Categories
ಬೆಂಗಳೂರು

ರೇಣುಕಾಚಾರ್ಯ ಸಹೋದರನ ಮಗ ಸಾವು

  • ತುಂಗಾ ಕಾಲುವೆಯಲ್ಲಿ ಕಾರಲ್ಲಿತ್ತು ಶವ
  • ಕೊಲೆಯೋ…ಆತ್ಮಹತ್ಯೆಯೋ… ಅನುಮಾನ

NAMMUR EXPRESS NEWS
ದಾವಣಗೆರೆ: ಕಳೆದ ಐದು ದಿನಗಳಿಂದ ಮನೆಯಿಂದ ನಾಪತ್ತೆಯಾಗಿದ್ದ ಶಾಸಕ ರೇಣುಕಾಚಾರ್ಯ ಸೋದರನ ಪುತ್ರ ಚಂದ್ರಶೇಖರ್ ಶವ ಪತ್ತೆಯಾಗಿದೆ.
ದಾವಣಗೆರೆಯ ಕಡದಕಟ್ಟೆ ಬಳಿ ತುಂಗಾ ಕಾಲುವೆಯಲ್ಲಿ ಶವ ಪತ್ತೆಯಾಗಿದೆ. ಮೊದಲಿಗೆ ಕಡದಕಟ್ಟೆಯ ತುಂಗಾ ಕಾಲುವೆ ಬಳಿ ಕಾರು ಸಂಚರಿಸಿರುವ ಕುರುಹುಗಳು ಪತ್ತೆಯಾಗಿದ್ದವು,. ಇದನ್ನು ಪೊಲೀಸರು ಪರಿಶೀಲನೆ ಮಾಡಿದ ಬಳಿಕ ಕಾರು ಸಹ ತುಂಗ ಕಾಲುವೆಯಲ್ಲಿ ಪತ್ತೆಯಾಗಿದೆ. ಅಲ್ಲದೇ ಕಾರಿನಲ್ಲಿ ರೇಣುಕಾಚಾರ್ಯ ಸೋದರನ ಪುತ್ರ ಚಂದ್ರಶೇಖರ್ ಮೃತದೇಹ ಸಿಕ್ಕಿದೆ.
ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಎಂ.ರೇಣುಕಾಚಾರ್ಯರ ಸಹೋದರನ ಮಗ ಚಂದ್ರು
ಗೌರಿಗದ್ದೆ ಆಶ್ರಮಕ್ಕೆ ಹೋಗಿ ಬರುತ್ತೇನೆ ಎಂದು ಹೋಗಿದ್ದ ಚಂದ್ರು ಮತ್ತೆ ಕಂಡುಬಂದಿಲ್ಲ. ಹೀಗಾಗಿ ಈ ಸಂಬಂಧ ಹೊನ್ನಾಳಿ ಪೊಲೀಸರಿಗೆ ದೂರು ನೀಡಲಾಗಿತ್ತು. ಚಂದ್ರಶೇಖರ್ ಕಳೆದ ಭಾನುವಾರ ಗೌರಿಗದ್ದೆಗೆ ತಮ್ಮ ಕ್ರೇಟಾ ಕಾರಿನಲ್ಲಿ ಹೋಗಿದ್ದಾರೆ.
ಅವಧೂತ ವಿನಯ್ ಗುರೂಜಿಯವರ ಆಶೀರ್ವಾದ ಪಡೆದು ಬಂದಿದ್ದಾರೆ. ಇಲ್ಲಿಂದ ಹೊನ್ನಾಳಿಗೆ ಹೊರಟವರು ನಾಪತ್ತೆಯಾಗಿದ್ದರು. ರೇಣುಕಾಚಾರ್ಯ ಸಹೋದರ ಎಂ.ಪಿ ರಮೇಶ್ ರವರ ಪುತ್ರನಾಗಿದ್ದು, ರೇಣುಕಾಚಾರ್ಯರಿಗೆ ಅಚ್ಚುಮೆಚ್ಚಿನವನಾಗಿದ್ದ.
ಆತನನ್ನು ನೆನೆದು ಕಣ್ಣೀರು ಇಡುತ್ತಿರುವ ಎಂ.ಪಿ.ರೇಣುಕಾಚಾರ್ಯರ ಚುನಾವಣೆಯಲ್ಲಿ ಸೋತಾಗಲೂ ಇಷ್ಟು ನೋವು ಆಗಿರಲಿಲ್ಲ. ಆದರೆ ಮಗ ಕಾಣಿಸುತ್ತಿಲ್ಲ ಎಂಬ ಸುದ್ದಿ ಕೇಳಿದಾಗಿನಿಂದ ಆತಂಕ ಉಂಟಾಗುತ್ತಿದೆ ಎಂದು ಕಣ್ಣೀರು ಹಾಕಿದ್ದರು. ಇದೀಗ ಶವ ಪತ್ತೆಯಾಗಿದ್ದು ಕೊಲೆಯೋ ಆತ್ಮಹತ್ಯೆಯೋ ತಿಳಿದು ಬರಬೇಕಿದೆ.

Categories
ಮಲ್ನಾಡ್

ಒಂದು ಕಡೆ ಮಳೆ.. ಇನ್ನೊಂದು ಕಡೆ ಕೊಳೆ!

