Categories
ತೀರ್ಥಹಳ್ಳಿ

ಎಳ್ಳಮಾವಾಸ್ಯೆ ಜಾತ್ರೆ: ಪೊಲೀಸ್ ಹೈ ಅಲರ್ಟ್!

ಎಳ್ಳಮಾವಾಸ್ಯೆ ಜಾತ್ರೆ: ಪೊಲೀಸ್ ಹೈ ಅಲರ್ಟ್!
– ಹೊಸ ವರ್ಷ, ಜಾತ್ರೆ ಹಿನ್ನೆಲೆ ಎಲ್ಲೆಡೆ ಭಾರೀ ಬಂದೋಬಸ್ತ್
– ತುಂಗಾ ನದಿ ನೀರಿನ ಬಗ್ಗೆ ಎಚ್ಚರ ಎಚ್ಚರ
– ರಥ ಬೀದಿಯಲ್ಲಿ ವಾಹನ ಸಂಚಾರ ನಿಷೇಧ

NAMMUR EXPRESS NEWS
ತೀರ್ಥಹಳ್ಳಿಯ ಶ್ರೀ ರಾಮೇಶ್ವರಸ್ವಾಮಿಯ ಜಾತ್ರೆ ಮತ್ತು ಹೊಸವರ್ಷದ ಹಿನ್ನಲೆಯಲ್ಲಿ ತೀರ್ಥಹಳ್ಳಿ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಜನತೆಗೆ ಇಲಾಖೆಯಿಂದ ಸೂಚನೆ ಕೂಡ ನೀಡಿದ್ದಾರೆ.
1. ಜಾತ್ರೆಯಲ್ಲಿ ಸಿಸಿ ಕ್ಯಾಮರಾ ಕಣ್ಣಾವಲಿರಿಸಿದ್ದು, ಎಲ್ಲಾ ಸಾರ್ವಜನಿಕರು ಸಭ್ಯತೆಯಿಂದ ನಡೆದುಕೊಳ್ಳುವುದು.
2. ಜಾತ್ರೆಯಲ್ಲಿ ಪುಂಡಾಟಿಕೆ ಮತ್ತು ಇತರೆ ರೀತಿಯ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸತಕ್ಕದ್ದಲ್ಲ. ಇಂತಹ ಚಟುವಟಿಕೆಗಳು ಕಂಡು ಬಂದಲ್ಲಿ ಕೂಡಲೇ ತೀರ್ಥಹಳ್ಳಿ ಪೊಲೀಸ್ ಠಾಣೆ/112/ಮೇಲಾಧಿಕಾರಿಗಳ ಗಮನಕ್ಕೆ ತರುವುದು.
3. ಜಾತ್ರೆಯಲ್ಲಿ ಜೇಬುಗಳ್ಳರು ಮತ್ತು ಸರಗಳಿದ್ದು, ಧರಿಸುವ ಆಭರಣಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸದೇ ಎಚ್ಚರಿಕೆ ವಹಿಸುವುದು.
4. ತುಂಗಾ ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು ನೀರಿನ ಸೆಳೆತ ಹೆಚ್ಚಾಗಿರುವುದರಿಂದ ಮಕ್ಕಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳುವುದಲ್ಲದೇ ಅನಗತ್ಯವಾಗಿ ನದಿಗೆ ಇಳಿಯುವುದು/ಈಜಾಡುವುದು ಮಾಡತಕ್ಕದ್ದಲ್ಲ.
5. ಜಾತ್ರೆಯಲ್ಲಿ ಮಹಿಳೆಯರೊಂದಿಗೆ ಸಭ್ಯತೆಯಿಂದ ನಡೆದುಕೊಳ್ಳುವುದು. ನೂಕುನುಗ್ಗಲನ್ನು ಮಾಡತಕ್ಕದ್ದಲ್ಲ.
6. ರಥಬೀದಿಯಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಿದ್ದು, ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವುದು. ದೇವಸ್ಥಾನಕ್ಕೆ ಸಂಬಂಧಿಸಿದ ವಾಹನಗಳಿಗೆ ಪಾಸ್ ವಿತರಿಸಲಾಗಿದ್ದು ಪಾಸ್ ಹೊಂದಿರುವ ವಾಹನಗಳು ಮಾತ್ರ ರಥಬೀದಿಯಲ್ಲಿ ಸಂಚರಿಸುವುದು. ರಥಬೀದಿಯಲ್ಲಿ ಮನೆಗಳನ್ನು ಹೊಂದಿರುವ ಸಾರ್ವಜನಿಕರು ಛತ್ರಕೇರಿ ರಸ್ತೆಯಲ್ಲಿ ಸಂಚರಿಸುವುದು.
7. ಜಾತ್ರೆ ಮತ್ತು ಎಳ್ಳಮಾವ್ಯಾಸೆಯ ಪ್ರಯುಕ್ತ ತೀರ್ಥಹಳ್ಳಿ ಪಟ್ಟಣದಲ್ಲಿ ವಾಹನ ಸಂಚಾರ ಹೆಚ್ಚಾಗಿರುವುದರಿಂದ ನಿಗದಿಪಡಿಸಿದ ಸ್ಥಳಗಳಲ್ಲಿ ಮಾತ್ರ ವಾಹನಗಳನ್ನು ನಿಲುಗಡೆಗೊಳಿಸುವುದು. ವಾಹನಗಳ ನಿಲುಗಡೆಯನ್ನು ನಿಷೇಧಿಸಿರುವ ಸ್ಥಳಗಳಲ್ಲಿ ವಾಹನಗಳನ್ನು ನಿಲುಗಡೆಗೊಳಿಸಿದರೆ ಕಾನೂನು ಕ್ರಮಕೈಗೊಳ್ಳಲಾಗುವುದು.
8. ಮದ್ಯಪಾನ ಮಾಡಿ ವಾಹನಗಳನ್ನು ಚಲಾಯಿಸತಕ್ಕದ್ದಲ್ಲ. ಅಪ್ರಾಪ್ತರು ವಾಹನಗಳನ್ನು ಚಲಾಯಿಸತಕ್ಕದ್ದಲ್ಲ. ಉಲ್ಲಂಘಿಸಿದ್ದಲ್ಲಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು.
9. ಹೊಸ ವರ್ಷದ ಹಿನ್ನಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆಯನ್ನು ಹಮ್ಮಿಕೊಂಡಿದ್ದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಪೊಲೀಸ್ ಇಲಾಖೆಯ ಅನುಮತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳುವುದು. ರೆಸಾರ್ಟ್/ಹೋಂಸ್ಟೇ ಮಾಲೀಕರು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಲ್ಲಿ ಮುಂಚಿತವಾಗಿ ಪೊಲೀಸ್ ಅನುಮತಿಯನ್ನು ಪಡೆದುಕೊಳ್ಳುವುದಲ್ಲದೇ ಧ್ವನಿ ವರ್ಧಕಗಳನ್ನು ಬಳಸುವ ಬಗ್ಗೆ ಧ್ವನಿವರ್ಧಕ ಪರವಾನಿಗೆಯನ್ನು ಪಡೆದುಕೊಂಡು ಧ್ವನಿವರ್ಧಕ ಪರವಾನಿಗೆಯ ಮಾರ್ಗಸೂಚಿಗಳನ್ನು ಮತ್ತು ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆರವರ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವುದು. ತಪ್ಪಿದ್ದಲ್ಲಿ ಕಾನೂನು ರೀತಿಯ ಕ್ರಮಕೈಗೊಳ್ಳಲಾಗುವುದು.
10. ಮದ್ಯದಂಗಡಿ ಮಾಲೀಕರು ಅಬಕಾರಿ ಇಲಾಖೆಯಿಂದ ನೀಡಲಾಗುವ ಎಲ್ಲಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಸೂಚಿಸಿದೆ.
11. ದಿನಾಂಕ:31/12/2024 ರಂದು ನಡೆಯುವ ಶ್ರೀ ರಾಮೇಶ್ವರ ಸ್ವಾಮಿಯ ರಥೋತ್ಸವದ ಸಂದರ್ಭದಲ್ಲಿ ರಥಬೀದಿಯಲ್ಲಿ ಅಂಗಡಿ ಮುಗ್ಗಟ್ಟುಗಳನ್ನು ತೆರೆದಿರುವ ವ್ಯಾಪಾರಸ್ಥರು ರಥಕ್ಕೆ ಅಡ್ಡಿಯಾಗದಂತೆ ತಮ್ಮ ವಸ್ತುಗಳನ್ನು ರಸ್ತೆಯಿಂದ ತೆರವುಗೊಳಿಸಿ ಸಹಕರಿಸಲು ಸೂಚಿಸಿದೆ.
12. ತೀರ್ಥಹಳ್ಳಿಯ ಶ್ರೀ ರಾಮೇಶ್ವರ ಸ್ವಾಮಿಯ ಜಾತ್ರೆ ಮತ್ತು ಹೊಸವರ್ಷದ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆಯಿಂದ ನೀಡಲಾಗುವ ಸೂಚನೆಗಳನ್ನು/ಮಾರ್ಗಸೂಚಿಗಳನ್ನು ಪಾಲನೆ ಮಾಡುವುದರ ಮೂಲಕ ಜಾತ್ರೆಯನ್ನು ಯಶಸ್ವಿಗೊಳಿಸಲು ಸಹಕರಿಸಬೇಕೆಂದು ಕೋರಿದೆ.

Categories
ಚಿಕ್ಕಮಗಳೂರು

ಖಾಸಾಯಿಕಾನೆಗೆ ಅಕ್ರಮ ಗೋಸಾಗಾಟ ತಡೆದ ಸ್ಥಳೀಯರು..

