Categories
ಬೆಂಗಳೂರು

ತಂದೆ-ತಾಯಿಯ ಸಮಾಧಿ ಪಕ್ಕವೇ ಅಂತ್ಯಕ್ರಿಯೆ

  • ಸಿಎಂ, ಯಡಿಯೂರಪ್ಪ ಗಣ್ಯರಿಂದ ಅಂತಿಮ ನಮನ
  • ಉತ್ತರ ಕರ್ನಾಟಕದ ರಾಜಕೀಯ ಕೊಂಡಿ ಕಳಚಿತು
  • ತಂದೆಯ ಉತ್ತರಾಧಿಕಾರಿಯಾಗಿ ಪುತ್ರ ನಿಖಿಲ್ ಕತ್ತಿ?

NAMMUR EXPRESS NEWS
ಬೆಳಗಾವಿ: ಹೃದಯಾಘಾತದಿಂದ ಬುಧವಾರ ನಿಧನರಾಗಿರುವ ಸಚಿವ ಉಮೇಶ್ ಕತ್ತಿ ಅವರ ಅಂತಿಮ ಸಂಸ್ಕಾರ ಅವರ ತಂದೆಯ ಸಮಾಧಿ ಸಮೀಪವೇ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮ ವಿಶ್ವರಾಜ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನಡೆಯಿತು.
ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬಾಗೇವಾಡಿಯ ಶಿವಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.
ಕತ್ತಿ ಮನೆತನದ ಸ್ವಂತ ಜಮೀನಿನಲ್ಲಿ ವೀರಶೈವ ಲಿಂಗಾಯತ ಸಮುದಾಯದ ವಿಧಿ-ವಿಧಾನಗಳ ಪ್ರಕಾರ ಅಂತ್ಯಕ್ರಿಯೆ ನಡೆಯಿತು. ಕಲ್ಕೂರ ರಸ್ತೆಗೆ ಹೊಂದಿಕೊಂಡಿರುವ ಉಮೇಶ ಕತ್ತಿ ಅವರ ತೋಟದಲ್ಲಿ, ಅವರ ತಂದೆ-ತಾಯಿಯವರ ಸಮಾಧಿ ಸಮೀಪವೇ ಅಂತಿಮ ಸಂಸ್ಕಾರ ನೆರವೇರಿತು. ಪುತ್ರ ನಿಖಿಲ್ ವಿಧಿ-ವಿಧಾನಗಳನ್ನು ನೆರವೇರಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಗೃಹ ಸಚಿವ ಆರಗ ಜ್ಞಾನೇಂದ್ರ, ಸಚಿವರಾದ ಆರ್. ಅಶೋಕ, ಕೋಟ ಶ್ರೀನಿವಾಸ ಪೂಜಾರಿ, ಗೋವಿಂದ ಕಾರಜೋಳ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ, ಶಾಸಕರಾದ ಶ್ರೀಮಂತ ಪಾಟೀಲ, ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಅಭಯ ಪಾಟೀಲ, ಮಹೇಶ ಕುಮಟಳ್ಳಿ, ಮಹಾದೇವಪ್ಪ ಯಾದವಾಡ ಇತರರು ಅಂತಿಮ ನಮನ ಸಲ್ಲಿಸಿದರು.
ಉಮೇಶ್ ಕತ್ತಿ ನಿಧನದ ಬಳಿಕ ಹುಕ್ಕೇರಿ ಕ್ಷೇತ್ರದಿಂದ ಅವರ ಪುತ್ರ ನಿಖಿಲ್ ಸ್ಪರ್ಧೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಬಗ್ಗೆ ಈಗ ಚರ್ಚೆ ಕೂಡ ನಡೆಯುತ್ತಿದೆ.

Categories
ಪ್ರತಿಭೆಗಳು

ತೀರ್ಥಹಳ್ಳಿಯ ಕಲಾವಿದ ಬಿ.ಡಿ. ಜಗದೀಶ್ ಅವರ ಸಾಧನೆ

ತೀರ್ಥಹಳ್ಳಿಯ ಕಲಾವಿದ ಬಿ.ಡಿ. ಜಗದೀಶ್ ಅವರ ಸಾಧನೆ
– ಕೆ.ಸಿ.ರೆಡ್ಡಿ, ಡಾ.ಅಂಬರೀಶ್‍ರವರ ಕಂಚಿನ ಪ್ರತಿಮೆ
– ಶೀಘ್ರದಲ್ಲಿ ಲೋಕಾರ್ಪಣೆಗೆ ಸಿದ್ಧತೆ

NAMMUR EXPRESS NEWS
ನಾಡಿನ ಖ್ಯಾತ ಕಲಾವಿದರಾದ ತೀರ್ಥಹಳ್ಳಿ ಮೂಲದ ಬಿ.ಡಿ.ಜಗದೀಶ್ ಬಾಣಂಕಿ ರಚಿಸಿರುವ ಕೆ.ಸಿ.ರೆಡ್ಡಿ ಮತ್ತು ಡಾ.ಅಂಬರೀಶ್ ಅವರ ಎರಡು ಕಂಚಿನ ಪ್ರತಿಮೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗಣ್ಯರ ಸಮ್ಮುಖದಲ್ಲಿ ಶೀಘ್ರದಲ್ಲಿ ನಾಡಿಗೆ ಸಮರ್ಪಿಸಲಿದ್ದಾರೆ.

ವಿಧಾನಸೌಧದ ಆವರಣದಲ್ಲಿ ನಾಡಿನ ಪ್ರಥಮ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರ ಪ್ರತಿಮೆಯು 14 ಅಡಿ ಎತ್ತರವಿದ್ದು ಮೂರು ಟನ್ ತೂಕವನ್ನು ಹೊಂದಿದೆ. ವಿಧಾನಸೌಧದ ಒಂದು ಭಾಗದಲ್ಲಿ ತೀರ್ಥಹಳ್ಳಿಯವರೇ ಆದ ಸಮಾಜವಾದಿ ಶಾಂತವೇರಿ ಗೋಪಾಲಗೌಡರ ವೃತ್ತವನ್ನು ಹೊಂದಿದ್ದು ಇನ್ನೊಂದು ಭಾಗದಲ್ಲಿ ಬಾಣಂಕಿ ಬಿ.ಡಿ.ಜಗದೀಶ್ ಮಾಡಿರುವ ಕೆ.ಸಿ.ರೆಡ್ಡಿ ಅವರ ಕಂಚಿನ ಪ್ರತಿಮೆ ಶಾಶ್ವತವಾಗಿ ನಿರ್ಮಾಣವಾಗಲಿದೆ. ಇದು ತೀರ್ಥಹಳ್ಳಿಗೆ ಹೆಮ್ಮೆ ತರುವಂತಾಗಿದೆ.

ಡಾ.ಅಂಬರೀಶ್ ಅವರ ಪ್ರತಿಮೆ 16 ಅಡಿ ಎತ್ತರವಿದ್ದು ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್‍ರವರ ಸಮಾಧಿಯ ಪಕ್ಕದಲ್ಲಿ ಸ್ಥಾಪಿಸಲಾಗುವುದು. ಇದರ ತೂಕ 3 1/2 ಟನ್ ತೂಕವಿದ್ದು ಜಗದೀಶ್ ಅವರ ಕಲಾ ಸಾಮರ್ಥ್ಯದಿಂದ ನಿರ್ಮಿಸಿದ್ದಾರೆ. ಈ ಪ್ರತಿಮೆಯನ್ನು ಸರ್ಕಾರದ ಮುತುವರ್ಜಿಯಿಂದ ಕೈಗೆ ಎತ್ತಿಕೊಂಡಿದ್ದು ಈ 2 ಪ್ರತಿಮೆಗಳು ಶೀಘ್ರದಲ್ಲಿಯೇ ಲೋಕಾರ್ಪಣೆ ಆಗಲಿದ್ದು ತೀರ್ಥಹಳ್ಳಿ ತಾಲ್ಲೂಕಿನ ಕಲಾವಿದ ಈ ಪ್ರತಿಮೆ ನಿರ್ಮಾಣ ಮಾಡಲಿದ್ದು ತೀರ್ಥಹಳ್ಳಿ ಪ್ರತಿಭೆಯನ್ನು ರಾಷ್ಟ್ರಕ್ಕೆ ಸಾಬೀತು ಪಡಿಸಲಿದ್ದಾರೆ. ಇದು ತೀರ್ಥಹಳ್ಳಿಗೆ ಹೆಮ್ಮೆ ತರುವಂತ ವಿಷಯ. ಈ ಹಿಂದೆ ಹಲವಾರು ಪ್ರಶಸ್ತಿಯನ್ನು ಜಗದೀಶ್ ಪಡೆದಿದ್ದು ವಿಶ್ವ ಮಟ್ಟದಲ್ಲಿ ಇವರ ಕಲಾಕೃತಿಗಳಿಗೆ ಮಾನ್ಯತೆ ಸಿಕ್ಕಿದೆ.

