Categories
ಚಿಕ್ಕಮಗಳೂರು

ಮಲೆನಾಡಲ್ಲಿ ಹೆಚ್ಚಾಯ್ತು ಕಾಡುಪ್ರಾಣಿಗಳ ಹಾವಳಿ..!!

ಮಲೆನಾಡಲ್ಲಿ ಹೆಚ್ಚಾಯ್ತು ಕಾಡುಪ್ರಾಣಿಗಳ ಹಾವಳಿ..!!
– ಕಾಡಾನೆ,ಕರಡಿ,ಚಿರತೆಯಾಯ್ತು ಈಗ ಹುಲಿಯ ಸರದಿ
– ಶೃಂಗೇರಿಗೆ ಬಂತು ಹುಲಿ,ಅರಣ್ಯ ಇಲಾಖೆ ವಿರುದ್ಧ ಜನರ ಆಕ್ರೋಶ

NAMMUR EXPRESS NEWS
ಶೃಂಗೇರಿ:
ಮಲೆನಾಡು ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು ಜನರಲ್ಲಿ ಆತಂಕ ಸೃಷ್ಠಿಯಾಗಿದೆ.
ಹಲವು ದಿನಗಳಿಂದ ಕಾಡುಕೋಣ,ಕಡವೆಡಳಂತಹ ಕಾಡು ಪ್ರಾಣಿಗಳು ಕೃಷಿ ಭೂಮಿಗೆ ನುಗ್ಗಿ ಬೆಳೆದ ಬೆಳೆಗಳನ್ನು ನಾಶ ಮಾಡಿ ರೈತರಿಗೆ ತಲೆ ನೋವಾಗಿದ್ದವು ನಂತರ ಕರಡಿ,ಆನೆಗಳು ದಾಳಿ ಮಾಡಲು ಶುರುಮಾಡಿದ್ದವು. ಇದೇ ಮೊದಲ ಬಾರಿಗೆ ಕೆಲವು ದಿನಗಳ ಹಿಂದೆ ಎನ್ ಆರ್ ಪುರ ತಾಲೂಕಿನ ಸೀತೂರು ಹಾಗೂ ಮುತ್ತಿನಕೊಪ್ಪ ಗ್ರಾಮದಲ್ಲಿ ಕಾಡಾನೆ ದಾಳಿಗೆ ಇಬ್ಬರು ಬಲಿಯಾಗಿದ್ದರು. ಸೀತೂರು ಘಟನೆ ನಡೆದು ಕೇವಲ 20 ದಿನಗಳೊಳಗೆ ಮುತ್ತಿನಕೊಪ್ಪದಲ್ಲಿ ಮತ್ತೆ ಆನೆ ದಾಳಿ ಮಾಡಿ ಒಬ್ಬರನ್ನು ಬಲಿ ಪಡೆದಿತ್ತು. ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿದ್ದರು ಅರಣ್ಯ ಇಲಾಖೆಯಿಂದ ಯಾವುದೇ ಮುಂಜಾಗ್ರತಾಕ್ರಮ ಕೈಗೊಳ್ಳದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಶೃಂಗೇರಿಗೆ ಬಂತು ಹುಲಿ..!!?
ಡಿ.27 ರ ರಾತ್ರಿ 9:30 ರ ಸಮಯದಲ್ಲಿ ಶೃಂಗೇರಿಯಿಂದ ಕೊಪ್ಪ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಪ್ರವಾಸಿ ವಾಹನವೊಂದಕ್ಕೆ ಮಾರ್ಗದ ಉಳುವೆಬೈಲು ಗ್ರಾಮದಲ್ಲಿ ಹುಲಿಯೊಂದು ಅಡ್ಡ ಬಂದಿದೆ ಎನ್ನಲಾಗಿದೆ. ಹುಲಿಯು ಉಳುವೆ ಪಕ್ಷಿಧಾಮದ ಕಡೆಯಿಂದ ಬಂದು ರಸ್ತೆದಾಟಿದೆ. ಇದನ್ನು ಕಂಡು ಗಾಬರಿಗೊಂಡ ಪ್ರಯಾಣಿಕರು ತಕ್ಷಣವೇ ತಮ್ಮ ವಾಹನವನ್ನು ನಿಲ್ಲಿಸಿದ್ದಾರೆ. ಹುಲಿ ಹಾಗೆ ರಸ್ತೆದಾಟಿ ಕಾಡಿನೊಳಗೆ ಹೋಗಿದೆ ನಂತರ ಅದೇ ಸಮಯದಲ್ಲಿ ಬೈಕ್‌ನಲ್ಲಿ ಬಂದ ಸ್ಥಳೀಯರೊಬ್ಬರಿಗೆ ಮಾಹಿತಿ ನೀಡಿ ಗ್ರಾಮದಲ್ಲಿ ತಿಳಿಸಲು ಹೇಳಿ ತೆರಳಿದ್ದಾರೆ. ನಿನ್ನೆ ಬೆಳಿಗ್ಗೆ ನಡೆದ ಘಟನೆ ಬಗ್ಗೆ ಮಾಹಿತಿ ತಿಳಿದ ಗ್ರಾಮಸ್ಥರು ಹುಲಿ ಕಂಡ ಸ್ಥಳದಲ್ಲಿ ಪರಿಶೀಲಿಸಿ ಹೆಜ್ಜೆ ಗುರುತನ್ನು ಪತ್ತೆ ಹಚ್ಚಿದ್ದಾರೆ ಎನ್ನಲಾಗಿದೆ.ಹುಲಿ ಪಕ್ಷಿಧಾಮದ ಕೆರೆಯಲ್ಲಿ ನೀರು ಕುಡಿದು ಕೋರಕಲ್ಲು, ಮೀಗಿನಕಲ್ಲು ಗ್ರಾಮದ ಕಡೆ ಹೋಗಿರಬಹುದೆಂದು ಶಂಕಿಸಲಾಗಿದೆ. ಇದರಿಂದ ಗ್ರಾಮಸ್ಥರಲ್ಲಿ ಆತಂಕ ಜಾಸ್ತಿಯಾಗಿದ್ದು, ಶಾಲಾ ಕಾಲೇಜು ಹೋಗುವ ವಿದ್ಯಾರ್ಥಿಗಳಲ್ಲಿ ಭಯ ಶುರುವಾಗಿದೆ. ಇಷ್ಟೆಲ್ಲಾ ನಡೆಯುತ್ತಿದ್ದರು ಕಾಡುಪ್ರಾಣಿಗಳು ನಾಡಿನೊಳಗೆ ಬರುವುದನ್ನು ತಡೆಯದೇ,ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದ ಅರಣ್ಯ ಇಲಾಖೆಯ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Categories
ಕರಾವಳಿ

“ಹವ್ಯಕ ಸಾಧಕ ರತ್ನ ಪ್ರಶಸ್ತಿ” ದ್ವಾರಕಾ ಸಮೂಹ ಸಂಸ್ಥೆ ಎಂ.ಡಿಗೆ

“ಹವ್ಯಕ ಸಾಧಕ ರತ್ನ ಪ್ರಶಸ್ತಿ” ದ್ವಾರಕಾ ಸಮೂಹ ಸಂಸ್ಥೆ ಎಂ.ಡಿಗೆ
– ಗೋಪಾಲಕೃಷ್ಣ ಭಟ್ ದ್ವಾರಕಾ ಸಮೂಹ ಸಂಸ್ಥೆಗಳ ಎಂ.ಡಿ
– ಡಿ.27 ರ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರಧಾನ

NAMMUR EXPRESS NEWS
ಪುತ್ತೂರು: ದ್ವಾರಕಾ ಸಮೂಹ ಸಂಸ್ಥೆಗಳ ಮ್ಯಾನೇಜಿಂಗ್ ಡೈರೆಕ್ಟರ್‌ ಆಗಿರುವ ಗೋಪಾಲಕೃಷ್ಣ ಭಟ್ ರವರು ಅಖಿಲ ಹವ್ಯಕ ಮಹಾಸಭಾ(ರಿ.) ಬೆಂಗಳೂರು ಇವರು ನೀಡುವ ಹವ್ಯಕ ಸಾಧಕ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಡಿ.27 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

Categories
ಶಿವಮೊಗ್ಗ

ಮಲೆನಾಡಿನಲ್ಲಿ ಅಡಿಕೆ ಇಳುವರಿ ಭಾರಿ ಕುಸಿತ

ಮಲೆನಾಡಿನಲ್ಲಿ ಅಡಿಕೆ ಇಳುವರಿ ಭಾರಿ ಕುಸಿತ
– ಈ ಬಾರಿ ರೈತರ ಆದಾಯಕ್ಕೆ ಕತ್ತರಿ!
– ಈ ವರ್ಷ ತೂಕ ಕಳೆದುಕೊಂಡ ಸಂಸ್ಕರಿತ ಅಡಕೆ

