Categories
ಶಿವಮೊಗ್ಗ

ಶಿವಮೊಗ್ಗದಲ್ಲಿ ಈದ್ ಮೆರವಣಿಗೆ ವೇಳೆ ಕಲ್ಲು ತೂರಾಟ!

ಶಿವಮೊಗ್ಗದಲ್ಲಿ ಈದ್ ಮೆರವಣಿಗೆ ವೇಳೆ ಕಲ್ಲು ತೂರಾಟ!
– ರಾಗಿಗುಡ್ಡದಲ್ಲಿ ಕಲ್ಲು ತೂರಾಟ, 144 ಸೆಕ್ಷನ್ ಜಾರಿ
– ಶಿವಮೊಗ್ಗ ನಗರದಲ್ಲಿ ಭಾರೀ ಬಂದೋಬಸ್ತ್

NAMMUR EXPRESS NEWS
ಶಿವಮೊಗ್ಗ: ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಶಿವಮೊಗ್ಗ ನಗರದ ರಾಗಿಗುಡ್ಡದಲ್ಲಿ ಕಲ್ಲು ತೂರಾಟವಾಗಿದೆ. ಸಂಜೆ ವೇಳೆಗೆ ಈ ಘಟನೆ ಸಂಭವಿಸಿದೆ. ವಾಹನಗಳು, ಮನೆಗಳು, ಪೊಲೀಸರ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ. ಈ ಹಿನ್ನೆಲೆ ರಾಗಿಗುಡ್ಡದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಕಲ್ಲು ತೂರಾಟ ಸಂಬಂಧ ಪೊಲೀಸರು ಹಲವರನ್ನು ವಶಕ್ಕೆಪಡೆದಿದ್ದಾರೆ ಎನ್ನಲಾಗಿದೆ. ಶಿವಮೊಗ್ಗ ನಗರ ಸೇರಿ ಜಿಲ್ಲೆಯಲ್ಲಿ ಪೊಲೀಸರು ಬಂದೋಬಸ್ತ್ ಒದಗಿಸಿದ್ದಾರೆ.

Categories
ಬೆಂಗಳೂರು

ಶಾಲೆಗಳಲ್ಲಿ ಇನ್ಮುಂದೆ ಸಂವಿಧಾನ ಪೀಠಿಕೆ ಓದು ಕಡ್ಡಾಯ

ಶಾಲೆಗಳಲ್ಲಿ ಇನ್ಮುಂದೆ ಸಂವಿಧಾನ ಪೀಠಿಕೆ ಓದು ಕಡ್ಡಾಯ
– ವಿದ್ಯಾರ್ಥಿಗಳು ಪ್ರತಿನಿತ್ಯ ಪ್ರಾರ್ಥನೆ ಸಮಯದಲ್ಲಿ ಪಾಲನೆ
– ರಾಜ್ಯ ಸರ್ಕಾರದ ಮಹತ್ವದ ಆದೇಶ

NAMMUR EXPRESS NEWS
ಬೆಂಗಳೂರು: ಶಾಲೆಗಳಲ್ಲಿ ವಿದ್ಯಾರ್ಥಿಗಳು ಪ್ರತಿನಿತ್ಯ ಪ್ರಾರ್ಥನೆ ಸಮಯದಲ್ಲಿ `ಸಂವಿಧಾನ ಪೀಠಿಕೆ’ ಓದುವುದು ಮತ್ತು ಶಾಲೆಗಳಲ್ಲಿ ಪೀಠಿಕೆಯನ್ನು ಪ್ರದರ್ಶಿಸುವುದು ಕಡ್ಡಾಯ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಭಾರತ ಸಂವಿಧಾನದ ಪೀಠಿಕೆಯನ್ನು ಶೈಕ್ಷಣಿಕ ಸಂಸ್ಥೆಗಳಲ್ಲಿ ವಿಧ್ಯಾರ್ಥಿಗಳು ಹಾಗೂ ಶಿಕ್ಷಕರು ಪ್ರತಿ ನಿತ್ಯ ಶಾಲೆಗಳಲ್ಲಿ ಪ್ರಾರ್ಥನ ಸಮಯದಲ್ಲಿ ಓದುವ ಕುರಿತು ಹಾಗೂ ಹಾಗೂ ಉಲ್ಲೇಖ (1) ರ ಸರ್ಕಾರದ ಆದೇಶ ದಿನಾಂಕ:30/06/2023 ರ ನಿತ್ಯ ಸಂವಿಧಾನ ಪೀಠಿಕೆಯ ಫಲಕವನ್ನು ಶಾಲೆಗಳಲ್ಲಿ ಸೂಕ್ತ ಸ್ಥಳದಲ್ಲಿ ಅಳವಡಿಸಲು ಈಗಾಗಲೇ ತಿಳಿಸಲಾಗಿದೆ. ಸದರಿ ಕಾರ್ಯಕ್ರಮದ ಕುರಿತು ಕೈಗೊಂಡಿರುವ ಪ್ರಗತಿ ವರದಿಯನ್ನು ಕೆಳಕಂಡ ನಮೂನೆಯಲ್ಲಿ ದಿನಾಂಕ:04/10/2023 ಅಂತ್ಯದೊಳಗೆ ಈ ಕಛೇರಿಗೆ ಸಲ್ಲಿಸಲು ತಿಳಿಸಿದೆ.

ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಸಕಾಲ ಸಚಿವರು ದಿನಾಂಕ:06/10/2023 ರಂದು ನಡೆಯಲ್ಲಿರುವ ಉಪನಿರ್ದೇಶಕರ ಸಭೆಯಲ್ಲಿ ಸದರಿ ಕಾರ್ಯಕ್ರಮದ ಪರಿಶೀಲನೆ ನಡೆಸುವರು. ಆಯಾ ಜಿಲ್ಲಾ ಉಪನಿರ್ದೇಶಕರು ತಮ್ಮ ಜಿಲ್ಲೆಯಲ್ಲಿ ಸದರಿ ಕಾರ್ಯಕ್ರಮ ಅನುಷ್ಠಾನ ಕುರಿತು ಆಯ್ದ ಫೋಟೋಗಳನ್ನು ಮತ್ತು ವಿಡಿಯೋ ಕ್ಲಿಪ್ಪ್ ಗಳನ್ನು ಪೆನ್ ಡ್ರೈವ್ ಮೂಲಕ ತಂದು ಪ್ರದರ್ಶಿಸಲು ತಿಳಿಸಿದೆ.

Categories
ಮಾಹಿತಿ

ರಾಷ್ಟ್ರಪಿತನಿಗೆ ದೇಶದ ನಮನ..!

