Categories
ರಾಜ್ಯ

ರಾಜ್ಯದಲ್ಲಿ 5 ದಿನ ಮಳೆ ಸಾಧ್ಯತೆ

  • ಮಲೆನಾಡು ಸೇರಿದಂತೆ ಹಲವೆಡೆ ಮಳೆ

NAMMUR EXPRESS NEWS
ಬೆಂಗಳೂರು: ಬಿಸಿಲ ಧಗೆ ಹೆಚ್ಚುತ್ತಿರುವ ಇಂತಹ ವೇಳೆ ರಾಜ್ಯಕ್ಕೆ ಬೇಸಿಗೆ ಮಳೆ ಬೀಳಲಿದೆ. ಇಂದಿನಿಂದ ಮುಂದಿನ ಐದು ದಿನ ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸದ್ಯ ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ 32 ಮತ್ತು ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಮಧ್ಯಾಹ್ನದ ನಂತರ ಕೆಲ ಭಾಗಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಸುಳಿಗಾಳಿ ಬೀಸಲಿದೆ.
ದಕ್ಷಿಣ ಒಳನಾಡಿನ ಬೆಂಗಳೂರು, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಯಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Categories
ರಾಜಕೀಯ

ಕುಕ್ಕರ್​ ತಯಾರಿಕಾ ಕಾರ್ಖಾನೆ ಮೇಲೆ ದಾಳಿ!

  • ಮತದಾರರಿಗೆ ಹಂಚುವ 2900 ಕುಕ್ಕರ್​ಗಳು ಜಪ್ತಿ
  • ಚುನಾವಣೆ ವೇಳೆ ಮತದಾರರಿಗೆ ಭಾರೀ ಆಫರ್
  • ಪೊದೆಯ ಮಧ್ಯೆ ದೇವರ ವಿಗ್ರಹಗಳು ಪತ್ತೆ

NAMMUR EXPRESS NEWS
ರಾಮನಗರ: ರಾಮನಗರ ತಾಲೂಕಿನ ಕರಿಕಲ್ ದೊಡ್ಡಿ ಬಳಿಯಿರುವ ಕುಕ್ಕರ್ ತಯಾರಿಕಾ ಕಾರ್ಖಾನೆ ಮೇಲೆ ತಹಶೀಲ್ದಾರ್​ ತೇಜಸ್ವಿನಿ ನೇತೃತ್ವದಲ್ಲಿ ದಾಳಿ ಮಾಡಿದ್ದು, 2900 ಕುಕ್ಕರ್​ಗಳನ್ನು ಜಪ್ತಿ ಮಾಡಲಾಗಿದೆ. ವಿಶ್ವಾಸ್ ವೈದ್ಯ ಎಂಬುವರಿಗೆ ಕುಕ್ಕರ್​ಗಳು ಸೇರಿದ್ದು ಎನ್ನಲಾಗುತ್ತಿದೆ. ಸವದತ್ತಿ ಯಲ್ಲಮ್ಮ ಕ್ಷೇತ್ರದ ಮತದಾರರಿಗೆ ಹಂಚಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು ಎನ್ನಲಾಗುತ್ತಿದೆ. ಸದ್ಯ ಈ ಕುರಿತು ಇಬ್ಬರ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಕುಕ್ಕರ್, ಮಿಕ್ಸರ್ ಗ್ರೈಂಡರ್, ಸೀರೆಗಳನ್ನು ಹಂಚುವ ಕಾರ್ಯ ಎಲ್ಲ ಪಕ್ಷದ ಶಾಸಕರು, ನಾಯಕರು, ಉಚ್ಚಾಟಿತ ನಾಯಕರು ಶುರವಿಟ್ಟುಕೊಂಡಿದ್ದಾರೆ. ಜೆಡಿಎಸ್ ಪಕ್ಷದಿಂದ ಹೊರದೊಬ್ಬಲ್ಪಟ್ಟಿರುವ ಗುಬ್ಬಿ ಕ್ಷೇತ್ರದ ಶಾಸಕ ಎಸ್ ಆರ್ ಶ್ರೀನಿವಾಸ ಅವರು ಇತ್ತೀಚೆಗೆ ಶಿವರಾತ್ರಿಯಂದು ತಮ್ಮ ಕ್ಷೇತ್ರದಲ್ಲಿ ಕುಕ್ಕರ್​ ಹಂಚಲು ಹೋಗಿ ಮತದಾರರಿಂದ ಮಂಗಳಾರತಿ ಮಾಡಿಸಿಕೊಂಡಿದ್ದಾರೆ
ತಲೆ ಮೇಲೆ ಹ್ಯಾಟು ಧರಿಸಿ ವಿದೇಶಿ ಮಹಿಳೆಯಂತೆ ಕಾಣುವ ಕಾರ್ಯಕರ್ತೆಯೊಬ್ಬರು ಶಾಸಕರ ಪರವಾಗಿ ಸ್ಥಳೀಯ ಕಾರ್ಯಕರ್ತರೊಂದಿಗೆ ಕುಕ್ಕರ್ ಹಂಚುತ್ತಾ ಈ ಮನೆಗೆ ಬಂದಾಗ ಅದರಲ್ಲಿ ವಾಸವಾಗಿರುವ ವ್ಯಕ್ತಿಯೊಬ್ಬರು, ತಮ್ಮ ಕಷ್ಟದ ಸಮಯದಲ್ಲಿ ನೆರವಾಗದ ಶಾಸಕ ಚುನಾವಣೆ ಸಮಯದಲ್ಲಿ ಕುಕ್ಕರ್ ಕಳಿಸಿದರೆ ಅದನ್ನು ತಗೋಬೇಕಾ? ನಮಗೇನೂ ಬೇಕಿಲ್ಲ, ನಿಮ್ಮ ಅರಿಶಿಣ ಕುಂಕುಮ ಕೂಡ ಬೇಡ ಅಂತ ಗದರುತ್ತಾ ಅಲ್ಲಿಂದ ಸಾಗಹಾಕಿದ್ದಾರೆ.
ಪೊದೆಯ ಮಧ್ಯೆ ದೇವರ ವಿಗ್ರಹಗಳು ಪತ್ತೆ
ಮಂಗಳೂರಿನ ಪಂಪ್‌ವೆಲ್-ಕುಸ್ಕೋರಿ ಗುಡ್ಡೆ ಮುಖ್ಯರಸ್ತೆ ಸಮೀಪದಲ್ಲಿ ಪೊದೆಯ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿಟ್ಟಿದ್ದ ದೇವರ ವಿಗ್ರಹಗಳು ಪತ್ತೆಯಾಗಿವೆ. ಶಾರಾದಾ ದೇವಿಯ 2.5 ಇಂಚು ಉದ್ದದ, ಗಣಪತಿಯ 1 ಇಂಚು ಉದ್ದದ, ಲಕ್ಷ್ಮೀ ದೇವಿಯ 2 ಇಂಚು ಉದ್ದದ, ಹಿತ್ತಾಳೆಯ ನಂದಿಯ 1 ಇಂಚು ಉದ್ದದ, ಕಂಚಿನ ದತ್ತಾತ್ರೇಯ ದೇವರ 6 ಇಂಚು ಉದ್ದ ಹಾಗೂ ಹಿತ್ತಾಳೆಯ ನಾಗದೇವರ 2 ಇಂಚು ಉದ್ದದ ವಿಗ್ರಹಗಳು ಪತ್ತೆಯಾಗಿವೆ. ಈ ವಿಗ್ರಹಗಳ ವಾರಸುದಾರರು ಇದ್ದಲ್ಲಿ ಸೂಕ್ತ ದಾಖಲೆಯೊಂದಿಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

