Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್
– ಕುಂದಾಪುರ: ಈಜಲು ಹೋಗಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತ್ಯು!
– ಉಳ್ಳಾಲದ ಮೂವರು ಡ್ರಗ್ ಪೆಡ್ಲರ್ ಗಳ ಬಂಧನ, 1.5ಲಕ್ಷ ಮೌಲ್ಯದ ಎಂಡಿಎಂಎ ವಶ
– ಬಂಟ್ವಾಳ: ಅರಣ್ಯ ಇಲಾಖೆ ಸಿಬ್ಬಂದಿ ಹಠಾತ್ ಕುಸಿದು ಬಿದ್ದು ಮೃತ್ಯು

NAMMUR EXPRESS NEWS
ಕುಂದಾಪುರ: ಬೆಳ್ವೆ ಸಮೀಪದ ಗುಮ್ಮೋಲ ಎಂಬಲ್ಲಿರುವ ಡ್ಯಾಂಗೆ ಈಜಲು ಹೋಗಿದ್ದ ಇಬ್ಬರು ಬಾಲಕರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಡಿ. 1ರಂದು ಇಂದು ಮಧ್ಯಾಹ್ನ ನಡೆದಿದೆ. ಮೃತರನ್ನು ಸ್ಥಳೀಯ ನಿವಾಸಿಗಳಾದ ಶ್ರೀಶ ಆಚಾರ್ (13) ಹಾಗೂ ಜಯಂತ್ (14) ಎಂದು ಗುರುತಿಸಲಾಗಿದೆ. ಶ್ರೀಶ ಹೆಬ್ರಿಯ ಎಸ್‌ಆರ್‌ಎಸ್ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿಯಾಗಿದ್ದನು ಎಂದು ತಿಳಿದುಬಂದಿದೆ. ಬೆಳ್ವೆ ಸಮೀಪದ ಗೂಮ್ಮೋಲ ಚರ್ಚ್ ಹಿಂಭಾಗದಿಂದ ಕಜ್ಕೆ ಸಂತೆಕಟ್ಟೆ ಸಂಪರ್ಕ ರಸ್ತೆಯ ಬಳಿ ಇರುವ ಕಿಂಡಿ ಅಣೆಕಟ್ಟುವಿನ ಮೇಲ್ಭಾಗದಲ್ಲಿ ಶ್ರೀಶ ಆಚಾರ್, ಜಯಂತ್ ನಾಯ್ಕ್ ಸೇರಿದಂತೆ ನಾಲ್ಕು ಮಕ್ಕಳು ಈಜಲು ತೆರಳಿದ್ದರು ಎನ್ನಲಾಗಿದೆ. ಶ್ರೀಶ ನೀರಿನಲ್ಲಿ ಆಯ ತಪ್ಪುತ್ತಿದ್ದಂತೆ ರಕ್ಷಣೆಗೆ ಜಯಂತ್ ನೀರಿಗೆ ಧುಮುಕಿದ್ದು ಇಬ್ಬರು ನೀರು ಪಾಲಾಗಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಇತರ ಮಕ್ಕಳು ಬೊಬ್ಬೆ ಹೊಡೆದಿದ್ದು ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ನೀರಿನಲ್ಲಿ ಮುಳುಗಿದ್ದ ಮಕ್ಕಳ ಹುಡುಕಲು ಮುಂದಾದರು. ತಕ್ಷಣ ಶಂಕರನಾರಾಯಣ ಪೊಲೀಸ್ ಠಾಣೆಗೂ ಮಾಹಿತಿ ನೀಡಲಾಯಿತು. ನೀರಿನಲ್ಲಿ ಮುಳುಗಿದ್ದ ಮಕ್ಕಳನ್ನು ಹುಡುಕಲು ಸ್ಥಳೀಯರು ಪೊಲೀಸರಿಗೆ ಸಹಕರಿಸಿದ್ದು, ಕೆಲವೇ ಹೊತ್ತಿನಲ್ಲಿ ಎರಡು ಮೃತದೇಹಗಳು ಪತ್ತೆಯಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಉಳ್ಳಾಲದ ಮೂವರು ಡ್ರಗ್ ಪೆಡ್ಲರ್ ಗಳ ಬಂಧನ, 1.5ಲಕ್ಷ ಮೌಲ್ಯದ ಎಂಡಿಎಂಎ ವಶ

ಉಳ್ಳಾಲ: ಕೊಣಾಜೆ ಪೊಲೀಸ್‌ ಠಾಣೆ ವ್ಯಾಪ್ತಿಯ ಪಜೀರು ಎಂಬಲ್ಲಿ ನಿರ್ಜನ ಕೈಗಾರಿಕಾ ಪ್ರದೇಶದಲ್ಲಿ ಎಂಡಿಎಂಎ ಮಾರಾಟ ಮಾಡುತ್ತಿದ್ದ ಉಳ್ಳಾಲದ ಮೂವರು ಡ್ರಗ್ ಪೆಡ್ಲರ್ ಗಳನ್ನು ಬಂಧಿಸಲಾಗಿದೆ. ಒಟ್ಟು 1.5ಲಕ್ಷ ರೂಪಾಯಿ ಮೌಲ್ಯದ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಬೆಳ್ತಂಗಡಿ ಮೂಲದ ಕಿಂಗ್ ಪಿನ್ ಇಂದಬೆಟ್ಟು ಗ್ರಾಮದ ನಿವಾಸಿ ಮೊಹಮ್ಮದ್ ಅಲ್ಪಾಝ್ ಯಾನೆ ಅಲ್ಪಾ ಪ್ಯಾಬ್ಲೊ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಆರೋಪಿಯಿಂದ 53 ಗ್ರಾಂ ಎಂಡಿಎಂಎ ಮಾದಕ ವಸ್ತು, ಸ್ಕೋಕ್ ಪಾಟ್, ಸ್ವಿಝ್ ಡಿಜೈರ್ ಕಾರು, 2 ಮೊಬೈಲ್ ಸೇರಿ ಒಟ್ಟು 7,76,980/- ಮೌಲ್ಯದ ಸೊತ್ತನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಒಟ್ಟು ಪ್ರಕರಣದಲ್ಲಿ 103 ಗ್ರಾಂ ಎಮ್ ಡಿಎಮ್‌ಎ ಹಾಗೂ 15,52,980 ರೂ. ಮೌಲ್ಯದ ಸೊತ್ತನ್ನು ವಶಪಡಿಸಿಕೊಳ್ಳಲಾಗಿದೆ. ಮಾದಕ ದ್ರವ್ಯ ವಿರುದ್ಧ ಕಾರ್ಯಾಚರಣೆಗೆ ಇಳಿದಿರುವ ಕೋಣಾಜೆ ಪೊಲೀಸರು ಸತತವಾಗಿ ಡ್ರಗ್ ಪೆಡ್ಲರ್ ಗಳ ಬೆನ್ನು ಬೀಳುತ್ತಿದ್ದು ತಲಪಾಡಿಯ ಮರಿಯ ಚರ್ಚ್ ಕಂಪೌಂಡ್ ನಿವಾಸಿ ಗೌತಮ್, ಕುಂಪಲ ಹನುಮಾನ್ ದೇವಸ್ಥಾನ ಬಳಿಯ ನಿವಾಸಿ ಕಾರ್ತಿಕ್, ತೊಕ್ಕೊಟ್ಟು ಗಣೇಶ ನಗರದ ಗಣೇಶ ಮಂದಿರದ ಬಳಿ ನಿವಾಸಿ ನಿಖಿಲ್ ಎಂಬ ಮೂವರನ್ನು ಬಂಧಿಸಿ 1.50,000/- ಅಂದಾಜು ಮೌಲ್ಯದ 50 ಗ್ರಾಂ ತೂಕದ ಎಂಡಿಎಂಎ ಮಾದಕ ವಸ್ತು ಕೃತ್ಯಕ್ಕೆ ಬಳಸಿದ್ದ ಬೆಲೆನೋ ಕಾರು, 3 ಮೊಬೈಲ್ ಫೋನ್‌ಗಳು,ಡಿಜಿಟಲ್ ತೂಕ ಮಾಪನ ಹಾಗೂ ಗಾಜಿನ ನಳಿಕೆ ಸೇರಿದಂತೆ 7.76,980/- ಮೌಲ್ಯದ ಸೊತ್ತನ್ನು ವಶಪಡಿಸಿಕೊಂಡಿದ್ದರು. ಸದ್ಯ ಮತ್ತೆ ಕಾರ್ಯಾಚರಣೆ ಮುಂದುವರೆಸಿದ ಪೊಲೀಸರು ಡ್ರಗ್ ಪೂರೈಕೆ ಮಾಡುತ್ತಿದ್ದ ಕಿಂಗ್ ಪಿನ್ ಮೊಹಮ್ಮದ್ ಅಲ್ಪಾಝ್ ನನ್ನು ಹೆಡೆಮುರಿ ಕಟ್ಟಿದ್ದಾರೆ.

