ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಗುರು ರಾಯರ ಕೃಪೆಯಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?
NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?
** ಮೇಷ ರಾಶಿ :
ಹೊಸ ಯೋಚನೆಗಳು ಸಾಕಾರವಾಗದಿದ್ದರೂ ಉತ್ಸಾಹವಿರಲಿದೆ. ಹಳೆಯದನ್ನು ಮರೆತು ಹೊಸ ಹಾದಿಯತ್ತ ಹೆಜ್ಜೆ ಹಾಕುವ ಮನಸ್ಸಾದೀತು. ತೆಗೆದುಕೊಳ್ಳುವ ನಿರ್ಣಯವು ಪೂರ್ಣ ಬೆಂಬಲದಿಂದ ಕೂಡಿರದು. ನಕಾರಾತ್ಮಕ ಆಲೋಚನೆಗಳು ನಿಮ್ಮ ಮನಸ್ಸನ್ನು ಕೆಡಿಸುವುದು. ಅಸಾಧ್ಯವಾದುದನ್ನು ಸಾಧಿಸುವ ಭ್ರಮೆಯಿಂದ ಹೊರಬನ್ನಿ. ಅಹಂಕಾರ ಸುಳಿಯುವ ಸಾಧ್ಯತೆ ಇದೆ. ಸಂಗಾತಿಯ ಜೊತೆ ಹೆಚ್ಚು ಸಮಯವನ್ನು ಕಳೆದರೂ ಮನಸ್ಸಿಗೆ ನೆಮ್ಮದಿ ಸಿಗದು. ಯಾವುದನ್ನಾದರೂ ಸಂತೋಷದಿಂದ ಸ್ವೀಕರಿಸುವ ಮನೋಭಾವವಿರಲಿ
** ವೃಷಭ ರಾಶಿ :
ಅಲೆಮಾರಿಗಳಂತೆ ನಿಮಗೆ ನಿಮ್ಮ ಬಗ್ಗೆ ಅನಿಸುವುದು. ದ್ವೇಷವನ್ನು ಸಾಧಿಸಲು ನಿಮಗೆ ಇಂದು ಸರಿಯಾದ ಕಾರಣ ಸಿಗಬಹುದು. ಮಾತಿನಿಂದ ಯಾರಾದರೂ ನಿಮ್ಮನ್ನು ಕಟ್ಟಿಹಾಕಬಹುದು. ಅನುಭವವು ಸುಳ್ಳಾದಂತೆ ಕಾಣಿಸುವುದು. ಕೃತಜ್ಞತೆಯನ್ನು ಬೆಳೆಸಿಕೊಳ್ಳುವುದು ನಿಮ್ಮ ವ್ಯಕ್ತಿತ್ವವನ್ನು ಬದಲಿಸಬಹುದು. ಪ್ರೇಮದಲ್ಲಿ ಹಿನ್ನಡೆಯಾಗಲಿದೆ. ತಾಳ್ಮೆಯಿಂದ ಮುಖ್ಯ ಆಯುಧವಾಗಿರಲಿ. ವಿದೇಶದ ಕನಸು ಸದ್ಯ ಸಾಕಾರವಾಗದು.
** ಮಿಥುನ ರಾಶಿ :
ತಪ್ಪುಗಳನ್ನು ಹೇಳಿದರೆ ಸಹಿಸಲಾಗದು. ಸಿಟ್ಟುಗೊಳ್ಳಲೂಬಹುದು. ದೈಹಿಕ ದೌರ್ಬಲ್ಯವನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳಿ. ನಿಮಗೆ ತಿಳಿದ ವಿಚಾರದ ಬಗ್ಗೆ ಹುಡುಕಾಟ ನಡೆಸುವಿರಿ. ವಿದ್ಯಾರ್ಥಿಗಳು ಸಂಶೋಧನೆಯತ್ತ ಗಮನವನ್ನು ಕೊಡುವರು. ಸಂಗಾತಿಯ ಆರೋಗ್ಯದ ಬಗ್ಗೆ ಚಿಂತೆ ಇರುವುದು. ವಿದ್ಯಾರ್ಥಿಗಳು ಅನಾರೋಗ್ಯದಿಂದ ವಿಶ್ರಾಂತಿ ಪಡೆಯಬೇಕಾಗಬಹುದು. ಅಧಿಕಾರಕ್ಕಾಗಿ ಯಾರನ್ನೂ ವಂಚಿಸಬಹುದು. ಸರಿಯಾದ ಹಂಚಿಕೊಂಡು ಕೆಲಸವನ್ನು ಮಾಡುವುದು ಸೂಕ್ತ. ಕಛೇರಿಯ ಕೆಲಸವನ್ನು ಮನೆಗೂ ತಂದುಕೊಳ್ಳುವಿರಿ.
