Categories
ತೀರ್ಥಹಳ್ಳಿ

ಶಿಕ್ಷಕಿ ಕನಕಮ್ಮ 22 ವರ್ಷಗಳ ಅಮೋಘ ಸೇವೆ.

ಶಿಕ್ಷಕಿ ಕನಕಮ್ಮ 22 ವರ್ಷಗಳ ಅಮೋಘ ಸೇವೆ.
– ತೀರ್ಥಹಳ್ಳಿ ಕುವೆಂಪು ಶಾಲೆ ಶಿಕ್ಷಕಿ ಕನಕಮ್ಮ ಅವರಿಗೆ ಬಿಳ್ಕೊಡುಗೆ
– ಸತೀಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಶಾಲೆಯಲ್ಲಿ ಮಾದರಿ ಕಾರ್ಯಕ್ರಮ

NAMMUR EXPRESS NEWS
ತೀರ್ಥಹಳ್ಳಿ : ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ ತೀರ್ಥಹಳ್ಳಿ ( ಕುವೆಂಪು ಶಾಲೆ)ಯಲ್ಲಿ ಇತ್ತೀಚಿಗೆ 22 ವರ್ಷಗಳ ಅಮೋಘ ಸೇವೆಯನ್ನು ಸಲ್ಲಿಸಿರುವ ಕನಕಮ್ಮ ಅವರಿಗೆ ಬಿಳ್ಕೊಡುಗೆ ಸಮಾರಂಭ ನಡೆಸಲಾಯಿತು. ಎಸ್ ಡಿ ಎಂ ಸಿ ಅಧ್ಯಕ್ಷರಾದ ಸತೀಶ್ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಬಿ ಇ ಓ ಗಣೇಶ್, ಟಿಪಿಓ ಚಂದ್ರಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಜಯಂತಿ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರು ಲತಾ, ಶಾಲಾ ಮುಖ್ಯೋಪಾಧ್ಯಾಯರಾದ ನಾಗರಾಜ ಹಾಗು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿಗಳು, ಎಲ್ಲ ಪದಾಧಿಕಾರಿಗಳು ಮತ್ತು ದೈಹಿಕ ಶಿಕ್ಷಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕನಕಮ್ಮ ಅವರು ಕುವೆಂಪು ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿಯಾಗಿದ್ದು, ಇವರು ವಯೋ ನಿವೃತ್ತಿಯನ್ನು ಹೊಂದಿದ್ದು ಈ ಶಾಲೆಯಲ್ಲಿ 22 ವರ್ಷಗಳ ಅಮೋಘ ಸೇವೆಯನ್ನು ಸಲ್ಲಿಸಿದ್ದಾರೆ. ಇವರು ಅತ್ಯಂತ ಕ್ರಿಯಾಶೀಲರಾಗಿದ್ದು ಶಾಲೆಯ ಸರ್ವತೋಮುಖ ಬೆಳವಣಿಗೆಯಲ್ಲಿ ಹೆಚ್ಚಿನ ಶ್ರಮವಹಿಸಿ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಯಲ್ಲಿ ತೊಡಗುವಂತೆ ಪ್ರೋತ್ಸಾಹಿಸುತ್ತಾ ಶಾಲಾ ಸ್ವಚ್ಛತೆ ಮತ್ತು ಶಿಸ್ತಿಗೆ ಹೆಚ್ಚು ಆದ್ಯತೆಯನ್ನು ನೀಡಿ ತಮ್ಮ ಸೇವೆಯನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿರುತ್ತಾರೆ. ಕನಕಮ್ಮ ಇವರ ಸೇವೆಯನ್ನು ಸ್ಮರಿಸಿ ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಿದ್ದು ಶಾಲಾ ಬಳಗ ಕನಕಮ್ಮ ಇವರಿಗೆ ಆಯುಷ್ಯ ಆರೋಗ್ಯ ಮತ್ತು ನೆಮ್ಮದಿಯನ್ನು ಭಗವಂತನು ಕರುಣಿಸಲೆಂದು ಹಾರೈಸಲಾಯಿತು. ಮಕ್ಕಳು ಬೇಸರದಿಂದ ಶಿಕ್ಷಕಿಯನ್ನು ಬೀಳ್ಕೊಟ್ಟರು.

Categories
ಮಾಹಿತಿ ಸುದ್ದಿ

ಮಳೆ, ಗಾಳಿ, ಧರೆ ಕುಸಿತ: ವಿದ್ಯುತ್ ಬಗ್ಗೆ ಎಚ್ಚರ!

ಮಳೆ, ಗಾಳಿ, ಧರೆ ಕುಸಿತ: ವಿದ್ಯುತ್ ಬಗ್ಗೆ ಎಚ್ಚರ!
– ಮಳೆಗಾಲದಲ್ಲಿ ವಿದ್ಯುತ್ ಸುರಕ್ಷತಾ ಬಗ್ಗೆ ಜಾಗೃತಿ ಇರಲಿ
– ಈ ವರ್ಷ 20ಕ್ಕೂ ಹೆಚ್ಚು ಮಂದಿ ವಿದ್ಯುತ್ ಶಾಕ್ ಇಂದ ಸಾವು!
– ಹಾಗಾದ್ರೆ ಏನು ಮಾಡಬೇಕು..ಏನು ಮಾಡಬಾರದು..?

NAMMUR EXPRESS NEWS
ಅತಿಯಾದ ಗಾಳಿ ಮಳೆ ಇರುವ ಕಾರಣದಿಂದ ಸಾರ್ವಜನಿಕರು ವಿದ್ಯುತ್ ಬಗ್ಗೆ ಎಚ್ಚರ ವಹಿಸಬೇಕು.
ಮಳೆ, ಗಾಳಿ, ಧರೆ ಕುಸಿತ ಕಾರಣಗಳಿಂದ ವಿದ್ಯುತ್ ಬಗ್ಗೆ ಎಚ್ಚರ ವಹಿಸಬೇಕು.ಮಳೆಗಾಲದಲ್ಲಿ ವಿದ್ಯುತ್ ಸುರಕ್ಷತಾ ಬಗ್ಗೆ ಜಾಗೃತಿ ಇರಬೇಕು. ಈ ವರ್ಷ 20ಕ್ಕೂ ಹೆಚ್ಚು ಮಂದಿ ವಿದ್ಯುತ್ ಶಾಕ್ ಇಂದ ಸಾವು ಕಂಡಿದ್ದಾರೆ. ಇನ್ನು ಮಳೆ ಜೋರಾಗಲಿದೆ. ಎಲ್ಲಾ ಕಡೆ ಮಣ್ಣು ಸಡಿಲವಾಗಿದೆ. ತಂತಿ, ಕಂಬ ಬೀಳುವ ಸಾಧ್ಯತೆ ಇದೆ. ಗೋಡೆ ತಂಡಿಯಾಗಿ ವಿದ್ಯುತ್ ಶಾಕ್ ಹೊಡೆಯುವ ಸಾಧ್ಯತೆ ಇದೆ.

– ಹಾಗಾದ್ರೆ ಏನು ಮಾಡಬೇಕು..ಏನು ಮಾಡಬಾರದು..?

– ಗಾಳಿ ಇರುವಾಗ ವಿದ್ಯುತ್ ಮಾರ್ಗದ ಕೆಳಗೆ ನಿಲ್ಲಬೇಡಿ, ಕಬ್ಬಿಣ ಕಂಬ, ಗೈವೈರ್‌ಗಳನ್ನು ಮುಟ್ಟಬೇಡಿ.
– ತುಂಡಾದ ಕಂಬ, ವೈರ್ ಕಂಡಲ್ಲಿ ಕೂಡಲೇ ಹತ್ತಿರದ ಕೆಇಬಿ ಕಛೇರಿ ಅಥವಾ ನಿಮ್ಮ ಏರಿಯಾ ಪವರ್ ಮ್ಯಾನ್ ಅಥವಾ ಮೆಸ್ಕಾಂ ಗ್ರಾಹಕರ ಸೇವಾಕೇಂದ್ರ 1912ಗೆ ತಿಳಿಸಿ. ಅತಿಯಾದ ಆತ್ಮ ವಿಶ್ವಾಸ ಬಿಟ್ಟು ಸುರಕ್ಷತೆಯಿಂದ ಕೆಲಸ ನಿರ್ವಹಿಸಿ.
– ತೋಟದಲ್ಲಿ ಕಟ್ಟಡ ನಿರ್ಮಾಣ ಮಾಡುವಾಗ ಅಲ್ಯುಮಿನಿಯಂ / ಲೋಹದ ಏಣಿಯನ್ನು ಬಳಸುವಾಗ ವಿದ್ಯುತ್ ಮಾರ್ಗದಿಂದ ಅಂತರವಿರಲಿ ಹಾಗೂ ಅದರ ಹತ್ತಿರ ಹೋಗದಂತೆ ನಿಗಾವಹಿಸಿ.
– ತಂಡಿ ಕೈಗಳಿಂದ ಸ್ವಿಚ್ ಬೋರ್ಡ್ / ವಿದ್ಯುತ್ ಉಪಕರಣಗಳನ್ನು ಮುಟ್ಟಬೇಡಿ.
– ವಿದ್ಯುತ್ ಸಂಬಂಧಿ ರಿಪೇರಿ ಕೆಲಸಗಳನ್ನು ನುರಿತ ಕೆಲಸಗಾರರಿಂದ ಮಾಡಿಸಿ.
– ಜಾನುವಾರಗಳನ್ನು ಕಂಬಕ್ಕೆ ಕಟ್ಟುವುದು, ಬ್ಯಾನರ್‌ಗಳನ್ನು ಕಂಬಕ್ಕೆ ನೇತುಹಾಕುವುದನ್ನು ಮಾಡಬೇಡಿ
– ಕಟ್‌ ಔಟ್‌ಗಳನ್ನು ವಿದ್ಯುತ್ ಮಾರ್ಗದ ಸಮೀಪ ಕಟ್ಟಬೇಡಿ.
– ಮನೆಯ ವಿದ್ಯುತ್ ಸಂಪರ್ಕ, ಸ್ವಿಚ್ ಬಗ್ಗೆ ಗಮನ ಇರಲಿ
– ಅಕ್ರಮ ವಿದ್ಯುತ್ ಸಂಪರ್ಕ ಪಡೆಯದಿರಿ
– ವಿದ್ಯುತ್ ಕಂಬ, ತಂತಿ ಬೀಳುವ ಹಂತದಲ್ಲಿದ್ದರೆ ಮಾಹಿತಿ ನೀಡಿ

ಎಲ್ಲರಿಗೂ ಶೇರ್ ಮಾಡಿರಿ… ಜನ ಜಾಗೃತಿ ಮೂಡಿಸಿ..!

Categories
ಜ್ಯೋತಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಶಶ ರಾಜಯೋಗದಿಂದ ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಕೆಲಸದ ಹೆಚ್ಚುವರಿ ಜವಾಬ್ದಾರಿಗಳನ್ನು ಪಡೆಯುತ್ತೀರಿ. ಕೆಲಸದ ಸ್ಥಳದಲ್ಲಿ ಅನಗತ್ಯ ವಾದಗಳನ್ನು ತಪ್ಪಿಸಿ. ಆಸ್ತಿ ವಿಚಾರದಲ್ಲಿ ಕುಟುಂಬದಲ್ಲಿ ಕಲಹ ಉಂಟಾಗಬಹುದು. ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ಅತಿಯಾದ ಕೋಪವನ್ನು ತಪ್ಪಿಸಿ ಮತ್ತು ಶಾಂತ ಮನಸ್ಸಿನಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. ವ್ಯವಹಾರದಲ್ಲಿ ಯಾರನ್ನೂ ಕುರುಡಾಗಿ ನಂಬಬೇಡಿ. ಸಂಪತ್ತಿನ ಒಳಹರಿವಿಗೆ ಹೊಸ ಮಾರ್ಗಗಳು ಸೃಷ್ಟಿಯಾಗಲಿವೆ. ಮನಸ್ಸು ಸಂತೋಷವಾಗಿ ಉಳಿಯುತ್ತದೆ.

