Categories
Uncategorized ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ

ತೀರ್ಥಹಳ್ಳಿಯಲ್ಲಿ ವಾಹನಗಳಿಗೆ ಆಯುಧ ಪೂಜೆ!

ತೀರ್ಥಹಳ್ಳಿಯಲ್ಲಿ ವಾಹನಗಳಿಗೆ ಆಯುಧ ಪೂಜೆ!
– ಆಟೋ, ಬಸ್, ಕಾರು ನಿಲ್ದಾಣಗಳಲ್ಲಿ ವಿಶೇಷ ಪೂಜೆ ಮಾಡಿ ಸಂಭ್ರಮ: ಕುರುವಳ್ಳಿಯಲ್ಲಿ ಲಾರಿಗಳಿಗೆ ಅಲಂಕಾರ
– ಲಾರಿ, ಬಸ್ ಅಲಂಕಾರಕ್ಕೆ ಮನ ಸೋತ ಜನ: ಶೋ ರೂನಲ್ಲೂ ಪೂಜೆ

 

NAMMUR EXPRESS NEWS
ತೀರ್ಥಹಳ್ಳಿ ಪಟ್ಟಣದಲ್ಲಿ ಆಯುಧ ಪೂಜೆ ಸಂಭ್ರಮ ಮನೆ ಮಾಡಿದ್ದು, ವಾಹನಗಳಿಗೆ ವಿಶೇಷ ಅಲಂಕಾರ ಮಾಡಿ ಜನ ಸಂಭ್ರಮಿಸಿದರು.
ಆಟೋ, ಬಸ್, ಕಾರು ನಿಲ್ದಾಣಗಳಲ್ಲಿ ವಿಶೇಷ ಪೂಜೆ ಮಾಡಿ ಸಂಭ್ರಮದಲ್ಲಿ ಪಟ್ಟಣದಲ್ಲಿ ಒಂದು ಸುತ್ತು ಹಾಕಲಾಯಿತು. ಕುರುವಳ್ಳಿಯಲ್ಲಿ ಲಾರಿಗಳಿಗೆ ಅಲಂಕಾರ ಮಾಡಲಾಗಿತ್ತು. ಲಾರಿ, ಬಸ್ ಅಲಂಕಾರಕ್ಕೆ ಮನ ಸೋತ ಜನ ಕುತೂಹಲದಿಂದ ನೋಡಿದರು. ಬೈಕ್, ಕಾರು ಶೋ ರೂoನಲ್ಲೂ ಪೂಜೆ ನಡೆಯಿತು.

Categories
dasara ಚಿಕ್ಕಮಗಳೂರು ಮಲ್ನಾಡ್

ಕಾಫಿನಾಡಿನಾದ್ಯಂತ ಆಯುಧ ಪೂಜೆ ಸಂಭ್ರಮ

ಕಾಫಿನಾಡಿನಾದ್ಯಂತ ಆಯುಧ ಪೂಜೆ ಸಂಭ್ರಮ

* ಶೃಂಗೇರಿ, ಹೊರನಾಡು,ಹರಿಹರಪುರ,ಬಾಳೆಹೊನ್ನೂರು ದೇವಾಲಯದಲ್ಲಿ ಪೂಜೆ
* ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಆಯುಧ ಪೂಜೆ

NAMMMUR EXPRESS NEWS
ಚಿಕ್ಕಮಗಳೂರು: ದಸರಾ,ನವರಾತ್ರಿಯ ಒಂಭತ್ತನೇ ದಿನ ಮಹಾನವಿಯಂದು ಇಂದು ಎಲ್ಲೆಡೆ ಆಯುಧ ಪೂಜೆಯ ಸಂಭ್ರಮ ಮನೆ ಮಾಡಿದೆ. ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಸಂಭ್ರಮದ ದಸರಾ,ನವರಾತ್ರಿ ಆಚರಣೆ ನಡೆದಿದ್ದು ಇಂದು ಎಲ್ಲೆಡೆ ಆಯುಧ ಪೂಜೆಯನ್ನು ಭಕ್ತಿ,ಸಡಗರ,ಸಂಭ್ರಮದಿಂದ ನೆರವೇರಿಸಲಾಯಿತು.
ಜಿಲ್ಲೆಯ ವಿಶ್ವಪ್ರಸಿದ್ಧ ದೇವಾಲಯವಾದ ಶೃಂಗೇರಿ ಶ್ರೀಶಾರದಾ ಪೀಠದಲ್ಲಿ ಆಯುಧಪೂಜೆ ನೆರವೇರಿಸಲಾಯಿತು. ಶ್ರೀಮಠದ ಗಜ,ಅಶ್ವ,ಗೋವು,ವಾಹನಗಳಿಗೆಪೂಜೆ ಸಲ್ಲಿಸಿದ ಉಭಯ ಜಗದ್ಗುರುಗಳು ನಂತರ ನಡೆದ ಶತಚಂಡಿಕಾ ಯಾಗದ ಪೂರ್ಣಾಹುತಿಯಲ್ಲಿ ಜಗದ್ಗುರು ಶ್ರೀವಿದುಶೇಖರ ಭಾರತೀ ಮಹಾಸ್ವಾಮಿಗಳು ಪಾಲ್ಗೊಂಡರು.ಇಂದು ತಾಯಿ ಶೃಂಗೇರಿ ಶ್ರೀಶಾರದೆಯು ಸಿಂಹವಾಹನಾಲಂಕಾರದಲ್ಲಿ ಚಾಮುಂಡಿಯಾಗಿ ದರ್ಶನ ನೀಡುತ್ತಿದ್ದಾಳೆ.
ಅಂತೆಯೇ ಹೊರನಾಡು ಶ್ರೀಅನ್ನಪೂರ್ಣೇಶ್ವರಿ ದೇವಾಲಯ ಸೇರಿದಂತೆ ಹರಿಹರ ಪುರ ಶ್ರೀಲಕ್ಷ್ಮೀನೃಸಿಂಹ ದೇವಾಲಯ,ಶಕಟಪುರ ದೇವಾಲಯ ಸೇರಿದಂತೆ ಬಾಳೆಹೊನ್ನೂರು,ಆಲ್ದೂರು,ಚಿಕ್ಕಮಗಳೂರು,ಮೂಡಿಗೆರೆ,ತರೀಕೆರೆ,ಕಡೂರಿನಲ್ಲಿ ಪ್ರತಿಷ್ಠಾಪಿಸಲಾಗಿರುವ ದುರ್ಗಿ ಸನ್ನಿಧಿಯಲ್ಲಿ ವಿಶೇಷ ಪೂಜೆ,ಹೋಮ,ಆಯುಧ ಪೂಜೆ ನೆರವೇರಿಸಲಾಯಿತು.ಈ ಸಂಧರ್ಭದಲ್ಲಿ ಭಕ್ತರೂ ಕೂಡ ಭಕ್ತಿಯಿಂದ ಪಾಲ್ಗೊಂಡರು.