ಖಾಸಾಯಿಕಾನೆಗೆ ಅಕ್ರಮ ಗೋಸಾಗಾಟ ತಡೆದ ಸ್ಥಳೀಯರು..
– ಸಾಗರದ ಕಸಾಯಿಖಾನೆಯೊಂದಕ್ಕೆ ಸಾಗಾಟ
– ಏಜೆಂಟ್ ಮುಖಾಂತರ ಸಾಗಾಟ ಆರೋಪ
– ಗೋವುಗಳ ರಕ್ಷಣೆ,ವಾಹನ,ಇಬ್ಬರು ಅರೆಸ್ಟ್

NAMMUR EXPRESS NEWS
ಶೃಂಗೇರಿ: ತಾಲೂಕಿನ ಬೇಗಾರಿನ ಸರ್ಕಲ್‌ನಲ್ಲಿ ಸಾಗರದ ಕಸಾಯಿಖಾನೆಯೊಂದಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಗೋವುಗಳನ್ನು ಸ್ಥಳೀಯರು ಹಾಗೂ ಬಜರಂಗದಳ ಕಾರ್ಯಕರ್ತರು ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ ತಡೆದು ಗೋವುಗಳನ್ನು ರಕ್ಷಿಸಿದ್ದಾರೆ. ಏಜೆಂಟ್ ಒಬ್ಬನ ಮುಖಾಂತರ ಸಾಗರಕ್ಕೆ ಗೋವುಗಳನ್ನು ಬೇಗಾರಿನ ಹರಾವರಿ ಎಂಬ ಗ್ರಾಮದಿಂದ ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಇದನ್ನು ತಡೆದ ಹಿಂದೂ ಸಂಘಟನೆಯ ಕಾರ್ಯಕರ್ತರು ಆರೋಪಿಗಳನ್ನು ಪೋಲೀಸರಿಗೆ ಒಪ್ಪಿಸಿದ್ದಾರೆ. ಶೃಂಗೇರಿ ಪೋಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ಪ್ರಕರಣ ದಾಖಲಿಸಿಕೊಂಡು,ವಾಹನ ಹಾಗೂ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

Categories
ರಾಜ್ಯ

ಹೊಸ ವರ್ಷಕ್ಕೆ ಮಳೆ ಸಾಧ್ಯತೆ!

ಹೊಸ ವರ್ಷಕ್ಕೆ ಮಳೆ ಸಾಧ್ಯತೆ!
– ವಾಯುಭಾರ ಕುಸಿತ: ಶನಿವಾರ, ಭಾನುವಾರ ಮಳೆ!
– ಹಲವು ಜಿಲ್ಲೆಗಳಿಲ್ಲಿ ಮಳೆ: ಹವಾಮಾನ ಇಲಾಖೆ ಅಲರ್ಟ್

NAMMUR EXPRESS NEWS
ಬೆಂಗಳೂರು: ಪಶ್ಚಿಮ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಬೆಂಗಳೂರು ಸುತ್ತಮುತ್ತ ಹಾಗೂ ದಕ್ಷಿಣ ಒಳನಾಡಿನಲ್ಲಿ ಡಿ. 25 ರಿಂದ ಥಂಡಿಗಾಳಿ, ತುಂತುರು ಮಳೆಯಾಗುತ್ತಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಶುಕ್ರವಾರವೂ ಮಳೆಯಾಗಿದ್ದು, ಶನಿವಾರ ಕೂಡ ಮಳೆ ಮುಂದುವರಿಯುವ ಸಾಧ್ಯತೆಯಿದೆ. ಭಾನುವಾರದ ನಂತರ ಮಳೆ ಪ್ರಮಾಣ ಕ್ಷೀಣಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಶುಕ್ರವಾರ ಚಿತ್ರದುರ್ಗ, ಬೆಂಗಳೂರು, ವಿಜಯಪುರ, ಹಿರಿಯೂರು, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ. ಇಂದು ಎಲ್ಲೆಲ್ಲಿ ಮಳೆ : ಡಿ.28 ಶನಿವಾರಂದು ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಶಿವಮೊಗ್ಗ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಮಂಡ್ಯ, ಮೈಸೂರು, ಚಾಮರಾಜನಗರ, ತುಮಕೂರು, ವಿಜಯನಗರ, ಕೊಡಗು, ಚಿತ್ರದುರ್ಗ, ಕೋಲಾರ ಜಿಲ್ಲೆಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

– ವಾಡಿಕೆಗಿಂತ ಈ ವರ್ಷ ಅಧಿಕ ಮಳೆ

ರಾಜ್ಯದಲ್ಲಿ ಈ ವರ್ಷ ಶೇ.19 ರಷ್ಟು ಅಧಿಕ ಮಳೆಯಾಗಿದೆ. ವಾಡಿಕೆಯ ಪ್ರಕಾರ, ಡಿ.27 ವರೆಗೆ 1155 ಮಿ.ಮೀ. ಮಳೆಯಾಗಬೇಕಿತ್ತು. ಸದ್ಯ 1385 ಮಿ.ಮೀ. ಮಳೆಯಾಗಿದೆ. ಹಿಂಗಾರಿನಲ್ಲಿ ವಾಡಿಕೆಯ ಪ್ರಕಾರ, 182 ಮಿ.ಮೀ. ಬದಲಿಗೆ 238 ಮಿ.ಮೀ. ಮಳೆಯಾಗಿದೆ. ಆದರೆ ಕೃಷಿ ಹಾಗೂ ತರಕಾರಿ ಬೆಳೆಗಳಿಗೆ ಡಿಸೆಂಬರ್ ಮಳೆ ಮಾರಕವಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ನಗರದಲ್ಲಿ ಶೀತ ಗಾಳಿ ಬೀಸುತ್ತಿದೆ. ಹೀಗಾಗಿ ಕೆಲವರು ಮನೆಯಿಂದ ಆಚೆ ಬರಲು ಹೆದರಿದರೆ, ಮತ್ತೆ ಕೆಲವರು ಸ್ವೆಟರ್‌, ಜರ್ಕಿನ್‌, ಟೋಪಿ ಧರಿಸಿ ಛತ್ರಿ ಹಿಡಿದು ಸಾಗುತ್ತಿದ್ದಾರೆ. ದ್ವಿಚಕ್ರ ವಾಹನಗಳಲ್ಲಿಸಾಗುವವರು ರೈನ್‌ಕೋಟ್‌, ಜರ್ಕಿನ್‌ ಏರಿಸಿ ಸಾಗುತ್ತಿದ್ದಾರೆ. ಮತ್ತೊಂದೆಡೆ ಬಟ್ಟೆ ಒಗೆದು ಅರೆ ಒಣಗುವಷ್ಟರಲ್ಲಮಳೆರಾಯನ ಆಗಮನವಾಗುತ್ತದೆ. ಇದರಿಂದ ಜನರು ಬೇಸತ್ತಿದ್ದಾರೆ.

Categories
ರಾಜ್ಯ

ಟಾಪ್ ನ್ಯೂಸ್ ಕರ್ನಾಟಕ

ಟಾಪ್ ನ್ಯೂಸ್ ಕರ್ನಾಟಕ
– ಬೆಂಗಳೂರು : ಗೆಳತಿಗೆ ಲೈಂಗಿಕ ಕಿರುಕುಳ ಆರೋಪ, ಕಿರುತೆರೆ ನಟ ಚರಿತ್ ಬಾಳಪ್ಪ ಬಂಧನ
– ಚಿಕ್ಕಬಳ್ಳಾಪುರ: ವ್ಹೀಲಿಂಗ್ ಕ್ರೇಜ್‌ಗೆ ಇಬ್ಬರು ಯುವಕರು ಸಾವು
– ಆನೇಕಲ್ : ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಬಸ್‌, ಭಕ್ತಾಧಿಗಳಿಗೆ ಗಂಭೀರ
– ಹಾವೇರಿ: ಅನೈತಿಕ ಸಂಬಂಧದಿಂದ ವಿದ್ಯುತ್​ ಕಂಬಕ್ಕೆ ಕಟ್ಟಿಹಾಕಿ ಹಲ್ಲೆ

NAMMUR EXPRESS NEWS
ಬೆಂಗಳೂರು: ಲೈಂಗಿಕ ಕಿರುಕುಳ ಆರೋಪದ ಮೇಲೆ ಕಿರುತೆರೆ ನಟ ಚರಿತ್ ಬಾಳಪ್ಪ ಎಂಬವರನ್ನು ಆರ್​ ಆರ್ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚರಿತ್ ಬಾಳಪ್ಪ ಕನ್ನಡದಲ್ಲಿ ‘ಮುದ್ದುಲಕ್ಷ್ಮಿ‌’ ಸೇರಿದಂತೆ ಕೆಲವು ಸೀರಿಯಲ್​ನಲ್ಲಿ, ತೆಲುಗಿನಲ್ಲೂ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಗೆಳತಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಬಾಳಪ್ಪ ಮೇಲಿದೆ. ಪ್ರೀತಿಸುವ ನಾಟಕವಾಡಿ ದೈಹಿಕ ಸಂಪರ್ಕಕ್ಕೆ ಒತ್ತಾಯ ಮಾಡಿದ್ದಾರೆ ಎಂದು ಯುವತಿಯೊಬ್ಬರು ಆರೋಪ ಮಾಡಿದ್ದಾರೆ. ಯುವತಿ ವಾಸ ಮಾಡುತ್ತಿದ್ದ ಮನೆಗೆ ಸಹಚರರ ಜೊತೆ ನುಗ್ಗಿದ ಚರಿತ್ ಕಿರುಕುಳ ನೀಡಿದ್ದಾರೆ. ಅಷ್ಟೇ ಅಲ್ಲದೆ, ಯುವತಿ ಬಳಿ ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪ ಇದೆ. ಹಣ ಕೊಡದಿದ್ದರೆ ಆಕೆಯ ಖಾಸಗಿ ಫೋಟೋ, ವಿಡಿಯೋ ಹರಿಬಿಡುವ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಚರಿತ್ ವಿರುದ್ಧ ಲೈಂಗಿಕ ದೌರ್ಜನ್ಯ, ಹಲ್ಲೆ, ಕೊಲೆ ಬೆದರಿಕೆ ಆರೋಪದ ಮೇಲೆ ಬಂಧಿಸಲಾಗಿದೆ. ಕಿರುತೆರೆ ನಟ ಚರಿತ್‌ಗೆ ಈಗಾಗಲೇ ಮದುವೆಯಾಗಿ ವಿಚ್ಛೇದನ ಕೂಡ ಆಗಿದೆ. ಡಿವೋರ್ಸ್​ ನಂತರವೂ ಮಾಜಿ ಪತ್ನಿ ಜೊತೆ ಕಿರಿಕ್ ಮಾಡಿಕೊಂಡ ಆರೋಪದ ಮೇಲೆ ಕಳೆದ ಜೂನ್ ತಿಂಗಳಲ್ಲಿ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ‌ ದೂರು ದಾಖಲಾಗಿತ್ತು.

– ಚಿಕ್ಕಬಳ್ಳಾಪುರ: ವ್ಹೀಲಿಂಗ್ ಕ್ರೇಜ್‌ಗೆ ಇಬ್ಬರು ಯುವಕರು ಸಾವು

ಚಿಕ್ಕಬಳ್ಳಾಪುರ: ವ್ಹೀಲಿಂಗ್ ಕ್ರೇಜ್‌ಗೆ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ವಿಜಯಪುರದಲ್ಲಿ ನಡೆದಿದೆ. ಅರ್ಫಾಜ್ ಹಾಗೂ ಮನೋಜ್ ಮೃತ ಸವಾರರಾಗಿದ್ಧಾರೆ. ಇವರು ವಿಜಯಪುರ-ದೇವನಹಳ್ಳಿ ಬೈಪಾಸ್ ರಸ್ತೆಯಲ್ಲಿ ಡಿಯೋ ಗಾಡಿ ಮೂಲಕ ವ್ಹೀಲಿಂಗ್ ಮಾಡುವ ವೇಳೆ ಎದುರಗಡೆ ಬರುತ್ತಿದ್ದ ಕ್ಯಾಂಟರ್‌ಗೆ ಡಿಕ್ಕಿಯಾಗಿದೆ. ಅಪಘಾತದಲ್ಲಿ ಇವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ ಯುವಕರು ವ್ಹೀಲಿಂಗ್ ಮಾಡುತ್ತಿರೋ ದೃಶ್ಯ ರಸ್ತೆ ಬದಿಯ ಅಂಗಡಿಯೊಂದರ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಮೃತದೇಹಗಳನ್ನ ದೇವನಹಳ್ಳಿ ಖಾಸಗಿ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ.

