Categories
ಮಲ್ನಾಡ್

ವಿನಯ್ ಗುರೂಜಿ ಅವಹೇಳನ, ಉಹಾಪೋಹ

  • ಪೊಲೀಸ್ ತನಿಖೆ ನಡೆದು ಸತ್ಯ ಹೊರ ಬರಲಿ: ಸುಮ್ಮನೆ ತಪ್ಪು ಸಂದೇಶ ನೀಡಬೇಡಿ
  • ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಿಗೆ ಭಕ್ತರ ಮನವಿ

ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಶಾಸಕ ರೇಣುಕಾಚಾರ್ಯ ಅವರ ಸಹೋದರ ಮಗ ಚಂದ್ರು ಸಾವಿನ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಚರ್ಚೆಗಳು ನಡೆಯುತ್ತಿವೆ. ಒಬ್ಬ ವ್ಯಕ್ತಿಯ ಸಾವಿಗೆ ಯಾರೇ ಕಾರಣವಾಗಿದ್ದರೂ ಅವರು ಕಾನೂನಾತ್ಮಕವಾಗಿ ಶಿಕ್ಷೆಗೆ ಒಳಗಾಗಬೇಕೆಂಬುದು ನಮ್ಮ ಆಶಯ. ಹಾಗೆಯೇ ಚಂದ್ರು ಸಾವಿನ ರಹಸ್ಯ ಆದಷ್ಟು ಬೇಗ ಬಹಿರಂಗವಾಗಲಿ ಎನ್ನುವುದನ್ನು ನಾವೂ ಆಗ್ರಹಿಸುತ್ತೇವೆ.
ಹೀಗಿರುವಾಗ ಚಂದ್ರು ಸಾವಿನ ವಿಷಯದಲ್ಲಿ ಸಾವಿರಾರು ಅನುಯಾಯಿಗಳನ್ನು ಹೊಂದಿರುವ ಅವಧೂತ ಶ್ರೀ ವಿನಯ್ ಗುರೂಜಿ ಅವರ ಹೆಸರು ಅನೌಪಚಾರಿಕವಾಗಿ ಕೆಲವು ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಹಾಗಿದ್ದರೂ ಚಂದ್ರು ದಿನಂಪ್ರತಿ ನೂರಾರು ಭಕ್ತರು ಮತ್ತು ಅನುಯಾಯಿಗಳು ಭೇಟಿ ನೀಡುವ ಪರಮಪೂಜ್ಯ ಅವಧೂತ ಶ್ರೀ ವಿನಯ್ ಗುರೂಜಿ ಅವರ ಗೌರಿಗದ್ದೆ ಆಶ್ರಮಕ್ಕೆ ಭೇಟಿ ಕೊಟ್ಟಿದ್ದ ಎಂಬ ಒಂದೇ ವಿಚಾರದಿಂದ ಚಂದ್ರು ಸಾವಿನಲ್ಲಿ ವಿನಯ್ ಗುರೂಜಿ ಅವರ ಹೆಸರನ್ನು ತಳುಕು ಹಾಕುವುದು ಸಮಂಜಸವಲ್ಲ.

ಚಂದ್ರು ಸಾವಿನ ವಿಚಾರವಾಗಿ ವಿನಯ್ ಗುರೂಜಿ ಹೆಸರು ಸಾಮಾಜಿಕ ಜಾಲತಾಣಗಳಲ್ಲಷ್ಟೇ ತಳುಕು ಹಾಕಿದ್ದರೂ ಈ ಕುರಿತು ಸ್ಪಷ್ಟನೆಗಾಗಿ ಪೊಲೀಸರು ಹಾಗೂ ನ್ಯಾಯಾಂಗದ ಮುಂದೆ ಎಲ್ಲಾ ರೀತಿಯ ಸಹಕಾರವನ್ನು ನೀಡಲು ವಿನಯ್ ಗುರೂಜಿ ಆಗಲೀ ಅವರ ಆಶ್ರಮವಾಗಲೀ ಬದ್ದರಾಗಿದ್ದು ಆ ರೀತಿಯಲ್ಲಿ ಸರಿಯಾದ ಸಹಕಾರ ಮತ್ತು ಸ್ಪಂದನೆ ನೀಡಲಾಗುತ್ತಿದೆ.

ಹಾಗಿದ್ದರೂ ಅನೌಪಚಾರಿಕ ಕಾರ್ಯಕ್ರಮಗಳು, ಲೇಖನಗಳಲ್ಲಿ ತಮ್ಮ ಗೌರವಾನ್ವಿತ ಮಾಧ್ಯಮದಲ್ಲಿ ಚಂದ್ರು ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ್ ಗುರೂಜಿ ಅವರ ಹೆಸರನ್ನ ಬಳಸಲಾಗುತ್ತಿದ್ದು ಅದು ಸಮಂಜಸವಲ್ಲ. ತಮ್ಮ ಮಾಧ್ಯಮದಲ್ಲಿ ನೀಡಲಾಗಿರುವ ಸುದ್ದಿಯಾಗಲೀ, ಹೆಡ್ ಲೈನ್ಸ್ ಆಗಲೀ, ತಂಬ್ ನೈಲ್ ಗಳಾಗಲೀ ಎಲ್ಲವೂ ಜನರಿಗೆ ಉತ್ತಮ ಮಾಹಿತಿ ಕೊಡುವಂತಹ ವಿಚಾರವಲ್ಲ. ಆದುದರಿಂದಲೇ ತಮ್ಮ ಗೌರವಾನ್ವಿತ ಮಾಧ್ಯಮದಲ್ಲಿ ವಿನಯ್ ಗುರೂಜಿ ಅವರ ಹೆಸರನ್ನು ಬಳಸಿರುವ ಸುದ್ದಿಗಳನ್ನು ನೋಡಲು ಲಕ್ಷಾಂತರ ಅನುಯಾಯಿಗಳಲ್ಲಿ ಬಹಳ ನೋವು ತರಿಸುತ್ತದೆ.

ಪೊಲೀಸರಿಂದ ಅಥವಾ ನ್ಯಾಯಾಂಗದಿಂದ ಈ ಕುರಿತು ಯಾವುದೇ ಮಾಹಿತಿಗಳು ಹೊರಬಂದಿಲ್ಲವಾಗಿದ್ದರೂ ಊಹಾಪೋಹಗಳ ಮೇಲೆ ವಿನಯ್ ಗುರೂಜಿ ಅವರ ಹೆಸರಿನಲ್ಲಿ ಸುದ್ದಿಗಳನ್ನು ಬಿತ್ತರಿಸುವುದು ತಪ್ಪು ಸಂದೇಶವನ್ನು ನೀಡಿದಂತಾಗುತ್ತದೆ. ಪೊಲೀಸರ ತನಿಖೆಯ ಮೂಲಕವಷ್ಟೇ ಎಲ್ಲಾ ಸತ್ಯಾಸತ್ಯತೆಗಳು ಹೊರಬರಬೇಕಾಗಿದೆ.

