Categories
ಶಿಕ್ಷಣ

ಎಸ್ ಎಸ್ ಎಲ್ ಸಿ ಫಲಿತಾಂಶಕ್ಕೆ ಕ್ಷಣಗಣನೆ!

  • ಮೇ 19ರಂದು ಫಲಿತಾಂಶ : ವಿದ್ಯಾರ್ಥಿಗಳಿಗೆ ಕಾತುರ
  • ಭಯ ಬೇಡ, ಸೋತವರೇ ಗೆದ್ದಿದ್ದು ಹೆಚ್ಚು…!

NAMMUR EXPRESS NEWS
ಬೆಂಗಳೂರು: 2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಗುರುವಾರ (ಮೇ 19) ಪ್ರಕಟವಾಗಲಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಗುರುವಾರ ಮಧ್ಯಾಹ್ನ 12.30ಕ್ಕೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಕಚೇರಿಯಲ್ಲಿ ಫಲಿತಾಂಶ ಪಕಟಿಸಲಿದ್ದಾರೆ. ಬಳಿಕ ವಿವಿಧ ವೆಬ್‌ಸೈಟ್‌ಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ.
ಮಾರ್ಚ್ 28ರಿಂದ ಏಪ್ರಿಲ್ 11ರವರೆಗೆ ನಡೆದಿದ್ದ ಪರೀಕ್ಷೆಯಲ್ಲಿ ರಾಜ್ಯದ ಒಟ್ಟು 15,387 ಶಾಲೆಗಳ 8.73 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ಫಲಿತಾಂಶ ನೋಡೋದು ಹೇಗೆ?

ಫಲಿತಾಂಶವನ್ನು http://kseeb. kar.nic.in. http://sslc. karnataka.gov.in, http:// karresults.nic.in ವೆಬ್ ಸೈಟ್‌ಗಳಲ್ಲಿ ವೀಕ್ಷಿಸಬಹುದಾಗಿದೆ. ನಂತರ ಮೊಬೈಲ್ ಸಂಖ್ಯೆಗೂ ಸಂದೇಶ ತಲುಪಲಿದೆ.

ಭಯ ಬೇಡ, ಸೋತವನೆ ಗೆಲ್ಲೋದು!
ಫಲಿತಾಂಶ ಏನೇ ಇರಲಿ, ಭಯ ಬೇಡ, ಕಡಿಮೆ ಅಂಕ ಬಂದರೆ, ಮೊದಲಿಗರರಾಗದಿದ್ದರೆ ಆತಂಕ ಬೇಡ, ಪ್ರಪಂಚದಲ್ಲಿ ಸೋತವನೆ ಗೆದ್ದಿರೋದು ಹೆಚ್ಚು. ಹಾಗಾಗಿ ಮತ್ತೆ ಹೆಚ್ಚಿನ ಪ್ರಯತ್ನ ಮಾಡಿ.

ಎಲ್ಲಾ ವಿದ್ಯಾರ್ಥಿಗಳಿಗೆ ಶುಭಾಶಯಗಳು

Categories
ಕೃಷಿ

ಶತಕದತ್ತ ಕೆಜಿ ಟೊಮೆಟೋ ಬೆಲೆ!

  • ಬೆಳೆ ನಷ್ಟ, ಬೇಡಿಕೆ ಹೆಚ್ಚಳ ಹಿನ್ನೆಲೆ: ಏರಿದ ಬೆಲೆ

NAMMUR EXPRESS NEWS
ಬೆಂಗಳೂರು: ಟೋಮೋಟೋ ಕೆಜಿ ಬೆಲೆ ಈಗ ಶತಕ ದತ್ತ ಬಂದು ನಿಂತಿದೆ.
ಹೌದು ಈಗ ಪ್ರತೀ ಕೆಜಿ ಟೊಮೆಟೋ ಬೆಲೆ ರೂ.40ಕ್ಕೆ ಏರಿಕೆಯಾಗಿದೆ. ಹಾಪಕಾಮ್ಸ್ ಮಳಿಗೆಗಳಲ್ಲಿ ಕೆಜಿ ಟೊಮೆಟೋ ದರವು 75 ರೂ. ಆಗಿದ್ದರೂ, ಚಿಲ್ಲರೆ ವ್ಯಾಪಾರದಲ್ಲಿ, ನಾಟಿ ಮತ್ತು ಫಾರ್ಮ್ ಟೊಮೊಟೋ ಬೆಲೆ ಗಾತ್ರವನ್ನು ಅವಲಂಬಿಸಿ 80-90 ರೂ.ಗೆ ಏರಿಕೆ ಮಾಡಲಾಗಿದೆ. ಇನ್ನು ಕೆಲವೆಡೆ 100 ರೂ ಹತ್ತಿರ ಬಂದು ನಿಂತಿದೆ.
ಬೆಲೆ ಏರಿಕೆಯಿಂದ ಆತಂಕಗೊಂಡಿರುವ ಅಧಿಕಾರಿಗಳು ಬೆಲೆಗಳನ್ನು ಹೇಗೆ ಕಡಿಮೆ ಮಾಡಬಹುದು ಮತ್ತು ಹೇಗೆ ನಿಯಂತ್ರಿಸಬಹುದು ಎಂಬುದರ ಕುರಿತು ಚಿಂತನೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. ನಮಗೂ ಹೆಚ್ಚಿನ ಬೆಲೆಗೆ ಟೊಮೆಟೋ ಸಿಗುತ್ತಿದ್ದು, ಖರೀದಿ ಕಷ್ಟಸಾಧ್ಯವಾಗುತ್ತಿದೆ. ವ್ಯಾಪಾರ ಮಾಡಲು ಸಾಧ್ಯವಾಗುತ್ತಿಲ್ಲ ಏನೂ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಿದ್ದಾರೆ ಚಿಲ್ಲರೆ ವ್ಯಾಪಾರಿಗಳು.

ತಳ್ಳು ಗಾಡಿಯಲ್ಲಿ ಟೊಮೆಟೊ ಸಿಗಲ್ಲ?!
ಬೆಲೆ ಏರಿಕೆ ಮತ್ತು ಬೇಡಿಕೆಯ ಕುಸಿತವಾಗುತ್ತಿರುವ ಹಿನ್ನೆಲೆಯಲ್ಲಿ ತಳ್ಳು ಗಾಡಿ ವ್ಯಾಪಾರಿಗಳು ಟೊಮೆಟೋ ಮಾರಾಟವನ್ನೇ ಸ್ಥಗಿತಗೊಳಿಸಿದ್ದಾರೆ. ಅತಿವೃಷ್ಟಿಯಿಂದ ಬೆಳೆಗಳು ಹಾನಿಗೊಳಗಾಗಿವೆ. ಹೀಗಾಗಿ ದರ ಏರಿಕೆಯಾಗಿದೆ ಎಂದು ರೈತರು ಹಾಗೂ ವಿತರಕರು ಹೇಳುತ್ತಿದ್ದಾರೆ.

