ಸಿರಿಬೈಲ್ ಧರ್ಮೇಶ್ ಅವರಿಗೆ ಮಹತ್ವದ ಹುದ್ದೆ
– ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ
– ಒಕ್ಕಲಿಗರ ಸಂಘದ ಅಧೀನದಲ್ಲಿರುವ ಪ್ರತಿಷ್ಠಿತ ಸಂಸ್ಥೆ
NAMMUR EXPRESS NEWS
ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘದ ಅಧೀನದಲ್ಲಿರುವ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜು ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ( ಬಿ. ಐ. ಟಿ )ಯ ನೂತನ ಅಧ್ಯಕ್ಷರಾಗಿ ಶಿವಮೊಗ್ಗ ಉತ್ತರ ಕನ್ನಡ ನಿರ್ದೇಶಕ ಸಿರಿಬೈಲ್ ಧರ್ಮೇಶ್ ಅಧಿಕಾರ ವಹಿಸಿಕೊಂಡಿದ್ದಾರೆ. ಬೆಂಗಳೂರು ಒಕ್ಕಲಿಗರ ಸಂಘದ ಅಧೀನ ಸಂಸ್ಥೆಯು ಬೆಂಗಳೂರಲ್ಲಿದ್ದು 6500 ಇಂಜಿನಿಯರಿಂಗ್ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 1000 ಮಂದಿ ಉದ್ಯೋಗಿಗಳಿದ್ದಾರೆ. ಒಕ್ಕಲಿಗ ಪ್ರಭಾವಿ ಮುಖಂಡರಾಗಿ, ಗುತ್ತಿಗೆದಾರರಾಗಿ, ಯುವ ನಾಯಕರಾಗಿದ್ದು ಈ ಮಹತ್ವದ ಹುದ್ದೆ ಸಿಕ್ಕಿರುವುದು ಈಗ ಅವರ ಸ್ನೇಹಿತರು, ಅಭಿಮಾನಿಗಳಿಗೆ ಸಂತಸ ತಂದಿದೆ.
ಮೊದಲ ಬಾರಿಗೆ ಮಲೆನಾಡಿನ ನಾಯಕನಿಗೆ ಹುದ್ದೆ
ಬಿಐಟಿ ಛೇರ್ಮನ್ ಆಗಿ ಮೊದಲ ಬಾರಿಗೆ ಮಲೆನಾಡ ನಾಯಕನಿಗೆ ಹುದ್ದೆ ಸಿಕ್ಕಿದೆ. ಈವರೆಗೆ ಮಂಡ್ಯ, ಮೈಸೂರು, ಬೆಂಗಳೂರು ಭಾಗದವರಿಗೆ ಸಿಕ್ಕುತ್ತಿತ್ತು. ಶಿವಮೊಗ್ಗ ಉತ್ತರ ಕನ್ನಡ ಭಾಗದಿಂದ ಆಯ್ಕೆಯಾದ ಮೊದಲ ಅಧ್ಯಕ್ಷ ಎಂಬ ಖ್ಯಾತಿಗೆ ಧರ್ಮೇಶ್ ಭಾಜನರಾಗಿದ್ದಾರೆ. ಒಕ್ಕಲಿಗ ಸಂಘದ ರಾಜ್ಯ ನಿರ್ದೇಶಕರು, ಶಿವಮೊಗ್ಗ, ಉತ್ತರ ಕನ್ನಡ ಭಾಗದ ಪ್ರಮುಖರು ಹಾಜರಿದ್ದರು. 7 ಎಕರೆ ಜಾಗದಲ್ಲಿ ಇಂಜಿನಿಯರಿಂಗ್ ಕಾಲೇಜು ಇದ್ದು ಕರ್ನಾಟಕದಲ್ಲೇ ಅತೀ ಹೆಚ್ಚು ರಾಂಕ್ ಈ ಸಲ ಪಡೆದ ಕಾಲೇಜು ಹೆಮ್ಮೆಗೆ ಪಾತ್ರವಾಗಿದೆ. ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಹನುಮಂತಯ್ಯ ಸೇರಿದಂತೆ ಎಲ್ಲಾ ನಿರ್ದೇಶಕರು, ಪ್ರಮುಖರು ಸಿರಿಬೈಲ್ ಧರ್ಮೇಶ್ ಅವರಿಗೆ ಶುಭಾಶಯ ಕೋರಿದ್ದಾರೆ. ಒಕ್ಕಲಿಗ ಸಂಘದ ಅಧ್ಯಕ್ಷರಾದ ಹನುಮಂತಯ್ಯ, ಕಾರ್ಯದರ್ಶಿ ಜಯಮುತ್ತು, ಗೌರವ ಅಧ್ಯಕ್ಷರಾದ ಕೆಂಚಪ್ಪ ಗೌಡ, ಕಿಮ್ಮನೆ ರತ್ನಾಕರ್, ಅರಮನೆ ಶಂಕರ್, ಮಣಿ ಹೆಗ್ಡೆ ಇತರರು ಇದ್ದರು.
ಮಲೆನಾಡಿನ ನಗುಮೊಗದ ನಾಯಕ ಧರ್ಮೇಶ್
ತೀರ್ಥಹಳ್ಳಿ ಮೂಲದ ಸಿರಿಬೈಲ್ ಧರ್ಮೇಶ್ ಮಲೆನಾಡಿನ ಪ್ರಮುಖ ನಾಯಕರಲ್ಲಿ ಒಬ್ಬರು. ಸದಾ ಸಮಾಜಮುಖಿ ಚಟುವಟಿಕೆ ಮೂಲಕ, ಯುವ ಜನರ ನೆಚ್ಚಿನ ನಾಯಕರಾದವರು. ಸರಳ ವ್ಯಕ್ತಿತ್ವದ ಧರ್ಮೇಶ್ ಅವರಿಗೆ ಈ ಹುದ್ದೆ ಸಿಕ್ಕಿರುವುದು ಈಗ ಅವರ ಅಭಿಮಾನಿಗಳ ವಲಯದಲ್ಲಿ ಸಂತಸ ತಂದಿದೆ. ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕು ಪ್ರಮುಖರು ಹಾಜರಿದ್ದರು.
ಇದನ್ನೂ ಓದಿ : ಆರಗ ಮೇಲೆ ಸುಮೋಟೋ ಕೇಸ್ ದಾಖಲಿಸಲು ಪಟ್ಟು

HOW TO APPLY : NEET-UG COUNSELLING 2023