Categories
ರಾಜ್ಯ

ಅಪಘಾತಕ್ಕೆ ಒಂದೇ ದಿನ 14 ಬಲಿ!

ಅಪಘಾತಕ್ಕೆ ಒಂದೇ ದಿನ 14 ಬಲಿ!
– ಟ್ರಕ್, ಎರಡು ಆಟೋಗಳ ನಡುವೆ ಅಪಘಾತ
– ಭೀಕರ ಅಪಘಾತ ಪದೇ ಪದೇ ಹೆಚ್ಚಳ

NAMMUR EXPRESS NEWS
ಆಳಂದ/ಹೊಸಪೇಟೆ: ಬಳ್ಳಾರಿ ಗಡಿ ಹೊಸಪೇಟೆ ಹೊರವಲಯದ ವಡ್ಡರಹಳ್ಳಿ ಬಳಿ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಒಟ್ಟು 14 ಮಂದಿ
ಮೃತಪಟ್ಟಿದ್ದಾರೆ. ಹೊಸಪೇಟೆ ಹೊರವಲಯದ ವಡ್ಡರಹಳ್ಳಿ ರೈಲ್ವೆ ಸೇತುವೆ ಸಮೀಪ ಮಧ್ಯಾಹ್ನ ಟ್ರಕ್ ಮತ್ತು ಎರಡು ಆಟೊಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಬಳ್ಳಾರಿಯ ಒಂದೇ ಕುಟುಂಬದ ಐವರು ಸಹಿತ ಎಂಟು ಮಂದಿ ಮೃತಪಟ್ಟಿದ್ದಾರೆ. 11 ಮಂದಿ ಗಾಯಗೊಂಡಿದ್ದಾರೆ.

ಬಳ್ಳಾರಿಯ ಕೌಲ್ ಬಜಾರ್ ನಗರದ ನಿವಾಸಿಗಳಾದ ಸಾಬೀ (55), ಕೌಸರ್ ಬಾನು (35), ಇಬ್ರಾಹಿಂ (33), ಯಾಸ್ಮಿನ್ (45), ಜಹೀರ್ (16), ಶಾನು (30) ಆಟೊ ಚಾಲಕ ಬಳ್ಳಾರಿ ಬಂಡಿಹಟ್ಟಿಯ ಉಮೇಶ್ (27) ಮತ್ತು ಇನ್ನೊಂದು ಆಟೊದಲ್ಲಿದ್ದ ಬಳ್ಳಾರಿ ಅಂದ್ರಾಳ್ ಡಿ.ಸಿ.ಕ್ಯಾಂಪ್‌ನ ಸಲೀಮಾ ಯಾನೆ ಶ್ಯಾಮ್ (40) ಮೃತರು

‘ಗಾಯಗೊಂಡವರ ಪೈಕಿ ನಾಲ್ವರನ್ನು ಬಳ್ಳಾರಿಯ ವಿಮ್ಸ್‌ಗೆ ದಾಖಲಿಸಲಾಗಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಟ್ರಕ್ ಚಾಲಕ ಓದೇಶ (24) ಎಂಬಾತನನನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಬಳ್ಳಾರಿ ವಲಯದ ಐಜಿಪಿ ಬಿ.ಎಸ್. ಲೋಕೇಶ್ ಕುಮಾರ್ ತಿಳಿಸಿದರು. ಮಹಾರಾಷ್ಟ್ರದ ಅಕ್ಕಲಕೋಟೆ ತಾಲ್ಲೂಕು ಶಿರವಾಳ ವಾಡಿ ಸಮೀಪ ಕ್ರೂಸರ್ ಮತ್ತು ಕಂಟೇನರ್‌ ನಡುವೆ ಡಿಕ್ಕಿ ಸಂಭವಿಸಿ ಬಾಲಕ ಸೇರಿ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಳಂದ ತಾಲ್ಲೂಕಿನ ಅಣ್ಣೂರು ಗ್ರಾಮದ ನಿವಾಸಿಗಳಾದ ಲಲಿತಾ ಮಹಾದೇವ ಬುಗ್ಗೆ (50), ರೋಹಿಣಿ ಗೋಪಾಲ್ ಪೂಜಾರಿ (40), ಸುಂದರಬಾಯಿ ಭರತ್ ಸಿಂಗ್ ರಜಪೂತ್ (55), ಡಿಗ್ಗಿ ನಿವಾಸಿ ಸಾಯಿನಾಥ್ ಗೋವಿಂದ ಪೂಜಾರಿ(10) ಹಾಗೂ ಮಹಾರಾಷ್ಟ್ರದ ಬೇಡ್ಡ ಗ್ರಾಮದ ಸಂಗೀತಾ ಮದನ್ ಮನೆ(35), ಇಂದಾಪುರ ನಿವಾಸಿ ಛಾಯಾ ಹನುಮಾನ್ (38) ಮೃತರು.