Categories
ಮಲ್ನಾಡ್

ಹಾಕಿಯಲ್ಲಿ ರಾಷ್ಟ್ರ ಮಟ್ಟದಲ್ಲಿ ಮಲೆನಾಡ ಹುಡುಗಿ!

  • ರಿಪ್ಪಿನಪೇಟೆಯ ಯುವ ಪ್ರತಿಭೆ ಪೂಜಿತಾ ಸಾಧನೆ
  • ಕರ್ನಾಟಕ ಮಹಿಳಾ ಹಾಕಿ ತಂಡದ ಸಹ ಆಟಗಾರ್ತಿ

NAMMUR EXPRESS NEWS
ರಿಪ್ಪನ್ ಪೇಟೆ(ಹೊಸನಗರ): ಗ್ರಾಮೀಣ ಭಾಗವೊಂದರ ಹುಡುಗಿ ರಿಪ್ಪನ್ ಪೇಟೆಯ ಬರುವೆ ಗ್ರಾಮದ ಪೂಜಿತಾ ಹಾಕಿ ಕ್ಷೇತ್ರದಲ್ಲಿ ಇದೀಗ ರಾಷ್ಟ್ರದ ಗಮನ ಸೆಳೆದಿದ್ದಾಳೆ.
ರಿಪ್ಪನ್‌ಪೇಟೆ ಬರುವೆ ಗ್ರಾಮದ ನಿವಾಸಿಗಳಾದ ನಾಗೇಶ್ ಗೌಡ ಹಾಗೂ ಪೂರ್ಣಿಮಾ ದಂಪತಿಗಳ ಮಗಳಾದ ಪೂಜಿತ ರಾಷ್ಟ್ರ ಮಟ್ಟದಲ್ಲಿ ಹಾಕಿ ಕ್ರೀಡೆಯಲ್ಲಿ ಮಿಂಚುತ್ತಿದ್ದಾಳೆ. ಅಲ್ಲದೆ ಕರ್ನಾಟಕದ ಸ್ಟಾರ್ ಆಟಗಾರ್ತಿಯಾಗಿದ್ದಾಳೆ.
ಮಧ್ಯ ಪ್ರದೇಶದ ಭೂಫಾಲ್ ನಲ್ಲಿ ನಡೆಯುತ್ತಿರುವ ರಾಷ್ಟ್ರ ಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವು ಮಂಗಳವಾರ ಹರಿಯಾಣ ತಂಡವನ್ನು ಮಣಿಸಿ ಫೈನಲ್ ಹಂತಕ್ಕೆ ತಲುಪಿದೆ.ಈ ಪಂದ್ಯಾವಳಿಯಲ್ಲಿ ಪೂಜಿತಾ ಉತ್ತಮವಾಗಿ ಆಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಬುಧವಾರ ಒಡಿಸ್ಸಾ ತಂಡದ ವಿರುದ್ಧ ಫೈನಲ್ ಪಂದ್ಯಾವಳಿ ನಡೆಯಲಿದೆ.ರಿಪ್ಪನ್ ಪೇಟೆಯ ಬರುವೆ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿ ಕಷ್ಟ ಸುಖ, ನೋವುಗಳನ್ನು ನೋಡಿ ಕೃಷಿ ಆಧರಿಸಿ ಜೀವನ ಸಾಗಿಸಿಕೊಂಡು ಬಂದಂತಹ ನಾಗೇಶ್ ಗೌಡ ಪತ್ನಿ ಪೂರ್ಣಿಮಾ ಈ ದಂಪತಿಗಳ ಮಗಳಾದ ಕುಮಾರಿ ಪೂಜಿತ ಮಂಗಳವಾರ ರಾಷ್ಟ್ರಮಟ್ಟದಲ್ಲಿ ರಿಪ್ಪನ್ ಪೇಟೆಯ ಕೀರ್ತಿಪತಾಕೆಯನ್ನು ಕ್ರೀಡಾಲೋಕದಲ್ಲಿ ಹಾರಿಸುತ್ತಿದ್ದಾಳೆ.

ಹಳ್ಳಿಯಿಂದ ದಿಲ್ಲಿವರೆಗೆ..!
ಕುಮಾರಿ ಪೂಜಿತಾ ತನ್ನ ಬಾಲ್ಯದ ಜೀವನವನ್ನು ರಿಪ್ಪನ್ ಪೇಟೆಯ ಸರಕಾರಿ ಬಾಲಕಿಯರ ಪಾಠಶಾಲೆಯಲ್ಲಿ ವ್ಯಾಸಂಗ ಮಾಡಿ ಮುಂದಿನ ವ್ಯಾಸಂಗಕ್ಕಾಗಿ ಶಿವಮೊಗ್ಗದ ಕ್ರೀಡಾ ಹಾಸ್ಟೆಲ್ ನಲ್ಲಿ 5 ನೇ ತರಗತಿ ಯಿಂದ ಏಳನೇ ತರಗತಿಯವರೆಗೆ ನಂತರ ಎಂಟರಿಂದ 10ನೇ ತರಗತಿ ಕ್ರೀಡಾ ಹಾಸ್ಟೆಲ್ ಮಡಿಕೇರಿಯಲ್ಲಿ ವ್ಯಾಸಂಗ ಮಾಡಿ ಪದವಿಯನ್ನು ಥೆರೆಶಿಯನ್ ಕಾಲೇಜ್ ಮೈಸೂರಿನಲ್ಲಿ ಮುಗಿಸಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಹಲವಾರು ಸಮಸ್ಯೆಗಳ ಮಧ್ಯೆ ಸಾವಿರಾರು ಸ್ಪರ್ಧಾಳುಗಳ ಮಧ್ಯೆ ಸ್ಪರ್ಧಿಸಿ ಗೆದ್ದು ಜಿಲ್ಲಾ ರಾಜ್ಯ,ಹಾಗೂ ರಾಷ್ಟ್ರಮಟ್ಟದಲ್ಲಿ ಸ್ಥಾನ ಪಡೆದುಕೊಂಡು ರಾಷ್ಟ್ರಮಟ್ಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುವ ಅವಕಾಶ ಪಡೆದುಕೊಂಡ ಈ ಪ್ರತಿಭೆಗೆ ನಿಜವಾಗಲೂ ಅಭಿನಂದನೆಗಳು.

