Categories
ಮಲ್ನಾಡ್

ಯುವ ಉದ್ಯಮಿಗಳಿಂದ ಸೇವಾ ಸಿಂಧು ಸೇವೆ ಉಚಿತ!

  • ಕರೋನಾ ಸೇವೆಗೆ ಸತೀಶ್ ಶೆಟ್ಟಿ, ಶ್ರೀಪತಿ ಹೊಸ ಪ್ಲಾನ್
  • ನೂರಾರು ಜನರಿಗೆ ಆನ್ಲೈನ್ ಸೇವೆ: ಜನರ ಮೆಚ್ಚುಗೆ

NAMMUR EXPRESS
ತೀರ್ಥಹಳ್ಳಿ: ಸರಕಾರ ಕರೋನಾ ತುರ್ತು ವೇಳೆ ಘೋಷಣೆ ಮಾಡಿರುವ ಹಲವು ಅನುದಾನ, ಸಹಾಯ ಧನ ಪಡೆಯಲು ಗ್ರಾಮೀಣ ಭಾಗದ ಜನ ಮತ್ತು ಅವಿದ್ಯಾವಂತರಿಗೆ ತೊಂದರೆಯಾಗುತ್ತಿದ್ದನ್ನು ಮನಗಂಡ ತೀರ್ಥಹಳ್ಳಿಯ ಯುವ ಉದ್ಯಮಿಗಳಾದ ಸತೀಶ್ ಶೆಟ್ಟಿ(sms), ಶ್ರೀಪತಿ ಮತ್ತು ತಂಡ ಎಲ್ಲಾ ಜನತೆಗೆ ಉಚಿತ ಆನ್ಲೈನ್ ಸೇವೆ ನೀಡುತ್ತಿದೆ.
ತೀರ್ಥಹಳ್ಳಿಯ ಮುಖ್ಯ ಬಸ್ ನಿಲ್ದಾಣ ಸಮೀಪದ ಕಾರ್ ನಿಲ್ದಾಣದಲ್ಲಿ ತೆರೆಯಲಾಗಿರುವ ಆನ್ಲೈನ್ ಸೆಂಟರ್ ಅಲ್ಲಿ ಸರಕಾರದ ಸೇವಾ ಸಿಂಧು ಪೋರ್ಟಲ್ ಅಡಿ ಬರುವ ಎಲ್ಲಾ ಸೇವೆಗಳನ್ನು ಉಚಿತವಾಗಿ ನೋಂದಣಿ ಮಾಡಿಕೊಡಲಾಗುತ್ತಿದೆ.


ಆಟೋ, ಟ್ಯಾಕ್ಸಿ ಚಾಲಕರ ಸಹಾಯ ಧನ, ತರಕಾರಿ ಮಾರಾಟಗಾರರು, ಅಂಗನವಾಡಿ, ಆಶಾ ಕಾರ್ಯಕರ್ತರು ಸೇರಿ ಸರಕಾರ ಘೋಷಣೆ ಮಾಡಿರುವ ಎಲ್ಲಾ ಜನತೆಗೆ ಆನ್ಲೈನ್ ಮೂಲಕ ಅರ್ಜಿ ಹಾಕುವ ಕೆಲಸವನ್ನು ಈ ಯುವಕರು ಉಚಿತವಾಗಿ ಮಾಡಿಕೊಡುತ್ತಿದ್ದಾರೆ. ಈ ಮೂಲಕ ತಮ್ಮ ಜ್ಞಾನವನ್ನು ಕರೋನಾ ಸೇವೆಗೆ ಬಳಸಿದ್ದಾರೆ.
ಪ್ರತಿ ದಿನ ಹತ್ತಾರು ಮಂದಿಯ ಅರ್ಜಿ ತುಂಬಿಕೊಡುತ್ತಿದ್ದಾರೆ. ಲಾಕ್ ಡೌನ್ ಮುಗಿಯುವವರೆಗೆ ಸೇವೆ ನೀಡುತ್ತೇವೆ. ನಮಗೆ ಈ ಸೇವೆ ಮಾಡಲು ಅವಕಾಶ ಸಿಕ್ಕಿದೆ. ಮುಂದೆಯೂ ಜನರ ಕಷ್ಟಕ್ಕೆ ಜೊತೆಯಾಗುತ್ತೇವೆ ಎನ್ನುತ್ತಾರೆ ಸತೀಶ್ ಮತ್ತು ಶ್ರೀಪತಿ.
ಪ್ರಮುಖ ಯುವ ನಾಯಕರಾದ ಜೈಕರ್ ಶೆಟ್ಟಿ, ನಾಗಣ್ಣ, ಅಸಿಫ್ ಇವರಿಗೆ ಸಾತ್ ನೀಡಿದ್ದಾರೆ. ಆದರ್ಶ ಹುಂಚದ ಕಟ್ಟೆ ಕಂಪ್ಯೂಟರ್ ಕೊಡುಗೆ ನೀಡಿದ್ದಾರೆ.


ರಾಜ್ಯದ ಎಲ್ಲಾ ಸುದ್ದಿ, ಜಾಹೀರಾತಿಗಾಗಿ “NAMMUR EXPRESS” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ, ಸಬ್ಸ್ಕ್ರೈಬ್ ಆಗಿ. ವಾಟ್ಸಾಪ್ನಲ್ಲಿ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು, ಊರು, ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು..!.

Categories
ಬೆಂಗಳೂರು

ಕೆನರಾ-ಸಿಂಡಿಕೇಟ್ ಬ್ಯಾಂಕ್ ಹಲವು ಬದಲಾವಣೆ!

  • ಪಾನ್-ಆಧಾರ್ ಲಿಂಕ್: ಎಸ್ಬಿಐ ಹೊಸ ನಿಯಮ
  • ಟ್ಯಾಕ್ಸ್ ಪಾವತಿಗೆ ಹೊಸ ವೆಬ್: ಸಂಪೂರ್ಣ ಮಾಹಿತಿ!

