Categories
ರಾಜ್ಯ

ವಿರೋಧದ ನಡುವೆಯೂ ತಮಿಳುನಾಡಿಗೆ ಕಾವೇರಿ ನೀರು

ವಿರೋಧದ ನಡುವೆಯೂ ತಮಿಳುನಾಡಿಗೆ ಕಾವೇರಿ ನೀರು
– ರಾತ್ರಿ ಸದ್ದಿಲ್ಲದೆ ನೀರು ಹರಿಸುತ್ತಿರುವ ಸರಕಾರ

NAMMUR EXPRESS : ಬೆಂಗಳೂರು : ಮಳೆಯಿಲ್ಲದೆ ರಾಜ್ಯ ಸಂಕಷ್ಟಕ್ಕೆ ಸಿಲುಕಿದ್ದರೂ ಸರಕಾರ ರೈತರ ತೀವ್ರ ವಿರೋಧ ಲೆಕ್ಕಿಸದೆ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ಬುಧವಾರ ರಾತ್ರಿಯಿಂದಲೇ ಸದ್ದಿಲ್ಲದೆ ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡಲಾರಂಭಿಸಿದೆ. ಪ್ರಾಧಿಕಾರದ ಆದೇಶವನ್ನು ಪಾಲನೆ ಮಾಡಲು ಮುಂದಾಗಿರುವ ರಾಜ್ಯ ಸರಕಾರ, ನಿತ್ಯ 5 ಸಾವಿರ ಕ್ಯೂಸೆಕ್‌ನಂತೆ ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ನೀರು ಬಿಡುಗಡೆ ಮಾಡಬೇಕಿದೆ. ರೈತರ ಪ್ರತಿಭಟನೆಯ ನಡುವೆಯೂ ಕರ್ನಾಟಕ ಕಾಂಗ್ರೆಸ್ ಸರಕಾರ ತಮಿಳುನಾಡಿಗೆ ಹರಿಸುತ್ತಿರುವ ನೀರಿನ ಪ್ರಮಾಣವನ್ನು ಹೆಚ್ಚಿಸಿದೆ.

ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಜಲಾಶಯದಿಂದ ಕಾವೇರಿ ನದಿಗೆ 7,279 ಕ್ಯೂಸೆಕ್ ನೀರು ಹರಿಬಿಡಲಾಗುತ್ತಿದೆ. ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ 100 ಅಡಿಗೆ ಕುಸಿದಿದೆ. ಗರಿಷ್ಟ 124.80 ಅಡಿ ನೀರಿನ ಮಟ್ಟ ಹೊಂದಿರುವ ಕೆಆರ್‌ಎಸ್ ಜಲಾಶಯದ ಇಂದಿನ ನೀರಿನ ಮಟ್ಟ 100,95 ಅಡಿ ಇದೆ.

ಇದನ್ನೂ ಓದಿ : 20 ಕೆಜಿ ಗೋ ಮಾಂಸ ವಶಕ್ಕೆ ಪಡೆದ ಪೊಲೀಸರು
[embedyt] https://www.youtube.com/watch?v=7aC6PnGPWLU%5B/embedyt%5D

Categories
ಮೈಸೂರು

ಟಿಕ್ ಟಾಕ್ ಸ್ಟಾರ್ ನವೀನ್ ಬರ್ಬರ ಹತ್ಯೆ

ಟಿಕ್ ಟಾಕ್ ಸ್ಟಾರ್ ನವೀನ್ ಬರ್ಬರ ಹತ್ಯೆ
– ಮೈಸೂರು ಪ್ರವಾಸಕ್ಕೆ ಹೋಗಿದ್ದ ವೇಳೆ ಕಿಡ್ನಾಪ್
– ಪ್ರಕರಣದಲ್ಲಿ ಭಾಗಿಯಾಗಿದ್ದ 8 ಮಂದಿ ಆರೋಪಿಗಳ ಬಂಧನ
– ಕೊಲೆ ರಿವೆಂಜ್‌ಗಾಗಿ ಈ ಕೊಲೆ ನಡೆಯಿತಾ?

NAMMUR EXPRESS NEWS
ಮೈಸೂರು: ಬೆಂಗಳೂರಿನ ಟಿಕ್ ಟಾಕ್ ಸ್ಟಾರ್ ಒಬ್ಬರನ್ನು ಮೈಸೂರಿನಲ್ಲಿ ಅಪಹರಿಸಿ ಕೊಲೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆಗಸ್ಟ್‌ 27ರಂದು ಮೈಸೂರಿಗೆ ಆಗಮಿಸಿದ್ದ ಟಿಕ್ ಟಾಕ್ ಸ್ಟಾರ್ ನವೀನ್‌ನನ್ನು ಅಂದು ಒಂದು ತಂಡ ಕಾರಿನಲ್ಲಿ ಬಂದು ಅಪಹರಿಸಿತ್ತು. ಅಂದು ಕೇವಲ ಮಿಸ್ಸಿಂಗ್‌ ಕೇಸ್‌ ಆಗಿ ತಣ್ಣಗೆ ಮಿಸ್‌ ಆಗಿದ್ದ ಕೇಸ್‌ ಈಗ ಮರ್ಡರ್‌ನ ಭಯಾನಕ ತಿರುವು ಪಡೆದಿದೆ. ಇದೀಗ ನವೀನ್‌ನ ಶವ ನಂಜನಗೂಡಿನ ಗೋಳೂರಿನ ನಾಲೆಯಲ್ಲಿ ಪತ್ತೆಯಾಗಿದೆ.

ರಾತ್ರಿ 9.45ಕ್ಕೆ ಮೈಸೂರಿನಿಂದ ಅಪಹರಣ

ರೀಲ್ಸ್‌ನಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿದ್ದ ನವೀನ್‌ ಕಳೆದ ಆಗಸ್ಟ್‌ 27ರಂದು ಮೈಸೂರಿಗೆ ಬಂದಿದ್ದರು. ಬೆಂಗಳೂರಿನಿಂದ ಬರುವ ಇಬ್ಬರು ಯುವತಿಯರನ್ನೂ ಜತೆಗೆ ಕರೆದುಕೊಂಡು ಬಂದಿದ್ದ ಅವರು ರಾತ್ರಿ ಮೈಸೂರು ಅರಮನೆ ಮುಂದೆ ರೀಲ್ಸ್‌ ಮಾಡುತ್ತಿದ್ದರು. ರಾತ್ರಿ 9.45ರ ಹೊತ್ತಿಗೆ ರೀಲ್ಸ್‌ ಮಾಡುತ್ತಿದ್ದಾಗ ಅಲ್ಲಿಗೆ ಬಂದ ತಂಡವೊಂದು ನವೀನ್‌ನನ್ನು ಮಾತನಾಡಿಸುತ್ತಾ ಕಾರಿನಲ್ಲಿ ಹಾಕಿ ಪರಾರಿಯಾಗಿತ್ತು. ಆವತ್ತೇ ಮೈಸೂರಿನಲ್ಲಿ ನವೀನ್‌ ಅಪಹರಣದ ಬಗ್ಗೆ ಸುದ್ದಿ ಹರಡಿತ್ತು. ಆದರೆ, ಯಾರೂ ಇದನ್ನು ಅಷ್ಟಾಗಿ ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದನ್ನು ಅಪಹರಣ ಎಂದು ಭಾವಿಸದೆ ಮಿಸ್ಸಿಂಗ್‌ ಕೇಸ್‌ ಎಂಬಂತೆ ಟ್ರೀಟ್‌ ಮಾಡಲಾಗಿತ್ತು.

