Categories
ಬೆಂಗಳೂರು

ಐಷಾರಾಮಿ ಜೀವನಕ್ಕಾಗಿ ಹೆಣ್ಣಿನ ವೇಷ ತೊಟ್ಟ ಗಂಡು!

ಐಷಾರಾಮಿ ಜೀವನಕ್ಕಾಗಿ ಹೆಣ್ಣಿನ ವೇಷ ತೊಟ್ಟ ಗಂಡು!
– ಸೈಟು, ಮನೆ, ಹೆಂಡತಿ, ಮಕ್ಕಳು ಇದ್ರು
– ಮಂಗಳ ಮುಖಿಯರ ಗ್ಯಾಂಗ್ ಸೇರಿ ಭಿಕ್ಷೆ..!
– ಸಿಕ್ಕಿಬಿದ್ದಿದ್ದು ಹೇಗೆ… ಪೊಲೀಸರು ಏನು ಮಾಡಿದ್ರು?

NAMMUR EXPRESS NEWS
ಬೆಂಗಳೂರು: ನೀವೂ ಏನ್ ಏನ್ ನ್ಯೂಸ್ ನೋಡಿರ್ತೀರಿ…ಕೇಳಿರ್ತೀರಿ… ಆದರೆ ಇಲ್ಲೊಂದು ಸುದ್ದಿ ಭಾರೀ ಅಚ್ಚರಿ ಮೂಡಿಸಿದೆ. ಐಷಾರಾಮಿ ಜೀವನಕ್ಕಾಗಿ ಗಂಡು ವ್ಯಕ್ತಿಯೊಬ್ಬ ಹೆಣ್ಣಿನ ವೇಷ ತೊಟ್ಟು ಭಿಕ್ಷಾಟನೆ ನಡೆಸಿ ಅನೇಕರಿಗೆ ಕಿರುಕುಳ ನೀಡುತ್ತಿದ್ದ ಘಟನೆ ವರದಿಯಾಗಿದೆ. ಈತ ಪತ್ನಿ, ಇಬ್ಬರು ಮಕ್ಕಳ ಜೊತೆ ಐಷಾರಾಮಿ ಜೀವನ ನಡೆಸುತ್ತಿದ್ದ. ಒಳ್ಳೆ ಪ್ಲಾನ್ ಮಾಡಿ ಹಣ, ಆಸ್ತಿ ಮಾಡಲು ಮಂಗಳಮುಖಿಯರ ಜತೆ ಟೀಮ್ ಮಾಡಿಕೊಂಡಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ.
ಆರೋಪಿ ಚೇತನ್‌ನನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಹಿಳೆಯರೇ ಹಿಡಿದು ಪೊಲೀಸರಿಗೆ ಕೊಟ್ಟರು!

ಬಾಗಲಗುಂಟೆ ನಿವಾಸಿ ಚೇತನ್, ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆ ಐಷಾರಾಮಿ ಜೀವನ ನಡೆಸುತ್ತಿದ್ದ. ಇದಕ್ಕೆ ಹಣ ಹೊಂದಿಸಲು ಹೆಣ್ಣಿನ ವೇಷ ಧರಿಸಿ, ಮಂಗಳಮುಖಿಯರ ಜೊತೆ ಸೇರಿ ಹಲವು ವರ್ಷಗಳಿಂದ ಭಿಕ್ಷಾಟನೆ ಮಾಡುತ್ತಿದ್ದ. ಚೇತನ್‌ನ ನಿಜ ಬಣ್ಣ ತಿಳಿದ ಸ್ಥಳೀಯರು, ಆತನನ್ನು ಹಿಡಿದು ಹೊಯ್ಸಳ ಗಸ್ತು ವಾಹನ ಸಿಬ್ಬಂದಿ ಸುಪರ್ದಿಗೆ ಒಪ್ಪಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸ್ಥಳೀಯ ಮಹಿಳೆಯರು ನೀಡಿರುವ ದೂರು ಆಧರಿಸಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಆರೋಪಿ ಚೇತನ್‌ನನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಹೇಳಿವೆ.

ಮನೆಯಲ್ಲಿ ಗಂಡು, ಹೊರಗೆ ಹೆಣ್ಣು!

