Categories
ಬೆಂಗಳೂರು

ಕರ್ನಾಟಕ ಟಾಪ್ ನ್ಯೂಸ್.

ಕರ್ನಾಟಕ ಟಾಪ್ ನ್ಯೂಸ್

ಲೈಂಗಿಕ ದೌರ್ಜನ್ಯ: ಪ್ರಜ್ವಲ್ ರೇವಣ್ಣ ವಿಡಿಯೋಗಳು ಅಸಲಿ!
– ಎಫ್ ಎಸ್ ಎಲ್ ವರದಿ ಬಹಿರಂಗ: ಮುಂದೇನು ಎಂಬ ಕುತೂಹಲ
– ಬೆಂಗಳೂರು: ಇಬ್ಬರು ಯುವಕರ ಹೆಸರು ಬರೆದಿಟ್ಟು ಮಹಿಳೆ ಆತ್ಮಹತ್ಯೆ!
– ಮೈಸೂರು: ನೇಣು ಬಿಗಿದುಕೊಂಡು 11 ವರ್ಷದ ಬಾಲಕ ಆತ್ಮಹತ್ಯೆ!
– ಹಾಸನ: ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಅರ್ಚಕನ ಬಂಧನ!

NAMMUR EXPRESS NEWS
ಬೆಂಗಳೂರು : ಅತ್ಯಾಚಾರ ಆರೋಪದಡಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ ಕುರಿತು ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪೆನ್ ಡ್ರೈವ್ ಕೇಸ್ ಸಂಬಂಧ ಸೋಷಿಯಲ್‌ ಮೀಡಿಯಾಗಳಲ್ಲಿ ಹರಿದಾಡಿದ ವಿಡಿಯೋಗಳೆಲ್ಲವೂ ಅಸಲಿ.
ಯಾವ ವಿಡಿಯೋಗಳನ್ನು ತಿರುಚಲಾಗಿಲ್ಲ ಎಂದು ಎಫ್ ಎಸ್ ಎಲ್ (ವಿಧಿ ವಿಜ್ಞಾನ ಪ್ರಯೋಗಾಲಯ) ವರದಿ ನೀಡಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ವಿಡಿಯೋಗಳಲ್ಲಿ ಪುರಷನ ಮುಖ ಸ್ಪಷ್ಟವಾಗಿ ಕಂಡುಬಂದಿಲ್ಲ. ಹೀಗಾಗಿ ವಿಡಿಯೋದಲ್ಲಿರುವ ವ್ಯಕ್ತಿ ಯಾರು ಎಂಬುವುದು ತನಿಖೆಯ ಬಳಿಕವೇ ತಿಳಿದುಬರಲಿದೆ. ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡ ಪೆನ್‌ಡ್ರೈವ್‌ಗಳಿಂದ ಹತ್ತಾರು ಅಶ್ಲೀಲ ವಿಡಿಯೋಗಳನ್ನು ಸಂಗ್ರಹ ಮಾಡಿತ್ತು. ಈ ವಿಡಿಯೋಗಳು ಅಸಲಿಯೋ, ನಕಲಿಯೋ ಎಂದು ತಿಳಿಯಲು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದೀಗ ಇದರ ರಿಪೋರ್ಟ್ ಬಂದಿದ್ದು, ಎಲ್ಲಾ ವಿಡಿಯೋಗಳು ಅಸಲಿ ಎಂದು ಗೊತ್ತಾಗಿದೆ. ಈ ಪ್ರಕರಣ ಬೆಳಕಿಗೆ ಬಂದ ಬಳಿಕ ಸುಮಾರು ಒಂದು ತಿಂಗಳಕಾಲ ಪ್ರಜ್ವಲ್ ರೇವಣ್ಣ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದರು. ಎಸ್‌ಐಟಿಯಿಂದ ತನಿಖೆ, ಬಂಧನ ಭೀತಿ ಹೆಚ್ಚಾದಂತೆಯೇ ಪ್ರಜ್ವಲ್ ತಾನಾಗಿಯೇ ಬೆಂಗಳೂರಿಗೆ ಬಂದು ಎಸ್‌ಐಟಿಗೆ ಶರಣಾಗಿದ್ದು ಗೊತ್ತೇ ಇದೆ.

ಬೆಂಗಳೂರಿನಲ್ಲಿ ಗೃಹಿಣಿ ಆತ್ಮಹ*ತ್ಯೆ…!

ಬೆಂಗಳೂರಲ್ಲಿ ಗೃಹಿಣಿ ಮಮತಾ (31) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಾಗಲಗುಂಟೆ ವ್ಯಾಪ್ತಿಯ ಸಿಡೇದಹಳ್ಳಿಯಲ್ಲಿ ಘಟನೆ ನಡೆದಿದ್ದು ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾದ ಮಹಿಳೆ ನನ್ನ ಬಗ್ಗೆ ಕೆಟ್ಟದ್ದಾಗಿ ಏನಾದ್ರು ಬಂದರೆ ನೀವೆ ಹೊಣೆ ಎಂದು ಇಬ್ಬರು ಯುವಕರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

– ಮೈಸೂರು: ನೇಣು ಬಿಗಿದುಕೊಂಡು 11 ವರ್ಷದ ಬಾಲಕ ಆತ್ಮಹತ್ಯೆ!

ಮೈಸೂರು: ಬಾಳಿ ಬದುಕಬೇಕಿದ್ದ ಬಾಲಕನ ದುರಂತ ಅಂತ್ಯ ಕಂಡಿದ್ದಾನೆ. ಹೌದು ನೇಣು ಬಿಗಿದುಕೊಂಡು ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಜಲಪುರಿ ವಸತಿ ಗೃಹದಲ್ಲಿ ನಡೆದಿದೆ. ಮೈಸೂರಿನ ಕುಶಾಲ್ (11) ವರ್ಷ ಮೃತ ಬಾಲಕನಾಗಿದ್ದು, ಇತನು ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಪೊಲೀಸ್ ಪೇದೆ ದೇಸಿಗೌಡ, ಲಕ್ಷ್ಮಿ ದಂಪತಿಗಳ ಪುತ್ರನಾಗಿದ್ದು, ಮನೆಯಲ್ಲಿ ಯಾರು ಇಲ್ಲದ ವೇಳೆ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇನ್ನೂ ಈ ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮೆಟ್ಟಿಲಿನಿಂದ ಕಾಲು ಜಾರಿ ಬಿದ್ದು ಯೋಧ ಮೃತ್ಯು!

ಮಂಡ್ಯ: ರಜೆಯಲ್ಲಿ ಬಂದಿದ್ದ ಯೋಧರೊಬ್ಬರು ಸ್ವಗ್ರಾಮದಲ್ಲಿ ಸಾವಿಗೀಡಾಗಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಚಾಮನಹಳ್ಳಿಯಲ್ಲಿ ಘಟನೆ ನಡೆದಿದೆ. ಸಿ.ಕೆ. ಸಂದೀಪ್ ಕುಮಾರ್ (38) ಮೃತ ಯೋಧ. ಸಂದೀಪ್‌ ಹರಿಯಾಣದಲ್ಲಿ ಮಿಲಿಟರಿ ಸೇವೆಯಲ್ಲಿದ್ದರು. ರಜೆಯ ಮೇಲೆ ಗ್ರಾಮಕ್ಕೆ ಬಂದಿದ್ದ ಸಂದೀಪ್, ರಾತ್ರಿ ಮನೆ ಹತ್ತಿರ ಮೆಟ್ಟಿಲಿನಿಂದ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ.

ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಅರ್ಚಕ ಬಂಧನ

ಹಾಸನ: ಮಹಿಳೆ ಮೇಲೆ ಅತ್ಯಾಚಾರದ ಆರೋಪದಡಿ ಹಾಸನದ ಪ್ರಸಿದ್ದ ದೇವಾಲಯದ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಾಸನ ಜಿಲ್ಲೆಯ ಅರಸೀಕೆರೆಯ ಪುರದಮ್ಮ ದೇವಾಲಯದ ಪೂಜಾರಿ ದಯಾನಂದ್ (39) ಬಂಧಿತ ವ್ಯಕ್ತಿ.
ಬಾಗಲುಗುಂಟೆ ಠಾಣೆ ಪೊಲೀಸರಿಂದ ಆರೋಪಿ ಬಂಧನವಾಗಿದೆ. ಕೆಲ ದಿನಗಳ ಹಿಂದೆ ಮಹಿಳೆ ನೀಡಿದ ದೂರಿನನ್ವಯ ಬಾಗಲುಗುಂಟೆ ಠಾಣೆಯಲ್ಲಿ ಆತ್ಯಾಚಾರ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಆರೋಪಿ ದಯಾನಂದ್‌ನ ಪೊಲೀಸರು ಬಂಧಿಸಿದ್ದಾರೆ. ದೋಷ ನಿವಾರಣೆಗಾಗಿ ಪೂಜೆ ಮಾಡುತ್ತೇನೆಂದು ಹಣ ಪಡೆದಿದ್ದ ಪೂಜಾರಿ, ಬಳಿಕ ಮಹಿಳೆಯನ್ನು ಕರೆಸಿಕೊಂಡು ಆತ್ಯಾಚಾರ ಮಾಡಿರುವ ಆರೋಪ ಕೇಳಿಬಂದಿದೆ. ಹೀಗಾಗಿ ಪೊಲೀಸರು ಬಂಧಿಸಿದ್ದಾರೆ.

Categories
ಬೆಂಗಳೂರು

ಅಯ್ಯೋ ದೇವ್ರೇ…ಮುಗಿಯಲಿಲ್ಲ ಮಳೆ ಆರ್ಭಟ!