ನಂಜನಗೂಡು ನಾಲೆಯಲ್ಲಿ ಸಿಕ್ಕಿತು ಶವ!:

ಈ ನಡುವೆ ಬಳಿಕ ನಂಜನಗೂಡಿನ ಗೋಳೂರಿನ‌ ನಾಲೆಯಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿತ್ತು. ಅಪರಿಚಿತ ವ್ಯಕ್ತಿಯ ಕೊಲೆ ಎಂದು ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರ ಬೆನ್ನು ಹತ್ತಿ ಗಮನಿಸಿದಾಗ ಅದು ಅರಮನೆ ಆವರಣದಿಂದ ನಾಪತ್ತೆಯಾಗಿದ್ದ ನವೀನ್‌ನ ಶವ ಎಂದು ತಿಳಿದುಬಂದಿತ್ತು.

ಕೊಲೆ ರಿವೆಂಜ್‌ಗಾಗಿ ಈ ಕೊಲೆ ನಡೆಯಿತಾ?:

ನವೀನ್‌ ಅಪಹರಣ ಮತ್ತು ಕೊಲೆಯ ಬೆನ್ನು ಬಿದ್ದ ಪೊಲೀಸರಿಗೆ ಕೆಲವು ಬೆಚ್ಚಿ ಬೀಳುವ ಮಾಹಿತಿಗಳು ಲಭ್ಯವಾಗಿವೆ. ಪೊಲೀಸರು ಇದೀಗ ಎಂಟು ಮಂದಿ ಆರೋಪಿಗಳನ್ನು ಬಂಧಿಸಿ ಕೊಲೆಯ ಸಂಭಾವ್ಯ ಕಾರಣಗಳನ್ನು ಪತ್ತೆ ಹಚ್ಚಿದ್ದಾರೆ. ಬೆಂಗಳೂರಿನ ಕಾರ್ಪೋರೇಟರ್ ಒಬ್ಬರ ಅಣ್ಣನ ಮಗನ ಕೊಲೆ ರಿವೆಂಜ್ ಗಾಗಿ ನವೀನ್ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಹಿಂದೆ ಬೆಂಗಳೂರಿನ ಕಗ್ಗಲಿಪುರ ವ್ಯಾಪ್ತಿಯಲ್ಲಿ ವಿನೋದ್ ಎಂಬವರ ಕೊಲೆ ಪ್ರಕರಣದ ಆರೋಪಿಯಾಗಿದ್ದ ಈ ನವೀನ್. ಕೆಲವು ದಿನಗಳ ಹಿಂದಷ್ಟೇ ಜೈಲಿನಿಂದ ಹೊರಬಂದಿದ್ದ ನವೀನ್‌ಗಾಗಿ ವಿರೋಧಿಗಳ ತಂಡ ಕಾದು ಕುಳಿತಿತ್ತು. ಮೊದಲು ಟಿಕ್‌ ಸ್ಟಾರ್‌ ಆಗಿದ್ದು ಭಾರಿ ಜನಪ್ರಿಯತೆ ಹೊಂದಿದ್ದ ನವೀನ್‌ ಬಳಿಕ ಟಿಕ್‌ ಟಾಕ್‌ ಬಂದ್‌ ಆದಾಗ ರೀಲ್ಸ್‌ ಶುರು ಮಾಡಿದ್ದ. ಆದರೆ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದು ಅವನ ಪಾಲಿಗೂ ಮೃತ್ಯುಪಾಶವಾಗಿದೆ. ಸದ್ಯ ಪೊಲೀಸರು ಪ್ರಕರಣದಲ್ಲಿ ಭಾಗಿಯಾಗಿದ್ದ 8 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಇದೀಗ ಸದ್ಯ ನಂಜನಗೂಡು ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

ಇದನ್ನೂ ಓದಿ : 20 ಕೆಜಿ ಗೋ ಮಾಂಸ ವಶಕ್ಕೆ ಪಡೆದ ಪೊಲೀಸರು
[embedyt] https://www.youtube.com/watch?v=7aC6PnGPWLU%5B/embedyt%5D

Categories
ಉದ್ಯೋಗ ಸುದ್ದಿ

SCDCC ಬ್ಯಾಂಕ್ ಗಳಲ್ಲಿ ಕೆಲಸ ಬೇಕಾ? 125 ಹುದ್ದೆಗಳಿಗೆ ಅರ್ಜಿ ಆಹ್ವಾನ!

SCDCC ಬ್ಯಾಂಕ್ ಗಳಲ್ಲಿ ಕೆಲಸ ಬೇಕಾ? 125 ಹುದ್ದೆಗಳಿಗೆ ಅರ್ಜಿ ಆಹ್ವಾನ!

NAMMUR EXPRESS NEWS  : 2023 ಸೌತ್ ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ನ ಖಾಲಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿ ಅಡಿಯಲ್ಲಿ ಸೆಕೆಂಡ್ ಡಿವಿಷನ್ ಕ್ಲರ್ಕ್, ಕಂಪ್ಯೂಟರ್ ಪ್ರೋಗ್ರಾಮರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 20 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.

ಹುದ್ದೆಗಳ ವಿವರಗಳು:-
• ಬ್ಯಾಂಕ್ ಹೆಸರು : ಸೌತ್ ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ (SCDCC)
ಹುದ್ದೆಗಳ ಸಂಖ್ಯೆ: 125
ಉದ್ಯೋಗ ಸ್ಥಳ: ಮಂಗಳೂರು – ಕರ್ನಾಟಕ
ಹುದ್ದೆಯ ಹೆಸರು: ಸೆಕೆಂಡ್ ಡಿವಿಷನ್ ಕ್ಲರ್ಕ್, ಕಂಪ್ಯೂಟರ್ ಪ್ರೋಗ್ರಾಮ‌

ಶೈಕ್ಷಣಿಕ ಅರ್ಹತೆ:-
• ಕಂಪ್ಯೂಟರ್ ಪ್ರೋಗ್ರಾಮರ್- ಬಿ ಈ,M.Sc in Computer Science, MCA @wed.
• ಸೆಕೆಂಡ್ ಡಿವಿಷನ್ ಕ್ಲರ್ಕ್- ಪದವಿ, ಡಿಪ್ಲೊಮಾ, ಸ್ನಾತಕೋತ್ತರ ಪದವಿ ಮಾಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ವಯೋಮಿತಿ:-
* ಸೌತ್ ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, * * ಈ ಹುದ್ದೆಗಳಿಗೆ 35 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ವಯೋಮಿತಿ ಸಡಿಲಿಕೆ:-
• ಒಬಿಸಿ ಅಭ್ಯರ್ಥಿಗಳು: 03 ವರ್ಷಗಳು
* SC/ST ಅಭ್ಯರ್ಥಿಗಳು: 05 ವರ್ಷಗಳು