NAMMUR EXPRESS BUSINESS
ಬೆಂಗಳೂರು: ಕೆನರಾ ಬ್ಯಾಂಕ್-ಸಿಂಡಿಕೇಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ಮಹತ್ವ ಸೂಚನೆ ನೀಡಿದ್ದು, ಜುಲೈ 1ರಿಂದ ಸಂಸ್ಥೆಯ ಐಎಫ್ಎಸ್‌ಸಿ ಕೋಡ್ ಬದಲಾಗಲಿದೆ. ಹೊಸ ಕೋಡ್ ಬಗ್ಗೆ ಅಧಿಕೃತ ವೆಬ್ ತಾಣದಲ್ಲಿ ಮಾಹಿತಿ ಪಡೆದುಕೊಳ್ಳಿ ಎಂದು ಹೇಳಿದೆ.
ಕೆನರಾ ಬ್ಯಾಂಕ್ ಜೊತೆ ವಿಲೀನಗೊಂಡಿರುವ ಸಿಂಡಿಕೇಟ್ ಬ್ಯಾಂಕ್ ಗ್ರಾಹಕರು ಮುಖ್ಯವಾಗಿ ಇಂಡಿಯ ಫೈನಾನ್ಶಿಯಲ್ ಸಿಸ್ಟಮ್ ಕೋಡ್(IFSC), swift ಕೋಡ್, ಚೆಕ್ ಬುಕ್ ಬಗ್ಗೆ ಗಮನ ಹರಿಸಿ, ಬದಲಾವಣೆ ಬಗ್ಗೆ ತಿಳಿದುಕೊಂಡು ವ್ಯವಹರಿಸಲು ಸೂಚಿಸಲಾಗಿದೆ. ಇಲ್ಲದಿದ್ದರೆ, ಹಳೆ ಚೆಕ್ ಬುಕ್, ಕೋಡ್ ಜುಲೈ 1ರಿಂದ ಕಾರ್ಯನಿರ್ವಹಿಸುವುದಿಲ್ಲ.


ಎಸ್ಬಿಐ ಕೂಡ ಹೊಸ ನಿಯಮ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಗ್ರಾಹಕರಿಗೆ ಈ ತಿಂಗಳ ಅಂತ್ಯದ ವೇಳೆಗೆ ಅಂದರೆ ಜೂನ್ 30ರೊಳಗೆ ಆಧರ್ ಕಾರ್ಡ್‌ಗಳೊಂದಿಗೆ ತಮ್ಮ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್) ಲಿಂಕ್ ನವೀಕರಿಸಲು ತಿಳಿಸಿದೆ.
ಪ್ಯಾನ್ ನಿಷ್ಕ್ರಿಯ ಅಥವಾ ನಿಷ್ಕ್ರಿಯಗೊಳಿಸಲಾಗುವುದು ಮತ್ತು ನಿರ್ದಿಷ್ಟ ವಹಿವಾಟುಗಳಿಗೆ ಬಳಸಲಾಗುವುದಿಲ್ಲ ಎಂದು ಬ್ಯಾಂಕ್ ಹೇಳಿದೆ. ಪ್ಯಾನ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವ ಕೊನೆಯ ದಿನಾಂಕ 2021ರ ಮಾರ್ಚ್ 31 ಆಗಿತ್ತು. ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಆದಾಯ ತೆರಿಗೆ ಇಲಾಖೆ 2021ರ ಜೂನ್ 30ರವರೆಗೆ ವಿಸ್ತರಿಸಿದೆ.


ಆದಾಯ ತೆರಿಗೆಗೆ ಹೊಸ ವೆಬ್!: ಆದಾಯ ತೆರಿಗೆ ಇಲಾಖೆಯ ಹೊಸ ಇ-ಫೈಲಿಂಗ್ 2.0, ಪೋರ್ಟಲ್ ಸೋಮವಾರದಿಂದ ಆರಂಭವಾಗಿದೆ. ಇದು ಆನ್‌ಲೈನ್ ರಿಟರ್ನ್ಸ್ ಮತ್ತು ತೆರಿಗೆ ಪಾವತಿಯನ್ನು ಸುಲಭಗೊಳಿಸುತ್ತದೆ. ಹಿಂದೆ ಇದ್ದ ‘http://incometaxindiaefiling.gov.in’ ಬದಲು http://www.incometax.gov.in ಸೈಟ್ ಆರಂಭವಾಗಿದ್ದು, ವಿವಿಧ ಭಾಷೆಗಳಲ್ಲಿ ಲಭ್ಯವಿದೆ.
ತೆರಿಗೆದಾರರು ಡಿಎಸ್ ಸಿ (ಡಿಜಿಟಲ್ ಸಹಿ ಪ್ರಮಾಣ ಪತ್ರ) ಹೊಸದಾದ ಮೊಬೈಲ್ ನಂಬರ್ ಮತ್ತು ಇ-ಮೇಲ್ ಐಡಿಯನ್ನು ಪ್ರಾಥಮಿಕ ಸಂಪರ್ಕದ ಅಡಿಯಲ್ಲಿ ಮರು ನೋಂದಣಿ ಮಾಡಿಕೊಳ್ಳುವಂತೆ ಆದಾಯ ತೆರಿಗೆ ಇಲಾಖೆ ಹೇಳಿದೆ. ವೈಯಕ್ತಿಕ, ಕಂಪನಿ, ಕಂಪನಿಯೇತರ ಹೀಗೆ ವಿಭಿನ್ನ ರೀತಿಯ ತೆರಿಗೆ ವೃತ್ತಿದಾರರಿಗೆ ಪ್ರತ್ಯೇಕವಾದ ಟ್ಯಾಬ್ ಗಳನ್ನು ಈ ಫೋರ್ಟಲ್ ಹೊಂದಿದೆ. ಆದಾಯ ತೆರಿಗೆ ರಿಟರ್ನ್ಸ್ ನೋಂದಣಿ, ಮರುಪಾವತಿ ಸ್ಥಿತಿ ಮತ್ತು ತೆರಿಗೆ ಸ್ಲ್ಯಾಬ್‌ಗಳ ಸೂಚನೆಗಳನ್ನು ಪರಿಶೀಲಿಸಲು ತೆರಿಗೆದಾರರಿಗೆ ಇದು ಡ್ರಾಪ್-ಡೌನ್ ಮೆನು ಹೊಂದಿದೆ.


ಐ-ಟಿ ಇ-ಫೈಲಿಂಗ್ ಪೋರ್ಟಲ್‌ನ 8.46 ಕೋಟಿಗೂ ಹೆಚ್ಚು ವೈಯಕ್ತಿಕ ನೋಂದಾಯಿತ ಬಳಕೆದಾರರಿದ್ದಾರೆ. 2020-21ರ ಆರ್ಥಿಕ ವರ್ಷದಲ್ಲಿ ಸುಮಾರು 3.13 ಕೋಟಿ ಐಟಿ ರಿಟರ್ನ್ಸ್ ಗಳನ್ನು ಇ- ಪರಿಶೀಲನೆ ಮಾಡಲಾಗಿದೆ. ಹೊಸ ಪೋರ್ಟಲ್‌ನಲ್ಲಿ ಲಭ್ಯವಿರುವ ವಿವಿಧ ಸೇವೆಗಳನ್ನು ಅರ್ಥಮಾಡಿಕೊಳ್ಳಲು ವಿವರವಾದ ಬಳಕೆದಾರರ ಕೈಪಿಡಿಗಳು, FAQ ಗಳು ಮತ್ತು ವೀಡಿಯೊಗಳನ್ನು ಸಹ ಹೊಂದಿದೆ. ಅಲ್ಲದೇ, ಮಾರ್ಗದರ್ಶಿ ಸಹಾಯಕ್ಕಾಗಿ ಚಾಟ್‌ಬಾಟ್ ಮತ್ತು ಸಹಾಯವಾಣಿ ಒದಗಿಸಲಾಗಿದೆ.