NAMMUR EXPRESS NEWS
ಶಿವಮೊಗ್ಗ: ಜೀವನಾಧಾರ ಬೆಳೆ ಅಡಿಕೆ ಇಳುವರಿ ಈ ವರ್ಷ ನಿರೀಕ್ಷೆಗೂ ಮೀರಿ ಇಳಿಕೆ ಕಂಡಿದೆ. ಕೊಳೆ,ಬೂದುಗೊಳೆ, ಎಲೆಚುಕ್ಕಿ, ಹಸಿರುಕಾಯಿ ಉದುರುವ ರೋಗಕ್ಕೆ ಸಿಕ್ಕ ಅಡಿಕೆ ರೈತರ ಆದಾಯಕ್ಕೆ ಕತ್ತರಿ ಹಾಕಿದೆ. ಅಡಿಕೆ ಬೆಳೆಯ ಇಳುವರಿ ಕುಸಿತ ಮಲೆನಾಡು ಭಾಗದ ಆರ್ಥಿಕ ಚಟುವಟಿಕೆಗೆ ಭಾರೀ ಹೊಡೆತ ನೀಡುವ ಸಾಧ್ಯತೆ ಇದೆ. ಮೊದಲು ಅಡಿಕೆ ಗೊನೆ ಕೊಯ್ಲು ಮುಗಿದು ಎರಡನೆ ಹಂತದ ಕೊಯ್ಲು ಮುಕ್ತಾಯದ ಘಟ್ಟ ತಲುಪಿದೆ. ರೈತರು ಅಡಿಕೆ ಫಸಲಿನ ಲೆಕ್ಕಾಚಾರ ಹಾಕುತ್ತಿದ್ದು , ಬೆಳೆ ಕೈ ಕೊಟ್ಟಿರುವುದು ಖಚಿತವಾಗಿದೆ. ಮರದಲ್ಲಿ ಗೊನೆ ಕಂಡರೂ ಫಸಲು ನಿರೀಕ್ಷೆಯಂತೆ ಇಲ್ಲದಾಗಿದೆ. ಅಚ್ಚರಿ ಎಂದರೆ ಸಂಸ್ಕರಣೆ ಅಡಿಕೆ ಭಾರೀ ಪ್ರಮಾಣದಲ್ಲಿ ತೂಕ ಕಳೆದುಕೊಂಡಿರುವುದು ರೈತರನ್ನು ಕಂಗಲಾಗಿಸಿದೆ.

4 ರಿಂದ 5 ಬಾರಿ ಔಷಧ ಸಿಂಪಡಣೆ ಮಾಡಿದರೂ ಅಡಿಕೆಗೆ ತಗುಲಿದ ರೋಗಗಳು ನಿಯಂತ್ರಣಕ್ಕೆ ಬಂದಿಲ್ಲ. ಇದು ಫಸಲು ನಷ್ಟಕ್ಕೆ ಕಾರಣ ಇರಬಹುದು ಎಂಬ ಅಂದಾಜು ರೈತರದ್ದಾಗಿದೆ. ಬಹುತೇಕ ತೋಟದಲ್ಲಿ 3 ಕೊಯ್ಲಿಗೆ ಅಡಿಕೆ ಗೊನೆಗಳೇ ಇಲ್ಲದಾಗಿದ್ದು, ರೈತರು ಹೆಚ್ಚಿನ ಪ್ರಮಾಣದಲ್ಲಿ ಫಸಲು ನಷ್ಟ ಅನುಭವಿಸುವಂತಾಗಿದೆ. ಇದಕ್ಕೆ ಕಾರಣವಾಗಿರುವ ಅಂಶಗಳತ್ತ ರೈತರು ಗಮನಹರಿಸಿದರೂ ಸ್ಪಷ್ಟ ಉತ್ತರ ಸಿಗದಂತಾಗಿದೆ. ಹೆಚ್ಚು ಮಳೆ ಸುರಿದ ವರ್ಷಗಳಲ್ಲೂ ಅಡಿಕೆ ಇಳುವರಿ ಹೆಚ್ಚಿನ ಪ್ರಮಾಣದಲ್ಲಿ ಇಳಿಕೆ ಆಗಿರಲಿಲ್ಲ. ಅತೀ ಹೆಚ್ಚು ಮಳೆ ಸುರಿಯುವ ಆಗುಂಬೆ, ಕಸಬಾ, ಮುತ್ತೂರು ಹೋಬಳಿ ವ್ಯಾಪ್ತಿ ಪ್ರದೇಶದಲ್ಲಿ ಸರಾಸರಿ ಪ್ರಮಾಣದಲ್ಲಿ ಅಡಿಕೆ ಫಸಲು ದೊರೆಯುತ್ತಿತ್ತು. ಈ ವರ್ಷ ಅತೀ ಹೆಚ್ಚು ಮಳೆ ಸುರಿದ ಪ್ರದೇಶಗಳಲ್ಲಿ ಅಡಿಕೆ ಫಸಲು ಸಾಮಾನ್ಯ ಪ್ರಮಾಣದಲ್ಲಿದೆ. ಆದರೆ, ಕಡಿಮೆ ಮಳೆ ಸುರಿಯುವ ಮಂಡಗದ್ದೆ, ಅಗ್ರಹಾರ ಹೋಬಳಿ ವ್ಯಾಪ್ತಿಯಲ್ಲಿ ಅಡಿಕೆ ಫಸಲಿನ ಇಳುವರಿ ಹೆಚ್ಚು ಪ್ರಮಾಣದಲ್ಲಿ ಕುಸಿತ ಕಂಡಿದೆ.

ಆದಾಯಕ್ಕೆ ಪೆಟ್ಟು ಬಿದ್ದಿರುವ ಜತೆಗೆ ತೋಟದ ಭವಿಷ್ಯ ಏನಾಗಲಿದೆ ಎಂಬ ಆತಂಕ ರೈತರನ್ನು ಬಿಡದೆ ಕಾಡುತ್ತಿದೆ. ಇಂತಹ ಬಿಕ್ಕಟ್ಟಿನ ಸನ್ನಿವೇಶವನ್ನು ಬಂಡವಾಳ ಮಾಡಿಕೊಳ್ಳುವ ಪ್ರಯತ್ನ ಮಾರುಕಟ್ಟೆ ವ್ಯವಸ್ಥೆಯಲ್ಲಿ ನಡೆದಿದೆ. ಕೆಲವು ಖಾಸಗಿ ಕಂಪನಿಗಳ ಮಾರಾಟ ಪ್ರತಿನಿಧಿಗಳು ಹಳ್ಳಿಗಳತ್ತ ಹೆಜ್ಜೆ ಇಟ್ಟಿದ್ದಾರೆ. ಬೆಳೆ ವೃದ್ಧಿಸುವ, ಇಳುವರಿ ಹೆಚ್ಚಿಸುವ, ರೋಗ ಮುಕ್ತಗೊಳಿಸುವ ಭರವಸೆ ನೀಡಿ ದುಬಾರಿ ದರದ ಔಷಧ, ಗೊಬ್ಬರ ಮಾರಾಟ ಮಾಡುವ ವ್ಯಾಪಾರಿ ಪ್ರಯತ್ನ ನಡೆದಿದೆ. ಈಗಾಗಲೇ ಇಳುವರಿ ಇಳಿಕೆಯಿಂದ ಸಂಕಷ್ಟಕ್ಕೀಡಾಗಿರುವ ರೈತರು ಮಾರುಕಟ್ಟೆ ಲಾಬಿಗೆ ಸುಲಭವಾಗಿ ಸಿಕ್ಕಿಕೊಳ್ಳುತ್ತಿದ್ದಾರೆ. ಅಡಿಕೆ ಇಳುವರಿ ಇಳಿಕೆ ರೈತರನ್ನು ಇನ್ನೊಂದು ರೀತಿಯಲ್ಲಿ ಇಕ್ಕಟ್ಟಿಗೆ ಸಿಕ್ಕಿಸಿದೆ.

Categories
ಚಿಕ್ಕಮಗಳೂರು

ಮಲೆನಾಡಲ್ಲಿ ಹೆಚ್ಚಾಯ್ತು ರಸ್ತೆ ಅಪಘಾತ!

ಮಲೆನಾಡಲ್ಲಿ ಹೆಚ್ಚಾಯ್ತು ರಸ್ತೆ ಅಪಘಾತ!
– ಶೃಂಗೇರಿಯಲ್ಲಿ ಭೀಕರ ರಸ್ತೆ ಅಪಘಾತ: ಒಬ್ಬ ಮಹಿಳೆ ಸ್ಥಳದಲ್ಲೇ ಸಾವು: ಸಾಗರದಲ್ಲಿ ಅಪಘಾತಕ್ಕೆ ಇಬ್ಬರು ಬಲಿ
– ತೀರ್ಥಹಳ್ಳಿಯ ಆರಗ, ಕುಡುಮಲ್ಲಿಗೆಯಲ್ಲೂ ಅಪಘಾತ

NAMMUR EXPRESS NEWS
ಶೃಂಗೇರಿ/ ತೀರ್ಥಹಳ್ಳಿ/ ಸಾಗರ: ಶೃಂಗೇರಿ ತಾಲೂಕಿನ ಶಿಡ್ಲೆ ಬಳಿ ಟಿಟಿ ಹಾಗೂ ಕಾರ್ ನಡುವೆ ಭೀಕರ ಅಪಘಾತ ಸಂಭವಿಸಿ ಒಬ್ಬ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಧರ್ಮಪುರಿ ಮೂಲದ ಭುವನ (65) ಸ್ಥಳದಲ್ಲೇ ಸಾವ್ನಪ್ಪಿರುವ ಮಹಿಳೆ. ಇನ್ನು ಇಬ್ಬರು ಪ್ರಯಾಣಿಕರಿಗೆ ಗಂಭೀರ ಗಾಯವಾಗಿದೆ. ಚಿಕ್ಕಮಗಳೂರು ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು. ತಮಿಳುನಾಡಿನಿಂದ ಶೃಂಗೇರಿಗೆ ಆಗಮಿಸಿ ದೇವರ ದರ್ಶನ ಪಡೆದು ಹಿಂತಿರುಗುವಾಗ ಈ ಘಟನೆ ನಡೆದಿದೆ.

