Categories
ತೀರ್ಥಹಳ್ಳಿ

ತುಂಗಾ ಕಲೋತ್ಸವದಲ್ಲಿ ರೋಟರಿ ಕ್ಲಬ್ ತೀರ್ಥಹಳ್ಳಿಗೆ ಪ್ರಶಸ್ತಿ ಸಂಭ್ರಮ

ತುಂಗಾ ಕಲೋತ್ಸವದಲ್ಲಿ ರೋಟರಿ ಕ್ಲಬ್ ತೀರ್ಥಹಳ್ಳಿಗೆ ಪ್ರಶಸ್ತಿ ಸಂಭ್ರಮ
– ಸಾಂಸ್ಕೃತಿಕ ಸಂಗಮ ಏಕಪಾತ್ರಾಭಿನಯ, ಕಿರು ನಾಟಕದಲ್ಲಿ ಗೆಲುವು
– ತೀರ್ಥಹಳ್ಳಿ ರೋಟರಿ ರಾಜ್ಯದಲ್ಲಿ ಬೆಸ್ಟ್ ಸಂಘಟನೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ನಡೆದ ರೋಟರಿ ಜಿಲ್ಲೆ 3182 ಜೋನ್ 11 ಇದರ ವಾರ್ಷಿಕ ಸಾಂಸ್ಕೃತಿಕ ಮಿಲನ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ರೋಟರಿ ಕ್ಲಬ್ ತೀರ್ಥಹಳ್ಳಿಗೆ ಎರಡು ಪ್ರಥಮ ಬಹುಮಾನಗಳನ್ನು ಪಡೆದಿದೆ. ವಲಯ 11 ರಲ್ಲಿ , ಸೊರಬ, ಸಾಗರ ,ರಿಪ್ಪನ್ ಪೇಟೆ ,ಕೋಣಂದೂರು ಶಿವಮೊಗ್ಗ ಸೆಂಟ್ರಲ್, ಶಿವಮೊಗ್ಗ ಈಸ್ಟ್ ಮತ್ತು ತೀರ್ಥಹಳ್ಳಿ ರೋಟರಿ ಕ್ಲಬ್ ಒಳಗೊಂಡ “ಸಾಂಸ್ಕೃತಿಕ ಸಂಗಮ” ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮದಲ್ಲಿ ತೀರ್ಥಹಳ್ಳಿ ರೋಟರಿ ಕ್ಲಬ್ ಗೆ ಏಕಪಾತ್ರಭಿನಯ (ಮೋನೋ ಆಕ್ಟಿಂಗ್) ಹಾಗೂ ಕಿರು ನಾಟಕಕ್ಕೆ ಪ್ರಥಮ ಬಹುಮಾನ ಲಭ್ಯವಾಗಿದೆ.
ಭಕ್ತ ಪ್ರಹಲ್ಲಾದನ ಕಥೆಯನ್ನೊಳಗೊಂಡ ಏಕಪಾತ್ರ ಅಭಿನಯಕ್ಕೆ ರೊ ರಾಘವೇಂದ್ರ ಆಚಾರ್ಯ ಗುಡ್ಡೇಕೊಪ್ಪ ಇವರಿಗೆ ಪ್ರಥಮ ಪ್ರಶಸ್ತಿ ಲಭ್ಯವಾಗಿದೆ ,ಹಾಗೂ ತೀರ್ಥಹಳ್ಳಿಯ ರಂಗ ಕಲಾವಿದರೂ ನಟ ಮಿತ್ರರು ತಂಡದ ಶಿವಕುಮಾರ್ ಮತ್ತು ಕಾರ್ತಿಕ್ ನಿರ್ದೇಶನದಲ್ಲಿ ರೂಪಗೊಂಡ ಅರಣ್ಯ ಒತ್ತುವರಿ ವಿಷಯದ ಕಿರು ನಾಟಕಕ್ಕೆ ಪ್ರಥಮ ಪ್ರಶಸ್ತಿ ಲಭ್ಯವಾಗಿದೆ.
ಅತ್ಯಂತ ಕಠಿಣ ಸ್ಪರ್ಧೆ ಇದ್ದರೂ ತೀರ್ಥಹಳ್ಳಿ ರೋಟರಿಯ ಸದಸ್ಯರು ಕಠಿಣ ಪರಿಶ್ರಮದಿಂದ ಬಹುಮಾನ ಪಡೆದಿರುವುದು ಸಂತೋಷದ ವಿಷಯವಾಗಿದೆ ಎಂದು ರೊ ಅನಿಲ್ ಕುಮಾರ್ ಅಧ್ಯಕ್ಷರು ರೋಟರಿ ಕ್ಲಬ್ ತೀರ್ಥಹಳ್ಳಿ ಇವರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದರು. ಮಾಜಿ ಅಧ್ಯಕ್ಷರಾದ ರೊ ಬಿ.ವಿ ಶ್ರೀಧರ್ , ರೊ ಮನೋಜ್ ಕುಮಾರ್ ಆಚಾರ್ಯ , ರೊ ಶ್ರೀಕಾಂತ್ ಯಡಗರೆ , ನಿಯೋಜಿತ ಅಧ್ಯಕ್ಷರಾದ ರೊ ಪಿ.ವಿ ಭರತ್ ಕುಮಾರ್ , ಸದಸ್ಯರಾದ ರೊ ಅನಿಲ್ ಪೂಜಾರಿ,ರೊ ರಾಘವೇಂದ್ರ ಆಚಾರ್ಯ ಗುಡ್ಡೆಕೊಪ್ಪ, ರೊ ನಟರಾಜ್ ಶೇಟ್, ರೊ ವಾಣಿ ಗಣೇಶ್, ರೋಟರಿ ಕುಟುಂಬದವರಾದ ರಿತೇಶ್ ,ಶ್ರೀಮತಿ ಲತಾ ಶ್ರೀಕಾಂತ್, ಶ್ರೀಮತಿ ವಿದ್ಯಾ ಶ್ರೀಧರ್, ಮತ್ತು ಶ್ರೀಮತಿ ಶ್ವೇತಾ ಮನೋಜ್ ಕುಮಾರ್,ಇವರ ಅಭಿನಯ ಮನೋಜ್ನ್ಯವಾಗಿತ್ತು ಹಾಗೂ ಸಹಕರಿಸಿದ ಎಲ್ಲರಿಗೂ ರೊ ಹೆಚ್ ಎಂ ಸುರೇಶ್ , ಸಹಾಯಕ ಗವರ್ನರ್, ರೊ ಕೆ ಪಿ ಎಸ್ ಸ್ವಾಮಿ, ವಲಯ ತರಬೇತುದಾರ, ರೊ ಎಂ.ಎಸ್ ಶಿವಪ್ರಸಾದ್ , ಕಾರ್ಯದರ್ಶಿ ರೋಟರಿ ಕ್ಲಬ್ ತೀರ್ಥಹಳ್ಳಿ ವಂದನೆಗಳನ್ನು ತಿಳಿಸಿದರು.

Categories
ಮಲ್ನಾಡ್

ಟಾಪ್ ನ್ಯೂಸ್ ಮಲ್ನಾಡ್

ಟಾಪ್ ನ್ಯೂಸ್ ಮಲ್ನಾಡ್

– ಮೃತ ಆನೆ ದೇಹವನ್ನು ನೋಡಲು ಬಂದ ಆನೆಗಳು!
– ಚಿಕ್ಕಮಗಳೂರು ಹೆಬ್ಬೆ ಅರಣ್ಯದಲ್ಲಿ ನಡೆದ ಘಟನೆ ಈಗ ವೈರಲ್
– ತೀರ್ಥಹಳ್ಳಿ: ಅಪಘಾತದಲ್ಲಿ ತಂದೆ ಸಾವು : ಮಗ ಗಂಭೀರ
– ಶಿವಮೊಗ್ಗ : ಉದ್ಯೋಗ ಕೊಡಿಸುವುದಾಗಿ ಹೇಳಿ 58 ಲಕ್ಷ ವಂಚನೆ
– ಹೊಸನಗರ : ಮನೆಗೆ ಆಕಸ್ಮಿಕ ಬೆಂಕಿ ತಗುಲಿ ರೂ.4.5 ನಷ್ಟ
– ಶಿವಮೊಗ್ಗ: ಕಾಡಾನೆಗಳ ಸೆರೆಗೆ ಕಾರ್ಯಾಚರಣೆ ಶುರು

NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿ ತಾಲ್ಲೂಕು ಆಗುಂಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೌರಿಹಕ್ಕಲು ಬಳಿ ಸಂಭವಿಸಿದ ಅಪಘಾತದಲ್ಲಿ ಓರ್ವರು ಸಾವನ್ನಪ್ಪಿದ್ದಾರೆ. ಬೈಕ್‌ಗೆ ಕಾರು ಡಿಕ್ಕಿಯಾದ ಪರಿಣಾಮ ಬೈಕ್‌ ಸವಾರರೊಬ್ಬರು ಮೃತಪಟ್ಟಿದ್ದಾರೆ. ಇಲ್ಲಿನ ನಂಟೂರು ಗ್ರಾಮದ ನಿವಾಸಿ ರಘುರಾಮ್‌ (35) ಮೃತಪಟ್ಟವರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಘುರಾಮ್‌ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇನ್ನೂ ಬೈಕ್‌ ಹಿಂಭಾಗದಲ್ಲಿ ಕುಳಿತಿದ್ದ ರಘುರಾಮ್‌‌ ಅವರ ಪುತ್ರ ಸಹಗಂಭೀರವಾಗಿ ಗಾಯಗೊಂಡಿದ್ದು,ಅವರಿಗೆ ಚಿಕಿತ್ಸೆ ಮುಂದುವರಿದಿದೆ.

– ಚಿಕ್ಕಮಗಳೂರು: ಮೃತ ಆನೆ ದೇಹವನ್ನು ನೋಡಲು ಬಂದ ಆನೆಗಳು!