ಅಯ್ಯೋ ದೇವ್ರೇ…ಮುಗಿಯಲಿಲ್ಲ ಮಳೆ ಆರ್ಭಟ!
– 7 ಜಿಲ್ಲೆಗಳಿಗೆ ಭಾರಿ ಮಳೆ ಎಚ್ಚರಿಕೆ
– ರಾಜ್ಯದಲ್ಲಿ ಮುಂದುವರಿದ ಮಳೆ ಹಾನಿ
– ಮಲೆನಾಡು -ಕರಾವಳಿಯಲ್ಲಿ ಮಳೆ ಡೇಂಜರ್

NAMMUR EXPRESS NEWS
ಬೆಂಗಳೂರು: ರಾಜ್ಯಾದ್ಯಂತ ಮಳೆ ಅಬ್ಬರ ಮುಂದುವರಿದಿದ್ದು, ಎಲ್ಲೆಡೆ ಹಾನಿ ಮುಂದುವರಿದಿದೆ. ಈ ನಡುವೆ ರಾಜ್ಯದಲ್ಲಿ ಇನ್ನು ಒಂದು ವಾರ ಮಳೆ ಆರ್ಭಟ ಇದೆ.
ಕರ್ನಾಟಕದ ಕರಾವಳಿಯಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಲೆನಾಡು ಸುತ್ತಮುತ್ತ ಪ್ರತ್ಯೇಕವಾಗಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಉತ್ತರ ಒಳನಾಡಿನಲ್ಲಿ ಚದುರಿದಂತೆ ಮಧ್ಯಮ ಮಳೆಯಾದರೆ, ದಕ್ಷಿಣ ಒಳನಾಡಿನಲ್ಲಿ ಹಗುರದಿಂದ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಮೈಸೂರು, ಮಂಡ್ಯ ರಾಮನಗರ, ಚಾಮರಾಜನಗರ, ತುಮಕೂರು ಹಾಗೂ ಚಿತ್ರದುರ್ಗ, ದಾವಣಗೆರೆ, ಕೋಲಾರ, ವಿಜಯನಗರದಲ್ಲಿ ಚದುರಿದಂತೆ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಮಧ್ಯಮ ಮಳೆಯಾಗಲಿದ್ದು ಬೆಳಗಾವಿ, ಬೀದ‌ರ್, ಕಲಬುರಗಿ, ಧಾರವಾಡ ಮತ್ತು ಹಾವೇರಿ, ವಿಜಯಪುರ, ಗದಗ, ಕೊಪ್ಪಳ, ರಾಯಚೂರು, ಯಾದಗಿರಿ, ಬಾಗಲಕೋಟೆಯಲ್ಲಿ ಮಳೆಯಾಗಲಿದೆ. ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು ಜಿಲ್ಲೆಯಲ್ಲಿ ಪ್ರತ್ಯೇಕವಾಗಿ ವ್ಯಾಪಕ ಮಳೆಯಾಗಲಿದೆ. ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ವ್ಯಾಪಕ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಬೆಂಗಳೂರಿನಲ್ಲೂ ಸಾಧಾರಣ ಮಳೆ”

ರಾಜಧಾನಿ ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಇದು ಕ್ರಮವಾಗಿ 28 ಮತ್ತು 20 ಡಿ.ಸೆ ಇರಲಿದೆ. ರಾತ್ರಿ ಸಮಯ ಚಳಿ ಹೆಚ್ಚಾಗಲಿದೆ.

7 ಜಿಲ್ಲೆಗಳಿಗೆ ಮುನ್ನೆಚ್ಚರಿಕೆ!

ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ & ಶಿವಮೊಗ್ಗ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೆಳಗಾವಿ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಹೀಗಾಗಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

Categories
ಜ್ಯೋತಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಲಕ್ಷ್ಮಿ ನಾರಾಯಣ ಯೋಗದಿಂದ ಯಾವ ರಾಶಿಯವರಿಗೆ ಅನುಕೂಲ ? ಯಾವ ರಾಶಿಯವರಿಗೆ ಅನಾನುಕೂಲ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ವ್ಯವಹಾರದಲ್ಲಿ ಹೆಚ್ಚಿನ ಜಂಜಾಟ ಇರುತ್ತದೆ. ಸಿಹಿ ಆಹಾರದಲ್ಲಿ ಆಸಕ್ತಿ ಹೆಚ್ಚಾಗಬಹುದು. ಕುಟುಂಬದಲ್ಲಿ ಶಾಂತಿಗಾಗಿ ಪ್ರಯತ್ನಗಳನ್ನು ಮಾಡಿ. ನಿಮ್ಮ ತಂದೆಯ ಸಹಾಯದಿಂದ ನೀವು ಸ್ವಲ್ಪ ಪೂರ್ವಜರ ಆಸ್ತಿಯನ್ನು ಪಡೆಯಬಹುದು. ಮನಸ್ಸಿನಲ್ಲಿ ನಿರಾಶೆ ಮತ್ತು ಅತೃಪ್ತಿಯ ಭಾವನೆ ಇರುತ್ತದೆ. ಸೋಮಾರಿತನ ಹೆಚ್ಚಾಗಲಿದೆ. ನಿಮ್ಮ ತಾಯಿ ಆರೋಗ್ಯ ಸಮಸ್ಯೆಗಳಿಂದ ಬಳಲಬಹುದು.

** ವೃಷಭ ರಾಶಿ :
ನಿಮ್ಮ ಮನಸ್ಸು ಸಂತೋಷದಿಂದ ಕೂಡಿರುತ್ತದೆ, ಆದರೆ ಕೌಟುಂಬಿಕ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಕೆಲಸದ ಸ್ಥಳದಲ್ಲಿ ತೊಂದರೆಗಳಿರಬಹುದು. ಆದರೆ ಇಂದು ನೀವು ಮಾಡುವ ಒಳ್ಳೆಯ ಕೆಲಸದಿಂದ ಗೌರವವನ್ನು ಪಡೆಯುತ್ತೀರಿ. ಉದ್ಯೋಗದಲ್ಲಿ ಪ್ರಗತಿಯೊಂದಿಗೆ, ಸ್ಥಳ ಬದಲಾವಣೆಯ ಸಾಧ್ಯತೆಗಳಿವೆ. ಅಧ್ಯಯನದಲ್ಲಿ ಆಸಕ್ತಿ ಹೆಚ್ಚಲಿದೆ. ಧಾರ್ಮಿಕ ಚಟುವಟಿಕೆಗಳತ್ತ ಒಲವು ಹೆಚ್ಚಾಗಬಹುದು. ಕುಟುಂಬದಲ್ಲಿ ಧಾರ್ಮಿಕ ಮತ್ತು ಶುಭ ಕಾರ್ಯಗಳು ನಡೆಯಲಿವೆ.

** ಮಿಥುನ ರಾಶಿ
ಇಂದು ಮನಸ್ಸಿನಲ್ಲಿ ಏರಿಳಿತಗಳಿರುತ್ತವೆ. ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆಗಳಿವೆ. ಕುಟುಂಬದಿಂದ ದೂರವಾಗಿ ಬೇರೆ ಸ್ಥಳಕ್ಕೆ ಹೋಗಬೇಕಾಗಬಹುದು. ಆದಾಯ ಹೆಚ್ಚಾಗುತ್ತದೆ, ಆದರೆ ವೆಚ್ಚಗಳು ಹೆಚ್ಚಾಗಬಹುದು. ನಿಮ್ಮ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಹೆಚ್ಚಿನ ಶ್ರಮ ಇರುತ್ತದೆ. ಸಿಹಿ ಆಹಾರದಲ್ಲಿ ಆಸಕ್ತಿ ಹೆಚ್ಚಾಗುತ್ತದೆ.

** ಕರ್ಕಾಟಕ ರಾಶಿ :
ನಿಮ್ಮ ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ನಿಮ್ಮ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಧಾರ್ಮಿಕ ಸಂಗೀತದ ಬಗ್ಗೆ ಆಸಕ್ತಿ ಹೆಚ್ಚಾಗಬಹುದು. ವ್ಯಾಪಾರದಲ್ಲಿ ಹೆಚ್ಚು ಶ್ರಮವಿರುತ್ತದೆ. ಮನಸ್ಸು ಸಂತೋಷವಾಗಿ ಉಳಿಯುತ್ತದೆ. ಶೈಕ್ಷಣಿಕ ಕೆಲಸವು ಆಹ್ಲಾದಕರ ಫಲಿತಾಂಶಗಳನ್ನು ನೀಡುತ್ತದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಉದ್ಯೋಗದಲ್ಲಿ ಪ್ರಗತಿಯ ಸಾಧ್ಯತೆಗಳಿವೆ. ಮಾತಿನ ಪ್ರಭಾವದಿಂದ ಕೆಟ್ಟ ಕೆಲಸಗಳು ನಡೆಯುತ್ತವೆ.

** ಸಿಂಹ ರಾಶಿ :
ನಿಮ್ಮ ಮನಸ್ಸು ಸಂತೋಷದಿಂದ ಕೂಡಿರುತ್ತದೆ. ನಿಮ್ಮ ಕೆಲಸದಲ್ಲಿ ಅಧಿಕಾರಿಗಳೊಂದಿಗೆ ಸಾಮರಸ್ಯವನ್ನು ಕಾಪಾಡಿಕೊಳ್ಳಿ. ನೀವು ಕೆಲವು ಹೆಚ್ಚುವರಿ ಜವಾಬ್ದಾರಿಯನ್ನು ಪಡೆಯಬಹುದು. ಹೆಚ್ಚಿನ ಶ್ರಮ ಇರುತ್ತದೆ. ಆರೋಗ್ಯದ ಬಗ್ಗೆ ಗಮನ ಕೊಡಿ. ವ್ಯಾಪಾರದ ಪರಿಸ್ಥಿತಿಗಳು ಸುಧಾರಿಸುತ್ತವೆ. ವಿಪರೀತ ಕೋಪ ಇರುತ್ತದೆ. ಕೆಲಸದ ಸ್ಥಳದಲ್ಲಿ ನೀವು ಪ್ರತಿಕೂಲ ಸಂದರ್ಭಗಳನ್ನು ಎದುರಿಸಬೇಕಾಗಬಹುದು.