Categories
Uncategorized

ತೀರ್ಥಹಳ್ಳಿ ವಿಧಾನ ಸಭಾ ಚುನಾವಣೆ – 2023 ಗೆಲ್ಲುವವರು ಯಾರು…?

Categories
ರಾಜಕೀಯ

ರಾಜಕೀಯ ಪಕ್ಷಗಳ ಸಭೆ, ಸಮಾರಂಭಕ್ಕೆ ನಿಯಮ

  • ಸಮಾರಂಭ ಮುಗಿದ ಕೂಡಲೇ ಬ್ಯಾನರ್, ಪ್ಲೆಕ್ಸ್ ತೆರವು
  • ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್ ರಮೇಶ್

NAMMUR EXPRESS NEWS
ಚಿಕ್ಕಮಗಳೂರು: ಅನುಮತಿ ಪಡೆಯದೆ ಅಳವಡಿಸಲಾದ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಬ್ಯಾನರ್, ಪ್ಲೆಕ್ಸ್ ಬಂಟಿಂಗ್ಸ್, ಹೋರ್ಡಿಂಗ್ಸ್, ವಾಲ್ ಪೇಂಟಿಂಗ್ ಮತ್ತು ಪೋಸ್ಟರ್‌ಗಳನ್ನು ತೆರವುಗೊಳಿಸುವಂತೆ ಡಿಸಿ ಕೆ.ಎನ್. ರಮೇಶ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ವಾರ್ತಾ ಇಲಾಖೆಯಲ್ಲಿ ಶುಕ್ರವಾರ ವಿಧಾನಸಭಾ ಚುನಾವಣಾ ಕರ್ತವ್ಯಕ್ಕೆ ನೇಮಕಗೊಂಡಿರುವ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದದ ಮೂಲಕ ಮಾತನಾಡಿದ ಅವರು ಧಾರ್ಮಿಕ ಸ್ಥಳಗಳನ್ನು ಸೌಹಾರ್ದ ಕದಡುವ ಹೇಳಿಕೆಗಳನ್ನು ನೀಡುವುದನ್ನು ನಿಷೇಧಿಸಲಾಗಿದೆ. ಇಂತಹ ಕೃತ್ಯಗಳಲ್ಲಿ ತೊಡಗದಂತೆ ಸಾರ್ವಜನಿಕರಿಗೂ ಸೂಚನೆ ನೀಡಲಾಗುತ್ತಿದೆ. ಒಂದು ವೇಳೆ ನಿಯಮ ಬಾಹಿರ ಕೃತ್ಯಗಳಲ್ಲಿ ಪಾಲ್ಗೊಂಡರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು ಎಂದು ಸೂಚಿಸಿದರು.
ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಇಒಗಳು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಅಧಿಕಾರಿಗಳು ಕ್ರಮ ಜರುಗಿಸಬೇಕು. ರಾಜಕೀಯ ಪಕ್ಷಗಳ ಸಭೆ, ಸಮಾರಂಭದ ನಂತರ ಎರಡು ತಾಸಿನೊಳಗೆ ಬ್ಯಾನರ್, ಪ್ಲೆಕ್ಸ್‌ ಗಳನ್ನು ತೆರವುಗೊಳಿಸಬೇಕು. ತೆರವು ಮಾಡದಿದ್ದರೆ ಆಯೋಗದ ನಿರ್ದೇಶನದಂತೆ ಕ್ರಮ ಜರುಗಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್ಪಿ ಉಮಾ ಪ್ರಶಾಂತ್, ಎಡಿಸಿ ಬಿ.ಆರ್.ರೂಪಾ, ಉಪ ವಿಭಾಗಾಧಿಕಾರಿ ರಾಜೇಶ್, ತಹಸೀಲ್ದಾರ್ ವಿನಾಯಕ್ ಸಾಗರ್ ಇತರರಿದ್ದರು.