ನೋಂದಾಯಿತ ಬಳಕೆದಾರರು ಒಮ್ಮೆ ಪೋರ್ಟಲ್‌ಗೆ ಲಾಗ್ ಇನ್ ಮಾಡಿದ ನಂತರ, ಡ್ಯಾಶ್‌ಬೋರ್ಡ್ ಇ-ಪ್ರೊಸೀಡಿಂಗ್‌ಗಳ ವಿವರಗಳು, ಏನಾದರೂ ಬೇಡಿಕೆಗಳಿದ್ದರೆ ಅದಕ್ಕೆ ಪ್ರತಿಕ್ರಿಯೆಗಳನ್ನು ತೋರಿಸುತ್ತದೆ. ‘ಪೆಂಡಿಂಗ್ ಆಕ್ಸನ್’ ಟ್ಯಾಬ್ ಅಡಿಯಲ್ಲಿ ವಾರ್ಷಿಕ ಮಾಹಿತಿ ಹೇಳುತ್ತದೆ. ಕುಂದುಕೊರತೆ ಮೆನು ತೆರಿಗೆದಾರರಿಗೆ ಯಾವುದೇ ಕುಂದುಕೊರತೆಗಳನ್ನು ಸಲ್ಲಿಸಲು ಮತ್ತು ಹಿಂದೆ ಸಲ್ಲಿಸಿದವುಗಳನ್ನು ವೀಕ್ಷಿಸಲು ಅನುಮತಿಸುತ್ತದೆ.
‘ಮೈ ಪ್ರೊಫೈಲ್ ಮೆನು’ವಿನಲ್ಲಿ ತೆರಿಗೆದಾರರು, ತಮ್ಮ ವೈಯಕ್ತಿಕ ಮಾಹಿತಿಯನ್ನು ನೋಡಬಹುದು, ತಿದ್ದುಪಡಿ ಮಾಡಬಹುದಾಗಿದೆ. ಅಲ್ಲದೆ, ತೆರಿಗೆ ಪಾವತಿದಾರರು ತೆರಿಗೆ-ಸಂಬಂಧಿತ ಸೇವೆಗಳನ್ನು ಪಡೆಯಲು ಸಹಾಯ ಮಾಡಲು ಮೊಬೈಲ್ ಅಪ್ಲಿಕೇಶನ್ ಲಭ್ಯವಿದೆ. ತೆರಿಗೆದಾರರು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಮತ್ತು ಮರುಪಾವತಿ ಕುರಿತ ದೂರುಗಳನ್ನು ಸಲ್ಲಿಸಲು ಇ-ಫಿಲ್ಲಿಂಗ್ ಪೋರ್ಟಲ್ ಬಳಸಿಕೊಳ್ಳಬಹುದಾಗಿದೆ.
ರಾಜ್ಯದ ಎಲ್ಲಾ ಸುದ್ದಿ, ಜಾಹೀರಾತಿಗಾಗಿ “NAMMUR EXPRESS” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ, ಸಬ್ಸ್ಕ್ರೈಬ್ ಆಗಿ. ವಾಟ್ಸಾಪ್ನಲ್ಲಿ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು, ಊರು, ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು..!.

Categories
ಮಲ್ನಾಡ್

ತೀರ್ಥಹಳ್ಳಿಯಲ್ಲಿ ಹೆಚ್ಚಿದ ಅಪಘಾತ!

  • ಕರೋನಾ ನಡುವೆ ವೇಗ, ಮಳೆ ಕಾರಣ ಆಕ್ಸಿಡೆಂಟ್
  • ಆಗುಂಬೆ ಘಾಟಿಯಲ್ಲಿ ಪಲ್ಟಿ ಹೊಡೆದ ಲಾರಿ
  • 15 ಲಕ್ಷ ಮೌಲ್ಯದ ಬ್ಯಾಟರಿ ಹಾಳು
  • ಮಂಡಗದ್ದೆಯಲ್ಲಿ ವೇಗಕ್ಕೆ ಬೈಕ್ ಬಲಿ!

NAMMUR EXPRESS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಕರೋನಾ ನಡುವೆಯೂ ಅಪಘಾತ ಸಂಭವಿಸುತ್ತಿವೆ. ಇದಕ್ಕೆ ಅತೀ ವೇಗ ಕಾರಣ ಎನ್ನಲಾಗಿದೆ.
ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟಿ ತಿರುವಿನಲ್ಲಿ ಬ್ಯಾಟರಿ ತುಂಬಿದ್ದ ಲಾರಿ ಪಲ್ಟಿ ಹೊಡೆದ ಕಾರಣ ಚಾಲಕ,ಕ್ಲಿನರ್ ಆಸ್ಪತ್ರೆಗೆ ದಾಖಲು ಆಗಿದ್ದಾರೆ. ಲಾರಿ ಪುಡಿ ಪುಡಿಯಾಗಿದ್ದು, ಅದರಲ್ಲಿದ್ದ 13 ಲಕ್ಷ ಮೌಲ್ಯದ ಬ್ಯಾಟರಿ ಹಾನಿಯಾಗಿದೆ. ಮಂಗಳೂರಿನಿಂದ ಬ್ಯಾಟರಿಗಳನ್ನು ಶಿವಮೊಗ್ಗ ಮಾರ್ಗವಾಗಿ ಚಲಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣಕ್ಕೆ ಸಿಗದೆ 7 ಮತ್ತು 8ನೇ ತಿರುವಲ್ಲಿ ಪಲ್ಟಿ ಹೊಡೆದಿದೆ. ಲಾರಿ ಸಂಪೂರ್ಣವಾಗಿ ಜಖಂ ಆಗಿದ್ದು ಎಲ್ಲಾ ಕಡೆ ಬ್ಯಾಟರಿಗಳು ಬಿದ್ದಿವೆ. ಚಾಲಕ ಹಾಗೂ ಕ್ಲಿನರ್ ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಆಗುಂಬೆ ಪೊಲೀಸ್ ಸ್ಥಳಕ್ಕೆ ಬಂದು ಮಹಜರು ಮಾಡಿ ಚಾಲಕರನ್ನು ತೀರ್ಥಹಳ್ಳಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಗಿದೆ. ಆಂಧ್ರ ಪ್ರದೇಶ ಮೂಲದ ಲಾರಿ ಎನ್ನಲಾಗಿದೆ.
ಮಂಡಗದ್ದೆ ಬಳಿ ಬೈಕ್ ಕಾರು ಪುಡಿ!: ರಸ್ತೆ ಬದಿ ನಿಂತಿದ್ದ ಬೈಕ್ಗೆ ಕಾರೊಂದು ಡಿಕ್ಕಿ ಹೊಡೆದ ಘಟನೆ ತೀರ್ಥಹಳ್ಳಿ ತಾಲೂಕು ಮಂಡಗದ್ದೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಸಂಭವಿಸಿತ್ತು.


ರಸ್ತೆ ಬದಿಯ ತಡೆಗೋಡೆಗೆ ನುಗ್ಗಿದ ಕಾರು ಸಂಪೂರ್ಣ ಜಖಂಗೊಂಡಿದೆ. ಘಟನೆ ವೇಳೆ ಕಾರು ಚಾಲಕ ಸಂತೋಷ್, ಅವರ ತಾಯಿ ಯಶೋದಾ, ತಂದೆ ಶಿವಣ್ಣ ಕಾರಿನಲ್ಲಿದ್ದು, ಶಿವಣ್ಣ ಎಂಬುವರು ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಾಳೂರು ಠಾಣೆ ಎಸೈ ಮಂಜುನಾಥ ಅವರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ರಾಜ್ಯದ ಎಲ್ಲಾ ಸುದ್ದಿ, ಜಾಹೀರಾತಿಗಾಗಿ “NAMMUR EXPRESS” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ, ಸಬ್ಸ್ಕ್ರೈಬ್ ಆಗಿ. ವಾಟ್ಸಾಪ್ನಲ್ಲಿ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು, ಊರು, ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು..!.

Categories
ಬೆಂಗಳೂರು

ಬಿಜೆಪಿ ಶಾಸಕ, ಮಾಜಿ ಸಚಿವ ಉದಾಸಿ ಇನ್ನಿಲ್ಲ!

  • ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವು
  • ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸಚಿವ

NAMMUR EXPRESS
ಬೆಂಗಳೂರು:  ಹಾವೇರಿ ಜಿಲ್ಲೆಯ ಹಾನಗಲ್ ಕ್ಷೇತ್ರದ ಬಿಜೆಪಿ ಶಾಸಕ, ಮಾಜಿ ಸಚಿವ ಸಿಎಂ ಉದಾಸಿ(81) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ರಕ್ತ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಉದಾಸಿ  ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಹಾನಗಲ್‍ನಲ್ಲಿ ಬುಧವಾರ ಉದಾಸಿ ಅವರ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.


ಈ ಹಿಂದೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಉದಾಸಿ ಅವರ ಆರೋಗ್ಯ ವಿಚಾರಿಸಿದ್ದರು. ಸಿ.ಎಂ.ಉದಾಸಿಯವರು ಸಜ್ಜನ ಹಾಗೂ ಕ್ರಿಯಾಶೀಲ ರಾಜಕಾರಣಿ. ಲೋಕೋಪಯೋಗಿ ಸಚಿವರಾಗಿಯೂ ಅತ್ಯಂತ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು. ಅಭಿವೃದ್ಧಿ ಪರ ಚಿಂತಕರಾಗಿದ್ದ ಅವರು ಹಾನಗಲ್ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿ, ಆ ಭಾಗದಲ್ಲಿ ಮಾತ್ರವಲ್ಲದೆ ರಾಜ್ಯದ ಅತ್ಯಂತ ಜನಪ್ರಿಯ ನಾಯಕರಾಗಿದ್ದರು. ಅವರ ಪುತ್ರ ಶಿವಕುಮಾರ ಉದಾಸಿ ಹಾವೇರಿ ಸಂಸದರಾಗಿದ್ದಾರೆ.


ರಾಜ್ಯದ ಎಲ್ಲಾ ಸುದ್ದಿ, ಜಾಹೀರಾತಿಗಾಗಿ “NAMMUR EXPRESS” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ, ಸಬ್ಸ್ಕ್ರೈಬ್ ಆಗಿ. ವಾಟ್ಸಾಪ್ನಲ್ಲಿ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು, ಊರು, ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು..!.

Categories
ಮಲ್ನಾಡ್

ಕವಲೆದುರ್ಗ ಶ್ರೀಗಳು ಕರೋನಾಗೆ ಬಲಿ!

  • ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಸಾವು
  • ಜನರಿಗೆ ಧೈರ್ಯ ತುಂಬಿದ್ದ ಶ್ರೀಗಳು ಇನ್ನಿಲ್ಲ
  • ಮಠದಲ್ಲೇ ಅಂತಿಮ ಸಂಸ್ಕಾರ ಸಾಧ್ಯತೆ?

NAMMUR EXPRESS
ತೀರ್ಥಹಳ್ಳಿ: ಭುವನಗಿರಿ ಸಂಸ್ಥಾನ ಕವಲೆದುರ್ಗದ ಡಾ. ಶ್ರೀ ಸಿದ್ದಗಂಗಾ ಶಿವಾಚಾರ್ಯ ಸ್ವಾಮೀಜಿ ಕರೋನಾಕ್ಕೆ ಬಲಿಯಾಗಿದ್ದಾರೆ.
ಕೆಲವು ದಿನಗಳ ಹಿಂದೆ ಶೀತ ಸುಸ್ತು ಕಾರಣ ತೀರ್ಥಹಳ್ಳಿ ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿದ್ದರು. ಬಳಿಕ ಅವರಿಗೆ ಪಾಸಿಟಿವ್ ದೃಢವಾಗಿತ್ತು. ಅವರ ಶ್ವಾಸಕೋಶ ಸಂಪೂರ್ಣ ಹಾನಿಯಾಗಿತ್ತು. ಹೆಚ್ಚಿನ ಚಿಕಿತ್ಸೆಗೆ 2 ದಿನಗಳ ಹಿಂದೆ ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸೋಮವಾರ ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಕಳೆದ ಒಂದು ವಾರದ ಹಿಂದೆ ಹಳ್ಳಿಗೆ ಹೋಗಿದ್ದೆ ಎಂದು ಮಾಹಿತಿ ನೀಡಿರುವ ಶ್ರೀಗಳು ಸರಕಾರಿ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ, ಸಿಬ್ಬಂದಿಯ ಸೇವೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಾನವೀಯತೆ ಮೆರೆದ ಶ್ರೀಗಳು!: ಕರೋನಾ ಸೋಂಕು ಬಂದ ತಕ್ಷಣ ತಮ್ಮ ಸಿಬ್ಬಂದಿಗೆ ಮಾಹಿತಿ ನೀಡಿ ತಮ್ಮ ಜತೆ ಇದ್ದ ಓರ್ವ ಶಿಷ್ಯನ ಮನೆ ಸೀಲ್ ಡೌನ್ ಮಾಡಿದ್ದು, ಅವರ ಕುಟುಂಬಕ್ಕೆ ಶ್ರೀಗಳು 15 ಸಾವಿರ ಧನ ಸಹಾಯ ಕಳುಹಿಸಿಕೊಟ್ಟು ಮಾದರಿಯಾಗಿದ್ದರು. ಆದ್ರೆ ಇದೀಗ ಅವರೇ ಇಹಲೋಕ ತ್ಯಜಿಸಿದ್ದಾರೆ.
ತೀರ್ಥಹಳ್ಳಿಯಲ್ಲಿ ಅವರ ಅಂತ್ಯ ಸಂಸ್ಕಾರ ಮಠದ ಮತ್ತು ಕರೋನಾ ನಿಯಮದಂತೆ ನಡೆಯಲಿದೆ ಎನ್ನಲಾಗಿದೆ.
ರಾಜ್ಯದ ಎಲ್ಲಾ ಸುದ್ದಿ, ಜಾಹೀರಾತಿಗಾಗಿ “NAMMUR EXPRESS” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ, ಸಬ್ಸ್ಕ್ರೈಬ್ ಆಗಿ. ವಾಟ್ಸಾಪ್ನಲ್ಲಿ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು, ಊರು, ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು..!.

