Categories
ಚಿಕ್ಕಮಗಳೂರು ತೀರ್ಥಹಳ್ಳಿ ಮಲ್ನಾಡ್ ರಾಜ್ಯ ಶಿವಮೊಗ್ಗ

ಕಾಂತರ -1 ಸಿನಿಮಾದಲ್ಲಿ ಮಲೆನಾಡಿನ ಕಲಾವಿದರು!

ಕಾಂತರ -1 ಸಿನಿಮಾದಲ್ಲಿ ಮಲೆನಾಡಿನ ಕಲಾವಿದರು!
– ಮಲೆನಾಡಿನ ಕೆಲವು ಕಡೆ ಕಾಂತಾರ ಸಿನಿಮಾದ ಶೂಟಿಂಗ್
– ಭದ್ರಾವತಿಯ ಅಜನೀಶ್ ಲೋಕನಾಥ್ ಸಂಗೀತದ ಮೋಡಿ
– ತೀರ್ಥಹಳ್ಳಿಯ ಸಂಸ್ಥೆಯಿಂದ ಕಲಾವಿದರ ಪೂರೈಕೆ
– ತೀರ್ಥಹಳ್ಳಿ, ಕೊಪ್ಪ, ಮಲೆನಾಡ ಅನೇಕ ಚಿತ್ರ ಮಂದಿರದಲ್ಲಿ ಸಿದ್ಧತೆ

 

ವಿಶೇಷ ವರದಿ: ಪ್ರಾಪ್ತಿ ಸಾಗರ
ಸಿನಿಮಾ ಜಗತ್ತಿನಲ್ಲಿ ತನ್ನದೇ ಹೆಸರು ಮಾಡಲು ದಿನಗಣನೆ ಮಾಡುತ್ತಿರುವ ಕಾಂತರ -1 ಸಿನಿಮಾದಲ್ಲಿ ಮಲೆನಾಡಿನ ಸಾವಿರಾರು ಕಲಾವಿದರು ಬಣ್ಣ ಹಚ್ಚಿದ್ದಾರೆ. ಸಿನಿಮಾ ವಿಜಯ ದಶಮಿಯಂದು ವಿಶ್ವದಲ್ಲಿ ತೆರೆ ಕಾಣಲಿದೆ.
ತೀರ್ಥಹಳ್ಳಿ, ಶಿವಮೊಗ್ಗ, ಹೊಸನಗರ, ಸಾಗರ, ಚಿಕ್ಕಮಗಳೂರು, ಕೊಪ್ಪ, ಶೃಂಗೇರಿ ಭಾಗದ ಸುಮಾರು ಸಾವಿರಕ್ಕೂ ಹೆಚ್ಚು ಕಲಾವಿದರು ಜೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದಾರೆ. ದ್ವಿತೀಯ ದರ್ಜೆ ಕಲಾವಿದರಾಗಿ ಬಣ್ಣ ಹಚ್ಚಿದ್ದಾರೆ. ಇನ್ನು ಸಂಭಾಷಣೆ ವಿಭಾಗದಲ್ಲಿ ಸುಮಾರು 13 ಜನ ಕಲಾವಿದರು ಪ್ರಥಮ ದರ್ಜೆ ಕಲಾವಿದರಾಗಿ ಸಿನಿಮಾಕ್ಕೆ ಕೆಲಸ ಮಾಡಿದ್ದು ಕಾಂತಾರ ಸಿನಿಮಾದಲ್ಲಿ ತಮ್ಮ ಪ್ರದರ್ಶನವನ್ನು ಮಾಡಿದ್ದಾರೆ. ಜತೆಗೆ ಸಣ್ಣ ಪುಟ್ಟ ವಿಭಾಗದಲ್ಲಿ ಅನೇಕರು ಕೆಲಸ ಮಾಡಿದ್ದಾರೆ.

 

ಮಲೆನಾಡ ಸಂಗೀತ ಸಾಧಕ ಅಜನೀಶ್ ಲೋಕನಾಥ್ ಸಂಗೀತ

ಭದ್ರಾವತಿ ಮೂಲದ ಅಜನೀಶ್ ಲೋಕನಾಥ್ ಈ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ. ಇವರು ಈಗಾಗಲೇ ಕನ್ನಡ, ತೆಲಗು ಚಿತ್ರರಂಗದ ಬಹು ಬೇಡಿಕೆ ಸಂಗೀತ ನಿರ್ದೇಶಕರು. ರಂಗಿ ತರಂಗ, ಕಿರಿಕ್ ಪಾರ್ಟಿ, ದಿಯಾ, ವಿಕ್ರಂತ್ ರೋಣ ಸೇರಿ ಅನೇಕ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ.

ತೀರ್ಥಹಳ್ಳಿ ಸಂಸ್ಥೆಯಿಂದ ಕಲಾವಿದರ ಪೂರೈಕೆ!