** ವೃಷಭ ರಾಶಿ :
ನೀವು ಸ್ವಯಂ ನಿಯಂತ್ರಣದಲ್ಲಿರಿ. ಕೋಪವನ್ನು ತಪ್ಪಿಸಿ. ಮಾತಿನ ಮೇಲೆ ಹಿಡಿತವಿರಲಿ. ಇಂದು ನೀವು ಹಳೆಯ ಸ್ನೇಹಿತರನ್ನು ಭೇಟಿ ಮಾಡಬಹುದು. ರುಚಿಕರವಾದ ಆಹಾರದಲ್ಲಿ ಆಸಕ್ತಿ ಹೆಚ್ಚಾಗಬಹುದು. ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಇಂದು ದೀರ್ಘಕಾಲದ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯುತ್ತೀರಿ.

** ಮಿಥುನ ರಾಶಿ
ನಿಮ್ಮ ಸ್ಥಾನಮಾನ-ಪ್ರತಿಷ್ಠೆ ಹೆಚ್ಚಾಗುತ್ತದೆ. ಆದರೆ, ವ್ಯವಹಾರದಲ್ಲಿ ಹಣ ನಷ್ಟವಾಗುವ ಲಕ್ಷಣಗಳಿವೆ. ಆದ್ದರಿಂದ, ಹಣಕಾಸಿನ ವಿಷಯಗಳಲ್ಲಿ ಬುದ್ಧಿವಂತಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. ಕಚೇರಿಯಲ್ಲಿ ಅನಗತ್ಯ ವಾದ ವಿವಾದಗಳಿಂದ ದೂರವಿರಿ. ನಿಮ್ಮ ಮಾತಿನ ಮೇಲೆ ಹಿಡಿತವಿರಲಿ ಮತ್ತು ಯಾರ ಭಾವನೆಗಳಿಗೂ ಧಕ್ಕೆ ತರುವಂತಹ ಪದಗಳನ್ನು ಬಳಸಬೇಡಿ.

** ಕರ್ಕಾಟಕ ರಾಶಿ :
ಉದ್ಯೋಗ ಮತ್ತು ವ್ಯವಹಾರದಲ್ಲಿ ವಾತಾವರಣವು ಅನುಕೂಲಕರವಾಗಿರುತ್ತದೆ. ನಿಮ್ಮ ಕೆಲಸದಲ್ಲಿ ನೀವು ಬಯಸಿದ ಫಲಿತಾಂಶಗಳನ್ನು ಪಡೆಯುತ್ತೀರಿ. ಆರ್ಥಿಕ ಲಾಭಕ್ಕಾಗಿ ಹೊಸ ಅವಕಾಶಗಳು ದೊರೆಯಲಿವೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಹಣದ ಒಳಹರಿವು ಹೆಚ್ಚಾಗುತ್ತದೆ. ಹೊಸ ಯೋಜನೆಗೆ ಜವಾಬ್ದಾರಿ ಸಿಗಲಿದೆ. ಆದಾಯದ ಮೂಲವಾಗಲಿದೆ. ಕಚೇರಿ ಸಭೆಗಳಲ್ಲಿ ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಹಿಂಜರಿಯಬೇಡಿ.

** ಸಿಂಹ ರಾಶಿ :
ನಿಮಗೆ ತುಂಬಾ ಶುಭ ದಿನವಾಗಲಿದೆ. ಉದ್ಯೋಗ ಹುಡುಕಾಟ ಪೂರ್ಣಗೊಳ್ಳಲಿದೆ. ಪರಿಸ್ಥಿತಿಗಳು ಕ್ರಮೇಣ ಅನುಕೂಲಕರವಾಗುತ್ತವೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯ ಸಾಧ್ಯತೆ ಇರುತ್ತದೆ. ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಆರ್ಥಿಕ ಲಾಭ ದೊರೆಯಲಿದೆ. ಆದರೆ, ಕೆಲವರು ತಮ್ಮ ವೃತ್ತಿಜೀವನದಲ್ಲಿ ಸಣ್ಣ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

** ಕನ್ಯಾ ರಾಶಿ :
ವಿದ್ಯಾರ್ಥಿಗಳಿಗೆ ಶುಭ ದಿನ. ಶೈಕ್ಷಣಿಕ ಕೆಲಸದಲ್ಲಿ ನೀವು ಆಹ್ಲಾದಕರ ಫಲಿತಾಂಶಗಳನ್ನು ಪಡೆಯುತ್ತೀರಿ. ಆದರೆ, ಉದ್ಯೋಗಿಗಳು ಇಂದು ಸಣ್ಣ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ವ್ಯಾಪಾರ ವಹಿವಾಟುಗಳಿಗೆ ಸಹಿ ಹಾಕುವಾಗ ವ್ಯಾಪಾರಸ್ಥರು ಸ್ವಲ್ಪ ಎಚ್ಚರಿಕೆ ವಹಿಸಬೇಕು. ಹಣಕಾಸಿನ ವಿಷಯಗಳಲ್ಲಿ ಯಾರನ್ನೂ ಕುರುಡಾಗಿ ನಂಬಬೇಡಿ ಮತ್ತು ಹಣಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತರಾತುರಿಯಲ್ಲಿ ತೆಗೆದುಕೊಳ್ಳಬೇಡಿ.

** ತುಲಾ ರಾಶಿ :
ಜೀವನದಲ್ಲಿ ಹಲವು ಏರಿಳಿತಗಳು ಎದುರಾಗುತ್ತವೆ. ಕೆಲಸದ ಸವಾಲುಗಳು ಹೆಚ್ಚಾಗುತ್ತವೆ. ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದ ಕಡೆ ಗಮನ ಕೊಡಿ. ವ್ಯಾಪಾರಿಗಳು ವ್ಯಾಪಾರದಲ್ಲಿ ತೊಂದರೆಗಳನ್ನು ಎದುರಿಸಬಹುದು. ತಾಳ್ಮೆಯನ್ನು ಕಾಪಾಡಿಕೊಳ್ಳಿ. ಶಾಂತ ಮನಸ್ಸಿನಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. ವೃತ್ತಿ ಬೆಳವಣಿಗೆಗೆ ಹೊಸ ಅವಕಾಶಗಳ ಮೇಲೆ ಕಣ್ಣಿಡಿ. ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ ಮತ್ತು ಸಾಧ್ಯವಾದಷ್ಟು ಬೇಗ ವೈದ್ಯರನ್ನು ಸಂಪರ್ಕಿಸಿ.

** ವೃಶ್ಚಿಕ ರಾಶಿ :
ಮಾನಸಿಕ ಮತ್ತು ದೈಹಿಕ ಆರೋಗ್ಯದ ಕಡೆ ಗಮನ ಕೊಡಿ. ಟೀಮ್ ವರ್ಕ್ ಮೇಲೆ ಗಮನ ಹರಿಸಿ. ಉದ್ಯೋಗದಲ್ಲಿ ಸಹೋದ್ಯೋಗಿಗಳೊಂದಿಗೆ ಒಟ್ಟಾಗಿ ಕೆಲಸ ಮಾಡಿ ಮತ್ತು ಸವಾಲುಗಳನ್ನು ಜಯಿಸಲು ಪರಸ್ಪರ ಪ್ರೇರೇಪಿಸುತ್ತಿರಿ. ಇಂದು ಹೊಸ ಆದಾಯದ ಮೂಲಗಳಿಂದ ಆರ್ಥಿಕ ಲಾಭವಿದೆ. ಇಂದು, ಹಿಂದಿನ ನೆನಪುಗಳು ಗೊಂದಲವನ್ನು ಹೆಚ್ಚಿಸಬಹುದು. ನಿಮ್ಮ ಭಾವನೆಗಳನ್ನು ನಿಯಂತ್ರಿಸಿ. ಕುಟುಂಬದೊಂದಿಗೆ ಸಮಯ ಕಳೆಯಿರಿ.

** ಧನಸ್ಸು ರಾಶಿ :
ನೀವು ಆಧ್ಯಾತ್ಮಿಕ ಕೆಲಸದಲ್ಲಿ ಆಸಕ್ತಿ ಹೊಂದಿರುತ್ತೀರಿ. ಸೋಮಾರಿತನದಿಂದ ದೂರವಿರಿ. ನಿಮ್ಮ ಗುರಿಗಳನ್ನು ಸಾಧಿಸಲು ಹೊಸ ಪ್ರಯತ್ನಗಳನ್ನು ಮಾಡಿ. ಹೊಸ ಕೆಲಸವನ್ನು ಪ್ರಾರಂಭಿಸಲು ಇಂದು ಶುಭ ದಿನವಾಗಿದೆ. ಹಿಂದಿನ ತಪ್ಪುಗಳಿಂದ ಕಲಿಯುವ ಮೂಲಕ ಜೀವನದಲ್ಲಿ ಮುನ್ನಡೆಯಿರಿ. ಮನೆಯಲ್ಲಿ ಶುಭ ಕಾರ್ಯಗಳನ್ನು ಆಯೋಜಿಸಬಹುದು. ಕುಟುಂಬದೊಂದಿಗೆ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಬಹುದು.

** ಮಕರ ರಾಶಿ :
ಕುಟುಂಬ ಜೀವನದಲ್ಲಿ ಸಂತೋಷ ಇರುತ್ತದೆ. ಕೆಲವರ ಮದುವೆ ನಿಶ್ಚಯವಾಗಬಹುದು. ನಿಮ್ಮ ಸಂಗಾತಿಯೊಂದಿಗೆ ನೀವು ಭೋಜನವನ್ನು ಯೋಜಿಸಬಹುದು. ನಿಮ್ಮ ಬಿಡುವಿಲ್ಲದ ವೇಳಾಪಟ್ಟಿಯಿಂದ ಸ್ವಲ್ಪ ಸಮಯವನ್ನು ತೆಗೆದುಕೊಳ್ಳಿ ಮತ್ತು ನಿಮ್ಮ ಸಂಗಾತಿಯೊಂದಿಗೆ ಕೆಲವು ಸ್ಮರಣೀಯ ಕ್ಷಣಗಳನ್ನು ಕಳೆಯಿರಿ. ಇದು ಪ್ರೀತಿಯ ಸಂಬಂಧಗಳಲ್ಲಿ ಮಾಧುರ್ಯವನ್ನು ತರುತ್ತದೆ.

** ಕುಂಭ ರಾಶಿ :
ನಿಮ್ಮ ಕಠಿಣ ಪರಿಶ್ರಮವು ಫಲಿತಾಂಶವನ್ನು ನೀಡುತ್ತದೆ. ವೃತ್ತಿ ಜೀವನದಲ್ಲಿ ಪ್ರಮುಖ ಬದಲಾವಣೆಗಳಾಗಲಿವೆ. ನಿಮ್ಮ ಎಲ್ಲಾ ಕೆಲಸಗಳಲ್ಲಿ ನೀವು ಅಪಾರ ಯಶಸ್ಸನ್ನು ಪಡೆಯುತ್ತೀರಿ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗುತ್ತವೆ. ರೋಮ್ಯಾಂಟಿಕ್ ಜೀವನ ಉತ್ತಮವಾಗಿರುತ್ತದೆ. ಸಂಬಂಧಗಳಲ್ಲಿ ಪ್ರೀತಿ ಹೆಚ್ಚಾಗುತ್ತದೆ.

** ಮೀನ ರಾಶಿ :
ವೃತ್ತಿಪರ ಜೀವನದಲ್ಲಿ, ಸೃಜನಶೀಲತೆ ಮತ್ತು ಹೊಸ ನವೀನ ಆಲೋಚನೆಗಳೊಂದಿಗೆ ಮಾಡಿದ ಕೆಲಸವು ಯಶಸ್ವಿಯಾಗುತ್ತದೆ. ಇಂದು ಹಣದ ವ್ಯವಹಾರಗಳನ್ನು ತಪ್ಪಿಸಿ. ವೈಯಕ್ತಿಕ ಬೆಳವಣಿಗೆಯತ್ತ ಗಮನ ಹರಿಸಿ. ಹೊಸ ಕೌಶಲ್ಯಗಳನ್ನು ಕಲಿಯಿರಿ. ಇದು ವೃತ್ತಿ ಬೆಳವಣಿಗೆಗೆ ಹೊಸ ಅವಕಾಶಗಳನ್ನು ಒದಗಿಸುತ್ತದೆ. ಕಚೇರಿಯಲ್ಲಿ ಅನಗತ್ಯ ಚರ್ಚೆಗಳಿಂದ ದೂರವಿರಿ. ನಿಮ್ಮ ಕಾರ್ಯಕ್ಷಮತೆಯ ಮೇಲೆ ಕೇಂದ್ರೀಕರಿಸಿ.

