Categories
ಹಬ್ಬಗಳು

ಯುಗಾದಿ ಚಂದ್ರನ ನೋಡಿದರೆ ಒಳ್ಳೆಯದಾಗುತ್ತೆ!

  • ಏನಿದು ಕಥೆ… ಏನು ಚಂದ್ರನ ನೋಡುವ ಪುರಾಣ?
  • ಬೇವು ಬೆಲ್ಲ ಎಂಬ ಬದುಕಿನ ಎರಡು ಮುಖಗಳು

NAMMUR EXPRESS NEWS
ಹಬ್ಬದ ಆಚರಣೆಯ ಸುತ್ತಮುತ್ತ ಹರಡಿರುವ ಕಥೆಗಳು ಸಂಪ್ರದಾಯ ಎಲ್ಲರನ್ನು ಆಕರ್ಷಿಸುತ್ತದೆ. ಜೊತೆಗೆ ಅದು ಸಂಪ್ರದಾಯವಾಗಿ ಎಲ್ಲಾ ಕಡೆ ಆಚರಣೆಯಲ್ಲಿದೆ.
ಯುಗಾದಿ ಹಬ್ಬದ ದಿನ ರಾತ್ರಿ ಕಾದು ಕೂತು ಹುಡುಕಿ ಚಂದಿರನ ನೋಡುವ ಸಂಪ್ರದಾಯದ ಹಿಂದೆ ಇರುವ ಕಥೆ ಎಲ್ಲರನ್ನೂ ಸಹ ಸೆಳೆಯುತ್ತದೆ.
ಚಂದ್ರಮಾನ ಯುಗಾದಿ ಎಂದು ಕೂಡ ಯುಗಾದಿ ಹಬ್ಬಕ್ಕೆ ಕರೆಯುತ್ತಾರೆ. ಯುಗಾದಿ ಹಬ್ಬದ ದಿನ


ಹಬ್ಬದ ಊಟ ಮುಗಿಸಿ ರಾತ್ರಿ ಚಂದ್ರನ ನೋಡುವುದು ಒಳ್ಳೆಯದು ಎಂಬ ನಂಬಿಕೆ ಇದೆ.
ಗಣೇಶ ಚತುರ್ಥಿ ಸಮಯದಲ್ಲಿ ಗಣೇಶ ಎಲ್ಲಾರ ಮನೆಯ ಮೋದಕ ಕಡುಬು ತಿಂದು ಹೊಟ್ಟೆ ದೊಡ್ಡ ಮಾಡಿಕೊಂಡು ಗದ್ದೆ ಬಯಲಲ್ಲಿ ಬರುವಾಗ ಜಾರಿ ಬಿದ್ದು ಗಣೇಶನ ಹೊಟ್ಟೆ ಒಡೆದು ಹೋಗುತ್ತದೆ ಅಗ ಗಣೇಶ ಪಕ್ಕದಲ್ಲಿ ಹರಿದು ಹೋಗುತ್ತಿದ ಹಾವು ಹಿಡಿದು ಹೊಟ್ಟೆಗೆ ಕಟ್ಟುಕೊಳ್ಳುತ್ತಾನೆ ಇದನ್ನೆಲ್ಲ ಮೇಲಿನಿಂದ ನೋಡುತ್ತಿದ ಚಂದ್ರ ಜೋರಾಗಿ ನಗುತ್ತಾನೆ. ಅಗ ಗಣೇಶನಿಗೆ ಸಿಟ್ಟು ಬಂದು ತನ್ನ ಒಂದು ದಂತವನ್ನು ಮುರಿದು ಚಂದ್ರನ ಮೇಲೆ ಎಸೆದು “ಗಣೇಶ ಚತುರ್ಥಿ ಅಂದು ಚಂದ್ರನ ನೋಡಿದ್ದವರಿಗೆ ಅಪವಾದ ತಪ್ಪಿದ್ದಲ್ಲ ಎಂಬ ಶಾಪವನ್ನು ಕೊಡುತ್ತಾನೆ”. ಇದರಿಂದ ತನ್ನ ತಪ್ಪಿನ ಅರಿವಾಗಿ ಚಂದಿರ ಕ್ಷಮೆಯನ್ನು ಕೇಳುತ್ತಾ ಶಾಪದ ಪರಿಹಾರವನ್ನು ಯಾಚಿಸುತ್ತೇನೆ ಅಗ ಗಣೇಶ ನೀನು ಯೋಚನೆ ಮಾಡುವುದು ಬೇಡ ಗಣೇಶ ಹಬ್ಬದ ದಿನ ಚಂದ್ರನನ್ನು ನೋಡಿದವರು ಯುಗಾದಿ ಹಬ್ಬದ ದಿನ ಚಂದ್ರನನ್ನು ನೋಡಿದರೆ ಅವರ ಶಾಪ ವಿಮೋಚನೆ ಆಗುತ್ತದೆ ಎಂದು ಹೇಳಿ ಅಭಯವನ್ನೂ ನೀಡುತ್ತಾನೆ ಎಂಬ ಪುರಾಣ ಇದೆ. ಹಾಗಾಗಿ ಯುಗಾದಿ ಹಬ್ಬದ ದಿನ ಚಂದಿರನು ನೋಡುವ ಪದ್ಧತಿ ರೂಡಿಯಲ್ಲಿ ಉಂಟು.


ಯುಗಾದಿ ಹಬ್ಬದ ದಿನ ಆಚರಣೆಯಲ್ಲಿ ಇರುವ ಇನ್ನೊಂದು ಪದ್ಧತಿ ಬೇವು ಬೆಲ್ಲ ಸೇವಿಸುವುದು. ಈ ಬೇವು ಬೆಲ್ಲವು ಜೀವನದ ಸುಖ ದುಃಖ ಸೂಚಿಸುತ್ತದೆ
ಬೇವು ಬೆಲ್ಲ ತಿಂದು ಒಳ್ಳೇ ಮಾತಾಡು ಎಂದು ಹೇಳುವ ಸಂಪ್ರದಾಯದಂತೆ ಜೀವನದಲ್ಲಿ ಬೇವು ಬೆಲ್ಲ ಅಂದ್ರೆ ಸುಖ ದುಃಖ ಎರಡು ಸಮನಾಗಿ ಇರಬೇಕು ಎಂಬುದನ್ನು ಸೂಚಿಸುತ್ತದೆ.
ಯುಗಾದಿಯ ಬೇವು ಬೆಲ್ಲ ತಿಂದವರು ಚಂದಿರನ ನೋಡಲು ಸಿದ್ಧರಾಗಿದ್ದಾರೆ. ಎಲ್ಲರಿಗೂ ಒಳ್ಳೆಯದಾಗಲಿ.

  • ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮ
    ಕರ್ನಾಟಕ
Categories
ತೀರ್ಥಹಳ್ಳಿ ಮಲ್ನಾಡ್ ರಾಜಕೀಯ ರಾಜ್ಯ ಶಿವಮೊಗ್ಗ

ದೇವರ ಮೊರೆ ಹೋದ ಕಿಮ್ಮನೆ ರತ್ನಾಕರ್!

  • ಧರ್ಮಸ್ಥಳ, ಕುಕ್ಕೆ, ಕೊಲ್ಲೂರು, ಮಂದಾರ್ತಿ ಭೇಟಿ
  • ಮಠಗಳಿಗೂ ತೆರಳಿ ವಿವಿಧ ಸ್ವಾಮೀಜಿಗಳಿಂದ ಆಶೀರ್ವಾದ

NAMMUR EXPRESS NEWS
ತೀರ್ಥಹಳ್ಳಿ: ಮಾಜಿ ಸಚಿವ, ತೀರ್ಥಹಳ್ಳಿ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಚುನಾವಣೆ ಸಮೀಪಿಸುತ್ತಿದ್ದಂತೆ ದೇವರ ಮೊರೆ ಹೋಗಿದ್ದಾರೆ.
ರಾಜ್ಯದಲ್ಲೇ ಸರಳ, ಸಜ್ಜನ ರಾಜಕಾರಣಿ ಎಂದೇ ಪ್ರಸಿದ್ಧರಾದವರು ಕಿಮ್ಮನೆ. ಕೊಟ್ಟ ಮಾತು ಉಳಿಸಿಕೊಂಡವರು. ಪ್ರಾಮಾಣಿಕ ರಾಜಕಾರಣಿ ಎಂದೇ ಖ್ಯಾತಿ ಗಳಿಸಿದವರು. ಈ ಬಾರಿ ಚುನಾವಣೆ ಅವರಿಗೆ ಅದೃಷ್ಟ ಪರೀಕ್ಷೆಯೇ ಸರಿ. ಹೀಗಿರುವಾಗ ಇಲ್ಲಿ ಟಿಕೆಟ್ ಗೊಂದಲವೂ ಇದೆ. ಹೀಗಿರುವಾಗ ಕಿಮ್ಮನೆ ಅವರು ಧರ್ಮಸ್ಥಳ, ಕೊಲ್ಲೂರು, ಮಂದಾರ್ತಿ, ರಾಮಚಂದ್ರಪುರ ಮಠ ಸೇರಿದಂತೆ ಎಲ್ಲೆಡೆ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ದೇವರಲ್ಲಿ ವಿಶೇಷ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ.


ಇತ್ತೀಚೆಗೆ ತೀರ್ಥಹಳ್ಳಿ ಪಟ್ಟಣದ ಸಾರ್ವಜನಿಕ ಕ್ರೀಡಾಂಗಣದಲ್ಲಿ ತುಳುನಾಡಿನ ದೈವ ಪರಂಪರೆಗೆ ಸೇರಿದ ಗುಳಿಗ ದೈವದ ಹುಟ್ಟು, ಬದುಕು, ನೆಲೆಗಳನ್ನು ಅವಲಂಬಿಸಿ ರೂಪುಗೊಂಡಿರುವ “ಶಿವದೂತೆ ಗುಳಿಗೆ” ನಾಟಕ ಪ್ರದರ್ಶನ ಕಿಮ್ಮನೆ ಸಾರಥ್ಯದಲ್ಲಿ ಭರ್ಜರಿ ಯಶಸ್ಸು ಕಂಡಿತ್ತು. 10 ಸಾವಿರಕ್ಕೂ ಹೆಚ್ಚು ಮಂದಿ ನಾಟಕ ನೋಡಿದ್ದರು.
ನಾಗ ದೋಷಕ್ಕೂ ವಿಶೇಷ ಪೂಜೆ!
ಕಿಮ್ಮನೆ ಅವರು ಧರ್ಮಸ್ಥಳಕ್ಕೂ ಭೇಟಿ ನೀಡಿ ರಾಜ್ಯಸಭಾ ಸದಸ್ಯರಾದ ಡಿ. ವೀರೇಂದ್ರ ಹೆಗಡೆ ಆಶೀರ್ವಾದ ಪಡೆದಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯದ ಕಡೆಗೂ ತೆರಳಿ ನಾಗ ದೋಷಕ್ಕೆ ಪೂಜೆ ಮಾಡಿಸಿದ್ದಾರೆ.

Categories
ಕೃಷಿ

ಶಿವಮೊಗ್ಗ ಕೃಷಿ ಮೇಳದಲ್ಲಿ ಗಮನ ಸೆಳೆದ ಕ್ಯಾಪ್ಟನ್ ಮಿನಿ ಟ್ರ್ಯಾಕ್ಟರ್!

  • 4 ದಿನದ ಕೃಷಿ ಮೇಳ: ಸಾವಿರಾರು ಜನರ ಭೇಟಿ
  • ಮಿನಿ ಟ್ರ್ಯಾಕ್ಟರ್ ವಿಭಾಗದಲ್ಲಿ ಕ್ಯಾಪ್ಟನ್ ಟ್ರ್ಯಾಕ್ಟರ್ ಬಗ್ಗೆ ಜನರ ಸ್ಪಂದನೆ

NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗದ ನವುಲೆ ಕೃಷಿ ವಿವಿ ಯಲ್ಲಿ ನಡೆದ 4 ದಿನಗಳ ಕೃಷಿ ಹಾಗೂ ತೋಟಗಾರಿಕೆ ಮೇಳದಲ್ಲಿ ಪ್ರತಿ ದಿನ ಸಾವಿರಾರು ಮಂದಿ ಭೇಟಿ ನೀಡಿ ಕೃಷಿ ಮತ್ತು ತೋಟಗಾರಿಕೆ ಮಾಹಿತಿ ಪಡೆದರು. ಕೃಷಿ ಮೇಳದಲ್ಲಿ ತಮಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡಿದರು.
300ಕ್ಕೂ ಹೆಚ್ಚು ಮಂದಿ ಕೃಷಿ ಉತ್ಪನ್ನ ಉತ್ಪಾದಕರು, ಸ್ಟಾಲ್ ಮಾರಾಟಗಾರರು, ಟ್ರ್ಯಾಕ್ಟರ್ ಮತ್ತು ಕೃಷಿ ಯಂತ್ರ ಮಾರಾಟಗಾರರು ಭಾಗಿಯಾದರು.
ವಿವಿಧ ಹಸು, ಶ್ವಾನ ತಳಿಗಳು, ಅಡಿಕೆ ಮಿಷನ್, ವಿವಿಧ ಯಂತ್ರಗಳು, ಸಾವಯವ ಕೃಷಿ ಗಮನ ಸೆಳೆಯಿತು.

