Categories
ಮಲ್ನಾಡ್

ಕರೋನಾ ನಡುವೆ ರಾಜ್ಯಕ್ಕೆ ಮುಂಗಾರು ಪ್ರವೇಶ!

  • ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆ ಕರೋನಾ ಎಷ್ಟು?
  • ತೀರ್ಥಹಳ್ಳಿಯಲ್ಲಿ 8ರಿಂದ 11ಕ್ಕೆ ಅವಕಾಶ?

NAMMUR EXPRESS
ಮಲೆನಾಡು: ಕರೋನಾ ನಡುವೆ ಶುಕ್ರವಾರ ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡನ್ನು ಪ್ರವೇಶಿಸಿರುವ ನೈಋತ್ಯ ಮುಂಗಾರು ಜೂನ್ 5ರಂದು ಉತ್ತರ ಒಳನಾಡಿನ ಪ್ರದೇಶ ತಲುಪಲಿದೆ.ಆ ಮೂಲಕ ರಾಜ್ಯದಲ್ಲಿ ಮುಂಗಾರು ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ವಾಡಿಕೆಯಂತೆ ಜೂನ್ 1ರಂದೇ ರಾಜ್ಯ ಪ್ರವೇಶಿಸಬೇಕಿದ್ದ, ಮುಂಗಾರು ಮಾರುತಗಳು ನಾಲ್ಕು ದಿನ ತಡವಾಗಿ ಕರಾವಳಿ ಮತ್ತು ದಕ್ಷಿಣ ಒಳನಾಡು ಭಾಗವನ್ನು ಪ್ರವೇಶಿಸಿದೆ. ಶನಿವಾರ ಉತ್ತರ ಒಳನಾಡನ್ನು ಹಾದು ಹೋಗುವ ಮೂಲಕ ಈ ಮಾರುಗಳು ಇಡೀ ರಾಜ್ಯವನ್ನು ಆವರಿಸಲಿವೆ.
ಶಿವಮೊಗ್ಗ ಜಿಲ್ಲೆ ಕೇಸ್: ಶಿವಮೊಗ್ಗ ಜಿಲ್ಲೆಯಲ್ಲಿ ಶನಿವಾರ 697 ಮಂದಿಗೆ ಕರೋನಾ ಬಂದಿದೆ. 8 ಜನ ಮೃತಪಟ್ಟಿದ್ದಾರೆ. ಶಿವಮೊಗ್ಗದಲ್ಲಿ 269, ಭದ್ರಾವತಿ 155, ತೀರ್ಥಹಳ್ಳಿ 30, ಶಿಕಾರಿಪುರ 90, ಸಾಗರ 45, ಹೊಸನಗರ 33, ಸೊರಬ 54, ಇತರೆ ಜಿಲ್ಲೆ 21 ಪ್ರಕರಣ ದಾಖಲಾಗಿದೆ.
ಚಿಕ್ಕಮಗಳೂರಲ್ಲಿ ಎಷ್ಟು ಕೇಸ್!: ಚಿಕ್ಕಮಗಳೂರಲ್ಲಿ 85, ಕಡೂರು 84, ತರೀಕೆರೆ 116, ಎನ್. ಆರ್. ಪುರ 12, ಮೂಡಿಗೆರೆ 50, ಕೊಪ್ಪ 9, ಶೃಂಗೇರಿ 22.
ಶಿವಮೊಗ್ಗದಲ್ಲಿ ಜೂ.14ರವರೆಗೆ ಲಾಕ್ ಮುಂದುವರಿದಿದೆ. ದಿನಸಿ ಚಿಲ್ಲರೆ ಅಂಗಡಿಗಳು ಬೆಳಿಗ್ಗೆ 6 ರಿಂದ 8 ರ ವರೆಗೆ ತೆರೆಯಲಿದ್ದು ಹೋಲ್ ಸೇಲ್ ದಿನಸಿ ಅಂಗಡಿಗಳಿಗೆ ಬುಧವಾರ ಮತ್ತು ಶನಿವಾರ ಬೆಳಿಗ್ಗೆ 6 ರಿಂದ 8 ಗಂಟೆಯವರೆಗೆ ಅವಕಾಶ ಮಾಡಿಕೊಡಲಾಗಿದೆ.
ತೀರ್ಥಹಳ್ಳಿಯಲ್ಲಿ ಬೆಳಿಗ್ಗೆ 8ರಿಂದ 11ರವರೆಗೆ ಅಗತ್ಯ ವಸ್ತು ಖರೀದಿಗೆ ಸಮಯ ನಿಗದಿಯಾಗುವ ಸಾಧ್ಯತೆ ಇದೆ.
ರಾಜ್ಯದ ಎಲ್ಲಾ ಸುದ್ದಿ, ಜಾಹೀರಾತಿಗಾಗಿ “NAMMUR EXPRESS” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ, ಸಬ್ಸ್ಕ್ರೈಬ್ ಆಗಿ. ವಾಟ್ಸಾಪ್ನಲ್ಲಿ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು, ಊರು, ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು..!.

Categories
ಮಲ್ನಾಡ್

ಅಂಚೆ ನೌಕರರಿಗೆ ಲಸಿಕೆ ಭಾಗ್ಯ!

  • ತೀರ್ಥಹಳ್ಳಿಯಲ್ಲಿ 100ಕ್ಕೂ ಹೆಚ್ಚು ಸಿಬ್ಬಂದಿಗೆ ಲಸಿಕೆ
  • ಎಲ್ಲಾ ಸರಕಾರಿ ನೌಕರರಿಗೆ ಸಿಗಲಿ ಲಸಿಕೆ
  • ಅಂಚೆ ಸಿಬ್ಬಂದಿಗೆ ತಿಂಡಿ ಬಡಿಸಿದ ಕಿಮ್ಮನೆ!

