Categories
ಮಾಹಿತಿ ಸುದ್ದಿ

ಹೊದಲ ಗ್ರಾಪಂ ಸದಸ್ಯರ ಹೇಳಿಕೆಗೆ ಸತೀಶ್, ನಿಶ್ಚಿತಾ ಪತ್ರಿಕಾ ಹೇಳಿಕೆ

ಹೊದಲ ಗ್ರಾಪಂ ಸದಸ್ಯರ ಹೇಳಿಕೆಗೆ ಸತೀಶ್, ನಿಶ್ಚಿತಾ ಪತ್ರಿಕಾ ಹೇಳಿಕೆ

– ಅನಿತಾ ಶ್ರೀಧರ್‌ರವರು ಹಣ ಮತ್ತು ಅಧಿಕಾರದ ಆಸೆಗೆ ಪಕ್ಷ ಬದಲಾವಣೆ
– ಮನೆ ವಂಚಿತರಿಗೆ ಮನೆ ಕೊಡಿಸುವ ಕೆಲಸ ಹಾಗೂ ಅಭಿವೃದ್ಧಿ ಬಗ್ಗೆ ವಿನಾಯಕ ತುಪ್ಪದಮನೆ ಚರ್ಚೆ ಮಾಡಿದ್ದಾರೆ

NAMMUR EXPRESS NEWS

ಗ್ರಾಮ ಪಂಚಾಯಿತಿ ಸದಸ್ಯರಾದ ವಿನಾಯಕರವರು ಎಲ್ಲೂ ಕೂಡ ವೈಯಕ್ತಿಕವಾಗಿ ಅನುದಾನ ಅಥವಾ ಕಾರ್ಯಕ್ರಮವನ್ನು ಕೇಳಲಿಲ್ಲ. ಜನರ ತೆರಿಗೆ ಹಣದಲ್ಲಿ ನಡೆಯುತ್ತಿರುವ ಸರ್ಕಾರದ ಅನುದಾನಗಳನ್ನು ಮತ್ತು ಕಾರ್ಯಕ್ರಮಗಳನ್ನು ಕೇಳಿರುವುದು. ನಮ್ಮ ಅಭಿಪ್ರಾಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ನಾಗರೀಕರಿಗೂ ಈ ಹಕ್ಕು ಇದೆ ಎಂದು ಭಾವಿಸಿರುತ್ತೇನೆ.

ಕಾಂಗ್ರೆಸ್ ಪಕ್ಷದ ವಿಚಾರದ ಬಗ್ಗೆ ನಮ್ಮ ನಾಯಕರುಗಳು ನೋಡಿಕೊಳ್ಳುತ್ತಾರೆ. ಒಂದು ಕಡೆ ವಿನಾಯಕರವರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆ ಬೆಂಬಲಿಸಿದ್ದರು ಎನ್ನುತ್ತೀರಿ. ಇನ್ನೊಂದು ಕಡೆ ಮೋದಿಯವರನ್ನು ಟೀಕಿಸಿರುತ್ತಾರೆ ಎನ್ನುತ್ತೀರಿ. ಮೋದಿಯವರನ್ನು ಟೀಕಿಸುವವರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲಿಸುತ್ತಾರಾ ಎಂಬ ಸಾಮಾನ್ಯ ಜ್ಞಾನವು ಗ್ರಾಮ ಪಂಚಾಯಿತಿ ಸದಸ್ಯ ದಿನೇಶ್‌ರವರಿಗೆ ಇಲ್ಲದೆ ಗೊಂದಲದಲ್ಲಿ ಇದ್ದಂತಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಬದನೆಹಿತ್ತು ಸತೀಶ್‌ರವರು ಅಭಿಪ್ರಾಯ ತಿಳಿಸಿರುತ್ತಾರೆ.

ವಿನಾಯಕ್‌ರವರ ಹೇಳಿಕೆಗಳನ್ನು ಬಿಜೆಪಿ ಕಾರ್ಯಕರ್ತರು ಗಮನಿಸುತ್ತಿದ್ದಾರೆ ಎಂದು ಹೇಳಿದ್ದೀರಾ, ಆದರೆ ಬಡವರ ಪರ, ಹಿಂದುಳಿದ ವರ್ಗದವರ ಪರ, ವಂಚಿತರ ಪರ, ರೈತರ ಪರ ವಿನಾಯಕರವರು ಧ್ವನಿ ಎತ್ತಿರುವುದನ್ನು ಪಕ್ಷಾತೀತ್ಯವಾಗಿ ಎಲ್ಲರೂ ಗಮನಿಸುತ್ತಿದ್ದಾರೆ ಎನ್ನುವುದು ನಿಮ್ಮ ಅರಿವಿನಲ್ಲಿರಲಿ. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾರವರು ಇನ್ನೊಬ್ಬರ ವರದಿಯನ್ನು ತಮ್ಮ ಹೆಸರು ಹುದ್ದೆ ಮೂಲಕ ಸ್ಪಷ್ಟ ಪಡಿಸುವಂತೆ ಮಾಡಿದ್ದು, ಬಾಲೀಶತನದ ಪರಮಾವಧಿ ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ. ಶ್ರೀಮತಿ ಅನಿತಾ ಶ್ರೀಧರ್‌ರವರು ಹಿಂದಿನ ಅವಧಿಯಲ್ಲಿ ಕಾಂಗ್ರೆಸ್ ಬೆಂಬಲವನ್ನು ಗೆದ್ದು, ರಾತ್ರೋರಾತ್ರಿ ಹಣ ಮತ್ತು ಅಧಿಕಾರದ ಆಸೆಗೆ ಬಿಜೆಪಿ ಬಾಗಿಲು ತಟ್ಟಿ ಈಗ ಗ್ರಾಮ ಪಂಚಾಯಿತಿ ಸದಸ್ಯರಾದ ವಿನಾಯಕರವರಿಗೆ ವೈಯಕ್ತಿಕ ಪಕ್ಷದ ವಿಚಾರ ಮತ್ತು ರಾಜಕೀಯ ಪಾಠ ಮಾಡುತ್ತಿರುವುದು, ಉಪವಾಸ ಸತ್ಯಾಗ್ರಹ ನಡೆಯುವ ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿಜೆಪಿ ಬೆಂಬಲಿತ ಅನಿತಾರವರು ಬಂದು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿರುವುದು ಕೂಡ ತೀರಾ ಹಾಸ್ಯಸ್ಪದವಾಗಿದೆ. ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಜವಾಬ್ದಾರಿ ಸ್ಥಾನದಲ್ಲಿರುವ ನೀವುಗಳು ಹುದ್ದೆಯ ಗೌರವವನ್ನು ಅರಿತು ಹೊದಲ ಅರಳಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನೆ ವಂಚಿತರಿಗೆ ಮನೆ ಕೊಡಿಸುವ ಕೆಲಸ ಮಾಡಿ ಬೇರೆ ಅಭಿವೃದ್ಧಿ ವಿಚಾರಕ್ಕೆ ಸಂಬಂದಿಸಿದಂತೆ ಮುಂದಿನ ದಿನಗಳಲ್ಲಿ ನಿಮಗೆ ಗ್ರಾಮ ಪಂಚಾಯತಿ ಸದಸ್ಯ ವಿನಾಯಕರವರೇ ಉತ್ತರಿಸುತ್ತಾರೆ ಎಂದು ಗ್ರಾಮ ಪಂಚಾಯತಿ ಸದಸ್ಯೆ ನಿಶ್ಚಿತಾ ಅವರು ತಿಳಿಸಿದ್ದಾರೆ.

Categories
ಅಡಿಕೆ-ದರ

ಅಡಿಕೆ ದರ ಎಷ್ಟಿದೆ?

ಅಡಿಕೆ ದರ ಎಷ್ಟಿದೆ?
– ರಾಶಿ ಎಷ್ಟು? ಬೆಟ್ಟೆ ಎಷ್ಟು ?