ಸಾಗರದಲ್ಲಿ ಅಪಘಾತಕ್ಕೆ ಇಬ್ಬರು ಬಲಿ!

ಸಾಗರ : ಕಾರು ಮತ್ತು ಬಸ್ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾಗರ ತಾಲೂಕು ಆನಂದಪುರದ ಮುರುಘಮಠದ ಸಮೀಪ ಇಂದು ಬೆಳಗ್ಗೆ ಘಟನೆ ಸಂಭವಿಸಿದೆ. ಕಾರು ಸಾಗರದಿಂದ ಶಿವಮೊಗ್ಗ ಕಡೆಗೆ ತೆರಳುತ್ತಿತ್ತು. ಬಸ ಶಿವಮೊಗ್ಗದಿಂದ ಸಾಗರ ಕಡೆಗೆ ತೆರಳುತ್ತಿತ್ತು. ಇಬ್ಬರು ಮೃತಪಟ್ಟಿದ್ದು ಅವರ ಗುರುತು ಇನ್ನಷ್ಟೆ ಪತ್ತೆ ಆಗಬೇಕಿದೆ ಸ್ಥಳಕ್ಕೆ ಆನಂದಪುರ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದೆ.

ತೀರ್ಥಹಳ್ಳಿಯಲ್ಲಿ ಎರಡು ಕಾರು ಮುಖಾಮುಖಿ ಡಿಕ್ಕಿ!

ಆರಗದಿಂದ ಸಾಗರ ಹೋಗುವ ರಸ್ತೆಯಲ್ಲಿ ಎರಡು ಕಾರುಗಳ ನಡುವೆ ಮಖಾಮುಖಿ ಡಿಕ್ಕಿಯಾಗಿದ್ದು ಭೀಕರ ಅಪಘಾತ ಆಗಿದೆ. ಆದರೆ ಎರಡು ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎರಡು ಕಾರುಗಳು ನಜ್ಜುಗುಜ್ಜಾಗಿದೆ. ಕುಡುಮಲ್ಲಿಗೆಯಲ್ಲಿ ಆಂಬುಲೆನ್ಸ್ ಪಲ್ಟಿ!: ಕುಡುಮಲ್ಲಿಗೆಯಲ್ಲಿ ಶುಕ್ರವಾರ ರಾತ್ರಿ ಆಂಬುಲೆನ್ಸ್ ಪಲ್ಟಿ ಆಗಿದ್ದು, ಮಧ್ಯ ರಸ್ತೆಯಲ್ಲಿ ಕೆಲ ಕಾಲ ಟ್ರಾಫಿಕ್ ಜಾಮ್ ಆಗಿತ್ತು.

Categories
ತೀರ್ಥಹಳ್ಳಿ

ಜಾತ್ರೆಗೆ ಬರಲಿದ್ದಾರೆ ಕಳ್ಳರು ಎಚ್ಚರ ಎಚ್ಚರ!

ಜಾತ್ರೆಗೆ ಬರಲಿದ್ದಾರೆ ಕಳ್ಳರು ಎಚ್ಚರ ಎಚ್ಚರ!
– ತೀರ್ಥಹಳ್ಳಿ ಪೊಲೀಸರಿಂದ ಎಚ್ಚರಿಕೆಯ ಸೂಚನೆ
– ಎಲ್ಲಾ ಕಡೆ ಸಿಸಿ ಟಿವಿಯ ಕಣ್ಗಾವಲು
– ಜಾತ್ರೆಯಲ್ಲಿ ಮೊಬೈಲ್, ಹಣ, ಚಿನ್ನಾಭರಣಗಳ ಮೇಲೆ ಎಚ್ಚರ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಎಳ್ಳಮಾವ್ಯಾಸೆ ಜಾತ್ರೆಗೆ ಸುಮಾರು 5 ಲಕ್ಷಕ್ಕೂ ಹೆಚ್ಚು ಜನ ಆಗಮಿಸುವ ಕಾರಣ ಈ ಬಾರಿ ಪೊಲೀಸ್ ಇಲಾಖೆ ಖಡಕ್ ಸೂಚನೆ ನೀಡಿದೆ. ನದಿಗೆ ಇಳಿಯದಂತೆ ಕ್ರಮ ಕೈಗೊಳ್ಳುವ ಜೊತೆಗೆ ಸೂಚನೆ ನೀಡಲಾಗಿದೆ. ತೀರ್ಥಹಳ್ಳಿಯಲ್ಲಿ ತೆಪ್ಪೋತ್ಸವ ಹಾಗೂ ಜಾತ್ರೆಯ ಸಂದರ್ಭದಲ್ಲಿ ಅನೇಕ ಬಾರಿ ಮೊಬೈಲ್ ಹಣ ಹಾಗೂ ಚಿನ್ನಾಭರಣ ಕಳವು ಪ್ರಕರಣ ದಾಖಲಾಗುತ್ತಿತ್ತು. ಈ ಬಾರಿ ಅತಿ ಹೆಚ್ಚು ಜನ ಸೇರುವುದರಿಂದ ಪೊಲೀಸ್ ಇಲಾಖೆ ಜನರಿಗೆ ಮಾಹಿತಿ ನೀಡಿದೆ ಜೊತೆಗೆ ಅಂತವರು ಕಂಡು ಬಂದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ 112 ನಂಬರ್ ಅನ್ನ ಕೂಡ ನೀಡಲಾಗಿದೆ. ಜೊತೆಗೆ ಪೊಲೀಸ್ ಇಲಾಖೆ ಸಂಚಾರ ನಿಯಮವನ್ನು ಪಾಲಿಸಲು ಕಡ್ಡಾಯ ನಿಯಮವನ್ನು ಸೂಚಿಸಲಾಗಿದೆ, ಇಲ್ಲವಾದಲ್ಲಿ ದಂಡವನ್ನು ಹಾಕಲು ತೀರ್ಮಾನಿಸಲಾಗಿದೆ. ರಥಬೀದಿಯಲ್ಲಿ ಯಾವುದೇ ವಾಹನಗಳನ್ನ ಡಿಸೆಂಬರ್ 29 ರಿಂದ ಸಂಚಾರ ನಿರ್ಬಂಧಿಸಲಾಗಿದೆ. ಇನ್ನು ಛತ್ರಕೇರಿಯ ಒಳಗೆ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ಇನ್ನು ರಥ ಬೀದಿಯ ಒಳಗೆ ಯಾವುದೇ ವಾಹನಗಳನ್ನು ತರದಂತೆ ನಿರ್ಬಂಧಿಸಲಾಗಿದೆ.

ಕಳ್ಳರ ಮೇಲೆ ಪೊಲೀಸ್ ಇಲಾಖೆ!

ಪೊಲೀಸ್ ಇಲಾಖೆ ಕಳ್ಳರ ಮೇಲೆ ಕಣ್ಣಿಟ್ಟಿದ್ದು ಜಾತ್ರೆಯಲ್ಲಿ ಮಾರುವೇಷದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ತೀರ್ಥಹಳ್ಳಿ ಆಯಕಟ್ಟಿನ ಜಾಗಗಳಲ್ಲಿ ಪೊಲೀಸ್ ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಸುಭದ್ರತೆ ವಹಿಸಲಾಗಿದೆ. ಯಾವುದೇ ಗಲಾಟೆ ಘರ್ಷಣೆಗಳಿಗೆ ಅವಕಾಶ ಮಾಡಿಕೊಟ್ಟಲ್ಲಿ ಕಾನೂನು ನಿಯಮಗಳ ಪ್ರಕಾರ ಅವರನ್ನ ಬಂಧಿಸಲು ಪೋಲಿಸ್ ಇಲಾಖೆ ನಿರ್ಧರಿಸಿದೆ. ಜೊತೆಗೆ ಈ ಬಗ್ಗೆ ಯಾವುದೇ ಮಾಹಿತಿಗಳು ಇದ್ದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಪೊಲೀಸ್ ಇಲಾಖೆ ಮನವಿ ಮಾಡಿದೆ.