* ಬಂಟ್ವಾಳ: ಅರಣ್ಯ ಇಲಾಖೆ ಸಿಬ್ಬಂದಿ ಹಠಾತ್ ಕುಸಿದು ಬಿದ್ದು ಮೃತ್ಯು

ಬಂಟ್ವಾಳ: ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿಯಾಗಿದ್ದ ವೀರಕಂಭ ನಿವಾಸಿ ಜಯರಾಮ ಮೂಲ್ಯ ಕರ್ತವ್ಯನಿರತರಾಗಿದ್ದ ಸಂದರ್ಭ ಕಚೇರಿಯಲ್ಲಿ ಹಠಾತ್ ಕುಸಿದು ಬಿದ್ದು ಮೃತಪಟ್ಟ ಘಟನೆ ಬಿಸಿ ರೋಡಿನಲ್ಲಿ ನಡೆದಿದೆ. ಸುಮಾರು 30 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದರು. ನ.29ರಂದು ರಾತ್ರಿ ಪಾಳಿಯಲ್ಲಿ ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸಂಜೆ ವೇಳೆ ಇವರಿಗೆ ತಲೆಸುತ್ತು ಬರುವ ವಿಚಾರ ಇಲಾಖೆಯ ಜೊತೆ ಕೆಲಸಗಾರರಲ್ಲಿ ಹೇಳಿಕೊಂಡಿದ್ದರು ಎನ್ನಲಾಗಿದೆ. ಕಚೇರಿಯಲ್ಲಿ ಒಬ್ಬನೇ ಕರ್ತವ್ಯದಲ್ಲಿದ್ದು, ಮುಂಬಾಗಿಲ ಚಿಲಕ ಹಾಕಿಕೊಂಡು ಕೋಣೆಯೊಳಗೆ ಮಲಗಲು ಹೋಗುವ ವೇಳೆ ಟೇಬಲ್ ಮೇಲೆ ಕುಸಿದು ಬಿದ್ದು ಹೃದಯಾಘಾತದಿಂದ ನಿಧನರಾಗಿರಬೇಕು ಎಂದು ಸಂಶಯ ವ್ಯಕ್ತಪಡಿಸಲಾಗಿದೆ. ಬೆಳಿಗ್ಗೆ ಸುಮಾರು 6.30 ವರೆಯವರೆಗೂ ಇಲಾಖೆಯ ಬಾಗಿಲು ಮುಚ್ಚಿಕೊಂಡಿದ್ದನ್ನು ಕಂಡು ಇಲಾಖೆಯ ಚಾಲಕ ಕಿಟಕಿ ಬಾಗಿಲು ತೆರದು ನೋಡಿದಾಗ ಜಯರಾಮ ಅವರು ಟೇಬಲ್ ಮೇಲೆ ಬಿದ್ದ ಸ್ಥಿತಿಯಲ್ಲಿರುವುದು ಕಂಡು ಬಂದಿದೆ.

Categories
ರಾಜ್ಯ

ವಾಹನ ಸವಾರರಿಗೆ ಗುಡ್​ ನ್ಯೂಸ್

ವಾಹನ ಸವಾರರಿಗೆ ಗುಡ್​ ನ್ಯೂಸ್
– HSRP ನಂಬರ್ ಪ್ಲೇಟ್ ಅಳವಡಿಕೆ ಗಡುವು ಮತ್ತೆ ವಿಸ್ತರಣೆ
– ಡಿಸೆಂಬರ್ 31 ರವರೆಗೂ ಅವಕಾಶ ಕಲ್ಪಿಸಿದ ರಾಜ್ಯ ಸರಕಾರ

NAMMUR EXPRESS NEWS
ಬೆಂಗಳೂರು : ಹಳೆಯ ನಂಬರ್‌ ಪ್ಲೇಟ್‌ಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್‌ ಪ್ಲೇಟ್‌ ಅಳವಡಿಸಲು ಕರ್ನಾಟಕ ಸರ್ಕಾರ ಮತ್ತೆ ಗಡುವು ವಿಸ್ತರಣೆ ಮಾಡಿದೆ. ಹೆಚ್ಎಸ್ಆರ್​​ಪಿ ನಂಬರ್ ಪ್ಲೇಟ್ ಅಳವಡಿಸಲು ಈಗಾಗಲೇ ರಾಜ್ಯ ‌ಸರ್ಕಾರ ನಾಲ್ಕು ಬಾರಿ ಬಾರಿ ಗಡುವು ವಿಸ್ತರಣೆ ಮಾಡಿತ್ತು. ಇದೀಗ ಮತ್ತೆ ಡಿಸೆಂಬರ್ 31ರ ವರೆಗೆ HSRP ನಂಬರ್ ಪ್ಲೇಟ್ ಅಳವಡಿಸಲು ಗಡುವು ವಿಸ್ತರಿಸಿದೆ. ಹೆಚ್ಎಸ್ಆರ್​ಪಿ​ ನಂಬರ್ ಪ್ಲೇಟ್ ಅಳವಡಿಕೆಗೆ ನವೆಂಬರ್ 30 ಕೊನೆ ದಿನಾಂಕವಾಗಿತ್ತು. ಇದೀಗ ಸಾರಿಗೆ ಇಲಾಖೆ ಈ ವರ್ಷದ ಕೊನೆಯ (ಡಿಸೆಂಬರ್ 31) ದಿನದ ವರೆಗೆ ಗಡುವು ನೀಡಿದೆ. ದ್ವಿಚಕ್ರ ವಾಹನಗಳು, ಆಟೋ ಮತ್ತು ನಾಲ್ಕು ಚಕ್ರಗಳ ವಾಹನಗಳು ಸೇರಿದಂತೆ ರಾಜ್ಯದ ಎಲ್ಲಾ ವಾಹನಗಳಿಗೂ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸುವುದನ್ನು ಕಡ್ಡಾಗೊಳಿಸಲಾಗಿದೆ. ವಂಚನೆ ಮತ್ತು ಕಳ್ಳತನದಿಂದ ರಕ್ಷಿಸಲು ಹೆಚ್ಚುವರಿ ಭದ್ರತಾ ಕ್ರಮಗಳನ್ನು ಒಳಗೊಂಡಿರುವ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ ಅನ್ನು ಕಡ್ಡಾಯಾವಾಗಿ ಅಳವಡಿಸಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿದೆ.

ಕರ್ನಾಟಕದಲ್ಲಿರುವ ಸುಮಾರು 2 ಕೋಟಿಯಷ್ಟು ಹಳೆಯ ವಾಹನಗಳು, ಕೇವಲ 55 ಲಕ್ಷ ವಾಹನಗಳು ಮಾತ್ರ ಹೆಚ್ಎಸ್ಆರ್​ಪಿ ನಂಬರ್ ಪ್ಲೇಟ್ ಅಳವಡಿಸಿಕೊಂಡಿವೆ. ಹೀಗಾಗಿ 01-04-2019 ರ ಹಿಂದಿನ ಎಲ್ಲಾ ವಾಹನಗಳು ಡಿಸೆಂಬರ್ 31ರೊಳಗೆ ಹೆಚ್ಎಸ್ಆರ್​ಪಿ ನಂಬರ್ ಪ್ಲೇಟ್ ಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಾರಿಗೆ ಇಲಾಖೆ ಸೂಚಿಸಿದೆ. ಈ ಮೂಲಕ ಐದನೇ ಬಾರಿಗೆ ಗಡವು ವಿಸ್ತರಿಸಿದೆ.

Categories
ಜಾತಕ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಮಹಾದೇವನಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಮೇಷ ರಾಶಿಯವರ ಜೀವನದಲ್ಲಿ ಸಂತಸದ ವಾತಾವರಣವಿರುತ್ತದೆ. ಆದರೂ, ಇಂದು ಯಾರಿಗೂ ಸಾಲ ನೀಡುವುದನ್ನು ತಪ್ಪಿಸಿ. ಹೂಡಿಕೆ ಸಂಬಂಧಿತ ನಿರ್ಧಾರಗಳನ್ನು ಬಹಳ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ. ಕಠಿಣ ಪರಿಶ್ರಮವು ಉದ್ಯೋಗ ಮತ್ತು ವ್ಯವಹಾರದಲ್ಲಿ ಫಲಿತಾಂಶವನ್ನು ನೀಡುತ್ತದೆ. ಉದ್ಯೋಗಿಗಳ ಬಡ್ತಿ ಅಥವಾ ಮೌಲ್ಯಮಾಪನದ ಸಾಧ್ಯತೆಗಳು ಹೆಚ್ಚಾಗುತ್ತವೆ. ನಿಮ್ಮ ಕೆಲಸ ಮತ್ತು ಸ್ವಭಾವದಿಂದ ಜನರು ಸಂತೋಷವಾಗಿರುತ್ತಾರೆ. ಕೌಟುಂಬಿಕ ಜೀವನದಲ್ಲೂ ಸುಖ ಶಾಂತಿ ಇರುತ್ತದೆ.

** ವೃಷಭ ರಾಶಿ :
ವೃಷಭ ರಾಶಿಯವರಿಗೆ ಶುಭ ಫಲಗಳು ಲಭ್ಯವಾಗಲಿದೆ. ನಿಮ್ಮ ಸಂಗಾತಿಯಿಂದ ನೀವು ಬೆಂಬಲವನ್ನು ಪಡೆಯುತ್ತೀರಿ. ದೀರ್ಘಕಾಲ ಬಾಕಿ ಇರುವ ಕೆಲಸದಲ್ಲಿ ನೀವು ಬಯಸಿದ ಯಶಸ್ಸನ್ನು ಪಡೆಯುತ್ತೀರಿ. ಹೊಸ ಆಸ್ತಿ ಅಥವಾ ವಾಹನವನ್ನು ಖರೀದಿಸುವ ಅವಕಾಶವಿರುತ್ತದೆ. ಆದಾಗ್ಯೂ, ಕೆಲವು ಜನರು ತಮ್ಮ ಕುಟುಂಬ ಸದಸ್ಯರೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು. ಹಿಂದಿನ ತಪ್ಪುಗಳಿಂದ ಕಲಿಯುವ ಮೂಲಕ ಜೀವನದಲ್ಲಿ ಮುಂದುವರಿಯಿರಿ.

** ಮಿಥುನ ರಾಶಿ :
ನೀವು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿರಿ. ಉದ್ಯೋಗ ಮತ್ತು ವ್ಯಾಪಾರದಲ್ಲಿ ವಾತಾವರಣವು ಅನುಕೂಲಕರವಾಗಿರುತ್ತದೆ. ಉನ್ನತ ಅಧಿಕಾರಿಗಳ ಬೆಂಬಲದಿಂದ ಕೆಲಸದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ. ಕುಟುಂಬದೊಂದಿಗೆ ಸಮಯ ಕಳೆಯಿರಿ. ಬಣ್ಣಗಳ ಹಬ್ಬ ಹೋಳಿಯನ್ನು ಸಂಭ್ರಮದಿಂದ ಆಚರಿಸಿ. ಕೆಲಸದಿಂದ ಹೆಚ್ಚು ಒತ್ತಡವನ್ನು ತೆಗೆದುಕೊಳ್ಳಬೇಡಿ. ಹಿಂದಿನ ತಪ್ಪುಗಳನ್ನು ಪುನರಾವರ್ತಿಸಬೇಡಿ.