ರಾಷ್ಟ್ರಪಿತನಿಗೆ ದೇಶದ ನಮನ..!
– ಅಹಿಂಸೆ ಮೂಲಕ ದೇಶ ಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮ
– ದೇಶದೆಲ್ಲೆಡೆ ಗಾಂಧಿ ಜಯಂತಿ ಆಚರಣೆ: ನುಡಿ ನಮನ

NAMMUR EXPRESS NEWS
ಭಾರತಕ್ಕೆ ಬ್ರಿಟೀಷರ ದಾಸ್ಯದಿಂದ ಮುಕ್ತಿ ಕೊಡಿಸಿದ ಮಹಾನ್ ನಾಯಕ ಗಾಂಧೀಜಿ ಅವರ ತ್ಯಾಗ, ಸೇವೆಯನ್ನು ನೆನೆಯುವ ಗಾಂಧಿಯವರ ಜನ್ಮದಿನವನ್ನು ದೇಶದ ಎಲ್ಲಾ ಕಡೆ ಆಚರಣೆ ಮಾಡಲಾಗುತ್ತದೆ.1869ರಲ್ಲಿ ಭಾರತದ ಪೋರಬಂದರ್‌ನಲ್ಲಿ ಗಾಂಧಿ ಜನಿಸಿದರು. ತಂದೆ ಕರಮಚಂದ ಗಾಂಧಿ ಮತ್ತು ತಾಯಿ ಪುತಲಿಬಾಯಿ. 13 ನೇ ವಯಸ್ಸಿನಲ್ಲಿ, ಮಹಾತ್ಮ ಗಾಂಧಿಯವರು ಕಸ್ತೂರ್ಬಾ ಅವರನ್ನು ವಿವಾಹವಾದರು, ಇದು ನಿಯೋಜಿತ ವಿವಾಹವಾಗಿದೆ. ಅವರಿಗೆ ಹರಿಲಾಲ್, ಮಣಿಲಾಲ್, ರಾಮದಾಸ್ ಮತ್ತು ದೇವದಾಸ್ ಎಂಬ ನಾಲ್ಕು ಗಂಡು ಮಕ್ಕಳಿದ್ದರು. ಕಸ್ತೂರ್ಬಾ ಅವರು1944 ರಲ್ಲಿ ಇಹ ಲೋಕ ತ್ಯಜಿಸಿದರು.

ಇವರು ತನ್ನ ಕೊನೆಯ ಕ್ಷಣದ ಒಳಗೂ ಗಾಂಧಿಯ ಎಲ್ಲ ಕೆಲಸದಲ್ಲೂ ಪಾಲುದಾರರಾಗಿದ್ದರು.
ಗಾಂಧಿಯವರು ತನ್ನ18 ನೇ ವಯಸ್ಸಿನಲ್ಲಿ ಓದಲು ವಿದೇಶಕ್ಕೆ ತೆರಳಿ ಆಲ್ಲಿ ಕಾನೂನು ಪದವಿಯನ್ನು ಪಡೆದರು. ದಕ್ಷಿಣ ಆಫ್ರಿಕಕ್ಕೆ ಹೋದಾಗ ಅಲ್ಲಿನ ಕಪ್ಪು ಬಿಳಿಯರ ಮೇಲಿನ ತಾರತಮ್ಯ ಅವರನ್ನು ಹೋರಾಟಕ್ಕೆ ದುಮುಕುವಂತೆ ಮಾಡಿತು. ಆಲ್ಲಿ ಹೋರಾಡಿ ಕರಿಯರಿಗೆ ದಕ್ಷಿಣ ಆಫ್ರಿಕನ್ನರು ಮತದಾನದ ಹಕ್ಕನ್ನು ಗಳಿಸಿದ ನಂತರದ ವರ್ಷಗಳಲ್ಲಿ (1994), ಹಲವಾರು ಸ್ಮಾರಕಗಳೊಂದಿಗೆ ಗಾಂಧಿಯನ್ನು ರಾಷ್ಟ್ರೀಯ ನಾಯಕ ಎಂದು ಘೋಷಿಸಲಾಯಿತು.

ಜ.30 1948ರಲ್ಲಿ ಹಿಂದೂ ರಾಷ್ಟ್ರೀಯವಾದಿ ನಾಥುರಾಮ್ ಗೋಡ್ಸೆ  ಗಾಂಧಿಯನ್ನು ಶೂಟ್ ಮಾಡಿ ಕೊಲೆ ಮಾಡಲಾಯಿತು.
ಮಹಾತ್ಮ ಗಾಂಧೀಜಿ ಅವರು ಭಾರತದ ಸ್ವಾತಂತ್ರ್ಯ ಚಳುವಳಿಯ ಚುಕ್ಕಾಣಿಯನ್ನು ಹಿಡಿದವರು.ಅನೇಕ ಹೋರಾಟಗಾರು ಹುರಿದುಂಬಿಸುತ್ತಾ ಹಲವಾರು ಚಳುವಳಿಗಳನ್ನು ಆರಂಭಿಸಿದರು. ಬ್ರಿಟಿಷ್ ವಿರುದ್ಧ ಹೊರಾಡಲು ಮಹಾತ್ಮ ಗಾಂಧೀಜಿ ಅವರು ಭಾರತದ ಜನರಿಗೆ ನೀಡಿದ ದಿವ್ಯಾಸ್ತ್ರವೆಂದರೆ, ಸತ್ಯಾಗ್ರಹ, ವಿದೇಶಿವಸ್ತುಗಳಿಗೆ ಬಹಿಷ್ಕಾರ, ಉಪ್ಪಿನ ಸತ್ಯಾಗ್ರಹ, ಅಸಹಕಾರ ಚಳುವಳಿ, ಅಮರಣ ಉಪವಾಸ ಇವುಗಳನ್ನು ಮುನ್ನೆಡೆಸುವ ಮೂಲಕ ಮಹಾತ್ಮ ಗಾಂಧಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೆಚ್ಚಿಸಿದ್ದರು.

ಅವರು ಭಾರತಕ್ಕೆ ಹಿಂದಿರುಗಿದಾಗ ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಗಾಂಧಿಯವರ ಆಕ್ರಮಣವು ವೇಗವನ್ನು ಪಡೆಯಿತು. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸಿದ್ಧಾಂತ ಮತ್ತು ಕಾರ್ಯತಂತ್ರಗಳನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದರು, ಅಹಿಂಸಾತ್ಮಕ ಪ್ರತಿರೋಧ ಮತ್ತು ನಾಗರಿಕ ಅಸಹಕಾರವನ್ನು ಬ್ರಿಟಿಷ್ ದಬ್ಬಾಳಿಕೆಗೆ ಸವಾಲು ಹಾಕುವ ಸಾಧನವಾಯಿತು.