NAMMUR EXPRESS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಎಲ್ಲಾ ಅಂಚೆ ಕಚೇರಿ ಸಿಬ್ಬಂದಿಗೆ ಇತ್ತೀಚಿಗೆ ತೀರ್ಥಹಳ್ಳಿಯ ಮುಖ್ಯ ಅಂಚೆ ಕಚೇರಿ ಆವರಣದಲ್ಲಿ ಕರೋನಾ ಲಸಿಕೆ ಹಾಕಲಾಯಿತು. ಜೊತೆಗೆ ವಿಕಲ ಚೇತನರಿಗೂ ಲಸಿಕೆ ಹಾಕಲಾಗಿದೆ.
ತೀರ್ಥಹಳ್ಳಿ ತಾಲೂಕಿನಲ್ಲಿ ಎಲ್ಲಾ ಹಳ್ಳಿಗಳಿಗೆ ಅಂಚೆ, ದಾಖಲಾತಿ ತಲುಪಿಸುವ ಕೆಲಸ ಮಾಡುತ್ತಿರುವ ಅಂಚೆ ನೌಕರರನ್ನು ಕರೋನಾ ವಾರಿಯರ್ಸ್ ಎಂದು ಪರಿಗಣಿಸಿ ಅಧ್ಯತೆ ಮೇಲೆ ಲಸಿಕೆ ನೀಡಲಾಗಿದೆ. ಪೋಸ್ಟ್ ಮಾಸ್ಟರ್ ವಾಣಿ, ಸಹಾಯಕರಾದ ಅಶೋಕ್ ಕುಮಾರ್, ದಿನೇಶ್, ಶಿವಮೊಗ್ಗ ಅಂಚೆ ಹಿರಿಯ ಸಹಾಯಕ ಅಧಿಕಾರಿ ನಾಗರಾಜ್ ಇದ್ದರು.
ಅಂಚೆ ನೌಕರರಿಗೆ ಬಡಿಸಿದ ಕಿಮ್ಮನೆ!: ಬೆಳಗ್ಗೆಯೇ ಲಸಿಕೆ ಪಡೆಯಲು ಬಂದ ನೌಕರರಿಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಉಪಹಾರ ಬಡಿಸಿದರು. “ಸರ್ವ ಜನೋ ಸುಖಿನೋ ಭವಂತು” ಸಂಘಟನೆ ಇಂದಿರಾ ಕ್ಯಾಂಟೀನ್ ಹೆಸರಲ್ಲಿ ಉಚಿತ ಊಟ ಉಪಹಾರ ಮಾಡಿದ್ದು, ಈ ಸಿಬ್ಬಂದಿಗಳಿಗೆ ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ಕಾಂಗ್ರೆಸ್ ನಾಯಕರಾದ ಮುಡುಬ ರಾಘವೇಂದ್ರ, ಅಮರನಾಥ ಶೆಟ್ಟಿ, ಪ್ರಶಾಂತ್ ಸಾಲಿಯಾನ್, ಶಬರೀಶ್, ಶ್ರೇಯಸ್, ಸಚಿನ, ಸನಾವುಲ್ಲ, ಹರೀಶ್ ಸೀಬಿನಕೆರೆ, ಆಸೀಫ್ ಸೀಬಿನಕೆರೆ, ಪ್ರಸನ್ನ, ಶ್ರೀಕಾಂತ್ ಬೆಟ್ಟಮಕ್ಕಿ ಇತರರು ಇದ್ದರು.
ರಾಜ್ಯದ ಎಲ್ಲಾ ಸುದ್ದಿ, ಜಾಹೀರಾತಿಗಾಗಿ “NAMMUR EXPRESS” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ, ಸಬ್ಸ್ಕ್ರೈಬ್ ಆಗಿ. ವಾಟ್ಸಾಪ್ನಲ್ಲಿ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು, ಊರು, ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು..!.

Categories
ಅಂತಾರಾಷ್ಟ್ರೀಯ ಸುದ್ದಿ

ವಿಶ್ವ ಪರಿಸರ ದಿನಾಚರಣೆ!

ನಮ್ಮೂರ್ ಎಕ್ಸ್ಪ್ರೆಸ್ ಮಾಧ್ಯಮದ ಗಿಡ ನೆಡಿ ಅಭಿಯಾನ

ಗಿಡ ನೆಡಿ ಫೋಟೋ ಕಳುಹಿಸಿ..!

ವಿಶ್ವದಲ್ಲಿ ಪರಿಸರ ದಿನಾಚರಣೆ ಆಚರಣೆ ಮಾಡಲಾಗುತ್ತಿದೆ. ಎಲ್ಲೆಡೆ ಸಾಮಾಜಿಕ ಜಾಲತಾಣಗಳನ್ನು ಶುಭಾಶಯಗಳ ಪೋಸ್ಟರ್ ಹರಿದಾಡುತ್ತಿವೆ. ಆದರೆ ಇಂದು ಪರಿಸರ ಉಳಿಸುವ ಅವಶ್ಯಕತೆ ಇದೆ. ಇಲ್ಲವಾದಲ್ಲಿ ಕರೋನಾದಂತಹ ಕಾಯಲೆ, ಪ್ರಕೃತಿ ವಿಕೋಪಗಳು ಮುಂದೆ ಬರಲಿವೆ.
ಹೀಗಾಗಿ ಪ್ರತಿಯೊಬ್ಬರೂ ಪ್ರಕೃತಿ ಉಳಿಸುವಲ್ಲಿ ತಮ್ಮ ಪಾತ್ರ ನಿರ್ವಹಿಸಬೇಕಿದೆ. ಪ್ರತಿ ಮನೆಯಲ್ಲೂ ಪರಿಸರ ಸ್ನೇಹಿ ಗಿಡ ನೆಡಬೇಕಿದೆ. ಇರುವ ಪರಿಸರ ಉಳಿಸಬೇಕಿದೆ. ಪ್ಲಾಸ್ಟಿಕ್, ರಾಸಾಯನಿಕ ಬಳಕೆ ಕಡಿಮೆ ಮಾಡಬೇಕಿದೆ. ಸಹಜ ಪ್ರಕೃತಿ ನಿರ್ಮಾಣಕ್ಕೆ ನಾವೆಲ್ಲ ಕೈಜೋಡಿಸಬೇಕಿದೆ.
ಪರಿಸರ ದಿನಾಚರಣೆ ಅಂಗವಾಗಿ ನಿಮ್ಮ ಮನೆಯ ಎದುರು ಕುಟುಂಬ ಸಮೇತರಾಗಿ ಪರಿಸರ ಸ್ನೇಹಿ ಗಿಡ ನೆಟ್ಟು ಫೋಟೋ ಅನ್ನು 9481949101ಗೆ ವಾಟ್ಸಾಪ್ ಮಾಡಿ..! ನಿಮ್ಮ ಹೆಸರು, ಊರು, ತಾಲೂಕು,ಉದ್ಯೋಗ, ಸಂಪರ್ಕ ಸಂಖ್ಯೆ ನಮೂದಿಸಿ..!
ಕರೋನಾ ನಿಯಮಗಳನ್ನು ಪಾಲಿಸಿ ಈ ಸಮಾಜಿಕ ಜವಾಬ್ದಾರಿಗೆ ಕೈ ಜೋಡಿಸಿ..!.

ಎಲ್ಲರೂ ಸೇರಿ ಪರಿಸರ ಉಳಿಸೋಣ

ಎಲ್ಲಾ ಸುದ್ದಿಗಾಗಿ
Nammurexpress.in ವೀಕ್ಷಿಸಿ..!

Categories
ಮಲ್ನಾಡ್

ಶಿವಮೊಗ್ಗದಲ್ಲಿ ಕರೋನಾ ಅಬ್ಬರ!

  • 694 ಕೇಸ್:7 ಸಾವು: ಸಾವಿನ ಲೆಕ್ಕ ಪಕ್ಕಾ ಇದೆಯಾ?
  • ಆಂಬುಲೆನ್ಸ್ನಿಂದ ತಪ್ಪಿಸಿಕೊಂಡವ ಹೆಣವಾದ!
  • ಸಾಗರದ ಪೊಲೀಸ್ ಅಧಿಕಾರಿ ಕರೋನಾಗೆ ಬಲಿ
  • ಕವಲೇದುರ್ಗಾ ಶ್ರೀಗಳಿಗೆ ಕರೋನಾ: ಆಸ್ಪತ್ರೆಗೆ