Categories
ಸಿನಿಮಾ

ಕಬ್ಜ ಬಾಕ್ಸ್ ಆಫೀಸ್ ಕಲೆಕ್ಷನ್: ಸಿನಿಮಂದಿರಗಳಲ್ಲಿ ಮುಗಿಬಿದ್ದಫ್ಯಾನ್ಸ್

NAMMUR EXPRESS NEWS
ಸ್ಯಾಂಡಲ್‌ವುಡ್ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಕಬ್ಬ’ ದೇಶದಾದ್ಯಂತ ತೆರೆ ಕಂಡಿದ್ದು, ಈಗಾಗಲೇ ಸಿನಿಮಂದಿರಗಳಲ್ಲಿ ಸಾಕಷ್ಟು ಸಿನಿಪ್ರೇಕ್ಷಕರು ನೋಡಿದ್ದಾರೆ. ಆಕ್ಷನ್ ಸಿನಿಮಾ ಮಾರ್ಚ್ 17 ರಂದು ಅದ್ಧೂರಿಯಾಗಿ ಬಿಡುಗಡೆಯಾಗುವ ಮುನ್ನ ಜನರಲ್ಲಿ ಭಾರೀ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ವಿಶ್ವದಾದ್ಯಂತ ಸುಮಾರು 4,000 ಸಿನಿಮಂದಿರಗಳಲ್ಲಿ ಪ್ಯಾನ್-ಇಂಡಿಯಾ ಸಿನಿಮಾವನ್ನು ಬಿಡುಗಡೆ ಮಾಡಲು ತಯಾರಕರು ಯೋಜಿಸುತ್ತಿದ್ದಾರೆ. ಅದರಲ್ಲೂ ಫಸ್ಟ್ ಡೇ ಫಸ್ಟ್ ಶೋ ನೋಡಲು ಅಭಿಮಾನಿಗಳು ಸಿನಿಮಂದಿರದಲ್ಲಿ ಮುಗಿಬಿದ್ದಿದ್ದಾರೆ. ಸಿನಿಮಾ ವಿಮರ್ಶಕರ ಎಣಿಕೆಯಂತೆ ಆದರೆ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುವುದು ಪಕ್ಕಾ ಎಂದು ನೆಟ್ಟಿಗರು ಹೇಳಿದ್ದಾರೆ. ಕಳೆದ ವರ್ಷ ಭಾರತದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಅದ್ಭುತವಾದ ಓಟದ ನಂತರ, ಕನ್ನಡ ಚಲನಚಿತ್ರೋದ್ಯಮವು ಈ ವರ್ಷ ಮತ್ತೊಂದು ಆಕ್ಷನ್‌ನೊಂದಿಗೆ ಪ್ರಾರಂಭವಾಗಲಿದೆ. ಕಿಚ್ಚ ಸುದೀಪ್ ಮತ್ತು ಉಪೇಂದ್ರ ಅವರ ಕಬ್ಜ ಸಿನಿಮಾದಿಂದ ಇತ್ತೀಚಿನ ಕೊಡುಗೆಯಾಗಿದೆ. ಇದು ಮಿಸೆಸ್ ಚಟರ್ಜಿ ವರ್ಸಸ್ ನಾರ್ವೆ ಮತ್ತು ಜಿಗಾಟೊ ಎರಡು ಹಿಂದಿ ಸಿನಿಮಾಗಳೊಂದಿಗೆ ಇಂದು ತೆರೆಗೆ ಕಂಡಿರುತ್ತದೆ. ಈ ಸಿನಿಮಾವು ಕಾಲಮಿತಿಯ ಕಥೆಯಾಗಿದ್ದು, ಹೆಚ್ಚುತ್ತಿರುವ ದರೋಡೆಕೋರರ ಯುಗದ ಸಿನಿಮಾ ಆಗಿದೆ. ಟ್ರೈಲರ್ ಸೂಚಿಸಿದಂತೆ ಕಬ್ಜನಲ್ಲಿ ತೋರಣ, ಉತ್ಸಾಹ, ನಿರ್ಭಯತೆ ಮತ್ತು ಸಾಕಷ್ಟು ಕ್ರಿಯೆಗಳಿವೆ. ವರದಿಯ ಪ್ರಕಾರ, ಪ್ಯಾನ್-ಇಂಡಿಯಾದಲ್ಲಿ ಬಿಡುಗಡೆಯಾದ ಕನ್ನಡ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಎರಡಂಕಿಯ ಓಪನಿಂಗ್ ಪಡೆದಿದೆ. ಸಿನಿಮಾದ ಮುಂಗಡ ಕಾಯ್ದಿರಿಸುವಿಕೆಯು ವಿಶೇಷವಾಗಿ ಕನ್ನಡ ಮಾರುಕಟ್ಟೆಗಳಲ್ಲಿ ಗುರುವಾರ ಸಂಜೆಯವರೆಗೆ ಎಲ್ಲಾ ಭಾಷೆಗಳಲ್ಲಿ ಸುಮಾರು 2.50 ಕೋಟಿ ಮೌಲ್ಯದ ಸುಮಾರು 140 ಸಾವಿರ ಟಿಕೆಟ್‌ಗಳನ್ನು ಮಾರಾಟ ಮಾಡಿದ ಭರ್ಜರಿ ಬಾಕ್ಸ್ ಆಫೀಸ್ ಕಲೆಕ್ಷನ್ ಕಂಡಿದೆ.
ಕಬ್ಜ ಮೊದಲ ದಿನದ ಬಾಕ್ಸ್ ಆಫೀಸ್ ಭವಿಷ್ಯ ಮತ್ತು ಅಂದಾಜು:
ಕನ್ನಡ ಭಾಷೆಯಲ್ಲಿಯೇ, ಕಬ್ಜ ಸಿನಿಮಾ ಬಿಡುಗಡೆ ಮೊದಲ ದಿನಗಳವರೆಗೆ ಮಾರಾಟವು ಸುಮಾರು 70 ಸಾವಿರ ಟಿಕೆಟ್‌ಗಳಾಗಿದ್ದು, ಇದು ಸುಮಾರು 160 ಕೋಟಿ ಮೌಲ್ಯದ್ದಾಗಿದೆ. ವರದಿಗಳ ಪ್ರಕಾರ ಅಂತಿಮ ಪೂರ್ವ ನಿಗದಿತ ಟಿಕೆಟ್ ಮಾರಾಟವು ಎಲ್ಲಾ ಭಾಷೆಗಳಲ್ಲಿ ಸುಮಾರು 3 ಕೋಟಿ ರೂಪಾಯಿಗಳಾಗಿರಬೇಕ. ಇದು ಉತ್ತಮ ಸಂಖ್ಯೆ ಪ್ರಾರಂಭವಾಗಿರುತ್ತದೆ. ಇದು ಕಬ್ಜ ಸುಮಾರು 10 ಕೋಟಿ ರೂ. ಜೊತೆಗೆ ಮೊದಲ ದಿನ ತೆರೆ ಕಾಣುವಂತೆ ಮಾಡುತ್ತದೆ.
ಸಿನಿಮಾದಲ್ಲಿ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಅಲ್ಲದೆ, ಶ್ರೀಯಾ ಸರನ್, ಶಿವ ರಾಜ್‌ಕುಮಾರ್, ಮುರಳಿ ಶರ್ಮಾ, ಕೋಟಾ ಶ್ರೀನಿವಾಸ ರಾವ್, ನವಾಬ್ ಶಾ ಮತ್ತು ಪೋಸಾನಿ ಕೃಷ್ಣ ಮುರಳಿ ಕೂಡ ಇದ್ದಾರೆ. ಇದನ್ನು ಆರ್ ಚಂದ್ರು ನಿರ್ದೇಶಿಸಿದ್ದಾರೆ ಮತ್ತು ಆನಂದ್ ಪಂಡಿತ್, ಶ್ರೀ ಸಿದ್ಧೇಶ್ವರ ಎಂಟರ್‌ಪ್ರೈಸಸ್ ಮತ್ತು ಇನ್ವೆನಿಯೊ ಒರಿಜಿನ್ ನಿರ್ಮಿಸಿದ್ದಾರೆ. ಎರಡೂ ಹಿಂದಿ ಸಿನಿಮಾಗಳು ಸಹ ಹೃದಯದ ಕಥೆಗಳೊಂದಿಗೆ ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗಿವೆ. ರಾಣಿ ಮುಖರ್ಜಿ ಅಭಿನಯದ ಸಿನಿಮಾವು ತನ್ನ ಮಕ್ಕಳನ್ನು ಮರಳಿ ಪಡೆಯಲು ಇಡೀ ರಾಷ್ಟ್ರದ ವಿರುದ್ಧ ತಾಯಿಯ ಹೋರಾಟದ ಕಥೆಯಾಗಿದ್ದರೆ, ಕಪಿಲ್ ಶರ್ಮಾ ನಟಿಸಿದ ಸಾಂಕ್ರಾಮಿಕ ರೋಗದ ನಡುವೆ ಆಹಾರ ವಿತರಣೆ ಮಾಡುವ ವ್ಯಕ್ತಿಯ ಕಥೆಯಾಗಿದೆ.