ನಮ್ಮೂರ್ ಎಕ್ಸ್ಪ್ರೆಸ್ ಕೂಡ ಶುಭಾಶಯ ಸಲ್ಲಿಸುತ್ತದೆ

Categories
ಬೆಂಗಳೂರು

ನೀರು ಕುಡಿಯಲು ಹೋಗಿ 3 ಮಕ್ಕಳು ಸಾವು!

  • ಗದಗದ ಮುಂಡರಗಿ ತಾಲೂಕಿನಲ್ಲಿ ನಡೆದ ಘಟನೆ
  • ರಾತ್ರಿಯೆಲ್ಲಾ ಮೊಬೈಲ್ ನೋಡಬೇಡ ಎಂದಿದ್ದಕ್ಕೆ ಆತ್ಮಹತ್ಯೆ
  • ಫ್ಯಾಟ್ ಸರ್ಜರಿ ವೇಳೆ ಯುವ ನಟಿ ಸಾವು

NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ನೀರಿನ ಅನಾಹುತಗಳು ಹೆಚ್ಚಾಗುತ್ತಿವೆ. ಮೋಜು ಮಸ್ತಿ, ಅಜಾಗೂರೂಕತೆಯಿಂದ ನೀರಿಗೆ ಬಿದ್ದು ಹಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ನಡುವೆ ರಾಜ್ಯದಲ್ಲಿ ಮೂವರು ಮಕ್ಕಳು ಬಲಿಯಾಗಿದ್ದಾರೆ.
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಅತ್ತಿಕಟ್ಟಿ ತಾಂಡಾದ ಹೊರವಲಯದಲ್ಲಿರುವ ಕೃಷಿ ಹೊಂಡದಲ್ಲಿ ಕಾಲು ಜಾರಿ ಬಿದ್ದು ಮೂವರ ಬಾಲಕಿಯರ ಮೃತಪಟ್ಟಿದ್ದಾರೆ. ಅತ್ತಿಕಟ್ಟಿ ತಾಂಡಾದ ಸುನಿತಾ ಲಮಾಣಿ (13) ಅಂಕಿತಾ ಲಮಾಣಿ (10) ಹಾಗೂ ಡೋಣಿ ತಾಂಡಾದ ಸುನಿತಾ (11) ಮೃತ ಬಾಲಕಿಯರು ಎಂದು ತಿಳಿದು ಬಂದಿದೆ‌. ಕುರಿ ಮರಿ ಮೇಯಿಸಲು ಜಮೀನಿಗೆ ತೆರಳಿದ ಮೂವರು ಬಾಲಕಿಯರು,ಆಟವಾಡುತ್ತ ಕೃಷಿ ಹೊಂಡಕ್ಕೆ ಬಾಯಾರಿಕೆಯಾಗಿ ನೀರುಕುಡಿದು ಕೈಕಾಲು ಮುಖ ತೊಳೆದುಕೊಳ್ಳಲು ಮುಂದಾಗಿದ್ದರು.ಆಯತಪ್ಪಿ ಹೊಂಡದಲ್ಲಿ ಬಿದ್ದ ಮೃತ ಪಟ್ಟ ಬಗ್ಗೆ ಸಂಶಯ ವ್ಯಕ್ತವಾಗಿದೆ. ಅತ್ತಿಕಟ್ಟಿ ತಾಂಡಾದ ಲಕ್ಷ್ಮಣ ಲಮಾಣಿ ಗೋವಾದಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ಗೋವಿಂದನ ಮದುವೆ ಹಿನ್ನೆಲೆ ಕುಟುಂಬ ಸಮೇತ ತಾಂಡಾಕ್ಕೆ ಬಂದಿದ್ದರು. ಮದುವೆ ಮನೆಯಲ್ಲಿ 15ರಿಂದ 20 ಮಕ್ಕಳ ತಂಡವೇ ಸೇರಿತ್ತು.
ರಾತ್ರಿಯಾದರೂ ಮೊಬೈಲ್ ನೋಡಬೇಡ ಎಂದಿದ್ದಕ್ಕೆ ಆತ್ಮಹತ್ಯೆ!: ಜಾಸ್ತಿ ಮೊಬೈಲ್ ನೋಡಬೇಡ. ರಾತ್ರಿ 11 ಗಂಟೆಯಾದರೂ ಮೊಬೈಲ್ ನೋಡಿಕೊಂಡೇ ಇರುತ್ತೀಯಾ, ಬೆಳಗ್ಗೆ 11 ಗಂಟೆಯಾದರೂ ಎದ್ದೇಳಲ್ಲ. ಹಾಗಾಗಿ ಮೊಬೈಲ್ ಮುಟ್ಟಬೇಡ ಅಂತ ತಂದೆ, ತಾಯಿ ಬುದ್ದಿವಾದ ಹೇಳಿದ್ದಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರ ಹೊರವಲಯದ ತಳಗವಾರ ಗ್ರಾಮದಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಜಯಶ್ರೀ(19) ಎಂದು ಗುರುತಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಬಸವೇಶ್ವರ ನಗರದ ನರಸಪ್ಪ ಹಾಗೂ ಜಯಲಕ್ಷ್ಮಮ್ಮನವರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಓರ್ವ ಗಂಡು ಮಗನಿದ್ದ. ಆಟೋ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ನರಸಪ್ಪ ಮತ್ತು ಕೂಲಿ ಕೆಲಸ ಮಾಡುತ್ತಿದ್ದ ಜಯಲಕ್ಷ್ಮಮ್ಮ ಮಕ್ಕಳನ್ನು ಕಷ್ಟಪಟ್ಟು ಬೆಳೆಸುತ್ತಿದ್ದರು. ಆದರೆ ಭಾನುವಾರ ಬೆಳಗ್ಗೆ ಮನೆಗೆ ಬಂದ ನರಸಪ್ಪ, ಮೊಬೈಲ್ ನೋಡಬೇಡ, ಇಷ್ಟು ಹೊತ್ತಾದರೂ ಎದ್ದಿಲ್ಲ ಅಂತ ಮಗಳಿಗೆ ಬೈದಿದ್ದಾರೆ. ಅದೇ ಕೋಪದಲ್ಲಿ ಮೊಬೈಲ್ ಹೊಡೆದು ಹಾಕಿ ಮನೆಗೆ ಚಿಲಕ ಹಾಕಿಕೊಂಡು ಮನೆಯಿಂದ ಹೊರಟು ಹೋಗಿದ್ದ.
ಚಿಕಿತ್ಸೆ ವೇಳೆ ಕನ್ನಡ ಕಿರುತೆರೆ ನಟಿ ಸಾವು: ಕನ್ನಡ ಕಿರುತೆರೆ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದ ಯುವ ನಟಿ ಚೇತನಾ ರಾಜ್ ಎಂಬುವರು ನಿಧನರಾಗಿದ್ದಾರೆ. ಫ್ಯಾಟ್ ಸರ್ಜರಿ (Fat Surgery) ವೇಳೆ ಆಸ್ಪತ್ರೆಯಲ್ಲೇ ಚೇತನಾ ಸಾವನ್ನಪ್ಪಿದ್ದು, ವೈದ್ಯರ ವಿರುದ್ಧ ಮೃತಳ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Categories
ಬೆಂಗಳೂರು

ರಾಜ್ಯದಲ್ಲಿ ಪದೇ ಪದೇ ಭೂಕಂಪ: ಜೀವ ಭಯ!

  • ಬಾಗೇಪಲ್ಲಿ ತಾಲ್ಲೂಕಿನ ಹಲವೆಡೆ ಭೀಕರ ಶಬ್ದ
  • ಕಳೆದ ಕೆಲ ವರ್ಷದಿಂದ ಏನಾಗ್ತಿದೆ..?!

NAMMUR EXPRESS NEWS
ಚಿಕ್ಕಬಳ್ಳಾಪುರ: ರಾಜ್ಯದ ಗಡಿಯ ಹತ್ತಾರು ಗ್ರಾಮಗಳಲ್ಲಿ ಪದೇ ಪದೇ ಭೂಮಿಯೊಳಗೆ ಭಾರೀ ಸ್ಫೋಟದ ಸದ್ದು ಕೇಳಿ ಬರ್ತಿದ್ದು ಜನ ಆತಂಕದಿಂದ ಕಾಲ ಕಳೆಯುವಂತಾಗಿದೆ. ಇನ್ನುಭೂಮಿಯ ಒಳಗೆ ಏನಾಗ್ತಿದೆ ಎಂಬ ರಹಸ್ಯವೂ ಇದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಹತ್ತಾರು ಹಳ್ಳಿಗಳಲ್ಲಿ ಭಾನುವಾರ ರಾತ್ರಿಯಿಂದ ಭೂಮಿಯ ಅಂತರಾಳದಿಂದ ವಿಚಿತ್ರ ಸದ್ದು ಕೇಳಿಬರುತ್ತಿದೆ. ಆ ಸದ್ದಿಗೆ ಭೂಮಿಯೇ ಗಡ ಗಡ ನಡುಗುತ್ತಿದೆ. ಇದ್ರಿಂದ ಜನರಿಗೆ ಭೂಕಂಪನದ ಅನುಭವ ಆಗುತ್ತಿದೆ. ರಾತ್ರಿ 8 ಗಂಟೆಯಿಂದ ಸಣ್ಣ ಪ್ರಮಾಣದಲ್ಲಿ ಆರಂಭವಾದ ಸದ್ದು ರಾತ್ರಿ 9.30 ಹಾಗೂ 9.45 ರಲ್ಲಿ ಬಹಳಷ್ಟು ಜೋರಾಗಿ ಕೇಳಿಬಂದಿದೆ. ಇದರಿಂದ ಭೂಮಿಯೇ ಅಲುಗಾಡಿದ ಅನುಭವ ಆಗಿ ಮನೆಯಲ್ಲಿದ್ದವರೆಲ್ಲಾ ಕೀರಾಚಾಡುತ್ತಾ ಹೊರಗೆ ಬಂದಿದ್ದಾರೆ. ಮನೆಯಲ್ಲಿದ್ದ ಪಾತ್ರೆ ಸಾಮಾನುಗಳಲ್ಲೆವೂ ಅಲುಗಾಡತೊಡಗಿವೆ. ಮಕ್ಕಳು ಭಯಭೀತರಾಗಿ ಚೀರಾಡಿ ಕಣ್ಣೀರು ಹಾಕಿದ್ದಾರೆ. ದಿಕ್ಕು ತೋಚದ ಜನ ಇಡೀ ರಾತ್ರಿ ಮನೆಯ ಹೊರಭಾಗದಲ್ಲೇ ಕಾಲ ಕಳೆದು ಜಾಗರಣೆ ಮಾಡಿದ್ದಾರೆ.
ಬಾಗೇಪಲ್ಲಿ ತಾಲ್ಲೂಕಿನ ಪೆದ್ದತುಂಕೇಪಲ್ಲಿ, ಕದಿರನ್ನಗಾರಪಲ್ಲಿ, ದಾಸಯ್ಯಗಾರಪಲ್ಲಿ, ಟೆಂಕಮಾಕಲಪಲ್ಲಿ, ಲಘುಮದ್ದೇಪಲ್ಲಿ. ಮದ್ದಲಖಾನೆ, ಗುರಾಲದಿನ್ನೆ, ಈರಗಂಟಪಲ್ಲಿ, ಶಂಕವಾರಂಪಲ್ಲಿ ಸೇರಿದಂತೆ ಇನ್ನೂ ಹಲವು ಗ್ರಾಮಗಳಲ್ಲಿ ಈ ರೀತಿಯ ಅನುಭವ ಆಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇದೇ ಮೊದಲಲ್ಲ. ಈ ಹಿಂದೆಯೂ ಚಿಕ್ಕಬಳ್ಳಾಪುರ ತಾಲ್ಲೂಕಿನ ಬಂಡಹಳ್ಳಿ ಹಾಗೂ ಚಿಂತಾಮಣಿ ತಾಲ್ಲೂಕಿನ ಮಿಟ್ಟಹಳ್ಳಿ ಸೇರಿ ಹಲವು ಗ್ರಾಮಗಳಲ್ಲಿ ಇದೇ ರೀತಿಯ ಸದ್ದು ಭೂಮಿ ಕಂಪಿಸಿದ ಅನುಭವಗಳಾಗಿದ್ದವು. ಕೆಲವು ಬಾರಿ 3.0 ತೀವ್ರತೆಯ ಭೂಕಂಪನ ಸಹ ವರದಿಯಾಗಿತ್ತು.