ಚಿಕ್ಕಮಗಳೂರು: ಮನುಷ್ಯರಂತೆ ಮೂಖ ಪ್ರಾಣಿಗಳಲ್ಲೂ ಭಾವನೆಗಳಿವೆ. ಅವು ಕಷ್ಟ, ಸುಖ, ದುಃಖಗಳಲ್ಲಿ ಒಂದಾಗುತ್ತವೆ. ತಮ್ಮ ಮೂಕ ಭಾಷೆಗಳಲ್ಲಿ ಭಾವನೆಗಳನ್ನು ವ್ಯಕ್ತಪಡಿಸುತ್ತವೆ ಎನ್ನುವುದನ್ನು ಕೇಳಿದ್ದೇವೆ. ಕೆಲವೊಂದು ಸಂದರ್ಭಗಳಲ್ಲಿ ನೋಡಿದ್ದೇವೆ. ಕಾಡಾನೆಯೊಂದು ಮರಣ ಹೊಂದಿದ್ದು, ಮರಣ ಹೊಂದಿದ ಆನೆಯ ಕಳೇಬರವನ್ನು ನೋಡಲು ದೂರದಿಂದ ಆನೆಗಳ ಹಿಂಡೂ ಬಂದಿವೆ. ಇಂತಹದೊಂದು ಘಟನೆ ನಡೆದಿರುವುದು ಭದ್ರ ಅಭಯಾರಣ್ಯ ವ್ಯಾಪ್ತಿಯಲ್ಲಿನ ಹೆಬ್ಬೆ ವಲಯದಲ್ಲಿ. ಕಾಡಾನೆಗಳು ಮೃತಪಟ್ಟ ಆನೆಯ ಕಳೇಬರ ಸಮೀಪ ಕೆಲಕಾಲ ಇದ್ದು ನಂತರ ತೆರಳಿರುವ ದೃಶ್ಯದ ಪೋಟೋಗಳು ಅರಣ್ಯ ಇಲಾಖೆ ಅಳವಡಿಸಿದ್ದ ಟ್ರ್ಯಾಪ್ ಕ್ಯಾಮಾರಾದಲ್ಲಿ ಸೆರೆಯಾಗಿದೆ. ತಮ್ಮ ಜತೆಯಲ್ಲಿ ಬೆಳೆದ ಕಾಡಾನೆಯೊಂದು ಮೃತಪಟ್ಟಿದ್ದು, ದೂರದಲ್ಲಿ ಎಲ್ಲೋ ಇದ್ದ ಕಾಡಾನೆಗಳ ಹಿಂಡು ಅಲ್ಲಿಗೆ ಆಗಮಿಸಿ ನಮನ ಸಲ್ಲಿಸಿರುವುದು ಅಚ್ಚರಿ ಎನಿಸಿವೆ. ಕ್ಯಾಮಾರಾದಲ್ಲಿ ಸೆರೆಯಾಗಿರುವ ಪೋಟೋಗಳು ಮನಕಲಕುವಂತಿವೆ.

– ಶಿವಮೊಗ್ಗ : ಉದ್ಯೋಗ ಕೊಡಿಸುವುದಾಗಿ ಹೇಳಿ 58 ಲಕ್ಷ ವಂಚನೆ

ಶಿವಮೊಗ್ಗ : ಉದ್ಯೋಗ ಸಂಬಂಧಿ ವಾಟ್ಸಪ್‌ ಗ್ರೂಪ್‌ ಸೇರಿದ್ದ ಯುವಕರಿಗೆ ಪ್ರತಿಷ್ಠಿತ ಕಂಪನಿಗಳಲ್ಲಿ ಆನ್‌ಲೈನ್‌ ಉದ್ಯೋಗ ಕೊಡಿಸುವ ಆಮಿಷವೊಡ್ಡಿ, 58 ಲಕ್ಷ ರೂ. ವಂಚಿಸಲಾಗಿದೆ. ನಾಲ್ಕು ಬಾರಿ ವಿವಿಧ ಕಾರಣ ಹೇಳಿ ಹಣ ಪಡೆದು ಮೋಸ ಮಾಡಲಾಗಿದೆ. ಆನ್ಲೈನ್ ಕೆಲಸಕ್ಕೆ ಹಣ ಕೊಡಬೇಕು: ಶಿವಮೊಗ್ಗದ ಯುವಕರ ಗುಂಪೊಂದು ಆನ್‌ಲೈನ್‌ನಲ್ಲಿ ಟೆಕ್ನಿಕಲ್‌ ಸ್ಕಿಲ್‌ ತರಬೇತಿ ನೀಡುತ್ತಿದ್ದಾಗ ಉದ್ಯೋಗ ಸಂಬಂಧಿ ವಾಟ್ಸಪ್ ಗ್ರೂಪ್‌ ಸೇರಿದ್ದರು. ಈ ಪೈಕಿ ಒಬ್ಬಾತನಿಗೆ ಶ್ರೀನಿಧಿ ಎಂಬಾತ ಕರೆ ಮಾಡಿ ಗ್ರೂಪ್‌ ಬಗ್ಗೆ ಚರ್ಚೆ ನಡೆಸಿ, ಪ್ರತಿಷ್ಠಿತ ಕಂಪನಿಗಳಲ್ಲಿ ಆನ್‌ಲೈನ್‌ ಉದ್ಯೋಗ ಕೊಡಿಸುವ ಭರವಸೆ ನೀಡಿದ್ದ. ತಮ್ಮ ಬಳಿ ತರಬೇತಿ ಪಡೆಯುತ್ತಿರುವ ಯುವಕರಿಗೂ ಉದ್ಯೋಗವಕಾಶವಿದೆ. ಆದರೆ ಅಭ್ಯರ್ಥಿಗಳು ಹಣ ನೀಡಬೇಕು ಎಂದು ಸೂಚಿಸಿದ್ದ. ಆಫರ್‌ ಲೆಟರ್‌ ಬಂದರೂ ಕೆಲಸವಿಲ್ಲ, ಅದರಂತೆ ಮೊದಲ ಬಾರಿ ಫೋನ್‌ ಪೇ ಮೂಲಕ 6.69 ಲಕ್ಷ ರೂ. ಪಾವತಿಸಲಾಗಿತ್ತು. ನಕಲಿ ಕಂಪನಿಯೊಂದರ ಲೆಟರ್‌ಹೆಡ್‌ನಲ್ಲಿ ಆಫರ್‌ ಲೆಟರ್‌ ನೀಡಿ, ಲ್ಯಾಪ್‌ಟಾಪ್‌ ಒದಗಿಸಲಾಗಿತ್ತು. ಆದರೆ ಉದ್ಯೋಗ ನೀಡಿರಲಿಲ್ಲ. ಕರೆ ಮಾಡಿದಾಗ ಕಂಪನಿಯ ಮಾಲೀಕ ಎಂದು ಮತ್ತೊಬ್ಬ ವ್ಯಕ್ತಿಯ ಮೊಬೈಲ್‌ ನಂಬರ್‌ ನೀಡಲಾಗಿತ್ತು. ಆತ 20.13 ಲಕ್ಷ ರೂ. ಹಣ ಪಡೆದು ಕೆಲಸ ಕೊಡದೆ ವಂಚಿಸಿದ್ದ. ಹಂತ ಹಂತವಾಗಿ ಹೋಯ್ತು ಲಕ್ಷ ಲಕ್ಷ, 2022 ರಿಂದ 2024ರವರೆಗೆ ಹಂತ ಹಂತವಾಗಿ ಒಟ್ಟು 58 ಲಕ್ಷ ರೂ. ಹಣ ಪಡೆದು ಕೆಲಸ ಕೊಡಿಸದೆ ವಂಚಿಸಲಾಗಿದೆ. ಈ ಸಂಬಂಧ ಶಿವಮೊಗ್ಗದ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉದ್ಯೋಗದ ಆಮಿಷವೊಡ್ಡಿ ನಾನಾ ಬಗೆಯಲ್ಲಿ ಅಭ್ಯರ್ಥಿಗಳನ್ನು ವಂಚಿಸಲಾಗುತ್ತಿದೆ. ಪಾರ್ಟ್‌ ಟೈಮ್‌ ಉದ್ಯೋಗ, ಮೊಬೈಲ್‌ನಲ್ಲೇ ಕೆಲಸ, ಪ್ರತಿಷ್ಠಿತ ಕಂಪನಿಗಳಲ್ಲಿ ಆನ್‌ಲೈನ್‌ ಜಾಬ್‌ ಎಂಬ ನೆಪವೊಡ್ಡಿ ಅಭ್ಯರ್ಥಿಗಳಿಂದ ಲಕ್ಷಾಂತರ ರೂ. ಪಡೆದು ಮೋಸ ಮಾಡಲಾಗುತ್ತಿದೆ. ಉದ್ಯೋಗಾಕಾಂಕ್ಷಿಗಳು ಈ ಕುರಿತು ಎಚ್ಚರ ವಹಿಸಬೇಕಿದೆ.

– ಹೊಸನಗರ : ಮನೆಗೆ ಆಕಸ್ಮಿಕ ಬೆಂಕಿ ತಗುಲಿ ರೂ.4.5 ನಷ್ಟ

ಹೊಸನಗರ : ಆಕಸ್ಮಿಕ ಬೆಂಕಿಗೆ ತುತ್ತಾಗಿ ವಾಸದ ಮನೆ ಭಾಗಶಃ ಸುಟ್ಟು ಹೋದ ಘಟನೆ ತಾಲೂಕಿನ ಬೈಸೆ ಗ್ರಾಮದ ಹೂಕೊಪ್ಪಲು ಎಂಬಲ್ಲಿ ನಡೆದಿದೆ. ವಿಶಾಲಾಕ್ಷಿಯವರಿಗೆ ಸೇರಿದ ಮನೆಗೆ ಮಧ್ಯಾಹ್ನ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಬೆಂಕಿಗೆ 95 ಸಾವಿರ ಹಣ, ಬಟ್ಟೆ 30 ಗ್ರಾಂ ತೂಕದ ಬಂಗಾರ, ಅಡಿಕೆ ಸೇರಿದಂತೆ ಒಟ್ಟು ರೂ. 4.5 ಲಕ್ಷ ನಷ್ಟ ಉಂಟಾಗಿದೆ. ಮನೆಯವರು ಹತ್ತಿರದ ಜಮೀನಿನಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಮನೆ ಯಿಂದ ಹೊಗೆ ಹೊರಗೆ ಹೋಗುತ್ತಿದ್ದುದನ್ನು ಗಮನಿಸಿ ಅವರು ಓಡೋಡಿ ಬಂದಿದ್ದಾರೆ. ಬಳಿಕ ಸ್ಥಳೀಯರ ಸಹಕಾರದಿಂದ ಸತತ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಶಾಲಾಕ್ಷಿ ಎಂಬುವವರು 5 ವರ್ಷದ ಹಿಂದೆ ಪತಿಯನ್ನು ಕಳೆದುಕೊಂಡಿದ್ದರು. ಮೂವರು ಚಿಕ್ಕ ಮಕ್ಕಳನ್ನು ಹೊಂದಿದ್ದಾರೆ. ಕಷ್ಟಪಟ್ಟು ಬದುಕುತ್ತಿದ್ದ ಅವರಿಗೆ ಈ ದುರಂತ ಅಸಹಾಯಕನ್ನಾಗಿ ಮಾಡಿದೆ.