ಬೇರೆ ಬೇರೆ ಊರಿನ ಸಂಬಂಧಿಗಳು ಸೇರಿ ಅಫಜಲಪುರ ತಾಲ್ಲೂಕಿನ ಘತ್ತರಗಿ ಭಾಗವಂತಿ ದೇವಿಯ ದರ್ಶನ ಮಾಡಿದರು. ಬಳಿಕ ಅಕ್ಕಲಕೋಟೆಯ ಸ್ವಾಮಿ ಸಮರ್ಥ ಮಹಾರಾಜರ ದೇವಸ್ಥಾನಕ್ಕೆ ತೆರಳಿದ್ದರು. ವಾಪಸ್ ಬರುವಾಗ ಶಿರವಾಳ ವಾಡಿ ಸಮೀಪ ಕ್ರೂಸರ್ ಮತ್ತು ಕಂಟೇನರ್‌ ನಡುವೆ ಡಿಕ್ಕಿ ಸಂಭವಿಸಿದೆ. ಕ್ರೂಸರ್‌ನಲ್ಲಿದ್ದ 16 ಮಂದಿ ಪೈಕಿ ಆರು ಮಂದಿ ಸ್ಥಳದಲ್ಲೇ ಮೃತಪಟ್ಟರು. 10 ಮಂದಿ ಗಾಯಾಳುಗಳನ್ನು ಸೋಲಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!

HOW TO APPLY : NEET-UG COUNSELLING 2023

Categories
ರಾಜ್ಯ

ರಾಜ್ಯದಲ್ಲಿ ಜಲ ಪ್ರಳಯ ಆಗುತ್ತೆ! – ಕೋಡಿ ಮಠದ ಶ್ರೀ

ರಾಜ್ಯದಲ್ಲಿ ಜಲ ಪ್ರಳಯ ಆಗುತ್ತೆ!
– ಒಂದೆರಡು ದೇಶಗಳು ಮುಳುಗುತ್ತವೆ
– ಕರ್ನಾಟಕಕ್ಕೂ ಅನಾಹುತ ತಪ್ಪಿದಲ್ಲ
– ಕಾಂಗ್ರೆಸ್ ಸರ್ಕಾರ ಒಳ್ಳೆಯದು ಮಾಡುತ್ತದೆ: ಕೋಡಿ ಮಠದ ಶ್ರೀ