NAMMUR EXPRESS
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಕರೋನಾ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ನಡುವೆ ಕರೋನಾ ಸಾವಿನ ಲೆಕ್ಕವನ್ನು ಜಿಲ್ಲಾಡಳಿತ ಸುಳ್ಳು ನೀಡುತ್ತಿದೆಯಾ ಎಂಬ ಅನುಮಾನ ಕಾಡಿದೆ. ಇದಕ್ಕೆ ಕಾರಣ ತಾಲೂಕುವಾರು ಆಗುತ್ತಿರುವ ಸಾವು.
ಜಿಲ್ಲಾಡಳಿತ ಎಲ್ಲಾ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಂದ ವರದಿ ತರಿಸಿಕೊಳ್ಳುತ್ತಿಲ್ಲವೇ ಎಂಬ ಅನುಮಾನ ಮೂಡಿದೆ.
694 ಜನರಲ್ಲಿ ಸೋಂಕು ಪತ್ತೆಯಾಗಿದ್ದು ಇದರಿಂದ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 6900 ಆಗಿದೆ.
7 ಜನ ಸೋಂಕಿಗೆ ಕೊನೆಯುಸಿರೆಳೆದಿದ್ದಾರೆ. ಇದರಿಂದ ಇದುವರೆಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 846ಕ್ಕೇರಿದೆ‌.
ಎಷ್ಟು ಕೇಸ್?: ಶಿವಮೊಗ್ಗ 211 ಭದ್ರಾವತಿ 122, ಶಿಕಾರಿಪುರ 114, ತೀರ್ಥಹಳ್ಳಿ 48, ಸೊರಬ 49, ಹೊಸನಗರ 17, ಸಾಗರ 115,ಇತರೆ ಜಿಲ್ಲೆ 18.
ಪರಾರಿಗೆ ಯತ್ನಿಸಿ ಸಾವು!: ಶಿವಮೊಗ್ಗ ಮೆಗ್ಗಾನ್ ಗೆ ದಾಖಲಾಗಲು ನಿರಾಕರಿಸಿ ಅಂಬ್ಯುಲೆನ್ಸ್ ನಿಂದ ಪರಾರಿಯಾಗಿದ್ದ ಶುಂಠಿಕೊಪ್ಪದ ನಿವಾಸಿ ಶಂಕರಪ್ಪ(39) ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. ಹೊಸನಗರ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಶುಂಠಿಕೊಪ್ಪದ ನಿವಾಸಿಯನ್ನ ಶಿವಮೊಗ್ಗದ ಮೆಗ್ಗಾನ್ ಗೆ ದಾಖಲಿಸಲು ಜೂ.1 ರಂದು ಸೂಚಿಸಲಾಗಿತ್ತು. ಹೊಸನಗರದಿಂದ ಗವಟೂರಿನ ಬಳಿ ಅಂಬ್ಯುಲೆನ್ಸ್ ಬರುವ ವೇಳೆ ಗ್ಲಾಜು ಒಡೆದು ಮೂತ್ರ ವಿಸರ್ಜನೆ ಬರುತ್ತಿದೆ ಎಂದು ಪರಾರಿಯಾಗಲು ಶಂಕ್ರಪ್ಪ ಯತ್ನಿಸಿದ್ದರು.
ಕವಲೆದುರ್ಗ ಶ್ರೀಗಳಿಗೆ ಕರೋನಾ!: ತೀರ್ಥಹಳ್ಳಿಯ ಕವಲೆದುರ್ಗ ಮಠದ ಡಾ. ರಾಜಗುರು ಸಿದ್ದಲಿಂಗ ಶಿವಾಚಾರ್ಯ ಶ್ರೀಗಳು ಕರೋನಾ ಸೊಂಕಿಗೆ ಒಳಗಾಗಿದ್ದು, ತೀರ್ಥಹಳ್ಳಿ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಾಸಕ ಆರಗ ಜ್ಞಾನೇಂದ್ರ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಕಳೆದ 2 ದಿನಗಳಿಂದ ಕೆಮ್ಮು ಸುಸ್ತು ಇದ್ದ ಕಾರಣ ಆಸ್ಪತ್ರೆಗೆ ಬಂದು ಕರೋನಾ ತಪಾಸಣೆ ಮಾಡಿಸಿಕೊಂಡಿದ್ದು ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಾಂಗ್ರೆಸ್ ನಾಯಕನಿಗೆ ಕರೋನಾ!: ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಸದಸ್ಯ ಜಯಪ್ರಕಾಶ್ ಶೆಟ್ಟಿ ಅವರಿಗೆ ಕರೋನಾ ಸೋಂಕು ದೃಢಪಟ್ಟಿದೆ. ಇವರು ತೀರ್ಥಹಳ್ಳಿ ನಗರ ಕಾಂಗ್ರೆಸ್ ಅಧ್ಯಕ್ಷರಾಗಿಕಾರ್ಯನಿರ್ವಹಿಸುತ್ತಿದ್ದರು.
ಹಾಲಪ್ಪ ಸಹಪಾಠಿ ಕರೋನಾಗೆ ಬಲಿ: ಸಾಗರ ಶಾಸಕ ಹಾಲಪ್ಪ ಅವರ ಸಹಪಾಠಿ ರಮೇಶ್ ಬಿನ್ ಭೀಮಪ್ಪ ಕರೋನಾಗೆ ಬಲಿಯಾಗಿದ್ದಾರೆ. ಸಾಗರ ತಾಲ್ಲೂಕಿನ ಬಾಳೆಗುಂಡಿಯ ಗ್ರಾಮದವರಾಗಿದ್ದು,ಸೋಂಕಿಗೆ ತುತ್ತಾಗಿ ಸೇವೆಯಲ್ಲಿರುವಾಗಲೇ ಮೃತಪಟ್ಟಿದ್ದಾರೆ.
ರಮೇಶ್ ಕಾಲೇಜು ದಿನಗಳಲ್ಲಿ ನನ್ನ ರೂಮ್ ಮೇಟ್ ಆಗಿದ್ದವರು, ಸಾಗರ ಮತ್ತು ಕಾರ್ಗಲ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ನಂತರ ಕಾರ್ಗಲ್ ಹಾಗೂ ಸೊರಬ ಠಾಣೆಯಲ್ಲಿ ASI ಆಗಿ ಸೇವೆ ಸಲ್ಲಿಸಿ, ಹಾಲಿ ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರ ಅಗಲಿಕೆ ವಿಷಯ ಮನಸ್ಸಿಗೆ ತೀವ್ರ ದುಃಖವನ್ನುಂಟುಮಾಡಿದೆ. ಭಗವಂತ ಶ್ರೀಯುತರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಿ, ಕುಟುಂಬಸ್ಥರಿಗೆ, ಹಿತೈಷಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆ ಎಂದು ಹಾಲಪ್ಪ ಕಂಬನಿ ಮಿಡಿದಿದ್ದಾರೆ.
ರಾಜ್ಯದ ಎಲ್ಲಾ ಸುದ್ದಿ, ಜಾಹೀರಾತಿಗಾಗಿ “NAMMUR EXPRESS” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ, ಸಬ್ಸ್ಕ್ರೈಬ್ ಆಗಿ. ವಾಟ್ಸಾಪ್ನಲ್ಲಿ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು, ಊರು, ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು..!.

Categories
ಮಲ್ನಾಡ್

ಸೊಂಕಿತರಿಗೆ ಹಾಡಿನ ಝಲಕ್!

  • ತೀರ್ಥಹಳ್ಳಿ ಕೋವಿಡ್ ಕೇರ್ ಸೆಂಟರ್ ಅಲ್ಲಿ ಆರ್ಕೆಸ್ಟ್ರಾ..!
  • ಶಾಸಕ ಆರಗ ಜ್ಞಾನೇಂದ್ರ, ತಹಸೀಲ್ದಾರ್ ಸಾಥ್