ಅಲ್ಲದೇ ಇಂತಹ ಅಪಪ್ರಚಾರಗಳಿಗೆ ಆಸ್ಪದ ನೀಡದೇ ಜನರಲ್ಲಿ ತಪ್ಪು ಸಂದೇಶವನ್ನು ನೀಡುವಂತಾಗದಂತೆ ತಾವು ನೋಡಿಕೊಳ್ಳಬೇಕಾಗಿ ಗೌರವಯುತವಾಗಿ ವಿನಂತಿ

ಇಂತಿ ತಮ್ಮ ವಿಶ್ವಾಸಿ

ಭಕ್ತವೃಂದ
ಅವಧೂತ ಶ್ರೀ ವಿನಯ್ ಗುರೂಜಿ ಅಶ್ರಮ
ಗೌರಿಗದ್ದೆ

Categories
ಸಿನಿಮಾ

ಕನ್ನಡದ ಹಿರಿಯ ನಟ ಲೋಹಿತಾಶ್ವ ನೆನಪು ಮಾತ್ರ!

  • ತೀವ್ರ ಅನಾರೋಗ್ಯದಿಂದ ಬೆಂಗಳೂರಲ್ಲಿ ವಿಧಿವಶ
  • ಬುಧವಾರ ಬೆಳಿಗ್ಗೆವರೆಗೂ ಅಂತಿಮ ದರ್ಶನ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು: ಸ್ಯಾಂಡಲ್ ವುಡ್ ನ ಖ್ಯಾತ ನಟ ಲೋಹಿತಾಶ್ವ ದೀರ್ಘ ಕಾಲದ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ವಯೋ ಸಹಜ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಮಂಗಳವಾರ ಮಧ್ಯಾಹ್ನ 2.45ಕ್ಕೆ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಕಳೆದ ಹಲವು ಸಮಯಗಳಿಂದಲೂ ಬೆಂಗಳೂರಿನ ಸಾಗರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ. ಪುತ್ರ, ಕಲಾವಿದ ಶರತ್ ಲೋಹಿತಾಶ್ವ ಸೇರಿದಂತೆ ಕುಟುಂಬ, ಅಪಾರ ಅಭಿಮಾನಿಗಳನ್ನು ಆಗಲಿದ್ದಾರೆ
500ಕ್ಕೂ ಹೆಚ್ಚು ಸಿನಿಮಾ ನಟನೆ!: ತುಮಕೂರಿನ ತೊಂಡಗೆರೆಯಲ್ಲಿ ಅಗಸ್ಟ್ 5 1942ರಂದು ಜನಿಸಿದ ಲೋಹಿತಾಶ್ವ ಕನ್ನಡದಲ್ಲಿ ಸುಮಾರು 500ಕ್ಕೂ ಅಧಿಕ ಸಿನಿಮಗಳಲ್ಲಿ ನಟಿಸಿದ್ದಾರೆ. ಸಿನಿಮಾ ಮಾತ್ರವಲ್ಲದೇ ನಾಟಕ, ಧಾರಾವಾಹಿಗಳಲ್ಲಿಯೂ ಅವರು ನಟಿಸಿದ್ದಾರೆ. ರಾಜ್ಯೋತ್ಸವ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಶಂಕರನಾಗ್ ನಟನೆಯ ಮಾಲ್ಗುಡಿ ಡೇಸ್, ಗೃಹಭಂಗ, ನಾಟ್ಯರಾಣಿ ಶಾಂತಲಾ ಸೇರಿದಂತೆ ಹಲವು ಧಾರವಾಹಿಗಳಲ್ಲಿಯೂ ಬಣ್ಣ ಹಚ್ಚಿದ್ದಾರೆ.
ಹೃದಯಾಘಾತವಾದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದಲೂ ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಸದ್ಯ ಆಸ್ಪತ್ರೆಯಲ್ಲಿಯೇ ಲೋಹಿತಾಶ್ವ ಅವರ ಪಾರ್ಥವ ಶರೀರವನ್ನು ಇರಿಸಲಾಗಿದೆ. ಸಂಜೆ 7.30 ಕುಮಾರಸ್ವಾಮಿ ಲೇಔಟ್ ನಲ್ಲಿರುವ ಮನೆಗೆ ಸ್ಥಳಾಂತರ ಮಾಡಲಾಗುತ್ತದೆ. ಅಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಬುಧವಾರ ಸಂಜೆ ತುಮಕೂರು ಬಳಿಯ ತೊಂಡೆಗೆರೆ ಗ್ರಾಮಕ್ಕೆ ಕೊಂಡೊಯ್ದು ಅಲ್ಲಿ ಅಂತ್ಯಕ್ರೀಯೆ ನಡೆಸಲಾಗುವುದು ಎಂದು ಹಿರಿಯ ನಟ ಲೋಹಿತಾಶ್ವ ಅವರ ಪುತ್ರ ಶರತ್ ಲೋಹಿತಾಶ್ವ ಅವರು ಮಾಹಿತಿ ನೀಡಿದ್ದಾರೆ. ಸಿನಿಮಾ ರಂಗದ ಪ್ರಮುಖರು, ನಾಡಿನ ಪ್ರಮುಖರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

Categories
ವ್ಯವಹಾರ

ಜಾಗತಿಕ ಉದ್ಯೋಗ ಕಡಿತ ಶಾಕ್..!ಟ್ವಿಟ್ಟರ್ ಶೇ.50 ರಷ್ಟು ಸಿಬ್ಬಂದಿ ವಜಾ!

  • 4000 ಮಂದಿಯನ್ನು ಕೆಲಸದಿಂದ ತೆಗೆದ ಮಸ್ಕ್

NAMMUR EXPRESS NEWS
ಪ್ರಾನ್ಸಿಸ್ಕೊ: ನೌಕರರ ವಿರೋಧದ ನಡುವೆ ತನ್ನ ಶೇ.50 ರಷ್ಟು ಸಿಬ್ಬಂದಿಯನ್ನು ಅರ್ಥಾತ್ ಸುಮಾರು 4 ಸಾವಿರ ಸಿಬ್ಬಂದಿಗಳನ್ನು ಚುಟುಕು ಸಾಮಾಜಿಕ ಮಾಧ್ಯಮ ಟ್ವಿಟ್ಟರ್ ಶುಕ್ರವಾರ ಕೆಲಸದಿಂದ ವಜಾ ಮಾಡಿದೆ. ಈ ಕುರಿತು ಟ್ವೀಟ್ ಮಾಡಿರುವ ಟ್ವಿಟರ್ ನೂತನ ಮಾಲೀಕ ಎಲಾನ್ ಮಾಸ್ಕ್ ಕಂಪನಿ ದಿನಕ್ಕೆ 40 ಲಕ್ಷ ಡಾಲರ್ ನಷ್ಟು ನಷ್ಟ ಅನುಭವಿಸುತ್ತಿದೆ. ಹಾಗಾಗಿ ವಜಾ ಮಾಡದೆ ಬೇರೆ ಆಯ್ಕೆ ಇಲ್ಲ ಎಂದಿದ್ದಾರೆ. ಕಂಪನಿಯನ್ನು ಲಾಭದತ್ತ ಕೊಂಡೊಯ್ಯುವ ಉದ್ದೇಶದಿಂದ 50% ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ಕೈ ಬಿಡುವ ತಮ್ಮ ಯೋಜನೆ ಬಗ್ಗೆ ಕೇವಲ ಒಂದು ವಾರದ ಹಿಂದೆ ಮಾಸ್ಕ್ ಘೋಷಿಸಿದ್ದರು. ಈ ಬಗ್ಗೆ ವಜಗೊಂಡ ಉದ್ಯೋಗಿಗಳು ಅಸಮಾಧಾನ ಹೊರಹಾಕಿದ್ದು, ಇದು ಜನರನ್ನು ಅಮಾನವೀಯವಾಗಿ ನಡೆಸಿಕೊಳ್ಳುವ ಮಾರ್ಗ, ಮಾಸ್ಕ್ ಎಲ್ಲಾ ಕಡೆಯಿಂದಲೂ ಲಾಭಗಳಿಸುವ ಯೋಚನೆ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ .
ಈ ನಡುವೆ ಟ್ವಿಟರ್ ನ ಹಿಂದಿನ ಮುಖ್ಯಸ್ಥ ಜಾಕ್ ಡೋರ್ಸಿ ಅವರು ಮಜಗೊಂಡ ಉದ್ಯೋಗಿಗಳಲ್ಲಿ ಕ್ಷಮೆ ಯೋಚಿಸಿದ್ದಾರೆ ಹಾಗೂ ಬೇಸರ ವ್ಯಕ್ತಪಡಿಸಿದ್ದಾರೆ.