Categories
ಮಲ್ನಾಡ್

ಹಾವು ಹಿಡಿಯಲು ಹೋಗಿ ಆಸ್ಪತ್ರೆ ಸೇರಿದ ಯುವಕ!

  • ಸಾಗರದಲ್ಲಿ ನಡೆದ ಅಚ್ಚರಿ ಘಟನೆ
  • ತೀರ್ಥಹಳ್ಳಿಯ ಆಗುಂಬೆಯಲ್ಲಿ ಅಪರಿಚಿತ ಶವ ಪತ್ತೆ

NAMMUR EXPRESS NEWS
ಸಾಗರ : ಯುವಕನೊಬ್ಬ ಹಾವು ಹಿಡಿಯಲು ಹೋಗಿ ಆಸ್ಪತ್ರೆ ಸೇರಿದ್ದಾನೆ. ತಾಲ್ಲೂಕಿನ ಶ್ರೀಧರ ನಗರದಲ್ಲಿ ಹಾವು ಹಿಡಿಯಲು ಹೋಗಿ ಯುವಕನೋರ್ವ ಕಚ್ಚಿಸಿಕೊಂಡಿದ್ದಾನೆ. ಶ್ರೀಧರ ನಗರದ 1ನೇ ಕ್ರಾಸ್‌ನ ಮನೆಯೊಂದರಲ್ಲಿ ಭಾನುವಾರ ರಾತ್ರಿ ನಾಗರಹಾವು ಕಾಣಿಸಿಕೊಂಡಿತ್ತು. ಈ ವೇಳೆ ದಿಲ್ಯಾದ್ ರೊನಾಲ್ಡ್ ಎಂಬ ಯುವಕ ಯಾವುದೇ ಮುನ್ನಚರಿಕೆ ಕ್ರಮ ವಹಿಸದೇ ಆ ಹಾವು ಹಿಡಿಯಲು ಹೋಗಿದ್ದಾನೆ. ಈ ವೇಳೆ ನಾಗರಹಾವು ಕಚ್ಚಿದೆ.
ದಿಲ್ಕಾದ್ ಹಾವು ಕಚ್ಚಿದೊಡನೆ, ಆ ಸ್ಥಳವನ್ನು ಬ್ಲೆಡ್ ನಿಂದ ಕುಯ್ದು ಕೊಂಡಿದ್ದಾನೆ. ಮನೆಯ ಮಾಲೀಕ ಕೂಡಲೇ ದಿಲ್ಯಾದ್‌ನನ್ನು ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಸಾಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಅಪರಿಚಿತ ಶವ ಪತ್ತೆ!: ತೀರ್ಥಹಳ್ಳಿ ತಾಲೂಕು ಆಗುಂಬೆ ಟವರ್ ಬಳಿ ವಿಷ ಸೇವಿಸಿದ ವೃದ್ಧ(60) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಪರಿಚಿತ ಶವವಾಗಿದ್ದು ತಿಳಿದವರು ಅಥವಾ ಮನೆಯವರು ಕೂಡಲೇ ಆಗುಂಬೆ ಪೊಲೀಸ್ ಠಾಣೆ ಎಸ್ ಐ ಶಿವಕುಮಾರ್9480803314
ಗಣೇಶ್ 94824 45661 ಅಥವಾ ಆಗುಂಬೆ ಸರ್ಕಾರಿ ಆಸ್ಪತ್ರೆಯಲ್ಲಿ ವಿಚಾರಿಸಬಹುದು.

Categories
ಮಲ್ನಾಡ್

ತೀರ್ಥಹಳ್ಳಿ ತಾಲ್ಲೂಕು ಗ್ರಾಮ ಪಂಚಾಯತಿ ಒಕ್ಕೂಟ,ರೋಟರಿ ಸಂಸ್ಥೆ ಸಹಯೋಗದಲ್ಲಿ

ಬೃಹತ್ ರಕ್ತದಾನ ಶಿಬಿರ

ಸ್ಥಳ: ದೇವಂಗಿ
ದಿನಾಂಕ: 21-05-2022

ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿ ಜೀವ ಉಳಿಸಿ..!

ರಕ್ತ ದಾನಿಗಳಿಗೆ ಆಗುವ ಪ್ರಯೋಜನಗಳು?

  • ಹೊಸ ರಕ್ತ ಉತ್ಪತ್ತಿ
  • ಕಾರ್ಯ ತತ್ಪರತೆ ಮತ್ತು ಜ್ಞಾಪಕ ಶಕ್ತಿ ವೃದ್ಧಿ
  • ರಕ್ತದಲ್ಲಿ ಕೊಬ್ಬಿನಾಂಶ ಕಡಿಮೆಯಾಗುತ್ತದೆ
  • ರಕ್ತದ ಒತ್ತಡ, ಇತರೆ ಕೆಲವು ರೋಗಗಳನ್ನು ತಡೆಗಟ್ಟಲು ಸಹಾಯವಾಗುತ್ತದೆ
  • ಹೆಚ್ಚಿನ ಜನರಿಗೆ ಈ ವಿಷಯವನ್ನು ತಿಳಿಸಲು ಸಹಕರಿಸಿ.

ದೇವಂಗಿ, ಮೇಳಿಗೆ, ಬಸವಾನಿ, ಹಾರೋಗೊಳಿಗೆ, ಶೇಡಗಾರು ಹೆದ್ದೂರು,ಮೇಲಿನ ಕುರುವಳ್ಳಿ,ಸಾಲ್ಗಡಿ ಇತರೆ ಭಾಗದ ಜನರು ರಕ್ತದಾನ ಮಾಡಬಹುದು.

Media partner: NAMMUR EXPRESS

Categories
ಮಲ್ನಾಡ್

ಹೊಸ ನಗರದಲ್ಲಿ ಗೋ ಶಾಲೆ: ತೀರ್ಥಹಳ್ಳಿಗೆ ಯಾವಾಗ?