ಬಾಗಲಗುಂಟೆ ಕೆರೆ ಸಮೀಪದ ಮನೆಯಲ್ಲಿ ಚೇತನ್‌ ದಂಪತಿ ಹಾಗೂ ಇಬ್ಬರು ಮಕ್ಕಳು ವಾಸವಿದ್ದಾರೆ. ಮನೆಯಲ್ಲಿ ಗಂಡಿನ ವೇಷದಲ್ಲಿರುತ್ತಿದ್ದ ಚೇತನ್, ಹೊರಗೆ ಬಂದ ನಂತರ ಸೀರೆಯುಟ್ಟು ಹೆಣ್ಣಿನ ರೀತಿಯಲ್ಲಿ ವೇಷ ಧರಿಸುತ್ತಿದ್ದ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.
ತನ್ನ ಕುಟುಂಬದ ಬಗ್ಗೆ ಯಾರಿಗೂ ಗೊತ್ತಾಗಬಾರದೆಂದು, ಮಂಜುನಾಥ್‌ನಗರದ ಕೊಠಡಿಯೊಂದನ್ನು ಬಾಡಿಗೆಗೆ ಪಡೆದಿದ್ದ. ಆಗಾಗ ಕೊಠಡಿಯಲ್ಲಿ ಉಳಿದುಕೊಳ್ಳುತ್ತಿದ್ದ ಆರೋಪಿ, ಸುತ್ತಮುತ್ತಲಿನ ಮಂಗಳಮುಖಿಯರ ಜೊತೆ ಸ್ನೇಹ ಬೆಳೆಸಿದ್ದ. ಅವರ ರೀತಿಯಲ್ಲೇ ಮಾತನಾಡುತ್ತಿದ್ದ. ಅವರಿಗೂ ಆರೋಪಿ ಗಂಡು ಎಂಬುದು ಗೊತ್ತಾಗಿರಲಿಲ್ಲ ಎಂದು ಹೇಳಿವೆ.

ಜಾಗ ಮಾಡಲು ಹೋಗಿ ಸಿಕ್ಕಿಬಿದ್ದ!

ತುಮಕೂರು ರಸ್ತೆಯ ಮಂಜುನಾಥನಗರ ಬಸ್ ತಂಗುದಾಣ ಹಾಗೂ ಸುತ್ತಮುತ್ತ ಓಡಾಡುತ್ತಿದ್ದ ಆರೋಪಿ ಚೇತನ್, ಸ್ಥಳೀಯರನ್ನು ಅಡ್ಡಗಟ್ಟಿ ಹಣ ಕೇಳುತ್ತಿದ್ದ. ಹಣ ಕೊಡದಿದ್ದರೆ, ಸುಲಿಗೆ ರೀತಿಯಲ್ಲಿ ಕಸಿದುಕೊಳ್ಳುತ್ತಿದ್ದ. ಹಣ ನೀಡದ ವ್ಯಾಪಾರಿಗಳ ಜೊತೆ ಜಗಳ ಮಾಡುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಂಜುನಾಥ್‌ನಗರದಲ್ಲಿ ಮೆಟ್ರೊ ಕಾಮಗಾರಿ ಪ್ರಗತಿಯಲ್ಲಿದೆ. ಬಿಎಂಆರ್‌ಸಿಎಲ್‌ಗೆ ಸೇರಿದ್ದ ಜಾಗದಲ್ಲಿ ಆರೋಪಿ ತಗಡಿನ ಶೆಡ್ ನಿರ್ಮಿಸುತ್ತಿದ್ದ. ಮುಂಬರುವ ದಿನಗಳಲ್ಲಿ ಅದೇ ಸ್ಥಳದಲ್ಲಿ ತಾತ್ಕಾಲಿಕವಾಗಿ ಮಳಿಗೆಯೊಂದನ್ನು ಆರಂಭಿಸಿ ಬಾಡಿಗೆ ನೀಡುವುದು ಈತನ ಉದ್ದೇಶವಾಗಿತ್ತೆಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದರು. ಈ ವೇಳೆ ಆತನ ಮೇಲೆ ಕ್ರಮಕ್ಕೆ ಮುಂದಾದಾಗ ಕೆಲ ಸ್ಥಳೀಯ ಮಹಿಳೆಯರ ಸೀರೆ ಹಿಡಿದು ಎಳೆದಾಡಿ, ಅನುಚಿತವಾಗಿ ವರ್ತಿಸಿದ್ದ. ತಕ್ಕಪಾಠ ಕಲಿಸಲು ಮುಂದಾದ ಜನ, ಚೇತನ್‌ನನ್ನು ಹಿಡಿದು ಥಳಿಸಿದ್ದರು. ಅವಾಗಲೇ ಆತ, ಗಂಡು ಎಂಬುದು ತಿಳಿದಿದೆ. ಚೇತನ್‌ ಆಧಾರ್ ಹಾಗೂ ಇತರೆ ಗುರುತಿನ ಚೀಟಿಗಳನ್ನು ಪರಿಶೀಲಿಸಲಾಗಿದೆ. ಎಲ್ಲ ಕಡೆಯೂ ‘ಗಂಡು’ ಎಂಬುದು ಉಲ್ಲೇಖವಾಗಿದೆ. ಜೊತೆಗೆ, ಪತ್ನಿಯೂ ಈ ಬಗ್ಗೆ ಮಾಹಿತಿ ನೀಡಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಇದನ್ನೂ ಓದಿ : ತುಂಬಿದ ನದಿಯಲ್ಲಿ ಮರ ಹಿಡಿದು ಜೀವ ಉಳಿಸಿಕೊಂಡ ಅಜ್ಜಿ!

HOW TO APPLY : NEET-UG COUNSELLING 2023

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.