** ಕರ್ಕಾಟಕ ರಾಶಿ :
ಕಹಿಯ ಅನುಭವವನ್ನು ಸಿಹಿಯಾಗಿಸುವ ಜಾಣ್ಮೆ ತಿಳಿದಿರಲಿ. ಇಂದು ಪಾಲುದಾರಿಕೆಯಿಂದ ಉತ್ತಮ ಆದಾಯವನ್ನು ಪಡೆಯಬಹುದು. ನಿಮ್ಮನ್ನು ಯಾವುದೋ ಕಾರಣಕ್ಕೆ ಹೊಗಳಬಹುದು. ಉದ್ವೇಗದಲ್ಲಿ ನೀವು ಏನನ್ನಾದರೂ ಹೇಳಬಹುದು. ಅವಶ್ಯಕತೆ ಇರುವವರಿಗೆ ಬೇಕಾದ ಸಹಾಯವನ್ನು ಮಾಡಿ. ಇಂದಿನ ಕೆಲವು ಮಾತುಗಳು ನಿಮಗೆ ಇಷ್ಟವಾಗದೇ ಹೋಗುವುದು. ಕೆಲವು ವಿಚಾರದಲ್ಲಿ ನೀವು ಆತುರರಾಗುವಿರಿ. ಮನೆಯ ಖರೀದಿಯ ಬಗ್ಗೆ ಉತ್ಸಾಹ ತೋರುವಿರಿ.
** ಸಿಂಹ ರಾಶಿ :
ನಿಮ್ಮ ಮಾತು ಇಂದಿನ ಸಂಭ್ರಮವನ್ನು ಹಾಳುಮಾಡೀತು. ಇಂದು ಕೆಲವು ಸಂದರ್ಭದಲ್ಲಿ ಉಕ್ಕಿಬರುವ ಸಿಟ್ಟನ್ನು ನಿಯಂತ್ರಿಸುವ ಕಲೆಯನ್ನು ತಿಳಿದುಕೊಳ್ಳಿ. ನಿಮ್ಮ ಸಿದ್ಧಾಂತಕ್ಕೂ ಪ್ರಯೋಗಕ್ಕೂ ಸಾಮ್ಯತೆ ಬರದು. ಉದ್ಯೋಗದಲ್ಲಿ ಬದಲಾವಣೆಯನ್ನು ನೀವು ನಿರೀಕ್ಷಿಸುತ್ತ ಇರುವಿರಿ. ಊಹಿಸದೇ ಇರುವ ಕಡೆಯಿಂದ ನಿಮಗೆ ಬೇಕು ಎನಿಸಿದ ಸಂಪತ್ತು ದೊರೆಯುವುದು. ಸರ್ಕಾರೀ ಮೂಲದ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ಇದು ನಿಮಗೆ ಇಂದಿನ ಅಚ್ಚರಿಯ ವಿಚಾರವೇ ಆಗಲಿದೆ. ಉದ್ಯೋಗದಲ್ಲಿ ಹೆಚ್ಚುಗಾರಿಕೆ ಇರುವುದು.
** ಕನ್ಯಾ ರಾಶಿ :
ಇಂದು ಸಂಗಾತಿಯಿಂದ ಹೊಸ ಚಿಂತೆ ಹುಟ್ಟಿಕೊಳ್ಳುವುದು. ಎಷ್ಟೋ ದಿನಗಳ ಹಿಂದಿನ ಮನದ ಆಸೆಗಳನ್ನು ನೆರವೇರಿಸಿಕೊಳ್ಳುವಿರಿ. ಇಂದು ಸ್ವಂತ ಕಾರ್ಯಗಳಿಗೆ ಸಮಯವನ್ನು ಹೊಂದಿಸಿಕೊಳ್ಳುವುದು ಕಷ್ಟವಾಗುವುದು. ಮುಖವನ್ನು ಗಂಟು ಹಾಕಿಕೊಂಡು ಇರುವುದು ನಿಮ್ಮಿಂದ ಜನರನ್ನು ದೂರವಿರಿಸುವುದು. ಅತಿಯಾದ ಆಡಂಬರವು ನಿಮಗೆ ಇಷ್ಟವಾಗದು. ಬೇಡವೆನಿಸಿದವರನ್ನು ನಿಧಾನವಾಗಿ ಗೊತ್ತಾಗದಂತೆ ಪಕ್ಕಕ್ಕೆ ಸರಿಸುವಿರಿ. ನಿಮ್ಮಲ್ಲಿರುವ ಅಲ್ಪ ಹಣವನ್ನು ಸೇರಿಸಿ ಕೊಡಬೇಕಾದವರಿಗೆ ಹಣವನ್ನು ಕೊಡುವಿರಿ.
