Categories
ತೀರ್ಥಹಳ್ಳಿ

ಭಾರತೀಯ ಜೀವ ವಿಮಾ ನಿಗಮ ತೀರ್ಥಹಳ್ಳಿ ಶಾಖೆ: 67ನೇ ವರ್ಷದ ಸಂಭ್ರಮಾಚರಣೆ

ಭಾರತೀಯ ಜೀವ ವಿಮಾ ನಿಗಮ ತೀರ್ಥಹಳ್ಳಿ ಶಾಖೆ: 67ನೇ ವರ್ಷದ ಸಂಭ್ರಮಾಚರಣೆ
– ದೇಶದ ಪ್ರಧಾನ ಹಣಕಾಸು ಸಂಸ್ಥೆಯಾಗಿ ಮಹತ್ವದ ಕೊಡುಗೆ
– ಸೊಪ್ಪುಗುಡ್ಡೆ ವಿಕಲಚೇತನ ಮಕ್ಕಳ ಶಾಲೆಗೆ ಹಣ್ಣು ಹಾಗೂ ಬಿಸ್ಕೆಟ್ ವಿತರಣೆ

NAMMUR EXPRESS NEWS
ತೀರ್ಥಹಳ್ಳಿ : ಭಾರತೀಯ ಜೀವ ವಿಮಾ ನಿಗಮ(ಎಲ್‌ಐಸಿ), 14 ದೇಶಗಳಲ್ಲಿ ಕಾರ್ಯಾಚರಣೆಗಳನ್ನು ಹೊಂದಿರುವ ಪ್ರಮುಖ ಹಣಕಾಸು ಸಂಸ್ಥೆಯಾಗಿದೆ. ಸಂಸ್ಥೆಯು 1956 ಸೆ.01 ಕ್ಕೆ ರಾಷ್ಟ್ರೀಕರಣಗೊಂಡಿದ್ದು, ಇಂದು 67ನೇ ವರ್ಷಕ್ಕೆ ಕಾಲಿಟ್ಟು ದೇಶದ ಪ್ರಧಾನ ಹಣಕಾಸು ಸಂಸ್ಥೆಯಾಗಿ ಮಹತ್ವದ ಕೊಡುಗೆಯನ್ನು ನೀಡುತ್ತಿದೆ. ಸಂಸ್ಥೆಯು ರಾಷ್ಟ್ರೀಕರಣಗೊಂಡ ನಂತರ ಪ್ರತಿ ವರ್ಷ ಸೆ.01 ರಿಂದ ಸೆ.07 ರ ವರೆಗೆ ಸಂಸ್ಥೆಯಲ್ಲಿ ವಿಮಾ ಸಪ್ತಾಹ ಎಂದು ಆಚರಣೆ ಮಾಡಲಾಗುವುದು. ಇದು ಒಂದು ಆರ್ಥಿಕ ಸಂಸ್ಥೆಯಾಗಿದ್ದರೂ ಕೂಡ ಕೆಲವೊಂದು ಸಮಾಜಮುಖಿಯಾಗಿರುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿರುವಂತಹ ಸಂಸ್ಥೆಯಾಗಿದೆ.

1956ರಲ್ಲಿ 5 ಕೋಟಿ ರೂ.ಗಳ ಆರಂಭಿಕ ಬಂಡವಾಳದೊಂದಿಗೆ ಪ್ರಾರಂಭವಾದ ಎಲ್‌ಐಸಿ, ಈಗ 42,30,616 ಕೋಟಿ ರೂ.ಗಳ ಆಸ್ತಿಯನ್ನು ಹೊಂದಿದೆ. ವಿಮಾ ಕ್ಷೇತ್ರದಲ್ಲಿ ಕಂಪನಿಯು ಮಾರುಕಟ್ಟೆಯ ನಾಯಕನಾಗಿ ಉಳಿದಿದೆ. ಮಾರುಕಟ್ಟೆಯ ಬಹುಪಾಲು ಪಾಲನ್ನು ಅಂದರೆ ಶೇ.63.25ರಷ್ಟನ್ನು ತನ್ನದಾಗಿಸಿಕೊಂಡಿದೆ. 8 ವಲಯ ಕಚೇರಿಗಳು, 113 ವಿಭಾಗೀಯ ಕಚೇರಿಗಳು, 74 ಗ್ರಾಹಕ ವಲಯಗಳು, 2,048 ಶಾಖಾ ಕಚೇರಿಗಳು, 1548 ಉಪಗ್ರಹ ಶಾಖೆಗಳು, 44,900 ಪ್ರೀಮಿಯಂ ಪಾಯಿಂಟ್‌ಗಳು ಮತ್ತು ಲೈಫ್ ಪ್ಲಸ್ ಕಚೇರಿಗಳು, ಒಂದು ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು, 13.26 ಲಕ್ಷ ಏಜೆಂಟರನ್ನು ಎಲ್‌ಐಸಿ ಹೊಂದಿದ್ದು, ಗ್ರಾಹಕರಿಗೆ ಅತ್ಯುತ್ತಮ ಸೇವೆಗಳನ್ನು ಒದಗಿಸುತ್ತಿದೆ. ಸುಮಾರು 98 ಸಾವಿರದಷ್ಟು ಸಿಬ್ಬಂದಿಗಳನ್ನು ಹೊಂದಿರುವಂತಹ ಒಂದು ಬೃಹತ್ ಆರ್ಥಿಕ ಸಂಸ್ಥೆ ಇದಾಗಿದೆ.

ತೀರ್ಥಹಳ್ಳಿ ಶಾಖೆ ಪ್ರತಿ ಕಚೇರಿಯಲ್ಲಿ ವರ್ಷವೂ ಕೂಡ ವಿಮಾಸಪ್ತಹದಲ್ಲಿ ಕಾರ್ಯಕ್ರಮದ ಉದ್ಘಾಟನೆಯನ್ನು ಫಸ್ಟ್ ಕಸ್ಟಮರ್ಸ್ ಮೂಲಕ ಮಾಡಲಾಗುವುದು, ಈ ಬಾರಿಯೂ ಕೂಡ ಫಸ್ಟ್ ಕಸ್ಟಮರ್ ಆದ ಉಮೇಶ್ ಹಾಗೂ ನೀಲಮ್ಮ ಅವರಿಂದ ಜ್ಯೋತಿಯನ್ನು ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ವಿಮಾ ಸಪ್ತಹ ಜನರಿಗೆ ತಲುಪಬೇಕು ಎಂಬ ಉದ್ದೇಶದಿಂದ ಈ ಬಾರಿ ವಿಶೇಷವಾಗಿ ಕಾಲ್ನಡಿಗೆ ಜಾತ ಮಾಡಲಾಯಿತು. ಹಾಗೂ ಸೊಪ್ಪುಗುಡ್ಡೆ ಸರ್ಕಾರಿ ಶಾಲೆಯ ವಿಕಲಚೇತನ ಮಕ್ಕಳ ಶಾಲೆಗೆ ಹಣ್ಣು ಹಾಗೂ ಬಿಸ್ಕೆಟ್ ಗಳನ್ನು ನೀಡಲಾಯಿತು. ಮುಖ್ಯ ಅತಿಥಿಗಳಾಗಿ ಆಕ್ಸಿಸ್ ಬ್ಯಾಂಕ್ ಮ್ಯಾನೇಜರ್ ಸತೀಶ್ ಕಾರ್ಯಕ್ರಮಕ್ಕೆ ಆಗಮಿಸಿದ್ದರು, ಕಾರ್ಯಕ್ರಮದಲ್ಲಿ ಸಿಬ್ಬಂದಿ ವರ್ಗ ಹಾಗೂ ಪ್ರತಿನಿಧಿಗಳು ಹಾಗೂ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.

ಶನಿವಾರದ ಕಾರ್ಯಕ್ರಮದಲ್ಲಿ ತೀರ್ಥಹಳ್ಳಿಯಿಂದ ಎಲ್ಲಿವರೆಗೆ ಸಾಧ್ಯವೋ ಅಲ್ಲಿಯವರೆಗೆ ಕಾಲ್ನಡಿಗೆ ಅಥವಾ ವೆಹಿಕಲ್ ನಲ್ಲಿ ಹೋಗಿ ಅಲ್ಲಿರುವಂತಹ ತ್ಯಾಜ್ಯ ವಸ್ತುಗಳು ಹಾಗೂ ಪ್ಲಾಸ್ಟಿಕ್ ವಸ್ತುಗಳ ಶೇಖರಣೆ ಮಾಡಿ ಅವಶ್ಯಕತೆ ಇರುವಲ್ಲಿ ನೆಲ್ಲಿ ಮರಗಳನ್ನು ನೆಡುವ ಕಾರ್ಯಕ್ರಮ ಇರುತ್ತದೆ. ಹಾಗೂ ಸಮಾಜದಲ್ಲಿ ವಿಶೇಷವಾದ ಕಾರ್ಯವನ್ನು ಮಾಡಿರುವಂತಹ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಸನ್ಮಾನ ಮಾಡುವಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹಾಗೂ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ, ಸಂಗೀತ ಸ್ಪರ್ಧೆ, ಆಶುಭಾಷಣ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಶಿಕ್ಷಕರ ದಿನಾಚರಣೆಯಂದು ಪ್ರತಿನಿಧಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿರುತ್ತದೆ. ಕೊನೆಯ ದಿನ ಸಮರೂಪ ಸಮಾರಂಭ ನಡೆಯಲಿದೆ.