Categories
ಚಿತ್ರದುರ್ಗ

ಕೋಟೆನಾಡು ಚಿತ್ರದುರ್ಗದಲ್ಲಿ ಹೋಳಿಗೆ ಹಬ್ಬ..!

ಕೋಟೆನಾಡು ಚಿತ್ರದುರ್ಗದಲ್ಲಿ ಹೋಳಿಗೆ ಹಬ್ಬ..!
– ರಾಶಿ ರಾಶಿ ಹೋಳಿಗೆ ನೈವೇದ್ಯ
– ಏನಿದರ ವಿಶೇಷ? ಇಲ್ಲಿದೆ ನೋಡಿ

NAMMUR EXPRESS NEWS
ಚಿತ್ರದುರ್ಗ: ಹಬ್ಬ ಹುಣ್ಣಿಮೆಗಳ ಸಂದರ್ಭದಲ್ಲಿ ಹೋಳಿಗೆ ಮಾಡುವುದು ಸಹಜ. ವಿಶೇಷ ಸಂದರ್ಭಗಳಲ್ಲಿ ಆರಾಧ್ಯ ದೇವರಿಗೆ ನೈವೇದ್ಯ ಅರ್ಪಿಸುವ ಆಚರಣೆಗಳು ಜಾರಿಯಲ್ಲಿವೆ. ಆದರೆ, ಕೋಟೆನಾಡು ಚಿತ್ರದುರ್ಗದಲ್ಲಿ ಮಾತ್ರ ಹೋಳಿಗೆ ಹಬ್ಬವನ್ನೇ ಆಚರಿಸಲಾಗುತ್ತದೆ. ದೇಗುಲದಲ್ಲಿ ರಾಶಿ ರಾಶಿ ಹೋಳಿಗೆ ನೈವೇದ್ಯ ಅರ್ಪಿಸಲಾಗುತ್ತದೆ.

ಏನಿದರ ವಿಶೇಷ? ಇಲ್ಲಿದೆ ಮಾಹಿತಿ.

ದೇವಿಯ ದೇಗುಲದ ಅಂಗಳದಲ್ಲಿ ರಾಶಿ ರಾಶಿ ಹೋಳಿಗೆ ನೈವೇದ್ಯ. ಆರಾಧ್ಯ ದೇವಿಯ ದರ್ಶನ ಪಡೆದ ಭಕ್ತರಲ್ಲಿ ಕೃತಾರ್ಥ ಭಾವ. ಇದು ದುರ್ಗದಲ್ಲಿ ಹೋಳಿಗೆ ಹಬ್ಬ ಆಚರಿಸುವ ವಿಶೇಷ ಝಲಕ್.
ಕೋಟೆನಾಡು ಚಿತ್ರದುರ್ಗ ನಗರದ ಕರುವಿನಕಟ್ಟೆ ವೃತ್ತದ ಬಳಿಯ ಶ್ರೀ ತ್ರಿಪುರ ಸುಂದರಿ ತಿಪ್ಪಿನಘಟ್ಟಮ್ಮ ದೇಗುಲ ಬಳಿಯ ದೃಶ್ಯವಿದು. ಪ್ರತಿ ವರ್ಷ ಆಷಾಢ ಮಾಸದ ಕೊನೆಯಲ್ಲಿ ಹೋಳಿಗೆ ಹಬ್ಬ ಆಚರಣೆ ಆಚರಿಸಲಾಗುತ್ತದೆ. ಭಕ್ತರು ಪ್ರತಿ ಮನೆಗಳಲ್ಲಿ ಹೋಳಿಗೆ ಮಾಡಿ ದೇವಿಗೆ ನೈವೇದ್ಯ ತರುತ್ತಾರೆ. ದೇಗುಲದ ಅಂಗಳದಲ್ಲಿ ರಾಶಿ ರಾಶಿ ಹೋಳಿಗಗಳನ್ನಿಟ್ಟು ಪೂಜಿಸಿ ದೇವಿಗೆ ಅರ್ಪಿಸಲಾಗುತ್ತದೆ. ಆ ಮೂಲಕ ಮಕ್ಕಳಿಗೆ ರೋಗ ರುಜನಿಗಳು ಕಾಡದಿರಲಿ ಎಂದು ಪ್ರಾರ್ಥಿಸಲಾಗುತ್ತದೆ. ಹೋಳಿಗೆ ಜತೆಗೆ ಕುಡಿಕೆ, ಮೊಸರನ್ನ, ಬೇವು, ತೆಂಗಿನ ಕಾಯಿ, ಬಾಳೇಹಣ್ಣು ಮತ್ತಿತರೆ ವಸ್ತುಗಳನ್ನು ನೈವೇದ್ಯವನ್ನಾಗಿ ದೇವಿಗೆ ಅರ್ಪಿಸಲಾಗುತ್ತದೆ. ಸಂಜೆ ವೇಳೆಗೆ ದೇವಿಯ ಉತ್ಸವ ಮೂರ್ತಿಯ ಮೆರವಣಿಗೆ ನಡೆಯುತ್ತದೆ. ಬಳಿಕ ಮದ್ಯರಾತ್ರಿ ವೇಳೆಗೆ ದೇವಿಗೆ ಅರ್ಪಿಸಿದ ನೈವೇದ್ಯವನ್ನು ಟ್ರ್ಯಾಕ್ಟರ್‌ನಲ್ಲಿ ತುಂಬಿ ಊರಸೀಮೆಗೆ ಕೊಂಡೊಯ್ದು ಹಾಕಲಾಗುತ್ತದೆ. ಈ ಆಚರಣೆಯಿಂದ ನಾಡಿನ ಜನರಿಗೆ ರೋಗ ರುಜನಿಗಳು ಬಾಧಿಸಲ್ಲ. ಮಳೆ ಬೆಳೆ ಸಮೃದ್ಧಿಯಾಗಿರುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಒಂದು ಕಡೆ ರೋಗ ರುಜಿನ ದೂರವಾಗಿ ಮಳೆ ಬೆಳೆ ಸಮೃದ್ಧಿ ಆಗಿರುತ್ತದೆಂಬ ನಂಬಿಕೆ ಜನರಲ್ಲಿದೆ. ಮತ್ತೊಂದು ಕಡೆ ಆಷಾಢ ಮಾಸದಲ್ಲಿ ಪ್ರಾಣಿ ಪಕ್ಷಿಗಳಿಗೆ ಆಹಾರದ ಕೊರತೆ ಆಗಿರುತ್ತದೆ. ಹೀಗಾಗಿ, ಊರ ಸೀಮೆಯಲ್ಲಿ ಆಹಾರ ಹಾಕಿದರೆ ಪ್ರಾಣಿ ಪಕ್ಷಿಗಳಿಗೆ ಆಹಾರ ದಕ್ಕುತ್ತದೆಂಬ ವೈಚಾರಿಕ ಚಿಂತನೆಯೂ ಈ ಆಚರಣೆಯ ಹಿಂದಿದೆ ಎನ್ನಲಾಗುತ್ತದೆ.

Categories
ಕರಾವಳಿ

ಕರಾವಳಿ: ಮಳೆ ನಿಂತು ಹೋದ ಮೇಲೆ ಬದುಕು ಅಸ್ತವ್ಯಸ್ಥ!

ಕರಾವಳಿ: ಮಳೆ ನಿಂತು ಹೋದ ಮೇಲೆ ಬದುಕು ಅಸ್ತವ್ಯಸ್ಥ!

– ಪುತ್ತೂರು, ಬೆಳ್ತಂಗಡಿ ಸೇರಿ ಜಿಲ್ಲೆಯ ಹಲವೆಡೆ ಭಾರೀ ಹಾನಿ
– ಜಿಲ್ಲೆಗೆ ಬಂದ್ರು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್
– ಕಾಪುವಿನಲ್ಲಿ ಬೋಟ್ ಅಲ್ಲಿ ತಹಸೀಲ್ದಾರ್ ಮೇಡಂ ಸುತ್ತಾಟ
– ವಾಮಂಜೂರು ಅಮೃತೇಶ್ವರ ದೇವಾಲಯ ಮುಳುಗಡೆ
– ಬಜ್ಪೆಯಲ್ಲಿ ಶಾಲಾ ಕಟ್ಟಡ ಕುಸಿಯುವ ಆತಂಕ

ಮಂಗಳೂರು: ರಾಜ್ಯದಲ್ಲಿ ಮಳೆ ಕಾರಣದಿಂದ ಅತೀ ಹೆಚ್ಚು ಹಾನಿಗೊಳಗಾದ ಜಿಲ್ಲೆಗಳ ಪೈಕಿ ದಕ್ಷಿಣ ಕನ್ನಡ ಜಿಲ್ಲೆ ಕೂಡ ಒಂದು. ಇಲ್ಲಿ ಇಂದಿಗೂ ಅನಾಹುತ ಮುಂದುವರಿದಿದೆ. ಗೋಡೆ, ಮನೆ, ಗುಡ್ಡ, ರಸ್ತೆ ಕುಸಿಯುತ್ತಲೇ ಇವೆ.

ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌ ಭೇಟಿ

ಪ್ರವಾಹ ಪೀಡಿತವಾಗಿರುವ ಪ್ರದೇಶಗಳಿಗೆ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರತಿ ವರ್ಷ ಅದ್ಯಪಾಡಿಯಲ್ಲಿ ಫಲ್ಗುಣಿ ನದಿಯ ನೆರೆ ಪ್ರವಾಹದಿಂದ ಸಂತ್ರಸ್ತರಾಗುತ್ತಿರುವ ಬಗ್ಗೆ ಸ್ಥಳೀಯರು ಸಚಿವರ ಗಮನ ಸೆಳೆದರು. ಅಕ್ಕ ಪಕ್ಕಗ್ರಾಮಗಳು ಜಲಾವೃತವಾಗಿರುವ ಬಗ್ಗೆಯೂ ಮಾ ನೀಡಿದರು.

ಕಾಮಗಾರಿ ಹೆಸರಲ್ಲಿ ಮಣ್ಣು ಮಾಫಿಯಾ?

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಕೆತ್ತಿಕಲ್ ಗುಡ್ಡ ಪ್ರದೇಶಕ್ಕೆ ಭೇಟಿ ನೀಡಿದ ದಿನೇಶ್ ಗುಂಡೂರಾವ್ ಅಲ್ಲಿನ ಸ್ಥಿತಿ ನೋಡಿ ಶಾಕ್ ಆದರು. ಈ ವೇಳೆ ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಇಲ್ಲಿನ ಸ್ಥಿತ ನೋಡಿದರೆ ಭಯದ ವಾತಾವರಣ ನಿರ್ಮಾಣವಾಗಿದೆ. ಹೆದ್ದಾರಿ ಕಾಮಗಾರಿ ಹೆಸರಿನಲ್ಲಿ ಮಣ್ಣುಗಣಿಗಾರಿಕೆ ಮಾಡಲಾಗಿದೆ. ದೊಡ್ಡ ಪ್ರಮಾಣದ ಲೋಪದೋಷವಾಗಿರುವುದು ಕಂಡು ಬಂದಿದೆ ಎಂದು ಸಚಿವರು ಹೇಳಿದರು. ಇಲ್ಲಿ ಗುಡ್ಡ ಅಪಾಯಕಾರಿಯಾಗಿರುವ ಬಗ್ಗೆ ಫೆಬ್ರವರಿ ತಿಂಗಳಲ್ಲೇ ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆ ಮುನ್ಸೂಚನೆ ನೀಡಿತ್ತು. ಪಾಲಿಕೆ ಯಾವ ಕ್ರಮ ಕೈಗೊಂಡಿದೆ ಎಂದು ಪರಿಶೀಲನೆ ನಡೆಸಲಾಗುವುದು. ಗಣಿ ಭೂ ವಿಜ್ಞಾನ ಇಲಾಖೆ ಮಣ್ಣು ಅಗೆಯಲು ಅವಕಾಶ ಏಕೆ ನೀಡಿದೆ ಎಂದು ವರದಿ ಕೇಳುತ್ತೇನೆ ಎಂದರು.