** ಕರ್ಕಾಟಕ ರಾಶಿ :
ಇಂದು ಅಪರಿಚಿತ ಭಯದಿಂದ ಚಿಂತಿತರಾಗುತ್ತಾರೆ, ಆದರೆ ತಮ್ಮ ಸಂಗಾತಿಯಿಂದ ಬೆಂಬಲವನ್ನು ಪಡೆಯುತ್ತಾರೆ. ಇದರಿಂದ ಮನಸ್ಸಿಗೆ ಸ್ವಲ್ಪ ನೆಮ್ಮದಿ ಸಿಗುತ್ತದೆ. ಇಂದು ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಲು ಸಮಯ ಮೀಸಲಿಡಿ. ಸವಾಲಿನ ಕಾರ್ಯಗಳನ್ನು ಪೂರ್ಣಗೊಳಿಸಲು ಸಹೋದ್ಯೋಗಿಗಳಿಂದ ಸಹಾಯವನ್ನು ಕೇಳಿ. ನಿಮ್ಮ ಭಾವನೆಗಳನ್ನು ನಿಯಂತ್ರಿಸಿ. ಕೋಪವನ್ನು ತಪ್ಪಿಸಿ. ಮಾನಸಿಕ ಶಾಂತಿಗಾಗಿ ಪ್ರತಿದಿನ ಯೋಗ ಮತ್ತು ಧ್ಯಾನ ಮಾಡಿ.

** ಸಿಂಹ ರಾಶಿ :
ನಿಮಗೆ ತುಂಬಾ ಶುಭ ದಿನ. ವೃತ್ತಿಪರ ಜೀವನದಲ್ಲಿ ನೀವು ಒಳ್ಳೆಯ ಸುದ್ದಿಯನ್ನು ಸ್ವೀಕರಿಸುತ್ತೀರಿ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ನೀವು ಹೊಸ ಉದ್ಯೋಗದ ಪ್ರಸ್ತಾಪವನ್ನು ಪಡೆಯುತ್ತೀರಿ. ಬಡ್ತಿ ಅಥವಾ ಮೌಲ್ಯಮಾಪನದ ಅವಕಾಶಗಳು ಹೆಚ್ಚಾಗುತ್ತವೆ. ನೀವು ಸಾಲದಿಂದ ಮುಕ್ತರಾಗುತ್ತೀರಿ. ಕೌಟುಂಬಿಕ ಜೀವನದಲ್ಲಿ ಸಂತೋಷವನ್ನು ಹಂಚಿಕೊಳ್ಳುತ್ತಿರಿ. ನಿಮ್ಮ ಪ್ರೀತಿಪಾತ್ರರ ಆರೋಗ್ಯಕ್ಕೆ ಗಮನ ಕೊಡಿ. ನಿಮ್ಮ ಸಂಗಾತಿಯ ಭಾವನೆಗಳನ್ನು ಗೌರವಿಸಿ. ಅವರನ್ನು ಬೆಂಬಲಿಸಿ.

** ಕನ್ಯಾ ರಾಶಿ :
ಕೌಟುಂಬಿಕ ಜೀವನದಲ್ಲಿ ಸಂತಸದ ವಾತಾವರಣ ಇರುತ್ತದೆ. ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಬಹುದು. ಹೊಸ ಆಸ್ತಿ ಅಥವಾ ವಾಹನವನ್ನು ಖರೀದಿಸುವ ಅವಕಾಶವಿರುತ್ತದೆ. ಇಂದು ನಿಮ್ಮ ಎಲ್ಲಾ ಕನಸುಗಳು ನನಸಾಗುತ್ತವೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಗೆ ಹಲವು ಸುವರ್ಣಾವಕಾಶಗಳು ದೊರೆಯಲಿವೆ. ವ್ಯಾಪಾರದಲ್ಲಿ ವಿಸ್ತರಣೆಯಾಗಲಿದೆ. ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇರುತ್ತದೆ.

** ತುಲಾ ರಾಶಿ :
ನಿಮಗೆ ಉತ್ತಮ ದಿನವಾಗಲಿದೆ, ಆದರೆ ವ್ಯಾಪಾರದಲ್ಲಿ ಏರಿಳಿತಗಳು ಸಾಧ್ಯ. ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಿ. ಕುಟುಂಬದೊಂದಿಗೆ ಹೋಳಿಯ ಮೋಜಿನ ಕ್ಷಣಗಳನ್ನು ಆನಂದಿಸಿ. ಹೂಡಿಕೆ ಸಂಬಂಧಿತ ನಿರ್ಧಾರಗಳನ್ನು ಬಹಳ ಚಿಂತನಶೀಲವಾಗಿ ತೆಗೆದುಕೊಳ್ಳಿ. ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ. ಹೂಡಿಕೆಗೆ ಸಂಬಂಧಿಸಿದಂತೆ ಗೊಂದಲವಿದ್ದರೆ ಖಂಡಿತ ತಜ್ಞರ ಸಲಹೆ ಪಡೆಯಿರಿ. ಇಂದು ನೀವು ಮಕ್ಕಳ ಕಡೆಯಿಂದ ಒಳ್ಳೆಯ ಸುದ್ದಿಯನ್ನು ಪಡೆಯುತ್ತೀರಿ.

** ವೃಶ್ಚಿಕ ರಾಶಿ :
ನಿಮಗೆ ಮಿಶ್ರ ಫಲಿತಾಂಶಗಳನ್ನು ನೀಡಲಿದೆ. ನೀವು ಸ್ನೇಹಿತರೊಂದಿಗೆ ಹೋಳಿ ಆಚರಿಸಬಹುದು. ಕುಟುಂಬ ಮತ್ತು ಸ್ನೇಹಿತರ ಬೆಂಬಲದೊಂದಿಗೆ, ಆರ್ಥಿಕ ಲಾಭಕ್ಕಾಗಿ ಹೊಸ ಅವಕಾಶಗಳಿವೆ. ಇಂದು ಹೆಚ್ಚಿನ ವೇಗದಲ್ಲಿ ಚಾಲನೆ ಮಾಡಬೇಡಿ. ಮಕ್ಕಳ ಆರೋಗ್ಯದ ಕಡೆ ಗಮನ ಕೊಡಿ. ಕುಟುಂಬದೊಂದಿಗೆ ಸಮಯ ಕಳೆಯಿರಿ. ಇಂದು ನೀವು ನಿಮ್ಮ ಸಂಗಾತಿಯೊಂದಿಗೆ ಅಡುಗೆ ಮಾಡಬಹುದು. ಇದು ಸಂಬಂಧಗಳಲ್ಲಿ ಪ್ರೀತಿ ಮತ್ತು ಉತ್ಸಾಹವನ್ನು ಉಳಿಸಿಕೊಳ್ಳುತ್ತದೆ. ಕೆಲವರಿಗೆ ಹೊಸ ಉದ್ಯೋಗ ಆಫರ್ ಬರಬಹುದು.

** ಧನಸ್ಸು ರಾಶಿ :
ಧನು ರಾಶಿಯವರ ಜೀವನದಲ್ಲಿ ಅನೇಕ ಅದ್ಭುತ ಬದಲಾವಣೆಗಳಾಗುತ್ತವೆ. ಹಣದ ಒಳಹರಿವು ಹೆಚ್ಚಾಗುತ್ತದೆ. ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗುತ್ತವೆ. ಆದರೆ, ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಮನಸ್ಸು ಚಿಂತಿಸುತ್ತಿರಬಹುದು. ಇಂದು ಯಾರಿಗೂ ದೊಡ್ಡ ಮೊತ್ತದ ಹಣವನ್ನು ಸಾಲವಾಗಿ ನೀಡಬೇಡಿ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಪಡೆಯುವರು.

** ಮಕರ ರಾಶಿ :
ಇಂದು ಜೀವನದಲ್ಲಿ ಧನಾತ್ಮಕ ಶಕ್ತಿ ಇರುತ್ತದೆ. ಪ್ರಮುಖ ಕಛೇರಿ ಕೆಲಸಗಳಲ್ಲಿ ಅಜಾಗರೂಕತೆ ಬೇಡ. ಆಸ್ತಿ ಸಂಬಂಧಿತ ವಿವಾದಗಳಿಂದಾಗಿ ಇಂದು ಕೆಲವರ ಒತ್ತಡ ಹೆಚ್ಚಾಗಬಹುದು. ಅಗತ್ಯವಿದ್ದರೆ, ಅನುಭವಿ ವ್ಯಕ್ತಿಯಿಂದ ಸಲಹೆ ಪಡೆಯಿರಿ. ನ್ಯಾಯಾಲಯದ ವಿಷಯಗಳಿಂದ ದೂರವಿರಿ. ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ.

** ಕುಂಭ ರಾಶಿ :
ಕುಂಭ ರಾಶಿಯವರಿಗೆ ಹಣಕಾಸಿನ ವಿಷಯಗಳಲ್ಲಿ ಅದೃಷ್ಟವು ಅನುಕೂಲಕರವಾಗಿರುತ್ತದೆ. ಅನೇಕ ಆದಾಯದ ಮೂಲಗಳಿಂದ ಹಣ ಬರುತ್ತದೆ, ಆದರೆ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಿ. ಕೆಲವರಿಗೆ ಕೆಲಸದ ನಿಮಿತ್ತ ಪ್ರಯಾಣ ಮಾಡಬೇಕಾಗಬಹುದು. ವೃತ್ತಿಗೆ ಸಂಬಂಧಿಸಿದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವಾಗ, ಖಂಡಿತವಾಗಿಯೂ ಕುಟುಂಬ ಸದಸ್ಯರ ಸಲಹೆಯನ್ನು ತೆಗೆದುಕೊಳ್ಳಿ.

