Categories
ಜಿಲ್ಲಾ ವಾರ್ತೆ

ದಕ್ಷಿಣ ಕನ್ನಡ : ರಾತ್ರಿ ನಿಷೇಧಾಜ್ಞೆ ಉಲ್ಲಂಘಿಸಿದ 200ಕ್ಕೂ ಅಧಿಕ ಮಂದಿ

  • 90ಕ್ಕೂ ಅಧಿಕ ವಾಹನ ವಶಕ್ಕೆ

NAMMUR EXPRESS NEWS
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿ ಹಾಗೂ ಮಂಗಳೂರು ನಗರದ ಕಮಿಷನರೇಟ್ ವ್ಯಾಪ್ತಿಯಲ್ಲಿ ವಿಧಿಸಲಾಗಿರುವ ರಾತ್ರಿ ನಿಷೇಧಾಜ್ಞೆ ನಿಯಮಗಳನ್ನು ಉಲ್ಲಂಘಿಸಿದ ಆರೋಪದಡಿಯಲ್ಲಿ 200ಕ್ಕೂ ಅಧಿಕ ಮಂದಿ ಹಾಗೂ 90ಕ್ಕೂ ಅಧಿಕ ವಾಹನಗಳನ್ನು ಮಂಗಳೂರಲ್ಲಿ ವಶಪಡಿಸಿಕೊಳ್ಳಲಾಗಿದೆ.
ವಾಹನ ಪರಿಶೀಲನೆ ಬಳಿಕ ರಿಲೀಸ್ ಮಾಡಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.
ಮಂಗಳೂರು ನಗರದ ಕಮಿಷನರೇಟ್ ವ್ಯಾಪ್ತಿಯಲ್ಲಿ 19 ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಹೇರಲಾಗಿದ್ದ ನಿರ್ಬಂಧ ಉಲ್ಲಂಘಿಸಿ ಸಂಚರಿಸುವ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ.