ಇದನ್ನೂ ಓದಿ : ಹೊದಲಾದಲ್ಲಿ ಅಪರೂಪದ ಕೆನ್ನಾಯಿಯ ಗುಂಪು ಪತ್ತೆ!!!

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

– ಹೊನ್ನಾವರ: ಮೀನುಗಾರಿಕೆ ವೇಳೆ ದೋಣಿ ದುರಂತ – ಯುವಕನೋರ್ವ ಸಮುದ್ರಪಾಲು
– ಕುಂದಾಪುರ: ಬದುಕಿ ಬಾಳಬೇಕಾದ ವಿದ್ಯಾರ್ಥಿನಿ ನೇಣಿಗೆ ಶರಣು
– ಬಂಟ್ವಾಳ: ಮಟ್ಕಾ ಅಡ್ಡಕ್ಕೆ ಪೊಲೀಸ್ ದಾಳಿ: ಮೂವರ ಬಂಧನ
– ಮಂಗಳೂರು: ಫುಟ್‌ಬೋರ್ಡ್ ಪ್ರಯಾಣದ ವಿರುದ್ಧ ಮಂಗಳೂರಿನಲ್ಲಿ ಪೊಲೀಸರ ಅಭಿಯಾನ; 123 ಕೇಸ್
– ಬೆಳ್ತಂಗಡಿ : ಖ್ಯಾತ ಕಬಡ್ಡಿ ಆಟಗಾರ ನೇಣು ಶರಣು..!
– ಬೆಳ್ತಂಗಡಿ :ಕಬಡ್ಡಿ ಆಟಗಾರ ಆತ್ಮಹತ್ಯೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್

ಹೊನ್ನಾವರ : ಮೀನುಗಾರಿಕೆ ವೇಳೆ ದೋಣಿ ಮುಳುಗಿ ಯುವಕನೋರ್ವ ಸಮುದ್ರಪಾಲದ ಘಟನೆ ಹೊನ್ನಾವರ ತಾಲೂಕಿನ ಕಾಸರಗೋಡಿನ ಶರಾವತಿ ನದಿ ಸೇರುವ ಸಂಗಮ ಪ್ರದೇಶದಲ್ಲಿ ನಡೆದಿದೆ. ಸಮುದ್ರದಲ್ಲಿ ನಾಪತ್ತೆಯಾದ ಮೀನುಗಾರ ಪ್ರಜ್ವಲ್ ಮಾಬ್ಲ ಖಾರ್ವಿ(19) ಎಂದು ತಿಳಿದು ಬಂದಿದೆ. ಕಾಸರಕೋಡನ ಇಬ್ಬರು ಮೀನುಗಾರರು ದೋಣಿ ಮೂಲಕ ಮೀನುಗಾರಿಕೆ ತೆರಳಿದಾಗ ಆಕಸ್ಮಿಕವಾಗಿ ದೋಣಿ ಮುಳುಗಿದೆ. ಮೀನುಗಾರಿಕೆಗೆ ತೆರಳಿದ್ದ ಇಬ್ಬರು ಮೀನುಗಾರರ ಪೈಕಿ ಪ್ರಜ್ವಲ್ ಮಾಬ್ಲ ಖಾರ್ವಿ ನಾಪತ್ತೆಯಾಗಿದ್ದು ಇನೊರ್ವ ಮೀನುಗಾರರಾದ ರಾಜು ಶೇಷಗಿರಿ ತಾಂಡೇಲ್ ಅಪಾಯದಿಂದ ಪಾರಾಗಿದ್ದಾರೆ. ನಾಪತ್ತೆಯಾದ ಯುವಕನ ಪತ್ತೆಗಾಗಿ ಅಗ್ನಿಶಾಮಕ ಪೊಲೀಸ್ ಸಿಬ್ಬಂದಿಗಳು ಮತ್ತು ಮೀನುಗಾರರು ಶೋಧ ಕಾರ್ಯ ಮುಂದುವರೆಸಿದ್ದಾರೆ

ಕುಂದಾಪುರ: ಬದುಕಿ ಬಾಳಬೇಕಾದ ವಿದ್ಯಾರ್ಥಿನಿ ನೇಣಿಗೆ ಶರಣು

ಕುಂದಾಪುರ: ಹತ್ತನೇ ತರಗತಿ ವಿದ್ಯಾರ್ಥಿನಿಯೋರ್ವಳು ನೇಣಿಗೆ ಶರಣಾದ ಘಟನೆ ಕುಂದಾಪುರದ ಪಡುಕೋಣೆ ಎಂಬಲ್ಲಿ ನಡೆದಿದೆ. ಪಡುಕೋಣೆ ನಿವಾಸಿ ಪ್ರಶಾಂತ್, ಸುನಂದಾ ದಂಪತಿ ಪುತ್ರಿ ಸಿಂಧು (16) ಆತ್ಮಹತ್ಯೆಗೆ ಶರಣಾದವರು. ಈ ವರ್ಷದಿಂದ ಸಿಂಧು ಕುಂದಾಪುರದ ವಡೇರ ಹೋಬಳಿಯಲ್ಲಿರುವ ಬಾಲಕಿಯರ ವಸತಿ ನಿಲಯದಲ್ಲಿದ್ದು, ಸಮೀಪದ ಸರಕಾರಿ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಓದುತ್ತಿದ್ದರು. ಕಳೆದೆರಡು ದಿನಗಳ ಹಿಂದೆ ಅನಾರೋಗ್ಯವೆಂದು ತನ್ನ ಮನೆಗೆ ಹೋಗಿದ್ದ ಸಿಂಧುವನ್ನು ಬುಧವಾರ ತಾಯಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಗುರುವಾರ ಶಾಲೆಗೆ ಬರಬೇಕಿದ್ದರಿಂದ ತಂದೆ ಕುಂದಾಪುರಕ್ಕೆ ಬಿಡುವುದಾಗಿ ಹೇಳಿದ್ದು ಆದರೆ ಆಕೆ ತಾನು ಬಸ್ಸಿಗೆ ಹೋಗುವುದಾಗಿ ತಿಳಿಸಿದ್ದಳು. ಇದಾದ ಸ್ವಲ್ಪ ಸಮಯದ ನಂತರ ಮನೆಯವರು ಗಮನಿಸಿದಾಗ ನೇಣು ನೇಣು ಬಿಗಿದ ಸ್ಥಿತಿಯಲ್ಲಿ ಸಿಂಧು ಮೃತದೇಹ ಪತ್ತೆಯಾಗಿದೆ.
ಮೃತದೇಹವನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕೊಂಡೊಯ್ದಿದ್ದು, ಬಳಿಕ ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಪೊಲೀಸರು ಮೃತದೇಹ

ಮಟ್ಕಾ ಅಡ್ಡೆಗೆ ದಾಳಿ: ಮೂವರ ಬಂಧನ

ಬಂಟ್ವಾಳ: ಬಿ.ಸಿ.ರೋಡಿನ ಕೈಕಂಬದಲ್ಲಿ ನಡೆಯುತ್ತಿದ್ದ ಮಟ್ಕಾ ಅಡ್ಡೆಗೆ ದಾಳಿ ನಡೆಸಿದ ಸೆನ್‌ ಪೊಲೀಸರು ಮೂವರನ್ನು ಬಂಧಿಸಿದ್ದು, ಉಳಿದವರು ಪರಾರಿಯಾಗಿದ್ದಾರೆ ಮಂಜೇಶ್ವರ ಹೊಸಂಗಡಿ ನಿವಾಸಿ ಶ್ರೀಧರ ಎಂ.ಎಸ್‌., ಅಮ್ಮುಂಜೆಯ ಥಾಮಸ್‌ ಹಾಗೂ ನೀರುಮಾರ್ಗದ ಜಾಕೀರ್‌ ಹುಸೈನ್‌ ಬಂಧಿತರು. ದಾಳಿಯ ವೇಳೆ ಆರೋಪಿಗಳ ಜತೆಗೆ ದಂಧೆಗೆ ಬಳಸಲಾದ ಪುಸ್ತಕಗಳು, 250 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಘಟನೆಯ ಕುರಿತು ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಖಚಿತ ಮಾಹಿತಿ ಪಡೆದ ಸೆನ್‌ ಪೊಲೀಸ್‌ ಠಾಣೆಯ ಪಿಎಸ್‌ಐ ನೇತೃತ್ವದ ತಂಡ ದಾಳಿ ನಡೆಸಿದೆ.

ಫುಟ್‌ಬೋರ್ಡ್ ಪ್ರಯಾಣದ ವಿರುದ್ಧ ಮಂಗಳೂರಿನಲ್ಲಿ ಪೊಲೀಸರ ಅಭಿಯಾನ; 123 ಕೇಸ್ !