ಫೇಸ್ಬುಕ್ ನೌಕರರ ವಜಾ ಸಾಧ್ಯತೆ

  • ಸಾವಿರಾರು ಮಂದಿ ಉದ್ಯೋಗ ಕಳೆದುಕೊಳ್ಳುವ ಭೀತಿ

NAMMUR EXPRESS NEWS
ಹೊಸದಿಲ್ಲಿ: ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್ ಬುಕ್ ಇದರ ಮಾತೃ ಸಂಸ್ಥೆಯಾಗಿದೆ ಮೆಟಾ ಫ್ಲಾಟ್‌ಫಾರ್ಮ್ಸ್. ಈ ವಾರ ದೊಡ್ಡ ಮಟ್ಟದ ಲೇ- ಆಫ್(ಉದ್ಯೋಗಿಗಳನ್ನು ವಜಾ ಮಾಡುವುದು) ನಡೆಸಲಿದೆ ಎನ್ನಲಾಗಿದೆ.
ಸಂಸ್ಥೆಯ ಈ ಕ್ರಮದಿಂದ ಸಾವಿರಾರು ಉದ್ಯೋಗಿಗಳು ಬಾಧಿತರಾಗುವ ನಿರೀಕ್ಷೆಯಿದೆ. ಬುಧವಾರ ಈ ಲೇ-ಆಫ್‌ಗಳು ನಡೆಯಬಹುದೆಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಆದರೆ ಈ ಕುರಿತು ಮೆಟಾ ಪ್ರತಿಕ್ರಿಯಿಸಲು ನಿರಾಕರಿಸಿದೆ.
ತ್ರೈಮಾಸಿಕದ ಆದಾಯ ನಿರೀಕ್ಷಿತ ಮಟ್ಟದಲ್ಲಿಲ್ಲದೇ ಇರುವುದು ಹಾಗೂ ಮೆಟಾ ಸ್ಟಾಕ್ ಮೌಲ್ಯ ಸುಮಾರು 67 ಬಿಲಿಯನ್ ಡಾಲರಷ್ಟು ಕಡಿಮೆಯಾಗಿರುವುದು ಸಂಸ್ಥೆಯ ಆರ್ಥಿಕತೆಗೆ ಇನ್ನಷ್ಟು ಹೊಡೆತ ನೀಡಿದೆಯೆನ್ನಲಾಗಿದೆ.
ಜೊತೆಗೆ ಜಾಗತಿಕ ಆರ್ಥಿಕ ನಿಧಾನಗತಿ, ಟಿಕ್ ಟಾಕ್, ಆಪಲ್ ಮುಂತಾದ ಕಂಪೆನಿಗಳಿಂದ ಸ್ಪರ್ಧೆ ಹಾಗೂ ಮೆಟಾವಸ್‌ರ್ಗೆ ವ್ಯಯಿಸಿದ ದೊಡ್ಡ ಮೊತ್ತ ಸಂಸ್ಥೆಗೆ ಹೊರೆಯಾಗಿದೆ ಎಂದೇ ತಿಳಿಯಲಾಗಿದೆ.
ಮೆಟಾವರ್ಸ್ ಮೇಲೆ ಮಾಡಲಾಗಿರುವ ಹೂಡಿಕೆಗಳು ಫಲ ನೀಡಲು ಒಂದು ದಶಕ ಬೇಕಾದೀತೆಂದು ಮೆಟಾ ಮುಖ್ಯಸ್ಥ ಮಾರ್ಕ್ ಝುಕೆರ್ಬಗ್ ಈಗಾಗಲೇ ಹೇಳಿದ್ದಾರೆ.ಜೂನ್ ತಿಂಗಳಿನಿಂದಲೇ ಹೊಸ ಇಂಜಿನಿಯರ್ ನೇಮಕಾತಿಯನ್ನು ಸಂಸ್ಥೆ ಶೇ 30 ರಷ್ಟು ಕಡಿತಗೊಳಿಸಿತ್ತು.

Categories
ಶಿಕ್ಷಣ

ಕಾರ್ಕಳ ಕ್ರಿಯೇಟಿವ್‌ ಕಾಲೇಜಲ್ಲಿ ಹಬ್ಬದ ಸಂಭ್ರಮ..!

  • ವಿದ್ಯಾರ್ಥಿಗಳ ಜತೆ ದೀಪಾವಳಿ, ತುಳಸಿ ಹಬ್ಬದ ಆಚರಣೆ
  • ದೀಪದ ಬೆಳಕಿನಲ್ಲಿ ಮಿಂದೆದ್ದ ಕ್ರಿಯೇಟಿವ್ ಕಾಲೇಜು