** ಕನ್ಯಾ ರಾಶಿ :
ಮಾತಿನಲ್ಲಿ ತಾಳ್ಮೆ ಕಾಪಾಡಿಕೊಳ್ಳಿ. ಇಂದು ನೀವು ವ್ಯವಹಾರದಲ್ಲಿ ತೊಂದರೆಗಳನ್ನು ಸಹ ಎದುರಿಸಬೇಕಾಗಬಹುದು. ನೀವು ಕಷ್ಟಪಟ್ಟು ಕೆಲಸ ಮಾಡಬೇಕಾಗಬಹುದು. ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಭರವಸೆ ಮತ್ತು ನಿರಾಶೆಯ ಮಿಶ್ರ ಭಾವನೆಗಳು ಮನಸ್ಸಿನಲ್ಲಿ ಉಳಿಯುತ್ತವೆ. ಉದ್ಯೋಗದಲ್ಲಿ ಬಡ್ತಿಗೆ ಅವಕಾಶಗಳು ಬರಬಹುದು. ಆದಾಯ ಹೆಚ್ಚಲಿದೆ. ನೀವು ಸ್ನೇಹಿತರಿಂದ ಬೆಂಬಲವನ್ನು ಪಡೆಯುತ್ತೀರಿ.

** ತುಲಾ ರಾಶಿ :
ನಿಮ್ಮ ಮನಸ್ಸು ಸಂತೋಷದಿಂದ ಕೂಡಿರುತ್ತದೆ. ಅನಗತ್ಯ ಕೋಪ ಮತ್ತು ಚರ್ಚೆಯನ್ನು ತಪ್ಪಿಸಿ. ನಿಮ್ಮ ಪೋಷಕರಿಂದ ನೀವು ಬೆಂಬಲವನ್ನು ಪಡೆಯುತ್ತೀರಿ. ವ್ಯಾಪಾರ ವ್ಯವಹಾರದಲ್ಲಿ ಲಾಭದ ಅವಕಾಶವಿರುತ್ತದೆ. ನೀವು ಸ್ನೇಹಿತರಿಂದ ಬೆಂಬಲವನ್ನು ಪಡೆಯುತ್ತೀರಿ. ತಾಳ್ಮೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ಕುಟುಂಬದಿಂದ ಬೆಂಬಲ ಸಿಗಲಿದೆ. ಇಂದು ದೂರ ಪ್ರಯಾಣಿಸುವ ಸಾಧ್ಯತೆಗಳಿವೆ.

** ವೃಶ್ಚಿಕ ರಾಶಿ :
ನಿಮಗೆ ಮಾನಸಿಕ ನೆಮ್ಮದಿ ಇರುತ್ತದೆ. ಮಾತಿನಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಿ. ಕೆಲಸದ ಕ್ಷೇತ್ರದಲ್ಲಿ ಬದಲಾವಣೆಯೊಂದಿಗೆ ಕೆಲಸದ ಸ್ಥಳದಲ್ಲಿ ಬದಲಾವಣೆಯಾಗಬಹುದು. ಉದ್ಯೋಗದಲ್ಲಿ ಉನ್ನತಿಗೆ ಅವಕಾಶಗಳೂ ದೊರೆಯಲಿವೆ. ಶಿಕ್ಷಣದ ವಿಸ್ತರಣೆಗೆ ಖರ್ಚು ಹೆಚ್ಚಾಗಬಹುದು. ಕಠಿಣ ಪರಿಶ್ರಮ ಇರುತ್ತದೆ. ವಾಹನ ಸೌಕರ್ಯ ಕಡಿಮೆಯಾಗಬಹುದು. ಅಧ್ಯಯನದಲ್ಲಿ ಆಸಕ್ತಿ ಹೆಚ್ಚಲಿದೆ. ಹೆಚ್ಚುತ್ತಿರುವ ಖರ್ಚುಗಳಿಂದ ನೀವು ತೊಂದರೆಗೊಳಗಾಗಬಹುದು.

** ಧನಸ್ಸು ರಾಶಿ :
ಆತ್ಮವಿಶ್ವಾಸದ ಕೊರತೆ ಇರುತ್ತದೆ. ಮನಸ್ಸು ಗೊಂದಲದಲ್ಲಿ ಉಳಿಯುತ್ತದೆ. ಕುಟುಂಬ ಸಮೇತ ಯಾವುದಾದರೂ ಧಾರ್ಮಿಕ ಸ್ಥಳಕ್ಕೆ ಪ್ರವಾಸ ಹೋಗಬಹುದು. ನಿಮ್ಮ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವ್ಯಾಪಾರ ವಿಸ್ತರಣೆಯಲ್ಲಿ ವೆಚ್ಚಗಳು ಹೆಚ್ಚಾಗಬಹುದು. ಕೆಲಸದ ಸ್ಥಳದಲ್ಲಿ ಹೆಚ್ಚು ಕಠಿಣ ಪರಿಶ್ರಮ ಇರುತ್ತದೆ. ವಾಹನ ಸೌಕರ್ಯದಲ್ಲಿ ಕಡಿತ ಉಂಟಾಗಬಹುದು. ತಾಳ್ಮೆ ಕಡಿಮೆಯಾಗಲಿದೆ. ಸ್ವಯಂ ನಿಯಂತ್ರಣದಲ್ಲಿರಿ. ಕುಟುಂಬದಿಂದ ಬೆಂಬಲ ಸಿಗಲಿದೆ.

** ಮಕರ ರಾಶಿ :
ನಿಮ್ಮ ಕೆಲಸದಲ್ಲಿ ಅಧಿಕಾರಿಗಳೊಂದಿಗೆ ಸಾಮರಸ್ಯವನ್ನು ಕಾಪಾಡಿಕೊಳ್ಳಿ. ಕೆಲಸದ ಸ್ಥಳದಲ್ಲಿ ನೀವು ತೊಂದರೆಗಳನ್ನು ಎದುರಿಸಬಹುದು. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಕುಟುಂಬದೊಂದಿಗೆ ಸಮಯ ಕಳೆಯುವಿರಿ. ಹಣ ಗಳಿಸಬಹುದು. ರುಚಿಕರವಾದ ಆಹಾರಗಳಲ್ಲಿ ಆಸಕ್ತಿ ಇರುತ್ತದೆ. ಮಾನಸಿಕ ನೆಮ್ಮದಿ ಇರುತ್ತದೆ. ಮಕ್ಕಳ ಆರೋಗ್ಯ ಸುಧಾರಿಸಲಿದೆ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿವೆ.

** ಕುಂಭ ರಾಶಿ :
ಮನಸ್ಸು ವಿಚಲಿತವಾಗಬಹುದು. ತಾಳ್ಮೆಯಿಂದಿರಿ. ಅತಿಯಾದ ಕೋಪ ಮತ್ತು ಉತ್ಸಾಹವನ್ನು ತಪ್ಪಿಸಿ. ಉದ್ಯೋಗದಲ್ಲಿ ಪ್ರಗತಿಯ ಹಾದಿ ಸುಗಮವಾಗಲಿದೆ. ಆದಾಯ ಹೆಚ್ಚಲಿದೆ. ವಾಹನ ಸೌಕರ್ಯದ ಲಾಭವನ್ನು ಪಡೆಯುತ್ತೀರಿ. ವ್ಯಾಪಾರದತ್ತ ಗಮನ ಹರಿಸಿ. ಹೆಚ್ಚಿನ ಶ್ರಮ ಇರುತ್ತದೆ. ಕೆಲವು ಆಸ್ತಿಯಿಂದ ಹಣವನ್ನು ಗಳಿಸುವ ಅವಕಾಶಗಳು ಇರಬಹುದು. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಮಾತಿನಲ್ಲಿ ಸೌಮ್ಯತೆ ಇರುತ್ತದೆ.

** ಮೀನ ರಾಶಿ :
ಶೈಕ್ಷಣಿಕ ಕೆಲಸದಲ್ಲಿ ತೊಂದರೆಗಳಿರಬಹುದು. ಜೀವನವು ಅಸ್ತವ್ಯಸ್ತವಾಗಬಹುದು. ಉದ್ಯೋಗದಲ್ಲಿ ಬದಲಾವಣೆಯಾಗುವ ಸಾಧ್ಯತೆಗಳಿವೆ. ಮನಸ್ಸು ಸಂತೋಷವಾಗಿ ಉಳಿಯುತ್ತದೆ. ನೀವು ನಿಮ್ಮ ತಾಯಿಯ ಸಹವಾಸವನ್ನು ಪಡೆಯುತ್ತೀರಿ. ನೀವು ಸ್ನೇಹಿತರಿಂದ ವ್ಯವಹಾರ ಪ್ರಸ್ತಾಪವನ್ನು ಪಡೆಯಬಹುದು. ವಿದೇಶ ಪ್ರವಾಸ ಮಾಡುವ ಸಾಧ್ಯತೆಗಳಿವೆ.

Categories
ಕುಂದಾಪುರ

ಕಮಲಶಿಲೆ ಬ್ರಾಹ್ಮಿಶ್ರೀ ದುರ್ಗಾಪರಮೇಶ್ವರಿ ಕುಬ್ಜ ನದಿ ಸ್ಪರ್ಶ.

ಕಮಲಶಿಲೆ ಬ್ರಾಹ್ಮಿಶ್ರೀ ದುರ್ಗಾಪರಮೇಶ್ವರಿ ಕುಬ್ಜ ನದಿ ಸ್ಪರ್ಶ
– ಏನಿದು ಸ್ಥಳ ಪುರಾಣ?: ಭಕ್ತರಲ್ಲಿ ಪುಳಕ
– ಎರಡನೇ ಬಾರಿಗೆ ದೇಗುಲ ಸಸ್ಪರ್ಶ ಮಾಡಿದ ನದಿ