– ಶಿವಮೊಗ್ಗ: ಕಾಡಾನೆಗಳ ಸೆರೆಗೆ ಕಾರ್ಯಾಚರಣೆ ಶುರು

ಶಿವಮೊಗ್ಗ : ತಾಲೂಕಿನ ವಿವಿಧೆಡೆ ಕಾಣಿಸಿಕೊಂಡು ಬೆಳೆ ಹಾನಿ ಮಾಡಿ, ಆತಂಕ ಸೃಷ್ಟಿಸಿರುವ ಕಾಡಾನೆಗಳ ಸೆರೆಗೆ ಕಾರ್ಯಾಚರಣೆ ಆರಂಭಿಸಲಾಗಿದೆ. ಸಕ್ರೆಬೈಲು ಬಿಡಾರದ ಮೂರು ಆನೆಗಳು ಪುರದಾಳು ಗ್ರಾಮಕ್ಕೆ ಆಗಮಿಸಿ ಬೀಡು ಬಿಟ್ಟಿವೆ. ಆನೆ ಬಿಡಾರದ ಆಲೆ, ಬಹದ್ದೂರು ಮತ್ತು ಸೋಮಣ್ಣ ಆನೆಗಳನ್ನು ಪುರದಾಳು ಗ್ರಾಮಕ್ಕೆ ಕರೆತರಲಾಗಿದೆ. ಕಾಡಾನೆಗಳ ಸೆರೆಗೆ ಈಗಾಗಲೇ ಶೆಟ್ಟಿಹಳ್ಳಿ ಅಭಯಾರಣ್ಯದಿಂದ ಕಾರ್ಯಾಚರಣೆ ಶುರುವಾಗಿದೆ. ಶಿವಮೊಗ್ಗ ತಾಲೂಕಿನ ಪುರದಾಳು, ಮಲೇಶಂಕರ, ಆಲದೇವರ ಹೊಸೂರು, ಸಿರಿಗೆರೆ ಭಾಗದಲ್ಲಿ ಕಾಡಾನೆಗಳು ದಾಳಿ ನಡೆಸಿ ಬೆಳೆ ಹಾನಿ ಮಾಡಿದ್ದವು. ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದು ರಾತ್ರಿ ಪಟಾಕಿ ಸಿಡಿಸಿ ತೋಟ, ಹೊಲಗಳಿಗೆ ನುಗ್ಗದಂತೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳುತ್ತಿತ್ತು. ಆದರೆ ಆನೆಗಳು ಮಧ್ಯರಾತ್ರಿ ಭತ್ತದ ಗದ್ದೆ, ಅಡಕೆ ಹಾಗೂ ಬಾಳೆ ತೋಟಗಳಿಗೆ ನುಗ್ಗಿ ದಾಂಧಲೆ ನಡೆಸಿ, ಬೆಳೆ ನಾಶ ಪಡಿಸುತ್ತಿದ್ದವು. ಅರಣ್ಯ ಇಲಾಖೆ ನಿರ್ಲಕ್ಷ್ಯಕ್ಕೆ ರೈತರು ರೋಸಿ ಹೋಗಿದ್ದರು. ಕಾಡಾನೆ ಹಾವಳಿ ಖಂಡಿಸಿ ಡಿಸಿ ಕಚೇರಿ, ಸಿರಿಗೆರೆ ವಲಯ ಅರಣ್ಯಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಅರಣ್ಯ ಸಚಿವ ಈಶ್ವರ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪಗೆ ಮನವಿ ಸಲ್ಲಿಸಿ ಕಾಡಾನೆ ಸೆರೆ ಹಿಡಿಯುವಂತೆ ಜನರು ಆಗ್ರಹಿಸಿದ್ದರು. ಈಗ ಕಾರ್ಯಾಚರಣೆ ಆರಂಭವಾಗಿದೆ.

Categories
ತೀರ್ಥಹಳ್ಳಿ

ಜಿಲ್ಲಾಮಟ್ಟದ ದಿಶಾ ಸಮಿತಿಗೆ ರಮೇಶ್ ಕೆ.ಎನ್ ಆಯ್ಕೆ!

ಜಿಲ್ಲಾಮಟ್ಟದ ದಿಶಾ ಸಮಿತಿಗೆ ರಮೇಶ್ ಕೆ.ಎನ್ ಆಯ್ಕೆ!

– ಆಯ್ಕೆಯಾಗಿರುವ ರಮೇಶ್ ಕೆ.ಎನ್ ಅವರಿಗೆ ಅಭಿನಂದನೆಗಳು!
– ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿ ಆಯ್ಕೆ ಮಾಡಿರುವ ಲೋಕಸಭಾ ಸದಸ್ಯರಿಗೆ ಅಭಿನಂದನೆ!!

NAMMUR EXPRESS NEWS
ತೀರ್ಥಹಳ್ಳಿ: ಜಿಲ್ಲಾಮಟ್ಟದ ದಿಶಾ ಸಮಿತಿಗೆ ನಮ್ಮ ಹಣಗೆರೆ ಗ್ರಾಮ ಪಂಚಾಯತಿಯ ಅಧ್ಯಕ್ಷರನ್ನು ಸಮಿತಿಯ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿ ಆಯ್ಕೆ ಮಾಡಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಲೋಕಸಭಾ ಸದಸ್ಯರಾದ ಶ್ರೀಯುತ ಬಿ.ವೈ ರಾಘವೇಂದ್ರರವರಿಗೆ ಹಾಗೂ ನಮ್ಮ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮಾಜಿ ಗೃಹಸಚಿವರೂ ಆದ ಶ್ರೀಯುತ ಆರಗ ಜ್ಞಾನೇಂದ್ರರವರಿಗೆ ಹಣಗೆರೆ ಗ್ರಾಮ ಪಂಚಾಯತಿಯ ಆಡಳಿತ ಮಂಡಳಿಯ ವತಿಯಿಂದ ತುಂಬು ಹೃದಯದ ಧನ್ಯವಾದಗಳನ್ನು ಸಮರ್ಪಿಸುತ್ತಿದ್ದೇವೆ. ಹಾಗೂ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿರುವ ಹಣಗೆರೆ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ರಮೇಶ್ ಕೆ.ಎನ್ ರವರಿಗೆ ಅಭಿನಂದನೆ ಹಾಗೂ ಶುಭಕೋರುವವರು ಹಣಗೆರೆ ಗ್ರಾಮ ಪಂಚಾಯತಿಯ ಆಡಳಿತ ಮಂಡಳಿ ಹಾಗೂ ಪಂಚಾಯತಿ ವ್ಯಾಪ್ತಿಯ ಎಲ್ಲಾ ಗ್ರಾಮಸ್ಥರು.

Categories
ರಾಜ್ಯ

ಕರ್ನಾಟಕ ಟಾಪ್ ನ್ಯೂಸ್

ಕರ್ನಾಟಕ ಟಾಪ್ ನ್ಯೂಸ್

– ಬಳ್ಳಾರಿ: ದರ್ಶನ್‌ಗೆ ಪಾರ್ಶ್ವವಾಯು ಆಗಬಹುದು: ವೈದ್ಯಕೀಯ ವರದಿ!
– ಎಣ್ಣೆ ಪ್ರಿಯರಿಗೆ ಶಾಕ್..! ನವೆಂಬರ್ 20 ರಿಂದ ಮದ್ಯದಂಗಡಿ ಬಂದ್
– ಹುಬ್ಬಳ್ಳಿಯಲ್ಲಿ 20ಕ್ಕೂ ಹೆಚ್ಚು ಜನರ ಮೇಲೆ ಹುಚ್ಚುನಾಯಿ ದಾಳಿ!

NAMMUR EXPRESS NEWS
ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅ. 29ರಂದು ವಿಚಾರಣೆ ನಡೆಸಿದ ವಿಚಾರಣೆಗೆ ಆದೇಶ ಹೊರಡಿಸಲಾಗಿದೆ. ಇದೇ ವೇಳೆ ನಟ ದರ್ಶನ್ ಅವರ ಬೆನ್ನು ನೋವಿನ ವರದಿಯನ್ನು ಸಲ್ಲಿಸಲಾಗಿದೆ.

ದರ್ಶನ್ ಅವರ ಬೆನ್ನು ನೋವಿನ ಸಮಸ್ಯೆಗೆ ವೈದ್ಯಕೀಯ ವರದಿಯಲ್ಲಿ ಸ್ಪೋಟಕ ವಿಷಯ ಬಹಿರಂಗವಾಗಿದೆ. ದರ್ಶನ್ ಅವರ ಬೆನ್ನು ಮೂಳೆಯ L5 ಹಾಗೂ S1 ನಲ್ಲಿ ವಿಪರೀತ ನೋವು ಕಾಣಿಸಿಕೊಂಡಿದ್ದು, ಜೊತೆಗೆ ಬೆನ್ನಿನಲ್ಲಿಯೂ ಸಹ ಕಂಡುಬಂದಿದೆ. ಇದೆ ರೀತಿ ಮುಂದುವರೆದರೆ ನಟ ದರ್ಶನ್ ಅವರಿಗೆ ಪ್ಯಾಲಿಸಿಸ್ ಆಗುವ ಸಾಧ್ಯತೆ ಇದೆ.ಅ. 29ರಂದು ನಟ ದರ್ಶನ್ ಅವರ ಆರೋಗ್ಯದ ಕುರಿತು ವೈದ್ಯಕೀಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ಬಳಿಕ ದರ್ಶನ್ ಪರ ವಕೀಲ ಸಿವಿ ನಾಗೇಶ್‌ ಅವರು, ನ್ಯೂರೋ ಸರ್ಜನ್ ಮೂರು ಅಂಶ ಹೇಳಿದ್ದಾರೆ. ನಂಬೈಸ್‌ ಇದೆ, ರಕ್ತಪರಿಚಲನೆ ಆಗುತ್ತಿಲ್ಲ. ಇದರಿಂದ ಕಿಡ್ನಿ ಸಮಸ್ಯೆ ಆಗಬಹುದು. ಡಿಸ್ಕ್ ಸಮಸ್ಯೆ ಇದೆ. ತಕ್ಷಣ ಸರ್ಜರಿಗೆ ಸೂಚಿಸಿದ್ದಾರೆ. ಇಲ್ಲವಾದರೆ ಪ್ಯಾರಾಲಿಸಿಸ್‌ ಆಗಬಹುದು.
ದರ್ಶನ್ ಅವರ ಕಾಲಿಗೆ ಪಾರ್ಶ್ವವಾಯು ಆಗುವ ಸಾಧ್ಯತೆ ಇದೆ. ಬೆಂಗಳೂರಿನ ಆಸ್ಪತ್ರೆ ಅಥವಾ ಬಳ್ಳಾರಿ ಆಸ್ಪತ್ರೆಯಲ್ಲಿ ಫಿಸಿಯೋಥೆರಪಿ ಮತ್ತು ಆಪರೇಷನ್‌ಗೆ ಸೂಚಿಸಲಾಗಿದೆ.

ಇದರಿಂದ ಕಿಡ್ನಿ ಸಮಸ್ಯೆ ಆಗಬಹುದು. ಡಿಸ್ಕ್ ಸಮಸ್ಯೆ ಇದೆ. ತಕ್ಷಣ ಸರ್ಜರಿಗೆ ಸೂಚಿಸಿದ್ದಾರೆ. ಇಲ್ಲವಾದರೆ ಪ್ಯಾರಾಲಿಸಿಸ್‌ ಆಗಬಹುದು. ದರ್ಶನ್ ಅವರ ಕಾಲಿಗೆ ಪಾರ್ಶ್ವವಾಯು ಆಗುವ ಸಾಧ್ಯತೆ ಇದೆ. ಬೆಂಗಳೂರಿನ ಆಸ್ಪತ್ರೆ ಅಥವಾ ಬಳ್ಳಾರಿ ಆಸ್ಪತ್ರೆಯಲ್ಲಿ ಫಿಸಿಯೋಥೆರಪಿ ಮತ್ತು ಆಪರೇಷನ್‌ಗೆ ಸೂಚಿಸಲಾಗಿದೆ. ಯಾವುದೇ ಅನಾರೋಗ್ಯ ಕಾಡುವುದಿಲ್ಲ ಅವರಿಗೆ ತುರ್ತಾಗಿ ಚಿಕಿತ್ಸೆ ನೀಡಬೇಕಾಗಿದೆ. ಈ ಜಾಮೀನು ನೀಡುವಂತೆ ನ್ಯಾಯಾಲಯಕ್ಕೆ ಮನವಿ ಸಿವಿ ನಾಗೇಶ್ ಮನವಿ ಮಾಡಿದ್ದಾರೆ.