Categories
ಮಲ್ನಾಡ್

ಗಣಪತಿ ವಿಸರ್ಜನೆ ದುರಂತಕ್ಕೆ ಮೂವರು ಬಲಿ!

  • ವಿದ್ಯುತ್ ಶಾಕ್’ನಿಂದ ಮೂವರು ಸಾವು
  • ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲು
  • 6 ಜನರಿಗೆ ಗಂಭೀರ ಗಾಯ: ಆಸ್ಪತ್ರೆಗೆ ದಾಖಲು

NAMMUR EXPRESS NEWS
ಮೂಡಿಗೆರೆ: ಗಣಪತಿ ವಿಸರ್ಜಿಸಿ ಬರುವಾಗ ವಿದ್ಯುತ್ ಶಾಕ್ ನಿಂದ ಮೂವರು ಸಾವನ್ನಪ್ಪಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಮೂಡಿಗೆರೆ ತಾಲ್ಲೂಕಿನ ಬಣಕಲ್ ಸಮೀಪದ ಬಿ.ಹೊಸಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಟ್ರ್ಯಾಕ್ಟರ್ ನಲ್ಲಿದ್ದ ವಿದ್ಯುತ್ ತಂತಿ ಪೆಂಡಾಲ್ ಗೆ ತಗುಲಿದ ಪರಿಣಾಮ ದುರಂತ ನಡೆದಿದೆ.
ಪೆಂಡಲ್ ನಲ್ಲಿದ್ದ ರಾಜು (47) ರಚನಾ (35) ಪಾರ್ವತಿ (26) ಮೃತ ದುರ್ದೈವಿಗಳು. ಗಾಯಗೊಂಡ ಆರು ಜನ ಮೂಡಿಗೆರೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಂಭೀರ ಗಾಯಗೊಂಡ ಸಂಗೀತ, ಪಲ್ಲವಿ ಹಾಸನಕ್ಕೆ ರವಾನೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಇಂಜಿನ್ ಮೇಲೆ ಕೂತಿದ್ದ ಡ್ರೈವರ್ ಅಪಾಯದಿಂದ ಪಾರಾಗಿದ್ದಾರೆ. ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ಬೆಂಗಳೂರು

ದೇವರೇ ಕಾಪಾಡು ಬೆಂಗಳೂರು!

  • ಬೆಂಗಳೂರಲ್ಲಿ ಕಂಡು ಕೇಳರಿಯದಷ್ಟು ಮಳೆ: ಅನಾಹುತ
  • ರಸ್ತೆ, ಅಂಡರ್ ಪಾಸ್, ಮನೆಗಳು ಮುಳುಗಡೆ
  • 5ಕ್ಕೂ ಹೆಚ್ಚು ಸಾವು: ಚಿಕ್ಕಮಗಳೂರು, ಶಿವಮೊಗ್ಗದಲ್ಲೂ ಮಳೆ ಅನಾಹುತ

NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ಕಳೆದೊಂದು ವಾರದಿಂದ ಬೆಂಗಳೂರು, ರಾಮನಗರ, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಅತೀ ಹೆಚ್ಚು ಮಳೆಯಾಗುತ್ತಿದ್ದು ಸಾವಿರಾರು ಎಕರೆ ಜಮೀನು ಹಾಳಾಗಿದೆ. 5ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು ರಾಜಧಾನಿ ಕಂಡು ಕೇಳರಿಯದಷ್ಟು ಮಳೆಯಾಗಿದೆ.
ಬೆಂಗಳೂರಿನ ರಸ್ತೆ, ಅಂಡರ್ ಪಾಸ್, ರಾಜ ಕಾಲುವೆ ಮುಳುಗಿ ಅಪಾರ್ಟ್ಮೆಂಟ್, ಮನೆಗಳ ಒಳಗೆ ನೀರು ನುಗ್ಗಿದೆ. ಪರಿಣಾಮ ಸಾವಿರಾರು ಮನೆಗಳು ಬೀಳುವ ಹಂತ ತಲುಪಿವೆ. ಇನ್ನು ಜನ ಬಿಬಿಎಂಪಿಗೆ ಹಿಡಿಶಾಪ ಹಾಕುತ್ತಿದ್ದಾರೆ.

2014ರ ಬಳಿಕ ದಾಖಲೆಯ ಮಳೆ!
ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ರಾಜ್ಯ ರಾಜಧಾನಿ ಬೆಂಗಳೂರು ಅಕ್ಷರಶಃ ತತ್ತರಿಸಿ ಹೋಗಿದೆ. ಬೆಂಗಳೂರಿನ ಪ್ರಮುಖ ಏರಿಯಾಗಳಲ್ಲಿ ಭಾನುವಾರ ರಾತ್ರಿ ಮೇಘಸ್ಫೋಟದಂತೆ ಮೂರು ಗಂಟೆ ನಿರಂತರ ಮಳೆ ಸುರಿದಿತ್ತು. ಕೇವಲ 24 ಗಂಟೆಗಳಲ್ಲಿ ಸುಮಾರು 83 ಮಿಮೀ ಮಳೆಯಾಗಿದ್ದು, ಇದು 2014ರ ನಂತರ ನಗರದಲ್ಲಿ ಸುರಿದಿರುವ ಅತಿಹೆಚ್ಚಿನ ಮಳೆಯಾಗಿದೆ ಎಂದು ಕೇಂದ್ರ ಹವಾಮಾನ ಇಲಾಖೆಯದ ತಿಳಿಸಿದೆ.
ಕಳೆದ ಎರಡು ತಿಂಗಳಿನಿಂದ ಮಳೆಯಿಂದಾಗಿ ತತ್ತರಿಸಿ ಹೋಗಿರುವ ರೈನ್ ಬೋ ಡ್ರೈವ್ ಲೇಔಟ್ ನಲ್ಲಿ ಮತ್ತೆ ನೀರು ನುಗ್ಗಿದೆ. ಸರ್ಜಾಪುರ ರಸ್ತೆ ಜಲಾವೃತಗೊಂಡಿದ್ದು, 100ಕ್ಕೂ ಹೆಚ್ಚು ಮನೆಗಳಿಗೆ ಜಲದಿಗ್ಧಂಧನ ಬಿದ್ದಿದೆ. ರೈನ್ ಬೋ ಡ್ರೈವ್ ಲೇಔಟ್ ಮುಂಭಾಗದ ಎರಡು ರಸ್ತೆಗಳು ಮುಳುಗಿ ಹೋಗಿವೆ. ಸರ್ಜಾಪುರ ರಸ್ತೆಯ ವಿಪ್ರೋ ಕಂಪನಿ ಸೇರಿ ಇಡೀ ಪ್ರದೇಶ ಜಲಾವೃತಗೊಂಡಿದೆ. ಮಾರತ್ ಹಳ್ಳಿಯ ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿಯ ಇಕೋ ಸ್ಪೇಸ್ ಬಳಿಯ ರಿಂಗ್ ರೋಡ್ ಮೂರು ದಿನದ ಹಿಂದೆ ಸಂಪೂರ್ಣವಾಗಿ ಜಲಾವೃತವಾಗಿತ್ತು. ಭಾನುವಾರ ಸುರಿದ ಮಳೆಗೆ ಮತ್ತೆ ಕಂಪ್ಲಿಟ್ ರಸ್ತೆ ಮುಳುಗಿ ಹೋಗಿದ್ದು ನದಿಯಂತೆ ಭಾಸವಾಗುತ್ತಿತ್ತು.ಮಾರತ್ ಹಳ್ಳಿಯ ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ವ್ಯಕ್ತಿಯೊಬ್ಬ ನೀರಿನಲ್ಲಿ ಸಿಲುಕಿಕೊಂಡಿದ್ದ ಸ್ಥಳೀಯ ಸೆಕ್ಯೂರಿಟಿ ಗಾರ್ಡ್ ಗಳು ನೀರಿನಲ್ಲಿ ಸಿಲುಕಿದ್ದ ವ್ಯಕ್ತಿಯನ್ನ ರಕ್ಷಿಸಿದ್ದಾರೆ.
ರಾಮನಗರ ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ರಸ್ತೆಯ ಮೇಲೆ ನೀರು ಉಕ್ಕಿ ಹರಿಯುತ್ತಿದ್ದು, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹಲವು ಅಂಡರ್ ಪಾಸ್‌ಗಳು ಜಲಾವೃತಗೊಂಡಿವೆ. ಸೋಮವಾರ ತಡರಾತ್ರಿ ಅಂಡ‌ರ್ ಪಾಸ್ ಜಲಾವೃತಗೊಂಡಿದ್ದರಿಂದ ಬದಲಿ ಮಾರ್ಗದ ಮೂಲಕ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಮಂಗಳವಾರ ಕೊಂಚ ನೀರಿನ ಪ್ರಮಾಣ ತಗ್ಗಿದ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಭಾರೀ ಅನಾಹುತ ಸಂಭವಿಸಿದೆ.