NAMMUR EXPRESS
ತೀರ್ಥಹಳ್ಳಿ: ತೀರ್ಥಹಳ್ಳಿಯ ದೇವಂಗಿ ಬಳಿಯ ಕೋವಿಡ್ ಕೇರ್ ಸೆಂಟರ್ ಅಲ್ಲಿ ಸೊಂಕೀತರಿಗೆ ಮನರಂಜನೆ ನೀಡಲು ರಸ ಮಂಜರಿ ನಡೆಸಲಾಗಿದ್ದು ಸೋಂಕಿತರು ಸಂತಸಪಟ್ಟರು.
ತಾಲೂಕು ಆಡಳಿತ, ಸಮಾನ ಮನಸ್ಕರ ವೇದಿಕೆ ಗಮನ ಸೆಳೆದಿದೆ. ಗಾಯಕರಾದ ರಾಘವೇಂದ್ರ, ತಾಲೂಕು ಕಚೇರಿ ಅಧಿಕಾರಿ ರಾಘವೇಂದ್ರ ಸೇರಿದಂತೆ ಅನೇಕರು ಈ ರಸಮಂಜರಿ ನಡೆಸಿಕೊಟ್ಟರು.
ಶಾಸಕ ಆರಗ ಜ್ಞಾನೇಂದ್ರ, ತಹಸೀಲ್ದಾರ್ ಶ್ರೀಪಾದ, ಪಟ್ಟಣ ಪಂಚಾಯತ್ ಸದಸ್ಯರಾದ ರಾಘವೇಂದ್ರ ಸೊಪ್ಪುಗುಡ್ಡೆ, ಸಂದೇಶ ಜವಳಿ,ಕುಕ್ಕೆ ಪ್ರಶಾಂತ್, ದೇವಂಗಿ ಅಶೋಕ್, ಅಧಿಕಾರಿ ರಾಘವೇಂದ್ರ ಸೇರಿದಂತೆ ಹಲವರು ಇದ್ದರು. ಹಾಡಿಗೆ ಸೋಂಕಿತರು ಹೆಜ್ಜೆ ಹಾಕಿದರು.
ರಾಜ್ಯದ ಎಲ್ಲಾ ಸುದ್ದಿ, ಜಾಹೀರಾತಿಗಾಗಿ “NAMMUR EXPRESS” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ, ಸಬ್ಸ್ಕ್ರೈಬ್ ಆಗಿ. ವಾಟ್ಸಾಪ್ನಲ್ಲಿ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು, ಊರು, ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು..!.

Categories
ಮಲ್ನಾಡ್

ಕರೋನಾ ಸೇವಕರಿಗೆ ಧೈರ್ಯ ತುಂಬಿದ ಸಂಘಟನೆ!

  • ಸಹಾಯ್ ತಂಡದಿಂದ ಕೋವಿಡ್ ಸೆಂಟರ್ ಭೇಟಿ
  • ಹಣ್ಣು ಹಂಪಲು ವಿತರಣೆ: ಸೇವಕರಿಗೆ ಸಾಂತ್ವನ
  • ಅಬ್ದುಲ್ ರೆಹಮಾನ್ ತಂಡದ ಮಾದರಿ ಸೇವೆ

NAMMUR EXPRESS
ತೀರ್ಥಹಳ್ಳಿ: ಕರೋನಾ ಇಡೀ ದೇಶವನ್ನು ಕಷ್ಟಕ್ಕೆ ನೂಕಿದೆ. ಇಂತಹ ಸಂದರ್ಭದಲ್ಲಿ ಪಕ್ಷ, ಜಾತಿ, ಧರ್ಮ ಬಿಟ್ಟು ಎಲ್ಲರೂ ಮಾನವೀಯ ಸೇವೆ ಮಾಡುತ್ತಿದ್ದಾರೆ. ಜೊತೆಗೆ ಸಂಘಟನೆಗಳು ಕೂಡ ಸೇವೆಗೆ ಮುಂದಾಗಿವೆ.


ಅದರಂತೆ ತೀರ್ಥಹಳ್ಳಿ ತಾಲೂಕು ಕೆಎಂಜೆ ಎಸ್ ವೈಎಸ್ ಹಾಗೂ ಎಸ್ ಎಸ್ ಎಫ್ ಜಂಟಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸಹಾಯ್ ತಂಡ ಕರೋನಾ ಸೇವೆ ಮಾಡುತ್ತಿದೆ.
ಈಗಾಗಲೇ ತಾಲೂಕಿನಲ್ಲಿ ಅನೇಕ ಸೇವೆ ಮಾಡುತ್ತಿರುವ ಸಂಘಟನೆ ದೇವಂಗಿ ಬಳಿಯ ವಾಟಿಗಾರು ಕೋವಿಡ್ ಕೇರ್ ಸೆಂಟರ್ ರೋಗಿಗಳಿಗೆ ಹಣ್ಣು ಹಂಪಲು ನೀಡಿದ್ದಾರೆ. ಜೊತೆಗೆ ಕೋವಿಡ್ ಕೇರ್ ಸೆಂಟರ್ ಸಿಬ್ಬಂದಿಯ ಕ್ಷೇಮ ವಿಚಾರಿಸಿದ್ದಾರೆ. ಕರೋನಾ ಸೇವೆ ಮಾಡುತ್ತಿರುವ ಎಲ್ಲಾ ಸಿಬ್ಬಂದಿಗೂ ಆತ್ಮಸ್ಟೈರ್ಯ ತುಂಬಿದ್ದಾರೆ.
ಕೆಎಂಜೆ ರಾಜ್ಯ ಸದಸ್ಯರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ಪ್ರಸಿದ್ಧ ಕನ್ಸ್ಟ್ರಕ್ಷನ್ ಸಂಸ್ಥೆ ನ್ಯಾಷನಲ್ ಮುಖ್ಯಸ್ಥರಾದ ಅಬ್ದುಲ್ ರೆಹಮಾನ್, ಕೆಎಂಜೆ ತೀರ್ಥಹಳ್ಳಿ ತಾಲೂಕು ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಮದ್, ಎಸ್ ಎಸ್ಎಸ್ ತಾಲೂಕು ಉಪಾಧ್ಯಕ್ಷರಾದ ಅಶ್ರಫ್ ಸಖಾಫಿ ಜೊತೆಗಿದ್ದರು.


ಸಂಘಟನೆ ಈಗಾಗಲೇ ಕುರುವಳ್ಳಿ ಜೋಪಡಿ ಸೇರಿದಂತೆ ಹಲವೆಡೆ ಆಹಾರದ ಕಿಟ್ ನೀಡುವ ಮೂಲಕ ಸಹಾಯ ಮಾಡಿದೆ. ಕರೋನಾ ಸೊಂಕಿನಿಂದ ನಿಧನರಾದ ಅನೇಕರ ಶವ ಸಂಸ್ಕಾರ ಮಾಡಿದೆ.
ಬಡ ರೋಗಿಗಳಿಗೆ ಆಂಬುಲೆನ್ಸ್ ಸೇವೆ ನೀಡುತ್ತಿದೆ. ಜೊತೆಗೆ ರಕ್ತದಾನ ಕೂಡ ಮಾಡಲಾಗುತ್ತಿದೆ.


ರಾಜ್ಯದ ಎಲ್ಲಾ ಸುದ್ದಿ, ಜಾಹೀರಾತಿಗಾಗಿ “NAMMUR EXPRESS” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ, ಸಬ್ಸ್ಕ್ರೈಬ್ ಆಗಿ. ವಾಟ್ಸಾಪ್ನಲ್ಲಿ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು, ಊರು, ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು..!.

Categories
ಮಲ್ನಾಡ್

ಲಸಿಕೆಗಾಗಿ ಬೀದಿಗಿಳಿದ ಕಾಂಗ್ರೆಸ್!

  • ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ನಾಯಕರ ಅಗ್ರಹ
  • ಸರಕಾರದ ವಿರುದ್ಧ ಮಂಜುನಾಥ ಗೌಡ ಆಕ್ರೋಶ

NAMMUR EXPRESS
ತೀರ್ಥಹಳ್ಳಿ: ಸರಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಇದೀಗ ಹೋರಾಟ ಶುರು ಮಾಡಿದ್ದಾರೆ.
ಜನತೆಗೆ ಲಸಿಕೆ ನೀಡುವಂತೆ ಕಾಂಗ್ರೆಸ್ ಎಲ್ಲಾ ತಾಲೂಕಲ್ಲಿ ಮನವಿ ಅಭಿಯಾನ ಶುರು ಮಾಡಿದ್ದು ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ನಾಯಕ ಡಾ.ಆರ್.ಎಂ. ಮಂಜುನಾಥ ಗೌಡ ನೇತೃತ್ವದಲ್ಲಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ತಾಲೂಕು ಕಚೇರಿ ಮುಂದೆ ಸೇರಿದ ಕಾಂಗ್ರೆಸ್ ನಾಯಕರು ತಾಲೂಕಿನ ಎಲ್ಲಾ ಜನತೆಗೆ ಲಸಿಕೆ ನೀಡುವಂತೆ ಒತ್ತಾಯಿಸಿದರು.


