Categories
ಬೆಂಗಳೂರು

50 ಸಾವಿರ ಚರ್ಮ, ಕುಶಲಕರ್ಮಿಗಳಿಗೆ ಆರ್ಥಿಕ ನೆರವು!

  • -10ಕೋಟಿ ರೂ ಬಿಡುಗಡೆ
  • ಸಚಿವ ಬಿ.ಶ್ರೀರಾಮುಲು ಸಾಥ್

NAMMUR EXPRESS
ಬೆಂಗಳೂರು: ಮಹಾಮಾರಿ ಕೊರೊನಾ ರೋಗವನ್ನು ನಿಯಂತ್ರಣಗೊಳಿಸಲು ಎರಡನೇ ಬಾರಿಗೆ ಜಾರಿಗೊಳಿಸಲಾಗಿರುವ ಲಾಕ್‌ಡೌನ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ರಸ್ತೆ ಬದಿ, ಹೋಟೆಲ್ , ಬಸ್ ನಿಲ್ದಾಣ ಮತ್ತಿತರ ಪ್ರದೇಶಗಳಲ್ಲಿ ಚರ್ಮಗಾರಿಕೆಯಲ್ಲಿ ತೊಡಗಿಸಿಕೊಂಡು ಪಾದರಕ್ಷೆ ಮತ್ತಿತರ ಚರ್ಮ ವಸ್ತುಗಳ ದುರಸ್ತಿ, ಪಾಲಿಷ್ ಮಾಡುವ ಕಾಯಕದಲ್ಲಿ ತೊಡಗಿರುವ 50,000 ಚರ್ಮ ಕುಶಲಕರ್ಮಿಗಳೂ ಆರ್ಥಿಕ ಸಂಕಷ್ಟದಲ್ಲಿರುವುದನ್ನು ಮನಗಂಡು ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರು ತಾತ್ಕಾಲಿಕ ಪರಿಹಾರವಾಗಿ ಈ ಕುಟುಂಬಗಳಿಗೆ ತಲಾ ಎರಡು ಸಾವಿರ ರೂ ಆರ್ಥಿಕ ನೆರವು ನೀಡಲು 10 ಕೋಟಿ ರೂ ಬಿಡುಗಡೆ ಮಾಡಿದ್ದಾರೆ. ಪರಿಹಾರಧನ ನೀಡಲು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ ಸಮಾಜ ಕಲ್ಯಾಣಇಲಾಖೆ ಸಚಿವರಾದ ಬಿ.ಶ್ರೀರಾಮುಲು ಅವರು ತಿಳಿಸಿದ್ದಾರೆ.


ಚರ್ಮ ಕುಶಲಕರ್ಮಿಗಳು ಆರ್ಥಿಕ ಸಂಕಷ್ಟದಲ್ಲಿದ್ದು, ಅವರಿಗೆ ನೆರವಾಗುವಂತೆ ತಾವು ಸಲ್ಲಿಸಿದ ಪ್ರಸ್ತಾವನೆಯನ್ನು ಕೂಡಲೇ ಸಕಾರಾತ್ಮಕವಾಗಿ ಸ್ಪಂದಿಸಿ, ಅನುಮೋದನೆ ನೀಡಿ ನೆರವಾಗಲು ಅನುದಾನವನ್ನೂ ಬಿಡುಗಡೆ ಮಾಡಿದ ಮುಖ್ಯಮಂತ್ರಿಗಳಿಗೆ ಸಮುದಾಯದ ಪರವಾಗಿ ಅಭಿನಂದಿಸುವುದಾಗಿ ಶ್ರೀರಾಮುಲು ಅವರು ತಿಳಿಸಿದ್ದಾರೆ.


ಈ ಪರಿಹಾರ ಹಣವನ್ನು ಸೇವಾ ಸಿಂಧು ಪೋರ್ಟಲ್ ಮೂಲಕ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿ, ಡಿಬಿಟಿ ಮುಖಾಂತರ ಪಾರದರ್ಶಕವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗುವುದು. ಡಾ. ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ (ಲಿಡ್ಕರ್ ) ಅಗತ್ಯ ಕ್ರಮವಹಿಸಲಾಗುತ್ತಿದ್ದು, ಫಲಾನುಭವಿಗಳು ದಿನಾಂಕ 3-6-2021 ರಿಂದ 15/6/2021 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಫಲಾನುಭವಿಗಳು ಪರಿಹಾರ ಧನವನ್ನು ಪಡೆಯಲು ಅರ್ಜಿಗಳನ್ನು ತಮ್ಮ ಮೊಬೈಲ್ ನಿಂದ/ ಬೆಂಗಳೂರು ಒನ್/ ಕರ್ನಾಟಕ ಒನ್ /ಗ್ರಾಮ ಒನ್/ಸಿಟಿಜನ್ ಸರ್ವೀಸ್ ಸೆಂಟರ್ ಕೇಂದ್ರಗಳ ಮೂಲಕ ಸಲ್ಲಿಸಬಹುದಾಗಿದೆ. ಲಿಡ್ಕರ್ ಸಂಸ್ಥೆಯ ಜಿಲ್ಲಾ ಸಂಯೋಜಕರು ಸಂಪೂರ್ಣ ಮಾಹಿತಿಯೊಂದಿಗೆ ಹೆಲ್ಪ್ ಡೆಸ್ಕ್ ನಂತೆ ಸಕ್ರಿಯವಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದ್ದು, ಫಲಾನುಭವಿಗಳಿಗೆ ಯೋಜನೆಯ ವಿವರ ಹಾಗೂ ಅರ್ಜಿ ಸಲ್ಲಿಸುವ ಬಗ್ಗೆ ಮಾರ್ಗದರ್ಶನ ನೀಡಲಿದ್ದಾರೆ. ಯಾವುದೇ ವಿಳಂಬ ಮಾಡದೇ ಈ ಅರ್ಜಿಗಳನ್ನು ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಕೂಡಲೇ ಪರಿಹಾರಧನವನ್ನು ಅವರ ಖಾತೆಗಳಿಗೆ ಜಮೆ ಮಾಡುವಂತೆ ಲಿಡ್ಕರ್ ಸಂಸ್ಥೆಗೆ ಸೂಚಿಸಲಾಗಿದೆ.

ಈ ಪರಿಹಾರ ಧನವನ್ನು ಸದ್ಬಳಕೆ ಮಾಡಿಕೊಂಡು ಜೀವನ ನಿರ್ವಹಣೆ ಮಾಡಲು ಮನವಿ ಮಾಡಿದ ಸಚಿವರು, ಇನ್ನು ಮುಂದೆಯೂ ತಮ್ಮ ಉದ್ಯೋಗ ಮುಂದುವರೆಸಲು ಮತ್ತು ಆರ್ಥಿಕವಾಗಿ ಸಧೃಡರಾಗಲು ಅವಶ್ಯಕವಿರುವ ಯೋಜನೆಗಳನ್ನು /ಕಾರ್ಯಕ್ರಮಗಳನ್ನು ಸರ್ಕಾರವು ನೀಡಲಿದೆ. ತಮ್ಮ ಸಂಕಷ್ಟಗಳಿಗೆ ಸ್ಪಂದಿಸಿ ಸದಾ ನಿಮ್ಮೊಂದಿಗೆ ನಮ್ಮ ಸರ್ಕಾರ ಇರಲಿದೆ. ಯಾವುದೇ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದು ಈ ಸಮುದಾಯಕ್ಕೆ ಅಭಯ ನೀಡಿದ ಶ್ರೀ ಬಿ. ಶ್ರೀರಾಮುಲು, ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ವೈಯಕ್ತಿಕ ಆರೋಗ್ಯ ರಕ್ಷಣೆ ಮಾಡಿಕೊಳ್ಳುವ ನಿಟ್ಟನಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು, ಮಾಸ್ಕ್ ಧರಿಸಿ, ವೈಯಕ್ತಿಕ ಸ್ಪಚ್ಚತೆ ಕಾಪಾಡಿಕೊಂಡು ಕೊರೊನಾ ನಿಯಂತ್ರಣಕ್ಕೆ ನೆರವಾಗುವಂತೆ ಸಚಿವರು ಮನವಿ ಮಾಡಿದ್ದಾರೆ.

Categories
ಬೆಂಗಳೂರು

ಆಸ್ಪತ್ರೆಗಳ ಬೆಡ್ ಕಾಯ್ದಿರಿಸುವ ಹೊಸ ತಂತ್ರಾಂಶ!