* ಜಿಲ್ಲೆಯಾದ್ಯಂತ ಪೊಲೀಸ್ ಠಾಣೆಗಳಲ್ಲಿ ಸಂಭ್ರಮದ ಆಯುಧ ಪೂಜೆ
ಎಲ್ಲೆಡೆ ಆಯುಧ ಪೂಜೆ ಸಂಭ್ರಮದಿಂದ ನೆರವೇರಿದರೆ,ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಆಯುಧ ಪೂಜೆಯನ್ನು ಪೊಲೀಸ್ ಸಿಬ್ಬಂದಿ ಸಡಗರದಿಂದ ಆಚರಿಸಿದರು. ಠಾಣೆಯನ್ನು ಸುಣ್ಣ ಬಣ್ಣ ಹೊಡೆಸಿ ಅಲಂಕರಿಸಿ,ಹೊಸ ಸಾಂಪ್ರದಾಯಿಕ ಉಡುಗೆ ತೊಟ್ಟು,ತಮ್ಮ ರೈಫಲ್‌ಗಳು,ವಾಹನಗಳಿಗೆ ಪೂಜೆ ಮಾಡಿ ಸಿಹಿಹಂಚಿ ಸಂಭ್ರಮಿಸಿದರು.

Categories
ಉಡುಪಿ ಕರಾವಳಿ ಕಾರ್ಕಳ ಕುಂದಾಪುರ ದಕ್ಷಿಣ ಕನ್ನಡ ಬೆಳ್ತಂಗಡಿ ಮಂಗಳೂರು

ಕರಾವಳಿ ರಸ್ತೆ ಸರಿ ಇಲ್ಲ: ಅಪಘಾತಕ್ಕೆ ದಿನ ನಿತ್ಯ ಬಲಿ!

ಕರಾವಳಿ ರಸ್ತೆ ಸರಿ ಇಲ್ಲ: ಅಪಘಾತಕ್ಕೆ ದಿನ ನಿತ್ಯ ಬಲಿ!

* ಕಾಪು: ರಸ್ತೆ ಅಪಘಾತ; ಬೈಕ್ ಸವಾರ ಸಾವು
* ಬಂಟ್ವಾಳ: ಸಿಸಿ ಕ್ಯಾಮೆರಾದ ಡಿವಿಆರ್ ಸುಟ್ಟು ಹಾಕಿದ ಅಪ್ರಾಪ್ತರು
* ಸುಳ್ಯ: ಹೃದಯಾಘಾತದಿಂದ ಆಟೋ ಚಾಲಕ ಸಾವು
* ಪುತ್ತೂರು: ಆ್ಯಂಬುಲೆನ್ಸ್ ಗೆ ಅಡ್ಡಿಪಡಿಸಿದ ಕಾರು ಚಾಲಕ
* ಕುಂದಾಪುರ: ಹಣ ನೀಡದೆ ಚಿನ್ನಾಭರಣ ಕಳ್ಳತನ
* ಯಲ್ಲಾಪುರ: ಕಾರಿಗೆ ಆಕಸ್ಮಿಕವಾಗಿ ತಗುಲಿದ ಬೆಂಕಿ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕಾಪು: ಬೈಕ್ ಗೆ ವಾಹನವೊಂದು ಬಂದು ಢಿಕ್ಕಿ ಹೊಡೆದು, ಬೈಕ್ ಸವಾರ ಮೃತಪಟ್ಟ ಘಟನೆ ಮಂಗಳವಾರ ಬೆಳಿಗ್ಗೆ ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 66ರ ಬಡಾ ಗ್ರಾಮದ ಬಳಿ ನಡೆದಿದೆ. ವಾಹನ ರಭಸವಾಗಿ ಢಿಕ್ಕಿ ಹೊಡೆದ ಪರಿಣಾಮವಾಗಿ, ಬೈಕ್ ಸವಾರ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು, ಬಳಿಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯನ್ನು ಮಡಂತ್ಯಾರು ಮಾಲಾಡಿ ನಿವಾಸಿ ರಮೇಶ್ ಹೆಗ್ಡೆ ಎನ್ನಲಾಗಿದ್ದು, ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ದಸರಾ ಪ್ರಯುಕ್ತ ಸಂತೆಗೆ ವ್ಯಾಪಾರಕ್ಕೆಂದು ಬಂದಿದ್ದಾಗ ಈ ಘಟನೆ ಸಂಭವಿಸಿದೆ ಎನ್ನುವ ಸಂಗತಿ ತಿಳಿದುಬಂದಿದೆ.

* ಬಂಟ್ವಾಳ: ಸಿಸಿ ಕ್ಯಾಮೆರಾದ ಡಿವಿಆರ್ ಅನ್ನು ಸುಟ್ಟು ಹಾಕಿದ ಅಪ್ರಾಪ್ತರು

ಬಂಟ್ವಾಳ: ಪುಣಚ ಗ್ರಾಮದ ನಿವಾಸಿಯಾದ ಆನಂದ ಗೌಡ ಎನ್ನುವವರು, ತಮ್ಮ ಪತ್ನಿಯ ಹೆಸರಿನಲ್ಲಿ ನಡೆಸುತ್ತಿರುವ ಕಾರ್ಖಾನೆಯ ಇಂಟರ್ ಲಾಕ್ ಘಟಕಕ್ಕೆ ಬಂದ ಇಬ್ಬರು ಅಪ್ರಾಪ್ತ ಬಾಲಕರು, ಅಲ್ಲಿದ್ದ ಸಿಸಿ ಕ್ಯಾಮೆರಾ ಹಾಳು ಮಾಡಿ, ಅದರ ಡಿವಿಆರ್ ಅನ್ನು ಸುಟ್ಟು ಹಾಕಿ, ದೇವರ ಫೋಟೋವನ್ನು ಹಾಳು ಮಾಡಿದ ಘಟನೆ ವಿಟ್ಲದಲ್ಲಿ ನಡೆದಿದೆ. ಡಿವಿಆರ್ ಸುಟ್ಟು ಹೋಗಿದ್ದರೂ, ಮಾಲೀಕರ ಮೊಬೈಲ್ ಗೆ ಸಿಸಿ ಕ್ಯಾಮೆರಾ ಸಂಪರ್ಕ ಅಳವಡಿಕೆ ಆಗಿದ್ದ ಕಾರಣ, ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಸಹಕಾರಿಯಾಯಿತು. ವಿಟ್ಲದ ಪೊಲೀಸರು ಮಾಹಿತಿಯ ಆಧಾರದ ಮೇಲೆ ಆರೋಪಿಗಳನ್ನು ಸೆರೆ ಹಿಡಿದು, ಅವರ ಪೋಷಕರ ಸಮಕ್ಷಮದಲ್ಲಿ ವಿಚಾರಣೆ ನಡೆಸಿದಾಗ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಾಲಾಪರಾಧ ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

* ಸುಳ್ಯ: ಹೃದಯಾಘಾತದಿಂದ ಆಟೋ ಚಾಲಕ ಸಾವು

ಸುಳ್ಯ: ಬೊಳಿಯಮಜಲು ನಿವಾಸಿ ಅನಿಲ್ ಜೈನ್ ಎನ್ನುವವರು ಹೃದಯಾಘಾತದಿಂದ ಮೃತಪಟ್ಟ ಘಟನೆ ಜಟ್ಟಿಪಳ್ಳದಲ್ಲಿ ನಡೆದಿದೆ. ಅನಿಲ್ ಜೈನ್ ಆಟೋ ಚಾಲಕರಾಗಿದ್ದು, ಶಾಸ್ತ್ರಿ ವೃತ್ತದ ಬಳಿ, ಸರದಿಯಲ್ಲಿ ತಮ್ಮ ಆಟೋವನ್ನು ನಿಲ್ಲಿಸಿ, ಬಾಡಿಗೆಗೆ ತೆರಳುತ್ತಿದ್ದರು. ಮತ್ತು ಸ್ನೇಹ ಸಂಗಮ ಆಟೋ ಚಾಲಕರ ಸಂಘದ ಅಧ್ಯಕ್ಷರು ಕೂಡ ಆಗಿದ್ದರು. ಮನೆಯಲ್ಲಿದ್ದ ಸಮಯದಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದ ಅನಿಲ್ ಅವರನ್ನು, ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಸಹ ಯಾವುದೇ ಪ್ರಯೋಜನವಾಗಲಿಲ್ಲ ಎನ್ನುವ ಸಂಗತಿ ತಿಳಿದುಬಂದಿದೆ.