** ಮೀನ ರಾಶಿ :
ಈ ದಿನವು ವೈವಾಹಿಕ ಸಂಬಂಧಗಳಲ್ಲಿ ಪ್ರೀತಿ ಮತ್ತು ಸಂತೋಷವನ್ನು ತರುತ್ತದೆ. ಹಣಕಾಸಿನ ವಿಷಯಗಳಲ್ಲಿ ಸ್ವಲ್ಪ ಜಾಗರೂಕರಾಗಿರಿ. ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯಿರಿ. ಗಡುವಿನ ಮೊದಲು ಪ್ರಮುಖ ಕಚೇರಿ ಕಾರ್ಯಗಳನ್ನು ಪೂರ್ಣಗೊಳಿಸಿ. ಇಂದು, ಸಹೋದರ ಸಹೋದರಿಯರ ಬೆಂಬಲದೊಂದಿಗೆ, ಆದಾಯವನ್ನು ಹೆಚ್ಚಿಸಲು ಹೊಸ ಅವಕಾಶಗಳಿವೆ. ಕೌಟುಂಬಿಕ ಜೀವನದಲ್ಲಿ ಸಂತಸದ ವಾತಾವರಣ ಇರುತ್ತದೆ. ಸುಖಮಯ ಜೀವನ ನಡೆಸುವಿರಿ.

Categories
ಮಲ್ನಾಡ್

ಚಿಕ್ಕಮಗಳೂರು ಒಕ್ಕಲಿಗ ಸಂಘದ ಬೆಳ್ಳಿ ಭವನ ಉದ್ಘಾಟನೆ

ಚಿಕ್ಕಮಗಳೂರು ಒಕ್ಕಲಿಗ ಸಂಘದ ಬೆಳ್ಳಿ ಭವನ ಉದ್ಘಾಟನೆ
– ರಾಜ್ಯದಲ್ಲೇ ಮಾದರಿ ಆಯ್ತು ಚಿಕ್ಕಮಗಳೂರು ಒಕ್ಕಲಿಗರ ಸಂಘ
– ಆದಿಚುಂಚನಗಿರಿ ಶ್ರೀ, ಸಚಿವ ಜಾರ್ಜ್, ಸಿಟಿ ರವಿ ಸೇರಿ ಅನೇಕ ಗಣ್ಯರ ಉಪಸ್ಥಿತಿ
– ಸಂಘದ 25ನೇ ವರ್ಷದ ಸವಿ ನೆನಪಿಗೆ ವಾಣಿಜ್ಯ ಸಂಕಿರ್ಣ ನಿರ್ಮಾಣ

NAMMUR EXPRESS NEWS
ಚಿಕ್ಕಮಗಳೂರು: ಚಿಕ್ಕಮಗಳೂರು ಒಕ್ಕಲಿಗರ ಸಂಘ ನಿರ್ಮಿಸಿರುವ ಪ್ರತಿಷ್ಠಿತ ‘ಬೆಳ್ಳಿ ಭವನ’ದ ಉದ್ಘಾಟನಾ ಸಮಾರಂಭ ಸಾವಿರಾರು ಒಕ್ಕಲಿಗರ ಹೆಮ್ಮೆಗೆ ಕಾರಣವಾಗಿದ್ದಲ್ಲದೆ ರಾಜ್ಯದಲ್ಲೇ ಈ ಮೂಲಕ ಚಿಕ್ಕಮಗಳೂರು ಜಿಲ್ಲಾ ಒಕ್ಕಲಿಗ ಸಂಘ ಮಾದರಿಯಾಯಿತು. ಚಿಕ್ಕಮಗಳೂರು ನಗರದ ಎಐಟಿ ಸರ್ಕಲ್‌ನಲ್ಲಿ ಚಿಕ್ಕಮಗಳೂರು ಜಿಲ್ಲಾ ಒಕ್ಕಲಿಗರ ಸಂಘದ ಬೆಳ್ಳಿ ಮಹೋತ್ಸವ ಮತ್ತು ನೂತನವಾಗಿ ನಿರ್ಮಿಸಿರುವ ವಾಣಿಜ್ಯ ಮಳಿಗೆ ಬೆಳ್ಳಿ ಭವನವನ್ನು ಒಕ್ಕಲಿಗರ ಸಂಘಕ್ಕೆ 25 ವರ್ಷ ತುಂಬಿರುವ ನೆನಪಿನಾರ್ಥ ಬೆಳ್ಳಿ ಭವನ ನಿರ್ಮಿಸಲಾಗಿದೆ. ಮಳಿಗೆ ಬೆಳ್ಳಿ ಭವನವನ್ನು ಉದ್ಘಾಟಿಸಿ ಮಾತನಾಡಿದ ಆದಿಚುಂಚನಗಿರಿ ಮಹಾ ಸಂಸ್ಥಾನ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಒಕ್ಕಲಿಗರ ಸಂಸ್ಕೃತಿ, ಸಂಸ್ಕಾರವನ್ನು ಯುವ ಪೀಳಿಗೆಗೂ ಕಲಿಸಿ ಸಮಾಜಮುಖಿ ಕೆಲಸಗಳನ್ನು ಮಾಡಬೇಕೆಂದರು.
ಸಮುದಾಯದ ಘಟಾನುಘಟಿಗಳು ತಮ್ಮ ಬದುಕಿನ ಕ್ಷಣಗಳನ್ನು ಮರೆತು, ತಮ್ಮ ಮನೆಯ ಹಣ ತಂದು ಬಿಕ್ಷೆ ಬೇಡಿ ಇಷ್ಟು ದೊಡ್ಡ ಜಾಗ ಮಾಡಿ ದೊಡ್ಡ ಸಂಘವನ್ನು ಕಟ್ಟಿದ್ದಾರೆ. ಕೆ.ಎಚ್.ರಾಮಯ್ಯ ಸೇರಿದಂತೆ ನಮ್ಮ ಹಿರಿಯರು ಸಮುದಾಯಕ್ಕೆ ಸಂಘಟನೆ ಶಕ್ತಿ ನೀಡಿದ್ದಾರೆ ಎಂದರು.
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖ‌ರ್ ಮಾತನಾಡಿ ಸಂಘದ ಸರ್ವ ಸದಸ್ಯರ ಸಹಕಾರದಿಂದ ಬೆಳ್ಳಿ ಭವನ ಕಟ್ಟಡ ಅತಿ ಕಡಿಮೆ ಅವಧಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಲಾಗಿದೆ ಒಕ್ಕಲಿಗರ ಸಂಘದಲ್ಲಿ ಪ್ರಸ್ತುತ 10 ಸಾವಿರ ಸದಸ್ಯರನ್ನು ಹೊಂದಿದ್ದು, ಜಿವಿಎಸ್‌ ಶಾಲೆಯಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಕಲಿಸಲು ಹೆಚ್ಚು ಆದ್ಯತೆ ನೀಡಲಾಗಿದ್ದು, ಶಾಲೆಯ 2 ಹಳೇಯ ಬಸ್ಸಿನ ಜೊತೆಗೆ ಪ್ರಸ್ತುತ 2 ಹೊಸ ಬಸ್ಸುಗಳನ್ನು ಖರೀದಿಸಿದ್ದೇವೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಬೆಳ್ಳಿ ಬಾಗಿನ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿ ಚಿಕ್ಕಮಗಳೂರಿಗೆ ಸಾಕಷ್ಟು ಪ್ರವಾಸಿಗರು ಬರುತ್ತಿದ್ದಾರೆ. ಇಲ್ಲಿ ಪ್ರವಾಸೋದ್ಯಮ ಬೆಳೆಸುವಲ್ಲಿ ಸಂಘಸಂಸ್ಥೆ ಸಾರ್ವಜನಿಕ ಅಭಿಪ್ರಾಯ ಪಡೆಯುತ್ತಿದ್ದೇವೆ. ಸ್ವಾಮೀಜಿಗಳು ತಮ್ಮ ಮಾರ್ಗದರ್ಶನ, ಸಲಹೆ ನೀಡಬೇಕು ಎಂದರು.
ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ, ಶಾಸಕ ಟಿ.ಡಿ ರಾಜೇಗೌಡ, ಎಸ್.ಎಲ್.ಬೋಜೇಗೌಡ, ಮಾಜಿ ಸಚಿವರಾದ ಬಿ.ಎನ್‌.ಜೀವರಾಜ್, ಶಿವಮೊಗ್ಗ ಭದ್ರಾಕಾಡ ಅಧ್ಯಕ್ಷರಾದ ಡಾ. ಅಂಶುಮಂತ್, ಕಾಫಿ ಮಂಡಳಿ ಅಧ್ಯಕ್ಷರಾದ ಎಂ.ಕೆ ದಿನೇಶ್‌, ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಲಕ್ಷ್ಮಣ್ ಗೌಡ( ರವಿ), ಗೌರವ ಕಾರ್ಯದರ್ಶಿ ಎಂ.ಸಿ ಪ್ರಕಾಶ್, ಮಹಿಳಾ ಸಂಘದ ಅಧ್ಯಕ್ಷೆ ರೀನಾಸುಜೇಂದ್ರ, ಸುಜಿತ್, ಮೇಘನಾ ಸಂಘದ ನಿರ್ದೇಶಕರು, ಮಾಜಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಉಪಸ್ಥಿತರಿದ್ದರು. ಯುಪಿಎಸ್‌ಸಿ ಬ್ಯಾಂಕ್ ಬಂದಿರುವ ಮೇಘನಾ ಅವರನ್ನು ಸನ್ಮಾನಿಸಲಾಯಿತು.

Categories
ರಾಜ್ಯ

ಉತ್ತರ ಕನ್ನಡ ಜಿಲ್ಲೆಯಲ್ಲಿ ಭೂ ಕಂಪನ!?

ಉತ್ತರ ಕನ್ನಡ ಜಿಲ್ಲೆಯಲ್ಲಿ ಭೂ ಕಂಪನ!?
– ಶಿರಸಿ, ಯಲ್ಲಾಪುರ, ಅಂಕೋಲಾ, ಜೋಗ ಭಾಗದಲ್ಲಿ ಭೂ ಕಂಪನ
– ಫೆಂಗಲ್ ಚಂಡಮಾರುತಕ್ಕೆ ಮೂವರು ಬಲಿ!