ಅರ್ಜಿ ಶುಲ್ಕ:-
* SC/ST ಅಭ್ಯರ್ಥಿಗಳಿಗೆ: ರೂ.590/-
* ಎಲ್ಲಾ ಇತರ ಅಭ್ಯರ್ಥಿಗಳಿಗೆ: ರೂ.1180/-

ಆಯ್ಕೆ ಪ್ರಕ್ರಿಯೆ:-
ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಮಾಸಿಕ ವೇತನ:-
* ಕಂಪ್ಯೂಟರ್ ಪ್ರೋಗ್ರಾಮರ್- ರೂ.36985 ರಿಂದ 89600/-
* ಸೆಕೆಂಡ್ ಡಿವಿಷನ್ ಕ್ಲರ್ಕ್- ರೂ.24910 ರಿಂದ do. 55655/-

ಪ್ರಮುಖ ದಿನಾಂಕಗಳು:-
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
20-ಸೆಪ್ಟೆಂಬರ್-2023

ಅರ್ಜಿ ಸಲ್ಲಿಸುವುದು ಹೇಗೆ?
ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಈ ಹುದ್ದೆಗಳಿಗೆ ನೇರವಾಗಿ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.
ಅಧಿಕೃತ ವೆಬ್‌ಸೈಟ್: scdccbank.com

ಇದನ್ನೂ ಓದಿ : ಸಿಲಿಂಡರ್ ಬೆಲೆ 200 ರೂ.ಇಳಿಕೆ!

Categories
ರಾಜ್ಯ

ವಾಹನ ಖರೀದಿಸುವವರಿಗೆ ಸರ್ಕಾರದಿಂದ ಗುಡ್ ನ್ಯೂಸ್.!

ವಾಹನ ಖರೀದಿಸುವವರಿಗೆ ಸರ್ಕಾರದಿಂದ ಗುಡ್ ನ್ಯೂಸ್.!
– ವಾಹನ ಖರೀದಿಸಲು 3 ಲಕ್ಷ ಸಹಾಯಧನ
– ಸ್ವಾವಲಂಬಿಸಾರಥಿ ಯೋಜನೆಯಡಿ ಆನ್‌ಲೈನ್ ಅರ್ಜಿ ಸಲ್ಲಿಕೆ

NAMMUR EXPRESS NEWS
ನೀವು ವಾಹನ ಚಾಲಕರಾ..? ಆಟೋ ರಿಕ್ಷಾ, ಟ್ಯಾಕ್ಸಿ ಸರಕು ವಾಹನ ಖರೀದಿಸಲು ನಿಮಗೆ ಸರ್ಕಾರದ ಸಬ್ಸಿಡಿ ಪಡೆಯಬೇಕೆ? ಹಾಗಿದ್ದರೆ ನಿಮಗೆ ನಾವು ಇಲ್ಲಿ ಸಂಪೂರ್ಣ ಮಾಹಿತಿ ನೀಡಿದ್ದೇವೆ. ಈ ಲೇಖನವನ್ನು ಓದಿ ಹಾಗೂ ಸರ್ಕಾರದ ಸಹಾಯಧನ ಪಡೆದು ನಿಮ್ಮ ವೃತ್ತಿ ಜೀವನನ್ನು ಯಶಸ್ವಿಯಾಗಿಸಿ. ಆಟೋ ರಿಕ್ಷಾ, ಟ್ಯಾಕ್ಸಿ, ಸರಕು ವಾಹನಗಳನ್ನು ಖರೀದಿಸಲು ಸ್ವಾವಲಂಬಿ ಸಾರಥಿ ಯೋಜನೆಯಡಿ ಬ್ಯಾಂಕುಗಳಿಂದ ಮಂಜೂರಾತಿ ನೀಡಿದ ಅರ್ಹ ಪ್ರತಿ ಫಲಾನುಭವಿಗೆ ವಾಹನದ ಮೌಲ್ಯದ ಶೇ 50 ರಷ್ಟು ಅಥವಾ ಗರಿಷ್ಠ ರೂ. 3,00,000 ರ ವರೆಗೆ ಸಹಾಯಧನಯನ್ನು ನೀಡುತ್ತಾರೆ. ವಾಹನದ ಉಳಿದ ಮೊತ್ತಕ್ಕೆ ಬ್ಯಾಂಕ್ ಸಾಲ ಪಡೆದುಕೊಂಡ ಬಗ್ಗೆ ಬ್ಯಾಂಕ್ ಪತ್ರವನ್ನು ಸಲ್ಲಿಸಬೇಕಾಗುತ್ತದೆ.

ಯೋಜನೆಯ ಹೆಸರು: ಸ್ವಾವಲಂಬಿ ಸಾರಥಿ ಯೋಜನೆ
ಸಹಾಯಧನ ಮೊತ್ತ: ವಾಹನದ ಮೌಲ್ಯದ ಶೇ 50 ರಷ್ಟು ಅಥವಾ ಗರಿಷ್ಠ ರೂ. 3 ಲಕ್ಷದ ವರೆಗೆ ಅರ್ಜಿದಾರರ
ವಯಸ್ಸು: 18 ರಿಂದ 55 ವರ್ಷ ನಿಗಮದ
ಹೆಸರು: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ

ಅರ್ಹತೆ :
1. ಅರ್ಜಿದಾರ ಕರ್ನಾಟಕ ರಾಜ್ಯದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಸೇರಿದವರಾಗಿರಬೇಕು.
2. ಅರ್ಜಿದಾರ ಕರ್ನಾಟಕದ ಶಾಶ್ವತ ನಿವಾಸಿಯಾಗಿರಬೇಕು.
3. ಅರ್ಜಿದಾರರು 18 ರಿಂದ 55 ವರ್ಷಗಳ ನಡುವಿನ ವಯೋಮಿತಿಯವರಾಗಿರಬೇಕು.
4. ಕುಟುಂಬದ ವಾರ್ಷಿಕ ಆದಾಯ ರೂ. 4,50,000/- ಕ್ಕಿಂತ ಕಡಿಮೆ ಇರಬೇಕು. (ಎಲ್ಲಾ ಮೂಲಗಳಿಂದ ಬರುವು)
5. ಅರ್ಜಿದಾರರು ಪ್ರಾದೇಶಿಕ ಸಾರಿಗೆ ಅಧಿಕಾರಿಯಿಂದ ನೀಡಲಾದ ಚಾಲನಾ ಪರವಾನಗಿ ಹೊಂದಿರಬೇಕು
6. ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಕೇಂದ್ರ ಅಥವಾ ರಾಜ್ಯ ಸರ್ಕಾರಿ ಉದ್ಯೋಗಿಯಾಗಬಾರದು.
7. ಕಳೆದ 05 ವರ್ಷಗಳಲ್ಲಿ ಅರ್ಜಿದಾರ ಅಥವಾ ಅವನ ಅಥವಾ ಅವಳ ಕುಟುಂಬದ ಸದಸ್ಯರು ಸರ್ಕಾರದ ಅಥವಾ ನಿಗಮದ ಯಾವುದೇ ಇತರ ಯೋಜನೆಯಡಿಯಲ್ಲಿ (ಅರಿವು ಯೋಜನೆ ಹೊರತುಪಡಿಸಿ) ಸಾಲ ಸೌಲಭ್ಯಗಳನ್ನು ಪಡೆದಿರಬಾರದು.

