Categories
ತೀರ್ಥಹಳ್ಳಿ ಮಲ್ನಾಡ್

ಕಸ್ತೂರಿ ರಂಗನ್ ವರದಿ ಜಾರಿಗೆ ಬಿಡುವುದಿಲ್ಲ: ಆರಗ ಜ್ಞಾನೇಂದ್ರ

ಕಸ್ತೂರಿ ರಂಗನ್ ವರದಿ ಮಲೆನಾಡ ಮರಣ ಮೃದಂಗ
– ತೀರ್ಥಹಳ್ಳಿಯಲ್ಲಿ ಬಿಜೆಪಿ ಬೃಹತ್ ಹೋರಾಟ
– ಅರಣ್ಯ ಸಚಿವರನ್ನು ಸಂಪುಟದಿಂದ ಕೈಬಿಡಲು ಪಟ್ಟು
– ಕಸ್ತೂರಿ ರಂಗನ್ ವರದಿ ಜಾರಿಗೆ ಬಿಡುವುದಿಲ್ಲ: ಆರಗ

NAMMUR EXPRESS NEWS
ತೀರ್ಥಹಳ್ಳಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಜವಾಬ್ದಾರಿಯುತ ಸ್ಥಾನದಲ್ಲಿರುವ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರು ಮಲೆನಾಡಿಗರ ಬದುಕಿಗೆ ಮರಣ ಶಾಸನದಂತಿರುವ ಕಸ್ತೂರಿ ರಂಗನ್ ವರದಿ ಜಾರಿಯ ಕುರಿತು ವರದಿ ಜಾರಿಗೊಳಿಸಲು ಪೂರಕವಾದ ಅಭಿಪ್ರಾಯ ವ್ಯಕ್ತ ಪಡಿಸಿರುವುದು ಮಲೆನಾಡಿಗರ ಅದರಲ್ಲೂ ತೀರ್ಥಹಳ್ಳಿ ಜನರ ಬದುಕಿನ ಮೇಲೆ ಮರಣ ಮೃದಂಗ ಭಾರಿಸಿದಂತೆ ಆಗಿದೆ ಎಂದು ಅಗ್ರಹಿಸಿ ತೀರ್ಥಹಳ್ಳಿ ಬಿಜೆಪಿ ತೀರ್ಥಹಳ್ಳಿಯಲ್ಲಿ ಪ್ರತಿಭಟನೆ ನಡೆಸಿತು.
ಲಕ್ಷಾಂತರ ಜನರ ಬದುಕಿಗೆ ಕೊಳ್ಳಿ ಇಡುವಂತಹ ಪ್ರಯತ್ನಕ್ಕೆ ಅರಣ್ಯ ಸಚಿವರು ಕೈ ಹಾಕಿರುವುದು ಖಂಡನೀಯ. ಈ ಕೂಡಲೇ ಮಾನ್ಯ ಮುಖ್ಯಮಂತ್ರಿಗಳು ಸದರಿ ಅರಣ್ಯ ಸಚಿವರನ್ನು ಸಂಪುಟದಿಂದ ವಜಾಗೊಳಿಬೇಕೆಂದು ಆಗ್ರಹಿಸುತ್ತೇವೆ. ಈ ಹಿಂದಿನ ಬಿಜೆಪಿ ಸರ್ಕಾರ ಕಸ್ತೂರಿ ರಂಗನ್ ವರದಿ ಅವೈಜ್ಞಾನಿಕವಾಗಿರುವುದಲ್ಲದೇ ರಾಜ್ಯದ ಕೊಟ್ಯಾಂತರ ಜನರ ಬದುಕು ಬವಣೆಗಳ ಮೇಲೆ ಸವಾರಿ ಮಾಡುವಂತಿದೆ ಎನ್ನುವ ಕಾರಣಕ್ಕಾಗಿಯೇ ಜನರ ಹಿತವನ್ನು ಗಮನದಲ್ಲಿಟ್ಟುಕೊಂಡು ವರದಿಯನ್ನು ತಿರಸ್ಕರಿಸಿ ಕೇಂದ್ರ ಸರ್ಕಾರಕ್ಕೆ ಕಳಿಸಿಕೊಟ್ಟಿತ್ತು.

ಆದ್ದರಿಂದ ಪ್ರಸ್ತುತ ತಮ್ಮ ರಾಜ್ಯ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು. ಮತ್ತೆ ಈ ವರದಿ ವಿಚಾರದಲ್ಲಿ ತಮ್ಮ ನಿಲುವನ್ನು ಸಡಿಲಗೊಳಿಸುವ ಕಾರ್ಯಕ್ಕೆ ರಾಜ್ಯ ಸರ್ಕಾರ ಕೈ ಹಾಕಿದಲ್ಲಿ ಕಸ್ತೂರಿ ರಂಗನ್ ವರದಿಯ ಪರಿಣಾಮ ಎದುರಿಸುವ ಎಲ್ಲಾ ಜಿಲ್ಲೆಗಳ ನಾಗರಿಕರನ್ನು ಸಂಘಟಿಸಿ ಹೋರಾಟವನ್ನು ತೀವ್ರಗೊಳಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗದಂತೆ ಕ್ರಮವಹಿಸಬೇಕು ಎಂದು ಈ ಮೂಲಕ ತಮ್ಮಲ್ಲಿ ತೀರ್ಥಹಳ್ಳಿ ಬಿಜೆಪಿ ನಾಯಕರು ಅಗ್ರಹಿಸಿದರು.
ಪ್ರಮುಖ ನಾಯಕರಾದ ಮದನ್, ಅಶೋಕಮೂರ್ತಿ, ಬೇಗುವಳ್ಳಿ ಸತೀಶ್, ರಾಘವೇಂದ್ರ ಬಾಳೆಬೈಲು, ಸಾಲೆಕೊಪ್ಪ ರಾಮಚಂದ್ರ, ಸೋಮಶೇಖರ್ ಚಂದವಳ್ಳಿ, ರಕ್ಷಿತ್ ಮೇಗರವಳ್ಳಿ, ಡಾಕಮ್ಮ, ಗೀತಾ ಶೆಟ್ಟಿ ಇತರರು ಇದ್ದರು.