NAMMUR EXPRESS NEWS
ಶಿರಸಿ: ರಾಜ್ಯದ ಮಲೆನಾಡು ಭಾಗದ ಉತ್ತರ ಕನ್ನಡ ಜಿಲ್ಲೆಯ ಕೆಲವು ಭಾಗದಲ್ಲಿ ಭಾನುವಾರ ಭೂ ಕಂಪನದ ಅನುಭವ ಆಗಿದೆ ಎಂಬ ಮಾಹಿತಿ ಕೇಳಿ ಬರುತ್ತಿದೆ. ಉತ್ತರ ಕನ್ನಡ ಜಿಲ್ಲೆ ಶಿರಸಿ-ಯಲ್ಲಾಪುರ, ಅಂಕೋಲಾ, ಕುಮಟಾ, ಶಿವಮೊಗ್ಗ ಜಿಲ್ಲೆಯ ಜೋಗಜಲಪಾತ ಭಾಗಗಳಲ್ಲಿ ನಿಗೂಢ ಶಬ್ದ ಕೇಳಿ ಬಂದಿದ್ದು, ಭೂಕಂಪದ ಅನುಭವವಾಗಿದೆ. ಜನಸಾಮಾನ್ಯರು ಇದರಿಂದಾಗಿ ಆತಂಕಕ್ಕೀಡಾಗಿದ್ದಾರೆ. ಮದ್ಯಾಹ್ನ 12 ಗಂಟೆಯ ವೇಳೆಗೆ ನಿಗೂಢವಾದ ಶಬ್ದ ಕೇಳಿಸಿ ಬಂದಿದ್ದು ಭೂಮಿ ಅಲುಗಾಡಿದ ಅನುಭವವಾಗಿದೆ. ಕೆಲವರು ತಮ್ಮ ಮನೆ ನಡುಗಿದ ಅನುಭವ ಆಗಿದೆ, ನಂತರ ಮೂರ್ನಾಲ್ಕು ಸೆಕೆಂಡುಗಳ ಕಾಲ ಸೂಕ್ಷ್ಮವಾಗಿ ನಡುಗಿದ ಅನುಭವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಶಿರಸಿ ತಾಲೂಕಿನ ಮತ್ತೀಘಟ್ಟಾ, ಸಂಪಖಂಡ, ಹೆಗಡೆಕಟ್ಟಾ, ಹುಲೇಕಲ್‌, ವಾನಳ್ಳಿ, ಯಲ್ಲಾಪುರ ತಾಲೂಕಿನ ಚವತ್ತಿ, ಸಿದ್ದಾಪುರ ತಾಲೂಕಿನ ಕಾನಸೂರು, ತಟ್ಟಿಕೈ, ಮಾವಿನಗುಂಡಿ, ಹಲಗೇರಿ, ಹೆಗ್ಗರಣಿ, ಹಾರ್ಸಿಕಟ್ಟಾ, ಶಿವಮೊಗ್ಗ ಜಿಲ್ಲೆಯ ಜೋಗಜಲಪಾತ ಭಾಗಗಳಲ್ಲಿ ಇದ್ದಕ್ಕಿದ್ದಂತೆ ಭೂಮಿ ನಡುಗಿದ ಅನುಭವವಾಗಿದೆ ಎಂದು ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ಭೂಕಂಪವೇ ಆಗಿದ್ದರೆ ಗುಡುಗಿನ ಶಬ್ದ ಕೇಳಿ ಬರುತ್ತಿರಲಿಲ್ಲ. ಆದರೆ ಗುಡುಗಿದ ರೀತಿ ಶಬ್ದವೂ ಕೂಡ ಕೇಳಿ ಬಂದಿದೆ ಎನ್ನುವುದು ಸಾರ್ವಜನಿಕರ ಮಾಹಿತಿ. ಅಲ್ಲದೇ ಶಿರಸಿ ನಗರದಲ್ಲಿಯೂ ಈ ಅನುಭವವಾಗಿದೆ. ಈ ಬಗ್ಗೆ ಅಧಿಕಾರಿಗಳು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಕೆಲವು ಮಾಧ್ಯಮಗಳು ಜನಾಭಿಪ್ರಾಯ ಸಂಗ್ರಹಿಸಿ ಸುದ್ದಿ ಮಾಡಿವೆ.

ಫೆಂಗಲ್ ಚಂಡಮಾರುತಕ್ಕೆ ಮೂವರು ಬಲಿ!

ಫೆಂಗಲ್ ಚಂಡಮಾರುತ ಭಾನುವಾರ ಮುಂಜಾನೆ 2 ಗಂಟೆಗೆ ತಮಿಳುನಾಡು ಕರಾವಳಿಯನ್ನು ತಲುಪಿದೆ. ವಿದ್ಯುದಾಘಾತ ಹಾಗೂ ಭೂಕುಸಿತದಿಂದಾಗಿ ಮೂವರು ಸಾವನ್ನಪ್ಪಿದ್ದಾರೆ. ಮುಂದಿನ 48 ಗಂಟೆಗಳ ಕಾಲ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. 16 ಗಂಟೆಗಳ ಬಳಿಕ ಏರ್‌ಪೋರ್ಟ್ ತೆರೆಯಲಾಗಿದೆ. ವಿಮಾನಗಳ ಕಾರ್ಯಾಚರಣೆ ಆರಂಭವಾಗಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಮಿಳುನಾಡು, ಆಂಧ್ರಪ್ರದೇಶ ಮತ್ತು ಪುದುಚೇರಿಯ ಹಲವು ಪ್ರದೇಶಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ಈ ಪ್ರದೇಶದಲ್ಲಿ ಹವಾಮಾನ ಬದಲಾವಣೆ, ಉಬ್ಬರವಿಳಿತ ಮತ್ತು ಭಾರೀ ಮಳೆ ನಿರೀಕ್ಷಿಸಲಾಗಿದೆ. ಚೆನೈ ಸೇರಿ ತಮಿಳುನಾಡು ಸಂಪರ್ಕ ಸಮಸ್ಯೆ ಆಗುವ ಸಾಧ್ಯತೆ ಇದೆ. ಇನ್ನು ರಾಜ್ಯದಲ್ಲೂ ಮೋಡ ಕವಿದ ವಾತಾವರಣ ಇದೆ.

Categories
ಕರಾವಳಿ

ಟಾಪ್ 3 ನ್ಯೂಸ್ ಕರಾವಳಿ

ಟಾಪ್ 3 ನ್ಯೂಸ್ ಕರಾವಳಿ

– ನಕ್ಸಲ್‌ ವಿಕ್ರಮ್‌ಗೌಡ ಎನ್‌ಕೌಂಟರ್‌ ನಕಲಿ ಅಲ್ಲ!
– ಉಡುಪಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಸ್ಪಷ್ಟನೆ
– ಮೂಲ್ಕಿ: ಬಪ್ಪನಾಡು ಸೇತುವೆ ಬಳಿ ಹೊತ್ತಿ ಉರಿದ ಕಂಟೇನರ್!
– ಬಂಟ್ವಾಳ: ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ನಿರ್ಮಾಪಕನಿಂದ ವಂಚನೆ: ದೂರು

NAMMUR EXPRESS NEWS
ಉಡುಪಿ: ನಕ್ಸಲ್‌ ವಿಕ್ರಮ್‌ಗೌಡ ಎನ್‌ಕೌಂಟರ್‌ ನಕಲಿ ಅಲ್ಲ. ಎನ್‌ಕೌಂಟರ್‌ನ ನ್ಯಾಯಸಮ್ಮತತೆಯನ್ನು ಅನುಮಾನಿಸಬೇಡಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಸ್ಪಷ್ಟಪಡಿಸಿದ್ದಾರೆ. ಉಡುಪಿ ಜಿಲ್ಲಾ ಗೃಹ ಕಚೇರಿಯಲ್ಲಿ ಶನಿವಾರ ಮಾತನಾಡಿದ ಸಚಿವರು, ಘಟನೆಯ ಕುರಿತು ನ್ಯಾಯಾಂಗ ತನಿಖೆ ಅಗತ್ಯವಿಲ್ಲ. ಆದರೆ, ಅಗತ್ಯ ಬಿದ್ದರೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರೊಂದಿಗೆ ಚರ್ಚೆ ನಡೆಸಲಾಗುವುದು ಎಂದರು. ವಿಕ್ರಮ್ ಗೌಡ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವುದನ್ನು ಸಚಿವರು ಗಮನಿಸಿದರು. ನಕ್ಸಲ್ ಚಟುವಟಿಕೆಗಳಿಗೆ ಕಡಿವಾಣ ಹಾಕುವುದು ಸರ್ಕಾರದ ನಿರ್ಧಾರ. ಕೂಂಬಿಂಗ್ ಕಾರ್ಯಾಚರಣೆಯ ಸಂದರ್ಭದಲ್ಲಿ ಎನ್‌ಕೌಂಟರ್ ಸಂಭವಿಸಿದೆ ಮತ್ತು ವಿಕ್ರಮ್ ಗೌಡ ಶಸ್ತ್ರಸಜ್ಜಿತನಾಗಿದ್ದನು. ಅವರು ಪೊಲೀಸರ ಮೇಲೆ ಗುಂಡು ಹಾರಿಸಿದರು ಮತ್ತು ಅಧಿಕಾರಿಗಳ ಜೀವವನ್ನು ರಕ್ಷಿಸಲು ಪ್ರತಿದಾಳಿ ಅಗತ್ಯ ಎಂದು ಅವರು ವಿವರಿಸಿದರು.
ನಕ್ಸಲಿಸಂ ನಿರ್ಮೂಲನೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬದ್ಧವಾಗಿವೆ. ಚರ್ಚೆಗಳು ಮತ್ತು ಟೀಕೆಗಳು ಯಾವಾಗಲೂ ಇರುತ್ತವೆ, ಆದರೆ ಸರ್ಕಾರವು ಕಾನೂನು ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಿದೆ. ಅನುಮಾನಗಳಿದ್ದಲ್ಲಿ ಹೆಚ್ಚಿನ ಸ್ಪಷ್ಟನೆ ನೀಡಲು ಸಿದ್ಧ ಎಂದು ಸಚಿವರು ಭರವಸೆ ನೀಡಿದರು.