ಡಾ.ಆರ್.ಎಂ.ಮಂಜುನಾಥ ಗೌಡ ಅವರ ನೇತೃತ್ವದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮುಡುಬರಾಘವೇಂದ್ರ,ಹಿರಿಯ ಕಾಂಗ್ರೆಸ್ ಮುಖಂಡರಾದ ಹಾರೋಗೊಳಿಗೆ ಪದ್ಮನಾಭ, ಬಾಳೆಹಳ್ಳಿ ಪ್ರಭಾಕರ್, ಕೆಳಕೆರೆ ದಿವಾಕರ್,ಬಿ.ಎಸ್ ಯಲ್ಲಪ್ಪ, ಡಿ.ಎಸ್.ವಿಶ್ವನಾಥ್ ಶೆಟ್ಟಿ, ಗಣಪತಿ, ಸುಶೀಲಾ ಶೆಟ್ಟಿ, ನಾಗರಾಜ್ ಪೂಜಾರಿ ಸೇರಿದಂತೆ ಪಟ್ಟಣ ಪಂಚಾಯ್ತಿ ಹಾಲಿ, ಮಾಜಿ ಸದಸ್ಯರು, ಎಲ್ಲಾ ಚುನಾಯಿತ ಸದಸ್ಯರು, ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.


ರಾಜ್ಯದ ಎಲ್ಲಾ ಸುದ್ದಿ, ಜಾಹೀರಾತಿಗಾಗಿ “NAMMUR EXPRESS” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ, ಸಬ್ಸ್ಕ್ರೈಬ್ ಆಗಿ. ವಾಟ್ಸಾಪ್ನಲ್ಲಿ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು, ಊರು, ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು..!.

Categories
ಬೆಂಗಳೂರು ಮಲ್ನಾಡ್

ದ್ವಿತೀಯ ಪಿಯುಸಿ ಪರೀಕ್ಷೆ ರದ್ದು!

  • ಪ್ರಥಮ ಪಿಯುಸಿ ಆಧಾರದ ಮೇಲೆ ಫಲಿತಾಂಶ
  • ಜುಲೈ ಅಂತ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ!
  • ರಾಜ್ಯ ಸರಕಾರದ ಮಹತ್ವದ ಘೋಷಣೆ

NAMMUR EXPRESS
ಬೆಂಗಳೂರು: ರಾಜ್ಯದಲ್ಲಿ ದ್ವಿತೀಯ PUC ಪರೀಕ್ಷೆ ರದ್ದು ಮಾಡಲಾಗಿದೆ. ಆದ್ರೆ SSLC ವಿದ್ಯಾರ್ಥಿಗಳಿಗೆ ಎಕ್ಸಾಂ ಇರುತ್ತೆ. ಜುಲೈ ಅಂತ್ಯದಲ್ಲಿ ಪರೀಕ್ಷೆ ನಡೆಯುತ್ತೆ ಎಂದು ಶಿಕ್ಷಣ ಸಚಿವ ಸುರೇಶ ಕುಮಾರ್ ಹೇಳಿದ್ದಾರೆ.
ಗ್ರೇಡ್ ಆಧಾರದ ಮೇಲೆ ಪಾಸ್ ಮಾಡಲು ನಿರ್ಧಾರ ಮಾಡಲಾಗಿದೆ. ಕರೋನಾ ಹೆಚ್ಚುತ್ತಿರುವ ಕಾರಣ ಈ ನಿರ್ಧಾರ ಮಾಡಲಾಗಿದೆ.
ಕಳೆದ ವರ್ಷದ ಕರೋನಾ ನಡುವೆ ಮೊದಲ ಪಿಯುಸಿ ಪರೀಕ್ಷೆ ಎದುರಿಸಿ ಜಿಲ್ಲಾ ಮಟ್ಟದಲ್ಲಿ ಪರೀಕ್ಷೆಯನ್ನು ನಡೆಸಲಾಗಿತ್ತು. ಆ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ದ್ವಿತೀಯ ಪಿಯುಸಿ ಫಲಿತಾಂಶ ಕೊಡಲು ತಯಾರಿ ನಡೆಸಲಾಗಿದೆ.
ಪರೀಕ್ಷೆ ಹೇಗಿರುತ್ತೆ?: ಶಿಕ್ಷಣ ಸಚಿವರಾದ ಎಸ್​.ಸುರೇಶ್​ ಕುಮಾರ್​ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿ ಕೇಂದ್ರ ಸರ್ಕಾರ ಈಗಾಗಲೇ ಸಿಬಿಎಸ್​ಇ ಹಾಗೂ ಐಸಿಎಸ್​ಇ 12ನೇ ತರಗತಿ ಪರೀಕ್ಷೆಗಳನ್ನು ರದ್ದು ಮಾಡಿದೆ. ಹೀಗಾಗಿ ರಾಜ್ಯದಲ್ಲೂ ಎಸ್​ಎಸ್​ಎಲ್​ಸಿ ಹಾಗೂ ಪಿಯುಸಿ ಪರೀಕ್ಷೆಗಳನ್ನು ರದ್ದು ಮಾಡಿ ಎಂಬ ಮನವಿಗಳು ಕೇಳಿ ಬಂದಿದ್ದವು. ಈ ಹಿನ್ನೆಲೆ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಲಾಗಿದೆ.


ಎಸ್ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗುತ್ತದೆ. 8 ಲಕ್ಷ 75 ಸಾವಿರ ವಿದ್ಯಾರ್ಥಿಗಳು ಎಸ್​ಎಸ್​ಎಲ್​ಸಿ ಪರೀಕ್ಷೆ ತೆಗೆದುಕೊಂಡಿದ್ದಾರೆ. ಪರೀಕ್ಷೆ ಇಲ್ಲದೆ ಅವರ ಕಲಿಕಾ ಮಟ್ಟ ನಿರ್ಧಾರವಾಗೋದು ಕಷ್ಟ. ಕಳೆದ ವರ್ಷ 9 ನೇ ತರಗತಿ ಪರೀಕ್ಷೆ ನಡೆದಿಲ್ಲ. CBSE ನಲ್ಲಿ ಮೂರು ತಿಂಗೊಳಿಗೊಮ್ಮೆ ವಿದ್ಯಾರ್ಥಿಗಳ ಇವ್ಯುಲೇಶನ್ ನಡೆಯುತ್ತೆ. ನಮ್ಮಲ್ಲಿ ಆ ಪದ್ಧತಿ ಇಲ್ಲ. ಹೀಗಾಗಿ ಎರಡು ಪರೀಕ್ಷೆ ನಡೆಸಲು ನಿರ್ಧಾರ ಮಾಡಲಾಗಿದೆ.  ಸಮಾಜ ವಿಜ್ಞಾನ, ಗಣಿತ, ವಿಜ್ಞಾನ-  ಈ ಮೂರು ವಿಷಯ ಸೇರಿ ಒಂದು ಪ್ರಶ್ನೆ ಪತ್ರಿಕೆ ಇರುತ್ತದೆ ಪ್ರಶ್ನೆಗಳು ಸರಳವಾಗಿರುತ್ತೆ. ನೇರವಾಗಿರುತ್ತದೆ. ಬಹು ಆಯ್ಕೆ ಪ್ರಶ್ನೆಗಳು ಇರುತ್ತೆ ಎಂದು ಮಾಹಿತಿ ನೀಡಿದ್ದಾರೆ.