NAMMUR EXPRESS NEWS
ಕಮಲಶಿಲೆ: ಕಮಲಶಿಲೆ ಬ್ರಾಹ್ಮಿಶ್ರೀ ದುರ್ಗಾಪರಮೇಶ್ವರಿ ಅಮ್ಮನವರನ್ನು ಕುಬ್ಜ ನದಿ ಸ್ಪರ್ಶಸಿತು. ಇದು ನದಿಯ ಶಾಪ ವಿಮೋಚನೆ ಕಥೆಯನ್ನು ಹೇಳುತ್ತಿದೆ.
ಕೈಲಾಸದಲ್ಲಿ ಶಿವ ಪಾರ್ವತಿಯ ಮುಂದೆ ಪಿಂಗಳೆ ಎಂಬ ಅಪ್ಸರೆ ಕೊಬ್ಬಿನಿಂದ ನರ್ತಿಸಲು ಹಿಂಜರುಗಿದಾಗ ದೇವಿಯು ನಿನ್ನನು ನೋಡಿ ಎಲ್ಲರು ಅಸಹ್ಯ ಪಡುವಂತೆ ಕುಬ್ಜೆಯಾಗು ನಿನ್ನ ಮೈ ಬೆನ್ನು ಎಲ್ಲ ಅಂಕುಡೊಂಕು ಆಗಲಿ ಎಂದು ಶಾಪ ಕೊಡುತ್ತಾಳೆ, ಆಗ ಅಪ್ಸರೆಗೆ ತನ್ನ ತಪ್ಪಿನ ಅರಿವಾಗಿ ದೇವೀಯ ಹತ್ತಿರ ಕಣ್ಣೀರು ಇಡುತ್ತಾಳೆ .ಅಮ್ಮ ಏಕೆ ನಿನ್ನ ಮಗಳ ಮೇಲೆ ಇಷ್ಟೊಂದು ನಿಷ್ಕರುಣಿ ಇದೇ , ಕ್ಷಮಿಸು ಎಂದು ಬೇಡಿದಾಗ ತಾಯಿ ಆಯಿತು ಎಂದು ತನ್ನ ಶಾಪಕ್ಕೆ ವಿಮೋಚನೆಯ ದಾರಿ ನೀಡುತ್ತಾರೆ. ಮುಂದೆ ದುಷ್ಟರಾದ ಖರಾಸುರ ಮತ್ತು ರಟ್ಟಾಸುರ ರನ್ನು ಸಂಹಾರ ಮಾಡಲು ನಾನು ಬ್ರಾಹ್ಮಿ ದುರ್ಗಾಪರಮೇಶ್ವರಿಯಾಗಿ ಅವತರಿಸುತ್ತೇನೆ ಸಂಹಾರದ ನಂತರ ಉದ್ಭವ ಲಿಂಗ ರೂಪಿಯಲ್ಲಿ ಅವತರಿಸುತ್ತೇನೆ. ಅಲ್ಲಿಯವರಿಗೂ ನೀನು, ನಾನು ಹೇಳುವ ರೈಕ್ವ ಋಷಿಯ ಬಳಿ ನನ್ನ ಧ್ಯಾನದಲ್ಲಿ ಇರು. ಕಾಲ ಸಂದರ್ಭ ಬಂದಾಗ ನನ್ನ ಅವತಾರ ಆದಾಗ ನೀನು ನನ್ನ ಬಳಿ ಕುಬ್ಜ ನದಿಯಾಗಿ ಬಂದು ನನ್ನ ಸ್ಪರ್ಶ ಮಾಡಿ ಮೈತೊಳೆದು ಹೋಗಬೇಕು ಎಂದು ಆದೇಶ ನೀಡುತ್ತಾಳೆ.
ಅದೇ ರೀತಿ ಈಗಲೂ ಸಹ ಪ್ರತಿ ವರ್ಷ ಕುಬ್ಜ ನದಿಯು ಉಕ್ಕಿ ಹರಿದು ದೇವಿ ಗುಡಿ ಪ್ರವೇಶಿಸಿ ತಾಯಿಯ ಪಾದ ಮುಟ್ಟಿ ಅಭಿಷೇಕ ಮಾಡಿ ಬರುತ್ತದೆ. ಇದು ಈ ಕ್ಷೇತ್ರದ ಸ್ಥಳಪುರಾಣ. ಈ ಬಗ್ಗೆ ಭಕ್ತರು ಈಗ ದೇವಾಲಯದ ಪುರಾಣ ಹಂಚುತ್ತಿದ್ದಾರೆ.

Categories
ಮಾಹಿತಿ ಸುದ್ದಿ

ಇಂದಿನಿಂದ ಹೊಸ ನಿಯಮ ಜಾರಿ!

ಇಂದಿನಿಂದ ಹೊಸ ನಿಯಮ ಜಾರಿ!
– ಕ್ರೆಡಿಟ್ ಕಾರ್ಡ್, LPG ಸಿಲಿಂಡರ್, ಫಾಸ್‌ಟ್ಯಾಗ್ ನಿಯಮಗಳಲ್ಲಿ ಭಾರೀ ಬದಲಾವಣೆ
– ಆಗಸ್ಟ್ ತಿಂಗಳಲ್ಲಿ ಬ್ಯಾಂಕ್‌ಗಳಿಗೆ 13 ದಿನ ರಜೆ

NAMMUR EXPRESS NEWS
ಆಗಸ್ಟ್​​​ ಒಂದರಿಂದ ಕ್ರೆಡಿಟ್ ಕಾರ್ಡ್, LPG ಸಿಲಿಂಡರ್, ಫಾಸ್ಟ್‌ಟ್ಯಾಗ್ ನಿಯಮಗಳಲ್ಲಿ ಭಾರೀ ಬದಲಾವಣೆ ಆಗಲಿದೆ. ಈ ಬಗ್ಗೆ ಬಜೆಟ್​​ ಮಂಡನೆ ವೇಳೆಯೇ ಹೇಳಲಾಗಿತ್ತು. ಹಲವು ವಹಿವಾಟುಗಳ ಬೆಲೆಗಳಲ್ಲಿ ಬದಲಾವಣೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆಗಸ್ಟ್​​​ 1ರಿಂದ ಹೊಸ ನಿಯಮಗಳು ಜಾರಿಗೆ ಬರಲಿದೆ. ಈ ತಿಂಗಳು ಅಂದರೆ ಜುಲೈನಲ್ಲಿ ಬಜೆಟ್​​​ ಮಂಡನೆಯ ನಂತರ ಹಲವು ವಿಚಾರಗಳಲ್ಲಿ ಬದಲಾವಣೆ ಮಾಡಲಾಗುವುದು ಎಂದು ಹೇಳಲಾಗಿತ್ತು. ಇದು ಆಸಗ್ಟ್​​​ ಒಂದರಿಂದ ಜಾರಿಗೆ ಬರಲಿದೆ. ಈ ಬದಲಾವಣೆ ನಿಮ್ಮ ಜೇಬಿಗೆ ಕತ್ತರಿ ಕೂಡ ಹಾಕಬಹುದು. ಇದು ನಿಮ್ಮ ದಿನನಿತ್ಯ ವ್ಯವಹಾರಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಹಾಗೂ ವಸ್ತುಗಳ ಬೆಲೆಯಲ್ಲಿ ಬದಲಾವಣೆಯನ್ನು ತರಲಿದೆ. HDFC ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್‌ಗಳು ಮತ್ತು LPG ಸಿಲಿಂಡರ್‌ನ ಬೆಲೆಗೆ ಸಂಬಂಧಿಸಿದ ನಿಯಮಗಳನ್ನು ಇದು ಒಳಗೊಂಡಿದೆ.

– HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್

ಎಚ್‌ಡಿಎಫ್‌ಸಿ ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್ ಸಂಬಂಧಿತ ನಿಯಮಗಳಲ್ಲಿ ಆಗಸ್ಟ್‌ನಿಂದ ಹಲವು ಬದಲಾವಣೆಗಳು ಆಗಲಿವೆ. ಎಚ್‌ಡಿಎಫ್‌ಸಿ ಬ್ಯಾಂಕ್‌ ಶುಲ್ಕ ಪಾವತಿಯಿಂದ ಹಿಡಿದು CRED, Cheq, MobiKwik ಮತ್ತು ಫ್ರೀಚಾರ್ಜ್‌ನಂತಹ ಸೇವೆಗಳನ್ನು ಬಳಸುವವರೆಗೆ ಶೇಕಾಡ 1ರಷ್ಟು ವಹಿವಾಟು ಶುಲ್ಕವನ್ನು ವಿಧಿಸಲಾಗುತ್ತದೆ. ಇದರ ಮಿತಿ 15,000 ಕ್ಕಿಂತ ಹೆಚ್ಚಿನ ವಹಿವಾಟುಗಳನ್ನು ನಡೆಸುವವರಿಗೆ ಈ ಶುಲ್ಕ ವಿಧಿಸಲಾಗಿದೆ.

– LPG ಸಿಲಿಂಡರ್

ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ತಿಂಗಳ ಮೊದಲನೇ ದಿನದಂದು ಗ್ಯಾಸ್ ಸಿಲಿಂಡರ್ ಬೆಲೆಯನ್ನು ನಿಗದಿಪಡಿಸುತ್ತವೆ. ಕಳೆದ ತಿಂಗಳು 19 ಕೆಜಿ ವಾಣಿಜ್ಯ ಅನಿಲದ ಬೆಲೆ ಇಳಿಕೆಯಾಗಿತ್ತು. ಆದರೆ ಮನೆಗಳಲ್ಲಿ ಬಳಸುವ 14.2 ಕೆಜಿ ಎಲ್ ಪಿ ಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಈ ಬಾರಿ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

– ಗೂಗಲ್ ಮ್ಯಾಪ್ :

ಆಗಸ್ಟ್ 1 ರಿಂದ ಭಾರತದಲ್ಲಿ ಗೂಗಲ್ ಮ್ಯಾಪ್ ಸೇವೆಗಳು ಅಗ್ಗವಾಗಲಿವೆ. ಈ ಗೂಗಲ್ ಮ್ಯಾಪ್ ಸೇವೆ ಪಡೆಯಲು ಗ್ರಾಹಕರು 70 ಪ್ರತಿಶತ ಕಡಿಮೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಸೇವೆಯ ಪಾವತಿಯನ್ನು ಈಗ ಡಾಲರ್‌ಗಳ ಬದಲಿಗೆ ಭಾರತೀಯ ರೂಪಾಯಿಗಳಲ್ಲಿ ಮಾಡಲಾಗುವುದು. ಇದು ಸಾಮಾನ್ಯ ಬಳಕೆದಾರರ ಮೇಲೆ ಪರಿಣಾಮ ಬೀರದಿದ್ದರೂ, ಅವರಿಂದ ಹೆಚ್ಚು ಶುಲ್ಕವನ್ನು ಪಡೆಯುವುದಿಲ್ಲ ಎಂದು ಹೇಳಿದೆ.