ಕಸ್ತೂರಿ ರಂಗನ್ ವರದಿ ಜಾರಿಗೆ ಬಿಡುವುದಿಲ್ಲ: ಆರಗ

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಆರಗ ಜ್ಞಾನೇಂದ್ರ, ಕಸ್ತೂರಿರಂಗನ್ ಒಬ್ಬ ವಿಶ್ವವಿಜ್ಞಾನಿ ಅವರು ಫಾರೆಸ್ಟ್ ವಿಜ್ಞಾನಿ ಅಲ್ಲ. ಯಾವುದೇ ಕಾರಣಕ್ಕೂ ಈ ವರದಿ ಜಾರಿಗೆ ಬಿಡುವುದಿಲ್ಲ. ಜನರಿಗಾಗಿ ಬೀದಿಗೆ ಇಳಿಯುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷವನ್ನು ಕೊಡಗಿನಲ್ಲಿ ನಿಮಗೆ ಎರಡಕ್ಕೆ ಎರಡು ಸ್ಥಾನ ಗೆಲ್ಲಿಸಿದ್ದಾರೆ, ಚಿಕ್ಕಮಗಳೂರಿನಲ್ಲಿ ಗೆಲ್ಲಿಸಿದ್ದಾರೆ, ಶಿವಮೊಗ್ಗ ಜಿಲ್ಲೆಯಲ್ಲೂ ಕೂಡ ಕಾಂಗ್ರೆಸ್ ಮೂರು ಗೆದ್ದಿದೆ, ನೀವು ಕಸ್ತೂರಿ ರಂಗನ್ ವರದಿ ಜಾರಿ ಮಾಡುತ್ತೇವೆ ಎಂದು ಹೇಳಿ ಬನ್ನಿ ನೀವು. ಊರಿಗೆ ಸೇರಿಸುವುದಿಲ್ಲ ಜನ. ಏನು ತಿಳಿದುಕೊಂಡಿದ್ದೀರಿ ನೀವು? ಇವತ್ತು ನೂರಾರು ಕುಟುಂಬಗಳು ಹಿಂದೂ ಧರ್ಮದಿಂದ ಮತಾಂತರ ಆಗುತ್ತಿದೆ. ಎಲ್ಲವನ್ನು ಹೇರಿಕೆ ಮಾಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಕಸ್ತೂರಿರಂಗನ್ ವರದಿ ಜಾರಿಗೆ ಬರಬಾರದು ಎಂದರು.

ಇದನ್ನೂ ಓದಿ : ಕಾಳುಮೆಣಸು ಬೆಳೆಗಾರರಿಗೆ ಬಂಪರ್!

HOW TO APPLY : NEET-UG COUNSELLING 2023

Categories
ಮಲ್ನಾಡ್

ಪ್ರವಾಸ ಸಂಕಟ: ಕೊಡಚಾದ್ರಿಗೆ ಪ್ರವೇಶ ನಿರ್ಬಂಧ!

ಪ್ರವಾಸ ಸಂಕಟ: ಕೊಡಚಾದ್ರಿಗೆ ಪ್ರವೇಶ ನಿರ್ಬಂಧ!
– ಮುಳ್ಳಯ್ಯನಗಿರಿ ವೀಕ್ಷಣೆಗೆ ವಿಧಿಸಿದ್ದ ನಿರ್ಬಂಧ ತೆರವು
– ಕೊಲ್ಲೂರು ಸುತ್ತ ಮುತ್ತ ಸೇರಿ ಹಲವು ಕಡೆ ಎಂಟ್ರಿ ಇಲ್ಲ

NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು ಹಳ್ಳ- ಕೊಳ್ಳಜಲಪಾತಗಳಲ್ಲಿ ನೀರು ಧುಮ್ಮಿಕ್ಕುತ್ತಿದೆ. ನಿರಂತರ ಮಳೆಯಿಂದ ಭೂ ಕುಸಿತ ಗಳೂ ಘಟಿಸುತ್ತಿವೆ. ಪ್ರವಾಸಿ ತಾಣಗಳಿಗೆ ತೆರಳುವವರು ಸ್ಥಳದ ಸೂಕ್ತ ಪರಿಚಯ ಇಲ್ಲದ ಅನಾಹುತಗಳಿಗೆ ಈಡಾಗಿ ಸಾವು- ನೋವುಗಳು ಸಂಭವಿಸುತ್ತಿರುವುದನ್ನು ತಡೆಯುವ ಉದ್ದೇಶದಿಂದ ಕುದುರೆ ಮುಖ ವನ್ಯಜೀವಿ ವಿಭಾಗವು ಕೊಡಚಾದ್ರಿ ಗಿರಿಶಿಖರಕ್ಕೆ ತಾತ್ಕಾಲಿಕವಾಗಿ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿದೆ.
ಕೊಡಚಾದ್ರಿ ಶಿಖರದ ಮಾರ್ಗದಲ್ಲಿ ಸಣ್ಣ ಸಣ್ಣ ಜಲಪಾತಗಳು ಸೃಷ್ಟಿಯಾಗಿ ನೀರು ಮಾರ್ಗದ ಮೇಲೂ ಬರುತ್ತದೆ. ಭೂ ಕುಸಿತಗಳಾಗುವ ಸಾಧ್ಯತೆಯೂ ಜಾಸ್ತಿ ಇರುವುದರಿಂದ ಪ್ರವಾಸಿಗರ ಹಿತದೃಷ್ಟಿಯಿಂದ ಪ್ರವೇಶ ನಿರ್ಬಧಿಸಿ ಆದೇಶ ಪ್ರಕಟಿಸಲಾಗಿದೆ. ಇದರಿಂದ ಸಹಜವಾಗಿ ಚಾರಣಿಗರಿಗೆ, ಪ್ರವಾಸಿ ಗರಿಗೆ ನಿರಾಶೆಯಾದರೆ ಇಲ್ಲಿ ಪ್ರವಾಸೋದ್ಯಮವನ್ನು ಅವಲಂಬಿಸಿರುವ ಜೀಪ್ ಮಾಲೀಕರು, ಚಾಲಕರು, ಹೋಟೆಲ್,ಹೋಂ ಸ್ಟೇ ಮಾಲೀಕರು, ವ್ಯಾಪಾರಸ್ಥರು ನಷ್ಟದ ಆತಂಕದಲ್ಲಿದ್ದಾರೆ.