NAMMUR EXPRESS NEWS
ಸರಕು
53109-90800

ಬೆಟ್ಟೆ
50500-53200-56300

ರಾಶಿ
42669-49000-51001

ಗೊರಬಲು
18029-31600-32509

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಅದ್ದೂರಿ ಕನ್ನಡಮ್ಮನ ರಥಯಾತ್ರೆ

ತೀರ್ಥಹಳ್ಳಿಯಲ್ಲಿ ಅದ್ದೂರಿ ಕನ್ನಡಮ್ಮನ ರಥಯಾತ್ರೆ
– 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಪ್ರಚಾರ
– ಕನ್ನಡ ಹಬ್ಬದ ಸಂಭ್ರಮಕ್ಕೆ ತೀರ್ಥಹಳ್ಳಿಯಲ್ಲಿ ಅದ್ದೂರಿ ಸ್ವಾಗತ

NAMMUR EXPRESS NEWS
ತೀರ್ಥಹಳ್ಳಿ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಜ್ಯೋತಿ ತೀರ್ಥಹಳ್ಳಿಗೆ ಆಗಮಿಸಿದ್ದು, ಅದ್ದೂರಿಯಾಗಿ ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಪರ ಸಂಘಟನೆಗಳು ಮತ್ತು ಜನಪ್ರತಿನಿಧಿಗಳು ಸ್ವಾಗತಿಸಿದರು.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ಡಿಸೆಂಬರ್ 20 21 22 ಮೂರು ದಿನಗಳ ಕಾಲ ನಡೆಯಲಿದೆ.ಇದು 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವಾಗಿದ್ದು, ಇದರ ಅಂಗವಾಗಿ ತಾಯಿ ಭುವನೇಶ್ವರಿ ದೇವಿಯ ಉಂಗುರವನ್ನು ಹೊತ್ತಂತಹ ಕನ್ನಡ ಜ್ಯೋತಿಯ ರಥ ಅಕ್ಟೋಬರ್ 27ರಂದು ದಾವಣಗೆರೆ ಜಿಲ್ಲೆಯ ಮೂಲಕ ಶಿಕಾರಿಪುರಕ್ಕೆ ಬಂದಿದ್ದು, ಜಿಲ್ಲಾಧ್ಯಕ್ಷರು ಸ್ವಾಗತವನ್ನು ಮಾಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ಸಂಸದರು ಕೂಡ ಭಾಗಿಯಾಗಿದ್ದು ಅಕ್ಟೋಬರ್ 27ರಂದು ಸಾಗರದಲ್ಲಿ ಸಂಜೆ ಅದ್ದೂರಿಯಾಗಿ ಬರಮಾಡಿಕೊಂಡರು. ತೀರ್ಥಹಳ್ಳಿಯಲ್ಲಿ ಶಾಸಕರು, ಮಾಜಿ ಗೃಹ ಸಚಿವರು ಆರಗ ಜ್ಞಾನೇಂದ್ರ ಮತ್ತು ಮಲೆನಾಡು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಆರ್ ಎಂ ಮಂಜುನಾಥ್ ಗೌಡ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರು ಡಿ ಮಂಜುನಾಥ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಟಿ. ಕೆ ರಮೇಶ್ ಶೆಟ್ಟಿ ಮತ್ತು ತಾಲೂಕು ಆಡಳಿತ ಮತ್ತು ಪಟ್ಟಣ ಪಂಚಾಯಿತಿಯ ಎಲ್ಲ ಸದಸ್ಯರು ಈ ರಥವನ್ನು ಅದ್ದೂರಿಯಾಗಿ ಅಹ್ವಾನ ಮಾಡಿದರು.
ಮೆರವಣಿಗೆ ಬಳಿಕ ಬಂಟರ ಭವನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ರಥ ಅಹ್ವಾನ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಕನ್ನಡ ಹೆಮ್ಮೆಯನ್ನು ಸಾರುವಂತಹ ಕಾರ್ಯಕ್ರಮಗಳನ್ನು ತಾಲ್ಲೂಕು ಕನ್ನಡ ಪರಿಷತ್ ಮತ್ತು ತಾಲ್ಲೂಕು ಸಾಹಿತ್ಯ ಮತ್ತು ಸಂಸ್ಕೃತಿಕ ವೇದಿಕೆ ಜಾನಪದ ಪರಿಷತ್ ಮೂರು ಸಂಘಟನೆಗಳು ಸೇರಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾಜಿ ಗೃಹಸಚಿವರು ಮತ್ತು ಶಾಸಕರಾದ ಆರಗ ಜ್ಞಾನೇಂದ್ರ, ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರು ಡಿ ಮಂಜುನಾಥ್, ಮಲೆನಾಡು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಆರ್ ಎಂ ಮಂಜುನಾಥ್ ಗೌಡ, ಪಟ್ಟಣ ಪಂಚಾಯತ್ ಸದಸ್ಯರಾದ ರತ್ನಾಕರ್ ದತ್ತ, ಶಬನಮ್, ತಾಲೂಕು ದಂಡಾಧಿಕಾರಿ ರಂಜಿತ್ ಎಸ್, ನಿವೃತ್ತ ಪ್ರಾಂಶುಪಾಲರು ಡಿ.ಎಸ್ ಸೋಮಶೇಖರ್, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಟಿ.ಕೆ ರಮೇಶ್ ಶೆಟ್ಟಿ, ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಸುರೇಂದ್ರ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರು ಗೀತಾ ರಮೇಶ್, ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ವೈ.ವಿ ಗಣೇಶ್ ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.

Categories
ಮಾಹಿತಿ

ಈಡಿಗ ಹಾಗೂ 26 ಪಂಗಡದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ

ಈಡಿಗ ಹಾಗೂ 26 ಪಂಗಡದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ
– ಅ.25ರಿಂದ ಅರ್ಜಿ ಅಹ್ವಾನ: ನೀವೂ ಅರ್ಜಿ ಹಾಕಬಹುದು
– ಪದವಿ, ಸ್ನಾತಕೋತ್ತರ ಪದವಿ ಮತ್ತು ಬಿ.ಎಡ್ ವ್ಯಾಸಂಗ ಮಾಡುತ್ತಿರುವವರಿಗೆ ಅವಕಾಶ

NAMMUR EXPRESS NEWS
ಶ್ರೀ. ಜೆ. ಪಿ. ನಾರಾಯಣಸ್ವಾಮಿ ಪ್ರತಿಷ್ಠಾನದ (JPNP) ವತಿಯಿಂದ 2024- 2025ನೇ ಸಾಲಿನಲ್ಲಿ ಯಾವುದೇ ಪದವಿ, ಸ್ನಾತಕೋತ್ತರ ಪದವಿ ಮತ್ತು B.Ed ವ್ಯಾಸಂಗ ಮಾಡುತ್ತಿರುವ ಆರ್ಯ ಈಡಿಗ ಮತ್ತು 26 ಪಂಗಡಗಳ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು 25ನೇ ಅಕ್ಟೋಬರ್ 2024 ರಿಂದ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ವೆಬ್ಸೈಟ್ ಮೂಲಕ ಆನ್ ‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10ನೇ ನವೆಂಬರ್ 2024.
ವೆಬ್ಸೈಟ್ ವಿಳಾಸ Jpnp.org.in

ಆದಷ್ಟು ಕರ್ನಾಟಕದ ಎಲ್ಲಾ ಮೂಲೆ ಮೂಲೆಯಲ್ಲಿ ಇರುವ ಕಟ್ಟ ಕಡೆಯ ಅರ್ಹ ವಿದ್ಯಾರ್ಥಿಗಳಿಗೂ ಈ ವಿದ್ಯಾರ್ಥಿ ವೇತನ ತಲುಪಿಸುವ ಗುರಿ ಹೊಂದಲಾಗಿದೆ.

ಶಿವು ಹೊದಲ
ಸಂಚಾಲಕರು
ಶ್ರೀ J P ನಾರಾಯಣಸ್ವಾಮಿ ಪ್ರತಿಷ್ಠಾನ, ಬೆಂಗಳೂರು.

ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನೀಡಲು ತೀರ್ಥಹಳ್ಳಿಯ ಸಂತೆ ಮಾರುಕಟ್ಟೆ ರಸ್ತೆಯ ಶ್ರೀ ನಾರಾಯಣ ಗುರು ಸೊಸೈಟಿಗೆ ಭೇಟಿ ನೀಡಲು ಮನವಿ ಮಾಡಲಾಗಿದೆ.

Categories
ಮಲ್ನಾಡ್

ಮಲೆನಾಡಲ್ಲಿ ತಾರಕಕ್ಕೇರಿದ ಭೂ ಸಂಘರ್ಷ!

ಮಲೆನಾಡಲ್ಲಿ ತಾರಕಕ್ಕೇರಿದ ಭೂ ಸಂಘರ್ಷ!
– ಅರಣ್ಯ ಜಮೀನು ಸರ್ವೆ ಆರಂಭ: ರೈತರ ಬದುಕಲ್ಲಿ ತಲ್ಲಣ
– ಪಶ್ಚಿಮಘಟ್ಟ ಪ್ರದೇಶ ವ್ಯಾಪ್ತಿಯಲ್ಲಿ ಕಠಿಣ ನಿಯಮ ಜಾರಿ?

