Categories
ಉಡುಪಿ ಕರಾವಳಿ ರಾಜಕೀಯ ರಾಜ್ಯ ರಾಷ್ಟ್ರೀಯ ವಾರ್ತೆ

ಎಲೆಕ್ಷನ್ ಬ್ರೇಕಿಂಗ್ ನ್ಯೂಸ್ – ಲೋಕಸಭಾ ಚುನಾವಣೆ: ದಕ್ಷಿಣ ಕನ್ನಡ, ಉಡುಪಿ ಬಿಜೆಪಿ ಮುನ್ನಡೆ

ಎಲೆಕ್ಷನ್ ಬ್ರೇಕಿಂಗ್ ನ್ಯೂಸ್
ಲೋಕಸಭಾ ಚುನಾವಣೆ: ದಕ್ಷಿಣ ಕನ್ನಡ, ಉಡುಪಿ ಬಿಜೆಪಿ ಮುನ್ನಡೆ
– ಕೋಟಾ ಶ್ರೀನಿವಾಸ್ ಪೂಜಾರಿ, ಬ್ರಿಜೇಶ್ ಚೌಟ ಮುನ್ನಡೆ
– ಶಿವಮೊಗ್ಗದಲ್ಲಿ ರಾಘವೇಂದ್ರ ಭಾರೀ ಮುನ್ನಡೆ
– ಹಾಸನದಲ್ಲಿ ಪ್ರಜ್ವಲ್ ಕಡಿಮೆ ಅಂತರದಲ್ಲಿ ಹಿನ್ನಡೆ

NAMMUR EXPRESS NEWS
ಕರಾವಳಿಯ ಎರಡು ಹಾಗೂ ಮಲೆನಾಡಿನ ಒಂದು ಲೋಕ ಸಭಾ ಕ್ಷೇತ್ರಗಳಲ್ಲಿ ಮತ ಎಣಿಕೆ ಒಂದು ಸುತ್ತು ಮುಗಿದಿದ್ದು, ಬಿಜೆಪಿ ಮುನ್ನಡೆ ಸಾಧಿಸಿದೆ.

ದಕ್ಷಿಣ ಕನ್ನಡ

ಮೂರನೇ ಸುತ್ತಿನ ಮತ ಎಣಿಕೆ ಮುಕ್ತಾಯ
ಬ್ರಿಜೇಶ್ ಚೌಟ – ಬಿಜೆಪಿ – 133896
ಪದ್ಮರಾಜ್ ಆರ್ ಪೂಜಾರಿ – ಕಾಂಗ್ರೆಸ್ – 111312
ಅಂತರ – 22584

ಉಡುಪಿ ಚಿಕ್ಕಮಗಳೂರು

ಬಿಜೆಪಿಯ ಕೋಟಾ ಶ್ರೀನಿವಾಸ್ ಪೂಜಾರಿ 63 ಸಾವಿರ ಮತಗಳ ಮುನ್ನಡೆ ಸಾಧಿಸಿದ್ದಾರೆ.

ಶಿವಮೊಗ್ಗದಲ್ಲಿ ರಾಘವೇಂದ್ರ ಮುನ್ನಡೆ

ಶಿವಮೊಗ್ಗದಲ್ಲಿ ರಾಘವೇಂದ್ರ ಅವರು 30 ಸಾವಿರ ಮತಗಳ ಮುನ್ನಡೆ ಸಾಧಿಸಿದ್ದಾರೆ.

ಹಾಸನದಲ್ಲಿ ಪ್ರಜ್ವಲ್ ಹಿನ್ನಡೆ

ಹಾಸನದಲ್ಲಿ ಕಾಂಗ್ರೆಸ್ ಶ್ರೇಯಸ್ ಪಟೇಲ್ ಎದುರು 1000 ಮತಗಳ ಹಿನ್ನಡೆ ಇದೆ.

ಭಾರತ

NDA 291
I.N.D.I.A 210
Others 42

ರಾಜ್ಯದಲ್ಲಿ ಮುನ್ನಡೆ

19 BJP
6 Cong
3 JDS

Categories
ರಾಜಕೀಯ ರಾಜ್ಯ ರಾಷ್ಟ್ರೀಯ ವಾರ್ತೆ

ಎನ್.ಡಿ.ಎಗೆ ಇಂಡಿಯಾ ಟಕ್ಕರ್!

ಎನ್.ಡಿ.ಎಗೆ ಇಂಡಿಯಾ ಟಕ್ಕರ್!
– ಭಾರೀ ಪೈಪೋಟಿ: ಮೊದಲ ಗೆಲುವು ಬಿಜೆಪಿಗೆ!
– ಎಕ್ಸಿಟ್ ಪೋಲ್ ಹೇಳಿದಷ್ಟು ಸುಲಭ ಇಲ್ವಾ?
– ಆರಂಭಿಕ ಹಂತದಲ್ಲಿ ಭಾರೀ ಹೋರಾಟ!
– ಮೋದಿ ತಂಡಕ್ಕೆ ಗೆಲುವು ಪಕ್ಕಾ ಅಂತಿದೆ ರಿಸಲ್ಟ್ಸ್

NAMMUR EXPRESS NEWS
ನವ ದೆಹಲಿ: ಎನ್.ಡಿ.ಎಗೆ ಇಂಡಿಯಾ ಟಕ್ಕರ್ ನೀಡುತ್ತಿದೆ. ಸುಮಾರು 210 ಕ್ಷೇತ್ರದಲ್ಲಿ ಭಾರೀ ಪೈಪೋಟಿ ನೀಡಿದೆ. ಎಕ್ಸಿಟ್ ಪೋಲ್ ಹೇಳಿದಷ್ಟು ಸುಲಭ ಇಲ್ಲ. ಆದರೆ ಮೋದಿ ನೇತೃತ್ವ ಸರ್ಕಾರ ರಚನೆ ಸೂಚನೆ ಕಾಣುತ್ತಿದೆ. ಕರ್ನಾಟಕದಲ್ಲಿ ಕೂಡ ಬಿಜೆಪಿ ಭಾರೀ ಮುನ್ನಡೆ ಸಾಧಿಸುತ್ತಿದೆ.