Categories
ಜಿಲ್ಲಾ ವಾರ್ತೆ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ

  • ಬೆಂಗಳೂರಿನ ಇಬ್ಬರು ಸೇರಿ ಒಟ್ಟು 40 ಮಂದಿ ವಶಕ್ಕೆ

NAMMUR EXPRESS NEWS
ಮಂಗಳೂರು: ಸುಳ್ಯ ತಾಲ್ಲೂಕು ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಇಬ್ಬರು ಸೇರಿದಂತೆ ಒಟ್ಟು 40 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಗಸ್ತುವಾಹನಗಳನ್ನು ಹೆಚ್ಚಿಸುವಂತೆ ಸೂಚನೆ ನೀಡಿರುವ ಅವರು, ನಾಗರಿಕರು ಸಹ ಪೊಲೀಸರಿಗೆ ಅಗತ್ಯ ಸಹಕಾರ ನೀಡಬೇಕು ಎಂದು ಕೋರಿದ್ದಾರೆ.
ಸರಣಿ ಕೊಲೆಗಳ ತನಿಖೆಯು ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಮಸೂದ್ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳ ಪೈಕಿ ಪ್ರಮುಖರು ಸಿಕ್ಕಿದ್ದಾರೆ.ಉಳಿದವರನನ್ನು ಶೀಘ್ರ ಬಂಧಿಸುತ್ತೇವೆ. ಫಾಜಿಲ್ ಹತ್ಯೆಗೆ ಬಳಸಿದ ಕಾರನ್ನು ವಶಕ್ಕೆ ಪಡೆದಿದ್ದೇವೆ. ಪ್ರಕರಣ ಸಂಬಂಧ ಓರ್ವ ಆರೋಪಿಯನ್ನೂ ಬಂಧಿಸಲಾಗಿದೆ. ಸಾರ್ವಜನಿಕರು ಸಹಕರಿಸಿದರೆ ಮಾತ್ರ ಈ ಪ್ರಕರಣವನ್ನು ಶೀಘ್ರ ಭೇದಿಸಬಹುದು. ಗಡಿಭಾಗದಲ್ಲಿ ಚೆಕ್ ಪೋಸ್ಟ್‌ಗಳನ್ನು ಬಿಗಿಗೊಳಿಸಲಾಗುತ್ತದೆ ಎಂದು ಹೇಳಿದರು.
ಸರ್ಕ್ಯೂಟ್ ಹೌಸ್‌ನಲ್ಲಿ ಅಧಿಕಾರಿಗಳ ಜೊತೆ ತನಿಖಾ ಪ್ರಗತಿ ಕುರಿತು ಸಭೆ ನಡೆಸಿದ ಅವರು, ಅಗತ್ಯ ಮಾಹಿತಿ ಪಡೆದುಕೊಂಡರು. ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ, ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್, ಎಸ್‌ಪಿ ಋಷಿಕೇಶ್ ಸೋನಾವಣೆ ಸೇರಿದಂತೆ ಹಿರಿಯ ಅಧಿಕಾರಿಗಳು ಪ್ರವೀಣ್ ಸೂದ್ ಅವರಿಗೆ ವರದಿ ನೀಡಿದರು.
ಪ್ರವೀಣ ನೆಟ್ಟಾರ್ ಹತ್ಯೆಗೆ ಕಾರಣವಾದ ಅಂಶಗಳು, ತನಿಖೆಯ ಪ್ರಗತಿ, ಫಾಝಿಲ್ ಹತ್ಯೆಯ ತನಿಖೆಯ ಪ್ರಗತಿ ಬಗ್ಗೆ ಮಾಹಿತಿ ಡಿಜಿಪಿ ಮಾಹಿತಿ ಪಡೆದರು. ಇದೇ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡಲು ತೆಗೆದುಕೊಳ್ಳಬೇಕಾದ ಕ್ರಮಗಳು ಹಾಗೂ ಪೊಲೀಸ್ ಬಂದೋಬಸ್ತ್ ಕುರಿತು ವಿಸೃತ ಚರ್ಚೆ ನಡೆಯಿತು.
ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆ ಪರಿಸ್ಥಿತಿಯ ಪರಿಶೀಲನೆಗೆಂದು ನಾನು ಬಂದಿದ್ದೇನೆ. ಈಗ ನಡೆದಿರುವ ಕೊಲೆಗಳ ತನಿಖೆ ಉತ್ತಮ ರೀತಿಯಲ್ಲಿ ನಡೆಯುತ್ತಿದೆ.ಮಸೂದ್ ಕೊಲೆ ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ. ಹತ್ಯೆ ಆರೋಪಿಗಳಲ್ಲಿ ಪ್ರಮುಖರು ಸಿಕ್ಕಿಬಿದ್ದಿದ್ದಾರೆ. ಉಳಿದವರನ್ನು ಶೀಘ್ರದಲ್ಲೇ ಬಂಧಿಸುತ್ತೇವೆ.ನಮಗೆ ಎನ್‌ಐಎ ಮೊದಲಾದ ಏಜೆನ್ಸಿಗಳು ಸಹಕರಿಸುತ್ತಿವೆ. ಫಾಸಿಲ್ ಹತ್ಯೆಗೆ ಬಳಸಲಾದ ಕಾರು ವಶಪಡಿಸಿಕೊಂಡಿದ್ದು, ಓರ್ವ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದೇವೆ ಎಂದರು.
ಈ ಕೊಲೆಗಳ ಮಧ್ಯೆ ಏನಾದರೂ ಸಂಬಂಧವಿದೆಯೇ ಅಥವಾ ಇಲ್ಲವೇ ಎನ್ನುವ ಬಗ್ಗೆ ಈ ಹಂತದಲ್ಲಿ ಏನೂ ಹೇಳಲು ಸಾಧ್ಯವಿಲ್ಲ. ಶವಗಳಿಗೆ ಯಾವುದೇ ಜಾತಿ ಇರುವುದಿಲ್ಲ. ಎಲ್ಲಾ ಸಾವುಗಳು ನಮಗೆ ಒಂದೇ. ಈ ರೀತಿಯ ಘಟನೆಗಳು ನಡೆದಾಗ ಪಬ್ಲಿಕ್ ಇಂಟೆಲಿಜೆನ್ಸ್ ನಮಗೆ ಸಹಕರಿಸಬೇಕು. ಘಟನೆಯನ್ನು ನೋಡಿದವರು ಆರೋಪಿಗಳ ಪರಿಚಯ ಇರುವವರು ಇಲಾಖೆಗೆ ಸಹಕರಿಸಬೇಕು. ಕೇರಳ ಗಡಿಭಾಗದಲ್ಲಿ ಚೆಕ್ ಪೋಸ್ಟ್ ಗಳನ್ನು ಬಿಗಿಗೊಳಿಸಲಾಗಿದೆ ಎಂದು ತಿಳಿಸಿದರು.