ಕೃಷಿ ಮೇಳದಲ್ಲೂ ಕ್ಯಾಪ್ಟನ್ ಮಿನಿ ಟ್ರ್ಯಾಕ್ಟರ್ ಹವಾ

ರಾಜ್ಯದಲ್ಲಿ ಬಹು ಬೇಡಿಕೆ ಸೃಷ್ಟಿ ಮಾಡುತ್ತಿರುವ ಮಿಶ್ಚಿಬ್ಯುಷಿ ಇಂಜಿನ್ನಿನ ಕ್ಯಾಪ್ಟನ್ ಮಿನಿ ಟ್ರ್ಯಾಕ್ಟರ್ ಕೃಷಿಕರ ಗಮನ ಸೆಳೆಯಿತು. ಶಿವಮೊಗ್ಗದ ಆಟೋ ಕಾಂಪ್ಲೆಕ್ಸ್ ಅಲ್ಲಿರುವ ಕ್ಯಾಪ್ಶನ್ ಮಿನಿ ಟ್ರ್ಯಾಕ್ಟರ್ ಶೋ ರೂಂವತಿಯಿಂದ ಕೃಷಿ ಮೇಳದಲ್ಲಿ ರೈತರಿಗೆ ಕ್ಯಾಪ್ಟನ್ ಮಿನಿ ಟ್ರ್ಯಾಕ್ಟರ್ ಬಗ್ಗೆ ಮಾಹಿತಿ ನೀಡಿದ್ದು ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ರೈತರು ಅತ್ಯುತ್ತಮ ಹಾಗೂ ಹೈಟೆಕ್ ತಂತ್ರಜ್ಞಾನ ಹೊಂದಿರುವ ಕ್ಯಾಪ್ಟನ್ ಮಿನಿ ಟ್ರ್ಯಾಕ್ಟರ್ ಖರೀದಿಗೆ ಉತ್ಸುಕತೆ ತೋರಿದರು. ಈ ವೇಳೆ ಅಚ್ಚೂರ್ ಆಗ್ರೋ ಸೇಲ್ಸ್ ಅಂಡ್ ಸರ್ವಿಸ್ ಮಾಲೀಕ ರಂಜನ್ ಹೆಗ್ಡೆ, ಶಿವಮೊಗ್ಗ ಶೋ ರೂಂ ಮ್ಯಾನೇಜರ್ ಕುಮಾರ್ ಇದ್ದರು.

Categories
Uncategorized ಬೆಂಗಳೂರು ರಾಜಕೀಯ ರಾಜ್ಯ

ಪ್ರಜಾಕೀಯ ಟಿಕೆಟ್ ಅರ್ಜಿ: ಮಾ.24 ಕೊನೆ ದಿನ

  • ಟ್ವಿಟರ್ ನಲ್ಲಿ ವಿಧಾನಸಭಾ ಚುನಾವಣೆಗೆ ಅರ್ಜಿ
  • ಉಪೇಂದ್ರ ನೇತೃತ್ವದ ಪಕ್ಷಕ್ಕೆ ಭಾರೀ ಡಿಮ್ಯಾಂಡ್

NAMMUR EXPRESS NEWS
ಬೆಂಗಳೂರು: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ದೇಶ, ರಾಜ್ಯದಾದ್ಯಂತ ಪ್ರತಿ ಪಕ್ಷದಲ್ಲೂ ಚುನಾವಣೆ ಬಿಸಿ ಏರಿದೆ. ಅಳೆದು ತೂಗಿ ಅಭ್ಯರ್ಥಿಗಳ ಆಯ್ಕೆ ಮಾಡುತ್ತಿದ್ದು, ಈಗಾಗಲೇ ಹೆಚ್ಚಿನ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹೊಸ ಪಕ್ಷ ಪ್ರಜಾಕೀಯದ ಮೂಲಕ ದೇಶದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರುವುದಕ್ಕೆ ಮುಂದಾಗಿದ್ದಾರೆ. ಇದೀಗ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮುಂಬರುವ 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಅರ್ಜಿಗಳನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗಾಗಿ ಅಗತ್ಯದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.


ನಟ ಉಪೇಂದ್ರ ತಮ್ಮ ಟ್ವಿಟರ್ ನಲ್ಲಿ “ಮುಂಬರುವ 2023 ರ ಕರ್ನಾಟಕ ವಿಧಾನಸಭಾ ಚುನಾವಣೆಗೆ prajaakeeya.org ನಲ್ಲಿ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನ 24ನೇ ಮಾರ್ಚ್ 2023 ರ ಮಧ್ಯರಾತ್ರಿ 12.00 ಗಂಟೆಗೆ ನಿಗದಿಪಡಿಸಲಾಗಿದೆ. 24ರ ನಂತರ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ನಿಮ್ಮ ಅರ್ಜಿಗಳನ್ನು ಸಮಯದೊಳಗೆ ಸಲ್ಲಿಸಿ” ಎನ್ನುವ ಪೋಸ್ಟನ್ನು ಹಂಚಿಕೊಂಡಿದ್ದಾರೆ.