ಬಿಜೆಪಿಗೆ ಮೊದಲ ಗೆಲುವು!

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನಾಯಕರಿಗೆ ಮೊಟ್ಟ ಮೊದಲ ಗೆಲುವು ಸಿಕ್ಕಿದೆ. ಮತ ಎಣಿಕೆ ಆರಂಭಕ್ಕೂ ಮೊದಲೇ ಬಿಜೆಪಿ ಒಂದು ಸ್ಥಾನ ಗೆದ್ದು ಬೀಗಿದೆ. ಅಷ್ಟಕ್ಕೂ ಬಿಜೆಪಿಯ ಭದ್ರಕೋಟೆ ಗುಜರಾತ್ ರಾಜ್ಯದ ಸೂರತ್ ಲೋಕಸಭೆ ಕ್ಷೇತ್ರವನ್ನು ಬಿಜೆಪಿ ಗೆದ್ದಿದೆ. ಬಿಜೆಪಿ ಅಭ್ಯರ್ಥಿ ಆಗಿದ್ದ ಮುಕೇಶ್ ದಲಾಲ್ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಆಗಿದ್ದ ನೀಲೇಶ್ ಕುಂಭಾನಿ ನಾಮಪತ್ರ ತಿರಸ್ಕೃತವಾದ ನಂತರ, ಕಣದಲ್ಲಿದ್ದ ಎಲ್ಲಾ ಅಭ್ಯರ್ಥಿಗಳು ತಮ್ಮ ನಾಮಪತ್ರ ಹಿಂದೆ ಪಡೆದುಕೊಂಡ ಬಳಿಕ ಬಿಜೆಪಿಗೆ ಭರ್ಜರಿ ಗೆಲುವು ಸಿಕ್ಕಿತ್ತು. ಬಿಜೆಪಿ ಅಭ್ಯರ್ಥಿ ಆಗಿದ್ದ ಮುಖೇಶ್ ದಲಾಲ್ ಅವರ ಎದುರಲ್ಲಿ, ಯಾವುದೇ ಅಭ್ಯರ್ಥಿ ಇಲ್ಲದ ಕಾರಣಕ್ಕೆ ಮುಖೇಶ್ ದಲಾಲ್ ಅವಿರೋಧವಾಗಿ ಆಯ್ಕೆಯೂ ಆಗಿದ್ದಾರೆ.

Categories
ಉಡುಪಿ ಚಿಕ್ಕಮಗಳೂರು ರಾಜಕೀಯ ಶಿವಮೊಗ್ಗ

ಉಡುಪಿ ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಬಿಜೆಪಿ ಲೀಡ್!

ಉಡುಪಿ ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಬಿಜೆಪಿ ಲೀಡ್!
– ಶಿವಮೊಗ್ಗ ಲೋಕಸಭಾ ಕ್ಷೇತ್ರ 12 ಸಾವಿರ ಲೀಡ್ ಪಡೆದ ರಾಘವೇಂದ್ರ
– ಉಡುಪಿ – ಚಿಕ್ಕಮಗಳೂರಲ್ಲಿ ಕೋಟಾ ಲೀಡ್

NAMMUR EXPRESS NEWS
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಕಾರ್ಯ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ನಡೆಯುತ್ತಿದೆ. ಬಿ.ವೈ. ರಾಘವೇಂದ್ರರವರು 33,780 (+11,283) ಮತಗಳನ್ನ ಪಡೆದಿದ್ದಾರೆ.
ಗೀತಾಶಿವರಾಜ್‌ ಕುಮಾರ್‌ 22,497 (-11,283) ಮತಗಳನ್ನು ಪಡೆದಿದ್ದಾರೆ.
ಕೆಎಸ್‌ ಈಶ್ವರಪ್ಪ 2,145 (-31,635) ಮತಗಳನ್ನು ಪಡೆದಿದ್ದಾರೆ.

ಚಿಕ್ಕಮಗಳೂರು-ಉಡುಪಿ

ಬಿಜೆಪಿ- ಕೋಟ ಶ್ರೀನಿವಾಸ ಪೂಜಾರಿ 29000 ಮತಗಳ ಮುನ್ನಡೆ

Categories
ಉಡುಪಿ

ಬ್ರಹ್ಮಾವರದಲ್ಲಿ ನಡೆದ 3 ದಿನದ ಹಲಸಿನ ಮೇಳ ಸಕ್ಸಸ್!

ಬ್ರಹ್ಮಾವರದಲ್ಲಿ ನಡೆದ 3 ದಿನದ ಹಲಸಿನ ಮೇಳ ಸಕ್ಸಸ್!
– ಲಕ್ಷಾಂತರ ಜನ ಭಾಗಿ: ಹಲಸಿನ ಹಣ್ಣಿನ ಖಾದ್ಯ ಸೇವಿಸಿ ಮೆಚ್ಚುಗೆ
– ಅಚ್ಚುಕಟ್ಟಿನ ಆಯೋಜನೆ: ಮಾರಾಟಗಾರರು ಫುಲ್ ಖುಷ್