ಬಪ್ಪನಾಡು ಸೇತುವೆ ಬಳಿ ಹೊತ್ತಿ ಉರಿದ ಕಂಟೇನರ್!

ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಬಪ್ಪನಾಡು ಸೇತುವೆ ಬಳಿ ಕಂಟೇನರ್ ನ ಬ್ರೇಕ್ ಲೈನರ್ ಜಾಮ್ ಆಗಿ ಬೆಂಕಿ ಕಾಣಿಸಿಕೊಂಡು ಟಯ‌ರ್ ಮೇಲ್ಗಡೆ ಹೊತ್ತಿ ಉರಿದಿದ್ದು ಕೆಲ ಹೊತ್ತು ಆತಂಕದ ವಾತಾವರಣ ಸೃಷ್ಟಿಯಾಯಿತು ಪಡುಬಿದ್ರೆ ನಂದಿಕೂರು ಕೈಗಾರಿಕಾ ಪ್ರದೇಶದ ಬ್ರೆಟ್ ಪ್ಲೆಕ್ಸ್ ಕಂಪನಿಯಿಂದ ಮಂಗಳೂರು ಬಂದ‌ರ್ ಕಡೆಗೆ ಪ್ಲಾಸ್ಟಿಕ್ ವಸ್ತುಗಳನ್ನು ಸಾಗಾಟ ಮಾಡುತ್ತಿದ್ದ ಕಂಟೇನರ್‌ ಬಪ್ಪನಾಡು ಸೇತುವೆ ತಲುಪುತ್ತಿದ್ದಂತೆ ಬ್ರೇಕ್ ಲೈನರ್ ಜಾಮ್ ಆಗಿ ಟಯ‌ರ್ ಮೇಲ್ಗಡೆ ಹೊತ್ತಿ ಉರಿದಿದೆ. ಬೆಂಕಿ ಧಗ ಧಗನೇ ಹೊತ್ತಿ ಉರಿಯುತ್ತಿದ್ದಂತೆ ಕಂಗಾಲಾದ ಕಂಟೇನರ್ ಚಾಲಕ ಹಿಮಾಚಲ ಪ್ರದೇಶ ನಿವಾಸಿ ರಂಜಿತ್ ಕೆಳಗೆ ಹಾರಿ ಅಪಾಯದಿಂದ ಪಾರಾಗಿದ್ದಾನೆ.ಕೂಡಲೇ ಮುಲ್ಕಿನ ಪಂ ಸದಸ್ಯ ಬಾಲಚಂದ್ರ ಕಾಮತ್, ಮುಲ್ಕಿ ಪೊಲೀಸ್ ಠಾಣೆಯ ಎಸ್‌ಐ ಅನಿತ ನೇತೃತ್ವದಲ್ಲಿ ಮುಲ್ಕಿ ಹಾಗೂ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು, ಹೆಜ್ಜಾಡಿ ಟೋಲ್ ಸಿಬ್ಬಂದಿ ಹಾಗೂ ಸ್ಥಳೀಯರು ಪೆಟ್ರೋಲ್ ಬಂಕ್ ಬಳಿಯಿಂದ ಬೆಂಕಿ ನಂದಿಸುವ ಸಾಧನವನ್ನು ತಂದು ಕೂಡಲೇ ಬೆಂಕಿ ನಂದಿಸಿದ್ದಾರೆ. ಬಳಿಕ ಹಳೆಯಂಗಡಿಯ ಪೂಜಾ ರೇಂಜರ್ಸ್ ವತಿಯಿಂದ ನೀರನ್ನು ತಂದು ಪೂರ್ತಿ ಬೆಂಕಿ ನಂದಿಸಲಾಯಿತು. ಬೆಂಕಿ ಹೊತ್ತಿ ಉರಿದರೆ ಕಂಟೇನರ್ ನ ಪೆಟ್ರೋಲ್ ಟ್ಯಾಂಕ್ ಸ್ಫೋಟವಾಗುವ ಸಾಧ್ಯತೆ ಇತ್ತು ಅವಘಡದ ಸಂದರ್ಭ ಕೆಲ ಹೊತ್ತು ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿದ್ದು ಪೊಲೀಸರು ತೆರವುಗೊಳಿಸಿದ್ದಾರೆ.

ಬಂಟ್ವಾಳ: ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ನಿರ್ಮಾಪಕನಿಂದ ವಂಚನೆ: ದೂರು

ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ನಿರ್ಮಾಣ ಮಾಡಿರುವ ನಿರ್ಮಾಪಕನೊಬ್ಬನ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ತುಳುವಿನ ‘ಜೀಟಿಗೆ’ ಹೆಸರಿನ ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ನಿರ್ಮಾಣ ಮಾಡಿದ್ದ ಅರುಣ್ ರೈ ವಿರುದ್ಧ ಆ‌ರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕನ್ನಡದ ವೀರಕಂಬಳ ಸಿನಿಮಾವನ್ನು ಸಹ ಅರುಣ್ ನಿರ್ಮಾಣ ಮಾಡುತ್ತಿದ್ದರು. ದೂರು ದಾಖಲಾದ ಬೆನ್ನಲ್ಲೆ ನಿರ್ಮಾಪಕ ಪರಾರಿ ಆಗಿದ್ದಾರೆ.ಬಂಟ್ವಾಳ ಮೂಲದ ಉದ್ಯಮಿಯೊಬ್ಬರನ್ನು ಬೆಂಗಳೂರಿನ ತಾಜ್ ಹೋಟೆಲ್ ನಲ್ಲಿ ಪರಿಚಯ ಮಾಡಿಕೊಂಡಿದ್ದ ನಿರ್ಮಾಪಕ ಅರುಣ್ ರೈ, ತಾನು ‘ವೀರಕಂಬಳ’ ಸಿನಿಮಾ ನಿರ್ಮಾಣ ಮಾಡುತ್ತಿದ್ದು ಅದರ ಲಾಭಾಂಶದಲ್ಲಿ 60 ಲಕ್ಷ ರೂಪಾಯಿ ಕೊಡುವುದಾಗಿ ಹೇಳಿ ಹಣ ಪಡೆದುಕೊಂಡಿದ್ದಾನೆ. ಕೋವಿಡ್ ವೇಳೆ ಬಂಟ್ವಾಳ ಮೂಲದ ಉದ್ಯಮಿಗೆ ಗೇರು ಬೀಜಾ ಸಂಸ್ಕರಣಾ ಘಟಕದಲ್ಲಿ 25 ಕೋಟಿ ನಷ್ಟವಾಗಿತ್ತು, ಅದನ್ನೇ ಬಂಡವಾಳವಾಗಿ ಬಳಸಿದ ಅರುಣ್, ತಾನು ಹಣವನ್ನು ಮತ್ತೆ ಗಳಿಸಿಕೊಡುವುದಾಗಿ ಹೇಳಿ ಆಸೆ ಹುಟ್ಟಿಸಿದ್ದಾನೆ.
‘ನನ್ನ ಕಂಪೆನಿಯಲ್ಲಿ ಹೂಡಿಕೆ ಮಾಡಿ ನಾನು ನಿಮಗೆ ಲಾಭ ಮಾಡಿಕೊಡುತ್ತೇನೆ ಎಂದಿದ್ದ ಅರುಣ್, ತಾನು ದೆಹಲಿಯಲ್ಲಿ 400 ಕೋಟಿ ಹೂಡಿಕೆ ಮಾಡಿರುವುದಾಗಿ ಸುಳ್ಳು ಹೇಳಿದ್ದಾನೆ. ತಮಿಳುನಾಡಿನ ದಿಂಡಿಗಲ್ ಕಾಳಿ ಸ್ವಾಮಿಯಿಂದ 50 ಕೋಟಿ ಹಣ ಬರಲಿಕ್ಕೆ ಇದೆ, ಪಳನಿ ದೇವಾಲಯದ ಟ್ರಸ್ಟ್‌ ನಿಂದಲೂ ಸಾಲ ಕೊಡಿಸ್ತೇನೆ, ಜಾರ್ಖಂಡ್ ಸರ್ಕಾರದಿಂದ 50 ಕೋಟಿ ಕೆಲಸದ ಬಿಲ್ ಬಾಕಿ ಇದೆ, ಮಂಗಳೂರಿನ ಗೋಡೌನ್ ನಲ್ಲಿ 40 ಕೋಟಿ 5 ಮೌಲ್ಯದ ಕ್ಯಾಶ್ ನಟ್ಸ್ (ಗೋಡಂಬಿ )ಇದೆ ಅದನ ಎಂದೆಲ್ಲ ಸುಳ್ಳು ಹೇಳಿದ್ದ ನಿರ್ಮಾಪಕ ಎಂದು ದೂರು ದಾಖಲಾಗಿದೆ.

Categories
ರಾಜ್ಯ

ಸರಕಾರಿ ಆರೋಗ್ಯ ಸೇವೆ ಹಲವೆಡೆ ಅಸ್ತವ್ಯಸ್ತ!

ಸರಕಾರಿ ಆರೋಗ್ಯ ಸೇವೆ ಹಲವೆಡೆ ಅಸ್ತವ್ಯಸ್ತ!
– ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಔಷಧಿ ಅಲಭ್ಯ?
– ರೋಗಿಗಳಿಗೆ ಸಂಕಷ್ಟ: ಕೇಳೋರು ಯಾರು ಸ್ವಾಮಿ?
– ಇದು ಈ ಸರ್ಕಾರದ ಕಥೆಯಲ್ಲ, ಎಲ್ಲರೂ ಮಾಡಿದ್ದು ಇದೇ..!

