Categories
ಬೆಂಗಳೂರು

ಬಾಲಿವುಡ್ಡಲ್ಲಿ ವಿಜಯ್ ಮಲ್ಯ ಕಥೆ ಆಧಾರಿತ ಸಿನಿಮಾ?!

ಬಾಲಿವುಡ್ಡಲ್ಲಿ ವಿಜಯ್ ಮಲ್ಯ ಕಥೆ ಆಧಾರಿತ ಸಿನಿಮಾ?!
– ಕರ್ನಾಟಕದ ಫ್ಯಾಷನೇಟ್ ಉದ್ಯಮಿ ಈಗ ದೇಶದಲ್ಲಿ ಟ್ರೆಂಡ್
– ಕರಾವಳಿ ಮೂಲದ ಉದ್ಯಮಿ ಜೀವನ ಸಿನಿಮಾ ಸಾಧ್ಯತೆ?

ಸ್ಪೆಷಲ್ ರಿಪೋರ್ಟ್: ನೀತಾ ಶೆಟ್ಟಿ ಕುಂದಾಪುರ

NAMMUR EXPRESS EXCLUSIVE
ಬೆಂಗಳೂರು: ಬೆಂಗಳೂರು ಮಾತ್ರವಲ್ಲ ಭಾರತದ ಬಿಗ್ ಬಿಲೇನಿಯರ್, ಮದ್ಯದ ದೊರೆ, ಕಿಂಗ್ ಫಿಷರ್ ಸೇರಿ ಅನೇಕ ಹೊಸ ತಲೆಮಾರಿನ ಉದ್ಯಮಗಳ ಹರಿಕಾರ ಕರಾವಳಿ ಮೂಲದ ವಿಜಯ್ ಮಲ್ಯ ಇದೀಗ ತಮ್ಮ ಮನದ ಮಾತಿನ ಮೂಲಕ ದೇಶದ ಸದ್ಯದ ಟ್ರೆಂಡ್ ಆಗಿದ್ದಾರೆ.
18 ವರ್ಷಗಳ ಹಿಂದೆ ಆರ್ ಸಿಬಿ ಎಂಬ ತಂಡ ಕಟ್ಟಿದ್ದ ಮಲ್ಯ ಈಗ ಬ್ರಿಟನ್ ಅಲ್ಲಿ ನೆಲೆಸಿದ್ದಾರೆ. ಆರ್ ಸಿ ಬಿ ಗೆಲ್ಲುತ್ತಿದ್ದ ಹಾಗೆ ಮಲ್ಯ ಪರ ದನಿ ಕೂಡ ದೊಡ್ಡದಾಗಿದೆ.
ಭಾರತದ ಬ್ಯಾಂಕ್ ಇವರ ಭಾರತದ ಬರುವಿಕೆಗೆ ಕಾಯುತ್ತಿದ್ದಾರೆ. ಖ್ಯಾತ ಪೋಡ್ಕ್ಯಾಷ್ಟರ್ ರಾಜ್ ಶಮಾನಿ ನಡೆಸಿದ ಇಂಟರ್ವ್ಯೂ ಅಲ್ಲಿ ವಿಜಯ್ ಮಲ್ಯ ತನ್ನ ಎಲ್ಲಾ ಅನುಭವ ಬಿಚ್ಚಿಟ್ಟಿದ್ದಾರೆ. ಆ ಸಂದರ್ಶನವನ್ನು ಭಾರತದ ಕೋಟಿ ಕೋಟಿ ಜನ ನೋಡಿ ಮಲ್ಯ ಪರ ನಿಂತಿದ್ದಾರೆ. ದೇಶದ ಮಟ್ಟಿಗೆ ಇದು ಅತೀ ದೊಡ್ಡ ಟ್ರೆಂಡ್ ಅಂಡ್ ಕುತೂಹಲಕಾರಿ ಸಂದರ್ಶನವಾಗಿದೆ. ಈ ನಡುವೆ ಬಾಲಿವುಡ್ ಅಲ್ಲಿ ಬರಲಿದ್ಯಾ ಮಲ್ಯ ಸಿನಿಮಾ ಎಂಬ ಚರ್ಚೆ ಕೂಡ ಶುರುವಾಗಿದೆ.
ಕರ್ನಾಟಕದ ಫ್ಯಾಷನೇಟ್ ಉದ್ಯಮಿ ಈಗ ದೇಶದಲ್ಲಿ ಟ್ರೆಂಡ್ ಆಗಿದ್ದು ಕರಾವಳಿ ಮೂಲದ ಉದ್ಯಮಿ ವಿಜಯ್ ಮಲ್ಯ ಜೀವನ ಕಥೆ, ಉದ್ಯಮ ಸಾಮ್ರಾಜ್ಯ, ಫ್ಯಾಷನ್ ಕಥೆಯುಳ್ಳ ಸಿನಿಮಾ ನಿರ್ಮಾಣದ ಬಗ್ಗೆ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.

ಉದ್ಯಮಿಗಳ ಬದುಕು ಸಿನಿಮಾ..! 

ಲಕ್ಕಿ ಭಾಸ್ಕರ್, ಸ್ಕ್ಯಾಮ್ 1992, ರತನ್ ಟಾಟಾ ಸೇರಿದಂತೆ ಅನೇಕ ಉದ್ಯಮಿಗಳ ಕಥೆ ಆಧಾರಿತ ಸಿನಿಮಾಗಳು ಹಿಂದಿಯಲ್ಲಿ ಭಾರೀ ಯಶಸ್ಸು ಗಳಿಸಿವೆ. ವಿಜಯ್ ಮಲ್ಯ ಕೂಡ ಉದ್ಯಮ ಜಗತ್ತಿನ ವಿಶೇಷ ವ್ಯಕ್ತಿ. ಜತೆಗೆ ಈಗ ಭಾರತದ ಟ್ರೆಂಡ್ ಆಗಿದ್ದಾರೆ. ಅವರಿಗೆ ಕೋಟಿ ಕೋಟಿ ಫ್ಯಾನ್ ಬೇಸ್ ಇದೆ. ಈ ಹಿನ್ನೆಲೆಯಲ್ಲಿ ಸಿನಿಮಾ ಮಾಡಲು ಅನೇಕರು ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.