ಮಂಗಳೂರು: ಬಸ್ ಕಂಡಕ್ಟರ್ ಒಬ್ಬರು ಏಕಾಏಕಿ ಬಸ್ ನಿಂದ ಹೊರ ಬಿದ್ದು ಸಾವನ್ನಪ್ಪಿದ್ದ ಬೆನ್ನಲ್ಲೇ ಗುರುವಾರ ಪೊಲೀಸರು ಬಸ್‌ಗಳ ವಿರುದ್ಧ ವಿಶೇಷ ಅಭಿಯಾನ ನಡೆಸಿ ಫುಟ್‌ಬೋರ್ಡ್ ಪ್ರಯಾಣದ 123 ಪ್ರಕರಣಗಳನ್ನು ದಾಖಲಿಸಿದ್ದಾರೆ. ಮತ್ತೊಂದು ಸುತ್ತಿನ ಸಭೆಯಲ್ಲಿ ಬಸ್ ನಿರ್ವಾಹಕರು ಬಾಗಿಲು ಇಲ್ಲದ ಫುಟ್‌ಬೋರ್ಡ್‌ನಲ್ಲಿ ನಿಂತಿರುವುದು ಕಂಡುಬಂದರೆ ಬಸ್ ಚಲಿಸುವುದಿಲ್ಲ ಎಂದು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜಾಗೃತಿಯಿಂದ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಅಲ್ಲದೆ ಬಾಗಿಲು ಹೊಂದಿರುವ ಬಸ್‌ಗಳು ಇನ್ನೂ ಕಟ್ಟುನಿಟ್ಟಾಗಿ ಬಾಗಿಲುಗಳನ್ನು ಅಳವಡಿಸಿಕೊಳ್ಳಬೇಕು. ಬಾಗಿಲು ಹೊಂದಿರದ ಹಳೆಯ ಸಿಟಿ ಬಸ್‌ಗಳು ಫುಟ್‌ಬೋರ್ಡ್ ಖಾಲಿಯಾಗುವ ವರೆಗೆ ಬಸ್ ಚಾಲನೆ ಮಾಡದಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದ್ದಾರೆ. ನಂತೂರು ಸರ್ಕಲ್ ಬಳಿ ಬುಧವಾರ ಬಸ್ ನ ಫುಟ್ ಬೋರ್ಡ್ ನಲ್ಲಿದ್ದ ಈರಯ್ಯ(ಗುರು) ಎನ್ನುವ 23 ವರ್ಷದ ಕಂಡಕ್ಟರ್ ಆಯತಪ್ಪಿ ರಸ್ತೆಗೆ ಬಿದ್ದು ಮೃತಪಟ್ಟಿದ್ದರು.

ಖ್ಯಾತ ಕಬಡ್ಡಿ ಆಟಗಾರ ನೇಣು ಶರಣು..!

ಬೆಳ್ತಂಗಡಿ : ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪುದುವೆಟ್ಟಿನಲ್ಲಿ ಖ್ಯಾತ ಕಬಡ್ಡಿ ಆಟಗಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ. ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಖ್ಯಾತ ಕಬಡ್ಡಿ ಆಟಗಾರ ಪುದುವೆಟ್ಟು ಕುಬಲ ನಿವಾಸಿ ಸ್ವರಾಜ್ (24) ಎಂದು ತಿಳಿದು ಬಂದಿದೆ. ಸ್ವರಾಜ್ ಪ್ರಮುಕ್ತ ಧರ್ಮಸ್ಥಳದಲ್ಲಿ ವಾಸವಗಿದ್ದು ಇಂದು ಪಯಣಿಗಲ್ಲಿದ್ದ ಅವರ ಹಳೆಮನೆಯ ಸ್ನಾನಗೃಹದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಸ್ವರಾಜ್ ಕಬಡ್ಡಿಯಲ್ಲಿ ದ.ಕ. ಜಿಲ್ಲೆಯನ್ನು ಪ್ರತಿನಿಧಿಸಿ ಗಮನ ಸೆಳೆದಿದ್ದರು, ಸ್ಥಳೀಯ ಕೂಟಗಳಲ್ಲಿ ಸಾಕಷ್ಟು ಆಕರ್ಷಣೆ ಹೊಂದಿದ್ದರು. ಉಜಿರೆಯ ಸಾನಿಧ್ಯ ಖಾಸಗಿ ಕಂಪೆನಿಯಲ್ಲಿ ಸ್ವರಾಜ್ ಉದ್ಯೋಗಿಯಾಗಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಧರ್ಮಸ್ಥಳ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಕಬಡ್ಡಿ ಆಟಗಾರ ಆತ್ಮಹತ್ಯೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್

– ಸ್ವರಾಜ್ ಆತ್ಮಹತ್ಯೆ ಹಿಂದೆಯಿದ್ದಿಯ ಲೋನ್ ಆಪ್ ಕಿರುಕುಳ

ಮಂಗಳೂರು: ಜಿಲ್ಲಾ ಮಟ್ಟದ ಕಬ್ಬಡ್ಡಿ ಆಟಗಾರ ಸ್ವರಾಜ್ – ಅತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಲೋನ್ ಆಪ್ ಕಿರುಕುಳ ತಡೆಯಲಾರದೆ ಸ್ವರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಆತ್ಮಹತ್ಯೆ ಮಾಡಿಕೊಂಡ ಪುದುವೆಟ್ಟು ನಿವಾಸಿ ಸ್ವರಾಜ್ (24) ಲೋನ್ ಆಪ್ ಮೂಲಕ ಸಾಲ ಪಡೆದಿದ್ದರು. ಆ.30 ಆಪ್ ಲೋನ್ ಸಾಲಕ್ಕೆ ಸಂಬಂಧಿಸಿ 30 ಸಾವಿರ ಹಣ ಕಟ್ಟಿದ್ದರು. ಬಳಿಕ ಆ.31ರಂದು ಆಪ್ ನ ಕ್ರಿಮಿನಲ್ ಗಳು ಮತ್ತೊಮ್ಮೆ ಹಣ ನೀಡುವಂತೆ ಡೆಡ್ ಲೈನ್ ನೀಡಿದ್ದರು. ಇದರಿಂದ ಸ್ವರಾಜ್‌ ತೀವ್ರ ಒತ್ತಡಕ್ಕೆ ಒಳಗಾಗಿದ್ದರು. ಈ ವಾಟ್ಸಪ್ ಡಿಪಿಪಿಯಲ್ಲಿ ಸ್ವರಾಜ್ ತನ್ನ ಅಕ್ಕನ ಮಗಳ ಫೋಟೋವನ್ನು ಹಾಕುವುದನ್ನೇ ದುರ್ಬಳಕೆ ಮಾಡಿಕೊಂಡ ಆಪ್ ಕ್ರಿಮಿನಲ್‌ಗಳು ಹಣ ನೀಡುವಂತೆ ಒತ್ತಡ ಹೇರಲು ಆಫೋಟೋವನ್ನೇ ಬಳಸಲಾಗಿದೆ. ಫೋಟೋವನ್ನು ಬೇಬಿ ಫಾರ್ ಸೇಲ್’ ಎಂದು ಎಡಿಟ್ ಮಾಡಿ ಸ್ವರಾಜ್ ಸ್ನೇಹಿತರು, ಕಾಂಟ್ಯಾಕ್ಟ್ ಲಿಸ್ಟ್ ಇರುವವರಿಗೆ ಪಾರ್ವರ್ಡ್ ಮಾಡಿದ್ದಾರೆ. ಎಂದು ತಿಳಿದು ಬಂದಿದೆ. ಇದನ್ನುತಡೆಯಲಾರದೆ ಸ್ವರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ

ಇದನ್ನೂ ಓದಿ : ಹೊದಲಾದಲ್ಲಿ ಅಪರೂಪದ ಕೆನ್ನಾಯಿಯ ಗುಂಪು ಪತ್ತೆ!!!