Categories
ಅಂತಾರಾಷ್ಟ್ರೀಯ ಸುದ್ದಿ

ಇಂದು ನಟ ಪುನೀತ್ ರಾಜ್ ಕುಮಾರ್ ಜನ್ಮದಿನ

  • ಸಮಾಧಿಯಲ್ಲಿ ಕುಟುಂಬಸ್ಥರಿಂದ ಪೂಜೆ

NAMMUR EXPRESS NEWS
ಬೆಂಗಳೂರು: ಇಂದು ನಟ ಪವರ್ ಸ್ಟಾರ್, ದಿ. ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬವಾಗಿದ್ದು ಈ ಹಿನ್ನೆಲೆಯಲ್ಲಿ ಅಪ್ಪು ಸಮಾಧಿ ಬಳಿಗೆ ಅಭಿಮಾನಿಗಳ ದಂಡೇ ಆಗಮಿಸುತ್ತಿದೆ.
ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಸಮಾಧಿ ಬಳಿ ಅಪಾರ ಅಭಿಮಾನಿಗಳು ನೆರೆದಿದ್ದಾರೆ. ನಟ ಪುನೀತ್ ರಾಜ್ ಕುಮಾರ್ ಅವರಿಗೆ ಸೆಲೆಬ್ರಿಟಿಗಳು ಅಭಿಮಾನಿಗಳು ಜನ್ಮದಿನದ ಶುಭಾಶಯ ತಿಳಿಸುತ್ತಿದ್ದಾರೆ. ಪುನೀತ್ ಜನ್ಮದಿನಕ್ಕೆ ಅಭಿಮಾನಿಗಳಿಂದ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರ ನಿಯೋಜನೆ ಮಾಡಲಾಗಿದೆ.
ಇನ್ನು ಕಂಠೀರವ ಸ್ಟುಡಿಯೋಗೆ ಡಾ.ರಾಜ್ ಕುಟುಂಬಸ್ಥರು ಭೇಟಿ ನೀಡಿದ್ದು ದಿ. ಪುನೀತ್ ರಾಜ್ ಕುಮಾರ್ ಅವರ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಇನ್ನು ನಟ ಅಪ್ಪು ನೆನೆದು ಪೋಸ್ಟ್ ಹಾಕಿರುವ ನಟ ಶಿವರಾಜ್ ಕುಮಾರ್, ನನಗೆ ಪ್ರತಿ ಪದವು ಪ್ರೀತಿ ಮಮತೆಯಿಂದ ಕೂಡಿದ್ದು, ನೀನು ಹುಟ್ಟಿದಾಗ ನಮ್ಮ ಮನೆಯಲ್ಲಿ ಉಲ್ಲಾಸ ಉಕ್ಕಿ ಹರಿಯುತ್ತಿತ್ತು. ನೀನು ನಕ್ಕರೆ ಎಲ್ಲರೂ ನಗುತ್ತಾ ಇದ್ದರು. ನಿನ್ನ ಜೀವನ ಒಂದು ದಂತಕಥೆ. ನಿನ್ನ ನೆನಪು ಎಂದಿಗೂ ಅಮರ ಹ್ಯಾಪಿ ಬರ್ತಡೆ ಅಪ್ಪು ಎಂದು ಶುಭಾಶಯ ತಿಳಿಸಿದ್ದಾರೆ.

Categories
ರಾಜಕೀಯ

ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಅಂತಿಮ?