ಬೇಕಾಗುವ ದಾಖಲೆಗಳು:
– ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಜಾತಿ ಪ್ರಮಾಣಪತ್ರ
– ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಆದಾಯ ಪ್ರಮಾಣಪತ್ರ
– ಆಧಾರ್ ಕಾರ್ಡ್ ಪ್ರತಿ (ನಿವಾಸದ ಪುರಾವೆ)
– ವಾಹನ ಚಾಲನಾ ಪರವಾನಗಿ ಪ್ರತಿ
– ಬ್ಯಾಂಕ್ ಪಾಸ್ ಬುಕ್ ಪ್ರತಿ
– ವಾಹನದ ಅಂದಾಜು ದರಪಟ್ಟಿ ಸ್ವಯಂ ಘೋಷಣೆ ಪತ್ರ
– ಫಲಾನುಭವಿಯ ಇತ್ತೀಚಿನ 2 ಪಾಸ್ಪೋರ್ಟ್ ಅಳತೆಯ ಭಾವಚಿತ್ರ
– ಅರ್ಜಿದಾರರ ಮತ್ತು ಕುಟುಂಬದ ಸದಸ್ಯರು ವಾಹನ ಖರೀದಿಗೆ ರಾಜ್ಯ ಸರ್ಕಾರದ ಯಾವುದೇ ಯೋಜನೆಯಡಿ ಸಾಲ ಸೌಲಭ್ಯ ಪಡೆದಿಲ್ಲದಿರುವ ಬಗ್ಗೆ ಜಿಲ್ಲಾ ವ್ಯವಸ್ಥಾಪಕರಿಂದ ದೃಢೀಕರಣ ಪತ್ರ

– ಈ ಯೋಜನೆಯಡಿ ಪಡೆದ ವಾಹನವನ್ನು ಯಾರಿಗೂ ಪರಭಾರೆ ಮಾಡದಿರುವ ಬಗ್ಗೆ ದೃಢೀಕರಣ ಪತ್ರ
ಆಯ್ಕೆ ಸಮಿತಿ:
1. ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿಗಳು- ಅಧ್ಯಕ್ಷರು
2. ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ- ಉಪಾಧ್ಯಕ್ಷರು
3. ಸಂಬಂಧಪಟ್ಟ ಜಿಲ್ಲೆಯ ಲೀಡ್ ಬ್ಯಾಂಕಿನ ವ್ಯವಸ್ಥಾಪಕರು – ಸದಸ್ಯರು
4. ಸಂಬಂಧಪಟ್ಟ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ -ಸದಸ್ಯರು
5. ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾ ಅಧಿಕಾರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ- ಸದಸ್ಯರು
6. ಸಂಬಂಧಪಟ್ಟ ಜಿಲ್ಲೆಯ ಕ.ಅ.ಅ.ನಿಗಮದ ಜಿಲ್ಲಾ ವ್ಯವಸ್ಥಾಪಕರು- ಸದಸ್ಯ ಕಾರ್ಯದರ್ಶಿ

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆ ಲಿಂಕ್‌ನ್ನು ಕೇಳಗೆ ನೀಡಲಾಗಿದೆ.
ಆನ್‌ಲೈನ್ ಅರ್ಜಿ ಲಿಂಕ್: ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ವೆಬ್‌ಸೈಟ್: kmdc.karnataka.gov.in, kmdconline.karnataka.gov.in
ಪ್ರಮುಖ ದಿನಾಂಕಗಳು: ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 25-09-2023

ಇದನ್ನೂ ಓದಿ : 20 ಕೆಜಿ ಗೋ ಮಾಂಸ ವಶಕ್ಕೆ ಪಡೆದ ಪೊಲೀಸರು
[embedyt] https://www.youtube.com/watch?v=7aC6PnGPWLU%5B/embedyt%5D

Categories
ರಾಷ್ಟ್ರೀಯ ವಾರ್ತೆ

19 ಲಕ್ಷ ವಿಡಿಯೋಗಳನ್ನು 3 ತಿಂಗಳಲ್ಲಿ ಡಿಲೀಟ್ ಮಾಡಿದ ಯೂಟ್ಯೂಬ್!

19 ಲಕ್ಷ ವಿಡಿಯೋಗಳನ್ನು 3 ತಿಂಗಳಲ್ಲಿ ಡಿಲೀಟ್ ಮಾಡಿದ ಯೂಟ್ಯೂಬ್!

NAMMUR EXPRESS :
ನವದೆಹಲಿ: ಗೂಗಲ್ ಒಡೆತನದ ಯೂಟ್ಯೂಬ್ 2023 ರ ಜನವರಿ ಮತ್ತು ಮಾರ್ಚ್ ನಡುವೆ ನಿಯಮ ಉಲ್ಲಂಘನೆಗಾಗಿ ಭಾರತದಲ್ಲಿ ತನ್ನ ಪ್ಲಾಟ್‌ಫಾರ್ಮ್‌ನಿಂದ 19 ಲಕ್ಷಕ್ಕೂ ಹೆಚ್ಚು ವಿಡಿಯೋಗಳನ್ನು ತೆಗೆದುಹಾಕಿದೆ. ಅದೇ ರೀತಿ ಜಾಗತಿಕವಾಗಿ ಯೂಟ್ಯೂಬ್ 64.8 ಲಕ್ಷ ವಿಡಿಯೋಗಳನ್ನು ತೆಗೆದುಹಾಕಿದೆ.

ಹಗರಣಗಳು, ದಾರಿತಪ್ಪಿಸುವ ಮೆಟಾಡೇಟಾ ಅಥವಾ ಥಂಬ್‌ನೇಲ್‌ಗಳು ಮತ್ತು ವಿಡಿಯೋ ಮತ್ತು ಕಾಮೆಂಟ್‌ಗಳ ಸ್ಪಾಮ್ ಸೇರಿದಂತೆ ಯೂಟ್ಯೂಬ್‌ನ ಸ್ಪಾಮ್ ನೀತಿಗಳನ್ನು ಉಲ್ಲಂಘಿಸಿದ್ದಕ್ಕಾಗಿ 87 ಲಕ್ಷಕ್ಕೂ ಹೆಚ್ಚು ಚಾನೆಲ್‌ಗಳನ್ನು ಕಂಪನಿಯು ಇದೇ ಅವಧಿಯಲ್ಲಿ ತೆಗೆದುಹಾಕಿದೆ.ಈ ವರ್ಷದ ಆರಂಭದ ಮೂರು ತಿಂಗಳಲ್ಲಿ ಯೂಟ್ಯೂಬ್ ತನ್ನ ಪ್ಲಾಟ್‌ಪಾರ್ಮ್‌ನಿಂದ 64 ಲಕ್ಷ ವಿಡಿಯೋಗಳನ್ನು ಡಿಲೀಟ್ ಮಾಡಿದೆ.

