ಧರ್ಮಸ್ಥಳ ಬುರುಡೆ ಪ್ರಕರಣ ಬಿ ಗ್ಯಾಂಗ್‌ಗೆ ಎಸ್‌ಐಟಿ ಶಾಕ್
* ತಿಮರೋಡಿ ಮನೆಯಲ್ಲಿ ತೀವ್ರ ಶೋಧ ನಡೆಸುತ್ತಿರುವ ಎಸ್‌ಐಟಿ
* ಮಹೇಶ್ ಶೆಟ್ಟಿ ತಿಮರೋಡಿ,ಗಿರೀಶ್ ಮಟ್ಟಣ್ಣ,ಸಮೀರ್ ಎಂ ಡಿಗೆ ಬಂಧನ ಭೀತಿ
NAMMMUR EXPRESS NEWS
ಬೆಳ್ತಂಗಡಿ: ಧರ್ಮಸ್ಥಳ ಬುರುಡೆ ಪ್ರಕರಣಲ್ಲಿ ಸುಳ್ಳು ಹೆಣೆದಿದ್ದಾರೆ ಎಂಬ ಆರೋಪದ ಮೇಲೆ ಎಸ್‌ಐಟಿ ತನಿಖೆ ನಡೆಸುತ್ತಿದ್ದು, ಇಂದು ಬೆಳಗ್ಗೆ ಬೆಳ್ತಂಗಡಿಯ ಉಜಿರೆಯಲ್ಲಿರುವ ಮಹೇಶ್ ಶೆಟ್ಟಿ ತಿಮರೋಡಿ ನಿವಾಸಕ್ಕೆ ಎಸ್‌ಐಟಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ದೂರುದಾರನಾಗಿದ್ದ ಆರೋಪಿ ಚಿನ್ನಯ್ಯನಿಗೆ ಆಶ್ರಯ ಕೊಟ್ಟ ಹಿನ್ನೆಲೆ ದಾಳಿ ನಡೆಸಿದ್ದು,ಈ ವೇಳೆ ಚಿನ್ನಯ್ಯನ ಮೊಬೈಲ್ ಪತ್ತೆ ಆಗಿದೆ.
ಮಹೇಶ್ ಶೆಟ್ಟಿ ತಿಮರೋಡಿ ಮನೆಯ ಶೋಧಕ್ಕೆ ಸರ್ಚ್ ವಾರಂಟ್ ಪಡೆದ ಎಸ್ ಐ ಟಿ, ಆರೋಪಿ ಚಿನ್ನಯ್ಯನನ್ನು ಕರೆದುಕೊಂಡು ತಿಮರೋಡಿ ಮನೆಗೆ ಮಹಜರು ನಡೆಸಿ ತೀವ್ರ ಶೋಧ ನಡೆಸಿತು.
ಮಹೇಶ್ ತಿಮರೋಡಿ ಹಾಗೂ ಆವರ ಸಹೋದರ ಮೋಹನ್ ಕುಮಾರ್ ಶೆಟ್ಟಿ ಮನೆಯಲ್ಲಿ ಕೂಡಾ ಎಸ್ ಐಟಿ ತನಿಖೆ ನಡೆಸುತ್ತಿದೆ. ಜಿತೇಂದ್ರ ದಯಾಮ ಸೇರಿದಂತೆ ಹಲವು ಅಧಿಕಾರಿಗಳ ತಂಡ ಕೆಲಸ ಮಾಡುತ್ತಿದೆ. ಚಿನ್ನಯ್ಯ ತನ್ನ 25 ವಿಡಿಯೋಗಳನ್ನು ಮಾಡಲಾಗಿದೆ. ಈಗಾಗಲೆ 3 ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದೆ ಇನ್ನೂ 22 ವಿಡಿಯೋ ಮಹೇಶ್ ಶೆಟ್ಟಿ ತಂಡದ ಬಳಿ ಇದೆ ಎಂದು ವಿಚಾರಣೆ ವೇಳೆ ಹೇಳಿದ್ದ ಹಾಗೂ ತನ್ನ ಮೊಬೈಲ್‌ನ್ನು ಬುರುಡೆಯನ್ನು ಪೊಲೀಸರೆದುರು ತಂದ ದಿನದಂದೇ ತಿಮರೋಡಿ ಕಸಿದು ಇಟ್ಟುಕೊಂಡಿದ್ದಾರೆ ಎಂದಿದ್ದ, ಆದ್ದರಿಂದ ಚಿನ್ನಯ್ಯನ ಮೊಬೈಲ್‌ಗಾಗಿ ತಿಮರೋಡಿ ಮನೆಯಲ್ಲಿ ಶೋಧ ನಡೆದಿದ್ದು, ಆತನ ಬಳಸುತ್ತಿದ್ದ ಮೊಬೈಲ್ ಸಿಕ್ಕಿದೆ ಎನ್ನಲಾಗಿದೆ, ತಿಮರೋಡಿ ಮನೆಯಲ್ಲಿ ಚಿನ್ನಯ್ಯನಿಗೆ ಆಶ್ರಯ ನೀಡಿದ ಶಂಕೆ ಇದ್ದು, ಈತ ಇದೇ ಮನೆಯಿಂದ ಹಲವು ಯೂಟ್ಯೂಬ್ ಚಾನೆಲ್ ಗಳಿಗೆ ಸಂದರ್ಶನ ನೀಡಿದ್ದ. ಮಹೇಶ್ ಶೆಟ್ಟಿ ಮನೆ ಹಾಗೂ ಪಕ್ಕದಲ್ಲೇ ಇರುವ ಮಹೇಶ್ ಶೆಟ್ಟಿ ಸಹೋದರನ ಮನೆಯ ಸಿಸಿಟಿವಿ ಫೋಟೇಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇತ್ತೀಚೆಗಷ್ಟೆ ಬಿಜೆಪಿ ನಾಯಕ ಬಿಎಲ್ ಸಂತೋಷ್ ವಿರುದ್ಧ ಮಹೇಶ್ ಶೆಟ್ಟಿ ತಿಮರೋಡಿ ಕೊಟ್ಟ ಅವಹೇಳನಕಾರಿ ಹೇಳಿಕೆಯ ಹಿನ್ನೆಲೆ ಉಡುಪಿ ಬ್ರಹ್ಮಾವರ ಪೊಲೀಸರಿಂದ ಬಂಧನಕ್ಕೊಳಗಾಗಿ ಜಾಮೀನು ಪಡೆದು ಹೊರಗೆ ಬಂದಿದ್ದರು. ಇದೀಗ ಧರ್ಮಸ್ಥಳ ಬುರುಡೆ ಪ್ರಕರಣ ಮುಳುವಾಗುವ ಸಾಧ್ಯತೆಯಿದೆ. ಎಸ್‌ಐಟಿ ತಂಡ ದಾಳಿ ಹಾಗೂ ಪರಿಶೀಲನೆ ವೇಳೆ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಇರಲಿಲ್ಲ ಮನೆಯಲ್ಲಿ ಕೇವಲ ತಿಮರೋಡಿ ಪತ್ನಿ ಹಾಗೂ ಬೆಂಬಲಿಗರು ಮಾತ್ರ ಇದ್ದರು ಎಂದು ಮಾಹಿತಿ ಲಭ್ಯವಾಗಿದೆ. ಧರ್ಮಸ್ಥಳ ಬುರುಡೆ ಕೇಸ್ ಉಲ್ಟಾ ಹೊಡೆಯುತ್ತಿದ್ದಂತೆ ಪ್ರಕರಣದ ಹಿಂದಿನ ಬಿ ಗ್ಯಾಂಗ್‌ನ ಪ್ರಮುಖರಾದ ಮಹೇಶ್ ಶೆಟ್ಟಿ ತಿಮರೋಡಿ,ಗಿರೀಶ್ ಮಟ್ಟಣ್ಣ,ಯ್ಯೂಟ್ಯೂಬರ್ ಸಮೀರ್ ಎಂ ಡಿ ಗೆ ಬಂಧನ ಭೀತಿ ಎದುರಾಗಿದೆ. ಈ ನಡುವೆ ಆ.27 ರಂದು ಎಸ್‌ಐಟಿ ಮುಂದೆ ತನಿಖೆಗೆ ಹಾಜರಾಗುವುದಾಗಿ ಹೇಳಿದ್ದ ಸುಜಾತ ಭಟ್ ಇಂದು ಬೆಳ್ಳಂಬೆಳಿಗ್ಗೆ 5 ಗಂಟೆಗೆ ಎಸ್‌ಐಟಿ ಕಛೇರಿಗೆ ಧಿಢೀರ್ ಭೇಟಿ ನೀಡಿ ಹೇಳಿಕೆ ನೀಡುವುದಾಗಿ ಹೇಳಿದ್ದಾರೆ ಆದರೆ ಇಂದು ಎಸ್‌ಐಟಿ ತಂಡದ ಯೋಜನೆ ಮೊದಲೇ ನಿಶ್ಚಯವಾಗಿದ್ದರಿಂದ ಇಂದು ಪೂರ್ಣ ಪ್ರಮಾಣದ ವಿಚಾರಣ ಮಾಡದೇ ಅಧಿಕಾರಿಗಳ ಸೂಚನೆ ಮೇರೆಗೆ ಸುಜಾತ್ ಭಟ್‌ರಿಂದ ಕೇವಲ ಬೇಸಿಕ್ ವಿಚಾರಣೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.