  • ನಾಳೆ ದೆಹಲಿಗೆ ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ

NAMMUR EXPRESS NEWS
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜಕೀಯ ಚಟುವಟಿಕೆ ಚುರುಕುಗೊಂಡಿದ್ದು ಕಾಂಗ್ರೆಸ್ ನಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಜೋರಾಗಿದೆ. ಈ ಮಧ್ಯೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಸಿದ್ಧವಾಗಿದ್ದು ಮಾರ್ಚ್ 17 ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ಧರಾಮಯ್ಯ ದೆಹಲಿಗೆ ತೆರಳಲಿದ್ದಾರೆ ಎನ್ನಲಾಗಿದೆ.
ಈಗಾಗಲೇ 120ರಿಂದ 150 ಅಭ್ಯರ್ಥಿಗಳನ್ನು ಒಳಗೊಂಡಿರುವ ಮೊದಲ ಪಟ್ಟಿ ಅಂತಿಮವಾಗಿದ್ದು ಈ ಹಿನ್ನೆಲೆಯಲ್ಲಿ ಮೊದಲ ಪಟ್ಟಿ ಬಿಡುಗಡೆ ಮಾಡುವ ಮುನ್ನ ಅಂತಿಮವಾಗಿ ಚರ್ಚಿಸಲು ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಮಾ.17ರಂದು ಸಭೆ ಕರೆದಿದೆ. ಈ ಸಭೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭಾಗಿಯಾಗಲಿದ್ದಾರೆ.
ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಮಾರ್ಚ್ 17ರಂದು ದೆಹಲಿಗೆ ತೆರಳಲಿದ್ದು, ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಈಗಾಗಲೇ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಮೋಹನ್ ಪ್ರಕಾಶ್ ನೇತೃತ್ವದ ಸೀನಿಂಗ್ ಕಮಿಟಿಯಲ್ಲಿ ಪರಿಶೀಲಿಸಿದ್ದು, ಅಂತಿಮ ಪಟ್ಟಿಯನ್ನು ಹೈಕಮಾಂಡ್ ಕಳುಹಿಸಿತ್ತು. ಈಗ ಇದೇ ಪಟ್ಟಿ ಬಗ್ಗೆ ಮಾ.17ರಂದು ನಡೆಯಲಿರುವ ಸಭೆಯಲ್ಲಿ ಚರ್ಚೆ ನಡೆಯಲಿದೆ. ಇನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಸಭೆಯಲ್ಲಿ ಸಿದ್ದರಾಮಯ್ಯ ಡಿಕೆ ಶಿವಕುಮಾರ್, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮನಮೋಹನ್ ಸಿಂಗ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಕೆ.ಸಿ. ವೇಣುಗೋಪಾಲ್, ಎಕೆ.ಆಯಂಟನಿ, ವೀರಪ್ಪ ಮೊಯ್ಲಿ, ಸೀನಿಂಗ್ ಕಮಿಟಿ ಮುಖ್ಯಸ್ಥ ಮೋಹನ್ ಪ್ರಕಾಶ್ ಸೇರಿದಂತೆ ಹಲವು ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ.
ಸಭೆ ಬಳಿಕ ಸುಮಾರು ಮೊದಲ ಪಟ್ಟಿಯಲ್ಲಿ 150 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟಿಸುವ ಸಾಧ್ಯತೆಗಳಿದೆ, ಮೊದಲ ಪಟ್ಟಿಯನ್ನು ಮಾರ್ಚ್ 20ರೊಳಗೆ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.
ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ಗಾಗಿ ಸುಮಾರು 1230 ಅರ್ಜಿಗಳು ಬಂದಿದ್ದವು. ಈ ಪೈಕಿ ಅಳೆದು ತೂಗಿ ಮೊದಲ ಹಂತದಲ್ಲಿ 150 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು ಈ ಮೊದಲ ಪಟ್ಟಿಯಲ್ಲಿ ಪ್ರಮುಖ ನಾಯಕರ ಹೆಸರು ಇರುವ ಸಾಧ್ಯತೆಗಳಿವೆ. ರಾಮಲಿಂಗರೆಡ್ಡಿ, ಡಾ.ಜಿ.ಪರಮೇಶ್ವರ್, ದಿನೇಶ್ ಗುಂಡೂರಾವ್, ಕೃಷ್ಣಬೈರೇಗೌಡ, ಜಮೀರ್ ಅಹ್ಮದ್ ಖಾನ್ ಸೇರಿದಂತೆ ಬಹುತೇಕ ಹಲವು ಹಾಲಿ ಶಾಸಕರಿಗೆ ಟಿಕೆಟ್‌ ಘೋಷಿಸಲಾಗುತ್ತೆ ಎನ್ನಲಾಗಿದೆ.

Categories
ಸಿನಿಮಾ

ಬಂಗಾರದ ಮನುಷ್ಯ ಪುನೀತ್ ರಾಜಕುಮಾರ!

