂಪರ್ಕ ಹೊಂದಿದರೆ ಕರೋನಾ ಬರುವ ಸಾಧ್ಯತೆಗಳಿವೆ. ಕರೋನಾ ಸೋಂಕು ತಗುಲಿದವರು ಪ್ರತ್ಯೇಕವಾಗಿ ಐಸೋಲೇಷನ್ ಆಗುವುದರ ಜೊತೆಗೆ ಪ್ರಾಣಿಗಳಿಗೂ ಸೋಂಕು ತಗಲದಂತೆ ಎಚ್ಚರಿಕೆ ವಹಿಸಬೇಕಿದೆ. ಹೈದರಾಬಾದ್‌ನಲ್ಲಿರುವ ಮೃಗಾಲಯದಲ್ಲಿ ಕರೋನಾ ಸೋಂಕು ಪ್ರಾಣಿಗಳಿಗೂ ಹಬ್ಬಿದೆ. ಮೃಗಾಲಯದಲ್ಲಿರುವ ಎಂಟು ಸಿಂಹಗಳಲ್ಲಿ ಕರೋನಾ ಸೋಂಕು ಲಕ್ಷಣ ಕಂಡುಬಂದಿದೆ. ಕರೋನಾ ಪ್ರಾಣಿಗಳಿಗೂ ಬಿಡದೇ ಕಾಡುವ ಭೀತಿಯಿದ್ದು, ಆದಷ್ಟು ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಬೇಕಿದೆ. ಒಂದು ವೇಳೆ ಪ್ರಾಣಿಗಳಿಗೆ ಕರೋನಾ ಸೋಂಕು ಹಬ್ಬಿದರೆ ನಿಜಕ್ಕೂ ಅದು ದುರಂತಕ್ಕೆ ಮುನ್ನಡಿ ಬರೆಯಲಿದೆ.
ಗ್ರಾಮೀಣ ಪ್ರದೇಶದಲ್ಲಿ ಸಾಕು ಪ್ರಾಣಿಗಳಾದ ದನ, ಕುರಿ, ಕೋಳಿ, ಬೆಕ್ಕು, ನಾಯಿಗಳನ್ನು ಕೊರೋನಾ ಸೋಂಕಿನಿಂದ ಕಾಪಾಡಿಕೊಳ್ಳುವುದು ನಿಜಕ್ಕೂ ಸವಾಲಾಗಲಿದೆ.
ಒಂದು ವೇಳೆ ಪ್ರಾಣಿಗಳಿಗೆ ಸೋಂಕು ತಗುಲಿದ್ದೇ ಆದರೆ ಅದನ್ನು ನಿಯಂತ್ರಿಸಲು ಯಾವ ಸರ್ಕಾರದಿಂದಲೂ ಸಾಧ್ಯವಿಲ್ಲ. ತಕ್ಷಣ ರೋಗ ತಡೆಯುವತ್ತ ಪ್ರತಿಯೊಬ್ಬರೂ ಹೆಜ್ಜೆ ಹಾಕಬೇಕಿದೆ.
ಎಲ್ಲಾ ಸುದ್ದಿಗಳಿಗೆ Nammur Express ಫೇಸ್ಬುಕ್ ಹಾಗೂ ಯೂಟ್ಯೂಬ್ ವೀಕ್ಷಿಸಿ…!..
ಸುದ್ದಿ ಪಡೆಯಲು 9481949101 ನಿಮ್ಮ ಹೆಸರು, ಊರು, ತಾಲ್ಲೂಕು ವಾಟ್ಸಾಪ್ ಮಾಡಿ.!.

Categories
ರಾಜಕೀಯ

ದೇಶಾದ್ಯಂತ ಬಿಜೆಪಿ ಧರಣಿಗೆ ಪ್ಲಾಪ್ ಪ್ಲಾನ್!

  • ಕರೋನಾ ಸಂಕಷ್ಟದಲ್ಲಿ ರಾಜಕೀಯ ಧರಣಿ ಏಕೆ..?
  • ಜನರ ಜೀವನಮರಣ ಹೋರಾಟಕ್ಕೆ ನೇರವಾಗಿ..!
  • ರಾಜಕೀಯ ಬಿಡಿ.. ಜನರ ಕೆಲಸ ಮಾಡಿ..!