– ಎಣ್ಣೆ ಪ್ರಿಯರಿಗೆ ಶಾಕ್..! ನವೆಂಬರ್ 20 ರಿಂದ ಮದ್ಯದಂಗಡಿ ಬಂದ್

ಬೆಂಗಳೂರು: ರಾಜ್ಯದ ಮದ್ಯಪ್ರಿಯರಿಗೆ ಶಾಕ್ ಎದುರಾಗಲಿದೆ, ನವೆಂಬರ್ 20 ರಿಂದ ಮದ್ಯದಂಗಡಿ ಬಂದ್ ಆಗಲಿದೆ ಎಂದು ಹೇಳಲಾಗುತ್ತಿದೆ. ಮದ್ಯದಂಗಡಿ ಮುಷ್ಕರ ನಡೆಸಲಾಯಿತು ಎಂದು ಪೌಂಡೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್‌ ಅಧ್ಯಕ್ಷ ಎಸ್‌.ಗುರುಸ್ವಾಮಿ ಪ್ರಕಟಿಸಿದರು. ವೈನ್ ಶಾಪ್ ಅನೇಕ ಬೇಡಿಕೆಗಳನ್ನು ಇಟ್ಟಿದ್ದಾರೆ. ಈ ಮೇಲಿನ ಭ್ರಷ್ಟಾಚಾರ ಮತ್ತು ಕಿರುಕುಳ ಹೆಚ್ಚಾಗುತ್ತಿದೆ ಎಂಬ ಬೇಡಿಕೆಯೂ ಇದೆ.

ವೈನ್ ಶಾಪ್ ತಮ್ಮ ಅಂಗಡಿಗಳ ಬಳಿ ಗೊತ್ತುಪಡಿಸಿದ ‘ಸ್ಟ್ಯಾಂಡ್‌ ಮತ್ತು ಡ್ರಿಂಕ್’ ತಾಣಗಳನ್ನು ರಚಿಸಲು ಅನುಮತಿಸಲು ಅವರು ಸರ್ಕಾರವನ್ನು ಬಯಸುತ್ತಾರೆ. ಪ್ಯಾಕ್ ಮಾಡಿದ ಸ್ನಾಕ್ಸ್ ಜೊತೆಗೆ ನಮ್ಮ ಮದ್ಯದಂಗಡಿಯಲ್ಲಿನ ಖರೀದಿಗಳನ್ನು ಆನಂದಿಸಲು ಅವಕಾಶ ನೀಡುವುದಾಗಿಯೂ ಹೇಳಿದ್ದಾರೆ.ಈ ಉಪಕ್ರಮವು ದುಬಾರಿ ಬಾರ್‌ಗಳು ಅಥವಾ ಸ್ಟಾರ್ ಹೋಟೆಲ್‌ಗಳಿಗೆ ಹೋಗಲು ಸಾಧ್ಯವಾಗದವರಿಗೆ ವಿಶ್ರಾಂತಿ ವಾತಾವರಣವನ್ನು ಒದಗಿಸುವ ಮೂಲಕ ಆದಾಯವನ್ನು ನೀಡುತ್ತದೆ. “ಇಂತಹ ವ್ಯವಸ್ಥೆಯು ನೆರೆಯ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿದೆ ಮತ್ತು ಇದು ಆಯಾ ಸರ್ಕಾರಗಳಿಗೆ ಹೆಚ್ಚಿನ ಆದಾಯವನ್ನು ತರುತ್ತಿದೆ” ಎಂದು ವೈನ್‌ ಮರ್ಚೆಂಟ್ಸ್ ಅಸೋಸಿಯೇಶನ್ ಫೆಡರೇಶನ್ ಹೇಳಿದೆ.

ಬೆಂಗಳೂರಿನಲ್ಲಿ ಪ್ರತಿ ಮಳಿಗೆಯಿಂದ ತಿಂಗಳಿಗೆ ಕನಿಷ್ಠ 40,000-50,000 ರೂಪಾಯಿ ಲಂಚವಾಗಿ ಈ ಮೊತ್ತವು ಪ್ರತಿ ಜಿಲ್ಲೆಯಿಂದ ಜಿಲ್ಲೆಗೆ ಬದಲಾಗುತ್ತದೆ ಎಂದು ಒಕ್ಕೂಟದ ಮೂಲಗಳು ತಿಳಿಸಿವೆ. ಹಾಗೂ, ಇಲಾಖೆಯಲ್ಲಿನ ಕೆಲವು ಅಧಿಕಾರಿಗಳು ಐದು ವರ್ಷಗಳಿಂದ ಒಂದೇ ಹುದ್ದೆಯಲ್ಲಿ ಉಳಿದಿದ್ದಾರೆ. ಅವರೆಲ್ಲ ವರ್ಗಾವಣೆ ಮಾಡಬೇಕು.
ಸರ್ಕಾರವು ನವೆಂಬರ್ 20 ರಂದು ಮದ್ಯದಂಗಡಿ ಮುಷ್ಕರ ನಡೆಸುತ್ತಿದೆ ಎಂದು ಒಕ್ಕೂಟದ ಅಧ್ಯಕ್ಷ ಎಸ್‌. ಗುರುಸ್ವಾಮಿ. ಇನ್ನು, ಈ ಮುಷ್ಕರ ಒಂದೇ ದಿನ ನಡೆಯುತ್ತಾ ಅಥವಾ ಮುಂದುವರಿಯುತ್ತಾ ಅನ್ನೋ ಬಗ್ಗೆಯೂ ಮಾಹಿತಿ ತಿಳಿದುಬಂದಿಲ್ಲ.

– ಹುಬ್ಬಳ್ಳಿಯಲ್ಲಿ 20ಕ್ಕೂ ಹೆಚ್ಚು ಜನರ ಮೇಲೆ ಹುಚ್ಚುನಾಯಿ ದಾಳಿ!!

ಹುಬ್ಬಳ್ಳಿ : ಇತ್ತೀಚಿಗೆ ಹುಚ್ಚು ನಾಯಿ ಹಾಗೂ ಬೀದಿ ನಾಯಿಗಳ ದಾಳಿ ಸಂಭವಿಸಿದ ಘಟನೆಗಳು ನಡೆದಿವೆ. ಇದೀಗ ಹುಬ್ಬಳ್ಳಿಯ ಗೋಕು : ಇತ್ತೀಚಿಗೆ ಹುಚ್ಚು ನಾಯಿ ಹಾಗೂ ಬೀದಿಲ ರಸ್ತೆಯಲ್ಲಿ ಹುಚ್ಚುನಾಯಿ ದಾಳಿ ಸುಮಾರು 20ಕ್ಕೂ ಹೆಚ್ಚು ಜನರಿಗೆ ಕಚ್ಚಿರುವ ಘಟನೆ ನಡೆದಿದೆ. ಹೌದು ಹುಬ್ಬಳ್ಳಿ ನಗರದ ಗೋಕುಲ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಹುಚ್ಚುನಾಯಿ ದಾಳಿಯಿಂದ ಸುಮಾರು 20ಕ್ಕೂ ಹೆಚ್ಚು ಜನರು ಕಾಣಿಸಿಕೊಂಡಿದ್ದಾರೆ.
ಕೂಡಲೇ ಗಾಯಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಾಯಿಗೆ ಹುಚ್ಚು ಹಿಡಿದಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ ಸದ್ಯ ಗಾಯಾಳುಗಳಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Categories
ಶಿವಮೊಗ್ಗ

ಶಿವಮೊಗ್ಗ ಸೇರಿ ವಿವಿಧ ಜಿಲ್ಲೆಗಳಲ್ಲಿ ಮತ್ತೆ ಮಳೆ

ಶಿವಮೊಗ್ಗ ಸೇರಿ ವಿವಿಧ ಜಿಲ್ಲೆಗಳಲ್ಲಿ ಮತ್ತೆ ಮಳೆ
– ನ.1 ರಿಂದ ರಾಜ್ಯದ ಕೆಲವೆಡೆ ಮತ್ತೆ ಮಳೆ ಅಬ್ಬರಿಸುವ ಸಾಧ್ಯತೆ
– ಯೆಲ್ಲೋ ಅಲರ್ಟ್ ಅನ್ನ ಹವಾಮಾನ ಇಲಾಖೆ ಪೋಷಣೆ

NAMMUR EXPRESS NEWS
ಕೆಲ ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆ, ನ.1ರಿಂದ ರಾಜ್ಯದ ಕೆಲವೆಡೆ ಮತ್ತೆ ಅಬ್ಬರಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

– ಎಲ್ಲೆಲ್ಲಿ ಮಳೆಯಾಗಲಿದೆ?

ನ.1 ರಿಂದ ಎರಡು ದಿನ ಉತ್ತರ ಕನ್ನಡ, ಉಡುಪಿ ಜಿಲ್ಲೆಗಳು, ನ.2ರಂದು ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಬಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಅಲ್ಲದೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಉಳಿದೆಡೆ ಸಾಧಾರಣ ಪ್ರಮಾಣದಲ್ಲಿ ಮಳೆ ಸುರಿಯಲಿದೆ. ರಾಜ್ಯದಲ್ಲಿ ವಾಡಿಕೆಗಿಂತಲು ಹೆಚ್ಚು ಮಳೆ : ಇನ್ನು, ಅ.1ರಿಂದ 28ರವರೆಗೆ ರಾಜ್ಯಾದ್ಯಂತ ವಾಡಿಕೆಗಿಂತಲು ಹೆಚ್ಚು ಮಳೆಯಾಗಿದೆ. ಈ ಅವಧಿಯಲ್ಲಿ ವಾಡಿಕೆಯಂತೆ 120 ಮಿ.ಮೀ ಮಳೆಯಾಗಬೇಕಿತ್ತು. ಆದರೆ, 181 ಮಿ.ಮೀ ಮಳೆಯಾಗಿದೆ. ವಾಡಿಕೆಗಿಂತ ಶೇ.51 ಅಧಿಕ ವರ್ಷಧಾರೆಯಾಗಿದೆ. ಜೂ.1ರಿಂದ ಸೆ.30ರವರೆಗೆ ರಾಜ್ಯದಲ್ಲಿ 978 ಮಿಮೀ ಮಳೆಯಾಗಿದೆ.

Categories
Uncategorized

ಪುನೀತ್ ನೆನಪಿನ ದಿನ: ಮತ್ತೆ ಹುಟ್ಟಿ ಬನ್ನಿ ಅಪ್ಪು..!

ಪುನೀತ್ ನೆನಪಿನ ದಿನ: ಮತ್ತೆ ಹುಟ್ಟಿ ಬನ್ನಿ ಅಪ್ಪು..!
– ಪುನೀತ್ ನಿಧನರಾಗಿ ಇಂದಿಗೆ 3 ವರ್ಷ
– ಪ್ರತಿಯೊಬ್ಬ ಅಭಿಮಾನಿಯ ಎದೆಯಲ್ಲಿ ಅಪ್ಪು ಜೀವಂತ

NAMMUR EXPRESS NEWS
ಕನ್ನಡ ಚಿತ್ರರಂಗದ ಅತ್ಯಂತ ಜನಪ್ರಿಯ ನಟ, ಹಿನ್ನೆಲೆ ಗಾಯಕ, ಚಲನಚಿತ್ರ ನಿರ್ಮಾಪಕ, ದೂರದರ್ಶನ ನಿರೂಪಕ ಮತ್ತು ಲೋಕೋಪಕಾರಿ, ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಅವರು 2021ರ ಅ. 29ರಂದು ಹೃದಯಾಘಾತದಿಂದ ಮೃತಪಟ್ಟಿದ್ದು ಅವರ ಸೇವಾ ಕಾರ್ಯಗಳು ಇಂದು ನೆನಪಾಗಿ ಉಳಿದಿದೆ. ಸದಾ ಹಸನ್ಮುಖಿಯಾಗಿ ಸಮಾಜಕ್ಕೆ ಒಳಿತು ನೀಡುವ ಚಿತ್ರಗಳ ಸಂದೇಶವನ್ನು ನೀಡುತ್ತಾ ಎಲ್ಲರ ನೆಚ್ಚಿನ ಮನೆಯ ಮಗನಾಗಿ ಹೊರಹೊಮ್ಮಿದ್ದರು. ಆದರೆ ವಿಧಿ ತಮ್ಮ 46ನೇ ವರ್ಷದಲ್ಲಿ ಕರೆದುಕೊಂಡಿತು.