– ಬ್ಯಾಂಕ್‌ಗಳಿಗೆ 13 ದಿನ ರಜೆ

ಆಗಸ್ಟ್‌ನಿಂದ ಹಲವು ಹಬ್ಬಗಳು ಬರುತ್ತಿದೆ, ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನ, ಇದರ ನಂತರ ಆಗಸ್ಟ್‌ನಲ್ಲಿ 13 ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಿರುತ್ತವೆ. ಭಾನುವಾರ ಮತ್ತು ಎರಡನೇ ಮತ್ತು ನಾಲ್ಕನೇ ಶನಿವಾರಗಳನ್ನು ಒಳಗೊಂಡಿದೆ. ರಕ್ಷಾ ಬಂಧನ ಮತ್ತು ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ಬ್ಯಾಂಕುಗಳು ರಜೆ ಇರುತ್ತದೆ.

– ಫಾಸ್ಟ್‌ಟ್ಯಾಗ್ ನಿಯಮದಲ್ಲಿ ಹೊಸ ಬದಲಾವಣೆ:

ಫಾಸ್ಟ್‌ಟ್ಯಾಗ್ ನಿಯಮಗಳ ಹೊಸ ಬದಲಾವಣೆಗಳು ಆಗಸ್ಟ್ 1 ರಿಂದ ಜಾರಿಗೆ ಬರಲಿದೆ. ಇದು ಟೋಲ್ ಪಾವತಿಯಲ್ಲಿ ನವೀಕರಣವನ್ನು ತಂದಿದೆ. ಟೋಲ್ ಬೂತ್‌ಗಳಲ್ಲಿ ದಟ್ಟಣೆಯನ್ನು ಕಡಿಮೆ ಮಾಡುಲು ಈ ವಿಧಾನಗಳನ್ನು ತರಲಾಗಿದೆ. ಈ ಬಗ್ಗೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಇನ್ನು ಮುಂದೆ FASTag Know Your Customer (KYC) ಅಗತ್ಯವಾಗಿರುತ್ತದೆ ಎಂದು ಹೇಳಿದೆ. ಇದು ಆಗಸ್ಟ್ 1 ರಿಂದ ಕಡ್ಡಾಯವಾಗಿರುತ್ತದೆ.

ಫಾಸ್ಟ್ಯಾಗ್ KYC

ಫಾಸ್ಟ್ಯಾಗ್ ಹೊಸ ನಿಯಮಗಳ ಪ್ರಕಾರ, KYC ಅನ್ನು ಅಕ್ಟೋಬರ್ 31 ರೊಳಗೆ ಪೂರ್ಣಗೊಳಿಸಬೇಕು. ಫಾಸ್ಟ್‌ಟ್ಯಾಗ್ ಸೇವೆಗಳನ್ನು ನೀಡುವ ಕಂಪನಿಗಳು ಮೂರರಿಂದ ಐದು ವರ್ಷಗಳ ಹಿಂದೆ ನೀಡಲಾದ ಎಲ್ಲಾ ಫಾಸ್ಟ್‌ಟ್ಯಾಗ್‌ಗಳಿಗೆ KYC ಅನ್ನು ಅಕ್ಟೋಬರ್ 31 ರೊಳಗೆ ಪೂರ್ಣಗೊಳಿಸಬೇಕು ಎಂದು ಹೇಳಿದೆ. ಈ ಬಗ್ಗೆ ಪ್ರಕ್ರಿಯೆ ಆಗಸ್ಟ್​​ 1ರಿಂದಲ್ಲೇ ಪ್ರಾರಂಭವಾಗುತ್ತದೆ. ಇದರಲ್ಲಿ ಫಾಸ್ಟ್‌ಟ್ಯಾಗ್‌ ಸಂಖ್ಯೆಗಳನ್ನು ಕೂಡ ಬದಲಾವಣೆ ಮಾಡಬೇಕು ಎಂದು ಹೇಳಿದೆ.

Categories
ಮಾಹಿತಿ ಸುದ್ದಿ

ಆ.5 ರಿಂದ ಶ್ರಾವಣ ಮಾಸ.

ಆ.5 ರಿಂದ ಶ್ರಾವಣ ಮಾಸ…!
– ಇನ್ನು ಸಾಲು ಸಾಲು ಹಬ್ಬಕ್ಕೆ ಸಿದ್ಧತೆ
– ವ್ಯಾಪಾರಿಗಳಿಗೆ, ತಯಾರಕರಿಗೆ ಕೈತುಂಬ ಕೆಲಸ

NAMMUR EXPRESS NEWS
ಆಗಸ್ಟ್‌ 5 ರಿಂದ ಶಿವನಿಗೆ ಸಮರ್ಪಿತವಾದ ಶ್ರಾವಣ ಮಾಸ ಪ್ರಾರಂಭವಾಗುವುದು. ಶಿವಭಕ್ತರು ಈ ಮಾಸದಲ್ಲಿ ಉಪವಾಸ ವ್ರತವನ್ನು ಆಚರಿಸುವ ಮೂಲಕ ಶಿವನನ್ನು ಪೂಜಿಸುತ್ತಾರೆ. ಈ ವರ್ಷ ಶ್ರಾವಣ ಮಾಸವು ಸೋಮವಾರದಿಂದ ಆರಂಭವಾಗುತ್ತಿರುವುದರಿಂದ ಶ್ರಾವಣ ಮಾಸದ ಮಹತ್ವ ಮತ್ತಷ್ಟು ಹೆಚ್ಚಿದೆ.

ವ್ಯಾಪಾರಿಗಳಿಗೆ, ತಯಾರಕರಿಗೆ ಕೈತುಂಬ ಕೆಲಸ!

ಇನ್ನು ಆ.5 ರಿಂದ ಶ್ರಾವಣ ಮಾಸ ಕಾಲಿಡಲಿದ್ದು, ನಾಗರ ಪಂಚಮಿ, ವರಮಹಾಲಕ್ಷ್ಮಿ, ಗಣೇಶ ಚತುರ್ಥಿಯಿಂದ ಹಿಡಿದು ನವರಾತ್ರಿಯಲ್ಲಿ ನವದುರ್ಗೆಯರ ಪೂಜೆಯವರೆಗೆ ಸಾಲು ಸಾಲು ಹಬ್ಬಗಳು ಬರುತ್ತಿದ್ದು, ಕುಶಲಕರ್ಮಿಗಳು ಶುಭ ಸಮಾರಂಭಗಳಿಗಾಗಿ ಮೂರ್ತಿಗಳನ್ನು ರಚಿಸಲು ಸಜ್ಜಾಗಿದ್ದಾರೆ. ಹಾಗೂ ಆಭರಣದ ಅಂಗಡಿ, ಬಟ್ಟೆ ಅಂಗಡಿ ಸೇರಿದಂತೆ ವಿವಿಧ ವ್ಯಾಪಾರಿಗಳು ಲಾಭದ ನಿರೀಕ್ಷೆಯಲ್ಲಿದ್ದು ಈ ವರ್ಷ ಭರ್ಜರಿ ವಹಿವಾಟು ಕಾಣುವ ನಿರೀಕ್ಷೆ ಇದೆ.

Categories
ರಾಜ್ಯ

ರಾಜ್ಯದಲ್ಲಿ ಅದ್ದೂರಿ ಗಣೇಶ ಹಬ್ಬಕ್ಕೆ ಸಜ್ಜು!

ರಾಜ್ಯದಲ್ಲಿ ಅದ್ದೂರಿ ಗಣೇಶ ಹಬ್ಬಕ್ಕೆ ಸಜ್ಜು!
– ಮಳೆ ಕಡಿಮೆಯಾಗಲು ಗಣೇಶನಲ್ಲಿ ಮೊರೆ
– ವಿಗ್ರಹ ತಯಾರಕರು, ವ್ಯಾಪಾರಿಗಳಲ್ಲಿ ಲಾಭದ ನಿರೀಕ್ಷೆ
– ಯುವಕರಲ್ಲಿ ಗರಿಗೆದರಿದ ಉತ್ಸಾಹ: ಗಣೇಶ ಮತ್ತೆ ಬಂದ

NAMMUR EXPRESS NEWS
ಬೆಂಗಳೂರು: ರಾಜ್ಯಾದ್ಯಂತ ಗೌರಿ ಗಣೇಶ ಹಬ್ಬವನ್ನು ಅದ್ದೂರಿಯಿಂದ ಆಚರಿಸಲು ಜನರು ಸಿದ್ಧರಾಗಿದ್ದಾರೆ.
ಕೋಟ್ಯಂತರ ರೂಪಾಯಿ ವಹಿವಾಟಿಗೆ ಕಾರಣವಾಗುವ ಗಣೇಶ ಚತುರ್ಥಿ ಈ ಬಾರಿ ಗಣೇಶ ವಿಗ್ರಹ ತಯಾರಕರು, ವ್ಯಾಪಾರಿಗಳಿಗೆ ವರವಾಗಿ ಪರಿಣಮಿಸುವ ಸಾಧ್ಯತೆ ಇದೆ. ವ್ಯಾಪಾರಿಗಳು ಹಾಗೂ ಮಾರಾಟಗಾರರು ಆದಾಯದ ನಿರೀಕ್ಷೆಯಲ್ಲಿದ್ದಾರೆ.
ನಗರ, ಪಟ್ಟಣ ಪ್ರದೇಶಗಳಲ್ಲಿ ಗೌರಿ ಗಣೇಶ ವಿಗ್ರಹಗಳ ಮಾರಾಟ ಮಳಿಗೆಗೆಳನ್ನು ಹಾಕಲು ವಿಗ್ರಹ ತಯಾರಕರು ಸಿದ್ಧತೆಯಲ್ಲಿದ್ದಾರೆ. ಗಣೇಶೋತ್ಸವ ಸಂಘಟಕರು ನೇರವಾಗಿ ತಯಾರಕರನ್ನು ಭೇಟಿ ಮಾಡಿ ಖರೀದಿ ಮಾಡಲಿದ್ದು ಮುಂಗಡ ಬುಕಿಂಗ್ ಗೆ ಆರ್ಡರ್ ನೀಡುತ್ತಿದ್ದಾರೆ.
ಇನ್ನು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಬಣ್ಣದ ಗಣಪತಿಗಳು ಮತ್ತು ಪ್ಲಾಸ್ಟರ್ ಆಫ್ ಪ್ಯಾರಿಸ್ ವಿಗ್ರಹಗಳನ್ನು ನಿರ್ಬಂಧಿಸಲಾಗಿದೆ. ಜಲಮೂಲಗಳು ಹಾಳಾಗುವುದನ್ನು ತಪ್ಪಿಸಬೇಕು. ಹಾಗಾಗಿ ಪರಿಸರ ಮಾಲಿನ್ಯ ತಪಾಸಣಾಧಿಕಾರಿಗಳು ಈ ದಿಸೆಯಲ್ಲಿ ಹೆಚ್ಚು ಸಕ್ರಿಯವಾಗಿರಲಿದ್ದಾರೆ. ಮಣ್ಣಿನ ವಿನಾಯಕ ಮೂರ್ತಿ ಬಳಸಲು ಹೆಚ್ಚಿನ ಜಾಗೃತಿ ಮೂಡಿಸಲಾಗಿದೆ.