ನವ ದೆಹಲಿ: ದೇಶದಲ್ಲಿ ಚುನಾವಣೆ ನಡೆಸಿದ್ದೆ ತಪ್ಪು. ಮತದಾನದಿಂದ ದೇಶದಲ್ಲಿ ಕರೋನಾ ಹೆಚ್ಚಿರುವ ನಡುವೆ ಇದೀಗ ಚುನಾವಣಾ ಫಲಿತಾಂಶದ ದಿನ ಪಶ್ಚಿಮ ಬಂಗಾಳದಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿ ದೇಶದಾದ್ಯಂತ ಮೇ 5ರಂದು ಧರಣಿ ಮಾಡುವುದಾಗಿ ಬಿಜೆಪಿ ತಿಳಿಸಿದೆ. ದೇಶ ಅಳುತ್ತಿರುವ ಪಕ್ಷದ ಈ ನಿರ್ಧಾರ ಇದೀಗ ಜನರ ಪಿತ್ತ ನೆತ್ತಿಗೆರಿಸಿದೆ. ತಕ್ಷಣ ಧರಣಿ ಕೈಬಿಡುವಂತೆ ಒತ್ತಾಯ ಮಾಡಲಾಗಿದೆ. ದೇಶದಲ್ಲಿ ಮತ್ತು ಕರ್ನಾಟಕದಲ್ಲಿ ಬಿಜೆಪಿ ಆಡಳಿತದಲ್ಲಿದೆ. ಇಲ್ಲಿ ಜನ ಕರೋನಾದಿಂದ ಸಾಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜನರ ನೆರವಿಗೆ ಬಿಜೆಪಿ ಬರಬೇಕಿದೆ. ಆದರೆ ದೇಶದಲ್ಲಿ ಪಕ್ಷದ ಎಲ್ಲಾ ಸಾಂಸ್ಥಿಕ ಮಂಡಳಿಗಳಲ್ಲಿ ಕೋವಿಡ್ ನಿಯವನ್ನು ಪಾಲಿಸಿ ಈ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಲಾಗಿದೆ. ಆದರೆ ಕರೋನಾ ಪ್ರತಿ ಊರಲ್ಲೂ ನೂರಾರು ಪ್ರಾಣ ಬಲಿ ಪಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಧರಣಿ, ಪ್ರತಿಭಟನೆಗಳಿಂದ ಮತ್ತಷ್ಟು ಜನತೆಗೆ ಕರೋನಾ ಹರಡಿ ಮತ್ತಷ್ಟು ಜನ ಬಲಿಯಾದರೂ ಅಚ್ಚರಿ ಇಲ್ಲ.
ಇಂತಹ ತುರ್ತು ಸಂದರ್ಭದಲ್ಲಿ ರಾಜಕೀಯ ಬಿಡಿ ಪ್ರತಿ ಮನೆಯೂ ಆತಂಕದಲ್ಲಿದೆ. ಜನರ ಕಷ್ಟಕ್ಕೆ ನೇರವಾಗಿ. ರಾಜಕೀಯ ಮಾಡಲು ಇದು ಸಂದರ್ಭವಲ್ಲ ಎಂಬ ಅಭಿಪ್ರಾಯ ಕೇಳಿ ಬಂದಿದೆ.


ಏನಾಗಿತ್ತು..?: ಭಾನುವಾರ ಹೊರಬಿದ್ದ ಚುನಾವಣಾ ಫಲಿತಾಂಶದಲ್ಲಿ ತೃಣ ಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷ ಗೆಲುವನ್ನು ಸಾಧಿಸಿದೆ ಎಂದ ತಕ್ಷಣ ಟಿಎಂಸಿ ಕಾರ್ಯಕರ್ತರು ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಿಂಸಾಚಾರ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.


ಇನ್ನು ಪಶ್ಚಿಮ ಬಂಗಾಳದಲ್ಲಿ ನಡೆದಿರುವ ಹಿಂಸಾಚಾರ ಕುರಿತಂತೆ ಕೇಂದ್ರ ಗೃಹ ಸಚಿವಾಲಯ ಪಶ್ಚಿಮ ಬಂಗಾಳ ಸರ್ಕಾರದಿಂದ ವರದಿ ಕೇಳಿದೆ. ಎಲ್ಲಾ ಸುದ್ದಿಗಳಿಗೆ Nammur Express ಫೇಸ್ಬುಕ್ ಹಾಗೂ ಯೂಟ್ಯೂಬ್ ವೀಕ್ಷಿಸಿ…!..ಸುದ್ದಿ ಪಡೆಯಲು 9481949101 ಗೆ ನಿಮ್ಮ ಹೆಸರು, ಊರು, ತಾಲ್ಲೂಕು ವಾಟ್ಸಾಪ್ ಮಾಡಿ…!..ಎಲ್ಲಾ ಗ್ರೂಪ್ ಹಾಗೂ ಸ್ನೇಹಿತರಿಗೆ ಶೇರ್ ಮಾಡಿರಿ..!.