NAMMUR EXPRESS NEWS
ಶಿವಮೊಗ್ಗ : ಹಲವು ವರ್ಷಗಳ ಅರಣ್ಯ ಜಮೀನು ಸಾಗುವಳಿ ಪ್ರದೇಶದಿಂದ ರೈತರನ್ನು ಒಕ್ಕಲೆಬ್ಬಿಸಲು ಅರಣ್ಯ ಇಲಾಖೆ ಇದೀಗ ಕಟ್ಟುನಿಟ್ಟಾಗಿ ಭೂ ಸರ್ವೆ ಕಾರ್ಯಾಚರಣೆ ಆರಂಭಿಸಿದೆ. ಒತ್ತುವರಿ ಪ್ರದೇಶವನ್ನು ನಿಖರವಾಗಿ ಗುರುತಿಸಿ ತೆರವುಗೊಳಿಸಲು ಅರಣ್ಯ ಇಲಾಖೆ ಅಧಿಕೃತವಾಗಿ ಕಾನೂನು ಕ್ರಮಕ್ಕೆ ಹಾಕಿದೆ. ಆರಂಭದಲ್ಲಿ ಅರಣ್ಯ ಇಲಾಖೆ ಶೆಟ್ಟಿಹಳ್ಳಿ ವನ್ಯಜೀವಿ ಅಭಯಾರಣ್ಯ ವ್ಯಾಪ್ತಿ ಭೂ ಸರ್ವೆ ಆರಂಭಿಸಿದೆ. ಸುಪ್ರೀಂ ಕೋರ್ಟ್‌, ಕೇಂದ್ರ ಸರಕಾರದ ಬಿಗಿ ಸೂಚನೆ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಆದೇಶದ ಮೇರೆಗೆ ಅರಣ್ಯ ಇಲಾಖೆ ಸರ್ವೆ ಕಾರ‍್ಯಕ್ಕೆ ತ್ವರಿತ ಚಾಲನೆ ನೀಡಿದೆ. ಸರ್ವೆ ಕಾರ‍್ಯಕ್ಕೆ ರೈತರು, ಅರಣ್ಯ ವಾಸಿಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಗ್ರಾಮದ ಕಾಡಿಗೆ ಅರಣ್ಯ ಇಲಾಖೆ ಕಾವಲು ಬೇಡ ಎಂದು ಸಭೆ ಸೇರಿ ನಿರ್ಣಯಿಸುವ ಹಂತಕ್ಕೆ ರೈತರು ಮುಂದಾಗಿದ್ದು ಭೂ ಸಂಘರ್ಷ ತಾರಕ್ಕೇರುವ ಸಾಧ್ಯತೆ ಇದೆ.
1978 ರ ಪೂರ್ವ, 2014 ರ ನಂತರದ ಒತ್ತುವರಿಯನ್ನು ಭೂ ಸರ್ವೆ ಮೂಲಕ ಏಕಕಾಲದಲ್ಲಿ ಗುರುತಿಸುವ ಸಂಬಂಧ ಅರಣ್ಯ ಇಲಾಖೆ ಈಗ ಕ್ರಮವಹಿಸಿದೆ. ಆದರೆ, ಅರಣ್ಯ ಇಲಾಖೆ ಒತ್ತುವರಿ ಭೂ ಸರ್ವೆ ಕುರಿತಂತೆ ರೈತರಿಗೆ, ಜನಪ್ರತಿನಿಧಿಗಳಿಗೆ ಮಾಹಿತಿಯ ಪೂರ್ಣ ಗುಟ್ಟು ಬಿಟ್ಟು ಕೊಡುತ್ತಿಲ್ಲ. ಕಂದಾಯ, ಅರಣ್ಯ ಇಲಾಖೆ ಜಮೀನು ಒಡೆತನಕ್ಕೆ ಸಂಬಂಧಪಟ್ಟಂತೆ ಅನೇಕ ವಿವಾದ ಇನ್ನೂ ಜೀವಂತವಾಗಿವೆ. ಜಮೀನು ಹಕ್ಕು ಕುರಿತಾಗಿ ಇಲಾಖೆಗಳ ನಡುವೆ ಜಂಟಿ ಸರ್ವೆ ಪೂರ್ಣಗೊಂಡಿಲ್ಲ. ಆರ್‌ಟಿಸಿ, ಮ್ಯುಟೇಷನ್‌ ದಾಖಲೆಗಳಲ್ಲಿ ಇಂದಿಗೂ ಭೂ ಹಕ್ಕು ಗೊಂದಲ ಮುಂದುವರಿದಿದ್ದರೂ ಭೂ ಸರ್ವೆಗೆ ಅರಣ್ಯ ಇಲಾಖೆ ಕ್ರಮ ವಹಿಸಿದೆ.

ಅರಣ್ಯ ಭೂ ಪ್ರದೇಶದ ಒತ್ತುವರಿ ಸಮಸ್ಯೆ ಬಗೆಹರಿಸಿಲ್ಲ!

ಆರೇಳು ದಶಕದಿಂದ ಮಲೆನಾಡಿನ ಜನರನ್ನು ಸತತವಾಗಿ ಕಾಡುತ್ತಿರುವ ಅರಣ್ಯ ಭೂ ಪ್ರದೇಶದ ಒತ್ತುವರಿ ಸಮಸ್ಯೆ ತಾರ್ಕಿಕ ನೆಲೆಯಲ್ಲಿ ಬಗೆಹರಿಸಲು ಕೇಂದ್ರ, ರಾಜ್ಯ ಸರಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲ. ಹೆಚ್ಚುತ್ತಿರುವ ಜನಸಂಖ್ಯೆ ನಡುವೆ ಭೂ ಬಿಕ್ಕಟ್ಟು ಸಾಮಾಜಿಕ ಅಸಮಾನತೆಯನ್ನು ವ್ಯಾಪಕ ಅಂತರದಲ್ಲಿ ಸೃಷ್ಟಿಸಿದೆ. ದುಬಾರಿ ಬದುಕಿನ ಈ ಕಾಲದಲ್ಲಿ ವಾಸದ ಮನೆ ಜಾಗ ಖರೀದಿಸಲು ಬಡ ಕುಟುಂಬಗಳಿಗೆ ಸಾಧ್ಯವಾಗುತ್ತಿಲ್ಲ. ಸರಕಾರ ಭೂ ಹಂಚಿಕೆ ಸಮಾನ ನೀತಿ ಕಾಯಿದೆ ಜಾರಿಗೂ ಮುಂದಾಗಿಲ್ಲ. ಭೂ ಒಡೆತನ ನಿರೀಕ್ಷೆಗೂ ಮೀರಿ ಉಳ್ಳವರ ಪಾಲಾಗುತ್ತಿರುವುದು ಕಟುಸತ್ಯವಾಗಿದ್ದರೂ ಸರಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಈ ಮಧ್ಯೆ ಕಾನೂನು ತಿದ್ದುಪಡಿಗೊಳಿಸದೆ ಬದುಕಿಗಾಗಿ ಅರಣ್ಯ ಜಮೀನು ಆಶ್ರಯಿಸಿದ ಬಡ ಕುಟುಂಬಗಳನ್ನು ಒಕ್ಕಲೆಬ್ಬಿಸಲು ಕಾರ್ಯಾಚರಣೆಗೆ ಇಳಿದಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಪ್ರಶ್ನೆಗೆ ಕಾರಣವಾಗಿದೆ.

ಇಲಾಖೆಯ ಪೂರ್ಣ ತಯಾರಿ

ರಾಜ್ಯದ 10 ಜಿಲ್ಲೆಗಳಲ್ಲಿ ಪಶ್ಚಿಮಘಟ್ಟ ಪ್ರದೇಶ ವ್ಯಾಪಿಸಿದ್ದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಕಾರ‍್ಯಪಡೆ ಮುಖ್ಯಸ್ಥರ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ಪಡೆ ರಚಿಸಲಾಗಿದೆ. ಕಂದಾಯ, ಅರಣ್ಯ ಜಮೀನು ವಿಸ್ತೀರ್ಣ ಕುರಿತಂತೆ ಇನ್ನೂ ಜಂಟಿ ಸರ್ವೆ ನಡೆದಿಲ್ಲ. ಬ್ರಿಟಿಷ್‌ ಆಳ್ವಿಕೆ ಕಾಲದ ಅಧಿಸೂಚಿತ ಅರಣ್ಯ ಪ್ರದೇಶದ ನೋಟಿಫಿಕೇಶನ್‌ ದಾಖಲೆ ಆಧರಿಸಿ ಅರಣ್ಯ ಇಲಾಖೆ ಕಾನೂನು ಕ್ರಮ ಜರುಗಿಸಲಿದೆ. ರೆಸಾರ್ಟ್‌, ಹೋಂಸ್ಟೇ ಇರುವ ಅರಣ್ಯ ಜಮೀನು, 30 ಎಕರೆಗೂ ಹೆಚ್ಚು ವಿಸ್ತೀರ್ಣ, 10 ರಿಂದ 30 ಎಕರೆ ವರೆಗಿನ ಮತ್ತು 03ರಿಂದ 10 ಎಕರೆ ವರೆಗಿನ ಅರಣ್ಯ ಜಮೀನು ಸರ್ವೆ ವ್ಯಾಪ್ತಿಗೆ ಒಳಪಟ್ಟಿದೆ.

Categories
ಮಲ್ನಾಡ್

ಕೆಸುವಿನ ಎಲೆಗೆ ಈಗ ವಿದೇಶದಲ್ಲೂ ಡಿಮ್ಯಾಂಡ್!