  • ಬೆಸಗೆ ಗ್ರಾಮದಲ್ಲಿ ಆರಗ, ಹಾಲಪ್ಪ ಶಂಕು ಸ್ಥಾಪನೆ
  • 10 ಎಕರೆ ಜಾಗದಲ್ಲಿ ಗೋ ಶಾಲೆ ನಿರ್ಮಾಣ

NAMMUR EXPRESS NEWS
ತೀರ್ಥಹಳ್ಳಿ/ ಹೊಸನಗರ: ಐತಿಹಾಸಿಕ ಸರ್ಕಾರಿ ಗೋ ಶಾಲೆಯನ್ನು ಹೊಸನಗರ ತಾಲೂಕಿನ ಬೆಸಗೆ ಪಂಚಾಯತ್ ಗೊರಗೋಡಿನ 10 ಎಕರೆ ಜಾಗದಲ್ಲಿ ನಿರ್ಮಿಸಲಾಗುತ್ತಿದೆ.
ಗೃಹ ಸಚಿವ ಆರಗ ಜ್ಞಾನೇಂದ್ರ, ಸಾಗರ ಶಾಸಕ ಹರತಾಳು ಹಾಲಪ್ಪ ಭಾನುವಾರ ಗೋಶಾಲೆ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಿದರು.
ಸರ್ಕಾರದ ಮಹತ್ವದ ಯೋಜನೆ ಇದಾಗಿದ್ದು ಜಿಲ್ಲೆಗೆ ಒಂದು ಗೋ ಶಾಲೆ ನಿರ್ಮಾಣವಾಗಲಿದ್ದು, ಹೊಸ ನಗರದಲ್ಲಿ ಚಾಲನೆ ಸಿಕ್ಕಿದೆ.

ತೀರ್ಥಹಳ್ಳಿಯಲ್ಲಿ ಯಾವಾಗ ಗೋ ಶಾಲೆ?
ತೀರ್ಥಹಳ್ಳಿ ತಾಲೂಕಲ್ಲಿ ದಿನ ನಿತ್ಯ ರಸ್ತೆಗಳಲ್ಲಿ ಜಾನುವಾರುಗಳು ವಾಹನಗಳಿಗೆ ಬಲಿಯಾಗುತ್ತಿವೆ. ಆದರೆ ಇನ್ನು ತೀರ್ಥಹಳ್ಳಿಯಲ್ಲಿ ಗೋ ಶಾಲೆ ನಿರ್ಮಾಣವಾಗಿಲ್ಲ. ಈ ಹಿಂದೆ ಭಜರಂಗ ದಳ, ಹಿಂದೂ ಪರ ಸಂಘಟನೆಗಳು ಗೋ ಶಾಲೆಗೆ ಪಟ್ಟು ಹಿಡಿದಿದ್ದವು. ತೀರ್ಥಹಳ್ಳಿಯ ಪ್ರಸಿದ್ದ ಭೀಮನಕಟ್ಟೆ ಶ್ರೀಗಳು ಗೋ ಶಾಲೆಗೆ ಜಾಗ ಒದಗಿಸುವುದಾಗಿ ಹೇಳಿಕೆ ಕೂಡ ನೀಡಿದ್ದರು. ಇದೀಗ ಗೃಹ ಮಂತ್ರಿಗಳು ಹೊಸನಗರ ತಾಲೂಕಿನ ಗೋ ಶಾಲೆಗೆ ಚಾಲನೆ ನೀಡಿದ್ದಾರೆ. ತೀರ್ಥಹಳ್ಳಿಯಲ್ಲೂ ತಕ್ಷಣ ಗೋ ಶಾಲೆ ನಿರ್ಮಾಣ ಮಾಡಬೇಕಿದೆ.

ಏನಿದು ಯೋಜನೆ?ಜಿಲ್ಲೆಗೊಂದು ಗೋಶಾಲೆ

ಶಿವಮೊಗ್ಗ ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಜಿಲ್ಲಾ ಪ್ರಾಣಿ ದಯಾ ಸಂಘ, ಶಿವಮೊಗ್ಗ ಹಾಗೂ ಗ್ರಾಮ ಪಂಚಾಯ್ತಿ ಮೇಲಿನಬೆಸಿಗೆ ಇವರುಗಳ ಸಂಯುಕ್ತಾಶ್ರಯದಲ್ಲಿ ಹೊಸನಗರ ತಾಲ್ಲೂಕು ಹುಂಚ ಹೋಬಳಿ, ಮೇಲಿನಬೆಸಿಗೆ ಗ್ರಾ.ಪಂನ ಗೊರಗೋಡು ಗ್ರಾಮದಲ್ಲಿ ಸರ್ಕಾರದ ವತಿಯಿಂದ ‘ಜಿಲ್ಲೆಗೊಂದು ಗೋಶಾಲೆ’ ನಿರ್ಮಾಣ ಕಾಮಗಾರಿಯ ಅಡಿಗಲ್ಲು ಸಮಾರಂಭ ನಡೆದಿದೆ. ಸರ್ಕಾರದ ಈ ಯೋಜನೆ ಮಹತ್ವ ಪಡೆದಿದೆ.

ನಮ್ಮೂರ್ ಆಂದೋಲನ ಶುರು

ತೀರ್ಥಹಳ್ಳಿಯಲ್ಲಿ ಗೋ ಶಾಲೆ ನಿರ್ಮಾಣ ಹೋರಾಟಕ್ಕೆ ನಮ್ಮೂರ್ ಎಕ್ಸ್ ಪ್ರೆಸ್ ಹೊಸ ಆಂದೋಲನ ಹಮ್ಮಿಕೊಳ್ಳಲಿದೆ. ಪ್ರತಿ ದಿನ ರಸ್ತೆ ಮೇಲೆ ಗೋವುಗಳು ಹೆಣವಾಗುತ್ತಿವೆ. ರಸ್ತೆ ಮೇಲೆ ಗೋವುಗಳು ಇರುವುದರಿಂದ ಕಳ್ಳರಿಗೆ ಅನುಕೂಲ ಆಗುತ್ತದೆ. ಹೀಗಾಗಿ
ಗೋ ಶಾಲೆ ಬೇಕೇ ಬೇಕು..!

Categories
Uncategorized

ಧರ್ಮಸ್ಥಳ ನೇತ್ರಾವತಿ ನದಿ ಆಯ್ತು ಕಸದ ಕೂಪ!