ಬಜ್ಪೆಯ ಕರಂಬಾರ್ ಬಳಿ ಮನೆ ಕುಸಿತ: ಮಕ್ಕಳಿಗೆ ಕಾದಿದೆ ಅಪಾಯ

ಕರಂಬಾರ್ ಸರ್ಕಾರಿ ಶಾಲೆಯ ಹಿಂದೆ ನೀರಿನ ರಭಸಕ್ಕೆ ಸುಮಾರು ನಾಲ್ಕೈದು ಮನೆಗಳ ಹಿಂಬದಿಯ ಮಣ್ಣು ಕುಸಿದಿದ್ದು, ಮತ್ತು ಸುಮಾರು 300 ವಿಧ್ಯಾರ್ಥಿ ಗಳು ವ್ಯಾಸಂಗ ಮಾಡುತ್ತಿರುವ ಶಾಲಾ ಕಟ್ಟಡ ಆಪತ್ತಿನಲ್ಲಿದೆ. ಇದನ್ನು ಸರಿ ಪಡಿಸಲು ಬಜ್ಪೆ ಪಟ್ಟಣ ಪಂಚಾಯತ್ ಗೆ ಸ್ಥಳೀಯರು ಅನೇಕ ಬಾರಿ ಮನವಿ ಮಾಡಿದ್ದಾರೆ .ಪರಿಸ್ಥಿತಿ ತುರ್ತು ಇದ್ದರೂ ಅದನ್ನು ಸರಿಪಡಿಸಲು ಪಟ್ಟಣ ಪಂಚಾಯತ್ ಮೀನಮೇಷ ಎಣಿಸುತ್ತಿರುವುದರ ಬಗ್ಗೆ ಬೇಟಿ ನೀಡಿದ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆ ಕೂಡಲೇ ಸಂಬಂಧಪಟ್ಟವರಿಗೆ ಮಾಹಿತಿ ನೀಡಿ ಇದಕ್ಕೆ ಅಧಿಕಾರಿಗಳು,ಬಜ್ಪೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸ್ಥಳಕ್ಕೆ ಬೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿತು.

ಕಾಪು ತಾಲ್ಲೂಕಿನಲ್ಲಿ ನೆರೆ: ತಹಶಿಲ್ದಾ‌ರ್ ಪ್ರತಿಭಾ ಭೇಟಿ

ಎಡಬಿಡದೆ ಸುರಿದ ಭಾರೀ ಮಳೆಯಿಂದಾಗಿ ನೆರೆ ಉಂಟಾಗಿ ಕಾಪು ತಾಲ್ಲೂಕಿನಲ್ಲಿ ಹಲವೆಡೆ ನೆರೆ ಪರಿಸ್ಥಿತಿ ಉಂಟಾಗಿತ್ತು. ಸುರಿಯುವ ಮಳೆಯನ್ನೂ ಲೆಕ್ಕಿಸದೆ ತಾವೇ ಸ್ವತಃ ಫೀಲ್ಡಿಗಳಿದು ನೆರೆ ಪ್ರದೇಶಕ್ಕೆ ಧಾವಿಸಿ ಬೋಟ್‌ ಮೂಲಕ ನೆರೆಗೆ ಸಿಲುಕಿದವರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಿಗಿದ ತಹಶಿಲ್ದಾ‌ರ್ ಪ್ರತಿಭಾ ಸಂತ್ರಸ್ತರ ಮನ ಒಲಿಸಿ, ಕರೆತಂದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಲ್ಲಿಯೂ ಯಶಸ್ವಿಯಾದರು.ಬೆಳ್ಳೆ ಗ್ರಾಮದ ಪಡುಬೆಳ್ಳೆಯ ಭಟ್ಟಸಾಲಿನಲ್ಲಿ ಜಲಾವೃತಗೊಂಡಿದ್ದ ತುಕ್ರ ಮುಖಾರಿ ಅವರ ಮನೆಯ 9 ಮಂದಿ ಸದಸ್ಯರನ್ನು ತಹಶೀಲ್ದಾರ್ ಡಾ. ಪ್ರತಿಭಾ ಆ‌ರ್. ನೇತೃತ್ವದಲ್ಲಿ ರಕ್ಷಣೆ ಮಾಡಲಾಯಿತು. ಈ ಸಂದರ್ಭ ಕಂದಾಯ ಪರಿವೀಕ್ಷಕ ಇಜ್ಜಾರ್ ಸಾಬಿರ್, ಗ್ರಾ.ಆ. ಅಧಿಕಾರಿ ಪ್ರದೀಪ್‌ ಕುಮಾರ್, ಗ್ರಾಪಂ ಉಪಾಧ್ಯಕ್ಷ ಶಶಿಧರ ವಾಗೈ, ಗ್ರಾಪಂ ಸದಸ್ಯರು ಸಹಕರಿಸಿದರು.

ಪುತ್ತೂರು: ಬೆಳ್ಳಿಪ್ಪಾಡಿಯ ಕುಂಡಾಪು ಬಳಿ ರಸ್ತೆಗೆ ದರೆ ಕುಸಿತದ ಭೀತಿ!

ಪುತ್ತೂರು ಬೆಳ್ಳಿಪ್ಪಾಡಿ ಒಳ ರಸ್ತೆಯ ಕುಂಡಾಪು ಬಳಿ ರಸ್ತೆಯ ದರೆಯು ಕುಸಿತದ ಭೀತಿಯಲ್ಲಿದೆ. ನಿರಂತರವಾಗಿ ಎಡೆ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಈಗಾಗಲೇ ರಸ್ತೆಯ ಅಂಚಿನಲ್ಲಿ ಸ್ವಲ್ಪ ಮಟ್ಟದ ಮಣ್ಣು ಕುಸಿದು ನಿಂತಿದೆ.ಒಂದು ವೇಳೆ ಸಂಪೂರ್ಣ ಕುಸಿತವಾದರೆ ರಸ್ತೆ ಸಂಚಾರ ಬಂದ್‌ ಆಗುವ ಸಾಧ್ಯತೆ ಇದೆ. ಇದರ ಮೇಲ್ಗಡೆ 2 ಮನೆಗಳು ಇದೆ.

ಬೆಳ್ತಂಗಡಿ: ವಿವಿಧೆಡೆ ಭೂ ಕುಸಿತ; ಕೊಚ್ಚಿ ಹೋದ ಸೇತುವೆ!

ಬೆಳ್ತಂಗಡಿ: ಭಾರೀ ಮಳೆಯಿಂದಾಗಿ ತಾಲೂಕಿನಾದ್ಯಂತ
ವಿವಿಧೆಡೆ ಹಲವು ಅನಾಹುತಗಳು ಸಂಭವಿಸಿದೆ. ಬುಧವಾರ- ಗುರುವಾರ ಸುರಿದ ಭಾರೀ ಮಳೆಗೆ ಬೆಳ್ತಂಗಡಿಯಾದ್ಯಂತ ಸಾಕಷ್ಟು ಅನಾಹುತಗಳು ಸಂಭವಿಸಿವೆ.
ಭಾರೀ ಮಳೆಯಿಂದಾಗಿ ವೇಣೂರು-ನಾರಾವಿ ಪರಿಸರದ ವಿವಿಧೆಡೆ ಸೇತುವೆ ಮೇಲೆ ನೀರು ಹರಿದಿದ್ದು ರಸ್ತೆಯಲ್ಲೇ ನೀರು ಹರಿದು ಈ ಭಾಗದಲ್ಲಿ ಜನರು ಪರದಾಡಿದರು. ವೇಣೂರು ಆರಂಬೋಡಿ ಬಳಿಯ ಅಂಗರ ಕರಿಯ ಸೇತುವೆ, ಮರೋಡಿಯ ಪಲಾಗೋಳಿ ಸೇತುವೆ ಮುಳುಗಡೆಯಾಗಿ ಹಾನಿಯಾಗಿದೆ.
ಮಾಲಾಡಿ ಸೊಣಂದೂರು ಗ್ರಾಮದ ಸಬರಬೈಲು-ಪಡಂಗಡಿ ಸಂಪರ್ಕ ಕಲ್ಪಿಸುವ ರಸ್ತೆಯ ಮೊದಲೆ ಎಂಬಲ್ಲಿ ಕಿರು ಸೇತುವೆ ಕುಸಿದು ಸಂಪರ್ಕ ಕಡಿತವಾಗಿದೆ. ಮರೋಡಿ ಗ್ರಾಮದ ದೇರಾಜೆ ಬೆಟ್ಟಕ್ಕೆ ಸಂಪರ್ಕಿಸುವ ರಸ್ತೆ ಕುಸಿದಿದೆ. ಕುದೊಟ್ಟು ಬಳಿ ಗುಡ್ಡ ಕುಸಿದು ಅಳದಂಗಡಿ ರಸ್ತೆ ಬ೦ದ್‌ ಆಗಿದೆ. ಗುರುವಾಯನಕೆರೆ ಬ೦ಟರ ಭವನದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲೇ ನೀರು ನಿಂತು ಪ್ರಯಾಣಕ್ಕೆ ಅಡಚಣೆಯಾಗಿತ್ತು. ಪಕ್ಕದ ಅಡಿಕೆ ತೋಟ ಜಲಾವೃತಗೊಂಡಿತ್ತು. ಹೀಗೆ ತಾಲೂಕಿನ ವಿವಿಧೆಡೆ ಸಾಕಷ್ಟು ಮಳೆ ಹಾನಿಯಾಗಿದೆ.

Categories
ಬೆಂಗಳೂರು

ಅರಣ್ಯ ಒತ್ತುವರಿ ಇನ್ಮುಂದೆ ಕಠಿಣ ಕಾನೂನು!?

ಅರಣ್ಯ ಒತ್ತುವರಿ ಇನ್ಮುಂದೆ ಕಠಿಣ ಕಾನೂನು!?
– ಒತ್ತುವರಿ ಕಾರಣದಿಂದ ಪ್ರಕೃತಿ ವಿಕೋಪ ಎಂದ ಸರ್ಕಾರ
-ಮರಗಳ ಕಡಿತಲೆ,ಅವೈಜ್ಞಾನಿಕವಾಗಿ ಗುಡ್ಡ ಕತ್ತರಿಸಿ ನಿರ್ಮಿಸುವ ರಸ್ತೆಗಳಿಂದ ಹೆಚ್ಚಿದ ಅನಾಹುತ
– ಒತ್ತುವರಿ ಬಡಾವಣೆ, ತೋಟ, ಹೋಂ ಸ್ಟೇ ಮತ್ತು ರೆಸಾರ್ಟ್ ಖುಲ್ಲಾ?

NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ಅಕ್ರಮವಾಗಿ ಅರಣ್ಯ ಒತ್ತುವರಿ ಮಾಡಿದವರಿಗೆ ಇದೀಗ ಸಂಕಷ್ಟ ಎದುರಾಗಲಿದೆ. ಒತ್ತುವರಿ ಕಾರಣದಿಂದ ಪ್ರಕೃತಿ ವಿಕೋಪ ಎಂದ ಸರ್ಕಾರ ಇದೀಗ ಅಕ್ರಮ ಒತ್ತುವರಿ ವಿರುದ್ಧ ಸಮರ ಸಾರಲು ಮುಂದಾಗಿದೆ.
ಕರ್ನಾಟಕದ ಉತ್ತರ ಕನ್ನಡ ಜಿಲ್ಲೆ ಶಿರೂರು ಬಳಿ ಸಂಭವಿಸಿದ ಗುಡ್ಡ ಕುಸಿತ, ನೆರೆ ರಾಜ್ಯ ಕೇರಳದ ವಯನಾಡಿನಲ್ಲಿ ಸಂಭವಿಸಿರುವ ಗುಡ್ಡ ಕುಸಿತದ ದುರಂತಗಳು ಎಚ್ಚರಿಕೆಯ ಗಂಟೆಯಾಗಿದೆ. ಗುಡ್ಡ ಕುಸಿತಕ್ಕೆ ಮೂಲ ಕಾರಣ ಮರಗಳ ಕಡಿತಲೆ, ಜೊತೆಗೆ ಅವೈಜ್ಞಾನಿಕವಾಗಿ ಗುಡ್ಡ ಕತ್ತರಿಸಿ ನಿರ್ಮಿಸುವ ರಸ್ತೆಗಳಿಂದ. ಇದರಿಂದ ಎಚ್ಚೆತ್ತ ಸರ್ಕಾರ ಅನಧಿಕೃತವಾಗಿ ಮತ್ತು ಅರಣ್ಯ ಪ್ರದೇಶ ಒತ್ತುವರಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ಕುರಿತು ಅರಣ್ಯ ಖಾತೆ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ. ಈ ಸಂಬಂಧ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿರುವ ಸಚಿವರು, ಪಶ್ಚಿಮ ಘಟ್ಟದ ಎಲ್ಲ ಗಿರಿ ಪ್ರದೇಶಗಳಲ್ಲಿ ಅನಧಿಕೃತವಾಗಿ ಮತ್ತು ಅರಣ್ಯ ಪ್ರದೇಶ ಒತ್ತುವರಿ ಮಾಡಿ ನಿರ್ಮಿಸಲಾಗಿರುವ ಬಡಾವಣೆ, ತೋಟ, ಹೋಂ ಸ್ಟೇ ಮತ್ತು ರೆಸಾರ್ಟ್ ಗಳ ವಿರುದ್ಧ ಕ್ರಮ ಕೈಗೊಳ್ಳಲು, ಮತ್ತು ಅರಣ್ಯ ಒತ್ತುವರಿಯನ್ನು ತಕ್ಷಣದಿಂದಲೇ ತೆರವುಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮತ್ತು 1 ತಿಂಗಳೊಳಗೆ ಕೈಗೊಂಡ ಕ್ರಮದ ವಿವರದೊಂದಿಗೆ ಕಡತದಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.
ರಾಜ್ಯದ ಶಿರೂರು ಬಳಿ ಸಂಭವಿಸಿದ ಗುಡ್ಡ ಕುಸಿತದಲ್ಲಿ 11 ಅಮೂಲ್ಯ ಜೀವಗಳು ಬಲಿಯಾಗಿದ್ದರೆ, ನೆರೆ ರಾಜ್ಯ ಕೇರಳದ ವಯನಾಡಿನಲ್ಲಿ ಸಂಭವಿಸಿರುವ ಗುಡ್ಡ ಕುಸಿತದಲ್ಲಿ 250 ಮುಗ್ಧ ಜನರು ಮೃತಪಟ್ಟಿದ್ದು, 200ಕ್ಕೂ ಹೆಚ್ಚು ಜನರು ಕಣ್ಮರೆಯಾಗಿರುವುದು ಅತ್ಯಂತ ನೋವಿನ ಸಂಗತಿ. ಈ ದುರಂತಗಳು ನಮಗೂ ಎಚ್ಚರಿಕೆಯ ಗಂಟೆಯಾಗಿದ್ದು, ಪಶ್ಚಿಮ ಘಟ್ಟದ ಉಳಿವು ಹಿಂದೆಂಗಿಂತಲೂ ಇಂದು ಹೆಚ್ಚಾಗಿದೆ ಎಂದು ಹೇಳಿದ್ದಾರೆ.ಪ್ರಕೃತಿ ದತ್ತವಾದ ಪಶ್ಚಿಮ ಘಟ್ಟದ ಗುಡ್ಡಗಳು ಮತ್ತು ಶೋಲಾ ಅರಣ್ಯಗಳ ತಲೆ ಕಡಿದು ಕಾಫಿ ತೋಟ, ಮನೆ, ಹೋಂಸ್ಟೇ, ರೆಸಾರ್ಟ್ ಮಾಡುತ್ತಿರುವುದರಿಂದ ಹಾಗೂ ಬೇರಿನಿಂದ ಗಟ್ಟಿಯಾಗಿ ಮಣ್ಣು ಹಿಡಿದಿಡುವ ಬೃಹತ್ ಮರಗಳ ಕಡಿತಲೆ, ಅವೈಜ್ಞಾನಿಕವಾಗಿ ಗುಡ್ಡ ಕತ್ತರಿಸಿ ನಿರ್ಮಿಸುವ ರಸ್ತೆಗಳಿಂದ ಇಂತಹ ದುರಂತ ಮರುಕಳಿಸುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದೂ ತಿಳಿಸಿದ್ದಾರೆ.
ಗಿರಿ ಮತ್ತು ಘಟ್ಟ ಪ್ರದೇಶದಲ್ಲಿ ವಿಪರೀತ ವಾಹನಗಳ ಸಂಚಾರದಿಂದಲೂ ಅಪಾಯ ಎದುರಾಗುತ್ತಿದೆ. ವಾರಾಂತ್ಯದಲ್ಲಿ ಪ್ರವಾಸ, ಚಾರಣದ ಹೆಸರಲ್ಲಿ ಗಿರಿ ಮತ್ತು ಕಾನನ ಪ್ರದೇಶಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಬರುವುದೂ ಇಂತಹ ದುರಂತಗಳಿಗೆ ಪೂರಕವಾಗಿದೆ ಎಂದು ಉಲ್ಲೇಖಿಸಿದ್ದು, ಚಾರಣಕ್ಕೂ ಕಡಿವಾಣ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ

Categories
Uncategorized

ಕುಸಿಯೋ ಹಂತದಲ್ಲಿರೋ ಮನೆಗಳು: ಶಾಸಕರ ಭೇಟಿಗೆ ಪಟ್ಟು!

ಕುಸಿಯೋ ಹಂತದಲ್ಲಿರೋ ಮನೆಗಳು: ಶಾಸಕರ ಭೇಟಿಗೆ ಪಟ್ಟು!
– ಶೃಂಗೇರಿ ತಾಲೂಕಿನ ಬೋಳುಗಡ್ಡೆಯಲ್ಲಿ ಧರೆ ಕುಸಿತ
– ಕೊಪ್ಪ ತಾಲೂಕಿನ ಕಲ್ಲುಗುಡ್ಡೆಯಲ್ಲಿ ಭೀಕರ ಗುಡ್ಡ ಕುಸಿತ!
– ಅಪಾಯ ಆಗುವ ಮುನ್ನ ಅಧಿಕಾರಿಗಳ ಭೇಟಿಗೆ ಮನವಿ

NAMMUR EXPRESS NEWS
ಶೃಂಗೇರಿ: ಚಿಕ್ಟಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಬೋಳುಗಡ್ಡೆಯಲ್ಲಿ ಧರೆ ಕುಸಿತ ಉಂಟಾಗಿದೆ. ಪರಿಣಾಮ ಗ್ರಾಮದ ಹಲವು ಮನೆಗಳು ಹಾಗೂ ಮನೆಗಳ ಸಂಪರ್ಕಕ್ಕಿರುವ ಕಾಂಕ್ರೀಟ್ ರಸ್ತೆ ಕುಸಿಯುವ ಭೀತಿ ಎದುರಾಗಿದೆ. ಈ ಘಟನೆ ಸಂಭವಿಸಲು ಅವೈಜ್ಞಾನಿಕವಾಗಿ ಮಣ್ಣು ತೆಗೆದಿರುವುದೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಬಗ್ಗೆ ಶಾಸಕರು ಸ್ಥಳಕ್ಕೆ ಭೇಟಿ ನೀಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಏನಿದು ಘಟನೆ..??
ರಾಷ್ಟ್ರೀಯ ಹೆದ್ದಾರಿ 169 ರ ಪಕ್ಕದಲ್ಲಿರುವ ಜಾಗದ ಮಾಲೀಕರು ಕಳೆದ ಡಿಸೆಂಬರ್‌ನಲ್ಲಿ ಜಾಗದ ಮಣ್ಣನ್ನು ತೆಗೆದಿರುತ್ತಾರೆ. ಇದರಿಂದ ಮೇಲಿರುವ ಮನೆಗಳಿಗೆ ಹಾನಿಯಾಗುವ ಎಲ್ಲಾ ಮುನ್ಸೂಚನೆಯಿದ್ದರೂ ಯಾವುದೇ ಮುಂಜಾಗ್ರತೆ ವಹಿಸದೆ ಅವೈಜ್ಞಾನಿಕವಾಗಿ ಮಣ್ಣು ತೆಗೆದಿರುತ್ತಾರೆ.ಈ ಬಗ್ಗೆ ಗ್ರಾಮಸ್ಥರು ಪ್ರಶ್ನಿಸಿದರು ತನಗಿರುವ ರಾಜಕೀಯ ಪ್ರಾಬಲ್ಯದಿಂದ ಯಾರ ಮಾತನ್ನು ಲೆಕ್ಕಿಸದೆ ಮಣ್ಣು ತೆಗೆದಿದ್ದಾರೆ. ಕೊನೆಗೆ ಆ ಭಾಗದ ಪಂಚಾಯ್ತಿ ಸದಸ್ಯರ ಮಧ್ಯಪ್ರವೇಶದ ಬಳಿಕ ತಹಶೀಲ್ದಾರ್‌ಗೆ ಕರೆ ಮಾಡಿ ವಿಷಯ ತಿಳಿಸಲಾಗಿತ್ತು ನಂತರ ಹಲವು ಬಾರಿ ತಡೆಗೋಡೆ ಇತರ ಸುರಕ್ಷತಾ ಕ್ರಮಗಳಿಗಾಗಿ ಮನವಿ ಮಾಡಿದ್ದರು ಅದನ್ನ ಲೆಕ್ಕಿಸದೆ ಜಾಗದ ಮಾಲೀಕರು ಸುಮ್ಮನಾಗಿದ್ದರು. ಕಳೆದ ಹಲವು ದಿನಗಳಿಂದ ಸುರಿದ ಭಾರೀ ಮಳೆಗೆ ದಿನದಿಂದ ದಿನಕ್ಕೆ ಧರೆ ಕುಸಿಯುತ್ತಿದ್ದು ಪರಿಣಾಮ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕಾಂಕ್ರೀಟ್ ರಸ್ತೆ ಕೂಡ ಬಿರುಕು ಬಿಟ್ಟಿದೆ. ಸನಿಹದಲ್ಲಿರುವ 4-5 ಮನೆಗಳಿಗೆ ಕುಸಿಯುವ ಭೀತಿ ಎದುರಾಗಿದೆ. ಎಲ್ಲರೂ ದಿನಗೂಲಿ ಬಡ ಕಾರ್ಮಿಕರೇ ವಾಸಿಸುತ್ತಿದ್ದು ಇದ್ದ ಒಂದು ಸೂರು ಕಳೆದಕೊಂಡರೆ ಮುಂದೇನು ಅನ್ನೋ ಯೋಚನೆ ಶುರುವಾಗಿದೆ.

ಅಡ್ಡಹಾಕಿದರೂ ನಿಲ್ಲಿಸಿ ಸಮಸ್ಯೆ ಆಲಿಸದ ಉಸ್ತುವಾರಿ ಸಚಿವರರು!

ಕಳೆದ ವಾರ ಶೃಂಗೇರಿ ತಾಲೂಕಿನ ನೆರೆ ಪೀಡಿತ ಹಾಗೂ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ ಇತ್ತು. ಈ ಸಂದರ್ಭದಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ಮನವಿ ಮಾಡಲು ಕಾದು ಅಡ್ಡ ಹಾಕಿದ್ದಾರೆ. ಆದರೆ ಯಾವುದೇ ವಾಹನ ನಿಲ್ಲಿಸದೇ ಮುಂದೆ ಹೋಗಿದ್ದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ನಂತರ ತಹಶೀಲ್ದಾರ್‌ರವರು ಬಂದು ಭೇಟಿ ನೀಡಿ ಹೋಗಿದ್ದರು.

ಸಿಗದ ಸೂಕ್ತ ಪರಿಹಾರ,ಭದ್ರತೆಯ ಭರವಸೆ ಸ್ಥಳಕ್ಕೆ ಶಾಸಕರ ಭೇಟಿಗೆ ಮನವಿ

ಸೂಕ್ತ ಪರಿಹಾರ,ಭದ್ರತೆಗಾಗಿ ಹಾಗೂ ಬಡಜನರ ಮಾತನ್ನು ಕೇಳದೇ ತನಗಿರುವ ರಾಜಕೀಯ ಪ್ರಭಾವ ಬಳಸಿ ಯಾರ ಮಾತಿಗೂ ತಲೆಕೆಡಿಸಿಕೊಳ್ಳದ ಜಾಗದ ಮಾಲೀಕನ ವಿರುದ್ಧ ಗ್ರಾಮಸ್ಥರು ಪೋಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಜಾಗದ ಮಾಲೀಕನಿಗೆ ಶೃಂಗೇರಿ ಕ್ಷೇತ್ರದ ಶಾಸಕರ ಬೆಂಬಲವಿದೆ ಎನ್ನಲಾಗುತ್ತಿದ್ದು ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಭದ್ರತೆ,ಪರಿಹಾರ ಕೊಡಿಸುವಂತೆ ಸಂತ್ರಸ್ತ ಗ್ರಾಮಸ್ಥರು ಪಟ್ಟುಹಿಡಿದ್ದಾರೆ.