ಮುಳ್ಳಯ್ಯನಗಿರಿ, ದತ್ತಪೀಠ ವೀಕ್ಷಣೆಗೆ ವಿಧಿಸಿದ್ದ ನಿರ್ಬಂಧ ತೆರವು

ಮಲೆನಾಡಿನಲ್ಲಿ ಮಳೆಯ ಪ್ರಮಾಣ ತಗ್ಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳಾಗಿರುವ ಮುಳ್ಳಯ್ಯನಗಿರಿ, ದತ್ತಪೀಠ ಸೇರಿದಂತೆ ಗಿರಿ ಪ್ರದೇಶಗಳ ವೀಕ್ಷಣೆಗೆ ಜಿಲ್ಲಾಡಳಿತ ವಿಧಿಸಿದ್ದ ನಿರ್ಬಂಧವನ್ನು ತೆರವುಗೊಳಿಸಲಾಗಿದೆ.
ಕೆಲ ದಿನಗಳ ಹಿಂದೆ ಮುಳ್ಳಯ್ಯನ ಗಿರಿ ಸಾಲಿನಲ್ಲಿ ಧರೆ ಕುಸಿತ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಮುಳ್ಳಯ್ಯನಗಿರಿ, ದತ್ತಪೀಠ ಸೇರಿದಂತೆ ಗಿರಿ ಪ್ರದೇಶಗಳಿಗೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು.ಇದೀಗ ಮಳೆ ತಗ್ಗಿರುವುದರಿಂದ ಸೋಮವಾರದಿಂದ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ತೆರಳಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

ಹಿಡ್ಲುಮನೆ ಜಲಪಾತಕ್ಕೂ ನಿಷೇಧ!

ಕೊಲ್ಲೂರು ವನ್ಯಜೀವಿ ವಲಯದಲ್ಲಿ ಅತೀಯಾದ ಮಳೆಯಿಂದಾಗಿ ಹಿಡ್ಲುಮನೆ ಜಲಪಾತದಲ್ಲಿ ನೀರಿನ ರಭಸ ಜಾಸ್ತಿಯಾಗಿರುವುದರಿಂದ ತುಂಬಾ ಅಪಾಯಕಾರಿಯಾಗಿದ್ದು, ಪ್ರವೇಶವನ್ನು ನಿಷೇದಿಸಲಾಗಿದೆ.

ಇದನ್ನೂ ಓದಿ : ಕಾಳುಮೆಣಸು ಬೆಳೆಗಾರರಿಗೆ ಬಂಪರ್!

HOW TO APPLY : NEET-UG COUNSELLING 2023

Categories
ಮೈಸೂರು

ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮಕ್ಕೆ ಸಜ್ಜು!

ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮಕ್ಕೆ ಸಜ್ಜು!
– ಅ.15ರಂದು ದಸರಾಗೆ ಅದ್ದೂರಿ ಚಾಲನೆ
– ದಸರಾದಲ್ಲಿ ಏನೇನು ಇರಲಿದೆ…? ಇಲ್ಲಿದೆ ಡೀಟೇಲ್ಸ್

NAMMUR EXPRESS NEWS
ಮೈಸೂರು : ( Mysore Dasara ) ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಅ.15 ರಂದು ಅದ್ದೂರಿಯಾಗಿ ಚಾಲನೆ ನೀಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ವಿಧಾನಸೌಧದಲ್ಲಿ ನಡೆದ ದಸರಾ ಪೂರ್ವಭಾವಿ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು. ಈ ಬಾರಿ ಅದ್ದೂರಿಯಾಗಿ ದಸರಾ ಆಚರಣೆ ನಡೆಸಲು ತೀರ್ಮಾನಿಸಲಾಗಿದೆ. ದಸರಾದಲ್ಲಿ ಪ್ರಮುಖವಾಗಿ ದೀಪಾಲಂಕಾರ ಇರುತ್ತದೆ ಎಂದರು. ಈ ಬಾರಿ ದೀಪಾಲಂಕಾರ ದಸರಾ ಉದ್ಘಾಟನೆಯಾದ ದಿನದಿಂದ ದಸರಾ ಮುಗಿಯುವವರೆಗೂ ಹಾಗೂ ನಂತರ ಒಂದು ವಾರದವವರೆಗೆ ದೀಪಾಲಂಕಾರ ಇರಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು.