ಜುಲೈ 18ರಿಂದ SSLC ಪರೀಕ್ಷೆ?: ಕರೋನಾ ಕಡಿಮೆಯಾದರೆ ಜುಲೈ 3ನೇ ವಾರದಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಅಂದರೆ ಜುಲೈ 18ರಿಂದ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಸುವ ಸಾಧ್ಯತೆ ಇದೆ.  ಆದರೆ ಪರೀಕ್ಷೆ ನಡೆಸುವ ಬಗ್ಗೆ ಅಂತಿಮ ತೀರ್ಮಾನವಾಗಿಲ್ಲ. ಪರೀಕ್ಷಾ ಕೊಠಡಿ ಮೇಲ್ವಿಚಾರಕರು ಕೊರೋನಾ ಲಸಿಕೆಯನ್ನು ಕಡ್ಡಾಯವಾಗಿ ಪಡೆದಿರಬೇಕು. ಈ ಬಾರಿ 6000 ಸಾವಿರ ಪರೀಕ್ಷಾ ಕೇಂದ್ರಗಳಿವೆ.  ಕಳೆದ ವರ್ಷ ಮೂರು ಸಾವಿರ ಮಾತ್ರ ಇದ್ದವು.  ಒಂದು ಡೆಸ್ಕ್ ನಲ್ಲಿ ಒಬ್ಬ ವಿದ್ಯಾರ್ಥಿಯನ್ನು ಕೂರಿಸಲಾಗುತ್ತದೆ. ಒಂದು ರೂಮ್ ನಲ್ಲಿ 10 ರಿಂದ 12 ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ ಎಂದರು.


ಪಿಯುಸಿ ಅಂಕ ಗೊಂದಲ: ದ್ವಿತೀಯ ಪಿಯುಸಿ ಫಲಿತಾಂಶ ಗೊಂದಲ ಆಗಲಿದ್ದು, ಸರಕಾರ ತಕ್ಷಣಕ್ಕೆ ಘೋಷಣೆ ಮಾಡದೇ ಅವರ ಭವಿಷ್ಯ, ಮುಂಬರುವ ತೊಂದರೆ ನೋಡಿಕೊಂಡು ನಿಯಮ ಮಾಡಬೇಕು ಎಂಬುದು ನಮ್ಮೂರ್ ಎಕ್ಸ್ಪ್ರೆಸ್ ಕಳಕಳಿ..!.
ರಾಜ್ಯದ ಎಲ್ಲಾ ಸುದ್ದಿ, ಜಾಹೀರಾತಿಗಾಗಿ “NAMMUR EXPRESS” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ, ಸಬ್ಸ್ಕ್ರೈಬ್ ಆಗಿ. ವಾಟ್ಸಾಪ್ನಲ್ಲಿ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು, ಊರು, ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು..!.

Categories
ಮಲ್ನಾಡ್

ಕರೋನಾಕ್ಕೆ ಮಲೆನಾಡಿನ ಖ್ಯಾತ ಕಲಾವಿದ ಬಲಿ!

  • ಕೊಪ್ಪದ ಕುಂಚೂರು ಹರೀಶ್ ಚಿಕ್ಕಮಗಳೂರಲ್ಲಿ ಸಾವು
  • ಭದ್ರಾವತಿ ಹೆಚ್ಚು, ತೀರ್ಥಹಳ್ಳಿಯಲ್ಲಿ ಕಡಿಮೆ ಕೇಸ್
  • ಲಾಕ್ ಇದ್ರೂ ಕಾಫಿ ನಾಡಲ್ಲಿ ಹೆಚ್ಚುತ್ತಿದೆ ಕರೋನಾ!

NAMMUR EXPRESS
ಮಲೆನಾಡು: ಮಲೆನಾಡಿನ ಖ್ಯಾತ ಜಾನಪದ ಕಲಾವಿದ, ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಕೊಪ್ಪ, ಮಲೆನಾಡು ಹೆಸರನ್ನು ಬೆಳಗಿಸಿದ್ದ ಕುಂಚೂರು ಹರೀಶ್ ಕರೋನಾಗೆ ಬಲಿಯಾಗಿದ್ದಾರೆ.
ಕೊಪ್ಪ ತಾಲೂಕಿನ ಕುಂಚೂರಿನ ಹರೀಶ್(45) ತೀವ್ರ ಜ್ವರದಿಂದ ಬಳಲುತ್ತಿದ್ದರು. ಆದ್ರೆ ಚಿಕ್ಕಮಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾಗಿದ್ದಾರೆ. ನೂರಾರು ಯುವ ಜನ ಮೇಳ, ಸ್ಪರ್ಧೆ, ಹಬ್ಬ, ಉತ್ಸವಗಳಲ್ಲಿ ಇವರ ದನಿ ಹೆಸರು ಮಾಡಿತ್ತು. ಪತ್ನಿ, ಇಬ್ಬರು ಪುತ್ರಿ ಸೇರಿ ಅಪಾರ ಅಭಿಮಾನಿಗಳನ್ನು ಅವರು ಆಗಲಿದ್ದಾರೆ.
ಜಾನಪದ ಗೀತೆ, ಲಾವಣಿ, ಗೀಗಿ ಪದ, ಗಾಯನದಲ್ಲಿ ಹೆಸರು ಮಾಡಿದ್ದ ಹರೀಶ್ ಅವರನ್ನು ಸರಕಾರ ಪ್ರಶಸ್ತಿ ನೀಡಿ ಗೌರವಿಸಿತ್ತು. ಗುರುವಾರ ಸಂಜೆ ಕರೋನಾ ನಿಯಮದಂತೆ ಅಂತ್ಯಕ್ರಿಯೆ ಮಾಡಲಾಯಿತು.
ಸಂತಾಪ: ಶೃಂಗೇರಿ ಶಾಸಕ ರಾಜೇಗೌಡ, ನಾಯಕ ಸುಧೀರ್ ಕುಮಾರ್ ಮುರೊಳ್ಳಿ, ಪತ್ರಕರ್ತ ರವಿಕಾಂತ್ ಸೇರಿದಂತೆ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.
ನಮ್ಮೂರ್ ಎಕ್ಸ್ಪ್ರೆಸ್ ಮಾರ್ಗದರ್ಶಕರೂ ಆಗಿದ್ದ ಹರೀಶ್ ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸೋಣ. ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲಿ.
ಶಿವಮೊಗ್ಗದಲ್ಲಿ ಎಷ್ಟು ಕೇಸ್!: ಶಿವಮೊಗ್ಗದಲ್ಲಿ 599 ಕೇಸ್ ದಾಖಲಾಗಿದ್ದು 7 ಮಂದಿ ಸಾವನ್ನು ಕಂಡಿದ್ದಾರೆ. ಒಟ್ಟು 839 ಮಂದಿ ಸಾವನ್ನು ಕಂಡಂತಾಗಿದೆ.
ಶಿವಮೊಗ್ಗದಲ್ಲಿ 135, ಭದ್ರಾವತಿ 190 ಶಿಕಾರಿಪುರ 78, ತೀರ್ಥಹಳ್ಳಿ 15, ಸೊರಬ 54, ಹೊಸ ನಗರ 61, ಸಾಗರ 50, ಇತರೆ 16.
ಚಿಕ್ಕಮಗಳೂರಲ್ಲಿ ಎಷ್ಟು ಕೇಸ್!: ಚಿಕ್ಕಮಗಳೂರು 150, ಕಡೂರು 188, ತರೀಕೆರೆ 181, ಎನ್. ಆರ್. ಪುರ 53, ಮೂಡಿಗೆರೆ 70, ಕೊಪ್ಪ 54, ಶೃಂಗೇರಿ 47, ಒಟ್ಟು 742 ಪ್ರಕರಣ ದಾಖಲಾಗಿದೆ.
ರಾಜ್ಯದ ಎಲ್ಲಾ ಸುದ್ದಿ, ಜಾಹೀರಾತಿಗಾಗಿ “NAMMUR EXPRESS” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ, ಸಬ್ಸ್ಕ್ರೈಬ್ ಆಗಿ. ವಾಟ್ಸಾಪ್ನಲ್ಲಿ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು, ಊರು, ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು..!.