1942ರಲ್ಲಿ ಗಾಂಧೀಜಿ ಅವರು ಬ್ರಿಟಿಷರ ವಿರುದ್ಧ ಭಾರತ ಬಿಟ್ಟು ತೊಲಗಿ ಚಳುವಳಿ ಆರಂಭಿಸಿದರು. ಇದೇ ಕೊನೆಯ ಹೋರಾಟ ಎಂದ ಗಾಂಧೀಜಿಯವರು, ಭಾರತೀಯರಿಗೆ ಮಾಡು ಇಲ್ಲವೆ ಮಡಿ ಎನ್ನುವ ಕರೆಯನ್ನು ನೀಡಿದರು, ಈ ಹೋರಾಟದಲ್ಲಿ ಸಾಕಷ್ಟು ಸಾವು, ನೋವುಗಳು ಸಂಭವಿಸಿದರೂ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ಛಲ ಬಿಡದ ಹೋರಾಟದಿಂದ 1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದೊರಕಿತು.

ಅಂತರಾಷ್ಟ್ರೀಯ ಅಹಿಂಸಾ ದಿನ :

ಪ್ರತಿ ವರ್ಷ ಅಕ್ಟೋಬರ್ 2 ರಂದು, ರಾಷ್ಟ್ರಕ್ಕೆ ಅವರ ಕೊಡುಗೆಗಳನ್ನು ಗೌರವಿಸಲು ರಾಷ್ಟ್ರೀಯ ರಜಾದಿನವನ್ನು ಆಚರಿಸಲಾಗುತ್ತದೆ. ಜೂನ್ 15, 2007 ರಂದು, ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ ಅವರ ಗೌರವಾರ್ಥವಾಗಿ ಅಕ್ಟೋಬರ್ 2 ಅನ್ನು ಅಂತರಾಷ್ಟ್ರೀಯ ಅಹಿಂಸಾ ದಿನ ಎಂದು ಘೋಷಿಸಿತು. ಈ ದಿನವು ಶಾಂತಿ, ಸಹಿಷ್ಣುತೆ, ತಿಳುವಳಿಕೆ ಮತ್ತು ಅಹಿಂಸೆಯ ಸಂಸ್ಕೃತಿಯನ್ನು ಸುರಕ್ಷಿತಗೊಳಿಸುವ ಗುರಿಯೊಂದಿಗೆ ಅಹಿಂಸೆಯ ಪರಿಕಲ್ಪನೆಯ ಸಾರ್ವತ್ರಿಕ ಮಹತ್ವವನ್ನು ಗೌರವಿಸುತ್ತದೆ.

ಮಹಾತ್ಮಾ ಗಾಂಧಿಯವರು ಭಾರತವನ್ನು ಬ್ರಿಟಿಷರ ಆಳ್ವಿಕೆಯಿಂದ ಮುಕ್ತಗೊಳಿಸಲು ಪ್ರಯತ್ನಿಸಿದರು ಮತ್ತು ಅದರಲ್ಲಿ ಅವರು ಯಶಸ್ವಿಯಾದರು. ಸಮಾಜದಲ್ಲಿ ಹರಡಿರುವ ಅನಿಷ್ಟಗಳನ್ನು ಹೋಗಲಾಡಿಸಲು, ತಾರತಮ್ಯ ತೊಲಗಿಸಲು, ಅಸ್ಪೃಶ್ಯತೆ ತೊಲಗಿಸಲು, ಸಮಾಜಕ್ಕೆ ಅಹಿಂಸೆ ಮತ್ತು ಸತ್ಯದ ಮಾರ್ಗದಲ್ಲಿ ನಡೆಯಲು ದಾರಿದೀಪ ಆಯ್ತು . ಇವರನ್ನು ರಾಷ್ಟ್ರಪಿತ ಬಾಪೂಜಿ ಎಂದು ತುಂಬಾ ಪ್ರೀತಿಯಿಂದ ಕರೆಯಲಾಗುತ್ತದೆ.

ದೌರ್ಜನ್ಯಗಳ ವಿರುದ್ಧ ಅಹಿಂಸಾ ಮಾರ್ಗದಲ್ಲಿ ನಡೆದು ಭಾರತಕ್ಕೆ ಸ್ವಾತಂತ್ರ್ಯ ದೊರಕಿಸುವಲ್ಲಿ ತಮ್ಮ ಪಾತ್ರವನ್ನು ವಹಿಸಿದ್ದರು. ಗಾಂಧೀಜಿಯವರು ನಮನು ಅಗಲಿರಬಹುದು ಆದರೆ ಚಿಂತನೆಗಳು ಎಲ್ಲರಿಗೂ ಮಾರ್ಗದರ್ಶಿಸಲ್ಪಡುತ್ತಿದ್ದೇವೆ.
ಜನ್ಮದಿನವನ್ನು ಸ್ಮರಿಸುವಲ್ಲಿ ಮಾತ್ರವಲ್ಲದೆ ಅವರ ಅದಮ್ಯ ಮನೋಭಾವ, ನಾಯಕತ್ವ ಮತ್ತು ಸಾಮಾಜಿಕ ನ್ಯಾಯ ಮತ್ತು ಶಾಂತಿಗಾಗಿ ಅಚಲ ಬದ್ಧತೆಯನ್ನು ಗುರುತಿಸುವಲ್ಲಿಯೂ ಇದೆ.

ಸ್ವಚ್ಛ ಭಾರತ್ ಮಿಷನ್ ಮೂಲಕ ಶ್ರಮದಾನ

2014ರ ಗಾಂಧಿ ಜಯಂತಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ್ ಮಿಷನ್ ಅನ್ನು ಪ್ರಾರಂಭಿಸಿದರು ಇಲ್ಲಿದ ಪ್ರತಿ ವರ್ಷ ಗಾಂಧಿ ಜಯಂತಿಯ ಅಂಗವಾಗಿ ಶಾಲಾ ಕಾಲೇಜಿನಲ್ಲಿ ಹಾಗೂ ಎಲ್ಲಾ ಸರ್ಕಾರಿ ಕಚೇರಿಯಲ್ಲಿ ಶ್ರಮದಾನವನ್ನು ನಡೆಸಿ ಗೌರವನ್ನು ನೀಡಲಾಗುತ್ತದೆ.

ಗಾಂಧೀಜಿ ಅವರಿಗೆ ನಮ್ಮೂರ್ ಎಕ್ಸ್ ಪ್ರೆಸ್ ಗೌರವ ನಮನ

Categories
ಮಲ್ನಾಡ್

ಮಲೆನಾಡಿನಲ್ಲಿ ಮಳೆ ಅಬ್ಬರ: ಜನ ತತ್ತರ..!