ಕೆಸುವಿನ ಎಲೆಗೆ ಈಗ ವಿದೇಶದಲ್ಲೂ ಡಿಮ್ಯಾಂಡ್!
– ಮಲೆನಾಡು ಭಾಗದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದ ತಿನಿಸು
– ಕೆಸುವಿನ ಎಲೆ, ಗೆಡ್ಡೆಗಳಿಗೆ ಇತ್ತೀಚಿನ ದಿನಗಳಲ್ಲಿ ವಿದೇಶದಲ್ಲಿ ಬೇಡಿಕೆ
– ಆರೋಗ್ಯದ ದೃಷ್ಟಿಯಿಂದ ಎಲ್ಲಾ ಕಡೆಗಳಲ್ಲೂ ಕೂಡ ಪ್ರಸಿದ್ಧಿ

NAMMUR EXPRESS NEWS
ಕೆಸುವಿನ ಎಲೆ ಎಲ್ಲರಿಗೂ ಕೂಡ ಚಿರಪರಿಚಿತ. ಎಲ್ಲಾ ಜನರೂ ಕೂಡ ಹೆಚ್ಚಾಗಿ ಕೆಸುವಿನ ಎಲೆಯ ವಿವಿಧ ಅಡುಗೆ ಮಾಡುತ್ತಲೇ ಇರುತ್ತಾರೆ. ಮಳೆಗಾಲದಲ್ಲಂತೂ ಈ ಎಲೆಯ ಅಡುಗೆ ಹೆಚ್ಚಾಗಿರುತ್ತೆ. ಈ ಎಲೆ ತಿನ್ನೋದರಿಂದ ತುಂಬಾನೆ ಪ್ರಯೋಜನಗಳಿವೆ. ಗ್ರಾಮೀಣ ಭಾಗದಲ್ಲಂತೂ ಕೂಡ ಬೇಸಿಗೆ, ಮಳೆಗಾಲ, ಚಳಿಗಾಲ ಯಾವುದೇ ಋತುವಿರಲಿ ಎಲ್ಲಾ ಸಮಯದಲ್ಲೂ ಕೂಡ ಕೆಸುವಿನ ಎಲೆಯ ಪಲ್ಯವನ್ನು ಮಾಡುತ್ತಾರೆ,ಇದು ತುಂಬಾ ರುಚಿಯಾದದ್ದು ಮತ್ತು ಆರೋಗ್ಯಕ್ಕೂ ತುಂಬಾ ಒಳಿತು.

ಕೆಸುವಿನ‌ ಸೊಪ್ಪಿನ ರುಚಿಯು ಇತರೆ ಸೊಪ್ಪು ಗಳಿಗಿಂತ ತುಂಬಾ ರುಚಿಯಾಗಿರುತ್ತದೆ. ಹಸಿ ಸೊಪ್ಪುನ್ನ ಯಾರೂ ಕೂಡ ಸೇವಿಸುವುದಿಲ್ಲ ಏಕೆಂದರೆ ತಿಂದರೆ ಗಂಟಲು ಕೆರತ ಉಂಟುಗುತ್ತದೆ. ಜೊತೆಗೆ ಇದರಿಂದ ಬರುವ ರಸವು ಕೂಡಾ ಮೈ ಕೆರೆತಕ್ಕೆ ಕಾರಣವಾಗುತ್ತದೆ. ಅದಕ್ಕಾಗಿ ಕೆಸುವಿನ ಗಿಡ ಅಥವಾ ಸೊಪ್ಪನ್ನು ತರುವಾಗ ಕೈಗೆ ಸ್ವಲ್ಪ ಕೊಬ್ಬರಿ ಎಣ್ಣೆ ಹಚ್ಚಿಕೊಳ್ಳುವುದು ಒಳ್ಳೆಯದು. ಕೆಸುವಿನ ಸೊಪ್ಪು ,‌ ಅದರ ದಂಟು, ಗಡ್ಡೆ ಮತ್ತು ಕೆಸುವಿನ‌ ಚೀಪು ಹೀಗೆ ಗಿಡದ ಎಲ್ಲ ಭಾಗಗಳೂ ಕೂಡಾ ತಿನ್ನಬಹುದಾದದ್ದೆ. ಏನೇ ಮಾಡುವುದಾದರೂ ಮೊದಲು ಚೆನ್ನಾಗಿ ಬೇಯಿಸಬೇಕು , ಜೊತೆಗೆ ಬೇಯಿಸುವಾಗು ಉಪ್ಪು ಮತ್ತು ಹುಳಿಯನ್ನು ಸಾಕಷ್ಟು ಪ್ರಮಾಣದಲ್ಲಿ ಹಾಕಬೇಕು. ಇಲ್ಲವಾದಲ್ಲಿ ಗಂಟಲು ಕೆರೆತ ಉಂಟಾಗುತ್ತದೆ.

ಈ ಕೆಸುವಿನ ಎಲೆಯನ್ನ ಬಳಸಿಕೊಂಡು ಪತ್ರೊಡೆ ಹಾಗೂ ಪಲ್ಯವನ್ನು ಮಾಡುತ್ತಾರೆ. ಇದು ತುಂಬಾ ರುಚಿಯಾಗಿರುತ್ತದೆ ಇದಕ್ಕೆ ಕಡಬು ಅಥವಾ ಅಕ್ಕಿ ರೊಟ್ಟಿ ಇದ್ದರೆ ಅದರ ಮಜಾವೇ ಬೇರೆ ಏಕೆಂದರೆ ಮಲೆನಾಡಿನಲ್ಲಿ ಇದನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ ಇದರಿಂದ ಆರೋಗ್ಯಕ್ಕೂ ಕೂಡ ತುಂಬಾ ಉತ್ತಮ ಎಂದು ಗ್ರಾಮೀಣ ಪ್ರದೇಶದ ಜನರು ಹಾಗೂ ನಗರ ಪ್ರದೇಶದ ಜನರು ಇದನ್ನ ಹೆಚ್ಚಾಗಿ ಸೇವಿಸುತ್ತಾರೆ ಆರೋಗ್ಯಕ್ಕೂ ಕೂಡ ತುಂಬಾ ಉತ್ತಮ ಪ್ರಯೋಜನ ಮತ್ತು ಪೋಷಕಾಂಶಗಳನ್ನು ಒಳಗೊಂಡಿದೆ. ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ ಕೆಸುವಿನ ಎಲೆಗಳಲ್ಲಿ ಪೊಟ್ಯಾಸಿಯಮ್ ಕಂಡುಬರುತ್ತದೆ, ಇದು ರಕ್ತದೊತ್ತಡವನ್ನು ಕಡಿಮೆ ಮಾಡುವ ಮೂಲಕ ಹೃದಯರಕ್ತನಾಳದ ಕಾಯಿಲೆಯನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಇದಲ್ಲದೆ, ಉತ್ಕರ್ಷಣ ನಿರೋಧಕಗಳು ಉರಿಯೂತವನ್ನು ಕಡಿಮೆ ಮಾಡಲು, ಹೃದ್ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ದೇಹದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಫೈಬರ್ ಸಹಾಯ ಮಾಡುತ್ತದೆ. ಫೈಬರ್ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಇದ್ದಕ್ಕಿದ್ದಂತೆ ಹೆಚ್ಚಿಸಲು ಅನುಮತಿಸುವುದಿಲ್ಲ, ಇದು ನಿಮ್ಮ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ಕೆಸುವಿನ ಎಲೆಗಳಲ್ಲಿ ಫೈಬರ್ ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತದೆ. ಕೆಸುವಿನ ಎಲೆ ಮತ್ತು ಅದರ ಘಟ್ಟಗಳ ಉಪಯೋಗ ಮಲೆನಾಡಿನ ಭಾಗದಲ್ಲೂ ಹಾಗೂ ಬೇರೆ ಬೇರೆ ಕಡೆಯಲ್ಲೂ ಕೂಡ ಇದರ ಬೇಡಿಕೆ ಎಂಬುದು ಹೆಚ್ಚಾಗಿದೆ.

ಇತ್ತೀಚಿನ ದಿನಗಳಲ್ಲಿ ವಿದೇಶದಲ್ಲೂ ಕೂಡ ಸಾಕಷ್ಟು ಜನಪ್ರಿಯತೆ ಹೊಂದಿರುವುದೇ ಕೆಸುವಿನ ಎಲೆ ಎಂದು ಹೇಳಬಹುದು. ಕೆಸುವಿನ ಎಲೆ ಮತ್ತು ಇದರ ಗೆಡ್ಡೆಗಳಿಗೆ ವಿದೇಶದಲ್ಲಿ ಬಹು ಬೇಡಿಕೆ, ಕೊಲ್ಲಿ ರಾಷ್ಟ್ರಗಳಲ್ಲಿ ಇದನ್ನ ಚೀನಾ ದೇಶದಿಂದ ಮತ್ತು ಭಾರತದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಜಪಾನ್ ದೇಶದಲ್ಲಿ ಕೆಸುವಿನ ಎಲೆ ಮತ್ತು ಗೆಡ್ಡೆಗಳನ್ನ ಬಹಳ ದೊಡ್ಡ ಮಟ್ಟದಲ್ಲಿ ಬೆಳೆಯಲಾಗುತ್ತಿದೆ ಏಕೆಂದರೆ ಇದು ಆರೋಗ್ಯದ ವಿಚಾರದಲ್ಲೂ ಕೂಡ ಇದು ತುಂಬಾ ಪ್ರಯೋಜನ ಇದೆ ಆದ್ದರಿಂದ ವಿದೇಶದಲ್ಲಿ ಇರುವಂತ ಜನರು ಕೂಡ ಇದನ್ನ ಸೇವಿಸಲು ಮುಂದಾಗಿದ್ದಾರೆ.