ಬೆಂಗಳೂರು ಮಹಾಮಳೆಗೆ ಯುವತಿ ಬಲಿ!

ಬೆಂಗಳೂರು ಮಹಾ ಮಳೆಗೆ ಯುವತಿಯೊಬ್ಬಳು ಸಾವನ್ನಪ್ಪಿರುವ ಘಟನೆ ವೈಟ್ ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ಸಿದ್ದಾಪುರದಲ್ಲಿ ನಡೆದಿದೆ.
ಅಖಿಲಾ (23) ಮೃತ ಯುವತಿ, ಬಿಕಾಂ ಪದವೀಧರೆಯಾಗಿದ್ದ ಅಖಿಲಾ ಖಾಸಗಿ ಕಾಲೇಜಿನಲ್ಲಿ ಕಳೆದ ಎರಡು ವರ್ಷದಿಂದ ಅಡ್ಮಿನಿಸ್ಟ್ರೇಷನ್ ಡಿಪಾಟ್‌ರ್ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇವರ ತಂದೆ ತಾಯಿ ಜೊತೆಗೆ ಸಿದ್ದಾಪುರದಲ್ಲಿರುವ ಮನೆಯಲ್ಲಿ ವಾಸವಾಗಿದ್ದರು. ಆದರೆ ಸೋಮವಾರ ರಾತ್ರಿ 8 ಗಂಟೆಗೆ ಕೆಲಸ ಮುಗಿಸಿಕೊಂಡು ಶಾಲೆಯಿಂದ ಹೊರಟಿದ್ದರು.
ರಾತ್ರಿ 9.30ಕ್ಕೆ ಸಿದ್ದಾಪುರ ಬಳಿ ಇರುವ ಮಯೂರ ಬೇಕರಿ ಸಮೀಪ ಬಂದಿದ್ದಾರೆ. ಈ ವೇಳೆ ಭಾರೀ ಮಳೆ ಸುರಿಯುತ್ತಿದ್ದ ರಸ್ತೆಯಲ್ಲಿ ಮಂಡಿಯುದ್ದಕ್ಕೆ ನೀರು ನಿಂತಿತ್ತು. ನೀರಿನ ಮಧ್ಯೆಯೇ ಸ್ಕೂಟರ್ ಚಲಾಯಿಸಿಕೊಂಡು ಬಂದ ಅಖಿಲಾ ಅವರು ಸ್ಕೂಟರ್ ನೀರು ಹೆಚ್ಚಿದ್ದರಿಂದ ಇದ್ದಕ್ಕಿದ್ದಂತೆ ಆಫ್ ಆಗಿದೆ. ಈ ವೇಳೆ ಕೆಳಗೆ ಬೀಳುತ್ತಿದ್ದ ಅಖಿಲಾ ಸಹಾಯಕ್ಕೆ ಬಲ ಭಾಗದಲ್ಲಿಯೇ ಇದ್ದ ಎಲೆಕ್ಟ್ರಿಕಲ್ ಪೋಲ್ ಮುಟ್ಟಿದ್ದಾರೆ. ಈ ವೇಳೆ ವಿದ್ಯುತ್ ಸ್ಪರ್ಶವಾಗಿ ಸಾವನ್ನಪ್ಪಿದ್ದಾರೆ.
ನಂತರ ಕೆಳಗೆ ಬಿದ್ದ ಯುವತಿಯನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಅಖಿಲಾ ಕೊನೆಯುಸಿರೆಳೆದಿದ್ದಾರೆ.

4 ದಿನ ರಾಜ್ಯಾದ್ಯಂತ ಮಳೆ ಅಬ್ಬರ

ರಾಜ್ಯದಲ್ಲಿ ವರುಣನ ಆರ್ಭಟ ಜೋರಾಗಿದ್ದು ಈ ಮಧ್ಯೆ ಮುಂದಿನ 4 ದಿನ ರಾಜ್ಯಾದ್ಯಂತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನೈರುತ್ಯ ಮನ್ಸೂನ್ ಚುರುಕು ಆಗಿರುವುದು ಮತ್ತು ಕನ್ಯಾಕುಮಾರಿಯಲ್ಲಿ ಕಾಣಿಸಿಕೊಳ್ಳುತ್ತಿರುವ ಮೈಟ್ರೈ ಸುಳಿಗಾಳಿಯಿಂದ ಮಳೆಯಾಗುತ್ತಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ರಾಮನಗರ, ಹಾಸನ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಚಾಮರಾಜನಗರ, ಮೈಸೂರು, ಬಳ್ಳಾರಿಯಲ್ಲಿ ಮಳೆಯಾಗಲಿದೆ. ಆದರಲ್ಲೂ ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಮಳೆ ಆಗಲಿದೆ.
ಬುಧವಾರ:ಬೀದರ್, ಕೊಪ್ಪಳ, ಕಲಬುರಗಿ, ಯಾದಗಿರಿ, ಗದಗ, ಬಾಗಲಕೋಟೆ, ರಾಯಚೂರು ಜಿಲ್ಲೆ ಹೊರತುಪಡಿಸಿ ಉಳಿದೆಲ್ಲಾ ಕಡೆ ಮಳೆಯಾಗಲಿದೆ. ಎಲ್ಲಾ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಜಾರಿಯಾಗಿದೆ.
ಗುರುವಾರ:ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಹಾಸನ, ಶಿವಮೊಗ್ಗ ಚಿಕ್ಕಮಗಳೂರು, ಕೊಡಗು, ವಿಜಯಪುರ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಲ್ಲಿ ಭಾರೀ ಮಳೆ ಆಗಲಿದೆ. ಆರೆಂಜ್ ಅಲರ್ಟ್ ಪ್ರಕಟಿಸಲಾಗಿದೆ.
ಶುಕ್ರವಾರ:ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಹಾಸನ, ಶಿವಮೊಗ್ಗ ಚಿಕ್ಕಮಗಳೂರು, ಕೊಡಗು, ಗದಗ, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಭಾರೀ ಮಳೆ ಆಗಲಿದೆ.

ಮಲೆನಾಡಲ್ಲೂ ಮಳೆ ಅವಾಂತರ!