Categories
Uncategorized

ಆಧುನಿಕ ಮಣಿಪಾಲದ ವಾಸ್ತುಶಿಲ್ಪಿ ಟಿ.ಮೋಹನದಾಸ್ ಎಂ.ಪೈ ಇನ್ನಿಲ್ಲ

NAMMUR EXPRESS NEWS
ಉಡುಪಿ : ಡಾ.ಟಿ.ಎಂ.ಎ. ಪೈ ಫೌಂಡೇಶನ್ ಅಧ್ಯಕ್ಷ ಮತ್ತು ಉದಯವಾಣಿ ಪತ್ರಿಕೆಯನ್ನು ನಡೆಸುತ್ತಿರುವ ಮಣಿಪಾಲ್ ಮೀಡಿಯಾ ನೆಟ್‌ವರ್ಕ್‌ನ ಸಂಸ್ಥಾಪಕ ಟಿ.ಮೋಹನದಾಸ್ ಎಂ.ಪೈ, ದೀರ್ಘಕಾಲದ ಅನಾರೋಗ್ಯದಿಂದ ಭಾನುವಾರ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾದರು.
89 ವರ್ಷದ ಪೈ ಅವರು ತಮ್ಮ ಸಹೋದರರಾದ ಟಿ.ರಾಮದಾಸ್ ಪೈ, ಟಿ.ನಾರಾಯಣ ಪೈ, ಟಿ.ಅಶೋಕ್ ಪೈ ಮತ್ತು ಸಹೋದರಿಯರಾದ ಆರ್.ವಸಂತಿ, ಜಯಂತಿ ಪೈ, ಇಂದುಮತಿ ಪೈ ಮತ್ತು ಆಶಾ ಪೈ ಅವರನ್ನು ಅಗಲಿದ್ದಾರೆ.
ಡಾ.ಟಿ.ಎಂ.ಎ. ಪೈ ಅವರ ಹಿರಿಯ ಪುತ್ರ, ಮೋಹನ್‌ದಾಸ್ ಪೈ ಅವರು ಆಧುನಿಕ ಮಣಿಪಾಲದ ವಾಸ್ತುಶಿಲ್ಪಿಯಾಗಿ ಜನಪ್ರಿಯರಾಗಿದ್ದರು. ಟಿ.ಎಂ.ಎ ಪೈ ಫೌಂಡೇಶನ್ ಮತ್ತು ಮಣಿಪಾಲ್ ಮೀಡಿಯಾ ನೆಟ್‌ವರ್ಕ್ ಜೊತೆಗೆ, ಅವರು ಎಂಜಿಎಂ ಕಾಲೇಜು ಟ್ರಸ್ಟ್ ಮತ್ತು ಐಸಿಡಿಎಸ್ ಲಿಮಿಟೆಡ್‌ನ ಮುಖ್ಯಸ್ಥರಾಗಿದ್ದರು.
ಕಲೆ ಮತ್ತು ಸಂಸ್ಕೃತಿಯ ಪ್ರೇಮಿ, ಮೋಹನ್‌ದಾಸ್ ಪೈ ಅವರು ರಾಷ್ಟ್ರಕವಿ ಗೋವಿಂದಪೈ ಸಂಶೋಧನಾ ಕೇಂದ್ರ, ಜಾನಪದ ಪ್ರದರ್ಶನ ಕಲೆಗಳ ಪ್ರಾದೇಶಿಕ ಸಂಪನ್ಮೂಲ ಕೇಂದ್ರ ಮತ್ತು ಎಂಜಿಎಂ ಯಕ್ಷಗಾನ ಕೇಂದ್ರವನ್ನು ಸ್ಥಾಪಿಸಿದರು. ಬಹುಸಂಸ್ಕೃತಿಯ ತಾಣವಾದ ಪಾರಂಪರಿಕ ಗ್ರಾಮವನ್ನು ನಿರ್ಮಿಸಲು ವಿಜಯನಾಥ ಶೆಣೈ ಅವರ ಜೊತೆಗೂಡಿದ್ದರು.
ಪಾರ್ಥಿವ ಶರೀರವನ್ನು ಸೋಮವಾರ ಬೆಳಗ್ಗೆ 9ರಿಂದ 11ರವರೆಗೆ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು.