ಕಂಪನಿಯ ಪ್ರಕಾರ ಯೂಟ್ಯೂಬ್ ತೆಗೆದುಹಾಕಿದ ಶೇಕಡಾ 93 ಕ್ಕೂ ಹೆಚ್ಚು ವಿಡಿಯೋಗಳನ್ನು ಮಾನವರಿಗಿಂತ ಮೊದಲು ತಂತ್ರಜ್ಞಾನವೇ ಕಂಡುಹಿಡಿದಿದೆ. ತಂತ್ರಜ್ಞಾನದಿಂದ ಪತ್ತೆ ಮಾಡಲಾದ ವಿಡಿಯೋಗಳ ಪೈಕಿ 38 ಪ್ರತಿಶತದಷ್ಟು ವೀಡಿಯೊಗಳು ಒಂದೇ ಒಂದು ವೀಕ್ಷಣೆ ಪಡೆಯುವ ಮೊದಲೇ ತೆಗೆದುಹಾಕಲಾಗಿದೆ ಮತ್ತು ಒಂದರಿಂದ ಹತ್ತು ವೀಕ್ಷಣೆ ಪಡೆಯುವ ಮುನ್ನ 31 ಪ್ರತಿಶತದಷ್ಟು ವಿಡಿಯೋಗಳನ್ನು ತೆಗೆದುಹಾಕಲಾಗಿದೆ. ಅಂದರೆ ತಂತ್ರಜ್ಞಾನದಿಂದ ಮೊದಲಿಗೆ ಪತ್ತೆಯಾದ 69 ಪ್ರತಿಶತದಷ್ಟು ವೀಡಿಯೊಗಳು ಯೂಟ್ಯೂಬ್‌ನಿಂದ ತೆಗೆದುಹಾಕುವ ಮೊದಲು 10 ಕ್ಕಿಂತ ಕಡಿಮೆ ವೀಕ್ಷಣೆಗಳನ್ನು ಪಡೆದಿದ್ದವು.

“ಇಂದಿನಿಂದ ಕಂಟೆಂಟ್ ಕ್ರಿಯೇಟರ್‌ಗಳು ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವ ಬಗ್ಗೆ ಎಚ್ಚರಿಕೆಯ ಸಂದೇಶ ಪಡೆದಾಗ ಅವರು ಶೈಕ್ಷಣಿಕ ತರಬೇತಿ ಕೋರ್ಸ್ ನೋಡುವ ಆಯ್ಕೆಯನ್ನು ಹೊಂದಿರುತ್ತಾರೆ. ಭವಿಷ್ಯದಲ್ಲಿ ನಮ್ಮ ನೀತಿಗಳನ್ನು ಉಲ್ಲಂಘಿಸುವ ಕಂಟೆಂಟ್ ಅನ್ನು ಅಪ್ಲೋಡ್ ಮಾಡುವುದನ್ನು ಹೇಗೆ ತಪ್ಪಿಸಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಕ್ರಿಯೇಟರ್‌ಗಳಿಗೆ ಈ ತರಬೇತಿ ವಿಡಿಯೋಗಳು ಹೊಸ ಮಾರ್ಗಗಳನ್ನು ಒದಗಿಸುತ್ತವೆ’ ಎಂದು ಯೂಟ್ಯೂಬ್ ಹೇಳಿದೆ.

2019 ರಲ್ಲಿ ಯೂಟ್ಯೂಬ್ ಮೊದಲ ಬಾರಿ ನಿಯಮ ಉಲ್ಲಂಘಿಸುವವರಿಗೆ ಒಂದು ಬಾರಿ ಎಚ್ಚರಿಕೆ ನೀಡುವ ಪರಿಪಾಠ ಆರಂಭಿಸಿತ್ತು. ಯೂಟ್ಯೂಬ್ ಮುಂದಿನ ಕ್ರಮ ಕೈಗೊಳ್ಳುವ ಮೊದಲು ತಾವೇನು ತಪ್ಪು ಮಾಡಿದ್ದೇವೆ ಎಂಬುದನ್ನು ಪರಿಶೀಲಿಸಲು ಕಂಟೆಂಟ್‌ ಕ್ರಿಯೇಟರ್‌ಗಳಿಗೆ ಈ ಮೂಲಕ ಒಂದು ಅವಕಾಶ ನೀಡಲಾಗಿತ್ತು. ಇದರ ಪರಿಣಾಮವಾಗಿ ಎಚ್ಚರಿಕೆಯ ಸಂದೇಶ ಪಡೆದ ಶೇಕಡಾ 80 ಕ್ಕೂ ಹೆಚ್ಚು ಕಂಟೆಂಟ್ ಕ್ರಿಯೇಟರ್‌ಗಳು ಮತ್ತೊಮ್ಮೆ ಕಂಪನಿಯ ನಿಯಮಗಳನ್ನು ಉಲ್ಲಂಘಿಸುತ್ತಿಲ್ಲ ಎಂದು ಕಂಪನಿ ಹೇಳಿದೆ.

ಇದರ ಜೊತೆಗೆ ಕಂಪನಿ 85.3 ಲಕ್ಷಕ್ಕೂ ಹೆಚ್ಚು ಕಾಮೆಂಟ್‌ಗಳನ್ನು ಸಹ ತೆಗೆದುಹಾಕಿದೆ. ಇದರಲ್ಲಿ ಹೆಚ್ಚಿನವು ಸ್ಪಾಮ್ ಆಗಿವೆ. ತೆಗೆದುಹಾಕಿದ ಕಾಮೆಂಟ್‌ಗಳಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ಸ್ವಯಂಚಾಲಿತವಾಗಿ ಹತ್ತೆಯಾಗಿದೆ. ‘ಕಳೆದ ಹಲವಾರು ವರ್ಷಗಳಿಂದ ಯೂಟ್ಯೂಬ್ ಸಮುದಾಯದ ಸುರಕ್ಷತೆಗಾಗಿ ಅಗತ್ಯ ನೀತಿಗಳು ಮತ್ತು ಉತ್ಪನ್ನಗಳನ್ನು ರೂಪಿಸಲು ಭಾರಿ ಹೂಡಿಕೆ ಮಾಡಿದೆ. ಇಂದು, ಬಹುಪಾಲು ಕಂಟೆಂಟ್‌ ಕ್ರಿಯೇಟರ್‌ಗಳು ಸದುದ್ದೇಶದಿಂದ ಕಂಟೆಂಟ್ ಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ ಮತ್ತು ಅವರು ನಮ್ಮ ನೀತಿಗಳನ್ನು ಉಲ್ಲಂಘಿಸುತ್ತಿಲ್ಲ. ನಮ್ಮ ನೀತಿಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸುವ ಕಂಟೆಂಟ್‌ ಕ್ರಿಯೇಟರ್‌ಗಳ ಸಂಖ್ಯೆಯನ್ನು ಕಡಿಮೆ ಮಾಡುವಲ್ಲಿ ಅವರಿಗೆ ತಿಳುವಳಿಕೆ ಮೂಡಿಸುವ ನಮ್ಮ ಪ್ರಯತ್ನಗಳು ಯಶಸ್ವಿಯಾಗುತ್ತವೆ ಎಂದು ನಾವು ನಂಬುತ್ತೇವೆ” ಎಂದು ಯೂಟ್ಯೂಬ್ ಬುಧವಾರ ಹೇಳಿದೆ.

