Categories
ಬೆಂಗಳೂರು

ರೈತರಿಂದ ನಟ ದರ್ಶನ್‌ಗೆ ‘ಅನ್ನದಾತ ಆಪ್ತ’ ವಿಶೇಷ ಬಿರುದು..!

ರೈತರಿಂದ ನಟ ದರ್ಶನ್‌ಗೆ ‘ಅನ್ನದಾತ ಆಪ್ತ’ ವಿಶೇಷ ಬಿರುದು..!
– 26 ರಂದು ಅದ್ಧೂರಿ ಕಾರ್ಯಕ್ರಮ
– ಖ್ಯಾತ ಕಲಾವಿದರಿಂದ ವಿವಿಧ ಮನರಂಜನ ಕಾರ್ಯಕ್ರಮ

NAMMUR EXPRESS NEWS
ಬೆಂಗಳೂರು: ಇತ್ತೀಚೆಗೆ ಬಿಡುಗಡೆಯಾದ ನಟ ದರ್ಶನ್ ಅಭಿನಯದ ‘ಕಾಟೇರ’ ಸಿನಿಮಾ ಉತ್ತಮ ಪ್ರದರ್ಶನ ಪಡೆದಿದೆ. ಬಾಕ್ಸ್ ಆಫೀಸ್‌ನಲ್ಲೂ ಉತ್ತಮ ಗಳಿಕೆ ಕಂಡಿದೆ. ಇದೀಗ ಡಿಬಾಸ್‌ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ ‘ಅನ್ನದಾತ ಆಪ್ತ ಕಾಟೇರ’ ಎಂಬ ವಿಶೇಷ ಬಿರುದ್ದನ್ನು ನೀಡಿ ಗೌರವಿಸಲು ಅದ್ಧೂರಿಯಾಗಿ ಸಿದ್ದತೆ ನಡೆಸಿದೆ. ಹೌದು.. ಕೆ.ಎಸ್. ಪುಟ್ಟಣ್ಣಯ್ಯನವರ 75ನೇ ಜನ್ಮದಿನೋತ್ಸವ ಪ್ರಯುಕ್ತ ಕರ್ನಾಟಕ ರಾಜ್ಯ ರೈತ ಸಂಘದ ಪರವಾಗಿ ಈ ವಿಶೇಷ ಬಿರುದನ್ನು ನೀಡಿ, ಕಾಟೇರ ಸಿನಿಮಾದ ದೊಡ್ಡ ಯಶಸ್ಸಿಗೆ ಕಾರಣರಾದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ತಂಡದವರಿಗೆ ಅಭಿನಂದನಾ ಸಮಾರಂಭ ನಡೆಯಲಿದೆ. ಇದೇ ಶುಕ್ರವಾರ ಅಂದ್ರೆ ಜನವರಿ 26ರಂದು ಪಾಂಡವಪುರ ಕ್ರೀಡಾಂಗಣದಲ್ಲಿ ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಈ ಕಾರ್ಯಕ್ರಮ ಜರುಗಲಿದೆ.

ಅಲ್ಲದೆ, 25 ಕಲಾ ತಂಡಗಳು, 25 ಜೋಡೆತ್ತಿನ ಮೆರವಣಿಗೆ, 8 ಸಾವಿರಕ್ಕೂ ಹೆಚ್ಚು ಜನರ ಜೊತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಪಾಂಡವಪುರ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ ಅದ್ದೂರಿ ಮೆರವಣಿಗೆ ಹೊರಡಲಿದ್ದಾರೆ. ಸಂಜೆ 6:30ಕ್ಕೆ 25,000ಕ್ಕೂ ಅಧಿಕ ಜನರ ಸಮ್ಮುಖದಲ್ಲಿ ಕಾಟೇರನ ಭರ್ಜರಿ ಯಶಸ್ಸಿನ ಅದ್ದೂರಿ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಸಂಸದೆ, ಹಿರಿಯ ನಟಿ ಸುಮಲತಾ ಅಂಬರೀಶ್, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕ್ ಲೈನ್ ವೆಂಕಟೇಶ್‌, ನಿರ್ದೇಶಕ ತರುಣ್ ಸುಧೀ‌ರ್, ವಿ ಹರಿಕೃಷ್ಣ, ಸುಧಾಕರ್, ಕೆಎಂ ಪ್ರಕಾಶ್, ಜಡೇಸ್ ಕೆ ಹಂಪಿ, ಮಾಸ್ತಿ, ನಟಿ ಆರಾಧನರಾಮ್, ಮಾಲಾಶ್ರೀ, ಶೃತಿ, ಅವಿನಾಶ್‌, ಬಿರಾದ‌ರ್, ಕುಮಾರ್ ಗೋವಿಂದ್‌, ಶ್ವೇತಾ ಪ್ರಸಾದ್, ರವಿ ಚೇತನ್, ಮಾಸ್ಟರ್ ಲೋಹಿತ್ ಸೇರಿದಂತೆ ಹಲವಾರು ಕಾಟೇಯ ಚಿತ್ರದ ಕಲಾವಿದರು ಹಾಗೂ ತಂತ್ರಜ್ಞರು ಪಾಲ್ಗೊಳ್ಳಲಿದ್ದಾರೆ. ವಿಶೇಷವಾಗಿ ಕನ್ನಡ ಚಲನಚಿತ್ರದ ಹೆಸರಾಂತ ಮೂವರು ನಾಯಕಿ ನಟಿಯರಿಂದ ಅದ್ದೂರಿ ನೃತ್ಯ ಪ್ರದರ್ಶನ ಮತ್ತು ಹೆಸರಾಂತ ಗಾಯಕರ ಗಾಯಕಿರಿಂದ ಗಾಯನ ಕಾರ್ಯಕ್ರಮವಿರುತ್ತದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.