Categories
ಮಲ್ನಾಡ್

ಪತ್ರಕರ್ತರ ಮೇಲೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಲ್ಲೆ: ತೀರ್ಥಹಳ್ಳಿ ಪತ್ರಕರ್ತರ ಸಂಘ ಖಂಡನೆ

  • ರಾಜ್ಯದಲ್ಲಿ ಹೆಚ್ಚಿದ ಪತ್ರಕರ್ತರ ಮೇಲಿನ ಹಲ್ಲೆ
  • ಶಿವಮೊಗ್ಗದಲ್ಲೂ ಗೃಹ ಸಚಿವರಿಗೆ ಮನವಿ

NAMMUR EXPRESS NEWS
ತೀರ್ಥಹಳ್ಳಿ: ಕೋಲಾರ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ವರದಿ ಮಾಡಲು ಹೋಗಿದ್ದ ಕನ್ನಡ ಪ್ರಭ ಮತ್ತು ಸಂಯುಕ್ತ ಕರ್ನಾಟಕ ವರದಿಗಾರರ ಮೇಲೆ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಹಲ್ಲೆ ಮಾಡಿರುವುದನ್ನು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ತೀರ್ಥಹಳ್ಳಿ ಶಾಖೆ ತೀವ್ರವಾಗಿ ಖಂಡಿಸಿದೆ.
ಮುತ್ಸದ್ದಿ ರಾಜಕಾರಣಿ ಎಂದು ಗುರುತಿಸಿಕೊಂಡಿರುವ ರಮೇಶ್ ಕುಮಾರ್ ಅವರು ತಮ್ಮ ಸ್ಥಾನದ ಜವಾಬ್ದಾರಿ ಮರೆತು ಪತ್ರಕರ್ತರಿಬ್ಬರ ಮೇಲೆ ಹಲ್ಲೆ ಮಾಡಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಅದ್ದರಿಂದ ಕೂಡಲೆ ಅವರು ಕ್ಷಮೆಯಾಚಿಸಬೇಕು.ಪತ್ರಕರ್ತರ ಮೇಲಿನ ಇಂತಹ‌ ಹಲ್ಲೆ ಮತ್ತು ದೌರ್ಜನ್ಯಗಳನ್ನು ಸಂಘವು ಸಹಿಸುವುದಿಲ್ಲ. ಕೂಡಲೇ ರಮೇಶ್ ಕುಮಾರ್ ಕ್ಷಮೆ ಕೇಳಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಶಾಖೆಯ ಅಧ್ಯಕ್ಷರಾದ ಡಾನ್ ರಾಮಣ್ಣ ಶೆಟ್ಟಿ, ಉಪಾಧ್ಯಕ್ಷರಾದ ಮುನ್ನೂರ್ ಮೋಹನ್ ಶೆಟ್ಟಿ,
ಜಿಲ್ಲಾ ಸಂಘದ ಪ್ರತಿನಿಧಿ ಟಿ ಜೆ ಅನಿಲ್, ಕಾರ್ಯದರ್ಶಿಯಾದ ಮುರುಘರಾಜ್, ಖಜಾಂಚಿ ಶ್ರೀಕಾಂತ್. ವಿ. ನಾಯಕ್, ಸಹ ಕಾರ್ಯದರ್ಶಿ ಮನುಕುಮಾರ್ ಸೇರಿ ಸಂಘದ ಎಲ್ಲಾ ಸದಸ್ಯರು ಆಗ್ರಹಿಸಿದ್ದಾರೆ.
ಶಿವಮೊಗ್ಗದಲ್ಲೂ ಗೃಹ ಸಚಿವರಿಗೆ ಮನವಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂ ಜೆ) ಶಿವಮೊಗ್ಗ ಜಿಲ್ಲಾ ಶಾಖೆ ತೀವ್ರವಾಗಿ ಖಂಡಿಸಿ ಗೃಹ ಸಚಿವ ಆರಗ ಜ್ಞಾನೇಂದ್ರರಿಗೆ ಮನವಿ ಸಲ್ಲಿಸಿದೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಕೆ.ವಿ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಅರುಣ್ ವಿ.ಟಿ. . ರಾಜ್ಯಸಮಿತಿ ನಿರ್ದೆಶಕ ಎನ್.ರವಿಕುಮಾರ್ ಸೇರಿ ಸದಸ್ಯರಿದ್ದರು.