  • ಸಚಿವ ಅರವಿಂದ ಲಿಂಬಾವಳಿ ಅವರಿಂದ ಲೋಕಾರ್ಪಣೆ

NAMMUR EXPRESS
ಬೆಂಗಳೂರು: ಕೋವಿಡ್ ಸೊಂಕಿತರಿಗೆ ಇನ್ನು ಮುಂದೆ ಭೌತಿಕ ತಪಾಸಣಾ ಕೇಂದ್ರಗಳಿಂದ ಅಂದರೆ ಟ್ರಯಾಜಿಂಗ್ ಕೇಂದ್ರ ಗಳಿಂದ ಕೋವಿಡ್ ಆಸ್ಪತ್ರೆಗಳಲ್ಲಿ ಹಾಸಿಗೆಯನ್ನು ನೇರವಾಗಿ ಕಾಯ್ದಿರಿಸುವ ಸೌಲಭ್ಯವನ್ನ ಕಲ್ಪಿಸಲಾಗಿದೆ ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ ರೂಂ, ಕಾಲ್ ಸೆಂಟರ್ ನಿರ್ವಹಣೆ ಮತ್ತು ಸೋಂಕಿತರಿಗೆ ವೈದ್ಯಕೀಯ ಸಲಹೆ ವ್ಯವಸ್ಥೆಯ ಮೇಲ್ವಿಚಾರಣೆಯ ನೋಡಲ್ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.


ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಆರೋಗ್ಯ ಸೌಧದಲ್ಲಿ ಈ ಸಂಬಂಧ ಸಿದ್ಧಪಡಿಸಿರುವ ಹೊಸ ತಂತ್ರಾಂಶವನ್ನು ಲೋಕಾರ್ಪಣೆ ಮಾಡಿ ಮಾತನಾಡುತ್ತಿದ್ದರು. ಸಂಸದ ತೇಜಸ್ವಿ ಸೂರ್ಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ತಂತ್ರಾಂಶ ಸಿದ್ಧಪಡಿಸುವಲ್ಲಿ ವಿಶೇಷ ಆಸಕ್ತಿ ತೋರಿಸಿದ ತೇಜಸ್ವಿ ಸೂರ್ಯ ಅವರ ಸಹಕಾರಕ್ಕೆ ಧನ್ಯವಾದ ಅರ್ಪಿಸಿದ ಸಚಿವ ಅರವಿಂದ ಲಿಂಬಾವಳಿ, ಇತ್ತೀಚೆಗೆ ಟ್ರಯಾಜ್ ಮಾಡುತ್ತಿರುವ ಎಲ್ಲಾ ಕೋವಿಡ್ ಸೋಂಕಿತರಿಗೆ ಹೋಮ್ ಐಸೋಲೇಷನ್, ಕೋವಿಡ್ ಆರೈಕೆ ಕೇಂದ್ರ ಮತ್ತು ಆಸ್ಪತ್ರೆಗೆ ವಲಯಗಳ ನಿಯಂತ್ರಣ ಕೊಠಡಿಗಳು ಹಾಗೂ ಬಿಬಿಎಂಪಿಯ ಕೇಂದ್ರ ವಾರ್ ರೂಂನಲ್ಲಿರುವ ದೂರವಾಣಿ ಮೂಲಕ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು. ಅದರೀಗ ಆಸ್ಪತ್ರೆ ಅಥವಾ ಕೋವಿಡ್ ಆರೈಕೆ ಕೇಂದ್ರದಲ್ಲಿ ಹಾಸಿಗೆಯ ಹಂಚಿಕೆಗೆ ಪೂರ್ವಭಾವಿಯಾಗಿ ದೈಹಿಕ ಚಿಕಿತ್ಸೆಯ ಸರದಿ ನಿರ್ಧಾರವನ್ನು ನಿಧಾನವಾಗಿ ಅಳವಡಿಸಿಕೊಳ್ಳಲಾಗುತ್ತಿದೆ. ಟೆಲಿ ಟ್ರಯಾಜಿಂಗ್ನಲ್ಲಿ ರೋಗಿಗಳನ್ನು ಟ್ರಯಾಜ್ ಮಾಡುವ ಮೂಲಕ ಅವಲೋಕಿಸಿ, ಆಸ್ಪತ್ರೆಯಲ್ಲಿ ಕ್ರಿಟಿಕಲ್ ಬೆಡ್ ವ್ಯವಸ್ಥೆಯನ್ನು ಮಾಡಬಹುದಾಗಿದೆ ಎಂದು ಅವರು ತಿಳಿಸಿದರು. ಇದಕ್ಕೆ ಅನುಗುಣವಾಗಿ, ಬಿಬಿಎಂಪಿಯ ಕೋವಿಡ್ ಹಾಸ್ಪಿಟಲ್ ಬೆಡ್ ಮ್ಯಾನೇಜ್ಮೆಂಟ್ ಸಿಸ್ಟಮ್(CHBMS)ಅನ್ನು ಈಗ ನವೀಕರಿಸಲಾಗಿದೆ ಮತ್ತು ವಿವರವಾದ ಭೌತಿಕ ಚಿಕಿತ್ಸೆಯ ಸರದಿ ನಿರ್ಧಾರ ಘಟಕವನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ಸಂಯೋಜಿಸಲಾಗಿದೆ. ಭೌತಿಕ ಚಿಕಿತ್ಸೆಯ ಸರದಿ ನಿರ್ಧಾರ ಘಟಕವನ್ನು ಈಗ ನಗರದ 8 ವಲಯಗಳಲ್ಲಿ 16 ಭೌತಿಕ ಚಿಕಿತ್ಸೆಯ ಕೇಂದ್ರಗಳಲ್ಲಿ(Physical Triage Centre-PTC) ಬಳಸಬಹುದು. ಈ ಟ್ರಯಾಜ್ ಕೇಂದ್ರಗಳಿಗೆ ನೇರವಾಗಿ ಬರುವ ಕೋವಿಡ್ ಸೋಂಕಿತರಿಗೆ ಪ್ರಾಯೋಗಿಕವಾಗಿ ಮೌಲ್ಯಮಾಪನ ಮಾಡಿದ ನಂತರ ಹಾಸಿಗೆಗಳನ್ನು ನಿಯೋಜಿಸಲು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತವೆ. ಈ ಟ್ರಯಾಜ್ ಕೇಂದ್ರಗಳಲ್ಲಿ ಆಂಬ್ಯುಲೆನ್ಸ್ಗಳನ್ನು ಸಹ ಹೊಂದಿದ್ದು, ರೋಗಿಗಳನ್ನು ಆಸ್ಪತ್ರೆಗಳಿಗೆ ಸ್ಥಳಾಂತರಿಸಲು ಬಳಸಲಾಗುವುದು. ಕೋವಿಡ್ ಸೋಂಕಿತರು ಟ್ರಯಾಜ್ ಕೇಂದ್ರಗಳಿಗೆ ಬರಲು ಸಾಧ್ಯವಾಗದ ವೇಳೆ, ಅವರ ವೈದ್ಯಕೀಯ ಸ್ಥಿತಿಯ ಕಾರಣದಿಂದಾಗಿ ಆಂಬುಲೆನ್ಸ್ಗಳನ್ನು ಮೊಬೈಲ್ ಟ್ರಯಾಜ್ ಯುನಿಟ್ ಗಳಂತೆ ಬಳಸಿಕೊಂಡು ರೋಗಿಗಳ ಮನೆ ಬಾಗಿಲಿಗೆ ತೆರಳಿ ಟ್ರಯಾಜ್ ಮಾಡಬಹುದು ಎಂದರು.