Categories
ರಾಜ್ಯ

ರಾಜ್ಯದಲ್ಲಿ ಕಡಿಮೆಯಾದ ಮಳೆ: ಚಳಿ ಶುರು!

ರಾಜ್ಯದಲ್ಲಿ ಕಡಿಮೆಯಾದ ಮಳೆ: ಚಳಿ ಶುರು!
– ಎಲ್ಲಡೆ ಗಾಢವಾದ ಮಂಜು ಕವಿದ ವಾತಾವರಣ
– ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ

NAMMUR EXPRESS NEWS
ಬೆಂಗಳೂರು: ಎರಡು ವಾರಗಳಿಂದ ರಾಜ್ಯದಲ್ಲಿ ಅಬ್ಬರಿಸಿದ ಮಳೆ ಸದ್ಯ ತಗ್ಗಿದೆ. ಆದರೆ, ನಿರಂತರ ಮಳೆಯಾದ ಪರಿಣಾಮ ಇದೀಗ ದಿಢೀರ್‌ ಚಳಿಯ ಕಾಟವೂ ಹೆಚ್ಚಾಗಿದೆ. ರಾತ್ರಿಯಿಂದಲೇ ಚಳಿ ಆರಂಭವಾಗುತ್ತಿದ್ದು, ಬೆಳಿಗ್ಗೆ ದಟ್ಟವಾದ ಮಂಜು ಆವರಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಒಡಿಶಾದ ಮೇಲಿನ ವಾಯು ಚಂಡಮಾರುತದ ಪರಿಚಲನೆಯು ಈಗ ಕರಾವಳಿ ಒಡಿಶಾದ ಮೇಲಿದೆ ಮತ್ತು ಸರಾಸರಿ ಸಮುದ್ರ ಮಟ್ಟದಿಂದ 5.8 ಕಿ.ಮೀ ವರೆಗೆ ಎತ್ತರದೊಂದಿಗೆ ನೈಋತ್ಯಕ್ಕೆ ವಾಲುತ್ತದೆ ಎಂದು ಹೇಳಲಾಗಿದೆ. ಮತ್ತೊಂದೆಡೆ ಲಕ್ಷದ್ವೀಪ ಪ್ರದೇಶದಿಂದ ಉತ್ತರ ತಮಿಳುನಾಡು ತೀರದವರೆಗೆ ಸಮುದ್ರ ಮಟ್ಟದಿಂದ 4.5 ಮತ್ತು 5.8 ಕಿ.ಮೀ ಎತ್ತರದ ನಡುವಿನ ಟ್ರಫ್ ಕಡಿಮೆ ಗುರುತಿಸಲ್ಪಟ್ಟಿದೆ. ಹಾಗಾಗಿ ಮುಂದಿನ ಏಳು ದಿನಗಳ ಕಾಲ ಕರ್ನಾಟಕದ ಹವಾಮಾನ ಪರಿಸ್ಥಿತಿ ಈ ರೀತಿ ಇರಲಿದೆ. ಮುಂದಿನ 2 ದಿನಗಳಲ್ಲಿ ರಾಜ್ಯದಲ್ಲಿ ಮುಖ್ಯವಾಗಿ ಶುಷ್ಕ ಹವಾಮಾನ ಮುಂದುವರಿಯಲಿದೆ. ಹಾಗಾಗಿ ಮುಂದಿನ 2 ದಿನಗಳಲ್ಲಿ ಕರ್ನಾಟಕದ ಒಳಭಾಗದಲ್ಲಿ ಬೆಳಗಿನ ಜಾವದಲ್ಲಿ ಗಾಢವಾದ ಮಂಜು ಅಥವಾ ಮಬ್ಬಿನ ಸಾಧ್ಯತೆ ಇಂದೆ ಎಂದು ಹವಾಮಾನ ಇಲಾಖೆ ಹೇಳಿದೆ.

– ಅಲ್ಲಲ್ಲಿ ಮಳೆ ಸಾಧ್ಯತೆ

ಉತ್ತರ ಒಳನಾಡಿನ ಮತ್ತು ಕರಾವಳಿ ಮತ್ತು ದಕ್ಷಿಣ ಒಳನಾಡಿನದ ಉಳಿದ ಜಿಲ್ಲೆಗಳ ಮೇಲೆ ಒಣ ಹವಾಮಾನದ ಸಾಧ್ಯತೆ. ಸೋಮವಾರ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಮಂಗಳವಾರ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಮತ್ತು ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳ ಮೇಲೆ ಒಣ ಹವಾಮಾನದ ಸಾಧ್ಯತೆ ಇದೆ ಎನ್ನಲಾಗಿದೆ.

ಸಾಧಾರಣ ಮಳೆ ಸಾಧ್ಯತೆ

ನವೆಂಬರ್‌ 30ರಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಒಳನಾಡಿನ ಉಳಿದ ಜಿಲ್ಲೆಗಳ ಮೇಲೆ ಒಣ ಹವಾಮಾನ ಇರಲಿದೆ. ಅಕ್ಟೋಬರ್ 31ರಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಂಭವವಿದೆ. ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹಗುರವಾದ ಮಳೆಯಾಗುವ ಸಾಧ್ಯತೆಯಿದೆ.

ನವೆಂಬರ್ 1ರಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಸೇರಿದಂತೆ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಂಭವವಿದೆ.
ಬೀದರ್, ಕಲಬುರ್ಗಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಒಳನಾಡಿನ ಉಳಿದ ಜಿಲ್ಲೆಗಳ ಮೇಲೆ ಒಣ ಹವಾಮಾನದ ಸಾಧ್ಯತೆ. ನವೆಂಬರ್ 2ರಂದು ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೀದರ್, ಕಲಬುರ್ಗಿ, ಯಾದಗಿರಿ, ವಿಜಯಪುರ, ಬೆಳಗಾವಿ, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ನಗರ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ಮುಂದಿನ ಎರಡು ದಿನ ಭಾಗಶಃ ಮೋಡ ಕವಿದ ಆಕಾಶ ಕಂಡುಬರಲಿದೆ. ಒಣ ಹವಾಮಾನದೊಂದಿಗೆ ಕೆಲವು ಪ್ರದೇಶಗಳಲ್ಲಿ ಮುಂಜಾನೆಯ ಸಮಯದಲ್ಲಿ ಮಂಜು ತುಂಬಾ ಸಾಧ್ಯತೆ ಇರುತ್ತದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30 ಡಿಗ್ರಿ ಸೆಲ್ಸಿಯಸ್‌ ಹಾಗೂ 19 ಡಿಗ್ರಿ ಸೆಲ್ಸಿಯಸ್‌ ಇರಲಿದೆ.

Categories
ಕರಾವಳಿ

ಕರಾವಳಿ ನ್ಯೂಸ್

ಕರಾವಳಿ ನ್ಯೂಸ್

– ಮಣಿಪಾಲ: ತುಳು ನಾಟಕ ಕಲಾವಿದರ ಕಾರು ಅಪಘಾತ; ಅಪಾಯದಿಂದ ಪಾರು!!
– ಕುಂದಾಪುರ: ಕೋಣಿ ಬ್ಯಾಂಕ್‌ ಕಳ್ಳತನ ಯತ್ನ; ಅಂತರ್‌ ರಾಜ್ಯ ಕಳ್ಳರಿಬ್ಬರ ಬಂಧನ!
– ಕುಂದಾಪುರ: ವರದಕ್ಷಿಣೆ ಕಿರುಕುಳ – ಪ್ರಕರಣ ದಾಖಲು