– ಆನೇಕಲ್ : ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಬಸ್‌, ಭಕ್ತಾಧಿಗಳಿಗೆ ಗಂಭೀರ

ಆನೇಕಲ್ : ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಹಳ್ಳಕ್ಕೆ ಬಿದ್ದ ಪರಿಣಾಮ 42 ಭಕ್ತಾಧಿಗಳ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ನಡೆದಿದೆ. ಡಿ.27 ರಂದು ಬಸ್ ಧರ್ಮಪುರಿ ಸಮೀಪದ ಇಟ್ಟಿಯಂಪಟ್ಟೆ ಗ್ರಾಮದಿಂದ ಹೋಗುತ್ತಿದ್ದ ಓಂ ಶಕ್ತಿ ದೇವಸ್ಥಾನಕ್ಕೆ ತೆರಳುತ್ತಿತ್ತು. ಈ ವೇಳೆ ಕೃಷ್ಣಗಿರಿ ಜಿಲ್ಲೆಯ ಉತಂಗರೈ ಚೆನ್ನಮಲೈ ಶಾಲೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಹಳ್ಳಕ್ಕೆ ಬಿದ್ದಿದೆ. ಈ ಅಪಘಾತದಿಂದ ದೇವಸ್ಥಾನಕ್ಕೆ ತೆರಳುತ್ತಿದ್ದ 42 ಭಕ್ತಾದಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಸ್ಥಳೀಯರು ಗಾಯಳುಗಳನ್ನು ಸ್ಥಳೀಯ ಉತಂಗರೈ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಿಸಿದ್ದಾರೆ. ಅಪಘಾತದ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಉತಂಗರೈ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

– ಹಾವೇರಿ: ಅನೈತಿಕ ಸಂಬಂಧದಿಂದ ವಿದ್ಯುತ್​ ಕಂಬಕ್ಕೆ ಕಟ್ಟಿಹಾಕಿ ಹಲ್ಲೆ

ಹಾವೇರಿ: ಅನೈತಿಕ ಸಂಬಂಧ ಆರೋಪದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವನಿಗೆ ಕೆಲವರು ವಿದ್ಯುತ್‌ ಕಂಬಕ್ಕೆ ಕಟ್ಟಿಹಾಕಿ ಮನಬಂದಂತೆ ಥಳಿಸಿದ ಪರಿಣಾಮ, ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ಕೊಪ್ಪರಸಿಕೊಪ್ಪ ಗ್ರಾಮದಲ್ಲಿ ನಡೆದಿದೆ. ಪ್ರಕಾಶ್ ಓಲೇಕಾರ ಮೃತ ವ್ಯಕ್ತಿಯಾಗಿದ್ದಾನೆ. ಆರೋಪಿಗಳು ಪ್ರಕಾಶನನ್ನು ವಿದ್ಯುತ್​ ಕಂಬಕ್ಕೆ ಕಟ್ಟಿ ಮನಬಂದಂತೆ ಥಳಿಸಿ, ಕೊರಳಿಗೆ ಚಪ್ಪಲಿ ಹಾರ ಹಾಕಿ, ಕಾಲಿಗೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ ಎಂದು ಆರೋಪಿಸಲಾಗಿದೆ.
ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಬಂದ ಆರೋಪಿಗಳು ತಮ್ಮ ಮನೆಯ ಹೆಣ್ಣು ಮಕ್ಕಳೊಂದಿಗೆ ಅಕ್ರಮ ಸಂಬಂಧ ಹೊಂದಿರುವುದಾಗಿ ಅವಾಚ್ಯವಾಗಿ ಶಬ್ದಗಳಿಂದ ನಿಂದಿಸಿದ್ದಾರೆ. ಆಗ ನನ್ನ ಸಹೋದರ ಪ್ರಕಾಶ್​, ಈ ರೀತಿ ಆರೋಪ ಮಾಡುವುದು ಸರಿಯಲ್ಲ, ನನಗೆ ಅವಳೊಂದಿಗೆ ಅನೈತಿಕ ಸಂಬಂಧ ಇಲ್ಲ ಎಂದಿದ್ದಾನೆ. ಆದರೆ ಕೋಪಗೊಂಡ ಆರೋಪಿಗಳು ಆತನ ಮೇಲೆ ಹಲ್ಲೆ ಮಾಡಿ, ವಿದ್ಯುತ್​ ಕಂಬಕ್ಕೆ ಕಟ್ಟಿ ಮಾರಣಾಂತಿಕವಾಗಿ ಥಳಿಸಿದ್ದಾರೆ. ಇದರಿಂದ ಗಾಯಗೊಂಡ ಪ್ರಕಾಶನನ್ನು ಹಾನಗಲ್ ಆಸ್ಪತ್ರೆಗೆ ದಾಖಲು ಮಾಡಿದರೂ ಕೂಡ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎಂದು ಮೃತನ ಸಹೋದರ ಫಕ್ಕೀರೇಶ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆರೋಪಿಗಳು ಫಕ್ಕೀರೇಶ ಮತ್ತು ಮಹಿಳೆಗೂ ಕೂಡ ಹಲ್ಲೆ ಮಾಡಿದ್ದಾರೆ ಎಂದು ದೂರಲಾಗಿದೆ. ಈ ಘಟನೆ ಸಂಬಂಧ ಹಾನಗಲ್ ಪೊಲೀಸ್​ ಠಾಣೆಯಲ್ಲಿ ಕಲಂ: 103(1),74,189(2), 191(2),191(3), 115(2), 118(1)352, 351(2)(3), 126(2), 133, 190 ಬಿಎನ್‍ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, 7 ಮಂದಿ ಆರೊಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Categories
ಸಿನಿಮಾ

ಸಂಭಾವನೆಯಲ್ಲಿ ದಾಖಲೆ ಬರೆದ ಯಶ್: 200 ಕೋಟಿ ಸಂಬಳ!

ಸಂಭಾವನೆಯಲ್ಲಿ ದಾಖಲೆ ಬರೆದ ಯಶ್: 200 ಕೋಟಿ ಸಂಬಳ!
– ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಇದೇ ಮೊದಲು
– ಭಾರತದ ದುಬಾರಿ ಆ್ಯಂಟಿ ಹೀರೋ ಹಾಗೂ ವಿಲನ್

NAMMUR EXPRESS NEWS
ಇತ್ತೀಚೆಗಷ್ಟೆ ಬಿಡುಗಡೆ ಆದ ‘ಪುಷ್ಪ 2’ ಸಿನಿಮಾಕ್ಕೆ ಅಲ್ಲು ಅರ್ಜುನ್ 300 ಕೋಟಿಗೂ ಹೆಚ್ಚು ಹಣ ಸಂಭಾವನೆಯಾಗಿ ಪಡೆದಿದ್ದು ಸುದ್ದಿಯಾಗಿತ್ತು. ನಟ ಯಶ್ ಸಹ ಸಂಭಾವನೆ ಪಡೆವ ವಿಷಯದಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ. ಭಾರತದ ಅತಿ ದೊಡ್ಡ ಸಿನಿಮಾ ಪ್ರಾಜೆಕ್ಟ್ ಆಗಿರುವ ರಾಮಾಯಣ ಕತೆ ಆಧರಿತ ಸಿನಿಮಾದಲ್ಲಿ ಯಶ್ ನಟಿಸುತ್ತಿದ್ದಾರೆ. ಯಶ್, ರಾವಣನ ಪಾತ್ರದಲ್ಲಿ ನಟಿಸುತ್ತಿದ್ದು, ರಾವಣನ ಪಾತ್ರದಲ್ಲಿ ನಟಿಸಲು ಬರೋಬ್ಬರಿ 200 ಕೋಟಿ ರೂಪಾಯಿ ಸಂಭಾವನೆಯನ್ನು ಯಶ್ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ. ರಾವಣನ ಪಾತ್ರ ಆ್ಯಂಟಿ ಹೀರೋ ಪಾತ್ರವಾಗಿದ್ದು, ಆ್ಯಂಟಿ ಹೀರೋ ಪಾತ್ರ ನಿರ್ವಹಿಸಲು ನಟನೊಬ್ಬ ಇಷ್ಟು ದೊಡ್ಡ ಸಂಭಾವನೆ ಪಡೆದಿದ್ದು ಇದೇ ಮೊದಲು ಎನ್ನಲಾಗುತ್ತಿದೆ. ಸಿನಿಮಾದಲ್ಲಿ ರಣ್​ಬೀರ್ ಕಪೂರ್ ರಾಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಾಯಿ ಪಲ್ಲವಿ ಸೀತಾ ದೇವಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಬಜೆಟ್ 1000 ಕೋಟಿಗೂ ಹೆಚ್ಚಾಗಿದ್ದು, ಹಾಲಿವುಡ್​ನ ‘ಅವತಾರ್’ ಸಿನಿಮಾಕ್ಕೆ ಬಳಸಲಾಗಿರುವ ತಂತ್ರಜ್ಞಾನ ಬಳಸಿ ಈ ಸಿನಿಮಾ ನಿರ್ಮಿಸಲಾಗುತ್ತಿದೆ. ಹಲವು ಹಾಲಿವುಡ್ ಕಲಾವಿದರು ಸಿನಿಮಾಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಆಸ್ಕರ್ ವಿಜೇತ ಹಾನ್ಸ್ ಜಿಮ್ಮರ್ ಈ ಸಿನಿಮಾಕ್ಕೆ ಸಂಗೀತ ನೀಡಲಿದ್ದಾರೆ. ಅಂದಹಾಗೆ ಈ ಸಿನಿಮಾಕ್ಕೆ ಯಶ್ ಸಹ ನಿರ್ಮಾಪಕ ಸಹ ಆಗಿದ್ದಾರೆ. ಸಿನಿಮಾ ಅನ್ನು ನಿತೀಶ್ ತಿವಾರಿ ನಿರ್ದೇಶನ ಮಾಡುತ್ತಿದ್ದಾರೆ.