ಮಲೆನಾಡಿನಲ್ಲಿ ಮಳೆ ಅಬ್ಬರ: ಜನ ತತ್ತರ..!
– ನಿರಂತರ ಮಳೆ ಹಿನ್ನಲೆ ಹಲವೆಡೆ ಮನೆಗಳು ಕುಸಿತ
– ಅನೇಕ ಕಡೆ ಅವಘಡ: ವಿದ್ಯುತ್, ನೆಟ್ವರ್ಕ್ ಇಲ್ಲ
– ನದಿ, ಹಳ್ಳಗಳಲ್ಲಿ ಹೆಚ್ಚಿದ ನೀರು: ಅಡಿಕೆ ಉದುರುತ್ತಾ?

NAMMUR EXPRESS NEWS
ಚಿಕ್ಕಮಗಳೂರು/ ಶಿವಮೊಗ್ಗ: ಕಳೆದೊಂದು ವಾರದಿಂದ ಮಲೆನಾಡಿನಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದೆ. ಅದರಲ್ಲೂ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ನಿರಂತರ ಮಳೆ ಸುರಿಯುತ್ತಿದೆ.
ತುಂಗಾ, ಭದ್ರಾ, ಶರಾವತಿ ಸೇರಿ ಬಹುತೇಕ ನದಿಗಳಲ್ಲಿ ನೀರು ಹೆಚ್ಚಾಗಿದೆ. ಮಳೆಯಿಂದಾಗಿ ಬಹುತೇಕ ಭಾಗದಲ್ಲಿ ಸಣ್ಣ ಪುಟ್ಟ ಅನಾಹುತಗಳು ಸಂಭವಿಸಿವೆ. ಮಲೆನಾಡಿನ ಬಹುತೇಕ ಕಡೆ ವಿದ್ಯುತ್, ಮೊಬೈಲ್ ನೆಟ್ವರ್ಕ್ ಸಮಸ್ಯೆ ಹೆಚ್ಚಾಗಿದೆ. ಶಿವಮೊಗ್ಗದ ವಿವಿಧ ಡ್ಯಾಮ್ ನೀರಿನ ಮಟ್ಟದಲ್ಲಿ ಏರಿಕೆ ಕಂಡಿದೆ.

ಮೂಡಿಗೆರೆಯಲ್ಲಿ ಮನೆ ಕುಸಿತ!

ಮೂಡಿಗೆರೆ ತಾಲ್ಲೂಕಿನಲ್ಲಿ ಎರಡು ಮನೆಗಳು ಕುಸಿದಿವೆ. ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಹೋಬಳಿಯ ಚಿನ್ನಿಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಣಜೂರು ಗ್ರಾಮದಲ್ಲಿ ದಿನೇಶ್ ಎಂಬುವವರು ಮನೆ ಶುಕ್ರವಾರ ರಾತ್ರಿ ಸುರಿದ ಮಳೆಗೆ ಕುಸಿದಿದೆ. ಹಾಗೆಯೇ ಬಾಳೂರು ಹೋಬಳಿ ಜಾವಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಗೂರು ಗ್ರಾಮದಲ್ಲಿ ಮನೆಯೊಂದು ಕುಸಿದಿದೆ. ಮೇಗೂರು ಗ್ರಾಮದ ರಾಮಯ್ಯ ಎಂಬುವವರ ಮನೆ ಮಳೆಯಿಂದಾಗಿ ಕುಸಿದು ಬಿದ್ದಿದೆ. ಮನೆಯ ಗೋಡೆ ಮತ್ತು ಮೇಲ್ಟಾವಣಿ ಬಹುತೇಕ ಕುಸಿದು ಬಿದ್ದಿದೆ. ಈ ಸಮಯದಲ್ಲಿ ಮನೆಯವರು ಒಳಗಡೆಯೇ ಇದ್ದರು ಎಂದು ತಿಳಿದುಬಂದಿದ್ದು. ಮನೆಯವರೆಲ್ಲರೂ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಚಿಕ್ಕಮಗಳೂರು ಹಲವು ಭಾಗದಲ್ಲಿ ಮರಗಳು ರಸ್ತೆಗೆ ಉರುಳಿ ಬಿದ್ದಿವೆ.ಮಳೆ ಹೆಚ್ಚಾದ ಹಿನ್ನಲೆ ನೀರಿನ ಮೂಲ ಹೆಚ್ಚಾಗಿದೆ. ಕೆಲವು ಕಡೆ ವಿದ್ಯುತ್ ಕಂಬ ಬಿದ್ದು ವಿದ್ಯುತ್ ಸಂಪೂರ್ಣ ಸ್ಥಗಿತವಾಗಿದೆ

Categories
ತೀರ್ಥಹಳ್ಳಿ

ತೀರ್ಥಹಳ್ಳಿಯ ಸೀಬಿನಕೆರೆ ಬಳಿ ದನಗಳ ಕಳ್ಳತನ!

ತೀರ್ಥಹಳ್ಳಿಯ ಸೀಬಿನಕೆರೆ ಬಳಿ ದನಗಳ ಕಳ್ಳತನ!
– ಪಿಕ್ ಅಪ್ ಅಲ್ಲಿ ಬಂದು ಗೋವುಗಳ ಕದ್ದರು
– ಮಧ್ಯ ರಾತ್ರಿ ಕಳುವು: ಸ್ಥಳೀಯರ ಆರೋಪ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ಸೀಬಿನ ಕೆರೆ ಬಳಿ ಶನಿವಾರ ಬೆಳಗಿನ ಜಾವ 3:00 ಸುಮಾರಿಗೆ ರಸ್ತೆ ಬದಿಯಲ್ಲಿ ಮಲಗಿದ್ದ ಮೂರ್ನಾಲ್ಕು ದನಗಳನ್ನ ನಾಲ್ಕು ಚಕ್ರದ ವಾಹನದಲ್ಲಿ ಕಳ್ಳತನ ಮಾಡಿರುವ ಪ್ರಕರಣ ವರದಿಯಾಗಿದೆ.
ಮಹಿಂದ್ರ ಪಿಕಪ್ ನಲ್ಲಿ ತೆಗೆದುಕೊಂಡು ಹೋಗಿದ್ದಾರೆ.ಅದನ್ನು ಗಮನಿಸಿದ ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಹಲವು ಭಾಗದಲ್ಲಿ ದನಗಳ ಕಳ್ಳತನ ನಡೆಯುತ್ತಿರುವ ನಡುವೆ ಈ ಪ್ರಕರಣ ವರದಿಯಾಗಿದೆ.

