Categories
ರಾಜಕೀಯ

ಪರಿಶಿಷ್ಟ ಜಾತಿ, ಪಂಗಡದ ಬಿಪಿಎಲ್ ಗ್ರಾಹಕರಿಗೆ ಉಚಿತ ವಿದ್ಯುತ್ ಭಾಗ್ಯ!

  • ಯೋಜನೆ ಏನು.. ಎತ್ತ..? ಯಾರಿಗೆ ಅನುಕೂಲ
  • ದಾಖಲೆ ಏನು… ಪಡೆಯೋದು ಹೇಗೆ?

NAMMUR EXPRESS NEWS
ಬೆಂಗಳೂರು: ಬಡತನ ರೇಖೆಗಿಂತ ಕೆಳಗಿರುವವರು, ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ) ಕುಟುಂಬಗಳಿಗೆ ಪೂರೈಸುತ್ತಿರುವ ಉಚಿತ ವಿದ್ಯುತ್ ಪ್ರಮಾಣವನ್ನು ಹೆಚ್ಚಿಸಲು ಬಿಜೆಪಿ ಸರ್ಕಾರ ನಿರ್ಧರಿಸಿದೆ. ಬಿಪಿಎಲ್ ಹೊಂದಿರುವವರಿಗೆ 40 ಘಟಕಗಳಿಂದ ತಿಂಗಳಿಗೆ 75 ಯೂನಿಟ್‌ಗಳಿಗೆ ಉಚಿತ ನೀಡಲು ನಿರ್ಧರಿಸಲಾಗಿದೆ.ಇದರಿಂದ ರಾಜ್ಯದ ಬೊಕ್ಕಸಕ್ಕೆ ವರ್ಷಕ್ಕೆ 979 ಕೋಟಿ ರೂ. ಹೊರೆ ಬೀಳಲಿದೆ.
ಕಳೆದ ತಿಂಗಳು ಬಾಬು ಜಗಜೀವನ್ ರಾಮ್ ಅವರ 115 ಜನ್ಮದಿನಾಚರಣೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಂಗಳಿಗೆ 40 ಯೂನಿಟ್ ಉಚಿತ ವಿದ್ಯುತ್ ಸೌಲಭ್ಯವನ್ನು ತಿಂಗಳಿಗೆ 75 ಯೂನಿಟ್‌ಗಳಿಗೆ ಹೆಚ್ಚಿಸುವುದಾಗಿ ಘೋಷಿಸಿದರು. ಸಿಎಂ ಘೋಷಣೆ ಮಾಡಿದ ಒಂದು ತಿಂಗಳೊಳಗೆ ಇಂಧನ ಇಲಾಖೆ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದ್ದು, ಅಂತಿಮ ಅನುಮೋದನೆಗಾಗಿ ಸಿಎಂ ನೇತೃತ್ವದ ಹಣಕಾಸು ಇಲಾಖೆಗೆ ಸಲ್ಲಿಸಿದೆ. ಈ ನಿರ್ಧಾರವು ಮೇ 2022ರಿಂದ ಜಾರಿಗೆ ಬರಲಿದೆ ಎಂದು ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚಿನ ನಿರ್ಧಾರ ಈಗಾಗಲೇ ಕುಟೀರ ಜ್ಯೋತಿ ಮತ್ತು ಭಾಗ್ಯಜ್ಯೋತಿ ಯೋಜನೆಗಳ ಅಡಿಯಲ್ಲಿ ಒಳಪಡುವ ಎಸ್‌ಸಿ ಮತ್ತು ಎಸ್‌ಟಿ ಕುಟುಂಬಗಳ ಮನೆಗಳಲ್ಲಿ ‘ತಡೆರಹಿತ ವಿದ್ಯುತ್‌’ ಅನ್ನು ಖಚಿತಪಡಿಸುತ್ತದೆ.

ಇಂಧನ ಸಚಿವರು ಹೇಳಿದ್ದೇನು?

ಇಂಧನ ಸಚಿವ ವಿ ಸುನೀಲ್ ಕುಮಾರ್ ಪ್ರಕಾರ, ಕರ್ನಾಟಕದಲ್ಲಿ ತಿಂಗಳಿಗೆ 75 ಕಡಿಮೆ ಬಳಕೆ ಮಾಡುವ 1.46 ಕೋಟಿ ಗೃಹಬಳಕೆದಾರರಿದ್ದಾರೆ. ಇದರಲ್ಲಿ ಸುಮಾರು 39.26 ಲಕ್ಷ ಗ್ರಾಹಕರು ಕುಟೀರ ಜ್ಯೋತಿ ಮತ್ತು ಭಾಗ್ಯ ಜ್ಯೋತಿ ಕಾರ್ಯಕ್ರಮಗಳ ಅಡಿಯಲ್ಲಿ ವಾರ್ಷಿಕವಾಗಿ ಸುಮಾರು 1,35,692 ಮಿಲಿಯನ್ ಯುನಿಟ್ಗಳನ್ನು ಬಳಸುತ್ತಾರೆ. ಒಟ್ಟಾರೆಯಾಗಿ, ಇಂಧನ ಇಲಾಖೆಯು ಎಸ್‌ಸಿ ಸಮುದಾಯಗಳಿಗೆ ಸೇರಿದ ಗ್ರಾಹಕರಿಗೆ ರೂ 694.15 ಕೋಟಿ ಮತ್ತು ಎಸ್‌ಟಿ ಗ್ರಾಹಕರಿಗೆ ಇನ್ನೂ ರೂ 285.42 ಕೋಟಿ ಸಬ್ಸಿಡಿಯನ್ನು ಬಿಡುಗಡೆ ಮಾಡುತ್ತದೆ. ಇದು ಕಲ್ಯಾಣಯೋಜನೆಯಾಗಿರುವುದರಿಂದ, ನಾವು ಅದನ್ನು ಇನ್ನಷ್ಟು ವಿಳಂಬ ಮಾಡಲು ಬಯಸುವುದಿಲ್ಲ ಮತ್ತು ಆದ್ದರಿಂದ ಅದನ್ನು ತೆರವುಗೊಳಿಸಿ ಅನುಮೋದನೆಗಾಗಿ ಹಣಕಾಸು ಇಲಾಖೆಗೆ ರವಾನಿಸಿದ್ದೇವೆ “ಎಂದು ಸುನೀಲ್ ಕುಮಾರ್ ವಿವರಿಸಿದರು.

ಯೋಜನೆ ಉಪಯೋಗ ಪಡೆಯೋದು ಹೇಗೆ?

ರಾಜ್ಯ ಸರ್ಕಾರ ಮೇ 1 ರಿಂದ ಪೂರ್ವಾನ್ವಯವಾಗಿ ಯೋಜನೆಯನ್ನು ಜಾರಿಗೆ ತರಲು ಬಯಸಿದ್ದರಿಂದ, ಇಂಧನ ಇಲಾಖೆಯು ಈ ಸಮುದಾಯಗಳ ಕುಟುಂಬಗಳಿಗೆ ಯೋಜನೆಯನ್ನು ಪಡೆಯಲು ಹೊಸ ನಿಯಮಗಳನ್ನು ರೂಪಿಸಿದೆ. “ಈ ಗ್ರಾಹಕರಿಗೆ ಮಾಪನ ಮಾಡುವುದು ಕಡ್ಡಾಯವಾಗಿರುತ್ತದೆ ಮತ್ತು ಫಲಾನುಭವಿಗಳು ತಮ್ಮ ವಿದ್ಯುತ್ ಬಿಲ್ ಬಾಕಿಯನ್ನು ಏಪ್ರಿಲ್ 2022 ರವರೆಗೆ ತೆರವುಗೊಳಿಸಿರಬೇಕು. ಫಲಾನುಭವಿಗಳು ತಮ್ಮ ಬ್ಯಾಂಕ್ ಪಾಸ್‌ಬುಕ್‌ನ ನಕಲನ್ನು ದಾಖಲೆಗಳೊಂದಿಗೆ ಸಲ್ಲಿಸಬೇಕು ಏಕೆಂದರೆ ಸಬ್ಸಿಡಿಯನ್ನು ಫಲಾನುಭವಿಯ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ,” ಎಂದು ಇಂಧನ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ವಿವರಿಸಿದರು.