ಟ್ರಯಾಜ್ ಸೆಂಟರ್ನಲ್ಲಿರುವ ರೋಗಿ ಮತ್ತು ವೈದ್ಯರೊಂದಿಗೆ ಸಂಭಾಷಣೆ ನಡೆಸಿದ ಸಚಿವ ಅರವಿಂದ ಲಿಂಬಾವಳಿ ಪ್ರತಿ ಟ್ರಯಾಜ್ ಸೆಂಟರ್ ಗಳಲ್ಲಿ ಕಂಪ್ಯೂಟರ್ ಮತ್ತು ಇಂಟರ್ನೆಟ್ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಪ್ರತಿ ಪಾಳಿಯಲ್ಲಿ 2 ವೈದ್ಯರು ಮತ್ತು 2 ಅರೆವೈದ್ಯರು ಇರುತ್ತಾರೆ. ಎಲ್ಲಾ ಟ್ರಯಾಜ್ ಸೆಂಟರ್ ಗಳನ್ನು ಆಮ್ಲಜನಕ ಹಾಸಿಗೆಗಳ ವ್ಯವಸ್ಥೆಯಿರುವ ಕನಿಷ್ಠ ಒಂದು ಕೋವಿಡ್ ಆರೈಕೆ ಕೇಂದ್ರಕ್ಕೆ ಅಟ್ಯಾಚ್ ಮಾಡಲಾಗಿರುತ್ತದೆ. ಇದಲ್ಲದೆ, ಟ್ರಯಾಜ್ ಸೆಂಟರ್ ಗಳಿಂದ ಬರುವ ಸೋಂಕಿತರಿಗೆ ಬೆಡ್ ಬ್ಲಾಕಿಂಗ್ ಮಾಡುವ ಸಲುವಾಗಿ ಪ್ರತ್ಯೇಕವಾಗಿ 26 ಆಸ್ಪತ್ರೆಗಳನ್ನು ಮ್ಯಾಪಿಂಗ್ ಮಾಡಲಾಗಿದೆ ಎಂದು ತಿಳಿಸಿದರು.ಕೋವಿಡ್ 19 ಸೋಂಕಿತರಿಗೆ ಟ್ರಯಾಜಿಂಗ್ ಕೇಂದ್ರಗಳಿಂದ ಆಸ್ಪತ್ರೆಗಳ ಬೆಡ್ ಕಾಯ್ದಿರಿಸುವ ಹೊಸ ತಂತ್ರಾಂಶ ಹೇಗೆ ಕಾರ್ಯನಿರ್ವಹಿಸಲಿದೆ ಎಂದು 8 ಟ್ರಯಾಜ್ ಕೇಂದ್ರಗಳ ಮೂಲಕ ಕಳೆದ 3 ದಿನಗಳಿಂದ ಪರೀಕ್ಷಿಸಲಾಗಿದೆ. ಇದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಇದರಿಂದ ಟ್ರಯಾಜ್ ಕೇಂದ್ರಗಳಲ್ಲಿ 936 ರೋಗಿಗಳನ್ನು ದೈಹಿಕವಾಗಿ ಪರೀಕ್ಷಿಸಲು ಸಾಧ್ಯವಾಯಿತು, ಅವರಲ್ಲಿ 678 ರೋಗಿಗಳನ್ನು ಮನೆ ಪ್ರತ್ಯೇಕತೆಗೆ ಉಲ್ಲೇಖಿಸಲಾಗಿದೆ. 186 ರೋಗಿಗಳನ್ನು ಕೋವಿಡ್ ಆರೈಕೆ ಕೇಂದ್ರಗಳಿಗೆ ಮತ್ತು 72 ರೋಗಿಗಳನ್ನು ವಿವಿಧ ಆಸ್ಪತ್ರೆಗಳಲ್ಲಿ ಎಚ್ಡಿಯು/ಐಸಿಯು ಹಾಸಿಗೆಗಳಲ್ಲಿ ದಾಖಲಿಸಲಾಗಿದೆ ಎಂದು ಅವರು ವಿವರ ನೀಡಿದರು.


ಆಸ್ಪತ್ರೆಯಲ್ಲಿ ಪ್ರವೇಶ ಪಡೆಯಲು ಬಯಸುವ ಎಲ್ಲಾ ರೋಗಿಗಳಿಗೆ ಪೂರ್ವ ಅವಶ್ಯಕತೆಯಾಗಿ ಕಡ್ಡಾಯ ದೈಹಿಕ ಪರೀಕ್ಷೆಯತ್ತ ಸಾಗಲು ಬಿಬಿಎಂಪಿ ಯೋಜಿಸಿದೆ. ಕಡಿಮೆ ವಿಧಾನದಿಂದ ಮಧ್ಯಮ ಪ್ರಕರಣದ ಆಡಳಿತದವರೆಗಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಸೂಕ್ತ ಸಂಖ್ಯೆಯ ದೈಹಿಕ ಟ್ರಾಯಾಗ್ ಕೇಂದ್ರಗಳನ್ನು ಸಕ್ರಿಯಗೊಳಿಸಲಾಗುತ್ತದೆ ಮತ್ತು ಯಾವುದೇ ಪ್ರಕರಣಗಳಲ್ಲಿ ಹೆಚ್ಚಳವಾದರೆ ದೈಹಿಕ ಟ್ರಾಯಾಗ್ ಕೇಂದ್ರಗಳನ್ನು ಶೀಘ್ರವಾಗಿ ಹೆಚ್ಚಿಸಲಾಗುತ್ತದೆ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದರು. ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ , ರಾಜ್ಯ ಕೋವಿಡ್ ವಾರ್ ರೂಮ್ ಉಸ್ತುವಾರಿ ವಿ.ಪೊನ್ನುರಾಜ್ , BBMP ವಾರ್ ರೂಮ್ ನೋಡಲ್ ಅಧಿಕಾರಿ ತುಷಾರ್ ಗಿರಿನಾಥ್, ಕುಮಾರ್ ಪುಷ್ಕರ್, ಬಿಬಿಎಂಪಿ ವಿಶೇಷ ಆಯುಕ್ತ ರಣದೀಪ್, ಡಾ|| ಭಾಸ್ಕರ್ ಸೇರಿದಂತೆ ಉನ್ನತ ಅಧಿಕಾರಿಗಳು ಹಾಜರಿದ್ದರು.

Categories
ಬೆಂಗಳೂರು

ಬೆಂಗಳೂರು ನಗರದಲ್ಲಿ ಮಳೆ ವಿಕೋಪ ತಡೆಯಲು ಪೂರ್ವ ಸಿದ್ಧತೆ ಪರಿಶೀಲಿಸಿದ ಮುಖ್ಯಮಂತ್ರಿ

209 ಸೂಕ್ಷ್ಮ, ಅತಿ ಸೂಕ್ಷ್ಮ ಸ್ಥಳಗಳಲ್ಲಿ ಶಾಶ್ವತ ಪರಿಹಾರ ರೂಪಿಸಲು ನಿರ್ದೇಶನ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಬೆಂಗಳೂರು ನಗರದಲ್ಲಿ ಮಳೆ ವಿಕೋಪ ತಡೆಯಲು ಕೈಗೊಳ್ಳಲಾಗಿರುವ ಮುಂಜಾಗ್ರತಾ ಕ್ರಮಗಳ ಕುರಿತು ಪರಿಶೀಲನೆ ನಡೆಸಿದರು.

8 ವಲಯಗಳಲ್ಲಿ ಶಾಶ್ವತ ನಿಯಂತ್ರಣ ಕೊಠಡಿಗಳಿದ್ದು, 63 ತಾತ್ಕಾಲಿಕ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ದಿನದ 24 ಗಂಟೆಯೂ ಈ ನಿಯಂತ್ರಣಕೊಠಡಿಗಳು ಕಾರ್ಯನಿರ್ವಹಿಸಲಿದ್ದು, ಅನ್-ಸ್ಕಿಲ್ಡ್ ಕೂಲಿಗಳು, ಮೇಲ್ವಿಚಾರಕರು, ಮತ್ತು ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗೆ ಅಗತ್ಯ ಸಲಕರಣೆಗಳನ್ನು ಸಂಗ್ರಹಿಸಲು ಕ್ರಮ ವಹಿಸಲಾಗುತ್ತಿದೆ.

ರಸ್ತೆ ಬದಿ ಮಳೆನೀರು ಚರಂಡಿಗಳ ಹೂಳು ತೆರವುಗೊಳಿಸುವುದು, ಅಡ್ಡಮೋರಿಗಳ ಹೂಳು ತೆಗೆಯುವುದು, ರಾಜ ಕಾಲುವೆಗೆ ಸಂಪರ್ಕಿಸುವ ಚರಂಡಿಗಳನ್ನು ಗುರುತಿಸಿ ಸುಸ್ಥಿತಿಯಲ್ಲಿಡಲು ಕ್ರಮ ವಹಿಸಲಾಗಿದೆ.

ದೊಡ್ಡ ಕಾಲುವೆಗಳಲ್ಲಿ 26 ವಾಟರ್ ಲೆವೆಲ್ ಸೆನ್ಸರ್ ಗಳನ್ನು ಅಳವಡಿಸಲಾಗಿದೆ.