ಸಮಾಜ ಸೇವೆ ಮೂಲಕ ರಿಯಲ್ ಹೀರೋ!

ಕೋಟ್ಯಾಂತರ ಕನ್ನಡಿಗರ ಆಸ್ತಿಯಾಗಿದ್ದ ಕರುನಾಡ ‘ಕಿರುನಗೆ’ ಕಣ್ಮರೆಯಾದರೂ ಅಪ್ಪು ಮೊಗದಲ್ಲಿನ ನಗು ಎಂದಿಗೂ ಶಾಶ್ವತ. ಕರುನಾಡಿಗೆ ಅಪ್ಪು ಇನ್ನಿಲ್ಲ ಎನ್ನುವ ಸುದ್ದಿ , ಕಟು ಸತ್ಯವಾದರು ಜನ ನಂಬಲು ಸಾಧ್ಯವಿರಲಿಲ್ಲ. ಆದರೆ ನಂಬದೇ ಬೇರೆ ವಿಧಿ ಇರಲಿಲ್ಲ. ಕನ್ನಡ ನಾಡಿನ ಹೆಮ್ಮೆಯ ನಾಯಕನಾಗಿ ಸಮಾಜ ಸೇವೆಯನ್ನೇ ತನ್ನ ಉಸಿರಾಗಿಸಿಕೊಂಡು, ತಾನು ಮಾಡಿದ ಕೆಲಸ ಇತರರಿಗೆ ಗೊತ್ತಾಗದಂತೆ ಸಹಾಯ ಹಸ್ತ ಚಾಚುತ್ತಿದ್ದ ಅಪ್ಪಟ ಚಿನ್ನ. ನಮ್ಮನೆಲ್ಲಾ ಅಗಲಿ ಇಂದಿಗೆ 3 ವರ್ಷ. ಯುವರತ್ನ ಡಾ. ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಮನದಲ್ಲಿ ನಮ್ಮಿಂದ ದೂರಾದರೂ ಅವರ ನೆನಪುಗಳು ಸದಾ ಅಜರಾಮರ. ಪ್ರತಿಯೊಬ್ಬ ಅಭಿಮಾನಿಯ ಎದೆಯಲ್ಲಿ ಅಪ್ಪು ನೆನಪುಗಳು ಜೀವಂತವಾಗಿದೆ. ಇಂದಿಗೂ ಜೀವಂತವಾಗಿದ್ದಾರೆ.

ಅಪ್ಪು ಸಮಾಧಿಗೆ ಕುಟುಂಬದ ಪೂಜೆ

ಮೂರನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆ ಅಪ್ಪು ಸಮಾಧಿಗೆ ಅವರು ಕುಟುಂಬ ಪೂಜೆ ಸಲ್ಲಿಸಲಿದೆ. ಕಂಠೀರವ ಸ್ಟೂಡಿಯೊದಲ್ಲಿರುವ ಪುನೀತ್ ರಾಜ್ ಕುಮಾರ್ ಸಮಾಧಿಗೆ ಇಂದು ಸಾವಿರಾರು ಮಂದಿ ಅಭಿಮಾನಿಗಳೂ ಭೇಟಿ ನೀಡಲಿದ್ದಾರೆ.

ಬಾಲ್ಯದಲ್ಲೇ ನಟನೆ: ಬಳಿಕ ಸೂಪರ್ ಸ್ಟಾರ್

ಬಾಲ್ಯದಲ್ಲಿ, ಅವರು ಅನೇಕ ಚಲನಚಿತ್ರಗಳಲ್ಲಿ ಕಾಣಿಸಿಕೊಂಡು ನಂತರ 32 ಚಿತ್ರಗಳಲ್ಲಿ ನಾಯಕರಾಗಿ ಕಾಣಿಸಿಕೊಂಡರು. ವಸಂತ ಗೀತೆ (1980), ಭಾಗ್ಯವಂತ (1981), ಚಲಿಸುವ ಮೋಡಗಳು (1982), ಎರಡು ನಕ್ಷತ್ರಗಳು (1983), ಭಕ್ತ ಪ್ರಹ್ಲಾದ (1983), ಯಾರಿವನು (1984) ಮತ್ತು ಬೆಟ್ಟದ ಹೂವು (1985) ಚಿತ್ರಗಳಲ್ಲಿ ಬಾಲನಟನಾಗಿ ಅಪ್ಪು ಮಾಡಿದ ಅಭಿನಯ ಪ್ರಶಂಸೆಗೆ ಪಾತ್ರವಾಗಿದೆ.

ಪ್ರಶಸ್ತಿಗಳ ಮಹಾಪೂರ

ಬೆಟ್ಟದ ಹೂವು ಚಿತ್ರದಲ್ಲಿನ ರಾಮು ಪಾತ್ರಕ್ಕಾಗಿ ಅವರು ಅತ್ಯುತ್ತಮ ಬಾಲ ಕಲಾವಿದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದರು . ಅವರು ಚಲಿಸುವ ಮೋಡಗಳು ಮತ್ತು ಎರಡು ನಕ್ಷತ್ರಗಳು ಗಾಗಿ ಕರ್ನಾಟಕ ರಾಜ್ಯ ಅತ್ಯುತ್ತಮ ಬಾಲ ಕಲಾವಿದ ಪ್ರಶಸ್ತಿಯನ್ನು ಗೆದ್ದಿದ್ದಾರೆ . ಪುನೀತ್ ಅವರ ಮೊದಲ ಪ್ರಮುಖ ಪಾತ್ರ 2002 ರ ಅಪ್ಪು . ಮೂರು ದಶಕಗಳ ಕಾಲದ ವೃತ್ತಿಜೀವನದಲ್ಲಿ, ಅವರು ಒಂದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ , ನಾಲ್ಕು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು , ಆರು ಫಿಲ್ಮ್‌ಫೇರ್ ಪ್ರಶಸ್ತಿಗಳು ದಕ್ಷಿಣ ಮತ್ತು ಐದು SIIMA ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಅವರಿಗೆ ಮೈಸೂರು ವಿಶ್ವವಿದ್ಯಾನಿಲಯವು ಡಾಕ್ಟರೇಟ್ ನೀಡಿ ಗೌರವಿಸಿದೆ . ಕರ್ನಾಟಕ ಸರ್ಕಾರವು ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಕರ್ನಾಟಕ ರತ್ನವನ್ನು 1 ನವೆಂಬರ್ 2022 ರಂದು ಮರಣೋತ್ತರವಾಗಿ ಪುನೀತ್ ರಾಜ್‌ಕುಮಾರ್ ಅವರಿಗೆ ನೀಡಿದೆ.

ಗಂಧದ ಗುಡಿ ಡಾ. ಪುನೀತ್ ರಾಜಕುಮಾರ್ ಕೊನೆ ಸಿನಿಮಾ

ಗಂಧದ ಗುಡಿ ಡಾ. ಪುನೀತ್ ರಾಜಕುಮಾರ್ ಅವರು ನಟಿಸಿದ ಕೊನೆಯ ಬೆಳ್ಳಿತೆರೆಯ ಡಾಕ್ಯು-ಡ್ರಾಮಾವಾಗಿದೆ.
ಕನ್ನಡದ ಕೋಟ್ಯಾಧಿಪತಿ ಎಂಬ ಗೇಮ್ ಶೋನಲ್ಲಿ ದೂರದರ್ಶನ ನಿರೂಪಕರಾಗಿ ಪಾದಾರ್ಪಣೆ ಮಾಡಿ ಜನ ಮನ ಗೆದ್ದಿದ್ದಾರೆ. ಅವರ ಭಾಷಾ ಶೈಲಿ, ನಿರೂಪಣಾ ಕೌಶಲ್ಯ,ಒಬ್ಬ ನಟನಾಗಿ ಅಭಿನಯದ ಬಗ್ಗೆ ಇರುವ ಆಸಕ್ತಿ ಮತ್ತು ಗೌರವ ಸಮಾಜಕ್ಕೆ ಮಾದರಿ.

ಸಾವಿರಾರು ಅನಾಥ ಮಕ್ಕಳಿಗೆ ನೆರವಾಗಿ, ದಾನ ಧರ್ಮದ ಮೂಲಕ ಹೆಸರಾಗಿ, ನೇತ್ರದಾನಕ್ಕೆ ಪ್ರೇರಣೆಯಾಗಿದ್ದ ಪುನೀತ್ ಹೆಸರಲ್ಲಿ ಇಂದಿಗೂ ಅವರ ಅಭಿಮಾನಿಗಳು ಸೇವೆ ಮಾಡುತ್ತಿದ್ದಾರೆ.ಪ್ರೀತಿಯ ಪರಮಾತ್ಮನನ್ನು ನೆನೆಯದ ದಿನಗಳೇ ಇಲ್ಲ. ಜೊತೆಗಿರದ ಜೀವ ಎಂದೆಂದೂ ಜೀವಂತ. ಅವರು ಮಾಡಿದ ಕೆಲಸಗಳೇ ಇಂದು ಜನರಿಗೆ ಸ್ಫೂರ್ತಿ. ಪುನೀತನಿಲ್ಲದ ದಿನಗಳು ನೆನೆಯಲು ಆಗದೇ ಇದ್ದರೂ, ಸರಳ ವ್ಯಕ್ತಿತ್ವದ ಕಣ್ಮಣಿ ಕಾಣೆಯಾದ ಈ ದಿನ ಎಲ್ಲರ ಕಣ್ಣಂಚಿನಲಿ ನಮಗೆ ಅರಿವಿಲ್ಲದೇ ಕಣ್ಣೀರು ಜಾರುತಲಿದೆ.

Categories
ಜಾತಕ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?
– ದೀಪಾವಳಿ ಮುನ್ನ ಹೇಗಿದೆ ನಿಮ್ಮ ಭವಿಷ್ಯ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಇಂದು ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಹಣದ ಒಳಹರಿವು ಹೆಚ್ಚಾಗುತ್ತದೆ. ಹೊಸ ಜವಾಬ್ದಾರಿ ಸಿಗಲಿದೆ. ಆದಾಯದ ಮೂಲವಾಗಲಿದೆ. ನಿಮ್ಮ ಉದ್ಯೋಗ ಮತ್ತು ವ್ಯವಹಾರದಲ್ಲಿ ಸಮಯ ಅನುಕೂಲಕರವಾಗಿರುತ್ತದೆ. ನಿಮ್ಮ ಕೆಲಸದಲ್ಲಿ ನೀವು ಬಯಸಿದ ಫಲಿತಾಂಶಗಳನ್ನು ಪಡೆಯುತ್ತೀರಿ. ನೀವು ಅನೇಕ ಯೋಜನೆಗಳ ಜವಾಬ್ದಾರಿಯನ್ನು ಪಡೆಯುತ್ತೀರಿ. ಆರ್ಥಿಕ ಲಾಭಕ್ಕಾಗಿ ಹೊಸ ಅವಕಾಶಗಳು ದೊರೆಯಲಿವೆ.