  • ಅಗಲಿದ ನಾಯಕನ ಜನ್ಮದಿನದಂದು ಸೇವೆ ಸ್ಮರಿಸೋಣ

NAMMUR EXPRESS NEWS
ದೇಶ ಕಂಡ ಅಪ್ರತಿಮ ನಟ, ಜನ ಸೇವಕ, ಲಕ್ಷ ಲಕ್ಷ ಜನರಿಗೆ ಮಾದರಿಯಾಗಿರುವ ಪುನೀತ್ ರಾಜ್ ಕುಮಾರ್ ಜನ್ಮ ದಿನ ಇಂದು. ನಾಡಿನ ಎಲ್ಲೆಡೆ ಪುನೀತ್ ಹೆಸರಲ್ಲಿ ವಿವಿಧ ರಕ್ತದಾನ, ನೇತ್ರದಾನ, ಸಾಮಾಜಿಕ ಕೆಲಸಗಳು ನಡೆಯುತ್ತಿವೆ. ಪುನೀತ್ ಹೆಸರು ಅಮರವಾಗುತ್ತಿದೆ.
ಪುನೀತ್ ರಾಜಕುಮಾರ್ ಬರೀ ನಟ ಅಲ್ಲದೆ ನಿರ್ಮಾಪಕ, ಗಾಯಕ , ನಿರೂಪಕ ಆಗಿ ಎಲ್ಲದಕ್ಕೂ ಸೈ ಎನಿಸಿಕೊಂಡಿದ್ದಾರೆ.
50ಕ್ಕೂ ಅಧಿಕ ಸಿನಿಮಾದಲ್ಲಿ ಹಾಡಿ ಅದರಲ್ಲಿ ಬಂದ ಹಣವನ್ನು ಸಮಾಜ ಸೇವೆ ಸಂಪೂರ್ಣವಾಗಿ ಬಳಸಿ ಎಲ್ಲರಿಗೂ ಸ್ಪೂರ್ತಿ ಆಗಿದ್ದಾರೆ.
ಜೊತೆಗಿರದ ಜೀವ ಎಂದಿಗೂ ಜೀವಂತ.
ಎಲ್ಲದಾಗು ಸೈ ಎನಿಸಿಕೊಂಡ ನಟ ಒಮ್ಮೆಲೆ ನಮ್ಮನು ಆಗಲಿ ಹೋಗಿಯೇ ಬಿಡುತ್ತಾರೆ. ಆಗ ಮಾತ್ರ ಆಕ್ಷರ ಸಹ ಇಡೀ ಕರ್ನಾಟಕ ಅನ್ನೋದಕ್ಕಿಂತ ಇಡೀ ಭಾರತದಲ್ಲಿ ಸ್ಮಶಾನ ಮೌನದಲ್ಲಿ ತುಂಬಿರುತ್ತದೆ.
ದೊಡ್ಡವರು ಹೇಳುವ “ಬದುಕಿ ಸಾಯೋದಕ್ಕಿಂತ ಸತ್ತು ಬದುಕ ಬೇಕು ಲೇಸು” ಎಂಬ ಮಾತಿಗೆ ನಿದರ್ಶನ ಆಗಿದ್ದಾರೆ ಅಪ್ಪು.
ಅಪ್ಪು ವಿನ ಅಂತಿಮ ದರ್ಶನಕ್ಕೆ ಬಂದ ಸಾಗರೋಪಾದಿಯಲ್ಲಿ ಜನರನ್ನು ನೋಡಿದಾಗಲೇ ತಿಳಿಯುತ್ತದೆ ಬಂಗಾರದ ಮನುಷ್ಯನ ಮಗ ಅಪ್ಪಟ ಬಂಗಾರ ಎಂದು.ಅಪ್ಪು ಮರಣದ ನಂತರ ನಡೆದದ್ದು ಮಾತ್ರ ಇತಿಹಾಸವೇ ಸರಿ.
ಸಹಸ್ರಾರು ಸಂಖ್ಯೆಯಲ್ಲಿ ಹುಟ್ಟಿದ ಅಭಿಮಾನಿ ಬಳಗಕ್ಕೆ ಅಪ್ಪು ದೇವತಾ ಮನುಷ್ಯನೇ ಸರಿ. ಈಗಲೂ ನಡೆಯುತ್ತಿರುವ ಅ ದೇವತಾ ಮನುಷ್ಯನ ಹೆಸರಿನಲ್ಲಿನ ಸಮಾಜ ಸೇವೆಯೇ ಎಲ್ಲರಿಗೂ ಮಾದರಿ ಆಗಿದೆ.
ನಮ್ಮನು ಆಗಲಿ ಒಂದು ವರ್ಷ ಆದರೂ ಸಹ ಕರುನಾಡ ಜನರ ಮನದಲ್ಲಿ ಇನ್ನೂ ಜೀವಂತವಾಗಿ ಬದುಕಿದ್ದಾರೆ. ಇವರು ಎಲೆ ಮಾರೆ ಕಾಯಿಯಾಂತೆ ಯಾರಿಗೂ ತಿಳಿಯಾದೇ ಮಾಡುತ್ತಿದ್ದ ಜನರ ಸೇವೆಯೇ ಇವರನ್ನು ಸಾವಿರಾರು ಅಭಿಮಾನಿಗಳು ಮನದಲ್ಲಿ ಆರಾಧಿಸುವಂತೆ ಮಾಡಿದೆ.
ಜೊತೆಗೆ ಇರದ ಜೀವ ಎಂದಿಗೂ ಜೀವಂತ
ತೊರೆದು ಇಲ್ಲಿಗೆ ಒಂದು ವರ್ಷ ಆದರೂ ಸಹ ಕರುನಾಡ ಜನರ ಮನದಲ್ಲಿ ಇನ್ನೂ ಜೀವಂತವಾಗಿ ಬದುಕಿದ್ದಾರೆ. ಇವರು ಎಲೆ ಮಾರೆ ಕಾಯಿಯಂತೆ ಯಾರಿಗೂ ತಿಳಿಯಾದೇ ಮಾಡುತ್ತಿದ್ದ ಜನರ ಸೇವೆಯೇ ಇವರನ್ನು ಸಾವಿರಾರು ಅಭಿಮಾನಿಗಳು ಮನದಲ್ಲಿ ಆರಾಧಿಸುವಂತೆ ಮಾಡಿದೆ.

“ಜೊತೆಗೆ ಇರದ ಜೀವ ಎಂದಿಗೂ ಜೀವಂತ”

Categories
ರಾಜ್ಯ

ಮಾಜಿ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಪೊಲೀಸ್ ವಶಕ್ಕೆ.!

ಮಾಜಿ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಪೊಲೀಸ್ ವಶಕ್ಕೆ.!