Categories
ಮಲ್ನಾಡ್

ಡಾ. ಗಣಪತಿ ಅವರಿಗೆ ಶಿಷ್ಯ ನಮನ. ಕಾರ್ಯಕ್ರಮ ಶುರು

  • ತೀರ್ಥಹಳ್ಳಿಯ ಶಾಂತವೇರಿ ಗೋಪಾಲ ಗೌಡ ರಂಗ ಮಂದಿರದಲ್ಲಿ ಕಾರ್ಯಕ್ರಮ
  • ಸಂಜೆಯವರೆಗೆ ಕಾರ್ಯಕ್ರಮ: ಸರ್ವರಿಗೂ ಸ್ವಾಗತ

NAMMUR EXPRESS NEWS
ತುಂಗಾ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ನಿವೃತ್ತಿ ಹೊಂದಿದ ಡಾ.ಬಿ.ಗಣಪತಿ ಅವರಿಗೆ “ಭಾವಾಭಿನಂದನೆ” ಶಿಷ್ಯಸಂಭ್ರಮ – ಶಿಷ್ಯನಮನ ಕಾರ್ಯಕ್ರಮ ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಕಾರ್ಯಕ್ರಮ ಶುರುವಾಗಿದೆ.
ಶಿಷ್ಯ ವೃಂದ ಎಲ್ಲಾ ಶಿಷ್ಯರು ಮತ್ತು ಅವರ ಕುಟುಂಬ, ಸ್ನೇಹಿತರು, ಸಹೋದ್ಯೋಗಿಗಳು, ಸಾಹಿತ್ಯ ಆಸಕ್ತರು ಆಗಮಿಸುತ್ತಿದ್ದಾರೆ. ಈಗ ಶಿಷ್ಯರ ನಮನ ಕಾರ್ಯಕ್ರಮ ನಡೆಯುತ್ತಿದೆ.

ಮಧ್ಯಾಹ್ನ ಸಭಾ ಕಾರ್ಯಕ್ರಮ

ಮದ್ಯಾಹ್ನ 2.30 ರಿಂದ 4.30ರವರೆಗೆ
ಶಿಷ್ಯನಮನ, ಗಣಪತಿ ಉತ್ತುಂಗ
ಅರಿವಿನ ಬೆಳಗು
ಭಾವಾಭಿನಂದನೆ
ಅಕ್ಕರದ ಮಾಲೆ ಮುಡಿಸುವವರು : ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಹಿರಿಯ ಮೇಷ್ಟ್ರು, ಬೆಂಗಳೂರು
ಅವ್ಯಕ್ತ ಲೋಕದ ಅನಾವರಣ : ಚಾಂದಿನಿ, ಕವಯಿತ್ರಿ ಮಾನವ ಹಕ್ಕು ಹೋರಾಟಗಾರ್ತಿ, ಬೆಂಗಳೂರು
ಮನದ ಮಾತುಗಳು ,ಡಾ. ಜಿ.ಎಂ. ಪುಟ್ಟಯ್ಯ ಪ್ರಾಧ್ಯಾಪಕರು, ಕನ್ನಡ ವಿ.ವಿ., ಹಂಪಿ,
ಭಾವಸ್ಪಂದನೆ : ಡಾ.ಬಿ. ಗಣಪತಿ ಉತ್ತುಂಗ

ಸಮಸ್ತ ತೀರ್ಥಹಳ್ಳಿಯ ಜನತೆಗೆ ಸುಸ್ವಾಗತ… ಡಾ. ಗಣಪತಿ ಶಿಷ್ಯರು ಕುಟುಂಬ, ಸ್ನೇಹಿತರ ಸಮೇತ ಆಗಮಿಸಲು ಮನವಿ ಮಾಡಲಾಗಿದೆ.

Categories
ಶಿಕ್ಷಣ

ರಜೆ ಮುಗೀತು…ಶಾಲೆ ಶುರುವಾಯ್ತು..!

  • ಮೇ 16ರಿಂದ ಶಾಲೆಗಳು ಆರಂಭ: ಸರ್ವ ಸಿದ್ಧತೆ
  • ತಳಿರು ತೋರಣ, ಅಲಂಕಾರದಿಂದ ಶಾಲೆ ಸಿಂಗಾರ

NAMMUR EXPRESS NEWS
ಬೆಂಗಳೂರು: 2022-23ನೇ ಸಾಲಿನ ಶಾಲೆಗಳು ಮೇ 16ರಿಂದ ಆರಂಭವಾಗಲಿದ್ದು, ಈ ವೇಳೆ ಸಕಲ ಸಿದ್ಧತೆ ಮಾಡಿಕೊಂಡು ಶಾಲೆ ಶುಭಾರಂಭಕ್ಕೆ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ.
ಎಲ್ಲಾ ಶಾಲೆಗಳು ಸ್ವಚ್ಛಗೊಂಡಿದ್ದು ಮಕ್ಕಳು, ಶಿಕ್ಷಕರು, ಪೋಷಕರು ಅಂತಿಮ ಹಂತದ ಸಿದ್ಧತೆ ನಡೆಸುತ್ತಿದ್ದಾರೆ. ಶಾಲಾ ಆರಂಭಕ್ಕೂ ಮುನ್ನ ಶಾಲಾ ಹಂತದಲ್ಲಿ ಹಮ್ಮಿಕೊಳ್ಳಬೇಕಾದ ಪೂರ್ವ ಸಿದ್ಧತಾ ಕಾರ್ಯಕ್ರಮಗಳನ್ನು ಪಟ್ಟಿ ಮಾಡಿ ಅದರಂತೆ ಎಲ್ಲ ಶಾಲೆಗಳ ಶಿಕ್ಷಕರು, ಸಿಬ್ಬಂದಿ ಸೇರಿದಂತೆ ಅಧಿಕಾರಿ ವರ್ಗ ಸಕ್ರಿಯವಾಗಿ ಭಾಗವಹಿಸುವಂತೆ ಶಿಕ್ಷಣ ಇಲಾಖೆಯ ಆಯುಕ್ತರು ಸೂಚನೆ ನೀಡಿತ್ತು.


