Categories
ಬೆಂಗಳೂರು

ಗೌರಿ ಗಣೇಶ ಹಬ್ಬಕ್ಕೆ ಹೆಚ್ಚುವರಿ ಸರ್ಕಾರಿ ಬಸ್!

ಗೌರಿ ಗಣೇಶ ಹಬ್ಬಕ್ಕೆ ಹೆಚ್ಚುವರಿ ಸರ್ಕಾರಿ ಬಸ್!
– 1200 ಹೆಚ್ಚುವರಿ ಬಸ್​ಗಳ ವಿಶೇಷ ಸಾರಿಗೆ ವ್ಯವಸ್ಥೆ
– ಬಸ್ ಬುಕ್ಕಿಂಗ್ ಗಾಗಿ 10% ಡಿಸ್ಕೌಂಟ್
– ಊರಿಗೆ ಹೋಗುವರಿಗೆ ಸಿಹಿ ಸುದ್ದಿ

NAMMUR EXPRESS NEWS
ಬೆಂಗಳೂರು : ಗೌರಿ ಗಣೇಶ ಹಬ್ಬಕ್ಕೆ ಊರಿಗೆ ತೆರಳುವವರಿಗೆ ಸಿಹಿ ಸುದ್ದಿ. ಕರಾರಸಾ ನಿಗಮದಿಂದ 1200 ಹೆಚ್ಚುವರಿ ಬಸ್ ಗಳ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸಿದೆ. ಸೆಪ್ಟೆಂಬರ್ 15, 16, 17 ರಂದು ಬೆಂಗಳೂರಿನಿಂದ ರಾಜ್ಯದ ಬೇರೆ ಬೇರೆ ಭಾಗಗಳಿಗೆ ವಿಶೇಷ ಬಸ್ ಸೌಕರ್ಯ ಕಲ್ಪಿಸಲಾಗಿದ್ದು, ಜೊತೆಗೆ ರಾಜ್ಯದಿಂದ ಅಂತರಾಜ್ಯ ಪ್ರಯಾಣಕ್ಕೂ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಬಸ್ ಟಿಕೆಟ್ ಬುಕ್ಕಿಂಗ್ ಗೆ ದೊರೆಯಲಿದೆ. ವಿಶೇಷ ಡಿಸ್ಕೌಂಟ್ ನೀಡಲಾಗುತ್ತದೆ.

ಎಲ್ಲೆಲ್ಲಿಗೆ ಹೆಚ್ಚುವರಿ ಬಸ್?

ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ಮಂಗಳೂರು, ಹಾಸನ, ಹುಬ್ಬಳ್ಳಿ, ಧಾರವಾಡ, ಶೃಂಗೇರಿ , ಹೈದರಾಬಾದ್ ಸೇರಿದಂತೆ ಹಲವು ನಗರಗಳಿಗೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಿದ್ದು, ಶಾಂತಿನಗರ ಬಸ್ ನಿಲ್ದಾಣದಿಂದ ಮಧುರೈ, ಚೆನ್ನೈ, ಕುಂಭಕೋಣಂ, ಕೋಯಮತ್ತೂರು ಸೇರಿದಂತೆ ಹಲವು ಸ್ಥಳಗಳಿಗೆ ವಿಶೇಷ ಬಸ್ ಸೌಕರ್ಯ ಮಾಡಲಾಗಿದೆ.

ಎರಡೂ ಟಿಕೆಟ್ ಬುಕ್ ಮಾಡಿದವರಿಗೆ ಡಿಸ್ಕೌಂಟ್!

ವಿಶೇಷ ಬಸ್ಸುಗಳ ಟಿಕೆಟ್ ಬುಕ್ಕಿಂಗ್ ಗಾಗಿ ಮುಂಗಡ ಬುಕ್ಕಿಂಗ್ ವ್ಯವಸ್ಥೆ ಇದೆ. E-ಟಿಕೆಟ್ ಬುಕ್ಕಿಂಗ್ ಅನ್ನು http://www.ksrtc.karnataka.gov.in ವೆಬ್ ಸೈಟ್ ಮುಖಾಂತರ ಮಾಡಬಹುದಾಗಿದೆ. ಸಾರ್ವಜನಿಕ ಪ್ರಯಾಣಿಕರು ರಾಜ್ಯ ಮತ್ತು ಅಂತರಾಜ್ಯದಲ್ಲಿರುವ 691 ಗಣಕೀಕೃತ ಬುಕ್ಕಿಂಗ್ ಕೌಂಟರ್ ನಲ್ಲಿ ಟಿಕೆಟ್ ಬುಕ್ ಮಾಡಬಹುದಾಗಿದೆ, ನಾಲ್ಕು ಅಥವಾ ಹೆಚ್ಚು ಜನ ಮುಂಗಡ ಬುಕ್ಕಿಂಗ್ ಮಾಡಿದರೆ 5% ಡಿಸ್ಕೌಂಟ್ಹಾಗೂ ಹೋಗಿ ಬರುವ ಎರಡೂ ಸೈಡ್ ಟಿಕೆಟ್ ಬುಕ್ಕಿಂಗ್ ಗಾಗಿ 10% ಡಿಸ್ಕೌಂಟ್ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.