ದಸರಾ ಸ್ಥಬ್ದಚಿತ್ರದಲ್ಲಿ ರಾಜ್ಯದ ಪರಂಪರೆ, ಜಿಲ್ಲಾ ವಿಶೇಷತೆ ಹಾಗೂ ನಮ್ಮ ಸರ್ಕಾರದ ಐದು ಗ್ಯಾರಂಟಿ ಸ್ಥಬ್ಧ ಚಿತ್ರ ಇರಲಿವೆ. ಅಕ್ಟೋಬರ್ 15ರಂದು ದಸರಾ ಮಹೋತ್ಸವ ಉದ್ಘಾಟನೆ ಆಗಲಿದೆ. ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ದಸರಾ ಉದ್ಘಾಟನೆ ಆಗುತ್ತೆ. ವಸ್ತು ಪ್ರದರ್ಶನ ಕೂಡ ಅಂದೇ ಆರಂಭ ಆಗಲಿದೆ. ಈ ಬಾರಿಯ ಮೈಸೂರು ದಸರಾ ವೇಳೆ ಏರ್ ಶೋ ನಡೆಸುವ ಚಿಂತನೆ ಇದ್ದು, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಜೊತೆ ಈ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ವಿಶ್ವವಿಖ್ಯಾತ ಮೈಸೂರು ದಸರಾ ಮೆರವಣಿಗೆಯಲ್ಲಿ ಕಾಂಗ್ರೆಸ್ ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಗಳ ಸ್ಥಬ್ಧ ಚಿತ್ರಗಳು ಕೂಡ ರಾರಾಜಿಸಲಿವೆ.ಶಕ್ತಿ ಯೋಜನೆ, ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಯುವನಿಧಿ ಗ್ಯಾರಂಟಿ ಯೋಜನೆಗಳ ಸ್ತಬ್ದ ಚಿತ್ರಗಳು ಈ ಬಾರಿ ದಸರಾ ಮೆರವಣಿಗೆಯಲ್ಲಿ ಇರಲಿವೆ ಎಂದು ಹೇಳಿದ್ದಾರೆ. ಅರ್ಥಪೂರ್ಣವಾಗಿ ಮತ್ತು ಅದ್ದೂರಿಯಾಗಿ ದಸರಾ ಮಹೋತ್ಸವ ಆಚರಿಸಲು ಸದಸ್ಯರು ಸಲಹೆ ನೀಡಿದ್ದಾರೆ. ಮೈಸೂರು ದಸರಾ ಉದ್ಘಾಟಕರ ಆಯ್ಕೆಯ ಬಗ್ಗೆ ನನಗೆ ಹೊಣೆ ನೀಡಿದ್ದಾರೆ. ದಸರಾ ಪೂರ್ವಭಾವಿ ಸಭೆಯಲ್ಲಿ ಒಬ್ಬರ ಹೆಸರಿನ ಕುರಿತು ಚರ್ಚೆ ಮಾಡಿದ್ದೇವೆ. ಕೆಆರ್ ಕ್ಷೇತ್ರದ ಶಾಸಕ ಸುತ್ತೂರು ಶ್ರೀಗಳ ಹೆಸರು ಪ್ರಸ್ತಾಪಿಸಿದ್ದಾರೆ. ಆದರೆ, ಮೈಸೂರು ದಸರಾ ಉದ್ಘಾಟಕರ ಹೆಸರು ಅಂತಿಮವಾಗಿಲ್ಲ. ಮುಂದೆ ಚರ್ಚೆ ನಡೆಸಿ ಯಾರು ದಸರಾ ಉದ್ಘಾಟಿಸಬೇಕೆಂದು ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

ಇದನ್ನೂ ಓದಿ : ಕಾಳುಮೆಣಸು ಬೆಳೆಗಾರರಿಗೆ ಬಂಪರ್!

HOW TO APPLY : NEET-UG COUNSELLING 2023

Categories
ಮಾಹಿತಿ

ಕಾಳುಮೆಣಸು ಬೆಳೆಗಾರರಿಗೆ ಬಂಪರ್!

ಕಾಳುಮೆಣಸು ಬೆಳೆಗಾರರಿಗೆ ಬಂಪರ್!
– 6 ವರ್ಷಗಳ ಬಳಿಕ 60,000 ರೂ. ಗಡಿ ದಾಟಿತು ದರ
– ರೈತರಿಗೆ ಖುಷ್: ಇನ್ನಷ್ಟು ಬೆಳೆಯಲು ಆಸಕ್ತಿ!

NAMMUR EXPRESS NEWS
‘ಕಪ್ಪು ಬಂಗಾರ’ ಎಂದೇ ಕರೆಯಲ್ಪಡುವ ಕಾಳು ಮೆಣಸು ಬೆಳಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ. 6 ವರ್ಷಗಳ ಬಳಿಕ ಮತ್ತೆ 60,000 ರೂಪಾಯಿ ಗಡಿ ದಾಟಿದ್ದು, ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಳವಾಗಬಹುದೆಂಬ ನಿರೀಕ್ಷೆಯಲ್ಲಿ ಬೆಳೆಗಾರರಿದ್ದಾರೆ. ಎಂಟು ದಿನಗಳ ಹಿಂದಿನವರೆಗೂ ಪ್ರತಿ ಕ್ವಿಂಟಾಲ್ ಗೆ 45,000 ರೂಪಾಯಿಗಳಿಂದ 49,000 ರೂಪಾಯಿ ಆಸುಪಾಸಿನಲ್ಲಿದ್ದ ಕಾಳು ಮೆಣಸಿನ ದರ ಸೋಮವಾರದಂದು ಶಿರಸಿ ಮಾರುಕಟ್ಟೆಯಲ್ಲಿ 61,599 ರೂಪಾಯಿಗೆ ಟೆಂಡರ್ ಆಗಿದೆ.

