Categories
ಶಿವಮೊಗ್ಗ

ಅರಣ್ಯ ಪ್ರದೇಶ ಒತ್ತುವರಿ ತೆರವಿಗೆ ಸರಕಾರ ಸಜ್ಜು!

ಅರಣ್ಯ ಪ್ರದೇಶ ಒತ್ತುವರಿ ತೆರವಿಗೆ ಸರಕಾರ ಸಜ್ಜು!
– ಮಲೆನಾಡು, ಕರಾವಳಿ ಭಾಗದ ಜನರಿಗೆ ಎಚ್ಚರಿಕೆ ಗಂಟೆ
– ತೆರವು ಆರಂಭವಾದರೆ ಲಕ್ಷ ಲಕ್ಷ ಕುಟುಂಬ ಬೀದಿಪಾಲು

NAMMUR EXPRESS NEWS
ಶಿವಮೊಗ್ಗ: ಮಲೆನಾಡ ಅರಣ್ಯ ಒತ್ತುವರಿ ಸಮಸ್ಯೆ ಮತ್ತಷ್ಟು ಜಟಿಲವಾಗುವ ಸಾಧ್ಯತೆಗಳು ಹೆಚ್ಚಿವೆ. ಒತ್ತುವರಿ ಅರಣ್ಯ ಪ್ರದೇಶ ತೆರವಿಗೆ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರವು ಅರಣ್ಯ ಇಲಾಖೆಗೆ ಸೂಚನೆ ನೀಡಿದೆ.
ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಕರಾವಳಿ ಒತ್ತುವರಿ ಪ್ರದೇಶ ಗುರುತು, ತೆರವು ಕುರಿತಂತೆ ಅರಣ್ಯ ಇಲಾಖೆ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಿಲ್ಲ ಎಂದು ಸರಕಾರ ತೀವ್ರ ಅಸಮಾಧಾನ ಹೊರಹಾಕಿದೆ. ಈ ಬೆಳವಣಿಗೆ ಅರಣ್ಯ ಇಲಾಖೆ ಅಧಿ ಕಾರಿಗಳನ್ನು ಇಕ್ಕಟ್ಟಿಗೆ ಸಿಕ್ಕಿಸಿದ್ದರೆ, ಒತ್ತುವರಿದಾರರಿಗೆ ಬೀದಿ ಪಾಲಾಗುವ ಭೀತಿ ಎದುರಾಗಿಸಿದೆ.
ಸರಕಾರದ ಸೂಚನೆಯಂತೆ ಒತ್ತುವರಿ ತೆರವು, ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವ ಎದುರಾಗಿದೆ. ತೆರವು ಆರಂಭಗೊಂಡರೆ ಲಕ್ಷಾಂತರ ಕುಟುಂಬಗಳ ಬದುಕು ಸಂಕಷ್ಟ ಕ್ಕೀಡಾಗಲಿದೆ. ಹಲವು ವರ್ಷದಿಂದ ಒತ್ತುವರಿ ತೆರವು ಸ್ಥಗಿತವಾಗಿದೆ. ತಕ್ಷಣ ಕಾರಪಡೆ ರಚಿಸಿ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಬೇಕು. ಅರಣ್ಯ ಪ್ರದೇಶಕ್ಕೆ ಸಂಬಂಧಪಟ್ಟಂತೆ ನೂರಾರು ವರ್ಷದ ದಾಖಲೆ ಇದ್ದರೂ ಒತ್ತುವರಿ ತೆರವು ಮಾಡದ ಅರಣ ಇಲಾಖೆ ಧೋರಣೆಯನ್ನು ಸರಕಾರವೇ ಪ್ರಶ್ನಿಸಿದೆ. ಸೂಕ್ತ ಅಭಿಪ್ರಾಯದೊಂದಿಗೆ ಪರಿಶೀಲನೆ ಕಡತ ಮಂಡಿಸುವಂತೆ ಆದೇಶಿಸಿದೆ. ಈ ಸಂಬಂಧ ಅರಣ್ಯ ಖಾತೆ ಸಚಿವ ಈಶ್ವರಖಂಡೆ ಸೆಪ್ಟೆಂಬರ್ 22ರಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಮಲೆನಾಡಲ್ಲಿ ಕಾಡು ನಾಡು ಒಟ್ಟಿಗೆ ಇದೆ!