Categories
ಮಲ್ನಾಡ್

ಮದ್ಯದಂಗಡಿ ಬಂದ್ ಮಾಡಲು ಮಾಲೀಕರ ನಿರ್ಧಾರ!

  • ತೀರ್ಥಹಳ್ಳಿ ಆಡಳಿತಕ್ಕೆ ಮದ್ಯ ಮಾರಾಟಗಾರರ ಸಾಥ್
  • ಡಿಸಿ ಜತೆ ಮೀಟಿಂಗ್: ಸಭೆಯಲ್ಲಿ ನಿರ್ಧಾರ..?
  • ಸರಕಾರದ ನಿಯಮದಿಂದ ಮಾರಾಟಗಾರರು ಇಕ್ಕಟ್ಟು!

NAMMUR EXPRESS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಮದ್ಯ ಮಾರಾಟಗಾರರು ಇದೀಗ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಕರೋನಾ ಲಾಕ್ ಡೌನ್ ಮುಗಿಯುವವರೆಗೆ ಮದ್ಯದ ಅಂಗಡಿ ತೆರೆಯಲ್ಲ ಎಂದು ತೀರ್ಥಹಳ್ಳಿ ತಾಲೂಕು ಮದ್ಯ ಮಾರಾಟಗಾರರು ತಿಳಿಸಿದ್ದಾರೆ. ಆದರೆ ಆಡಳಿತ ಈ ಬಗ್ಗೆ ಒಪ್ಪಿಗೆ ಕೊಟ್ಟಿಲ್ಲ.
ಶಿವಮೊಗ್ಗ ಜಿಲ್ಲಾಧಿಕಾರಿಗಳು ತೀರ್ಥಹಳ್ಳಿಗೆ ಭೇಟಿ ನೀಡಿದ್ದು ಈ ಬಗ್ಗೆ ಮಾತುಕತೆ ನಡೆಯುವ ಸಾಧ್ಯತೆ ಇದೆ.
ತೀರ್ಥಹಳ್ಳಿ ತಾಲೂಕಿನಲ್ಲಿ ಕರೋನಾ ಹರಡುವಿಕೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ನಮ್ಮ ಸಾಮಾಜಿಕ ಜವಾಬ್ದಾರಿಯನ್ನು ಅರಿತುಕೊಂಡು ತಾಲ್ಲೂಕಿನ ಜನರ ಆರೋಗ್ಯದ ಬಗೆಗಿನ ಕಾಳಜಿ ಮತ್ತ ಕಳಕಳಿಯಿಂದ ತೀರ್ಥಹಳ್ಳಿ ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಮದ್ಯದಂಗಡಿ ಗಳನ್ನು ಸಂಪೂರ್ಣವಾಗಿ ಬಂದ್ ಮಾಡುವ ಮೂಲಕ ತಾಲೂಕು ಆಡಳಿತಕ್ಕೆ ಮದ್ಯ ಮಾರಾಟಗಾರರಾಗಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತಿದ್ದೇವೆ ಎಂದು ಮದ್ಯ ಮಾರಾಟಗಾರರು ತಿಳಿಸಿದ್ದಾರೆ.
ಶಾಸಕ ಆರಗ ಜ್ಞಾನೇಂದ್ರ ಮತ್ತು ತಹಶೀಲ್ದಾರ್ ಹಾಗೂ ಎಲ್ಲಾ ಎಲ್ಲಾ ಇಲಾಖೆಯ ಸರ್ಕಾರಿ ನೌಕರರು,ಆಸ್ಪತ್ರೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಹಗಲೂ- ರಾತ್ರಿಯೆನ್ನದೆ ಕೊರೋನಾ ರೋಗ ನಿಯಂತ್ರಣಕ್ಕೆ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೂ ಸಹಾ ಈ ಮಹಾಮಾರಿ ನಿಯಂತ್ರಣಕ್ಕೆ ಬರುತ್ತಿಲ್ಲ. ಆದ್ದರಿಂದ ತೀರ್ಥಹಳ್ಳಿ ತಾಲ್ಲೂಕಿನ ಎಲ್ಲಾ ಸನ್ನದುದಾರರು ಮಾತುಕತೆ ನಡೆಸಿ ಇಂತಹ ಕಷ್ಟಕರವಾದ ಸನ್ನಿವೇಶದಲ್ಲಿ ಮದ್ಯದಂಗಡಿಗಳ ವಹಿವಾಟಿನಿಂದ ಸೋಂಕು ಹರಡುವ ಸಾಧ್ಯತೆ ಇರುವುದನ್ನು ಅರಿತು ನಮ್ಮ ವೈಯಕ್ತಿಕ ಲಾಭವನ್ನು ಪಕ್ಕಕ್ಕಿಟ್ಟು, ತಾಲ್ಲೂಕಿನ ಜನತೆಯ ಸ್ವಾಸ್ಥ್ಯವನ್ನು ಕಾಪಾಡುವ ಉದ್ದೇಶದಿಂದ, ವ್ಯಾಪಾರ ಮಾಡುವುದು ಬೇಡ ಮತ್ತು ತಾಲ್ಲೂಕಿನಲ್ಲಿ ಕರೋನಾ ಹರಡುವಿಕೆ ನಿಯಂತ್ರಣಕ್ಕೆ ಬರುವವರೆಗೂ ಮದ್ಯದಂಗಡಿಗಳನ್ನು ತೆರೆಯದೇ ಇರಲು ತೀರ್ಮಾನಿಸಿದ್ದೇವೆ ಎಂದಿದ್ದಾರೆ.
ಕರೋನಾ ಪೀಡಿತ ಸಂತ್ರಸ್ತರಿಗೆ ಅಗತ್ಯವಾಗಿ ಬೇಕಾದ ನೆರವು ನೀಡಲು ಸಿದ್ದ ಎಂದು ಅಧ್ಯಕ್ಷರು ಹಾಗೂ ಸದಸ್ಯರು, ತೀರ್ಥಹಳ್ಳಿ ವೈನ್ & ಬಾರ್ ಮರ್ಚಂಟ್ಸ್ ಅಸೋಸಿಯೇಶನ್ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿದ್ದಾರೆ.
ಜ್ಞಾನೇಂದ್ರ ಕಿಡಿ!: ತೀರ್ಥಹಳ್ಳಿ ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ಆಗುತ್ತಿದೆ. ಕರೋನಾ ಹರಡುತ್ತಿದೆ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅಧಿಕಾರಿಗಳ ಸಭೆಯಲ್ಲಿ ಕಿಡಿಕಾರಿದ್ದರು. ಇದು ಭಾರೀ ಸಂಚಲನ ಮೂಡಿಸಿತ್ತು. ಇದೀಗ ಎಲ್ಲಾ ಮದ್ಯ ಮಾರಾಟಗಾರರು ಸ್ವಯಂ ಪ್ರೇರಿತರಾಗಿ ಬಂದ್ ಮಾಡಲು ನಿರ್ಧರಿಸಿದ್ದಾರೆ. ಆದ್ರೆ ಸರಕಾರ, ಆಡಳಿತ ಅಂಗಡಿ ತೆರೆಯುವಂತೆ ಹೇಳಿದೆ.
ಮದ್ಯ ಮಾರಾಟಕ್ಕೆ ಸರಕಾರದ್ದೇ ಕುಮ್ಮಕ್ಕು!: ತೀರ್ಥಹಳ್ಳಿ ಮದ್ಯ ಮಾರಾಟಗಾರರು ಕರೋನಾ ಸಂಕಷ್ಟದಲ್ಲಿ ಆಡಳಿತದ ಜತೆ ನಿಲ್ಲಲು ಬದ್ಧರಾಗಿದ್ದಾರೆ. ಆದ್ರೆ ಸರಕಾರ ಅಬಕಾರಿ ಇಲಾಖೆ ಆದಾಯಕ್ಕೆ ಪ್ಲಾನ್ ಮಾಡಿದೆ. ಜನ ಏನಾದರೂ ಆಗಲಿ, ಜನ ಕುಡಿದಷ್ಟು ಸರಕಾರಕ್ಕೆ ಲಾಭ.. ಇಲ್ಲಿ ಮದ್ಯ ಮಾರಾಟಗಾರರು ಬಲಿ ಪಶುಗಳು ಅಷ್ಟೇ.
ಶಾಸಕ ಆರಗ ಜ್ಞಾನೇಂದ್ರ ಈ ಬಗ್ಗೆ ಸರಕಾರಕ್ಕೆ ಮನವಿ ಮಾಡ್ತಾರಾ ಕಾದು ನೋಡಬೇಕಿದೆ. ಡಿಸಿ ಜತೆ ಸಭೆ ಇದೀಗ ಕುತೂಹಲ ಮೂಡಿಸಿದೆ.
ರಾಜ್ಯದ ಎಲ್ಲಾ ಸುದ್ದಿ, ಜಾಹೀರಾತಿಗಾಗಿ “NAMMUR EXPRESS” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ, ಸಬ್ಸ್ಕ್ರೈಬ್ ಆಗಿ. ವಾಟ್ಸಾಪ್ನಲ್ಲಿ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು, ಊರು, ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು..!.