NAMMUR EXPRESS NEWS
ಕಾರ್ಕಳ: ಕಾರ್ಕಳದ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚಿಗೆ ದೀಪಾವಳಿ ಮತ್ತು ತುಳಸಿ ಪೂಜಾ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗಿದ್ದು ಶಿಕ್ಷಣದ ಜತೆಗೆ ಸಂಸ್ಕಾರವನ್ನು ಕಲಿಸುವ ಬಹು ದೊಡ್ಡ ಜವಾಬ್ದಾರಿಗೂ ಸೈ ಎಂದು ಸಂಸ್ಥೆ ತೋರಿಸಿತು.
ಕಾಲೇಜಿನಲ್ಲಿ ಮಕ್ಕಳ ಜತೆಗೆ ಎಲ್ಲಾ ಬೋಧಕರು, ಸಿಬ್ಬಂದಿ, ಮನೆಯಲ್ಲಿ ಹಬ್ಬ ಆಚರಿಸಿದಂತೆ ಹಬ್ಬವನ್ನು ಒಟ್ಟಾಗಿ ಆಚರಿಸಿದರು.
ಹಬ್ಬಗಳ ಮಹತ್ವ ತಿಳಿಸಿದ ಪ್ರಾಂಶುಪಾಲರು:
ವಿದ್ಯಾರ್ಥಿಗಳಲ್ಲಿ ನಮ್ಮ ಪರಂಪರೆ, ಸಾಂಸ್ಕೃತಿಕ ಮೌಲ್ಯಗಳನ್ನು ತಿಳಿಯಲು ಮತ್ತು ಹಬ್ಬಗಳ ಮಹತ್ವ ತಿಳಿಯಲು ಭಾರತೀಯ ಪರಂಪರೆಯ ಹಬ್ಬಗಳು ಮಾದರಿಯಾಗಿವೆ ಎಂದು ಪ್ರಾಂಶುಪಾಲರಾದ ವಿದ್ವಾನ್‌ ಗಣಪತಿ ಭಟ್‌ ತಿಳಿಸಿದರು.
ಸಂಸ್ಥಾಪಕರಲ್ಲೊಬ್ಬರಾದ ಅಶ್ವಥ್‌ ಎಸ್‌ ಎಲ್‌ ಮಾತನಾಡಿ ಭಾರತೀಯ ಹಬ್ಬಗಳು ವೈಜ್ಞಾನಿಕವಾಗಿಯೂ, ಸಾಂಸ್ಕೃತಿಕವಾಗಿಯೂ ಅತ್ಯಂತ ಮಹತ್ವ ಹೊಂದಿದೆ. ಆಧ್ಯಾತ್ಮಿಕವಾಗಿ ನೋಡಿದಾಗಲು ಶ್ರೇಷ್ಠ ಮೌಲ್ಯಗಳ ಪ್ರತೀಕವಾಗಿವೆ. ಎಲ್ಲರಲ್ಲೂ ಹಬ್ಬವು ಸಾಮರಸ್ಯವನ್ನು ತರಲಿ ಎಂದು ಹಾರೈಸಿದರು.
ಸಂಸ್ಥೆಯ ಸಂಸ್ಥಾಪಕರುಗಳಾದ ಡಾ. ಗಣನಾಥ ಶೆಟ್ಟಿ, ಅಮೃತ್‌ ರೈ, ಆದರ್ಶ ಎಂ. ಕೆ, ವಿಮಲ್‌ ರಾಜ್‌, ಗಣಪತಿ ಕೆ ಎಸ್‌ ಹಾಗೂಉಪನ್ಯಾಸಕ ವರ್ಗದವರು ಕಾರ್ಯಕ್ರಮದಲ್ಲಿ ಭಾಗಿಯಾದರು.

ಸಾಂಪ್ರದಾಯಿಕ ಉಡುಗೆ ತೊಡುಗೆಯ ಅಂದ ಚಂದ!

ದೀಪಾವಳಿ ಮತ್ತು ತುಳಸಿ ಪೂಜಾ ಹಬ್ಬದ ಅಂಗವಾಗಿ
ಕಾಲೇಜಿನ ವಿದ್ಯಾರ್ಥಿಗಳು ಭಾರತೀಯ ಪರಂಪರೆಯನ್ನು ಬಿಂಬಿಸುವ ಉಡುಗೆ-ತೊಡುಗೆಗಳನ್ನು ಧರಿಸಿ ದೀಪ ಬೆಳಗಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಎಲ್ಲರ ಮೊಗದಲ್ಲಿ ಮನೆಯಲ್ಲಿನ ಹಬ್ಬದ ವಾತಾವರಣ ಕಂಡು ಬಂತು. ಸಡಗರ ಸಂಭ್ರಮದಿಂದ ಪಟಾಕಿ ಸಿಡಿಸಿ ಹಬ್ಬ ಆಚರಿಸಿ ಖುಷಿಪಟ್ಟರು.

ದೀಪದ ಬೆಳಕಿನಲ್ಲಿ ಮಿಂದೆದ್ದ ಕ್ರಿಯೇಟಿವ್ ಕಾಲೇಜು!

ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ಕ್ಯಾಂಪಸ್ ಬೆಳಕಿನ ಅಲಂಕಾರದಲ್ಲಿ ಮಿಂದೆದ್ದಿತು. ಕಾಲೇಜಿನ ಆವರಣದಲ್ಲಿ ದೀವಟಿಗೆ ಬೆಳಕಿನಲ್ಲಿ ಬಾಣ-ಬಿರುಸು, ಪಟಾಕಿ, ನಕ್ಷತ್ರ ಕಡ್ಡಿಗಳು, ಸುಡುಮದ್ದು ಪ್ರದರ್ಶನ ನಡೆಯಿತು. ವಿದ್ಯಯ ಜತೆಗೆ ಭಾರತೀಯ ಸಂಪ್ರದಾಯಿಕ ಹಬ್ಬದ ಆಚರಣೆ ಮಕ್ಕಳಿಗೆ ಬದುಕಿನ ಪಾಠವನ್ನು ಹೇಳಿ ಕೊಟ್ಟಿತು.

Categories
ಕೃಷಿ

ಅಡಕೆಗೆ ಎಲೆ ಚುಕ್ಕಿ: 10 ಕೋಟಿ ರೂ. ಹಣ ಬಂತು..!

  • ಸರ್ಕಾರದಿಂದ ಬಿಡುಗಡೆ: ಆರಗ ಅವರ ಪ್ರಯತ್ನ

NAMMUR EXPRESS NEWS
ಶಿವಮೊಗ್ಗ: ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಅಡಕೆಗೆ ಬಾಧಿಸುತ್ತಿರುವ ಎಲೆ ಚುಕ್ಕಿ ರೋಗ ನಿಯಂತ್ರಣ ಸಂಬಂಧ ರಾಜ್ಯ ಸರ್ಕಾರ ಔಷಧ ಸಿಂಪಡಣಿಗೆಂದು ಹೆಚ್ಚುವರಿಯಾಗಿ 10 ಕೋಟಿ ರೂ. ಅನುದಾನ ಘೋಷಿಸಿದೆ.
ಅಡಕೆ ಕಾರ್ಯಪಡೆ ಅಧ್ಯಕ್ಷ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ನೇತೃತ್ವದಲ್ಲಿ ತೀರ್ಥಹಳ್ಳಿಯ ರೈತ ಪ್ರತಿನಿಧಿಗಳ ನಿಯೋಗ ಭೇಟಿ ಮಾಡಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಹೆಚ್ಚುವರಿಯಾಗಿ ಅನುದಾನ ಘೋಷಿಸಿದರು. ಅಲ್ಲದೆ, ಈ ಮೊದಲೇ ಘೋಷಿಸಿದ್ದ 8 ಕೋಟಿ ರೂ. ಅನುದಾನದಲ್ಲಿ 4 ಕೋಟಿ ರೂ. ಬಿಡುಗಡೆ ಮಾಡಿರುವುದಾಗಿ ಹೇಳಿದ್ದಾರೆ.

Categories
ಸಿನಿಮಾ

ಗಂಧದಗುಡಿ ಟಿಕೆಟ್ ದರದಲ್ಲಿ ಭಾರೀ ಕಡಿತ

  • ಅಭಿಮಾನಿಗಳಿಗಾಗಿ 4 ದಿನ ಭರ್ಜರಿ ಕೊಡುಗೆ
  • ಟಿಕೆಟ್ ದರದಲ್ಲಿ ಭಾರೀ ಕಡಿಮೆ: ಸಂತಸದ ಸುದ್ದಿ
  • ನ.7ರಿಂದ 4 ದಿನ ಟಿಕೆಟ್ ದರ ಕಡಿತಕ್ಕೆ ನಿರ್ಧಾರ