Categories
ಶಿವಮೊಗ್ಗ

ಶಿವಮೊಗ್ಗ ಟಾಪ್ ನ್ಯೂಸ್

ದುರ್ಗಿಗುಡಿಯಲ್ಲಿ ಯುವಕ ಅರೆಸ್ಟ್‌
-ಗಾರ್ಡನ್‌ ಏರಿಯಾದಲ್ಲಿ ಕೈ ಕೈ ಮಿಲಾಯಿಸಿದ ಗುಂಪುಗಳು
-ಊರಿನಿಂದ ಮನೆಗೆ ಮರಳಿದ ಕುಟುಂಬಕ್ಕೆ ಕಾದಿತ್ತು ಶಾಕ್‌.
-ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ, ಒಬ್ಬ ಅರೆಸ್ಟ್‌

NAMMUR EXPRESS NEWS – ಶಿವಮೊಗ್ಗ : ದುರ್ಗಿಗುಡಿಯಲ್ಲಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಯುವಕನನ್ನು ಗಸ್ತು ತಿರುಗುತ್ತಿದ್ದ ಪೊಲೀಸರು ವಿಚಾರಣೆ ನಡೆಸಿದಾಗ ಗಾಂಜಾ ಸೇವನೆ ಮಾಡಿರುವ ಅನುಮಾನ ಮೂಡಿದೆ. ಕೂಡಲೆ ಮೆಗ್ಗಾನ್‌ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ದೃಢಪಟ್ಟಿದೆ. ಮುಬಾರಕ್‌ (19) ಎಂಬಾತನನ್ನು ಬಂಧಿಸಲಾಗಿದೆ. ಆತನ ವಿರುದ್ಧ ಎನ್‌ಡಿಪಿಎಸ್‌ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಲಾಗಿದೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾರ್ಡನ್‌ ಏರಿಯಾದಲ್ಲಿ ಕೈ ಕೈ ಮಿಲಾಯಿಸಿದ ಗುಂಪುಗಳು

ಶಿವಮೊಗ್ಗ : ಅಂಗಡಿ ಮುಂದೆ ಲಾರಿ ನಿಲ್ಲಿಸುವ ವಿಚಾರವಾಗಿ ಜಗಳವಾಗಿದ್ದು ಎರಡು ಗುಂಪುಗಳು ಕೈ ಕೈ ಮಿಲಾಯಿಸಿದ್ದಾರೆ. ಶಿವಮೊಗ್ಗದ ಗಾರ್ಡನ್‌ ಏರಿಯಾದ 1ನೇ ತಿರುವಿನಲ್ಲಿ ಘಟನೆ ಸಂಭವಿಸಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡುತ್ತಿದ್ದಂತೆ ಗಲಾಟೆ ಮಾಡುತ್ತಿದ್ದವರು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಸಾರ್ವಜನಿಕ ಶಾಂತಿ ಭಂಗ ಉಂಡು ಮಾಡಲು ಯತ್ನಿಸಿದ ಆರೋಪದ ಮೇಲೆ ನಾಲ್ವರ ವಿರುದ್ಧ ದೊಡ್ಡಪೇಟೆ ಠಾಣೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

ಊರಿನಿಂದ ಮನೆಗೆ ಮರಳಿದ ಕುಟುಂಬಕ್ಕೆ ಕಾದಿತ್ತು ಶಾಕ್‌.

ಶಿವಮೊಗ್ಗ : ಮನೆಯವರೆಲ್ಲ ಚನ್ನಗಿರಿಗೆ ತೆರಳಿದ್ದ ವೇಳೆ ಬಾಗಿಲಿನ ಬೀಗ ಮುರಿದು ಚಿನ್ನಾಭರಣ ಮತ್ತು ನಗದು ಕಳ್ಳತನ ಮಾಡಲಾಗಿದೆ. ಶಿವಮೊಗ್ಗ ರೈಲ್ವೆ ನಿಲ್ದಾಣ ಸಮೀಪದ ಅಮೀರ್‌ ಅಹಮ್ಮದ್‌ ಕಾಲೋನಿಯಲ್ಲಿ ಘಟನೆ ಸಂಭವಿಸಿದೆ. ರಾಜೇಶ್ವರಿ ಅವರು ಚನ್ನಗಿರಿಯಲ್ಲಿರುವ ತಮ್ಮ ಸಂಬಂಧಿಯ ಮನೆಯ ಕಾರ್ಯಕ್ರಮಕ್ಕೆ ತೆರಳಿದ್ದಾಗ ಘಟನೆ ಸಂಭವಿಸಿದೆ. ಕಾರ್ಯಕ್ರಮ ಮುಗಿಸಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಮನೆಯಲ್ಲಿದ್ದ 30 ಸಾವಿರ ರೂ.ನಗದು, 35 ಸಾವಿರ ರೂ. ಮೊತ್ತದ ಚಿನ್ನ, ಬೆಳ್ಳಿ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ. ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ, ಒಬ್ಬ ಅರೆಸ್ಟ್‌

ಶಿವಮೊಗ್ಗ : ಚಿಂದಿ ಆಯುವ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತೌಫಿಕ್‌ ಅಲಿಯಾಸ್‌ ಅಸ್ಸು ಬಂಧಿತ . ಆ.22ರಂದು ಟಿಪ್ಪು ನಗರದಲ್ಲಿ ಚಿಂದಿ ಆಯುವ ಮಂಜಣ್ಣ ಎಂಬಾತನ ಕೊಲೆ ಮಾಡಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಹೊದಲಾದಲ್ಲಿ ಅಪರೂಪದ ಕೆನ್ನಾಯಿಯ ಗುಂಪು ಪತ್ತೆ!!!

Categories
ಅಪರಾಧ ಸಾಗರ

ಲೈಂಗಿಕ ದೌರ್ಜನ್ಯ ಒಳಗಾದ ಬಾಲಕಿ. – ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಲಕಿ

ವರ್ಷದಿಂದ ಲೈಂಗಿಕ ಕಿರುಕುಳ: ಹೆಣ್ಣು ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ!
– ಸಾಗರದಲ್ಲಿ ದಾಖಲಾಯ್ತು ಮತ್ತೊಂದು ಪೋಕ್ಸೋ ಕೇಸ್!

NAMMUR EXPRESS NEWS
ಸಾಗರ : ಕಳೆದ ಒಂದು ವರ್ಷದಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಪಿಯುಸಿ ವಿದ್ಯಾರ್ಥಿನಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಮಂಗಳವಾರ ನಡೆದಿದೆ. ಸೊರಬದಲ್ಲಿ ಓದುತ್ತಿರುವ 22 ವರ್ಷದ ಆರೋಪಿ ಸಾಗರದಲ್ಲಿ ಪಿಯು ಓದುತ್ತಿರುವ ವಿದ್ಯಾರ್ಥಿನಿಯ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಬಂದು ತನ್ನ ಮೇಲೆ ಕಳೆದೊಂದು ವರ್ಷದಿಂದ ಲೈಂಗಿಕ ದೌರ್ಜನ್ಯ ಎಸಗಿದ್ದು, ಇದರಿಂದ ತಾನು ಗರ್ಭ ಧರಿಸಿ ಮಗುವಿಗೆ ಜನ್ಮ ನೀಡಿರುವುದಾಗಿ ಸಂತ್ರಸ್ತ ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ. ಎರಡು ಮೂರು ದಿನದ ಹಿಂದೆ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಬಾಲಕಿಯನ್ನು ಪೋಷಕರು ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆ ತಂದಾಗ ಗರ್ಭಿಣಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಬಳಿಕ ಆಕೆ ಸಾಗರದ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಬಾಲಕಿ ನೀಡಿದ ದೂರಿನ ಆಧಾರದ ಮೇಲೆ ಪೋಕ್ಸೋ ಪ್ರಕರಣ ದಾಖಲಿಸಿ ಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ : ಹೊದಲಾದಲ್ಲಿ ಅಪರೂಪದ ಕೆನ್ನಾಯಿಯ ಗುಂಪು ಪತ್ತೆ!!!

Categories
ಸಿನಿಮಾ

ರಕ್ಷಿತ್ ಶೆಟ್ಟಿ ಅಭಿನಯದ ಸಪ್ತಸಾಗರದಾಚೆ ಎಲ್ಲೋ ಸಿನಿಮಾ ರಿಲೀಸ್!

ರಕ್ಷಿತ್ ಶೆಟ್ಟಿ ಅಭಿನಯದ ಸಪ್ತಸಾಗರದಾಚೆ ಎಲ್ಲೋ ಸಿನಿಮಾ ರಿಲೀಸ್!
– ಅಲೆಗಳ ಏರಿಳಿತದಲ್ಲೊಂದು ಸುಂದರ ಪಯಣ
– ವಿಶ್ವಾಸ ಜೊತೆಗೊಂದು ಭವಿಷ್ಯದ ಭರವಸೆ ಕಟ್ಟಿ ಕೊಟ್ಟಿರುವ ಚಿತ್ರ