ಇದನ್ನೂ ಓದಿ : ಶಿವಮೊಗ್ಗ ವಿಮಾನ: ಮೊದಲ ಟಿಕೆಟ್ ಕಿಮ್ಮನೆ ಜಯರಾಂರದ್ದು!

Categories
ಚಿಕ್ಕಮಗಳೂರು

ಮಟನ್ ಪ್ರಿಯರಿಗೆ ಇದೀಗ ಎಚ್ಚರಿಕೆ..!

ಮಟನ್ ಪ್ರಿಯರಿಗೆ ಇದೀಗ ಎಚ್ಚರಿಕೆ..!
– ಚಿಕ್ಕಮಗಳೂರಿನ ಹೋಟೆಲ್ ನಲ್ಲಿ ಬಯಲಾಯ್ತು ದೊಡ್ಡ ದಂಧೆ
– 20 ಕೆಜಿ ಗೋ ಮಾಂಸ ವಶಕ್ಕೆ ಪಡೆದ ಪೊಲೀಸರು

NAMMUR EXPRESS NEWS
ಚಿಕ್ಕಮಗಳೂರು: ಮಟನ್ ಊಟವೆಂದು, ಗೋ ಮಾಂಸದ ಊಟ ನೀಡುತ್ತಿದ್ದ ಪ್ರತಿಷ್ಠಿತ ಹೋಟೆಲ್ ಗಳ ಮೇಲೆ ಪೊಲೀಸರು ದಾಳಿ ಮಾಡಿ ಇಬ್ಬರು ಹೋಟೆಲ್ ಮಾಲೀಕರನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ. ಎವರೆಸ್ಟ್ ಹೋಟೆಲ್ ಮಾಲೀಕ ಲತೀಫ್ ಮತ್ತು ಬೆಂಗಳೂರಿನ ಹೋಟೆಲ್ ಮಾಲೀಕ ಶಿವರಾಜ್ ಅವರನ್ನು ಬಂಧಿಸಿದ್ದಾರೆ.
ನಗರದ ಬೆಂಗಳೂರು ಹೋಟೆಲ್, ಎವರೆಸ್ಟ್ ಹೋಟೆಲ್ ಗಳು ಮಟನ್ ಬದಲು ಗೋಮಾಂಸದ ಖಾದ್ಯಗಳನ್ನ ನೀಡುತ್ತಿದ್ದವು ಎಂಬ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಎವರೆಸ್ಟ್ ಹೋಟೆಲ್ ಮಾಲೀಕ ಲತೀಫ್ ಮತ್ತು ಬೆಂಗಳೂರಿನ ಹೋಟೆಲ್ ಮಾಲೀಕ ಶಿವರಾಜ್ ಅವರನ್ನು ಬಂಧಿಸಿದ್ದಾರೆ. ಚಿಕ್ಕಮಗಳೂರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

20 ಕೆಜಿ ಗೋಮಾಂಸ ವಶಕ್ಕೆ:

ಮತ್ತೊಂದು ಪ್ರಕರಣದಲ್ಲಿ ಚಿಕ್ಕಮಗಳೂರು ನಗರದ ಅಂಬೇಡ್ಕರ್ ರಸ್ತೆಯಲ್ಲಿರುವ ನ್ಯಾಮತ್ ಹೋಟೆಲ್ ನಲ್ಲಿ ಸಂಗ್ರಹಿಸಲಾಗಿದ್ದ 20 ಕೆಜಿ ಗೋಮಾಂಸವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹೊಟೇಲ್ ಮಾಲೀಕ ಇರ್ಷಾದ್ ಅಹಮದ್ ನನ್ನು ಪೊಲೀಸರು ಬಂಧಿಸಿದ್ದು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಶಿವಮೊಗ್ಗ ವಿಮಾನ: ಮೊದಲ ಟಿಕೆಟ್ ಕಿಮ್ಮನೆ ಜಯರಾಂರದ್ದು!

Categories
ಶಿವಮೊಗ್ಗ

ಚಕ್ರವರ್ತಿ ಸೂಲಿಬೆಲೆಗೆ ಪೊಲೀಸ್ ನೋಟಿಸ್ ಕಾರ್ಯಕರ್ತರ ಪ್ರತಿಭಟನೆ.

ಚಕ್ರವರ್ತಿ ಸೂಲಿಬೆಲೆಗೆ ಪೊಲೀಸ್ ನೋಟಿಸ್ ಕಾರ್ಯಕರ್ತರ ಪ್ರತಿಭಟನೆ.

NAMMUR EXPRESS : 
ಶಿವಮೊಗ್ಗ : ಶಿವಮೊಗ್ಗ ನಗರದಲ್ಲಿ ಇತ್ತೀಚೆಗೆ ವಾಗಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಪ್ರಕರಣ ಒಂದು ದಾಖಲಾಗಿದ್ದು ಇದರ ಸಂಬಂಧ ಪೊಲೀಸ್ ನೋಟಿಸ್ ನೀಡಲಾಗಿದೆ ಈ ವಿಷಯಕ್ಕೆ ಠಾಣೆಗೆ ಚಕ್ರವರ್ತಿ ಸೂಲಿಬೆಲೆ ಹಾಜರಾಗಿದ್ದು ಕಾರ್ಯಕರ್ತರು ಠಾಣೆ ಎದುರು ಪ್ರತಿಭಟನೆಯನ್ನು ನಡೆಸಿದ್ದಾರೆ. ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆಯಲ್ಲಿ ರಾಜ್ಯ ಕಾಂಗ್ರೆಸ್ ನ ಸಾಮಾಜಿಕ ಜಾಲತಾಣದ ಅಧ್ಯಕ್ಷ ಸೌಗಂಧಿಕಾ ರಘುನಾಥ್ ಅವರು ಚಕ್ರವರ್ತಿ ಸೂಲಿಬೆಲೆ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಈ ಪ್ರಕರಣ ಸಂಬಂಧಿಸಿದಂತೆ ಚಕ್ರವರ್ತಿ ಸೂಲಿಬೆಲೆ ಅವರಿಗೆ ವಿನೋಬನಗರ ಠಾಣೆ ಪೊಲೀಸರು ನೋಟಿಸ್ ನೀಡಿದ್ದರು ಈ ಸಂಬಂಧ ಚಕ್ರವರ್ತಿ ಸೂಲಿಬೆಲೆ ಅವರು ಠಾಣೆಗೆ ಹಾಜರಾಗಿದ್ದು ಈ ವೇಳೆ ಚಕ್ರವರ್ತಿ ಸೂಲಿಬೆಲೆ ಅವರ ನೂರಾರು ಬೆಂಬಲಿಗರು ಠಾಣೆ ಎದುರು ಜಮಾಯಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗುವ ಮೂಲಕ ಪ್ರತಿಭಟನೆಯನ್ನು ನಡೆಸಿದರು. ಈ ಸಂದರ್ಭದಲ್ಲಿ ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪ ಹಾಗೂ ಬಿಜೆಪಿ ಮುಖಂಡರುಗಳು ಯುವ ಬ್ರಿಗೇಡ್ ಕಾರ್ಯಕರ್ತರು ಇದ್ದರು.