ಯುವಕರಲ್ಲಿ ಗರಿಗೆದರಿದ ಉತ್ಸಾಹ!

ಇನ್ನು ಯುವಕರಲ್ಲಿ ಗಣೇಶ ಚತುರ್ಥಿಗೆ ಉತ್ಸಾಹ ಗರಿಗೆದರಿದ್ದು, ಗೌರಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಯುವ ಜನಾಂಗ ಹೆಚ್ಚು ಒಲವು ತೋರಿದೆ. ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಸಂಘಟಿಸಲು ಮುಂದಾಗಿವೆ. ವೈವಿಧ್ಯಮಯ ಗಣೇಶನನ್ನು ಪ್ರತಿಷ್ಠಾಪಿಸಲು ಸ್ಪರ್ಧೆಗಳು ಏರ್ಪಟ್ಟಿವೆ ಹಾಗೂ ಡಿಜೆ ಸೌಂಡ್ಸ್ ಗಳನ್ನೆಲ್ಲ ಹಾಕಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಒಟ್ಟಾರೆ ಈ ಬಾರಿ ಅದ್ದೂರಿ ಗೌರಿ ಗಣೇಶ ಹಬ್ಬ ಆಚರಣೆಗೆ ರಾಜ್ಯಾದ್ಯಂತ ಸಿದ್ಧತೆ ನಡೆಯುತ್ತಿದೆ. ಈಗಾಗಲೇ ಸಂಘ ಸಂಸ್ಥೆಗಳು ಸಭೆ ನಡೆಸಿ ಸಿದ್ಧತೆಯಲ್ಲಿವೆ. ಈ ನಡುವೆ ಮಳೆ ಅಬ್ಬರ ಎಲ್ಲಾ ಕಡೆ ಇದ್ದು ಮಳೆ ಕಡಿಮೆಯಾಗಲಿ ಎಂಬ ಪ್ರಾರ್ಥನೆ ಕೇಳಿ ಬರುತ್ತಿದೆ.

Categories
ಕರಾವಳಿ ಮಲ್ನಾಡ್

ಮಲೆನಾಡಿನಲ್ಲಿ ಗಿಡ್ಡ ತಳಿ ಜಾನುವಾರು ಮಾಯ!

ಮಲೆನಾಡಿನಲ್ಲಿ ಗಿಡ್ಡ ತಳಿ ಜಾನುವಾರು ಮಾಯ!
– ವಿನಾಶದ ಅಂಚಿನಲ್ಲಿ ಗಿಡ್ಡತಳಿ ಹಸುಗಳು
– ಜಾನುವಾರು ಸಾಕಣೆಗೆ ಬೇಕು ಪ್ರೋತ್ಸಾಹ

NAMMUR EXPRESS NEWS
ಮಲೆನಾಡು: ಮಲೆನಾಡಿನಾದ್ಯಂತ ಕಂಡು ಬರುತ್ತಿದ್ದ ಮಲೆನಾಡಿನ ಗಿಡ್ಡ ತಳಿಗಳ ಜಾನುವಾರುಗಳನ್ನು ಸಾಕಣೆ, ನಿರ್ವಹಣೆ ಮಾಡಲಾಗದೇ ಮಾರಾಟ ಮಾಡುತ್ತಿರುವುದರಿಂದ ಕಣ್ಮರೆಯಾಗುತ್ತಿವೆ. ಇದು ಮುಂದುವರಿದಲ್ಲಿ ಈ ತಳಿಯ ಜಾನುವಾರುಗಳು ಅವಸಾನದ ಅಂಚಿಗೆ ತಲುಪುವುದು ನಿಶ್ಚಿತ.
ಮಲೆನಾಡಿನಲ್ಲಿ ಈ ಹಿಂದೆ ಪ್ರತೀ ಮನೆಗಳ ಕೊಟ್ಟಿಗೆಗಳಲ್ಲೂ ಜಾನುವಾರುಗಳು ತುಂಬಿಕೊಂಡಿದ್ದವು. ಜಾನುವಾರುಗಳನ್ನು ಗೋಮಾಳಗಳಿಗೆ ಬಿಟ್ಟು ಮೇಯಿಸಿಕೊಂಡು ಬರಲು ದನ ಕಾಯುವ ವ್ಯಕ್ತಿಯೊಬ್ಬ ಮೀಸಲಿರುತ್ತಿದ್ದ. ಊರಿನ ಎಲ್ಲ ಜಾನುವಾರುಗಳನ್ನು ಗೋಮಾಳದಲ್ಲಿ ಮೇಯಿಸಿಕೊಂಡು ಬರಲು ಈ ಹಿಂದೆ ಗೋಪಾಲಕರನ್ನು ನೇಮಿಸಿಕೊಳ್ಳಲಾಗುತ್ತಿತ್ತು. ಮಳೆಗಾಲ ಮುಗಿದು ಪೈರುಗಳ ಕೊಯ್ದು ಮುಗಿದ ಮೇಲೆ ಜಾನುವಾರುಗಳನ್ನು ಭತ್ತದ ಗದ್ದೆಗಳಲ್ಲಿ ಮೇಯಲು ಬಿಡಲಾಗುತ್ತಿತ್ತು. ಸದ್ಯ ಮಲೆನಾಡು ಭಾಗದಲ್ಲಿ ಗೋಮಾಳಗಳು ಒತ್ತುವರಿದಾರರು, ಪ್ರಭಾವಿಗಳ ಪಾಲಾಗಿದ್ದು, ಗೋಮಾಳಗಳಿಲ್ಲದೇ ದನ ಮೇಯಿಸುತ್ತಿದ್ದವರಿಗೂ ಕೆಲಸ ಇಲ್ಲದಂತಾಗಿದೆ.

ಗದ್ದೆ, ಗೋಮಾಳ ಹೋಗಿ ತೋಟ ಬಂತು!

ಮಲೆನಾಡಿನಲ್ಲಿ ಈ ಹಿಂದೆ ಗಿಡ್ಡ ತಳಿಗಳ ಜಾನುವಾರುಗಳನ್ನು ನಂಬಿಕೊಂಡು ಸಾವಿರಾರು ಬಡ ಕುಟುಂಬಗಳು ಜೀವನ ನಿರ್ವಹಣೆ ಮಾಡುತ್ತಿದ್ದವು. 10-20 ಜಾನುವಾರುಗಳನ್ನು ಸಾಕುತ್ತಿದ್ದ ಈ ಕುಟುಂಬಗಳು ಹಸುಗಳನ್ನು ಗೋಮಾಳಗಳಲ್ಲಿ ಮೇಯಿಸಿಕೊಂಡು ಹಾಲು, ತುಪ್ಪ ಮಾರಿಕೊಂಡು ಬದುಕು ಕಟ್ಟಿಕೊಂಡಿದ್ದರು. ಆದರೆ ಜಾನುವಾರುಗಳಿಗೆ ಮೇವು ಒದಗಿಸುತ್ತಿದ್ದ ಭತ್ತದ ಗದ್ದೆಗಳು ಕ್ರಮೇಣ ಕಾಫಿ, ಅಡಿಕೆ ತೋಟಗಳಾದ ಪರಿಣಾಮ ಹಾಗೂ ಜಾನುವಾರು ಮೇಯಿಸಲು ಇದ್ದ ಗೋಮಾಳಗಳು ಒತ್ತುವರಿದಾರರ ಪಾಲಾದ ಪರಿಣಾಮ ಮಲೆನಾಡಿನಲ್ಲಿ ಬಡ ವರ್ಗದ ಜನರು ಸಾಕುತ್ತಿದ್ದ ಗಿಡ್ಡ ತಳಿ ಹಸುಗಳಿಗೆ ಮೇವು ಒದಗಿಸಲು ಸಾಧ್ಯವಾಗದೇ ಜಾನುವಾರುಗಳನ್ನು ಸಾಕುವುದನ್ನೇ ನಿಲ್ಲಿಸುತ್ತಿದ್ದಾರೆ. ತಮ್ಮ ಬಳಿ ಇದ್ದ ಗಿಡ್ಡ ತಳಿಯ ರಾಸುಗಳನ್ನು ಮಾರಾಟ ಮಾಡಲಾರಂಭಿಸಿದ್ದು, ಇದರಿಂದ ಮಲೆನಾಡಿನ ಅಪರೂಪದ ಗಿಡ್ಡ ತಳಿಗಳು ವಿನಾಶದ ಅಂಚಿಗೆ ತಲುಪುತ್ತಿವೆ.

ರೋಗನಿರೋಧಕ ಶಕ್ತಿಯನ್ನು ಹೊಂದಿರುವ ಹಾಲು

ಮಲೆನಾಡಿನ ಗಿಡ್ಡ ತಳಿ ಜಾನುವಾರುಗಳ ಹಾಲು ರೋಗನಿರೋಧಕ ಶಕ್ತಿಯನ್ನು ಹೊಂದಿದೆ. ಈ ಹಸುಗಳ ನಿರ್ವಹಣೆ ಸಾಧ್ಯವಾಗದೇ ಜನರು ಗಿಡ್ಡ ತಳಿಗಳನ್ನು ಮಾರಾಟ ಮಾಡಿ ಉತ್ತಮ ಹಾಲುಕೊಡುವ ಮಿಶ್ರ ತಳಿಗಳ ಜಾನುವಾರುಗಳನ್ನು ಖರೀದಿಸುತ್ತಿದ್ದಾರೆ.