ಇದು ಕಾಳುಮೆಣಸು ದಾಸ್ತಾನು ಮಾಡಿದ್ದ ಬೆಳೆಗಾರರಿಗೆ ಸಂತಸ ತಂದಿದೆ. ಆರು ವರ್ಷಗಳ ಹಿಂದೆ ಅಂದರೆ 2017ರಲ್ಲಿ ಕಾಳುಮೆಣಸಿಗೆ ಇದಕ್ಕಿಂತ ಹೆಚ್ಚಿನ ಬೆಲೆ ಸಿಕ್ಕಿತೆಂದು ಹೇಳಲಾಗಿದ್ದು, ಇದಾದ ಬಳಿಕ ಮತ್ತೆ ಕಾಳುಮೆಣಸಿಗೆ ಬಂಗಾರದ ಬೆಲೆ ಬಂದಿದೆ. ಕಾಳುಮೆಣಸಿಗೆ ಇದುವರೆಗೆ ಸೂಕ್ತ ಬೆಲೆ ಸಿಗದೇ ನಿರಾಸೆಗೊಂಡಿದ್ದ ಬೆಳೆಗಾರರಿಗೆ ಈಗ ನಡೆಯುತ್ತಿರುವ ಬೆಳವಣಿಗೆ ಖುಷಿ ಮೂಡಿಸಿದೆ.

ಇದನ್ನೂ ಓದಿ : ಅಡಿಕೆ ದರ ಎಷ್ಟಿದೆ…ಹೆಚ್ಚಾಯ್ತಾ..? ಕಡಿಮೆ ಆಯ್ತಾ?

HOW TO APPLY : NEET-UG COUNSELLING 2023

Categories
ರಾಜ್ಯ

ಧರ್ಮಸ್ಥಳ ಬಗ್ಗೆ ವಿವಾದಿತ ಹೇಳಿಕೆ ನೀಡಿದ ದುನಿಯಾ ವಿಜಯ್!

ಧರ್ಮಸ್ಥಳ ಬಗ್ಗೆ ವಿವಾದಿತ ಹೇಳಿಕೆ ನೀಡಿದ ದುನಿಯಾ ವಿಜಯ್!
– ಸೌಜನ್ಯ ಕೊಲೆ ಪ್ರಕರಣ: ನ್ಯಾಯ ಸಿಗುವವರೆಗೂ ಧರ್ಮಸ್ಥಳ ಮಂಜುನಾಥನ ದರ್ಶನ ಮಾಡಕೂಡದು ಅನ್ನಿಸುತ್ತಿದೆ- ನಟ ದುನಿಯಾ ವಿಜಯ್

NAMMUR EXPRESS
( Soujanya case ) ಸೌಜನ್ಯ ಕೊಲೆ ಪ್ರಕರಣದ ನ್ಯಾಯ ಸಿಗುವವರೆಗೂ ಧರ್ಮಸ್ಥಳ ಮಂಜುನಾಥನ ದರ್ಶನ ಮಾಡಕೂಡದು ಅನ್ನಿಸುತ್ತಿದೆ ಎಂದು ನಟ ದುನಿಯಾ ವಿಜಯ್ ( Duniya Vijay )  ವಿವಾದಿತ ಹೇಳಿಕೆ ನೀಡಿದ್ದಾರೆ. ದುನಿಯಾ ವಿಜಯ್ ಈ ಬಗ್ಗೆ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಅವರು, ಪ್ರತಿ ವರ್ಷ ಧರ್ಮಸ್ಥಳದ ದರ್ಶನ ಪಡೆಯುವುದು ವಾಡಿಕೆಯಾಗಿತ್ತು, ಆದರೆ ಸೌಜನ್ಯಳ ಪ್ರಕರಣದ ಇಂದಿನ ಬೆಳವಣಿಗೆ ನೋಡಿ ಸೌಜನ್ಯ ಮತ್ತು ಕುಟುಂಬಸ್ಥರಿಗೆ ನ್ಯಾಯ ಸಿಗುವವರೆಗೂ ಮಂಜುನಾಥನ ದರ್ಶನ ಮಾಡಕೂಡದು ಅನಿಸುತ್ತಿದೆ.ಸತ್ಯ ಎಂಬುದು ಸೂರ್ಯನ ಬೆಳಕಿದಂತೆ ಯಾರು ಹೆಚ್ಚು ಸಮಯ ಮರೆಮಾಚಲಾಗದು – ಬುದ್ಧ ಎಂದು ಹೇಳಿದ್ದಾರೆ ಎನ್ನುವ ಬರಹದಡಿ ಇಟ್ಟು ಶೇರ್ ಮಾಡಿದ್ದು ಇದೀಗ ವೈರಲ್ ಆಗುತ್ತಿದೆ.

 

ಇದನ್ನೂ ಓದಿ : ಅಡಿಕೆ ದರ ಎಷ್ಟಿದೆ…ಹೆಚ್ಚಾಯ್ತಾ..? ಕಡಿಮೆ ಆಯ್ತಾ?

HOW TO APPLY : NEET-UG COUNSELLING 2023

Categories
ಗದಗ

ಹಿಂದೂ ಮುಸ್ಲಿಂ ಸಾಮರಸ್ಯದ ಹಬ್ಬ!

ಹಿಂದೂ ಮುಸ್ಲಿಂ ಸಾಮರಸ್ಯದ ಹಬ್ಬ!
– ಗದಗದ ಮುಂಡರಗಿಯಲ್ಲಿ ಕತ್ತಲ ರಾತ್ರಿಯ ಮಡಿಕೆ ಖರೀದಿ ಹಬ್ಬ
– ಪಾದಯಾತ್ರೆ ಮುಖಾಂತರ ಬರಿಗಾಲ ನಡಿಗೆ ವಿಶೇಷ!