Categories
ತೀರ್ಥಹಳ್ಳಿ

ಧರ್ಮಸ್ಥಳ ಯೋಜನೆಯಿಂದ ಗಾಂಧಿ ಜಯಂತಿ

ಧರ್ಮಸ್ಥಳ ಯೋಜನೆಯಿಂದ ಗಾಂಧಿ ಜಯಂತಿ
– ಜನಜಾಗೃತಿ ಜಾಥಾ,ಗಾಂಧಿ ಜಯಂತಿ, ನವಜೀವನ ಸಮಿತಿ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ
– ಜನ ಜಾಗೃತಿ ಜಾಥಾ ಮೆರವಣಿಗೆ

NAMMUR EXPRESS NEWS
ತೀರ್ಥಹಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ತೀರ್ಥಹಳ್ಳಿ ತಾಲೂಕು ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಬೆಳ್ತಂಗಡಿ, ಜಿಲ್ಲಾ ಜನಜಾಗೃತಿ ವೇದಿಕೆ ಶಿವಮೊಗ್ಗ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ಘಟಕಗಳು ಹಾಗೂ ನವಜೀವನ ಸಮಿತಿ ತೀರ್ಥಹಳ್ಳಿ ತಾಲೂಕು ಇವರ ಸಹಯೋಗದಲ್ಲಿ ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ಜನಜಾಗೃತಿ ಜಾಥಾ,ಗಾಂಧೀ ಜಯಂತಿ ಕಾರ್ಯಕ್ರಮ ಹಾಗೂ ನವಜೀವನ ಸಮಿತಿ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.

ಅ.2ರ ಬೆಳಿಗ್ಗೆ 11ಕ್ಕೆ ಮಾಧವ ಮಂಗಲ ಸಭಾಭವನ, ತುಂಗಾತೀರ, ತೀರ್ಥಹಳ್ಳಿಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಮಾಜಿ ಸಚಿವ ಆರಗ ಜ್ಞಾನೇಂದ್ರ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದು, ಜಿಲ್ಲಾ ಜನಜಾಗೃತಿ ವೇದಿಕೆ ಶಿವಮೊಗ್ಗದ ಅಧ್ಯಕ್ಷರಾದ ಸೊಪ್ಪುಗುಡ್ಡೆ ರಾಘವೇಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ. ಜಾಥಾ ಉದ್ಘಾಟನೆಯನ್ನು ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಗೀತಾ ರಮೇಶ್ ಮಾಡಲಿದ್ದಾರೆ. ಉಪನ್ಯಾಸವನ್ನು ಶಿವಮೊಗ್ಗದ ಮನೋವೈದ್ಯರಾದ ಡಾ.ಎಸ್. ಪವಿತ್ರ ನಡೆಸಿಕೊಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಚಂದ್ರಶೇಖರ್ ಜೆ., ನಿರ್ದೇಶಕರು ಎಸ್.ಕೆ.ಡಿ.ಆರ್.ಡಿ.ಪಿ. ಬಿ. ಸಿ. ಟ್ರಸ್ಟ್ (ರಿ) ಶಿವಮೊಗ್ಗ, ಡಾ.ಜೀವಂಧರ್ ಜೈನ್, ವೈದ್ಯರು, ಪೂಜ್ಯಪಾದ ಚಿಕಿತ್ಸಾಲಯ, ತೀರ್ಥಹಳ್ಳಿ ಡಿವೈಎಸ್ಪಿ ಗಜಾನನ ವಾಮನ ಸುತಾರ, ಜಿಲ್ಲಾ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಅಶೋಕಮೂರ್ತಿ, ಮುದ್ದಣ್, ವಿನುತಾ ಮುರಳೀಧರ,ಆಶಾ ಸತೀಶ್, ಆಶಾ ಶ್ರೀನಿವಾಸ್, ಚಂದವಳ್ಳಿ ಸೋಮಶೇಖರ್(ಅಧ್ಯಕ್ಷರು 1719ನೇ ಮಧ್ಯವರ್ಜನ ವ್ಯವಸ್ಥಾಪನಾ ಸಮಿತಿ ಅರಗ),ಸುರೇಶ್ ಶೆಟ್ಟಿ(ಮಾಸ್ಟರ್ ಶೌರ್ಯ ವಿಪತ್ತು ಘಟಕ, ತೀರ್ಥಹಳ್ಳಿ ತಾಲೂಕು) ಉಪಸ್ಥಿತರಿರಲಿದ್ದಾರೆ. ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಶೌರ್ಯ ವಿಪತ್ತು ಘಟಕಗಳು ಹಾಗೂ ನವಜೀವನ ಸಮಿತಿಗಳು, ತೀರ್ಥಹಳ್ಳಿ, ಧರ್ಮಸ್ಥಳ ಯೋಜನೆಯ ಯೋಜನಾಧಿಕಾರಿಗಳು, ಜಿಲ್ಲಾ ಜನಜಾಗೃತಿ ವೇದಿಕೆ ಶಿವಮೊಗ್ಗ ಇವರು ಸರ್ವರನ್ನು ಸ್ವಾಗತಿಸಿದ್ದಾರೆ.

ಜನ ಜಾಗೃತಿ ಜಾಥಾ ಮೆರವಣಿಗೆ

ಬೆಳಿಗ್ಗೆ 9-00ರಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಛೇರಿಯಿಂದ (ಶ್ರೀನಿಧಿ ಕಾಂಪ್ಲೆಕ್ಸ್, ಆಗುಂಬೆ ರೋಡ್ ) ಮುಖ್ಯರಸ್ತೆ ಮೂಲಕ ಮಾಧವ ಮಂಗಲ ಸಭಾ ಭವನದವರೆಗೆ ಜನ ಜಾಗೃತಿ ಜಾಥಾ ಮೆರವಣಿಗೆ ನಡೆಯಲಿದೆ.

Categories
ಸಾಗರ

ನರಿಯನ್ನು ಹಿಡಿದ ಹೆಬ್ಬಾವು…!

ನರಿಯನ್ನು ಹಿಡಿದ ಹೆಬ್ಬಾವು…!
– ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ನಡೆದ ಘಟನೆ
– ಹೆಬ್ಬಾವು, ನರಿಯನ್ನು ರಕ್ಷಣೆ ಮಾಡಿದ ಸಿಬ್ಬಂದಿ

NAMMUR EXPRES NEWS
ಸಾಗರ: ಹೆಬ್ಬಾವೊಂದು ನರಿಯನ್ನು ಹಿಡಿದ ಘಟನೆ ಸಾಗರದ ತಾಲೂಕಿನ ರಾಮನಗರದ ಸಮೀಪದ ಐ ಟಿ ಐ ಕಾಲೇಜ್ ಹತ್ತಿರ ನಡೆದಿದ್ದು, ಹೆಬ್ಬಾವು ನರಿಯನ್ನು ಹಿಡಿದಿರುವ ದೃಶ್ಯ ವೈರಲಾಗಿದೆ. ಹೆಬ್ಬಾವು ಎಂದು ತಿಳಿಯದ ನರಿಯು ಅದರ ಪಾಡಿಗೆ ಅದು ಹೆಬ್ಬಾವಿನ ಬಳಿ ನಡೆದುಕೊಂಡು ಹೋಗಿದೆ. ಆ ವೇಳೆ ಹೆಬ್ಬಾವು ನರಿಯನ್ನು ಕ್ಯಾಚ್ ಮಾಡಿದೆ.
ಐಟಿಐ ಕಾಲೇಜಿನ ಬಳಿ ಜನ ತಕ್ಷಣವೇ ಸಾಗರದ ಸ್ನೇಕ್ ಅನುಪ ಅವರಿಗೆ ಮಾಹಿತಿ ತಿಳಿಸಿದ್ದಾರೆ. ತಕ್ಷಣವೇ ಆಗಮಿಸಿ. ಹೆಬ್ಬಾವಿನ ರಕ್ಷಣೆ ಮಾಡಿದ್ದಾರೆ.ಕಾರ್ಯದಲ್ಲಿ ಅರಣ್ಯ ಅಧಿಕಾರಿಗಳು ಕೂಡ ಉಪಸ್ಥಿತಿಯಲ್ಲಿದ್ದರು.