NAMMUR EXPRESS NEWS
నిಜವಾದ ಪ್ರೀತಿಗೆ ಬಣ್ಣ ಬಣ್ಣದ ಮಾತುಗಳು ಬೇಕಾಗಿಲ್ಲ, ಸರ್‌ಪೈಸ್ ಗಿಫ್ಟ್‌ಳ ಆಗತ್ಯವಿಲ್ಲ, ಆಸ್ತಿ-ಅಂತಸ್ತು ಲೆಕ್ಕಕ್ಕೇ ಬರೋದಿಲ್ಲ. ಅಲ್ಲಿ ಬೇಕಾಗಿರೋದು ಪರಸ್ಪರ ಪ್ರೀತಿ, ನಂಬಿಕೆ, ವಿಶ್ವಾಸ ಜೊತೆಗೊಂದು ಭವಿಷ್ಯದ ಭರವಸೆ ಈ ಅಂಶಗಳನ್ನು ಮೂಲವಾಗಿಟ್ಟುಕೊಂಡು ಅದನ್ನು ಅಚ್ಚುಕಟ್ಟಾಗಿ ಮನಮುಟ್ಟುವಂತೆ ಕಟ್ಟಿ ಕೊಟ್ಟಿರುವ ಚಿತ್ರ “ಸಪ್ತಸಾಗರದಾಚೆ ಎಲ್ಲೋ’.
ಈ ಸಿನಿಮಾದ ಬಗ್ಗೆ ಒಂದೇ ಮಾತಲ್ಲಿ ಹೇಳಬೇಕಾದರೆ ನೋಡ ನೋಡುತ್ತಲೇ ಕಾಡುವ ಸಿನಿಮಾ. ಆ ಮಟ್ಟಿಗೆ ನಿರ್ದೇಶಕ ಹೇಮಂತ್ ಒಂದು ಸುಂದರವಾದ ಕಥೆಯನ್ನು ಅಷ್ಟೇ ಸೊಗಸಾಗಿ ಹೆಣೆದು ಪ್ರೇಕ್ಷಕರ ಮಡಿಲಿಗೆ ಹಾಕಿದ್ದಾರೆ.
“ಸಪ್ತಸಾಗರದಾಚೆ ಎಲ್ಲೋ’ ಒಂದು ಔಟ್ ಅಂಡ್ ಔಟ್ ಲವ್‌ಸ್ಟೋರಿ. ಹಾಗಂತ ಇದು ಸಾದ-ಸೀದಾ ಲವ್‌ಸ್ಟೋರಿ ಯಲ್ಲ, ಇಂಟೆನ್ಸ್ ಲವ್‌ಸ್ಟೋರಿ. ಈ ಲವ್ ಸ್ಟೋರಿಗೆ ಹಲವು ಮಗ್ಗುಲುಗಳಿವೆ. ಪ್ರೀತಿ, ದ್ವೇಷ, ಸ್ವಾರ್ಥ, ಮೋಸ ಹೀಗೆ ವಿವಿಧ ಆಯಾಮಗಳೊಂದಿಗೆ ಸಿನಿಮಾ ಸಾಗುವುದು ವಿಶೇಷ.

ಹಾಗಂತ ಯಾವುದನ್ನೂ ಇಲ್ಲಿ ಅತಿಯಾಗಿ ತೋರಿಸಿಲ್ಲ. ಎಲ್ಲವೂ ಮೂಲಕಥೆಯಲ್ಲಿ ಹಾಸುಹೊಕ್ಕಾಗಿದೆ. ಮನು ಪ್ರಿಯಾಳ ಸರಳ ಸುಂದರ ಪ್ರೇಮಕಥೆಯೊಂದಿಗೆ ಸಿನಿಮಾ ಆರಂಭವಾಗುತ್ತದೆ. ಅವರ ಕನಸು, ಭವಿಷ್ಯದ ಭರವಸೆ, ಪರಸ್ಪರ ಅರ್ಥಮಾಡಿಕೊಂಡಿರುವ ರೀತಿ. ಈ ಅಂಶದೊಂದಿಗೆ ಸಾಗುವ ಕಥೆಯಲ್ಲೊಂದು ತಿರುವು. ಅಲ್ಲಿಂದ ಸಿನಿಮಾದ ಬಣ್ಣ, ಓಘ ಎಲ್ಲವೂ ಬದಲು. ಕಥೆ ಹೆಚ್ಚು ಗಂಭೀರವಾಗುತ್ತಾ ಸಾಗುವ ಜೊತೆಗೆ ಹೆಚ್ಚಿನ ಕುತೂಹಲಕ್ಕೆ ನಾಂದಿ. ಮೊದಲೇ ಹೇಳಿದಂತೆ ಲವ್‌ಸ್ಟೋರಿಯಲ್ಲಿ ಇರಬೇಕಾದ ಬಣ್ಣ ಬಣ್ಣದ ಮಾತುಗಳು, ಕಲರ್‌ಫುಲ್ ಹಾಡುಗಳು, ನಾಯಕ-ನಾಯಕಿಯ ರೊಮ್ಯಾನ್ಸ್. ಇವುಗಳಿಂದ “ಸಪ್ತ ಸಾಗರ’ ಮುಕ್ತವಾಗಿದೆ. ಆದರೂ ಸಿನಿಮಾ ಕಾಡುತ್ತದೆ ಎಂದರೆ ಅದಕ್ಕೆ ಸಿನಿಮಾದ ಕಥೆ ಹಾಗೂ ಕಟ್ಟಿಕೊಟ್ಟಿರುವ ರೀತಿ ಕಾರಣ. ಮೂಲಕಥೆ ಹಾಗೂ ಆಶಯ ಸ್ಪಷ್ಟವಾಗಿದ್ದಾಗ ಭಾಷೆ, ಪರಿಸರ ಯಾವುದೂ ಮುಖ್ಯವಾಗುವುದಿಲ್ಲ. ಇಲ್ಲೂ ಅಷ್ಟೇ ಭಾಷೆ, ಪರಿಸರದ ಹಂಗು ಮೀರಿ “ಸಪ್ತ’ ಪ್ರೇಕ್ಷಕರ ಮನಸ್ಸು ಗೆಲ್ಲುತ್ತಾ ಹೋಗುತ್ತದೆ.

ಸಾಮಾನ್ಯವಾಗಿ ಸಿನಿಮಾಗಳು ಆರಂಭವಾಗಿ ಕಥೆ ತೆರೆದುಕೊಳ್ಳುವ ಹೊತ್ತಿಗೆ ಮಧ್ಯಂತರ ಬಂದಿರುತ್ತದೆ. ಆದರೆ, ನಿರ್ದೇಶಕ ಹೇಮಂತ್ ಸಿನಿಮಾದ ಆರಂಭವನ್ನೇ ಕಥೆಯೊಂದಿಗೇ ಮಾಡಿದ್ದಾರೆ. ಹಾಗಾಗಿ, ಪ್ರೇಕ್ಷಕನಿಗೂ ಸಿನಿಮಾ ಆರಂಭದಿಂದಲೇ ಆಪ್ತವಾಗುತ್ತಾ ಸಾಗುವುದು ಈ ಸಿನಿಮಾದ ಪ್ಲಸ್. ಚಿತ್ರದ ಕೆಲವು ಅಂಶಗಳನ್ನು ತುಂಬಾ ಸೊಗಸಾಗಿ ಕಟ್ಟಿಕೊಡಲಾಗಿದೆ. ಅದರಲ್ಲೊಂದು ನಾಯಕಿ ಬಾಳಲ್ಲಿ ಬರುವ ಸನ್ನಿವೇಶ ಹಾಗೂ ನಾಯಕನ ಸಿಟ್ಟಿನ ಕಟ್ಟೆ ಒಡೆಯುವುದು. ಈ ತರಹದ ಹಲವು ಸನ್ನಿವೇಶಗಳು ಸಿನಿಮಾವನ್ನು ಮತ್ತಷ್ಟು ಹತ್ತಿರವಾಗಿಸುತ್ತವೆ.

ಇದನ್ನೂ ಓದಿ : ಹೊದಲಾದಲ್ಲಿ ಅಪರೂಪದ ಕೆನ್ನಾಯಿಯ ಗುಂಪು ಪತ್ತೆ!!!

Categories
ಬೆಂಗಳೂರು

ಒಕ್ಕಲಿಗರ ಸಂಘಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಒಕ್ಕಲಿಗರ ಸಂಘಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

NAMMUR EXPRESS  – ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘಕ್ಕೆ ಹೊಸ ಸದಸ್ಯರ ನೋಂದಣಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ನ.30ರವ ರೆಗೆ ವಿಸ್ತರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಡಿ.ಹನು ಮಂತಯ್ಯ ತಿಳಿಸಿದ್ದಾರೆ. 2023 ಫೆ.17ರಿಂದ ಆ.31ರವ ರೆಗೆ ಅವಕಾಶ ನೀಡಲಾಗಿತ್ತು. ಅರ್ಜಿ ಸಲ್ಲಿಕೆ ಅವಧಿ ವಿಸ್ತ ರಿಸುವಂತೆ ಸಮುದಾಯದಲ್ಲಿ ಒತ್ತಾಯ ಕೇಳಿಬಂದಿತ್ತು. ಹೀಗಾಗಿ ಮತ್ತೆ ಮೂರು ತಿಂಗಳು ಅವಧಿ ವಿಸ್ತರಿಸಲಾಗಿದೆ. 18 ವರ್ಷ ತುಂಬಿದ ಒಕ್ಕಲಿಗ ಸಮು ದಾಯದವರು ಆನ್ ಲೈನ್‌ ಮತ್ತು ಆಫ್‌ಲೈನ್‌ ಮೂಲಕ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಬಹುದು ಎಂದು ಗುರುವಾರ ಹೇಳಿದರು.
ಹೊಸದಾಗಿ ಅಫ್ಲಿನ್ ಮೂಲಕ 49,522 ಮತ್ತು ಆನ್ಲೈನ್ ಮೂಲಕ 736 ಮಂದಿ ಅರ್ಜಿ ಸಲ್ಲಿಸಿದ್ದಾರೆ
`ನ.30 ಅರ್ಜಿ ಸಲ್ಲಿಕೆ ಕಡೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಕೆಗೆ 3 1,650 ಶುಲ್ಕ ನಿಗದಿಪಡಿಸಲಾಗಿದೆ. ವಿವರಕ್ಕೆ www.rvsmembership.in ಗೆ ಭೇಟಿ ನೀಡಿ’ ಎಂದು ಹೇಳಿದರು.