ಕೊಪ್ಪ ತಾಲೂಕಿನ ಕಲ್ಲುಗುಡ್ಡೆಯಲ್ಲಿ ಭೀಕರ ಗುಡ್ಡ ಕುಸಿತ!

ಕೊಪ್ಪ ತಾಲೂಕಿನ ಅತ್ತಿಕೊಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲುಗುಡ್ಡೆ ಸಮೀಪದ ಅಂಡಿಗಲ್ಲು ರಾಘವೇಂದ್ರ ಎ ಜೆ ಯವರ ಮನೆ ಹತ್ತಿರ ಗುಡ್ಡ ಕುಸಿದು ಸುಮಾರು 400 ಟ್ರ್ಯಾಕ್ಟರ್‌ ಆಗುವಷ್ಟು ಮಣ್ಣು ಬಿದ್ದಿದ್ದು ಸುಮಾರು 50 ರಿಂದ 100 ಅಡಿ ಧರೆ ಕುಸಿತವಾಗಿದ್ದು, ಗೋಡೆ ಕುಸಿತವಾಗುವ ಸಂಭವವಿದೆ. ಗುರುವಾರ ರಾತ್ರಿಯಿಂದ ಶುರುವಾದ ಈ ಕುಸಿತ ಇನ್ನೂ ಬೀಳುತ್ತಲೆ ಇದ್ದು ರಸ್ತೆ ಸಂಪರ್ಕ ಕಡಿತವಾಗಿದೆ. ಈ ಇನ್ನಲೇ ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮುಂದಾಗುವ ಅನಾಹುತ ತಪ್ಪಿಸಲಿ ಎಂಬುದು ಸ್ಥಳೀಯರ ಮನವಿ ಮಾಡಿದ್ದಾರೆ.

Categories
ರಾಜ್ಯ

ವಿಷ ಬೇರೆತ ಮಟನ್ ತಿಂದು ಕುಟುಂಬದ ನಾಲ್ವರ ಸಾವು!

ವಿಷ ಬೇರೆತ ಮಟನ್ ತಿಂದು ಕುಟುಂಬದ ನಾಲ್ವರ ಸಾವು!
– ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನಲ್ಲಿ ಘಟನೆ.. ಆಕಸ್ಮಿಕವೋ…? ಆತ್ಮಹತ್ಯೆಯೋ..?

– ಮೂವರು ಗಂಡರ ಮುದ್ದಿನ ಹೆಂಡತಿ ಮೇಲೆ 2ನೇ ಗಂಡನ ದೂರು
– ಸಾವಿನಲ್ಲೂ ಒಂದಾದ ಅಣ್ಣ ತಂಗಿ: ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ
– ಯುವತಿಯನ್ನು ಬೆತ್ತಲೆ ಮಾಡಿ ಖಾರದ ಪುಡಿ ಹಾಕಿ ಹಲ್ಲೆ: ಐವರು ಮಂಗಳಮುಖಿಯರು ಅರೆಸ್ಟ್!
– ಆಟವಾಡುತ್ತಾ ಮೆಟ್ರೋ ಟ್ರ್ಯಾಕ್‌ಗೆ ಜಿಗಿದ 4 ವರ್ಷದ ಮಗು!

NAMMUR EXPRESS NEWS
ರಾಯಚೂರು: ವಿಷ ಬೆರೆತ ಮಟನ್ ಊಟ ಮಾಡಿ ಒಂದೇ ಕುಟುಂಬದ ನಾಲ್ವರು ಸಾವಿಗೀಡಾದ ಘೋರ ಘಟನೆ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನಲ್ಲಿ ನಡೆದಿದೆ. ಇನ್ನೊಬ್ಬ ಮಗಳ ಸ್ಥಿತಿ ಚಿಂತಾಜನಕವಾಗಿದೆ.
ಫುಡ್ ಪಾಯಿಸನ್‌ನಿಂದ ಹೀಗಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಆದರೆ ಆತ್ಮಹತ್ಯೆ ಸಾಧ್ಯತೆಯ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ರಾಯಚೂರು ಜಿಲ್ಲೆ ಸಿರವಾರ ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ಈ ದುರಂತ ನಡೆದಿದೆ. ಭೀಮಣ್ಣ (60), ಭೀಮಣ್ಣನ ಪತ್ನಿ ಈರಮ್ಮ (54), ಭೀಮಣ್ಣನ ಮಗ ಮಲ್ಲೇಶ್ (19), ಮಗಳು ಪಾರ್ವತಿ (17) ಸಾವಿಗೀಡಾದವರು. ಮತ್ತೊಬ್ಬ ಮಗಳು ಮಲ್ಲಮ್ಮ (18) ಎಂಬಾಕೆಯ ಸ್ಥಿತಿ ಗಂಭೀರವಾಗಿದೆ. ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಬುಧವಾರ ರಾತ್ರಿ ಇಡೀ ಕುಟುಂಬ ಮಟನ್ ಕೊಂಡು ತಂದು ಅಡುಗೆ ಮಾಡಿ ಜೊತೆಯಾಗಿ ಊಟ ಮಾಡಿತ್ತು. ಮಟನ್ ಮಾಡುವ ವೇಳೆ ಅಡುಗೆಯಲ್ಲಿ ಹಲ್ಲಿ ಬಿದ್ದಿರಬಹುದು ಎಂಬ ಶಂಕೆಯಿದೆ. ಸ್ಥಳಕ್ಕೆ ಸಿರವಾರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ. ಇದು ಫುಡ್ ಪಾಯ್ಸನ್ ಅಲ್ವ, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದೂ ಕೆಲವರು ತರ್ಕಿಸಿದ್ದಾರೆ. ಎಂಎಲ್‌ಸಿ ವರದಿ ಆಧರಿಸಿ ಫುಡ್ ಪಾಯ್ಸನ್‌ ಅಂತ ಪ್ರಾಥಮಿಕ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ. ಆತ್ಮಹತ್ಯೆ ಆರೋಪದ ಹಿನ್ನೆಲೆಯಲ್ಲಿ ಆ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಮೂವರು ಗಂಡರ ಮುದ್ದಿನ ಹೆಂಡತಿ ಮೇಲೆ 2ನೇ ಗಂಡನ ದೂರು!

ಚಿಕ್ಕಬಳ್ಳಾಪುರ: ಇನ್‌ಸ್ಟಾಗ್ರಾಂನಲ್ಲಿ ಲವ್ ಆಗಿ ಓಡಿಹೋಗುವ, ಅಥವಾ ಇರುವ ಗಂಡನ ಅಥವಾ ಹೆಂಡತಿಯ ಬಿಟ್ಟು ಇನ್ನೊಬ್ಬರ ಜೊತೆ ಪರಾರಿಯಾಗುವ ಪ್ರಕರಣಗಳು ಹೆಚ್ಚುತ್ತಿವೆ. ಇದು ಅಂಥದೇ ಇನ್ನೊಂದು ಪ್ರಕರಣ. ಇದೂ ಕೂಡ ಇನ್‌ಸ್ಟಗ್ರಾಂನಲ್ಲಿ ಹುಟ್ಟಿಕೊಂಡ ಪ್ರೀತಿ ದಾಂಪತ್ಯವನ್ನು ಹಾಳು ಮಾಡಿದ ಕಥೆ. ಮೂವರು ಗಂಡರ ಮುದ್ದಿನ ಹೆಂಡತಿಯ ಪ್ರಕರಣದಲ್ಲಿ ಎರಡನೇ ಗಂಡ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾನೆ.
ಬೆಳಗಾವಿಯಲ್ಲಿ ಯುವತಿ ಇನ್‌ಸ್ಟಾಗ್ರಾಮ್‌ನಲ್ಲಿ ಲವ್ ಮಾಡಿ ಇನ್ನೊಬ್ಬನನ್ನು ಮದುವೆ ಆದ ಪ್ರಕರಣದಲ್ಲಿ ಇದೀಗ ಎರಡನೇ ಗಂಡನೇ ಪೋಲೀಸರಿಗೆ ದೂರು ನೀಡಿದ್ದಾನೆ. ಶಿಡ್ಲಘಟ್ಟದಲ್ಲಿ ದೂರು ದಾಖಲಾಗಿದೆ. ಯುವತಿ ಪ್ರಿಯಾಂಕ ಸುಳ್ಳು ಆರೋಪ
ಮಾಡಿ ನನ್ನ ತೇಜೋವಧೆ ಮಾಡುತ್ತಿದ್ದಾಳೆ. ಆಕೆ ಕಾರು ಬಾಡಿಗೆ ಹೋಗಿದ್ದ ವೇಳೆ ಪರಿಚಯವಾಗಿದ್ದಳು. ಒಂದು ವಾರ ಫೋನ್‌ನಲ್ಲಿ ಮಾತನಾಡಿ ನಂತರ ನನ್ನ ಜೊತೆಯಲ್ಲಿ ಬಂದಳು. 8 ತಿಂಗಳಿನಿಂದ ನನ್ನ ಜೊತೆಯಲ್ಲಿ ಇದ್ದಳು ಎಂದು ಎರಡನೇ ಗಂಡ ದೂರಿದ್ದಾನೆ.

ಬೆಳಗಾವಿಗೆ ಸ್ನೇಹಿತೆಯ ಮದುವೆಯಿದೆ ಎಂದು ಹೇಳಿ ಹೋದಳು. ಸ್ವಂತ ಮಾವ ನನ್ನ ಕೂಡಿ ಹಾಕಿ ಕಿರುಕುಳ ನೀಡುತ್ತಿದ್ದ ಎಂದು ಆರೋಪ ಮಾಡಿದ್ದಾಳೆ. ಆ ಆರೋಪ ಸುಳ್ಳು, ನಾನು ಅವರ ಸೋದರ ಮಾವ ಅಲ್ಲ. ನಮಗೂ ಅವರಿಗೂ ಯಾವುದೇ ರೀತಿ ಸಂಬಂಧ ಇಲ್ಲ. ನನ್ನ ಮದುವೆಗೂ ಮುನ್ನ ಆಕೆಯ ಮೊದಲೇ ಮದುವೆ ಆಗಿತ್ತು. ನನ್ನ ಜೊತೆಯಲ್ಲಿ ಬಂದಾಗ ಅವಳ ಮೊದಲನೇ ಗಂಡ ಮುನಿರಾಜು ಬಂದು ವಾಪಸ್ ಕರೆದುಕೊಂಡು ಹೋಗಿದ್ದರು. ಆಕೆ ಮತ್ತೆ ನಾನೇ ಬೇಕು ಎಂದು ವಾಪಸ್‌ ಬಂದಳು. ಆರೋಪ ಎಲ್ಲಾ ಸುಳ್ಳು ಎಂದು ಪ್ರಿಯಾಂಕ ವಿರುದ್ಧ ಎರಡನೇ ಗಂಡ ದೂರು ನೀಡಿದ್ದಾನೆ. ಈಕೆ ಮೊದಲು ಚಿಕ್ಕಬಳ್ಳಾಪುರದ ಮುನಿರಾಜು ಎಂಬವರನ್ನು ಮದುವೆಯಾಗಿದ್ದಳು. ನಂತರ ಶಿಡ್ಲಘಟ್ಟದ ಸುಧಾಕ‌ರ್ ಜೊತೆಗೆ ಎರಡನೇ ಮದುವೆಯಾಗಿದ್ದಳು. ಈತನ ಜೊತೆಗೆ ಪ್ರೀತಿ ಇನ್‌ಸ್ಟಗ್ರಾಂ ಮೂಲಕ ಹುಟ್ಟಿಕೊಂಡದ್ದು ಎನ್ನಲಾಗಿತ್ತು. ಇದೀಗ ಬೆಳಗಾವಿ ಮೂಲದ ರೋಹಿತ್ ಎಂಬಾತನ ಜೊತೆಗೆ ಮೂರನೇ ಮದುವೆಯಾಗಿದೆ ಎನ್ನಲಾಗಿದೆ. ಈ ಪ್ರಕರಣದ ಬೆನ್ನು ಬಿದ್ದಿರುವ ಪೊಲೀಸರಿಗೆ ತಲೆ ಕೆಡುವ ಹಾಗೆ ಆಗುತ್ತಿದೆ.