* ಪುತ್ತೂರು: ಆ್ಯಂಬುಲೆನ್ಸ್ ಗೆ ಅಡ್ಡಿಪಡಿಸಿದ ಕಾರು ಚಾಲಕ

ಪುತ್ತೂರು: ಮಗುವನ್ನು ಕರೆದುಕೊಂಡು ಹೋಗುತ್ತಿದ್ದ ಆ್ಯಂಬುಲೆನ್ಸ್ ಗೆ, ಮುಂದಿನಿಂದ ಬರುತ್ತಿದ್ದ ಕಾರಿನ ಚಾಲಕ ಅಡ್ಡಪಡಿಸಿದ ಘಟನೆ ಗುಂಡ್ಯಾ ಬಳಿ ನಡೆದಿದೆ. ಬೆಂಗಳೂರಿನಿಂದ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಮಗುವನ್ನು ಕರೆದೊಯ್ಯಲಾಗುತ್ತಿತ್ತು ಎನ್ನುವ ಸಂಗತಿ ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಆ್ಯಂಬುಲೆನ್ಸ್ ಚಾಲಕ ಹನೀಫ್ ಅವರು ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ, ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದು, 6,000 ರೂಪಾಯಿ ದಂಡ ವಿಧಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕಾರು ಚಾಲಕನ ನಡೆವಳಿಕೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

* ಕುಂದಾಪುರ: ಹಣ ನೀಡದೆ ಚಿನ್ನಾಭರಣ ತೆಗೆದುಕೊಂಡು ಹೋದ ಆರೋಪಿಯ ಬಂಧನ

ಕುಂದಾಪುರ: ಹೊಸಂಗಡಿಯ ಶ್ರೀಕೃಷ್ಣ ಜ್ಯುವೆಲ್ಲರಿ ಎಂಬ ಅಂಗಡಿಯಲ್ಲಿ ಸಂತೋಷ್ ಎನ್ನುವ ವ್ಯಕ್ತಿಯು, ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಕಾರಿನಲ್ಲಿ ಬಂದು ಗಿಫ್ಟ್ ನೀಡಲು ಬೇಕೆಂದು 30,000 ರೂಪಾಯಿ ಮೌಲ್ಯದ ಎರಡು ಚಿನ್ನದ ಉಂಗುರಗಳನ್ನು ಖರೀದಿಸಿದ್ದು, ಹಣವನ್ನು ನೆಟ್ ಮೂಲಕ ಕಳುಹಿಸಿರುವುದಾಗಿ ತೋರಿಸಿ, ಉಂಗುರಗಳನ್ನು ತೆಗೆದುಕೊಂಡು ಹೋಗಿದ್ದ. ಆದರೆ ಅಂಗಡಿಯ ಖಾತೆಗೆ ಸಂತೋಷ್ ಕಳುಹಿಸಿದ ಹಣ ಜಮೆಯಾಗದ ಕಾರಣ, ಅಂಗಡಿಯ ಮಾಲೀಕರು ಸಂತೋಷ್ ಗೆ ಕರೆ ಮಾಡಿ ಕೇಳಿದಾಗ, ಆತ ನಾಳೆ ಕೊಡುವುದಾಗಿ ತಿಳಿಸಿದ್ದ. ಆದರೆ ಇಷ್ಟು ತಿಂಗಳುಗಳು ಕಳೆದರೂ, ಇನ್ನೂ ಮರುಪಾವತಿಸಿಲ್ಲ ಎಂದು ಆಭರಣ ಅಂಗಡಿಯ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಅಮಾಸೆಬೈಲು ಪೊಲೀಸರು ಕಾರ್ಯಾಚರಣೆ ನಡೆಸಿದಾಗ, ತಲೆಮರೆಸಿಕೊಂಡಿದ್ದ ಆರೋಪಿ ಸೆರೆ ಸಿಕ್ಕಿದ್ದು, ಆತನ ಹೆಸರು ಸಂತೋಷ್ ಅಲ್ಲ ಪ್ರವೀಣ್ ಎನ್ನುವುದು ತಿಳಿದುಬಂದಿದೆ. ಆರೋಪಿಯನ್ನು ಕಳೆದೆರಡು ದಿನಗಳ ಹಿಂದೆ ಬಂಧಿಸಿದ್ದು, ಆತನ ಬಳಿಯಿದ್ದ ಕಾರು ಮತ್ತು ಕದ್ದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

* ಯಲ್ಲಾಪುರ: ಕಾರಿಗೆ ಆಕಸ್ಮಿಕವಾಗಿ ತಗುಲಿದ ಬೆಂಕಿ

ಯಲ್ಲಾಪುರ: ಕುಮಟಾ ಕಡೆಗೆ ಸಾಗುತ್ತಿದ್ದ ಕಾರ್ ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಪಕ್ಕ ಢಿಕ್ಕಿ ಹೊಡೆದಿದ್ದು, ಈ ಸಂದರ್ಭದಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ, ಆಕಸ್ಮಿಕವಾಗಿ ಬೆಂಕಿ ತಗುಲಿ, ಕಾರು ಸಂಪೂರ್ಣ ಸುಟ್ಟುಹೋದ ಘಟನೆ ಇಡಗುಂದಿ ಸಮೀಪದ ಶೇಡಿಕೆರೆ ಕ್ರಾಸ್ ಬಳಿ ಮಂಗಳವಾರ ನಡೆದಿದೆ. ಅಗ್ನಿಶಾಮಕ ದಳದವರು ತಕ್ಷಣ ಸ್ಥಳಕ್ಕೆ ಧಾವಿಸಿ, ಬೆಂಕಿಯನ್ನು ನಂದಿಸಿದರೂ, ಕಾರು ಅಷ್ಟೊತ್ತಿಗಾಗಲೇ ಸಂಪೂರ್ಣವಾಗಿ ಸುಟ್ಟು ಹೋಗಿತ್ತು. ಆದರೆ ಕಾರಿನಲ್ಲಿದ್ದವರಿಗೆ ಯಾವುದೇ ರೀತಿಯ ಅಪಾಯ ಸಂಭವಿಸದೆ, ಪ್ರಾಣಪಾಯದಿಂದ ಪಾರಾಗಿದ್ದಾರೆ. ಈ ಅವಘಡದಿಂದ ಕೆಲವು ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಯಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದರು.

Categories
Uncategorized ಚಿಕ್ಕಮಗಳೂರು ದೈವಿಕ ಮಲ್ನಾಡ್

ನಕಲಿ ವೆಬ್‌ಸೈಟ್ ನಿಂದ ಭಕ್ತರಿಗೆ ವಂಚನೆ..!!