NAMMUR EXPRESS NEWS
ಗದಗ ಜಿಲ್ಲಾ ಮುಂಡರಗಿ ತಾಲೂಕಿನ ಮಕ್ತುಂಪುರ ಗ್ರಾಮದ ವಾಲ್ಮೀಕಿ ಸಮಾಜ ಬಾಂಧವರು ಹಾಗೂ ಉಪ್ಪಾರ ಸಮಾಜದ ಕಲ್ಲಪ್ಪನವರ ಕುಟುಂಬ ಹಾಗೂ ಅಯ್ಯಪ್ಪನವರ,ಮಕಾಂದಾರ ಕುಟುಂಬವರ್ಗದವರು ಒಗ್ಗಾಟ್ಟಾಗಿ ಬಂದು ಕತ್ತಲ ರಾತ್ರಿಯ ನಿಮಿತ್ಯವಾಗಿ ಮಕ್ತುಂಪೂರ ಗ್ರಾಮದಿಂದ ಮುಂಡರಗಿ ಪಟ್ಟಣಕ್ಕೆ ಬರಿಗಾಲಿನಿಂದ ಪಾದಯಾತ್ರೆಯ ಮುಖಾಂತರ ಮುಂಡರಗಿ ಪಟ್ಟಣಕ್ಕೆ ಬಂದು ಮಡಿಕೆಯನ್ನು ಖರೀದಿಸುವುದು ವಿಶೇಷವಾಗಿತ್ತು. ಸೋಮವಾರ ಕತ್ತಲರಾತ್ರಿ ನಿಮಿತ್ತ ಹೊಸ ಮಡಿಕೆಯಲ್ಲಿ ಜೊಳದ ಕಿಚಡಿಯನ್ನು ತಯಾರಿಸಿ ರಾತ್ರಿ ಸಮಾಜ ಭಾಂದವರು ಕೂಡಿಕೊಂಡು ದೀಡ ನಮಸ್ಕಾರ ಹಾಕುವುದರೊಂದಿಗೆ ಅಲೈ ದೇವರಿಗೆ ನೈವೇದ್ಯ ಅರ್ಪಿಸುವುದು ಹಿಂದಿನಿಂದ ಕಾಲದ ಬಂದ ಪ್ರತೀತಿ.

ಇನ್ನೊಂದು ವಿಶೇಷವೆಂದರೆ ಈ ಹೊಸ ಮಡಿಕೆಯಲ್ಲಿ ಜೋಳದ ಕಿಚಡಿಯನ್ನು ತಯಾರಿಸುವಾಗ ಒಮ್ಮೆ ಹಚ್ಚಿದ ಓಲೆಯು ಆರುವುದೇ ಇಲ್ಲ ಹಾಗೂ ಕಿಚಡಿ ಆಗುವವರೆಗೂ ಒಲೆಯನ್ನು ಸಹ ಊದುವುದಿಲ್ಲ ಅಂತಹ ವಿಶೇಷತೆ ಇದರಲ್ಲಿದೆ
ಕತ್ತಲರಾತ್ರಿ ನಿಮಿತ್ತ ಹೊಸ ಮಡಿಕೆಯ ಖರೀದಿಯನ್ನು ಮಾಡಿ ಪಾದಯಾತ್ರೆ ಮುಖಾಂತರ ಬರಿಗಾಲಿನಿಂದ ತೆಗೆದುಕೊಂಡು ಹೋಗುವುದು ಮುಂಡರಗಿ ಪಟ್ಟಣದಲ್ಲಿ ಕಂಡು ಬಂತು.

ಇದನ್ನೂ ಓದಿ : ಅಡಿಕೆ ದರ ಎಷ್ಟಿದೆ…ಹೆಚ್ಚಾಯ್ತಾ..? ಕಡಿಮೆ ಆಯ್ತಾ?

HOW TO APPLY : NEET-UG COUNSELLING 2023

Categories
ಇತರೆ ಸುದ್ದಿ

ತಾಯಿ ಸೀರೆಯಿಂದ ನೇಣಿಗೆ ಕೊರಳೊಡ್ಡಿದ ಬಾಲಕ!

ತಾಯಿ ಸೀರೆಯಿಂದ ನೇಣಿಗೆ ಕೊರಳೊಡ್ಡಿದ ಬಾಲಕ!
– ಮೊಬೈಲ್ ಚಾರ್ಜರ್ ಕೊಡಿಸದಿದ್ದಕ್ಕೆ ನೇಣಿಗೆ ಶರಣು!
– ತುಮಕೂರು ಜಿಲ್ಲೆಯ ಪಾವಗಡದಲ್ಲಿ ನಡೆದ ಘಟನೆ
– ಟೊಮೆಟೊ ಗಿಡಕ್ಕೆ ಆಸಿಡ್ ಹಾಕಿದ ಕಿಡಿಗೇಡಿಗಳು

NAMMUR EXPRESS NWES
ತುಮಕೂರು: ಮೊಬೈಲ್ ಚಾರ್ಜರ್ ಕೊಡಿಸಲಿಲ್ಲವೆಂದು ಯುವಕನೊಬ್ಬ ನೇಣಿಗೆ ಶರಣಾದ ಘಟನೆ ತುಮಕೂರಿನ ಪಾವಗಡದಲ್ಲಿ ನಡೆದಿದೆ. ಶಾಂತಿ ಎಸ್ ಎಸ್ ಕೆ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ನಿಖಿಲ್ ಗೌ ಭಾನುವಾರ ರಜೆ ಕಾರಣ ಮನೆಯಲ್ಲಿದ್ದ. ತಾಯಿಯ ಬಳಿ ಚಾರ್ಜರ್ ಕೊಡು ಎಂದು ಗಲಾಟೆ ಮಾಡಿದ್ದ.
ಹೆಚ್ಚು ಅನಗತ್ಯದ ವಸ್ತುಗಳನ್ನು ಕೇಳುತ್ತಿದ್ದ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳದೆ ತಾಯಿ ಸುಮ್ಮನಿದ್ದರು.ಹತ್ತಿರದವರ ಮನೆಗೆ ಹೂ ಕಟ್ಟಲು ಹೋಗಿದ್ದ ತಾಯಿ ಮರಳಿ ಬಂದ ನಂತರ ಬಾಗಿಲು ತಟ್ಟಿದಾಗ ಒಳಗಡೆಯಿಂದ ಶಬ್ದ ಬರದ ಕಾರಣ ಅನುಮಾನ ಬಂದು ಗ್ರಾಮಸ್ಥರಿಂದ ಮನೆ ಬಾಗಿಲು ಒಡೆದು ನೋಡಿದಾಗ ತಾಯಿಯ ಸೀರೆಯಿಂದ ನೇಣು ಬಿಗಿದು ಸಾವನ್ನಪ್ಪಿರುವ ಘಟನೆ ಪಾವಗಡ ತಾಲೂಕಿನ ಸಿಂಗರೆಡ್ಡಿ ಹಳ್ಳಿಯಲ್ಲಿ ನಡೆದಿದೆ.