NAMMUR EXPRESS NEWS
ಬೆಂಗಳೂರು: ಕರ್ನಾಟಕ ರತ್ನ, ಪವರ್ ಸ್ಟಾರ್,ಡಾ. ಪುನೀತ್ ರಾಜ್‌ಕುಮಾರ್ ಅಭಿನಯದ ‘ಗಂಧದಗುಡಿ’ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಕನ್ನಡ ನಾಡಿನ ಪ್ರಕೃತಿ ಸೌಂದರ್ಯವನ್ನು ಪ್ರಾಣಿ ಸಂಕುಲವನ್ನು, ಅಪರೂಪದ ಸಸ್ಯ ಸಂಪತ್ತನ್ನು ವಿಶ್ವಕ್ಕೆ ತೋರಿಸುವ ಕೆಲಸವನ್ನು ಪುನೀತ್ ಮಾಡಿದ್ದಾರೆ. ಸುಮಾರು ಒಂದೂವರೆ ಗಂಟೆಗಳ ಡಾಕ್ಯುಮೆಂಟರಿಯಲ್ಲಿ ರಾಜ್ಯದ ಅಪರೂಪದ ಪ್ರಾಣಿ ಸಂಕುಲ, ಜಲಚರ, ಬೆಟ್ಟ ಗುಡ್ಡ ನದಿ, ಸಮುದ್ರಗಳ ಸೌಂದರ್ಯವನ್ನು ಅಪ್ಪು ತೋರಿಸಿದ್ದಾರೆ. ಅಪ್ಪು ಅಭಿಮಾನಿಗಳು, ಸಿನಿ ಪ್ರಿಯರು, ಪರಿಸರ ಪ್ರಿಯರು ಈ ಸಿನಿಮಾ ನೋಡಿ ಶಹಬ್ಬಾಶ್ ಎಂದಿದ್ದಾರೆ. ಇದೀಗ ಅಭಿಮಾನಿಗಳಿಗೆ ಪುನೀತ್ ರಾಜ್‌ಕುಮಾರ್ ಅವರ ಪಿಆರ್ ಕೆ ಸಂಸ್ಥೆ ಸಂತಸದ ಸುದ್ದಿಯೊಂದು ಕೊಟ್ಟಿದೆ. ನವೆಂಬರ್ 7ರಿಂದ ನಾಲ್ಕು ದಿನಗಳ ಕಾಲ ಗಂಧದಗುಡಿ ಸಿನಿಮಾ ಟಿಕೆಟ್ ದರದಲ್ಲಿ ಕಡಿತ ಮಾಡಲಾಗಿದೆ. ಈ ಬಗ್ಗೆ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕೂಮಾರ್ ಅವರೇ ಅಧಿಕೃತ ಮಾಹಿತಿ ನೀಡಿದ್ದಾರೆ.
ಪ್ರತಿಯೊಬ್ಬ ಅಪ್ಪು ಅಭಿಮಾನಿಗಳು ಗಂಧದಗುಡಿ ನೋಡಬೇಕು ಅಂತ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಇದಕ್ಕಾಗಿ ಮಲ್ಟಿಪ್ಲೆಕ್ಸ್ ಹಾಗೂ ಸಿಂಗಲ್ ಸ್ಟೀನ್ ಥಿಯೇಟರ್‌ಗಳಲ್ಲಿ ಗಂಧದಗುಡಿ ಟಿಕೆಟ್ ದರವನ್ನು ಇಳಿಕೆ ಮಾಡಲಿದಿದ್ದಾರೆ. ನಾಲ್ಕು ದಿನಗಳು ಗಂಧದಗುಡಿ ಟಿಕೆಟ್ ಬೆಲೆ ಅರ್ಧಕ್ಕರ್ಧ ಇಳಿಕೆ ಮಾಡಲಾಗಿದೆ.
ಗಂಧದಗುಡಿ ಚಿತ್ರದ ಟಿಕೆಟ್ ದರ ಇಳಿಸಲು ನಿರ್ಧಾರ ಮಾಡಿದ ಅಶ್ವಿನಿ ಪುನೀತ್ ರಾಜ್‌ಕುಮಾರ್, ಈ ಬಗ್ಗೆ ಸಿನಿಮಾದ ವಿತರಕರು ಹಾಗೂ ಪ್ರದರ್ಶಕರ ಜೊತೆ ಚರ್ಚಿಸಿದ್ದಾರೆ. ಬಳಿಕ ಟಿಕೆಟ್ ದರ ಇಳಿಕೆ ವಿಚಾರ ಕುರಿತಂತೆ ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕೈಗೊಂಡ ನಿರ್ಧಾರದಂತೆ ಟಿಕೆಟ್ ಬೆಲೆ ಇಳಿಕೆ ಮಾಡಲಾಗಿದೆ. ಅದರ ಅನ್ವಯ ಸಿಂಗಲ್ ಸ್ಟೀನ್ ಚಿತ್ರಮಂದಿರಗಳಲ್ಲಿ ಗಂಧದಗುಡಿ ಟಿಕೆಟ್ ದರ 57 ರೂಪಾಯಿ ಆಗಲಿದೆ, ಅತ್ತ ಮಲ್ಟಿಪ್ಲೆಕ್ಸ್‌ಗಳಲ್ಲಿ112 ರೂಪಾಯಿ ಟಿಕೆಟ್ ದರ ನಿಗದಿ ಮಾಡಲಾಗಿದೆ. ರಾಜ್ಯಾದ್ಯಂತ 4 ದಿನಗಳ ಕಾಲ ಈ ದರ ಅನ್ವಯ ಆಗಲಿದೆ.

ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ದರ್ಶನ

ಶಾಲಾ ವಿದ್ಯಾರ್ಥಿಗಳಿಗೆ ಗಂಧದ ಗುಡಿ ಸಿನಿಮಾ ತೋರಿಸಲಾಗಿದೆ. 220 ಜನ ವಿದ್ಯಾರ್ಥಿಗಳು ಗಂಧದಗುಡಿ ದರ್ಶನ ಪಡೆದಿದ್ದಾರೆ. ಬೆಂಗಳೂರಿನ ಗೌಡನಪಾಳ್ಯದಲ್ಲಿರುವ ಶ್ರೀನಿವಾಸ ಚಿತ್ರಮಂದಿರದಲ್ಲಿ ಅಪ್ಪು ಅಭಿಮಾನಿಗಳು ‘ಗಂಧದಗುಡಿ’ ಸಿನಿಮಾವನ್ನು ಮಕ್ಕಳಿಗೆ ಉಚಿತವಾಗಿ ತೋರಿಸಿದ್ದಾರೆ. ಅಪ್ಪು ಯುವಸೇನೆ ಬನಶಂಕರಿಯ ಅಭಿಮಾನಿ ಬಳಗ ಈ ಸಾಮಾಜಿಕ ಕಾರ್ಯಕ್ಕೆ ಮುಂದಾಗಿದ್ದು, ಈ ಮೂಲಕ ಸುಮಾರು 220 ಸರ್ಕಾರಿ ಶಾಲೆಯ ಮಕ್ಕಳು ಉಚಿತವಾಗಿ ಸಿನಿಮಾ ವೀಕ್ಷಿಸಿದ್ದಾರೆ.
ಕೊಪ್ಪಳದಲ್ಲೂ ಸಿನಿಮಾ ನೋಡಿದ ವಿದ್ಯಾರ್ಥಿಗಳು
ಕೊಪ್ಪಳ ಜಿಲ್ಲೆಯ ಭತ್ತದ ಕಣಜ ಎಂದು ಕರೆಯಲ್ಪಡುವ ಕಾರಟಗಿ ಪಟ್ಟಣದಲ್ಲಿ ಇರುವ ಅವರ ಅಭಿಮಾನಿಗಳು ಲಕ್ಷ್ಮೀ ಚಿತ್ರಮಂದಿರದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಗಂಧದಗುಡಿ ಚಿತ್ರವನ್ನು ಉಚಿತ ಪ್ರದರ್ಶನ ಏರ್ಪಡಿಸಿದ್ದರು.