Categories
ತೀರ್ಥಹಳ್ಳಿ

ಖ್ಯಾತ ವಕೀಲ ದಿ.ವೈ.ಎ.ಪ್ರಭಾಕರ್ ಜೋಯ್ಸ್ ಗೌರವಾರ್ಥ ನೆನಪಿನ ಹೊತ್ತಿಗೆ

ಖ್ಯಾತ ವಕೀಲ ದಿ.ವೈ.ಎ.ಪ್ರಭಾಕರ್ ಜೋಯ್ಸ್ ಗೌರವಾರ್ಥ ನೆನಪಿನ ಹೊತ್ತಿಗೆ
– ಅ.2ಕ್ಕೆ “ಪ್ರಭಾ ಮಂಡಲ” ಬಿಡುಗಡೆ ಸಮಾರಂಭ
– ಸರ್ವರಿಗೂ ಸ್ವಾಗತಿಸಿದ ಪುಸ್ತಕ ಸಮಿತಿ

NAMMUR EXPRESS NEWS
ತೀರ್ಥಹಳ್ಳಿ : ಖ್ಯಾತ ವಕೀಲ ದಿ.ವೈ. ಎ.ಪ್ರಭಾಕರ್ ಜೋಯ್ಸ್ ಅವರ ಗೌರವಾರ್ಥವಾಗಿ ನೆನಪಿನ ಹೊತ್ತಿಗೆ ಪುಸ್ತಕ ಬಿಡುಗಡೆ ಸಮಾರಂಭವನ್ನು ವೈ ಎ ಪ್ರಭಾಕರ್ ಕುಟುಂಬದವರು, ನೆನಪಿನ ಹೊತ್ತಿಗೆ ರಚನಾ ಸಮಿತಿ, ವಕೀಲರ ಸಂಘ ತೀರ್ಥಹಳ್ಳಿ, ಬ್ರಾಹ್ಮಣ ಸಂಘ ತೀರ್ಥಹಳ್ಳಿ ಮತ್ತು ತುಂಗಾ ವಿದ್ಯಾವರ್ಧಕ ಸಂಘ ತೀರ್ಥಹಳ್ಳಿ ಇವರ ಸಹಯೋಗದೊಂದಿಗೆ ಅಕ್ಟೋಬರ್ 2ರ ಸೋಮವಾರ ಸಂಜೆ 5:00 ಗಂಟೆಗೆ ತೀರ್ಥಹಳ್ಳಿಯ ಶ್ರೀ ಗಾಯತ್ರಿ ಮಂದಿರದಲ್ಲಿ ನಡೆಯಲಿದೆ. ಪುಸ್ತಕ ಬಿಡುಗಡೆಯನ್ನು ನಿವೃತ್ತ ನ್ಯಾಯಾಧೀಶರಾದ ಪ್ರಕಾಶ್ ನಾಡಿಗೇರಿ ನೆರವೇರಿಸಲಿದ್ದು ಪ್ರಭ ಮಂಡಲ ಪುಸ್ತಕದ ಕುರಿತು ಪ್ರಧಾನ ಸಂಪಾದಕರಾದ ಪ್ರೋ.ಡಿ.ಎಸ್ ಸೋಮಶೇಖರ್ ಹಾಗೂ ವೈಎ ಪ್ರಭಾಕರ್ ಅವರ ಕುರಿತು ಮಾಜಿ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ ಅವರು ಮಾತನಾಡಲಿದ್ದಾರೆ.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶಾಸಕರಾದ ಆರಗ ಜ್ಞಾನೇಂದ್ರ, ನಿವೃತ್ತ ಜಿಲ್ಲಾಧಿಕಾರಿಗಳಾದ ಪ್ರಭಾಕರ್ ಶರ್ಮ ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆನಪಿನ ಹೊತ್ತಿಗೆ ರಚನಾ ಸಮಿತಿ ಅಧ್ಯಕ್ಷರಾದ ಡಾ. ಎನ್.ಎಸ್.ಮನೋಹರ್ ರಾವ್ ವಹಿಸಲಿದ್ದು, ವಕೀಲರ ಸಂಘದ ಅಧ್ಯಕ್ಷರಾದ ಎಸ್ ವಿ ಲೋಕೇಶ್, ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಚಂದ್ರಶೇಖರ್ ತುಂಬ್ರಮನೆ, ತುಂಗಾ ವಿದ್ಯವರ್ಧಕ ಸಂಘದ ಅಧ್ಯಕ್ಷರಾದ ಮಹಾಬಲೇಶ್ ಪಟ್ಟಮಕ್ಕಿ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.

Categories
ರಾಜ್ಯ

ಪಟಾಪಟ್ 3 ನ್ಯೂಸ್

ಶಾಸಕ ಬೇಳೂರು ಗೋಪಾಲಕೃಷ್ಣ ಫೋಟೋ ಇದ್ದ ಪ್ಲೆಕ್ಸ್ ಹರಿದು ವಿಕೃತಿ!
– ಅಣ್ಣ-ತಮ್ಮಂದಿರ ಗಲಾಟೆಗೆ 400 ಅಡಿಕೆ ಗಿಡ ನಾಶ
– ಮೀನುಗಾರರ ಬಲೆಗೆ ಬಿದ್ದ 3.5 ಕ್ವಿಂಟಲ್ ಮೀನು!