ಇದನ್ನೂ ಓದಿ : ಹೊದಲಾದಲ್ಲಿ ಅಪರೂಪದ ಕೆನ್ನಾಯಿಯ ಗುಂಪು ಪತ್ತೆ!!!

Categories
ಬೆಂಗಳೂರು

ಸಂಪುಟದ ಎಲ್ಲಾ ಸಚಿವರಿಗೆ ಐಷಾರಾಮಿ ಕಾರು ಖರೀದಿಗೆ ಮುಂದಾದ ಸರ್ಕಾರ.

ಸಂಪುಟದ ಎಲ್ಲಾ ಸಚಿವರಿಗೆ ಐಷಾರಾಮಿ ಕಾರು ಖರೀದಿಗೆ ಮುಂದಾದ ಸರ್ಕಾರ.
– 9.90 ಕೋ.ರೂ ವೆಚ್ಚದಲ್ಲಿ 33 ಹೈಬ್ರಿಡ್ ಕಾರುಗಳ ಖರೀದಿಗೆ ನಿರ್ಧಾರ
– ಸಾರ್ವಜನಿಕರ ದುಡ್ಡಿನಲ್ಲಿ ಸಚಿವರಿಗೆ ಇನೋವಾ ಹೈಕ್ರಾಸ್ ಹೈಬ್ರಿಡ್ ಕಾರಿನ ಭಾಗ್ಯ

ಬೆಂಗಳೂರು: ರಾಜ್ಯ ಸರ್ಕಾರ .ತಲಾ 30 ಲಕ್ಷ ರೂಪಾಯಿ ಮೌಲ್ಯದ ಹೊಸ ಇನೋವಾ ಹೈಕ್ರಾಸ್ ಹೈಬ್ರಿಡ್ ಕಾರುಗಳ ಖರೀದಿಗೆ ಸರ್ಕಾರ ಆದೇಶಿಸಿದ್ದು ಸಚಿವರಿಗೆ ಸಧ್ಯವೇ ಕಾರು ಭಾಗ್ಯ ಸಿಗಲಿದೆ. ಪ್ರತೀ ಕಾರಿಗೆ ಜಿಎಸ್‌ಟಿ ಸೇರಿದಂತೆ ಶೋರೂಮ್ ಬೆಲೆ 30 ಲಕ್ಷ ರೂ.ನಂತೆ ಒಟ್ಟು 9.90 ಕೋಟಿ ರೂ.ಅನುದಾನ ಬಿಡುಗಡೆಗೊಳಿಸಲಾಗಿದೆ. ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕಿರ್ಲೋಸ್ಕರ್ ಮೋಟಾರ್ಸ್ ಅವರಿಂದ ನೇರವಾಗಿ ಖರೀದಿಸಲು ಪಾರದರ್ಶಕತೆ ಅಧಿನಿಯಮದಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ನೀಡಿದೆ. ಈಗಾಗಲೇ ಸರ್ಕಾರವು ಗ್ಯಾರಂಟಿಗಳನ್ನು ಈಡೇರಿಸಲು ಸಂಪನ್ಮೂಲಗಳ ಕ್ರೋಢೀಕರಣಕ್ಕೆ ಹರಸಾಹಸಪಡುತ್ತಿದ್ದು ಈ ಮಧ್ಯೆ ಸಚಿವರಿಗೆ ದುಬಾರಿ ವೆಚ್ಚದ ಐಷಾರಾಮಿ ಹೊಸ ಕಾರು ಖರೀದಿ ಅಗತ್ಯವಿದೆಯೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : ಹೊದಲಾದಲ್ಲಿ ಅಪರೂಪದ ಕೆನ್ನಾಯಿಯ ಗುಂಪು ಪತ್ತೆ!!!

Categories
ಶಿವಮೊಗ್ಗ

ಮೊದಲ ಟಿಕೆಟ್ ಖರೀದಿಸಿದ ಕಿಮ್ಮನೆ ಜಯರಾಂ ಜತೆ ಅನೇಕರ ಪಯಣ!

ಮೊದಲ ಟಿಕೆಟ್ ಖರೀದಿಸಿದ ಕಿಮ್ಮನೆ ಜಯರಾಂ ಜತೆ ಅನೇಕರ ಪಯಣ!
– ವಿಮಾನ ನಿಲ್ದಾಣ ಮಾಡಿದ್ದ ಗುತ್ತಿಗೆದಾರರು ಕೂಡ ಪ್ರಯಾಣ ಮಾಡಿದರು

NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಸಂಭ್ರಮ ಇಡೀ ಮಲೆನಾಡಿನಲ್ಲಿ ಕಾಣುತ್ತಿದೆ. ಎಲ್ಲೆಡೆ ವಿಮಾನದ್ದೇ ಚರ್ಚೆ ಇದೆ. ಈ ನಡುವೆ ಮೊದಲ ವಿಮಾನ ಹಾರಾಟದ ಉದ್ಘಾಟನಾ ಕಾರ್ಯಕ್ರಮದ ಬಳಿಕ ಮೊದಲ ಟಿಕೆಟ್ ಖರೀದಿಸಿದ ಉದ್ಯಮಿ ಕಿಮ್ಮನೆ ಜಯರಾಮ್ ಜತೆ ಅನೇಕ ಪ್ರಮುಖರು ಪ್ರಯಾಣ ಬೆಳೆಸಿದರು. ಕೈಗಾರಿಕಾ ಸಚಿವರಾದ ಎಂ.ಬಿ.ಪಾಟೀಲ್ ಅವರು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ರಾಜ್ಯ ಶಿಕ್ಷಣ ಸಚಿವರ ಮಧುಬಂಗಾರಪ್ಪ ಅವರು ಕೆಪಿಸಿಸಿ ರಾಜ್ಯ ಸಹಕಾರ ವಿಭಾಗದ ಸಂಚಾಲಕರು ಡಾ ಆರ್ ಎಂ ಮಂಜುನಾಥ ಗೌಡ ಅವರು ಶಾಸಕರು ಬೇಳೂರು ಗೋಪಾಲಕೃಷ್ಣ ಅವರು ಉದ್ಯಮಿಗಳು ಮೊದಲ ಟಿಕೆಟ್ ಖರೀದಿಸಿದ ಕಿಮ್ಮನೆ ಜಯರಾಂ ಅವರು ವಿಮಾನ ನಿಲ್ದಾಣದ ಗುತ್ತಿಗೆದಾರರಾದ ಅಬ್ದುಲ್ ಕಲಾಂ ಅಜಾದ್, ಯುವ ಮುಖಂಡರು ಸಯ್ಯದ್ ಮುಹೀಬ್, ವಿಜಯ್ ಕುಮಾರ್ ಮೊದಲ ಪ್ರಯಾಣ ಶಿವಮೊಗ್ಗದಿಂದ ಬೆಂಗಳೂರುಗೆ ಬೆಳೆಸಿದರು.

ನ್ಯಾಷನಲ್ ಕನ್ಸ್ಟ್ರಕ್ಷನ್ ಮಾಲೀಕರಾದ ಇಬ್ರಾಹಿಂ ಷರೀಫ್, ಅಬ್ದುಲ್ ರೆಹಮಾನ್, ಅಬ್ದುಲ್ ಕಲಾಂ, ಶಾಹಿಲ್ ವಿಮಾನದಲ್ಲಿ ಪ್ರಯಾಣ ಮಾಡಿದರು. ತೀರ್ಥಹಳ್ಳಿ ಮೂಲದ ನ್ಯಾಷನಲ್ ಕನ್ಸ್ಟ್ರಕ್ಷನ್ ಸಂಸ್ಥೆ ಈ ವಿಮಾನ ನಿಲ್ದಾಣದ ಕಾಮಗಾರಿ ಮಾಡಿದೆ.

ಇದನ್ನೂ ಓದಿ : ಹೊದಲಾದಲ್ಲಿ ಅಪರೂಪದ ಕೆನ್ನಾಯಿಯ ಗುಂಪು ಪತ್ತೆ!!!

Categories
ತೀರ್ಥಹಳ್ಳಿ

ನೀರಾವರಿ ಯೋಜನೆ ವಿರುದ್ದ ರೈತರ ಹೋರಾಟ!

ನೀರಾವರಿ ಯೋಜನೆ ವಿರುದ್ದ ರೈತರ ಹೋರಾಟ!
– 267.70 ಕೋಟಿ ಮೊತ್ತದ ಬಹುಗ್ರಾಮ ಕುಡಿಯುವ ನೀರು ಯೋಜನೆ ಅನುಷ್ಠಾನಕ್ಕೆ ವಿರೋಧ
– ಏನಿದು ಯೋಜನೆ…?, ಯಾಕೆ ಹೋರಾಟ…?