Categories
ರಾಜ್ಯ

ಬೆಳಗಾವಿಯಲ್ಲಿ ಸಿದ್ದರಾಮಯ್ಯರ 50 ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಪ್ಲಾನ್!

ಬೆಳಗಾವಿಯಲ್ಲಿ ಸಿದ್ದರಾಮಯ್ಯರ 50 ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಪ್ಲಾನ್!
– 1 ಕೋಟಿ ವೆಚ್ಚದಲ್ಲಿ ಸಿದ್ದರಾಮಯ್ಯ ಪ್ರತಿಮೆ ನಿರ್ಮಾಣ
– ಮೈಸೂರಿನ ಪ್ರಮುಖ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು..!

NAMMUR EXPRESS NEWS
ಬೆಳಗಾವಿ : ಒಂದೆಡೆ ಸಿಎಂ ಸಿದ್ದರಾಮಯ್ಯ ಹೆಸರು ಮುಡಾ ಹಗರಣದಲ್ಲಿ ಸಿಕ್ಕಿಕೊಂಡಿದೆ. ಸಿದ್ದರಾಮಯ್ಯ, ಪತ್ನಿ ಪಾರ್ವತಿ ಸೇರಿದಂತೆ ಹಲವರು ಲೋಕಾಯುಕ್ತ ತನಿಖೆ ನಡೆಸಿದ್ದಾರೆ. ಅತ್ತ ಇಡಿ ಅಧಿಕಾರಿಗಳೂ ಮುಡಾ ಕೇಸ್‌ನಲ್ಲಿ ಎಂಟ್ರಿಯಾಗಿ, ತನಿಖೆ ನಡೆಸುತ್ತಿದ್ದಾರೆ. ಇತ್ತ ಬಿಜೆಪಿ, ಜೆಡಿಎಸ್ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿದ್ದರೆ, ಅವರ ಅಭಿಮಾನಿಗಳು, ಕಾರ್ಯಕರ್ತರು ಮಾತ್ರ ಸಿದ್ದು ಬೆಂಬಲಕ್ಕೆ ನಿಂತಿದ್ದಾರೆ. ಇದರ ನಡುವೆಯೇ ಮೈಸೂರಿನಲ್ಲ ರಸ್ತೆಯೊಂದಕ್ಕೆ ಸಿಎಂ ಸಿದ್ದರಾಮಯ್ಯರ ಹೆಸರು ಇಡೋ ಬಗ್ಗೆ ನಿರ್ಧರಿಸಲಾಗಿತ್ತು. ಇದೀಗ ಸಿದ್ದರಾಮಯ್ಯರ 50 ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಪ್ಲಾನ್ ನಡೆದಿದೆ ಎಂಬ ಬಗ್ಗೆ ವರದಿಯಾಗಿದೆ!

– ಸಿದ್ದರಾಮಯ್ಯರ 50 ಅಡಿ ಪ್ರತಿಮೆ ನಿರ್ಮಾಣ

ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 50 ಅಡಿ ಎತ್ತರದ ಕಂಚಿನ ಪ್ರತಿಮೆ ಸ್ಥಾಪಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಸರ್ವೋದಯ ಮುಖಂಡ ಪಂಚಾಕ್ಷರಯ್ಯ ನೀಲಕಂಠಯ್ಯ ಗುಣಾಚಾರಿ ಎಂಬುವರು ಮಾಹಿತಿ ನೀಡಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು 1 ಕೋಟಿ ರೂಪಾಯಿ ವೆಚ್ಚದಲ್ಲಿ ಸಿದ್ದರಾಮಯ್ಯ ಪ್ರತಿಮೆ ನಿರ್ಮಿಸಲು ಯೋಚಿಸಲಾಗಿದೆ ಅಂತ ಅವರು ತಿಳಿಸಿದ್ದಾರೆ.

– 1 ಕೋಟಿ ವೆಚ್ಚದಲ್ಲಿ ಸಿದ್ದರಾಮಯ್ಯ ಪ್ರತಿಮೆ ನಿರ್ಮಾಣ

ಬೆಳಗಾವಿಯಲ್ಲಿ ಗಾಂಧೀಜಿ ಅಧ್ಯಕ್ಷತೆಯಲ್ಲಿ 100 ವರ್ಷಗಳ ಹಿಂದೆ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನ ನಡೆದಿತ್ತು. ಈ ನೆನಪಿನಲ್ಲಿ ಗಾಂಧೀಜಿ ಪ್ರತಿಮೆ ಅನಾವರಣಗೊಳಿಸುವ ಕೆಲಸವನ್ನು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಮಾಡುತ್ತಿದೆ. ಗಾಂಧೀಜಿ ತತ್ವಗಳನ್ನು ಅಳವಡಿಸಿಕೊಂಡು ಕೆಲಸ ಮಾಡುತ್ತಿರುವ ಸಿದ್ದರಾಮಯ್ಯ ಅವರ ಪ್ರತಿಮೆ ನಿಲ್ಲಿಸಲು ಇದು ಸಕಾಲ. ಅದಕ್ಕಾಗಿ 1 ಕೋಟಿ ವೆಚ್ಚದಲ್ಲಿ ಯೋಜನೆ ಹಮ್ಮಿಕೊಳ್ಳಲಾಗಿದೆ ಅಂತ ಸರ್ವೋದಯ ಮುಖಂಡ ಪಂಚಾಕ್ಷರಯ್ಯ ನೀಲಕಂಠಯ್ಯ ಗುಣಾಚಾರಿ ಮಾಹಿತಿ ನೀಡಿದ್ರು.

– ಮೈಸೂರಿನ ಪ್ರಮುಖ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು!

ಮೈಸೂರಿನ ಪ್ರಮುಖ ರಸ್ತೆಗೆ ಸಿಎಂ ಸಿದ್ದರಾಮಯ್ಯ ಅವರ ಹೆಸರು ಇಡಲು ಮೈಸೂರು ಮಹಾನಗರ ಪಾಲಿಕೆಯಿಂದ ತೀರ್ಮಾನ ಮಾಡಲಾಗಿದ್ದು, ಇದೀಗ ಪಾಲಿಕೆಯ ಈ ತೀರ್ಮಾನ ವಿವಾದಕ್ಕೆ ಕಾರಣವಾಗಿದೆ. ಯಾವ ರಸ್ತೆಗೆ ಸಿದ್ದರಾಮಯ್ಯ ಹೆಸರು : ಮೈಸೂರಿನ ಶ್ರೀ ಲಕ್ಷ್ಮಿವೆಂಕಟರಮಣ ಸ್ವಾಮಿ ದೇವಸ್ಥಾನ ವೃತ್ತದಿಂದ ಆರಂಭವಾಗುವ ಮೇಟಗಳ್ಳಿಯ ರಾಯಲ್ ಇನ್ ಜಂಕ್ಷನ್ ವರೆಗಿನ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ಎಂದು ನಾಮಕರಣ ಮಾಡಲು ಮೈಸೂರು ಮಹಾನಗರ ಪಾಲಿಕೆ ಮುಂದಾಗಿದ್ದು, ಈ ಕುರಿತು ಪಾಲಿಕೆ ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ. 22-11-2024 ರಂದು ನಡೆದಿರುವ ಕೌನ್ಸಿಲ್ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಈ ಬಗ್ಗೆ ಆಕ್ಷೇಪಣೆ ಹಾಗೂ ಸಲಹೆಗಳಿದ್ದರೆ 30 ದಿನಗಳ ಒಳಗೆ ಲಿಖಿತವಾಗಿ ಸಲ್ಲಿಸುವಂತೆ ಪಾಲಿಕೆಯ ಕಾರ್ಯಪಾಲಕ ಅಭಿಯಂತರರಿಂದ ಪ್ರಕಟಣೆ ಹೊರಡಿಸಲಾಗಿದೆ.

Categories
ಮಲ್ನಾಡ್

ಟಾಪ್ ನ್ಯೂಸ್ ಮಲ್ನಾಡ್

ಟಾಪ್ ನ್ಯೂಸ್ ಮಲ್ನಾಡ್
– ಶಿವಮೊಗ್ಗ : ಬಾವಿಯಲ್ಲಿ ಈಜಲು ತೆರಳಿದ್ದ ಬಾಲಕ ಶವವಾಗಿ ಪತ್ತೆ
– ಸಾಗರ : ಸಾಗರ ಭಾಗದಲ್ಲಿ ಆನೆಗಳು ಪ್ರತ್ಯಕ್ಷ!
– ರಿಪ್ಪನ್‌ಪೇಟೆ : ಟ್ರ್ಯಾಕ್ಟರ್ ಸರ್ವಿಸ್ ಸಮಸ್ಯೆಯಿಂದ ಟ್ರ್ಯಾಕ್ಟರ್ ಗೆ ಬೆಂಕಿ ಹಚ್ಚಿ ತಾನೂ ಬೆಂಕಿ ಹಂಚಿಕೊಳ್ಳಲು ಮುಂದಾದ ರೈತ
– ರಿಪ್ಪನ್‌ಪೇಟೆ : ಹಿಟ್ ಆಂಡ್ ರನ್ ಗೆ ಬೈಕ್ ಸವಾರ ಬಲಿ

NAMMUR EXPRESS NEWS
ಶಿವಮೊಗ್ಗ : ಬಾವಿಯಲ್ಲಿ ಈಜಲು ತೆರಳಿದ್ದ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ. ಶಿವಮೊಗ್ಗದ ರಾಗಿಗುಡ್ಡದಲ್ಲಿ ಘಟನೆ ನಡೆದಿದ್ದು, ಆತನಿಗಾಗಿ ಶೋಧಕಾರ್ಯ ನಡೆದಿದೆ. ಶೋಧಕಾರ್ಯದಲ್ಲಿ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ. ನಾಲ್ವರು ಬಾಲಕರು ಬಾವಿಯಲ್ಲಿ ಈಜಲು ಸಂಜೆಯ ಹೊತ್ತಿಗೆ ತೆರಳಿದ್ದರು. ಈ ಸಂದರ್ಭ 8 ನೇ ತರಗತಿ ಓದುತ್ತಿದ್ದ ಆಪ್ನಾನ್ ನೀರು ಪಾಲಾಗಿದ್ದನು. ನೀರು ಪಾಲಾಗಿದ್ದ ಬಾಲಕನಿಗಾಗಿ ಶೋಧಕಾರ್ಯ ನಡೆದಿದೆ. ರಾತ್ರಿ 8-30 ರ ವೇಳೆಗೆ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ. ಬಾವಿ ಬಳಿ ಬಾಲಕನ ಚಪ್ಪಲಿ ಮತ್ತು ಬಟ್ಟೆ ಪತ್ತೆಯಾಗಿದೆ. ವಿಷಯ ತಿಳಿದು ಅಗ್ನಿಶಾಮಕ ಸಿಬ್ಬಂದಿ ಬಾಲಕನಿಗಾಗಿ ಹುಡುಕಾಟ ನಡೆಸಿದರು. ಅಪ್ನಾನ್ ಡಿವಿಎಸ್ ಶಾಲೆಯಲ್ಲಿ 8 ನೇ ತರಗತಿ ಓದುತ್ತಿದ್ದನು. ಶಿವಮೊಗ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

– ಸಾಗರ : ಸಾಗರ ಭಾಗದಲ್ಲಿ ಆನೆಗಳು ಪ್ರತ್ಯಕ್ಷ !