ಟೊಮೆಟೊ ಮೇಲೆ ಆಸಿಡ್ ಹಾಕಿದ ಕಿಡಿಗೇಡಿಗಳು

ಕಷ್ಟಪಟ್ಟು ರೈತ ಬೆಳೆದಿದ್ದ ಟೊಮೆಟೊ ಬೆಳೆಗಳ ಮೇಲೆ ಕಿಡಿಗೇಡಿ ಆಸಿಡ್ ಎರಚಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿಯಯ ಹಂಗ್ರಾಹಳ್ಳಿಯಲ್ಲಿ ಜರುಗಿದೆ. ರೈತ ಮಹದೇವಸ್ವಾಮಿ ಲಕ್ಷಾಂತರ ರೂಪಾಯಿ ಸಾಲ ಮಾಡಿ ಟೊಮೆಟೊ ಬೆಳೆದಿದ್ದು ಎರಡು ಬಾರಿ ಕಟಾವು ಮಾಡಿ ತಮಿಳುನಾಡಿನ ಮಾರುಕಟ್ಟೆಗೆ ಕೊಂಡೊಯ್ದು ಮಾರಾಟ ಮಾಡಿದ್ದಾರೆ. ಸ್ವಲ್ಪ ಮಟ್ಟಿನ ಲಾಭವೂ ಬಂದಿದೆ. ಈಗ ಮತ್ತೊಂದು ಕಟಾವಿಗೆ ಸಿದ್ದವಾಗಿದ್ದ ಟೊಮೆಟೊ ಬೆಳೆ ಮೇಲೆ ಕಿಡಿಗೇಡಿಗಳು ಆಸಿಡ್ ಸಿಂಪಡಿಸಿದ್ದು, ಟೊಮೆಟೊ ಗಿಡ-ಹಣ್ಣುಗಳು ಸುಟ್ಟು ಹೋಗುತ್ತಿವೆ.

ಸುಮಾರು 2500 ಟೊಮೆಟೊ ಗಿಡಗಳ ತುಂಬೆಲ್ಲ ಬೆಳೆಗಳು ಬಂದಿದ್ದವು. ತಮಿಳುನಾಡಿಗೆ ಹೋಗಿ ಟೊಮೆಟೊ ಮಾರಾಟ ಮಾಡಿ ವಾಪಸ್ ಬರುವಷ್ಟರಲ್ಲಿ ದುಷ್ಕರ್ಮಿಗಳು ಟೊಮೆಟೊ ಗಿಡಗಳ ಮೇಲೆ ಆಸಿಡ್ ಮಿಶ್ರಿತ ನೀರು ಎರಚಿದ್ದಾರೆ. ವಾಪಸ್ ಬಂದು ತೋಟಕ್ಕೆ ಹೋದಾಗಲೇ ವಿಷಯ ಗೊತ್ತಾಗಿದೆ. ಟೊಮೆಟೊ ಗಿಡ, ಹಣ್ಣುಗಳು ಒಣಗುತ್ತಿವೆ. ಇದನ್ನು ಕಂಡು ರೈತ ಕಂಗಾಲಾಗಿದ್ದಾನೆ. ಅರ್ಧ ಎಕರೆ ಜಮೀನಿನಲ್ಲಿ ಅಲ್ಲಲ್ಲಿ ಆಸಿಡ್ ಎರಚಲಾಗಿದ್ದು, ಉಳಿದೆಡೆ ಇರುವ ಟೊಮೆಟೊ ಚನ್ನಾಗಿಯೇ ಇದೆ. ಆಸಿಡ್ ದಾಳಿಯಿಂದ ನಾಶವಾಗಿರುವ ಗಿಡಗಳು ಹಾಗೂ ಮಣ್ಣನ್ನು ತಪಾಸಣೆ ನಡೆಸಲು ರೈತ ಮುಂದಾಗಿದ್ದಾರೆ. ಸಾಲಮಾಡಿ ಟೊಮೆಟೊ ಬೆಳೆ ಬೆಳೆದು ಇನ್ನೇನು ಫಸಲು ಕೈಗೆ ಬಂದಿದೆ ಎನ್ನುವಷ್ಟರಲ್ಲಿ ದುಷ್ಕರ್ಮಿಗಳು ಕಳ್ಳತನ, ಆಸಿಡ್ ದಾಳಿಯಂತಹ ಕೃತ್ಯ ನಡೆಸಿ ರೈತರನ್ನು ಕಣ್ಣೀರಲ್ಲಿ ಕೈತೊಳೆಯುವಂತೆ ಮಾಡಿದೆ.

ಇದನ್ನೂ ಓದಿ : ಅಡಿಕೆ ದರ ಎಷ್ಟಿದೆ…ಹೆಚ್ಚಾಯ್ತಾ..? ಕಡಿಮೆ ಆಯ್ತಾ?

HOW TO APPLY : NEET-UG COUNSELLING 2023

Categories
ತೀರ್ಥಹಳ್ಳಿ

ಕಸ್ತೂರಿ ರಂಗನ್ ವರದಿ ಹೇಳಿಕೆ ವಿರುದ್ಧ ಹೋರಾಟ!