ನಕಲಿ ವೆಬ್‌ಸೈಟ್ ನಿಂದ ಭಕ್ತರಿಗೆ ವಂಚನೆ..!!
– ಶೃಂಗೇರಿ, ಹೊರನಾಡಿನ ಹೆಸರಿನಲ್ಲಿ ನಕಲಿ ವೆಬ್‌ಸೈಟ್
– ವಂಚನೆ ಮಾಡಿದ ತೆಲಂಗಾಣ ಮೂಲದ ಇಬ್ಬರು ವ್ಯಕ್ತಿಗಳ ಬಂಧನ

NAMMUR EXPRESS NEWS
ಶಿವಮೊಗ್ಗ : ಶೃಂಗೇರಿ, ಹೊರನಾಡು ಅನ್ನಪೂರ್ಣೇಶ್ವರಿ ಸೇರಿದಂತೆ ಕರ್ನಾಟಕದ ಪ್ರತಿಷ್ಠಿತ ಪೂಜೆಯ ಹೆಸರಿನಲ್ಲಿ ಹಣ ಸಂಗ್ರಹಿಸಿ ವಂಚಿಸುತ್ತಿದ್ದ ತೆಲಂಗಾಣ ಮೂಲದ ಸುದೀಪ್ ಹಾಗೂ ಅನಿಲ್ ಕುಮಾರ್ ಎಂಬವರನ್ನು ಚಿಕ್ಕಮಗಳೂರು ಸೆನ್ ಪೊಲೀಸ್ ಠಾಣೆಯ ಡಿವೈಎಸ್ಪಿ ನೇತೃತ್ವದ ತಂಡ ಬಂಧಿಸಿದೆ. ಹೆಸರಿನಲ್ಲಿ ನಕಲಿ ವೆಬ್‌ಸೈಟ್ ತೆರೆದು ಭಕ್ತರಿಂದ ಕೋಟ್ಯಂತರ ರೂಪಾಯಿ ಹಣ ವಂಚಿಸಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯ, ಶೃಂಗೇರಿ ಮಠ ಸೇರಿದಂತೆ ರಾಜ್ಯದ ಪ್ರಮುಖ ದೇವಾಲಯಗಳ ಪ್ರಸಾದ ಮತ್ತು ವಿಶೇಷ Www.DevaSeva.com ಹೆಸರಿನಲ್ಲಿ ನಕಲಿ ವೆಬ್‌ಸೈಟ್ ತೆರೆದಿದ್ದು, ಅದರ ಮೂಲಕ ದೇಶದ ಮತ್ತು ರಾಜ್ಯದ ಪ್ರತಿಷ್ಠಿತ ದೇವಾಲಯಗಳ ಹೆಸರು ಬಳಸಿ ವಿಶೇಷ ಪೂಜೆ, ಪ್ರಸಾದ, ಸೇವೆಗಳ ಆರೋಪಿಗಳು ಹೆಸರಿನಲ್ಲಿ ಹಣ ಪಡೆದು ಭಕ್ತರನ್ನು ವಂಚಿಸುತ್ತಿದ್ದರು.

ವಂಚನೆ ನಡೆಯುತ್ತಿರುವ ಬಗ್ಗೆ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯಕ್ಕೆ ನಿರಂತರವಾಗಿ ದೂರುಗಳು ಬಂದ ಹಿನ್ನೆಲೆಯಲ್ಲಿ ದೇವಾಲಯದ ಉಪವ್ಯವಸ್ಥಾಪಕ ರಾಘವೇಂದ್ರ ಅವರು ಕಳಸ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಎಸ್‌ಪಿ ವಿಕ್ರಮ್ ಆಯ್ಕೆ ವಿಶೇಷ ತಂಡ ರಚಿಸಿ ಆರೋಪಿಗಳ ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ. ಪೊಲೀಸರು ಪ್ರಕರಣ ಸಂಬಂಧ ತನಿಖೆ ಮುಂದುವರೆಸಿದ್ದು ವಂಚನೆಗೆ ಒಳಗಾದ ಭಕ್ತರು ಮುನ್ನೆಚ್ಚರಿಕೆ. ವಹಿಸುವಂತೆ ಮನವಿ ಮಾಡಿದ್ದಾರೆ. ಭಕ್ತರು ವಿಶೇಷ ಪೂಜೆ, ಪ್ರಸಾದ ಅಥವಾ ಸೇವೆಗಾಗಿ ಆನ್‌ಲೈನ್ ಮೂಲಕ ಹಣ ಪಾವತಿ ಮಾಡುವ ಮೊದಲು ದೇವಾಲಯಗಳ ಅಧಿಕೃತ
ವೆಬ್‌ಸೈಟ್ ಅಥವಾ ದೇವಾಲಯ ನಿರ್ವಹಣಾ ಮಂಡಳಿಯನ್ನು ನೇರವಾಗಿ ಸಂಪರ್ಕಿಸಿ ಮಾಹಿತಿ ಪರಿಶೀಲಿಸುವುದು ಉತ್ತಮ. ಅನಧಿಕೃತ ವೆಬ್‌ಸೈಟ್‌ಗಳಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ ಅಥವಾ ಬ್ಯಾಂಕ್ ವಿವರಗಳನ್ನು ಹಂಚಬೇಡಿ. ಯಾವುದೇ ಸಂಶಯಾಸ್ಪದ ವೆಬ್‌ಸೈಟ್ ಅಥವಾ ವಂಚನೆ ಪ್ರಯತ್ನ ಕಂಡುಬಂದರೆ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಸೈಬರ್ ಕ್ರೈಂಗೆ ದೂರು ನೀಡಿ ಎಂದು ಸೈಬರ್ ಪೊಲೀಸರು ಸಲಹೆ ನೀಡಿದ್ದಾರೆ.

 

Categories
ಚಿಕ್ಕಮಗಳೂರು ತೀರ್ಥಹಳ್ಳಿ ಮಲ್ನಾಡ್ ರಾಜ್ಯ ಶಿವಮೊಗ್ಗ

ಕಾಂತರ -1 ಸಿನಿಮಾದಲ್ಲಿ ಮಲೆನಾಡಿನ ಕಲಾವಿದರು!

ಕಾಂತರ -1 ಸಿನಿಮಾದಲ್ಲಿ ಮಲೆನಾಡಿನ ಕಲಾವಿದರು!
– ಮಲೆನಾಡಿನ ಕೆಲವು ಕಡೆ ಕಾಂತಾರ ಸಿನಿಮಾದ ಶೂಟಿಂಗ್
– ಭದ್ರಾವತಿಯ ಅಜನೀಶ್ ಲೋಕನಾಥ್ ಸಂಗೀತದ ಮೋಡಿ
– ತೀರ್ಥಹಳ್ಳಿಯ ಸಂಸ್ಥೆಯಿಂದ ಕಲಾವಿದರ ಪೂರೈಕೆ
– ತೀರ್ಥಹಳ್ಳಿ, ಕೊಪ್ಪ, ಮಲೆನಾಡ ಅನೇಕ ಚಿತ್ರ ಮಂದಿರದಲ್ಲಿ ಸಿದ್ಧತೆ

 