ಶಾಲಾ ಪ್ರಾರಂಭದ ಮುನ್ನಾ ಶಾಲಾ ತರಗತಿ ಕೊಠಡಿಗಳು, ಕೋಣೆ, ಶೌಚಾಲಯ ಇತ್ಯಾದಿ ಗಳನ್ನು ಸ್ವಚ್ಛಇಟ್ಟುಕೊಳ್ಳಬೇಕು. ಶಾಲೆಯನ್ನು ತಳಿರು ತೋರಣ, ರಂಗೋಲಿಯಿಂದ ಅಲಂಕರಿಸಬೇಕು. ಮಧ್ಯಾಹ್ನ ಮಕ್ಕಳಿಂದಲೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯ ಪಾಲಕರು, ನಾಗರಿಕರು, ಹಿರಿಯ ವಿದ್ಯಾರ್ಥಿಗಳು ಹಾಗೂ ಜನಪ್ರತಿನಿಧಿಗಳನ್ನು ಆಹ್ವಾನಿಸಿ ಶಾಲಾ ಹಬ್ಬದಲ್ಲಿ ಭಾಗವಹಿಸುವಂತೆ ವ್ಯವಸ್ಥೆ ಮಾಡಬೇಕು. ಶಾಲಾ ಆರಂಭದ ದಿನ ಮಕ್ಕಳಿಗೆ ಸಿಹಿಯೂಟ ವ್ಯವಸ್ಥೆ ಮಾಡಬೇಕು. ತರಗತಿ ವೇಳಾಪಟ್ಟಿ ಶಿಕ್ಷಕರ ವೇಳಾಪಟ್ಟಿಯನ್ನು ತಯಾರಿ ಸಿಟ್ಟುಕೊಳ್ಳಬೇಕೆಂದು ಸೂಚಿಸಲಾಗಿದೆ. ಈಗ ಎಲ್ಲಾ ಸಿದ್ಧತೆ ನಡೆದಿದ್ದು ಮಕ್ಕಳನ್ನು ಸ್ವಾಗತಿಸಲು ಕ್ಷಣಗಣನೆ ಆರಂಭವಾಗಿದೆ.

ಅಧಿಕಾರಿಗಳಿಗೆ ಮಹತ್ವದ ಹೊಣೆ
ಶಾಲಾ ಆರಂಭದ ದಿನ ಅಕ್ಷರ ದಾಸೋಹ ಕಾರ್ಯ ಕ್ರಮ ಅನುಷ್ಠಾನ, ಮಕ್ಕಳ ದಾಖಲಾತಿ ಪ್ರಗತಿ, ಪ್ರೋತ್ಸಾಹದಾಯಕ ಯೋಜನೆಗಳ ಪೂರೈಕೆ ಕುರಿತಂತೆ ಎಲ್ಲ ಹಂತದ ಮೇಲ್ವಿಚಾರಣಾ ಅಧಿಕಾರಿಗಳು ಪರಿಶೀಲಿಸಬೇಕು. ಬಿಇಒ, ಸಿಟಿಇ ಕಾಲೇಜಿನ ಪ್ರಾಂಶುಪಾಲರು ಒಟ್ಟಾಗಿ ಸಭೆ ಮಾಡಿ ರೂಪುರೇಷೆ ಸಿದ್ಧಪಡಿಸ ಬೇಕು. ಎಲ್ಲ ಶಾಲೆಗಳಿಗೆ ಭೇಟಿ ನೀಡಿ ನ್ಯೂನತೆಗಳಿದ್ದಲ್ಲಿ, ಸ್ಥಳದಲ್ಲಿ ಮಾರ್ಗ ದರ್ಶನ ನೀಡಬೇಕು. ಈ ‘ಮಿಂಚಿನ ಸಂಚಾರವನ್ನು ಮೇ 30ರವರೆಗೆ ನಡೆಸ ಬೇಕು, ಜೂ.10ರಂದು ಜಿಲ್ಲಾ ಉಪನಿರ್ದೇ ಶಕರು ತಮ್ಮ ವ್ಯಾಪ್ತಿಯ ಆಯುಕ್ತಾಲಯ ಗಳಿಗೆ ವರದಿ ಕಳುಹಿಸಬೇಕೆಂದು ಸಾರ್ವ ಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಆರ್‌. ವಿಶಾಲ್ ಅಧಿಕಾರಿಗಳಿಗೆ ಸೂಚಿದ್ದಾರೆ.

ಮಕ್ಕಳನ್ನು ಕಳುಹಿಸಿ..ಶಾಲೆಗೆ ಸೇರಿಸಿ..
ಮೇ 16ರಂದು ಮಕ್ಕಳನ್ನು ಶಾಲೆಗೆ ಕಳುಹಿಸಿರಿ. ಅಂದಿನಿಂದಲೇ ಬೋಧನೆ ಪ್ರಾರಂಭವಾಗಲಿದೆ. ಹಾಗೂ ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ಸುತ್ತಮುತ್ತ ಮೇ 31ಕ್ಕೆ 5 ವರ್ಷ 5 ತಿಂಗಳು ತುಂಬಿದ ಮಕ್ಕಳಿದ್ದರೆ ಶಾಲೆಗೆ ದಾಖಲು ಮಾಡಬಹುದು. ದಾಖಲಾತಿಯು ದಿನಾಂಕ 16-5 2022 ಸೋಮವಾರ ಪ್ರಾರಂಭಗೊಳ್ಳುತ್ತದೆ.
ದಾಖಲಾತಿಗೆ ಅಗತ್ಯವಾದ ರೆಕಾರ್ಡ್, ಜನನ ಪ್ರಮಾಣ ಪತ್ರ ಮಗುವಿನ ತಂದೆ ತಾಯಿಯ ಆಧಾರ್ ಕಾರ್ಡ್ ಹಾಗೂ ಮಗುವಿನ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಮಾಡಿಸಿದ್ದರೆ ತರಲು ಸೂಚಿಸಲಾಗಿದೆ.

ನಮ್ಮ ಶಾಲೆ.. ನಮ್ಮ ಜವಾಬ್ದಾರಿ.. ಏನ್ ಮಾಡಬಹುದು?