NAMMUR EXPRESS NEWS
ರಾಮನಗರ : ರಾಮನಗರ ಜಿಲ್ಲಾ ಪೊಲೀಸರು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ದಶಪಥ ಹೆದ್ದಾರಿಯ ಟೋಲ್ ಸಂಗ್ರಹಣೆಗೆ ಸಂಬಂಧಿಸಿದಂತೆ ಜೆಡಿಎಸ್‌ನ ಯುವನಾಯಕ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಹೆಜ್ಜಾಲ ಬಳಿಯ ಕಣಮಿನಕಿ ಟೋಲ್ ಬಳಿ ರಸ್ತೆ ಮಧ್ಯೆ ಕುಳಿತು ಮಾಗಡಿ ಶಾಸಕ ಎ.ಮಂಜು ಹಾಗೂ ಕಾರ್ಯಕರ್ತರೊಂದಿಗೆ ನಿಖಿಲ್ ಕುಮಾರಸ್ವಾಮಿ ಪ್ರತಿಭಟನೆ ನಡೆಸುತ್ತಿದ್ದರು.


ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಕಳಪೆ ಕಾಮಗಾರಿ ನಡೆದಿದೆ. ಇನ್ನು ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ಇರುವ ಸರ್ವಿಸ್ ರಸ್ತೆಯನ್ನು ಸಮರ್ಪಕವಾಗಿ ಅಭಿವೃದ್ಧಿ ಮಾಡದಿದ್ದರೂ ಸಹ ಟೋಲ್ ಸಂಗ್ರಹಣೆ ಮಾಡುತ್ತಿರುವುದು ರಾಜ್ಯ ಸಾರ್ವಜನಿಕರಿಗೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ನಿಖಿಲ್ ಕುಮಾರಸ್ವಾಮಿ ಟೋಲ್ ಸಂಗ್ರಹ ಕೇಂದ್ರ ಬಳಿ ಸುಮಾರು ಎರಡು ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀಧರ್ ಅವರ ಬರುವಿಕೆಗಾಗಿ ಕಾಯುತ್ತಾ ಶಾಂತವಾಗಿ ಪ್ರತಿಭಟನೆ ಮಾಡುತ್ತಿದ್ದರು. ಆದರೆ, ನಿರ್ದೇಶಕರು ಸ್ಥಳಕ್ಕೆ ಆಗಮಿಸದ ಹಿನ್ನೆಲೆಯಲ್ಲಿ ಟೋಲ್ ಸಂಗ್ರಹ ಮಾಡುವುದನ್ನು ತಡೆದು ವಾಹನಗಳು ಟೋಲ್‌ನಿಂದ ಬರದಂತೆ ಅಡ್ಡಿಪಡಿಸಿದರು. ಈ ಹಿನ್ನೆಲೆಯಲ್ಲಿ ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ಹಾಗೂ ಎ.ಮಂಜುನಾಥ್ ಪೊಲೀಸರ ವಶಕ್ಕೆ ಪಡೆದಿದ್ದಾರೆ.

Categories
ರಾಜಕೀಯ

ಶಿಕಾರಿಪುರಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ

  • ಹಲವು ಕಾರ್ಯಕ್ರಮಗಳಿಗೆ ಶಂಕು ಸ್ಥಾಪನೆ

NAMMUR EXPRESS NEWS
ಶಿವಮೊಗ್ಗ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾ.17ರಂದು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಶಿಕಾರಿಪುರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಅವರು ಚಾಲನೆ ನೀಡಲಿದ್ದಾರೆ.
ಬೆಳಗ್ಗೆ 10 ಗಂಟೆಗೆ ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಶಿಕಾರಿಪುರಕ್ಕೆ ಆಗಮಿಸಲಿದ್ದಾರೆ. ಹುಚ್ಚರಾಯ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿರುವ ಹೆಲಿಪ್ಯಾಡ್ ಗೆ ಬಂದಿಳಿಯಲಿದ್ದಾರೆ. ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಆಸ್ಪತ್ರೆ, ಶಿಕಾರಿಪುರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣವನ್ನು ಸಿಎಂ ಉದ್ಘಾಟಿಸಲಿದ್ದಾರೆ.
ಮಧ್ಯಾಹ್ನ 12 ಗಂಟೆಗೆ ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ಉದ್ಘಾಟನೆ ನೆರವೇರಿಸಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಉಡುತಡಿ – ಉಡುಗಣಿಯಲ್ಲಿ ಶಿವಶರಣೆ ಅಕ್ಕಮಹಾದೇವಿ ಅವರ ಪುತ್ಥಳಿ ಅನಾವರಣ, ಅಕ್ಷರಧಾಮ ಮಾದರಿಯ ಯಾತ್ರಾ ಸ್ಥಳ, ವಿವಿಧ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಿದ್ದಾರೆ.
ಮಧ್ಯಾಹ್ನ 2.15ಕ್ಕೆ ಶಿಕಾರಿಪುರದ ಹುಚ್ಚರಾಯ ಸ್ವಾಮಿ ದೇವಸ್ಥಾನದ ಪಕ್ಕದ ಹೆಲಿಪ್ಯಾಡ್ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿಗೆ ತೆರಳಲಿದ್ದಾರೆ.