ಚಿಕ್ಕಮಗಳೂರು ಜಿಲ್ಲೆಯಲ್ಲಿ ವರುಣನ ಆರ್ಭಟ ಮತ್ತೆ ಮುಂದುವರೆದಿದೆ.ಚಿಕ್ಕಮಗಳೂರು ಜಿಲ್ಲೆಯ ಜಯಪುರ ಬಾಳೆಹೊನ್ನೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಸೋಮವಾರ ಭಾರೀ ಪ್ರಮಾಣದ ಮಳೆಯಾಗಿದ್ದು ಮಳೆಯ ಆರ್ಭಟಕ್ಕೆ 15ಕ್ಕೂ ಹೆಚ್ಚು ಗ್ರಾಮಗಳನ್ನು ಸಂಪರ್ಕಿಸುವ ಮಾರ್ಗವಾದ ಜಯಪುರ-ಕೊಗ್ರೆ ಸಂಪರ್ಕಿಸುವ ರಸ್ತೆ ಕುಸಿದಿದೆ. ಇನ್ನು ಬಾಳೆಹೊನ್ನೂರು, ಜಯಪುರ, ಕೊಪ್ಪದಲ್ಲಿ ಅತೀ ಹೆಚ್ಚು ಮಳೆಯಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ಮಳೆಯಾಗಿದ್ದು ಗೋಡೆ ಕುಸಿದು ಶಿವಮೊಗ್ಗ ನಗರದಲ್ಲಿ ವೃದ್ದೆ ಮೃತಪಟ್ಟಿದ್ದಾಳೆ. ಇನ್ನು ಅಡಿಕೆಗೆ ಕೊಳೆ ರೋಗದ ಭೀತಿ ಎದುರಾಗಿದೆ.

600 ಕೋಟಿ ಪರಿಹಾರ ಘೋಷಣೆ ಮಾಡಿದ ಸಿಎಂ

ರಾಜ್ಯದ ಹಲವೆಡೆ ಸತತವಾಗಿ ಧಾರಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಉಂಟಾಗಿರುವ ಹಾನಿಯನ್ನು ಸರಿಪಡಿಸಲು ಪ್ರವಾಹ ಪೀಡಿತ ಜಿಲ್ಲೆಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತುರ್ತಾಗಿ 600 ಕೋಟಿ ರೂ.ಘೋಷಿಸಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಧಾರಕಾರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ಹಾನಿಯಾಗಿದೆ. ಪರಿಹಾರ ಕಾರ್ಯ ಕೈಗೊಳ್ಳುವ ಸಂಬಂಧ ಬೆಂಗಳೂರಿಗೆ ಮಾತ್ರ 300 ಕೋಟಿ ರೂ. ನೀಡಲಾಗಿದೆ. ಇನ್ನುಳಿದಂತೆ ಪ್ರವಾಹ ಪೀಡಿತ ಜಿಲ್ಲೆಗಳಿಗೆ 300 ಕೋಟಿ ರೂ. ಒದಗಿಸಲಾಗಿದೆ. ತಕ್ಷಣ ಪರಿಹಾರ ಕಾರ್ಯ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಸಂತ್ರಸ್ತರಿಗೆ ಒಂದು ವಾರದಲ್ಲಿ ಪರಿಹಾರ ಒದಗಿಸಬೇಕು. ಜನ-ಜಾನುವಾರುಗಳ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ವರುಣನ ಆರ್ಭಟದಿಂದ ಆಸ್ತಿ ಹಾನಿಯ ಜತೆಗೆ ಬೆಳೆ ಹಾನಿಯೂ ಸಂಭವಿಸಿದೆ. ಪರಿಹಾರ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ತಂಡ ಬುಧವಾರ ರಾಜ್ಯಕ್ಕೆ ಆಗಮಿಸುತ್ತಿದೆ. ಧಾರಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಷ್ಟದ ಪ್ರಮಾಣ ಮತ್ತಷ್ಟುಹೆಚ್ಚಾಗಲಿದೆ. ಈವರೆಗೆ 11 ಸಾವಿರ ಕೋಟಿ ರು. ನಷ್ಟದ ಅಂದಾಜು ಮಾಡಲಾಗಿತ್ತು. ಆದರೆ, ಈಗ ಇದರ ಮೊತ್ತವು ಮತ್ತಷ್ಟು ಹೆಚ್ಚಾಗಲಿದೆ. ಈ ಬಗ್ಗೆ ಕೇಂದ್ರದ ತಂಡದ ಗಮನಕ್ಕೆ ತಂದು ಪರಿಹಾರದ ಮೊತ್ತವನ್ನು ಹೆಚ್ಚಿಸುವಂತೆ ಕೋರಲಾಗುವುದು ಎಂದರು.

ಮಳೆ ಹಾನಿ: ಕೇಂದ್ರದ ತಂಡ ಆಗಮನ

ರಾಜ್ಯದಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದ ನಿರಂತರವಾಗಿ ಸಂಭವಿಸುತ್ತಿರುವ ಹಾನಿಯನ್ನು ಅಧ್ಯಯನ ನಡೆಸಲು ಕೇಂದ್ರದ ಹಿರಿಯ ಅಧಿಕಾರಿಗಳ ಮೂರು ತಂಡಗಳು ಸೆ.7ರಿಂದ ಸೆ. 9 ರವರೆಗೆ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಲಿದೆ.
ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಸಂಭವಿಸಿದ ಮಳೆ ಮತ್ತು ಪ್ರವಾಹದಿಂದ ಬೆಳೆನಷ್ಟ ಮತ್ತು ಮೂಲಸೌಕರ್ಯಗಳಿಗೆ ಆಗಿರುವ ಹಾನಿಯ ಬಗ್ಗೆ ಈ ತಂಡಗಳು ಅಧ್ಯಯನ ನಡೆಸಲಿವೆ ಎಂದು ಕಂದಾಯ ಸಚಿವ ಆರ್ ಅಶೋಕ್ ಮಾಹಿತಿ ನೀಡಿದ್ದಾರೆ.
ಕೇಂದ್ರ ಗೃಹ ಇಲಾಖೆ ಜಂಟಿಕಾರ್ಯದರ್ಶಿ ಆಶಿಶ್ ಕುಮಾರ್ ಅವರ ನೇತೃತ್ವದಲ್ಲಿ ಒಟ್ಟು ಮೂರು ತಂಡಗಳು ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಲಿವೆ. ಕೇಂದ್ರ ಜಲ ಆಯೋಗದ ಹಿರಿಯ ಅಧಿಕಾರಿ ಅಶೋಕ್ ಕುಮಾರ್ ಮತ್ತು ಕೃಷಿ ಹಾಗೂ ರೈತರ ಕಲ್ಯಾಣ ಇಲಾಖೆ ನಿರ್ದೇಶಕ ಡಾ.ಕೆ.ಮನೋಹರನ್ ಅವರು ಇನ್ನೆರಡು ತಂಡಗಳಲ್ಲಿ ಇರಲಿದ್ದಾರೆ.

Categories
ಬೆಂಗಳೂರು

ಆಹಾರ ಸಚಿವ ಉಮೇಶ್ ಕತ್ತಿ ವಿಧಿವಶ

  • ಹೃದಯಾಘಾತದಿಂದ ಮಧ್ಯ ರಾತ್ರಿ ಬೆಂಗಳೂರಲ್ಲಿ ನಿಧನ
  • ಉತ್ತರ ಕರ್ನಾಟಕದ ಪ್ರಭಾವಿ ಬಿಜೆಪಿ ನಾಯಕ ಇನ್ನಿಲ್ಲ