  • ಶಾಲಾ ಪ್ರಾರಂಭಕ್ಕೆ ಪೂರ್ವದಲ್ಲಿ ಶಾಲೆಗಳನ್ನು ಸಿದ್ಧಗೊಳಿಸಬೇಕಿದೆ, ಶಾಲೆಗಳನ್ನು ಸ್ವಚ್ಛಗೊಳಿಸಿ ಆಕರ್ಷಣೆಗೊಳಿಸಬೇಕಿದೆ, ನಮ್ಮ 1 ಗಂಟೆ ಸಮಯವನ್ನು ನೀಡಿ, ಶಾಲೆಯಲ್ಲಿ ಶ್ರಮದಾನ ಮಾಡಿ ಶಾಲೆಗಳನ್ನು ಸ್ವಚ್ಛಗೊಳಿಸಿ ತಳಿರು-ತೋರಣಗಳಿಂದ ಸಜ್ಜುಗೊಳಿಸೋಣ.
  • ನಿಮ್ಮ ಒಂದು ಗಂಟೆಯ ಸಮಯವನ್ನು ವಿನಿಯೋಗಿಸಿ ಶ್ರಮದಾನ ಮಾಡಿ.
    -ಶಾಲೆಯ ಆರಂಭದ ದಿನದಂದು ತಳಿರು-ತೋರಣಗಳಿಂದ ಶಾಲೆಗಳನ್ನು ಅಲಂಕರಿಸಿ ಮಕ್ಕಳನ್ನು ನಗುನಗುತಾ ಸ್ವಾಗತಿಸೋಣ, ಆಟ ವಿನೋದಗಳ ಮೂಲಕ ಅವರನ್ನು ಕಲಿಕೆಗೆ ಕರೆದೊಯ್ಯೋಣ.
  • ಸರ್ಕಾರಿ ಶಾಲೆಯ ಅಗತ್ಯತೆಗಳನ್ನು ಗಮನಿಸಿ ಅದರ ಅಭಿವೃದ್ಧಿಗಾಗಿ ಯೋಜನೆಯೊಂದನ್ನು ರೂಪಿಸೋಣ.
  • ನೀವು ಮತ್ತು ನಿಮ್ಮ ಸ್ನೇಹಿತರು ಸೇರಿ ನಿಮ್ಮೂರಿನ ಶಾಲೆಯ ಅಭಿವೃದ್ಧಿಯಲ್ಲಿ ಕೈಜೋಡಿಸಿ.
  • ಶಾಲಾ ವಯಸ್ಸಿನ ಅರ್ಹ ಮಕ್ಕಳು ಶಾಲೆಗೆ ದಾಖಲಾಗದೇ ಇದ್ದಲ್ಲಿ ಅವರನ್ನು ಹತ್ತಿರದ ಸರ್ಕಾರಿ ಶಾಲೆಗೆ ಸೇರಿಸಲು ಅಗತ್ಯ ಕ್ರಮ ವಹಿಸೋಣ.
  • ನಾವು ಓದಿದ ಸರ್ಕಾರಿ ಶಾಲೆಗೆ ಭೇಟಿ ನೀಡಿ ಅದರ ಅಭಿವೃದ್ಧಿಗೆ ಕೈಜೋಡಿಸೋಣ.
  • ಶಿಕ್ಷಕರು ಹಾಗೂ ಮಕ್ಕಳಿಗೆ ಉಪಯುಕ್ತವಾಗುವ ಪುಸ್ತಕಗಳು ನಿಮ್ಮಲ್ಲಿ ಇದ್ದು ಅವುಗಳನ್ನು ವಿಲೇವಾರಿ ಮಾಡಬೇಕೆಂದುನೀವು ಬಯಸಿದ್ದರೆ, ಅಂತಹ ಪುಸ್ತಕಗಳನ್ನು ನಿಮ್ಮ ಹತ್ತಿರದ ಸರ್ಕಾರಿ ಶಾಲೆಗೆ ನೀಡುವ ಮೂಲಕ ಶಾಲಾ ಗ್ರಂಥಾಲಯವನ್ನು ಉತ್ತಮಪಡಿಸಲು ನೆರವಾಗೊಣ.
  • ವಾರ ಅಥವಾ ಹದಿನೈದು ದಿನಕ್ಕೊಮ್ಮೆ ಹತ್ತಿರದ ಸರ್ಕಾರಿ ಶಾಲೆಗೆ ಭೇಟಿ ನೀಡಿ ನಮ್ಮ ತಜ್ಞತೆಯ ಕ್ಷೇತ್ರ ಅಥವಾ ವಿಷಯದ ಬಗ್ಗೆ ಮಕ್ಕಳಿಗೆ ಬೋಧನೆ ಮಾಡೋಣ.
  • ನಮ್ಮ ವೃತ್ತಿಯ ಅನುಭವಗಳನ್ನು ಮಕ್ಕಳೊಂದಿಗೆ ಹಂಚಿಕೊಳ್ಳುವ ಮೂಲಕ ಅವರಲ್ಲಿ ಕನಸು / ಗುರಿಗಳನ್ನು ತುಂಬೋಣ.
  • ಸರ್ಕಾರಿ ಶಾಲೆಗಳ ಸಬಲೀಕರಣ ದಲ್ಲಿ ನಾವೆಲ್ಲರೂ ಭಾಗಿಯಾಗೋಣ.
Categories
ಬೆಂಗಳೂರು

ಕೆ.ವಿ.ಆರ್ ಟ್ಯಾಗೋರ್ ಆವರಿಗೆ ನಮನ!

  • ರಾಜಧಾನಿಯಲ್ಲಿ ಸಹ್ಯಾದ್ರಿ ಸಂಘದಿಂದ ಕಾರ್ಯಕ್ರಮ
  • ಕೆವಿಆರ್ ಆಶಯ ಮುಂದುವರಿಸಲು ಪಣ

NAMMUR EXPRESS NEWS
ಬೆಂಗಳೂರು: ಸಹ್ಯಾದ್ರಿ ಸಂಘದ ಅಧ್ಯಕ್ಷರಾಗಿ, ಕರ್ನಾಟಕ ಸರ್ಕಾರದ ಹಿರಿಯ ಪೊಲೀಸ್ ಅಧಿಕಾರಿಯಾಗಿದ್ದ ಕೆ.ವಿ.ಆರ್ ಟ್ಯಾಗೋರ್ ಆವರಿಗೆ ನುಡಿ ನಮನ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಿತು.
ಮೇ 12 ಅವರು ಮೃತಪಟ್ಟು ಒಂದು ವರ್ಷ ಆಗಿದ್ದು ಅವರ ಸೇವೆ, ಒಡನಾಟ, ಸಹಾಯ, ವ್ಯಕ್ತಿತ್ವನ್ನು ಕಾರ್ಯಕ್ರಮದಲ್ಲಿ ಪುಷ್ಪ ನಮನ ಸಲ್ಲಿಸಿ ನೆನಪಿಸಿಕೊಳ್ಳಲಾಯಿತು.
ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನದ ಸಭಾಂಗಣದಲ್ಲಿ ನಡೆದ ನೆನಪಿನಂಗಳದಲ್ಲಿ…ಕೆ.ವಿ.ಆರ್ ಟಾಗೋರ್ ಎಂಬ ಕಾರ್ಯಕ್ರಮ ಟ್ಯಾಗೋರ್ ಅವರ ಸೇವೆಯನ್ನು ಸ್ಮರಿಸುವ ಕಾರ್ಯಕ್ರಮವಾಗಿ ಮಾರ್ಪಟ್ಟಿತು. ಜೊತೆಗೆ ಅವರ ಮಾನವೀಯ ಕೆಲಸಗಳನ್ನು ಮುಂದುವರಿಸಲು ಸಹ್ಯಾದ್ರಿ ಸಂಘ ಪಣ ತೊಟ್ಟಿತು.
ಭಾರತೀಯ ವಿದ್ಯಾ ಭವನದ ನಿರ್ದೇಶಕರಾದ ಎನ್. ಎಸ್ ಶ್ರೀಧರಮೂರ್ತಿ ಪ್ರಾಸ್ತಾವಿಕ ಮಾತನಾಡಿ,
ಟ್ಯಾಗೋರ್ ಪ್ರೀತಿಯ ಕಡಲು. ಅವರ ಜೀವನ ಮೌಲ್ಯಗಳನ್ನು ಸಾರುವುದು ಸಮಾಜದ ಕೆಲಸ. ನಾವೆಲ್ಲರೂ ಸೇರಿ ಅವರ ಕೆಲಸಗಳನ್ನು ಮುಂದುವರಿಸೋಣ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಮುದ್ದುಕೃಷ್ಣ ಮಾತನಾಡಿ, ರಾಜ್ಯದಲ್ಲಿ ಓರ್ವ ಪೊಲೀಸ್ ಅಧಿಕಾರಿಯಾಗಿ ಸಾಮಾಜಿಕ ಬೆಸುಗೆ, ಕಲೆ, ಭಾಷೆ, ಸಂಘಟನೆಯಲ್ಲಿ ಟ್ಯಾಗೋರ್ ಮುಂಚೂಣಿ ವ್ಯಕ್ತಿ. ಅವರ ಕಲಾ ಸೇವೆ, ಕಲಾವಿದರ ಬಗೆಗಿನ ಪ್ರೀತಿ ಅಪಾರವಾದುದು ಎಂದರು.
ಖ್ಯಾತ ಬರಹಗಾರ ಪ್ರಧಾನ ಗುರುದತ್ ಮಾತನಾಡಿ, ಟ್ಯಾಗೋರ್ ಅವರ ಪ್ರೀತಿ, ವಿಶ್ವಾಸ ಅವರ ಸೇವೆ ಪ್ರತಿಯೊಬ್ಬರಿಗೂ ಮಾದರಿ. ಅವರ ಆದರ್ಶ ಪಾಲನೆ ಮಾಡೋಣ ಎಂದರು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಹ್ಯಾದ್ರಿ ಸಂಘದ ಶ್ರೀಧರ್, ಮಲೆನಾಡಿನ ಮೇಲಿದ್ದ ಟ್ಯಾಗೋರ್ ಪ್ರೀತಿಯನ್ನು ಬಣ್ಣಿಸಿದರು. ಮಲೆನಾಡಿನ ಜನರ ಸಮಸ್ಯೆಗೆ ದನಿಯಾಗಿದ್ದ ಟ್ಯಾಗೋರ್ ಅವರ ಸೇವೆಯನ್ನು ಸಹ್ಯಾದ್ರಿ ಸಂಘ ಮುಂದುವರಿಸುತ್ತದೆ ಎಂದರು. ಕಾರ್ಯಕ್ರಮದಲ್ಲಿ ಟ್ಯಾಗೋರ್ ಆಪ್ತರು, ಕುಟುಂಬದವರು, ಅಭಿಮಾನಿಗಳು ಇದ್ದರು.
ಕಾರ್ಯಕ್ರಮದಲ್ಲಿ ಕಿರಣಕೆರೆ ಗೋಪಾಲಕೃಷ್ಣ ಅವರ ಸುಗಮ ಸಂಗೀತ ನಡೆಯಿತು. ಸಹ್ಯಾದ್ರಿ ಸಂಘದ ಕಾರ್ಯದರ್ಶಿ ಜಯಪ್ರಕಾಶ್ ಹೊಸಮನೆ ಸೇರಿದಂತೆ ಸಹ್ಯಾದ್ರಿ ಸಂಘದ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಇದ್ದರು.