ಸಾಗರ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಲಕ್ಕವಳ್ಳಿ ಸುತ್ತಮುತ್ತ ಆನೆಗಳ ಉಪಟಳ ಹೆಚ್ಚಾಗಿದೆ. ಲಕ್ಕವಳ್ಳಿ ಸಮೀಪ ಆನೆಯೊಂದು ಮರಿಯಾನೆ ಜೊತೆಗೆ ಕಾಣಿಸಿಕೊಂಡಿದೆ. ಕೂಡಲೆ ಗ್ರಾಮಸ್ಥರು ಜೋರಾಗಿ ಕೂಗಿ ಆನೆಗಳನ್ನು ಓಡಿಸಿದ್ದಾರೆ. ಬೆಳಗ್ಗೆ 6 ಗಂಟೆ ಸುಮಾರಿಗೆ ಮೂಡಹಗಲು ಲಕ್ಷ್ಮಣಪ್ಪ ಎಂಬುವರ ತೋಟಕ್ಕೆ ನೀರು ಬಿಡಲು ಹೋದಾಗ ಆನೆಗಳು ಕಾಣಿಸಿಕೊಂಡಿದ್ದು ಭಯದಿಂದ ಮನೆಗೆ ಓಡಿ ಬಂದ, ಮನೆಯವರಲ್ಲಿ ವಿಚಾರ ತಿಳಿಸಿದ್ದು ತಕ್ಷಣ ಮನೆಯವರು ಕೂಗಿ ಗಲಾಟೆ ಮಾಡಿದ ಬಳಿಕ ತೋಟದಿಂದ ಕಾಡಾನೆಗಳು ಹೊರ ಹೋಗಿವೆ. ಈ ಗ್ರಾಮದ ಅಡಿಕೆ ತೋಟಕ್ಕೆ ಆನೆಗಳ ಹಿಂಡು ದಾಳಿ ನಡೆಸಿದ್ದು ಗ್ರಾಮಸ್ಥರಲ್ಲಿ ಮತ್ತೆ ಆತಂಕ ಸೃಷ್ಟಿಯಾಗಿದೆ. ಕಳೆದ 15 – 20 ದಿನಗಳಿಂದ ಈ ಭಾಗದ ರೈತರು ಕಾಡಾನೆ ದಾಳಿಯಿಂದ ಆತಂಕದಲ್ಲಿದ್ದಾರೆ. ಮೂಡಾಗಲು ಗ್ರಾಮದ ಲಕ್ಷ್ಮಣಪ್ಪ ಎಂಬುವರ ಮನೆಯ ಹತ್ತಿರ ಕಾಡಾನೆಗಳು ಬಂದಿದ್ದು ಮನೆಯವರು ಭಯ ಭೀತರಾಗಿದ್ದಾರೆ. ಅಲ್ಲಿನ ರೈತರು ಆನೆಗಳನ್ನು ಓಡಿಸಲು ಧಾವಿಸಿದ್ದು ಲಕ್ಕವಳ್ಳಿ ಗ್ರಾಮದ ತೋಟಗಳ ಮೂಲಕ ಹಾದು ಹೋಗಿವೆ. ಇಷ್ಟು ದಿನಗಳ ಕಾಲ ಕಾಡಿನ ಅಂಚಿನಲ್ಲೇ ಸಂಚರಿಸುತ್ತಿದ್ದಂತಹ ಆನೆಗಳು ಮನೆಯ ಅಂಗಳಕ್ಕೆ ಬರಲು ಆರಂಭಿಸಿವೆ. ಆನೆಗಳು ಗ್ರಾಮಕ್ಕೆ ಬಂದಿರುವ ವಿಷಯ ತಿಳಿಯುತ್ತಿದ್ದಂತೆ ಚೋರಡಿ ವಲಯ ಅರಣ್ಯಾಧಿಕಾರಿ ರವಿ ನಾಯಕ ಸೇರಿದಂತೆ ಎಲ್ಲಾ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ್ದು ಆನೆಗಳ ಹುಡುಕಾಟವನ್ನು ಪ್ರಾರಂಭಿಸಿದ್ದು ಬೇರೆಡೆ ಓಡಿಸಲು ಕಾರ್ಯತಂತ್ರ ರೂಪಿಸಿದ್ದಾರೆ.

– ರಿಪ್ಪನ್‌ಪೇಟೆ : ಟ್ರ್ಯಾಕ್ಟರ್ ಸರ್ವಿಸ್ ಸಮಸ್ಯೆಯಿಂದ ಟ್ರ್ಯಾಕ್ಟರ್ ಗೆ ಬೆಂಕಿ ಹಚ್ಚಿ ತಾನೂ ಬೆಂಕಿ ಹಂಚಿಕೊಳ್ಳಲು ಮುಂದಾದ ರೈತ

ರಿಪ್ಪನ್‌ಪೇಟೆ : ಇಲ್ಲಿನ ಶಿವಮೊಗ್ಗ ರಸ್ತೆಯಲ್ಲಿರುವ ಜಾನ್ ಡೀರ್ ಟ್ರ್ಯಾಕ್ಟರ್ ಷೋ ರೂಂ ನಲ್ಲಿ ಸರ್ವಿಸ್ ನಲ್ಲಿ ಲೋಪವೆಸಗಿದ್ದು ಈ ಬಗ್ಗೆ ವಿಚಾರಿಸಿದರೆ ಷೋರೂಂ ಮಾಲೀಕ ರೈತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿ ರೈತರು ಹಾಗೂ ಕಾರ್ಮಿಕ ಸಂಘಟನೆ ವತಿಯಿಂದ ಪ್ರತಿಭಟನೆ ವಿಕೋಪಕ್ಕೆ ತಿರುಗಿ ಟ್ರ್ಯಾಕ್ಟರ್ ಚಾಲಕ ವಾಹನಕ್ಕೆ ಹಾಗೂ ತನ್ನ ಮೈ ಮೇಲೆ ಡಿಸೇಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಕಾರಗಡಿ ಸಮೀಪದ ಮಂಡ್ರೊಳ್ಳಿಯ ಲಕ್ಷ್ಮಿನಾರಾಯಣ ಎಂಬ ರೈತರೊಬ್ಬರಿಗೆ ಸೇರಿದ ಟ್ರ್ಯಾಕ್ಟರ್ ಗೆ ಐದು ವರ್ಷ ಗ್ಯಾರಂಟಿ ಇದೆ ಎಂದು ಹೇಳಲಾಗಿದ್ದರೂ ಈಗ ಗ್ಯಾರಂಟಿಯಿರುವ ಬಿಡಿಬಾಗಕ್ಕೆ 40 ಸಾವಿರ ರೂ ಹಣ ಕೇಳುತಿದ್ದಾರೆ ಎಂದು ಆರೋಪಿಸಿ ಹಲವಾರು ರೈತರು ಹಾಗೂ ಕರ್ನಾಟಕ ಕಾರ್ಮಿಕ ಪರಿಷತ್ ವತಿಯಿಂದ ಷೋರೂಂ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಧಿಕ್ಕಾರ ಕೂಗಿದರು. ಕಾರಗಡಿ ಸಮೀಪದ ಲಕ್ಷ್ಮಿನಾರಾಯಣ ಎಂಬುವವರು ಎರಡು ವರ್ಷಗಳ ಹಿಂದೆ ಲೋಕೆಶ್ವರ್ ರಾವ್ ಎಂಬುವವರ ಮಾಲೀಕತ್ವದ ಕಾಳೆ ಅಗ್ರಿಟೆಕ್ ನಲ್ಲಿ ಜಾನ್ ಡೀರ್ ಟ್ರ್ಯಾಕ್ಟರ ಖರೀದಿಸಿದ್ದು ಮಾರನೇ ದಿನವೇ ಮುಂಭಾಗದ ವೀಲ್ ಬಳಿ ಸಮಸ್ಯೆ ಎದುರಾಗಿತ್ತು ಕೂಡಲೇ ಮಾಲೀಕರಿಗೆ ತಿಳಿಸಿದ್ದರು ಏನೂ ಆಗುವುದಿಲ್ಲ ಓಡಿಸಿಕೊಂಡು ಇರಿ ಅದಕ್ಕೆ ಐದು ವರ್ಷ ವಾರಂಟಿ ಇದೆ ಏನಾದರೂ ಆದರೆ ನಮ್ಮ ಸಂಸ್ಥೆಯ ಜವಬ್ದಾರಿ ಎಂದು ಹೇಳಿ ಕಳುಹಿಸಿಕೊಟ್ಟಿದ್ದು ಅವತ್ತಿನಿಂದ ಪದೇ ಪದೇ ವಾಹನ ಕೈಕೊಡುತಿದ್ದು ಈಗ ವಾಹನ ಓಡಿಸಲು ಸಾಧ್ಯವಾಗದ ಪರಿಸ್ಥಿತಿ ಉಂಟಾದ ಹಿನ್ನಲೆಯಲ್ಲಿ ರಿಪ್ಪನ್‌ಪೇಟೆಯಲ್ಲಿರುವ ಕಾಳೆ ಅಗ್ರಿಟೆಕ್ ಷೋರೂಂ ಗೆ ಸರ್ವಿಸ್ ಗೆ ಬಿಡಲಾಗಿತ್ತು ಆದರೆ ಈಗ ಎಪ್ಪತ್ತು ಸಾವಿರ ಕಟ್ಟಬೇಕು ಇಲ್ಲದಿದ್ದಲಿ ಸರಿ ಮಾಡಲು ಆಗುವುದಿಲ್ಲ ಎಂದು ಉಡಾಫೆಯಾಗಿ ಉತ್ತರಿಸಿದ್ದಾರೆ ಎಂದು ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದೇವು ಅದಕ್ಕೆ ಸ್ಪಂದಿಸದೇ ಇದ್ದ ಹಿನ್ನಲೆಯಲ್ಲಿ ಇಂದು ಪ್ರತಿಭಟನೆ ನಡೆಸಿದ್ದೆವೆ ಎಂದು ಟ್ರ್ಯಾಕ್ಟರ್ ಮಾಲೀಕ್ ತನ ನೋವನ್ನು ಹಂಚಿಕೊಂಡರು. ಪಟ್ಟಣದ ಟ್ರ್ಯಾಕ್ಟರ್ ಷೋರೂಂ ಮುಂಭಾಗದಲ್ಲಿ ಕಾರ್ಮಿಕ ಪರಿಷತ್ ಹಾಗೂ ರೈತರು ಪ್ರತಿಭಟನೆ ನಡೆಸುತಿದ್ದರೂ ಯಾವುದಕ್ಕೂ ಕ್ಯಾರೆ ಎನ್ನದೇ ಸ್ಥಳಕ್ಕೆ ಬರಲು ಒಪ್ಪದ ಮಾಲೀಕನ ನಡೆಯನ್ನು ಖಂಡಿಸಿ ಟ್ರ್ಯಾಕ್ಟರ್ ಚಾಲಕ ವಾಹನದಲ್ಲಿದ್ದ ಡಿಸೇಲ್ ನ್ನು ಟ್ರ್ಯಾಕ್ಟರ್ ಮೇಲೆ ಹಾಗೂ ತನ್ನ ಮೈಮೇಲೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು‌ ಮುಂದಾದ ಘಟನೆ ನಡೆಯಿತು ಈ ಸಂಧರ್ಭದಲ್ಲಿ ಸ್ಥಳದಲ್ಲಿದ್ದವರು ಆತನನ್ನು ತಡೆದು ಮುಂದಾಗುವ ಭಾರಿ ಆನಾಹುತ ತಪ್ಪಿಸಿದ್ದಾರೆ.