NAMMUR EXPRESS NEWS
ಬ್ರಹ್ಮಾವರ: ಬ್ರಹ್ಮಾವರದಲ್ಲಿ ನಡೆದ ಮೂರು ದಿನಗಳ ಹಲಸು ಮೇಳ ರಾಜ್ಯದ ಗಮನ ಸೆಳೆಯಿತು. ವಿವಿಧ ಬಗೆಯ ಹಲಸಿನ ಹಣ್ಣಿನ ಪ್ರದರ್ಶನ, ಹಲಸಿನ ಗಿಡದ ಪ್ರದರ್ಶನ, ಹಲಸಿನ ಖಾದ್ಯಗಳ ವಿಶೇಷವಾಗಿ ಗಮನ ಸೆಳೆದವು. ಹಲಸಿನ ಮುಳುಕ, ಹಲಸಿನ ಜ್ಯೂಸ್, ಹಲಸಿನ ಹೋಳಿಗೆ, ಹಲಸಿನ ಚಿಪ್ಸ್ ಹಾಗೂ ಹಲಸಿನ ಕಡುಬು ಹೀಗೆ ವಿಶೇಷವಾದ ಖಾದ್ಯಗಳು ಜನರು ಮುಗಿಬಿದ್ದು ಖರೀದಿಸಿ ಟೇಸ್ಟ್ ಮಾಡಿದರು. ಈ ಮೂಲಕ ಬ್ರಹ್ಮಾವರದಲ್ಲಿ ಮೂರು ದಿನಗಳ ಹಲಸಿನ ಮೇಳ ಗಮನ ಸೆಳೆಯಿತು. ಸುಮಾರು 200ಕ್ಕೂ ಹೆಚ್ಚು ವಿವಿಧ ಭಾಗದ ರಾಜ್ಯದ ಉತ್ಪಾದಕರು ಹಾಗೂ ಹಲಸು ತಿಂಡಿ ತಯಾರಕರು, ಹಲಸು ಗಿಡ ಹಾಗೂ ಹಣ್ಣು ಮಾರಾಟಗಾರರು ಹಾಗೂ ಹಲಸಿನ ವಿವಿಧ ಉತ್ಪನ್ನಗಳ ಮಾರಾಟಗಾರರು ಆಗಮಿಸಿದ್ದರು. ವಿವಿಧ ಕ್ಷೇತ್ರಗಳ ಅಂಗಡಿಗಳು ಇಲ್ಲಿ ಆಗಮಿಸಿದ್ದು.,ಅಚ್ಚು ಕಟ್ಟಿನ ಆಯೋಜನೆ ಗಮನ ಸೆಳೆಯಿತು. ಮೂರು ದಿನಗಳ ಕಾಲ ಸುಮಾರು ಲಕ್ಷಾಂತರ ಮಂದಿ ಹಲಸು ಮೇಳಕ್ಕೆ ಭೇಟಿ ನೀಡಿದ್ದು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಉತ್ಪಾದಕರು ಹಾಗೂ ಸ್ಟಾಲ್ ಮಾಲೀಕರು ಸಂತಸ ಪಟ್ಟರು.

ಹಲಸಿನ ಮೇಳದ ಬಗ್ಗೆ ಮೆಚ್ಚುಗೆ

ಬ್ರಹ್ಮಾವರದ ಎಸ್.ಎಂ.ಎಸ್. ಸಮುದಾಯ ಭವನದಲ್ಲಿ ರೋಟರಿ ಕ್ಲಬ್, ಸೌತ್ ಕೆನರಾ ಫೊಟೋಗ್ರಾಫರ್ಸ್ ಅಸೋಸಿಯೇಷನ್, ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಹಾಗೂ ಕೃಷಿ ಕೇಂದ್ರದ ಆಶ್ರಯದಲ್ಲಿ ಹಮ್ಮಿಕೊಂಡ ಮೂರು ದಿನಗಳ ಹಲಸು ಮತ್ತು ಹಣ್ಣು ಮೇಳ ಭಾನುವಾರ ಯಶಸ್ವಿಯಾಗಿ ಸಮಾರೋಪಗೊಂಡಿತು. ಹಲಸು ಮತ್ತು ಹಣ್ಣು ಮೇಳದ ಉದ್ಘಾಟನಾ ಕಾಠ್ಯಕ್ರಮದಲ್ಲಿ ಹಿರಿಯ ಕೃಷಿಕ ಶ್ರೀನಿವಾಸ ಹೆಗ್ಡೆ ಜೇನು ಕೃಷಿಕ ಸುರೇಶ್ ಕರ್ಕೇರ ಅವರನ್ನು ಸಮ್ಮಾನಿಸಲಾಯಿತು. ಅತಿಥಿ ಗಣ್ಯರು ಉಪಸ್ಥಿತರಿದ್ದರು. ವೈವಿಧ್ಯಮಯ ಹಣ್ಣು, ಸಸ್ಯ, ತಿಂಡಿ ತಿನಿಸುಗಳಲ್ಲದೆ ಕರಕುಶಲ ವಸ್ತುಗಳು, ಆಯುರ್ವೆದಿಕ್, ಗೃಹ ತಯಾರಿಕೆಯ ಉತ್ಪನ್ನಗಳನ್ನು ಜನರು ಮುಗಿಬಿದ್ದು ಖರೀದಿಸಿದರು.

ನೂರಾರು ಪ್ರಾಡಕ್ಟ್ ಪ್ರದರ್ಶನ!

ವಾರಾಂತ್ಯ ಜತೆಗೆ ಬಿಸಿಲಿನ ವಾತಾವರಣವಿದ್ದುದರಿಂದ ಮೂರು ದಿನವೂ ಜನರು ಹುಮ್ಮಸ್ಸಿನಿಂದ ಪಾಲ್ಗೊಂಡರು. ಸಹಸ್ರಾರು ಮಂದಿ ಭೇಟಿ ನೀಡಿದ್ದರು. ಕೃಷಿಕರಿಗೆ ಹಾಗೂ ಸಣ್ಣ ಉದ್ದಿಮೆದಾರರಿಗೆ ನೇರ ಮಾರುಕಟ್ಟೆ ಕಲ್ಪಿಸುವ, ಜನರಿಗೆ ವಿಭಿನ್ನ ವಸ್ತುಗಳನ್ನು ಪರಿಚಯಿಸುವ ಮೇಳದ ಉದ್ದೇಶ ಈಡೇರಿತು.