NAMMUR EXPRESS NEWS
ಬೆಂಗಳೂರು: ಸರಕಾರಿ ಆಸ್ಪತ್ರೆಯಲ್ಲಿ ಬ್ರಾಂಡೆಡ್ ಹೆಸರಲ್ಲಿ ಖಾಸಗಿ ಔಷಧ ಮಾರಾಟದ ಅಂಗಡಿಗೆ ವೈದ್ಯರು ರೋಗಿಗೆ ಔಷಧ ಚೀಟಿ ಬರೆದು ಕೊಡುವಂತಿಲ್ಲ. ಈ ಕುರಿತಂತೆ ಸರಕಾರ ಸ್ಪಷ್ಟ ಆದೇಶ ಪ್ರಕಟಿಸಿದೆ. ಆದರೆ, ಸರಕಾರಿ ಆಸ್ಪತ್ರೆಗಳ ವೈದ್ಯರಿಗೆ ಇದು ಅನಿವಾರವಾಗಿದೆ. ಹಲವು ತಿಂಗಳಿನಿಂದ ಪ್ರಾಥಮಿಕ ಆರೋಗ್ಯ ಕೇಂದ್ರ, ಆರೋಗ್ಯ ಘಟಕಕ್ಕೆ ಸಾಮಾನ್ಯ ರೋಗಗಳ ನಿಯಂತ್ರಣ ಔಷಧ ಕೂಡ ಸಮರ್ಪಕವಾಗಿ ಪೂರೈಕೆ ಆಗುತ್ತಿಲ್ಲ. ಇದರಿಂದ ಸಾಮಾನ್ಯ ರೋಗ ನಿಯಂತ್ರಣಕ್ಕೂ ಖಾಸಗಿ ಔಷಧ ಮಾರಾಟ ಅಂಗಡಿಗೆ ಔಷಧ ಚೀಟಿ ಬರೆಯುತ್ತಿದ್ದಾರೆ. ಔಷಧ ಪೂರೈಸುವಂತಹ ಸಾಮಾನ್ಯ ಜವಾಬ್ದಾರಿ ನಿರ್ವಹಿಸುವಲ್ಲಿ ಸರಕಾರ ವಿಫಲವಾಗಿರುವುದು ಇದಕ್ಕೆ ಕಾರಣ. ಬಿಪಿ, ಶುಗರ್, ಸಾಮಾನ್ಯ ಜ್ವರ, ಗಾಯ, ನೋವು ನಿವಾರಕ ಔಷಧಗಳು ಗ್ರಾಮೀಣ ಆಸ್ಪತ್ರೆಗಳಲ್ಲಿ ಇಲ್ಲ ಎಂಬ ದೂರು ಕೇಳಿ ಬಂದಿದೆ. ಔಷಧ ಇಲ್ಲ ಎಂದು ಸೂಚನಾ ಫಲಕದಲ್ಲಿ ಅಧಿಕೃತ ಮಾಹಿತಿಯನ್ನು ಆಸ್ಪತ್ರೆ ಆಡಳಿತ ಪ್ರಕಟಿಸಿಲ್ಲ. ವೈದ್ಯರು, ಸಿಬ್ಬಂದಿ ಮಾತು ನಂಬಿ ಔಷಧ ಇಲ್ಲ ಎಂದು ರೋಗಿಗಳು ವಾಪಸಾಗುವಂತಹ ಸನ್ನಿವೇಶ ಉದ್ಭವಿಸಿದೆ. ರಾಜ್ಯದ ಹಲವು ಆಸ್ಪತ್ರೆಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸರಕಾರಿ ಆರೋಗ್ಯ ಸೇವೆ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಸಂಜೆ 4 ಗಂಟೆ ನಂತರ ಹಲವು ವೈದ್ಯರು, ಸಿಬ್ಬಂದಿ ಸರಕಾರಿ ಆಸ್ಪತ್ರೆಯಲ್ಲಿ ಇರುವುದೇ ಇಲ್ಲ. ಕೆಲವೊಮ್ಮೆ ಹಗಲು ಹೊತ್ತು ಇಂತಹ ಅನುಭವ ರೋಗಿಗಳಿಗೆ ಸಿಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿನ ಆರೋಗ್ಯ ಸೇವೆ ಸುಧಾರಣೆಗೆ ಸರಕಾರ ಹಲವು ಯೋಜನೆ, ಕಾಠ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ಜನರಿಗೆ ನೇರವಾಗಿ ತಲುಪದಂತಿದೆ. ವೈದ್ಯರು, ಸಿಬ್ಬಂದಿ ಕೊರತೆ ವಿಪರೀತ ಇದ್ದು ಸರಕಾರಿ ಆರೋಗ್ಯ ಸೇವೆ ಎಂಬುದು ಗ್ರಾಮೀಣ ಜನರ ಪಾಲಿಗೆ ಕನ್ನಡಿಗಂಟಿನಂತಿದೆ. ಇನ್ನು ಕೆಲ ವೈದ್ಯರು ಖಾಸಗಿ ಸೇವೆ ಸಲ್ಲಿಸುವುದು ಕೂಡ ಬಡ ರೋಗಿಗಳಿಗೆ ತೊಂದರೆಯಲ್ಲಿ ಸಿಲುಕಿಸಿದೆ. ಆರೋಗ್ಯ ಕೇಂದ್ರದಲ್ಲಿ ಲಭ್ಯವಿರದ ಔಷಧಗಳನ್ನು ಬ್ರಾಂಡೆಡ್ ಹೆಸರಲ್ಲಿ ಖಾಸಗಿ ಔಷಧ ಅಂಗಡಿಯಲ್ಲಿ ಖರೀದಿಗೆ ಚೀಟಿ ಬರೆದು ಕೊಡುವ ವೈದ್ಯರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧೀನ ಕಾಯದರ್ಶಿ 2016 ಅಕ್ಟೋಬರ್ 1ರಂದು ಆದೇಶ ಹೊರಡಿಸಿದ್ದಾರೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಜನೌಷಧ ಮಾರಾಟ ಅಂಗಡಿಯೇ ಇಲ್ಲ. ಇದರಿಂದಾಗಿ ರೋಗಿಗಳಿಗೆ ವೈದ್ಯರು ಬ್ರಾಂಡೆಡ್ ಹೆಸರಿನ ಔಷಧ ಖರೀದಿಗೆ ಚೀಟಿ ಬರೆಯುವುದು ಅನಿವಾರ್ಯ ಎಂಬಂತಿದೆ. ಸರ್ಕಾರಿ ಆಸ್ಪತ್ರೆಗಳ ಆಧುನಿಕ ಯಂತ್ರಗಳು ನಿರ್ವಹಣೆ ಇಲ್ಲ. ಆಂಬುಲೆನ್ಸ್ 108 ಸಿಬ್ಬಂದಿಗೆ ಸಂಬಳ ಬರುತ್ತಿಲ್ಲ. ಇದೆಲ್ಲ ಆಸ್ಪತ್ರೆ ಅವ್ಯವಸ್ಥೆಗೆ ಕಾರಣವಾಗಿದೆ. ಸರ್ಕಾರ ಸಾವಿರಾರು ಕೋಟಿ ಯೋಜನೆ ಬದಲು ತಾಲೂಕಿಗೆ ಒಂದು ಎಲ್ಲಾ ವ್ಯವಸ್ಥೆ ಇರುವ ಹೈಟೆಕ್ ಆಸ್ಪತ್ರೆ, 24 ಗಂಟೆ ಸಿಬ್ಬಂದಿ, ಚಿಕಿತ್ಸೆ ನೀಡುವುದು ಉತ್ತಮ. ಈ ಬಗ್ಗೆ ಯೋಚಿಸಬೇಕಿದೆ. ರಾಜ್ಯದ ಎಲ್ಲಾ ಶಾಸಕರು ಈ ಬಗ್ಗೆ ದನಿ ಎತ್ತಬೇಕಿದೆ.

Categories
ಚಿತ್ರದುರ್ಗ

ಹೊಸದುರ್ಗದಲ್ಲಿ ಕನ್ನಡ ರಾಜ್ಯೋತ್ಸವದ ರಂಗು!

ಹೊಸದುರ್ಗದಲ್ಲಿ ಕನ್ನಡ ರಾಜ್ಯೋತ್ಸವದ ರಂಗು!
– ಡಾ.ರಾಜ್, ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ
– ಕಲಾ ತಂಡಗಳ ಜತೆ ಭುವನೇಶ್ವರಿ ದೇವಿಯ ಮೆರವಣಿಗೆ