Categories
ರಾಜಕೀಯ

ನರೇಂದ್ರ ಮೋದಿಯೇ ಪ್ರಧಾನಿ ಅಭ್ಯರ್ಥಿ..!

  • 2024ಕ್ಕೂ ಮೋದಿ ಸಾರಥಿ: ಅಮಿತ್ ಶಾ ಘೋಷಣೆ
  • ಅಮಿತ್ ಷಾ, ಅರುಣ್ ಸಿಂಗ್ ಘೋಷಣೆ

NAMMUR EXPRESS NEWS
ನವ ದೆಹಲಿ: 2024ರ ಲೋಕಸಭಾ ಚುನಾವಣೆಯಲ್ಲೂ ನರೇಂದ್ರ ಮೋದಿ ಅವರೇ ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿಯಾಗಲಿದ್ದಾರೆ.
ಬಿಜೆಪಿ ಕೇಂದ್ರ ಸಮಿತಿ ಇದನ್ನು ಸ್ಪಷ್ಟಪಡಿಸಿದೆ.
ಗೃಹ ಸಚಿವ ಅಮಿತ್ ಶಾ ಭಾನುವಾರ ಪಾಟ್ನಾದಲ್ಲಿ ಮಾತನಾಡಿ ಮೋದಿ ನೇತೃತ್ವದಲ್ಲಿ ಲೋಕ ಸಭಾ ಚುನಾವಣೆ ನಡೆಯಲಿದೆ ಎಂದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಮಾತನಾಡಿ, 2024ರ ಲೋಕಸಭೆ ಮತ್ತು 2025ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಯು ಒಟ್ಟಾಗಿ ಹೋರಾಡಲಿದೆ. ಈ ಬಗ್ಗೆ ಯಾವುದೇ ಗೊಂದಲವಿಲ್ಲ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
2024ರ ಚುನಾವಣೆಯು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯಲಿದ್ದು, ನರೇಂದ್ರ ಮೋದಿ ಅವರೇ ಮತ್ತೊಮ್ಮೆ ದೇಶದ ಪ್ರಧಾನಿಯಾಗಲಿದ್ದಾರೆ. 2024ರಲ್ಲಿ ಹಾಗೂ 2025ರಲ್ಲಿ ಬಿಹಾರದಲ್ಲಿ ಒಟ್ಟಾಗಿ ಚುನಾವಣೆ ಎದುರಿಸಲು ನಿರ್ಧರಿಸಿದ್ದೇವೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಭರವಸೆ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯ ಕಾರ್ಯಕ್ರಮಗಳಲ್ಲಿ ಮನ್ ಕೀ ಬಾತ್ ಕಾರ್ಯಕ್ರಮ ಸಹ ಒಂದು. ಪ್ರತಿ ತಿಂಗಳ ಕೊನೆಯ ಭಾನುವಾರ ನಡೆಯುವ ಈ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿಯವರು ದೇಶದ ಜನರನ್ನು ಉದ್ದೇಶಿಸಿ ಮಾತನಾಡುತ್ತಾರೆ. ಈಗಾಗಲೇ 90 ಆವೃತ್ತಿಗಳನ್ನು ಯಶ್ವಸಿಯಾಗಿ ಪೂರೈಸಿದ್ದು ಜನರ ಮೆಚ್ಚುಗೆಗೆ ಪಾತ್ರವಾಗಿದೆ. 91 ನೇ ಮನ್ ಕೀ ಬಾತ್ ಕಾರ್ಯಕ್ರಮ ಸೋಮವಾರ ನಡೆದಿದೆ.