ವಿಶೇಷ ವರದಿ: ಪ್ರಾಪ್ತಿ ಸಾಗರ
ಸಿನಿಮಾ ಜಗತ್ತಿನಲ್ಲಿ ತನ್ನದೇ ಹೆಸರು ಮಾಡಲು ದಿನಗಣನೆ ಮಾಡುತ್ತಿರುವ ಕಾಂತರ -1 ಸಿನಿಮಾದಲ್ಲಿ ಮಲೆನಾಡಿನ ಸಾವಿರಾರು ಕಲಾವಿದರು ಬಣ್ಣ ಹಚ್ಚಿದ್ದಾರೆ. ಸಿನಿಮಾ ವಿಜಯ ದಶಮಿಯಂದು ವಿಶ್ವದಲ್ಲಿ ತೆರೆ ಕಾಣಲಿದೆ.
ತೀರ್ಥಹಳ್ಳಿ, ಶಿವಮೊಗ್ಗ, ಹೊಸನಗರ, ಸಾಗರ, ಚಿಕ್ಕಮಗಳೂರು, ಕೊಪ್ಪ, ಶೃಂಗೇರಿ ಭಾಗದ ಸುಮಾರು ಸಾವಿರಕ್ಕೂ ಹೆಚ್ಚು ಕಲಾವಿದರು ಜೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದಾರೆ. ದ್ವಿತೀಯ ದರ್ಜೆ ಕಲಾವಿದರಾಗಿ ಬಣ್ಣ ಹಚ್ಚಿದ್ದಾರೆ. ಇನ್ನು ಸಂಭಾಷಣೆ ವಿಭಾಗದಲ್ಲಿ ಸುಮಾರು 13 ಜನ ಕಲಾವಿದರು ಪ್ರಥಮ ದರ್ಜೆ ಕಲಾವಿದರಾಗಿ ಸಿನಿಮಾಕ್ಕೆ ಕೆಲಸ ಮಾಡಿದ್ದು ಕಾಂತಾರ ಸಿನಿಮಾದಲ್ಲಿ ತಮ್ಮ ಪ್ರದರ್ಶನವನ್ನು ಮಾಡಿದ್ದಾರೆ. ಜತೆಗೆ ಸಣ್ಣ ಪುಟ್ಟ ವಿಭಾಗದಲ್ಲಿ ಅನೇಕರು ಕೆಲಸ ಮಾಡಿದ್ದಾರೆ.

 

ಮಲೆನಾಡ ಸಂಗೀತ ಸಾಧಕ ಅಜನೀಶ್ ಲೋಕನಾಥ್ ಸಂಗೀತ

ಭದ್ರಾವತಿ ಮೂಲದ ಅಜನೀಶ್ ಲೋಕನಾಥ್ ಈ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ. ಇವರು ಈಗಾಗಲೇ ಕನ್ನಡ, ತೆಲಗು ಚಿತ್ರರಂಗದ ಬಹು ಬೇಡಿಕೆ ಸಂಗೀತ ನಿರ್ದೇಶಕರು. ರಂಗಿ ತರಂಗ, ಕಿರಿಕ್ ಪಾರ್ಟಿ, ದಿಯಾ, ವಿಕ್ರಂತ್ ರೋಣ ಸೇರಿ ಅನೇಕ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ.

ತೀರ್ಥಹಳ್ಳಿ ಸಂಸ್ಥೆಯಿಂದ ಕಲಾವಿದರ ಪೂರೈಕೆ!

ತೀರ್ಥಹಳ್ಳಿಯ ಕಲಾವಿದ ಹಬೀಬ್ ನೇತೃತ್ವದ ಶೈನ್ ಕಾಸ್ಟಿಂಗ್ ಸರ್ವಿಸ್ ಸಂಸ್ಥೆ ಈ ಸಿನಿಮಾಕ್ಕೆ ಸುಮಾರು 1000 ಕಲಾವಿದರನ್ನು ನೀಡಿದೆ.
ತೀರ್ಥಹಳ್ಳಿಯ ಯುವ ನಟ ಅಪಾಯವಿದೆ ಎಚ್ಚರಿಕೆ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಗಮನ ಸೆಳೆದ ಮಿಥುನ್ ತೀರ್ಥಹಳ್ಳಿ ಕೂಡ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಆರಗ ದಿವಾಕರ್ ಅವರ ಸಂಸ್ಥೆ ಕೂಡ ಕಲಾವಿದರ ಜೋಡಣೆಯಲ್ಲಿ ಕೆಲಸ ಮಾಡಿದ್ದಾರೆ. ನಾಗೇಶ್ ತೀರ್ಥಹಳ್ಳಿ, ರಕ್ಷಿತ್ ಪರಂ ಸ್ಟುಡಿಯೋ ಸೇರಿ ಅನೇಕರು ನಟನೆ ಮಾಡಿದ್ದಾರೆ.

ಮಲೆನಾಡಿನ ಅನೇಕ ಕಡೆ ಶೂಟಿಂಗ್!

ಮಲೆನಾಡಿನ ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಸೇರಿದಂತೆ ಅನೇಕ ಭಾಗಗಳಲ್ಲಿ ಕಾಂತಾರ -1 ಸಿನಿಮಾದ ಶೂಟಿಂಗ್ ಕೂಡ ನಡೆದಿದೆ. ಇನ್ನು ಕರಾವಳಿಯ ಕುಂದಾಪುರ ತಾಲೂಕಿನ ಸಿದ್ದಾಪುರ, ಕೆರಾಡಿ ಭಾಗದಲ್ಲಿ ಸಿನಿಮಾದ ಶೂಟಿಂಗ್ ನಡೆದಿದೆ. ಕಾಂತಾರ ಸಿನಿಮಾದ ಪ್ರಮುಖ ರೂವಾರಿಗಳು ಆಗಿರುವಂತಹ ರಿಷಬ್ ಶೆಟ್ಟಿ ಅವರ ಪತ್ನಿ ತೀರ್ಥಹಳ್ಳಿ ಮೂಲದವರು ಕೂಡ ಆಗಿರುವುದರಿಂದ ಅವರ ಸಿನಿಮಾದ ಬಗ್ಗೆ ಮಲೆನಾಡಿನಲ್ಲಿ ಬಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಶೃಂಗೇರಿ, ಕೊಪ್ಪದ ಅನೇಕರ ನಟನೆ

ಶೃಂಗೇರಿ, ಕೊಪ್ಪ ಭಾಗದ ನಾಗೇಶ್ ಕೊಳೆಗೋಡು, ಗುಡ್ಡೆತೋಟದ ರವಿ, ಕುಮಾರ್, ಕೃಷ್ಣ ಕುಮಾರ್, ಅರಳಿಕಟ್ಟೆ ವಿಜಯ್ ಕುಮಾರ್, ಬಿಳಾಲುಕೊಪ್ಪ ಸುಂದೀದ್ರ, ನಾಗರಾಜ ಪ್ರಭ ಜೊತೆಗೆ ಪ್ರಥಮ ವರ್ಷದ ಪದವಿ ವಿದ್ಯಾಭ್ಯಾಸ ಮಾಡುತ್ತಿರುವ ತ್ರಿಶಾ ಜೈನ್ ಅವರಿಗೆ ನಟನೆ ಮಾಡಿದ್ದಾರೆ.