NAMMUR EXPRESS NEWS
ತೀರ್ಥಹಳ್ಳಿ : ಸ್ಥಳೀಯರು, ರೈತರನ್ನು ಹೊರಗಿಟ್ಟು ಅಂದಾಜು 267.70 ಕೋಟಿ ಮೊತ್ತದ ಬಹುಗ್ರಾಮ ಕುಡಿಯುವ ನೀರು ಯೋಜನೆ ಅನುಷ್ಠಾನಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ಯೋಜನೆಯ ಡಿಪಿಆರ್‌, ಅಂದಾಜು ಮೊತ್ತ, ಕಾರ್ಯಾದೇಶದ ಮಾಹಿತಿ ನೀಡಲು ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ ಎಂದು ರೈತಸಂಘ ಆರೋಪಿಸಿದೆ. ಗುರುವಾರ ಕೊಪ್ಪ ವೃತ್ತದಲ್ಲಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮುಂಭಾಗ ಹೆಗ್ಗೋಡು, ಹೊಸಹಳ್ಳಿ, ಮೇಲಿನ ಕುರುವಳ್ಳಿ, ಮುಳುಬಾಗಿಲು, ತೀರ್ಥಮುತ್ತೂರು, ಬಸವಾನಿ, ಕುಡುಮಲ್ಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು ಧರಣಿ ನಡೆಸಿ ದೂರಿದರು.

“ಹೊಸಹಳ್ಳಿ ಗ್ರಾ.ಪಂ. ಕೋಡ್ಲು ಗ್ರಾಮದಲ್ಲಿ ಉದ್ದೇಶಿತ ಕಾಮಗಾರಿ ಚಾಲ್ತಿಯಲ್ಲಿದೆ. ಮಾಹಿತಿ ಹಕ್ಕು ಅಧಿನಿಯಮದಡಿ ಕಾಮಗಾರಿ ಮಾಹಿತಿ ನೀಡುವಂತೆ 36 ದಿನಗಳ ಹಿಂದೆ ಅರ್ಜಿ ಸಲ್ಲಿಸಿ ಮಾಹಿತಿಗೆ ಒದಗಿಸಲು ತಗಲುವ ಎರಡೂವರೆ ಸಾವಿರ ಮೊತ್ತವನ್ನು ಭರಿಸಿದ್ದೇವೆ. ಆದರೆ ಅಧಿಕಾರಿಗಳು ನೀವು ಮೇಲ್ಮನವಿ ಸಲ್ಲಿಸಿ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಗ್ರಾಮಸ್ಥರನ್ನು ಹೊರಗಿಟ್ಟು ಯೋಜನೆ ಅನುಷ್ಠಾನ ಮಾಡುವ ಅಗತ್ಯ ಇತ್ತೇ” ಎಂದು ಆರ್‌ಟಿಐ ಅರ್ಜಿ ಸಲ್ಲಿಸಿದ ಅಭಿಲಾಷ್‌ ಸೌಳಿ ಪ್ರಶ್ನಿಸಿದರು.

“ಗ್ರಾಮಸ್ಥರಿಗೆ ಮಾಹಿತಿ ನೀಡದೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಆರಂಭದಲ್ಲಿ ಪವರ್‌ ಪ್ಲಾಂಟ್‌ ಎಂಬ ಸುದ್ದಿಯನ್ನು ಹರಿಬಿಟ್ಟು ಕಾಮಗಾರಿ ಮಾಡಲು ಮುಂದಾಗಿರುವುದು ಗ್ರಾಮಸ್ಥರಲ್ಲಿ ಅನುಮಾನ ಸೃಷ್ಟಿಸಿದೆ. ಅಧಿಕಾರಿಗಳು ಮಾಹಿತಿ ಕೊಡಲು ಸತಾಯಿಸುತ್ತಿರುವ ಒಳಹುನ್ನಾರ ಏನೆಂಬುದು ತಿಳಿಯುತ್ತಿಲ್ಲ. ಅಧಿಕಾರಿಗಳು ಮಾಹಿತಿ ನಿರಾಕರಣೆ ಮಾಡುತ್ತಿರುವ ಹಿಂದಿನ ಒಳಗುಟ್ಟು ಏನು ಎಂಬುದನ್ನು ಸ್ಪಷ್ಟಪಡಿಸಬೇಕು” ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕೋಡ್ಲು ವೆಂಕಟೇಶ್‌ ಆಗ್ರಹಿಸಿದರು.

ಭೀಮನಕಟ್ಟೆಯಲ್ಲಿರುವ ತುಂಗಾ ನದಿಯಿಂದ ಜಾಕ್ವೆಲ್‌ ಮೂಲಕ ತಾಲ್ಲೂಕಿನ 36 ಗ್ರಾಮ ಪಂಚಾಯಿತಿಯ 1600 ಮಜರೆ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆ ಇದಾಗಿದೆ. ಪ್ರತಿನಿತ್ಯ ಸುಮಾರು 5 ಕೋಟಿ ಲೀಟರ್‌ ನೀರನ್ನು ಶುದ್ಧೀಕರಿಸಿ ಪೂರೈಕೆ ಮಾಡುವ ಯೋಜನೆಯಾಗಿದೆ. ಅಷ್ಟು ಪ್ರಮಾಣದ ನೀರು ಪ್ರಸ್ತುತ ಯೋಜನಾ ಸ್ಥಳದಲ್ಲಿ ಲಭ್ಯವಿಲ್ಲ. ಅಲ್ಲದೇ ಮಲೆನಾಡಿನ ಹಳ್ಳಿಗಳು ಕುಡಿಯುವ ನೀರಿನ ಸ್ವಾವಲಂಬನೆ ಹೊಂದಿದ್ದು ಅವೈಜ್ಞಾನಿಕ ಕಾಮಗಾರಿ ಪರಿಚಯಿಸುವ ಮೂಲಕ ಸ್ಥಳೀಯ ನೈಸರ್ಗಿಕ ಸಮತೋಲನೆ ಹಾಳು ಮಾಡಲಾಗುತ್ತಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.‌
ಈಗಾಗಲೇ ಕಾಮಗಾರಿ ಆರಂಭವಾಗಿದೆ. ಮಾಹಿತಿ ಹಕ್ಕು ಮೂಲಕ ಮಾಹಿತಿ ನೀಡಲು ಆಡಳಿತ ಮಂದ ಧೋರಣೆ ಅನುಸರಿಸುತ್ತಿದೆ. ಮೇಲ್ಮನವಿ ಸಲ್ಲಿಕೆ ಮಾಡಿದರೂ ಸುಮಾರು ಮೂರ್ನಾಲ್ಕು ತಿಂಗಳು ತಗಲುವುದರಿಂದ ಪ್ರತಿಭಟನೆ ಅನಿವಾರ್ಯವಾಗಿದೆ ಎಂದು ರೈತರು ಹೇಳಿದರು.

ಕಚೇರಿಯಲ್ಲಿಲ್ಲ ಅಧಿಕಾರಿಗಳು!

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಯಾವುದೇ ಅಧಿಕಾರಿಗಳು ಮಾಹಿತಿ ನೀಡಲು ಲಭ್ಯವಿಲ್ಲ. ಫೋನ್‌ ಮಾಡಿದರು ಸ್ವೀಕರಿಸುತ್ತಿಲ್ಲ. ಅಧಿಕಾರಿಗಳು ಕಚೇರಿಗೆ ಬೇಕಾಬಿಟ್ಟಿ ಆಗಮಿಸುತ್ತಿದ್ದು ಜನಪ್ರತಿನಿಧಿಗಳ ನಿಯಂತ್ರಣ ತಪ್ಪಿದಂತಿದೆ. ಎಲ್ಲಾ ಪಕ್ಷಗಳು ಪ್ರತಿಭಟನೆ ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದ್ದು ಗ್ರಾಮಸ್ಥರನ್ನು ಕಡೆಗಣಿಸಿದರೆ ತಕ್ಕ ಪಾಠ ಕಲಿಸುತ್ತೇವೆ ಎಂದು ರೈತಸಂಘ ಎಚ್ಚರಿಕೆ ನೀಡಿತು.

ಇದನ್ನೂ ಓದಿ : ಹೊದಲಾದಲ್ಲಿ ಅಪರೂಪದ ಕೆನ್ನಾಯಿಯ ಗುಂಪು ಪತ್ತೆ!!!

Categories
ರಾಜ್ಯ

ಪಡಿತರ ಚೀಟಿ ತಿದ್ದುಪಡಿಗೆ ಸರ್ವರ್ ಸಮಸ್ಯೆ.

