Categories
ಬೆಂಗಳೂರು

ಲಸಿಕೆ ಹಾಕಿದ್ರಿಂದ ಕರೋನಾ ತೀವ್ರತೆ ಕಡಿಮೆ!

  • ಎರಡು ಡೋಸ್ ಹಾಕಿದ್ರು ಕರೋನಾ ಬರುತ್ತೆ
  • ಲಸಿಕೆ ಹಾಕದ ಕಾರಣಕ್ಕೆ ಮಕ್ಕಳಿಗೆ ಸೋಂಕು

NAMMUR EXPRESS NEWS
ಬೆಂಗಳೂರು: ಕರೋನಾ ಲಸಿಕೆ ಎರಡು ಡೋಸ್ ಹಾಕಿಸಿಕೊಂಡವರಿಗೆ ಸೋಂಕು ತಗುಲಿದ್ದರೂ ಅದರ ತೀವ್ರತೆ ಕಡಿಮೆಯಾಗಿದೆ. ಎರಡು ಡೋಸ್ ಹಾಕಿಸಿಕೊಂಡವರು ಸೋಂಕಿಗೆ ಒಳಗಾಗಲ್ಲವೆಂದು ಯಾರೂ ಹೇಳಿಲ್ಲವೆಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಈ ಮೂಲಕ ಎರಡು ಡೋಸ್ ಹಾಕಿಸಿಕೊಂಡವರಿಗೂ ಕರೋನಾ ಬರುವ ಸಾಧ್ಯತೆ ಇದೆ ಎಂಬುದನ್ನು ಸರ್ಕಾರವೇ ದೃಢಪಡಿಸಿದೆ.
ಕರೋನಾ ಮೊದಲ, ಎರಡನೇ ಈಗ ಪ್ರವೇಶಿಸಿರುವ ಮೂರನೇ ಅಲೆಗೂ ಇರುವ ವ್ಯತ್ಯಾಸವೇ ಇದಕ್ಕೆ ನಿದರ್ಶನ. ಎರಡೂ ಅಲೆಗಳಲ್ಲಿ ಸೋಂಕು ತೀವ್ರತೆ, ಪಾಸಿಟಿವಿಟಿ ದರ ಮತ್ತು ಮರಣ ಪ್ರಮಾಣ ಹೆಚ್ಚಿದ್ದವು. ಈಗ ಮರಣ ಪ್ರಮಾಣ ತಗ್ಗಿದ್ದು, ಸೋಂಕಿಗೆ ಒಳಗಾದವರು 4-5 ದಿನಗಳಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಇದೊಂದು ಸಮಾಧಾನಕರ ಬೆಳವಣಿಗೆಯಾಗಿದೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.
ಲಸಿಕೆ ಹಾಕದ ಕಾರಣಕ್ಕೆ ಈ ಬಾರಿ ಮಕ್ಕಳೇ ಸೋಂಕಿಗೆ ಗುರಿಯಾಗಿರುವುದು ಸಹಜ. ಆದರೆ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುವ ಹಿನ್ನೆಲೆಯಲ್ಲಿ ಸೋಂಕು ಗಂಭೀರ ಸ್ಥಿತಿಗೆ ತಲುಪಿಲ್ಲ ಎನ್ನುವುದು ಗಮನಾರ್ಹ. ಸದ್ಯಕ್ಕೆ ಚಾಲ್ತಿಯಲ್ಲಿರುವ 15-17 ವಯೋಮಿತಿ ಮಕ್ಕಳಿಗೆ ಲಸಿಕೆ ಅಭಿಯಾನದಲ್ಲಿ ಶೇ.68 ಪ್ರಗತಿ ಸಾಧಿಸಲಾಗಿದೆ. ಉಳಿದ ಶೇ.32 ಮಕ್ಕಳಿಗೆ ಆದಷ್ಟು ಬೇಗ ಲಸಿಕೆ ವಿತರಿಸಲಾಗುವುದು. ಬೂಸ್ಟರ್ ಡೋಸ್ ಲಸಿಕೆ ವಿತರಣೆ ವೇಗ ಹೆಚ್ಚಿಸಲು ಈ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.