ಸಾವಿನಲ್ಲೂ ಒಂದಾದ ಅಣ್ಣ ತಂಗಿ ; ರೈಲಿಗೆ ತಲೆ ಕೊಟ್ಟು ಇಬ್ಬರು ಆತ್ಮಹತ್ಯೆಗೆ ಶರಣು..!

ಚಿಕ್ಕಬಳ್ಳಾಪುರ : ರೈಲಿಗೆ ತಲೆ ಕೊಟ್ಟು ಅಣ್ಣ-ತಂಗಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ನಗರದಲ್ಲಿ ನಡೆದಿದೆ. ಮೃತರನ್ನು ಪ್ರಭು (25) ನವ್ಯ (23) ಎಂದು ಗುರುತಿಸಲಾಗಿದೆ. ಮೃತರನ್ನು ಶಿಡ್ಲಘಟ್ಟ ಪ್ರೇಮನಗರದವರು ಎಂದು ತಿಳಿದು ಬಂದಿದೆ. ಪ್ರಭು ಹಾಗೂ ನವ್ಯರ ತಾಯಿ ತೀರಿಕೊಂಡ ಹಿನ್ನೆಲೆ ಇಬ್ಬರು ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದೆ. ಈ ಹಿನ್ನೆಲೆ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಶಿಡ್ಲಘಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಯುವತಿಯನ್ನು ಬೆತ್ತಲೆ ಮಾಡಿ ಹಲ್ಲೆ ಕೇಸ್‌: ಐವರು ಮಂಗಳಮುಖಿಯರು ಅರೆಸ್ಟ್!

ವಿಜಯಪುರ : ಯುವತಿ ಬೆತ್ತಲೆ ಮಾಡಿ ಖಾಸಗಿ ಅಂಗಕ್ಕೆ ಖಾರದ ಪುಡಿ ಹಾಕಿ ಹಲ್ಲೆ ಮಾಡಿದ ಕೇಸ್ ಗೆ ಸಂಬಂಧಿಸಿದಂತೆ ಐವರು ಮಂಗಳಮುಖಿಯರನ್ನು ಅರೆಸ್ಟ್ ಮಾಡಲಾಗಿದೆ.
ನಗರದ ಕೇಂದ್ರ ಬಸ್ ನಿಲ್ದಾಣದ ಬಳಿ ಜುಲೈ 21 ರಂದು ಯುವತಿಯನ್ನು ಸಂಪೂರ್ಣ ಬೆತ್ತಲೆ ಮಾಡಿ ಗುಪ್ತಾಂಗಕ್ಕೆ ಖಾರದ ಪುಡಿ ಹಾಕಿ ಹಲ್ಲೆ ಮಾಡಿರುವ ವಿಡಿಯೋ ವೈರಲ್ ಆಗಿತ್ತು.
ಬಳಿಕ ಎಚ್ಚೆತ್ತ ಪೊಲೀಸ್‌ ಇಲಾಖೆ, ವಿಡಿಯೋ ವೈರಲ್ ಆದ 24 ಗಂಟೆಗಳಲ್ಲಿ ಐವರು ಮಂಗಳಮುಖಿಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಹಲ್ಲೆಗೊಳಗಾದ ಯುವತಿ (ರೇಖಾ ರೆಡ್ಡಿ ಉರ್ಪ್ ಸಚಿವ ರೆಡ್ಡಿ) ಅವರು 6 ಮಂಗಳಮುಖಿಯರ ಮೇಲೆ ನಗರದ ಗೋಲಗುಂಬಜ್ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಸದ್ಯ ಮಂಗಳಮುಖಿಯರಾದ ಅಶ್ವಿನಿ, ಹುಲಿಗೆಮ್ಮಾ, ಕವಿತಾ, ದಾನಮ್ಮಾ ಹಾಗೂ ಮಾಹನಮ್ಮಾ ಅವರನ್ನು ಬಂಧಿಸಲಾಗಿದೆ. ಈ ಹಲ್ಲೆಯ ಕುರಿತು ತನಿಖೆ ಮಾಡಲಾಗುತ್ತಿದೆ, ತನಿಖೆ ನಂತರ ಹೆಚ್ಚಿನ ಮಾಹಿತಿ ಸಿಗಲಿದೆ.

ಆಟವಾಡುತ್ತಾ ಮೆಟ್ರೋ ಟ್ರ್ಯಾಕ್‌ಗೆ ಜಿಗಿದ 4 ವರ್ಷದ ಮಗು!

ಬೆಂಗಳೂರು: ನಾಲ್ಕು ವರ್ಷದ ಮಗುವೊಂದು ಆಟವಾಡುತ್ತಾ ಮೆಟ್ರೋ ಟ್ರ್ಯಾಕ್‌ಗೆ ಜಿಗಿದಿದೆ.
ಬೆಂಗಳೂರಿನ ಬೈಯಪ್ಪನಹಳ್ಳಿ ಮೆಟ್ರೋ ಸ್ಟೇಷನ್‌ನಲ್ಲಿ ಘಟನೆ ನಡೆದಿದೆ. ಮೆಟ್ರೋ ರೈಲು ಬರಲು 5 ನಿಮಿಷಗಳು ಬಾಕಿ ಇದ್ದು. ಈ ವೇಳೆ ಆಟವಾಡುತ್ತಾ ಮಗು ಟ್ರ್ಯಾಕ್ ಮುಂದೆ ಬಂದಿದೆ. ಬಗ್ಗಿ ನೋಡುವಾಗ ಆಕಸ್ಮಿಕವಾಗಿ ಆಯತಪ್ಪಿ ಟ್ರ್ಯಾಕ್‌ಗೆ ಬಂದಿದೆ. ಮಗು ಟ್ರ್ಯಾಕ್‌ಗೆ ಬಿದ್ದ ತಕ್ಷಣ ಅಲರ್ಟ್ ಆದ ಮೆಟ್ರೋ ಸಿಬ್ಬಂದಿ, ಮೆಟ್ರೋ ಟ್ರ್ಯಾಕ್‌ನ ಪವರ್ ಕಟ್ ಮಾಡಿಸಿದ್ದಾರೆ.
ಕೂಡಲೇ ಟ್ರ್ಯಾಕ್‌ಗೆ ಇಳಿದು ಮಗುವನ್ನು ರಕ್ಷಣೆ ಮಾಡಿದ್ದಾರೆ. ಅದೃಷ್ಟವಶಾತ್ ಮಗುವಿಗೆ ಯಾವುದೇ ಅಪಾಯವಾಗಿಲ್ಲ. ಇನ್ನೂ ಈ ಘಟನೆಯಿಂದ ಬೈಯಪ್ಪನಹಳ್ಳಿ ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಿತ್ತು. ಇಬ್ಬರೂ ಮೆಟ್ರೋ ಸೆಕ್ಯುರಿಟಿ ಗಾರ್ಡ್‌ಗಳಿಂದ ಮಗುವಿನ ಪ್ರಾಣ ಉಳಿದಿದೆ. ಮಗುವಿಗೆ ಯಾವುದೇ ಗಾಯಗಳು ಆಗದ ರೀತಿಯಲ್ಲಿ ಮೆಟ್ರೋ ವಿದ್ಯುತ್ ಲೈನ್ ಆಫ್ ಮಾಡಿದ್ದಾರೆ. ಮೆಟ್ರೋ ಸೆಕ್ಯುರಿಟಿಗಳು, ಸಿಬ್ಬಂದಿ ಚೂರು ಯಾಮಾರಿದರೂ ಮಗುವಿನ ಪ್ರಾಣ ಹೋಗುತ್ತಿತ್ತು ಎಂಬ ಮಾಹಿತಿ ಇದೆ.

 

Categories
ಶಿವಮೊಗ್ಗ

ಎನ್.ಆರ್.ಪುರ ತಾಲೂಕಲ್ಲಿ ಹಲವೆಡೆ ಅವಾಂತರ: ದುರಂತ!

ಎನ್.ಆರ್.ಪುರ ತಾಲೂಕಲ್ಲಿ ಹಲವೆಡೆ ಅವಾಂತರ: ದುರಂತ!
– ಎನ್ ಆರ್ ಪುರ – ಶಿವಮೊಗ್ಗ ಮುಖ್ಯರಸ್ತೆಯಲ್ಲಿ ಹೂತು ಹೋದ ಬಸ್
– ಕಟ್ಟಿನಮನೆ ಗ್ರಾಮದ ವ್ಯಾಪ್ತಿಯಲ್ಲಿ ಭೂ ಕುಸಿತ
– ಮಳೆಗೆ ಮರ ಕೊಳೆಯುತ್ತಿದೆ!: ಎನ್.ಆರ್.ಪುರ ಆಸ್ಪತ್ರೆಯ ಅವ್ಯವಸ್ಥೆ

NAMMUR EXPRESS NEWS
ಎನ್.ಆರ್.ಪುರ: ಎನ್.ಆರ್.ಪುರತಾಲೂಕಿನ ಕುದುರೆಗುಂಡಿ- ಕಟ್ಟಿನಮನೆ ಮಾರ್ಗದ ಮೂಲಕ ಚಿಕ್ಕಗ್ರಹಾರಕ್ಕೆ ಹೋಗುವ ಪ್ರಮುಖ ರಸ್ತೆಯ ಪಕ್ಕ ಕಟ್ಟಿನಮನೆ ಗ್ರಾಮದ ವ್ಯಾಪ್ತಿಯಲ್ಲಿ ಭೂ ಕುಸಿತ ಉಂಟಾಗಿದ್ದು ಇದರಿಂದ ರಸ್ತೆ ಕುಸಿಯುವ ಭೀತಿ ಎದುರಾಗಿದೆ.
ಮುತ್ತಿನಕೊಪ್ಪ ಗ್ರಾ ಪಂ ವ್ಯಾಪ್ತಿಯ ಬೈರಾಪುರ ಗ್ರಾಮದ ಜಮೀನಿಗೆ ನೀರು ನುಗ್ಗಿದೆ,ಇದೇ ಗ್ರಾಮದ ಮೋರಿ ಹಾಗೂ ರಸ್ತೆಗೆ ಹಾನಿಗಿದೆ.
ಪಟ್ಟಣದ ವಾರ್ಡ್ ನಂ.04 ಮತ್ತು ವಾರ್ಡ್ ನಂ.05ರಲ್ಲಿ ಒಂದೊಂದು ಒಟ್ಟು ಎರಡು ಮನೆಯ ಗೋಡೆ ಕುಸಿದಿದ್ದು, ವಾರ್ಡ್ ನಂ.03 ರ ಪೌರ ಕಾರ್ಮಿಕರ ಕಾಲೋನಿಯಲ್ಲಿ ಕುರಿಗಳನ್ನು ಕಟ್ಟಿದ್ದ ಕಟ್ಟಡ ಕುಸಿದು ಒಂದು ಕುರಿ ಮೃತಪಟ್ಟಿದೆ.
ಗುರುವಾರ ಬೆಳಿಗ್ಗೆಯಿಂದ ಮಳೆ ಪ್ರಮಾಣ ಕಡಿಮೆಯಿತ್ತಾದರೂ ಹಾನಿಯ ಪ್ರಮಾಣ ಎಲ್ಲೆಡೆ ವರದಿಯಾಗಿದೆ ಸಂಜೆ ವೇಳೆಗೆ ಮತ್ತೆ ಮಳೆಯ ಪ್ರಮಾಣ ಹೆಚ್ಚಾಗಿತ್ತು.