NAMMUR EXPRESS NEWS
ಬೆಂಗಳೂರು: ಎಂ. ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಪಡೆಯುತ್ತಿದ್ದ ಆಹಾರ ಸಚಿವ ಉಮೇಶ್ ಕತ್ತಿ ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ.
ಅರಣ್ಯ ಇಲಾಖೆ ಕೂಡ ನಿರ್ವಹಿಸುತ್ತಿದ್ದ ಉಮೇಶ್ ಕತ್ತಿ ಅವರಿಗೆ ಡಾಲರ್ಸ್ ಕಾಲೋನಿ ನಿವಾಸದಲ್ಲಿ ರಾತ್ರಿ 10ಕ್ಕೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಸಿಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ ಬಹುತೇಕ ಸಚಿವರು, ಶಾಸಕರು ಆಸ್ಪತ್ರೆಗೆ ತೆರಳಿದ್ದಾರೆ. ರಾಮಯ್ಯ ಆಸ್ಪತ್ರೆ ವೈದ್ಯರು ಕತ್ತಿ ಅವರನ್ನು ಉಳಿಸಿಕೊಳ್ಳಲು ಪ್ರಯತ್ನಪಟ್ಟರೂ ಚಿಕಿತ್ಸೆ ಫಲ ನೀಡಲಿಲ್ಲ.
ಅರೋಗ್ಯ ಸಚಿವ ಡಾ.ಸುಧಾಕರ್, ಸಚಿವ ಅಶ್ವಥನಾರಾಯಣ ಸೇರಿ ಅನೇಕರು ಭೇಟಿ ನೀಡಿದ್ದಾರೆ.
ಡಾಲರ್ಸ್ ಕಾಲೋನಿಯಲ್ಲಿ ಅಂತಿಮ ದರ್ಶನದ ಬಳಿಕ ಬೆಳಗಾವಿಗೆ ಅಂತಿಮ ಕಾರ್ಯಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಕತ್ತಿ ಅವರಿಗೆ ಈ ಹಿಂದೆ 3 ಬಾರಿ ಹೃದಯಘಾತವಾಗಿತ್ತು.
1985ರಿಂದ ಹುಕ್ಕೇರಿ ಕ್ಷೇತ್ರದ ಶಾಸಕರಾಗಿದ್ದ 61 ವರ್ಷದ ಲ್ಲಿ 8 ಬಾರಿ ಶಾಸಕರಾಗಿದ್ದ ಕತ್ತಿ ಅವರು ಉತ್ತರ ಕರ್ನಾಟಕ ಭಾಗದಲ್ಲಿ ಪ್ರಭಾವಿ ನಾಯಕರಾಗಿದ್ದರು.
ಬಿಜೆಪಿಯ ಹಿರಿಯ ಶಾಸಕರಾಗಿ,2 ಬಾರಿ ಸಚಿವರಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಮಾಸ್ ಲೀಡರ್ ಆಗಿದ್ದರು. 1961 ಮಾರ್ಚ್ 14ರಂದು ಜನಿಸಿದ್ದರು.
ಶೆಟ್ಟರ ಸಂಪುಟದಲ್ಲಿ ಕೃಷಿ ಸಚಿವರಾಗಿದ್ದರು. 2021 ಆಹಾರ, ಅರಣ್ಯ ಸಚಿವರಾಗಿದ್ದರು. 9 ಶಾಸಕ ಸ್ಥಾನಕ್ಕೆ ಸ್ಪರ್ದಿಸಿ 8 ಗೆದ್ದಿದ್ದರು. 6 ಬಾರಿ ಪಕ್ಷ ಬದಲು ಮಾಡಿ ಗಮನ ಸೆಳೆದಿದ್ದರು.

Categories
Uncategorized

ಕಾಂತಾರ ಸಿನಿಮಾ ಟ್ರೈಲರ್ ಬಿಡುಗಡೆ – Nammur express

ಕಾಂತಾರ ಸಿನಿಮಾ ಟ್ರೈಲರ್ ಬಿಡುಗಡೆ
– ಸೆಪ್ಟೆಂಬರ್ 30ರಂದು ರಾಜ್ಯಾದ್ಯಂತ ಬಿಡುಗಡೆ
– ಕರಾವಳಿಯ ಸಾಂಸ್ಕೃತಿಕ ಸೊಬಗು ಅನಾವರಣ

NAMMUR EXPRESS NEWS
ರಿಷಬ್ ಶೆಟ್ಟಿ ರಚಿಸಿ, ನಿರ್ದೇಶಿಸಿ, ನಾಯಕನಾಗಿ ನಟಿಸಿರುವ “ಕಾಂತಾರ” – ಒಂದು ದಂತಕಥೆ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
ಬಿಡುಗಡೆಯಾಗಿ 8 ಗಂಟೆ 4.5 ಲಕ್ಷ ವೀಕ್ಷಕರನ್ನು ಪಡೆದಿದೆ.
ಹೊಂಬಾಳೆ ಫಿಲಂಸ್ ನಿರ್ಮಿಸಿರುವ ಕರಾವಳಿಯ ಸಾಂಸ್ಕೃತಿಕ ಕಥೆ ಬಿಂಬಿಸುವ ಈ ಸಿನಿಮಾ ಹೊಸ ಭರವಸೆ ಮೂಡಿಸಿದೆ.
ಸಿನಿಮಾ ಸೆಪ್ಟೆಂಬರ್ 30ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

Hombale Films Presents the Official Trailer of “Kantara”, Starring Rishab Shetty and Sapthami Gowda in the lead roles.

Written and Directed by Rishab Shetty, Produced by Vijay Kiragandur and Music by B Ajaneesh Loknath.

 

Kantara movie trailer :

Kantara movie teaser

Watch Kantara movie famous trending song – Singara siriye
Categories
ಮಲ್ನಾಡ್

ಹರ್ಷ ಹತ್ಯೆಗೆ ನಡೆದಿತ್ತು 15 ದಿನಗಳ ಸಂಚು

  • 750 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ ಎನ್ ಐ ಎ

NAMMUR EXPRESS NEWS
ಬೆಂಗಳೂರು: ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನ್ಯಾಯಾಲಯಕ್ಕೆ ಚಾರ್ಜ್‌ ಶೀಟ್ ಸಲ್ಲಿಕೆ ಮಾಡಿದೆ. ಹತ್ಯೆಗೆ 15 ದಿನದಿಂದಲೂ ಸಂಚು ನಡೆಸಲಾಗಿತ್ತು ಎನ್ನುವುದೂ ಸೇರಿ ಅನೇಕ ಅಂಶಗಳನ್ನು 750ಕ್ಕೂ ಹೆಚ್ಚು ಪುಟಗಳ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
2022ರ ಫೆಬ್ರವರಿ 20 ರಂದು ರಾತ್ರಿ ಶಿವಮೊಗ್ಗದಲ್ಲಿ ನಡೆದ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ರಾಜ್ಯದಲ್ಲಿ ಸಂಚಲನವನ್ನುಂಟು ಮಾಡಿತ್ತು. ಹಿಜಾಬ್ ವಿವಾದದ ಮಧ್ಯೆಯೇ ನಡೆದ ಹತ್ಯೆ ವಿಚಾರವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿತ್ತು.
ಈ ಮಧ್ಯೆಯೇ ಸರ್ಕಾರ ಈ ಕೊಲೆ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಿತ್ತು. ತನಿಖೆಯನ್ನು ಆರಂಭಿಸಿದ ಎನ್‌ಐಎ ಅಧಿಕಾರಿಗಳು ಕೈಗೊಂಡಿದ್ದ ವಿಶೇಷ ನ್ಯಾಯಾಲಯಕ್ಕೆ 750 ಕ್ಕೂ ಹೆಚ್ಚು ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.
ವಿಶೇಷ ನ್ಯಾಯಾಲಯಕ್ಕೆ ಹತ್ತು ಮಂದಿ ಆರೋಪಿಗಳ ವಿರುದ್ಧ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಕೆ ಮಾಡಿದ್ದು, ಈ ದೋಷಾರೋಪಣೆ ಪಟ್ಟಿಯಲ್ಲಿ ಆರೋಪಿಗಳಿಗೆ ಹಿಂದೂ ಸಂಘಟನೆಯ ಕಾರ್ಯಕರ್ತನ ಹತ್ಯೆ ಮಾಡೋದೇ ಮುಖ್ಯ ಉದ್ದೇಶ ಆಗಿತ್ತು. ಹಿಂದು ವ್ಯಕ್ತಿಯೊಬ್ಬನ ಹತ್ಯೆ ಮಾಡಿದರೆ ಭಯದ ವಾತಾವರಣ ನಿರ್ಮಾಣವಾಗತ್ತದೆ ಎಂದು ಪ್ಲಾನ್ ಮಾಡಿಕೊಂಡು 15 ದಿನಗಳಿಂದ ಹರ್ಷನ ಹತ್ಯೆಗೆ ಕಾದು ಕುಳಿತಿದ್ದರು.
ಹರ್ಷ ಹಿಂದು ಸಂಘಟನೆಯಲ್ಲಿ ಸಕ್ರಿಯನಾಗಿದ್ದು, ಹಳೆಯ ದ್ವೇಷ ಇಟ್ಟುಕೊಂಡು ಹತ್ಯೆ ಮಾಡುವುದಕ್ಕೆ ಪ್ರಕರಣದ ಮೊದಲ ಆರೋಪಿ ಆಯ್ಕೆ ಮಾಡಿಕೊಂಡಿದ್ದ. ಈ ಹತ್ಯೆ ಹಿಂದೆ ಯಾವುದೇ ಸಂಘಟನೆ ಕೈವಾಡ ಇಲ್ಲ. ಹತ್ಯೆಗೆ ಮಾರಕಾಸ್ತ್ರ ಖರೀದಿ ಮಾಡಲು ಹಣದ ಅಗತ್ಯ ಇತ್ತು. ಅದಕ್ಕಾಗಿ ಆರೋಪಿಗಳು ಕುಂಶಿ ಬಳಿ ಒಂದು ಮನೆ ಕಳ್ಳತನ ಮಾಡಿದ್ದರು. ಮನೆಯಲ್ಲಿ ಸಿಕ್ಕಿದ್ದ ಹಣದಲ್ಲೇ ಮಚ್ಚು, ಲಾಂಗು ಸೇರಿದಂತೆ ಮಾರಕಾಸ್ತ್ರ ಖರೀದಿ ಮಾಡಲಾಗಿತ್ತು ಎಂದು ತಿಳಿಸಲಾಗಿದೆ.
ಬಂಧಿತ ಆರೋಪಿಗಳಲ್ಲಿ ರೋಷನ್ ಭದ್ರಾವತಿಯಲ್ಲಿ ಮಾರಕಾಸ್ತ್ರಗಳನ್ನು ಖರೀದಿ ಮಾಡಿದ್ದ. ಬಂಧಿತ ಆರೋಪಿಗಳಲ್ಲಿ ಮೂವರನ್ನು ಹೊರತುಪಡಿಸಿ ಉಳಿದವರೆಲ್ಲ ಹಿಂದೆ ಹಲವಾರು ಕೇಸ್‌ಗಳಲ್ಲಿ ಭಾಗಿಯಾಗಿದ್ದ ಆರೋಪಿಗಳೇ ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿದೆ.
ಬಂಧಿತ 10 ಮಂದಿ ಆರೋಪಿಗಳ ಹೇಳಿಕೆಗಳ ಜತೆ ತಾಂತ್ರಿಕ ಸಾಕ್ಷ್ಯಗಳನ್ನು ಚಾರ್ಜ್‌ ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಸದ್ಯದ ತನಿಖೆಯಲ್ಲಿ ಆರೋಪಿಗಳು ಕೋಮುಸೌಹಾರ್ದತೆ ಕದಡುವುದರ ಜೊತೆಗೆ ಗಲಾಟೆಯನ್ನುಂಟು ಮಾಡುವ ಉದ್ದೇಶದ ವಿಚಾರ ಬೆಳಕಿಗೆ ಬಂದಿದೆ.