** ವೃಷಭ ರಾಶಿ :
ವೃಷಭ ರಾಶಿಯವರಿಗೆ ಇಂದು ಅತ್ಯಂತ ಶುಭ ದಿನವಾಗಲಿದೆ. ಉದ್ಯೋಗದ ನಿರೀಕ್ಷೆಯಲ್ಲಿರುವವರು ಒಳ್ಳೆಯ ಸುದ್ದಿಯನ್ನು ಪಡೆಯಬಹುದು. ಹೊಸ ಆಸ್ತಿ ಅಥವಾ ವಾಹನವನ್ನು ಖರೀದಿಸುವ ಅವಕಾಶವಿರುತ್ತದೆ. ಕೌಟುಂಬಿಕ ಜೀವನದಲ್ಲಿ ಸಂತೋಷ ಇರುತ್ತದೆ. ವ್ಯಾಪಾರ ಪರಿಸ್ಥಿತಿ ಬಲವಾಗಿರುತ್ತದೆ. ಕುಟುಂಬದ ಸದಸ್ಯರೊಂದಿಗೆ ನಡೆಯುತ್ತಿರುವ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಪ್ರಯತ್ನಿಸಿ.

** ಮಿಥುನ ರಾಶಿ :
ಇಂದು ನಿಮ್ಮ ಜೀವನದಲ್ಲಿ ಅನೇಕ ಏರಿಳಿತಗಳು ಕಂಡುಬರುತ್ತವೆ. ಹೊಸ ವ್ಯವಹಾರವನ್ನು ಪ್ರಾರಂಭಿಸುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇರುತ್ತದೆ. ಒಂಟಿ ಜನರ ವಿವಾಹವನ್ನು ಸರಿಪಡಿಸಬಹುದು. ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ. ಕೆಲಸದಲ್ಲಿ ಹೆಚ್ಚುವರಿ ಜವಾಬ್ದಾರಿಗಳಿಗೆ ಸಿದ್ಧರಾಗಿರಿ. ಇದು ವೃತ್ತಿಜೀವನದ ಬೆಳವಣಿಗೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.

** ಕರ್ಕಾಟಕ ರಾಶಿ :
ಇಂದು ನಿಮಗೆ ತುಂಬಾ ಶುಭ ದಿನವಾಗಿರುತ್ತದೆ. ಜೀವನದಲ್ಲಿ ಧನಾತ್ಮಕ ಬದಲಾವಣೆಗಳಾಗುತ್ತವೆ. ಕೌಟುಂಬಿಕ ಜೀವನದಲ್ಲಿ ಸಂತಸದ ವಾತಾವರಣ ಇರುತ್ತದೆ. ವ್ಯಾಪಾರದಲ್ಲಿ ಆರ್ಥಿಕ ಲಾಭ ದೊರೆಯಲಿದೆ. ಶೈಕ್ಷಣಿಕ ಕೆಲಸದಲ್ಲಿ ಸಕಾರಾತ್ಮಕ ಫಲಿತಾಂಶಗಳು ಕಂಡುಬರುತ್ತವೆ. ವೃತ್ತಿಜೀವನದಲ್ಲಿ ಹೊಸ ಸಾಧನೆಗಳನ್ನು ಸಾಧಿಸಲಾಗುವುದು. ಕೆಲಸದ ನಿಮಿತ್ತ ಪ್ರಯಾಣ ಮಾಡುವ ಅವಕಾಶವಿರುತ್ತದೆ.

** ಸಿಂಹ ರಾಶಿ :
ಇಂದು ನಿಮಗೆ ಉದ್ಯೋಗದಲ್ಲಿ ಒತ್ತಡ ಹೆಚ್ಚಾಗಲಿದೆ. ವ್ಯಾಪಾರದಲ್ಲಿ ಹೊಸ ವ್ಯಾಪಾರ ವ್ಯವಹಾರಗಳಲ್ಲಿ ಯಶಸ್ಸು ಇರುತ್ತದೆ. ಹಣದ ಹರಿವಿಗೆ ಹೊಸ ದಾರಿಗಳು ಸುಗಮವಾಗಲಿವೆ. ನಿಮ್ಮ ಆರೋಗ್ಯದ ಬಗ್ಗೆ ಸ್ವಲ್ಪವೂ ನಿರ್ಲಕ್ಷ್ಯ ವಹಿಸಬೇಡಿ. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ. ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧದಲ್ಲಿ ತಪ್ಪು ತಿಳುವಳಿಕೆಯನ್ನು ತೆಗೆದುಹಾಕಲು ಪ್ರಯತ್ನಿಸಿ.

** ಕನ್ಯಾ ರಾಶಿ :
ಇಂದು ನಿಮ್ಮ ವ್ಯಾಪಾರ ವಿಸ್ತರಣೆಯಾಗಲಿದೆ. ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ಆದಾಗ್ಯೂ, ಕುಟುಂಬ ಸದಸ್ಯರೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿರಬಹುದು. ನಿಮ್ಮ ಪ್ರೀತಿಪಾತ್ರರ ಆರೋಗ್ಯಕ್ಕೆ ಗಮನ ಕೊಡಿ. ಇಂದು ನೀವು ವೈವಾಹಿಕ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬಹುದು. ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಹಳೆಯ ಸ್ನೇಹಿತರ ಜೊತೆ ಸಭೆ ನಡೆಯಲಿದೆ.

** ತುಲಾ ರಾಶಿ :
ಇಂದು ತುಲಾ ರಾಶಿಯವರ ಜೀವನದಲ್ಲಿ ಸವಾಲುಗಳು ಹೆಚ್ಚಾಗಲಿವೆ. ಡ್ರೈವಿಂಗ್ ಮಾಡುವಾಗ ತುಂಬಾ ಜಾಗರೂಕರಾಗಿರಿ. ನಿಮ್ಮ ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಿರಿ. ಇದು ಸಂಬಂಧಗಳಲ್ಲಿ ಪ್ರೀತಿ ಮತ್ತು ವಿಶ್ವಾಸವನ್ನು ಹೆಚ್ಚಿಸುತ್ತದೆ. ಇಂದು ನಿಮ್ಮ ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ಹಣಕ್ಕೆ ಸಂಬಂಧಿಸಿದಂತೆ ದೀರ್ಘಕಾಲದ ವಿವಾದಗಳಿಂದ ನೀವು ಪರಿಹಾರವನ್ನು ಪಡೆಯುತ್ತೀರಿ.

** ವೃಶ್ಚಿಕ ರಾಶಿ :
ಈ ದಿನವು ನಿಮಗೆ ಅನುಕೂಲಕರವಾಗಿರುತ್ತದೆ. ನೀವು ಜೀವನದಲ್ಲಿ ದೀರ್ಘಕಾಲದ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯುತ್ತೀರಿ. ಹಣಕಾಸಿನ ವಿಷಯಗಳಲ್ಲಿ ಇಂದು ತೆಗೆದುಕೊಳ್ಳುವ ನಿರ್ಧಾರಗಳು ಸರಿಯಾಗಿವೆ ಎಂದು ಸಾಬೀತುಪಡಿಸುತ್ತದೆ. ಹಣಕ್ಕೆ ಸಂಬಂಧಿಸಿದ ವಿವಾದಗಳಿಂದ ನೀವು ಪರಿಹಾರವನ್ನು ಪಡೆಯುತ್ತೀರಿ. ಮನೆಯಲ್ಲಿ ಶುಭ ಕಾರ್ಯಗಳನ್ನು ಆಯೋಜಿಸಬಹುದು. ನ್ಯಾಯಾಲಯದ ಪ್ರಕರಣಗಳಲ್ಲಿ ಜಯ ದೊರೆಯಲಿದೆ.

** ಧನಸ್ಸು ರಾಶಿ :
ಇಂದು ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿಗಳನ್ನು ಪಡೆಯುತ್ತೀರಿ. ಕೆಲಸದ ಸ್ಥಳದಲ್ಲಿ ಅನಗತ್ಯ ವಾದಗಳನ್ನು ತಪ್ಪಿಸಿ. ಆಸ್ತಿ ವಿಚಾರದಲ್ಲಿ ಕುಟುಂಬದಲ್ಲಿ ಕಲಹ ಉಂಟಾಗಬಹುದು. ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ಅತಿಯಾದ ಕೋಪವನ್ನು ತಪ್ಪಿಸಿ ಮತ್ತು ಶಾಂತ ಮನಸ್ಸಿನಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. ಪಾಲುದಾರಿಕೆ ವ್ಯವಹಾರದಲ್ಲಿ ಯಾರನ್ನೂ ಕುರುಡಾಗಿ ನಂಬಬೇಡಿ.

** ಮಕರ ರಾಶಿ :
ಇಂದು ಅದೃಷ್ಟ ನಿಮ್ಮ ಕೈ ಹಿಡಿಯಲಿದೆ. ಉದ್ಯೋಗ ಮತ್ತು ವ್ಯಾಪಾರಕ್ಕೆ ವಾತಾವರಣವು ಅನುಕೂಲಕರವಾಗಿರುತ್ತದೆ. ಆದರೂ, ವಿರೋಧಿಗಳು ಸಕ್ರಿಯವಾಗಿ ಉಳಿಯುತ್ತಾರೆ. ಇದರಿಂದ ಸ್ವಲ್ಪ ತೊಂದರೆಯಾಗಲಿದೆ. ನೀವು ಕೆಲಸದಲ್ಲಿ ಅಡೆತಡೆಗಳನ್ನು ಎದುರಿಸಬಹುದು. ಇದು ನಿಮ್ಮ ಕಾರ್ಯಕ್ಷಮತೆಯ ಮೇಲೂ ಪರಿಣಾಮ ಬೀರುತ್ತದೆ. ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಿ.

** ಕುಂಭ ರಾಶಿ :
ಇಂದು ನಿಮ್ಮ ಕೆಲಸದ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಆರ್ಥಿಕ ಲಾಭಕ್ಕಾಗಿ ಹೊಸ ಅವಕಾಶಗಳಿವೆ. ಪಾಲುದಾರಿಕೆ ವ್ಯವಹಾರದಲ್ಲಿ ಬಹಳ ಜಾಗರೂಕರಾಗಿರಿ ಮತ್ತು ಹಣಕಾಸಿನ ವಿಷಯಗಳಲ್ಲಿ ಯಾರನ್ನೂ ಕುರುಡಾಗಿ ನಂಬಬೇಡಿ. ಇದರಿಂದ ಆರ್ಥಿಕ ನಷ್ಟ ಉಂಟಾಗಬಹುದು. ಹೊಸ ಹೂಡಿಕೆಯ ಅವಕಾಶಗಳ ಮೇಲೆ ಕಣ್ಣಿಡಿ ಮತ್ತು ಹೂಡಿಕೆ ನಿರ್ಧಾರಗಳನ್ನು ಬಹಳ ಚಿಂತನಶೀಲವಾಗಿ ತೆಗೆದುಕೊಳ್ಳಿ.