ಜಾನುವಾರು ಹೂಟಿ ಇಲ್ಲವೇ ಇಲ್ಲ!

ಕಳೆದ ದಶಕದ ಹಿಂದೆ ಕೃಷಿ ಚಟುವಟಿಕೆಗೆ ಮಲೆನಾಡಿನ ಗಿಡ್ಡ ತಳಿ ಜಾನುವಾರುಗಳನ್ನೇ ಬಳಸಿಕೊಳ್ಳಲಾಗುತ್ತಿತ್ತು. ಮುಖ್ಯವಾಗಿ ಬೇಸಾಯ ಮತ್ತು ಒಕ್ಕಣೆ ಕಾರ್ಯಕ್ಕೆ ಇವುಗಳ ಉಪಯೋಗ ಹೆಚ್ಚಿನದ್ದಾಗಿತ್ತು. ಈಗ ಅವುಗಳ ಜಾಗಕ್ಕೆ ಟ್ರ್ಯಾಕ್ಟರ್‌ ಮತ್ತು ಟಿಲ್ಲರ್‌ಗಳು ಬಂದಿರುವುದರಿಂದ ಎತ್ತುಗಳನ್ನು ಸಾಕಲು ಜನರು ಇಚ್ಛಿಸುತ್ತಿಲ್ಲ. ಮಲೆನಾಡಿನಲ್ಲಿ ಈಗಲೂ ಜಮೀನು, ಮೇವು ಹೊಂದಿರುವ ಕೆಲವು ರೈತ ಕುಟುಂಬಗಳು ಈ ಜಾನುವಾರುಗಳನ್ನು ಸಾಕುತ್ತಿದ್ದಾರೆ. ಅಂಕಿಅಂಶಗಳಿಂದ ಜಿಲ್ಲೆಯಲ್ಲಿ ಮಲೆನಾಡು ಗಿಡ್ಡ ತಳಿಗಳು ಮಾಯವಾಗುತ್ತಿರುವುದು ಸ್ಪಷ್ಟವಾಗಿದ್ದು, ಇವುಗಳ ಜಾಗದಲ್ಲಿ ಮಿಶ್ರತಳಿಗಳ ಜಾನುವಾರುಗಳು ಬರುತ್ತಿವೆ.
10-20 ಮಲೆನಾಡು ಗಿಡ್ಡ ತಳಿಗಳನ್ನು ಸಾಕುತ್ತಾ ಅವುಗಳ ಹಾಲು ಮಾರಾಟದಿಂದ ಜೀವನ ಸಾಗಿಸುತ್ತಿದ್ದ ಕುಟುಂಬಗಳು ಸದ್ಯ ಮಿಶ್ರತಳಿಯ ಒಂದೆರಡು ಹಸುಗಳನ್ನು ಖರೀದಿಸಲಾರಂಭಿಸಿದ್ದಾರೆ. ಅಪರೂಪದ ತಳಿಗಳ ಉಳಿವಿಗೆ ಸರಕಾರ, ಸಂಬಂಧಿಸಿದ ಇಲಾಖೆ ಇನ್ನಾದರೂ ಮುಂದಾಗಬೇಕು, ಈ ತಳಿಗಳ ಜಾನುವಾರು ಸಾಕಣೆಗೆ ಪ್ರೋತ್ಸಾಹ ನೀಡಬೇಕು ಎಂದು ಜಾನುವಾರು ಪ್ರಿಯರು ಆಗ್ರಹಿಸುತ್ತಿದ್ದಾರೆ.

Categories
ಉದ್ಯೋಗ ಸುದ್ದಿ ಮಲ್ನಾಡ್

ಹೊಸನಗರ ಕೊಡಚಾದ್ರಿ ಕಾಲೇಜಲ್ಲಿ ಉದ್ಯೋಗ ಮೇಳ

ಹೊಸನಗರ ಕೊಡಚಾದ್ರಿ ಕಾಲೇಜಲ್ಲಿ ಉದ್ಯೋಗ ಮೇಳ
– ಆ.9ಕ್ಕೆ ಉದ್ಯೋಗ ಮೇಳ: 10ಕ್ಕೂ ಹೆಚ್ಚು ಕಂಪನಿಗಳು ಹಾಜರ್
– ಉದ್ಯೋಗಾಕಾಂಕ್ಷಿಗಳು ಏನೇನ್ ಮಾಡಬೇಕು ಇಲ್ಲಿದೆ ಮಾಹಿತಿ

NAMMUR EXPRESS NEWS
ಹೊಸನಗರ : ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊಸನಗರ ಮತ್ತು ಐ.ಕ್ಯೂ.ಎ.ಸಿ ಇವರ ಸಂಯುಕ್ತಾಶ್ರಯದಲ್ಲಿ ಉದ್ಯೋಗ ಮೇಳ ಈ ಉದ್ಯೋಗ ಮೇಳದಲ್ಲಿ 15 ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿದ್ದು, ಆಯಾ ಕಂಪನಿಗಳ ಖಾಲಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇರವಾಗಿ ಆಯ್ಕೆ ಮಾಡಿಕೊಳ್ಳಲಿದ್ದಾರೆ. ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಬಿ.ಎ/ಬಿ.ಬಿ.ಎಂ, ಬಿ.ಸಿ.ಎ, ಬಿ.ಎಸ್.ಡಬ್ಲ್ಯೂ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿರುವ ವಿದ್ಯಾರ್ಥಿಗಳು ಮೇಳದಲ್ಲಿ ಭಾಗವಹಿಸಿ, ನೇರ ಸಂದರ್ಶನದ ಮೂಲಕ ಪ್ರಯೋಜನ ಪಡೆಯಬಹುದಾಗಿದೆ.

ಸೂಚನೆಗಳು:

* ಉದ್ಯೋಗ ಮೇಳದಲ್ಲಿ ಭಾಗವಹಿಸಲಿಚ್ಛಿಸುವ ಅಭ್ಯರ್ಥಿಗಳು ದಿನಾಂಕ: 08-08-2024 ರೊಳಗೆ ಈ ಕೆಳಗಿನ QR Code ಅಥವಾ ಗೂಗಲ್ ಲಿಂಕ್ ಮುಖಾಂತರ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.

Link: https://forms.gle/N9PqThNWBvVp1Xw98

. ಸ್ಥಳದಲ್ಲಿಯೇ ನೋಂದಣಿ ಸಹ ಇರುತ್ತದೆ.

* ಅಭ್ಯರ್ಥಿಗಳು ಆಧಾರ್ ಕಾರ್ಡ್ ಮತ್ತು ಕನಿಷ್ಠ 10 ಬಯೋಡೇಟಾ ಪ್ರತಿಗಳೊಂದಿಗೆ ಉದ್ಯೋಗ ಮೇಳಕ್ಕೆ ಹಾಜರಾಗುವುದು.
* ಉದ್ಯೋಗ ಮೇಳದಲ್ಲಿ ಭಾಗವಹಿಸಲು ಯಾವುದೇ ಶುಲ್ಕ ಇರುವುದಿಲ್ಲ. ಸಂಪೂರ್ಣ ಉಚಿತವಾಗಿರುತ್ತದೆ.
ದಿನಾಂಕ: 09-08-2024 ಶುಕ್ರವಾರ ಸಮಯ: ಬೆಳಿಗ್ಗೆ 10-30 ಕ್ಕೆ

ಸ್ಥಳ: ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊಸನಗರ, ಶಿವಮೊಗ್ಗ ಜಿಲ್ಲೆ

ಹೆಚ್ಚಿನ ಮಾಹಿತಿಗಾಗಿ:

ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಗೋಪಾಲಗೌಡ ಬಡಾವಣೆ. ಶಿವಮೊಗ್ಗ-577205 ಮೊಬೈಲ್ ಸಂಖ್ಯೆ : 9480057950, 9740175125

ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊಸನಗರ, ಶಿವಮೊಗ್ಗ ಜಿಲ್ಲೆ- 577418
ಮೊಬೈಲ್ ಸಂಖ್ಯೆ : 9481254056, 8105891407
ಭಾಗವಹಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಎಲ್ಲಾ ಸೂಚನೆಗಳನ್ನು ಪಾಲಿಸತಕ್ಕದ್ದು

Categories
ಜ್ಯೋತಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಯಾವ ರಾಶಿಯವರಿಗೆ ಒಳಿತು ? ಯಾವ ರಾಶಿಯವರಿಗೆ ಕೆಡುಕು ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಬಹುದು. ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಇಂದು ನಿಮ್ಮ ಹೊಸ ಆಲೋಚನೆಗಳಿಂದ ನಿಮಗೆ ಯಶಸ್ಸು ಸಿಗಬಹುದು. ಉದ್ಯಮಿಗಳಿಗೆ ಪಾಲುದಾರಿಕೆಯಲ್ಲಿ ಲಾಭವಿದೆ. ನಿಮ್ಮ ಸಂಗಾತಿಯೊಂದಿಗೆ ಸಮಸ್ಯೆಗಳಿದ್ದರೆ ಅದನ್ನು ಪರಿಹರಿಸಲು ಪ್ರಯತ್ನಿಸಿ. ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಿ. ಇಂದು ನಿಮಗೆ ಹಣಕಾಸಿನ ಸಮಸ್ಯೆಗಳಿರುವುದಿಲ್ಲ.