2018 ಮಾರ್ಚ್ ನಲ್ಲಿ ಪ್ರಜಾಕೀಯ ಪಕ್ಷ ಸ್ಥಾಪಿಸಿ ರಾಜಕೀಯವಾಗಿಯೂ ಸಕ್ರಿಯವಾಗಿದ್ದಾರೆ. ಮುಂಬರುವ 2023ನೇ ಸಾಲಿನ ಕರ್ನಾಟಕ ವಿಧಾನಸಭಾ ಚುನಾವಣೆಗೆ ಟಿಕೆಟ್ ಪಡೆಯಲು ಅರ್ಜಿಗಳನ್ನು ಸಲ್ಲಿಸಲು ಈ ಹಿಂದೆ ಫೆಬ್ರವರಿ 28 ಕೊನೆಯ ದಿನಾಂಕವೆಂದು ನಿಗದಿಪಡಿಸಲಾಗಿತ್ತು. ಆದರೆ ಹಲವಾರು ಆಕಾಂಕ್ಷಿಗಳು ಪ್ರತಿದಿನ ಅರ್ಜಿಗಳನ್ನು ಸಲ್ಲಿಸುತ್ತಿದ್ದು ಮಾರ್ಚ್ 25 ರ ವರೆಗೆ ಹೆಚ್ಚಿನ ಕಾಲಾವಕಾಶವನ್ನು ನೀಡಲಾಗಿದೆ. ಮಾರ್ಚ್ 25, 2023 ರ ವರೆಗೆ ಸಲ್ಲಿಕೆಯಾಗಿರುವ ಎಲ್ಲ ಅರ್ಜಿಗಳನ್ನು ಪರಿಶೀಲಿಸಿ ಏಪ್ರಿಲ್ ಎರಡನೇ ವಾರದಲ್ಲಿ ಆಯ್ಕೆಯಾದ ಆಕಾಂಕ್ಷಿಗಳ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.


ಉತ್ತಮ ಪ್ರಜಾಕೀಯ ಪಕ್ಷವು ಮತದಾರರ ಪಕ್ಷವಾಗಿರುವುದರಿಂದ ಇಲ್ಲಿ ಮತದಾರರೇ ನಾಯಕರು. ಉತ್ತಮ ಪ್ರಜಾಕೀಯ ಪಕ್ಷದಲ್ಲಿ ನಾಯಕತ್ವದ ಸಂಸ್ಕೃತಿ ಇರುವುದಿಲ್ಲ. ನಮಗೆ ಬೇಕಿರುವುದು ಪ್ರಜೆಗಳಾದ ನಾವು ಹೇಳಿದಂತೆ ಕೆಲಸ ಮಾಡುವಂತಹ ಉತ್ತಮ ಕಾರ್ಮಿಕರು. ಇಲ್ಲಿ ನಮಗೆ ಬೇಕಿರುವುದು ಕಾಯಕತ್ವದ ಸಂಸ್ಕೃತಿ ಎಂದು ಹೇಳಿದ್ದಾರೆ. ತಮ್ಮದೇ ಆದ ವಿಶೇಷ ನಿಲುವುವನ್ನು ಹೊಂದಿರುವ ಇವರು ರಾಜಕೀಯ ಕ್ಷೇತ್ರದಲ್ಲಿ ಹೊಸ ಬದಲಾವಣೆ ತರುತ್ತಾರೆ ಎನ್ನುವುದು ಸಾಕಷ್ಟು ಜನರ ಅಭಿಪ್ರಾಯವಾಗಿದೆ. ಯಾವುದೇ ಹೆಚ್ಚಿನ ಪ್ರಚಾರವಿಲ್ಲದೇ, ಯಾವುದೇ ಖರ್ಚು ಇಲ್ಲದೇ ಒಬ್ಬ ಪೂರ್ಣ ಪ್ರಮಾಣದ ನಾಯಕ ದೇಶದ ಜನತೆಗಾಗಿ ಕೆಲಸ ಮಾಡಬೇಕು ಎನ್ನುವುದು ಎಲ್ಲರಿಗೂ ಇಷ್ಟವಾಗುವಂತಹ ವಿಚಾರವಾಗಿದೆ. ಆದರೆ ಇದು ಎಷ್ಟರ ಮಟ್ಟಿಗೆ ಕಾರ್ಯಗತವಾಗಲಿದೆ ಎನ್ನುವುದು ಎಲ್ಲರ ಕುತೂಹಲವಾಗಿದೆ.

Categories
ಕೊಪ್ಪ ತೀರ್ಥಹಳ್ಳಿ ಮಲ್ನಾಡ್ ರಾಜ್ಯ ಶಿವಮೊಗ್ಗ

ಕುವೆಂಪು ವಿಚಾರ ತಲುಪಿಸಲು ಡಿಜಿಟಲ್ ವಿಡಿಯೋ!

  • ಕುವೆಂಪು ಪ್ರತಿಷ್ಠಾನದ ಹೆಸರಲ್ಲಿ ಯೂಟ್ಯೂಬ್ ಬಿಡುಗಡೆ
  • 30 ನಿಮಿಷಗಳ ಸಾಕ್ಷ್ಯಚಿತ್ರ ಸಧ್ಯದಲ್ಲಿಯೇ ಬಿಡುಗಡೆ

NAMMUR EXPRESS NEWS
ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಕುಪ್ಪಳಿ ವತಿಯಿಂದ ಕುವೆಂಪು ಅವರ ವಿಚಾರಧಾರೆ ತಲುಪಿಸುವ ಉದ್ದೇಶದಿಂದ ಆಧುನಿಕ ತಂತ್ರಜ್ಞಾನದಲ್ಲಿ ಚಿತ್ರೀಕರಣ ಮಾಡಿರುವ ವಿಡಿಯೋ ಕ್ಲಿಪ್ ಬಿಡುಗಡೆ ಮಾಡಲಾಗಿದೆ.
ಕರ್ನಾಟಕದ ಪ್ರವಾಸಿ ಭೂಪಟದಲ್ಲಿ ಕುಪ್ಪಳಿ ಗಮನಾರ್ಹ ಸ್ಥಾನದಲ್ಲಿದೆ. ಸಹಸ್ರಾರು ಜನರು ಕುಪ್ಪಳಿಗೆ ಭೇಟಿ ನೀಡುತ್ತಿದ್ದಾರೆ. ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನವು, ಕವಿಮನೆ, ಕವಿಶೈಲ ಹಾಗೂ ಕುಪ್ಪಳಿಯ ಇತರೆ ಸ್ಮಾರಕಗಳನ್ನು ಹೊಸ ತಲೆಮಾರಿನ ಕನ್ನಡಿಗರಿಗೆ, ಕನ್ನಡೇತರರಿಗೆ ಪರಿಚಯಿಸುವ ಉದ್ದೇಶದಿಂದ, ಆಧುನಿಕ ತಂತ್ರಜ್ಞಾನದೊಂದಿಗೆ ಚಿತ್ರೀಕರಿಸಿ, ಹಲವು ವಿಡಿಯೋ ಕ್ಲಿಪ್‌ಗಳನ್ನು ಸಿದ್ಧಪಡಿಸಲಾಗಿದೆ.
ಸನ್ನಿವೇಶಕ್ಕೆ ಅನುಗುಣವಾಗಿ ಇಂಪಾದ ಹಿನ್ನೆಲೆ ಸಂಗೀತ, ಅಗತ್ಯವಿರುವ ಕಡೆ ಕುವೆಂಪು ಕವಿತೆಯ ಸಾಲುಗಳನ್ನು ಸಂಯೋಜಿಸಲಾಗಿದೆ. ಕನ್ನಡೇತರರಿಗಾಗಿ ಇಂಗ್ಲಿಷ್ ಸಬ್‌ಟೈಟಲ್‌ಗಳನ್ನು ಒದಗಿಸಲಾಗಿದೆ. ಈ ವಿಡಿಯೋ ತುಣುಕುಗಳನ್ನು ಸೋಮವಾರದಿಂದ ಪ್ರತಿಷ್ಠಾನದ ಯೂಟ್ಯೂಬ್ (ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕುಪ್ಪಳಿ) ಚಾನಲ್ಲಿನಲ್ಲಿ ಬಿಡುಗಡೆ ಮಾಡಲಾಗುವುದು ಸಹೃದಯರು ಇವುಗಳನ್ನು ನೋಡಿ, ಇತರರಿಗೂ ಇತರ ಸಾಮಾಜಿಕ ಮಾದ್ಯಮಗಳ ಮೂಲಕ ಹಂಚಬೇಕಾಗಿ ಪ್ರತಿಷ್ಠಾನ ವಿನಂತಿ ಮಾಡಿದೆ.
ಪ್ರತಿಷ್ಠಾನದ ಕಾರ್ಯಚಟುವಟಿಕೆಗಳನ್ನು ಕುರಿತು, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸಿದ್ಧಪಡಿಸಿರುವ, 30 ನಿಮಿಷಗಳ ಕಾಲಾವಧಿಯ ಸಾಕ್ಷ್ಯಚಿತ್ರವು ಸಧ್ಯದಲ್ಲಿಯೇ ಬಿಡುಗಡೆಯಾಗಲಿದೆ.ಛಾಯಾಗ್ರಹಣವನ್ನು ಹೆಚ್.ಎಂ.ರಾಮಚಂದ್ರ ನಿರ್ದೇಶನವನ್ನು ಉಮಾಶಂಕರ ಸ್ವಾಮಿ ಮಾಡಿದ್ದಾರೆ.

ಕುವೆಂಪು ಅವರ ಊರಿನ ಪರಿಚಯ!

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ದೇವಂಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಪ್ಪಳಿ ವಿಶ್ವ ಪ್ರಸಿದ್ಧ ಪ್ರತಿ ದಿನ ನೂರಾರು ಮತ್ತು ವಾರದ ಅಂತ್ಯದಲ್ಲಿ ಸಾವಿರಾರು ಪ್ರವಾಸಿಗರು, ಕುವೆಂಪು ಪ್ರೇಮಿಗಳು ಆಗಮಿಸುತ್ತಾರೆ. ಅವರಿಗೆ ಕುವೆಂಪು ಅವರ ಪರಿಚಯ, ಕುವೆಂಪು ಮನೆ, ಕುವೆಂಪು ಅವರ ಇತರೆ ಮಾಹಿತಿ ನೀಡಲು ಈ ಯೋಜನೆ ಮಾಡಲಾಗಿದೆ.

Youtube video :

Categories
ಶಿಕ್ಷಣ

ಸುಪ್ರೀಂ ಅಂಗಳಕ್ಕೆ 5,8ನೇ ತರಗತಿ ಪಬ್ಲಿಕ್ ಪರೀಕ್ಷೆ

  • ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‌’ಗೆ ಮೇಲ್ಮನವಿ ಸಲ್ಲಿಕೆ
  • ಮಾರ್ಚ್ 27ರಂದು ಪ್ರಕರಣದ ವಿಚಾರಣೆ

NAMMUR EXPRESS NEWS
ಬೆಂಗಳೂರು: ಅನುದಾನ ರಹಿತ ಖಾಸಗಿ ಶಾಲೆಗಳ ಸಂಘಗಳಿಂದ ರಾಜ್ಯದ 5 ಮತ್ತು 8 ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಗೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ ಗೆ ಅರ್ಜಿ ಸಲ್ಲಿಸಲಾಗಿದೆ.
ಹೈಕೋರ್ಟ್ ಐದು ಮತ್ತು ಎಂಟನೇ ತರಗತಿ ಬೋರ್ಡ್ ಪರೀಕ್ಷೆ ನಡೆಸಲು ಗ್ರೀನ್ ಸಿಗ್ನಲ್ ಕೊಟ್ಟಿದೆ. 5 ಮತ್ತು 8ನೇ ತರಗತಿಗಳಿಗೆ ಮೌಲ್ಯಾಂಕನ ಪರೀಕ್ಷೆ ನಡೆಸುವಂತೆ ಆದೇಶ ಹೊರಡಿಸಿದೆ.
ಆದರೆ ಈ ಆದೇಶವನ್ನು ಪ್ರಶ್ನಿಸಿ ಅನುದಾನರಹಿತ ಖಾಸಗಿ ಶಾಲೆಗಳ ಸಂಘಗಳು ಸುಪ್ರೀಂಕೋರ್ಟ್‌ ಗೆ ಮೇಲ್ಮನವಿ ಸಲ್ಲಿಸಿವೆ.
5 ಮತ್ತು 8 ನೇ ತರಗತಿಗೆ ಬೋರ್ಡ್ ಪರೀಕ್ಷೆಗೆ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿದ್ದು, ತುರ್ತು ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್ ಗೆ ವಕೀಲರು ಮನವಿ ಮಾಡಿದ್ದಾರೆ. ಮಾರ್ಚ್ 27ರಂದು ವಿಚಾರಣೆ ನಡೆಸುವುದಾಗಿ ಸಿಜೆಐ ತಿಳಿಸಿದ್ದಾರೆ ಎಂದು ವರದಿಯಾಗಿದೆ.

Categories
ಬೆಂಗಳೂರು ರಾಜಕೀಯ

ನಿರ್ಮಲಾನಂದನಾಥ ಶ್ರೀಗಳ ಸಂಧಾನ!

  • ಖಡಕ್​​ ವಾರ್ನಿಂಗ್​​ಗೆ ಸಚಿವ ಮುನಿರತ್ನ ಯೂಟರ್ನ್​​​
  • ಉರಿಗೌಡ-ನಂಜೇಗೌಡ ಸಿನಿಮಾಗೆ ಬ್ರೇಕ್​​​
  • ಕೇಸ್ ಕೊಡಲು ಬಂದವಳನ್ನೇ ರೂಂಗೆ ಕರೆದ ಇನ್ಸ್ ಪೆಕ್ಟರ್!