ಶೀಘ್ರದಲ್ಲಿ ಅಭಿನಂದನಾ ಪುಸ್ತಕ ಬಿಡುಗಡೆ!

ಮಲೆನಾಡಿನ ಮೇರು ವ್ಯಕ್ತಿತ್ವ, ಸಹ್ಯಾದ್ರಿ ಸಂಘದ ಅಧ್ಯಕ್ಷರಾಗಿ, ಕರ್ನಾಟಕ ಸರ್ಕಾರದ ಹಿರಿಯ ಪೊಲೀಸ್ ಅಧಿಕಾರಿಯಾಗಿ ಹಾಗೂ ಹಲವಾರು ಸಂಘ ಸಂಸ್ಥೆಗಳ ಪ್ರಮುಖರಾಗಿ, ಮಲೆನಾಡಿನ ದನಿಯಾಗಿ ದೀರ್ಘಕಾಲ ಸೇವೆ ಮಾಡಿರುವ ಸಾವಿರಾರು ಜನರಿಗೆ ಅಣ್ಣನಾಗಿ, ಗೆಳೆಯನಾಗಿ, ಹಿತೈಶಿಯಾಗಿ ಮಾರ್ಗದರ್ಶಕರಾಗಿದ್ದ ಟ್ಯಾಗೋರ್ ಕುರಿತಾದ ಅಭಿನಂದನಾ ಗ್ರಂಥ ಬಿಡುಗಡೆಗೆ ಅವರ ಸ್ನೇಹಿತ ವಲಯ ಕೆಲಸ ಮಾಡುತ್ತಿದೆ. ಶೀಘ್ರದಲ್ಲಿ ಪುಸ್ತಕ ಬಿಡುಗಡೆ ಮೂಲಕ ಅವರಿಗೆ ಗೌರವ ಸಲ್ಲಿಸಲಾಗುತ್ತದೆ.

Categories
ಬೆಂಗಳೂರು

ಆನ್‌ಲೈನ್ ವ್ಯವಹಾರಕ್ಕೂ ಮುನ್ನ ಎಚ್ಚರಎಚ್ಚರ!

  • 100 ರೂ ಲಿಪ್‌ಸ್ಟಿಕ್‌ ಆಸೆಗೆ ಕಳೆದುಕೊಂಡಿದ್ದು 3 ಲಕ್ಷ!
  • ಹೆಚ್ಚಿದ ವಂಚನೆ: ಸೈಬರ್ ಕ್ರೈಂ ಪೊಲೀಸ್ ಮೌನ?!