Categories
ಅಂತಾರಾಷ್ಟ್ರೀಯ ಸುದ್ದಿ

ಮೀರಾಬಾಯಿ ಚಾನು ಚಿನ್ನದ ಪದಕ ಭೇಟೆ!

  • 49kg ವಿಭಾಗದಲ್ಲಿ ಕಾಮನ್ವೆಲ್ತ್ ರೆಕಾರ್ಡ್ ಜೊತೆಗೆ ಚಿನ್ನದ ಪದಕ

NAMMUR EXPRESS NEWS
2014 ಮತ್ತು 2018ರ ಕಾಮನ್‍ವೆಲ್ತ್ ನಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಚಿನ್ನ ಪದಕ ಗೆದ್ದಿದ್ದ ಮೀರಾಬಾಯಿ ಚಾನು ಈ ಬಾರಿಯು ಚಿನ್ನದ ಪದಕ ಗೆದ್ದಿದ್ದಾರೆ.
49kg ವಿಭಾಗದಲ್ಲಿ ಕಾಮನ್ವೆಲ್ತ್ ರೆಕಾರ್ಡ್ ಜೊತೆಗೆ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾಳೆ.
2017ರ ವಿಶ್ವ ಚಾಂಪಿಯನ್ಶಿಪ್ಪಿನಲ್ಲಿ ಚಿನ್ನ,2020ರ ಟೋಕಿಯೋ ಒಲಂಪಿಕ್ಕಿನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.
ಇಷ್ಟೆಲ್ಲ ಸಾಧನೆ ಮಾಡಿದ ಭಾರತದ ಹೆಮ್ಮೆಯ ಪುತ್ರಿ, ಕ್ರೀಡಾ ಕ್ಷೇತ್ರದ ಅತ್ಯುನ್ನತ ಗೌರವ ‘ಖೇಲ್ ರತ್ನ’ವನ್ನೇ ಪಡೆದಾಕೆ ಇದೀಗ ಭಾರತಕ್ಕೆ ಚಿನ್ನದ ಪದಕ ತಂದಿದ್ದಾಳೆ.

Categories
ಬೆಂಗಳೂರು

ಪುನೀತ್ ಮರೆಯಾಗಿ 9 ತಿಂಗಳು ಕಳೆಯಿತು!