ಮಲೆನಾಡ ಅನೇಕ ಚಿತ್ರ ಮಂದಿರದಲ್ಲಿ ಬಿಡುಗಡೆ ಸಿದ್ಧತೆ

ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ಹತ್ತಾರು ಚಿತ್ರ ಮಂದಿರ ದಲ್ಲಿ ಸಿನಿಮಾ ತೆರೆ ಕಾಣಲಿದೆ. ತೀರ್ಥಹಳ್ಳಿ ವೆಂಕಟೇಶ್ವರ, ಕೊಪ್ಪ ಜೆಎಂಜೆಯಲ್ಲಿ ಬಿಡುಗಡೆ ಆಗಲಿದೆ. ಕಾಂತರ -1 ನೋಡಲು ಈಗಲೇ ಜನ ಸಿದ್ಧತೆ ನಡೆಸಿದ್ದಾರೆ.

Categories
ಉಡುಪಿ ಕರಾವಳಿ ಚಿಕ್ಕಮಗಳೂರು ತೀರ್ಥಹಳ್ಳಿ ಬೆಂಗಳೂರು ಮಂಗಳೂರು ಮಲ್ನಾಡ್ ರಾಜ್ಯ ಶಿವಮೊಗ್ಗ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಗ್ಯದಲ್ಲಿ ಏರುಪೇರು

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಗ್ಯದಲ್ಲಿ ಏರುಪೇರು

* ಬೆಂಗಳೂರಿನ ಎಂ ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲು
* ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ,ಹಿರಿಯ ವೈದ್ಯರಿಂದ ನಿಗಾ

NAMMMUR EXPRESS NEWS
ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅನಾರೋಗ್ಯಕ್ಕೀಡಾಗಿದ್ದು, ಬೆಂಗಳೂರಿನ ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಖರ್ಗೆ ಅವರು ಸಾಮಾನ್ಯ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯದ ಮೇಲೆ ಹಿರಿಯ ವೈದ್ಯರು ನಿಗಾ ಇರಿಸಿದ್ದಾರೆ. ಖರ್ಗೆ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಮಲ್ಲಿಕಾರ್ಜುನ ಖರ್ಗೆ ಅವರು ಮಂಗಳವಾರ ಎಂದಿನಂತೆಯೇ ರಾಜಕೀಯ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. ಉತ್ತರ ಕರ್ನಾಟಕದಲ್ಲಿ ಉಂಟಾಗಿರುವ ಭಾರಿ ಪ್ರವಾಹ ಮತ್ತು ಬೆಳೆ ಹಾನಿ ಬಗ್ಗೆ ಬೆಂಗಳೂರಿನಲ್ಲಿ ಅವರು ಮಂಗಳವಾರ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ, ಕಲ್ಯಾಣ ಕರ್ನಾಟಕದಲ್ಲಿ ಉಂಟಾಗಿರುವ ಪ್ರವಾಹ ಮತ್ತು ಬೆಳೆ ಹಾನಿಗೆ ಪರಿಹಾರ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ವಿವರವಾದ ಪತ್ರ ಬರೆದು ಮನವಿ ಮಾಡುವುದಾಗಿ ಹೇಳಿದ್ದಾರೆ.
ಮತ್ತೊಂದೆಡೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರವಾಹ ಪರಿಸ್ಥಿತಿಯ ಅವಲೋಕನ ಮಾಡಿದ್ದು, ಸೂಕ್ತ ಪರಿಹಾರದ ಭರವಸೆ ನೀಡಿದ್ದಾರೆ. ಅಲ್ಲದೆ, ಮನೆ ಕಳೆದುಕೊಂಡವರಿಗೆ ಮತ್ತು ಬೆಳೆ ಹಾನಿಯಾದವರಿಗೆ ಏನೇನು ಪರಿಹಾರ ನೀಡಬೇಕು ಎಂಬುದನ್ನು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Categories
ಉಡುಪಿ ಕರಾವಳಿ ಚಿಕ್ಕಮಗಳೂರು ತೀರ್ಥಹಳ್ಳಿ ಬೆಂಗಳೂರು ಮಂಗಳೂರು ಮಲ್ನಾಡ್ ರಾಜ್ಯ ಶಿವಮೊಗ್ಗ

ಕರ್ನಾಟಕದಲ್ಲಿ ಇನ್ನು 15 ದಿನ ಮಳೆ ಬಿಡಲ್ಲ!

ಕರ್ನಾಟಕದಲ್ಲಿ ಇನ್ನು 15 ದಿನ ಮಳೆ ಬಿಡಲ್ಲ!
– ಅಕ್ಟೋಬರ್ 15ರವರೆಗೆ ಮಳೆ, ಹವಾಮಾನ ಇಲಾಖೆ ಸೂಚನೆ
– ರೈತರು, ಅಡಿಕೆ ಬೆಳೆಗಾರರ ಸ್ಥಿತಿ ದೇವರೇ ಬಲ್ಲ..!
– ಈ ಬಾರಿ ವಾಡಿಕೆಗಿಂತ ಅತೀ ಹೆಚ್ಚು ಮಳೆ

NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ವಾಡಿಕೆಯಂತೆ ಸೆಪ್ಟೆಂಬರ್ 30 ಕ್ಕೆ ಅಂತ್ಯಗೊಳ್ಳಬೇಕಿದ್ದ ನೈರುತ್ಯ ಮುಂಗಾರು ಅಕ್ಟೋಬರ್‌ 15ರವರೆಗೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇದೀಗ ಮಳೆ ಜನರಬದುಕಿಗೆ ಭಾರಿ ತೊಂದರೆ ಕೊಡುತ್ತಿದೆ.
ವಾಡಿಕೆ ಪ್ರಕಾರ, ಪ್ರತಿ ವರ್ಷ ಜುಲೈ 1 ರಿಂದ ಸೆಪ್ಟೆಂಬರ್ 30 ರವರೆಗೆ ನೈಋುತ್ಯ ಮಾನ್ಸೂನ್‌ ಮುಂಗಾರು ರಾಜ್ಯದಲ್ಲಿ ಮಳೆ ಸುರಿಸುತ್ತವೆ. ಅ.1ರಿಂದ ವರ್ಷಾಂತ್ಯದವರೆಗೆ ಹಿಂಗಾರು (ಈಶಾನ್ಯ ಮಾನ್ಸೂನ್‌) ಮಾರುತಗಳು ಮಳೆ ಸುರಿಸುತ್ತವೆ. ಆದರೆ, ಗಾಳಿಯ ದಿಕ್ಕಿನ ಮೇರೆಗೆ ಕೆಲವು ಬಾರಿ ನೈಋುತ್ಯ ಮತ್ತು ಈಶಾನ್ಯ ಮಾನ್ಸೂನ್‌ನಲ್ಲಿ ವ್ಯತ್ಯಾಸವಾಗುತ್ತದೆ. ಈ ವರ್ಷ ನೈರುತ್ಯ ಮಾರುತಗಳು ಅ.15 ರವರೆಗೆ ಮುಂದುವರಿಯಲಿವೆ. ಆನಂತರ ರಾಜ್ಯಕ್ಕೆ ಈಶಾನ್ಯ ಮಾರುತಗಳು ಪ್ರವೇಶಿಸಲಿವೆ,” ಎಂದು ಬೆಂಗಳೂರಿನ ಭಾರತೀಯ ಹವಾಮಾನ ಇಲಾಖೆ ಸೂಚನೆ

– ಹಿಂಗಾರು ಮಳೆ ಆರಂಭ ಯಾವಾಗ?