NAMMUR EXPRESS NEWS
ಮಣಿಪಾಲ: ತುಳು ನಾಟಕ ಕಲಾವಿದರ ಕಾರೊಂದು ಮಣಿಪಾಲ ಈಶ್ವರ ನಗರದ ನಗರಸಭೆಯ ಪಂಪ್‌ಹೌಸ್ ಬಳಿ ಅ.27ರಂದು ಸಂಜೆ ವೇಳೆ ಅಪಘಾತಕ್ಕೀಡಾಗಿದ್ದು, ಯಾವುದೇ ಗಾಯಗಳಾಗದೇ ಎಲ್ಲರೂ ಅಪಾಯದಿಂದ ಪಾರಾಗಿರುವ ಘಟನೆ ನಡೆದಿದೆ. ಉಡುಪಿಯ ಹೀರೆಬೆಟ್ಟುವಿನಲ್ಲಿ ಅ. 28ರಂದು ಸಂಜೆ ಪ್ರದರ್ಶನಗೊಳ್ಳಲಿದ್ದ ‘ಏರ್ಲಾ ಗ್ಯಾರಂಟಿ ಅತ್ತು’ ನಾಟಕ ಪ್ರದರ್ಶನಕ್ಕಾಗಿ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಅವರ ನಾಟಕ ತಂಡದ ಸದಸ್ಯರು ಕಾರಿನಲ್ಲಿ ಸಂಚರಿಸುತ್ತಿದ್ದು, ಇದರಲ್ಲಿ ತುಳು ನಾಟಕದ ಕಲಾವಿದ ಭೋಜರಾಜ ವಾಮಂಜೂರ್ ಕೂಡ ಇದ್ದರು. ಈ ವೇಳೆ ನಿಯಂತ್ರಣ ತಪ್ಪಿದ ಕಾರು ಹೊಂಡಕ್ಕೆ ಬಿದ್ದು ಅಪಘಾತಕ್ಕೀಡಾಗಿದೆ ಎಂದು ತಿಳಿದುಬಂದಿದೆ. ತಂಡದ ಕಲಾವಿದರೆಲ್ಲರೂ ಯಾವುದೇ ಗಾಯಗಳಾಗದೇ ಅಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

– ಕುಂದಾಪುರ: ಕೋಣಿ ಬ್ಯಾಂಕ್‌ ಕಳ್ಳತನ ಯತ್ನ; ಅಂತರ್‌ ರಾಜ್ಯ ಕಳ್ಳರಿಬ್ಬರ ಬಂಧನ!

ಕುಂದಾಪುರ: ಕರ್ನಾಟಕ ಬ್ಯಾಂಕ್‌ ಕೋಣಿ ಶಾಖೆಯಲ್ಲಿ ನ.16 ರಂದು ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದ ಕಾನೂನು ಸಂಘರ್ಷಕ್ಕೊಳಪಟ್ಟ ಬಾಲಕ ಸಹಿತ ಇಬ್ಬರು ಅಂತರ್‌ ರಾಜ್ಯ ಕಳ್ಳರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಇಂದ್ರನಗರ ನಿವಾಸಿ ಮೊಹಮ್ಮದ್‌ ಹುಸೇನ್‌ (22) ಹಾಗೂ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಬೈಕನ್ನು ಪೊಲೀಸರು ವಶಪಡಿಸಿದ್ದಾರೆ.

– ಕುಂದಾಪುರ: ವರದಕ್ಷಿಣೆ ಕಿರುಕುಳ – ಪ್ರಕರಣ ದಾಖಲು

ಕುಂದಾಪುರ: ಮಹಿಳೆಯೊಬ್ಬರು ಪತಿ ಹಾಗೂ ಇತರರ ವಿರುದ್ಧ ವರದಕ್ಷಿಣೆ ಕಿರುಕುಳದ ದೂರು ನೀಡಿರುವ ಘಟನೆ ಕುಂದಾಪುರದ ತಾಲೂಕಿನ ಕಾವ್ರಾಡಿ ಗ್ರಾಮದಲ್ಲಿ ನಡೆದಿದೆ. ಕಾವ್ರಾಡಿ ಗ್ರಾಮದ ಗುಲ್ನಾಝ್ ಬೇಗಂ (30) ಅವರು‌ ಆರೋಪಿ ಶೇಖ್‌ ಮೊಹಮ್ಮದ್‌ ಯಾಕೂಬ್‌ ಅವರನ್ನು ವಿವಾಹವಾಗಿದ್ದು, ನಜ್ಮಿನ್ನೀಸಾ, ಶೇಖ್‌ ಶಂಸುದ್ದೀನ್‌ ಅವರು ಮದುವೆ ಸಂಬಂಧವಾಗಿ 100 ಪವನ್‌ ಚಿನ್ನಾಭರಣಗಳು ಮತ್ತು ಕಾರನ್ನು ವರದಕ್ಷಿಣೆಯಾಗಿ ಕೇಳಿದ್ದರು. ನಿರಾಕರಿಸಿದ್ದಕ್ಕೆ ಬೆದರಿಕೆ ಹಾಕಿದ್ದರು. ಬಳಿಕ 70 ಪವನ್‌ ಚಿನ್ನ ಹಾಗೂ ಕಾರನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ಮುಂದಿನ ದಿನಗಳಲ್ಲೂ ಆಸ್ತಿ, ಹೆಚ್ಚಿನ ವರದಕ್ಷಿಣೆ ಪಡೆಯಲು ಮಾನಸಿಕ, ದೈಹಿಕ ಹಿಂಸೆ ನೀಡಿದ್ದಾಗಿ ಪ್ರಕರಣ ದಾಖಲಾಗಿದೆ.

Categories
ರಾಜ್ಯ

ದೀಪಾವಳಿ ಪ್ರಾರಂಭ ಯಾವಾಗ?

ದೀಪಾವಳಿ ಪ್ರಾರಂಭ ಯಾವಾಗ?
– ಹಬ್ಬದ ಮಹತ್ವ, ಹಿನ್ನೆಲೆ ಏನು ಗೊತ್ತಾ?
– ದೀಪಾವಳಿ ದಿನಾಂಕ ಮತ್ತು ಸಮಯ ಯಾವಾಗ?

NAMMUR EXPRESS NEWS
ದೀಪಗಳ ಹಬ್ಬ ದೀಪಾವಳಿ ಬಂದೇ ಬಿಡ್ತು. ದೀಪಾವಳಿಯು ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಇದನ್ನು ದೇಶದಾದ್ಯಂತ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆದರೆ ಈ ಬಾರಿ ದೀಪಾವಳಿಯನ್ನು ಯಾವಾಗ ಆಚರಿಸಲಾಗುತ್ತದೆ ಎನ್ನುವ ಬಗ್ಗೆ ಜನರಲ್ಲಿ ಸಾಕಷ್ಟು ಗೊಂದಲಗಳಿವೆ. ದೀಪಾವಳಿಯ ನಿಖರವಾದ ದಿನಾಂಕ ಯಾವುದು ಎಂಬ ಬಗ್ಗೆ ಒಮ್ಮತದ ಅಭಿಪ್ರಾಯವಿಲ್ಲ. ದೀಪಾವಳಿಯನ್ನು ಅಕ್ಟೋಬರ್ 31 ರಂದು ಆಚರಿಸಲಾಗುತ್ತದೆ ಎಂದು ಕೆಲವರು ನಂಬುತ್ತಾರೆ. ಇನ್ನೂ ಕೆಲವರು ನವೆಂಬರ್ 1ರಂದು ದೀಪಾವಳಿ ಆಚರಿಸುವುದು ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ.
ದೀಪಾವಳಿ ಹಬ್ಬವನ್ನು ಕಾರ್ತಿಕ ಮಾಸದ ಅಮಾವಾಸ್ಯೆಯಂದು ಆಚರಿಸಲಾಗುತ್ತದೆ. ಈ ದಿನ ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ ಮತ್ತು ಕೆಲವು ಸ್ಥಳಗಳಲ್ಲಿ ಈ ದಿನ ಕಾಳಿ ದೇವಿಯನ್ನು ಪೂಜಿಸಲಾಗುತ್ತದೆ. ಹಾಗಾದರೆ ಪಂಚಾಂಗದ ಪ್ರಕಾರ, ದೀಪಾವಳಿಯ ಸರಿಯಾದ ದಿನಾಂಕ ಮತ್ತು ಮಂಗಳಕರ ಸಮಯ ಯಾವುದು ಎಂದು ತಿಳಿಯೋಣ.
ಹಿಂದೂ ಧರ್ಮಗ್ರಂಥಗಳ ಪ್ರಕಾರ, ದೀಪಾವಳಿಯಂದು ಅಮವಾಸ್ಯೆಯ ತಿಥಿಗೆ ವಿಶೇಷ ಮಹತ್ವವಿದೆ. ಈ ದಿನದಂದು ರಾವಣನನ್ನು ಸೋಲಿಸಿದ ನಂತರ ಭಗವಾನ್ ರಾಮನು ಅಯೋಧ್ಯೆಗೆ ಹಿಂದಿರುಗಿದನು ಎಂದು ನಂಬಲಾಗಿದೆ. ಅಮಾವಾಸ್ಯೆಯಾಗಿದ್ದರಿಂದ ಭಕ್ತರು ಲಕ್ಷಗಟ್ಟಲೆ ದೀಪಗಳನ್ನು ಹಚ್ಚಿ ಶ್ರೀರಾಮನನ್ನು ಸ್ವಾಗತಿಸಿದರು ಹಾಗೂ ಅಯೋಧ್ಯೆಗೆ ಹಿಂದಿರುಗಿದ ರಾಮನನ್ನು ನೋಡಿ ಭಕ್ತರು ಸಂಭ್ರಮಗೊಂಡರು ಎಂದು ಹೇಳಲಾಗುತ್ತದೆ.