NAMMUR EXPRES NEWS
ಹೊಸನಗರ: ರಿಪ್ಪನ್‌ಪೇಟೆ ಸಮೀಪದ ಕೋಡೂರು ಗ್ರಾಪಂ ವ್ಯಾಪ್ತಿಯ ಅಮ್ಮನಘಟ್ಟ ದೇವಸ್ಥಾನದ ಬಳಿ ಜಾತ್ರಾ ಮಹೋತ್ಸವಕ್ಕೆ ಶುಭಾಶಯ ಕೋರಿ ಹಾಕಿದ್ದ ಶಾಸಕ ಬೇಳೂರು ಗೋಪಾಲ ಕೃಷ್ಣ ಫೋಟೋ ಇದ್ದ ಪ್ಲೆಕ್ಸ್ ನ್ನು ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ. ಸ್ಥಳೀಯ ಗ್ರಾಮಾಡಳಿತದ ಅನುಮತಿ ಪಡೆದು ಪ್ಲೆಕ್ಸ್ ಶುಕ್ರವಾರ ಅಳವಡಿಸಲಾಗಿತ್ತು ಆದರೆ ರಾತ್ರೋರಾತ್ರಿ ಯಾರೋ ಕಿಡಿಗೇಡಿಗಳು ಪ್ಲೆಕ್ಸ್ ನ್ನು ಬ್ಲಡ್ ನಲ್ಲಿ ಹರಿದು ವಿಕೃತಿ ಮೆರೆದಿದ್ದಾರೆ. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳುವ ಮೂಲಕ ಕಿಡಿಗೇಡಿಗಳನ್ನು ಬಂಧಿಸಬೇಕು ಈ ಬಗ್ಗೆ ಠಾಣೆಯಲ್ಲಿ ದೂರು ದಾಖಲಿಸಲಿದ್ದೇವೆ ಎಂದು ಸ್ಥಳೀಯ ಮುಖಂಡ ಪ್ರದೀಪ್ ಹೇಳಿದ್ದಾರೆ. ಸ್ಥಳಕ್ಕೆ ಪಿಎಸ್‌ಐ ಪ್ರವೀಣ್ ಎಸ್ ಪಿ ಭೇಟಿ ನೀಡಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಅಣ್ಣ ತಮ್ಮಂದಿರ ಗಲಾಟೆಗೆ 400 ಅಡಿಕೆ ಗಿಡ ನಾಶ!

ಕಡೂರು: ಕುಟುಂಬ ದ್ವೇಷದ ಹಿನ್ನೆಲೆ ಒಂದು ಎಕರೆ ಅಡಿಕೆ ತೋಟವನ್ನು ಕಡಿದು ನಾಶ ಮಾಡಿರುವ ಘಟನೆ ತಾಲೂಕಿನ ಸಖರಾಯಪಟ್ಟಣ ಸಮೀಪದ ಪಿಳ್ಳೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಚಿಕ್ಕಪ್ಪ ದೊಡ್ಡಪ್ಪ ಮಕ್ಕಳ ನಡುವೆ ಆಸ್ತಿಗಾಗಿ ಗಲಾಟೆ ನಡೆದಿದ್ದು 400 ಅಡಿಕೆ ಗಿಡಗಳನ್ನು ರಾತ್ರೋರಾತ್ರಿ ಕಡಿದು ನಾಶಪಡಿಸಲಾಗಿದೆ. ಪಿಳ್ಳೇನಹಳ್ಳಿ ಗ್ರಾಮದ ಮಹೇಶ್ ನಾಯಕ್ ಎಂಬುವರಿಗೆ ಸೇರಿದ ತೋಟ ಇದಾಗಿದ್ದು, ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಬ್ಬಬ್ಬಾ ಮೀನುಗಾರರ ಬಲೆಗೆ ಬಿದ್ದ 350 ಕ್ವಿಂಟಲ್ ತೂಕದ ಮೀನು!

ಮಂಗಳೂರಿನ ಮೀನುಗಾರರ ಬಲೆಗೆ 350 ಕೆಜಿ ತೂಕದ ಬೃಹತ್ ಮುರು ಮೀನು ಸಿಕ್ಕಿದ್ದು ಭಾರೀ ಸುದ್ದಿಯಾಗಿದೆ.
ಮಂಗಳೂರು ನಗರದ ಮೀನುಗಾರಿಕಾ ಧಕ್ಕೆಯಿಂದ ಆಳಸಮುದ್ರ ಮೀನುಗಾರಿಕೆಗೆ ಎಂದು ಹೊರಟ ಬೋಟ್‌ನವರ ಬಲೆಗೆ ಈ ಮೀನು ಬಿದ್ದಿದೆ. ಸುಮಾರು 350 ಕೆಜಿಯಷ್ಟು ತೂಕ ಇರುವ ಈ ಮುರು ಮೀನನ್ನು ಐದಾರು ಮಂದಿ ಮೀನುಗಾರರು ಟೆಂಪೊಗೆ ಹಾಕಲು ಹರಸಾಹಸ ಪಟ್ಟಿದ್ದಾರೆ.

Categories
ಬೆಂಗಳೂರು

ಒಂದು ದೇಶ, ಒಂದೇ ದಾಖಲೆ..‘ಜನನ ಪ್ರಮಾಣಪತ್ರ’ ಸಾಕು!

ಒಂದು ದೇಶ, ಒಂದೇ ದಾಖಲೆ..‘ಜನನ ಪ್ರಮಾಣಪತ್ರ’ ಸಾಕು!
– ಆಧಾರ್‌ನಿಂದ ಡಿಎಲ್‌ವರೆಗೆ ಎಲ್ಲಾ ಮಾಡಿಸಲು ಇದೊಂದೇ ದಾಖಲೆ
– 2000 ರೂ. ನೋಟು ಬದಲಾವಣೆ: ಅ.7 ಕೊನೆ ದಿನ

NAMMUR EXPRESS NEWS
ಬೆಂಗಳೂರು: ಹೊಸ ಆಧಾರ್‌ ಕಾರ್ಡ್‌ ಮಾಡಿಸಲು ಹೋದಾಗ ಒಂದು ಡಾಕ್ಯುಮೆಂಟ್‌ ಕೇಳುತ್ತಾರೆ, ವಾಹನ ಚಾಲನಾ ಪರವಾನಿಗೆ ಪಡೆಯಲು ಹೋದರೆ ಅವರು ಬೇರೊಂದು ದಾಖಲೆ ಬೇಕು ಎನ್ನುತ್ತಾರೆ. ಹೀಗೆ, ಒಬ್ಬೊಬ್ಬರು ಒಂದೊಂದು ದಾಖಲೆ ಕೇಳಿದರೆ ಸಹಜವಾಗಿಯೇ ಕಿರಿಕಿರಿ ಆಗುತ್ತದೆ. ಮೇಲಾಗಿ ಎಲ್ಲಿಗೆ ಯಾವ ದಾಖಲೆ ಕೊಂಡೊಯ್ಯಬೇಕು ಎಂಬ ಗೊಂದಲ ಕಾಡುತ್ತದೆ. ಆದರೆ, ಅಕ್ಟೋಬರ್‌ 1ರಿಂದ ಜನರಿಗೆ ಈ ಗೊಂದಲ ಇರುವುದಿಲ್ಲ. ಬಹುತೇಕ ದಾಖಲೆ ಪಡೆಯಲು ಇನ್ನು ಮುಂದೆ ‘ಜನನ ಪ್ರಮಾಣಪತ್ರ’ ಒಂದೇ ಸಾಕಾಗುತ್ತದೆ. ಜನನ ಹಾಗೂ ಮರಣ ನೋಂದಣಿ ಕಾಯ್ದೆ (2023)ಯು ಅಕ್ಟೋಬರ್‌ 1ರಿಂದ ಜಾರಿಗೆ ಬರಲಿದೆ. ಕಾಯ್ದೆ ಜಾರಿಯಾದಾಗಿನಿಂದ ದೇಶದಲ್ಲಿ ಹಲವು ದಾಖಲೆ ಪಡೆಯಲು ಒಂದೇ ದಾಖಲೆ ನೀಡಬಹುದಾಗಿದೆ. ಜನನ ಪ್ರಮಾಣಪತ್ರ ಒಂದನ್ನು ನೀಡುವ ಮೂಲಕ ಬೇರೆ ದಾಖಲೆಗಳನ್ನು ಪಡೆಯಬಹುದಾಗಿದೆ.