ಇದನ್ನೂ ಓದಿ : ಶಿವಮೊಗ್ಗ ವಿಮಾನ: ಮೊದಲ ಟಿಕೆಟ್ ಕಿಮ್ಮನೆ ಜಯರಾಂರದ್ದು!

Categories
ತೀರ್ಥಹಳ್ಳಿ

ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ ಮಹಿಳೆ.!

ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ ಮಹಿಳೆ.!
– ನಂಬಿ ಮೋಸ ಹೋದ ತೀರ್ಥಹಳ್ಳಿ ದಂಪತಿ!
– ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಇಂದಿರಾನಗರದ ಚೈತ್ರ ಎಂಬುವವರಿಗೆ ಪದವಿ ವಿದ್ಯಾರ್ಹತೆಯ ಮೇರೆಗೆ ರೈಲ್ವೆ ಇಲಾಖೆಯಲ್ಲಿ ಎಚ್ಆರ್ ಕೆಲಸವನ್ನು ಕೊಡಿಸುವುದಾಗಿ ಲಕ್ಷ ಲಕ್ಷ ಹಣ ವಂಚಿಸಿರುವ ಘಟನೆ ನೆಡೆದಿದೆ. ವಂಚಕಿ ಶ್ವೇತಾ ಚೈತ್ರಳ ಬಳಿ ಮೊದಲ ಹಂತವಾಗಿ ಫೋನ್ ಪೇ ಮೂಲಕ 19,600 ರೂ. ಹಣವನ್ನು ಹಾಕಿಸಿಕೊಂಡಿದ್ದಾರೆ. ಕೆಲ ದಿನಗಳ ಬಳಿಕ ನಿಮಗೆ ರೈಲ್ವೆ ಇಲಾಖೆಯಲ್ಲಿ ಕೆಲಸ ಸಿಕ್ಕಿದೆ. ಈ ಕೆಲಸ ಬೇಕಾದರೆ ನೀವೂ 1,50,000 ರೂ ಹಣ ನೀಡಬೇಕು ಎಂದು ನಂಬಿಸಿದ್ದಾರೆ. ಶ್ವೇತಾಳ ನಯವಾದ ಮಾತುಗಳನ್ನು ನಂಬಿ ಒಂದೂವರೆ ಲಕ್ಷ ರೂಪಾಯಿಯನ್ನು ಆನ್‌ಲೈನ್ ಮೂಲಕ ಚೈತ್ರ ಕಳಿಸಿಕೊಟ್ಟಿದ್ದಾರೆ. ನಿಮ್ಮದು ಮೆಡಿಕಲ್, ಪೊಲೀಸ್ ವೆರಿಫಿಕೇಷನ್ ಆಗಿದೆ ಇದಕ್ಕೆ ನಾವು ಹಣಕೊಟ್ಟು ಮಾಡಿಸಿದ್ದೀವಿ ಎಂದಿದ್ದಾರೆ. ಇಷ್ಟಾದ ಮೇಲೆ ಬೆಂಗಳೂರಿನ ರೈಲ್ವೇ ಕಚೇರಿಯಲ್ಲಿ ಸಹಿ ಮಾಡುವುದಿದೆ, ನೀವೂ ಬರಬೇಕಾಗುತ್ತದೆ ಎಂದು ಕರೆಸಿಕೊಂಡಿದ್ದಾಳೆ.

ಆರೋಪಿ ಶ್ವೇತಾ ಅನುಮಾನಬಾರದಿರಲಿ ಎಂದು ಚೈತ್ರ ಹಾಗೂ ಅರ್ಜುನ್ ದಂಪತಿಗೆ ತಾನೇ ಶಿವಮೊಗ್ಗ ಟು ಬೆಂಗಳೂರಿಗೆ ರೈಲ್ವೆ ಟಿಕೇಟ್ ಬುಕ್ ಮಾಡಿ ಕರೆಸಿಕೊಂಡಿದ್ದಾಳೆ. ಚೈತ್ರ ಬೆಂಗಳೂರಿಗೆ ಹೋದಾಗ ಶ್ವೇತಾ ರೈಲ್ವೆ ಕಚೇರಿಯ ಹತ್ತಿರ ಕರೆದುಕೊಂಡು ಹೋಗಿದ್ದಾಳೆ. ಇವರನ್ನು ಹೊರಗೆ ಕೂರಿಸಿ ಆಫೀಸರ್ ಬಂದಿಲ್ಲ ಎಂದೇಳಿ, ಯಾವುದೋ ಪೇಪರ್‌ಗೆ ಸಹಿ ಮಾಡಿಸಿಕೊಂಡು, ನಾಳೆ ನಾನೇ ಸಬ್‌ಮಿಟ್ ಮಾಡುತ್ತೇನೆ ಎಂದು ಹೇಳಿದ್ದಾಳೆ.

ಬಳಿಕ ಮತ್ತೊಬ್ಬ ವಂಚಕ ಪ್ರಶಾಂತ್ ದೇಶಪಾಂಡೆ ಅವರನ್ನು ಪರಿಚಯಿಸಿ ಇವರೇ ನೋಡಿ ಜಾಬ್ ಮಾಡಿಸಿಕೊಡುವವರು ಎಂದು ಹೇಳಿ ತೋರಿಸಿದ್ದಾಳೆ. ಇವರೇ ನಿಮಗೆ ಕೆಲಸ ಕೊಡಿಸುವವರು ಅವರೊಂದಿಗೆ ಇನ್ನು ಮುಂದೆ ಮಾತನಾಡಿಕೊಳ್ಳಿ ಎಂದು ಜಾರಿಕೊಂಡಿದ್ದಾಳೆ. ಈ ವಿಚಾರದಲ್ಲಿ ಅರ್ಜುನ್ ಟಿ.ಪಿ. ಎಂಬುವವರಿಂದ ಮೂವರಿಗೆ ವಂಚನೆ ಮಾಡಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೂರುದಾರ ಅರ್ಜುನ್‌ಗೆ 4.02 ಲಕ್ಷ ರೂ., ಕೊಪ್ಪ ತಾಲೂಕಿನ ಆದರ್ಶಗೆ 6.50 ಲಕ್ಷ ರೂ. ಹಾಗೂ ಶಿವಮೊಗ್ಗದ ನವೀನ್ 3,42,500 ರೂ. ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ರಿಪ್ಪನ್‌ಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ : ಶಿವಮೊಗ್ಗ ವಿಮಾನ: ಮೊದಲ ಟಿಕೆಟ್ ಕಿಮ್ಮನೆ ಜಯರಾಂರದ್ದು!