ಬೆಂಗಳೂರು ಮೇಘ ಸಂದೇಶ ಆಪ್ ನಲ್ಲಿ ಮಳೆಯ ಪ್ರಮಾಣದ ಮಾಹಿತಿ ಲಭ್ಯ. ನೀರು ಸಂಗ್ರಹವಾಗಿರುವ ಸ್ಥಳಗಳು, ಜನರಿಗೆ ಸುರಕ್ಷಿತ ಮಾರ್ಗ ಬಳಕೆಯ ಕುರಿತು ಮಾಹಿತಿ ನೀಡುತ್ತದೆ.

209 ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸ್ಥಳಗಳ ಗುರುತಿಸಲಾಗಿದೆ. (58 ಅತಿ ಸೂಕ್ಷ್ಮ, 151 ಸೂಕ್ಷ್ಮ ಪ್ರದೇಶ) ಈ ಪ್ರದೇಶಗಳಲ್ಲಿ ಪ್ರವಾಹ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ರೂಪಿಸುವಂತೆ ಸೂಚಿಸಿದರು.

ಬೆಂಗಳೂರು ನಗರದಲ್ಲಿ ತಡೆಗೋಡೆ ಇರುವ 440 ಕಿ.ಮೀ. ಉದ್ದದ ರಾಜಕಾಲುವೆ ಪ್ರದೇಶಗಳ ವಾರ್ಷಿಕ ನಿರ್ವಹಣೆಗೆ ಕ್ರಮ ವಹಿಸಲಾಗಿದೆ. ನಗರದ ಕೆರೆಗಳನ್ನು ದೈನಂದಿನ ಆಧಾರದಲ್ಲಿ ನಿರ್ವಹಿಸಲಾಗುತ್ತಿದ್ದು, ಮಳೆನೀರು ರಾಜಕಾಲುವೆಗಳ ಮೂಲಕ ಕೆರೆಗಳಿಗೆ ಹರಿಯುವಂತೆ ಮಾಡುವುದರಿಂದ ಪ್ರವಾಹ ತಪ್ಪಿಸಬಹುದು ಎಂದು ಸಲಹೆ ನೀಡಿದರು.

ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಕಂದಾಯ ಸಚಿವ ಆರ್. ಅಶೋಕ್, ವಸತಿ ಸಚಿವ ವಿ.ಸೋಮಣ್ಣ, ಅರಣ್ಯ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ, ಅಬಕಾರಿ ಸಚಿವ ಗೋಪಾಲಯ್ಯ, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣರೆಡ್ಡಿ, ಬಿಬಿಎಂಪಿ ಆಡಳಿತಾಧಿಕಾರಿ ಹಾಗೂ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ರಾಜ್ಯದ ಎಲ್ಲಾ ಸುದ್ದಿ, ಜಾಹೀರಾತಿಗಾಗಿ “NAMMUR EXPRESS” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ, ಸಬ್ಸ್ಕ್ರೈಬ್ ಆಗಿ. ವಾಟ್ಸಾಪ್ನಲ್ಲಿ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು, ಊರು, ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು..!.

Categories
ಅಂತಾರಾಷ್ಟ್ರೀಯ ಸುದ್ದಿ

ಬಾಡಿಗೆದಾರರಿಗೆ ಕೇಂದ್ರದ ಮಹತ್ವದ ಘೋಷಣೆ!

  • ಇನ್ನು ಮನೆ, ಕಚೇರಿ ಅಡ್ವಾನ್ಸ್ ಹಣ ಕಡಿಮೆ
  • ಬಾಡಿಗೆ ಮನೆಗೆ 2 ತಿಂಗಳು, ವಾಣಿಜ್ಯಕ್ಕೆ 6 ತಿಂಗಳ ಹಣ
  • ಜಾಗದ ಮಾಲೀಕ ಕಿರಿಕಿರಿ ಮಾಡಿದ್ರೆ ಕ್ರಮ


ನವದೆಹಲಿ: ಮನೆ ಬಾಡಿಗೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಹೊಸ ಕಾಯ್ದೆ ರೂಪಿಸಲಾಗಿದೆ. ಮನೆ ಬಾಡಿಗೆಗೆ 2 ತಿಂಗಳ ಬಾಡಿಗೆ ಅಡ್ವಾನ್ಸ್, ವಾಣಿಜ್ಯ ಕಾರಣಕ್ಕೆ 6 ತಿಂಗಳ ಬಾಡಿಗೆ ಹಣ ಅಡ್ವಾನ್ಸ್ ನೀಡುವ ವ್ಯವಸ್ಥೆ ಜಾರಿಗೆ ಬರಲಿದೆ.
ಮಾದರಿ ಬಾಡಿಗೆ ಕಾಯ್ದೆ ರೂಪಿಸಿದ್ದು, ಕರೋನಾ ತುರ್ತು ಪರಿಸ್ಥಿತಿ ಕಷ್ಟದ ಕಾರಣ ಖಾಸಗಿ ವಲಯಕ್ಕೆ ಪ್ರೋತ್ಸಾಹ ನೀಡುವ ಉದ್ದೇಶ ಹೊಂದಲಾಗಿದೆ.
ಬಾಡಿಗೆ ಮನೆ ಮಾಲೀಕರು ಇನ್ನು ಮುಂದೆ ಎರಡು ತಿಂಗಳ ಬಾಡಿಗೆಯನ್ನು ಮಾತ್ರ ಮುಂಗಡ ಪಡೆಯಬೇಕಿದೆ. ಬಾಡಿಗೆ ಪ್ರಾಧಿಕಾರ ರಚನೆ ಮಾಡಲಿದ್ದು, ಮನೆ ಮತ್ತು ವಾಣಿಜ್ಯ ಕಟ್ಟಡ ಬಾಡಿಗೆ ಒಪ್ಪಂದಗಳನ್ನು ಪ್ರಾಧಿಕಾರಕ್ಕೆ ನೀಡಬೇಕು. ಪ್ರಾಧಿಕಾರ ಎಲ್ಲಾ ವ್ಯಾಜ್ಯಗಳ ಇತ್ಯರ್ಥಕ್ಕೆ ವ್ಯವಸ್ಥೆ ಕಲ್ಪಿಸುತ್ತದೆ. ಈ ಮೂಲಕ ಕೇಂದ್ರ ಮಹತ್ವದ ಹೆಜ್ಜೆ ಇಟ್ಟಿದೆ. ಬಾಡಿಗೆ ಒಪ್ಪಂದ ಮುಗಿದ ನಂತರ ಮನೆ ಖಾಲಿ ಮಾಡದಿದ್ದರೆ ಮನೆ ಮಾಲೀಕರು 2 ತಿಂಗಳ ಅವಧಿಗೆ ಬಾಡಿಗೆ ಹೆಚ್ಚಿಸಬಹುದು. ಎರಡು ತಿಂಗಳ ನಂತರ ಖಾಲಿ ಮಾಡದಿದ್ದರೆ ನಾಲ್ಕು ಪಟ್ಟು ಬಾಡಿಗೆ ಹೆಚ್ಚಳ ಮಾಡಬಹುದು. ಬಾಡಿಗೆದಾರನ ಮನೆಗೆ ಮಾಲೀಕ ಏಕಾಏಕಿ ಪ್ರವೇಶಿಸುವಂತಿಲ್ಲ ಎಂದು ಹೇಳಲಾಗಿದೆ.ಇದು ಹೊಸ ಸಂಚಲನ ಮೂಡಿಸಿದೆ.
ರಾಜ್ಯದ ಎಲ್ಲಾ ಸುದ್ದಿ, ಜಾಹೀರಾತಿಗಾಗಿ “NAMMUR EXPRESS” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ, ಸಬ್ಸ್ಕ್ರೈಬ್ ಆಗಿ. ವಾಟ್ಸಾಪ್ನಲ್ಲಿ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು, ಊರು, ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು..!.

Categories
ಮಲ್ನಾಡ್

ತೀರ್ಥಹಳ್ಳಿಯಲ್ಲಿ ಕಳ್ಳ ಮದ್ಯ ಮಾರಾಟಕ್ಕೆ ಬ್ರೇಕ್!?