”ಈ ವರ್ಷ ಅಕ್ಟೋಬರ್‌ 2ನೇ ವಾರದ ಬಳಿಕ ಹಿಂಗಾರು ಮಳೆ ಆಗಮಿಸಲಿದ್ದು, ಸಾಮಾನ್ಯವಾಗಿರುವ ನಿರೀಕ್ಷೆಯಿದೆ. ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿವೆ. ಆದರೆ, ಉತ್ತರ ಒಳನಾಡಿನ ಕರ್ನಾಟಕ ಮತ್ತು ಕರಾವಳಿ ಕರ್ನಾಟಕದಲ್ಲಿ ಮಳೆಯಾಗುವುದಿಲ್ಲ,” ಈ ವರ್ಷದ ವಾಡಿಕೆಗಿಂತ ಮೊದಲೇ ನೈರುತ್ಯ ಮಾನ್ಸೂನ್‌ ಆಗಮನವಾಯಿತು. ಮಾನ್ಸೂನ್‌ ಋುತುವಿನಲ್ಲಿ ರಾಜ್ಯದಲ್ಲಿ ಜೂನ್‌ 1 ರಿಂದ ಸೆಪ್ಟೆಂಬರ್‌ 29 ರವರೆಗೆ ಸಾಮಾನ್ಯವಾಗಿ 845 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, 879 ಮಿ.ಮೀ. ಮಳೆಯಾಗಿದೆ. ರಾಜ್ಯದಲ್ಲಿ ವಾರ್ಷಿಕ ವಾಡಿಕೆ ಮಳೆಯ ಪ್ರಮಾಣ 964 ಮಿ.ಮೀ., ಆಗಿದ್ದು ಸದ್ಯ 1166 ಮಿ.ಮೀ. ಮಳೆಯಾಗಿದೆ.

Categories
Uncategorized ಕರಾವಳಿ ಜ್ಯೋತಿಷ್ಯ ತೀರ್ಥಹಳ್ಳಿ ದಿನ ರಾಶಿ ಭವಿಷ್ಯ ಬೆಂಗಳೂರು ಮಲ್ನಾಡ್ ರಾಜ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ವಿನಾಯಕನ ಕೃಪೆಯಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಇಂದು ಮೇಷ ರಾಶಿಯವರಿಗೆ ನೀವು ಉದ್ಯೋಗ ಮತ್ತು ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತೀರಿ. ನಿಮ್ಮ ಆಪ್ತ ಸ್ನೇಹಿತರಿಗೆ ಆರ್ಥಿಕವಾಗಿ ಸಹಾಯ ಮಾಡಬೇಕಾಗಬಹುದು. ಉದ್ಯೋಗವನ್ನು ಹುಡುಕುತ್ತಿರುವ ಜನರು ಒಳ್ಳೆಯ ಸುದ್ದಿ ಪಡೆಯಬಹುದು. ಜೀವನದಲ್ಲಿ ಅನೇಕ ಪ್ರಮುಖ ಬದಲಾವಣೆಗಳಾಗುತ್ತವೆ.

** ವೃಷಭ ರಾಶಿ :
ಇಂದು ಕೆಲಸದಲ್ಲಿ ಹೆಚ್ಚುವರಿ ಜವಾಬ್ದಾರಿಗಳಿಗೆ ಸಿದ್ಧರಾಗಿರಿ. ನಿಮ್ಮ ಸಂಗಾತಿಯ ಬಗ್ಗೆ ಪ್ರಾಮಾಣಿಕವಾಗಿರಿ. ಇಂದು ನೀವು ಶೈಕ್ಷಣಿಕ ಕೆಲಸದಲ್ಲಿ ಆಸಕ್ತಿ ಹೊಂದಿರುತ್ತೀರಿ ಮತ್ತು ನಿಮ್ಮ ಎಲ್ಲಾ ಕೆಲಸಗಳಲ್ಲಿ ಅಪಾರ ಯಶಸ್ಸನ್ನು ಪಡೆಯುತ್ತೀರಿ. ಮಕ್ಕಳ ಕಡೆಯಿಂದ ಒಳ್ಳೆಯ ಸುದ್ದಿಯನ್ನು ಪಡೆಯಬಹುದು. ಹಣಕಾಸಿನ ವಿಷಯಗಳಲ್ಲಿ ನೀವು ಅದೃಷ್ಟಶಾಲಿಯಾಗುತ್ತೀರಿ.

** ಮಿಥುನ ರಾಶಿ :
ಇಂದು ಕೆಲಸದ ಸಂಬಂಧದಲ್ಲಿ ಪ್ರಯಾಣಿಸುವ ಸಾಧ್ಯತೆಗಳಿವೆ. ಶೈಕ್ಷಣಿಕ ಕಾರ್ಯದಲ್ಲಿ ಅಡಚಣೆ ಉಂಟಾಗಲಿದೆ. ಕೆಲಸದ ಸ್ಥಳದಲ್ಲಿ ಸವಾಲುಗಳು ಉಳಿಯುತ್ತವೆ. ನಿಮ್ಮ ಗುರಿಗಳನ್ನು ಸಾಧಿಸಲು ಹೊಸ ಯೋಜನೆಯನ್ನು ಮಾಡಿ. ನಿಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸಲು ಪ್ರಯತ್ನಿಸಿ. ವ್ಯವಹಾರಕ್ಕೆ ಸಂಬಂಧಿಸಿದ ನಿರ್ಧಾರಗಳು ಲಾಭದಾಯಕವೆಂದು ಸಾಬೀತುಪಡಿಸುತ್ತದೆ.

** ಕರ್ಕಾಟಕ ರಾಶಿ :
ಇಂದು ಹಣದ ವ್ಯವಹಾರಗಳನ್ನು ತಪ್ಪಿಸಿ. ಸಂಬಂಧಗಳಲ್ಲಿ ಅಂತರ ಹೆಚ್ಚಾಗಲಿದೆ. ನಿಮ್ಮ ಸಂಗಾತಿಯೊಂದಿಗೆ ಅನಗತ್ಯ ವಾದಗಳನ್ನು ತಪ್ಪಿಸಿ. ಮನೆಯಲ್ಲಿ ಶುಭ ಕಾರ್ಯಗಳನ್ನು ಆಯೋಜಿಸಬಹುದು. ಕಚೇರಿಯಲ್ಲಿ ಹೊಸ ಯೋಜನೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಹಿಂಜರಿಯದಿರಿ. ಆದಾಗ್ಯೂ, ನಿಮ್ಮ ದಿನಚರಿಯಿಂದ ವಿರಾಮ ತೆಗೆದುಕೊಳ್ಳಿ ಮತ್ತು ಸ್ವಯಂ-ಆರೈಕೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ.

** ಸಿಂಹ ರಾಶಿ :
ಇಂದು ಸಿಂಹ ರಾಶಿಯ ಉದ್ಯೋಗಸ್ಥರು ಕೆಲಸದಲ್ಲಿ ಸವಾಲುಗಳನ್ನು ಎದುರಿಸಬೇಕಾಗಬಹುದು. ಆದಾಯ ಹೆಚ್ಚಳದ ಹೊಸ ದಾರಿಗಳು ಸುಗಮವಾಗಲಿವೆ. ಹೊಸ ವ್ಯವಹಾರವನ್ನು ಪ್ರಾರಂಭಿಸಲು ದಿನವು ಶುಭವಾಗಿರುತ್ತದೆ. ಪಾಲುದಾರರೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಸಾಧ್ಯ. ಆದ್ದರಿಂದ ಅನಗತ್ಯ ಚರ್ಚೆಗಳನ್ನು ತಪ್ಪಿಸಿ.