Categories
ಬೆಂಗಳೂರು

ಬಿಪಿಎಲ್ ಕಾರ್ಡ್ ಹೊಂದಿರುವ SC – STಗಳಿಗೆ ಗೃಹ ಬಳಕೆಗೆ 75 ಯುನಿಟ್ ಉಚಿತ ವಿದ್ಯುತ್ ಯೋಜನೆ

  • ಆದೇಶ ಹಿಂಪಡೆದ ಸರ್ಕಾರ

NAMMUR EXPRESS NEWS
ಬೆಂಗಳೂರು: ಬಡತನ ರೇಖೆಗಿಂತ ಕೆಳಗಿರುವ(ಬಿಪಿಎಲ್ ಪಡಿತರ ಚೀಟಿ ಹೊಂದಿರುವ)ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ(ಎಸ್ಸಿ-ಎಸ್ಟಿ) ಕುಟುಂಬಗಳ ಗೃಹ ಬಳಕೆಗೆ ಮಾಸಿಕ 75 ಯುನಿಟ್ ಉಚಿತ ವಿದ್ಯುತ್’ ನೀಡುವ ಸಂಬಂಧ ಹೊರಡಿಸಿದ್ದ ಸುತ್ತೋಲೆಯನ್ನು ರಾಜ್ಯ ಸರಕಾರ ಹಿಂಪಡೆದಿದ್ದು, ಯೋಜನೆ ಆರಂಭಕ್ಕೆ ಮೊದಲೇ ಸ್ಥಗಿತಗೊಂಡಂತೆ ಆಗಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಭಾಗ್ಯಜ್ಯೋತಿ ಕುಟೀರಜ್ಯೋತಿ ಬಳಕೆದಾರರು ಒಳಗೊಂಡಂತೆ ಮಾಸಿಕ 75 ಯುನಿಟ್‌ಗಳ ವರೆಗೆ ಉಚಿತ ವಿದ್ಯುತ್ ಒದಗಿಸುವ ಯೋಜನೆ ಅನುಷ್ಠಾನಗೊಳಿಸಲು ಆಗಸ್ಟ್ 28ರಂದು ಇಂಧನ ಇಲಾಖೆ ಸುತ್ತೋಲೆ ಹೊರಡಿಸಿತ್ತು. ಇದೀಗ ಇಂಧನ ಇಲಾಖೆ ಸರಕಾರದ ಅಧೀನ ಕಾರ್ಯದರ್ಶಿ ವಿನೋದ್ ಕುಮಾರ್ ಡಿ.ಎಂ. ಅವರು ಆ ಸುತ್ತೋಲೆಯನ್ನು ಹಿಂಪಡೆಯಲಾಗಿದೆ ಎಂದು ಮತ್ತೊಂದು ಸುತ್ತೋಲೆ ಹೊರಡಿಸಿದ್ದಾರೆ.
“75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಎಸ್ಸಿ-ಎಸ್ಟಿ ವರ್ಗದ ಬಿಪಿಎಲ್ ಕುಟುಂಬಗಳಿಗೆ ಮಾಸಿಕ 75 ಯುನಿಟ್ ಉಚಿತ ವಿದ್ಯುತ್ ನೀಡಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಸ್ವಾತಂತ್ರೋತ್ಸವ ಭಾಷಣದಲ್ಲಿಯೂ ಪ್ರಕಟಿಸಿದ್ದರು. ಆದರೆ, ಇದೀಗ ಯಾವುದೇ ಕಾರಣ ನೀಡದೆ ಸುತ್ತೋಲೆ ಹೊರಡಿಸಿದ ಹತ್ತೇ ದಿನಗಳಲ್ಲಿ ಇಂಧನ ಇಲಾಖೆ ಸುತ್ತೋಲೆ ಹಿಂಪಡೆದಿರುವುದು ಚರ್ಚೆಗೆ ಗ್ರಾಸವಾಗಿದೆ.

Categories
ಕರಾವಳಿ

ಕಡಲ ಕಿನಾರೆಯಲ್ಲಿ ಮೋದಿ ಹವಾ!