Categories
ಬೆಂಗಳೂರು

ಸಿಇಟಿ, ನೀಟ್ ಅಂಕ ಮಾತ್ರ ಗಣನೆಗೆ..?!

  • ಪಿಯುಸಿ ಪರೀಕ್ಷೆ ಇಲ್ಲದ ಕಾರಣ ಗೊಂದಲ
  • ಸರಕಾರದ ನಡೆ ಬಗ್ಗೆ ಭಾರೀ ಕುತೂಹಲ
  • ಬಡ ಮಕ್ಕಳಿಗೆ, ಗ್ರಾಮೀಣ ವಿದ್ಯಾರ್ಥಿಗಳಿಗೆ ಅನ್ಯಾಯ ಆಗದಿರಲಿ..!

NAMMUR EXPRESS
ಬೆಂಗಳೂರು: ವೃತ್ತಿಪರ ಕೋರ್ಸುಗಳಿಗೆ ಸಿಇಟಿ ಮತ್ತು ನೀಟ್ ಅಂಕಗಳನ್ನು ಮಾತ್ರ ಪರಿಗಣಿಸುವ ಕುರಿತು ತೀರ್ಮಾನ ಕೈಗೊಳ್ಳಲು ಸರಕಾರ ಮುಂದಾಗಿದೆ.
ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆ ಇಲ್ಲದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ. ಪಿಯುಸಿ ಪರೀಕ್ಷೆ ಇಲ್ಲದೆ ಪಾಸಾಗುವ ವಿದ್ಯಾರ್ಥಿಗಳ ಇಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಮೊದಲಾದ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ(CET), ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್) ಅಂಕಗಳನ್ನು ಮಾತ್ರ ಪರಿಗಣಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ಶೀಘ್ರದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರಾದ ಡಿಸಿಎಂ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಸಿಇಟಿ ಅಂಕಗಳನ್ನು ಮಾತ್ರ ಪರಿಗಣಿಸಿ ರ್ಯಾಂಕಿಂಗ್ ನೀಡುವಂತೆ ಪತ್ರ ಬರೆದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಸಚಿವ ಸುರೇಶ್ ಕುಮಾರ್ ಅವರ ಸಲಹೆಗೆ ಸಂಬಂಧಿಸಿದಂತೆ ಉನ್ನತ ಶಿಕ್ಷಣ ತಜ್ಞರು, ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಡಿಸಿಎಂ ಹೇಳಿದ್ದಾರೆ.
ಕೇಂದ್ರ ಸಿಬಿಎಸ್ಸಿ, ರಾಜ್ಯ ಪಿಯು ಬೋರ್ಡ್ ಅಂಕಗಳ ಆಧಾರದ ಮೇಲೆ ಗಣನೆಗೆ ತೆಗೆದುಕೊಳ್ಳುತ್ತಿರುವುದು ತಾರತಮ್ಯಕ್ಕೆ ಕಾರಣವಾಗಿದೆ.
ಯಾವ ವಿದ್ಯಾರ್ಥಿಗಳಿಗೂ ತೊಂದರೆಯಾಗದಂತೆ ಎಲ್ಲಾ ಕ್ರಮಗಳನ್ನು ಸರಕಾರ ಕೈಗೊಳ್ಳಬೇಕು ಎಂಬ ಅಗ್ರಹ ವ್ಯಕ್ತವಾಗಿದೆ.
ರಾಜ್ಯದ ಎಲ್ಲಾ ಸುದ್ದಿ, ಜಾಹೀರಾತಿಗಾಗಿ “NAMMUR EXPRESS” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ, ಸಬ್ಸ್ಕ್ರೈಬ್ ಆಗಿ. ವಾಟ್ಸಾಪ್ನಲ್ಲಿ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು, ಊರು, ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು..!.