** ಕನ್ಯಾ ರಾಶಿ :
ಇಂದು ಕೆಲವರು ಕೆಲಸದ ನಿಮಿತ್ತ ಪ್ರಯಾಣ ಮಾಡಬೇಕಾಗಬಹುದು. ಯಾವುದೇ ಅಪರಿಚಿತರಿಗೆ ಸಾಲ ನೀಡುವುದನ್ನು ತಪ್ಪಿಸಿ. ಕುಟುಂಬದೊಂದಿಗೆ ಸಮಯ ಕಳೆಯಿರಿ. ನಕಾರಾತ್ಮಕತೆಯಿಂದ ದೂರವಿರಿ ಮತ್ತು ನಿಮ್ಮ ಆರೋಗ್ಯದ ಕಡೆಗೆ ಗಮನ ಕೊಡಿ. ಹಣಕಾಸಿನ ವಿಷಯಗಳಲ್ಲಿ ಬಹಳ ಜಾಗರೂಕರಾಗಿರಿ. ಪಾಲುದಾರಿಕೆ ವ್ಯವಹಾರದಲ್ಲಿ ಆರ್ಥಿಕ ನಷ್ಟ ಉಂಟಾಗಬಹುದು.

** ತುಲಾ ರಾಶಿ :
ಇಂದು ಕೆಲಸದ ಸ್ಥಳದಲ್ಲಿ ವಾದಗಳನ್ನು ತಪ್ಪಿಸಿ. ಕುಟುಂಬದ ಸದಸ್ಯರ ಆರೋಗ್ಯದ ಕಡೆ ಗಮನ ಕೊಡಿ. ನಿಮ್ಮ ಸಂಗಾತಿಯ ಮಾತುಗಳನ್ನು ನಿರ್ಲಕ್ಷಿಸಬೇಡಿ ಮತ್ತು ಅವರ ಬಗ್ಗೆ ಕಾಳಜಿ ವಹಿಸಿ. ವೃತ್ತಿಪರ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳಿ. ಜೀವನದಲ್ಲಿ ಹೊಸ ಸವಾಲುಗಳಿಗೆ ಸಿದ್ಧರಾಗಿರಿ. ಹಣಕಾಸಿನ ವಿಷಯಗಳಲ್ಲಿ ನೀವು ಕೆಲವು ತೊಂದರೆಗಳನ್ನು ಎದುರಿಸಬೇಕಾಗಬಹುದು.

** ವೃಶ್ಚಿಕ ರಾಶಿ :
ಇಂದು ವೃತ್ತಿ ಜೀವನದಲ್ಲಿ ಸಣ್ಣಪುಟ್ಟ ಸಮಸ್ಯೆಗಳಿದ್ದರೂ ಎಲ್ಲಾ ಕೆಲಸಗಳು ಯಶಸ್ವಿಯಾಗುತ್ತವೆ. ಕೆಲವು ಜನರು ವೈದ್ಯಕೀಯ ತುರ್ತುಸ್ಥಿತಿಯಿಂದಾಗಿ ಹಣವನ್ನು ಖರ್ಚು ಮಾಡಬೇಕಾಗಬಹುದು. ಕೆಲಸದ ನಿಮಿತ್ತ ವಿದೇಶ ಪ್ರಯಾಣ ಮಾಡುವ ಅವಕಾಶವಿರುತ್ತದೆ. ಕುಟುಂಬ ಜೀವನವು ಸಂತೋಷದಿಂದ ಕೂಡಿರುತ್ತದೆ, ಆದರೆ ನಿಮ್ಮ ಸಂಗಾತಿಯೊಂದಿಗೆ ತೊಂದರೆಗೆ ಸಿಲುಕಬೇಡಿ. ನಿಮ್ಮ ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಿರಿ.

** ಧನಸ್ಸು ರಾಶಿ :
ಧನು ರಾಶಿಯವರಿಗೆ ಇಂದು ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ, ಆದರೆ ಹಣದ ವಿಷಯದಲ್ಲಿ ಕುಟುಂಬ ಅಥವಾ ಸಂಬಂಧಿಕರೊಂದಿಗೆ ವಿವಾದಗಳು ಉಂಟಾಗಬಹುದು. ನಿಮ್ಮ ಕೋಪವನ್ನು ನಿಯಂತ್ರಿಸಿ. ಸ್ವಯಂ ನಿಯಂತ್ರಣದಿಂದಿರಿ ಮತ್ತು ಹಣಕಾಸಿನ ವಿಷಯಗಳಲ್ಲಿ ಬಹಳ ಬುದ್ಧಿವಂತಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ.

** ಮಕರ ರಾಶಿ :
ಇಂದು ಉದ್ಯೋಗವನ್ನು ಹುಡುಕುತ್ತಿರುವ ಜನರು ಒಳ್ಳೆಯ ಸುದ್ದಿ ಪಡೆಯಬಹುದು. ಕೌಟುಂಬಿಕ ಜೀವನದಲ್ಲಿ ಸಂತೋಷದ ವಾತಾವರಣ ಇರುತ್ತದೆ. ದಿನವು ತುಂಬಾ ಮಂಗಳಕರವಾಗಿರುತ್ತದೆ. ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ನಿಮ್ಮ ಕೆಲಸದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಆದಾಗ್ಯೂ, ನೀವು ಕೆಲಸಕ್ಕಾಗಿ ಇದ್ದಕ್ಕಿದ್ದಂತೆ ಪ್ರಯಾಣಿಸಬೇಕಾಗಬಹುದು.

** ಕುಂಭ ರಾಶಿ :
ಇಂದು ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದ ಕಡೆ ಗಮನ ಕೊಡಿ. ಒತ್ತಡವನ್ನು ತಪ್ಪಿಸಿ. ಎಲ್ಲಾ ಕಾರ್ಯಗಳಲ್ಲಿ ನೀವು ಬಯಸಿದ ಫಲಿತಾಂಶಗಳನ್ನು ಪಡೆಯುತ್ತೀರಿ. ಕಾನೂನು ವಿಷಯಗಳಲ್ಲಿ ನೀವು ಜಯಗಳಿಸುವಿರಿ. ವ್ಯವಹಾರದಲ್ಲಿ ಯಾರನ್ನೂ ಕುರುಡಾಗಿ ನಂಬಬೇಡಿ. ಆರ್ಥಿಕ ನಷ್ಟ ಉಂಟಾಗಬಹುದು.

** ಮೀನ ರಾಶಿ :
ಇಂದು ನಿಮ್ಮ ಆರೋಗ್ಯದ ಬಗ್ಗೆ ಸ್ವಲ್ಪವೂ ಅಜಾಗರೂಕರಾಗಿರಬೇಡಿ. ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಗಮನ ಕೊಡಿ. ಇಂದು, ಕುಟುಂಬ ಮತ್ತು ಸ್ನೇಹಿತರ ಬೆಂಬಲದಿಂದ ಕೆಲಸದ ಅಡೆತಡೆಗಳು ನಿವಾರಣೆಯಾಗುತ್ತವೆ. ನಿಮಗೆ ಒಳ್ಳೆಯ ದಿನ ಇರುತ್ತದೆ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ನಿಮ್ಮ ವೃತ್ತಿಯಲ್ಲಿ ಹೊಸ ಸಾಧನೆಗಳನ್ನು ಮಾಡಲಾಗುವುದು.