– ರಿಪ್ಪನ್‌ಪೇಟೆ : ಹಿಟ್ ಆಂಡ್ ರನ್ ಗೆ ಬೈಕ್ ಸವಾರ ಬಲಿ.

ರಿಪ್ಪನ್‌ಪೇಟೆ : ಇಲ್ಲಿನ ಗವಟೂರು ಬಳಿಯಲ್ಲಿ ಬೆಳ್ಳಂಬೆಳ್ಳಗ್ಗೆ ಬೈಕ್ ಗೆ ಅಪರಿಚಿತ ವಾಹನವೊಂದು ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ. ಗವಟೂರು ಸಮೀಪದ ಬಿಳಿಕಿ ನಿವಾಸಿ ಸಂಜೀವ್ ಪೂಜಾರಿ (65) ಮೃತ ದುರ್ಧೈವಿಯಾಗಿದ್ದಾರೆ. ಟಿವಿಎಸ್ ಎಕ್ಸೆಲ್ ಬೈಕ್ ನಲ್ಲಿ ಇಂದು ಬೆಳಿಗ್ಗೆ ಮನೆಯಿಂದ ರಿಪ್ಪನ್‌ಪೇಟೆ ಹೊರಡುತಿದ್ದಾಗ ಗವಟೂರು ಸರ್ಕಾರಿ ಶಾಲೆಯ ಸಮೀಪದಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಬೈಕ್ ಸವಾರನಿಗೆ ತೀವ್ರ ಗಾಯಗಳಾಗಿತ್ತು. ಈ ಸಂಧರ್ಭದಲ್ಲಿ ಬೆಳಿಗ್ಗಿನ ರೌಂಡ್ಸ್ ನಲ್ಲಿದ್ದ ಪಟ್ಟಣದ ಪಿಎಸ್‌ಐ ಅದೇ ಮಾರ್ಗವಾಗಿ ಬರುತಿದ್ದಾಗ ಗಾಯಾಳುವನ್ನು ಗಮನಿಸಿ ತನ್ನ ಖಾಸಗಿ ವಾಹನದಲ್ಲಿ ಗಾಯಾಳುವನ್ನು ರಿಪ್ಪನ್‌ಪೇಟೆ ಆಸ್ಪತ್ರೆಗೆ ದಾಖಲಿಸಿದ್ದಾರೆ ಆದರೆ ಗಾಯಾಳುವಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಆಂಬುಲೆನ್ಸ್ ಗೆ ಶಿಫ್ಟ್ ಮಾಡುವಾಗ ಗಾಯಾಳುವಿನ ಪ್ರಾಣಪಕ್ಷಿ ಹಾರಿ ಹೋಗಿದೆ. ಮೃತ ಸಂಜೀವ್ ಪೂಜಾರಿ ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

Categories
ತೀರ್ಥಹಳ್ಳಿ

ನ್ಯಾಷನಲ್ ಸಂಸ್ಥೆಯ ಕಾರ್ಯಕ್ರಮಕ್ಕೆ ಗ್ರಾಹಕರ ಮೆಚ್ಚುಗೆ!

ನ್ಯಾಷನಲ್ ಸಂಸ್ಥೆಯ ಕಾರ್ಯಕ್ರಮಕ್ಕೆ ಗ್ರಾಹಕರ ಮೆಚ್ಚುಗೆ!
– ನ್ಯಾಷನಲ್ ಗೋಲ್ಡ್ & ಡೈಮಂಡ್ಸ್‌ ವಾರ್ಷಿಕ ಡ್ರಾ ಸಂಭ್ರಮ
– 1000ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಕೊಟ್ಟ ಹೆಮ್ಮೆ: ಹೈದರ್
– ಯಾರು ಯಾರಿಗೆ ಡ್ರಾ ಬಹುಮಾನ? ಇಲ್ಲಿದೆ ಡೀಟೇಲ್ಸ್

NAMMUR EXPRESS NEWS
ತೀರ್ಥಹಳ್ಳಿ: ನ್ಯಾಷನಲ್ ಗೋಲ್ಡ್ & ಡೈಮಂಡ್ಸ್ ಸಂಸ್ಥೆಯ 16ನೇ ವರ್ಷದ ವಾರ್ಷಿಕಾಚರಣೆ ಸಮಾರಂಭ ತೀರ್ಥಹಳ್ಳಿ ಪಟ್ಟಣದ ಹೊರ ವಲಯದ ಬಾಳೇಬೈಲು ಮತ್ತು ಶಿವರಾಜುಪುರದ ನಡುವೆ ಅತ್ಯಾಧುನಿಕವಾಗಿ ಮತ್ತು ಸುಸಜ್ಜಿತವಾಗಿ ವಿಶಾಲವಾದ ಜಾಗದಲ್ಲಿ ನಿರ್ಮಾಣಗೊಂಡಿರುವ ಸ್ಪೋರ್ಟ್ಸ್ ಕ್ಲಬ್ ಅಲ್ಲಿ ನಡೆಯಿತು.
ಡಿ.25ರ ಸಂಜೆ ತೀರ್ಥಹಳ್ಳಿಯಲ್ಲಿ ಹಬ್ಬದ ವಾತಾವರಣ ಸೃಷ್ಟಿ ಆಗಿದ್ದು ಸಾವಿರಾರು ಗ್ರಾಹಕರಿಗೆ ಮನೋರಂಜನೆ ಜತೆಗೆ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಖ್ಯಾತ ಕಲಾವಿದರ ಸಂಗೀತ ಸುಧೆ, ನಿರೂಪಣೆ ಗಮನ ಸೆಳೆಯಿತು.