  • ಲಾಲ್ ಬಾಗ್ ಹೂವಲ್ಲಿ ಅರಳಿದ್ದಾರೆ ಪುನೀತ್!
  • 9 ತಿಂಗಳ ಪುಣ್ಯ ಸ್ಮರಣೆ: ಅಭಿಮಾನಿಗಳ ಕಣ್ಣೀರು
  • ಪುನೀತ್ ಹೆಸರಲ್ಲಿ ಮುಂದುವರಿದ ಸಮಾಜ ಸೇವೆ

NAMMUR EXPRESS NEWS
ಬೆಂಗಳೂರು: ಭಾರತ ಕಂಡ ಅಪ್ರತಿಮ ನಟ, ಸಮಾಜ ಸೇವಕ ಪುನೀತ್ ರಾಜ್ ಕುಮಾರ್ ಮರೆಯಾಗಿ 9 ತಿಂಗಳು ಕಳೆದಿದೆ. ಜುಲೈ 29ಕ್ಕೆ 9 ತಿಂಗಳು ಕಳೆದಿದ್ದು 9 ತಿಂಗಳ ಪುಣ್ಯ ಸ್ಮರಣೆಯನ್ನು ಅಭಿಮಾನಿಗಳ ಕಣ್ಣೀರಲ್ಲೆ ಕಳೆದಿದ್ದಾರೆ.
ಪುನೀತ್ ಹೆಸರಲ್ಲಿ ಮುಂದುವರಿದ ಸಮಾಜ ಸೇವೆ ಮುಂದುವರಿದಿದ್ದು, ಎಲ್ಲಾ ಕಡೆ ರಕ್ತದಾನ, ನೇತ್ರದಾನ ಶಿಬಿರ ನಡೆಯುತ್ತಿವೆ. ಲಕ್ಷ ಲಕ್ಷ ಜನ ರಕ್ತದಾನ ಮಾಡಿದ್ದಾರೆ. ಹಳ್ಳಿ ಹಳ್ಳಿಯಲ್ಲೂ ಅನೇಕ ಸಾಮಾಜಿಕ ಕೆಲಸಗಳು ನಡೆಯುತ್ತಿವೆ.
ಪುನೀತ್ ದೇಶಕ್ಕೆ ಮಾದರಿ!
ದೇಶದಲ್ಲೇ ನಟನೊಬ್ಬ ಸಾಮಾಜಿಕ ಪ್ರೇರಣೆಯಿಂದ ಮಾದರಿಯಾಗಿದ್ದಾರೆ. ಮೃತಪಟ್ಟರೂ ಅವರ ಹೆಸರಲ್ಲಿ ಪ್ರತಿ ದಿನ ಒಂದಲ್ಲ ಒಂದು ಸಮಾಜಪರ ಕೆಲಸ ನಡೆಯುತ್ತಿದೆ.

ಪುನೀತ್ ಹೂವಿನ ಪ್ರತಿಮೆಗೆ ಸಿದ್ಧತೆ
75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಲಾಲ್ ಬಾಗ್ ಅಲ್ಲಿ ನಡೆಯಲಿರುವ ಫಲಪುಷ್ಪ ಪ್ರದರ್ಶನದಲ್ಲಿ ಪುನೀತ್ ರಾಜ್ ಕುಮಾರ್ ಅವರ ಹೂವಿನ ಪ್ರತಿಮೆ ಮಾಡಲು ಸಿದ್ಧತೆ ನಡೆದಿದೆ. ಈಗಾಗಲೇ ಅಂತಿಮ ಸಿದ್ಧತೆ ನಡೆದಿದೆ. ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಜತೆ ಶಕ್ತಿಧಾಮದ ಮಕ್ಕಳೊಂದಿಗೆ ಲಾಲ್ ಬಾಗ್ ವೀಕ್ಷಿಸಿದ್ದಾರೆ. ಪುನೀತ್ ಅಭಿನಯದ ಗಂಧದ ಗುಡಿ, ಲಕ್ಕಿಮಾನ್ ಚಿತ್ರದಲ್ಲಿ ಪುನೀತ್ ನೋಡಬಹುದು.