ಅಶೋಕ್ ಕಶ್ಯಪ್ ಅವರಿಗೆ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸ್ಥಾನ

ಬೆಂಗಳೂರು:ಖ್ಯಾತ ಸಿನಿಮಾ ಛಾಯಾಗ್ರಾಹಕ ಅಶೋಕ್ ಕಶ್ಯಪ್ ಅವರನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷನಾಗಿ ಕರ್ನಾಟಕ ಸರ್ಕಾರವು ನೇಮಿಸಿದೆ.
ಸೋಮವಾರ ಸಂಜೆ 4 ಗಂಟೆಗೆ ನಂದಿನಿ ಲೇಔಟ್ ನಲ್ಲಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಕಛೇರಿಯಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ.
ಖ್ಯಾತ ನಿರ್ದೇಶಕರಾಗಿ, ಛಾಯಾಗ್ರಾಹಕರಾಗಿರುವ ಅಶೋಕ್ ಈ ಹಿಂದೆ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದರು.

Categories
ಶಿವಮೊಗ್ಗ

ನಮ್ಮೂರ್ ಎಕ್ಸ್ ಪ್ರೆಸ್ ಟಾಪ್ 3 ನ್ಯೂಸ್

ಮೈಸೂರಿನಲ್ಲಿ ವಿದ್ಯುತ್ ದುರಂತ!

  • ತಂತಿ ತಗುಲಿ ಅಪ್ಪ ಮಗ, ಕೂಲಿ ಕಾರ್ಮಿಕ ದುರ್ಮರಣ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಮೈಸೂರು: ಮೈಸೂರಿನ ತಿ. ನರಸೀಪುರ ತಾಲೂಕಲ್ಲಿ ವಿದ್ಯುತ್ ತಗುಲಿ ಮೂವರು ಸಾವನಪ್ಪಿದ್ದು, ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಅವಘಡ ಸಂಭವಿಸಿದೆ.
ತಿ.ನರಸೀಪುರ ತಾಲೂಕಿನ ನೀಲಸೋಗೆ ಗ್ರಾಮದ ಬಳಿ ಘಟನೆ ನಡೆದಿದ್ದು, ಅಪ್ಪ ಮಗ, ಕೂಲಿ ಕಾರ್ಮಿಕ ದುರ್ಮರಣ ಹೊಂದಿದ್ದಾರೆ. 60 ವರ್ಷದ ರಾಚೇಗೌಡ, 35 ವರ್ಷದ ಹರೀಶ್, 40 ವರ್ಷದ ಕುಮಾರಸ್ವಾಮಿ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಭತ್ತದ ಗದ್ದೆಗೆ ಔಷಧಿ ಸಿಂಪಡಿಸಲು ಹೋಗಿದ್ದ ವೇಳೆ ಜಮೀನನ ಮೇಲೆ ಹಾದು ಹೋಗಿದ್ದ ವಿದ್ಯುತ್‌ ತಂತಿ ತುಂಡಾಗಿ ಬಿದ್ದಿತ್ತು. ಸ್ಥಳಕ್ಕೆ ಟಿ.ನರಸೀಪುರ ಗ್ರಾಮಾಂತರ ಪೊಲೀಸರ ಭೇಟಿ ಕೊಟ್ಟಿದ್ದಾರೆ.

ಯುವತಿ ಕಾರ್ ಶೆಡ್ಡಲ್ಲಿ ಆತ್ಮಹತ್ಯೆ!

ಶಿವಮೊಗ್ಗ: ನವವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಶಿವಮೊಗ್ಗದ ಅಶ್ವತ್ಥ್ ನಗರದಲ್ಲಿ ನಡೆದಿದೆ.
ನವ್ಯಶ್ರೀ ಆತ್ಮಹತ್ಯೆ ಮಾಡಿಕೊಂಡ ನವ ವಿವಾಹಿತೆ. ಈಕೆ 5 ತಿಂಗಳ ಹಿಂದೆ ಆಕಾಶ್ ಎಂಬ ಯುವಕನ ಜೊತೆ ವಿವಾಹವಾಗಿದ್ದಳು ಜೊತೆಗೆ ನಗರದ ಖ್ಯಾತ ವೈದ್ಯೆ ಡಾ. ಜಯಶ್ರೀ ಹೊಮ್ಮರಡಿ ಅವರ ಸೊಸೆಯಾಗಿದ್ದಳು.
ಶನಿವಾರ ರಾತ್ರಿ ನವ್ಯಶ್ರೀ ತುಳಸಿ ಪೂಜೆ ಮಾಡಿ, ಅರಿಶಿನ, ಕುಂಕುಮ ಸ್ವೀಕರಿಸಿ ಬಂದಿದ್ದಳು. ಬಳಿಕ ಕಾರ್ ಶೆಡ್‍ನಲ್ಲಿ ನೇಣು ಬಿಗಿದು, ಆತ್ಮಹತ್ಯೆಗೆ ಶರಣಾಗಿದ್ದಾಳೆ. ಘಟನೆಗೆ ಸಂಬಂಧಿಸಿ ಆಕೆಯ ಕುಟುಂಬಸ್ಥರು ಮಾತನಾಡಿ, ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ನವ್ಯಶ್ರೀ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.

ಔಷಧ ಬೆರೆಸಿದ ಸೇಬು ನೀಡಿ ಮಕ್ಕಳ ರೇಪ್!?

  • ಮುರುಘಾಶ್ರೀ ವಿರುದ್ಧ 694 ಪುಟಗಳ ಚಾರ್ಜ್ ಶೀಟ್

ಚಿತ್ರದುರ್ಗ ಮುರುಘಾ ಮಠದ ಶ್ರೀಗಳ ವಿರುದ್ಧ 2ನೇ ಪೋಕ್ಸೋ ಕೇಸ್ ದಾಖಲಾಗಿದೆ. ಈ ಕುರಿತು ತನಿಖೆ ನಡೆಸಿರುವ ಡಿವೈಎಸ್ಪಿ ಅನಿಲ್ ನೇತೃತ್ವದ ತಂಡ 2ನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಒಟ್ಟು 694 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ.
ಔಷಧ ಬೆರೆಸಿದ ಸೇಬು ನೀಡಿ ಮಕ್ಕಳ ಅತ್ಯಾಚಾರ ಮಾಡಿರುವ ಬಗ್ಗೆ ಅದರಲ್ಲಿ ಉಲ್ಲೇಖ ಮಾಡಲಾಗಿದೆ.
ಲೇಡಿ ವಾರ್ಡನ್ ಮೂಲಕ ಮಕ್ಕಳನ್ನು ಕರೆಸಿ, ನಿರಂತರ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು. ಮತ್ತು ಬರುವ ಔಷಧಿ ಬೆರೆಸಿದ ಸೇಬು ನೀಡಿ ಮಕ್ಕಳನ್ನು ಅತ್ಯಾಚಾರಕ್ಕೆ ಬಳಸಿಕೊಂಡಿದ್ದಾರೆ. ಕಚೇರಿ, ಬೆಡ್ ರೂಂ, ಬಾತ್ ರೂಂ ಗೆ ಕರೆದೊಯ್ದು ಬಲಾತ್ಕಾರ ಮಾಡಿದ್ದಾರೆ. ವಿರೋಧಿಸಿದವರಿಗೆ ಜೀವ ಬೆದರಿಕೆ ಹಾಕುತ್ತಿದ್ದರು. ಇದೇ ರೀತಿ ಹತ್ತಕ್ಕೂ ಹೆಚ್ಚು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಕೇಳಿ ಬಂದಿದೆ.
ಪೋಕ್ಸೋ, ಅಟ್ರಾಸಿಟಿ ಮತ್ತು ಧಾರ್ಮಿಕ ಕೇಂದ್ರ ದುರುಪಯೋಗ ಕಾಯ್ದೆ ಅಡಿಯಲ್ಲೂ ಕೇಸ್ ದಾಖಲಾಗಿದ್ದು, 342 ಪುಟಗಳ 2 ಸೆಟ್‌ನಂತೆ ಒಟ್ಟು 694 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ಮುರುಘಾಶ್ರೀ, ಲೇಡಿ ವಾರ್ಡನ್ (ರಶ್ಮಿ), ಕಾರ್ಯದರ್ಶಿ ಪರಮಶಿವಯ್ಯ ಹಾಗೂ ಮಠದ ಉತ್ತರಾಧಿಕಾರಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಆದರೆ ವಕೀಲ ಗಂಗಾಧರಯ್ಯ ಭಾಗಿ ಆಗಿರುವ ಮಾಹಿತಿ ಇಲ್ಲ, ಈ ಬಗ್ಗೆಯೂ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