** ವೃಷಭ ರಾಶಿ :
ಉತ್ತಮ ದಿನವಾಗಿರುತ್ತದೆ. ಇಂದು ನೀವು ವಿವಿಧ ಮೂಲಗಳಿಂದ ಹಣವನ್ನು ಪಡೆಯಬಹುದು. ಪ್ರೇಮ ಜೀವನವು ತುಂಬಾ ಸುಖಮಯವಾಗಿರುತ್ತದೆ. ನಿಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು, ನಕಾರಾತ್ಮಕ ವ್ಯಕ್ತಿಗಳಿಂದ ದೂರವಿರುವುದು ಉತ್ತಮ. ಕೆಲಸದ ಸ್ಥಳದಲ್ಲಿ ಒತ್ತಡದ ಪರಿಸ್ಥಿತಿ ಎದುರಾಗಬಹುದು. ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

** ಮಿಥುನ ರಾಶಿ
ಉದ್ಯೋಗದಲ್ಲಿರುವವರು ಅಧಿಕಾರಿಗಳ ಬೆಂಬಲ ಪಡೆಯಬಹುದು. ಇಂದು, ಸಣ್ಣ ಪುಟ್ಟ ಅಡೆತಡೆಗಳ ಹೊರತಾಗಿಯೂ, ನಿಮ್ಮ ಕೆಲಸಗಳನ್ನು ಪೂರೈಸುವಲ್ಲಿ ಯಶಸ್ವಿಯಾಗುತ್ತೀರಿ. ನಿಮ್ಮ ಸರಳ ಸ್ವಭಾವದಿಂದಾಗಿ, ನಿಮ್ಮ ಗೌರವವು ಮತ್ತಷ್ಟು ಹೆಚ್ಚಾಗಬಹುದು. ಇಂದು ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ನಿಮ್ಮ ಕೌಟುಂಬಿಕ ಜೀವನದಲ್ಲಿ ಸಂತಸದ ವಾತಾವರಣ ಇರುತ್ತದೆ.

** ಕರ್ಕಾಟಕ ರಾಶಿ :
ನಿಮಗೆ ಪ್ರಗತಿಯ ದಿನವಾಗಲಿದೆ. ಉದ್ಯೋಗಿಗಳು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಹಣ ಹೂಡಿಕೆಯ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಇಂದು ನಿಮ್ಮ ಖರ್ಚುಗಳನ್ನು ನೀವು ನಿಯಂತ್ರಿಸಬೇಕು. ಇಂದು ನಿಮ್ಮ ದಾಂಪತ್ಯ ಜೀವನದಲ್ಲಿ ಸಮಸ್ಯೆ ಎದುರಾಗಬಹುದು. ಮಾತಿನ ಮೂಲಕ ಸಂಬಂಧಗಳಲ್ಲಿನ ತಪ್ಪು ತಿಳುವಳಿಕೆಯನ್ನು ನಿವಾರಿಸಲು ಪ್ರಯತ್ನಿಸಿ.

** ಸಿಂಹ ರಾಶಿ :
ಅನೇಕ ಆದಾಯದ ಮೂಲಗಳಿಂದ ಧನ ಲಾಭವಿದೆ. ವ್ಯಾಪಾರದ ಯಶಸ್ಸು ನಿಮ್ಮ ಪರವಾಗಿರಲಿದೆ. ಆದರೆ ಇಂದು ಯಾರಿಗೂ ದೊಡ್ಡ ಮೊತ್ತದ ಸಾಲ ನೀಡದಿರುವುದು ಒಳಿತು. ವೃತ್ತಿ ಪ್ರಗತಿಗೆ ಹೊಸ ಅವಕಾಶಗಳು ದೊರೆಯಲಿವೆ. ಇಂದು, ಹೂಡಿಕೆ ನಿರ್ಧಾರಗಳನ್ನು ಬಹಳ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ. ಅವಿವಾಹಿತರು ಇಂದು ವಿಶೇಷ ವ್ಯಕ್ತಿಯನ್ನು ಭೇಟಿಯಾಗಬಹುದು.

** ಕನ್ಯಾ ರಾಶಿ :
ನಿಮ್ಮ ವೃತ್ತಿಜೀವನದಲ್ಲಿ ಅನೇಕ ದೊಡ್ಡ ಬದಲಾವಣೆಗಳಿಗೆ ಸಿದ್ಧರಾಗಿರಿ. ಇಂದು ಯಾವುದೇ ವಿವಾದಗಳು ಉದ್ಭವಿಸಿದರೆ, ತಾಳ್ಮೆ ಮತ್ತು ಸಂಯಮದಿಂದ ಸಮಸ್ಯೆಗಳನ್ನು ನಿಭಾಯಿಸಿ. ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಜಾಗರೂಕರಾಗಿರಿ. ಅತಿಯಾದ ಖರ್ಚಿನಿಂದ ಅಪಾಯವಿದೆ ಅಪಾಯವನ್ನು ಎದುರಿಸುವಿರಿ.

** ತುಲಾ ರಾಶಿ :
ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗಬಹುದು. ಆರ್ಥಿಕ ಪರಿಸ್ಥಿತಿ ಸುಧಾರಿಸಬಹುದು. ಪ್ರೇಮ ಸಂಬಂಧಗಳಲ್ಲಿ ಮಧುರತೆ ಇರುತ್ತದೆ. ಹೂಡಿಕೆ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಇಂದು ನಿಮ್ಮ ಖರ್ಚಿನ ಮೇಲೆ ನಿಗಾ ಇರಿಸಿ. ಅನುಪಯುಕ್ತ ವಸ್ತುಗಳಿಗೆ ಹಣವನ್ನು ಖರ್ಚು ಮಾಡುವುದನ್ನು ತಪ್ಪಿಸಿ. ಉದ್ಯೋಗ ಮತ್ತು ವ್ಯಾಪಾರಕ್ಕೆ ವಾತಾವರಣವು ಅನುಕೂಲಕರವಾಗಿರುತ್ತದೆ.

** ವೃಶ್ಚಿಕ ರಾಶಿ :
ನಿಮಗೆ ಅದೃಷ್ಟ ಹೆಚ್ಚಾಗುವ ದಿನ. ವ್ಯಾಪಾರದಲ್ಲಿ ಆರ್ಥಿಕ ಲಾಭ ದೊರೆಯಬಹುದು. ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ, ಆದರೆ ಹಣಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಪರಿಸ್ಥಿತಿಗೆ ತಕ್ಕಂತೆ ಮಾತ್ರ ಖರ್ಚು ಮಾಡಿ. ಕಷ್ಟದ ಸಮಯವನ್ನು ಎದುರಿಸುವುದಕ್ಕಾಗಿ ಹಣವನ್ನು ಉಳಿಸಲು ಮರೆಯದಿರಿ. ಕೌಟುಂಬಿಕ ಜೀವನದಲ್ಲಿ ಸಂತೋಷ ಇರುತ್ತದೆ. ಇಂದು, ವೈವಾಹಿಕ ಜೀವನದಲ್ಲಿನ ಸಮಸ್ಯೆಗಳು ಬಗೆಹರಿಯಲಿವೆ.

** ಧನಸ್ಸು ರಾಶಿ :
ಇಂದು ಹಣಕಾಸಿನ ವ್ಯವಹಾರದಲ್ಲಿ ಅತ್ಯಂತ ಎಚ್ಚರಿಕೆ ಅಗತ್ಯ. ಉದ್ಯೋಗವನ್ನು ಹುಡುಕುತ್ತಿರುವ ಜನರು ಒಳ್ಳೆಯ ಸುದ್ದಿ ಪಡೆಯಬಹುದು. ಜೀವನದ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸುವಿರಿ. ಕೆಲಸದ ಸ್ಥಳದಲ್ಲಿ ನೀವು ಅಧಿಕಾರಿಗಳಿಂದ ಬೆಂಬಲವನ್ನು ಪಡೆಯಬಹುದು. ಉದ್ಯೋಗದ ರಾಜಕೀಯದಿಂದ ದೂರವಿರಿ. ನಿಮ್ಮ ಜೀವನದ ಗುರಿಗಳನ್ನು ಸಾಧಿಸಲು ಹೊಸ ಪ್ರಯತ್ನಗಳನ್ನು ಮಾಡಿ.

** ಮಕರ ರಾಶಿ :
ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಕೆಲಸದ ಸ್ಥಳದಲ್ಲಿ ಕೆಲವು ಏರಿಳಿತಗಳಿರಬಹುದು. ದಂಪತಿಗಳ ನಡುವೆ ಇರುವ ಕೆಲವು ಸಮಸ್ಯೆಗಳು ಇಂದು ಪರಿಹಾರವಾಗಬಹುದು. ವೃತ್ತಿಪರ ಜೀವನದಲ್ಲಿ ಕೆಲವು ಏರಿಳಿತಗಳು ಕಂಡುಬರಬಹುದು. ನಿಮಗೆ ಇಂದು ಹಣಕಾಸಿನ ಲಾಭವಿದೆ. ಆದರೆ ನೀವು ನಿಮ್ಮ ಹಣವನ್ನು ವ್ಯರ್ಥವಾಗಿ ಖರ್ಚು ಮಾಡುವುದನ್ನು ತಪ್ಪಿಸಬೇಕು. ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಯಶಸ್ಸು ಸಿಗಬಹುದು.

** ಕುಂಭ ರಾಶಿ :
ಸ್ಥಾನಮಾನ-ಪ್ರತಿಷ್ಠೆ ಹೆಚ್ಚಾಗಬಹುದು. ಧನ ಲಾಭವಿದೆ, ಆದರೆ ವಾಹನಕ್ಕಾಗಿ ಹಣವನ್ನು ಖರ್ಚು ಮಾಡಬೇಕಾಗಬಹುದು. ಹಣಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ. ನಿಮ್ಮ ಕೆಲಸದಲ್ಲಿ ನೀವು ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಲಭ್ಯವಿದೆ. ಇಂದು, ನಿಮ್ಮ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಎದುರಾಗಬಹುದು.

** ಮೀನ ರಾಶಿ :
ಹಳೆಯ ಸ್ನೇಹಿತರನ್ನು ಭೇಟಿ ಮಾಡಬಹುದು. ನಿಮ್ಮ ಕೆಲಸದಲ್ಲಿನ ಜವಾಬ್ದಾರಿಗಳನ್ನು ಬಹಳ ಎಚ್ಚರಿಕೆಯಿಂದ ನಿರ್ವಹಿಸಿ. ಇಂದು ನಿಮ್ಮ ಮನಸ್ಸು ಕೆಲವು ಅನಗತ್ಯ ಭಯದಿಂದ ತೊಂದರೆಗೊಳಗಾಗಬಹುದು. ಸಕಾರಾತ್ಮಕ ಮನಸ್ಥಿತಿಯೊಂದಿಗೆ ಎಲ್ಲಾ ಕಾರ್ಯಗಳನ್ನು ಪೂರ್ಣಗೊಳಿಸಿ ಮತ್ತು ನಿಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಶ್ರಮಿಸಿ.