ಸಿಸಿಟಿವಿ ಕಣ್ಗಾವಲು: ಎಲ್ಲೆಡೆ ಅಲರ್ಟ್

ತೀರ್ಥಹಳ್ಳಿ ಪಟ್ಟಣದ ರಥಬೀದಿಯ ಪ್ರತಿ ಅಂಗಡಿ ಸುತ್ತಮುತ್ತ ಸೇರಿದಂತೆ ಪಟ್ಟಣದ ಬಹುತೇಕ ಕಡೆ ಸಿಸಿಟಿವಿ ಕಣ್ಗಾವಲು ಹಾಕಲಾಗಿದೆ. ಸುಮಾರು ನೂರಾರು ಕ್ಯಾಮರಾಗಳನ್ನು ಅಳವಡಿಸಲಾಗಿದ್ದು. ತೀರ್ಥಹಳ್ಳಿಯ ಪ್ರಸಿದ್ಧ ಕ್ಯಾಮರಾ ಸಂಸ್ಥೆಯಾದ ಅನಿಲ್ ಕುಮಾರ್ ಅವರ ತುಂಗಾ ಕಂಪ್ಯೂಟರ್ ಅನಿಕುಮಾರ್ ಈ ಸೇವೆಯನ್ನು ಮಾಡುತ್ತಿದೆ. ಹೀಗಾಗಿ ಜನರು ಎಚ್ಚರ ವಹಿಸಬೇಕಾಗಿ ಮನವಿ ಮಾಡಲಾಗಿದೆ.

ಜಾತ್ರೆಯ ಎಲ್ಲಾ ಸುದ್ದಿಗಳು ಹಾಗೂ ವಿಡಿಯೋಗಳನ್ನ ನಮ್ಮೂರ್ ಎಕ್ಸ್ ಪ್ರೆಸ್ ಯೂಟ್ಯೂಬ್ ಚಾನಲ್ ನಲ್ಲಿ ನೇರ ಪ್ರಸಾರ ಮಾಡಲಿದೆ.

Categories
ತೀರ್ಥಹಳ್ಳಿ

ರಾಮೇಶ್ವರ ಜಾತ್ರೆಗೆ ಬೆಳಕಿನ ರಂಗು: ತೀರ್ಥಹಳ್ಳಿ ಜಗಮಗ!

ರಾಮೇಶ್ವರ ಜಾತ್ರೆಗೆ ಬೆಳಕಿನ ರಂಗು: ತೀರ್ಥಹಳ್ಳಿ ಜಗಮಗ!
– ಬೆಳಕಿನ ಚಿತ್ತಾರದಲ್ಲಿ ತುಂಗಾ ಹಳೆ ಸೇತುವೆ ಸೊಬಗು
– ದೇವಸ್ಥಾನ, ತುಂಗಾ ತೀರ, ರಾಮ ಮಂಟಪ ಮೆರುಗು
– ಅಂಗಡಿ, ಸರ್ಕಾರಿ ಕಚೇರಿ, ಮುಖ್ಯ ರಸ್ತೆಗೆ ಬೆಳಕಿನ ಅಲಂಕಾರ

ವಿಶೇಷ ವರದಿ: ಉಮೇಶ್
NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡಿನ ವರ್ಷದ ಅಂತ್ಯದ ಜಾತ್ರಾ ಮಹೋತ್ಸವದಲ್ಲಿ ಇಡೀ ತೀರ್ಥಹಳ್ಳಿಯೆ ಬೆಳಕಿನ ರಂಗಲ್ಲಿ ಮಿಂದೆದ್ದಿದೆ.
ರಾಮೇಶ್ವರ ಜಾತ್ರೆಗೆ ಬೆಳಕಿನ ರಂಗು ಕಾಣುತ್ತಿದ್ದೂ ತೀರ್ಥಹಳ್ಳಿ ಜಗಮಗಗೊಂಡಿದೆ. ಬೆಳಕಿನ ಚಿತ್ತಾರದಲ್ಲಿ ತುಂಗಾ ಹಳೆ ಸೇತುವೆ ಸೊಬಗು ಎಲ್ಲರ ಗಮನ ಸೆಳೆಯುತ್ತಿದೆ. ರಾಮೇಶ್ವರ ದೇವಸ್ಥಾನ, ತುಂಗಾ ತೀರ, ರಾಮ ಮಂಟಪ ಮೆರುಗು ಹೆಚ್ಚಿದೆ. ಇದಲ್ಲದೆ ಅಂಗಡಿ, ಸರ್ಕಾರಿ ಕಚೇರಿ, ಮುಖ್ಯ ರಸ್ತೆಗೆ ಬೆಳಕಿನ ಅಲಂಕಾರ ಹೊಸ ಲುಕ್ ಕೊಟ್ಟಿದೆ.

ತೀರ್ಥಹಳ್ಳಿ ಲೈಟ್ಸ್ ಸಂಸ್ಥೆಗಳ ಉತ್ತಮ ಸೇವೆ!
ತೀರ್ಥಹಳ್ಳಿ ಶ್ರೀ ರಾಮೇಶ್ವರ ದೇವಾಲಯ ಸುತ್ತ ಗುರುರಾಜ್ ಸೌಂಡ್ಸ್ & ಲೈಟಿಂಗ್ಸ್ ಶ್ರೀ ರಾಮೇಶ್ವರ ಜಾತ್ರೆಗೆ ಬಣ್ಣ ಬಣ್ಣದ ಬೆಳಕು ಒದಗಿಸುತ್ತಿದ್ದಾರೆ. ರಥ ಮತ್ತು ಹೊಳೆಯ ದಾರಿಯಲ್ಲಿ ಮನು ಸೌಂಡ್ಸ್ ಅವರ ಬೆಳಕಿನ ಹಬ್ಬವನ್ನು ಉಂಟು ಮಾಡಿದ್ದಾರೆ. ರಾಮ ಮಂಟಪವನ್ನು ಎಸ್ ಏ ಎಸ್ ಡೆಕೋರೆಟ್ ಬಾಳೆಬೈಲು ಇವರು ಮಂಟಪ ಸುಂದರಗೊಳಿಸಿದ್ದಾರೆ. ಶ್ರೀ ತೀರ್ಥ ರಾಮೇಶ್ವರ ತೆಪ್ಪೋತ್ಸವ ಎಸ್.ಸಿ.ಎಸ್ ಶ್ರೀ ಚಾಮುಂಡೇಶ್ವರಿ ಸೌಂಡ್ ಅವರು ತೆಪ್ಪೋತ್ಸವ ವೈಭವವನ್ನು ಹೆಚ್ಚಿಸಿದ್ದಾರೆ. ಸೇತುವೆ ಮತ್ತು ಆದಿಯೋಗಿ ಎಂ.ಎಸ್ ಡೆಕೋರೇಟರ್ಸ್ ರಾಮೇಶ್ವರ ಜಾತ್ರೆಯ ಬೆಳಕಿನ ಮೆರಗು ಹೆಚ್ಚಿಸಿದ್ದಾರೆ. ತೀರ್ಥಹಳ್ಳಿ ಪಟ್ಟಣ ರಸ್ತೆಯ ವೈಭವದ ರಂಗು ಜನರ ರೋಮಾಂಚನಗೊಳಿಸುವಲ್ಲಿ ಎಸ್ ಡಿ ಎಸ್ ಬೆಟ್ಟಮಕ್ಕಿ ಅವರು ಬೆಳಕಿನ ಸಂಭ್ರಮ ಮೆರಗುವಂತೆ ಕಾರ್ಯ ನಿರ್ವಹಿಸಿದ್ದಾರೆ. ಇಡೀ ಪಟ್ಟಣ ಬೆಳಕಿನ ಚಿತ್ತಾರದಲ್ಲಿ ಕಾಣುತ್ತಿದೆ.