ಎನ್ ಆರ್ ಪುರ – ಶಿವಮೊಗ್ಗ ಮುಖ್ಯರಸ್ತೆ ಕುಸಿತ

ಎನ್ ಆರ್ ಪುರ – ಶಿವಮೊಗ್ಗ ಮುಖ್ಯರಸ್ತೆ ಹಾರೆಕೊಪ್ಪ ಎಂಬಲ್ಲಿ ಹಿಂದಿನಿಂದಲೂ ರಸ್ತೆ ಮಧ್ಯೆ ಜರಿ ನೀರು ಹರಿಯುತ್ತಾ ರಸ್ತೆ ಉಬ್ಬುತ್ತಿತ್ತು ಅದಕ್ಕೆ ತಾತ್ಕಾಲಿಕವಾಗಿ ತೇಪೆ ಹಾಕಿ ನಂತರ ರಸ್ತೆಗೆ ಟಾರ್ ಎಳೆಯಲಾಗಿತ್ತು. ಹಲವು ಗುರುವಾರದ ದಿನ ಸುರಿದ ವಿಪರೀತ ಮಳೆಗೆ ಟಾರ್ ಮತ್ತೆ ಉಬ್ಬಿಕೊಂಡಿದೆ.
ಶಿವಮೊಗ್ಗದಿಂದ ಎನ್ ಆರ್ ಪುರ ಕಡೆಗೆ ಬರುವ ಖಾಸಗಿ ಬಸ್‌ವೊಂದು ಇದರ ಮೇಲೆ ಹತ್ತಿದ್ದರಿಂದ ಬಸ್‌ನ ಮುಂದಿಯ ಚಕ್ರ ಅಲ್ಲೇ ಹೂತುಕೊಂಡಿತು. ಬಸ್‌ನ ವೇಗ ಕಡಿಮೆಯಿದ್ದುದ್ದರಿಂದ ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ. ನಂತರ ಸ್ಥಳೀಯರ ಸಹಾಯದಿಂದ ಹೂತಿದ್ದ ಬಸ್‌ನ ಚಕ್ರವನ್ನು ಮೇಲೆತ್ತುವ ಕಾರ್ಯ ಮಾಡಲಾಯಿತು. ಸ್ಥಳೀಯ ಗ್ರಾ ಪಂ ಸದಸ್ಯರು ಗ್ರಾಮಸ್ಥರ ಸಹಕಾರದೊಂದಿಗೆ ರಸ್ತೆಯ ಗುಂಡಿ ಮುಚ್ಚುವ ಕಾರ್ಯ ಮಾಡಲಾಗಿದೆ.

ಮಳೆಗೆ ಮರ ಕೊಳೆಯುತ್ತಿದೆ!

ಡೆಂಗ್ಯೂ ಜ್ವರ ವ್ಯಾಪಕವಾಗಿ ಹರಡುತ್ತಿರುವ ಇಂತಹ ಸಮಯದಲ್ಲಿ ನರಸಿಂಹರಾಜಪುರ ಸಾರ್ವಜನಿಕ ಆಸ್ಪತ್ರೆಯ ಆವರಣದ ಒಳಗೆ ಮರ ಕಡಿದು ಹಾಕಿ ಹತ್ತು ದಿನದಗಳೇ ಕಳೆದಿದೆ. ಮಳೆಗೆ ಎಲೆಗಳು ಕೊಳೆತು ವಾಸನೆ ಬರಲು ಪ್ರಾರಂಭವಾಗಿದ್ದು ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಬೇಕಿದೆ.

Categories
ಉಡುಪಿ

ಉಡುಪಿಯಲ್ಲಿ ಮಾಸ್ಕ್ ಗ್ಯಾಂಗ್ ಕಳ್ಳತನ ಪ್ಲಾನ್!

ಉಡುಪಿಯಲ್ಲಿ ಮಾಸ್ಕ್ ಗ್ಯಾಂಗ್ ಕಳ್ಳತನ ಪ್ಲಾನ್!
– ನಾಲ್ಕು ಮಂದಿ ಮುಸುಕುಧಾರಿಗಳಿಂದ ಪ್ಲಾಟ್ಗಳಲ್ಲಿ ಕಳ್ಳತನಕ್ಕೆ ವಿಫಲ ಯತ್ನ, ಕೃತ್ಯ ಸಿಸಿಟಿವಿಯಲ್ಲಿ ಸೆರೆ
– ಮಂಗಳೂರು: ಸಾಲ ಕೊಡಿಸುವುದಾಗಿ ನಂಬಿಸಿ ಹಲವರಿಗೆ ಗೋಲ್ಮಾಲ್

NAMMUR EXPRESS NEWS
ಉಡುಪಿ: ಮಂಗಳೂರಲ್ಲಿ ಚಡ್ಡಿ ಗ್ಯಾಂಗ್ ಬಂಧನ ಬಳಿಕ ಕುಂದಾಪುರದಲ್ಲಿ ಅಧಿಕಾರಿಗಳ ಸೋಗಿನಲ್ಲಿ ಕಳ್ಳತನಕ್ಕೆ ಯತ್ನ ನಡೆದ ಬೆನ್ನಲ್ಲೇ ಇದೀಗ ಮತ್ತೊಂದು ಕಳ್ಳರ ತಂಡ ಆತಂಕ ಸೃಷ್ಟಿ ಮಾಡಿದೆ.
ಉಡುಪಿ ನಗರದ ಬ್ರಹ್ಮಗಿರಿಯ ಭಾಗದ ಅಪಾರ್ಟ್ ಮೆಂಟ್ ನ ಪ್ಲಾಟ್ ವೊಂದಕ್ಕೆ ನಾಲ್ಕು ಮಂದಿ ಮುಸುಕುಧಾರಿಗಳು ನುಗ್ಗುಲು ಯತ್ನಿಸಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ ಘಟನೆ ಆ. 1 ರಂದು ಮುಂಜಾನೆ ನಡೆದಿದೆ.
ಮುಸುಕುಧಾರಿ ಆಗಂತುಕರು ರಾಡ್‌ಗಳನ್ನು ಹಿಡಿದು ಶಸ್ತ್ರಸಜ್ಜಿತವಾಗಿ ಅಪಾರ್ಟ್ ಮೆಂಟ್‌ಗೆ ನುಗ್ಗಲು ಯತ್ನಿಸಿದ್ದಾರೆ. ಈ ಘಟನೆಯ ಸಿಸಿಟಿವಿ ದೃಶ್ಯಗಳು ಲಭ್ಯವಾಗಿದ್ದು, ಇದರಲ್ಲಿ ನಾಲ್ವರು ವ್ಯಕ್ತಿಗಳು ತಮ್ಮ ಮುಖವನ್ನು ಬಟ್ಟೆಯಿಂದ ಮುಚ್ಚಿಕೊಂಡು ಫ್ಲಾಟ್‌ನ ಒಳಗೆ ನುಗ್ಗಲು ಯತ್ನಿಸಿರುವುದು, ಅಪಾರ್ಟ್‌ ಮೆಂಟ್‌ಗೆ ಪ್ರವೇಶಿಸಲು ವಿಫಲರಾಗಿ ಸ್ಥಳದಿಂದ ಹಿಂತಿರುಗಿರುವುದು ಸೆರೆಯಾಗಿದೆ. ಮುಸುಕುಧಾರಿಗಳು ಒಳನುಗ್ಗಲು ಯತ್ನಿಸಿದ ಫ್ಲಾಟ್‌ನಲ್ಲಿ ವಯಸ್ಸಾದ ದಂಪತಿಗಳು ವಾಸಿಸುತ್ತಿದ್ದರು. ಈ ದಂಪತಿಗಳು ಒಂದು ವಾರದ ಹಿಂದಷ್ಟೇ ಮುಂಬೈಗೆ ಪ್ರಯಾಣ ಬೆಳೆಸಿದ್ದರು. ಈ ನಾಲ್ವರು ಶಸ್ತ್ರಸಜ್ಜಿತ ಮುಸುಕುಧಾರಿಗಳು ಹಲವಾರು ಖಾಲಿ ಅಪಾರ್ಟ್‌ ಮೆಂಟ್‌ಗಳಿಗೆ ನುಗ್ಗಿ ಬೆಲೆಬಾಳುವ ವಸ್ತುಗಳ ಹುಡುಕಾಡುವ ಜೊತೆಗೆ ಅಪಾರ ಹಾನಿಯನ್ನುಂಟುಮಾಡಿರುತ್ತಾರೆ.ಇನ್ನು ಈ ನಾಲ್ವರು ಒಂದೇ ಬಡಾವಣೆಯ ಒಟ್ಟು ಮೂರು ಅಪಾರ್ಟ್ ಮೆಂಟ್ ಕಟ್ಟಡಗಳಲ್ಲಿ ದರೋಡೆಗೆ ಯತ್ನಿಸಿದ್ದರು.

ಸಾಲ ಕೊಡಿಸುವುದಾಗಿ ನಂಬಿಸಿ ಹಲವರಿಗೆ ಗೋಲ್ಮಾಲ್

ಮಂಗಳೂರು: ವ್ಯಕ್ತಿಯೋರ್ವ ಕೇಂದ್ರ ಸರಕಾರದ ಮುದ್ರಾ ಯೋಜನೆಯಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ಸಾರ್ವಜನಿಕರಿಗೆ 20.50 ಲಕ್ಷ ರೂ. ಪಡೆದು ವಂಚಿಸಿರುವ ಕುರಿತು ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ಐಸ್‌ಕ್ರೀಂ ಪಾರ್ಲ‌್ರನಲ್ಲಿ ಕೆಲಸ ಮಾಡುತ್ತಿದ್ದ ಅನಿಲ್ ಎನ್ನುವವರಿಗೆ ಪರಿಚಯವಾಗಿದ್ದ ಪ್ರಕಾಶ್ ಪೂಜಾರಿ ಎಂಬಾತ ತಾನು ಮುದ್ರಾ ಯೋಜನೆಯ ಏಜೆಂಟ್ ಎಂದು ಪರಿಚಯಿಸಿ ಸಾಲ ಕೊಡಿಸುತ್ತೇನೆ ಎಂದು ತಿಳಿಸಿದ್ದಾನೆ. ಅನಿಲ್ ಅವರು ಬೇಡ ಎಂದರೂ, ವಿನಯದಿಂದ ಮಾತನಾಡಿ ಹಲವರಿಗೆ 15 ಲಕ್ಷ ರೂ. ವರೆಗೆ ಸಾಲ ತೆಗೆಸಿಕೊಟ್ಟಿದ್ದೇನೆ ಎಂದು ಹೇಳಿದ್ದಾನೆ. 15 ಲಕ್ಷ ರೂ. ಸಾಲದ ಖರ್ಚಿಗೆ 1.50 ಲಕ್ಷ ರೂ. ನೀಡಬೇಕು, ಸಾಲ ಮಂಜೂರು ಆಗದೇ ಇದ್ದಲ್ಲಿ ಹಣ ವಾಪಸು ನೀಡುವುದಾಗಿಯೂ ತಿಳಿಸಿದ್ದಾನೆ. ಆತನ ಮಾತನ್ನು ನಂಬಿ 1.50 ಲಕ್ಷ ರೂ. ಒಟ್ಟುಗೂಡಿಸಿ ಪ್ರಕಾಶ್‌ ಪೂಜಾರಿಯ ಖಾತೆಗೆ ನೆಫ್ಟ್ ಮಾಡಿದ್ದಾರೆ. ಇದೇ ವೇಳೆ ಇತರರೂ ಕೂಡ ಆತನಿಗೆ ಹಣ ನೀಡಿದ್ದಾರೆ. ಸಾಲ ಮಂಜೂರಾಗದೇ ಇದ್ದಾಗ ಆತನ ಮನೆಗೆ ಹೋಗಿ ವಿಚಾರಿಸಿದ್ದು, ಸಾಲ ಮಂಜೂರಾಗುವ ಬಗ್ಗೆ ಭರವಸೆಯನ್ನೂ ನೀಡಿದ್ದ. ಹಲವು ದಿನಗಳು ಕಳೆದರೂ, ಸಾಲ ದೊರೆಯದೇ ಇದ್ದಾಗ ಆತನ ಮೊಬೈಲ್‌ಗೆ ಕರೆ ಮಾಡಿದ್ದು, ಅದು ಸ್ವಿಚ್ ಆಫ್ ಆಗಿದೆ. ಮನೆಗೆ ಹೋಗಿ ಕೇಳಿದಾಗ ಆತನ ತಾಯಿ ಮತ್ತು ಪತ್ನಿ ಆತ ಮನೆಗೆ ಬಾರದೆ 2 ವರ್ಷ ಆಯಿತು ಎಂದು ತಿಳಿಸಿದ್ದಾರೆ. ಇನ್ನಷ್ಟು ವಿಚಾರಿಸಿದಾಗ ಆತನ ಪತ್ನಿ ಸಾಲಕ್ಕೆ ಸಂಬಂಧಿಸಿದ ಹಲವರಿಂದ ಹಣ ಪಡೆದಿರುವುದು ತಿಳಿದುಬಂದಿದೆ.