Categories
ಬೆಂಗಳೂರು

ಕರೋನಾ 2: 2ನೇ ಪ್ಯಾಕೇಜಲ್ಲಿ ಯಾರಿಗೆ ಏನು ಸೌಲಭ್ಯ?

  • ಸರಕಾರದ ಘೋಷಣೆ ಡೀಟೇಲ್ಸ್

NAMMUR EXPRESS
ಬೆಂಗಳೂರು: ಕರ್ನಾಟಕದಲ್ಲಿ 2ನೇ ಅಲೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಠಿಣ ನಿರ್ಬಂಧಗಳನ್ನು ಜಾರಿಮಾಡಿದ್ದು ಇದರಿಂದ ಬಾಧಿತವಾದ ಸಮಾಜದ ವಿವಿಧ ವರ್ಗಗಳಿಗೆ ಈಗಾಗಲೇ ಪರಿಹಾರದ ಪ್ಯಾಕೇಜ್‍ನ್ನು ನಮ್ಮ ಸರ್ಕಾರ ಘೋಷಣೆ ಮಾಡಿರುತ್ತದೆ.
ಇದಲ್ಲದೇ ಕಠಿಣ ನಿರ್ಬಂಧಗಳಜಾರಿಯಿಂದ ತೊಂದರೆಗೀಡಾಗಿರುವ ಬೇರೆ ಬೇರೆ ವರ್ಗದವರಿಂದಲೂ ಕೂಡ ಹಲವಾರು ಮನವಿಗಳು ಬಂದಿರುವ ಹಿನ್ನೆಲೆಯಲ್ಲಿ ಆರ್ಥಿಕ ಹಿಂಜರಿತನದ ನಡುವೆಯೂ ಕೂಡ ಸಂಕಷ್ಟಕ್ಕಿಡಾಗಿರುವ ವರ್ಗಗಳಿಗೆ ಈ ಕೆಳಗಿನ ಪರಿಹಾರವನ್ನು ನಾನು ಘೋಷಣೆ ಮಾಡುತ್ತಾ ಇದ್ದೇನೆ.

  1. ಪವರ್ ಲೂಮ್ ನೇಕಾರರು

ಪ್ರತಿ ಪವರ್ ಲೂಮ್‍ಗೆ ಇಬ್ಬರು ಕೆಲಸಗಾರರಿಗೆ ಮೀರದಂತೆ ತಲಾ ರೂ 3,000ದಂತೆ ಪರಿಹಾರ ನೀಡಲು ನಿರ್ಧರಿಸಿದೆ. ಇದರಿಂದ ಸುಮಾರು 59 ಸಾವಿರ ಪವರ್ ಲೂಮ್‍ಗಳಿಗೆ 35 ಕೋಟಿ ವೆಚ್ಚವಾಗಲಿದೆ.

  1. ಚಲನಚಿತ್ರ ಮತ್ತುದೂರದರ್ಶನ ಮಾಧ್ಯಮದಲ್ಲಿನಅಸಂಘಟಿತಕಾರ್ಮಿಕರು

ಚಲನಚಿತ್ರೋದ್ಯಮ ಹಾಗೂ ದೂರದರ್ಶನ ಮಾಧ್ಯಮದಲ್ಲಿ ತೊಡಗಿಸಿಕೊಂಡಿರುವ ನೋಂದಾಯಿತ ಅಸಂಘಟಿತ ಕಾರ್ಮಿಕರಿಗೆ (ಕಲಾವಿದರು, ತಂತ್ರಜ್ಞರು) ತಲಾರೂ 3,000ದಂತೆ ಪರಿಹಾರ ನೀಡಲು ನಿರ್ಧರಿಸಿದೆ. ಇದರಿಂದ ಸುಮಾರು 22 ಸಾವಿರ ನೋಂದಾಯಿತ ಕಾರ್ಮಿಕರಿಗೆ ಅನುಕೂಲವಾಗಲಿದ್ದು ರೂ 6.6 ಕೋಟಿ ವೆಚ್ಚವಾಗಲಿದೆ.

  1. ಮೀನುಗಾರರಿಗೆ ಪರಿಹಾರ

ಭಾರತ ಸರ್ಕಾರದ ಉಳಿತಾಯ ಮತ್ತು ಪರಿಹಾರ ಯೋಜನೆಯಡಿ ನೋಂದಾಯಿಸಿದ 18,746 ಮೀನುಗಾರರಿಗೆ ತಲಾ ರೂ 3000 ಗಳ ಪರಿಹಾರ ನೀಡಲು ನಿರ್ಧರಿಸಲಾಗಿದೆ. ಇದರಿಂದ ರೂ 5.6 ಕೋಟಿ ವೆಚ್ಚವಾಗಲಿದೆ.

ಇದಲ್ಲದೆ ಒಟ್ಟು 7,668 ಇನ್‍ಲ್ಯಾಂಡ್ ದೋಣಿ ಮಾಲಿಕರಿಗೆ ತಲಾ ರೂ 3,000ರಂತೆ ಪರಿಹಾರ ನೀಡಲು ನಿರ್ಧರಿಸಲಾಗಿದೆ. ಇದರಿಂದ ರೂ 2.3 ಕೋಟಿ ವೆಚ್ಚವಾಗಲಿದೆ. ಇದಲ್ಲದೆ ಮೀನುಗಾರರ ಸಂಘಗಗಳಿಂದ ಒಳನಾಡು ಮೀನುಗಾರಿಗೆಕೆ ಸರ್ಕಾರಕ್ಕೆ ನೀಡಬೇಕಾಗಿರುವ ಕಾಂಟ್ರಾಕ್ಟ್ ಫೀಸ್‍ನಲ್ಲಿ ಶೇ.25 ರೀಯಾಯಿತಿಯನ್ನು ಸಹ ನೀಡಲು ನಿರ್ಧರಿಸಲಾಗಿದೆ.

  1. ಮುಜರಾಯಿ ದೇವಸ್ಥಾನದ ಅರ್ಚಕರು ಮತ್ತು ಸಿಬ್ಬಂದಿಗಳು

ಮುಜರಾಯಿ ಇಲಾಖೆಯ “ಸಿ” ವರ್ಗದ ದೇವಸ್ಥಾನಗಳಲ್ಲಿ ಕೆಲಸ ಮಾಡುವ ಅರ್ಚಕರು, ಅಡಿಗೆ ಕೆಲಸಗಾರರು ಮತ್ತು ಸಿಬ್ಬಂದಿಗಳಿಗೆ ತಲಾ ರೂ 3,000 ಗಳನ್ನು ನೀಡಲು ನಿರ್ಧರಿಸಲಾಗಿದೆ. ಈ ವರ್ಗದಲ್ಲಿ ಸುಮಾರು 36,047 ಜನರಿದ್ದು ಇದರಿಂದ ರೂ 10.8 ಕೋಟಿ ವೆಚ್ಚವಾಗಲಿದೆ.