Categories
ಬೆಂಗಳೂರು

ಯಡಿಯೂರಪ್ಪ ಸಿಎಂ ಕುರ್ಚಿ ಭದ್ರ!?

  • ಕರೋನಾ ವೇಳೆ ರಾಜಕೀಯ ಮಾಡಿದ್ರೆ ಡ್ಯಾಮೇಜ್
  • ಯಡಿಯೂರಪ್ಪ ಪರ ಶಾಸಕರು, ಸಚಿವರ ಮಾತು
  • ತಣ್ಣಗಾದ ವಿರೋಧಿ ಬಣ: ಯಡಿಯೂರಪ್ಪ ಸೇಫ್

NAMMUR EXPRESS
ಬೆಂಗಳೂರು: ಬಿಜೆಪಿಯ 80ಕ್ಕೂ ಹೆಚ್ಚು ಮಂದಿ ಶಾಸಕರ ಸಹಿ ಸಂಗ್ರಹ ಕೆಲಸ ಶುರು ಮಾಡಲಾಗಿದೆ. ವಿರೋಧವಾಗಿ ಒಂದಷ್ಟು ಮಂದಿ ಸಹಿ ಸಂಗ್ರಹ ಮಾಡಿದ್ದರು. ಈಗಾಗಲೇ ಶಾಸಕರು ಯಡಿಯೂರಪ್ಪ ಅವರ ನಾವಿದ್ದೇವೆ ಎಂದು ಭರವಸೆ ನೀಡಿದ್ದಾರೆ. ಜೊತೆಗೆ ಆಪ್ತ ಶಾಸಕರರು ಸಭೆ ನಡೆಸಲು ಸಿದ್ಧತೆ ನಡೆಸಿದ್ದು, ಸಹಿ ಸಂಗ್ರಹಕ್ಕೆ ಮುಂದಾಗಿದ್ದಾರೆ.
ಒಂದು ಕಡೆ ಯಡಿಯೂರಪ್ಪ ಪುತ್ರ ವಿಜಯೇಂದ್ರ ಕೂಡ ತಮ್ಮ ತಂದೆಯ ಕುರ್ಚಿ ಭದ್ರ ಮಾಡಲು ಎಲ್ಲಾ ಪ್ಲಾನ್ ಮಾಡಿದ್ದಾರೆ. ಹೈಕಮಾಂಡ್ ಜೊತೆ ಮಾತುಕತೆ ನಡೆ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ.
ಯಡಿಯೂರಪ್ಪ ನಾನು ರಾಜೀನಾಮೆಗೆ ಸಿದ್ದ ಎನ್ನುವ ಮೂಲಕ ಭಾರೀ ಸಂಚಲನ ಮೂಡಿಸಿದೆ. ಇತ್ತ ವಿರೋಧಿ ಬಣ ಕೂಡ ಮಾಸ್ಟರ್ ಪ್ಲಾನ್ ಮಾಡಿದೆ.
ಒಂದು ರಾಜಕೀಯ ಲೆಕ್ಕಾಚಾರದ ಪ್ರಕಾರ ಇನ್ನು 6 ತಿಂಗಳು ಯಡಿಯೂರಪ್ಪ ಸ್ಥಾನಕ್ಕೆ ಕುತ್ತು ಬರಲ್ಲ ಎನ್ನಲಾಗಿದೆ.
ಯಡಿಯೂರಪ್ಪ ಅಧಿಕಾರಕ್ಕೆ ಆಂಟಿಕೂತವರಲ್ಲ. ಅವರು ಆದರ್ಶವಂತವರು ಎನ್ನುವ ಮೂಲಕ ಬಿಜೆಪಿ ನಾಯಕ, ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಹೇಳಿಕೆ ಚರ್ಚೆ ಮೂಡಿಸಿದೆ. ಯಾವುದೇ ಬದಲಾವಣೆ ಇಲ್ಲ ಎಂದಿದ್ದಾರೆ.
ಕರೋನಾ ಪೀಡಿತ ರಾಜ್ಯದಲ್ಲಿ ಯಡಿಯೂರಪ್ಪ ಇಳಿ ವಯಸ್ಸಿನಲ್ಲಿ ಅತ್ಯಂತ ಸೇವೆ ಮಾಡುತ್ತಿದ್ದಾರೆ. ಎಲ್ಲಾ ಸಚಿವರು, ಶಾಸಕರಿಗಿಂತ ಹೆಚ್ಚು ಓಡಾಡುತ್ತಿದ್ದಾರೆ. ಆದ್ರೆ ವಿರೋಧಿ ಬಣದ ವಿರುದ್ಧ ಈ ರೀತಿ ಹೇಳಿಕೆ ನೀಡಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಕಂದಾಯ ಸಚಿವ ಅಶೋಕ್, ಬೊಮ್ಮಾಯಿ, ಸುಧಾಕರ್, ಅಶ್ವತನಾರಾಯಣ ಕೂಡ ಯಡಿಯೂರಪ್ಪ ಪರ ನಿಂತಿದ್ದಾರೆ.
ರಾಜ್ಯದ ಎಲ್ಲಾ ಸುದ್ದಿ, ಜಾಹೀರಾತಿಗಾಗಿ “NAMMUR EXPRESS” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ, ಸಬ್ಸ್ಕ್ರೈಬ್ ಆಗಿ. ವಾಟ್ಸಾಪ್ನಲ್ಲಿ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು, ಊರು, ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು..!.