ಮಲೆನಾಡಿನಲ್ಲಿ ಕಾಡು ನಾಡು ಬಹುತೇಕ ಒಟ್ಟಿಗೆ ಇದೆ. ಇಲ್ಲಿ ಮಾನವ ಮತ್ತು ಅರಣ್ಯ ಸಂಘರ್ಷ ನಿನ್ನೆ ಮೊನ್ನೆಯದಲ್ಲ. ಆದರೆ ಸರ್ಕಾರ ಮತ್ತು ಜನ ಇಬ್ಬರೂ ಹೊಂದಾಣಿಕೆ ಬದುಕು ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಜನರ ಬದುಕಿನ ಬಗ್ಗೆಯೂ ಯೋಚಿಸಬೇಕಿದೆ.

Categories
ಶಿವಮೊಗ್ಗ

ಬೈಕ್ ಹುಚ್ಚಿಗೆ ಮೂವರು ಬಾಲಕರು ಬಲಿ!

ಬೈಕ್ ಹುಚ್ಚಿಗೆ ಮೂವರು ಬಾಲಕರು ಬಲಿ!
– ಭದ್ರಾವತಿಯಲ್ಲಿ ಲಾರಿ ಹರಿದು ಮೂವರು ಸ್ಥಳದಲ್ಲೇ ಸಾವು!
– ಓವರ್ ಟೇಕ್ ಮಾಡುವ ಕ್ರೇಜಿಗೆ ಜೀವನವೇ ಬಲಿ

NAMMUR EXPRES NEWS
ಭದ್ರಾವತಿ : ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬಿದ್ದವರ ಮೇಲೆ ಲಾರಿ ಹರಿದು ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಹೊಳೆಹೊನ್ನೂರು ಸಮೀಪ ನಡೆದಿದೆ. ಕಲ್ಲಿಹಾಳ್-ಅರಹತೊಳಲು ಗ್ರಾಮದ ಬಳಿ ಈ ಘಟನೆ ನಡೆದಿದೆ. ಒಂದೇ ಬೈಕ್‌ನಲ್ಲಿ ತೆರಳುತ್ತಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಂದು ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ವಿಕಾಸ್ (18), ಯಶ್ವಂತ(17) ಶಶಾಂಕ (17) ಮೃತಪಟ್ಟ ದುರ್ದೈವಿಗಳು. ಮೃತರು ಹಳೆ ಜಂಬರಗಟ್ಟ ನಿವಾಸಿಗಳು ಎಂದು ತಿಳಿದುಬಂದಿದೆ.

ಎರಡು ಬೈಕ್‌ಗಳ ನಡುವೆ ಡಿಕ್ಕಿಯಾಗಿದ್ದು, ಸವಾರರು ರಸ್ತೆಗೆ ಬಿದ್ದಿದ್ದಾರೆ. ಮತ್ತೊಂದೆಡೆ ವೇಗವಾಗಿ ಬರುತ್ತಿದ್ದ ಲಾರಿ ರಸ್ತೆ ಮೇಲೆ ಬಿದ್ದಿದ್ದ ಬೈಕ್ ಸವಾರರ ಮೇಲೆ ಹರಿದಿದೆ. ಪರಿಣಾಮ ಒಂದೇ ಬೈಕ್‌ನಲ್ಲಿ ತೆರಳುತ್ತಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಂದು ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ.