Categories
ತೀರ್ಥಹಳ್ಳಿ

ರಾಮೇಶ್ವರ ಜಾತ್ರೆಗೆ ಸರ್ವರಿಗೂ ಸ್ವಾಗತಿಸಿದ ಸಮಿತಿ

ರಾಮೇಶ್ವರ ಜಾತ್ರೆಗೆ ಸರ್ವರಿಗೂ ಸ್ವಾಗತಿಸಿದ ಸಮಿತಿ
– ತೀರ್ಥಹಳ್ಳಿ ರಾಮೇಶ್ವರ ದೇವರ ಜಾತ್ರೆಗೆ 95ಕ್ಕೂ ಹೆಚ್ಚು ಜನರ ಸಮಿತಿ
– ಶುರುವಾಗಿದೆ ಜಾತ್ರೆ ವೈಭವ: ನಮ್ಮೂರ್ ಎಕ್ಸ್ ಪ್ರೆಸ್ ನೇರ ಪ್ರಸಾರ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಶ್ರೀ ರಾಮೇಶ್ವರ ಸ್ವಾಮಿಯ ಎಳ್ಳಮಾವಾಸ್ಯೆ ಜಾತ್ರೆ ರಂಗು ಶುರುವಾಗಿದೆ. ಈ ಬಾರಿ ಎಲ್ಲಾ ಪಕ್ಷ, ಎಲ್ಲಾ ವಯೋಮಾನದವರ ತಂಡ ಸಜ್ಜುಗೊಂಡಿದೆ. ಜಾತ್ರೆಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಿದೆ. ಕಾಂಗ್ರೆಸ್-ಬಿಜೆಪಿ -ಜೆಡಿಎಸ್ ಎಲ್ಲಾ ಪಕ್ಷಗಳಿಗೆ ಸಮಾನ ಆದ್ಯತೆ ನೀಡಿ 95 ಜನರನ್ನು ಒಳಗೊಂಡ ಬೃಹತ್ ಜಾತ್ರಾ ಸಮಿತಿ ರಚಿಸಲಾಗಿದೆ. ಸಮಿತಿಯ ಸಂಚಾಲಕರುಗಳಾಗಿ ಸೊಪ್ಪುಗುಡ್ಡೆ ರಾಘವೇಂದ್ರ, ಡಾ.ಟಿ.ಎಲ್.ಸುಂದರೇಶ್ ಸಮಿತಿ ಸಂಚಾಲಕತ್ವ ವಹಿಸಿದ್ದಾರೆ. ಅಧ್ಯಕ್ಷರಾಗಿ ಶಾಸಕರಾದ ಆರಗ ಜ್ಞಾನೇಂದ್ರ, ಗೌರವಾಧ್ಯಕ್ಷರಾಗಿ ಕಿಮ್ಮನೆ ರತ್ನಾಕರ್ (ಮಾಜಿ ಶಿಕ್ಷಣ ಸಚಿವರು), ಡಾ.ಆರ್.ಎಂ ಮಂಜುನಾಥ ಗೌಡ (ಎಂ.ಎ.ಡಿ.ಬಿ. ಮತ್ತು ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರು), ಮಾಜಿ ಸಂಚಾಲಕರಾದ ಲಯನ್ ಪಾಂಡುರಂಗಪ್ಪ ಕೆಲಸ ಮಾಡಲಿದ್ದಾರೆ.

ಸಮಿತಿಯಲ್ಲಿ ಯಾರು ಯಾರು…?

ಸಂಚಾಲಕರು:ರಾಘವೇಂದ್ರ ಸೊಪ್ಪುಗುಡ್ಡೆ, ಡಾ.ಟಿ.ಎಲ್ ಸುಂದರೇಶ್, ಉಪಾಧ್ಯಕ್ಷರು : ರಹಮತ್ ಉಲ್ಲಾ ಅಸಾದಿ, ನವೀನ್ ಹೆದ್ದೂರು ನಾಗರಾಜ್ ಶೆಟ್ಟಿ, ಡಿ.ಎಸ್ ವಿಶ್ವನಾಥ ಶೆಟ್ಟಿ, ಸಿರಿಬೈಲು ಧರ್ಮೇಶ್, ಶಶಿಧರ್ ಹಂದೆ, ಕೆಸ್ತೂರು ಮಂಜುನಾಥ್, ಕುಣಜೆ ಕಿರಣ್, ಮುಡುಬ ರಾಘವೇಂದ್ರ. ಪ್ರಧಾನ ಕಾರ್ಯದರ್ಶಿಗಳು: ನಾಬಳ ಶಚೀಂದ್ರ ಹೆಗ್ಡೆ, ಜಯಪ್ರಕಾಶ್ ಶೆಟ್ಟಿ, ಸಹ ಕಾರ್ಯದರ್ಶಿಗಳು: ಗೀತಾ ರಮೇಶ್, ಸುಶೀಲಾ ಶೆಟ್ಟಿ, ಮಂಜುಳ ನಾಗೇಂದ್ರ, ನಯನ ಜಯಪ್ರಕಾಶ ಶೆಟ್ಟಿ ಖಜಾಂಚಿ: ಜೆ.ಮಂಜುನಾಥ ಶೆಟ್ಟಿ, ವೆಂಕಟೇಶ್ ಪಟವರ್ಧನ್ ಆರ್ಥಿಕ ಸಮಿತಿ ಸಂಚಾಲಕರು: ರಾಘವೇಂದ್ರ ಶೆಟ್ಟಿ ಬಿ.ಆರ್, ಸಂದೇಶ್ ಜವಳಿ, ಆರ್ಥಿಕ ಸಮಿತಿ ಸದಸ್ಯರು: ಸುರಭಿ ಕಿಶೋರ್, ಡಾ.ಎಂ.ಸಿ ಅನಿಲ್, ಗಿರಿಶ್ ಅಂಬಳಿಕೆ, ರಾಮದಾಸ ಪ್ರಭು, ಅಶೋಕ್ ಶೆಟ್ಟಿ, ಶಬ್ಬಮ್, ಚಂದ್ರಶೇಖರ್ ಎನ್, ಆಶ್ಚಲ್ ಗೌಡ, ಶರತ್ ಚಂದನ್ ಬಿ.ಎಲ್, ಹಾಲಿಗೆ ನಾಗರಾಜ – ಜ್ಯೋತಿ ದಿಲಿಪ್ – ಅನುಸೂಯ ಶೆಟ್ಟಿ, ಡಾಕಮ್ಮ, ಶಮಂತ್ ಕುರುವಳ್ಳಿ, ಪವನ್ ಗಾವಂಸ್ಕರ್, ವಾಣಿ ಗಣೇಶ್, ವಿಜಯ ಪದ್ಮನಾಭ್, ಸತೀಶ್ ಬದನೆಹಿತ್ಲು, ಧಾರ್ಮಿಕ ಸಮಿತಿ ಸಂಚಾಲಕರು: ಗುರುದತ್ ಕುರುವಳ್ಳಿ, ಬಿ.ಗಣಪತಿ, ಶ್ರೀನಿವಾಸ್ ಬಾಳೇಬೈಲು. ಧಾರ್ಮಿಕ ಸಮಿತಿ ಸದಸ್ಯರು: ಜ್ಯೋತಿ ಮೋಹನ್, ಡಾ.ಜೀವಂದರ ಜೈನ್ , ಜ್ಯೋತಿ ಗಣೇಶ್, ಸಂಜಯ್ ಎಂ.ಸಿ, ಕಟ್ಟೆಹಕ್ಲು ಕಿರಣ್ , ಅರವಿಂದ ಭಟ್, ಸುಕೇಶ್ ಹೊನ್ನಾನಿ, ಬೆಳ್ಳಯ್ಯ ಕುರುವಳ್ಳಿ, ಮಹಾಬಲ ಹೆಚ್. ಸಿಡಿಮದ್ದು ಸಮಿತಿ ಸಂಚಾಲಕರು:ಪ್ರಶಾಂತ್ ಕುಕ್ಕೆ, ಅಮರನಾಥ ಶೆಟ್ಟಿ, ಪ್ರದೀಪ್ ಪೂಜಾರಿ. ಸಿಡಿಮದ್ದು ಸಮಿತಿ ಸದಸ್ಯರು: ರತ್ನಾಕರ ಶೆಟ್ಟಿ, ನಮ್ರತ್, ಬೆಟ್ಟಮಕ್ಕಿ ಶ್ರೀಕಾಂತ್, ರವೀಶ್ ಬಾಬಿ, ಕೆ.ಬಿ ಪದ್ಮನಾಭ ಕುರುವಳ್ಳಿ, ಕುರುವಳ್ಳಿ ನಾಗರಾಜ್ ಪೂಜಾರಿ, ಪ್ರಮೋದ್ ಪೂಜಾರಿ, ಅನುಪ್ ಉಪಾದ್ಯ, ಮಹಾಂತ ಗೌಡ, ಪ್ರಚಾರ ಸಮಿತಿ ಸಂಚಾಲಕರು: ಅನಿಲ್ ವಿಧಾತ, ಆದರ್ಶ ಹುಂಚದಕಟ್ಟೆ, ಪ್ರಚಾರ ಸಮಿತಿ ಸದಸ್ಯರು: ಶ್ರೀಕಾಂತ್ ನಾಯಕ್, ಗಿರಿಶ್ ಶೆಟ್ಟಿ(ಪ್ರೆಸ್), ತೆಪ್ಪ ಸಮಿತಿ ಸಂಚಾಲಕರು: ಅನಿಲ್.ಟಿ.ಎನ್, ಪೂರ್ಣೇಶ್ ಕೆಳಕೆರೆ,ತೆಪ್ಪ ಸಮಿತಿ ಸದಸ್ಯರು: ಸಂತೋಷ್ ಕುಮಾರ್ ಶೆಟ್ಟಿ, ಗಾಯಿತ್ರಿ ಉಪೇಂದ್ರ, ಬಿ.ಕೆ ವಾದಿರಾಜ ಭಟ್, ದಯಾನಂದ ಸಾಲಿಯಾನ್, ವಾದಿರಾಜ ಶೇಟ್, ರಮೇಶ್ ಶೆಟ್ಟಿ ಕುಡು ಮಲ್ಲಿಗೆ, ಸಂತೋಷ್ ದೇವಾಡಿಗ, ದೇವದಾಸ್ ಎಚ್ ಎಸ್, ಚೇತನ ಟಿಂಬರ್ ಆಹಾರ ಸಮಿತಿ ಸಂಚಾಲಕರು: ಅನ್ನದಾಸೋಹ ಮಿತ್ರವೃಂದ, ನಟರಾಜ ಶೇಟ್, ಹರೀಶ್ ಮಿಲೈರಿ, ಸುಮಂತ್, ರಾಮ ಸಾಣಿಕೆ  ದೀಪಾಲಂಕಾರ ಸಮಿತಿ : ನವೀನ್ ಕುಮಾರ್ ಸಂಚಾಲಕರು, ವಿಕ್ರಂ ಶೆಟ್ಟಿ ಸಂಚಾಲಕರು, ನವೀನ್ ಯತಿರಾಜ್, ರಾಘವೇಂದ್ರ ಶೆಟ್ಟಿ ಬೆಟ್ಟಮಕ್ಕಿ, ಜೈಕರ ಶೆಟ್ಟಿ, ಶ್ರೇಯಸ್ ರಾವ್,ವಿಲಿಯಂ ಮಾರ್ಟಿಸ್, ವಿನುತ್.ಜೆ ಗೌಡ, ಯಶಸ್ವಿ ಕಡ್ತುರು. ಸರ್ವರಿಗೂ ಸಮಿತಿಯ ಎಲ್ಲಾ ಸದಸ್ಯರು ಸ್ವಾಗತಿಸಿದ್ದಾರೆ. ಇಂದು ರಾತ್ರಿಯಿಂದ ಜ. 2ರವರೆಗೆ ಜಾತ್ರೆ ವೈಭವವನ್ನು ನಮ್ಮೂರ್ ಎಕ್ಸ್ ಪ್ರೆಸ್ ಯೂಟ್ಯೂಬ್ ಚಾನಲ್ ಅಲ್ಲಿ ವೀಕ್ಷಿಸಿ. ಹಾಗೆಯೇ ಬೃಹತ್ ಎಲ್. ಇ ಡಿ ಯಲ್ಲಿ ನೇರ ಪ್ರಸಾರ.