  • ಬಟ್ಟೆ, ಪ್ಲಾಸ್ಟಿಕ್, ಕಸ ಎಸೆಯುವುದು ತಪ್ಪಲ್ಲವೇ..?
  • 25 ಟನ್ ಕಸ ತೆಗೆದ ಯುವ ಬ್ರಿಗೇಡ್ ಸಂಸ್ಥೆ

NAMMUR EXPRESS NEWS
ಧರ್ಮಸ್ಥಳ: ನೇತ್ರಾವತಿ ನದಿಯಲ್ಲಿ ಸ್ನಾನ ಮಾಡುವುದು ಪುಣ್ಯದ ಕೆಲಸ. ತಮ್ಮ ಪಾಪಗಳನ್ನು ಸ್ನಾನ ಮಾಡಿ ತೊಳೆದುಕೊಳ್ಳುವುದು ಎಂಬುದು ಬಹು ವರ್ಷದಿಂದ ಬಂದ ವಾಡಿಕೆ.
ಆದರೆ ನೇತ್ರಾವತಿಗೆ ಸ್ನಾನಕ್ಕೆ ಬಂದ ಭಕ್ತರು ಅಲ್ಲಿಯೇ ಬಟ್ಟೆ, ಪ್ಲಾಸ್ಟಿಕ್, ಕಾಯಿ, ಫೋಟೋ, ತಮ್ಮ ಉಡುಪು ಗಳನ್ನು ಎಸೆದು ವಿಕೃತಿ ಮೆರೆಯುತ್ತಿದ್ದಾರೆ. ಇತ್ತೀಚಿಗೆ ಚಕ್ರವರ್ತಿ ಸೂಲಿಬೆಲೆ ನೇತೃತ್ವದ ಯುವ ಬ್ರಿಗೇಡ್ ತಂಡದ ನೂರಾರು ಕಾರ್ಯಕರ್ತರು ಬೆಳಗಿನಿಂದ ಸಂಜೆಯವರೆಗೂ ಕೆಲಸ ಮಾಡಿ ಸುಮಾರು 25 ಟನ್ ಗಳಷ್ಟು ಕಸ ಹೊರತೆಗೆದಿದ್ದಾರೆ!.
ಪ್ರತಿ ವರ್ಷ ಇಲ್ಲಿ ಸಂಘ ಸಂಸ್ಥೆಗಳು ಈ ಕಸ ಕ್ಲೀನ್ ಮಾಡುತ್ತವೆ. ಆದ್ರೆ ನದಿಯ ಪಾವಿತ್ರ್ಯತೆ ಮಾತ್ರ ಹಾಳಾಗುತ್ತಲೇ ಇದೆ.
ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರು ಮತ್ತು ಆಡಳಿತ ಮಂಡಳಿ ಈ ಬಗ್ಗೆ ಭಕ್ತರಲ್ಲಿ ಜಾಗೃತಿ ಮೂಡಿಸಬೇಕಿದೆ.
ಬಟ್ಟೆ ಬರೆ ನದಿಗೆ ಹಾಕಿ ಮಲೀನ ಮಾಡಿದರೆ ದಂಡ ಹಾಕಲಾಗುವುದು. ಮತ್ತೆ ನಿಮ್ಮ ಪ್ರತಿಯೊಂದು ಕಾರ್ಯವೂ ಸಿಸಿಟಿವಿಯಲ್ಲಿ ದಾಖಲಿಸಲಾಗುತ್ತಿದೆ ಎಂದು ವಾರ್ನಿಂಗ್ ನೀಡಬೇಕಿದೆ.

ದಂಡ ಹಾಕಿದರೆ ಕೊಂಚ ಕಡಿಮೆ?!
ನೇತ್ರಾವತಿ ನದಿ ತೀರದಲ್ಲಿ ಒಂದು ಬೋರ್ಡು ಹಾಕಿ, ಹಳೆ ಬಟ್ಟೆ ಕಸ ನದಿಗೆ ಎಸೆದವರಿಗೆ ದಂಡ ವಿಧಿಸಬೇಕಿದೆ.

ಯಾತ್ರಿಕರ ಗಮನಕ್ಕೆ..!
ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ಬರುವ ಯಾತ್ರಿಕರು ದರ್ಶನ ಮಾತ್ರ ಅಲ್ಲ ಮನೆಯಲ್ಲಿ ಇದ್ದ ಹಳೆ ಬಟ್ಟೆ , ಸರಂಜಾಮುಗಳನ್ನು ನೇತ್ರಾವತಿ ನದಿಗೆ ಸುರಿಯುವುದು ಕಾಣುತ್ತಿದೆ. ಇದಕ್ಕೆ ಬ್ರೇಕ್ ಹಾಕಬೇಕಿದೆ.

Categories
ಬೆಂಗಳೂರು

ಕಾಂಗ್ರೆಸ್ ರಾಜಕಾರಣದಲ್ಲಿ ಬಿಗ್ ಟರ್ನ್..!

  • 70 ವಯಸ್ಸಾದವರಿಗೆ ರಾಜಕೀಯ ಸಂಘಟನೆ ಹೊಣೆ
  • ಒಂದು ಕುಟುಂಬಕ್ಕೆ ಒಬ್ಬರಿಗೆ ಮಾತ್ರ ಟಿಕೇಟ್
  • ಯುವಕರಿಗೆ ಶೇ.50ರಷ್ಟು ಸ್ಥಾನ ಫಿಕ್ಸ್
  • ಇನ್ನಾದರೂ ಬದಲಾಗುತ್ತಾ ಓಭಿರಾಯನ ಕಾಲದ ಕಾಂಗ್ರೆಸ್ ತಂತ್ರ?!