ಕೈಮರ ಕಡೆಯಿಂದ ಬಸವರಾಜ್ ಕಲ್ಲಿಹಾಳ್ ಕಡೆಗೆ ತೆರಳುತ್ತಿದ್ದ. ಇದೇ ವೇಳೆ ಲಾರಿ ಹಾಗೂ ಬೈಕ್ ಎದುರಿನಿಂದ ಬರುತ್ತಿದ್ದವು. ಲಾರಿಯನ್ನು ಓವರ್‌ಟೇಕ್ ಮಾಡಲು ಹೋಗಿ ಮೂವರಿದ್ದ ಬೈಕ್ ಮತ್ತೊಂದು ಬೈಕ್‌ಗೆ ಡಿಕ್ಕಿಯಾಗಿದೆ. ಆಗ, ಎರಡೂ ಬೈಕ್ ಸವಾರರಿಗೆ ನಿಯಂತ್ರಣ ತಪ್ಪಿದ್ದು, ಸವಾರರು ರಸ್ತೆಗೆ ಬಿದ್ದಿದ್ದಾರೆ. ಆಗ ಮತ್ತೊಂದಡೆ ವೇಗವಾಗಿ ಚಲಿಸುತ್ತಿದ್ದ ಲಾರಿ ಮೂವರ ಮೇಲೆ ಹರಿದಿದೆ. ಇದರಿಂದ ಮೂವರು ಸ್ಥಳದಲ್ಲೇ ಮೃತಟ್ಟಿದ್ದು, ದೇಹಗಳು ಛಿದ್ರಗೊಂಡಿವೆ. ಇನ್ನು ಲಾರಿ ಚಾಲಕ ಪರಾರಿಯಾಗಿದ್ದಾನೆ. ಘಟನೆ ಕುರಿತು ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ಸಿನಿಮಾ

ಬರಲಿದೆ ಕೆಜಿಎಫ್ -3 ಸಿನಿಮಾ!

ಬರಲಿದೆ ಕೆಜಿಎಫ್ -3 ಸಿನಿಮಾ!
– ಹೊಂಬಾಳೆ ಫಿಲ್ಮ್ಸ್ ನಿಂದ ಹೊರಬಿತ್ತು ಸಿಹಿಸುದ್ದಿ
– ಹೊಸ ಲುಕ್ ಅಲ್ಲಿ ಕಾಣಲಿದ್ದಾರೆ ಯಶ್

NAMMUR EXPRESS NEWS
ಬಹುನೀರಿಕ್ಷಿತ ಕೆಜಿಎಫ್ ಸರಣಿ ಮುಂದುವರೆಯಲಿದ್ದು, ಕೆಜಿಎಫ್-2 ಬಳಿಕ, ಕೆಜಿಎಫ್ 3 ಸಿನಿಮಾ ತೆರೆಗೆ ಬರಲಿದೆ ಎಂದು ಹೊಂಬಾಳೆ ತಂಡ ಖಚಿತಪಡಿಸಿದೆ. ಸ್ಯಾಂಡಲ್ ವುಡ್ ಗೆ ಬಾಲಿವುಡ್ ಮೀರಿ ನಿಲ್ಲುವ ಶಕ್ತಿ ನೀಡಿದ್ದು ಕೆಜಿಎಫ್ ಹಾಗೂ ಕೆಜಿಎಫ್ 2. ಸೀರಿಯಲ್ ನಿಂದ ಕೆರಿಯರ್ ಆರಂಭಿಸಿ ಚಂದನವನದಲ್ಲಿ ಸಾಲು ಸಾಲು ಸಿನಿಮಾ ಮಾಡಿ ಗೆದ್ದಿದ್ದ ರಾಕಿಂಗ್ ಸ್ಟಾರ್ ಯಶ್ ಗೆ ಅಂತಾರಾಷ್ಟ್ರೀಯ ಮಾನ್ಯತೆ ಹಾಗೂ ಹಾಲಿವುಡ್ ಸಿನಿಮಾ ಕ್ಷೇತ್ರವೂ ಬೆಳೆಯುವಂತಹ ಬ್ರೇಕ್ ನೀಡಿದ್ದು ಕೆಜಿಎಫ್ ಸಿನಿಮಾ ಈಗ 3ನೇ ಅವತಾರದಲ್ಲೂ ಬರಲಿದೆ.2024 ರಲ್ಲಿ ಚಿತ್ರೀಕರಣ ಆರಂಭಿಸಲಿರುವ ಹೊಂಬಾಳೆ ಸಂಸ್ಥೆ 2025 ರಲ್ಲಿ ಅಂದ್ರೇ ಬಹುತೇಕ 2025 ರ ಡಿಸೆಂಬರ್ ವೇಳೆಗೆ ಕೆಜಿಎಫ್ 3 ಸಿನಿಮಾ ತೆರೆಗೆ ಬರಲಿದೆ.