  1. ಮಸೀದಿಗಳಲ್ಲಿ ಕಾರ್ಯನಿರ್ವಹಿಸುವ ಪೇಶ್ ಇಮಾಮ್ ಮತ್ತು ಫೌಜಿಂ ಗಳಿಗೆ ತಲಾ 3,000 ರೂ. ನೆರವು ನೀಡಲಾಗುವುದು.
  2. ಆಶಾ ಕಾರ್ಯಕರ್ತೆಯರು

ಆಶಾ ಕಾರ್ಯಕರ್ತೆಯರು ಕೋವಿಡ್-19ನ ಸೋಂಕನ್ನು ತಡೆಯಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಈ ವರ್ಗದವರಿಗೆ ಸಹಾಯ ಮಾಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಕರ್ನಾಟಕ ಸರ್ಕಾರವು ಕೋವಿಡ್-19 ತಡೆಗಟ್ಟುವಲ್ಲಿ ಫ್ರಂಟ್ ಲೈನ್ ವಾರಿಯರ್ಸ್ ಆದ ಆಶಾ ಕಾರ್ಯಕರ್ತರಿಗೆ ತಲಾ ರೂ 3,000 ಗಳ ಪರಿಹಾರ ನೀಡಲು ನಿರ್ಧರಿಸಿದೆ. ಇದರಿಂದ ಒಟ್ಟು 42,574 ಆಶಾ ಕಾರ್ಯಕರ್ತರಿಗೆ ಸಹಾಯವಾಗಲಿದ್ದು ಅಂದಾಜು ರೂ 12.75 ಕೋಟಿ ವೆಚ್ಚವಾಗಲಿದೆ.

  1. ಅಂಗನವಾಡಿ ಕಾರ್ಯಕರ್ತೆಯರು

64,423 ಅಂಗನವಾಡಿಯ ಕಾರ್ಯಕರ್ತರು ಹಾಗೂ 59,169 ಅಂಗನವಾಡಿ ಸಹಾಯಕರಿಗೆ ತಲಾ ರೂ 2,000 ಗಳಂತೆ ಪರಿಹಾರ ನೀಡಲು ನಿರ್ಧರಿಸಲಾಗಿದೆ. ಇದರಿಂದ ಸರ್ಕಾರಕ್ಕೆ ಅಂದಾಜು ರೂ 24.7 ಕೋಟಿ ವೆಚ್ಚವಾಗಲಿದೆ.

  1. ಶಾಲಾ ಮಕ್ಕಳಿಗೆ ಹಾಲಿನ ಪುಡಿಯನ್ನು ನೀಡುವ ಬಗ್ಗೆ

ಈ ಸಮಯದಲ್ಲಿ ಹಾಲಿನ ಬೇಡಿಕೆ ಕಡಿಮೆಯಾಗಿದ್ದು ಹೈನು ಉದ್ಯಮದಲ್ಲಿ ತೊಡಗಿಸಿಕೊಂಡ ರೈತರಿಗೆ ಸಮಸ್ಯೆಯಾಗದಂತೆ ಹೆಚ್ಚುವರಿ ಹಾಲಿನಿಂದ ಪುಡಿ ತಯಾರಿಸಲು ನಿರ್ಧರಿಸಲಾಗಿದೆ. ಎಲ್ಲಾ ಶಾಲೆಗಳು ಕಠಿಣ ನಿರ್ಬಂಧಗಳ ಹಿನ್ನೆಲೆಯಲ್ಲಿ ಮುಚ್ಚಿದ್ದರೂ ಆಹಾರ ಧಾನ್ಯಗಳನ್ನು ಶಾಲಾ ಮಕ್ಕಳಿಗೆ ವಿತರಿಸಲಾಗುತ್ತಿದ್ದು ಹೆಚ್ಚುವರಿಯಾಗಿ ಆಹಾರ ಧಾನ್ಯಗಳ ಜೊತೆಗೆ ಅರ್ಧ ಕೆ.ಜಿ ಹಾಲಿನ ಪುಡಿಯನ್ನು ಜೂನ್ ಮತ್ತು ಜುಲೈ ತಿಂಗಳಿನಲ್ಲಿ ನೀಡಲು ತೀರ್ಮಾನಿಸಲಾಗಿದೆ. ಇದರಿಂದ ಸರ್ಕಾರಕ್ಕೆ ಅಂದಾಜು ರೂ 100 ಕೋಟಿ ವೆಚ್ಚವಾಗಲಿದೆ.

  1. ಅನುದಾನ ರಹಿತ ಶಾಲೆಗಳ ಶಿಕ್ಷಕರು

ಅನುದಾನ ರಹಿತ ಶಾಲೆಗಳ ಶಿಕ್ಷಕರಿಗೆ ತಲಾ 5,000 ರೂ. ಪರಿಹಾರ ನೀಡಲಾಗುವುದು. ಇದಕ್ಕಾಗಿ ಸುಮಾರು 100 ಕೋಟಿ ರೂ. ವೆಚ್ಚವಾಗಲಿದೆ.

  1. ನ್ಯಾಯವಾದಿಗಳಿಗೆ ಪರಿಹಾರ

ನ್ಯಾಯವಾದಿಗಳ ಕಲ್ಯಾಣ ನಿಧಿಗೆ ರೂ 5 ಕೋಟಿ ನೀಡಲು ತೀರ್ಮಾನಿಸಲಾಗಿದೆ. ಈ ನಿಧಿಯನ್ನು ಅಗತ್ಯವಿರುವ ನ್ಯಾಯವಾದಿಗಳು ಮತ್ತು ಬೆಂಚ್ ಗುಮಾಸ್ತರುಗಳಿಗೆ ಉಪಯೋಗಿಸಲಾಗುವುದು.

  1. ಕೈಗಾರಿಕೆಗಳಿಗೆ ಪರಿಹಾರ

MSME ಕೈಗಾರಿಕೆಗಳಿಗೆ ಮೇ ಮತ್ತು ಜೂನ್ 2021ರ ಮಾಹೆಗಳ ಮಾಸಿಕ ವಿದ್ಯುತ್ ನಿಗಧಿತ ಶುಲ್ಕಗಳನ್ನು (Fixed charges) ಪಾವತಿಸುವುದರಿಂದ ವಿನಾಯಿತಿಯನ್ನು ನೀಡಲಾಗುವುದು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ರೂ 114.70 ಕೋಟಿ ಹೆರೆಯಾಗುತ್ತದೆಂದು ಅಂದಾಜಿಸಿದೆ.

MSME ಕೈಗಾರಿಕೆಗಳನ್ನು ಹೊರತುಪಡಿಸಿ ಇತರೆ ಕೈಗಾರಿಕೆಗಳ ಗ್ರಾಹಕರು ಮೇ ಮತ್ತು ಜೂನ್ 2021ರ ಮಾಹೆಗಳ ಮಾಸಿಕ ವಿದ್ಯುತ್ ನಿಗಧಿತ ಶುಲ್ಕ ಪಾವತಿಸುವುದನ್ನು ದಿನಾಂಕ:30-7-2021 ರವರೆಗೆ ಮುಂದೂಡಲಾಗುವುದು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ರೂ 5.56 ಕೋಟಿ ಹೊರೆಯಾಗುತ್ತದೆಂದು ಅಂದಾಜಿಸಿದೆ.

ಈ ಎರಡು ಕ್ರಮಗಳಿಂದ ಸುಮಾರು 3 ಲಕ್ಷ ಕೈಗಾರಿಕೆಗಳಿಗೆ ಅನುಕೂಲವಾಗಲಿದೆ.