** ತುಲಾ ರಾಶಿ :
ನಿಮಗೆ ವಹಿಸುವ ಹೆಚ್ಚವರಿ ಕೆಲಸವನ್ನು ಭಾರವೆಂದು ಬಿಡುವಿರಿ. ಇದರಿಂದ ನಿಮ್ಮ ಆದಾಯಕ್ಕೆ ಹಿನ್ನಡೆ. ಇಂದು ನೀವು ವ್ಯಾಪಾರರಕ್ಕೆ ಹಾಕಿದ ಬಂಡವಾಳಕ್ಕೆ ಮೋಸವಾಗದು. ಸಹೋದ್ಯೋಗಿಗಳು ಹಿರಿಯ ಅಧಿಕಾರಿಗಳ ಮುಂದೆ ನಿಮ್ಮನ್ನು ಪ್ರಶಂಸಿಸಬಹುದು. ಇಂದು ನೀವು ತೋರಿಕೆಗೆ ಬಹಳ ಶಾಂತರಂತೆ ಕಂಡರೂ ಒಳಗೇ ಜ್ವಾಲಗ್ನಿಯಂತೆ ಕುದಿಯುವಿರಿ. ಎಲ್ಲ ವಿಚಾರದಲ್ಲಿಯೂ ಅಸಮಾಧನವು ಇರಲಿದೆ. ಪರರ ಅವಕಾಶವನ್ನು ನೋಡಿ ಮನಸ್ಸಿನಲ್ಲಿ ಸಂಕಟ.
** ವೃಶ್ಚಿಕ ರಾಶಿ :
ಕಾನೂನಾತ್ಮಕ ಸಲಹೆಯನ್ನು ಪಡೆದು ಆಸ್ತಿಯ ಖರೀದಿಗೆ ಮುಂದಾಗಿ. ಇದರಿಂದ ಇಂದು ಉದ್ಯಮದಲ್ಲಿ ಬರುವ ಸವಾಲುಗಳನ್ನು ಸುಲಭವಾಗಿ ಗೆಲ್ಲುವಿರಿ. ತಂದೆಗೆ ಬೇಕಾದ ಹಣವನ್ನು ನೀವು ಕೊಟ್ಟು ಮುನ್ನಡೆಸುವಿರಿ. ಮೇಲಿಂದ ಮೇಲೆ ಬೀಳುವ ಪೆಟ್ಟಿನಿಂದ ಮನಸ್ಸು ದುರ್ಬಲವಾಗಬಹುದು. ನಿಮ್ಮ ಕಾರ್ಯಕ್ಷಮತೆ ಕಡಿಮೆಯಾದಂತೆ ತೋರುವುದು. ಯಾವ ಹೊಸತನ್ನೂ ಸ್ವೀಕರಿಸುವ ಮಾನಸಿಕತೆ ಇಂದು ಇರದು. ಎಲ್ಲ ವಿಚಾರಕ್ಕೂ ನಿಮ್ಮ ಮೌನಮುದ್ರೆಯು ಒತ್ತಿರುವುದು
** ಧನಸ್ಸು ರಾಶಿ :
ಸರಕಿನ ಆಮದು ಸಂದರ್ಭದಲ್ಲಿ ವಂಚನೆ ತಿಳಿಯುವುದು. ಅಪವಾದ ನಿಮಗೆ ಬರಬಹುದು. ವಿಚಲಿತ ಮನಃಸ್ಥಿತಿಯಿಂದ ಗೆಲ್ಲಲು ಸಾಧ್ಯವಾಗದು. ಇಂದು ನಿಮ್ಮ ಉದ್ಯೋಗದಲ್ಲಿ ಹೊಸ ನಿರೀಕ್ಷೆಯು ಇರಲಿದೆ. ದುಡುಕಿನಿಂದ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಬಹುದು. ಉದ್ಯಮಕ್ಕೆ ಸಂಬಂಧಿಸಿದ ಸರಿಯಾದ ನಿರ್ಧಾರವನ್ನು ಯಾರಿಂದಲಾದರೂ ಪಡಡಸುಕೊಳ್ಳಿ. ನಿಮ್ಮ ಚಾಂಚಲ್ಯದ ಸ್ಥಿತಿಗೆ ಸಿಟ್ಟಾಗಬಹುದು.