3 ಜನ ಸಿಬ್ಬಂದಿಯಿಂದ 1000 ಮಂದಿಗೆ ಉದ್ಯೋಗ

ವರ್ಣರಂಜಿತ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ನ್ಯಾಷನಲ್ ಗೋಲ್ಡ್ & ಡೈಮಂಡ್ಸ್ ಪಾಲುದಾರರಲ್ಲಿ ಒಬ್ಬರಾದ ಯೂಸೂಫ್ ಹೈದರ್ ಅವರು, ನ್ಯಾಷನಲ್ ಸಂಸ್ಥೆಯ ಸಂಸ್ಥೆಯು ಉದ್ಯಮದ ಜತೆ ಜತೆಗೆ ತನ್ನ ಲಾಭದಲ್ಲಿ ಸಾಮಾಜಿಕ, ಶೈಕ್ಷಣಿಕ ಸೇವೆಯನ್ನು ಮಾಡುತ್ತಾ ಬಂದಿದೆ. 2008ರ ಡಿ.25ರಂದು ನ್ಯಾಷನಲ್ ಗೋಲ್ಡ್ ಪ್ಯಾಲೇಸ್ ಎಂಬ ಹೆಸರಿನಲ್ಲಿ ಈ ಸಂಸ್ಥೆ ಆರಂಭಗೊಂಡಾಗ ಸುಲಭದ ಹಾದಿಯಾಗಿರಲಿಲ್ಲ. ಕೇವಲ 3 ಜನ ಸಿಬ್ಬಂದಿಗಳಿಂದ ಈ ಸಂಸ್ಥೆ ಆರಂಭವಾಗಿತ್ತು. ಇಂದು 55 ಜನ ಸಿಬ್ಬಂದಿಗಳಿದ್ದಾರೆ. ನ್ಯಾಷನಲ್‌ ನ ಎಲ್ಲಾ ಸಂಸ್ಥೆಗಳಿಂದ ಸೇರಿದರೆ ಒಟ್ಟು ಒಂದು ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ಕಲ್ಪಿಸಿದ ಸಂತೋಷವಿದೆ. ತೀರ್ಥಹಳ್ಳಿ ಜನತೆ ನಮಗೆ ಎಲ್ಲಾ ರೀತಿಯಲ್ಲಿ ಸಹಕಾರ ನೀಡಿದ್ದಾರೆ ಎಂದರು. ಬಂಗಾರದ ಉದ್ಯಮದಲ್ಲಿ ತಮ್ಮ ಸಂಸ್ಥೆಯು ಕರ್ನಾಟಕದಲ್ಲಿ ಪ್ರಮುಖ ಸ್ಥಾನ ಪಡೆದಿದೆ. ನಾವು ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡಿಲ್ಲ. ಹಾಗಾಗಿ ತೀರ್ಥಹಳ್ಳಿ ಹಾಗೂ ಮಲೆನಾಡಿನ ಜನತೆ ನಮ್ಮನ್ನು ಎಂದೂ ಕೈಬಿಟ್ಟಿಲ್ಲ. ಬಂಗಾರದ ಜೊತೆಗೆ ವಜ್ರದ ಉದ್ಯಮವನ್ನೂ ಆರಂಭಿಸಿದ್ದರಿಂದ ಒಂದು ಕಾಲದಲ್ಲಿ ಗಗನ ಕುಸುಮ ವೆನಿಸಿದ್ದ ವಜ್ರಗಳು ( ಡೈಮಂಡ್ಸ್) ಕೂಡ ಈ ಭಾಗದ ಜನರಿಗೆ ಸುಲಭವಾಗಿ ಸಿಗುವಂತೆ ಮಾಡಿದ ಹೆಮ್ಮೆ ನಮ್ಮದು ಎಂದರು.ನ್ಯಾಷನಲ್ ಗೋಲ್ಡ್ & ಡೈಮಂಡ್ಸ್‌ನಿಂದ ವಾರ್ಷಿಕೋತ್ಸವದ ಅಂಗವಾಗಿ ಈ ಹಿಂದೆ ಬಂಪರ್ ಬಹುಮಾನವಾಗಿ ಕಾರುಗಳನ್ನು ಕೊಡುತ್ತಿದ್ದೆವು. ಒಟ್ಟು 11 ಕಾರುಗಳನ್ನು ಕೊಟ್ಟಿದ್ದೇವೆ. ಅನಂತರ ಸಂಸ್ಥೆಯಿಂದ ಕಾರುಗಳ ಬದಲಿಗೆ ಬಂಗಾರವನ್ನು ಕೊಡಲು ಆರಂಭಿಸಿದ್ದು. ಪ್ರಸ್ತುತ ವರ್ಷ 25 ಲಕ್ಷ ರೂ.ಗಳ ಬಹುಮಾನ ನೀಡಿದ್ದೇವೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಕೆನರಾ ಬ್ಯಾಂಕ್ ಡಿಜಿಎಮ್ ದೇವರಾಜ್ ಅವರು, ನ್ಯಾಷನಲ್ ಸಂಸ್ಥೆಗಳ ಎಲ್ಲರೂ 916 ಕ್ಯಾರೆಟ್ ಬಂಗಾರದಂತೆಯೆ ಸರಳ ಸಜ್ಜನರಾಗಿವುದರಿಂದಲೇ ಸಂಸ್ಥೆಯು ಈ ಮಟ್ಟದ ಏಳಿಗೆ ಸಾಧಿಸಿದೆ. ಇನ್ನೂ ನೂರಾರು ವರ್ಷ ಇದು ಇಲ್ಲಿರುತ್ತದೆ ಎಂದು ಶುಭ ಹಾರೈಸಿದರು. ನ್ಯಾಷನಲ್ ಸಂಸ್ಥೆಯ ಅಬ್ದುಲ್ ರೆಹಮಾನ್ ಅವರು ಮಾತನಾಡಿ, 1952 ರಲ್ಲಿ ತಮ್ಮ ತಂದೆ ಹಾಜಿ ಶೇಖ್ ಅಹಮದ್ ಸಾಹೇಬ್ ಅವರು ದಕ್ಷಿಣ ಕನ್ನಡದಿಂದ ಇಲ್ಲಿಗೆ ಬಂದಾಗ ಅತ್ಯಂತ ಕಷ್ಟದ ದಿನಗಳಾಗಿದ್ದವು. ಆ ದಿನಗಳು ಇಂದಿನಂತೆ ಹೂವಿನ ಹಾಸಿಗೆಯಾಗಿರಲಿಲ್ಲ. ಆದರೆ ಆ ಕಾಲದಲ್ಲಿ ನಾವು ರಂಜದಕಟ್ಟೆಯಲ್ಲಿದ್ದಾಗ ನಮ್ಮ ಚಿಕ್ಕಪ್ಪ ಕೂಡ ತಮ್ಮನ್ನೆಲ್ಲ ಚೆನ್ನಾಗಿ ನೋಡಿಕೊಂಡಿದ್ದರು ಎಂದು ನಡೆದು ಬಂದ ಹಳೆಯ ದಿನಗಳ ಮೆಲುಕು ಹಾಕಿದರು. ಸಮಾರಂಭದಲ್ಲಿ ನ್ಯಾಷನಲ್ ಸಂಸ್ಥೆಯ ಇಬ್ರಾಹಿಂ ಷರೀಪ್, ಕೆನರಾ ಬ್ಯಾಂಕ್ ತೀರ್ಥಹಳ್ಳಿ ಶಾಖೆ ಮ್ಯಾನೇಜರ್ ಮಹಮ್ಮದ್ ಸಾಹಿಲ್, ನ್ಯಾಷನಲ್ ನ ಅಬ್ದುಲ್ ಕಲಾಮ್ ಆಜಾದ್, ಮೊಯ್ದಿನ್ ಕಬೀರ್, ಎಂ.ಎಸ್. ಅಬ್ದುಲ್ ರಹಿಮಾನ್, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ನಿರ್ದೇಶಕ ಮಹಮ್ಮದ್ ನಜೀರ್, ಸಾಹಿಲ್, ಸಲ್ಮಾನ್, ಅಕಿಲ್, ಅರ್ಮಾನ್, ಮಂಜುನಾಥ ಮಲ್ಯ ಮುಂತಾದವರಿದ್ದರು.

ಬುಲೆಟ್ ಬೈಕ್, ಸ್ಕೂಟಿ ಬಹುಮಾನ ಕೊಟ್ಟ ಸಂಸ್ಥೆ!

ತೀರ್ಥಹಳ್ಳಿಯಲ್ಲಿ ನೂತನವಾಗಿ ಶುಭಾರಂಭಗೊಂಡ ನ್ಯಾಷನಲ್ ಸಂಸ್ಥೆ ಯ ನ್ಯಾಷನಲ್ ವಾಚಸ್ & ಸಿಲ್ವರ್ ಸಂಸ್ಥೆಯ ಉದ್ಘಾಟನೆ ಅಂಗವಾಗಿ ಬಂಪರ್ ಡ್ರಾ ಬಹುಮಾನ ಬುಲೆಟ್ ಬೈಕ್, ಸ್ಕೂಟಿ ಸೇರಿ ಹತ್ತಾರು ಬಹುಮಾನ ನೀಡಲಾಯಿತು.

Categories
ತೀರ್ಥಹಳ್ಳಿ

16ನೇ ವಾರ್ಷಿಕೋತ್ಸವ ಡ್ರಾ ವಿಜೇತರು

16ನೇ ವಾರ್ಷಿಕೋತ್ಸವ ಡ್ರಾ ವಿಜೇತರು

Bumper Prize: 013535: MAMATHA, THIRTHAHALLI
1st prize: 025683-GOPAL KRISHNA,HOSANAGARA
2ND PRIZE: 026852: CHARITHA SHETTY,KOPPA
3RD PRIZE: 064656: KAMALAKSHI,HADSE
4TH PRIZE: 079217: NASEEMA,THIRTHAHALLI.

CONSOLATION PRIZE(WORTH RS.10000/- GOLD ORNAMENTS)

1.032503: LAKSHMI,KONANDUR
2.070490: ANANYA.H, DEMLAPURA
3.049609: CHANDRASHEKAR,HOSANAGARA
4.006208: PRIYA DHARSHINI,KATTEHAKKLU
5.001597: SUDHA.M.N,MAHISHI
6.073202: AKSHAVI HEGDE,KOPPA
7.019149: SHILPA.N.S,KATTEHAKKLU
8.076805: PRASHANTH,THIRTHAHALLI
9.076987: PRAPATHI,BEJJAVALLI
10.018360: SHAIMAH,KAMMARADI

NATIONAL SILVER AND WATCHES DRAW RESULT

1ST PRIZE–ENFIELD BULLET: 0382: AFZA MARIYAM
2ND PRIZE: JUPITER SCOOTER: 0547: PRAVEEN

Consolation Prizes
1.0045: SHAMREEN
2.0205: ABHILASH
3.0540: IRFAN.K.M

Categories
ಜಾತಕ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಶನಿ ದೇವನ ಕೃಪೆಯಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಇಂದು ತಾಳ್ಮೆಯಿಂದಿರಿ. ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಿ. ಇಂದು ನಿಮ್ಮ ಮೇಲೆ ಪೂರ್ಣ ವಿಶ್ವಾಸ ಇರುತ್ತದೆ. ಕುಟುಂಬದಿಂದ ಬೆಂಬಲ ಸಿಗಲಿದೆ. ನಿಮ್ಮ ಕೆಲಸದಲ್ಲಿ ನೀವು ಅಧಿಕಾರಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ಪ್ರಗತಿಯ ಅವಕಾಶಗಳು ಇರಬಹುದು. ಇಂದು ಅನುಪಯುಕ್ತ ಚರ್ಚೆಗಳಿಂದ ಅಂತರ ಕಾಯ್ದುಕೊಳ್ಳಿ. ಕುಟುಂಬದ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಉದ್ಯೋಗ ಬದಲಾವಣೆಯೊಂದಿಗೆ ಪ್ರಗತಿಯ ಸಾಧ್ಯತೆಗಳಿವೆ.

** ವೃಷಭ ರಾಶಿ :
ಇಂದು ನೀವು ಆತ್ಮವಿಶ್ವಾಸದಿಂದ ತುಂಬಿರುತ್ತೀರಿ, ಆದರೆ ಸ್ವಯಂ ನಿಯಂತ್ರಣದಲ್ಲಿರುತ್ತೀರಿ. ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಿ. ಶೈಕ್ಷಣಿಕ ಕೆಲಸದ ಬಗ್ಗೆ ಎಚ್ಚರವಿರಲಿ. ನಿಮ್ಮ ಮಗುವಿನ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ. ನಿಮಗೆ ಸರ್ಕಾರದಿಂದ ಬೆಂಬಲವೂ ಸಿಗುತ್ತದೆ. ಇಂದು ನಿಮ್ಮ ಸಂಗಾತಿಯಿಂದ ನೀವು ಬೆಂಬಲವನ್ನು ಪಡೆಯುತ್ತೀರಿ. ಅಧಿಕ ಖರ್ಚು ಇರುತ್ತದೆ.

** ಮಿಥುನ ರಾಶಿ :
ಇಂದು ನಿಮ್ಮ ಮನಸ್ಸು ಗೊಂದಲದಲ್ಲಿ ಉಳಿಯುತ್ತದೆ. ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳ ಪ್ರಭಾವವೂ ಇರಬಹುದು. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕುಟುಂಬದಲ್ಲಿ ಧಾರ್ಮಿಕ ಮತ್ತು ಶುಭ ಕಾರ್ಯಗಳು ನಡೆಯಬಹುದು. ಕುಟುಂಬದಿಂದ ಬೆಂಬಲ ಸಿಗಲಿದೆ. ಇಂದು ನೀವು ಆರ್ಥಿಕ ಯಶಸ್ಸನ್ನು ಪಡೆಯುವಲ್ಲಿ ನಿಮ್ಮ ವೃತ್ತಿಪರ ಜೀವನವು ಉತ್ಪಾದಕವಾಗಿರುತ್ತದೆ.