NAMMUR EXPRESS NEWS
ಉದಯಪುರ(ರಾಜಸ್ಥಾನ): ದೇಶದಲ್ಲಿ ಸತತ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ರಾಜಕಾರಣದಲ್ಲಿ ಬಿಗ್ ಟರ್ನ್ ಮಾಡಲು ತಂತ್ರಗಾರಿಕೆ ಶುರು ಮಾಡಿದೆ.
ಕಾಂಗ್ರೆಸ್ ಸೋಲಿನ ಜತೆಗೆ ಇಡೀ ದೇಶದಲ್ಲಿ ಅವಸಾನದ ಅಂಚಿಗೆ ಸಾಗಲು ಪ್ರಮುಖ ಕಾರಣ ಹಳೆ ಮುಖಗಳ ಹಳೆ ರಾಜಕೀಯ. ಅದೇ ಭಾಷಣ ಅದೇ ಮುಖ. ಈಗ ಮೊದಲ ಹಂತದಲ್ಲಿ ಪಕ್ಷ 70 + ವಯಸ್ಸಾದವರಿಗೆ ಅವಕಾಶ ನೀಡದಿರಲು ನಿರ್ಧಾರ ಮಾಡಿದೆ. ಅವರನ್ನು ಪಕ್ಷದ ಸಂಘಟನೆಗೆ ಬಳಸಿಕೊಳ್ಳಲಿದೆ. ಬಿಜೆಪಿಯಲ್ಲಿ ಈಗಾಗಲೇ ಈ ನಿಯಮವಿದೆ. ಹೀಗಾಗಿ ಯುವ ಜನತೆಗೆ ಹೆಚ್ಚು ಅವಕಾಶ ಸೃಷ್ಟಿ ಆಗಿದೆ. ಹೀಗಾಗಿ ಬಿಜೆಪಿ ಮಾಸ್ ಪಟ್ಟ ಅಲಂಕರಿಸಿದೆ.
ಯುವಕರಿಗೆ ಶೇ.50ರಷ್ಟು ಸ್ಥಾನ ಫಿಕ್ಸ್: ಹಳ್ಳಿಯಿಂದ ಹಿಡಿದು ದಿಲ್ಲಿವರೆಗೆ ಕಾಂಗ್ರೆಸ್ ಪಕ್ಷದಲ್ಲಿ ಹಿರಿಯರು ತುಂಬಿ ಹೋಗಿದ್ದಾರೆ. ಇದರಿಂದ ಪಕ್ಷ ಸಂಘಟನೆ ಮಕಾಡೆ ಮಲಗಿದೆ. ಇದರಿಂದ ಕಳೆದ 15 ವರ್ಷದಲ್ಲಿ ಪಕ್ಷ ಕೇಳಿ ಕಂಡರಿಯದ ಸೋಲು ಕಂಡಿದೆ. ಆದ್ದರಿಂದ ಹಳ್ಳಿಯಿಂದ ಹಿಡಿದು ದಿಲ್ಲಿವರೆಗೆ ಶೇ.50ರಷ್ಟು ಸ್ಥಾನವನ್ನು ಯುವ ಜನತೆಗೆ ನೀಡಲು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.
ಒಂದು ಕುಟುಂಬಕ್ಕೆ ಒಂದೇ ಟಿಕೇಟ್: ಅಚ್ಚರಿಯ ನಡೆಯಲ್ಲಿ ಕಾಂಗ್ರೆಸ್ ಒಂದು ಕುಟುಂಬಕ್ಕೆ ಒಬ್ಬರಿಗೆ ಮಾತ್ರ ಟಿಕೇಟ್ ನೀಡುವ ಕುರಿತು ಚರ್ಚೆ ನಡೆಸಿದೆ. ಆದರೆ ಅದು ಇನ್ನು ಅಂತಿಮವಾಗಿಲ್ಲ.
ಕುಟುಂಬ ರಾಜಕಾರಣಕ್ಕೆ ಬ್ರೇಕ್ ಹಾಕಲು ಕಾಂಗ್ರೆಸ್ ನಿರ್ಧಾರ ಮಾಡಿದ್ದು ಅಳೆದು ತೂಗಿ ಈಗ ತಂತ್ರ ಹೆಣೆಯುತ್ತಿದೆ.
ಇನ್ನಾದರೂ ಬದಲಾಗುತ್ತಾ ಓಭಿರಾಯನ ಕಾಲದ ಕಾಂಗ್ರೆಸ್ ತಂತ್ರ?!: ಕಾಂಗ್ರೆಸ್ ನಾಯಕರು ಮತ್ತು ಪಕ್ಷ ತನ್ನ ಹಳೆಯ ತಂತ್ರಗಳಿಗೆ ಜೋತು ಬಿದ್ದು ಸಂಘಟನೆಯ ಬೇರನ್ನೇ ಕಳೆದುಕೊಂಡಿದೆ. ಇದೀಗ ಬುಡದಿಂದ ವ್ಯವಸ್ಥೆ, ಸಂಘಟನೆ ಸರಿಯಾಗಬೇಕು. ಇನ್ನು ಅದೇ ಓಭಿರಾಯನ ಕಾಲದ ತಂತ್ರಗಾರಿಕೆ ಬದಲಾಗಬೇಕಿದೆ.

ಕರ್ನಾಟಕದ ಮೇಲೆ ಕಣ್ಣು!
ದೇಶದಲ್ಲೇ ಅತೀ ಹೆಚ್ಚು ಶಾಸಕರು, ಸಂಸದರು ಕರ್ನಾಟಕದಲ್ಲಿದ್ದಾರೆ. ಇನ್ನು ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಗಟ್ಟಿ ಇರುವುದು ಕರ್ನಾಟಕದಲ್ಲೇ. ಇನ್ನು ಖರ್ಗೆ, ಹರಿಪ್ರಸಾದ್, ಶ್ರೀನಿವಾಸ್ ಸೇರಿ ರಾಷ್ಟ್ರ ನಾಯಕರು ಇಲ್ಲಿಯೂ ಇದ್ದಾರೆ. ಇತ್ತ ಸಿದ್ದರಾಮಯ್ಯ, ಡಿಕೆಶಿಯಂತಹ ಮಾಸ್ ನಾಯಕರು ಕೂಡ ಕರ್ನಾಟಕದವರೇ. ಜೊತೆಗೆ 2023ರಲ್ಲಿ ವಿಧಾನ ಸಭೆ, 2024ರಲ್ಲಿ ಲೋಕ ಸಭೆ ಚುನಾವಣೆ ಇರುವುದರಿಂದ ಕರ್ನಾಟಕದಿಂದಲೇ ಹೊಸ ತಂತ್ರ ಪ್ರಯೋಗಕ್ಕೆ ಕಾಂಗ್ರೆಸ್ ಮುಂದಾಗಲಿದೆ ಎನ್ನಲಾಗಿದೆ.

ರಾಜ್ಯದಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧೆ?

ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮುಂದಿನ ಪ್ರಧಾನಿ ಅಭ್ಯರ್ಥಿ ಎನ್ನಲಾದ ಪ್ರಿಯಾಂಕಾ ಗಾಂಧಿ ರಾಜ್ಯದಿಂದ ರಾಜ್ಯ ಸಭೆಗೆ ಆಯ್ಕೆಯಾಗುವ ಸಾಧ್ಯತೆ ಇದೆ. ಡಿಕೆ ಶಿವಕುಮಾರ್ ರಾಜ್ಯಕ್ಕೆ ಸ್ವಾಗತಿಸಿದ್ದಾರೆ. ಈ ಹಿಂದೆ ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಕೂಡ ರಾಜ್ಯದಿಂದ ಗೆದ್ದು ರಾಷ್ಟ್ರ ರಾಜಕೀಯದಲ್ಲಿ ಮಿಂಚಿದ್ದರು.