ಅಚ್ಚುಕಟ್ಟಿನ ಆಯೋಜನೆ: ಮಾರಾಟಗಾರರು ಫುಲ್ ಖುಷ್

ರೋಟರಿ ಕ್ಲಬ್, ಸೌತ್ ಕೆನರಾ ಫೊಟೋಗ್ರಾಫರ್ಸ್ ಅಸೋಸಿಯೇಷನ್, ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಹಾಗೂ ಕೃಷಿ ಕೇಂದ್ರದ ಆಶ್ರಯದಲ್ಲಿ ಈ ಮೇಳ ಎಲ್ಲರ ಮೆಚ್ಚುಗೆ ವ್ಯಕ್ತವಾಗಿದೆ. ಆಯೋಜನೆ ಮಾಡಿದ ಗಣೇಶ್ ಶೆಟ್ಟಿ ಸೇರಿದಂತೆ ಎಲ್ಲರ ಸೇವೆ ಇಲ್ಲಿ ಸ್ಮರಿಸಬಹುದು.

Categories
ಉಡುಪಿ ಕರಾವಳಿ

ಉಡುಪಿ, ಬ್ರಹ್ಮಾವರದಲ್ಲಿ “ನಮ್ಮೂರ್ ಎಕ್ಸ್ ಪ್ರೆಸ್”

ಉಡುಪಿ, ಬ್ರಹ್ಮಾವರದಲ್ಲಿ “ನಮ್ಮೂರ್ ಎಕ್ಸ್ ಪ್ರೆಸ್”
– ಮಂಗಳೂರು, ಮೂಡಬಿದಿರೆಯಲ್ಲಿ ಪ್ರಚಾರ
– ಬ್ರಹ್ಮಾವರ ಹಲಸು ಮೇಳ, ಉಡುಪಿ ಕೃಷಿ ಮೇಳದಲ್ಲಿ ಪೋಸ್ಟರ್ ಬಿಡುಗಡೆ

NAMMUR EXPRESS NEWS
ಉಡುಪಿ/ಬ್ರಹ್ಮಾವರ: ರಾಜ್ಯದ ಕ್ರಿಯಾಶೀಲ ಮಾಧ್ಯಮ ಸಂಸ್ಥೆ ನಮ್ಮೂರ್ ಎಕ್ಸ್ ಪ್ರೆಸ್ ಉಡುಪಿ, ಬ್ರಹ್ಮಾವರ, ಮೂಡಬಿದ್ರೆಯಲ್ಲಿ ಪೋಸ್ಟರ್ ಬಿಡುಗಡೆ ಮಾಡಿತು. ಬ್ರಹ್ಮಾವರದಲ್ಲಿ ನಡೆದ ಹಲಸು ಮೇಳದಲ್ಲಿ ಪೋಸ್ಟರ್ ಅನ್ನು ಯುವ ಸಂಘಟಕ, ಉದ್ಯಮಿ ಗಣೇಶ್ ಶೆಟ್ಟಿ ಬಿಡುಗಡೆ ಮಾಡಿದರು.

ಉಡುಪಿಯಲ್ಲಿ ಕರ್ನಾಟಕ ಬ್ಯಾಂಕ್ ಸಿಬ್ಬಂದಿಯಿಂದ ಪೋಸ್ಟರ್ ಲಾಂಚ್!

ಉಡುಪಿಯ ಕೃಷ್ಣ ಮಠದಲ್ಲಿ ನಡೆದ ಕೃಷಿ ಮೇಳದಲ್ಲಿ ಉಡುಪಿ ಕರ್ನಾಟಕ ಬ್ಯಾಂಕ್ ಸ್ಟಾಲ್ ಭೇಟಿ ನೀಡಿದ್ದು ಅಲ್ಲಿ ರೀಜನಲ್ ಹೆಡ್ ವಾದಿರಾಜ್, ಕ್ಲಸ್ಟರ್ ಹೆಡ್ ಪ್ರದೀಪ್ ಕುಮಾರ್, ಡೆಪ್ಯೂಟಿ ರೀಜನಲ್ ಹೆಡ್ ಮನೋಜ್ ಕುಮಾರ್ ಕೋಟ್ಯಾನ್, ಉಡುಪಿ ಬ್ರಾಂಚ್ ಸಿಬ್ಬಂದಿ ಮತ್ತು ಸೇಲ್ಸ್ ಆಫೀಸರ್ ಅವರಿಂದ ಪೋಸ್ಟರ್ ಬಿಡುಗಡೆ ಮಾಡಿಸಲಾಯಿತು. ಸರ್ವರೂ ಮಾಧ್ಯಮಕ್ಕೆ ಶುಭಾಶಯ ಕೋರಿದರು.

ಮೂಡುಬಿದಿರೆಯಲ್ಲಿ ಬಿಡುಗಡೆ

ಮೂಡುಬಿದಿರೆಯ ಮೂಡುಬಿದಿರೆ ಮೆಡಿಕಲ್ಸ್ ಅಲ್ಲಿ ನಮ್ಮೂರ್ ಎಕ್ಸ್ ಪ್ರೆಸ್ ಪ್ರತಿನಿಧಿ ಧನಂಜಯ, ರಾಮದಾಸ್ ಪೈ, ಸಂದ್ಯಾ, ಕಿರಣ್ ಸಾಲಿಯಾನ್ ಇತರರು ಇದ್ದರು.

ಮಂಗಳೂರಲ್ಲಿ ಪ್ರಚಾರ

ಮಂಗಳೂರಲ್ಲಿ ನಮ್ಮೂರ್ ಎಕ್ಸ್ ಪ್ರೆಸ್ ಪೋಸ್ಟರ್ ಅನ್ನು ಸುರೇಶ್ ಬಿಡುಗಡೆ ಮಾಡಿದರು.