ಕಸ್ತೂರಿ ರಂಗನ್ ವರದಿ ಹೇಳಿಕೆ ವಿರುದ್ಧ ಹೋರಾಟ!
– ತೀರ್ಥಹಳ್ಳಿಯಲ್ಲಿ ಶಾಸಕ, ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಪ್ರತಿಭಟನೆ

NAMMUR EXPRESS NEWS
ತೀರ್ಥಹಳ್ಳಿ: ( Thirthahalli )  ರಾಜ್ಯ ಕಾಂಗ್ರೆಸ್ ಸರ್ಕಾರದ ಜವಾಬ್ದಾರಿಯುತ ಸ್ಥಾನದಲ್ಲಿರುವ ಅರಣ್ಯ ಸಚಿವರಾದ ಈಶ್ವರ ಖಂಡ್ರೆಯವರು ಮಲೆನಾಡಿಗರ ಬದುಕಿಗೆ ಮರಣ ಶಾಸನದಂತಿರುವ ಕಸ್ತೂರಿ ರಂಗನ್ ವರದಿ ಜಾರಿಯ ಕುರಿತು ವರದಿ ಜಾರಿಗೊಳಿಸಲು ಪೂರಕವಾದ ಅಭಿಪ್ರಾಯ ವ್ಯಕ್ತ ಪಡಿಸಿರುವುದು ಮಲೆನಾಡಿಗರ ಅದರಲ್ಲೂ ತೀರ್ಥಹಳ್ಳಿ ಕ್ಷೇತ್ರದ ರೈತರ ಬದುಕಿನ ಮೇಲೆ ಮರಣ ಮೃದಂಗ ಬಾರಿಸಿದಂತೆ ಆಗಿದೆ. ಕಾಂಗ್ರೆಸ್ ಸರ್ಕಾರದ ಸಚಿವರ ಈ ಹೇಳಿಕೆ ಹಾಗೂ ಕಾಂಗ್ರೆಸ್ ಸರ್ಕಾರದ ವಿವಿಧ ಜನ ವಿರೋಧಿ ನೀತಿಯನ್ನು ಖಂಡಿಸಿ ತೀರ್ಥಹಳ್ಳಿ ತಾಲೂಕು ಬಿಜೆಪಿ ನೇತೃತ್ವದಲ್ಲಿ ತೀರ್ಥಹಳ್ಳಿ ತಾಲೂಕು ಕಛೇರಿ ಮುಂದೆ ಆಗಸ್ಟ್ 1ರ ಮಂಗಳವಾರ ದಿನ ಬೆಳಿಗ್ಗೆ 11 ಕ್ಕೆ ಶಾಸಕರಾದ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಪ್ರತಿಭಟನಾ ಸಭೆ ಏರ್ಪಡಿಸಲಾಗಿದೆ.

ಇದನ್ನೂ ಓದಿ : ಅಡಿಕೆ ದರ ಎಷ್ಟಿದೆ…ಹೆಚ್ಚಾಯ್ತಾ..? ಕಡಿಮೆ ಆಯ್ತಾ?

HOW TO APPLY : NEET-UG COUNSELLING 2023

Categories
ಬೆಂಗಳೂರು

ಮತ್ತೆ ಮಳೆ ಹೆಚ್ಚಾಗುತ್ತೆ..!

ಮತ್ತೆ ಮಳೆ ಹೆಚ್ಚಾಗುತ್ತೆ..!
– ಕರಾವಳಿ, ಮಲೆನಾಡು ಭಾಗದಲ್ಲಿ ಮಳೆ
– 3-4 ದಿನದಿಂದ ಕಡಿಮೆಯಾದ ಮಳೆ
– ಅಡಿಕೆ ಭತ್ತದ ಕೃಷಿ ಚಟುವಟಿಕೆ ಜೋರು

NAMMUR EXPRESS NEWS
ಬೆಂಗಳೂರು: ಕಳೆದ 3-4 ದಿನಗಳಿಂದ ಮಳೆ ಅಬ್ಬರ ಕೊಂಚ ಕಡಿಮೆ ಆಗಿದೆ. ಒಂದು ವಾರದಲ್ಲಿ ರಾಜ್ಯದಲ್ಲಿ ಅತೀ ಹೆಚ್ಚು ಮಳೆ ಆಗಿತ್ತು. ಈ ನಡುವೆ ಮತ್ತೆ ಮಳೆ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಕರಾವಳಿ ಭಾಗಗಳಲ್ಲಿ ಆಗಸ್ಟ್ 3ರ ನಂತರ ಮತ್ತೆ ಮಳೆಯ ಅಬ್ಬರ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದ್ದು ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.
ಇನ್ನುಳಿದಂತೆ ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ವಿಜಯನಗರ ಜಿಲ್ಲೆಗಳಲ್ಲಿ ಮಳೆಯಾಗಲಿದೆ.

ಅಡಿಕೆ, ಭತ್ತದ ಕೃಷಿ ಚುರುಕು

ಮಳೆ ಕೊಂಚ ಕಡಿಮೆ ಆಗುತ್ತಿದ್ದಂತೆ ಅಡಿಕೆ, ಭತ್ತದ ಕೃಷಿ ಜೋರಾಗಿದೆ. ಎಲ್ಲೆಡೆ ಅಡಿಕೆ ಔಷಧಿ ಸಿಂಪಡಿಸುವ ಕೆಲಸ ಕಂಡು ಬರುತ್ತಿದೆ. ಭತ್ತದ ಗದ್ದೆಗಳಲ್ಲಿ ಸಸಿ, ನೆಟ್ಟಿ ಕೆಲಸ ನಡೆಯುತ್ತಿದೆ.

ಇದನ್ನೂ ಓದಿ : ಅಡಿಕೆ ದರ ಎಷ್ಟಿದೆ…ಹೆಚ್ಚಾಯ್ತಾ..? ಕಡಿಮೆ ಆಯ್ತಾ?

HOW TO APPLY : NEET-UG COUNSELLING 2023