Categories
ಬೆಂಗಳೂರು

ಬೆಂಗಳೂರಲ್ಲಿ ಉದ್ಯೋಗ..!

  • ಆನ್ಲೈನ್ ಮೂಲಕವೇ ಇಂಟೆರ್ ವ್ಯೂ
  • ಅಗತ್ಯ ಇರುವವರಿಗೆ ಶೇರ್ ರ್ಮಾಡಿ..!
    ಎಲ್ಲಾ ಉದ್ಯಮ, ಉದ್ಯೋಗ, ತರಬೇತಿ ಸುದ್ಧಿಗಾಗಿ nammurexpress.in ವೆಬ್, nammur express ಫೇಸ್ಬುಕ್ ಮತ್ತು ಯೂಟ್ಯೂಬ್ ವೀಕ್ಷಿಸಿ.
Categories
ಬೆಂಗಳೂರು

ಯಡಿಯೂರಪ್ಪ ರಾಜೀನಾಮೆ ನೀಡ್ತಾರಾ..?

  • ಹೈಕಮಾಂಡ್ ಸೂಚನೆ ನೀಡಿದ್ರೆ ರಾಜೀನಾಮೆ
  • ಪಕ್ಷದ ಆದೇಶ ಪಾಲಿಸಲು ಸಿದ್ದ ಎಂದ ನಾಯಕ
  • ನಾನು ರಾಜೀನಾಮೆ ಕೊಡ್ತೇನೆ ಎಂದ ಯೋಗೇಶ್ವರ್

NAMMUR EXPRESS


ಬೆಂಗಳೂರು: ಹೈಕಮಾಂಡ್ ಸೂಚನೆ ನೀಡಿದ ತಕ್ಷಣ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು ಯಡಿಯೂರಪ್ಪ ಅವರ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.


ಪಕ್ಷದ ಹೈಕಮಾಂಡ್ ಹೇಳುವವರೆಗೂ ಸಿಎಂ ಆಗಿರುತ್ತೇನೆ. ಪಕ್ಷದ ಪರಿಮಿತಿಯೊಳಗೆ ಸಿಎಂ ಆಗಿ ಕಾರ್ಯ ನಿರ್ವಹಿಸಿದ್ದೇನೆ. ಪಕ್ಷ ಯಾವುದೇ ಆದೇಶ ನೀಡಿದರೂ ಪಾಲಿಸಲು ಸಿದ್ದ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಹೇಳಿಕೆ ನೀಡಿದ ಯಡಿಯೂರಪ್ಪ, ಹೈಕಮಾಂಡ್ ಸೂಚಿಸಿದರೆ ನಾನು ರಾಜೀನಾಮೆ ನೀಡುತ್ತೇನೆ. ಪಕ್ಷದ ವರಿಷ್ಟರು ನನ್ನ ಮೇಲೆ ಸಂಪೂರ್ಣ ನಂಬಿಕೆ ಇಟ್ಟಿದ್ದಾರೆ ಎಂದರು.


ರಾಜ್ಯದಲ್ಲಿ ನಾಯಕತ್ವ ವಹಿಸಲು ಪರ್ಯಾಯ ನಾಯಕರಿದ್ದಾರೆ. ನಾನು ಯಾರ ಬಗ್ಗೆಯೂ ಟೀಕೆ ಮಾಡಲ್ಲ. ಪಕ್ಷ ನನಗೆ ಎಲ್ಲ ಅವಕಾಶ ನೀಡಿದೆ. ಹೈಕಮಾಂಡ್ ಸೂಚಿಸಿದರೆ ಕೂಡಲೇ ರಾಜೀನಾಮೆ ನೀಡುತ್ತೇನೆ. ಪಕ್ಷ ಕೊಟ್ಟಿರುವ ಅವಕಾಶವನ್ನು ಉಪಯೋಗಿಸಿಕೊಂಡು ಕೆಲಸ ಮಾಡಿದ್ದೇನೆ ಎಂದರು.
ಕಳೆದ ವಾರ ಸಚಿವ ಯೋಗೇಶ್ವರ್ ಅವರು ಹೈಕಮಾಂಡ್ ಭೇಟಿ ಮಾಡಿದ್ದರು. ಬಳಿಕ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರು ಹೈಕಮಾಂಡ್ ಭೇಟಿ ಮಾಡಿದ್ದರು. ಇದೀಗ ಈ ರಾಜಕೀಯ ಬೆಳವಣಿಗೆ ಮಹತ್ವ ಪಡೆದಿದೆ.


ನಾನು ರಾಜೀನಾಮೆ ಕೊಡ್ತೇನೆ!: ಹೈಕಮಾಂಡ್ ಹೇಳಿದರೆ ರಾಜೀನಾಮೆಗೆ ಸಿದ್ದ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ‌.ಯೋಗೀಶ್ವರ್ ಹೇಳಿದ್ದಾರೆ.
ನಮ್ಮದು ರಾಷ್ಟ್ರೀಯ ಪಕ್ಷ. ಉನ್ನತ ಮಟ್ಟದ ನಾಯಕರು ಇದ್ದಾರೆ. ಅವರು ತೆಗೆದುಕೊಳ್ಳುವ ತೀರ್ಮಾನದಂತೆ ನಾವು ನಡೆದುಕೊಳ್ಳಬೇಕಾಗುತ್ತದೆ. ನಾನು ಕೂಡ ಪಕ್ಷ ರಾಜೀನಾಮೆ ಕೇಳಿದರೆ ಕೊಡಬೇಕು ಎಂದು ಹೇಳಿದ್ದಾರೆ.


ನನ್ನ ಹೇಳಿಕೆ ಸಾಕಷ್ಟು ಸುದ್ದಿಯಾಗಿದೆ. ಇದರಿಂದ ನನಗೆ ನೋವಾಗಿದೆ. ನಾನು ಸಿಎಂ ಬಗ್ಗೆ ಮಾತನಾಡುವುದಿಲ್ಲ. ನನ್ನನ್ನು ಜಾಸ್ತಿ ಮಾತನಾಡಿಸಬೇಡಿ. ಈ ಸಂದರ್ಭದಲ್ಲಿ ಸಿಎಂ ಬಗ್ಗೆ ಮಾತನಾಡಿದರೆ ವಿವಾದವಾಗುತ್ತಿದೆ ಎಂದು ಹೇಳಿದ್ದಾರೆ.
ರಾಜ್ಯದ ಎಲ್ಲಾ ಸುದ್ದಿ, ಜಾಹೀರಾತಿಗಾಗಿ “NAMMUR EXPRESS” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ, ಸಬ್ಸ್ಕ್ರೈಬ್ ಆಗಿ. ವಾಟ್ಸಾಪ್ನಲ್ಲಿ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು, ಊರು, ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು..!.