NAMMUR EXPRESS NEWS
ಬೆಂಗಳೂರು: ನಿರ್ಮಲಾನಂದನಾಥಶ್ರೀಗಳು ಸಚಿವ ಮುನಿರತ್ನಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದು, ಸ್ವಾಮೀಜಿ ಖಡಕ್ ವಾರ್ನಿಂಗ್​ಗೆ ಮುನಿರತ್ನ ಯೂಟರ್ನ್ ಹೊಡೆದಿದ್ಧಾರೆ.
ಉರಿಗೌಡ-ನಂಜೇಗೌಡ ಸಿನಿಮಾಗೆ ಬ್ರೇಕ್ ಹಾಕಲಾಗಿದೆ. ಈ ಸಿನಿಮಾ ಭಾರೀ ಕೋಲಾಹಲಕ್ಕೆ ಕಾರಣವಾಗಿತ್ತು. ಉರಿಗೌಡ-ನಂಜೇಗೌಡ ಸಿನಿಮಾ ವಿರುದ್ಧ ಒಕ್ಕಲಿಗರು ಆಕ್ರೋಶಗೊಂಡಿದ್ದರು. ಒಕ್ಕಲಿಗ ಮುಖಂಡರು ಚುಂಚನಗಿರಿ ಸ್ವಾಮೀಜಿಗೆ ದೂರು ನೀಡಿದ್ದಾರೆ. ಯಾವುದೇ ಕಾರಣಕ್ಕೂ ಸಿನಿಮಾ ಮಾಡದಂತೆ ಸೂಚಿಸಲು ಆಗ್ರಹಿಸಿದ್ದರು, ಕೇವಲ ಜಾಹಿರಾತಿಗಷ್ಟೇ ಸೀಮಿತವಾದ ಉರಿಗೌಡ-ನಂಜೇಗೌಡ ಸಿನಿಮಾವಾಗಿದೆ.

ಒಕ್ಕಲಿಗರ ಆಕ್ರೋಶ, ನಿರ್ಮಲಾನಂದನಾಥಶ್ರೀಗಳ ವಾರ್ನಿಂಗ್​ಗೆ ಯೂಟರ್ನ್ ಹೊಡೆದಿದ್ದು, ಉರಿಗೌಡ-ನಂಜೇಗೌಡ ಸಿನಿಮಾ ಮಾಡದೇ ಇರಲು ನಿರ್ಧಾರ ಮಾಡಿದ್ದಾರೆ. ಮುನಿರತ್ನ ಕೆಲ ಹೊತ್ತಿನ ಹಿಂದೆ ಶ್ರೀಗಳನ್ನು ಭೇಟಿಯಾಗಿದ್ದರು.
ಕೇಸ್ ಕೊಡಲು ಬಂದವಳನ್ನೇ ರೂಂಗೆ ಕರೆದ ಇನ್ಸ್ ಪೆಕ್ಟರ್​: ರಾಜಧಾನಿಯಲ್ಲಿ ಕೇಸ್ ಕೊಡಲು ಬಂದವಳನ್ನೇ ಇನ್ಸ್ ಪೆಕ್ಟರ್​ ರೂಂಗೆ ಕರೆದಿದ್ದಾರೆ. ಮಗಳ ವಯಸ್ಸಿನ ಯುವತಿ ಮೇಲೆ ಇನ್ಸ್ ಪೆಕ್ಟರ್​ ಕಣ್ಣು ಬಿದ್ದಿದೆ. ಆ ಮಹಿಳೆ
ಚಾಟಿಂಗ್ ಸಮೇತ ಇನ್ಸ್ ಪೆಕ್ಟರ್​ ಮೇಲೆ DCPಗೆ ದೂರು ನೀಡಿದ್ದಾರೆ. ಕೊಡಿಗೆಹಳ್ಳಿ ಠಾಣೆ ಇನ್ಸ್ ಪೆಕ್ಟರ್​ ರಾಜಣ್ಣ ಮೇಲೆ ದೂರು ದಾಖಲಾಗಿದೆ.


ಠಾಣೆಯಲ್ಲೇ ಇನ್ಸ್ಪೆಕ್ಟರ್ ರೂಂ ಕೀ, ಡ್ರೈ ಫ್ರೂಟ್ಸ್ಟ್ ಕವರ್ ಕೊಟ್ಟಿದ್ದಾರೆ. ಯುವತಿ ವೀರೇಂದ್ರ ಬಾಬುಗೆ 15 ಲಕ್ಷ ಹಣ ಕೊಟ್ಟು ಮೋಸ ಹೋಗಿದ್ದರು. ಹಾಗಾಗಿ ಯುವತಿ ವಂಚನೆ ಮಾಡಿದ್ದಾನೆ ಎಂದು ಕೊಡಿಗೆಹಳ್ಳಿ ಠಾಣೆಗೆ ಬಂದಿದ್ದರು. ಈ ವೇಳೆ ಇನ್ಸ್ಪೆಕ್ಟರ್ ರಾಜಣ್ಣ ಯುವತಿಯ ಫೋನ್ ನಂಬರ್ ಪಡೆದಿದ್ದು, ಪದೇ ಪದೇ ಮೀಟ್ ಮಾಡು ಬಾ ಎಂದು ಪುಸಲಾಯಿಸಿದ್ದರು.