ಇದರಿಂದ ದೇಶದ ಕೋಟ್ಯಂತರ ಜನ ಒಂದೇ ಪ್ರಮಾಣಪತ್ರ ನೀಡಿ, ಬೇರೆ ಬೇರೆ ದಾಖಲೆ ಪಡೆಯಲು ಅನುಕೂಲವಾಗಲಿವೆ. ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶ, ವಾಹನ ಚಾಲನಾ ಪರವಾನಗಿ, ಮತಪಟ್ಟಿಯಲ್ಲಿ ಹೆಸರು ಸೇರಿಸುವುದು, ಆಧಾರ್‌, ವಿವಾಹ ನೋಂದಣ, ಸರ್ಕಾರಿ ಉದ್ಯೋಗ ಸೇರಿ ಯಾವುದೇ ದಾಖಲೆ ಪಡೆಯಲು ಜನನ ಪ್ರಮಾಣಪತ್ರವನ್ನು ಏಕ ದಾಖಲೆಯಾಗಿ ಬಳಸಬಹುದಾಗಿದೆ. ಡಿಜಿಟಲ್‌ ನೋಂದಣಿಗೆ ಆದ್ಯತೆ, ಸಾರ್ವಜನಿಕ ಸೇವೆಗಳು ಜನರಿಗೆ ಸರಿಯಾಗಿ ತಲುಪಲಿ ಹಾಗೂ ಸಾಮಾಜಿಕ ಪಾರದರ್ಶಕತೆ ಕಾಪಾಡುವ ದಿಸೆಯಲ್ಲಿ ಕೇಂದ್ರ ಸರ್ಕಾರ ಜನನ ಹಾಗೂ ಮರಣ ನೋಂದಣಿ ಕಾಯ್ದೆಗೆ ತಿದ್ದುಪಡಿ ತಂದಿದೆ. ಹಾಗಾಗಿ, ಅಕ್ಟೋಬರ್‌ 1ರಿಂದ ಹೊಸ ನಿಯಮ ಅನ್ವಯವಾಗಲಿದೆ.

ಕಳೆದ ತಿಂಗಳು ಮುಕ್ತಾಯವಾದ ಸಂಸತ್‌ ಮುಂಗಾರು ಅಧಿವೇಶನದಲ್ಲಿಯೇ ಕಾಯ್ದೆ ತಿದ್ದುಪಡಿಯ ವಿಧೇಯಕಕ್ಕೆ ಸಂಸತ್ತಿನ ಉಭಯ ಸದನಗಳು ಅಂಗೀಕಾರ ನೀಡಿವೆ. 1969ರಲ್ಲಿ ಜಾರಿಗೆ ಬಂದ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸಚಿವ ನಿತ್ಯಾನಂದ ರೈ ಅವರು ವಿಧೇಯಕವನ್ನು ಮಂಡಿಸಿದ್ದರು. ಲೋಕಸಭೆಯಲ್ಲಿ ಆಗಸ್ಟ್‌ 1 ಹಾಗೂ ರಾಜ್ಯಸಭೆಯಲ್ಲಿ ಆಗಸ್ಟ್‌ 7ರಂದು ಧ್ವನಿಮತದ ಮೂಲಕ ವಿಧೇಯಕಕ್ಕೆ ಅಂಗೀಕಾರ ನೀಡಲಾಗಿತ್ತು.

2000 ನೋಟುಗಳ ವಿನಿಮಯದ ಅವಧಿ ವಿಸ್ತರಿಣೆ

2000 ರೂ. ನೋಟು ಬದಲಾವಣೆಗೆ ಸೆ 30 ಕೊನೆಯಾಗಿದ್ದ ಗಡುವನ್ನು ಅಕ್ಟೋಬರ್ 7ರ ವರೆಗೆ ಕಾಲಾವಕಾಶ ನೀಡುವ ನಿರ್ಧಾರ ಕೈಗೊಂಡಿದೆ. 2 ಸಾವಿರದ ನೋಟುಗಳ ಬದಲಿಸಿಕೊಳ್ಳುವ ಅವಧಿಯನ್ನು ಆರ್‌ಬಿಐ ವಿಸ್ತರಿಸಿದೆ. ಬಾಕಿ ಉಳಿದಿರುವ ಮತ್ತು ಜನರ ಅನುಕೂಲಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.ಹಿಂಪಡೆಯಲಾಗಿರುವ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳ ವಿನಿಮಯ, ಠೇವಣಿ ಅವಧಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಇನ್ನಷ್ಟು ಕಾಲ ವಿಸ್ತರಿಸಿದೆ.
ಇನ್ನೂ ಯಾರ ಬಳಿಯಾದರೂ 2000 ರೂಪಾಯಿ ನೋಟುಗಳಿದ್ದರೆ, ಅಂಥವರು ಸಾಧ್ಯವಾದಷ್ಟು ಬೇಗ ಅವುಗಳನ್ನು ಹತ್ತಿರದ ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಬೇಕು ಅಥವಾ ಬದಲಾಯಿಸಬೇಕು. ಅಕ್ಟೋಬರ್ 8 ರ ನಂತರ ಈ ನೋಟುಗಳು ಅಮಾನ್ಯವಾಗಲಿವೆ. ಗಡುವು ತೀರಿದ ಬಳಿಕ ಬ್ಯಾಂಕ್‌ಗಳು ಎರಡು ಸಾವಿರದ ನೋಟುಗಳನ್ನು ಠೇವಣಿಯಾಗಿ ಸ್ವೀಕರಿಸಲು ಅಥವಾ ಬದಲಾಯಿಸಿಕೊಳ್ಳಲು ಅವಕಾಶ ನೀಡುವುದಿಲ್ಲ