Categories
ಬೆಂಗಳೂರು ರಾಜ್ಯ

ಸೆ.12ರಿಂದ 14 ರವರೆಗೆ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ

ಸೆ.12ರಿಂದ 14 ರವರೆಗೆ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ
– ಗೃಹ ಲಕ್ಷ್ಮಿ ಮೊದಲ ಕಂತಿನ ಹಣ ಬಂತು
– ನಿಮ್ಮ ಹಣ ಬಂದಿದ್ಯಾ ಚೆಕ್ ಮಾಡ್ಕೊಳ್ಳಿ…!

NAMMUR EXPRESS NEWS
ಬೆಂಗಳೂರು: ಚಾಲ್ತಿಯಲ್ಲಿರುವ ಪಡಿತರ ಚೀಟಿಗಳಲ್ಲಿ, ಹೆಸರು ಸೇರ್ಪಡೆ/ತೆಗೆಯುವುದು, ವಿಳಾಸ ಬದಲಾವಣೆ, ಸದಸ್ಯರ ಹೆಸರು ತಿದ್ದುಪಡಿಗೆ, ಸೆಪ್ಟೆಂಬರ್ 12 ರಿಂದ 14 ರವರೆಗೆ ಬೆಳಗ್ಗೆ 10 ರಿಂದ ರಾತ್ರಿ 8 ರವರೆಗೆ ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿದೆ. ನಿಗದಿಪಡಿಸಿದ ಅವಧಿಯೊಳಗೆ ಕರ್ನಾಟಕ ಒನ್,ಗ್ರಾಮ ಒನ್ ಮತ್ತು ಸೇವಾ ಸಿಂಧು ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಪ್ರಕಟಣೆ ತಿಳಿಸಿದೆ.

ಗೃಹ ಲಕ್ಷ್ಮಿ ಮೊದಲ ಕಂತಿನ ಹಣ ಬಂತು!

ಗೃಹ ಲಕ್ಷ್ಮಿ ಯೋಜನೆಯಡಿಯಲ್ಲಿ ಮನೆ ಯಜಮಾನಿಗೆ 2000 ರೂ. ಹಣ ತಲುಪಿದೆ. ಬಹುತೇಕ ಮಹಿಳೆಯರಿಗೆ ಹಣ ಬಂದಿದ್ದು, ಕೆಲವರ ಅಕೌಂಟ್ ಹಾಗೂ ಮಾಹಿತಿ ತಪ್ಪು ಕೊಟ್ಟಿದ್ದರಿಂದ ಹಣ ಜಮೆ ಆಗಿಲ್ಲ. ಮತ್ತೆ ಅವಕಾಶ ನೀಡಲಾಗಿದೆ ಎಂದು ಸರ್ಕಾರ ಹೇಳಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.