Categories
ಜಾತಕ

ಈ ದಿನದ ರಾಶಿ ಫಲ ಹೇಗಿದೆ?

ಈ ದಿನದ ರಾಶಿ ಫಲ ಹೇಗಿದೆ?
– ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಇಂದು ನೀವು ಕೆಲಸದಲ್ಲಿ ಸವಾಲುಗಳನ್ನು ಎದುರಿಸಬೇಕಾಗಬಹುದು, ಆದರೆ ನೀವು ಶೀಘ್ರದಲ್ಲೇ ಎಲ್ಲಾ ಸಮಸ್ಯೆಗಳಿಂದ ಮುಕ್ತರಾಗುತ್ತೀರಿ. ಹಣಕಾಸಿನ ವಿಷಯಗಳಲ್ಲಿ ಹೆಚ್ಚಿನ ತೊಂದರೆ ಇರುವುದಿಲ್ಲ. ನಿಮ್ಮ ಆರೋಗ್ಯವೂ ಇಂದು ಉತ್ತಮವಾಗಿರುತ್ತದೆ. ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಸಮತೋಲನವನ್ನು ರಚಿಸಲು ಪ್ರಯತ್ನಿಸಿ. ನಿಮ್ಮ ಮಾನಸಿಕ ಆರೋಗ್ಯಕ್ಕೆ ಹೆಚ್ಚು ಗಮನ ಕೊಡಿ.

** ವೃಷಭ ರಾಶಿ :
ಇಂದು ನೀವು ಕೆಲಸದಲ್ಲಿ ಸಣ್ಣ ಸವಾಲುಗಳನ್ನು ಎದುರಿಸಬೇಕಾಗಬಹುದು, ಆದರೆ ನಿಮ್ಮ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ ಮತ್ತು ನೀವು ಎಲ್ಲಾ ಕಾರ್ಯಗಳನ್ನು ಗಡುವಿನೊಳಗೆ ಪೂರ್ಣಗೊಳಿಸುತ್ತೀರಿ. ಆದರೆ, ಇಂದು ಐಷಾರಾಮಿ ವಸ್ತುಗಳ ಮೇಲೆ ಹೆಚ್ಚು ಹಣವನ್ನು ಖರ್ಚು ಮಾಡುವುದನ್ನು ತಪ್ಪಿಸಿ ಮತ್ತು ಪ್ರತಿಕೂಲ ಸಂದರ್ಭಗಳಲ್ಲಿ ಹಣವನ್ನು ಉಳಿಸಿ. ಇಂದು ಸಂಬಂಧಗಳಲ್ಲಿನ ಭಿನ್ನಾಭಿಪ್ರಾಯಗಳು ದೂರವಾಗುತ್ತವೆ ಮತ್ತು ನಿಮ್ಮ ಸಂಗಾತಿಯೊಂದಿಗಿನ ಸಂಬಂಧವು ಬಲಗೊಳ್ಳುತ್ತದೆ.

** ಮಿಥುನ ರಾಶಿ :
ಇಂದು ಕೆಲಸವನ್ನು ಬದಲಾಯಿಸಲು ನಿರ್ಧರಿಸಬೇಡಿ. ಭವಿಷ್ಯದಲ್ಲಿ ನೀವು ಉತ್ತಮ ಅವಕಾಶಗಳನ್ನು ಪಡೆಯಬಹುದು. ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಇಂದು ಒಳ್ಳೆಯ ಸುದ್ದಿ ಸಿಗಬಹುದು. ವ್ಯಾಪಾರದಲ್ಲಿ ತೊಡಗಿರುವ ಜನರು ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಬೇಕು, ಇದು ಆರ್ಥಿಕ ಲಾಭವನ್ನು ತರುತ್ತದೆ. ಆಸ್ತಿ ಮತ್ತು ಹೂಡಿಕೆಗೆ ಸಂಬಂಧಿಸಿದ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ.

** ಕರ್ಕಾಟಕ ರಾಶಿ :
ಇಂದು ವೃತ್ತಿಪರ ಜೀವನದಲ್ಲಿ, ನೀವು ಎಲ್ಲಾ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸುವಿರಿ. ಕೆಲಸದಲ್ಲಿ ಯಾವುದೇ ಸವಾಲುಗಳು ಇರುವುದಿಲ್ಲ. ಇಂದು ನೀವು ಆರೋಗ್ಯ ಮತ್ತು ಫಿಟ್ನೆಸ್ ವಿಷಯದಲ್ಲಿ ಅದೃಷ್ಟಶಾಲಿಯಾಗಿ ಉಳಿಯುತ್ತೀರಿ. ಇಂದು ಕೆಲಸದ ಸ್ಥಳದಲ್ಲಿ ಸೃಜನಶೀಲತೆಯಿಂದ ಮಾಡಿದ ಕೆಲಸಗಳು ಯಶಸ್ವಿಯಾಗುತ್ತವೆ. ಕಚೇರಿ ರಾಜಕೀಯದಿಂದ ಅಂತರ ಕಾಯ್ದುಕೊಳ್ಳಿ. ಯಾವುದೇ ವಿವಾದಕ್ಕೆ ಸಿಲುಕಬೇಡಿ. ತಂಡದ ಸದಸ್ಯರೊಂದಿಗೆ ಒಟ್ಟಾಗಿ ಕೆಲಸ ಮಾಡಿ. ಇದರೊಂದಿಗೆ, ನೀವು ಎಲ್ಲಾ ಕಾರ್ಯಗಳಲ್ಲಿ ಸುಲಭವಾಗಿ ಯಶಸ್ಸನ್ನು ಸಾಧಿಸುವಿರಿ.

** ಸಿಂಹ ರಾಶಿ :
ಇಂದು ಯಾವುದೇ ನಿರ್ಧಾರಗಳನ್ನು ತಾಳ್ಮೆ ಮತ್ತು ಶಾಂತ ಮನಸ್ಸಿನಿಂದ ತೆಗೆದುಕೊಳ್ಳಿ. ನಿಮ್ಮ ಕೋಪವನ್ನು ನಿಯಂತ್ರಿಸಿ. ಇದರೊಂದಿಗೆ, ಪ್ರೇಮ ಜೀವನದಲ್ಲಿ ಪ್ರೀತಿ ಮತ್ತು ಪ್ರಣಯವು ಹಾಗೇ ಉಳಿಯುತ್ತದೆ. ನಿಮ್ಮ ಸಂಗಾತಿಯೊಂದಿಗೆ ವಾದ ಮಾಡಬೇಡಿ. ಅನೇಕ ಆದಾಯದ ಮೂಲಗಳಿಂದ ಆರ್ಥಿಕ ಲಾಭವಿದೆ. ಹಿಂದಿನ ಹೂಡಿಕೆಯ ಆದಾಯವೂ ಹೆಚ್ಚಾಗುತ್ತದೆ. ನೀವು ಹೂಡಿಕೆ ಮಾಡಲು ಬಯಸಿದರೆ, ನಂತರ ಚಿಂತನಶೀಲವಾಗಿ ಮತ್ತು ಬಹಳ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಿ.