Categories
ಉಡುಪಿ ಕರಾವಳಿ

ಉಡುಪಿಯಲ್ಲಿ 2 ದಿನ ಬೃಹತ್ ಕೃಷಿ ಸಮ್ಮೇಳನದ ಸಂಭ್ರಮ!

ಉಡುಪಿಯಲ್ಲಿ 2 ದಿನ ಬೃಹತ್ ಕೃಷಿ ಸಮ್ಮೇಳನದ ಸಂಭ್ರಮ!
– ಸಾವಿರಾರು ಮಂದಿಯ ಆಗಮನ: ಮಾರಾಟಗಾರರಿಗೆ ಖುಷಿ
– ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ, ಉಡುಪಿ ಜಿಲ್ಲಾ ಕೃಷಿಕರ ಸಂಘ, ರೋಟರಿ ಐಸಿರಿ ಪರ್ಕಳ ಸಹಯೋಗ

NAMMUR EXPRESS NEWS
ಉಡುಪಿ : ಉಡುಪಿ ಕೃಷ್ಣ ಮಠದ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸಿ, ಕೃಷಿ ಮೇಳದಲ್ಲಿ ವಿವಿಧ ಉತ್ಪನ್ನಗಳನ್ನ ಖರೀದಿಸಿದರು. ರಾಜ್ಯದ ವಿವಿಧ ಭಾಗಗಳಿಂದ ಹಾಗೂ ಕರಾವಳಿಯ ವಿವಿಧ ಭಾಗಗಳಿಂದ ಆಗಮಿಸಿದ ಗುಡಿ ಕೈಗಾರಿಕೆಗಳು, ಗೃಹ ಉತ್ಪನ್ನಗಳು ಕೃಷಿ ಉತ್ಪನ್ನಗಳು, ಕೃಷಿ ಕಂಪನಿಗಳು ಹಾಗೂ ದಿನ ಬಳಕೆಯ ವಸ್ತುಗಳ ತಯಾರಕರು ಈ ಮೇಳದಲ್ಲಿ ತಮ್ಮ ವಸ್ತುಗಳು ಮತ್ತು ತಮ್ಮ ಉತ್ಪನ್ನಗಳನ್ನು ಪ್ರದರ್ಶನ ಹಾಗೂ ಮಾರಾಟ ಮಾಡಿದರು. ಈ ಮೂಲಕ ಸ್ವದ್ಯೋಗ ಹಾಗೂ ವಿಶೇಷ ಕೃಷಿ ಚಟುವಟಿಕೆಗಳಿಗೆ ಈ ಮೇಳ ಸಹಕಾರವಾಯಿತು.

ಈ ಮೇಳದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮಗಳು ಹಾಗೂ ಕೃಷಿಯ ಮಹತ್ವದ ಬಗ್ಗೆ ಸಭೆಗಳು ನಡೆದವು, ಕೃಷಿಕರು ಹಾಗೂ ಜನತೆಯು ಉಪಯೋಗ ಪಡೆದುಕೊಂಡರು. ಕೃಷ್ಣಮಠದಲ್ಲಿ ನಡೆದ ಈ ವಿಶೇಷ ಕಾರ್ಯಕ್ರಮ ಇಡೀ ಕರಾವಳಿಯಲ್ಲಿ ಗಮನ ಸೆಳೆಯಿತು. ಕೃಷಿ ಮೇಳದಲ್ಲಿ ಕರ್ನಾಟಕ ಬ್ಯಾಂಕ್ ಉಡುಪಿ ಜಿಲ್ಲಾ ಕೇಂದ್ರ ಕೂಡ ವಿಶೇಷವಾದ ಗ್ರಾಹಕರಿಗೆ ಸೌಲಭ್ಯದ ಬಗ್ಗೆ ಮಾಹಿತಿ ನೀಡಿತು. ಭೀಮಾ ಜ್ಯೂವೆಲರಿ ಇದರ ಸಹಭಾಗಿತ್ವವನ್ನ ವಹಿಸಿತು

ಕರ್ನಾಟಕ ಬ್ಯಾಂಕ್ ಸಿಬ್ಬಂದಿಯಿಂದ ಗ್ರಾಹಕರಿಗೆ ಮಾಹಿತಿ

ಉಡುಪಿಯ ಕೃಷ್ಣ ಮಠದಲ್ಲಿ ನಡೆದ ಕೃಷಿ ಮೇಳದಲ್ಲಿ ಉಡುಪಿ ಕರ್ನಾಟಕ ಬ್ಯಾಂಕ್ ಸ ಗ್ರಾಹಕರಿಗೆ ಮಾಹಿತಿ ನೀಡಿದರು. ರೀಜನಲ್ ಹೆಡ್ ವಾದಿರಾಜ್, ಕ್ಲಸ್ಟರ್ ಹೆಡ್ ಪ್ರದೀಪ್ ಕುಮಾರ್, ಡೆಪ್ಯೂಟಿ ರೀಜನಲ್ ಹೆಡ್ ಮನೋಜ್ ಕುಮಾರ್ ಕೋಟ್ಯಾನ್, ಉಡುಪಿ ಬ್ರಾಂಚ್ ಸಿಬ್ಬಂದಿ ಮತ್ತು ಸೇಲ್ಸ್ ಆಫೀಸರ್ ಇದ್ದರು. ಗ್ರಾಹಕರಿಗೆ ಬ್ಯಾಂಕಿನ ಯೋಜನೆಗಳ ಪರಿಚಯ ಮಾಡಿಕೊಡಲಾಯಿತು. ಪ್ರಧಾನ ಮಂತ್ರಿ ಸೋಲಾರ್ ಯೋಜನೆ ತಿಳಿಸಲಾಯಿತು. ಕುಂಜಿಬೆಟ್ಟು ಬ್ರಾಂಚ್ ಸಿಬ್ಬಂದಿ ಇದ್ದರು.