ದೀಪಾವಳಿ ದಿನಾಂಕ ಮತ್ತು ಸಮಯ:

• ಈ ವರ್ಷ ದೀಪಾವಳಿ ಹಬ್ಬವನ್ನು ಅಕ್ಟೋಬರ್ 31, 2024 ರಂದು ಆಚರಿಸಲಾಗುವುದು.
• ಅಮಾವಾಸ್ಯೆ ತಿಥಿ ಅಕ್ಟೋಬರ್ 31, 2024 ರಂದು ಮಧ್ಯಾಹ್ನ 03:52 ಕ್ಕೆ ಪ್ರಾರಂಭವಾಗುತ್ತದೆ.
• ಅಮವಾಸ್ಯೆಯ ತಿಥಿಯು ನವೆಂಬರ್ 01,2024 6:16 ಕೊನೆಗೊಳ್ಳುತ್ತದೆ.
• ಪ್ರದೋಷ ಕಾಲ ಮಧ್ಯಾಹ್ನ 05:12 ರಿಂದ 07:43
• ಲಕ್ಷ್ಮಿಪೂಜೆ ಮುಹೂರ್ತ ಸಂಜೆ 05:12 ರಿಂದ ಸಂಜೆ 06:16
• ವೃಷಭ ಮುಹೂರ್ತದಿಂದ ಸಂಜೆ 06:00 ರಿಂದ ಸಂಜೆ 07:59

ದೀಪಾವಳಿಯ ದಿನಾಂಕ!

ಈ ವರ್ಷ ದೀಪಾವಳಿಯನ್ನು ಅಕ್ಟೋಬ‌ರ್ 31ರಂದು ಆಚರಿಸಲಾಗುತ್ತದೆ. ದೀಪಾವಳಿಯನ್ನು ಯಾವಾಗಲೂ ಕಾರ್ತಿಕ ಮಾಸದ ಅಮಾವಾಸ್ಯೆಯಂದು ಆಚರಿಸಲಾಗುತ್ತದೆ. ಈ ಬಾರಿಯ ಅಮವಾಸ್ಯೆಯ ತಿಥಿ ಅಕ್ಟೋಬರ್ 31ರಂದು ಮಧ್ಯಾಹ್ನ 3.52ಕ್ಕೆ ಆರಂಭವಾಗಲಿದೆ. ಈ ದಿನಾಂಕವು ಮರುದಿನ ಅಂದರೆ ನವೆಂಬರ್ 1 ರಂದು ಸಂಜೆ 6:16 ರವರೆಗೆ ಇರುತ್ತದೆ. ಆದ್ದರಿಂದ, ದೀಪಾವಳಿಯನ್ನು ಅಕ್ಟೋಬ‌ರ್ 31ರ ಸಂಜೆ ಆಚರಿಸಲಾಗುತ್ತದೆ. ಪ್ರದೋಷ ಕಾಲದ ನಂತರ ದೀಪಾವಳಿ ಪೂಜೆಯನ್ನು ಮಾಡಲಾಗುತ್ತದೆ. ಹಾಗಾಗಿ ಈ ಬಾರಿ ಅಕ್ಟೋಬರ್ 31ರ ರಾತ್ರಿ ಲಕ್ಷ್ಮೀ ಪೂಜೆ, ಕಾಳಿ ಪೂಜೆ ಹಾಗೂ ನಿಶಿತ ಕಾಲದ ಪೂಜೆ ನಡೆಯಲಿದೆ. ಮಧ್ಯರಾತ್ರಿಯ ಪೂಜೆ ಕೂಡ ಅಕ್ಟೋಬರ್ 31 ರಂದು ಮಾತ್ರ ನಡೆಯುತ್ತದೆ.
ನವೆಂಬರ್ 1 ರಂದು ಅಮವಾಸ್ಯೆಗೆ ಸಂಬಂಧಿಸಿದ ಕೆಲವು ಆಚರಣೆಗಳನ್ನು ಮಾಡಲಾಗುತ್ತದೆ. ನವೆಂಬರ್ 1ರಂದು ಬೆಳಗ್ಗೆ ದಾನ ಮತ್ತು ಪೂರ್ವಜರ ಕೆಲಸವನ್ನು ಮಾಡುವುದು ಸೂಕ್ತವಾಗಿರುತ್ತದೆ.

Categories
ಜಾತಕ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ರಾಮ ಏಕಾದಶಿಯಂದು ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಇಂದು ನಿಮಗೆ ಶುಭ ದಿನ. ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಲು, ನಿಮ್ಮ ಸಾಮರ್ಥ್ಯವನ್ನು ತೋರಿಸಲು ಈ ದಿನ ಶುಭವಾಗಲಿದೆ. ನಿಮ್ಮ ಮೇಲೆ ವಿಶ್ವಾಸವಿರಲಿ. ಈ ಸಮಯವು ನಿಮ್ಮನ್ನು ಅನಿರೀಕ್ಷಿತ ಅವಕಾಶಗಳಿಗೆ ಕರೆದೊಯ್ಯುತ್ತದೆ. ಇಂದು ಆರ್ಥಿಕ ಪ್ರಗತಿಯ ಸಾಧ್ಯತೆ ಇದೆ. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಿ. ಮಾನಸಿಕ ಆರೋಗ್ಯವನ್ನು ಉತ್ತೇಜಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ.

** ವೃಷಭ ರಾಶಿ :
ಇಂದು ನಿಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಫಲ ನೀಡುತ್ತದೆ. ಹೊಸ ಯೋಜನೆಗಳಲ್ಲಿ ಕೆಲಸ ಮಾಡಲು ಅವಕಾಶವಿರುತ್ತದೆ. ಜೀವನದಲ್ಲಿ ಹೊಸ ವಿಷಯಗಳನ್ನು ಕಲಿಯಲು ಹಿಂಜರಿಯಬೇಡಿ. ನಿಮ್ಮ ಸಹೋದ್ಯೋಗಿಗಳು ಮತ್ತು ಮೇಲಾಧಿಕಾರಿಗಳು ನಿಮ್ಮ ಕಠಿಣ ಪರಿಶ್ರಮ ಮತ್ತು ಬದ್ಧತೆಯನ್ನು ಮೆಚ್ಚುತ್ತಾರೆ. ಇಂದು ಜೀವನದಲ್ಲಿ ಅನೇಕ ರೋಚಕ ತಿರುವುಗಳಿರುತ್ತವೆ. ನೀವು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

** ಮಿಥುನ ರಾಶಿ :
ಇಂದು ನೀವು ನೀವು ಕೆಲಸದಲ್ಲಿ ಸವಾಲುಗಳನ್ನು ಎದುರಿಸಬೇಕಾಗುತ್ತದೆ, ಆದರೆ ನೀವು ಅದರಿಂದ ಹೊರಬರಲು ಪ್ರಯತ್ನಿಸಬೇಕು. ಹೂಡಿಕೆಗೆ ಇಂದು ಉತ್ತಮ ದಿನ. ಆರೋಗ್ಯದ ಬಗ್ಗೆ ಗಮನ ಕೊಡಿ. ಆದರೆ, ಆರೋಗ್ಯದ ಬಗ್ಗೆ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಅನೇಕ ಆದಾಯದ ಮೂಲಗಳಿಂದ ಹಣವನ್ನು ಪಡೆಯಬಹುದು. ಕೆಲವು ಜನರು ಪಾವತಿ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

** ಕರ್ಕಾಟಕ ರಾಶಿ :
ಇಂದು ನೀವು ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ಬೆಂಬಲ ಪಡೆಯುತ್ತೀರಿ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ಕೆಲಸದ ನಿಮಿತ್ತ ಪ್ರಯಾಣ ಮಾಡುವ ಸಾಧ್ಯತೆಗಳಿವೆ. ಹಣಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಬಹಳ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ. ಆದಾಯವನ್ನು ಹೆಚ್ಚಿಸಲು ಹೊಸ ಆಯ್ಕೆಗಳನ್ನು ನೋಡಿ. ಇಂದು ನೀವು ಶಕ್ತಿ ಮತ್ತು ಆತ್ಮವಿಶ್ವಾಸದಿಂದ ತುಂಬಿರುತ್ತೀರಿ ಮತ್ತು ನಿಮ್ಮ ಕೆಲಸದಲ್ಲಿ ಹೊಸ ಸವಾಲುಗಳನ್ನು ತೆಗೆದುಕೊಳ್ಳಲು ಸಿದ್ಧರಾಗಿರುತ್ತೀರಿ.