  • ಕರೋನಾ ತುರ್ತು ವೇಳೆ ಅಧಿಕಾರಿಗಳ ದಾಳಿ
  • 2 ಕಡೆ ಮದ್ಯ ವಶ: ಮದ್ಯ ಮಾರಿದ್ರೆ ಹುಷಾರ್
  • ಹಳ್ಳಿಗಳ ಮೇಲೆ ಈಗ ಅಬಕಾರಿ ಅಧಿಕಾರಿಗಳ ಕಣ್ಣು

NAMMUR EXPRESS
ತೀರ್ಥಹಳ್ಳಿ: ಕರೋನಾ ಸಂಕಷ್ಟದಲ್ಲಿ ಹಣ ಇಲ್ಲದೆ ಜನ ಬೀದಿಯಲ್ಲಿ ಸಾಯುತ್ತಿದ್ದಾರೆ. ಚಿಕಿತ್ಸೆ ಇಲ್ಲದೆ ಪರದಾಟ ನಡೆಸುತ್ತಿದ್ದಾರೆ. ಈ ನಡುವೆ ಲಾಕ್ ಡೌನ್ ಹಿನ್ನೆಲೆ ಎಲ್ಲಾ ಮದ್ಯದಂಗಡಿ ಬಂದ್ ಮಾಡಲಾಗಿದೆ. ಆದ್ರೆ ಹಳ್ಳಿಗಳಲ್ಲಿ ಅಂಗಡಿ, ಗೂಡಂಗಡಿ, ಚಿಕನ್ ಅಂಗಡಿಗಳಲ್ಲಿ ಅಕ್ರಮ ಮದ್ಯ ಎಂಆರ್ಪಿಗೂ ಹೆಚ್ಚು ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ಮನೆ ಮನೆಯಲ್ಲಿ ನೆಮ್ಮದಿ ಮರೆಯಾಗಿದೆ. ಈ ನಡುವೆ ತೀರ್ಥಹಳ್ಳಿ ಅಬಕಾರಿ ಇನ್ಸ್ಪೆಕ್ಟರ್ ಅಮಿತ್ ಕುಮಾರ್ ಹಳ್ಳಿ ಹಳ್ಳಿಯಲ್ಲಿ ದಾಳಿ ಮಾಡಿ ಅಕ್ರಮ ಮದ್ಯ ಮಾರಾಟ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ತೆಗೆದುಕೊಂಡಿದ್ದಾರೆ.


ಬುಧವಾರ ಎರಡು ಕಡೆ ಅಕ್ರಮ ಮದ್ಯ ವಶಪಡಿಸಿಕೊಂಡು ಕ್ರಮ ತೆಗೆದುಕೊಳ್ಳುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಜಿಲ್ಲಾ ಅಬಕಾರಿ ಉಪ ಆಯುಕ್ತರಾದ ಕ್ಯಾಪ್ಶನ್ ಅಜಿತ್ ಕುಮಾರ್ ಮಾರ್ಗದರ್ಶನದಲ್ಲಿ ಅಬಕಾರಿ ಉಪ ಅಧೀಕ್ಷಕರು ತೀರ್ಥಹಳ್ಳಿ ಉಪ ವಿಭಾಗದ ಸಂತೋಷ್ ಕುಮಾರ್.ಎಲ್.ತಿಪ್ಪಣ್ಣನವರವರ ನೇತೃತ್ವದಲ್ಲಿ, ತೀರ್ಥಹಳ್ಳಿ ವಲಯ ಮತ್ತು ಉಪವಿಭಾಗ ಕಛೇರಿಯ ಸಿಬ್ಬಂದಿಗಳಾದ ಶಕೀಲ್, ರಾಘವೇಂದ್ರ, ಮಲಿಕ್ ಮತ್ತು ವಾಹನ ಚಾಲಕ ಕಿರಣ್ ಅವರೊಂದಿಗೆ ಖಚಿತ ಮಾಹಿತಿ ಮೇರೆಗೆ ಬಂದ್ಯಾ ಗ್ರಾಮದ ಮಹಾಬಲ ಬಿನ್ ಸೀನನಾಯ್ಕ ಅವರ ವಾಸದ ಮನೆಯ ಮೇಲೆ ದಾಳಿ ಮಾಡಿ ಶೋಧಿಸಿದಾಗ 10.08 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ನಿರೀಕ್ಷಕರಾದ ಅಮಿತ್ ಕುಮಾರ್‌.ಎಸ್.ಎಂ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಸಂತೆಹಕ್ಲು- ಮಲ್ಲಾಪುರ ಗ್ರಾಮದ ವೆಂಕಟೇಶ ಬಿನ್ ಭೈರಪ್ಪ ಅವರ ವಾಸದ ಮನೆಯ ಮೇಲೆ ದಾಳಿ ಮಾಡಿ 11.52 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ.
ಕರೋನಾ ಹಿನ್ನೆಲೆ ಮನೆಗಳಲ್ಲಿ ನೆಮ್ಮದಿಯನ್ನು ಅಕ್ರಮ ಮದ್ಯ ತೆಗೆಯುತ್ತಿದೆ. ದುಡಿದ ಹಣ ಸಂಪೂರ್ಣ ಕುಡಿತಕ್ಕೆ ಬಳಕೆಯಾಗುತ್ತಿದೆ ಎಂದು ನಮ್ಮೂರ್ ಎಕ್ಸ್ಪ್ರೆಸ್ ವಿಶೇಷ ವರದಿ ಪ್ರಕಟ ಮಾಡಿತ್ತು. ಅಬಕಾರಿ ನಿರೀಕ್ಷಕರಾದ ಅಮಿತ್ ಕುಮಾರ್‌ ಅವರ ಜತೆ ಮಾತುಕತೆ ಕೂಡ ನಡೆಸಿತ್ತು. ಇದೀಗ ಇಲಾಖೆ ಖಡಕ್ ಕ್ರಮ ತೆಗೆದುಕೊಳ್ಳುತ್ತಿದೆ.


ರಾಜ್ಯದ ಎಲ್ಲಾ ಸುದ್ದಿ, ಜಾಹೀರಾತಿಗಾಗಿ “NAMMUR EXPRESS” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ, ಸಬ್ಸ್ಕ್ರೈಬ್ ಆಗಿ. ವಾಟ್ಸಾಪ್ನಲ್ಲಿ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು, ಊರು, ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು..!.

Categories
ಮಲ್ನಾಡ್

ಏನ್ ಮಾಡಿದ್ರು ಕಡಿಮೆಯಾಗ್ತಿಲ್ಲ ಕರೋನಾ!

  • ಸಿಎಂ ತವರು ಶಿವಮೊಗ್ಗದಲ್ಲಿ ಕರೋನಾ ಅಟ್ಟಹಾಸ
  • ದಿನ ನಿತ್ಯ ಹತ್ತಾರು ಸಾವು, ಸಾವಿರಾರು ಕೇಸ್
  • ಅರೋಗ್ಯ ಸೌಲಭ್ಯ ಕೊರತೆ ಕಾರಣ..?

NAMMUR EXPRESS
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಗುರುವಾರ 793 ಜನರಲ್ಲಿ ಸೋಂಕು ಪತ್ತೆಯಾಗಿದ್ದು12 ಮಂದಿ ಸಾವನ್ನು ಕಂಡಿದ್ದಾರೆ. ಆದ್ರೆ ಪ್ರಕರಣ, ಸಾವಿನ ಸಂಖ್ಯೆ ಕಡಿಮೆ ಆಗಿಲ್ಲ.
ಜನ ಹೊರ ಬಾರದ ಕಾರಣ ಕರೋನಾ ಟೆಸ್ಟ್ ಮಾಡಿಸಿಲ್ಲ. ಆದರೂ ಕೇಸ್ ಕಡಿಮೆ ಆಗಿಲ್ಲ.
ಶಿವಮೊಗ್ಗ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 6861 ಆಗಿದೆ. ಬುಧವಾರ ಜಿಲ್ಲೆಯಲ್ಲಿ 12 ಜನ ಸೋಂಕಿಗೆ ಕೊನೆಯುಸಿರೆಳೆದಿದ್ದಾರೆ. ಇದರಿಂದ ಇದುವರೆಗೆ ಜಿಲ್ಲೆಯಲ್ಲಿ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 832ಕ್ಕೇರಿದೆ‌.
ಭಾರೀ ಬಂದೋಬಸ್ತ್! ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲೂಕಲ್ಲು ಆಡಳಿತ ಮತ್ತು ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಎಲ್ಲಾ ಕಡೆ ಅಗತ್ಯ ವಸ್ತು ಬಿಟ್ಟರೆ ಯಾರಿಗೂ ಅವಕಾಶ ನೀಡುತ್ತಿಲ್ಲ. ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಬುಧವಾರ ಎಷ್ಟು ಕೇಸ್?: ಶಿವಮೊಗ್ಗ 285,ಭದ್ರಾವತಿ 150,ಶಿಕಾರಿಪುರ 87,ತೀರ್ಥಹಳ್ಳಿ 49,ಸೊರಬ 51,ಹೊಸನಗರ 76,ಸಾಗರ 69,ಇತರೆ ಜಿಲ್ಲೆ 26.
ಕರೋನಾ ಅಲೆಯಲ್ಲಿ ವಯೋವೃದ್ಧರು, ಯುವ ಜನತೆ, ಮಕ್ಕಳು ಬಲಿಯಾಗುತ್ತಿದ್ದಾರೆ. ಹೀಗಾಗಿ ಎಲ್ಲಾ ಕಡೆ ಜನ ಕರೋನಾ ನಿಯಮ ಪಾಲಿಸಬೇಕು. ಇಲ್ಲವಾದರೆ ಮತ್ತಷ್ಟು ಸಂಕಷ್ಟ ಎದುರಿಸಬೇಕಿದೆ.