** ಕನ್ಯಾ ರಾಶಿ :
ಇಂದು ಸಂಬಂಧದ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿ. ಸಂಬಂಧದ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ. ಇದರಿಂದ ಸಂಬಂಧದಲ್ಲಿನ ತಪ್ಪು ತಿಳುವಳಿಕೆ ದೂರವಾಗುತ್ತದೆ. ಕೆಲವರು ಇಂದು ಕೆಲಸ ಬದಲಾಯಿಸಬಹುದು. ಕೆಲವರಿಗೆ ಬಡ್ತಿ ಅಥವಾ ಆದಾಯ ಹೆಚ್ಚಳಕ್ಕೆ ಅವಕಾಶಗಳು ಸಿಗುತ್ತವೆ. ಇಂದು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಕೆಲವು ವಯಸ್ಸಾದವರಿಗೆ ನಿದ್ರಾಹೀನತೆಯ ಸಮಸ್ಯೆ ಇರಬಹುದು. ಮಕ್ಕಳು ಹೊರಗೆ ಆಟವಾಡುವಾಗ ಎಚ್ಚರಿಕೆ ವಹಿಸಬೇಕು.

** ತುಲಾ ರಾಶಿ :
ಇಂದು ನೀವು ನಿಮ್ಮ ಶಕ್ತಿ ಮತ್ತು ಧೈರ್ಯದಿಂದ ಸವಾಲುಗಳನ್ನು ಸುಲಭವಾಗಿ ಜಯಿಸಬಹುದು. ಕಠಿಣ ಪರಿಶ್ರಮ ಮತ್ತು ಸಂಕಲ್ಪದಿಂದ ಮಾಡಿದ ಕೆಲಸ ಯಶಸ್ವಿಯಾಗುತ್ತದೆ. ನಿಮ್ಮ ಮೇಲೆ ನಂಬಿಕೆ ಇಡಿ ಮತ್ತು ಜೀವನದ ಪ್ರತಿಯೊಂದು ಅಂಶದಲ್ಲೂ ಧೈರ್ಯವನ್ನು ಕಾಪಾಡಿಕೊಳ್ಳಿ. ಹಣ ಮತ್ತು ಪ್ರೀತಿಯ ವಿಷಯದಲ್ಲಿ ಅಪಾಯಗಳನ್ನು ತೆಗೆದುಕೊಳ್ಳಲು ಹಿಂಜರಿಯಬೇಡಿ. ಹೊಸ ವಿಷಯಗಳನ್ನು ಅನ್ವೇಷಿಸಿ.

** ವೃಶ್ಚಿಕ ರಾಶಿ :
ಇಂದು ನೀವು ಪ್ರೀತಿಯ ವಿಷಯಗಳಲ್ಲಿ ತುಂಬಾ ಅದೃಷ್ಟಶಾಲಿಯಾಗುತ್ತೀರಿ. ಸಂಬಂಧದಲ್ಲಿ ಪ್ರೀತಿ ಮತ್ತು ಪ್ರಣಯಕ್ಕೆ ಕೊರತೆ ಇರುವುದಿಲ್ಲ. ನಿಮ್ಮ ಭಾವನೆಗಳನ್ನು ನಿಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳಿ ಮತ್ತು ಅವರನ್ನು ಪ್ರಶಂಸಿಸಿ. ಇದರಿಂದ ಸಂಬಂಧಗಳಲ್ಲಿ ಆಪ್ತತೆ ಹೆಚ್ಚುತ್ತದೆ. ಇಂದು ನಿಮ್ಮ ಆರ್ಥಿಕ ಸ್ಥಿತಿಯು ಉತ್ತಮವಾಗಿರುತ್ತದೆ, ಆದರೆ ದೀರ್ಘಾವಧಿಯ ಆರ್ಥಿಕ ಗುರಿಗಳ ಮೇಲೆ ಕೇಂದ್ರೀಕರಿಸಿ. ಕೆಲವರು ತಮ್ಮ ಸಾಲವನ್ನು ಇಂದು ತೀರಿಸಬಹುದು. ನಿಮ್ಮ ಖರ್ಚುಗಳನ್ನು ಉಳಿಸಲು ಮತ್ತು ಆದ್ಯತೆ ನೀಡಲು ಖಚಿತಪಡಿಸಿಕೊಳ್ಳಿ.

** ಧನಸ್ಸು ರಾಶಿ :
ಇಂದು ನೀವು ನಿಮ್ಮ ಅತ್ಯುತ್ತಮ ಕೌಶಲ್ಯದಿಂದ ನಿಮ್ಮ ಎಲ್ಲಾ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸುವಿರಿ. ನಿಮ್ಮ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ಮತ್ತು ನಿಮ್ಮ ಜೀವನ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಳ್ಳಬೇಡಿ. ಇಂದು, ಯಾವುದೇ ಕಾರಣವಿಲ್ಲದೆ ಐಷಾರಾಮಿ ವಸ್ತುಗಳನ್ನು ಖರೀದಿಸುವುದನ್ನು ತಪ್ಪಿಸಿ. ಹೂಡಿಕೆಗೆ ಇದು ಉತ್ತಮ ಸಮಯ, ಆದರೆ ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಚಿಂತನಶೀಲವಾಗಿ ಹೂಡಿಕೆ ಆಯ್ಕೆಗಳನ್ನು ಆರಿಸಿ.

** ಮಕರ ರಾಶಿ :
ಇಂದು ಕೆಲಸದಲ್ಲಿ ಜವಾಬ್ದಾರಿಗಳು ಹೆಚ್ಚಾಗುತ್ತವೆ ಮತ್ತು ಇಂದು ನೀವು ತುಂಬಾ ಕಾರ್ಯನಿರತರಾಗಿರುತ್ತೀರಿ. ಆರೋಗ್ಯ ಮತ್ತು ಆರ್ಥಿಕ ವಿಷಯಗಳಲ್ಲಿ ದಿನವು ಉತ್ತಮವಾಗಿರುತ್ತದೆ. ಇಂದು ವೃತ್ತಿಪರ ಜೀವನದಲ್ಲಿ ಹೆಚ್ಚಿನ ತೊಂದರೆಗಳು ಇರುವುದಿಲ್ಲ. ನಿಮ್ಮ ಕೆಲಸದ ಗುಣಮಟ್ಟವನ್ನು ಕೇಂದ್ರೀಕರಿಸಲು ನಿಮಗೆ ಸಾಧ್ಯವಾಗುತ್ತದೆ. ಕೆಲವು ಕಾರ್ಯಗಳಿಗೆ ಸೃಜನಶೀಲತೆ ಮತ್ತು ಹೊಸ ಆಲೋಚನೆಗಳು ಬೇಕಾಗುತ್ತವೆ. ಹಣಕಾಸಿನ ಪರಿಸ್ಥಿತಿ ಇಂದು ಉತ್ತಮವಾಗಿರುತ್ತದೆ, ಆದರೆ ನಿಮ್ಮ ಖರ್ಚುಗಳನ್ನು ನಿಯಂತ್ರಿಸಿ. ಪ್ರೀತಿಯ ಜೀವನದಲ್ಲಿ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ.

** ಕುಂಭ ರಾಶಿ :
ಇಂದು ಉದ್ಯೋಗದಲ್ಲಿ ಬದಲಾವಣೆಯಾಗುವ ಸಾಧ್ಯತೆಗಳಿವೆ. ನೀವು ಉನ್ನತ ಸ್ಥಾನವನ್ನು ಪಡೆಯಬಹುದು, ಆದರೆ ನೀವು ಕುಟುಂಬದಿಂದ ಬೇರೆ ಸ್ಥಳಕ್ಕೆ ಹೋಗಬೇಕಾಗಬಹುದು. ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಜೀವನ ಜೀವನ ಅಸ್ತವ್ಯಸ್ತವಾಗುತ್ತದೆ.. ನಿಮ್ಮ ಭಾವನೆಗಳನ್ನು ನಿಮ್ಮ ಪ್ರೇಮಿಗೆ ವ್ಯಕ್ತಪಡಿಸಲು ಹಿಂಜರಿಯಬೇಡಿ. ಕೆಲಸದಲ್ಲಿ ಯಶಸ್ಸಿಗೆ ಹೊಸ ಆಲೋಚನೆಗಳು ಮತ್ತು ಸಲಹೆಗಳೊಂದಿಗೆ ಸಭೆ ಸೇರಿಕೊಳ್ಳಿ.

** ಮೀನ ರಾಶಿ :
ಇಂದು ಕೆಲವು ಸಂಬಂಧಗಳು ನೀವು ನಿರೀಕ್ಷಿಸಿದಷ್ಟು ಉತ್ತಮವಾಗಿರುವುದಿಲ್ಲ. ನಿಮ್ಮ ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವಾಗ ನಿಮ್ಮ ಭಾವನೆಗಳನ್ನು ನಿಯಂತ್ರಿಸಿ. ಒಟ್ಟಿಗೆ ಪ್ರಣಯ ಭೋಜನವನ್ನು ಯೋಜಿಸಿ ಅಥವಾ ಎಲ್ಲೋ ಒಟ್ಟಿಗೆ ಹೋಗಿ. ಆಸ್ತಿ ಮತ್ತು ವ್ಯವಹಾರವು ಉತ್ತಮ ಹೂಡಿಕೆ ಆಯ್ಕೆಗಳೆಂದು ಸಾಬೀತುಪಡಿಸಬಹುದು. ವ್ಯಾಪಾರದಲ್ಲಿ ತೊಡಗಿರುವ ಜನರು ತಮ್ಮ ವ್ಯವಹಾರವನ್ನು ವಿಸ್ತರಿಸಲು ಹಣವನ್ನು ಪಡೆಯಬಹುದು.