Categories
ತೀರ್ಥಹಳ್ಳಿ ಮಲ್ನಾಡ್ ರಾಜಕೀಯ

ಮಲೆನಾಡಲ್ಲಿ ಪರಿಷತ್ ಮತ ಸಮರ!

ಮಲೆನಾಡಲ್ಲಿ ಪರಿಷತ್ ಮತ ಸಮರ!
– ಶಿವಮೊಗ್ಗ, ತೀರ್ಥಹಳ್ಳಿ, ಹೊಸ ನಗರ ಸೇರಿ ಶಿವಮೊಗ್ಗ ಜಿಲ್ಲೆಯಲ್ಲಿ ಮತದಾನ ಜೋರು
– ಶಿವಮೊಗ್ಗದಲ್ಲಿ ಸರ್ಜಿ ದಂಪತಿ ಸಮೇತ ಮತದಾನ
– ತೀರ್ಥಹಳ್ಳಿಯಲ್ಲಿ ಬಿರುಸಿನ ಮತದಾನ ಆರಗ, ಕಿಮ್ಮನೆ ಮಂಜುನಾಥ್ ಗೌಡ ಮತ
– ಚಿಕ್ಕಮಗಳೂರಲ್ಲಿ ಸಿಟಿ ರವಿ ಸೇರಿ ಅನೇಕರ ಮತದಾನ

NAMMUR EXPRESS NEWS
ಮಲೆನಾಡು: ನೈರುತ್ಯ ಪದವೀಧರ ಮತ್ತು ಶಿಕ್ಷಕ ಕ್ಷೇತ್ರದ ಮತದಾನ ಮಲೆನಾಡಲ್ಲಿ ಶಾಂತಿಯುತವಾಗಿ ನಡೆಯಿತು. ತೀರ್ಥಹಳ್ಳಿಯಲ್ಲಿ ನೈರುತ್ಯ ಪದವೀಧರ ಹಾಗೂ ಶಿಕ್ಷಕ ಕ್ಷೇತ್ರದಲ್ಲಿ ಚುನಾವಣೆಯ ಮತದಾನ ಭರ್ಜರಿಯಾಗಿ ನಡೆಯಿತು. ಬೆಳಗ್ಗೆಯಿಂದ ಸಂಜೆವರೆಗೂ ಚುನಾವಣೆ ನಡೆದಿದ್ದು ಯುವಜನತೆ ಖುಷಿಯಿಂದ ಭಾಗಿಯಾದರು . ಇನ್ನೂ ಚುನಾವಣೆ ಮತದಾನದಲ್ಲಿ ಕಿಮ್ಮನೆ ರತ್ನಾಕರ್, ಆರಗ ಜ್ಞಾನೇಂದ್ರ, ಮಂಜುನಾಥ್ ಗೌಡ ಕೂಡ ತಮ್ಮ ಅಭ್ಯರ್ಥಿಗಳ ಪರ ಮತವನ್ನು ಕೇಳಿದರು.

ಕಿಮ್ಮನೆ ರತ್ನಾಕರ್ ಮಾತನಾಡಿ, ಮೊದಲ ಪ್ರಾಶಸ್ತ ಮತದಾನದಲ್ಲೇ ಕಾಂಗ್ರೆಸ್ ಪಕ್ಷದ ಎರಡು ಅಭ್ಯರ್ಥಿಗಳು ಗೆಲುವನ್ನ ಸಾಧಿಸುತ್ತಾರೆ ಎಂದು ವಿಶ್ವಾಸವನ್ನ ವ್ಯಕ್ತಪಡಿಸಿದರು. ಆರಗ ಜ್ಞಾನೇಂದ್ರ ಅವರು ಮಾತನಾಡಿ ಬಿಜೆಪಿ ರಾಜ್ಯ ಹಾಗೂ ದೇಶದಲ್ಲಿ ಮತ್ತೆ ತನ್ನ ಗೆಲುವನ್ನ ದಾಖಲಿಸಲಿದೆ. ಈಗಾಗಲೇ ದೇಶದಲ್ಲಿ ಸಮೀಕ್ಷೆಗಳ ಪ್ರಕಾರ ಮೋದಿ ಸರ್ಕಾರ ಗೆಲುವು ಸಾಧಿಸಿದೆ. ಅದೇ ರೀತಿಯಲ್ಲಿ ವಿಧಾನ ಪರಿಷತ್ ಚುನಾವಣೆಯಲ್ಲೂ ಕೂಡ ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳಾದ ಡಾ. ಧನಂಜಯ್ ಸರ್ಜಿ ಹಾಗೂ ಬೋಜೇಗೌಡ ಗೆಲುವನ್ನ ಸಾಧಿಸಲಿದ್ದಾರೆ ಎಂದರು. ಹೊಸನಗರ, ನಗರ ಸೇರಿ ಶಿವಮೊಗ್ಗ ಜಿಲ್ಲೆಯಲ್ಲಿ ಮತದಾನ ನಡೆಯಿತು.

ಗೆಲುವು ನಮ್ಮದೇ ಎಂದ ಸರ್ಜಿ!

ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಅವರು ಪತ್ನಿ ನಮಿತಾ ಸರ್ಜಿ ಅವರೊಂದಿಗೆ ತೆರಳಿ ಸೋಮವಾರ ಬೆಳಗ್ಗೆ ಶಿವಮೊಗ್ಗ ವಿನೋಬ ನಗರದ ದೇಶೀಯ ವಿದ್ಯಾಶಾಲಾ ಹೈಸ್ಕೂಲ್ ವಿಭಾಗದ ಮತಕೇಂದ್ರದಲ್ಲಿ ಮತ ಚಲಾಯಿಸಿದರು. ಮತ ಚಲಾಯಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದಲ್ಲಿ ತಾವು ಮತ್ತು ಮೈತ್ರಿ ಅಭ್ಯರ್ಥಿ ಎಸ್.ಎಲ್.ಭೋಜೇಗೌಡರ ಗೆಲುವು ಖಚಿತ ಎಂದು ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ವಿಶ್ವಾಸ ವ್ಯಕ್ತಪಡಿಸಿದರು ಅಷ್ಟೇ ಅಲ್ಲದೆ ಎದುರಾಳಿಗಳಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ ಎಂದು ಹೇಳಿದರು.