** ಮಕರ ರಾಶಿ :
ಕಾಯುತ್ತಿರುವ ಅವಕಾಶ ನಿಮ್ಮ ಪಾಲಿಗೆ ಸಿಗಲಿದೆ. ಉದ್ಯೋಗದಲ್ಲಿ ಸವಾಲಿನ ಕೆಲಸ ಕಾರ್ಯಗಳು ದೊರೆತರೂ ಸಾಧಿಸಬಲ್ಲಿರಿ. ಸಮಯೋಚಿತ ಸಲಹೆಯಿಂದ ಬರುವ ತೊಂದರೆಯು ದೂರಾಗುವುದು. ಪಾಲುದಾರಿಕೆಯಲ್ಲಿ ಕಲಹವಾಗುವ ಸಾಧ್ಯತೆ ಇದೆ. ಪತ್ರವ್ಯವಹಾರವು ಸಂಪೂರ್ಣ ಪ್ರಾಮಾಣಿಕವಾಗಿ ಇರದು ಎಂಬುದು ಗಮನದಲ್ಲಿ ಇರಲಿ. ನಿಮ್ಮ ಉದ್ಯೋಗವನ್ನು ನೀವು ಪ್ರೀತಿಸುವಿರಿ.
** ಕುಂಭ ರಾಶಿ :
ನಿಮ್ಮ ಅನುಪಸ್ಥಿಯು ಕಛೇರಿಗೆ ಗೊತ್ತಾಗಲಿದ್ದು, ದೂರವಾಣಿ ಕರೆಗಳನ್ನು ಅಧಿಕವಾಗಿ ಸ್ವೀಕರಿಸಬೇಕಾಗುವುದು. ಕುಟುಂಬದಲ್ಲಿ ನೀರಸ ವಾತಾವರಣವಿದ್ದು, ವ್ಯಾಪಾರ ವ್ಯವಹಾರಗಳ ಆದಾಯದಲ್ಲಿ ಯಾವುದೇ ವ್ಯತ್ಯಾಸ ಕಂಡುಬರುವುದಿಲ್ಲ. ಬಂಧುಗಳಿಂದ ನೀವು ದೂರವಾಗುವಿರಿ. ಸದಾ ಅನ್ಯರ ಬಗ್ಗೆ ಆಲೋಚನೆ ಮಾಡುವುದನ್ನು ಬಿಡಿ. ನೆರೆ ಹೊರೆಯವರ ವಿಚಾರದಲ್ಲಿ ಸಣ್ಣ ಅಸಮಾಧಾನ ಇರಲಿದೆ. ದೇಹಕ್ಕೆ ತೊಂದರೆ ಮಾಡಿಕೊಳ್ಳುವ ಸನ್ನಿವೇಶವಿರಲಿದೆ. ಮನೆಯ ಬದಲಾವಣೆಯನ್ನು ಮಾಡುವಿರಿ.
** ಮೀನ ರಾಶಿ :
ನೀವು ಯಾರ ಬಳಿ ಕಾರ್ಯ ಮಾಡಿಸುವುದಿದ್ದರೂ ಮೊದಲು ಅವರನ್ನು ವಶಪಡಿಸಿಕೊಳ್ಳುವ ಅಗತ್ಯತೆ ಇದೆ. ತಾಳ್ಮೆ ಮತ್ತು ಸಂಯಮದಿಂದ ಇರುವ ಕಾರಣ ಕುಟುಂಬವನ್ನೂ ಕಛೇರಿಯನ್ನೂ ನೆಮ್ಮದಿಯಿಂದ ಮುನ್ನಡೆಸಲು ಸಾಧ್ಯ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ತೊಂದರೆ ಆಗಲಿದ್ದು ಮನಸ್ಸು ಪ್ರೇಮದ ಕಾರಣಕ್ಕೆ ವಿಚಲಿತವಾಗಬಹುದು. ಮಿತ್ರರು ನಿಮಗೆ ಸಹಕಾರ ನೀಡಲಾರರು. ಸಾಲ ಮಾಡುವ ಸಂದರ್ಭವನ್ನು ತಂದುಕೊಳ್ಳುವುದು ಬೇಡ. ವಿದ್ಯಾರ್ಥಿಗಳ ಕ್ರಿಯಾಶೀಲ ವ್ಯಕ್ತಿತ್ವದಿಂದ ಎಲ್ಲರ ಗಮನವನ್ನು ಸೆಳೆಯುವರು.