Categories
ಕರಾವಳಿ

ಪುತ್ತೂರಿನಲ್ಲಿ ಕಂದಕಕ್ಕೆ ಉರುಳಿ ಬಿದ್ದ ಕಾರು: ಸ್ಥಳದಲ್ಲೇ ಮೂವರು ಸಾವು!

ಪುತ್ತೂರಿನಲ್ಲಿ ಕಂದಕಕ್ಕೆ ಉರುಳಿ ಬಿದ್ದ ಕಾರು: ಸ್ಥಳದಲ್ಲೇ ಮೂವರು ಸಾವು!
– ಮಲ್ಪೆ: ಬೋಟಿನಿಂದ ಸಮುದ್ರಕ್ಕೆ ಬಿದ್ದ ಮೀನುಗಾರ ನಾಪತ್ತೆ..!

NAMMUR EXPRESS NEWS
ಪುತ್ತೂರು: ಪುತ್ತೂರು ತಾಲೂಕಿನ ಪರ್ಲಡ್ಕದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸುಳ್ಯದಿಂದ ಪುತ್ತೂರಿಗೆ ತೆರಳುತ್ತಿದ್ದ ಆಲ್ಟೋ ಕಾರು ಕಂದಕಕ್ಕೆ ಉರುಳಿ ಬಿದ್ದಿದೆ. ಪುತ್ತೂರು ಸಂಚಾರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಕಂದಕಕ್ಕೆ ಆಲ್ಟೋ ಕಾರು ಉರುಳಿ ಬಿದ್ದು ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಪರ್ಲಡ್ಕದಲ್ಲಿ ನಸುಕಿನ ಜಾವ 4:15 ರ ಸುಮಾರಿಗೆ ನಡೆದಿದೆ. ಮೃತರನ್ನು ಸುಳ್ಯ ತಾಲೂಕಿನ ಜಟ್ಟಿಪಳ್ಳ ನಿವಾಸಿಗಳಾದ ಅಣ್ಣು ನಾಯ್ಕ್, ಚಿದಾನಂದ, ರಮೇಶ್ ನಾಯ್ಕ್ ಎಂದು ಗುರುತಿಸಲಾಗಿದೆ. ಕಾರು ಸುಳ್ಯದಿಂದ ಪುತ್ತೂರಿನ ಪುಣಚಕ್ಕೆ ತೆರಳುತ್ತಿದ್ದು, ನಸುಕಿನ ಜಾವ 4:15 ರ ಸುಮಾರಿಗೆ ಚಾಲಕ ನಿದ್ದೆ ಮಂಪರಿನಲ್ಲಿದ್ದಾಗ ಕಾರು ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದಿದೆ. ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರಿ ಪೊಲೀಸರು‌ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

– ಮಲ್ಪೆ: ಬೋಟಿನಿಂದ ಸಮುದ್ರಕ್ಕೆ ಬಿದ್ದ ಮೀನುಗಾರ ನಾಪತ್ತೆ.!!

ಮಲ್ಪೆ : ಮಲ್ಪೆ ಮೀನುಗಾರಿಕೆ ಬಂದರಿನಿಂದ ಮೀನುಗಾರಿಕೆ ತೆರಳಿದ್ದ ಮೀನುಗಾರ ಸಮುದ್ರಕ್ಕೆ ಬಿದ್ದು ನಾಪತ್ತೆಯಾದ ಘಟನೆ ನಡೆದಿದೆ. ಅಂಕೋಲಾ ತಾಲೂಕಿನ ಅಣ್ಣಕೃಷ್ಣ ತಿಮ್ಮಪ್ಪ (48) ನಾಪತ್ತೆಯಾದವರು. ಡಿ. 25ರಂದು ಬೆಳಗ್ಗಿನ ಜಾವ ಅರಬ್ಬಿ ಸಮುದ್ರದಲ್ಲಿ 13 ನಾಟಿಕಲ್‌ ಮೈಲು ದೂರದಲ್ಲಿ ಮೀನುಗಾರಿಕೆ ಕೆಲಸ ಮಾಡುತ್ತಿರುವಾಗ ಆಯತಪ್ಪಿ ಬೋಟಿನಿಂದ ನೀರಿಗೆ ಬಿದ್ದು ನಾಪತ್ತೆಯಾಗಿದ್ದರು. ತಕ್ಷಣ ಜತೆಯಲ್ಲಿದ್ದವರು ಹುಡುಕಾಡಿದರೂ ಪತ್ತೆಯಾಗಲಿಲ್ಲ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ತೀರ್ಥಹಳ್ಳಿ

ಜಾತ್ರೆಗೆ ಸಿಂಗಾರಗೊಂಡ ಶ್ರೀ ರಾಮೇಶ್ವರ ದೇವಸ್ಥಾನ!

ಜಾತ್ರೆಗೆ ಸಿಂಗಾರಗೊಂಡ ಶ್ರೀ ರಾಮೇಶ್ವರ ದೇವಸ್ಥಾನ!
– ದೇವಸ್ಥಾನದ ಆವರಣ,ರಥಬೀದಿ ಸೇರಿದಂತೆ ಎಲ್ಲೆಡೆ ಸಂಭ್ರಮ
– ತೀರ್ಥಹಳ್ಳಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ರದ್ದು!

NAMMUR EXPRESS NEWS
ತೀರ್ಥಹಳ್ಳಿ : ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವಸ್ಥಾನ ಎಳ್ಳಾಮಾವಾಸ್ಯೆ ಜಾತ್ರೆಯ ಪ್ರಯುಕ್ತ ಶ್ರೀ ದೇವಸ್ಥಾನ ಸಮುಚ್ಚಯ ಆವರಣ ಸೇರಿದಂತೆ ತೀರ್ಥಹಳ್ಳಿ ಪಟ್ಟಣ ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ. ದೇವಸ್ಥಾನದ ಆವರಣ, ರಥಬೀದಿ ಸೇರಿದಂತೆ ಪಟ್ಟಣ ಸುಣ್ಣಬಣ್ಣ ಮುಂತಾಗಿ ಸಿಂಗಾರಗೊಂಡು ಭಕ್ತರು, ಸಾರ್ವಜನಿಕರು, ಅಂಗಡಿ ಮುಂಗಟ್ಟುಗಳವರೂ ಸೇರಿದಂತೆ ಆಟೋ ಟೋಪಕರಣಗಳವರನ್ನು ಕೈಬೀಸಿ ಕರೆಯುತ್ತಿದೆ. ಈಗಾಗಲೇ ತೀರ್ಥಹಳ್ಳಿ ಪಟ್ಟಣದಲ್ಲಿ ತುಂಗಾ ನದಿ ದಡ, ಸೇತುವೆ ಸೇರಿ ಎಲ್ಲೆಡೆ ಜಾತ್ರೆಯ ಪ್ರಯುಕ್ತ ವಿದ್ಯುತ್ ಅಲಂಕಾರ ಮಾಡಲಾಗಿದೆ.ಜಾಯಿಂಟ್ ವೀಲ್ ಸೇರಿ ಎಲ್ಲಾ ಅಂಗಡಿ ಮುಗ್ಗಟ್ಟುಗಳು ಬಂದಿವೆ. ಜನರ ಓಡಾಟ ಹೆಚ್ಚಾಗಿದೆ. ಹಳ್ಳಿ ಹಳ್ಳಿಯಿಂದ ಜನ ಈ ಬಾರಿಯ ಜಾತ್ರೆಗೆ ಆಗಮಿಸಲಿದ್ದಾರೆ. ಎಳ್ಳಮಾವಾಸ್ಯೆ ಜಾತ್ರೆಯ ಧಾರ್ಮಿಕ ವಿಧಿ ವಿಧಾನ ಆರಂಭ: ದೇವರ ಎಳ್ಳಮಾವಾಸ್ಯೆ ಜಾತ್ರೆಯ ಧಾರ್ಮಿಕ ವಿಧಿ ವಿಧಾನಗಳು ಶುರುವಾಗಿದೆ. ಶನಿವಾರ ರಾಮೇಶ್ವರ ದೇವಸ್ಥಾನದಲ್ಲಿ ಪೂಜೆಗಳು ನಡೆಯುತ್ತಿದೆ. ದೇವಸ್ಥಾನ ಅಲಂಕಾರಗೊಂಡಿದೆ. ಮಾಜಿ ಪ್ರಧಾನಿಗಳ ನಿಧನದಿಂದ ಎರಡು ಸಾಂಸ್ಕೃತಿಕ ಕಾರ್ಯಕ್ರಮ ರದ್ದಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮ ಹೊರತು ಪಡಿಸಿ ಉಳಿದ ಎಲ್ಲಾ ಕಾರ್ಯಕ್ರಮಗಳು ಅತ್ಯಂತ ವೈಭವದಿಂದ ನಡೆಯಲಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಮಾಹಿತಿ ನೀಡಿದ್ದಾರೆ.