Categories
ಜಿಲ್ಲಾ ವಾರ್ತೆ

ಪ್ರವೀಣ್ ನೆಟ್ಟಾರು 60 ಲಕ್ಷ ರು.ನ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ

NAMMUR EXPRESS NEWS
ಸುಳ್ಯ: 2 ತಿಂಗಳ ಹಿಂದೆ ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಕುಟುಂಬಕ್ಕೆ ಬಿಜೆಪಿ ವತಿಯಿಂದ 60 ಲಕ್ಷರು.ವೆಚ್ಚದಲ್ಲಿ ಹೊಸ ಮನೆ ನಿರ್ಮಿ ಸಿಕೊಡಲಾಗುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷನಳಿನ್ ಕಟೀಲು ಅವರು ಬುಧವಾರ ಹೊಸ ಮನೆಗೆ ಗುದ್ದಲಿ ಪೂಜೆ ನೆರವೇರಿಸಿದರು. ಈ ವೇಳೆ ಮಾತನಾಡಿ, ಕೊಟ್ಟ ಮಾತಿನಂತೆ ಪ್ರವೀಣ್ ಅವರ ಸಮಾಧಿ ಬಳಿಯಲ್ಲೇ ಹೊಸ ಮನೆಗೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಮೊಗರೋಡಿ ಕಂಪನಿ 60 ಲಕ್ಷ ರು. ವೆಚ್ಚದಲ್ಲಿ 2,700 ಚದರಡಿಯ ಮನೆ ನಿರ್ಮಾಣವಾಗಲಿದೆ. ಬಿಜೆಪಿ 25 ಲಕ್ಷ, ಸರ್ಕಾರ 25 ಲಕ್ಷ ಹಾಗೂ ಯುವಮೋರ್ಚಾ 15 ಲಕ್ಷ ರು.ಕೊಟ್ಟಿದೆ ಎಂದು ತಿಳಿಸಿದರು. ಸಚಿವರಾದ ಎಸ್. ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಪುತ್ತೂರು ಶಾಸಕ ಸಂಜೀವ ಮಠಂದೂರು ಈ ವೇಳೆ ಹಾಜರಿದ್ದರು.

Categories
ಶಿವಮೊಗ್ಗ

ಮಾರ್ಚ್ ಗೆ ಹಾಸನ, ಶಿವಮೊಗ್ಗ, ವಿಜಯಪುರ ಏರ್ ಪೋರ್ಟ್ ಶುರು

  • ಮೊದಲ ದಿನವೇ 7 ಲಕ್ಷ ಕೋಟಿ ಹೂಡಿಕೆ
  • ಸಚಿವ ನಿರಾಣಿ ಸಂತಸ

NAMMUR EXPRESS NEWS
ಬೆಂಗಳೂರು: ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾ ವೇಶ 2022ರ ಮೊದಲ ದಿನವೇ ನಿರೀಕ್ಷೆಗೂ ಮೀರಿ 7.6 ಲಕ ಕೋಟಿ ರು. ಬಂಡವಾಳ ಹೂಡಿ ಕೆಗೆ ಹಲವು ಕೈಗಾರಿಕಾ ಹೂಡಿಕೆದಾರರೊಂದಿಗೆ ಒಪ್ಪಂದಗಳು ಏರ್ಪಟ್ಟಿದ್ದು, ಇದು – ಜಿಮ್ ಕೊನೆಯದಿನದವೇಳೆಗೆ ಇನ್ನಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ಬುಧವಾರ ಸಮಾವೇಶ ಮುಕ್ತಾಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಜಿಮ್‌ನಲ್ಲಿ 5 ಲಕ್ಷ ಕೋಟಿ ರು. ಬಂಡವಾಳ ನಿರೀಕ್ಷಿಸಿದ್ದೆವು. ಆದರೆ, ನಿರೀಕ್ಷೆಗೂ ಮೀರಿ 7.6 ಲಕ್ಷ ಕೋಟಿ ಬಂಡವಾಳ ಹೂಡಿಕೆಗೆ ಒಪ್ಪಂದಗಳು ಮೊದಲ ದಿನವೇ ಏರ್ಪಟ್ಟಿವೆ. ಇದರಿಂದ ನಿರೀಕ್ಷೆಗೂ ಮೀರಿ 8 ಲಕ್ಷ ಹೊಸ ಉದ್ಯೋಗ ಸೃಷ್ಟಿಯಾಗುವ ಭರವಸೆ ಸಿಕ್ಕಿದೆ. ಜಿಮ್ 3 ಮುಕ್ತಾಯಗೊಳ್ಳುವನ.4ರವೇಳೆಗೆ ಇನ್ನಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ.ಈ ಹಿಂದೆ 2010ರಲ್ಲಿ ಬಿ.ಎಸ್.ಯಡಿಯೂರಪ್ಪ
ಅವರ ನೇತೃತ್ವದ ಸರ್ಕಾರದಲ್ಲಿ ನಾವು ಜಾಗತಿಕ ಹೂಡಿಕೆದಾರರ ಸಮಾವೇಶ ಮಾಡಿದ್ದೆವು. ಆಗ 3.8 ಲಕ್ಷ ಕೋಟಿ ರು.ನಷ್ಟು ಬಂಡವಾಳ ಹೂಡಿ ಕೆಯ ಒಪ್ಪಂದಗಳಿಗೆ ಸಹಿ ಆಗಿತ್ತು. ನಂತರ 2012ರಲ್ಲಿ ಮತ್ತೊಂದು ಜಿಮ್ ನಡೆಸಿದಾಗ ವಿವಿಧ ಕೈಗಾರಿಕೆಗಳೊಂದಿಗೆ 7.6 ಲಕ್ಷ ಕೋಟಿ ರು. ಹೂಡಿಕೆಯ ಒಪ್ಪಂದಗಳಿಗೆ ನಾವು ಸಹಿ ಮಾಡಿದ್ದೆವು ಎಂದು ಅವರು ಮಾಹಿತಿ ನೀಡಿದರು.
ಹೊಸವಿಚಾರ ಅಂದರೆ ಈ ಬಾರಿ ಬಂದಿರುವ ಬಂಡವಾಳ ಹೆಚ್ಚಾಗಿ ಬೆಂಗಳೂರಿನ ಹೊರಭಾಗದಲ್ಲಿಯೇ ಹೂಡಿಕೆಯಾ ಗಲಿದೆ. 2 ಮತ್ತು 3ನೇ ಹಂತದ ನಗರಗಳಲ್ಲಿ ಉತ್ತಮ ಕಾಮಗಾರಿ ಸ್ನೇಹಿ ವಾತಾವರಣ ಸೃಷ್ಟಿಗೆ ಸರ್ಕಾರ ಕ್ರಮ ವಹಿಸುತ್ತಿದೆ. ಬರುವ ಮಾರ್ಚ್‌ಗೂ ಮುನ್ನ ಹಾಸನ, ಶಿವಮೊಗ್ಗ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಮೂರು ಹೊಸ ವಿಮಾನ ನಿಲ್ದಾಣಗಳು ಆರಂಭವಾಗಲಿವೆ. ನಂತರ ದಾವಣಗೆರೆ, ಬಾದಾಮಿ, ಕೊಪ್ಪಳ, ರಾಯಚೂರು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣಕ್ಕೆ ಭೂಮಿಯನ್ನು ಗುರುತಿಸುವ ಕೆಲಸ ಆಗುತ್ತಿದೆ ಎಂದರು.