NAMMUR EXPRESS NEWS
ಹುಬ್ಬಳ್ಳಿ: ರಾಜ್ಯದಲ್ಲಿ ಸಾಕಷ್ಟು ಮಳೆ ಬಂದು ಜಳಪ್ರಳಯವಾಗುತ್ತದೆ. ಪ್ರಕೃತಿ ಮುನಿದು ಸರಿಯಾಗುತ್ತದೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀ ಭವಿಷ್ಯ ನುಡಿದಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ವಿಪರೀತವಾದ ಜಲಪ್ರಳಯದಿಂದ ಜಾಗತಿಕ ಮಟ್ಟದ ಒಂದೆರಡು ರಾಷ್ಟ್ರಗಳು ಮುಚ್ಚುತ್ತವೆ. ಎಲ್ಲಿಯೋ ಆದ ಘಟನೆ ವಾಯುವ್ಯ ಮಾಲಿನ್ಯವಾಗಿ ಜನರು ಅಕಾಲಿಕ ಮರಣ ಹೊಂದುತ್ತಾರೆ. ಎಲ್ಲೋ ಹಾಕಿದ ಬಾಂಬ್ ನಮ್ಮ ರಾಷ್ಟ್ರದ ಜನರ ಮೇಲೆ ಪರಿಣಾಮ ಬೀರುತ್ತದೆ. ವಿಜಯ ದಶಮಿಯಿಂದ ಸಂಕ್ರಾತಿಯವರೆಗೆ ಜಗತ್ತಿನ ಸಾಮ್ರಾಟರು ತಲ್ಲಣಗೊಳ್ಳುತ್ತಾರೆ. ಆಳುವವರು ಅರಿತುಕೊಳ್ಳಬೇಕು. ಇಲ್ಲದಿದ್ದರೇ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಕೆ ನೀಡಿದರು.

ಲೋಕಸಭಾ ಚುನಾವಣೆಯ ವಿಚಾರವಾಗಿ ಮಾತನಾಡಿದ ಅವರು, ಸತ್ಯಂ ಅಪ್ರಿಯಂ ಅಸ್ಯತಂ ಪ್ರಿಯ, ಸತ್ಯ ಹೇಳಿದರೆ ನಾನು ಮಠ ಸೇರುವುದಿಲ್ಲ. ಕಾದು ನೋಡಿ, ಏನಾಗುತ್ತದೆ ಎಂಬುದನ್ನು ಸಮಯ ಬಂದಾಗ ಹೇಳುತ್ತೇನೆ ಎಂದರು.
ಕಾಂಗ್ರೆಸ್ ಸರ್ಕಾರ ಐದು ವರ್ಷಗಳ ಪೂರೈಕೆ ಬಗ್ಗೆ ಮೂಗು ಮತ್ತು ಬಾಯಿಯನ್ನು ಉದಾಹರಣೆಯಾಗಿ ಕೊಟ್ಟ ಅವರು, ಮೂಗು ಎಲ್ಲಾ ವಾಸನೆ ಗ್ರಹಿಸುತ್ತದೆ. ಆದರೆ ಬಾಯಿಯಲ್ಲಿರುವ ಹೊಲಸನ್ನು ತೋರಿಸುವುದಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು.

ಇದು ಬಹುದೊಡ್ಡ ದುರ್ಘಟನೆಯಾಗಿದ್ದು, ಕರುನಾಡಿಗೆ ಕೆಲವೊಂದು ಆಪತ್ತು ಇದೆ. ಕೆಲವು ಸಾವು-ನೋವು ಸಂಭವಿಸುತ್ತವೆ. ಗೌರಿಶಂಕರ ಶಿವ ಶಿವ ಎಂದಿತು. ಭೂಮಿ ನಡುಗಿತು. ಮಳೆ ಬೆಳೆ ತಲ್ಲಣಗೊಂಡಿತು. ಜನರು ತೊಂದರೆಗೆ ಒಳಗಾಗುವರು. ನಾನು ಹೇಳಿದಾಗ ಒಂದು ಘಟನೆ ಆಗಿಯೇ ಆಗುತ್ತದೆ. ಅದನ್ನು ತಪ್ಪಿಸಿಕೊಳ್ಳುವುದು ಆಳುವವರ ಕೈಯಲ್ಲಿದೆ ಎಂದರು.

ಕಾಂಗ್ರೆಸ್ ಸರ್ಕಾರ ಸ್ಥಿರವಾಗಿರುತ್ತದೆ. ಕಾಂಗ್ರೆಸ್‌ನ ಗ್ಯಾರಂಟಿಗಳಿಂದ ಒಳಿತಾಗುತ್ತದೆ. ಯಾವ ಮಹಿಳೆಗೆ ಸ್ವಾತಂತ್ರ್ಯವಿರಲಿಲ್ಲ, ಇವತ್ತು ಅವರು ಬಸ್‌ಗಳಲ್ಲಿ ಉಚಿತವಾಗಿ ಓಡಾಡುತ್ತಿದ್ದಾರೆ ಎಂದು ನುಡಿದರು

ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!