** ಮೀನ ರಾಶಿ :
ಇಂದು ಸಂದರ್ಭಗಳು ಪ್ರತಿಕೂಲವಾಗಬಹುದು. ಎಚ್ಚರಿಕೆಯಿಂದ ವಾಹನ ಚಲಾಯಿಸಿ. ಗಾಯಗಳು ಸಂಭವಿಸಬಹುದು. ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಆದರೆ, ವ್ಯವಹಾರದಲ್ಲಿ ಹಣ ನಷ್ಟವಾಗುವ ಲಕ್ಷಣಗಳಿವೆ. ಆದ್ದರಿಂದ, ಹಣಕಾಸಿನ ವಿಷಯಗಳಲ್ಲಿ ಬುದ್ಧಿವಂತಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. ಕಚೇರಿಯಲ್ಲಿ ಅನಗತ್ಯ ವಾದ ವಿವಾದಗಳಿಂದ ದೂರವಿರಿ.

Categories
ಚಿಕ್ಕಮಗಳೂರು

ಭಾರತದ 10 ಶುದ್ಧ ಗಾಳಿ ನಗರಗಳಲ್ಲಿ ಕಾಫಿ ನಾಡಿಗೆ ಸ್ಥಾನ!

ಭಾರತದ 10 ಶುದ್ಧ ಗಾಳಿ ನಗರಗಳಲ್ಲಿ ಕಾಫಿ ನಾಡಿಗೆ ಸ್ಥಾನ!
– ಚಿಕ್ಕಮಗಳೂರಿಗೆ 8ನೇ ಸ್ಥಾನ: ಆದ್ರೂ ಮಾಲಿನ್ಯ ಹೆಚ್ಚಳ
– ಪ್ರವಾಸೋದ್ಯಮದ ತವರು ಆತಂಕದತ್ತ..!

NAMMUR EXPRESS NEWS
ಚಿಕ್ಕಮಗಳೂರು:
ಪ್ರಸ್ತುತ ಭಾರತ ದೇಶದ ಸಾಕಷ್ಟು ಪ್ರದೇಶಗಳು ವಾಯು ಮಾಲಿನ್ಯ ಕಲುಷಿತ ವಾತವರಣದ ಸಮಸ್ಯೆಗಳನ್ನು ಎದುರಿಸುತ್ತಿವೆ. ಈ ನಡುವೆ ಶುದ್ಧಗಾಳಿ ಮತ್ತು ಅತೀ ಕಲುಷಿತ ಗಾಳಿ ಹೊಂದಿರುವ ನಗರಗಳ ಪಟ್ಟಿಯನ್ನು ಭಾರತದ ಕೇಂದ್ರ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಬಿಡುಗಡೆ ಮಾಡಿದೆ.
ಅಕ್ಟೋಬರ್ 24ರ ಗುರುವಾರ ಶುದ್ಧ ಗಾಳಿಯನ್ನು ಹೊಂದಿರುವ ದೇಶದ 10 ನಗರಗಳ ಪಟ್ಟಿಯನ್ನು ಮಂಡಳಿ ಬಿಡುಗಡೆ ಮಾಡಿದ್ದು ಇದರಲ್ಲಿ ರಾಜ್ಯದ ಮೂರು ಜಿಲ್ಲೆಗಳು ಸೇರಿವೆ, ಕಾಫಿನಾಡು ಚಿಕ್ಕಮಗಳೂರು ದೇಶದ ಶುದ್ಧ ಗಾಳಿಯ ನಗರಗಳ ಪಟ್ಟಿಯಲ್ಲಿ 8ನೇ ಸ್ಥಾನವನ್ನು ಪಡೆದಿದೆ. ಚಿಕ್ಕಮಗಳೂರು (ಎಕ್ಯೂಐ) ಶುದ್ಧ ಗಾಳಿಯ ಗುಣಮಟ್ಟದ ಮೌಲ್ಯ 30ಅನ್ನು ಪಡೆದಿದೆ. ಹಾಗೆಯೇ ಕರ್ನಾಟಕದ ಚಿಕ್ಕಬಳ್ಳಾಪುರ 5ನೇ ಸ್ಥಾನದಲ್ಲಿ ಹಾಗು ಮಡಿಕೇರಿ ನಗರ 6ನೇ ಸ್ಥಾನದಲ್ಲಿ ಇದೆ. ಈ ಮೂಲಕ ಭಾರತದ ಶುದ್ಧ ಗಾಳಿ ಹೊಂದಿರುವ ನಗರಗಳ ಪಟ್ಟಿಯಲ್ಲಿ ಕರ್ನಾಟಕ ರಾಜ್ಯದ ಮೂರು ನಗರಗಳು ಟಾಪ್ 10ರ ಒಳಗೆ ಸ್ಥಾನ ಪಡೆದಿದೆ. ಈ ಪಟ್ಟಿಗಳು ಬದಲಾವಣೆ ಕೂಡ ಆಗಿರುತ್ತದೆ ಸದ್ಯದ ಗುಣಮಟ್ಟ ಈ ರೀತಿಯಲ್ಲಿದೆ. ಕಳೆದ 4 ತಿಂಗಳ ಹಿಂದೆ ನಮ್ಮ ರಾಜ್ಯದ ಗದಗ ದೇಶದಲ್ಲಿಯೆ 2ನೇ ಸ್ಥಾನವನ್ನು ಪಡೆದು
ಕೊಂಡಿತ್ತು. ಗದಗ ಆ ಸಮಯದಲ್ಲಿ ಶುದ್ಧ ಗಾಳಿಯ ಮೌಲ್ಯ 22ವನ್ನ ಪಡೆದಿತ್ತು.

ಪಟ್ಟಿಯಲ್ಲಿ ಕುಸಿದ ಸ್ಥಾನ!

ಕಳೆದ ಬಾರಿ ಶುದ್ಧ ಗಾಳಿಯ ಪ್ರದೇಶದ ಪಟ್ಟಿ ಬಿಡುಗಡೆ ಮಾಡಿದಾಗ ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ 2ನೇ ಸ್ಥಾನ ಪಡೆದುಕೊಂಡಿತ್ತು. ಈಗ ನಗರಗಳ ಪಟ್ಟಿಯಲ್ಲಿ ಚಿಕ್ಕಮಗಳೂರು ದೇಶದಲ್ಲಿ 8ನೇ ಸ್ಥಾನಕ್ಕೆ ಕುಸಿದಿದೆ. ಇದು ಕಾಫಿ ನಾಡು ಚಿಕ್ಕಮಗಳೂರಿನ ಜನರಿಗೆ ಸಂತಸವನ್ನು ತಂದಿದೆ. ಈ ಕುರಿತಾಗಿ ದೇಶದ ಪ್ರಮುಖ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದು ಕರ್ನಾಟಕದ ನಗರಗಳು ಟಾಪ್ 10ರ ಒಳಗೆ ಬಂದಿರುವುದನ್ನು ಶ್ಲಾಘನೀಯ ಉಳಿದಂತೆ ಚಿಕ್ಕಮಗಳೂರು ಪಶ್ಚಿಮ ಘಟ್ಟ ಪರ್ವತ ಶ್ರೇಣಿಯನ್ನು ಹೊಂದಿರುವ ಜಿಲ್ಲೆ ಹಾಗೆಯೇ ಜಿಲ್ಲೆಯ ಮುಳ್ಳಯ್ಯಗಿರಿ ರಾಜ್ಯದ ಅತೀ ಎತ್ತರದ ಶಿಖರವನ್ನು ಹೊಂದಿದೆ.
ಕಾಫಿಯ ತವರು ಜಿಲ್ಲೆಯ ಚಾರ್ಮಾಡಿ, ಕೆಮ್ಮಣ್ಣುಗುಂಡಿ, ಕಳಸ, ಕುದುರೆಮುಖ ಸೇರಿದಂತೆ ಹಲವು ಪ್ರದೇಶಗಳು ಪ್ರಕೃತಿ ಸೊಬಗಿನಿಂದ ಜನರನ್ನು ಸೆಳೆಯುತ್ತವೆ. ಬೆಟ್ಟ ಗುಡ್ಡಗಳ ದೂರದಲ್ಲಿ ಚಿಕ್ಕಮಗಳೂರು ನಗರವಿದ್ದು ಕಾಫಿ ತೋಟಗಳು ಮತ್ತು ಅರೆ ಮಲೆನಾಡಿಗೆ ಹೊಂದಿಕೊಂಡಂತೆ ಇದೆ. ಜಿಲ್ಲೆ ರಾಜ್ಯ ಹಾಗು ವಿದೇಶಗಳಿಂದ ಹೆಚ್ಚು ಪ್ರವಾಸಿಗರು ಆಗಮಿಸುತ್ತಾರೆ. ಚಿಕ್ಕಮಗಳೂರು ನಗರದಲ್ಲಿ ಮತ್ತಷ್ಟು ಸ್ವಚ್ಛತೆಗೆ ಜಿಲ್ಲಾಡಳಿತ ಒತ್ತು ನೀಡಬೇಕಿದೆ. ಆಗ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಚಿಕ್ಕಮಗಳೂರು ಉತ್ತಮ ಸ್ಥಾನ ಪಡೆಯಲಿದೆ.

Categories
ರಾಜ್ಯ

ಪಟಾಕಿ ಸಿಡಿಸಲು ಕೇವಲ 2 ಗಂಟೆ ಅವಕಾಶ?!

ಪಟಾಕಿ ಸಿಡಿಸಲು ಕೇವಲ 2 ಗಂಟೆ ಅವಕಾಶ?!
* 125 ಡೆಸಿಬಲ್‌ಗಿಂತ ಹೆಚ್ಚು ಶಬ್ದ, ಹೊಗೆ, ರಾಸಾಯನಿಕ ಪಟಾಕಿ ನಿಷೇಧ
* ಪಟಾಕಿ ಸಿಡಿಸಲು ನಿಯಮ ಏನೇನು?

NAMMUR EXPRESS NEWS
ಬೆಂಗಳೂರು:
ಬೆಳಕಿನ ಹಬ್ಬ ದೀಪಾವಳಿ ಸಮೀಪಿಸ್ತಿದೆ. ಸಂಭ್ರಮ-ಸಡಗರದಿಂದ ಹಬ್ಬ ಆಚರಿಸಲು ಭಾರೀ ತಯಾರಿ-ತಾಲೀಮು ನಡೆಯುತ್ತಿದೆ. ಪಟಾಕಿ ಹೊಡೆಯಲು ಯುವಕರು ಕಾತರದಿಂದ ಕಾಯ್ತಿದ್ದಾರೆ. ಈ ನಡುವೆ ಪಟಾಕಿ ಸಿಡಿಸಲು ಪೊಲೀಸ್ ಇಲಾಖೆ ಗೈಡ್‌ಲೈನ್ಸ್ ಸಹ ಹೊರಡಿಸಿದೆ.
ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಈಗಾಗಲೇ ದೇಶಾದ್ಯಂತ ಸಂಭ್ರಮ ಮನೆಮಾಡಿದೆ. ಹೊಸ ಡ್ರೆಸ್ ಹಾಕಿ ಮಿಂಚೋಕೆ ಎಲ್ಲರೂ ತಯಾರಿ ನಡೆಸಿದ್ದಾರೆ. ಮಾತ್ರವಲ್ಲದೇ ಹಬ್ಬಕ್ಕೆ ಹಣತೆಗಳು ಸೇರಿದಂತೆ ತರಹೇವಾರಿ ಸಂಭ್ರಮ ದ್ವಿಗುಣಗೊಳಿಸುವಂತ ಎಲ್ಲ ವಸ್ತುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
ಇತ್ತ ಯುವಕರು ಪಟಾಕಿ ಸಿಡಿಸಲು ಕಾತರದಿಂದ ಕಾಯ್ತಿದ್ದಾರೆ. ಸರ್ಕಾರ ಈ ಸಂಭ್ರಮಕ್ಕೆ ಕೊಂಚ ಕಡಿವಾಣ ಹಾಕಿದೆ.