ಕಳೆದ ತಿಂಗಳು 24ರಂದು ಠಾಣೆಗೆ ಬಂದಾಗ ಯುವತಿಗೆ ಆಮಿಷ ಒಡ್ಡಿದ್ದು, ನೀನು ರೂಮಿಗೆ ಹೋಗಿರು ನಾನು ಬರ್ತಿನಿ ಎಂದು ರಾಜಣ್ಣ ಹೇಳಿದ್ದಾರೆ. ರಾಜಣ್ಣ ಪತ್ನಿಯಿಂದ ದೂರವಾಗಿ ಒಬ್ಬಂಟಿಯಾಗಿದ್ದು, ಕೀ ಕವರ್ ಕೊಟ್ಟ ಕೂಡಲೇ ಯುವತಿ ಕಣ್ಣೀರು ಹಾಕುತ್ತಾ ಠಾಣೆಯಿಂದ ಓಡಿದ್ದಾರೆ. ಯುವತಿ ಮಹಿಳಾ ಸಬ್ ಇನ್ಸ್ ಪೆಕ್ಟರ್​ ಗೆ ಕರೆ ಮಾಡಿ ಈ ವಿಚಾರ ತಿಳಿಸಿದ್ದು, ಈ ವಿಚಾರ ಇಲ್ಲಿಗೇ ಬಿಟ್ಟುಬಿಡಿ ದೊಡ್ಡದಾಗುತ್ತೆ ಎಂದು ಲೇಡಿ ಪಿಎಸ್ಐ ಹೇಳಿದ್ದಾರೆ. ಯುವತಿ ಚಿಕ್ಕಮಗಳೂರಿಗೆ ಹೋಗಿ ಆಪ್ತರ ಸಲಹೆ ಮೇರೆಗೆ ಡಿಸಿಪಿ ಮೊರೆಹೋಗಿದ್ದು, ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮಿ ಪ್ರಸಾದ್ಗೆ ದೂರು ನೀಡಿದ್ದಾರೆ. ಕೇಸ್ ತನಿಖೆ ಮಾಡಲು ಯಲಹಂಕ ಎಸಿಪಿಗೆ ಡಿಸಿಪಿ ಆದೇಶ ನೀಡಿದ್ದಾರೆ. ಎಸಿಪಿ ಠಾಣೆಯ ಸಿಸಿಟಿವಿ ಫುಟೇಜ್ ಪರಿಶೀಲನೆ ಮಾಡಿದ್ದು, ದೂರು ದಾಖಲಿಸಿ ಇನ್ಸ್ ಪೆಕ್ಟರ್​ ಮೇಲೆ ತನಿಖೆ ಮಾಡಲು ನಿರ್ಧಾರ ಮಾಡಿದ್ದಾರೆ.

Categories
ಬೆಂಗಳೂರು ರಾಜಕೀಯ ರಾಜ್ಯ

ಆಮ್ ಆದ್ಮಿ ಪಕ್ಷದ ಮೊದಲ ಪಟ್ಟಿ ರಿಲೀಸ್!

  • 80 ಮಂದಿ ಪಟ್ಟಿ ಬಿಡುಗಡೆ: ಅಖಾಡಕ್ಕೆ ಇಳಿದ ಆಪ್
  • ಟೆನ್ನಿಸ್ ಕೃಷ್ಣ ಸೇರಿ ಎಲ್ಲಾ ರಂಗದವರಿಗೂ ಮಣೆ

NAMMUR EXPRESS NEWS
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷ ಹಲವು ತಿಂಗಳಿನಿಂದ ಸಿದ್ಧತೆ ನಡೆಸಿದ್ದು ಇದೀಗ 80 ಮಂದಿ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ ಮಾಡಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗೆ ತೀವ್ರ ಪೈಪೋಟಿ ನೀಡುವುದಕ್ಕಾಗಿಯೇ ಹಲವು ರೀತಿಯಲ್ಲಿ ಕಸರತ್ತು ಕೂಡ ನಡೆಸಿದೆ. ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳಿಗಿಂತ ಮುಂದೆ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಆಮ್ ಆದ್ಮಿ ಪಾರ್ಟಿ ಬಿಡುಗಡೆ ಮಾಡಿದೆ. ಅದರಲ್ಲಿ ಇಬ್ಬರು ಸಿನಿಮಾ ರಂಗದವರು ಇದ್ದಾರೆ. ಹಾಗೆಯೇ ಎಲ್ಲಾ ಕ್ಷೇತ್ರದವರು ಇಲ್ಲಿ ಟಿಕೆಟ್ ಪಡೆದಿದ್ದಾರೆ.


ಪಕ್ಷ ರಿಲೀಸ್ ಮಾಡಿರುವ ಪಟ್ಟಿಯಲ್ಲಿ ಏಳು ಜನ ರೈತ ಹೋರಾಟಗಾರರು. ಏಳು ಜನ ಮಹಿಳೆಯರು, 5 ಮಂದಿ ಸಮಾಜಸೇವಕರು, ಮೂರು ಜನ ಡಾಕ್ಟರೇಟ್, 15 ಜನ ಮಾಸ್ಟರ್ಸ್ ಮುಗಿಸಿರುವವರು , 3 ಜನ ಎಂಬಿಬಿಎಸ್ ಮುಗಿಸಿರುವವರು, 13 ಜನ ಲಾಯರ್ಸ್,  ಪತ್ರಕರ್ತರು ಇದ್ದಾರೆ ಹಾಗೂ ಕಲಾವಿದರು ಇದ್ದಾರೆ.
ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ, ನೂರಾರು ಚಿತ್ರಗಳನ್ನು ಮಾಡಿರುವ ಟೆನ್ನಿಸ್ ಕೃಷ್ಣಗೆ ಆಮ್ ಆದ್ಮಿ ಪಾರ್ಟಿ ಟಿಕೆಟ್ ಘೋಷಣೆ ಮಾಡಿದ್ದು, ಇವರು ತುರುವೇಕರೆ ಕ್ಷೇತ್ರದಿಂದ ಕಣಕ್ಕೆ ಇಳಿಯುತ್ತಿದ್ದಾರೆ.
ನಿರ್ದೇಶಕರಾಗಿ, ನಿರ್ಮಾಪಕರಾಗಿ, ನಟರಾಗಿ ಹಲವಾರು ಚಿತ್ರಗಳನ್ನು ಮಾಡಿರುವ ಸ್ಮೈಲ್ ಶ್ರೀನು ಅವರಿಗೆ ಕೂಡ್ಲಿಗಿ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ.
ಇನ್ನು ಮುಂದಿನ ವಾರ ಮತ್ತೊಂದು ಪಟ್ಟಿ ಘೋಷಣೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಮಲೆನಾಡಿನ 4 ಕ್ಷೇತ್ರ ಫೈನಲ್

  • ಶಿವಮೊಗ್ಗಜಿಲ್ಲೆಯ ಮೂರು ಕ್ಷೇತ್ರ, ಚಿಕ್ಕಮಗಳೂರು 1 ಕ್ಷೇತ್ರದ ಅಭ್ಯರ್ಥಿಗಳ ಘೋಷಣೆ

ವಿಧಾನಸಭೆ ಚುನಾವಣೆಗೆ ಆಮ್ ಆದ್ಮಿ ಪಕ್ಷ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಶಿವಮೊಗ್ಗ ಜಿಲ್ಲೆಯ ಮೂರು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟವಾಗಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ, ಶಿವಮೊಗ್ಗ ಮತ್ತು ಸಾಗರ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಶೃಂಗೇರಿಯಿಂದ ರಾಜನ್ ಗೌಡ ಅವರನ್ನು ಕಣಕ್ಕೆ ಇಳಿಸಲಾಗಿದೆ.