ತೀರ್ಥಹಳ್ಳಿಯ ಕಲಾವಿದ ಹಬೀಬ್ ನೇತೃತ್ವದ ಶೈನ್ ಕಾಸ್ಟಿಂಗ್ ಸರ್ವಿಸ್ ಸಂಸ್ಥೆ ಈ ಸಿನಿಮಾಕ್ಕೆ ಸುಮಾರು 1000 ಕಲಾವಿದರನ್ನು ನೀಡಿದೆ.
ತೀರ್ಥಹಳ್ಳಿಯ ಯುವ ನಟ ಅಪಾಯವಿದೆ ಎಚ್ಚರಿಕೆ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಗಮನ ಸೆಳೆದ ಮಿಥುನ್ ತೀರ್ಥಹಳ್ಳಿ ಕೂಡ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಆರಗ ದಿವಾಕರ್ ಅವರ ಸಂಸ್ಥೆ ಕೂಡ ಕಲಾವಿದರ ಜೋಡಣೆಯಲ್ಲಿ ಕೆಲಸ ಮಾಡಿದ್ದಾರೆ. ನಾಗೇಶ್ ತೀರ್ಥಹಳ್ಳಿ, ರಕ್ಷಿತ್ ಪರಂ ಸ್ಟುಡಿಯೋ ಸೇರಿ ಅನೇಕರು ನಟನೆ ಮಾಡಿದ್ದಾರೆ.

ಮಲೆನಾಡಿನ ಅನೇಕ ಕಡೆ ಶೂಟಿಂಗ್!

ಮಲೆನಾಡಿನ ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಸೇರಿದಂತೆ ಅನೇಕ ಭಾಗಗಳಲ್ಲಿ ಕಾಂತಾರ -1 ಸಿನಿಮಾದ ಶೂಟಿಂಗ್ ಕೂಡ ನಡೆದಿದೆ. ಇನ್ನು ಕರಾವಳಿಯ ಕುಂದಾಪುರ ತಾಲೂಕಿನ ಸಿದ್ದಾಪುರ, ಕೆರಾಡಿ ಭಾಗದಲ್ಲಿ ಸಿನಿಮಾದ ಶೂಟಿಂಗ್ ನಡೆದಿದೆ. ಕಾಂತಾರ ಸಿನಿಮಾದ ಪ್ರಮುಖ ರೂವಾರಿಗಳು ಆಗಿರುವಂತಹ ರಿಷಬ್ ಶೆಟ್ಟಿ ಅವರ ಪತ್ನಿ ತೀರ್ಥಹಳ್ಳಿ ಮೂಲದವರು ಕೂಡ ಆಗಿರುವುದರಿಂದ ಅವರ ಸಿನಿಮಾದ ಬಗ್ಗೆ ಮಲೆನಾಡಿನಲ್ಲಿ ಬಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಶೃಂಗೇರಿ, ಕೊಪ್ಪದ ಅನೇಕರ ನಟನೆ

ಶೃಂಗೇರಿ, ಕೊಪ್ಪ ಭಾಗದ ನಾಗೇಶ್ ಕೊಳೆಗೋಡು, ಗುಡ್ಡೆತೋಟದ ರವಿ, ಕುಮಾರ್, ಕೃಷ್ಣ ಕುಮಾರ್, ಅರಳಿಕಟ್ಟೆ ವಿಜಯ್ ಕುಮಾರ್, ಬಿಳಾಲುಕೊಪ್ಪ ಸುಂದೀದ್ರ, ನಾಗರಾಜ ಪ್ರಭ ಜೊತೆಗೆ ಪ್ರಥಮ ವರ್ಷದ ಪದವಿ ವಿದ್ಯಾಭ್ಯಾಸ ಮಾಡುತ್ತಿರುವ ತ್ರಿಶಾ ಜೈನ್ ಅವರಿಗೆ ನಟನೆ ಮಾಡಿದ್ದಾರೆ.

ಮಲೆನಾಡ ಅನೇಕ ಚಿತ್ರ ಮಂದಿರದಲ್ಲಿ ಬಿಡುಗಡೆ ಸಿದ್ಧತೆ

ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ಹತ್ತಾರು ಚಿತ್ರ ಮಂದಿರ ದಲ್ಲಿ ಸಿನಿಮಾ ತೆರೆ ಕಾಣಲಿದೆ. ತೀರ್ಥಹಳ್ಳಿ ವೆಂಕಟೇಶ್ವರ, ಕೊಪ್ಪ ಜೆಎಂಜೆಯಲ್ಲಿ ಬಿಡುಗಡೆ ಆಗಲಿದೆ. ಕಾಂತರ -1 ನೋಡಲು ಈಗಲೇ ಜನ ಸಿದ್ಧತೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.