ಪಟಾಕಿ ಸಿಡಿಸಲು ಗೈಡ್‌ಲೈನ್ಸ್ ಹೇಗಿದೆ?

• ದೀಪಾವಳಿಗೆ ಹಸಿರು ಪಟಾಕಿ ಸಿಡಿಸಲು ಮಾತ್ರ ಅವಕಾಶ
• ಪರಿಸರಕ್ಕೆ ಹಾನಿಕರ ಪಟಾಕಿ ಹಚ್ಚೋದು ಸಂಪೂರ್ಣ ನಿಷೇಧ
• ರಾತ್ರಿ 8 ರಿಂದ 10 ಗಂಟೆವರೆಗೆ ಮಾತ್ರ ಪಟಾಕಿ ಸಿಡಿಸಬೇಕು
• ನಿಷೇಧಿತ ಪಟಾಕಿ ಸಿಡಿಸದಂತೆ ತಡೆಯಲು ಅಗತ್ಯ ಕ್ರಮಗಳು
• ನಿಗಧಿತ ಅವಧಿ ಮೀರಿ ಪಟಾಕಿ ಸಿಡಿಸಿದ್ರೆ ಕೇಸ್ ದಾಖಲು
• ಪರಿಸರ ಸಂರಕ್ಷಣಾ ಕಾಯ್ದೆ 1986, ಶಬ್ದ ಮಾಲಿನ್ಯ ಕಾಯ್ದೆ-2000
• ಬಿಎನ್‌ಎಸ್ ಆ್ಯಕ್ಟ್ 2023 ಅಡಿಯಲ್ಲಿ ಕೇಸ್ ಬೀಳೋದು ಪಕ್ಕಾ
• ಪಟಾಕಿ ತಯಾರಕರು, ಮಾರಾಟಗಾರರಿಗೂ ಮಾರ್ಗಸೂಚಿ
• ಪಟಾಕಿ ಅವಘಡಗಳು ಆಗದಂತೆ ಮಾರಾಟ ಮಾಡಲು ಸೂಚನೆ

ಪಟಾಕಿ ಹೊಡೆಯುವಾಗ ಸಾಕಷ್ಟು ಬಾರಿ ಕಣ್ಣಿಗೆ ಗಾಯಗಳಾಗುವ ಸಂಭವ ಹೆಚ್ಚು. ಇದು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಒಟ್ಟಾರೆ ಸುಪ್ರೀಂ ಕೋರ್ಟ್ 125 ಡೆಸಿಬಲ್‌ಗಿಂತ ಹೆಚ್ಚು ಶಬ್ದ ಮಾಡುವ ಮತ್ತು ಹೆಚ್ಚು ಹೊಗೆ ಹೊರಹೊಮ್ಮುವ ರಾಸಾಯನಿಕ ಪಟಾಕಿಗಳನ್ನು ನಿಷೇಧಿಸಿದೆ. ಇದನ್ನು ಕಟ್ಟುನಿಟ್ಟಾಗಿ ಪಾಲಿಸಲು ಸರ್ಕಾರ ಮುಂದಾಗಿದೆ. ಹೀಗಾಗಿ ಪಟಾಕಿ ಸಿಡಿಸೋಕು ಮುನ್ನ ಎಚ್ಚರ.

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

ಉಡುಪಿ: ಸ್ಕೂಟರ್‌ನಲ್ಲಿ ಗಾಂಜಾ ಸಾಗಾಟ – ಜಬ್ಬಾರ್ ಅರೆಸ್ಟ್.!

* ಪುತ್ತೂರು: 22ಸಾವಿರ ರೂ.ಮೌಲ್ಯದ ಬೀಡಿಗಳನ್ನು ಕಳವು ಪ್ರಕರಣ!
* ಪುತ್ತೂರು : ಲಾರಿ-ದೋಸ್ತ್ ವಾಹನ ನಡುವೆ ಢಿಕ್ಕಿ; ಆರೋಪಿಗೆ ಶಿಕ್ಷೆ ಪ್ರಕಟ!

NAMMUR EXPRESS NEWS
ಉಡುಪಿ :
ಸ್ಕೂಟರ್‌ನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಉಡುಪಿ ಸೆನ್ ಪೊಲೀಸರು ಪೆರಂಪಳ್ಳಿ ಎಂಬಲ್ಲಿರುವ ಸಾಯಿರಾಧಾ ಟೌನ್‌ಶಿಪ್ ಬಳಿ ಬಂಧಿಸಿದ್ದಾರೆ.ಉಡುಪಿ ಕೇಳಾರ್ಕಳಬೆಟ್ಟು ನಿವಾಸಿ ಅಬ್ದುಲ್ ಜಬ್ಬಾರ್ (27) ಬಂಧಿತ ಆರೋಪಿ.
ಈತನಿಂದ ಒಟ್ಟು 3,04,610ರೂ. ಮೌಲ್ಯದ 2 ಕೆ.ಜಿ 344 ಗ್ರಾಂ ಗಾಂಜಾ, ಸ್ಕೂಟರ್, 5810 ರೂ. ನಗದು, ಮೊಬೈಲ್ ಹಾಗು ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸೆನ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ನೇತೃತ್ವದಲ್ಲಿ ಉಪನಿರೀಕ್ಷಕ ಪವನ್ ನಾಯಕ್, ಸಿಬ್ಬಂದಿ ಪ್ರವೀಣ್ ಕುಮಾರ್, ಪ್ರವೀಣ್, ವೆಂಕಟೇಶ್, ರಾಜೇಶ್, ಯತೀನ್ ಕುಮಾರ್, ಪ್ರಶಾಂತ್ ಮತ್ತು ಚರಣ್‌ ರಾಜ್ ಅವರನ್ನೊಳಗೊಂಡ ತಂಡವು ಈ ಕಾರ್ಯಾಚರಣೆ ನಡೆಸಿದೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಪುತ್ತೂರು: 22ಸಾವಿರ ರೂ.ಮೌಲ್ಯದ ಬೀಡಿಗಳನ್ನು ಕಳವು ಪ್ರಕರಣ!

ಪುತ್ತೂರು: 2 ವರ್ಷದ ಹಿಂದೆ ಪುತ್ತೂರಿನ ಬೀಡಿ ಬ್ರ್ಯಾಂಚ್‌ವೊಂದರಿಂದ ಸಾವಿರಾರು ರೂಪಾಯಿ ಮೌಲ್ಯದ ಬೀಡಿ ಕದ್ದ ಪ್ರಕರಣದ ಆರೋಪಿಯನ್ನು ಪುತ್ತೂರು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕಡಬ ತಾಲೂಕಿನ ಕುದ್ಮಾರು ಗ್ರಾಮದ ಏರ್ಕಮೆ ನಿವಾಸಿ ಮಹಮ್ಮದ್ ಕುಂಞಿ ಬಂಧಿತ ಆರೋಪಿಯಾಗಿದ್ದಾನೆ.
2022ರಲ್ಲಿ ಕೂರ್ನಡ್ಕದ ಬೀಡಿ ಬ್ರ್ಯಾಂಚ್‌ವೊಂದರಿಂದ ಸುಮಾರು 22ಸಾವಿರ ರೂ.ಮೌಲ್ಯದ ಬೀಡಿಗಳನ್ನು ಕಳವು ಮಾಡಿದ ಪ್ರಕರಣದಲ್ಲಿ ಬಂಧಿತರಾಗಿದ್ದರು. ನ್ಯಾಯಾಲಯದಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಂಡ ಬಳಿಕ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದರು.
ನ್ಯಾಯಾಲಯ ಆರೋಪಿ ವಿರುದ್ಧ ವಾರಂಟ್ ಜಾರಿ ಮಾಡಿತ್ತು. ತನಿಖೆ ಕೈಗೆತ್ತಿಕೊಂಡ ಪುತ್ತೂರು ನಗರ ಠಾಣಾ ಪೊಲೀಸರು ಇನ್‌ಸ್ಪೆಕ್ಟರ್ ಜಾನ್ಸನ್ ಡಿಸೋಜ ಅವರ ಮಾರ್ಗದರ್ಶನದಂತೆ ಸಿಬ್ಬಂದಿಗಳಾದ ವಸಂತ ಗೌಡ ಮತ್ತು ಬಸವರಾಜು ಅವರು ಆರೋಪಿಯನ್ನು ಉಳ್ಳಾಲದ ಕೆ ಸಿ ರೋಡ್ ಎಂಬಲ್ಲಿ ಬಂಧಿಸಿದ್ದಾರೆ.

* ಪುತ್ತೂರು : ಲಾರಿ-ದೋಸ್ತ್ ವಾಹನ ನಡುವೆ ಢಿಕ್ಕಿ; ಆರೋಪಿಗೆ ಶಿಕ್ಷೆ ಪ್ರಕಟ!

ಪುತ್ತೂರು: ಕಡಬ ತಾಲೂಕು ಕೊಣಾಲು ಗ್ರಾಮದ ಕೋಲ್ಪೆ ಮಸೀದಿ ಬಳಿ 2021ರ ಫೆ. 25ರಂದು ಲಾರಿ ಹಾಗೂ ದೋಸ್ತ್ ವಾಹನ ನಡುವೆ ಢಿಕ್ಕಿ ಸಂಭವಿಸಿ ದೋಸ್ತ್ ವಾಹನ ಚಾಲಕ ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶ ಎಚ್‌. ಆರ್‌. ಶಿವಣ್ಣ ಅವರ ಪೀಠ ಲಾರಿ ಚಾಲಕನಿಗೆ 6 ತಿಂಗಳ ಜೈಲು ಶಿಕ್ಷೆ ಮತ್ತು ಒಂದು ಸಾವಿರ ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.
ಹಾಸನ ಕಡೆಗೆ ಹೋಗುತ್ತಿದ್ದ ಲಾರಿ ಹಾಗೂ ಮಂಗಳೂರು ಕಡೆಗೆ ಹೋಗುತ್ತಿದ್ದ ದೋಸ್ತ್ ಗಾಡಿ ನಡುವೆ ಈ ಢಿಕ್ಕಿ ಸಂಭವಿಸಿತ್ತು. ಪರಿಣಾಮ ದೋಸ್ತ್ ಗಾಡಿ ಚಾಲಕ ಚೇತನ್‌ ಗಂಭೀರ ಗಾಯಗೊಂಡ ಪರಿಣಾಮ ಮೃತಪಟ್ಟಿದ್ದರು. ಸರಕಾರದ ಪರವಾಗಿ ಅಭಿಯೋಜಕ ಕವಿತಾ ವಾದ ಮಂಡಿಸಿದರು.