Categories
ಮಲ್ನಾಡ್

300 ಜನರಿಗೆ ಇಂದಿರಾ ಕ್ಯಾಂಟೀನ್ ಊಟ!

  • ತೀರ್ಥಹಳ್ಳಿಯಲ್ಲಿ ಮೊದಲ ದಿನವೇ ಉತ್ತಮ ಸೇವೆ
  • ಸರಕಾರ, ಆರಗ ವಿರುದ್ಧ ಕಿಮ್ಮನೆ ಗುಡುಗು
  • ಬಡ ಜನರ ನೆರವಿಗೆ ಬಂದ ನಾಯಕರ ತಂಡ!

ತೀರ್ಥಹಳ್ಳಿ: ಬಡವರು, ನಿರ್ಗತಿಕರು, ಕಾರ್ಮಿಕರಿಗೆ ಹಸಿವು ನೀಗಿಸುವ ಇಂದಿರಾ ಕ್ಯಾಂಟೀನ್ ಅನ್ನು ತೀರ್ಥಹಳ್ಳಿಯ ಸರ್ವ ಜನೋ ಸುಖಿನೋ ಭವತು ಸಂಘಟನೆ ಬುಧವಾರ ಶುರು ಮಾಡಿದೆ.


ತೀರ್ಥಹಳ್ಳಿಯ ಮುಖ್ಯ ಬಸ್ ನಿಲ್ದಾಣದ ಸಮೀಪದ ಕಾರ್ ಸ್ಟಾಂಡ್ ಮುಂಭಾಗದಲ್ಲಿ ಇಂದಿರಾ ಕ್ಯಾಂಟೀನ್ ಬುಧವಾರದಿಂದ ಶುರುವಾಗಿದ್ದು ಮೊದಲ ದಿನವೇ 300ಕ್ಕೂ ಹೆಚ್ಚು ಮಂದಿ ಮಧ್ಯಾಹ್ನದ ಊಟ,ಬೆಳಗ್ಗಿನ ಉಪಹಾರ ಸ್ವೀಕರಿಸಿದರು.
ಕಾಂಗ್ರೆಸ್ ನಾಯಕರ ಉಸ್ತುವಾರಿಯಲ್ಲಿ ತಾಲೂಕಿನ ಎಲ್ಲಾ ಪಕ್ಷ, ಜಾತಿ, ಧರ್ಮ, ನಾಯಕರು, ಸಂಘಟನೆಗಳ ಸಹಕಾರದಿಂದ ಈ ಯೋಜನೆ ಆರಂಭಗೊಂಡಿದೆ.
ಕ್ಯಾಂಟೀನ್ ಉದ್ಘಾಟನೆ ಮಾಡಿದ ಕಿಮ್ಮನೆ!: ದೇಶದಲ್ಲಿ 50 ಕೋಟಿ ಜನ ಸಂಕಷ್ಟದಲ್ಲಿದ್ದಾರೆ. ಕರೋನಾ ತುರ್ತು ವೇಳೆ ಯಾವುದೇ ಚುನಾವಣೆ ಸಭೆ ಸಮಾರಂಭದ ಅವಶ್ಯಕತೆ ಇರಲಿಲ್ಲ.ಆದರೆ ರಾಜ್ಯದಲ್ಲಿ ದುರಾಡಳಿತದ ಮೂಲಕ ಎಲ್ಲವೂ ನಡೆದು ಹೋಗಿದ್ದು,ಕರೋನಾ ವ್ಯಾಪಿಸಿದೆ. ಜನ ಬೀದಿ ಹೆಣವಾಗುತ್ತಿದ್ದಾರೆ. ಆದರೆ ಮೋದಿಗೆ ರಾಜಕೀಯ ಬಿಟ್ಟು ಯಾವುದೂ ಬೇಕಿಲ್ಲ.

ಸರ್ಕಾರಿ ಆಸ್ಪತ್ರೆಯ ಬಳಿ ಸಮಾನ ಮನಸ್ಕರು ಉಚಿತ ಊಟ ಉಪಹಾರ ನೀಡುವ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲಿ ಬಿಜೆಪಿಯವರು ಮಾತ್ರ ಸೇರಿಕೊಂಡರು. ನಾನೇ ಹೋಗಿ ವಿನಂತಿಸಿದರೂ ಅವಕಾಶ ನೀಡಲಿಲ್ಲ ಆ ಕಾರಣಕ್ಕಾಗಿ ನಾವು ಪ್ರತ್ಯೇಕವಾಗಿ ಇಂದಿರಾ ಕ್ಯಾಂಟೀನ್ ತೆರೆಯಬೇಕಾಯಿತು. ಕರೋನಾ ನಿಯಂತ್ರಣದಲ್ಲಿ ಸ್ಥಳೀಯ ಶಾಸಕರು ವಿಫಲರಾಗಿದ್ದಾರೆ. ಯಾರನ್ನೂ ಅವರು ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ. ಕಳೆದ ಬಾರಿ ಕಿಟ್ ವಿತರಣೆ ಮಾಡಲು ರಂಗಮಂದಿರ ನೀಡಲಿಲ್ಲ. ಈ ಬಾರಿ ಜ್ಞಾನೇಂದ್ರರವರಿಗೆ ಅವಕಾಶ ಕಲ್ಪಿಸಲಾಗಿದೆ. ಬಿಜೆಪಿಗರಿಂದ ಕರೋನಾ ಬರುವುದಿಲ್ಲವೇ?. ಶಿವಮೊಗ್ಗದಲ್ಲಿ ಒಂದೇ ದಿನ 47 ಜನ ಸತ್ತು ಹೋಗಿದ್ದಾರೆ. ಸಂಜೆ 14 ಜನರ ಲೆಕ್ಕ ಕೊಟ್ಟಿದ್ದಾರೆ. ಈ ರೀತಿಯ ಸುಳ್ಳು ಲೆಕ್ಕ ಕೊಟ್ಟು ಜನರನ್ನು ಮಂಗ ಮಾಡುತ್ತಿದ್ದಾರೆ ಎಂದರು.


ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಸ್ತೂರು ಮಂಜುನಾಥ್, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಡುಬ ರಾಘವೇಂದ್ರ, ಯೂತ್ ಕಾಂಗ್ರೆಸ್ ಅಧ್ಯಕ್ಷ ಅಮರನಾಥ್ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಅಮ್ರಪಾಲಿ ಸುರೇಶ್, ವಿಲಿಯಂ, ‌ಬಾಳೇಹಳ್ಳಿ ಪ್ರಭಾಕರ್, ಹಾರೊಗೊಳಿಗೆ ಪದ್ಮನಾಬ್, ವಾದಿರಾಜ್ ಭಟ್, ಆದರ್ಶ್ ಹುಂಚದಕಟ್ಟೆ, ಪೂರ್ಣೇಶ್, ಸುಭಾಷ್ ಕುಲಾಲ್, ನಮ್ರತ್, ರತ್ನಾಕರ್ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ, ಮಹಿಳಾ ನಾಯಕಿಯರಾದ ಸುಶೀಲ ಶೆಟ್ಟಿ, ಗೀತಾ ರಮೇಶ್ ಶೆಟ್ಟಿ, ಹರೀಶ್ ಮಿಲ್ಕೇರಿ, ನಾಗರಾಜ್ ಪೂಜಾರಿ ಸೇರಿದಂತೆ ಹಲವರು ಹಾಜರಿದ್ದರು.