  • ಎಲ್ಲೆಲ್ಲೂ ಜನ: ಮೋದಿ ಹೆಸರಿನ ಜೈಕಾರ
  • 3,700 ಕೋಟಿ ರೂ ಯೋಜನೆಗೆ ಚಾಲನೆ

NAMMUR EXPRESS NEWS
ಮಂಗಳೂರಿನಲ್ಲಿ ಶುಕ್ರವಾರ ವಿವಿಧ ಯೋಜನೆಗಳಿಗೆ ಮೋದಿ ಶಿಲಾನ್ಯಾಸ ನೆರವೇರಿಸಿದ್ದು ಒಟ್ಟು 3,700 ಕೋಟಿ ವೆಚ್ಚದ ಯೋಜನೆಗಳಿಗೆ ಮೋದಿ ಚಾಲನೆ ನೀಡಿದ್ದಾರೆ. ಪ್ರಧಾನಿಯಾದ ಬಳಿಕ ಮೋದಿ ಮೊದಲ ಬಾರಿಗೆ ಕರಾವಳಿಗೆ ಆಗಮಿಸಿದ್ದು ಭಾರೀ ಜನಸ್ತೋಮ ಕಂಡು ಬಂತು. ಎಲ್ಲಿ ನೋಡಿದರೂ ಜನರೇ ಕಾಣಿಸುತ್ತಿದ್ದರು.
ವಿಮಾನ ನಿಲ್ದಾಣದಲ್ಲಿ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಸಚಿವರಾದ ಸುನಿಲ್ ಕುಮಾರ್, ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿ ಅನೇಕ ಗಣ್ಯರು ಹಾಜರಿದ್ದರು. ಅಚ್ಚರಿ ಎಂದರೆ ಕರಾವಳಿ ನಾಯಕರಿಗೆ ಮಾತ್ರ ಅವಕಾಶ ನೀಡಲಾಗಿತ್ತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಇಂದು ಭಾರತದ ಸಮುದ್ರ ಶಕ್ತಿಗೆ ದೊಡ್ಡ ದಿನ. ಸೇನೆ, ಆರ್ಥಿಕ ಸುರಕ್ಷತೆಯಲ್ಲಿ ಭಾರತ ದೊಡ್ಡ ಸಾಧನೆ ಮಾಡಿದೆ. ಕಐಎನ್​ಎಸ್ ವಿಕ್ರಾಂತ್ ಲೋಕಾರ್ಪಣೆ ಮಾಡಿದ್ದೇನೆ. ಮಂಗಳೂರಲ್ಲಿ 3,800 ಕೋಟಿ ಮೌಲ್ಯದ ಯೋಜನೆಗಳಿಗೆ ಚಾಲನೆ ನೀಡಿದೆ. 8 ವರ್ಷಗಳಲ್ಲಿ ಕರ್ನಾಟಕಕ್ಕೆ 70 ಸಾವಿರ ಕೋಟಿಯ ಹೈವೇ ಸಿಕ್ಕಿದೆ. ಮಂಗಳೂರು-ಚೆನ್ನೈ ಎಕ್ಸ್​ಪ್ರೇಸ್ ವೇ ಆಗ್ತಿದೆ. ಬೆಂಗಳೂರು-ಮೈಸೂರು ಹೈವೇ ಯೋಜನೆ ಆಗ್ತಿದೆ ಎಂದರು.
ಮಂಗಳೂರು ಬಂದರು ವಿಸ್ತರಣೆ ಆಗಿದೆ. ಮಂಗಳೂರಿನ ಮೀನುಗಾರರ ಗಳಿಕೆ ಹೆಚ್ಚಿಸಲು ಯೋಜನೆ ತಂದಿದ್ದೇವೆ. ಕರ್ನಾಟಕದ ಜನತೆಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಈ ಯೋಜನೆಗಳಿಂದ ಕರ್ನಾಟಕದಲ್ಲಿ ವ್ಯಾಪಾರ ಹೆಚ್ಚಳವಾಗಲಿದೆ. ಕರ್ನಾಟಕದಲ್ಲಿ ಉದ್ಯೋಗ, ಉದ್ದಿಮೆ ಹೆಚ್ಚಾಗಲಿದೆ ಅಂತಾ ಮೋದಿ ಹೇಳಿದರು.
ರೈತರು, ಮೀನುಗಾರರು ಅಂತಾರಾಷ್ಟ್ರೀಯ ಮಟ್ಟಕ್ಕೇರಲು ಈ ಯೋಜನೆಗಳು ಸಹಕಾರಿಯಾಗಲಿದೆ. ಮೇಕ್ ಇನ್ ಇಂಡಿಯಾ ವಿಸ್ತರಣೆ ಅತ್ಯಂತ ಮುಖ್ಯವಾಗಿದೆ.
ಅಭಿವೃದ್ಧಿ ಭಾರತಕ್ಕೆ ಜಗತ್ತಿನೆಲ್ಲೆಡೆ ನಮ್ಮ ವಸ್ತುಗಳು ಮಾರಾಟವಾಗ್ಬೇಕು.ಕರ್ನಾಟಕ, ದೇಶದ ಅಭಿವೃದ್ಧಿ ಆಗಲಿದೆ
ಕರ್ನಾಟಕದಲ್ಲಿ ಡಬಲ್ ಇಂಜಿನ್ ಸರ್ಕಾರದಿಂದ ಲಾಭ ಆಗಿದೆ. ಜನರ ಆಶಯಗಳಿಗೆ ತಕ್ಕಂತೆ ಕೆಲಸ ಮಾಡುವ ವಿಶ್ವಾಸ ಇದೆ. ಕರಾವಳಿ, ಪಶ್ಚಿಮಘಟ್ಟ ಪ್ರವಾಸಿಗರನ್ನ ಸೆಳೆಯುತ್ತಿವೆ. ಭಾರತದಲ್ಲಿ ಮಧ್ಯಮ ವರ್ಗದ ಶಕ್ತಿ ಹೆಚ್ಚುತ್ತಿದೆ. ಕ್ರೂಸ್ ಟೂರಿಸಂ ಕೂಡ ಎಂದರು.

ಮೋದಿ ನೋಡಲು ಹರಿದು ಬಂದ ಜನಸಾಗರ

  • ಜನರನ್ನು ಹದ್ದು ಬಸ್ತಿನಲ್ಲಿಡಲು ಪೊಲೀಸರ ಹರಸಾಹಸ

ಮಂಗಳೂರಿನ ಜನತೆ ಈ ಬಾರಿಯೂ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಪ್ರಧಾನಿ ಮೋದಿಗೆ ಮೋದಿ ಪಠಣದ ಸ್ವಾಗತ ಕೋರಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಸ್ವಾಗತಿಸಲು ಕೂಳೂರಿನ ಗೋಲ್ಡ್ ಫಿಂಚ್ ಸಿಟಿಗೆ ಹೋಗುವ ರಸ್ತೆಗಳಲ್ಲಿ ಬಿಸಿಲನ್ನೂ ಲೆಕ್ಕಿಸದೆ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಸೇರಿದ್ದರು.
ಹಿಂದಿನ ಬಾರಿಯೂ ಮೋದಿಯವರು ಮಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿಯೂ ಇದೇ ರೀತಿ ಜನಸಾಗರ ಹರಿದು ಬಂದಿತ್ತು, ಮತ್ತು ಇದನ್ನು ಮೋದಿ ಅವರು ತಮ್ಮಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಈ ಬಾರಿಯೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಪೊಲೀಸರು ಜನರನ್ನು ಹದ್ದು ಬಸ್ತಿನಲ್ಲಿಡಲು ಹರಸಾಹಸ ಪಡುತ್ತಿರುವ ದೃಶ್ಯಗಳು ಕಂಡುಬರುತ್ತಿದ್ದವು.

3,700 ಕೋಟಿಯ ಯೋಜನೆಗಳಿಗೆ ಮೋದಿ ಚಾಲನೆ

ಬಂದರಿನ 14ನೇ ಬರ್ತ್ ಯಾಂತ್ರೀಕರಣ ಲೋಕಾರ್ಪಣೆ: ₹281 ಕೋಟಿ
ಬಂದರು ಬಿಟುಮಿನ್ ಸಂಗ್ರಹಗಾರದ ಶಿಲಾನ್ಯಾಸ : ₹100 ಕೋಟಿ
ಪಿಎಂ ಗತಿಶಕ್ತಿ ಯೋಜನೆಯಡಿ ಹೆದ್ದಾರಿ ಅಭಿವೃದ್ಧಿಗೆ ಚಾಲನೆ
ಶೇಖರಣಾ ಟ್ಯಾಂಕ್, ತೈಲ ಸಂಗ್ರಹಗಾರದ ಶಿಲಾನ್ಯಾಸ: ₹100 ಕೋಟಿ
MRPLನ ಶುದ್ಧ ನೀರಿನ ಪ್ಲಾಂಟ್​ ಉದ್ಘಾಟನೆ: ₹677 ಕೋಟಿ
MRPL 6ನೇ ಇಂಧನ ಸ್ಥಾವರ ಘಟಕ ಉದ್ಘಾಟನೆ:₹1,829 ಕೋಟಿ
MRPL ಎಲ್​ಪಿಜಿ ಸ್ಟೋರೇಜ್​ ಘಟಕ ಉದ್ಘಾಟನೆ: ₹500 ಕೋಟಿ
ಕುಳಾಯಿ ಮೀನುಗಾರಿಕಾ ಜೆಟ್ಟಿ ನಿರ್ಮಾಣ ಘಟಕ: ₹200 ಕೋಟಿ

ಯಡಿಯೂರಪ್ಪ ಪಕ್ಕ ಕೂರಿಸಿಕೊಂಡ ಮೋದಿ!