NAMMUR EXPRESS NEWS
ಹೊಸದುರ್ಗ: ಕನ್ನಡವನ್ನ ಬರೀ ಹೊಗಳಿಕೆಗೆ ಸೀಮಿತಗೊಳಿಸದೇ ಅದನ್ನು ಉಸಿರಾಗಿಸಿಕೊಂಡಾಗ ಕನ್ನಡವನ್ನು ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ. ನಾವು ನವಂಬರ್ ತಿಂಗಳ ಕನ್ನಡಿಗರಾಗದೆ ಬದುಕಿನ ಉಸಿರಿರುವವರೆಗೂ ಕನ್ನಡಿಗರಾದಾಗ ಮಾತ್ರ ಈ ಕನ್ನಡ ರಾಜ್ಯೋತ್ಸವಕ್ಕೆ ಅರ್ಥ ಕಲ್ಪಿಸಿದಂತಾಗುತ್ತದೆ ಎಂದು ಸಮಾಜ ಸೇವಕ ಆಗ್ರೋ ಶಿವಣ್ಣ ತಿಳಿಸಿದ್ದಾರೆ.
ಡಾ.ರಾಜ್, ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದ ಶೋಭಾ ಯಾತ್ರೆ ಉದ್ಘಾಟಿಸಿ ಅವರು ಮಾತನಾಡಿದರು. ಡಾ. ರಾಜ್, ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಗೌಡ್ರ ತಿಪ್ಪೇಸ್ವಾಮಿ ಮಾತನಾಡಿ ಕಳೆದ 44 ವರ್ಷಗಳಿಂದ ರಾಜಕುಮಾರ್ ಹೆಸರಿನಲ್ಲಿ ಸಂಘ ಸ್ಥಾಪಿಸಿ ನಿರಂತರವಾಗಿ ಕನ್ನಡ ರಾಜ್ಯೋತ್ಸವ ಆಚರಿಸುತ್ತಾ ಬಂದಿದ್ದು ನಿರಂತರವಾಗಿ ರಕ್ತದಾನದಂತ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದ್ದು ಎಲ್ಲಾ ಧರ್ಮದ ಸದಸ್ಯರನ್ನು ಒಳಗೊಂಡಂತೆ ನಮ್ಮ ಸಂಘ ಕಾರ್ಯನಿರ್ವಹಿಸುತ್ತಿದೆ ಎಂದರು.
ನಗರದ ವೀರಭದ್ರ ಸ್ವಾಮಿ ದೇವಸ್ಥಾನದಿಂದ ತಾಯಿ ಭುವನೇಶ್ವರಿಯ ಮೆರವಣಿಗೆಯು ಕನ್ನಡ ಅಭಿಮಾನಿಗಳ ಕನ್ನಡ ಗೀತೆಗಳು, ಕೀಲು ಕುಣಿತ ಸ್ತಬ್ಧ ಚಿತ್ರಗಳೊಂದಿಗೆ ಭುವನೇಶ್ವರಿ ವೃತ್ತ ಮದಕರಿ ವೃತ್ತ ಬಸವೇಶ್ವರ ವೃತ್ತ ಗಾಂಧಿ ವೃತ್ತದ ಮೂಲಕ ಸಾಗಿ ಅಂಬೇಡ್ಕರ್ ವೃತ್ತದಲ್ಲಿ ಕನ್ನಡ ಧ್ವಜವನ್ನು ಆರಿಸಲಾಯಿತು. ಕಾರ್ಯದರ್ಶಿ ಶಹಜಾನ್,ಶೀತಲ್ ಕುಮಾರ್,ಓಬಳೇಶ್ ನಾಯಕ,ಗೂಳಿಹಟ್ಟಿ ಕೃಷ್ಣಮೂರ್ತಿ ತಮ್ಮಣ್ಣ, ಕೊಟ್ರೇಶ್, ಸ್ಟಾರ್ ಮುನ್ನ, , ತುಂಬಿನಕೆರೆ ಬಸವರಾಜ್ ಅಲ್ತಾಫ್ ಪಾಷಾ, ನಾಗರಾಜ್, ಪಯಾಜ್, ಸುರೇಶ್ ಎಂ, ಜಾದು ಮೋಹನ್, ಗಿರೀಶ್, ರಾಮಣ್ಣ, ಗೌರಮ್ಮ ನಾಯಕ, ಹಾಗೂ ಅಪಾರ ಕನ್ನಡ ಅಭಿಮಾನಿಗಳು ಭಾಗವಹಿಸಿದ್ದರು.

Categories
ಚಿಕ್ಕಮಗಳೂರು

ಕಿಗ್ಗಾ ಋಷ್ಯಶೃಂಗೇಶ್ವರನಿಗೆ ಲಕ್ಷದೀಪೋತ್ಸವ!

ಕಿಗ್ಗಾ ಋಷ್ಯಶೃಂಗೇಶ್ವರನಿಗೆ ಲಕ್ಷದೀಪೋತ್ಸವ!
– ದೀಪೋತ್ಸವದಲ್ಲಿ ನೂರಾರು ಜನ ಭಾಗಿ
– ದೀಪಾಲಂಕಾರ,ರಂಗೋಲಿಯಿಂದ ಕಂಗೊಳಿಸಿದ ದೇಗುಲ

NAMMUR EXPRESS NEWS
ಶೃಂಗೇರಿ: ಮಳೆ ದೇವರೆಂದೇ ಜಗತ್ಪ್ರಸಿದ್ಧಿಯಾದ ತಾಲೂಕಿನ ಕಿಗ್ಗಾ ಶ್ರೀಶಾಂತಾ ಋಷ್ಯಶೃಂಗೇಶ್ವರ ಸ್ವಾಮಿ ದೇವಾಲಯದಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮ ನೂರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನಡೆಯಿತು.
ದೀಪೋತ್ಸವದ ಪ್ರಯುಕ್ತ ದೇವಾಲಯವನ್ನು ವಿಶೇಷ ವಿದ್ಯುತ್ ದೀಪಗಳಿಂದ ಮತ್ತು ರಂಗೋಲಿ, ಹೂವುಗಳಿಂದ ಅಲಂಕರಿಸಲಾಗಿತ್ತು.ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಭಕ್ತಾಧಿಗಳು ಶ್ರದ್ಧೆ,ಭಕ್ತಿಯಿಂದ ದೀಪೋತ್ಸವದಲ್ಲಿ ಪಾಲ್ಗೊಂಡರು. ದೇವಾಲಯದಲ್ಲಿ ವಿಶೇಷ ಪೂಜೆ,ಧಾರ್ಮಿಕ ಆಚರಣೆಗಳ ನಂತರ ದೀಪೋತ್ಸವ ನಡೆಯಿತು,ರಾಜಬೀದಿಯಲ್ಲಿ ಶಾಂತ ಸಮೇತ ಋಷ್ಯಶೃಂಗೇಶ್ವರ ಸ್ವಾಮಿಯ ರಥೋತ್ಸವ ನಡೆಯಿತು. ದೀಪೋತ್ಸವ ಸಮಿತಿಯಿಂದ ಅಚ್ಚುಕಟ್ಟಾಗಿ ಕಾರ್ಯಕ್ರಮದ ನಿರ್ವಹಣೆ ಮಾಡಲಾಯಿತು.

Categories
ರಾಜ್ಯ

ಭತ್ತದ ಕೊಯ್ಲು ಈ ವಾರ ಕಷ್ಟ ಕಷ್ಟ!

ಭತ್ತದ ಕೊಯ್ಲು ಈ ವಾರ ಕಷ್ಟ ಕಷ್ಟ!
– ಒಂದು ವಾರ ಮಳೆ ಸಾಧ್ಯತೆ: ಅಡಿಕೆ ಕೊಯ್ಲಿಗೆ ತೊಂದರೆ?
– ಸೈಕ್ಲೋನ್ ಎಫೆಕ್ಟ್: ಭಾರೀ ಚಳಿ, ಮತ್ತೆ ಮಳೆ

NAMMUR EXPRESS NEWS
ಬೆಂಗಳೂರು: ಬಂಗಾಳಕೊಲ್ಲಿಯ ಚಂಡಮಾರುತದ (ಪೆಂಗಾಲ್) ಪ್ರಭಾವದಿಂದ ಉತ್ತರ ಭಾರತ ಕಡೆಯಿಂದ ಶುಶ್ಕ ಹಾಗೂ ಶೀತ ಗಾಳಿ ಸೆಳೆಯಲ್ಪಡುತ್ತಿರುವುದರಿಂದ ಉತ್ತಮ ಛಳಿಯ ವಾತಾವರಣ ಸೃಷ್ಟಿಯಾಗಿದೆ. ರಾತ್ರಿ ಭಾರೀ ಚಳಿ ಹೆಚ್ಚಾಗುತ್ತಿದೆ.
ಪೆಂಗಾಲ್ ಚಂಡಮಾರುತವು ನವೆಂಬರ್ 30ರಂದು ಉತ್ತರ ತಮಿಳುನಾಡು ಕರಾವಳಿಯ ಮೂಲಕ ರಾಜ್ಯಕ್ಕೆ ಪ್ರವೇಶ ಮಾಡಿದೆ. ರಾಜ್ಯದಲ್ಲಿ ಛಳಿಯ ವಾತಾವರಣವು ಕಡಿಮೆಯಾಗಿ ಮಳೆ ಆರಂಭವಾಗುವ ಮುನ್ಸೂಚನೆ ಇದೆ.
ಡಿಸೆಂಬರ್ 2 ಅಥವಾ 3ರಂದು ಚಂಡಮಾರುತವು ಕೇರಳದ ಕಾಸರಗೋಡು ಹಾಗೂ ಕಣ್ಣೂರು ಮಧ್ಯೆ ಅರಬ್ಬಿ ಸಮುದ್ರಕ್ಕೆ ಪ್ರವೇಶಿಸುವ ಸಾಧ್ಯತೆ ಇದೆ. ಈ ಚಂಡಮಾರುತವು ಅರಬ್ಬಿ ಸಮುದ್ರದಲ್ಲಿ ಇರುವಷ್ಟು ಸಮಯವೂ ( ಬಂಗಾಳಕೊಲ್ಲಿ ಕಡೆಯಿಂದ ಗಾಳಿ ಸೆಳೆಯಲ್ಪಡುವುದರಿಂದ) ರಾಜ್ಯದ ದಕ್ಷಿಣ ಒಳನಾಡು, ಮಲೆನಾಡು ಹಾಗೂ ದಕ್ಷಿಣ ಕರಾವಳಿ ಭಾಗಗಳಲ್ಲಿ ಹಿಂಗಾರು ರೀತಿಯ ಮಳೆ ಮುಂದುವರಿಯುವ ಸಾಧ್ಯತೆಗಳಿವೆ. ಸುಮಾರು ಡಿಸೆಂಬರ್ ಮೊದಲ ವಾರ ಪೂರ್ತಿ ಮಳೆಯ ಸಾಧ್ಯತೆ ಇದೆ. ಈ ಪ್ರಯುಕ್ತ ರೈತರು ಭತ್ತದ ಕೊಯ್ಲನ್ನು ಒಂದು ವಾರ ಮುಂದೂಡುವುದು ಹಾಗೂ ಈಗಾಗಲೇ ಕೊಯ್ಲು ಮಾಡಿದ್ದಲ್ಲಿ ಫಸಲು ಸುರಕ್ಷಿತ ಸ್ಥಳಕ್ಕೆ ಸಾಗಿಸುವುದು ಸೂಕ್ತ. ಅಡಿಕೆ ಕೊಯ್ಲು ಬಗ್ಗೆ ಗಮನಿಸಬೇಕಿದೆ. ಶನಿವಾರ ಮೋಡ ಕವಿದ ವಾತಾವರಣ ಎಲ್ಲೆಡೆ ಕಂಡು ಬಂತು.