Categories
ಅಡಿಕೆ-ದರ

ಅಡಿಕೆ ದರ 03-06-2024

ಅಡಿಕೆ ದರ
03-06-2024
ಸರಕು 57399 83996
ಬೆಟ್ಟೆ 51199 52200
ರಾಶಿ 34118 54299
ಗೊರಬಲು 17009 35809
Nammur Express
Categories
ಕರಾವಳಿ ಮಂಗಳೂರು ರಾಜಕೀಯ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿಷತ್‌ ಮತದಾನ ಯಶಸ್ವಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿಷತ್‌ ಮತದಾನ ಯಶಸ್ವಿ
– ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಸಹಾಯಕ ಆಯುಕ್ತರಾದ ಹರ್ಷವರ್ಧನ ಮತದಾನ
– ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿಯಾಗಿರುವ ಬ್ರಿಜೇಶ್‌ ಚೌಟ ಮತ

NAMMUR EXPRESS NEWS
ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮತದಾನ ಸೋಮವಾರ ಬೆಳಗ್ಗೆ ಆರಂಭಗೊಂಡಿದ್ದು, ಬಿರುಸಿನಿಂದ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಹಾಗೂ ಸಹಾಯಕ ಆಯುಕ್ತರಾದ ಹರ್ಷವರ್ಧನ ಅವರು ಹಂಪನಕಟ್ಟೆಯ ಮಂಗಳೂರು ವಿವಿ ಕಾಲೇಜಿನಲ್ಲಿ ಮತ ಚಲಾಯಿಸಿದ್ದಾರೆ. ಅದೇ ರೀತಿ ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿಯಾಗಿರುವ ಬ್ರಿಜೇಶ್‌ ಚೌಟ ಅವರು ಕೂಡ ಮಂಗಳೂರು ವಿವಿ ಕಾಲೇಜಿನಲ್ಲಿರುವ ಮತಗಟ್ಟೆಗೆ ತೆರಳಿ ಪದವೀಧರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ತಮ್ಮ ಹಕ್ಕು ಚಲಾಯಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ಪದವೀಧರ ಕ್ಷೇತ್ರದಲ್ಲಿ ಒಟ್ಟು 19,971 ಮತದಾರರು ಇದ್ದು ಅವರ ಪೈಕಿ 11,596 ಮಂದಿ ಮಹಿಳೆಯರು ಹಾಗೂ 8,375 ಮಂದಿ ಪುರುಷ ಮತದಾರರು ಇದ್ದಾರೆ.

ಅದೇರೀತಿ ಶಿಕ್ಷಕ ಕ್ಷೇತ್ರದಲ್ಲಿ ಒಟ್ಟು 8,189 ಮಂದಿ ಮತದಾರರು ಇದ್ದು ಅವರ ಪೈಕಿ 5539 ಮಂದಿ ಪುರುಷ ಹಾಗೂ 2650 ಮಂದಿ ಮಹಿಳಾ ಮತದಾರರು ಇದ್ದಾರೆ. . ಶಿಕ್ಷಕರ ಕೇತ್ರದಿಂದ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಎಸ್.ಎಲ್.ಭೋಜೆಗೌಡ, ಕಾಂಗ್ರೆಸ್‌ನಿಂದ ಡಾ.ಕೆ.ಕೆ ಮಂಜುನಾಥ್ ಕುಮಾರ್ ಸ್ಪರ್ಧೆ ಮಾಡಿದ್ದಾರೆ ಮ್ ಅದೇರೀತಿ ಪದವೀಧರರ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಆಯನೂರು ಮಂಜುನಾಥ, ಬಿಜೆಪಿಯಿಂದ ಡಾ.ಧನಂಜಯ ಸರ್ಜಿ ಹಾಗೂ ಪಕ್ಷೇತರರಾಗಿ ಬಿಜೆಪಿ ಮಾಜಿ ಶಾಸಕ ರಘುಪತಿ ಭಟ್‌ ಅವರು ಸ್ಪರ್ಧೆ ಮಾಡಿದ್ದಾರೆ.

Categories
ರಾಜಕೀಯ ರಾಜ್ಯ ರಾಷ್ಟ್ರೀಯ ವಾರ್ತೆ

ಲೋಕಸಭೆ ಫಲಿತಾಂಶದತ್ತ ಈಗ ದೇಶದ ಚಿತ್ತ!

ಲೋಕಸಭೆ ಫಲಿತಾಂಶದತ್ತ ಈಗ ದೇಶದ ಚಿತ್ತ!
– ಕರ್ನಾಟಕದ 28 ಸೇರಿ ದೇಶದ 543 ಕ್ಷೇತ್ರಗಳ ಫಲಿತಾಂಶ ಪ್ರಕಟ
– ಮತ ಎಣಿಕೆ ಎಷ್ಟು ಗಂಟೆಗೆ ಪ್ರಾರಂಭವಾಗುತ್ತದೆ?
– ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯ: ಏನೇನು ನಿಯಮ?