** ಕರ್ಕಾಟಕ ರಾಶಿ :
ಇಂದು ನಿಮ್ಮ ಮನಸ್ಸು ಸಂತೋಷವಾಗಿರುತ್ತದೆ, ಆದರೆ ಸ್ವಯಂ ನಿಯಂತ್ರಣದಲ್ಲಿರುತ್ತದೆ. ಕೆಲಸದಲ್ಲಿ ಅನಗತ್ಯವಾದ ವಿವಾದಗಳಿಂದ ದೂರವಿರಿ. ಉದ್ಯೋಗದಲ್ಲಿ ಪ್ರಗತಿಯೊಂದಿಗೆ, ಸ್ಥಳ ಬದಲಾವಣೆಯ ಸಾಧ್ಯತೆಗಳಿವೆ. ಆದಾಯ ಹೆಚ್ಚಲಿದೆ. ಕೆಲಸದ ಹೊರೆಯೂ ಹೆಚ್ಚಾಗಲಿದೆ. ನಿಮ್ಮ ಆರೋಗ್ಯವು ದಿನವಿಡೀ ಉತ್ತಮವಾಗಿರುವುದಿಲ್ಲ, ಆದರೆ ನೀವು ಪ್ರೀತಿಯ ಜೀವನದಲ್ಲಿ ಅನೇಕ ಉತ್ತಮ ಕ್ಷಣಗಳನ್ನು ಆನಂದಿಸುವಿರಿ.

** ಸಿಂಹ ರಾಶಿ :
ಇಂದು ಮನಸ್ಸಿನಲ್ಲಿ ಶಾಂತಿ ಮತ್ತು ಸಂತೋಷ ಇರುತ್ತದೆ. ಆತ್ಮವಿಶ್ವಾಸ ತುಂಬುವರು. ನೀವು ಶೈಕ್ಷಣಿಕ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ನಿಮಗೆ ಸರಕಾರದಿಂದ ಬೆಂಬಲ ಸಿಗಲಿದೆ. ವ್ಯಾಪಾರದಲ್ಲಿ ಹೆಚ್ಚಳ ಕಂಡುಬರಲಿದೆ. ಇಂದು ಗೌರವ ಸಿಗಲಿದೆ. ಇಂದು ನೀವು ಪ್ರಮುಖ ಕಾಯಿಲೆಗಳಿಂದ ಪರಿಹಾರವನ್ನು ಪಡೆಯುತ್ತೀರಿ ಮತ್ತು ನಿಮ್ಮ ಆರ್ಥಿಕ ಸ್ಥಿತಿಯೂ ಉತ್ತಮವಾಗಿರುತ್ತದೆ.

** ಕನ್ಯಾ ರಾಶಿ :
ಇಂದು ನಿಮ್ಮ ಮನಸ್ಸು ಸಂತೋಷದಿಂದ ಕೂಡಿರುತ್ತದೆ. ಆತ್ಮವಿಶ್ವಾಸ ಹೆಚ್ಚಾಗುತ್ತದೆ, ಆದರೆ ತಾಳ್ಮೆಯಿಂದಿರಿ. ಅನಗತ್ಯ ಕೋಪವನ್ನು ತಪ್ಪಿಸಿ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಓಡಾಟ ಹೆಚ್ಚು ಇರುತ್ತದೆ. ಇಂದು ನಿಮ್ಮ ಜೀವನ ಅಸ್ತವ್ಯಸ್ತವಾಗುತ್ತದೆ. ಇಂದು ನಿಮ್ಮ ಕೆಲಸದಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಮನಸ್ಸು ಆತ್ಮವಿಶ್ವಾಸದಿಂದ ತುಂಬಿರುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಉದ್ಯೋಗ ಸ್ಥಳದಲ್ಲಿ ಬದಲಾವಣೆಯಾಗಬಹುದು.

** ತುಲಾ ರಾಶಿ :
ಇಂದು ನಿಮ್ಮಲ್ಲಿ ಪೂರ್ಣ ಆತ್ಮವಿಶ್ವಾಸ ಇರುತ್ತದೆ. ಆದರೆ ತಾಳ್ಮೆಯಿಂದಿರಿ. ಅತಿಯಾದ ಉತ್ಸಾಹದಿಂದ ದೂರವಿರಿ. ಸಂಭಾಷಣೆಯಲ್ಲಿ ಸಮತೋಲನದಿಂದಿರಿ. ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಶೈಕ್ಷಣಿಕ ಕೆಲಸದಲ್ಲಿ ತೊಂದರೆಗಳಿರಬಹುದು. ಇಂದು ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ವ್ಯಾಪಾರದಲ್ಲಿ ಹೆಚ್ಚಳ ಕಂಡುಬರಲಿದೆ. ಲಾಭದ ಅವಕಾಶಗಳೂ ಇರುತ್ತವೆ. ಕೆಲಸದ ಸ್ಥಳದಲ್ಲಿ ನೀವು ಹೊಸ ಜವಾಬ್ದಾರಿಗಳನ್ನು ಪಡೆಯಬಹುದು.

** ವೃಶ್ಚಿಕ ರಾಶಿ :
ಇಂದು ನಿಮ್ಮಲ್ಲಿ ಆತ್ಮಸ್ಥೈರ್ಯ ಹೆಚ್ಚಲಿದೆ. ಆದರೆ ನಿಮ್ಮ ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳನ್ನು ತಪ್ಪಿಸಿ. ಮಾತಿನ ಪ್ರಭಾವ ಹೆಚ್ಚಾಗುತ್ತದೆ. ಸ್ನೇಹಿತರ ಸಹಾಯದಿಂದ ನೀವು ವ್ಯಾಪಾರ ಅವಕಾಶಗಳನ್ನು ಪಡೆಯಬಹುದು. ಮಕ್ಕಳ ಸಂತಸದಲ್ಲಿ ಹೆಚ್ಚಳವಾಗಲಿದೆ. ಇಂದು ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಿ. ನೀವು ವ್ಯಾಪಾರದಲ್ಲಿ ಸಾಕಷ್ಟು ಓಡಬೇಕಾಗಬಹುದು. ನಿಮ್ಮ ಸಂಗಾತಿಗೆ ಅಚ್ಚರಿಯ ಉಡುಗೊರೆಯನ್ನು ನೀಡುವುದರಿಂದ ನಿಮ್ಮ ಪ್ರೀತಿಯ ಜೀವನವನ್ನು ಸುಧಾರಿಸುತ್ತದೆ.

** ಧನಸ್ಸು ರಾಶಿ :
ಇಂದು ನೀವು ಆತ್ಮವಿಶ್ವಾಸದಿಂದ ತುಂಬಿರುತ್ತೀರಿ, ಆದರೆ ನಿಮ್ಮ ಮನಸ್ಸು ಕೂಡ ತೊಂದರೆಗೊಳಗಾಗಬಹುದು. ಸ್ವಯಂ ನಿಯಂತ್ರಣದಲ್ಲಿರಿ. ಅನಗತ್ಯ ಕೋಪ ಮತ್ತು ಜಗಳಗಳನ್ನು ತಪ್ಪಿಸಿ. ಕುಟುಂಬದಿಂದ ಬೆಂಬಲ ಸಿಗಲಿದೆ. ವ್ಯಾಪಾರದಲ್ಲಿ ಹೆಚ್ಚಳ ಕಂಡುಬರಲಿದೆ. ನೀವು ಅಧಿಕಾರಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ನೀವು ಉನ್ನತ ಅಧಿಕಾರಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ವ್ಯಾಪಾರಸ್ಥರು ಆತುರಪಡಬೇಕಾಗಬಹುದು.

** ಮಕರ ರಾಶಿ :
ಇಂದು ನಿಮ್ಮ ಮನಸ್ಸು ತೊಂದರೆಗೊಳಗಾಗುತ್ತದೆ. ತಾಳ್ಮೆಯಿಂದಿರಿ. ಸಂಭಾಷಣೆಯಲ್ಲಿ ಸಮತೋಲನದಿಂದಿರಿ. ಕುಟುಂಬ ಸಮೇತ ಯಾವುದಾದರೂ ಧಾರ್ಮಿಕ ಸ್ಥಳಕ್ಕೆ ಪ್ರವಾಸ ಹೋಗಬಹುದು. ವ್ಯವಹಾರದಲ್ಲಿ ಬದಲಾವಣೆಯ ಸಾಧ್ಯತೆಗಳಿವೆ. ನೀವು ಸ್ನೇಹಿತರಿಂದ ಬೆಂಬಲವನ್ನು ಪಡೆಯಬಹುದು. ನೀವು ಉನ್ನತ ಅಧಿಕಾರಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ವ್ಯಾಪಾರಸ್ಥರು ಆತುರಪಡಬೇಕಾಗಬಹುದು.

** ಕುಂಭ ರಾಶಿ :
ಇಂದು ನಿಮ್ಮ ಮನಸ್ಸಿಗೆ ತೊಂದರೆ ಇರುತ್ತದೆ. ಸ್ವಯಂ ನಿಯಂತ್ರಣದಲ್ಲಿರಿ. ಅತಿಯಾದ ಕೋಪ ಮತ್ತು ಉತ್ಸಾಹವನ್ನು ತಪ್ಪಿಸಿ. ನಿಮ್ಮ ಕೆಲಸದಲ್ಲಿ ನೀವು ಅಧಿಕಾರಿಗಳಿಂದ ಬೆಂಬಲವನ್ನು ಪಡೆಯುತ್ತೀರಿ, ಆದರೆ ಸ್ಥಳ ಬದಲಾವಣೆಯಾಗಬಹುದು. ನಿಮಗೆ ಕುಟುಂಬದಿಂದ ಬೆಂಬಲ ಸಿಗಲಿದೆ. ಉದ್ಯೋಗದಲ್ಲಿ ಪ್ರಗತಿಯ ಹಾದಿಗಳು ತೆರೆದುಕೊಳ್ಳುತ್ತವೆ.ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ.

** ಮೀನ ರಾಶಿ :
ಇಂದು ನಿಮ್ಮ ಮನಸ್ಸಿನಲ್ಲಿ ಶಾಂತಿ ಮತ್ತು ಸಂತೋಷ ಇರುತ್ತದೆ. ಅಧ್ಯಯನದಲ್ಲಿ ಆಸಕ್ತಿ ಇರುತ್ತದೆ. ಶೈಕ್ಷಣಿಕ ಕೆಲಸವು ಆಹ್ಲಾದಕರ ಫಲಿತಾಂಶಗಳನ್ನು ನೀಡುತ್ತದೆ. ಗೌರವ ಸಿಗಲಿದೆ. ನಿಮಗೆ ಸರಕಾರದಿಂದ ಬೆಂಬಲ ಸಿಗಲಿದೆ. ಆದಾಯ ಹೆಚ್ಚಲಿದೆ. ವ್ಯಾಪಾರದಲ್ಲಿ ಹೆಚ್ಚಳ ಕಂಡುಬರಲಿದೆ. ಲಾಭದ ಅವಕಾಶಗಳೂ ಇರುತ್ತವೆ. ವಾಹನ ಸೌಕರ್ಯ ಹೆಚ್ಚಾಗಬಹುದು. ಖರ್ಚು ಹೆಚ್ಚಾಗಬಹುದು.