Categories
ಶಿವಮೊಗ್ಗ

ಬೆಂಗಳೂರಿನಿಂದ ಶಿವಮೊಗ್ಗ ಕಡೆ ಪ್ರಯಾಣ ಬೆಳೆಸಿದ ಮೊದಲ ವಿಮಾನ!

ಬೆಂಗಳೂರಿನಿಂದ ಶಿವಮೊಗ್ಗ ಕಡೆ ಪ್ರಯಾಣ ಬೆಳೆಸಿದ ಮೊದಲ ವಿಮಾನ!
– ಮೊದಲ ದಿನದ ಶಿವಮೊಗ್ಗ ವಿಮಾನ ಹೌಸ್ ಫುಲ್
– ಮೊದಲ ದಿನ ಯಾರೆಲ್ಲ ಪ್ರಯಾಣಿಸಲಿದ್ದಾರೆ?

NAMMUR EXPRESS NEWS
ಶಿವಮೊಗ್ಗ : ಬೆಂಗಳೂರಿನ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶಿವಮೊಗ್ಗ ಕಡೆಗೆ ಮೊದಲ ವಿಮಾನ ಪ್ರಯಾಣ ಬೆಳೆಸಿದೆ. ಬೆಳಗ್ಗೆ 9:50 ಕ್ಕೆ ಬೆಂಗಳೂರಿನಿಂದ ಪ್ರಯಾಣ ಬೆಳಸಿರುವ ಇಂಡಿಗೋ ವಿಮಾನ ಶಿವಮೊಗ್ಗಕ್ಕೆ 11:05 ಕ್ಕೆ ಬರಲಿದೆ. ಕೆಂಪೇಗೌಡ ವಿಮಾನ ನಿಲ್ದಾಣದಿಂದ ಮೊದಲ ವಿಮಾನದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಸಚಿವ ಎಂಬಿ ಪಾಟೀಲ್, ಮಾಜಿ ಸಚಿವ ಆರಗ ಜ್ಞಾನೇಂದ್ರ, ಕೆ ಎಸ್ ಈಶ್ವರಪ್ಪ, ಸಂಸದ ಬಿ ವೈ ರಾಘವೇಂದ್ರ, ಹಾಲಪ್ಪ ಸೇರಿದಂತೆ ಒಟ್ಟು 72 ಜನ ಪ್ರಯಾಣಿಸಿದ್ದಾರೆ.

ಇದನ್ನೂ ಓದಿ : ಶಿವಮೊಗ್ಗ ವಿಮಾನ: ಮೊದಲ ಟಿಕೆಟ್ ಕಿಮ್ಮನೆ ಜಯರಾಂರದ್ದು!

Categories
ಶಿವಮೊಗ್ಗ

ಶಿವಮೊಗ್ಗ ವಿಮಾನ: ಮೊದಲ ಟಿಕೆಟ್ ಕಿಮ್ಮನೆ ಜಯರಾಂರದ್ದು!

ಶಿವಮೊಗ್ಗ ವಿಮಾನ: ಮೊದಲ ಟಿಕೆಟ್ ಕಿಮ್ಮನೆ ಜಯರಾಂರದ್ದು!
– ಆ. 31ರಂದು ಮೊದಲ ವಿಮಾನಯಾನ
– ಮಲೆನಾಡಲ್ಲಿ ಭಾರೀ ಸಂಭ್ರಮ

NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ವಿಮಾನದ ಮೊದಲ ಟಿಕೆಟ್ ಅನ್ನು ಖ್ಯಾತ ಉದ್ಯಮಿ ಕಿಮ್ಮನೆ ಜಯರಾಂ ತೆಗೆದಿದ್ದಾರೆ. ಈ ವಿಷಯವನ್ನು ಅವರು ಇತ್ತೀಚಿಗೆ ನಡೆದ ಕಾರ್ಯಕ್ರಮದಲ್ಲಿ ಹೇಳಿದರು. ಇದೇ ವೇಳೆ ಮಾತನಾಡಿದ ಉದ್ಯಮಿ ಕಿಮ್ಮನೆ ಜಯರಾಮ್‌, ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ವಿಮಾನ ನಿಲ್ದಾಣ ಅತ್ಯಂತ ಪ್ರಮುಖವಾದ್ದದ್ದು. ಈಚೆಗೆ ದೆಹಲಿಗೆ ತೆರಳಿದ್ದಾಗ ಹಿರಿಯ ಐಪಿಎಸ್‌ ಅಧಿಕಾರಿಯೊಬ್ಬರು ವಿಮಾನ ನಿಲ್ದಾಣ ಆರಂಭದ ಸಾಹಸ, ಸಂಸದ ರಾಘವೇಂದ್ರ ಅವರ ಚಾಕಚಕ್ಯತೆ ಮತ್ತು ಶ್ರಮದ ಕುರಿತು ತಿಳಿಸಿದ್ದರು. ನರೇಂದ್ರ ಮೋದಿ ಅವರ ಸರ್ಕಾರ ವಿಮಾನ ನಿಲ್ದಾಣದ ಭದ್ರತಾ ಮಾನದಂಡವನ್ನು ಬದಲಿಸಿ ಮತ್ತಷ್ಟು ಬಿಗಿಗೊಳಿಸಿದೆ. ಆ ಮಾನದಂಡಗಳನ್ನು ಪೂರೈಸುವುದು ಸುಲಭದ ಸಂಗತಿಯಲ್ಲ. ಸಂಸದ ರಾಘವೇಂದ್ರ ಅತಿ ಶೀಘ್ರ ಎಲ್ಲಾ ನಿಯಮಗಳನ್ನು ಪಾಲಿಸಿ ವಿಮಾನ ನಿಲ್ದಾಣ ಆರಂಭಕ್ಕೆ ಕಾರಣವಾಗಿದ್ದಾರೆ. ಇದು ಸಣ್ಣ ಸಂಗತಿಯಲ್ಲ ಅನ್ನುವುದು ಎಲ್ಲರಿಗು ಅರಿವಾಗಬೇಕಿದೆ ಎಂದರು.

ಇದನ್ನೂ ಓದಿ : ಸಿಲಿಂಡರ್ ಬೆಲೆ 200 ರೂ.ಇಳಿಕೆ!