  • ಮಲೆನಾಡ ರೈತನ ಬದುಕು ದೇವರೇ ಕಾಪಾಡಲಿ
  • ಎಲೆ ಚುಕ್ಕಿಗೆ ಉದುರುತ್ತಿರುವ ಅಡಿಕೆ
  • ಮಳೆಯ ಅಬ್ಬರ: ಅಡಿಕೆ ಕೊಯ್ಲು ಆತಂಕ

ನಮ್ಮೂರ್ ಎಕ್ಸ್ ಪ್ರೆಸ್
ತೀರ್ಥಹಳ್ಳಿ: ಒಂದು ಕಡೆ ಮಳೆ.. ಇನ್ನೊಂದು ಕಡೆ ಕೊಳೆ
ಮಲೆನಾಡ ರೈತನ ಬದುಕು ದೇವರೇ ಕಾಪಾಡಲಿ.
ಹೌದು. ಕಳೆದ ಕೆಲವು ದಿನಗಳಿಂದ ಮತ್ತೆ ಮಳೆ ಶುರುವಾಗಿದೆ. ಬುಧವಾರ ತೀರ್ಥಹಳ್ಳಿ ತಾಲೂಕು ಸೇರಿ ಹಲವೆಡೆ ಮಳೆಯಾಗಿದೆ. ಒಂದು ಕಡೆ ಎಲೆ ಚುಕ್ಕಿಗೆ ಉದುರುತ್ತಿರುವ ಅಡಿಕೆಯಿಂದ ರೈತ ಕಂಗಾಲಾಗಿದ್ದಾನೆ
ಮಳೆಯ ಅಬ್ಬರ: ಅಡಿಕೆ ಕೊಯ್ಲು ಆತಂಕ: ಮಳೆಯ ಕಾರಣ ಅಡಿಕೆ ಉದುರುತ್ತಿದೆ.. ಅಡಿಕೆ ಕೊಯ್ಲು ಮಾಡಲು ತೊಂದರೆಯಾಗಿದೆ.

Categories
ಬೆಂಗಳೂರು

ಪೆಟ್ರೋಲ್, ಡೀಸೆಲ್ ಬೆಲೆ ಎರಡು ರೂ. ಇಳಿಕೆ?

NAMMUR EXPRESS NEWS
ನವದೆಹಲಿ : ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಕುಸಿತದಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 2 ರೂ. ಇಳಿಕೆಯಾಗುವ ಸಾಧ್ಯತೆ ಇದೆ. ಚಿಲ್ಲರೆ ವ್ಯಾಪಾರಿಗಳ ಮಾರ್ಜಿನ್‌ ಪ್ರತಿ ಲೀಟ‌ರ್ ಪೆಟ್ರೋಲ್ ಮೇಲೆ 6 ರೂ.ನಷ್ಟಿದೆ. ಶೀಘ್ರದಲ್ಲೇ ಡೀಸೆಲ್ ಮೇಲಿನ ಅಂಡ‌ರ್ -ರಿಕವರಿ 10 ರೂ. ಕಡಿಮೆಯಾಗುವ ನಿರೀಕ್ಷೆ ಇದೆ. ಮೇ 22ರಂದು ಕೇಂದ್ರ ಸರ್ಕಾರ ಪೆಟ್ರೋಲ್‌ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕ್ರಮವಾಗಿ 8 ಮತ್ತು 6 ರೂ. ಕಡಿಮೆ ಮಾಡಿತ್ತು. ಅಲ್ಲಿಂದೀಚೆಗೆ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣೆಗೂ ಮುನ್ನ ಪೆಟ್ರೋಲ್ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ.

Categories
ಬೆಂಗಳೂರು

ಆರಗ ಸೇರಿ ಏಳು ಮಂದಿ ಕೇಸ್..!

  • ಬೆಂಗಳೂರಿನ ಕೆ.ಆರ್.ಪುರ ಠಾಣೆಯಲ್ಲಿ ದೂರು
  • ನಂದೀಶ್‌ ಸಾವಿಗೆ ಕಾರಣ ಎಂಬ ಆರೋಪ

NAMMUR EXPRESS NEWS
ಬೆಂಗಳೂರು: ಅಮಾನತುಗೊಂಡಿದ್ದ ಇನ್ಸ್‌ಪೆಕ್ಟರ್ ನಂದೀಶ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿ 7 ಮಂದಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಕೆ.ಆರ್.ಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಗೃಹ ಸಚಿವ ಆರಗ ಜ್ಞಾನೇಂದ್ರ, ನಗರಾಭಿವೃದ್ಧಿ ಸಚಿವ ಭೈರತಿ ಬಸವ ರಾಜ್, ಪೊಲೀಸ್ ಕಮಿಷನ‌ ಪ್ರತಾಪ್ ರೆಡ್ಡಿ, ಸಿಸಿಬಿ ಎಸಿಪಿ ರೀನಾ ಸುವರ್ಣ, ಭೈರತಿ ಬಸವರಾಜ್‌ ಸಂಬಂಧಿಗಳಾದ ಚಂದ್ರು ಹಾಗೂ ಗಣೇಶ್‌ರವರು ನಂದೀಶ್‌ ಸಾವಿಗೆ ಕಾರಣ ಎಂದು ಆರೋಪಿಸಿ ಅವರ ವಿರುದ್ಧ ದೂರು ನೀಡಿದ್ದಾರೆ. ಭೈರತಿ ಬಸವರಾಜ್‌ ರ ಸಂಬಂಧಿಗಳ ಕಿರುಕುಳವೇ ನಂದೀಶ್ ಹೃದಯಘಾತಕ್ಕೆ ಕಾರಣ. ಜೊತೆಗೆ ಪೋಸ್ಟಿಂಗ್ ಗಾಗಿ ಭೈರತಿ ಬಸವರಾಜ್ ರಿಗೆ 50 ಲಕ್ಷ ರೂ. ಹಾಗೂ ಗೃಹ ಸಚಿವರಿಗೆ 20 ಲಕ್ಷ ನೀಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.