Categories
ಶಿಕ್ಷಣ

ಮೇ ಮೊದಲ ವಾರ ದ್ವಿತೀಯ ಪಿಯುಸಿ ಫಲಿತಾಂಶ

  • ಶಿಕ್ಷಣ ಸಚಿವ ನಾಗೇಶ್ ಅವರಿಂದ ಘೋಷಣೆ

NAMMUR EXPRESS NEWS
ಬೆಂಗಳೂರು: ಮೇ ಮೊದಲ ವಾರ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ ಎಂದು ಶಿಕ್ಷಣ ಸಚಿವ ನಾಗೇಶ್ ಘೋಷಣೆ ಮಾಡಿದ್ದಾರೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯ ಅಡಿಯಲ್ಲಿ ಮಾರ್ಚ್ 9, 2023 ರಿಂದ ಪ್ರಾರಂಭವಾಗಿದೆ. ವರದಿಗಳ ಪ್ರಕಾರ 2023 ರಲ್ಲಿ ಕರ್ನಾಟಕ 2 ನೇ ಪಿಯುಸಿ ಪರೀಕ್ಷೆಗೆ ಸುಮಾರು 126,195 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಇದೀಗ ಕರ್ನಾಟಕ 2ನೇ ಪಿಯುಸಿ ಫಲಿತಾಂಶ 2023ರ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶವನ್ನು ಮೇ ಮೊದಲ ವಾರದಲ್ಲಿ ಪ್ರಕಟಿಸಲಾಗುವುದು ಎಂದು ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
‘ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ಮೇ ಮೊದಲ ವಾರದಲ್ಲಿ ಪ್ರಕಟಿಸಲಾಗುವುದು ಎಂದು ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.
ಎಲ್ಲ ವಿಷಯಗಳಲ್ಲಿ 20 ಅಂಕಗಳಿಗೆ ಬಹು ಆಯ್ಕೆಯ ಪ್ರಶ್ನೆಗಳಿದ್ದು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ವ್ಯವಸ್ಥೆ ಮಾಡಿದ್ದೇವೆ. ಕಲಾ ವಿಭಾಗದಲ್ಲಿ 2,34,815 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 2,47,260 ವಿದ್ಯಾರ್ಥಿಗಳು ಮತ್ತು ವಿಜ್ಞಾನ ವಿಭಾಗದಲ್ಲಿ 2,44,120 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. 5716 ಕಾಲೇಜುಗಳು ಮತ್ತು 1109 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. 1109 ಸಹಾಯಕ ಅಧೀಕ್ಷಕರು, 64 ಜಿಲ್ಲಾ ಜಾಗೃತ ದಳ, 525 ತಾಲೂಕು ಜಾಗೃತ ದಳ, 2373 ವಿಶೇಷ ಜಾಗೃತ ದಳ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಪರೀಕ್ಷೆಯಲ್ಲಿ ಭಾಗವಹಿಸಿದ ಎಲ್ಲರೂ ತಮ್ಮ ಪಿಯುಸಿ ಫಲಿತಾಂಶ 2022 ಅನ್ನು ಅಧಿಕೃತ ವೆಬ್‌ಸೈಟ್ karresults.nic.in ನಿಂದ ಅರ್ಜಿ ಪ್ರಕ್ರಿಯೆಯಲ್ಲಿ ಅವರಿಗೆ ನೀಡಿದ ರೋಲ್ ನಂಬರ್‌ನ್ನು ಭರ್ತಿ ಮಾಡುವ ಮೂಲಕ ಅಥವಾ ಫಲಿತಾಂಶಗಳು ಇಲಾಖೆಯಿಂದ ಬಿಡುಗಡೆಯಾದ ನಂತರ ಎಸ್ ಎಂ ಎಸ್ ಮೂಲಕ ಪರಿಶೀಲಿಸಬಹುದು ಎಂದು ತಿಳಿಸಿದ್ದಾರೆ.

Categories
ರಾಜಕೀಯ

ಧರ್ಮಸ್ಥಳದಲ್ಲಿ ಕಿಮ್ಮನೆ ತುಲಾಭಾರ ಸೇವೆ!

  • ಶ್ರೀ ಮಂಜುನಾಥನಿಗೆ ಪೂಜೆ ಸಲ್ಲಿಸಿದ ನಾಯಕ
  • ಡಾ. ವೀರೇಂದ್ರ ಹೆಗ್ಗಡೆ ಅವರಿಂದ ಆಶೀರ್ವಾದ

NAMMUR EXPRESS NEWS
ಧರ್ಮಸ್ಥಳ: ಮಾಜಿ ಸಚಿವ, ತೀರ್ಥಹಳ್ಳಿ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಅವರು ಧರ್ಮಸ್ಥಳ ಶ್ರೀ ಮಂಜುನಾಥನ ಸನ್ನಿಧಿಯಲ್ಲಿ ತುಲಾಭಾರ ಸೇವೆ ಮಾಡಿಸಿ ದೇವರಲ್ಲಿ ವಿಶೇಷ ಪ್ರಾರ್ಥನೆ ಮಾಡಿಕೊಂಡಿದ್ದಾರೆ.
ಮಾ.20ರಂದು ಕಾಂಗ್ರೆಸ್ ಮುಖಂಡರೂ ಆಪ್ತರಾದ ಬೇಹಳ್ಳಿ ನಾಗರಾಜ್ ಅವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ತುಲಾಭಾರ ಸೇವೆ ಹೇಳಿಕೊಂಡಿದ್ದರು. ಆದ್ದರಿಂದ ಸೋಮವಾರ ತುಲಾಭಾರ ಮಾಡಿಸಿ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗಡೆಯವರ ಆಶೀರ್ವಾದ ಪಡೆದರು ಈ ಸಂದರ್ಭದಲ್ಲಿ ಚಂದ್ರ ಮೌಳಿ ಜೊತೆಗಿದ್ದರು.
ಕಾಂಗ್ರೆಸ್ ಟಿಕೆಟ್ ಘೋಷಣೆ ಸಾಧ್ಯತೆ ಇರುವುದರಿಂದ ದೇವರಲ್ಲಿ ಕಿಮ್ಮನೆ ವಿಶೇಷ ಪ್ರಾರ್ಥನೆ ಕೂಡ ಮಾಡಿಕೊಂಡಿದ್ದಾರೆ.