NAMMUR EXPRESS NEWS
ದೇಶದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿರುವ ಲೋಕಸಭೆ ಚುನಾವಣೆಯ ಮತ ಎಣಿಕೆ ಜೂನ್ 4ರಂದು ನಡೆಯಲಿದ್ದು, ಮಧ್ಯಾಹ್ನದ ವೇಳೆಗೆ ಲೋಕಸಭೆ ಚುನಾವಣೆಯ ಅಂತಿಮ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ. ಇದೀಗ ಇಡೀ ದೇಶದ ಜನ ಈ ಫಲಿತಾಂಶವನ್ನು ಎದುರು ನೋಡುತ್ತಿದ್ದಾರೆ. 44 ದಿನಗಳಲ್ಲಿ ಏಳು ಸುತ್ತಿನ ಚುನಾವಣೆಗಳ ನಂತರ ಭಾರತದ ಬಹು ಹಂತದ ಮತದಾನ ಶನಿವಾರ ಮುಕ್ತಾಯಗೊಂಡಿದೆ. ಏಪ್ರಿಲ್ 19, ಏಪ್ರಿಲ್ 26, ಮೇ 7, ಮೇ 13, ಮೇ 20, ಮೇ 25 ಮತ್ತು ಜೂನ್ 1 ರಂದು ನಡೆದ ಏಳು ಹಂತಗಳಲ್ಲಿ ಕ್ರಮವಾಗಿ 66.1, 66.7, 61.0, 67.3, 60.5, 63.4 ಮತ್ತು 62 ರಷ್ಟು ಮತದಾನವಾಗಿದೆ. ಅಂದಾಜು 969 ಮಿಲಿಯನ್ ಜನರು ಮತ ಚಲಾಯಿಸಲು ನೋಂದಾಯಿಸಿಕೊಂಡಿದ್ದಾರೆ. ವಿದ್ಯುನ್ಮಾನ ಮತದಾನ ಯಂತ್ರಗಳನ್ನು ಬಳಸಿ ಮತ ಚಲಾಯಿಸಲಾಯಿತು.

ಮತ ಎಣಿಕೆ ಎಷ್ಟು ಗಂಟೆಗೆ ಪ್ರಾರಂಭವಾಗುತ್ತದೆ?

ಲೋಕಸಭೆ ಚುನಾವಣೆಯ ಮತ ಎಣಿಕೆಯು ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಾರಂಭವಾಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಚುನಾವಣಾ ಫಲಿತಾಂಶವನ್ನು ಎಲ್ಲಿ ನೋಡಬಹುದು?

ಇಸಿಐ ಇತ್ತೀಚಿನ ಎಣಿಕೆಗೆ ಸಂಬಂಧಿಸಿದ ಡೇಟಾವನ್ನು ಡಿಜಿಟಲ್ ರೂಪದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತದೆ. “ಎಸಿ / ಪಿಸಿಗಾಗಿ ಆರ್‌ಒ / ಎಆರ್‌ಒ ನಮೂದಿಸಿದ ಮಾಹಿತಿಯ ಪ್ರಕಾರ ಎಣಿಕೆ ಪ್ರವೃತ್ತಿಗಳು ಮತ್ತು ಫಲಿತಾಂಶಗಳು ಇಸಿಐ ವೆಬ್ಸೈಟ್ನಲ್ಲಿ ಯುಆರ್‌ಎಲ್ https://results.eci.gov.in/ ಮತ್ತು ಮತದಾರರ ಸಹಾಯವಾಣಿ ಅಪ್ಲಿಕೇಶನ್ನಲ್ಲಿ, ಐಒಎಸ್ ಮತ್ತು ಆಂಡ್ರಾಯ್ಡ್ ಮೊಬೈಲ್ ಅಪ್ಲಿಕೇಶನ್ಗಳಲ್ಲಿ ಲಭ್ಯವಿರುತ್ತವೆ” ಎಂದು ಚುನಾವಣಾ ಆಯೋಗ ತಿಳಿಸಿದೆ.

ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯ:

ಜೂನ್ 4 ರಂದು ಮತ ಎಣಿಕೆ ನಡೆಯಲಿದ್ದು, ಲೋಕಸಭಾ ಚುನಾವಣೆ, ಉಪಚುನಾವಣೆ ಮತ್ತು ರಾಜ್ಯ ವಿಧಾನಸಭೆಗಳ ಫಲಿತಾಂಶಗಳನ್ನು ಘೋಷಿಸುವಾಗ ಚುನಾವಣಾ ಅಧಿಕಾರಿಗಳು ಅನುಸರಿಸಬೇಕಾದ ಸಮಗ್ರ ಮಾರ್ಗಸೂಚಿಗಳನ್ನು ಚುನಾವಣಾ ಆಯೋಗ ಬಿಡುಗಡೆ ಮಾಡಿದೆ. ಜಿಲ್ಲಾ ಚುನಾವಣಾ ಅಧಿಕಾರಿಗಳು, ರಿಟರ್ನಿಂಗ್ ಅಧಿಕಾರಿಗಳು (ಆರ್‌ಒ) ಮತ್ತು ವೀಕ್ಷಕರು ಮತ ಎಣಿಕೆ ಪ್ರಾರಂಭವಾಗುವ ಮೊದಲು ಎಣಿಕೆ ಕೇಂದ್ರಗಳಲ್ಲಿ ಮತ್ತು ಸುತ್ತಮುತ್ತಲಿನ ಎಣಿಕೆ ವ್ಯವಸ್ಥೆಗಳಿಗಾಗಿ ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಪಾಲಿಸಬೇಕು ಎಂದು ಮಾರ್ಗಸೂಚಿಗಳು ತಿಳಿಸಿವೆ.

ಮದ್ಯ ನಿಷೇಧ: ನಿಷೇಧಾಜ್ಞೆ ಜಾರಿ

ಚುನಾವಣೆ ಮತ ಎಣಿಕೆ ಹಿನ್ನಲೆ ಜೂನ್ 4ರ ಬೆಳಿಗ್ಗೆಯಿಂದ ರಾತ್ರಿ 12ರವರೆಗೆ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ಎಣಿಕೆ ಹಿನ್ನೆಲೆ ಜೂ-04 ರ ಬೆಳಗ್ಗೆ 6 ರಿಂದ ಜೂ-05 ರ ಬೆಳಗ್ಗೆ 6.00 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.