Categories
ಉದ್ಯೋಗ ಸುದ್ದಿ ತೀರ್ಥಹಳ್ಳಿ

ರೂರಲ್ ಶೋರ್ ಬಿಪಿಓದಲ್ಲಿ ಉದ್ಯೋಗ ಅವಕಾಶ

ರೂರಲ್ ಶೋರ್ ಬಿಪಿಓದಲ್ಲಿ ಉದ್ಯೋಗ ಅವಕಾಶ
– ತೀರ್ಥಹಳ್ಳಿಯ ಬೆಟ್ಟಮಕ್ಕಿಯಲ್ಲಿರುವ ಬಿಪಿಓ
– ಯಾವುದೇ ಡಿಗ್ರಿ, ರಾತ್ರಿ ಪಾಳಿ ಕೆಲಸ
– ಸೆ.2 ಸಂದರ್ಶನಕ್ಕೆ ಕೊನೆ ದಿನ

NAMMUR EXPRESS NEWS
ತೀರ್ಥಹಳ್ಳಿ: ರೂರಲ್ ಶೋರ್ ಬಿಪಿಓದಲ್ಲಿ ಉದ್ಯೋಗ ಅವಕಾಶ ಲಭ್ಯವಿದೆ. ತೀರ್ಥಹಳ್ಳಿಯ ಬೆಟ್ಟಮಕ್ಕಿಯಲ್ಲಿರುವ ಬಿಪಿಓದಲ್ಲಿ ನೇಮಕಾತಿ ನಡೆಯುತ್ತಿದ್ದು ಯಾವುದೇ ಡಿಗ್ರಿ, ರಾತ್ರಿ ಪಾಳಿ ಕೆಲಸ ಲಭ್ಯವಿದೆ. ತೀರ್ಥಹಳ್ಳಿ ಹಾಗೂ ಸುತ್ತಮುತ್ತಲಿನ ತಾಲೂಕಿನ ಡಿಗ್ರಿ ಆದವರಿಗೆ ಉದ್ಯೋಗ ಲಭ್ಯವಿದೆ. ಆ.28ರಿಂದ ನೇಮಕಾತಿ ನಡೆಯುತ್ತಿದ್ದು,ಸೆ.2 ಸಂದರ್ಶನಕ್ಕೆ ಕೊನೆ ದಿನವಾಗಿದೆ. ಬೆಟ್ಟಮಕ್ಕಿಯ ಕಚೇರಿಯಲ್ಲಿ ನೇರ ಸಂದರ್ಶನ ನಡೆಯಲಿದೆ.

ಇದನ್ನೂ ಓದಿ : ಮಳೆಗಾಗಿ ಪುಟ್ಟ ಮಕ್ಕಳಿಗೆ ಶಾಸ್ರೋಕ್ತವಾಗಿ ಮದುವೆ ಮಾಡಿದ ಗ್ರಾಮಸ್ಥರು
[embedyt] https://www.youtube.com/watch?v=7aC6PnGPWLU%5B/embedyt%5D

Categories
ಬೆಂಗಳೂರು

ಕೋರ್ಟು ಆದೇಶ ಉಲ್ಲಂಘಿಸಿದ್ರೆ ಹುಷಾರ್..!!

ಕೋರ್ಟು ಆದೇಶ ಉಲ್ಲಂಘಿಸಿದ್ರೆ ಹುಷಾರ್..!!
– ತಿಮ್ಮರೋಡಿಗೆ ಬಿಸಿ ಮುಟ್ಟಿಸಿದ ಹೈಕೋರ್ಟ್
– ಪೋಲಿಸ್ ಉನ್ನತ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ಆದೇಶ

NAMMUR EXPRESS NEWS
ಬೆಂಗಳೂರು : ಸೌಜನ್ಯ ಪ್ರಕರಣಗಳಲ್ಲಿ ಧರ್ಮಸ್ಥಳದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿಗೆ ಕೋರ್ಟು ಆದೇಶ ಉಲ್ಲಂಘಿಸಿದಂತೆ ಎಚ್ಚರಿಕೆ ನೀಡಿದೆ. ಹಾಗೂ ಇದಕ್ಕೆ ತಪ್ಪಿದಲ್ಲಿ ಡಿ.ಜಿ. ಮತ್ತು ಐ.ಜಿ., ಸರಕಾರದ ಮುಖ್ಯ ಕಾರ್ಯದರ್ಶಿ, ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸೇರಿದಂತೆ ಪೋಲಿಸ್ ಉನ್ನತ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ನ್ಯಾಯಲಯ ಆದೇಶ ಹೊರಡಿಸಿದೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಹೆಗ್ಗಡೆ ಕುಟುಂಬಸ್ಥರ ಪರವಾಗಿ ಖ್ಯಾತ ಹಿರಿಯ ನ್ಯಾಯವಾದಿಗಳಾದ ಉದಯ ಹೊಳ್ಳ ಹಾಗೂ ರಾಜಶೇಖರ್ ಹಿಲ್ಯಾರು ವಾದಿಸಿದರು.