NAMMUR EXPRESS NEWS
ಬೆಂಗಳೂರು: ನೂರು ರೂಪಾಯಿ ಲಿಪ್‌ಸ್ಟಿಕ್ ಆಸೆಗೆ ಬಿದ್ದ ಯುವತಿಯೊಬ್ಬರು ಬರೋಬ್ಬರಿ ಮೂರೂವರೆ ಲಕ್ಷ ಕಳೆದುಕೊಂಡಿದ್ದಾರೆ.
ಹೌದು, ಆಶ್ಚರ್ಯವಾದರೂ ಇದು ನಿಜ. ಇತ್ತೀಚೆಗೆ ಸೈಬರ್ ವಂಚಕರ ಹಾವಳಿ ಹೆಚ್ಚಾಗಿದೆ. ಅದರಲ್ಲೂ ಅಮಾಯಕ ಜನ ಸಿಕ್ಕರಂತೂ, ಅವರಿಗೆ ಮೋಸ ಮಾಡೋದಿಕ್ಕೆ ರೆಡಿಯಾಗಿ ಇರ್ತಾರೆ. ಬೆಂಗಳೂರಿನ ಹೆಬ್ಬಾಳ ಬಳಿಯ ನಾಗೇನಹಳ್ಳಿ ನಿವಾಸಿಯಾಗಿರೋ ಯುವತಿಯೊಬ್ಬರಿಗೆ ಆನ್‌ಲೈನ್ ಡೆಲಿವರಿ ಕಂಪನಿಯಿಂದ ಕಾಲ್ ಮಾಡ್ತಿದ್ದೀವಿ ಮೇಡಂ ಅಂತಾ ಅಪರಿಚಿತ ವ್ಯಕ್ತಿಯೊಬ್ಬ ಕಾಲ್ ಮಾಡಿದ್ದ. ಹಾಗೇ ಮಾತು ಮುಂದುವರಿಸಿ, ನಮ್ಮಲ್ಲಿ ನೂರು ರೂಪಾಯಿ ಲಿಪ್‌ಸ್ಟಿಕ್ ಬುಕ್ ಮಾಡಿದ್ರೆ, ಲಕ್ಷಾಂತರ ರೂಪಾಯಿ ಬಹುಮಾನ ಗೆಲ್ಲಬಹುದು ಅಂತಾ ಯುವತಿಗೆ ತಲೆ ಸವರಿದ್ದ. ಆತನ ಮಾತನ್ನು ನಂಬಿದ ಯುವತಿ ನೂರು ರೂಪಾಯಿ ತಾನೇ ಓಕೆ ಅಂತಾ ಹೇಳಿದ್ದರು.
ನೂರು ರೂಪಾಯಿ ಬೆಲೆಯ ಲಿಪ್‌ಸ್ಟಿಕ್ ಬುಕ್ ಮಾಡಿದ ಯುವತಿಗೆ ಕೆಲ ನಿಮಿಷದಲ್ಲೇ ಆ ಕಡೆಯಿಂದ ಅಪರಿಚಿತ ಕಾಲ್ ಮಾಡಿದ್ದ. ಮೇಡಂ ನಿಮಗೆ ಒಂದು ಲ್ಯಾಪ್ ಟಾಪ್ ಮತ್ತು ಐಫೋನ್ ಬಂಪರ್ ಬಹುಮಾನ ಬಂದಿದೆ ಅಂದಿದ್ದ. ಈ ಮಾತು ಕೇಳಿದ ಯುವತಿ ಫುಲ್ ಖುಷಿ ಆಗಿ ಥ್ಯಾಂಕ್ ಯೂ ಸರ್ ಅಂದಿದ್ಲು. ಆಗ ಆ ಅಪರಿಚಿತ ವ್ಯಕ್ತಿ ನೀವೇ ಅಂತಾ ಕನ್ನರ್ಮ್ ಮಾಡೋಕೆ ನಿಮಗೆ ಒಂದು ಲಿಂಕ್ ಕಳಿಸಿದ್ದೀನಿ ಅದನ್ನು ಓಕೆ ಮಾಡಿ ಅಂದಿದ್ದ. ಅಷ್ಟೇ ತಾನೇ ಅಂತಾ ಯುವತಿ ಆ ಲಿಂಕ್ ಓಕೆ ಮಾಡಿದ್ಲು. ಅಷ್ಟೇ ಕ್ಷಣಮಾತ್ರದಲ್ಲೇ ಆ ಯುವತಿ ಅಕೌಂಟ್ ನಲ್ಲಿದ್ದ ಮೂರು ಲಕ್ಷದ ಮೂವತ್ತೆಂಟು ಸಾವಿರ ಡೆಬಿಟ್ ಆಗಿದೆ ಅಂತಾ ಬ್ಯಾಂಕ್ ಕಡೆಯಿಂದ ಮಸೇಜ್ ಬಂದಿತ್ತು. ಯುವತಿ ಆ ಮಸೇಜ್ ನೋಡಿ ದಂಗಾಗಿ ಹೋದರು.
ಸದ್ಯ ಮೋಸ ಹೋದ ಯುವತಿ, ಈ ಸಂಬಂಧ ಬೆಂಗಳೂರು ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Categories
ಬೆಂಗಳೂರು

ಮುಂಗಾರು ಮಳೆ ಏನು ನಿನ್ನ ಲೀಲೆ!

  • ಮೇ ಮಧ್ಯದ ಬಳಿಕ ಮುಂಗಾರು ಪ್ರವೇಶ
  • ರಾಜ್ಯದಲ್ಲಿ 3 ದಿನ ಮಳೆ ಅಬ್ಬರ..?!
  • ಬೆಂಗಳೂರಲ್ಲಿ ಮಳೆಗೆ ಓರ್ವ ಬಲಿ

NAMMUR EXPRESS NEWS
ಬೆಂಗಳೂರು: ಮೇ 15ರ ಬಳಿಕ ಮುಂಗಾರು ಸೆಟ್ ಆಗಲಿದೆ ಎಂಬ ಮಾಹಿತಿ ನಡುವೆ ಮೂರು ದಿನಗಳ ಕಾಲ ರಾಜ್ಯಾದ್ಯಂತ ಮಳೆ ಅಬ್ಬರಿಸಲಿದೆ ಎಂದುರಾಜ್ಯ ಹವಾಮಾನ ಇಲಾಖೆ ತಿಳಿಸಿದೆ.
ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಇನ್ನೂ 3 ದಿನ ಗುಡುಗು ಸಹಿತ ಮಳೆಯಾಗಲಿದೆ. ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಎದ್ದಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಮಳೆಯಾಗಲಿದೆ.
ಭಾನುವಾರ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ಕೊಡಗು, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಚದುರಿದ ಮಳೆಯಾಗುವ ನಿರೀಕ್ಷೆ ಇದೆ. ಕೆಲವು ಜಿಲ್ಲೆಗಳಲ್ಲಿ ಮೋಡ ಮುಸುಕಿದ ವಾತಾವರಣವಿದ್ದು, ಮಲೆನಾಡು, ಉತ್ತರ ಒಳನಾಡಿನಲ್ಲಿ ಇಂದಿನಿಂದ 3 ದಿನ ಮಳೆ ಸಾಧ್ಯತೆ ಇದೆ ಅಂತ ಹವಾಮಾನ ಇಲಾಖೆ ಎಚ್ಚರಿಸಿದೆ.

ಬೆಂಗಳೂರಿನಲ್ಲಿ ಭಾರೀ ಮಳೆಯಿಂದ ವಿದ್ಯುತ್ ಪ್ರವಹಿಸಿ ವ್ಯಕ್ತಿಯೋರ್ವ ಮೃತಪಟ್ಟಿದ್ದಾನೆ. ಶನಿವಾರ ಭಾರೀ ಮಳೆ ಶುರುವಾದಾಗ ನಾಲ್ವರು ವ್ಯಕ್ತಿಗಳು ಬಸ್ ಶೆಲ್ಟರ್‌ನಲ್ಲಿ ಕುಳಿತಿದ್ದರು. ಈ ವೇಳೆ ಕರೆಂಟ್ ಶಾಕ್ ಹೊಡೆದ ಅನುಭವವಾಗಿದೆ. ಆಗ ಮೂವರು ಎದ್ದು, ಆ ಸ್ಥಳದಿಂದ ಹೊರಕ್ಕೆ ಓಡಿದ್ದಾರೆ. ಆದರೆ 35 ವರ್ಷದ ವ್ಯಕ್ತಿಯೊಬ್ಬ ಏಳುವಾಗ ಪಕ್ಕದ ಬೋರ್ಡ್ ಟಚ್ ಆಗಿದೆ. ಆಗ ವಿದ್ಯುತ್ ಶಾಕ್ ಹೊಡೆದು ಆತ ಮೃತಪಟ್ಟಿದ್ದಾನೆ.