ಪಡಿತರ ಚೀಟಿ ತಿದ್ದುಪಡಿಗೆ ಸರ್ವರ್ ಸಮಸ್ಯೆ.
– ಜನರಿಗೆ ದಿನನಿತ್ಯ ಕಚೇರಿಗೆ ಅಲೆದಾಡುವ ಪಡಿಪಾಟಲು!
– ಸೆ.1ರಿಂದ 10ವರೆಗೆ ತಿದ್ದುಪಡಿ, ಸೇರ್ಪಡೆಗೆ ಅವಕಾಶ ಕಲ್ಪಿಸಿದ ಆಹಾರ ಇಲಾಖೆ.
– ತಹಶಿಲ್ದಾರ ನಿರ್ಲಕ್ಷ್ಯ.

NAMMUR EXPRESS NEWS
ಉತ್ತರ ಕನ್ನಡ : ಉತ್ತರ ಕನ್ನಡ ಜಿಲ್ಲೆಯಲ್ಲಿ ಪಡಿತರ ಚೀಟಿಗಳನ್ನು ತಿದ್ದುಪಡಿ ಅಥವಾ ಪರಿಷ್ಕರಣೆ ಮಾಡುವ ಪ್ರಕ್ರಿಯೆಗೆ ತೊಂದರೆಯಾಗಿದೆ. ತಹಶೀಲ್ದಾರ್ ಕಚೇರಿಯಲ್ಲಿ ತಿದ್ದುಪಡಿ ಮಾಡಿಸಬೇಕಿದೆ. ಆನ್ ಲೈನ್ ನಲ್ಲೇ ಹೊಸ ಹೆಸರು ಸೇರ್ಪಡೆ, ವಿಳಾಸ ಬದಲಾವಣೆ ಇತ್ಯಾದಿ ಮಾಡಬೇಕಿದೆ. ಆದರೆ, ಇತ್ತೀಚೆಗೆ ಸರ್ವರ್ ಸಮಸ್ಯೆ ಕಾಡಲಾರಂಭಿಸಿದ್ದು ಆನ್ ಲೈನ್ ಮೂಲಕ ನಡೆಯಬೇಕಿರುವ ಈ ತಿದ್ದುಪಡಿ ಕಾರ್ಯ ಆಗುತ್ತಿಲ್ಲ. ತಮ್ಮ ಕೆಲಸಗಳನ್ನು ಬಿಟ್ಟು ತಾಲೂಕು ಕಚೇರಿಗೆ ಆಗಮಿಸುತ್ತಿರುವ ಜನರು ನಿರಾಸೆಯಿಂದ ಹಿಂದಿರುಗುವಂತಾಗಿದೆ. ಕಳೆದ ಒಂದೂವರೆ ತಿಂಗಳಿನಿಂದ ಇಂಥದ್ದೊಂದು ಸಮಸ್ಯೆ ಕಾಡಲಾರಂಭಿಸಿದೆ.

ಕಾರವಾರ: ತಹಶೀಲ್ದಾರ್ ಕಚೇರಿಗೆ ಪಡಿತರ ಚೀಟಿ ತಿದ್ದುಪಡಿ ಮಾಡಿಸಲು ಆಗಮಿಸುವ ಗ್ರಾಮೀಣ ಭಾಗದ ಸಾರ್ವಜನಿಕರಿಗೆ ಕಂಪ್ಯೂಟರ್‌ನಲ್ಲಿ ಸರ್ವರ್ ಬ್ಯುಸಿ (ತಾಂತ್ರಿಕ ದೋಷ) ಸಮಸ್ಯೆ ಕಾಡುತ್ತಿದೆ. ಕಳೆದ ಒಂದೂವರೆ ತಿಂಗಳಿಂದ ಜಿಪಿಎಸ್ ಸರ್ವರ್ ಸಮಸ್ಯೆಯಿಂದಾಗಿ ಗ್ರಾಮಾಂತರ ಭಾಗದ ಜನರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ತಾಲ್ಲೂಕು ಕಚೇರಿಗೆ ಬಂದರೂ, ತಿದ್ದುಪಡಿ ಕಾರ್ಯ ಪೂರ್ಣವಾಗದೇ ನಿರಾಸೆಯಿಂದ ವಾಪಸ್ಸಾಗುವಂತಾಗಿದೆ. ಸರ್ಕಾರ ವಿವಿಧ ಸೇವೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಮತ್ತು ಜನರಿಗೆ ಅವಶ್ಯವಿರುವ ದಾಖಲಾತಿಗಳನ್ನು ಪೂರೈಸಲು ಇದೀಗ ಆನ್ಲೈನ್ ವ್ಯವಸ್ಥೆ ಜಾರಿಗೊಳಿಸಿದೆ. ಆ ಮೂಲಕವೇ ಸರ್ಕಾರದ ವಿವಿಧ ಸೇವೆಗಳನ್ನು ನೀಡುತ್ತದೆ. ಅದರಲ್ಲಿ ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರ ಇಲಾಖೆಯಿಂದಲೂ ಪಡಿತರಕ್ಕೆ ಸಂಬಂಧಿಸಿದಂತೆ ಹೊಸ ಅರ್ಜಿ ಸ್ವೀಕಾರ, ಹೊಸ ಹೆಸರು ಸೇರ್ಪಡೆ, ಹೆಸರು ಡಿಲಿಟ್ ಮಾಡುವುದು, ವಿಳಾಸ ಬದಲಾವಣೆ, ನ್ಯಾಯಬೆಲೆ ಅಂಗಡಿ ಬದಲಾವಣೆ ಸೇರಿದಂತೆ ಇತ್ಯಾದಿ ಸೇವೆಗಳನ್ನು ಒದಗಿಸಲಾಗುತ್ತದೆ. ಆದರೆ ಕಳೆದ ಒಂದುವರೆ ತಿಂಗಳಿದ ಕಾರವಾರ ಜನತೆಗೆ ಈ ಸೇವೆಗಳು ಧಕ್ಕದಂತಾಗಿದೆ.

ನಿತ್ಯವೂ ತಹಶೀಲ್ದಾರ್ ಕಚೇರಿಗೆ ನೂರಾರು ಜನ ಅಲೆದಾಡುತ್ತಿದ್ದರೂ ದಿನಕ್ಕೊಂದು ಅರ್ಜಿಗಳು ವಿಲೇವಾರಿಯಾಗದಂತಾಗಿದೆ. ಅಧಿಕಾರಿಗಳನ್ನು ಕೇಳಿದರೆ ಸರ್ವರ್ ಸಮಸ್ಯೆ ಕಾರಣ ನೀಡಿ ಅಸಹಾಯಕತೆ ತೋಡಿಕೊಳ್ಳುತ್ತಿದ್ದು, ನಿತ್ಯ ಕೆಲಸ ಕಾರ್ಯ ಬಿಟ್ಟು ದಿನವಿಡಿ ನಿಂತರೂ ಸೇವೆ ಪಡೆಯಲು ಸಾಧ್ಯವಾಗದ ಸ್ಥಿತಿ ಇದೆ.
ಪಡಿತರ ಆನ್ಲೈನ್ ಸೇವೆ ಒದಗಿಸಲು ಎನ್‌ಐಸಿಗೆ ತಂತ್ರಾಶದ ನಿರ್ವಹಣೆ ಜವಾಬ್ದಾರಿ ನೀಡಲಾಗಿದೆ. ಈ ಹಿಂದೆ ದಿನವೊಂದಕ್ಕೆ 70 ಅರ್ಜಿಗಳವರೆಗೆ ವಿಲೇವಾರಿ ಆಗುತ್ತಿತ್ತು. ಆದರೆ ಇದೀಗ ಒಂದು- ಎರಡು ಅರ್ಜಿ ಮಾತ್ರ ವಿಲೇವಾರಿಯಾಗುತ್ತಿದೆ. ಇದರಿಂದ ಜನಸಾಮಾನ್ಯರು ನಿತ್ಯವೂ ಪರದಾಡಬೇಕಾಗಿದೆ ಎಂಬ ದೂರು ಕೇಳಿಬಂದಿದೆ. ಆದರೆ ಈ ಬಗ್ಗೆ ತಹಶಿಲ್ದಾರರನ್ನ ಕೇಳಿದ್ರೆ, ಈಗಾಗಲೇ ಈ ಸಮಸ್ಯೆಯನ್ನು ಆಹಾರ ನಾಗರಿಕ ಸರಬರಾಜು ಇಲಾಖೆ ಆಯುಕ್ತರ ಗಮನಕ್ಕೆ ತಂದಿದ್ದು, ಶೀಘ್ರದಲ್ಲಿಯೇ ಬಗೆಹರಿಸುವ ಭರವಸೆ ನೀಡಿದ್ದರು. ಇನ್ನೊಂದು ವಾರದಲ್ಲಿ ಸಮಸ್ಯೆ ಪರಿಹಾರವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ : ಮಳೆಗಾಗಿ ಪುಟ್ಟ ಮಕ್ಕಳಿಗೆ ಶಾಸ್ರೋಕ್ತವಾಗಿ ಮದುವೆ ಮಾಡಿದ ಗ್ರಾಮಸ್ಥರು
[embedyt] https://www.youtube.com/watch?v=7aC6PnGPWLU%5B/embedyt%5D