ಮಂಗಳೂರಿನಲ್ಲಿ ಪ್ರಧಾನಿ ಮೋದಿ ವೇದಿಕೆಗೆ ಬರುತ್ತಿದ್ದಂತೆ ಮಾಜಿ ಸಿಎಂ ಯಡಿಯೂರಪ್ಪರನ್ನು ವೇದಿಕೆಗೆ ಕರೆದರು. ಬಳಿಕ ವೇದಿಕೆಯಲ್ಲಿ ತಮ್ಮ ಸಾಲಿನಲ್ಲೇ ಕೂರಿಸಿದರು. ಈ ಹಿಂದೆ ಬೆಂಗಳೂರಿನಲ್ಲಿ ನಡೆದಿದ್ದ ಪ್ರಧಾನಿ ಮೋದಿ ಕಾರ್ಯಕ್ರಮದ ವೇದಿಕೆಗೆ ಯಡಿಯೂರಪ್ಪರಿಗೆ ಆಹ್ವಾನ ಇರಲಿಲ್ಲ. ಯಡಿಯೂರಪ್ಪ ಅಧಿಕಾರದಿಂದ ಇಳಿದ ನಂತರ ಮೋದಿಯವರ ಮೊದಲ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಇದ್ದರು. ಚುನಾವಣೆ ಹತ್ತಿರವಾಗ್ತಿದ್ದಂತೆ ಬಿಜೆಪಿಗೆ ಯಡಿಯೂರಪ್ಪ ಮತ್ತಷ್ಟು ಅನಿವಾರ್ಯ ಆಗ್ತಿದ್ದಾರೆ. ಇದೇ ಸುಳಿವಲ್ಲೋ ಏನೋ ಮೋದಿಯವರು ತಮ್ಮ ಜೊತೆಯ ಮೊದಲ ಸಾಲಿನಲ್ಲೇ ಬಿಎಸ್​​ವೈಗೆ ಕುಳಿತುಕೊಳ್ಳಲು ಅವಕಾಶ ಮಾಡಿಕೊಟ್ಟರು. ಇನ್ನು ಪ್ರಧಾನಿ ಮೋದಿಗೆ ಉಡುಪಿ ಶ್ರೀಕೃಷ್ಣ ವಿಗ್ರಹ ನೀಡಿ ಗೌರವಿಸಲಾಯಿತು.

Categories
ಬೆಂಗಳೂರು

ರಾಜ್ಯದ 31 ಪ್ರಾಥಮಿಕ, ಹೈಸ್ಕೂಲ್ ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ

  • ಯಾವ ಜಿಲ್ಲೆಯ ಯಾರಿಗೆ ಪ್ರಶಸ್ತಿ?

NAMMUR EXPRESS NEWS
ಬೆಂಗಳೂರು: 2022-23ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಘೋಷಿಸಿದೆ.
ಪ್ರಾಥಮಿಕ ಶಾಲೆಯ 20 ಶಿಕ್ಷಕರು, ಪ್ರೌಢಶಾಲೆಯ 11 (ಒಬ್ಬರು ವಿಶೇಷ ಚೇತನ ಶಿಕ್ಷಕರು ಒಳಗೊಂಡಂತೆ) ಶಿಕ್ಷಕರಿಗೆ ಪ್ರಶಸ್ತಿ ಘೋಷಣೆ ಮಾಡಿ ಶನಿವಾರ ಸುತ್ತೋಲೆ ಹೊರಡಿಸಿದೆ. ಸೆಪ್ಟೆಂಬರ್ 5 ರಂದು ನಡೆಯುವ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
2022-23ನೇ ಸಾಲಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾಗಿರುವ ಶಿಕ್ಷಕರಿಗೆ `ಅಕ್ಷರ ಮಾತೆ ಸಾವಿತ್ರಿಬಾಯಿ ಫುಲೆ’ ಹೆಸರಿನಲ್ಲಿ ರಾಜ್ಯ ಸರ್ಕಾರ ಪ್ರಶಸ್ತಿ ಪ್ರದಾನ ಮಾಡಲಿದೆ.
ಜೊತೆಗೆ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಶಿಕ್ಷಕರಿಗೆ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಹಾಗೂ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿಯಿಂದ ತಲಾ 10 ಸಾವಿರ ರೂ.ಗಳ ನಗದು ಪುರಸ್ಕಾರ ನೀಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಹೆಚ್.ಎಸ್.ಶಿವಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಾಥಮಿಕ ಶಾಲಾ ವಿಭಾಗ

  • ಮಂಜುನಾಥ ಶಂಕರಪ್ಪ ಮುಂಗೂಣಿ
  • ಧಾರವಾಡ ಅಮಿತಾನಂದ ಹೆಗ್ಡೆ – ದಕ್ಷಿಣ ಕನ್ನಡ
  • ಹೆಚ್.ಎಲ್.ಚಂದ್ರಶೇಖರ – ಚಿಕ್ಕಬಳ್ಳಾಪುರ
  • ಅಪ್ಪಸಾಹೇಬ ವಸಂತಪ್ಪ ಗಿರೆಣ್ಣವರ – ಚಿಕ್ಕೋಡಿ
  • ಶಿವಾನಂಪ್ಪ ಬಿ. – ಶಿವಮೊಗ್ಗ
  • ಹುಸೇನಸಾಬ್ – ಕಲಬುರಗಿ
  • ಕೆ.ವಿ.ಸುದರ್ಶನ – ಬೆಂಗಳೂರು ಉತ್ತರ
  • ಕೊಟ್ರಪ್ಪ ವಿರೂಪಾಕ್ಷಪ್ಪ ಮೇಲ್ಮುರಿ – ಹಾವೇರಿ
  • ಸಂಜೀವ ದೇವಾಡಿಗ – ಉಡುಪಿ
  • ಫಿರೆಂಗಪ್ಪ ಸಿದ್ದಪ್ಪ ಕಟ್ಟಿಮನಿ, ಬಾಗಲಕೋಟೆ ಚಂದ್ರಕಲಾ – ಯಾದಗಿರಿ
  • ನಿರಂಜನ ಪಿ.ಜೆ – ವಿಜಯನಗರ
  • ಸುಶೀಲಬಾಯಿ – ಬೆಳಗಾವಿ
  • ವಿದ್ಯಾ ಕಂಪಾಪೂರ ಮಠ – ಕೊಪ್ಪಳ
  • ಬಸವರಾಜ ಜಾಡರ – ರಾಯಚೂರು
  • ಗಂಗಾಧರಪ್ಪ ಬಿ.ಆರ್. – ಚಿಕ್ಕಮಗಳೂರು
  • ಚಂದ್ರಶೇಖರ ರೆಡ್ಡಿ – ಮಧುಗಿರಿ ಶೈಕ್ಷಣಿಕ ಜಿಲ್ಲೆ
  • ಸುಧಾಕರ ಗಣಪತಿ – ಶಿರಸಿ
  • ಈಶ್ವರಪ್ಪ ಅಂದಾನಪ್ಪ ರೇವಡಿ – ಗದಗ
  • ಕವಿತಾ ಈ. – ಚಿತ್ರದುರ್ಗ
    ಪ್ರೌಢಶಾಲಾ ವಿಭಾಗ
  • ಮಹೇಶ್.ಕೆ.ಎನ್-ಚಿತ್ರದುರ್ಗ
  • ಇಬ್ರಾಹಿಂ- ಕೊಡಗು
  • ರಘು-ಶಿವಮೊಗ್ಗ
  • ಭೀಮಪ್ಪ- ರಾಯಚೂರು
  • ರಾಧಾಕೃಷ್ಣ- ದಕ್ಷಿಣ ಕನ್ನಡ
  • ನಾರಾಯಣ ಪರಮೇಶ್ವರ- ಶಿರಸಿ
  • ಅರುಣಾ ಜೂಡಿ- ಕೊಪ್ಪಳ
  • ಸುನೀಲ ಪರೀಟ-ಬೆಳಗಾವಿ
  • ಬಾಲಸುಬ್ರಹ್ಮಣ್ಯ- ಮಂಡ್ಯ
  • ಡಾ.ಚೇತನ್ ಬಣಕಾರ್- ವಿಜಯನಗರ
  • ಕೀರ್ತಿ ಬಸಪ್ಪ- ಚಿಕ್ಕಬಳ್ಳಾಪುರ