2 ವಾರ ಮೊದಲೇ ಮುಂಗಾರು ಶುರು
ನೈರುತ್ಯ ಮುಂಗಾರು ಮಾರುತ ಈವರ್ಷ ಅವಧಿಗೆ ಮೊದಲೇ ಆಗಮಿಸಲಿದೆ, ಮೇ 15ರ ವೇಳೆಗೆ ಅಂಡಮಾನ್ ದ್ವೀಪವು ವರ್ಷದ ಮೊದಲ ಮುಂಗಾರುಮಳೆಯ ಸಿಂಚನಕ್ಕೆ ಸಾಕ್ಷಿಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಪ್ರಸ್ತುತ ಅಸಾನಿ ಚಂಡಮಾರುತದ ಪ್ರಭಾವದಿಂದ ದಕ್ಷಿಣ ಕರಾವಳಿ, ಕರ್ನಾಟಕ ಹಾಗೂ ಆಂಧ್ರದ ಒಳನಾಡಿನಲ್ಲಿ ಮಳೆಯಾಗುತ್ತಿದೆ, ನೈರುತ್ಯ ಮುಂಗಾರು ಅಂಡಮಾನ್ ಸಮುದ್ರ ಮತ್ತು ಬಂಗಾಳ ಕೊಲ್ಲಿಗೆ ಮೇ 15 ರ ವೇಳೆಗೆ ಪ್ರವೇಶಿಸಲಿದೆ. ಅಂಡಮಾನ್ ದ್ವೀಪದಲ್ಲಿ ಮುಂದಿನ ಐದು ದಿನ ಮಳೆಯಾಗಲಿದೆ ಎಂದು ಇಲಾಖೆ ಹೇಳಿದೆ. ಸಾಮಾನ್ಯವಾಗಿ ಪ್ರತಿವರ್ಷ ವಾಡಿಕೆಯಂತೆ ಜೂನ್ 1 ರಂದು ಮುಂಗಾರು ಕೇರಳ ತೀರಕ್ಕೆ ಪ್ರವೇಶಿಸುತ್ತದೆ.
ಈ ವರ್ಷ ವಾಡಿಕೆ ಎಷ್ಟೇ ಮುಂಗಾರು ಮಳೆಯಾಗಲಿದೆ ಎಂದು ಈಗಾಗಲೇ ಇಲಾಖೆ ಭವಿಷ್ಯ ನುಡಿದಿದೆ. ಇದರೊಂದಿಗೆ ಸತತ 4ನೇ ವರ್ಷವೂ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಮೂಡಿದೆ, ಈ ಮಧ್ಯೆ ಉತ್ತರ ಭಾರತದ ಹಲವು ಭಾಗಗಳು ಉಷ್ಣ ಮಾರುತ ಮುಂದುವರಿದಿದೆ.

Categories
ರಾಜಕೀಯ

ರಾಜ್ಯ ರಾಜಕೀಯದಲ್ಲಿ ಇನ್ನು ವಿಜಯೇಂದ್ರ ಪರ್ವ!?

  • ವಿಧಾನ ಪರಿಷತ್ ಸ್ಥಾನಕ್ಕೆ ಯಡಿಯೂರಪ್ಪ ಮಗನ ಹೆಸರು ಅಂತಿಮ?
  • ಮುಂದಿನ ಸಚಿವ ಸಂಪುಟದಲ್ಲಿ ಸ್ಥಾನ ಪಕ್ಕಾ..?
  • ಮೇಲ್ಮನೆ, ರಾಜ್ಯ ಸಭಾ ಚುನಾವಣೆ::ಯಾರು ಕಣಕ್ಕೆ?

NAMMUR EXPRESS NEWS
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಅವರು ರಾಜ್ಯ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಬಹುತೇಕ ಅಂತಿಮವಾಗಿದೆ.
ರಾಜ್ಯ ವಿಧಾನ ಪರಿಷತ್‌ನ ಒಂದು ಸ್ಥಾನಕ್ಕೆ ವಿಜಯೇಂದ್ರ ಹೆಸರನ್ನು ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲಿ ಅಂತಿಮಗೊಳಿಸಲಾಗಿದೆ ಎನ್ನಲಾಗಿದೆ.
ವಿಧಾನ ಪರಿಷತ್‌ ಮತ್ತು ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಬಂಧ ಬಿಜೆಪಿ ಪ್ರಮುಖ ನಾಯಕರ (ಕೋರ್ ಕಮಿಟಿ) ಸಭೆ ಶನಿವಾರ ನಡೆಯಿತು. ವಿಧಾನ ಪರಿಷತ್ 1 ಸ್ಥಾನಕ್ಕೆ ಬಿ.ವೈ.ವಿಜಯೇಂದ್ರ ಹೆಸರು ಅಂತಿಮಗೊಳಿಸಲಾಗಿದೆ. ಉಳಿದ ಮೂರು ಸ್ಥಾನಕ್ಕೆ ತಲಾ 5 ಹೆಸರುಗಳಂತೆ 15 ಹೆಸರನ್ನು ಶಿಫಾರಸು ಮಾಡಲಾಗಿದೆ. ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಹೆಸರನ್ನು ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಲಾಗುವುದು ಎಂದು ತಿಳಿದು ಬಂದಿದೆ.
ಮಾಜಿ ಸಿಎಂ ಯಡಿಯೂರಪ್ಪಗೆ ಈ ಮೊದಲೇ ಸಂದೇಶ ರವಾನೆ ಆಗಿತ್ತಾ ಎಂಬ ಪ್ರಶ್ನೆ ಉದ್ಭವಿಸಿದೆ. ಶುಕ್ರವಾರ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಭೇಟಿ ವೇಳೆ ವಿಜಯೇಂದ್ರ ಹೆಸರು ಪ್ರಸ್ತಾಪಿಸಲು ಯೋಜನೆ ರೂಪಿಸಲಾಗಿತ್ತಾ ಎಂಬ ಚರ್ಚೆ ನಡೆಯುತ್ತಿದೆ.

ಮತ್ಯಾರಿಗೆ ಸ್ಥಾನ..?
ಮಾಜಿ ಸಚಿವ ಲಕ್ಷ್ಮಣ್ ಸವದಿ, ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಎಂ.ರಾಜೇಂದ್ರ, ನಿರ್ಮಲಾ ಕುಮಾರ್ ಸುರಾನಾ, ಪ್ರಧಾನ ಕಾರ್ಯದರ್ಶಿಗಳಾದ ಸಿದ್ದರಾಜು, ಮಹೇಶ್ ತೆಂಗಿನಕಾಯಿ, ಓಬಿಸಿ ಮೋರ್ಚಾ ಅಧ್ಯಕ್ಷ ನೆ.ಲ.ನರೇಂದ್ರ ಬಾಬು, ಎಸ್‌ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಹೆಸರುಗಳನ್ನು ಉಳಿದ ಸ್ಥಾನಗಳಿಗೆ ಶಿಫಾರಸು ಮಾಡಲಾಗಿದೆ. ಒಂದು ಸ್ಥಾನವನ್ನು ಸಿನಿಮಾ ಅಥವಾ ಕಲೆ ಕ್ಷೇತ್ರದಿಂದ ಜನಪ್ರಿಯತೆ ಇರುವ ಒಬ್ಬ ವ್ಯಕ್ತಿ ಆಯ್ಕೆ ಮಾಡಲು ನಿರ್ಧಾರಿಸಲಾಗಿದೆ. ಉಳಿದ ಮೂರು ಸ್ಥಾನಕ್ಕೆ ತಲಾ 5 ಹೆಸರುಗಳಂತೆ 15 ಹೆಸರು ಕೇಳಿ ಬಂದಿದೆ.

ರಾಜ್ಯ ಸಭೆಗೆ ಸಚಿವೆ ನಿರ್ಮಲಾ ಸೀತಾರಾಮನ್ ಹೆಸರು ಫೈನಲ್!?