ಕೆಜಿಎಫ್ 3 ಪ್ರೊಡಕ್ಷನ್ ಕೆಲಸ 2023ರ ಡಿಸೆಂಬರ್ ನಲ್ಲಿ ಆರಂಭವಾಗಲಿದ್ದು, 2024ರಲ್ಲಿ ಹೊಂಬಾಳೆ ಸಿನಿಮಾ ಚಿತ್ರೀಕರಣ ಆರಂಭಿಸಲಿದೆ ಎನ್ನಲಾಗ್ತಿದೆ. ಒಟ್ಟಿನಲ್ಲಿ 2025 ರಲ್ಲಿ ಕೆಜಿಎಫ್ 3 ತೆರೆಗೆ ಬರೋದು ಫಿಕ್ಸ್. ಈಗಾಗಲೇ ಸಿನಿಮಾ ನಟ ಹಾಗೂ ನಿರ್ಮಾಪಕ, ನಿರ್ದೇಶಕರ ನಡುವೆ ಹಲವು ಸುತ್ತಿನ ಮಾತುಕತೆ ನಡೆದಿದ್ದು ಕತೆಗೆ ಅಂತಿಮ ರೂಪ ನೀಡಲಾಗುತ್ತಿದೆ.
ಯಶ್ ಈ ಸಿನಿಮಾದಲ್ಲಿ ಹಿಂದೆಂದಿಗಿಂತ ವಿಭಿನ್ನವಾಗಿ ಕಾಣಿಸಲಿದ್ದು, ಹಾಲಿವುಡ್ ಸಾಹಸ ನಿರ್ದೇಶಕರು ಯಶ್ ಸಾಹಸವನ್ನು ನಿರ್ದೇಶಿಸಲಿದ್ದಾರಂತೆ. ಯಶ್ ಅಲಿಯಾಸ್ ರಾಕಿ ಬಾಯ್ ಸಂಪತ್ತಿನ ಅನ್ವೇಷಣೆ ಹಾಗೂ ಅಧಿಕಾರದ ಸುತ್ತ ಕೆಜಿಎಫ್ 3 ಕತೆ ಹೆಣೆಯಲಾಗಿದೆ ಎನ್ನಲಾಗ್ತಿದೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಬಸ್ ಸ್ಟಾಂಡ್ ಗಣೇಶ ಅದ್ದೂರಿ ವಿಸರ್ಜನೆ

ತೀರ್ಥಹಳ್ಳಿ ಬಸ್ ಸ್ಟಾಂಡ್ ಗಣೇಶ ಅದ್ದೂರಿ ವಿಸರ್ಜನೆ
– ವಿವಿಧ ಕಲಾ ತಂಡಗಳ ಮೆರವಣಿಗೆ: ಸೌಂಡ್ಸ್ ಜತೆ ಹೆಜ್ಜೆ ಹಾಕಿದ ಯುವಕರು
– ಸರಳ ಜ್ಞಾನೇಂದ್ರ ನೇತೃತ್ವದಲ್ಲಿ ವಿಶೇಷ ಕಾರ್ಯಕ್ರಮ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ಪ್ರತಿಷ್ಠಿತ ಗಣೇಶೋತ್ಸವಗಳಲ್ಲಿ ಒಂದಾಗಿರುವ ಮುಖ್ಯ ಬಸ್ ನಿಲ್ದಾಣದ ಗಣೇಶನ ವಿಸರ್ಜನೆ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ಇಂದು ಅದ್ದೂರಿಯಾಗಿ ನಡೆಯಲಿದೆ. ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಹುಲಿವೇಷ, ನಾಸಿಕ್ ಬ್ಯಾಂಡ್, ಕೀಲುಕುದುರೆ, ಡಿಜೆ ಸೇರಿದಂತೆ ಹಲವು ವೈವಿಧ್ಯಗಳ ಜೊತೆಗೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಹೆಜ್ಜೆ ಹಾಕಲಾಯಿತು. ಬಳಿಕ ತುಂಗಾ ನದಿಯಲ್ಲಿ ವಿಸರ್ಜನೆ ಮಾಡಲಾಯಿತು.
ಸರಳ ಜ್ಞಾನೇಂದ್ರ ನೇತೃತ್ವದಲ್ಲಿ ಕಾರ್ಯಕ್ರಮ ನಡೆದಿದ್ದು ನೂರಾರು ಯುವಕರು ಮಳೆಯಲ್ಲೇ ಹೆಜ್ಜೆ ಹಾಕಿದರು.