ಇದನ್ನೂ ಓದಿ : ಮಳೆಗಾಗಿ ಪುಟ್ಟ ಮಕ್ಕಳಿಗೆ ಶಾಸ್ರೋಕ್ತವಾಗಿ ಮದುವೆ ಮಾಡಿದ ಗ್ರಾಮಸ್ಥರು
[embedyt] https://www.youtube.com/watch?v=7aC6PnGPWLU%5B/embedyt%5D

Categories
ಸಾಗರ

ರಕ್ಷಾಬಂಧನ ಆಚರಣೆಗೆ ಅಡ್ಡಿ ಆರೋಪ

ರಕ್ಷಾಬಂಧನ ಆಚರಣೆಗೆ ಅಡ್ಡಿ ಆರೋಪ
-ಶಾಲೆಯಲ್ಲಿ ರಾಕಿ ಬಿಚ್ಚಿದ ಹಿನ್ನೆಲೆ.
-ಶಾಲೆಗೆ ಭೇಟಿ ನೀಡಿದ ಪೊಲೀಸರು.

ಸಾಗರ : ಸಾಗರದ ಮಂಕಲೆ ರಸ್ತೆಯಲ್ಲಿರುವ ಖಾಸಗಿ ಆಂಗ್ಲ ಮಧ್ಯಮ ಶಾಲೆಯಲ್ಲಿ ರಕ್ಷಾಬಂಧನದ ಪ್ರಯುಕ್ತ ಕೆಲವೊಂದಿಷ್ಟು ಹೆಣ್ಣು ಮಕ್ಕಳು ತಮ್ಮ ಸಹಪಾಠಿಗೆ ರಾಖಿ ಕಟ್ಟಿದ್ದಕ್ಕೆ ರಕ್ಷಾಬಂಧನದ ಹಿನ್ನೆಲೆಯಲ್ಲಿ 9ನೇ ತರಗತಿಯ ವಿದ್ಯಾರ್ಥಿಗಳು ಪರಸ್ಪರ ರಾಖಿ ಕಟ್ಟಿದರು. ಒಬ್ಬ ವಿದ್ಯಾರ್ಥಿನಿ ಎಲ್ಲರ ಎದುರು ವಿದ್ಯಾರ್ಥಿಯೊಬ್ಬನಿಗೆ ರಾಖಿ ಕಟ್ಟಿದ್ದರಿಂದ ವಿದ್ಯಾರ್ಥಿ ಮನನೊಂದು ಶೌಚಾಲಯದ ಕೊಠಡಿಗೆ ತೆರಳಿ ಅಳಲು ಆರಂಭಿಸಿದ್ದಾನೆ ಎನ್ನಲಾಗಿದೆ. ಕಟ್ಟಿಸಿದ್ದ ರಾಖಿಯನ್ನು ಬಿಚ್ಚಿಸಿದ್ದಲ್ಲದೆ, ಮರುದಿನ ಬೆಳಿಗ್ಗೆ 11 ಗಂಟೆಯವರೆಗೂ ವಿದ್ಯಾರ್ಥಿಗಳನ್ನು ಶಾಲೆ ಕೊಠಡಿಯಿಂದ ಹೊರಗೆ ನಿಲ್ಲಿಸುವ ಶಿಕ್ಷೆ ನೀಡಿದ್ದು ಎಷ್ಟು ಸರಿ’ ಎಂದು ಸ್ಥಳದಲ್ಲಿದ್ದವರು ಪ್ರಶ್ನಿಸಿದರು ಶಾಲೆಯ ಮುಖ್ಯೋಪಾಧ್ಯಾಯನಿ ರಾಕಿಯನ್ನ ಬಿಚ್ಚಿಸಿ, ಆ ಮಕ್ಕಳನ್ನ ಒಂದು ವಾರಗಳ ಕಾಲ ಶಾಲೆಯಿಂದ ಸಸ್ಪೆಂಡ್ ಮಾಡುವುದಾಗಿ ಹೆದರಿಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಬೆಳಗ್ಗೆ ವಿದ್ಯಾರ್ಥಿಗಳ ಪೋಷಕರು ಹಾಗೂ ಹಿಂದೂ ಪರ ಸಂಘಟನೆಯ ಮುಖ್ಯಸ್ಥರು ಆವರಣದಲ್ಲಿ ಗಲಾಟೆಯನ್ನು ಮಾಡಿದರು. ಸಾಗರದ ಡಿ ವೈ ಎಸ್ ಪಿ ಗಣಪತಿ ತಿಮ್ಮಪ್ಪ ನಾಯಕ್ ಅವರು ಶಾಲೆಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಂಡರು.

ಇದನ್ನೂ ಓದಿ : ಮಳೆಗಾಗಿ ಪುಟ್ಟ ಮಕ್ಕಳಿಗೆ ಶಾಸ್ರೋಕ್ತವಾಗಿ ಮದುವೆ ಮಾಡಿದ ಗ್ರಾಮಸ್ಥರು
[embedyt] https://www.youtube.com/watch?v=7aC6PnGPWLU%5B/embedyt%5D