** ಸಿಂಹ ರಾಶಿ :
ಇಂದು ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗಬಹುದು. ನಿಮ್ಮ ಅಂತಃಪ್ರಜ್ಞೆಯನ್ನು ನಂಬಿರಿ ಮತ್ತು ಜೀವನದಲ್ಲಿ ಕೆಲವು ಅಪಾಯಗಳನ್ನು ತೆಗೆದುಕೊಳ್ಳಲು ಹಿಂಜರಿಯಬೇಡಿ. ಇಂದು ನೀವು ಪ್ರಗತಿಗೆ ಸಾಕಷ್ಟು ಅವಕಾಶಗಳನ್ನು ಪಡೆಯುತ್ತೀರಿ. ಕೆಲಸದ ಜವಾಬ್ದಾರಿಗಳು ಹೆಚ್ಚಾಗುತ್ತವೆ. ನಿಮ್ಮ ಅಂತಃಪ್ರಜ್ಞೆಯು ನಿಮಗೆ ಪ್ರಗತಿಯ ಹಾದಿಯಲ್ಲಿ ಮಾರ್ಗದರ್ಶನ ನೀಡುತ್ತದೆ, ಅದು ಖಂಡಿತವಾಗಿಯೂ ನಿಮಗೆ ಯಶಸ್ಸನ್ನು ತರುತ್ತದೆ.

** ಕನ್ಯಾ ರಾಶಿ :
ಇಂದು ನಿಮಗೆ ವೃತ್ತಿಪರ ಜೀವನದಲ್ಲಿ ಶಕ್ತಿ ಮತ್ತು ಉತ್ಸಾಹವಿರುತ್ತದೆ. ನಿಮ್ಮನ್ನು ಸಾಬೀತುಪಡಿಸಲು ನೀವು ಕೆಲವು ಹೊಸ ಜವಾಬ್ದಾರಿಗಳನ್ನು ಪಡೆಯುತ್ತೀರಿ ಮತ್ತು ಗಡುವಿನ ಮೊದಲು ನೀವು ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಿ. ಅನೇಕ ಆದಾಯದ ಮೂಲಗಳಿಂದ ಆರ್ಥಿಕ ಲಾಭವಿದೆ ಮತ್ತು ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರುತ್ತದೆ.

** ತುಲಾ ರಾಶಿ :
ಇಂದು ನಿಮ್ಮ ಮಾತಿನಲ್ಲಿ ಸೌಮ್ಯತೆ ಇರುತ್ತದೆ. ವೃತ್ತಿಯಲ್ಲಿ ಹೊಸ ಸಾಧನೆಗಳನ್ನು ಸಾಧಿಸುವಿರಿ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ತೋರುವಿರಿ. ಕೌಟುಂಬಿಕ ಜೀವನದಲ್ಲಿ ಸಂತಸದ ವಾತಾವರಣ ಇರುತ್ತದೆ. ಪೋಷಕರ ಆರೋಗ್ಯದ ಕಡೆ ಗಮನ ಕೊಡಿ. ಉದ್ಯೋಗ ಮತ್ತು ವ್ಯಾಪಾರಕ್ಕೆ ವಾತಾವರಣವು ಅನುಕೂಲಕರವಾಗಿರುತ್ತದೆ. ನೀವು ಇಂದು ಹಳೆಯ ಸ್ನೇಹಿತರನ್ನು ಭೇಟಿ ಮಾಡಬಹುದು. ಉದ್ಯೋಗದಲ್ಲಿ ಸ್ಥಳ ಬದಲಾವಣೆಯಾಗುವ ಸಾಧ್ಯತೆಗಳಿವೆ.

** ವೃಶ್ಚಿಕ ರಾಶಿ :
ಇಂದು ನಿಮ್ಮ ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗಲಿದೆ. ಜೀವನವು ಸೌಕರ್ಯಗಳು ಮತ್ತು ಐಷಾರಾಮಿಗಳಲ್ಲಿ ಕಳೆಯುತ್ತದೆ. ವೃತ್ತಿ ಜೀವನದಲ್ಲಿ ಪ್ರಗತಿಗೆ ಹೊಸ ಅವಕಾಶಗಳು ದೊರೆಯಲಿವೆ. ಕಚೇರಿಯಲ್ಲಿ ಅನಗತ್ಯ ವಾದ ವಿವಾದಗಳಿಂದ ದೂರವಿರಿ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇರುತ್ತದೆ. ಹೊಸ ಆದಾಯದ ಮೂಲದಿಂದ ಆರ್ಥಿಕ ಲಾಭವಿದೆ.ಆಶಾವಾದ ಮತ್ತು ಹತಾಶೆಯ ಭಾವನೆ ಇರುತ್ತದೆ.

** ಧನಸ್ಸು ರಾಶಿ :
ಇಂದು ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಕೆಲಸದ ಸವಾಲುಗಳನ್ನು ಸ್ವೀಕರಿಸುವ ಆತ್ಮವಿಶ್ವಾಸ ತುಂಬಿರುತ್ತದೆ. ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಫಲಿತಾಂಶವನ್ನು ನೀಡುತ್ತದೆ. ಉದ್ಯೋಗ ಬದಲಾವಣೆಯ ಸೂಚನೆಗಳಿವೆ. ನಿಮ್ಮ ಭಾವನೆಗಳನ್ನು ನಿಯಂತ್ರಿಸಿ. ಆದಾಯದ ಹೆಚ್ಚಳದ ಹೊಸ ಮೂಲಗಳು ಸೃಷ್ಟಿಯಾಗುತ್ತವೆ, ಆದರೆ ವೃತ್ತಿಜೀವನದಲ್ಲಿ ಸಣ್ಣ ಸಮಸ್ಯೆಗಳು ಸಹ ಕಂಡುಬರುತ್ತವೆ. ನೀವು ಶೈಕ್ಷಣಿಕ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ.

** ಮಕರ ರಾಶಿ :
ಇಂದು ಕೆಲಸದ ಸ್ಥಳದಲ್ಲಿ ಅನೇಕ ಉತ್ತೇಜಕ ಬದಲಾವಣೆಗಳು ಕಂಡುಬರುತ್ತವೆ. ಸಹೋದ್ಯೋಗಿಗಳು ಮತ್ತು ಮೇಲಾಧಿಕಾರಿಗಳನ್ನು ಮೆಚ್ಚಿಸಲು ನಿಮ್ಮ ನವೀನ ಆಲೋಚನೆಗಳನ್ನು ಬಳಸಿ. ಹೂಡಿಕೆ ಮಾಡಲು ನಿರ್ಧರಿಸುವಾಗ ನಿಮ್ಮ ಮೇಲೆ ವಿಶ್ವಾಸವಿಡಿ. ಇಂದು ಒಂಟಿ ವ್ಯಕ್ತಿಗಳು ಆಕರ್ಷಕ ವ್ಯಕ್ತಿಯೊಂದಿಗೆ ಪ್ರೀತಿಯಲ್ಲಿ ಬೀಳಬಹುದು. ಸಂಬಂಧದಲ್ಲಿರುವ ಜನರು ಸಂಬಂಧದಲ್ಲಿ ಹೊಸ ಆಳವನ್ನು ಅನುಭವಿಸುತ್ತಾರೆ.

** ಕುಂಭ ರಾಶಿ :
ಇಂದು ನೀವು ಆರೋಗ್ಯ ಮತ್ತು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬಹುದು, ಅದನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕಾಗುತ್ತದೆ. ನಿಮ್ಮ ವೃತ್ತಿಪರ ಜೀವನದಲ್ಲಿ ನೀವು ಸಾಕಷ್ಟು ಪ್ರಗತಿಯನ್ನು ಪಡೆಯುತ್ತೀರಿ. ತುರ್ತು ಕಾರ್ಯಗಳನ್ನು ಎಚ್ಚರಿಕೆಯಿಂದ ನಿರ್ವಹಿಸಿ. ಹಣವನ್ನು ಎಚ್ಚರಿಕೆಯಿಂದ ಖರ್ಚು ಮಾಡಿ. ಈ ವಾರ ಹಣದ ಕೊರತೆ ಎದುರಾಗಬಹುದು. ನಿಮ್ಮ ಒಡಹುಟ್ಟಿದವರ ಔಷಧಿಗಳಿಗಾಗಿ ಹಣವನ್ನು ಖರ್ಚು ಮಾಡಬೇಕಾಗುತ್ತದೆ.

** ಮೀನ ರಾಶಿ :
ಇಂದು ನಿಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ನೀವು ಪ್ರಯತ್ನಿಸಬೇಕು. ಮಾರ್ಕೆಟಿಂಗ್, ಸೇಲ್ಸ್ ವ್ಯಕ್ತಿಗಳು ಕೆಲಸಕ್ಕಾಗಿ ಪ್ರಯಾಣಿಸಬಹುದು ಮತ್ತು ಕೆಲವು ಆರೋಗ್ಯ ವೃತ್ತಿಪರರು ವಿದೇಶಕ್ಕೆ ಹೋಗಬೇಕಾಗಬಹುದು. ಕೆಲಸದಲ್ಲಿನ ರಾಜಕೀಯವು ನಿಮ್ಮ ಮೇಲೂ ಪರಿಣಾಮ ಬೀರಬಹುದು, ಇದರಿಂದ ನಿಮ್ಮನ್ನು ನೀವು ದೂರವಿಡುವುದನ್ನು ಖಚಿತಪಡಿಸಿಕೊಳ್ಳಿ.