ರಾಜ್ಯಸಭೆ ಚುನಾವಣೆಯ ಒಂದು ಸೀಟ್‍ಗೆ ಬಿಜೆಪಿಯಿಂದ ನಿರ್ಮಲಾ ಸೀತಾರಾಮನ್ ಹೆಸರು ಅಂತಿಮಗೊಳಿಸಲಾಗಿದೆ.
ವಿಧಾನ ಪರಿಷತ್ ಮತ್ತು ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಬಂಧ ಬಿಜೆಪಿ ಪ್ರಮುಖ ನಾಯಕರ (ಕೋರ್ ಕಮಿಟಿ) ಸಭೆ ಶನಿವಾರ ನಡೆಯಿತು.
ರಾಜ್ಯದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಈಗಾಗಲೇ ಚುನಾವಣೆ ಘೋಷಣೆಯಾಗಿದೆ. ಈ ಪೈಕಿ ಒಂದು ಸ್ಥಾನಕ್ಕೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೆಸರು ಅಂತಿಮಗೊಂಡಿದೆ.
ನಿರ್ಮಲಾ ಸೀತಾರಾಮನ್, ಕೆ.ಸಿ. ರಾಮಮೂರ್ತಿ, ಜೈರಾಂ ರಮೇಶ್ ಅವರಿಂದ ತೆರವಾಗಲಿರುವ ಮೂರು ಸ್ಥಾನ ಮತ್ತು ಆಸ್ಕರ್ ಫರ್ನಾಂಡಿಸ್ ಅವರ ನಿಧನದಿಂದ ತೆರವಾಗಲಿರುವ ಸ್ಥಾನಗಳಿಗೆ ಈ ಚುನಾವಣೆ ನಡೆಯಲಿದೆ. ಈ ಪೈಕಿ ನಿರ್ಮಲಾ ಸೀತಾರಾಮನ್ ಮತ್ತೆ ಒಂದು ಸ್ಥಾನಕ್ಕೆ ಸ್ಪರ್ಧಿಸುವುದು ಖಚಿತವಾಗಿದೆ.

ರಾಜ್ಯ ಸಭೆಗೆ ಲಹರಿ ವೇಲು..?

ರಾಜ್ಯಸಭಾ ಮೂರನೇ ಸ್ಥಾನಕ್ಕೆ ಲಹರಿ ವೇಲು, ಪ್ರಕಾಶ್ ಶೆಟ್ಟಿ ಹೆಸರು ಶಿಫಾರಸ್ಸು ಆಗಿದ್ದು, ಮೂರನೇ ಸ್ಥಾನಕ್ಕೆ ಮತಗಳ ಕೊರತೆ ಎದುರಾಗಲಿದೆ. ಹೆಚ್ಚುವರಿ ಮತಗಳನ್ನ ಅನ್ಯಪಕ್ಷಗಳಿಂದ ಪಡೆಯುವಂತೆ ಸೂಚಿಸುವ ಸಾಧ್ಯತೆ ಇದೆ. ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ಹೆಸರು ರಾಜ್ಯಸಭೆ ಮತ್ತು ಪರಿಷತ್ ಎರಡಕ್ಕೂ ಪ್ರಸ್ತಾಪ ಆಗಿರುವ ಬಗ್ಗೆ ವರದಿಯಾಗಿದ್ದು, ಇನ್ನೊಂದು ಸೀಟ್‍ಗೆ ಕೆ.ಸಿ.ರಾಮಮೂರ್ತಿ ಸೇರಿದಂತೆ 5 ಹೆಸರು ಶಿಫಾರಸ್ಸು ಆಗಿದೆ.

Categories
ರಾಜಕೀಯ

ಗೃಹ ಸಚಿವರ ದೆಹಲಿ ಭೇಟಿ ಸಸ್ಪೆನ್ಸ್ ಏನೂ ಇಲ್ಲ!

  • ವೈಯಕ್ತಿಕ ಕೆಲಸಕ್ಕಾಗಿ ತೆರಳಿದ್ದೆ ಎಂದ ಆರಗ ಜ್ಞಾನೇಂದ್ರ

NAMMUR EXPRESS NEWS
ಬೆಂಗಳೂರು: ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ದೆಹಲಿ ಭೇಟಿ ಹಲವು ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಸಚಿವರು ಸ್ಪಷ್ಟನೆ ನೀಡಿದ್ದಾರೆ.
ಸಚಿವ ಸಂಪುಟ ವಿಚಾರವಾಗಿ ಸಿಎಂ ದೆಹಲಿಗೆ ಹೋದ ಬೆನ್ನಲ್ಲೆ, ಗೃಹಸಚಿವ ಆರಗ ಜ್ಞಾನೇಂದ್ರರವರುಕೂಡ ದೆಹಲಿಗೆ ತೆರಳಿದ್ದರು. ಇದು ನಾನಾ ಬಗೆಯ ಚರ್ಚೆಗೆ ಕಾರಣವಾಗಿತ್ತು. ಒಂದು ಕಡೆ ಹಂಗಾಮಿ ಸಿಎಂ ಅಥವಾ ನಾಲ್ಕು ಡಿಸಿಎಂ ಸ್ಥಾನದಲ್ಲಿ ಒಂದು ಇವರಿಗೆ ಸಿಗಲಿದೆ ಎಂಬ ಮಾತು ಒಂದು ಕಡೆಯಾಗಿದ್ದರೇ, ಗೃಹಸಚಿವ ಸ್ಥಾನವನ್ನು ಉಳಿಸಿಕೊಳ್ಳಲು ತೆರಳಿದ್ದರು ಎಂಬ ಅಭಿಪ್ರಾಯವೂ ವ್ಯಕ್ತವಾಗಿತ್ತು. ತಮ್ಮ ಖಾಸಗಿ ಕೆಲಸವೊಂದು ದೆಹಲಿ ಮಟ್ಟದಲ್ಲಿ ಆಗಬೇಕಿದ್ದರಿಂದ ಅದಕ್ಕಾಗಿ ಸಮಯ ಕೇಳಿದ್ದ ಗೃಹಸಚಿವರಿಗೆ ದೆಹಲಿ ನಾಯಕರು ಭೇಟಿಗೆ ಅವಕಾಶ ನೀಡಿದ್ದರಿಂದ ದಿಢೀರ್ ದೆಹಲಿಗೆ ತೆರಳಿದ್ದರು ಎಂದು ಹೇಳಲಾಗಿದೆ.

ಆರಗ ಹೇಳಿದ್ದೇನು?
” ನಾನು ದೆಹಲಿಗೆ ಹೋಗಿದ್ದು ಖಾಸಗಿ ಕೆಲಸಕ್ಕಾಗಿ, ಅಲ್ಲಿ ಸಿಎಂ ಬೊಮ್ಮಾಯಿ ಅಲ್ಲಿ ಅವರು ಇದ್ದರು ಅವರನ್ನ ಭೇಟಿಯಾಗಿದ್ದೇನೆ ಅಷ್ಟೆ. ಆದರೆ ಹೈಕಮಾಂಡ್ ನಾಯಕರನ್ನು, ಪ್ರಹ್ಲಾದ್ ಜೋಶಿ ಅವರ ಭೇಟಿ ಮಾಡಿಲ್ಲ. ನಾನು ದೆಹಲಿಗೆ ಹೋಗುವ ಹೊತ್ತಿಗೆ, ಪ್ರಹ್ಲಾದ್ ಜೋಶಿಯವರು ಈ ಕಡೆಗೆ ವಾಪಸ್ ಬರುತ್ತಿದ್ದರು. ಇದು ಖಾಸಗಿ ಭೇಟಿ ಅಷ್ಟೇ.

  • ಆರಗ ಜ್ಞಾನೇಂದ್ರ
    ಗೃಹ ಸಚಿವ