ಲಾಕ್ ಡೌನ್ ಮುಗಿಯುವವರೆಗೆ ಪ್ರತಿ ದಿನ ಉಪಹಾರ, ಊಟ ನೀಡಲಾಗುವುದು. ಎಲ್ಲಾ ಜನತೆ, ಸಂಘ ಸಂಸ್ಥೆಗಳು, ಎಲ್ಲಾ ಪಕ್ಷದ ನಾಯಕರು ಈ ಯೋಜನೆಗೆ ಕೈಜೋಡಿಸಬೇಕು ಎಂದು ಯುವ ನಾಯಕ ಮುಡುಬ ರಾಘವೇಂದ್ರ ಮನವಿ ಮಾಡಿದ್ದಾರೆ.

Categories
ಮಲ್ನಾಡ್

ಎಕ್ಸಲೆಂಟ್ ಕೋಚಿಂಗ್ ಸೆಂಟರ್, ತೀರ್ಥಹಳ್ಳಿ

CET, NEET ಆನ್ಲೈನ್ ಕೋಚಿಂಗ್..!
ಹೆಸರಾಂತ ಸಂಸ್ಥೆ ಎಕ್ಸಲೆಂಟ್ ಕೋಚಿಂಗ್ ಸೆಂಟರ್!
ಪ್ರಥಮ ಪಿಯು ಪಾಸಾದವರಿಗೆ ಅಇಖಿ ಕೋಚಿಂಗ್
ಜೂ.20ರಿಂದ CET, NEET ಆನ್ಲೈನ್ ತರಬೇತಿ

ನಾಡಿನ ಪ್ರತಿಷ್ಠಿತ ಕೋಚಿಂಗ್ ಸೆಂಟರ್ ಎಕ್ಸಲೆಂಟ್ ಕೋಚಿಂಗ್ ಸೆಂಟರ್ ಈಗಾಗಲೇ ಸುಮಾರು ಏಳು ವರ್ಷಗಳಿಂದ ರಾಜ್ಯದ ಎಲ್ಲಾ ಕಡೆ Online Live ತರಗತಿಗಳನ್ನು ನಡೆಸುತ್ತಿದ್ದು ಅತ್ಯುತ್ತಮ ಫಲಿತಾಂಶಗಳೊಂದಿಗೆ ಸಾವಿರಾರು ವಿದ್ಯಾರ್ಥಿಗಳಿಗೆ ಉಪಯೋಗವಾಗಿದೆ. ಇಲ್ಲಿ ತರಬೇತಿ ಪಡೆದ ಸಾವಿರಾರು ವಿದ್ಯಾರ್ಥಿಗಳು ಇಂಜಿನಿಯರಿಂಗ್, ಮೆಡಿಕಲ್, ಅಗ್ರಿಕಲ್ಚರ್, ವೆಟನರಿ ಇತರೆ ಉನ್ನತ ವ್ಯಾಸಂಗದ ಸೀಟು ಪಡೆದಿದ್ದಾರೆ. ಎಲ್ಲಾ ಪರೀಕ್ಷೆಯಲ್ಲೂ ಉತ್ತಮ ಸಾಧನೆ ಮಾಡಿದ್ದಾರೆ.


ಕರೋನಾ ಕಾರಣಗಳಿಂದ 2 ವರ್ಷಗಳಿಂದ Online live ತರಗತಿಗಳನ್ನು ಮಾಡುತ್ತಿದ್ದು ದ್ವಿತೀಯ PUCವಿದ್ಯಾರ್ಥಿಗಳಿಗೆ ಈಗಾಗಲೇ ತರಗತಿಗಳು ಪ್ರಾರಂಭವಾಗಿದ್ದು ದ್ವಿತೀಯ PUCಯ 2ನೇ ಬ್ಯಾಚ್ ಜೂನ್ 10ನೇ ತಾರೀಕಿನಿಂದ ಆರಂಭವಾಗುತ್ತಿದೆ. ಅತ್ಯಂತ ಕಡಿಮೆ ಶುಲ್ಕದೊಂದಿಗೆ Online live ತರಗತಿಯನ್ನು ಮಾಡಲಾಗುವುದು. ಆಸಕ್ತ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು.


ಈಗಾಗಲೇ ಪ್ರಥಮ PUC ಮುಗಿಸಿರುವಂತ ವಿದ್ಯಾರ್ಥಿಗಳಿಗೆ ONLINE LIVE NEET, CET ತರಗತಿಗಳನ್ನು ಜೂನ್ 20ರಿಂದ ಆರಂಭವಾಗಲಿದೆ.
ಆಸಕ್ತ ವಿದ್ಯಾರ್ಥಿಗಳು ನಿಮ್ಮ ಮನೆಯಿಂದಲೇ ಕೋವಿಡ್ ನಿಯಮದನುಸಾರ ಅತ್ಯುತ್ತಮ ಕೋಚಿಂಗ್ ಅನ್ನು Online live ನಲ್ಲಿ ಪಡೆದುಕೊಳ್ಳಬಹುದು. ರಾಜ್ಯದ ನುರಿತ ತಜ್ಞ ಉಪನ್ಯಾಸಕರು ತರಬೇತಿ ನೀಡಲಿದ್ದಾರೆ.
ಮಾಹಿತಿ ಹಾಗೂ ತಮ್ಮ ಸೀಟು ಬುಕ್ಕಿಂಗ್ ಮಾಡಲು ಸಂಪರ್ಕಿಸಿ.
ಎಕ್ಸಲೆಂಟ್ ಕೋಚಿಂಗ್ ಸೆಂಟರ್,
ಸತ್ಯನಾಥ ಸ್ಟೋರ್ ಪಕ್ಕ, ತೀರ್ಥಹಳ್ಳಿ
9483396025
9591924906
8618337112.

ಈ ಮಾಹಿತಿಯನ್ನು ಎಲ್ಲಾ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಿಗೆ ಶೇರ್ ಮಾಡಿರಿ..!.

Categories
ಬೆಂಗಳೂರು

ಮತ್ತೆ ಒಂದು ವಾರ ಲಾಕ್ ಫಿಕ್ಸ್!?

  • ಇಂದು ಸಿಎಂ ಸಭೆ: ಬಹುತೇಕ ನಿರ್ಧಾರ
  • ಸಿಬಿಎಸ್ಸಿ 12 ಪರೀಕ್ಷೆ ರದ್ದು ಬಳಿಕ ರಾಜ್ಯದಲ್ಲಿ ಏನು?
  • ಪಿಯುಸಿ, ಎಸ್ಎಸ್ಎಲ್ಸಿ ಪರೀಕ್ಷೆ ಗೊಂದಲ!