Categories
ರಾಜ್ಯ

ಪೊಲೀಸ್ ಕಾನ್‌ಸ್ಟೇಬಲ್ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ!

  • ನೇಮಕಾತಿ ವಯೋಮಿತಿ 2 ವರ್ಷ ಹೆಚ್ಚಳ ಮಾಡಿದ ರಾಜ್ಯಸರ್ಕಾರ
  • ಏನಿದು ಆದೇಶ… ಏನಿದು ನಿಯಮ…?

NAMMUR EXPRESS NEWS
ಬೆಂಗಳೂರು: ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ ವಯೋಮಿತಿ 2 ವರ್ಷ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 2022 – 23ನೇ ಸಾಲಿನ ಕಾನ್‌ಸ್ಟೇಬಲ್ ನೇಮಕಾತಿಗೆ ಮಾತ್ರ ಇದು ಅನ್ವಯವಾಗಲಿದೆ.
ಸಿವಿಲ್, ಸಿಎಆರ್ , ಡಿಎಆರ್, ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ ವಯೋಮಿತಿ 2 ವರ್ಷ ಹೆಚ್ಚಳ ಮಾಡಲಾಗಿದೆ. 2022-23ನೇ ಸಾಲಿನ ಕಾನ್‌ಸ್ಟೇಬಲ್‌ ನೇಮಕಾತಿಗೆ ಮಾತ್ರ ಇದು ಅನ್ವಯವಾಗಲಿದೆ ರಾಜ್ಯ ಪೊಲೀಸ್ ಕಾನ್ ಸ್ಟೇಬಲ್ ಗರಿಷ್ಠ ನೇಮಕ ವಯೋಮಿತಿ ಈ ಹಿಂದೆ ಒಂದು ಬಾರಿ ಹೆಚ್ಚಳ ಮಾಡಲಾಗಿತ್ತು. ಇದೀಗ 2 ವರ್ಷಗಳಿಗೆ ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ. ಈ ಸಂಬಂಧ ಜಿಲ್ಲಾಡಳಿತ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು, ನಡವಳಿ ಪೊಲೀಸ್ ಕಾನ್ ಸ್ಟೇಬಲ್ ( ಸಿವಿಲ್) ಹುದ್ದೆ ಮತ್ತು ಪೊಲೀಸ್ ಕಾನ್ ಸ್ಟೇಬಲ್ (ಸಿಎಆರ್ ಮತ್ತು ಡಿಎಆರ್ ) ಹುದ್ದೆಗಳಿಗೆ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.
2022-23ನೇ ಸಾಲಿನಲ್ಲಿ ಒಂದು ಬಾರಿ ಮಾತ್ರ ಪೊಲೀಸ್ ಕಾನ್ ಸ್ಟೇಬಲ್ ನೇಮಕಾತಿಗೆ ಕರೆಯಲಾಗಿದೆ. (ಸಿಎಆರ್ ಮತ್ತು ಡಿಎಆರ್) 420 ಮತ್ತು 3,064 ಸೇರಿ ಒಟ್ಟು 3484 ಹುದ್ದೆಗಳಿವೆ. ಮತ್ತು ಪೊಲೀಸ್ ಕಾನ್‌ಸ್ಟೇಬಲ್ (ಸಿವಿಲ್) 1137 + 454 ಸೇರಿದಂತೆ 1,591 ಹುದ್ದೆಗಳಿಗೆ ಮಾತ್ರ ಗರಿಷ್ಠ ವಯೋಮಿತಿಯನ್ನು 2 ವರ್ಷಗಳಿಗೆ ಹೆಚ್ಚಿಸಲಾಗಿದೆ.
ಪೊಲೀಸ್‌ ಕಾನ್‌ಸ್ಟೇಬಲ್ ಹುದ್ದೆಗೆ ಸಾಮಾನ್ಯ ವರ್ಗಕ್ಕೆ ಗರಿಷ್ಠ ವಯೋಮಿತಿಯನ್ನು 25ರಿಂದ 27 ವರ್ಷ ಹಾಗೂ ಎಸ್‌ಸಿ ಎಸ್‌ಟಿ ಹಾಗೂ ಹಿಂದುಳಿದ ವರ್ಗಗಳಿಗೆ 27ರಿಂದ 29 ವರ್ಷಗಳವರೆಗೆ ಹಾಗೂ ಬುಡಕಟ್ಟು ಜನಾಂಗದ ಅಭ್ಯರ್ಥಿಗಳಿಗೆ 32 ವರ್ಷಗಳಿಗೆ ಹೆಚ್ಚಿಸಲಾಗಿದೆ. ಸೇವಾ ನಿರತ ಅಭ್ಯರ್ಥಿಗಳ ವಯೋಮಿತಿಯಲ್ಲಿ ಎಸ್‌ಸಿ ಎಸ್‌ಟಿ ಅಭ್ಯರ್ಥಿಗಳ ವಯಸ್ಸಿಗೆ 35, ಹಾಗೂ ಇತರೆ ಅಭ್ಯರ್ಥಿಗಳಿಗೆ 33 ವರ್ಷಕ್ಕೆ ಹೆಚ್ಚಿಸಲಾಗಿದೆ. ಸಶಸ್ತ್ರ ಪಡೆಯ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳಿಗೆ ಶೇ.10ರಷ್ಟು ಮೀಸಲಾತಿ ನೀಡಿ ಗರಿಷ್ಠ ವಯೋಮಿತಿಯನ್ನು ಸಾಮಾನ್ಯ ವರ್ಗಕ್ಕೆ 31 ವರ್ಷ ಹಾಗೂ ಎಸ್‌ಸಿ ಎಸ್‌ಟಿ ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ 33 ವರ್ಷವನ್ನು ನಿಗದಿಪಡಿಸಲಾಗಿದೆ.