HOW TO APPLY : NEET-UG COUNSELLING 2023

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಡ್ರೋನ್ ಹಾರಿಸೇಬಿಟ್ರಾ ಡ್ರೋನ್ ಪ್ರತಾಪ್ ?!

ಡ್ರೋನ್ ಹಾರಿಸೇಬಿಟ್ರಾ ಡ್ರೋನ್ ಪ್ರತಾಪ್?!
– ಅತೀ ದೊಡ್ಡ ಡ್ರೋನ್ ಜತೆ ಹಾಜರಾದ ಪ್ರತಾಪ್
– ತೀರ್ಥಹಳ್ಳಿಯಲ್ಲಿ ಡ್ರೋನ್ ಹಾರಿಸಿ ಪ್ರಯೋಗ
– ಸುಳ್ಳೋ ಸತ್ಯವೋ ವಿಜ್ಞಾನಿಗಳೇ ಹೇಳ್ಬೇಕು!

NAMMUR EXPRESS NEWS
ತೀರ್ಥಹಳ್ಳಿ: ಡ್ರೋನ್ ಪ್ರತಾಪ್ ಈಗ ದೊಡ್ಡ ಡ್ರೋನ್ ಹಾರಿಸಿ ಮತ್ತೆ ಸುದ್ದಿಗೆ ಬಂದಿದ್ದಾರೆ. ಮಲೆನಾಡಿನ ಎಲೆಚುಕ್ಕಿ ರೋಗದ ಸಮಸ್ಯೆಗೆ ಡ್ರೋನ್ ಮೂಲಕ ಔಷಧಿ ಸಿಂಪಡಿಸಿ ಪರಿಹಾರ ಕಂಡು ಕೊಳ್ಳಬಹುದು ಎಂದಿರುವ ಅವರು ತೀರ್ಥಹಳ್ಳಿ, ಹೊಸನಗರ, ಭದ್ರಾವತಿ ಸೇರಿದಂತೆ ಎಲ್ಲೆಡೆ ತಾವು ತಯಾರು ಮಾಡಿರುವ ಡ್ರೋನ್ ತಂದು ಔಷಧಿ ಸಿಂಪಡಿಸಿದ್ದಾರೆ. ಈ ಮೂಲಕ ಮತ್ತೊಮ್ಮೆ ಸೋಶಿಯಲ್ ಮೀಡೀಯಾದಲ್ಲಿ ಸದ್ದು ಮಾಡುತ್ತಿದ್ದಾನೆ.

ಕಳೆದ ಒಂದು ತಿಂಗಳಿಂದ ಡ್ರೋನ್ ಹಾರಿಸೋದ್ರಲ್ಲಿ ಬಿಝಿ ಆಗಿರುವ ಪ್ರತಾಪ್ ನ ಸಾಕಷ್ಟು ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇದೀಗ ತೀರ್ಥಹಳ್ಳಿಯ ಕೈಮರ ಬಳಿಯ ತೋಟವೊಂದರಲ್ಲಿ ಡ್ರೋನ್ ಹಾರಿಸಿದ್ದಾರೆ.
ಮಲೆನಾಡಿನಲ್ಲಿ ವ್ಯಾಪಕವಾಗಿರುವ ಅಡಿಕೆ ಮರದ ಕೊಳೆ ರೋಗಕ್ಕೆ ಔಷಧಿ ಹೊಡೆಯಲು ಡ್ರೋನ್ ಡಿಸೈನ್ ಮಾಡಿರುವ ಡ್ರೋನ್ ಪ್ರತಾಪ್ ಸುಮಾರು 17 ಲೀ ಔಷಧಿ ಕೊಂಡೋಯ್ಯಬಲ್ಲ ಡ್ರೋನ್ ತಂದಿದ್ದಾರೆ. ಆದರೆ ಡ್ರೋನ್ ಪ್ರತಾಪ್ ಅವರ ಈ ಸಂಶೋಧನೆ ಸುಳ್ಳು ಸತ್ಯವೋ ಎಂಬುದರ ಬಗ್ಗೆ ಸಂಶೋಧಕರೇ ದೃಡೀಕರಣ ಮಾಡಬೇಕು.

ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!

HOW TO APPLY : NEET-UG COUNSELLING 2023

Categories
ಬೆಂಗಳೂರು ಶಿವಮೊಗ್ಗ

ರಾಘವೇಂದ್ರ ಅವರಿಗೆ ಒಲಿಯುತ್ತಾ ಕೇಂದ್ರ ಸಚಿವ ಸ್ಥಾನ?

ರಾಘವೇಂದ್ರ ಅವರಿಗೆ ಒಲಿಯುತ್ತಾ ಕೇಂದ್ರ ಸಚಿವ ಸ್ಥಾನ?
– ಕೇಂದ್ರ ಸಂಪುಟ ವಿಸ್ತರಣೆಯಲ್ಲಿ ರಾಘವೇಂದ್ರ ಹೆಸರು
– ಕರ್ನಾಟಕ ಲೋಕ ಸಭೆ ಮೇಲೆ ಹೈಕಮಾಂಡ್ ಕಣ್ಣು!

NAMMUR EXPRESS NEWS
ಬೆಂಗಳೂರು: ಕೇಂದ್ರ ಸಚಿವ ಸಂಪುಟ ವಿಸ್ತರಣೆ ಅಥವಾ ಮರು ಹಂಚಿಕೆ ಆಗುವ ಸಾಧ್ಯತೆಗಳಿದ್ದು, ಈ ಬಾರಿ ಯಡಿಯೂರಪ್ಪ ಪುತ್ರ ಶಿವಮೊಗ್ಗ ಸಂಸದ ರಾಘವೇಂದ್ರ ಅವರಿಗೆ ಮಂತ್ರಿಗಿರಿ ಸಿಗುವ ಸಾಧ್ಯತೆಗಳಿವೆ.
ರಾಜ್ಯ ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ಕಹಿ ಅನುಭವದ ಆಧಾರದ ಹಿನ್ನೆಲೆಯಲ್ಲಿ ಲಿಂಗಾಯತ ಸಮುದಾಯದ ವಿಶ್ವಾಸವನ್ನು ತೆಗೆದುಕೊಳ್ಳುವ ಬಗ್ಗೆ ಹೈಕಮಾಂಡ್ ಯೋಚನೆ ಮಾಡಿದೆ.

ಯಡಿಯೂರಪ್ಪ ಪುತ್ರ ಬಿ. ವೈ.ರಾಘವೇಂದ್ರ ಅವರು ಯುವ ನಾಯಕರಾಗಿದ್ದು ಪ್ರಭಾವಿ ಆಗಿದ್ದಾರೆ.
ರಾಜ್ಯದಿಂದ ಪ್ರಹ್ಲಾದ್‌ ಜೋಶಿ, ನಿರ್ಮಲಾ ಸೀತಾರಾಮನ್‌, ರಾಜೀವ್‌ ಚಂದ್ರಶೇಖರ್‌, ಎ.ನಾರಾಯಣಸ್ವಾಮಿ ಮತ್ತು ಭಗವಂತ ಖೂಬಾ, ಶೋಭಾ ಕರಂದ್ಲಾಜೆ ಸಚಿವರಾಗಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಒಟ್ಟು 28 ಸ್ಥಾನಗಳ ಪೈಕಿ 25ರಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿ ಈ ಸಲ 20 ಸ್ಥಾನವನ್ನಾದ್ರೂ ಪಡೆಯಲು ಪ್ಲಾನ್ ಮಾಡಿಕೊಂಡಿದೆ. ಈ ಸ್ಥಾನ ಪಡೆಯಲು ಯಡಿಯೂರಪ್ಪ
ಅವರ ಸಂಘಟನೆ ಅನಿವಾರ್ಯ ಹೀಗಾಗಿ ರಾಘವೇಂದ್ರ ಅವರಿಗೆ ಕೇಂದ್ರ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ.

ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!

HOW TO APPLY : NEET-UG COUNSELLING 2023