ಬೆಂಗಳೂರು: ರಾಜ್ಯದಲ್ಲಿ ಜೂ.15ರವರೆಗೆ ಲಾಕ್ ಡೌನ್ ಮುಂದುವರಿಯುವ ಎಲ್ಲಾ ಸಾಧ್ಯತೆಗಳಿವೆ. ಈಗಾಗಲೇ ಕರೋನಾ ಕೊಂಚ ಹಿಡಿತಕ್ಕೆ ಬಂದಿದೆ. ಆದ್ರೆ ಏಕಾಏಕಿ ಮತ್ತೆ ಜನರು ಹೊರಬಂದರೆ ಮತ್ತೆ ಕರೋನಾ ಏರಿಕೆ ಆಗುವ ಸಾಧ್ಯತೆ ಹಿನ್ನೆಲೆ ಸರಕಾರ ಜೂ.15ರವರೆಗೆ ಲಾಕ್ ಮುಂದುವರಿಸಲು ನಿರ್ಧಾರ ಮಾಡಲಿದೆ ಎನ್ನಲಾಗಿದೆ.
ಇತ್ತ ಸಿಎಂ ಬುಧವಾರ ಸರಣಿ ಸಭೆ ನಡೆಸಿ ತೀರ್ಮಾನಕ್ಕೆ ಬರಲಿದ್ದಾರೆ.
ಪರೀಕ್ಷೆ ಗೊಂದಲ: ಪ್ರಧಾನಿ ಮೋದಿ ಅವರು ಕೇಂದ್ರ ಮಟ್ಟದಲ್ಲಿ ಸಿಬಿಎಸ್ಸಿ, ಐಸಿಎಸ್ಸಿ 12 ಪಿಯು ಪರೀಕ್ಷೆ ರದ್ದು ಮಾಡಿ ಆದೇಶ ಮಾಡಿದ ಹಿನ್ನೆಲೆ ರಾಜ್ಯದಲ್ಲಿ ಪಿಯುಸಿ ಮತ್ತು ಎಸ್ಎಸ್ಎಲ್ಸಿ ಪರೀಕ್ಷೆ ಏನಾಗಲಿದೆ ಎಂಬ ಗೊಂದಲ ಮೂಡಿದೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ನೇತೃತ್ವದಲ್ಲಿ ಸಭೆ ನಡೆಸಿ ಇನ್ನೆರಡು ದಿನದಲ್ಲಿ ನಿರ್ಧಾರ ಹೊರ ಬೀಳುವ ಸಾಧ್ಯತೆ ಇದೆ.
ಮಕ್ಕಳ ಮೇಲೆ ಕರೋನಾ? !: ರಾಜ್ಯದಲ್ಲಿ 3 ಲಕ್ಷ ಸಕ್ರಿಯ ಪ್ರಕರಣಗಳ ನಡುವೆ ಮಕ್ಕಳ ಮೇಲೆ ಕರೋನಾ ಅಟ್ಯಾಕ್ ಶುರು ಮಾಡಿದೆ. ಮಹಾರಾಷ್ಟ್ರದಲ್ಲಿ ಮಕ್ಕಳಲ್ಲಿ ಕರೋನಾ ಈಗಾಗಲೇ ದಾಳಿ ಮಾಡಿದೆ. ರಾಜ್ಯದಲ್ಲೂ ಪ್ರತಿ ದಿನ ಸಂಖ್ಯೆ ಹೆಚ್ಚುತ್ತಿದೆ. ಈಗಾಗಲೇ ಹಲವು ಮಕ್ಕಳು ಸಾವನ್ನು ಕಂಡಿವೆ. ಮಕ್ಕಳ ಬಗ್ಗೆ ಜಾಗೃತಿ ಇರಲಿ..!

Categories
ಬೆಂಗಳೂರು

ದುಬಾರಿ ದುನಿಯಾ…ಬದುಕು ಬಿಕಾರಿ..!

  • ಕರೋನಾ ಕಷ್ಟದಲ್ಲಿ ಅನೇಕ ಸೇವೆಗಳ ಬೆಲೆ ಏರಿಕೆ
  • ಚಿನ್ನ,ಪೆಟ್ರೋಲ್ ದುಬಾರಿ: ಡಿಜಿಟಲ್ ಉದ್ಯಮಕ್ಕೂ ತೆರಿಗೆ ಬರೆ!

ಬೆಂಗಳೂರು: ಪೆಟ್ರೋಲ್ 100 ಲೀಟರ್ ಆಗಿದೆ.
ಚಿನ್ನ, ಪೆಟ್ರೋಲ್, ಅಡುಗೆ ಎಣ್ಣೆ ದರ ಹೆಚ್ಚಳ ಆಗಿದೆ.
ಲಾಕ್ ಡೌನ್ ಕಾರಣ ತರಕಾರಿ, ಹಣ್ಣು ಬೆಲೆ ಗಗನಕ್ಕೇರಿದೆ. ಈ ನಡುವೆ ಆರ್ ಬಿ ಐ 2000 ರೂ. ಮುಖಬೆಲೆಯ ನೋಟು ಮುದ್ರಣವನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ. 2021-22ರ ಆರ್ಥಿಕ ವರ್ಷದಲ್ಲಿ 2 ಸಾವಿರ ರೂಪಾಯಿ ಮುಖಬೆಲೆಯ ಒಂದೇ ಒಂದು ನೋಟನ್ನೂ ಮುದ್ರಣ ಮಾಡಿಲ್ಲ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ( ಆರ್‌ಬಿಐ ) ತಿಳಿಸಿದೆ. ಭದ್ರತಾ ಕಾರಣಗಳಿಂದಾಗಿ ಹೆಚ್ಚಿನ ಮೌಲ್ಯದ ಮುಖಬೆಲೆಯ ನೋಟುಗಳ ಮುದ್ರಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವರದಿ ಹೇಳಿದೆ. ಹೀಗಾಗಿ ಇದು ಆರ್ಥಿಕತೆ ಮೇಲೆ ಹೊಡೆತ ಬೀಳಲಿದೆ.


ಡಿಜಿಟಲ್ ಕ್ಷೇತ್ರಕ್ಕೆ ಹೊಡೆತ!: ಜೂನ್ 1 ರಿಂದ ಯೂಟ್ಯೂಬ್ ಮೂಲಕ ಸಿಗುವ ಆದಾಯದ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಅಮೆರಿಕ ಮುಂತಾದೆಡೆಯಿಂದ ವಿಡಿಯೋ ವೀಕ್ಷಣೆ ಮಾಡುವವರಿಂದ ಬಂದ ಗಳಿಕೆಗೆ ತೆರಿಗೆ ಪಾವತಿಸಬೇಕಾಗುತ್ತದೆ.
ಗೂಗಲ್ ಡ್ರೈವ್ ತನ್ನ ಸ್ಟೋರೇಜ್ ಮಿತಿ ವ್ಯವಸ್ಥೆಯಲ್ಲಿ ಬದಲಾವಣೆ ತಂದಿದ್ದು, ಜೂನ್ 1 ರಿಂದ ಗೂಗಲ್ ಡ್ರೈವ್ ಸ್ಟೋರೇಜ್ ಮಿತಿ 15 ಜಿಬಿ ಮಾತ್ರ ಸಿಗಲಿದೆ. ಜಿಮೇಲ್ ಹಾಗೂ ಫೋಟೋಸ್ ಎರಡು ಸೇರಿ ಇಷ್ಟು ಮಾತ್ರ ಶೇಖರಣೆ ಮಿತಿ ಸಿಗಲಿದೆ. ಇದಕ್ಕಿಂತ ಹೆಚ್ಚಿನ ಸ್ಪೇಸ್ ಬೇಕಾದರೆ ಹಣ ಪಾವತಿಸಬೇಕು.


ಜೂನ್ 1 ರಿಂದ ಚಿನ್ನದ ಮೇಲಿನ ಹಾಲ್ ಮಾರ್ಕ್ ಕಡ್ಡಾಯ ಎಂದು ಕೇಂದ್ರ ಈ ಹಿಂದೆ ಆದೇಶ ನೀಡಿತ್ತು. ಆದರೆ, ನಂತರ ಜೂನ್ 15 ರಂದು ಪ್ರಕಟಣೆ ಹೊರಡಿಸಿದೆ. ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ (ಬಿಐಎಸ್) ಹಾಲ್‌ಮಾರ್ಕ್‌ ಕಡ್ಡಾಯವಾಗಲಿದ್ದು, ಪರಿಶುದ್ಧ ಚಿನ್ನ ಪಡೆಯಬಹುದಾಗಿದೆ. ಜೊತೆಗೆ ಚಿನ್ನದ ದರವೂ ಏರಿಕೆಯಾಗಲಿದೆ.
ಬ್ಯಾಂಕ್ ಆಫ್ ಬರೋಡಾ ಗ್ರಾಹಕರು ಚೆಕ್ ಪೇಮೆಂಟ್ ಮಾಡುವ ವ್ಯವಸ್ಥೆಯಲ್ಲಿ ಬದಲಾವಣೆ ಕಂಡು ಬರಲಿದೆ. ಜೂನ್ 1 ರಿಂದ 2 ಲಕ್ಷಕ್ಕೂ ಅಧಿಕ ಮೊತ್ತದ ಚೆಕ್ ವ್ಯವಹಾರ ಮಾಡುವ ಗ್ರಾಹಕರು ಈ ಬಗ್ಗೆ ಬ್ಯಾಂಕಿಗೆ ತಿಳಿಸಬೇಕಾಗುತ್ತದೆ. ಎಸ್ಬಿಐ ಬ್ಯಾಂಕ್ ಅನೇಕ ಶುಲ್ಕ ಹೆಚ್ಚಳ ಮಾಡಿದೆ.
ಹೀಗೆ ನೂರಾರು ವಸ್ತುಗಳ ಬೆಲೆ ಏರಿಕೆಯಾಗಿದೆ.